ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬೆಳ್ಳಿ

ಗುತ್ತದೆ. ಸೀಸದೊಡಗೂಡಿದ ಬೆಳ್ಳಿಯದುರನ್ನು ಬಹಳ ಸಾರಿ ಕರಗಿಸಿ ಆರಿಸಿದರೆ, ಸೀಸವೆಲ್ಲಾ ಬೇರೆಯಾಗಿ, ಸ್ವಲ್ಪ ಸೀಸ ಸೇರಿದ ಬೆಳ್ಳಿ ನಿಲ್ಲುವುದು, ಇದನ್ನು ಕುಲಿಮೆಯಲ್ಲಿಟ್ಟು ಶುದ್ಧ ಮಾಡಿದರೆ ಚೊಕ್ಕಬೆಳ್ಳಿ ಲಭಿಸುವುದು. ಬೆಳ್ಳಿ ಚಿನ್ನಕ್ಕಿಂತ ಭಾರದಲ್ಲಿಯೂ ಬೆಲೆಯಲ್ಲಿಯೂ ಕಡಮೆ; ಆದರೆ ಹಿತ್ತಾಳೆ, ತಾಮ್ರ, ತವರ, ಕಬ್ಬಿಣ ಇವಕ್ಕಿಂತ ಹೆಚ್ಚು, ಚೊಕ್ಕ ಬೆಳ್ಳಿ ಮೆದುವಾಗಿರುತ್ತದೆ, ಚಿನ್ನದಷ್ಟು ಮೆದುವಲ್ಲ. ಬೆಳ್ಳಿಯನ್ನು ಗಟ್ಟಿ ಮಾಡಲು ಸ್ವಲ್ಪ ತಾಮ್ರವನ್ನು ಸೇರಿಸುತ್ತಾರೆ. ಬೆಳ್ಳಿಯನ್ನು ತೆಳುವಾದ ತಗಡಾಗಿ ಬಡಿಯಬಹುದು; ಆದರೆ ಚಿನ್ನದಲ್ಲಿ ಆಗುವಷ್ಟು ನವುರಾದ ತಗಡನ್ನು ಇದರಲ್ಲಿ ಮಾಡಲಾಗುವುದಿಲ್ಲ. ಬೆಳ್ಳಿ ಲೋಹಗಳಲ್ಲೆಲ್ಲಾ ಅತ್ಯುತ್ತಮವಾದ ಉಷ್ಣ ವಾಹಕ ಮತ್ತು ವಿದ್ಯುದ್ವಾಹಕ. ಇದನ್ನು ಬಲು ಸಣ್ಣ ತಂತಿಯಾಗಿ ಎಳೆಯಬಹುದು. ಇದು ಬಹಳ ಜಿಗವಾದ ಲೋಹ. ಇದಕ್ಕೆ ತುಕ್ಕು ಹಿಡಿವುದಿಲ್ಲ. ಇದು ಸಾಮಾನ್ಯವಾಗಿ ಮಾಸುವುದೂ ಇಲ್ಲ ಗಂಧಕವು ತಗಲಿದರೆ ಮಾತ್ರ ಮಾಸುತ್ತದೆ. ಈ ಕಾರಣದಿಂದಲೇ ಕೆಲವರ ಕಾಲು, ಬಳೆಗಳು ಕಪ್ಪಾಗುವುವು. ಕಾಯಿಸಿದರೆ ಬೆಳ್ಳಿ ಚಿನ್ನಕ್ಕಿಂತ ಬೇಗ ಕರಗುವುದು, ಉರಿವಾಗ ಸ್ವಲ್ಪ ಹಸುರಾದ ಜ್ವಾಲೆಯನ್ನು ಕೊಡುತ್ತದೆ. ಇದಕ್ಕೆ ಚೆನ್ನಾಗಿ ಮೆರಗನ್ನು ಕೊಡಬಹುದು; ಅದರಿಂದ ಬಹಳ ಹೊಳಪಾಗುತ್ತದೆ. ಬೆಳ್ಳಿ ಇಂಪಾದ ನಾದವನ್ನು ಕೊಡುವುದು. ಇದರಲ್ಲಿ ಯಾವ ವಿಧವಾದ ವಾಸನೆಯ ರುಚಿಯೂ ಇಲ್ಲ. ಚಿನ್ನ ದಂತೆಯೇ ಬೆಳ್ಳಿಯ ನಾನಾವಿಧಗಳಲ್ಲಿ ಉಪಯುಕ್ತವಾಗಿದೆ. ಬೆಳ್ಳಿಯಿಂದ ಬಗೆಬಗೆಯ ನಗಗಳನ್ನೂ ಪಾತ್ರೆಗಳನ್ನೂ ನಾಣ್ಯಗಳನ್ನೂ ಮಾಡುತ್ತಾರೆ. ಬೀಗದ ಕೈ, ಗಡಿಯಾರ, ಸರಪಣಿ ಮೊದಲಾದುವೂ ಆಗುಇವೆ. ದೀಪಗಳ ಕಾಂತಿಯನ್ನು ಹೆಚ್ಚಿಸಲು ಮೆರಗು ಹಾಕಿದ ಬೆಳ್ಳಿಯ ಬಿಲ್ಲೆಗಳನ್ನು ಜ್ವಾಲೆಯ ಹಿಂದೆ ಇರಿಸುವರು, ಹಿತ್ತಾಳೆ, ತಾಮ್ರ ಪಾತ್ರಗಳಿಗೆ ಬೆಳ್ಳಿಯ ಮುಲಾಮು ಮಾಡುವರು. ಬೆಳ್ಳಿಯ ಜರತಾರಿಯನ್ನು ಬಟ್ಟೆಗಳ ಅಂಚಿಗೂ ಸೆರಗಿಗೂ ಹಾಕುವರು, ತಂತಿಯನ್ನು ಪಿಟೀಲಿಗೆ ಉಪಯೋಗಿಸುವುದುಂಟು. ಇಂಡಿಯಾ ದೇಶದಲ್ಲಿ ವೈದ್ಯರು ಬೆಳ್ಳಿಯಭಸ್ಮವನ್ನು ಮಾಡಿ