ರೋಹಿಣಿ .
- ಈ ಮಾತನ್ನು ಕೇಳಿ ಕರುಣಾಕರನ ಮನಸ್ಸು ಕರಗಿತು, ಆಕೆಯ ತಲೆಯ ಮೇಲೆ ಕೈಯನ್ನಿಟ್ಟು “ ಸಕಲ ಪ್ರಾಣಿಗಳನ್ನೂ ಸಂರಕ್ಷಿಸತ ಕವನು ಈಶ್ವರನು, ಆತನ ಸಂಕಲ್ಪಕ್ಕೆ ವಿರೋಧವಾಗಿ ಯಾವುದೂ ನಡೆಯಲಾರದು, ಆತನ ಚಿತ್ತವಿದ್ದಂತೆ ಆಗಲಿ, ನನ್ನ ಆಯುರ್ಮಿತಿ ವಿಷ್ಯಾ ದರೂ ಇರಲಿ, ನಾನೇನೋ ನನ್ನ ಜೀವಮಾನವನ್ನೆಲ್ಲಾ ಭಗವಂತನ ಸೇವೆಯಲ್ಲಿಯೇ ಕಳೆಯಬೇಕೆಂದು ದೃಢ ಪ್ರತಿಜ್ಞೆಯನ್ನು ಮಾಡಿದೇನೆ. ಒಂದುವೇಳೆ ನಾನೇನಾದರೂ ಅಕಾಲಮೃತ್ಯುವಿಗೆ ತುತ್ತಾದರೂ ನಮ್ಮ ಕರುಣಾಂಬೆಯು ನಿನ್ನನ್ನು ಕಾಪಾಡದಿರಳು. ನಾನು ನಿನಗೆ ವಿದ್ಯೆಯನ್ನು ಕಲಿಸಲಿಲ್ಲ, ಧನವನ್ನು ಕೊಡಲು ಧನಿಕನಾಗಿಲ್ಲ, ಆದರೂ ಈಶ್ವರನಲ್ಲಿ ಭಕ್ತಿಯನ್ನೂ ವಿಶ್ವಾಸವನ್ನೂ ಉಂಟುಮಾಡಿರುವೆನು, ನೀನು ಸುಗುಣಿಯು, ವಿಧೇಯಳು, ಸತ್ಯವು ತಳು. ನೀನು ಪರಮೇಶ್ವರನನ್ನು ಮಾತ್ರ ಯಾವಾಗಲೂ ಮರೆಯಬೇಡ; ಆತನ ಅನುಗ್ರಹವಿಲ್ಲದೆ ಯಾವ ಪ್ರಾಣಿಯ ಭೂಮಿಯಲ್ಲಿ ಬಂದು ನಿಮಿಷವಾದರೂ ಜೀವಿಸಲಾರದು, ಆತನಿಗೆ ಸಮ್ಮತವಾದ ಕೆಲಸವನ್ನೆ ಮಾಡು. ಒಬ್ಬರ ಮನಸ್ಸಿಗೂ ವ್ಯಥೆಯುಂಟಾಗತಕ್ಕ ಮಾತನ್ನು ಆಡ ಬೇಡ, ಉಪಕಾರಿಯಾಗಿರು, ದೇವರು ನಿನಗೆ ಒಳ್ಳೆಯದನ್ನು ಮಾಡು ವನು. ಋಣಾನುಬಂಧವಿದ್ದರೆ ಈ ಲೋಕದಲ್ಲಿ ಇನ್ನೊಂದಾವರ್ತಿ ಒಬ್ಬರನ್ನೊಬ್ಬರು ನೋಡುವೆವು, ಇಲ್ಲದಿದ್ದರೆ ಜಗದೀಶನ ಸನ್ನಿಧಿಯಲ್ಲಿ ನೋಡಲು ಯಾವ ಅಡ್ಡಿಯೂ ಇಲ್ಲ. ಎಂದು ಬುದ್ದಿ ಹೇಳಿ ಮಗ ಳನ್ನು ಕಲ್ಯಾಣಪುರಕ್ಕೆ ಸೇರಿಸಿ ಕರುಣಾಂಬೆಯೊಡನೆ ಸಂಗತಿಯೆಲ್ಲವನ್ನೂ ತಿಳಿಸಿ ಕರುಣಾಕರನು ಪುತ್ರಿ ವಿರಹ ವ್ಯಸನದಿಂದಕೂಡಿ ಆ ದೇಶದ ರಾಜ ಧಾನಿಯಾದ ಸುವರ್ಣಪುರಕ್ಕೆ ಪ್ರಯಾಣ ಮಾಡಿದನು, ಪಾಠಕಮಹಾಶಯರೇ ! ದೈವಘಟನೆಯು ವಿಚಿತ್ರವಾದುದು. ಆಹಾ ! ರೋಹಿಣಿಯು ಎಲ್ಲಿ ಹುಟ್ಟಿದಳು ! ಎಲ್ಲಿ ಬೆಳದಳು ! ಈಗ ಎಲ್ಲಿರುವಳು ? ಕರುಣಾಕರನಿಗೆ ತನ್ನ ಸಾಕುಮಗಳನ್ನು ತನ್ನ ಸಹೋದರಿಯ ಮನೆಗೆ ಕಳುಹಿಸುವಾಗೈ ಉಂಟಾದ ದುಃಖವೇ ಇಂತಿರುವಲ್ಲಿ ಸ್ವಂತ ಹೆಣ್ಣುಮು ಕಳನ್ನು ಪ್ರೀತಿಯಿಂದ ಸಲಹಿ ಮದುವೆ ಮುಂತಾದುವುಗಳನ್ನು ನಡಿಸಿ