ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನಂದಿನಿ 111 ಒಂದ ಐದುಸಾವಿರ ರೂಪಾಯಿಗಳಿಂದ ಈ ದಿನ ಅನೇಕಾನೇಕರಾದ ವಿಕ ಲಾಂಗರಿಗೂ ಅನಾಥರಿಗೂ ಅಶನ ವಸನಗಳನ್ನು ಕೊಡಿಸಿ, ತೃಪ್ತಿಪಡಿಸಿರುವ ದಲ್ಲದೆ, ಇನ್ನು ಬರಬೇಕಾಗಿರುವ ದ್ರವ್ಯವನ್ನೂ, ಇನ್ನೂ ಶಾಶ್ವತರ್ವ, ಉತ್ತರೋತ್ತರಾಭಿವೃದ್ಧಿ ಹೇತುವೂ ಆದ ಮಹತ್ಕಾರ್ಯಕ್ಕೆ ವಿನಿಯೋಗಿಸಲು ನಿಶ್ಚಯಿಸಿದೆ. ಈ ವಿಚಾರದಲ್ಲಿ ಸ್ವಾಮಿಯವರಾಗಲೀ ತಾವುಗಳಾಗಲಿ ಯೋಚಿಸುವಂತಿಲ್ಲ.' ಭಟ್ಟಾ:-ಆಹಾ ! ತಣ್ಣಗಾಯಿತಯ್ಯಾ ! ಹೊಟ್ಟೆಯುರಿಗೆ ನಿಮ್ಮ ಮಾತು ಒಳ್ಳೆ ಸಮಾಧಾನವನ್ನೇ ಉಂಟುಮಾಡಿತು. ನಮಗೇನು ? ನೀನು ಟು, ಸ್ವಾಮಿಗಳುಂಟು. ಹೋಗಲಿ; ಸಮಾಜದಿಂದ ಬಹಿಷ್ಕೃತರಾದವ ರೊಡನೆ ಸಂಸರ್ಗವನ್ನು ಮಾಡುವ ವಿಚಾರದಲ್ಲಿಯೋ ? ಅದಕ್ಕೇನು ಹೇಳು ಸಿರಿ? ಕಲೆಕ್ಟರ್:-ಮಹಾಶಯರೇ! ಕ್ಷಮಿಸಬೇಕು. ಇವರನ್ನು ಸಮಾ ಜದಿಂದ ಹೊರಗೆ ತಳ್ಳಿದ ಕಾರಣವು ಸರಿಯಾಗಿ ಕಾಣಲಿಲ್ಲ. ಬಹಿಷ್ಕೃತ ರಾಗುವ ಮಹಾ ಸಚಾರವು ಇವರಿಂದೇನಾದರೂ ನಡೆಯಿಸಲ್ಪಟ್ಟಿರುವುದಾ ದರೆ ದಂಡಿಸಲು ನಾನು ಬದ್ಧನಾಗಿದ್ದೇನೆ. ಸಕಾರಣವಾಗಿ ಬರುವ ವ್ಯಾಜ್ಯ ಗಳಿಗೆ ನ್ಯಾಯರೀತಿಯಿಂದ ತೀರ್ಮಾನವನ್ನು ಹೇಳುವುದು ನಮ್ಮ ಕೆಲಸ ವಾಗಿದೆ. ಭಾ:-ಇವರಲ್ಲಿ ಅಪರಾಧವಿಲ್ಲದೆಯೇ ಸನ್ನಿ ಧಾನದಿಂದ ನಿರೂಪ ಬಂತೋ? ಕಲೆಕ್ಷರ್:--ಅಪರಾಧವೆಂತಹದು ? ಅನಾಥವರ್ಗವನ್ನು ಪೋಷಿಸು ತಿರುವುದೋ? ಅಪಾತ್ರನಿಗೆ ಕನ್ಯಾದಾನ ಮಾಡದೆ ಸತ್ಪಾತ್ರವೇಷಣೆಯ ಇರುವುದು ದೋಷವೋ? ಇಲ್ಲದಿದ್ದರೆ, ತಮ್ಮ ಕಷ್ಟಾರ್ಜಿತ ಸ್ವತ್ತನ್ನು ದೇಶಹಿತಕಾರ್ಯದಲ್ಲಿ ವಿನಿಯೋಗಿಸುತ್ತಿರುವುದೇ ದೋಷವೋ? ಯಾವುದು ದೋಷವು ? ಇವರಿಂದ ಯಾವ ಕರ್ಮಕ್ಕೆ ಹಾನಿಯು ತಟ್ಟದೆ? ಯಾವ ಸತೀ ಮಣಿಯ ಪಾತಿವ್ರತ್ಯಕ್ಕೆ ಭಂಗವುಂಟಾಗಿದೆ? ಮತ್ತಾರ ಸ್ವತ್ತು ಅಪಹರಿಸಲ್ಪ ಟಿದೆ ? ಎಷ್ಟು ಮಂದಿ ಅವಿಚಾರಿಗಳ-ಅಕ್ರಮಗಳ ಅಲಂಘಿಫಲವಾದ ಭ್ರೂಣಹತ್ಯಾದಿ ಪಾತಕಗಳಿಗೆ ಸಹಕಾರವುಂಟಾಗಿದೆ ? ಹೇಳಿರಿ, ಅಂತಹ