ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ರೋಹಿಣಿ . ಆದರೆ ರೋಹಿಣಿಯುಮಾತ್ರ ತೋರಿಸುತ್ತಲೇ ಇರುವಳು. ಕರುಣಾಂಬೆಯು ಇದನ್ನು ನೋಡಿ ರೋಹಿಣಿ! ಏತಕ್ಕೆ ರೋದಿಸುವೆ?ಈಗ ಸುವರ್ಣಪುರಕ್ಕೆ ಪ್ರಯಾಣಮಾಡುವ ಸಮಯವು ಸುರಿಯಾಗಿಲ್ಲ. ಬೆಳಗಾಗುತ್ತಲೇ ಸುವರ್ಣಪುರಕ್ಕೆ ಹೋಗೋಣ ಎಂದು ಸಮಾಧಾನ ಮಾಡಿದಳು.ವಾಚಕರೇ ! ರೋಹಿಣಿಯು ಏತಕ್ಕೆ ರೋದಿಸಿದಳು ಬಲ್ಲಿರಾ ? ಲೋಕದಲ್ಲಿ ಹೆತ್ತ ತಂದೆ, ಅನ್ನ ಹಾಕಿದವನೂ, ಎದ್ಯೆ ಹೇಳಿದವನೂ, ಆಪತ್ಕಾಲದಲ್ಲಿ ಸಹಾಯವಾಡಿದವನೂ, ಮಂತ್ರೋಪದೇಶ ಮಾಡಿದವನೂ ಇವರೈವರೂ ತಂದೆಯ ಸಮಾನರು. ಇದನ್ನು ರೋಹಿಣಿ ಅರಿತವಳು. ಅಲ್ಲದೆ ತನ್ನ ಸಾಕು ತಂದೆಯಾದ ಕರುಣಾಕರನಲ್ಲಿ ಬಹು ಖಾಸ ಉಳ್ಳವಳು. ಇಂತಹ ತಂದೆಯನ್ನು ಈ ಕಷ್ಟ ಕಾಲದಲ್ಲಿ ನೋಡದೆ ಹೋಗಿರುವಳು ? ಕರುಣಾಂಬೆಯ ಸಮಾಧಾನ ವಚನೆಗಳು ಎಳ್ಳಷ್ಟಾದರೂ ಪ್ರಯೋಜನವಾಗಲಿಲ್ಲ, ಇವರ ದುಃಖವನ್ನು ನಿವಾರಣೆ ಮಾಡುವದಕ್ಕಾಗಿ ಲೋಕರಂಜಕನಾದ ಭಾನುವೂ ಪ್ರಕಾಶಿಸಿದನ.ಕೂಡಲೆ ರೋಹಿಣಿಯು ಕರುಣಾಂಬೆಯೊಡನೆ ಸುವರ್ಣಪುರಕ್ಕೆ ಹೊರಟಳು, ಪಟ್ಟಣಪ್ರವೇಶಮಯದಲ್ಲಿ ಒಬ್ಬ ಮನುಷ್ಯನು ಬಂದು ಇವರುಗಳನ್ನು ತಡೆದು ನೀವು ಯಾರು ? ಎಲ್ಲಿಗೆ ಹೋಗುತ್ತೀರಿ? ಎಂದು ಕೇಳಿ ದನು.ಅದಕ್ಕೆ ರೋಹಿಣಿಯು "ನಾವು ಎಲ್ಲಿ ಗೆ ಹೋದರೆ ನಿನಗೇನು?ದಾರಿಯನ್ನು ಬಿಟ್ಟು ತೊಲಗು, ” ಅಂದಳು. ಆ ಮನುಷ್ಯನು ಆಕೆಯ ಧೈರ್ಯವನ್ನು ನೋಡಿ ಆಶ್ಚರ್ಯಪಟ್ಟು ಕೂಡಲೆ ಆಗ್ರಹನುಳ್ಳವನಾಗಿ ನಾಗಿ ಹಿಂದು ಕೈಯಿಂದ ಕಡಿವಾಣವನ್ನು ಹಿಡಿದುಕೊಂಡು ಇನ್ನೊಂದು ಕೈಯಿಂದ ಆಕೆಯನ್ನು ತೊಡೆಯಬೇಕೆಂದು ಯತ್ನಿ ಸಿದನು. ಅಷ್ಟರಲ್ಲೇ ಆಕೆಯು ಅಬಲೆಯೆಂದು ಗೊತ್ಖತು, ಹೊಡೆಯಬೇಕೆಂದು ಎತ್ತಿದ ಕೈಯನ್ನು ಹಾಗೆಯೇ ಕೆಳಕ್ಕೆ ಇಳಿಸಿ ಮೃದುವಚನಗಳಿಂದ ನೀನು ಯಾರಮ್ಮ? ಈಕೆಯು ಯಾರು ಎಲ್ಲಿಗೆ ಹೋಗುತ್ತೀರಿ ? ಎಂದು ಕೇಳಿದನು. ಅದಕ್ಕೆ ಆಕೆಯು "ಅದರ ಯೋಚನೆ ನಿನಗೇತಕ್ಕೆ ? ನನಗೆ ಬಹಳ ಕೆಲಸವಿದೆ. ನನಗೆ ಅಡ್ಡಿಮಾಡಬೇಡ. ದಯವಿಟ್ಟು ನನ್ನನ್ನು ಒಳಕ್ಕೆ ಬಿಡು ಎಂಬದಾಗಿ ಹೇಳಿದಳು. ಆ ಮನುಷ್ಯನು "ಈ ರಾಬಧಾನಿಯನ್ನು ಅವಂತಿ ದೇಶದವರು ಆಕ್ರಮಿಸಿಕೊಂಡಿದಾರ ಎಂಬ ವಿಷಯವು ನಿಮಗೆ ತಿಳಿದಿರಲಾರದು. ನೀವ ಈಕೆಯ ಸಹಿತ ಈ ರಾಜಧಾನಿಯನ್ನು ಪ್ರವೇಶಿಸಿದಕೂಡಲೆ ನಿಮಗೆ ಅನೇಕ ತೊಂದರೆಗಳು ಸಂಭವಿಸುವುವು. ಒಂದುವೇಳೆ ನಿಮ್ಮಗಳ ಪ್ರಣಕ್ಕೂ ಕೂಡ ಹಾನಿ ಬರಬಹುದು. ನೀವು ಈ ರಾಜಧಾನಿಗೆ ಪ್ರವೇಶಮಾಡುವುದು ಖಂಡಿತವಾಗಿಯೂ ಉಚಿತವಲ್ಲ ಎಂದು ಹೇಳಿದನು