ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24. ಕಾಂದಂಬರಿಸಂಗ್ರಹ '""":'''''''''''''''''''''"

   ರೋಹಿಣಿಯು __ಅಯೋ ! ಈ ವಿಷಯವು ನಮಗೆ ಮೊದಲೇ ತಿಳಿದಿತ್ತು. ಆದರೂ ನೀನು ಈಗ ಪುನಃ ಆ ವಿಷಯವನ್ನೇ ವಿಶದವಾಗಿ ತಿಳಿಸಿದುದಕ್ಕೆ ನಾನು | ಬಹಳ ಕೃತಙ‍‍‌ಳಾಗಿದೇನೆ. ಆದರೆ ಈ ರಾಜಧಾನಿಯಲ್ಲಿ ಅತ್ಯಾತುರವಾದ ಒಂದು ಕಾರ್ಯವು ಇರುವುದರಿಂದ ಎಷ್ಟು ಕಷ್ಟಗಳು ಪ್ರಾಪ್ತವಾದರೂ ಅನುಭವಿಸಿಕೊಂಡು ಪ್ರವೇಶಿಸಬೇಕು. ನನಗೆ ಮರಣಭಯವಿಲ‍. ಕಾರಾಗೃಹಭಯವಿಲ್ಲ, ಇಂತಹ ಸಮಯದಲ್ಲಿ ನೀನು ಅಡ್ಡಿ ಮಾಡಬೇಡ” ಎಂದು ಬಾರಿಬಾರಿಗೂ ಪ್ರಾರ್ಥಿಸಿದಳು.
   ಆ ಮನುಷ್ಯನು ಸಿನಗೆ ಕಾರಾಗೃಹ 
   ಪ್ರಾಪಿತಿ‍‍ಯಾದರೆ ಏನುಮಾಡುವೆ ?      
   ರೋ ___ಅನುಭವಿಸುವೆನು. 
   ಮನುಷ್ಯ -ಅಂತಹ ಕಷ್ಟವೇನು ನಿನಗೆ 
           ಬಂದಿರುವುದು ?
   ರೋ ...ನಮ್ಮ ಸಾಕು ತಂದೆಯಾದ ಕರುಣಾಕರವನು ಈ ಯುದದಲ್ಲಿ ಏಟ್ಟು 

ತಿಂದು ಗಾಯಪಟ್ಟ ಸೈನಿಕರನ್ನು ಉಪಚರಿಸುವುದರಲ್ಲಿ ನಿರತನಾಗಿರುವನು, ಆತನನ್ನು ನಾನು ನೋಡಿಯೇತೀರಬೇಕು.

  ಇದನ್ನು ನೋಡಿ ಆ ಮನುಷ್ಯನು ವಿಸಿಕನಾಗಿ  
 “ನಾನೇನೋ ಒಳಗೆ ಬಿಡುವೆನು. ದೇವರು ಮೂಡಿಸಿದಂತೆ ಆಗಲಿ;ನಿನ್ನನ್ನು ದೇವರು ರಕ್ಷಿಸಲಿ" ಎಂದು  ಹೇಳಿ ಸ್ವಲ್ಪ ದೂರ ನಿಂತನು.
   ರೋಹಿಣಿ, ಕರುಣಾಂಬೆಯರು ಪ್ರವೆಶಮಾಡಿ  ಉದ್ಯಾನವನವನ್ನು ಸೇರಿದರು.

ಆಹಾ! ಕಾಲವು ಒಂದೇರೀತಿಯಲ್ಲಿರುವದಿಲ್ಲ. ಚಕ್ರದೋಪಾದಿಯಲ್ಲಿ ತಿರುಗುತ್ತಲೇ ಇರುವುದು. ಈಗ ಸ್ವಲ್ಪ ದಿನಗಳಿಗೆ ಹಿಂದೆ ಪ್ರೇಕ್ಷಕರಿಗೆ ದು:ಖನಿವಾರಣೆಯನ್ನು ಮಾಡಿ, ಸಂತೋಷವನ್ನು ಉಂಟುಮಡುತಲಿದ್ದ ಸಸಿಗಳೂ, ಬಳ್ಳಿಗಳೂ, ವೃಕ್ಷಗಳೂ, ಕೃತಕಾಚಲಗಳೂ, ವಿಶ್ರಾಂತಿಗಾಗಿ ಏರ್ಪಡಿಸಿದ್ದ ಆಸನಗಳೂ ಸಹ ಶೂನ್ಯವಾಗಿರುವುವು. ಹಾವಸೆಗಳೆಂಬ ಕೂದಲುಗಳಿಂದಲೂ, ತಾವರೆ ಎಂಬ ಮುಖದಿಂದಲೂ, ಮಿಾನುಗಳೆಂಬ ಕಣ್ಣುಗಳಿಂದಲೂ, ದಡದಲ್ಲಿರುವ ಮಾವಿನ ಮರದ ಚಿಗುರುಗಳೆಂಬ ಚಂದ್ರಗಾವಿಯ ವಸ್ತ್ರದಿಂದ:ಊ, ಸಂಪಿಗೆ ಹೂವೆಂಬ ಮೂಗಿನಿಂದಲೂ, ಸೆಳೆ ಎಂಬ ಸೊಂಟದಿಂದಲೂ, ಕುಮುದಪುಪ್ಪಗಳೆಂಬ ಮುಗುಳುನಗೆಯಿಂದಲೂ, ಕುಂದವೆಂಬ ಹಲ್ಲುಗಳಿಂದಲೂ, ನಿರ್ಮಲೋದಕವೆಂಬ ಲಾವಣ್ಯದಿಂದಲೂ ಕೂಡಿ ರಮಣೀಯವಾ ಗಿದ್ದ ಸರಸ್ಸುಗಳು ಕಾಂತಿಹೀನವಾಗಿರುವುವು, ಅವರು ಇವೆಲ್ಲವನ್ನೂ ಅವಲೋಕಿ ಸುತ್ತ ಮುಂದಕ್ಕೆ ತೆರಳಿದರು. ಅಷ್ಟರಲ್ಲೇ ಮತ್ತೊಬ್ಬ ಸೈನ್ಯಾಧಿಕಾರಿಯು ಬಂದು ಇಬ್ಬರನ್ನೂ ತಡೆದು "ನೀವು ಯಾರು ? ಎಲ್ಲಿಗೆ ಹೋಗುವಿರಿ ?" ಎಂದು ಪ್ರಶ್ನೆ