22
ಕಾದಂಬರಿ ಸಂಗ್ರಹ
ಕ--ಅಯ್ಯೋ ! ಸುವರ್ಣಪುರದವರ ಗತಿಯು ಈ ಸ್ಥಿತಿಗೆ ಬಂತೆ ? ಸವಾರ-ಯಾವ ಸ್ಥಿತಿಗೂ ಬರಲಿಲ್ಲ, ಪ್ರಜೆಗಳಿಗೆ ಯಾವ ವಿಧದಲ್ಲೂ ತೊಂದರೆಯನ್ನುಂಟುಮಾಡಕೂಡದೆಂದು ಅವಂತೀಶನು ಕಟ್ಟಪ್ಪಣೆ ಮಾಡಿರುವನು. ಕ -ಹಾಗಾದರೆ ಅಷ್ಟೊಂದುಮಂದಿ ಯಮಾಲಯವನ್ನೂ, ಕಾರಾಗಾರ ವನ್ನೂ ಸೇರಿದುದೇಕೆ ? ಸವಾರ-ಜನ್ಮ ಪ್ರಭೃತಿ ಆ ಧೂರೆಯ ಉಪ್ಪನ್ನೇ ತಿಂದು ಕಷ್ಟಕಾಲದಲ್ಲಿ ಸಹಾಯಮಾಡದೆ ಇರಲು ಸೈನಿಕರ ಮನಸೊಪ್ಪದೆ ರಣಕ್ಕೆ ನಿಂತರು.ಪ್ರಜೆಗಳಾದರೋ ದೇಶವಾತ್ಸಲ್ಯದಿಂದಲೂ, ತಮ್ಮನ್ನು ಮಕ್ಕಳಿಗಿಂತಲೂ ಅತಿಶಯವಾಗಿ ಕಾಪಾಡಿದ ಧೂರೆಗೆ
ಸಹಾಯಮಾಡದೆ ಇರಬಾರದೆಂಬ ಉದ್ದೇಶದಿಂದಲೂ ಅವಂತೀಶನಿಗೆ ಪ್ರತಿ ಭಟಿಸಿದರು.
ಕ.-ಇಂತಹುದರಲ್ಲಿ ಯುದ್ದಕ್ಕೇರಕ್ಕೆ ನಿಂತನು? ಸವಾರ -ತನ್ನ ಪೂರ್ವೀಕರ ಹೆಸರು ಶಾಶ್ವತವಾಗಿ ಸಿಂವಿ ಅವರ ಕೋರಿ ಕೆಯು ನೆರವೇರಲೆಂಬದಾಗಿ ಕ-ಹಾಗಾದರೆ ನಾವು ಈಗ ಏನುಮಾಡಬೇಕು ? ಸವಾರ-ತಮ್ಮಿಷ್ಟದಂತೆ ಆಚರಿಸಬಹುದು ಎಂದು ಹೇಳಿ ಸವಾರನು ಉತ್ತರ ವನ್ನು ನಿರೀಕ್ಷಿಸದೆ ಕುದುರೆಯನ್ನೇರಿಕೊಂಡು ಸುವರ್ಣಪುರದ ಕಡೆಗೆ ಹೊರಟು ಹೋದನು.
ಪುಷ್ಪ ಲಹರಿ
ಸೂರ್ಯನು ಅಸ್ತಾಚಲಪ್ರಣಯಿಯಾಗಿದ್ಧನು, ಪಕ್ಷಿಗಳು ಗೂಡುಗಳನ್ನು ಸೇರುತಲಿದ್ದವು. ಮೆಲ್ಲನೆ ಸಿರಿಯು ತನ್ನ ರಾಜ್ಯಭಾರವನ್ನು ಆರಂಭಿಸಿದಳು. ಹಿಂದೆ ರಡು ನಕ್ಷತ್ರಗಳು ಅಲ್ಲಲ್ಲಿ ಮಿಣುಗುತಲಿದ್ದುವು.ಒಮಕರನು ಲೋಕಕ್ಕೆ ಶಾಂತಿ ಸುಖವನ್ನುಂಟಮಾ ಡಲು ಪೂರ್ವದಿಗದಲ್ಲಿ ಉದಯಿಸಿದನು. ಆಹಾ ! ಇಂತಹ ಆಹ್ಲಾದಕರವಾದ ನಿಶಿಯಲ್ಲಿ ಲೋಕವೆಲ್ಲವೂ ನಿದ್ರೆಯಲ್ಲಿ ಮಗ್ನ ವಾಗಿರುವುದು.