ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೭೪ ಕೃಷ್ಣ ಲೀಲೆ

ವಿದ್ವಾಂಸ:- ಮತ್ತೆ ಕೆಲವು “ದೇವರ ನಾಮಗಳು" ಬರುತ್ತವೆ.
ಅಘಾಸುರ:-ಯಾವ ದೇವರ ನಾಮವದು ?
ವಿದ್ವಾಂಸ:-ಭಗವಂತನ ನಾಮಗಳು.
ಅಘಾಸುರ:-ಸಾಕು, ಸಾಕು, ನಿಲ್ಲಿಸು ! ಅಂಥವುಗಳಿಗೆಲ್ಲಾ ಇಲ್ಲಿ
ಲೇಶ ಮಾತ್ರವೂ ಅವಕಾಶವಿಲ್ಲವು.

ವಿದ್ವಾಂಸ:--ತಿಳಿಯದೇ ಕೇಳುತ್ತೇನೆ. ಕ್ಷಮಿಸಬೇಕು. ಇಲ್ಲಿ
ಭಗವದ್ವಿಷಯಕ್ಕೆ ಸ್ವಲ್ಪವೂ ಅವಕಾಶವಿಲ್ಲವೆಂದು ಕಾಣುತ್ತದೆ!

ಅಘಾಸುರ:-ಇಲ್ಲ ! ಇಲ್ಲ !! ಇಲ್ಲ !!!

ವಿದ್ವಾಂಸ:-ಹಾಗಾದರೇ ಇಲ್ಲಿ ಮತ್ತಾವ ವಿಷಯಗಳಿಗೆ ಅವ
ಕಾಶ ವುಂಟು?

ಅಘಾಸುರ:- ಕೋಳಿ ಹುಂಜಗಳ ಹೋರಾಟಗಳು, ಟಗರುಗಳ
ಹೊಡೆದಾಟಗಳು, ಕೋತಿಗಳ ಕುಸ್ತಿ, ಮುಂತಾದ ವಿನೋದಗಳಿಗೂ,
ಜೂಜಾಟಗಳಿಗೂ, ನರ್ತನಾಂಗನೆಯರ ನಾಟ್ಯಕ್ಕೂ, ಪಾನದಲಾಹಿರಿಗೂ,
ಮತ್ತೂ ನಮಗೆ ಸಂತೋಷಕರವಾದ ಕಾರ್ಯಗಳಿಗೂ ಸಾಕಾದಷ್ಟು
ಬಹುಮಾನವನ್ನು ಕೊಡುತ್ತೇವೆ.

ವಿದ್ವಾಂಸ-ಈ ವಿಧವಾದ ತಿಳಿವಳಿಕೆಯಿಲ್ಲದ ನನ್ನಂಥವನಿಗೇ
ನು ಕೊಡುವಿರಿ ?

ಅಘಾಸುರ:-ನೀನು ನಮ್ಮ ಕಂಸ ಭೂಪಾಲನ ಮೇಲೆ ಕೆಲವು
ಕೀರ್ತನೆಗಳನ್ನು ಕವಿತ್ವ ಮಾಡಿಹೇಳು. ನಿನಗೂ ಬಹುಮಾನ ಮಾ
ಡುತ್ತೇವೆ.

ವಿದ್ವಾಂಸ:-ಈತನ ಮೇಲೆ ಕವಿತ್ವ ಮಾಡಬೇಕಾದ ಪಕ್ಷಕ್ಕೆ,
ಈತನು ಮಾಡಿರುವ ಘನತರವಾದ ಕಾರ್ಯಗಳಾವುವೆಂಬುದನ್ನು ದಯ
ವಿಟ್ಟು ತಿಳಿಸುವಿರಾ ?

ಅಘಾಸುರ:-ಆಹಾ ! ಈ ನಮ್ಮ ಕಂಸ ಭೂಪಾಲನ ಹೆಸರನ್ನು
ಕೇಳುತ್ತಲೇ ಇಂದ್ರಾದಿ ದೇವತೆಗಳೂ, ಋಷಿ ಮುನಿಗಳೂ ದಿಕ್ಕಾಪಾ
ಲಾಗಿ ಓಡಿಹೋಗುವರು. ಈ ಧೀರನು ಅನೇಕ ಮಂದಿ ಸ್ತ್ರೀಯರ
ನ್ನು ಬಲಾತ್ಕಾರವಾಗಿ ಸೆಳೆತಂದು ಸೆರೆಯಲ್ಲಿ ಹಾಕಿರುವನು. ತನ್ನ