ಪುಟ:ಮಾತೃನಂದಿನಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ಸತೀಹಿತ್ಯ ಸಿನ ವಂಚಿತನಾಗಿ ಸ್ವರ್ಣೆಯನ್ನು ಮದುವೆಯಾಗಲೊಲ್ಲೆನೆಂದು ಬಿಡುವಪಕ್ಷದಲ್ಲಿ, ಇವಳೂ ನಂದಿನಿಯ ಜೊತೆಯಲ್ಲಿ ಮದುವೆಯಿಲ್ಲದೆ ಬೆಳೆಯ...; ಇಷ್ಟ ಲ್ಲದೆ ಮತ್ತಾರಿಗೂ ಇವಳನ್ನು ಕೊಡಲಾರೆನು !' ಎಂದು ಹಟತೊಟ್ಟಿರುವರು. ಸಮಾಜಶಾಸನವೆಂದರೆ-'ಯಾವಶಾಸನವಾದರೂ ಇರಲಿ, ನೋಡಿಕೊಳ್ಳು ವೆ” ನೆನ್ನುವರು. ಇದರಮೇಲೆ ದೇವರ ಚಿತ್ತವು ಹೇಗಿದೆಯೋ ಬಲ್ಲವರಾರು? ಚಂದ್ರ:- ಅದೇನೊ ನಿಜ! ಯಾವುದು ಹೇಗೆ ಆಗಬೇಕೆಂದು ಭಗ ವತ್ಸಂಕಲ್ಪದಲ್ಲಿದೆಯೋ, ಅದು ಹಾಗೆಯೇ ಆಗುವುದು. ಅದಿರಲಿ, ಇಂದೇನು, ನಿನ್ನ ಮಗಳು ಬದಲಾಯಿಸಿದಂತಿದೆ? ಚಿತ್ರ:-ಬೆಳಿಗ್ಗೆ ನಂದಿನಿಗೂ ಇವಳಿಗೂ ಏನೇನೋ ಚರ್ಚೆ ನಡೆಯಿ ತು, ಅದಾದಬಳಿಕ, ಮಧ್ಯಾಹ್ನದ ಊಟದ ಹೊತ್ತಿನಲ್ಲಿ, ನಮ್ಮ ಬಾವ, ಮಾವ ಇವರೊಡನೆ ಬಲವಾದ ಪ್ರಸಂಗವೂ ಬೆಳೆಯಿತು. ಇವುಗಳನ್ನು ಕೇಳಿದಾಗಳಿಂದ ಇವಳು ಹೀಗೆ ಬದಲಾಯಿಸಿರುತ್ತಾಳೆ. ಅಷ್ಟಲ್ಲದೆ ಕೊರ ತೆಯೇನೂ ಕಾಣುತ್ತಿಲ್ಲ, ನಿತ್ತಕ್ಕೂ ಹೆಚ್ಚಾದ ಉತ್ಸಾಹದಿಂದಲೇ ಕೆಲಸಗಳ ನ್ನು ಮಾಡುತ್ತಿದವಳು. ಚಂದ್ರ:- ತಲೆದೂಗುತ್ತ-11 ಈಗ ನಮ್ಮವನು ಒಂದು ಬಾರಿ ಒಂದು ನೋ ಡಿ ಹೋಗಬಾರದೇ? ” ಚಿತ್ರ:-ಕಿರುನಗೆಯಿ೦ರ,-ಬಂದಿದ್ದನು; ಎಷ್ಟೋ ಹೊತ್ತು ಇವ ಳನ್ನು ಹಿಡಿದು ನಿಲ್ಲಿಸಿಕೊಂಡು, ವಿನೋದವಾಗಿಯೇ ಸರಸವಾದ ಬೋಧೆ ಯನ್ನೂ ಕೊಟ್ಟು ಹೋದನು. ಅದರಿಂದ ಅವಳ ಉತ್ಸಾಹವು ಮತ್ತೂ ಹೆದೆ.' ತುದ್ರ:-ಕುತೂಹಲದಿಂದ,- ಈಗ ಇವಳು ಹೇಳುವುದೇನು ? ” ಚಿತ್ರ:- ಅಚಲನ ಇಷ್ಟದಂತೆ ತಾನು ಇನ್ನು ಮುಂದೆ ಹೀಗೆಯೇ ಇರ ಬೇಕೆಂದೂ, ಅಲಂಕಾರಾದಿಗಳಿಗೆ ತನ್ನನ್ನು ಯಾರೂ ಹೆಚ್ಚಾಗಿ ಬಲಾತ್ಕರಿಸ ಬಾರದೆಂದೂ, ನಂದಿನಿಯೊಡನೆ ಅಚಲನ ಬಳಿಯಲ್ಲಿ ವ್ಯಾಸಂಗಿಸುವಂತೆ ಮಾಡಬೇಕೆಂದೂ ಹೇಳುತ್ತಿರುವಳು. ಚಂದ್ರ:-ಸಂಭ್ರಮದಿಂದ-ಹಾಗಾದರೆ ನಿನಗೆ ಕಳವಳವೇಬೇಡ. ಅಡಲನು ನಿಮ್ಮವನೇ ಆಗುವುದರಲ್ಲಿ ಏನೂ ಅನುಮಾನವಿಲ್ಲ. ಆದರೆ, ಅವ