ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧ ಕೃಷ್ಣಲೀಲೆ
ಕಂಸ:-ರಾಜತಂತ್ರ ವಿಶಾರದರಾದ ಮಂತ್ರಿವರ್ಯರೇ ! ಶೂರಶಿಖಾ
ಮಣಿಗಳಾದ ಸೇನಾಪತಿಗಳೇ! ಅಖಂಡ ಭೂಮಂಡಲವೆಲ್ಲವೂ ನನ್ನಾ
ಜ್ಞೆ ಗೊಳಪಟ್ಟಿರುವುದಷ್ಟೆ! ಭೂಲೋಕದಲ್ಲಿ ನಮಗೆ ಪ್ರತಿಪಕ್ಷಿಗಳಾ
ರೂ ಇಲ್ಲವು. ಇನ್ನು ನಾವು ದೇವಲೋಕವನ್ನು ಸೂರೆಗೈದು, ಆ
ಹೇಡಿಯಾದ ದೇವೇಂದ್ರನನ್ನು ಕಾರಾಗೃಹದಲ್ಲಿ ಬಂಧಿಸಬೇಕು. ನನ್ನ
ಬಂಧುಮಿತ್ರರಾದ ಜರಾಸಂಧ ಶಿಶುಪಾಲಾದಿಗಳು ನಿದ್ದೆಗಣ್ಣಲ್ಲಿಬೇಕಾ
ದರೂ ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರುವರು. ಆದು
ದರಿಂದ ನಾವಿನ್ನು ತಾಮಸ ಮಾಡದೆ ದಂಡಯಾತ್ರೆಗೆ ಸನ್ನದ್ದರಾಗ
ಬೇಕು. ಸೈನ್ಯಾಧಿಪತಿಯೇ! ನಮ್ಮ ಸೈನ್ಯಗಳು ದಿಗ್ವಿಜಯಕ್ಕೆ ಸಿದ್ದ
ವಾಗಿರುವುದೆ?

ಸೈನ್ಯಾ:- ರಾಜೇಂದ್ರಾ! ವಿಜ್ಞಾಪಿಸುವೆನು.

   ಕಂ|| ಅಂಬರಕೆ ಹಾರಿ ರವಿ ಶಶಿ | ಬಿಂಬಗಳ೦ ಸೆಳದು ತರುವರತಿ ಸಾಹಸದಿಂ|
         ಕುಂಭಿನಿಯ ಪೊಕ್ಕು ಶೇಷನ | ದಂಬವ ನಿರ್ಮೂಲಗೈವರೈ ನಮ್ಮ ಭಟರ್||

   ಬಿರುಗಾಳಿಯ ಸಹಾಯವನ್ನೊ೦ದಿದ ದಾವಾಗ್ನಿಯು ವನಾಂತ
ರಗಳನ್ನು ನಿಮಿಷಮಾತ್ರದಲ್ಲಿ ಸುಟ್ಟು ಭಸ್ಮಮಾಡುವಂದದಿ, ಚಂಡ
ಪರಾಕ್ರಮಶಾಲಿಗಳಾದ ನಮ್ಮ ಸೈನಿಕರು, ಕ್ಷಣಮಾತ್ರದಲ್ಲಿ ಗಗನಕ್ಕೆ
ಹಾರಿ ಸೂ‌ರ್ಯಚಂದ್ರರ ಬಿಂಬಗಳನ್ನು ಬೇಕಾದರೂ ಸೆಳೆತರುವರು.
ಸಪ್ತಸಮುದ್ರಗಳ ನೀರನ್ನು ಬೇಕಾದರೂ ನಿಮಿಷಾರ್ಧದಲ್ಲಿ ಹೀರುವ
ರು, ದೇವತೆಗಳನ್ನು ಹಿಡಿದು ಹೂವಿನ ಚೆಂಡುಗಳಂತೆ ಗಗನಮಂಡಲ
ಕೈಸೆಯುವರು. ಇದೆಲ್ಲವೂ ಜಗದೇಕವೀರರಾದ ತಮ್ಮ ಮಹಿಮಾ
ವಿಶೇಷವಷ್ಟೆ!

ಕಂಸ-ಭಾಪು ! ಭಾಪು !! ಶೂರಶಿಖಾಮಣಿಗಳಾದ ನಿಮ್ಮಂತಹ
ಪರಿವಾರವು ನನಗಿರುವಲ್ಲಿ, ಸ್ಪರ್ಗ ಮರ್ತ್ಯ ಪಾತಾಳಗಳೆಂಬ ತ್ರಿಭುವನ
ಗಳಲ್ಲಿ ಯಾವುದನ್ನು ಬೇಕಾದರೂ ಕ್ಷಣಮಾತ್ರದಲ್ಲಿ ಜಯಿಸಬಲ್ಲೆನು!
ಆದಾಗ್ಯೂ ನಮ್ಮ ಶತ್ರುಗಳಾದ ಇಂದ್ರಾದಿ ದೇವತೆಗಳಮೇಲೆ ದಂಡೆತ್ತಿ
ಕ್ಷಿಪ್ರದಲ್ಲಿಯೇ ಅವರನ್ನು ಜಯಿಸಿ, ಅಮರಾವತಿಯನ್ನು ನಮ್ಮ ಸ್ವಾ
ಧೀನ ಪಡಿಸಿಕೊಳ್ಳಬೇಕು. ಈವಿಚಾರದಲ್ಲಿ ನಮ್ಮ ಹಿತೈಷಿಗಳಾದ ಜರಾ