ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 - ಮಾತೃ ನಂದಿನಿ ಬ್ಬರೂ ಒಬ್ಬರನ್ನೊಬ್ಬರು ಅಗಲಿರದಿದ್ದರೂ ಇಬ್ಬರಿಗೂ ತಾರತಮ್ಯವೆಷ್ಟೋ ಇದೆಯಲ್ಲವೆ ? ಚಿತ್ರ:-- ನಿಜ! ಆದರೆ, ಅವರ ಮಾತೂ ಹಾಗಿರಲಿ; ಈ ಮನೆಯಲ್ಲಿಯೇ ನೋಡು? ನಂದಿನಿಯ ನಿಶ್ಚಲವ್ರತಕ್ಕೂ, ಸ್ವರ್ಣಯ ಚಾಪಲ್ಯಕ್ಕೂ ಎಷ್ಟರ ತಾರತಮ್ಯವಿರಬಹುದು? ಚಂದ್ರ:-ಸ್ವರ್ಣೆಯೊಬ್ಬಳಲ್ಲ; ಈ ಕಾಲರ ಹುಡುಗಿಯರೆಲ್ಲರೂ ಹಾಗೆಯೇ ! ನಂದಿನಿಯಂತೆ ಬಾಲ್ಯದಿಂದ ವಿರಕ್ತಿಸುಖದಲ್ಲಿರುವವರು ಸಾವಿ ರಕ್ಕೆ ಒಬ್ಬಿಬ್ಬರಂತಾದರೂ ಕಾಣುವುದು ದುಸ್ತರವೇ ಸರಿ!

  • ಚಿತ್ರ:-ನಿಜ! ಹುಡುಗಿಯರನ್ನು ಹಡೆದವರೇ ಬೆಡಗಿಂದ ನಲಿಯುತ್ತಿರುವುದು, ಉಡುವು-ತೋಡವುಗಳಿಗೆಂದು ಕೈ ಹಿಡಿದ ಗಂಡಂದಿರನ್ನು ಕಾಡು ತಿರುವುದೂ ಎಷ್ಟೋ ಕಡೆಯಲ್ಲಿ ನಮ್ಮ ಕಣ್ಣಿಗೆ ಬೀಳುತ್ತಿವೆ. ತಾಯಿ ಯರೇ ಹಾಗೆ ವಿಲಾಸಪ್ರಿಯರಾಗಿರುವಲ್ಲಿ ಮಕ್ಕಳನ್ನು ಕೇಳುವುದೇನು ! ಅದೆಲ್ಲಾ ನನಗೇಕೆ ? ನಮ್ಮ ಸ್ವರ್ಣಯ ಆಶೆಯನ್ನು ನೋಡಿಯೇ ನನಗೆ ಬೇಗ ಡು ತೋರುತ್ತಿದೆ. ಅವಳೂ ನಿನ್ನ ಸರಸೆಯಂತೆ ತಿಳಿದುಕೊಂಡರೆ ನನಗೆ ಎಷ್ಟೋ ಸುಖವುಂಟು !

ಚಂದ್ರ:-ನಕ್ಕು-ಚಿತ್ರ ! ಸುರಸೆಗೆ ಆಕೆ ಕಡಿಮೆಯಾಗಿರಲಿಲ್ಲ! ಸ್ವರ್ಣಗಿದ್ದ ಆಶೆಗೆ ಎರಡರಷ್ಟೇ ಇತ್ತೆಂದು ತಿಳಿ !' ಚಿತ್ರ:-ನೀನು ಬೇಕೆಂದೇ ಹೇಳುವೆಯಲ್ಲದೆ, ನನಗೆ ಬೇರೆ ನಂಬಿಕೆ ಯಾಗುವಂತಿಲ್ಲ. - ಚಂದ್ರ:-ನಿನ್ನಲ್ಲಿಯೂ ನಾನು ಎರಡು ಬಗೆಯಾಗಿ ಹೇಳುವೆನೆಂದಿರು ವೆಯೋ ? ಆ ಭಾವವಿದ್ದರೆ ಬಿಟ್ಟು ಬಿಡು ! ಅವಳ ಆಶೆಯೆಲ್ಲವೂ ನಮ್ಮ ಅಚಲ ಚಂದ್ರನ ಸುಶಿಕ್ಷಾಬಲದಿಂದ ಮಾಯವಾಯಿತೆಂದು ನಂಬು! ಹಾಗೆ ಅವನ ಹಿತಬೋಧೆ ಅವಳನ್ನು ಎಚ್ಚರಿಸದಿದ್ದರೆ, ಅವಳು ನಮ್ಮ ಮಾತಿನಿಂದಲೇ ಹೀಗೆ, ಇಷ್ಟರ ಪರಿಪಕ್ವ ಸ್ಥಿತಿಗೆ ಬರುತ್ತಿದ್ದಳೇನು ? ಎಂದಿಗೂ ಇಲ್ಲ. ಚಿತ್ರ:-ಇನ್ನೂ ನನ್ನ ಮನಸ್ಸಿಗೆ ಸರಿಯಾಗಿ ಹಿಡಿಯಲಿಲ್ಲ? - ಚಂದ್ರ:-ಚಿತ್ರಕಲೆ! ನಮ್ಮ ಅಚಲಚಂದ್ರನನ್ನು ಬಲಮಗನೆಂದು ನಾನೆಂದೂ ತಿಳಿದಿಲ್ಲ. ಅವನನ್ನು ನನ್ನ ಕಣ್ಣಿಗೂ ಹೆಚ್ಚಾಗಿ ತಿಳಿದಿರುತ್ತೇನೆ.