57 ಮಾತೃನಂದಿನಿ ನನ್ನು ನಿಮ್ಮ ದಾರಿಗೆ ತಿರುಗಿಸುವಂತೆ ಮಾಡಬೇಕಾದಕೀಲು, ನಂದಿನಿಯ ಕೈಯಲ್ಲಿರುವುದೆಂದು ತಿಳಿ. ಅದು ಇನ್ಯಾರ ಕೈಗೂ ಸೇರಿಲ್ಲ.' ಚಿತ್ರ:- ಹಾಗಿದ್ದರೆ, ಮತ್ತೂ ಅನುಕೂಲವೇ ಅಲ್ಲವೇ? ಆದರೆ ನೋಡು, ಸದ್ಯದಲ್ಲಿ ನಮಗೆ ಹಿಡಿದಿರುವ ಯೋಚನೆಯೊಂದು ಬಲವಾಗಿದೆ! ಚಂದ್ರ:- ಕುತೂಹಲದಿಂದ...ಅದಾವುದು ?” ಚಿತ್ರ:-ನಾದಾನಂದನ ಮನಸ್ಸು ಚದರಿ ಹೋಗುತ್ತಿದೆ; ವ್ಯಾಸಂಗವು ಹತ್ತುವಂತಿಲ್ಲ. ಚಂದ್ರ:-ತರಿಂದ ? ಚಿತ್ರ: -ನಂದಿನೀ ಲಾಭದ ವಿಚಾರವಾಗಿ ತಲೆ ತಿರುಗಿದಂತೆ ಕಾಣುತ್ತಿದೆ. ಚಂದ:-ಅವಳೇನೆನ್ನುವಳು? ಚಿತ್ರ:-ಹೇಳುವುದೇನು? ಸ್ಥಿರಚಿತ್ತನಾಗಿ ವ್ಯಾಸಂಗವನ್ನು ಮುಗಿ ಸೆಂದೂ, ನಿರ್ದಿಷ್ಟ ಕಾಲದವರೆಗೂ ಶುದ್ಧ ಬ್ರಹ್ಮಚಾರಿಯಾಗಿರೆಂದೂ ಹೇಳು ತಿರುವಳು. ಏನೆಂದರೂ ಇದು ಸಸೇಮಿರದ ಕಥೆಯಾಗಿದೆ. ಚಂದ್ರ:-ಇರಲಿ; ಅವಳಿಗೆ ಮದುವೆ ಯಾವಾಗಲಂತ? ಚಿತ್ರ:-ವಿಂಡಾರಮಾಡಿದುದರಲ್ಲಿ ಆ ಯೋಚನೆಯೇ ಇರುವಂತೆ ಕಾಣ ಅಲ್ಲ. ಚಂದ್ರ:-ಹಾಗಿದ್ದರೆ, ನಾದಾನಂದನಿಗೆ ಬೇರೆಕಡೆಯಿಂದಾದರೂ ಹೆಣ್ಣು ತಂದು ಮದುವೆ ಮಾಡಬಾರದೇಕೆ? ಚಿತ್ರ:-ಹಾಗೆ ಮಾಡುವಂತಿಲ್ಲ. ನಂದಿನಿಗೆ ಮದುವೆಯಾಗುವವರೆಗೂ ಅವನು ಮತ್ತೊಂದುಹೆಣ್ಣನ್ನು ನೋಡಿಲ್ಲವಂತೆ! ಚಂದ್ರ:-ಅವನಿಗೇಕೆ ಈ ಚಾಪಲ್ಯ? ಚಿತ್ರ:-ನನ್ನ ಅದೃಷ್ಟ ! ಎಲ್ಲರೂ ಅನಲನಂತೆಯೇ ಇರಬೇಕೆನ್ನು ವುದು ದುರಾಶೆಯಲ್ಲವೇ? ಚಂದ್ರ:-ಅವನ ನಂದಿನಿಯ ತಂದೆಯ ಬಳಿಯಲ್ಲಿ ಗುರುಕುಲ ವಾಸ ಮಾಡದಿದ್ದ ಪಕ್ಷದಲ್ಲಿ, ನಾದಾನಂದನಂತೆಯೇ ಆಗುತ್ತಿದ್ದನೋ ಏನೋ ಬಲ್ಲವರಾರು ?
ಪುಟ:ಮಾತೃನಂದಿನಿ.djvu/೭೧
ಗೋಚರ