ಪುಟ:ಮಾತೃನಂದಿನಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಸತೀಹಿತೈಷಿಣೀ

ನಗೇಶ:- ನಿನ್ನಿನ ಪ್ರಸಂಗದಲ್ಲಿ ಪ್ರೌಢವಿವಾಹವನ್ನು ಶ್ಲಾಘಿಸಿದ ನೀನೇ ಈಗಲೇ ವಿವಾಹಮಾಡುವ ಕಾಲವೆಂದು ಹೇಳುತ್ತಿರುವೆ. ಇದರಿಂದ ಅನೇಕರ ಆಕ್ಷೇಪಗಳಿಗೆ ಅವಕಾಶವಾಗಬಹುರಾಗಿದೆ.

ನಂದಿನಿ:- ಗಂಭೀರಮುದ್ರೆಯಿಂದ,- "ಅಪ್ಪ! ಅರ್ಥಜ್ಞಾನವಿಲ್ಲದ ಮೂರ್ಖರ ವೃತ್ತಿಯೇ ಅದಾಗಿರುವುದು. ತಫ್ಯಾರ್ಥವನ್ನು ಕಂಡುಹಿಡಿದು ಹೇಳುವವರು ಯಾವುದನ್ನೂ ಅಕ್ಷೇಪಿಸಲಾರರು! ಇದು ನಿನಗೆ ತಿಳಿದಿದ್ದರೂ ನನ್ನನ್ನು ಕೇಳುತ್ತಿರುವುದನ್ನು ನೋಡಿದರೆ, ನನ್ನ ನಿಜಾಶಯ(ಸಂದೇಶ)ವನ್ನು ತಿಳೆಯಬೇಕೆಂಬುದೇ ನಿನ್ನ ಇಷ್ಟವಾಗಿ ಕಾಣುತ್ತಿದೆ. ಆಗಲಿ; ಗುರುವೂ ಹಿತೈಷಿಯೂ ಆದ ನಿನ್ನ ಸಂತೋಷವಿದ್ದಂತೆ ನಡೆವುದೇ ನನ್ನ ಕರ್ತವ್ಯವು.

ನಗೇಶ:- ನಿಜ! ಅದೀಗ ಸಹಜೋಕ್ತಿ!! ಎಲ್ಲಿ; ಇನ್ನು ನಿನ್ನ ವ್ಯಾಖ್ಯಾನವಾಗಲಿ?

ನಂದಿನಿ:- ವ್ಯಾಖ್ಯಾನವಿಷ್ಟೇ! ಮಕ್ಕಳಿಗೆ ತಿಳಿವುಂಟಾದ ಬಳಕ ವಿವಾಹವಾಗುವುದುತ್ತಮವೆಂದೂ, ತಿಳಿವಿಲ್ಲದಾಗ ಮಾಡುವುದರಿಂದ ಅವರ ಆತ್ಮಸಂತೋಷಕ್ಕೆ ಕೊರತೆಯುಂಟಾಗಬಹುದೆಂದೂ ಹೇಳಿದ ಮಾತಲ್ಲದೆ, ಮಯಃಪ್ರಾಬಲ್ಯವನ್ನೇ ಪ್ರೌಢಶಬ್ದಕ್ಕೆ ಗುರಿಯಾಗಿಟ್ಟು ಹೇಳಲಿಲ್ಲ. ಅಂತಹ ವಯಃಪ್ರಾಬಲ್ಯದ ಅನರ್ಥವಿವಾಹಕ್ಕೆ ನಾನೆಂದೂ ಅಭಿಪ್ರಾಯವನ್ನು ಕೊಡುವ ಸಂಭವವೂ ಬರುವುದಿಲ್ಲ.

ನಗೇಶ:- ಅದೇನು?

ನಂದಿನಿ:- ಮತ್ತೇನು? ಸ್ತ್ರೀಯರಿಗೆ ಪ್ರೌಢಾಶಬ್ದವು ಯಾವ ವಯಸ್ಸಿಗೆ ಸಲ್ಲುವುದು? ೨೦-೨೫ರ ಮೇಲಲ್ಲವೇ? ಹಾಗೆ ಪ್ರೌಢಾವಿವಾಹವಾಗ ಬೇಕೆನ್ನುವವನು, ೨೦-೨೫ ವರ್ಷಗಳ ಕೊಬ್ಬಿದಹುಲಿಯನ್ನಲ್ಲವೇ ಹುಡುಕಬೇಕಾದೀತು? ಹಾಗಾಗುವುದರಿಂದ ಮಾನವಜನ್ಮದ ಇತಿಕರ್ತವ್ಯವೇ ನಾಶವಾಗಿ, ವಿಷಯಲಾಲಸೆಯ ಪಶುವೃತ್ತಿಯೊಂದೇ ಮುಖ್ಯಾಚಾರವಾಗಿ ಪರಿಣಮಿಸಬಹುದು! ಈ ಬಗೆಯ ಉಚ್ಚೃಂಖಲಪ್ರವರ್ತನವನ್ನು ವಿವಾಹ ವಿಧಿ ಅಥವಾ ಪ್ರೌಢವಿವಾಹವೆಂದು ಹೇಳುವುದು ಸರಿಯಲ್ಲ. ಪ್ರೌಢಶಬ್ದವು ಜ್ಞಾನೇಂದ್ರಿಯದ ವಿಕಸನಕಾಲಕ್ಕೆ ಮಾತ್ರವೇ ಸಲ್ಲಬೇಕಾಗಿದೆ.