ಪುಟ:ಶಕ್ತಿಮಾಯಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಿಕೆ ಕುತುಬನು ಶಕ್ತಿ ಳಿದು ಬಂದು ನಬಾಬನಿಗೆ ತಿಳಿಸಿದನು. ಆಕೆಯನ್ನು ಹ್ಯಾಗೆ ಅಪಹರಿಸಬೇಕೆಂಬುವ ಕುರಿತು ಅವರಲ್ಲಿ ಕೆಲವೊತ್ತಿನವರೆಗೆ ಮಾತು-ಕಥೆಗಳಾದವು. ಆಕೆಯನ್ನು ಅಪಹರಿಸಿಕೊಂಡು ಒಮ್ಮೆ ತಮ್ಮ ಬಿಡಾರವನ್ನು ಸೇರಿದೆವೆಂದರೆ ತೀರಿತು. ಮುಂದಿನ ವಿಚಾರವನ್ನು ಮಾಡಲಿಕ್ಕೆ ಬಂದೀತು, ಎಂದು ನಿಶ್ಚಯಿಸಿ, ಕುತುಬನು ಮತ್ತೆ ಶಕ್ತಿಯ ಬೆನ್ನಟ್ಟಿ ಹೋದನು. ಶಕ್ತಿಯು ಆ ದಿವಸ ನಡುರಾತ್ರಿಯ ಕಗ್ಗತ್ತಲಲ್ಲಿ ಆ ಆರಣ್ಯದೊಳ ಗಿಂದ ಒಬ್ಬಳೇ ಹೋಗುತ್ತಿರಲು, ಅವನು ಆಕೆಯ ಹಿಂದಿನಿಂದ ಪ್ರತಿ ಛಾಯೆಯಂತೆ ನಡೆದಿದ್ದನು. ಅವಳು ನೀಗಿನಿಯ ಮಂದಿರವ ನ್ನು ಸೇರುತ್ತಲೆ ಅವನು ಅಲ್ಲಿಯೇ ಒತ್ತಟ್ಟಿಗೆ ಮರೆಗೆ ನಿಂತುಕೊಂ ಡು ಅವರ ಭಾಷಣವನ್ನು ಕೇಳಿದನು; ಹಾಗು ಶಕ್ತಿಯು ಇನ್ನು ಕೆಲ ಹೊತ್ತಿನಲ್ಲಿ ಬದಿಯಲ್ಲಿದ್ದ ಕಾಲಿಯಗುಡಿಗೆ ಹೋಗುವಷ್ಟರಲ್ಲಿ ಕುತು ಬನು ಗಾಯಸುದ್ದೀನನೆಡೆಗೆ ಬಂದು- ಚಿಗರೆಯು ಬಲೆಯೊಳಗೆ ಬೀಳುವಂತಿದೆ; ಆ ಬಗ್ಗೆ ತಿಲಮಾತ್ರವೂ ಸಂಶಯಬೇಡ; ಈಗ ಸರಿ ಯಾಗಿ ಬಲಿಯೊಡ್ಡಿ ಅದನ್ನು ಹಿಡಿ ತರುವದೊಂದೇ ಬಾಕಿಯದೆ ಎಂಬ ಸುದ್ದಿಯನ್ನು ತಿಳಿಸಿದನು. ಆಗ ಅತ್ಯಂತ ಮುದಿತನಾದ ನವಾ ಬನು ತಾನು ಆ ಬಗ್ಗೆ ಈ ಪೂರ್ವದಲ್ಲಿ ಮಾಡಿಟ್ಟ ಸಿದ್ಧತೆಯನ್ನು ಕುತುಬನಿಗೆ ತಿಳಿಸಿ ಅವನನ್ನು ಬಹಳವಾಗಿ ಕೊಂಡಾಡಿದನು. ಬಳಿಕ ಅವರೀರ್ವರೂ ಶಕ್ತಿಯನ್ನು ಅಪಹರಿಸುವದಕ್ಕಾಗಿ ಕಾ ಲಿಯ ಗುಡಿಯ ಕಡೆಗೆ ಸಾಗಿದರು. ನವಾಬನು ತನ್ನ ಬಳಿಯಲ್ಲಿರಿಸಿ ಕೊಂಡಿದ್ದ ಚಿಕ್ಕ ದಂಡಿನಸೇನಾಪತಿಗೆ ಕೆಲವೊಂದು ಗುಪ್ತ ಸಂಗತಿಯ ನ್ನು ಹೇಳಿ ಈ ಮೊದಲೇ ಕಳಿಸಿದ್ದನು. ಹಾಗು ತನ್ನ ಕೂಡ ಕೆಲವು ಜನ ಕುದುರೆಯ ಸವಾರರನ್ನೂ ಬರಮಾಡಿಕೊಂಡಿದ್ದನು. ಅವರು ಆ ಸವಾ ರರೊಡನೆ ಅರಣ್ಯದಲ್ಲಿ ಸದ್ದಾಗದಂತೆ ಸಾಗಿ ಕಾಲಿಯ ಗುಡಿಗೆ ತಲು