ಚರಿತ್ರೆಯನ್ನು ಪ್ರಸ೦ಗಮಾಡಿದನು. ಆ ವಿವರವಿಲ್ಲಿ ಸೂಚಿಸಲ್ಪಡು
ತ್ತದೆ. ಶ್ರಿಯಃಪತಿಯಾಗಿ, ಶ್ರೀ ವೈಕು-ಠನಿಕೇತನನಾಗಿ, ಶ್ರೀ ಭೂ
ನೀಳಾಸಮೇತನಾಗಿ, ಶೇಷಪರ್ಯಂಕದಲ್ಲಿ ನಿತ್ಯಾನಂದಮಯನಾಗಿ ಪವಡಿ
ಸಿದ್ದ ಭಗವಂತನ ಸನ್ನಿಧಿಗೆ,ಬ್ರಹ್ಮೇ೦ದ್ರಾದಿ ದೇವತೆಗಳೂ,ಋಷಿಮುನಿ
ಗಳೂ ಬಂದು ಕಂಸಾದಿ ದುಷ್ಟರಾಕ್ಷಸರ ಹಾವಳಿಯನ್ನು ಬಿನ್ನವಿಸ
ಲಾಗಿ ಭಗವಂತನು ಶ್ರೀ ಕೃಷ್ಣಾವತಾರವನ್ನು ಪರಿಗ್ರಹಿಸಿ ದುಷ್ಟರಾದ
ರಕ್ಕಸರನ್ನು ಸಂಹರಿಸಿ ಲೋಕೋದ್ಧಾರಮಾಡುವುದಾಗಿ ಸೂಚಿಸಿ,
ಅಭಯಹಸ್ತವನ್ನಿತ್ತುಬ್ರಹ್ಮಾದಿಗಳನ್ನು ಕಳುಹಿಸಿಕೊಟ್ಟನು.
ಶ್ಲೋ|| ತತೋಹಂಸಂಭವಿಷ್ಯಾಮಿ ದೇವಕೀಜಠರೇಶುಭೇ | ಗರ್ಭೇ
ತ್ಯಯಾಯಶೋದಾಯಾ| ಗಂತವ್ಯಮವಿಲಂಬಿತಂ||
ಪಾ,ವೃಟ್ಕಾಲೇಚನಭಸಿ | ಕೃಷ್ಣಾಷ್ಪಮ್ಯಾಮಹಂನಿಶಿ| ಉತ್ಪ
ತ್ಸ್ಯಾಮಿನವಮ್ಯಾಂಚ | ಪ್ರಸೂತಿಂತ್ಯಮವಾಪ್ಸ್ಯಸಿ|| ದೇವಕೀ
ಚಯಶೋದಾಚ | ಸುಷುವಾತೇಸಮಂತಾದಾ | ಯಾಮೇವರ
ಜನೀಂಕೃಷ್ಣೋ | ಜಜ್ಣೀವೃಷ್ಟಿಕುಲೇಪ್ರಭುಃ || ತಾಮೇವರ
ಜನೀಂಕನ್ಯಾಂ | ಯಶೋದಾದೇವ್ಯಜಾಯತ | ಅಷ್ಟಮ್ಯಾಂ
ಶ್ರಾವಣೇಮಾಸಿ | ಕೃಷ್ಣಪಕ್ಷೇಮಹಾತಿಥೌ || ರೋಹಿಣ್ಯಾ
ಮರ್ಧರಾತ್ರೇಚ | ಸುಧಾಂಶಾವುದಯೋನ್ಮುಖೇ | ದೇವಕ್ಯಜನ
ಯದ್ಯಿಷ್ಟುಂ| ಯಶೋದಾತಾಂತುಕನ್ಯಕಾಂ | ಮುಹೂ
ರ್ತೇಭಿಜಿತಿವ್ರಾಪ್ತೇಹ್ಯರ್ಧರಾತ್ರೇಸುಖಾವಹೇ || ವಸುದೇವ
ಸ್ತತೋಗತ್ಯಾ | ದೇವಕೀಗರ್ಭವೇಶ್ಮತತ್ | ದದರ್ಶದೇವ
ದೇವೇಶಂ | ರಾತ್ರೌಜಾತಮಧೋಕ್ಷಜಂ|| ಶಯಾನಮಾಂಬು
ಜೇವತ್ರೇ| ವಟವತ್ರೇಯಥಾಪುರಾ| ಪ್ರಾಚೀನಶಿರಸಂದೇವಂ
ಪಶ್ಚಿಮನ್ಯಸ್ತವಾದಕಂ||
ಸತ್ಯವ್ರತನಾದ ಭಗವಂತನು, ತನ್ನ ವಾಕ್ಯಪರಿಪಾಲನಾರ್ಥವಾಗಿ
ಬಹ್ಮಪ್ರಳಯಾನಂತರವಾದ ಇಪ್ಪತ್ತೆಂಟನೇ ಮಹಾಯುಗಕ್ಕೆ ಸೇರಿದ
ಈ ಕಲಿಯುಗಕ್ಕೆ ಪೂರ್ವದ ದ್ವಾಪರಯುಗದಲ್ಲಿ 8,63,874 ವರ್ಷ
ಗಳು, 4 ತಿಂಗಳು, 21 ದಿನಗಳು ಕಳೆದನಂತರ ಸಂಭವಿಸಿದ ಶ್ರೀಮುಖ