೫೮ಕೃಷ್ಣಲೀಲೆ
ಗೋಪಸುಂದರಿಯರು:- ರಾಗ-ಮಧ್ಯಮಾವತಿ-ಏಕತಾಳ.
ಬೃಂದಾವನ ವಾಸಿನಿ ಶ್ರೀತುಲಸೀ | ನಾರಾಯಣನರಸೀ ||ಪ||
ಸುಂದರಾಂಗಿ ನವ ನವ ವಿಲಾಸಿನೀ| ಮಂದರ ಧರ ಗೋವಿ೦ದ ವಿನೋದಿನಿ||ಆ-ಪ।।
ನಿತ್ಯವು ಪೂಜಿಪ ಭಕ್ತರ ಮನೆಯಲಿ| ನಿತ್ಯೋತ್ಸವ ಸೌಭಾಗ್ಯಂಗಳನು|
ಅತ್ಯಾನಂದದಿ ನೆಲೆಗೊಳಿಸುವ ಸರ್ವೋತ್ತಮ ಶುಭಮಂಗಳ ವರದಾಯಿನಿ||
ಬೃ೦ದಾ||
ದೇವಮೌನಿ ವರಸನ್ನುತ ಚರಿತೇ| ಭಾವ ಜತಾತ ವಿಲೋಲರಸಯುತೇ |
ದೇವಿ ನಿರತ ಶಿವರಾಮ ಸೇವಿತೇ ಭಾವನೀಯ ಕರುಣಾರಸ ಭರಿತೇ||ಬೃಂದಾ||
ನಂದ:-ಎಲೈ, ಬಂಧುಜನರೆ ! ಬೃಂದಾವನದ ಸುತ್ತಲೂ, ಹಸರು
ತೋರಣಗಳನ್ನು ಕಟ್ಟಿರಿ, ಮಾಧವನ ಪೂಜೆಗೆ ಬೇಕಾದ ಸಾಮ
ಗ್ರಿಗಳನ್ನು ಸಿದ್ದಪಡಿಸಿರಿ. ನಮ್ಮ ಕುಲಗುರುಗಳಾದ ಗರ್ಗಾಚಾರ್ಯ
ರನ್ನು ಕುಟುಂಬ ಸಮೇತರಾಗಿ ಬರಮಾಡಿರಿ.
ಗೋಪರು:- ಒಡೆಯಾ! ತನ್ನಪ್ಪಣೆಯಂತೆ ಎಲ್ಲವನ್ನೂ ಸಿದ್ದ
ಪಡಿಸುವೆವು.
[ಎಂದು ಕೆಲವು ಮಂದಿ ಗೋಪರು ನಿಷ್ಕ್ರಮಿಸುವರು. ಸ್ವಲ್ಪ
ಹೊತ್ತಿನಮೇಲೆ ಗರ್ಗಾಚಾರ್ಯರು ತಮ್ಮ ಪತ್ನಿಯಾದ ಸುಮಿತ್ರಾದೇವಿ.
ಯೊಂದಿಗೆ ಪ್ರವೇಶಿಸುವರು.]
[ನಂದನು ಆಚಾರ್ಯ ದಂಪತಿಗಳಿಗೆ ವಂದಿಸುವನು.]
ನಂದ:- ಆಚಾರ್ಯರಿಗೆ ವಂದಿಸುವೆನು.
ಗರ್ಗಾಚಾರ್ಯ:- ನಂದಗೋಪನೆ ! ಆಯುಷ್ಮಂತನಾಗು!
[ತದನಂತರ ಸುಮಿತ್ರಾದೇವಿಗೆ ವಂದಿಸುವನು.]
ಸುಮಿತ್ರೆ:-ಪುಣ್ಯಾತ್ಮನೆ ! ನಿನಗೆ ಮಂಗಳವಾಗಲಿ.
ನಂದ:- ಪೂಜ್ಯರೇ ! ಈ ಪೀಠಗಳನ್ನಲಂಕರಿಸಿರಿ.
ಗರ್ಗಾಚಾರ್ಯ:- ಆಗಬಹುದು.
[ದಂಪತಿಗಳು ಸುಖಾಸೀನರಾಗುವರು.]
ಪುಟ:ಶ್ರೀ ಕೃಷ್ಣ ಲೀಲೆ.djvu/೭೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ