ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ ೬೫

ನಗೇಶ:-ಹಾಗೂ ಆಗಲಿ; ನಂದಿನಿ! ಜ್ಞಾನಪ್ರಕಾಶಕ್ಕೆಂದರೂ ವಯಸ್ಸಾಗಿರಬೇಕಲ್ಲವೇ?

ನಂದಿನಿ:-ನಿಜ! ವಯಸ್ಸಾಗಬೇಕೆಂಬುದನ್ನು ಒಪ್ಪಬೇಕು. ಆದರೂ ವಿಚಾರಮಾಡಿ ನೋಡಬಾರದೇ? ಧ್ರುವ, ಪ್ರಹ್ಲಾದಾದಿಗಳ ಜ್ಞಾನ ಪ್ರಸಾರಕಾಲದಲ್ಲಿ ಅವರಿಗೆ ಮುಪ್ಪಡಸಿತ್ತೇನು?

ನಗೇಶ:-ಅದು ಬಹುಕಾಲದ ಹಿಂದಿನ ಮಾತು. ಈ ಕಾಲದಲ್ಲಿ ಅದನ್ನು ನಂಬುವವರಾರು?

ನಂದಿನಿ-ನಿಜ! ಪಾಶ್ಚಾತ್ಯ ನಾಗರಿಕತೆಯ ನಾಸ್ತಿಕವಾದದಮುಂದೆ ಇದನ್ನು ನಂಬುವುದೂ ಕಷ್ಟವೇಸರಿ. ಆದರೆ, ಅದರಿಂದ ನಮ್ಮ ಪೂರ್ವಜರ ಜ್ಞಾನನಾಮ್ರಾಜ್ಯಕ್ಕೇನೂ ಕೊರತೆಯಾಗದಷ್ಟೆ? ಹೋಗಲಿ; ಈಗಿನ ಮಾತನ್ನೇ ತೆಗೆದುಕೊಳ್ಳುವ:-

  ಜ್ಞಾನವೆಂದರೆ, ಬಾಹ್ಯವಸ್ತುಸರಿಚಯ ಮಾತ್ರವಲ್ಲ; ಪಾಪ-ಪುಣ್ಯಗಳ ಸ್ವಭಾವ, ಮತಾಚಾರ, ಸ್ವಧರ್ಮ, ದೈವಭಕ್ತಿ, ಭಗವತ್ಸಂಬಂಧವರಿ ಜ್ಞಾನ ಇವುಗಳನ್ನು ಅಂತಃಕರಣಗಳಲ್ಲಿ ಚೆನ್ನಾಗಿ ಧ್ವನಿಸುವಂತೆ ಮಾಡುವ ಪ್ರಜ್ಞಾವಿಶೇಷವಾಗಿದೆ. ಪ್ರಜ್ಞೆ ಮತ್ತೆಲ್ಲಿಂದಲೂ ಬರಬೇಕಾಗಿಲ್ಲ. ಅದು, ಮಾನವ ಜನ್ಮ ಸಹಜಗುಣವಾಗಿರುವುದೆಂದು ತಿಳಿದವರೆಲ್ಲರೂ ಹೇಳುವರು. ಇಂತಹ ಜನ್ಮಸಹಜವಾದ ಗುಣವನ್ನು ಕರ್ಮೇಂದ್ರಿಯಗಳ ಅಕ್ರಮದಿಂದ ಹೊಲಗೆಡಿಸಿಕೊಳ್ಳುವಂತೆ ಮಾಡುವ ಮೌಢ್ಯತೆಯಾಗಲೀ, ಜ್ಞಾನೇಂದ್ರಿಯಗಳ ಸಾಧನಬಲದಿಂದ ಪ್ರಸಾರಕ್ಕೆ ಬರುವಂತೆ ಮಾಡುವ ಪ್ರೌಢಿಮೆ(ಪ್ರತಿ ಭಾಶಕ್ತಿ)ಯಾಗಲೀ ಮಾತಾ-ಪಿತರರ ಅಥವಾ ಗುರುಜನರ ಬೋಧನಾ, ಕ್ರಮದ ಅಭ್ಯಾಸಬಲದ ಮೇಲೆಯೇ ನಿಂತಿರುವುವು. ಅವರ ಬೋಧನೆ, ಶಿಕ್ಷಣೆ, ಅಭ್ಯಾಸ, ವಿಚಾರಾದಿಗಳು ಕ್ರಮಕ್ಕೊಳಪಟ್ಟಿದ್ದರೆ, ಪ್ರಜ್ಞೆಯ ಮಾನವನ ಎಂಟು-ಒಂಭತ್ತು ವರ್ಷಗಳಿಗೆ ಹೊರಹೊಮ್ಮಿ ಬರಲಾಗುವುದು. ಹಾಗೆ ಬರುವಂತಾಯ್ತೆಂದರೆ, ಬಾಲಸೂರ್ಯನ ಶಾಂತಕಿರಣಗಳೇ ಸಾಧನ(ಯೋಗ)ಬಲದಿಂದ ಮಧ್ಯಾಹ್ನಕಾಲದಲ್ಲಿ ಚಂಡಕಿರಣಗಳಾಗಿ ಸಮಸ್ತ ಜೀವರಾಶಿಗಳನ್ನೂ ತನ್ನ ತೇಜಸ್ಸಿಗೆ ವಶವಾಗುವಂತೆ ಮಾಡಿಕೊಳ್ಳುವೆ ರೀತಿಯಲ್ಲಿ, ಹದಿನಾಲ್ಕು ಅಥವಾ ಹದಿನಾರನೆಯ ವರ್ಷಗಳಿಗಾಗಲೇ ಮೇಲೆ