ವಯಸ್ಸಾಯಿತು. ಏನುತಾನೇ ಮಾಡಿಯಾಳು ? ಕೆಲವು ಕಾಲದ ವರೆ ವಿಗೂ ನಿನ್ನನ್ನು ಅವಳ ಸವಿಾಪಕ್ಕೆ ಕಳುಹಿಸಬೇಕೆಂಬ ಇಚ್ಛೆ ಇದೆ. ನಿನ್ನ ಅದೃಷ್ಟದಿಂದ ಆಕೆಗೆ ಆರೋಗ್ಯವಾಗಬೇಕು ಎಂದು ಹೇಳಿದನು. ಅದಕ್ಕೆ ರೋಹಿಣಿಯು ಕರುಣಾಕರನನ್ನು ಕುರಿತು ಅಪ್ಪಾ ! ತಮ್ಮ ಇಪ್ಪ ದಂತೆಯೆ ನಡೆಯಲು ಸಂತುಷ್ಟಚಿತ್ತಳಾಗಿರುವೆನು. ತಮ್ಮ ಸಹೋದ ರಿಯರಾದ ಕರುಣಾಂಬೆಯರ ಸೇವೆಯನ್ನು ಮನಃಪೂರ್ವಕವಾಗಿ ಮಾಡು ವನಾದರೂ ತಮ್ಮನ್ನು ಅಗಲಿ ಹೇಗಿರಲಿ ಎಂದಳು. ಅದನ್ನು ಕೇಳಿ ಕರುಣಾಕರನು ಮಗುವೇ ! “ ನಾನೇ ಜಾಗ್ರತೆ ಯಾಗಿ ಬಂದು ನಿನ್ನನ್ನು ಕರೆದುಕೊ೦ಡು ಬರುವೆನು. ನಾನು ಎಂದು ಕರೆದ ಹೊರ್ತು ನೀನು ಮತ್ತಾರ ಸಂಗಡಲೂ ಬರಕೂಡದು ” ಎಂದು ಹೇಳಿದನು. ರೋಹಿಳೆಯು ಆತನ ಮನೋಭಿಪ್ರಾಯವನ್ನು ತಿಳಿಯದೆ ಇದ್ದು ದರಿಂದ ಸಂತೋಷದಿಂದ ಪ್ರಯಾಣಸನ್ನದ್ಧಳಾದಳು. ತಂದೆ ಮಗಳಿಬ್ಬರೂ ಪ್ರಯಾಣಮಾಡಿ ಪೂರ್ವದಲ್ಲಿ ಈ ಮಗುವು ಬಿದ್ದಿದ್ದ ಸ್ಥಳವನ್ನು ಕಂಡು ಕರುಣಾಕರನು-“ ರೋಹಿಣಿ ಈಗ ಹನ್ನೆರಡು ವರ್ಷಗಳ ಮುಂಚೆ ನೀನು ಈ ಪ್ರದೇಶದಲ್ಲಿ ಬಿದ್ದಿದ್ದೆ ” ಎಂದು ಆ ಪ್ರದೇಶವನ್ನು ತೋರಿಸಿದನು. ಅದನ್ನು ಕೇಳಿ ರೋಹಿಣಿಯು ಆ ಪ್ರದೇಶದಲ್ಲಿ ನಿಂತು ಭಗವಂತನ ವ್ಯಾಪಾರವನ್ನು ಕುರಿತು ಆತನನ್ನು ಸ್ತೋತ್ರ ಮಾಡಿದಳು. ಅನಂತರ ಕರುಣಾಕರನ ಕಡೆಗೆ ತಿರುಗಿ ಗದ್ದ ದಧ್ವನಿಯಿಂದ ಎಲೈ ತಂದೆಯೆ ? ( ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಈಶ್ವರಾನುಗ್ರಹದಿಂದ ನೀನು ನನ್ನನ್ನು ಕಂಡು ಕಾಪಾಡಿದೆ. ಮತ್ತು ಈಗಲೂ ಕಾಪಾಡುತ್ತಲಿರುವಿ. ನನ್ನ ಸಂರಕ್ಷಣೆಗೋಸ್ಕರ ಜಗದೀಶ ರನು ನಿನ್ನನ್ನು ಹೇಗೆ ಕಳುಹಿಸಿ ದನೋ ಹಾಗೆಯೇ ನಾನು ಈಗ ಮಾಡತಕ್ಕ ಪ್ರಾರ್ಥನೆಯನ್ನು ಕೇಳಿ ಆತನು ನೀನು ಮಾಡಿದ ಉಪಕಾರಕ್ಕೋಸ್ಕರ ದೀರ್ಘಾಯುಸ್ಸನ್ನು ಕೊಟ್ಟು ನಮ್ಮೆಲ್ಲರನ್ನೂ ಸಂರಕ್ಷಿಸಲಿ ” ಎಂದು ಪ್ರಾರ್ಥಿಸುತ್ತೇನೆ ಎಂದಳು.
ಪುಟ:ನನ್ನ ಸಂಸಾರ.djvu/೨೩೨
ಗೋಚರ