ಪುಟ:ಮಾತೃನಂದಿನಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾ ಇನ೦ ದಿನಿ. 63 ವರ್ಗಕ್ಕೆ ಚೈತನ್ಯದಾಯಿನಿಯರೆನ್ಸಿ ಸಿ ಸನ್ಮಾನಿಸಲ್ಪಡುವರು. ಹಾಗಿಲ್ಲದ ಪಕ್ಷದಲ್ಲಿ, ಆ ಹೆಣ್ಣು ಮಕ್ಕಳಿಗೆ ಗಂಡಾಂತರಗಳು ಪರಂಪರೆಯಾಗಿ ಬೀಳುವ ವಲ್ಲದೆ, ಅವರನ್ನು ಹೆತ್ತವರಿಗೂ ಸಂತಾಪವುಂಟಾಗುವುದು. ಇನ್ನು ಇದಕ್ಕೂ ಹೆಚ್ಚಾಗಿ ವಿವರಿಸುವುದೇಕೆ ? ನರೇಶ:--ತಲೆದೂಗಿ,-ನಂದಿನಿ: ನಿನ್ನ ಈ ಬಗೆಯ ಭಾವಗರ್ಭಿತ, ರಸವರಿಪುಷ್ಟ ಮತ್ತೂ ಅರ್ಧವತ್ತಾದ ಭಾಷಣದಿಂದ ನನಗೆ ಮಿತಿಮೀರಿದ ಅನಂದವಾಗಿದೆ. ಆದರೆ, ಇದನ್ನು ಇನ್ನೂ ಚೆನ್ನಾಗಿ ವಿವರಿಸಿದರೆ, ನಿನ್ನ ಇತರ ಎಳದಯರಿಗೂ ತಿಳಿವುಂಟಾಗುವುದಲ್ಲವೆ?” - ನಂದಿನಿ. - ಅಪ್ಪ ! ಇನ್ನೂ ವಿವರಿಸಬೇಕೆಂದರೆ ರಸಾಭಾಸವಾಗ ಬಹುದೆಂದು ತೋರುವುದು. ಹಾಗೆ ನಮ್ಮ ಎಳದಂಗೆಯರ ತಿಳಿವಿಗೆ ಇದು ಕಾರಣವಾಗುವುದಾಗಿದ್ದರೆ, ಅವರ ಹಿರಿಯರೇ ಇದರ ತತ್ಯಾರ್ಥವನ್ನು ವಿವ ರಿಸುವುದರಿಂದ ಅಷ್ಟಷ್ಟ ಕ್ಕೂ ಹೆಚ್ಚಿನ ಫಲವಾದೀತು ! ಇದನ್ನು ನಾನು ಬಿಡಿಸಿ ಹೇಳಲಾರೆನು. ಹೇಗೂ ಈಗ ನಾನು ಈಬಗೆಯ ಕನ್ಯಾವಸ್ಥೆ ಯಲ್ಲಿರುವೆನೆಂಬುದರಿಂದಲ್ಲವೇ, ನಾದಾನಂದನ ಮನಸ್ಸು ಕಲಕಿಹೋಗುತ್ತೆ ರುವುದು ? ಹಾಗಿಲ್ಲದಿದ್ದರೆ ಅವನ ವ್ಯಾಸಂಗವೂ ನಿರ್ವಿಘ್ನವಾಗಿ ಸಾಗುತ್ತಿ ಇಲ್ಲವೇನು? ಇದಕ್ಕೆಂದೇ ಸ್ವರ್ಣೆಯಾದರೂ ಇತರರ ಮನೋವಿಕಾರಕ್ಕೆ ವಿಷಯಳಾಗಿರದೆ ಪರಿಶೋಭಿಸುವಂತಾಗಬೇಕೆಂಬುದು ನನ್ನ ಮನರೆಣಿಕೆ ಯಾಗಿದೆ. ನಗೇಶ:-ನಂದಿನಿಯ ಮುಖವನ್ನೇ ನೋಡುತ್ತ 11 ತಾಯಿ ! ನಾದಾನಂದನ ವಿಚಾರವನ್ನು ಮುಂದೆ ಪ್ರಸ್ತಾಪಿಸಲಿಕ್ಕಿರುವೆನು. ಆದರೆ, ಮೊದಲು ಸ್ವರ್ಣಿಯ ವಿಚಾರವು ಇತ್ಯರ್ಥವಾಗಲಿ!” ನಂದಿನಿ:-ಇತ್ಯರ್ಥವೇನು ? ಕಂಡಂತೆಯೇ ಇಲ್ಲವೇ, ಈಗಲೇ ಮದುವೆ ಮಾಡಬೇಕೆಂಬುದು? ನರೇಶ:-ಹೇಗೆ? ನೀನು ನಿನ್ನೆ ಹೇಳಿದುದಕ್ಕೂ ಈಗ ಹೇಳುತ್ತಿರು ವುದಕ್ಕೂ ಪರಸ್ಪರ ವಿರುದ್ಧಾಭಿಪ್ರಾಯವಿದೆಯಲ್ಲವೆ? ನಂದಿನಿ:-ವಿರೋಧಾಭಿಪ್ರಾಯ (ಭಿನ್ನ ಮತ) ವಾವುದು ?