ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕೃಷ್ಣಲೀಲೆ

        ಬೃಹಸ್ಪತಿ: ಶ್ಲೋ|| ಸಶಂಖಚಕ್ರಂ ಸಕಿರೀಟಕು೦ಡಲ೦| ಸಪೀತವಸ್ತ್ರಂ ಸರಸೀ
                ರುಹೇಣಂ | ಸಹಾರವ 'ಸ್ಥಲಶೋಭಿಕೌಸ್ತುಭಂ ನಮಾ
                ಮಿವಿಷ್ಣುಂ ಶಿರಸಾಚತುರ್ಭುಜಂ||
       [ಎಂದು ಸ್ತೋತ್ರಮಾಡುತ್ತಾ ಎಲ್ಲರೂ ಸಾಷ್ಟಾಂಗವಾಗಿ ನಮ
ಸ್ಕರಿಸುವರು.]

        ವಿಷ್ಣುವು:ಮಹಾತ್ಮರೇ ! ಎಲ್ಲರೂ ಸುಖಾಸೀನರಾಗಿರಿ, ಕಮ
ಲಾಸನಾ ! ಈಪೀಠವನ್ನಲಂಕರಿಸು. ನಾರದಾ ! ಈ ಪೀಠದಲ್ಲಿ ಕುಳಿತು
ಕೊ, ದೇವನಾಯಕಾ ! ನಿನಗೆ ಕುಶಲವೇ? ಸುರಗುರುವೇ! ನಿನಗ
ಸೌಖ್ಯವೇ ? ಬೃಂದಾರಕರೇ ! ನೀವೆಲ್ಲರೂ ಕ್ಷೇಮವಾಗಿರುವಿರಾ?
        
        ಬ್ರಹಸ್ಪತಿ:ಭಗವಂತನೇ ! ನಿನ್ನ ಕೃಪಾರಸದಿಂದ ನಾವೆಲ್ಲರೂ
ಕುಶಲರಾಗಿರುವೆವು.

        ವಿಷ್ಣುವು:-ಎಲೆ, ಮಹೇಂದ್ರನೇ! ನಿನ್ನ ಅಧಿಕಾರವು ನಿರಾತಂಕ
ವಾಗಿ ಸಲ್ಲುತ್ತಿರುವುದೇ? ನೀವೆಲ್ಲರೂ ಜತೆಗೂಡಿ ಇಷ್ಟುದೂರ ಬರಬೇ
ಕಾದರೇ ಏನೋವೊಂದು ಮಹಾತ್ಕಾರ್ಯ ಇರಬೇಕು. ಸೃಷ್ಟಿಕಾರ್ಯ
ನಿರತನಾದ ಚತುರ್ಮುಖನುಕೂಡಾ ನಿಮ್ಮೊಂದಿಗೆ ಬಂದಿರುವುದನ್ನು
ನೋಡಿದರೆ, ಘನತರವಾದ ಕಾರ್ಯವಾವುದೋ ಇದ್ದೇ ತೀರಬೇಕು.

         ಬ್ರಹ್ಮ:-ಸರ್ವಜ್ಞನೇ | ನೀನರಿಯದ ಕಾರ್ಯವಾವುದು?

         ಇಂದ್ರ:-ಆಶ್ರಿತಕಲ್ಪತರುವಾದ ಪರಮಾತ್ಮನೇ | ನಿನ್ನಪ್ಪಣೆಯಿ
ಲ್ಲದೆ ತೃಣವು ಕೂಡಾ ಚಲಿಸಲಾರದೆಂಬಲ್ಲಿ, ನಿನಗೆ ತಿಳಿಯದ ವಿಷಯ
ವಾವುದು; ಎಲ್ಲವನ್ನೂ ತಿಳಿದ ನೀನೇ ಹೀಗೆ ಕೇಳಿದರೆ ನಾವೇನು ಹೇಳ
ಬಲ್ಲೆವು !

         ವಿಷ್ಣುವು:-ನಾರದಾ ! ಈ ವಿಚಾರವನ್ನು ಪರಿಷ್ಕಾರವಾಗಿ ವಿವ
ರಿಸತಕ್ಕ ಕುಶಲನು ನೀನೇಸರಿ !

         ನಾರದ-ದೇವಾ ! “ಪುಷ್ಪಮೂಲಾನುಸಂಗೇಣಸೂತ್ರಂ
ಶಿರಸಿಧಾರ್ಯತೇ” ಹೂವಿನಿಂದ ನಾರಿಗೆ ಸದ್ಗತಿ ಯುಂಟಾಗುವಂತೆ, ಮ
ಹಾತ್ಮರ' ಅನುಗ್ರಹದಿಂದ ಸಾಮಾನ್ಯರಿಗೆ ಕ೦ಡಾ ಗೌರವವುಂಟಾಗು