54 ಸತೀಹಿತ್ಯೀ ನಮ್ಮ ಸಂಸಾರಕ್ಕೆಲ್ಲಾ ಕಾರರತ್ನ ವೆಂದರೆ ಅವನೇ ಸರಿ! ಅವನಲ್ಲಿರುವ ಶೀಲ, ವಿವ್ಯಾ, ವಿನಯ, ವಿವೇಚನೆಯೇ ಮೊದಲಾದ ಸುಗುಣಗಳನ್ನು ನೋಡಿ ನೋಡಿಯೇ ನಮಗೆ ಪರಮಾನಂದವಾಗುತ್ತಿದೆ. ಆತನ ಶಿಕ್ಷಣಾಕೌಶಲ್ಯ ದಿಂದಲೇ ನಮ್ಮ ಸುರಸೆ, ನಿಜವಾದ ಸುರಸೆಯಾಗಿದ್ದಾಳೆ, ಹೆಚ್ಚೇಕೆ? ಅಚಲ ನೆಂದರೆ ನಮ್ಮವರಿಗೆ ಪ್ರಾಣ: ಉಳಿದವರ ಮಾತು ಹಾಗಿರಲಿ, ಚಿತ್ರ: -ಅಂತಹ ಸುಪುತ್ರನನ್ನು ಹೊಂದಲಿಕ್ಕೆ ಎಷ್ಟೊ ಸುಕೃತ ಮಾಡಿರಬೇಕು. ಚಂದ್ರಮತಿ! ಅಚಲಚಂದ್ರನ ಸ್ವಭಾವವು ನನಗೆ ಹೊಸ ದಲ್ಲ, ಅವನಲ್ಲಿ ಬಗೆಗೊಳ್ಳುತ್ತಿರುವ ವಿದ್ಯಾರ್ಥಿಲಕ್ಷಣದಲ್ಲಿ ಸ್ವಲ್ಪ ಸ್ವಲ್ಪವಾದರೂ, ನಮ್ಮ ನಾದಾನಂದನಲ್ಲಿ ತೋರುವಂತಾಗಬೇಕೆಂಬುದೇ ನನ್ನ ಆಶೆ ! ಆದರೇನು ? ಇನ್ನೆಷ್ಟು ದಿನಗಳು ಆತನೊಡನೆ ವ್ಯಾಸಂಗಿಸುತ್ತಿ ದ್ದರೂ ಇವನು ಬೇರೆ, ಅಂತಹ ದೃಢಭಾವವನ್ನು ಹೊಂದಲಾರಸು ! ಚಂದ್ರ: --ಸಹವಾಸಮಾಡಿದ ಮಾತ್ರಕ್ಕೆ ಸದ್ಗುಣಗಳೂ ಬರುವುಣೆ ಬುದು ಸುಳ್ಳು! ಅಭ್ಯಾಸವೂ ಆಸಕ್ತಿಯೂ ತಕ್ಕಂತೆ ಬಲವಾಗಿರಬೇಕು ! ಚಿತ್ರ:-ಹೇಗೂ ಇರಲಿ. ಅಚಲನನ್ನು ನಮ್ಮ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬುದೇ ನನ್ನ ಬಲವಾದ ಆಶೆಯಾಗಿದೆ! ಚಂದ್ರ:-ಆ ವಿಷಯದಲ್ಲಿ ಆಕೆಯು ನನಗೇನೂ ಕಡಿಮೆಯಾಗಿದೆ ಎಂದು ತಿಳಿಯಬೇಡ. ಸ್ವರ್ಣಯನ್ನು ಹೆರವರ ಮನೆಗೆ ಕೊಡಬಾರದೆಂ ಬುದೇ ನನ್ನ ಇಷ್ಟವಾಗಿದೆ. ಅಲ್ಲದೆ ನಮ್ಮ ಸುರಸೆಯ ಮದುವೆಕಾಲದಲ್ಲಿ ನಾದಾನಾದನಿಗೆ ಇನ್ನೂ ವಯಸ್ಸಾಗಿರಲಿಲ್ಲವೆಂದು ಬಿಟ್ಟು ಬಿಟ್ಟು ದಾಯ್ತು. ಈಗ ನಮ್ಮ ವನಿಗೇನೋ ವ್. ಆದರೆ, ಈ ವಿಚಾರವನ್ನು ಈಗಲೇ ಅವನ ಕಿವಿಗೆ ಮುಟ್ಟಿಸಬೇಡ. ಚಿತ್ರ:-ಏಕೆ? ಸ್ವರ್ಣಯನ್ನು ಅವನು ಒಪ್ಪಿಲ್ಲವೇನು? ಚಂದ್ರ:-ಅವಳನ್ನು ಒಪ್ಪಲೊಲ್ಲನೆಂದು ಹೇಳಲಿಲ್ಲ, ಅವಳ ಗುಣ ವನ್ನೂ, ಪ್ರತಿಭಾಶಕ್ತಿಯನ್ನೂ ಕುರಿತು, ಎಷ್ಟೋ ಬಾರಿ ನನ್ನ ಬಳಿಯಲ್ಲಿಯೇ ಹೊಗಳಿರುವನು. ಆದರೆ, ಅದರ ಜೊತೆಯಲ್ಲಿಯೇ ಅವಳ ವಿಲಾಸಾದಿಗಳ ವಿಚಾರವಾಗಿ ಹಾಸ್ಯಮಾಡಿಯೂ ಮಾಡುತ್ತಿರುವನು.
ಪುಟ:ಮಾತೃನಂದಿನಿ.djvu/೬೮
ಗೋಚರ