ಪುಟ:ಮಾತೃನಂದಿನಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ ದಿ 55 ಮಾತೃನ೦ದಿನಿ ಚಿತ್ರ:- ಹಾಗಿದ್ದರೆ, ನೀನು ಎಂದಾದರೂ ಪ್ರಾಸಮಾಡಿರುತ್ತಿ ಯೇನು? ಚಂದ್ರ:-ಪ್ರಾಸಕ್ಕೇನು? ಅದು, ಹೇಗೂ ದಿನಕ್ಕೆ ಒಂದು ಬಾರಿ ಯಾದರೂ ತಪ್ಪದೆ ವ್ಯಾಜಾಂತರವಾಗಿ ನಡೆಯದೆ ಬಿಡಲಿಕ್ಕಿಲ್ಲ. ಆದರೆ, ನೆಟ್ಟಗೆ ಹೇಳಿದ ವೇಳೆಯಲ್ಲಿ ಅವನು ಸಿಟ್ಟಿಗೇಳದೆ ಇರುವುದಿಲ್ಲ, ಚಿತ್ರ:-ಸಿದ್ದೇಕೆ? ಏನೆಂದುದಕ್ಕೆ ಸಿಟ್ಟಿಗೇಳಬೇಕು? ಚಂದ್ರ:-ಯಾರು ಬಲ್ಲರು? ನಾನೂ,-ಸ್ವರ್ಣ ಕುಮಾರಿಗೆ ಮನಸ್ಸು ವಿರುತ್ತದೆ; ನೀನೂ ವಯಸ್ಕನಾಗಿರುತ್ತೀಯೆ; ಹುಡುಗಿ ಒಲು ಬುದ್ದಿ ವತೆ ! ಸಂಬಂಧವೂ ಒಳ್ಳೆಯದು; ' ಎಂದು ಹೇಳುತ್ತಿದ್ದನು. ಅವನು ಅಷ್ಟಕ್ಕೇ ಸಿಟ್ಟು ಮಾಡಿ ಎದ್ದು ಬಿಟ್ಟನು. ಚಿತ್ರ:-ನೂ ಹೇಳದೆಯೇ ಹೋದನೇ? - ಚಂದ್ರ:-'ಸ್ವರ್ಣೆಯ ಮದುವೆಗೆ ನಾನೇನೂ ಅಡ್ಡಿಯಾಗಿಲ್ಲ. ಈಗ ಲೇ ನಾನು ಮದುವೆಗೆ ಒಪ್ಪಲಿಕ್ಕೂ ಆಗುವಂತಿಲ್ಲ. ಮಕ್ಕಳಿಗೆ ಕೊಡಬೇ ಕಾದ ಶಿಕ್ಷಣವು ಹೇಗಾದರೂ ಇರಲಿ, ಅವರನ್ನು ಈ ಎಳೆ ವಯಸ್ಸಿನಲ್ಲಿ ಗೋ ಅಲಂಕಾರಾದಿ ವಿಲಾನಾದಿಗಳಿಂದ ಕೊಚ್ಚಿಸಿ, ಯಾವನಾದರೂ ಒಬ್ಬನ ಕೊರಳಿಗೆ ಬಿಗಿದು ಹಾಕಿದರೆ, ಧನರಾದೇವೆಂಬುದೇ ಕುಲಾಚಾರವೋ ?' ಎಂದು ಹೇಳಿದನು. ಹಾಗೂ ನಾನು ಸುಮ್ಮನಿರದೆ ಮತ್ತೆ ಮತ್ತು ಹೋದುದಕ್ಕೆ ಇನ್ನೂ ಬೇಸರಗೊಂಡು 11 ಅಮ್ಮ! ಈ ವಿಚಾರವಾಗಿ ನೀವೇ ಹೀಗೆ ಬಲಾತ್ಕಾರ ಮಾಡಿದರೆ ಹೇಗೆ? ಇನ್ನು ಮುಂದೆ ಈ ವಿಚಾರವಾಗಿ). ನೀವು ಹೇಳುವುದಾದರೆ, ಅಲ್ಲಿಗೆ ನಮ್ಮ ನಂದಿನಿಯನ್ನು ನೋಡಹೋಗುತ್ತಿ ರುವುದನ್ನು ಕೂಡ ನಿಲ್ಲಿಸಬೇಕಾದೀತು! ಈ ಬಗೆಯ ಮಾತುಗಳು ನಾದ ನಂದನಂತವರಿಗಲ್ಲದೆ, ನನ್ನಂತಹ ದೊಡ್ಡ ರಿಗೆ ರುಚಿಸುವುದಿಲ್ಲ.” ಎಂದಾಡಿ ನಿಲ್ಲದೆ ಹೊರಟುಹೋದನು. ಅಂದಿನಿಂದ ನಾನೂ ಈ ಪ್ರಾಸವನ್ನು ನಿಲ್ಲಿಸಿಬಿಟ್ಟಿರುವೆನು. ಚಿತ್ರ:- ಹಾಗಿದ್ದರೆ ನಾನೂ ಪ್ರಸ್ತಾಪಿಸುವುದಿಲ್ಲ. ಹೇಗಿದ್ದರೂ, ನಮ್ಮವರೇನೋ ಮಗಳಿಗೆ ವಯಸ್ಸು ಎಂದರೂ ಸರಿ, ಅಡಲನಿಗೇ ಕೊಡ ಬೇಕು; ಒಂದುವೇಳೆ ಅವನು ಈ ಕಾಲದವರಂತೆ ಧನಲೋಭದಿಂದ