ಅನ್ನಪೂರ್ಣಾ/ಕೆಸರುಕೊಚ್ಚೆಯ ಕಮಲ

ವಿಕಿಸೋರ್ಸ್ ಇಂದ
Jump to navigation Jump to search
ಕೆಸರು ಕೊಚ್ಚೆಯ ಕಮಲ

ಕದ್ದು ಬರೆದುದು–ರಘುನಾಥನ ದಿನಚರಿಯ ಪುಸ್ತಕದಿಂದೆತ್ತಿ.

ನನಗೆ ಹುಚ್ಚುಗಿಚ್ಚು ಹಿಡಿಯೀತೇನು? ಏಕೆ ಹೋಗಬೇಕಿತ್ತು ನಿನ್ನೆ ಸಂಜೆ ಆ ಕೇರಿಯತ್ತ?
ಹೋಗಿಬಿಟ್ಟರೆ ಬಂದುದೇನು ಮಹಾ? ಆ ಎಮ್ಮೆ ಸೂಕರಗಳ ಕೇಳಿಯ ಕೊಳದ ಸವಮಿೂಪದಿಂದಾಗಿ ನಾನು ವಾಯುಸೇವನೆಗೆ ಹೋದುದು ಇದು ಪ್ರಥಮದ ಸಲವೇನು? ಅಲ್ಲ. ಆ ಕೊಳದ ನೀರಿನ ಕೊಳದ ಎಡಪಕ್ಕದಲ್ಲಿದ್ದ ಹರಿಜನ ವಸತಿಯೊಂದನ್ನು ಬಿಟ್ಟು, ಅಲ್ಲಿ ಬೇರೆ ಯಾರ ಮನೆಗಳೂ ಇಲ್ಲವೆಂಬುದನ್ನು ನಾನೊಬ್ಬನೆ ಏಕೆ, ನಗರವಾಸಿಗಳೆಲ್ಲರೂ ಬಲ್ಲರು. ಆದರೆ ಕೊಳದ ದಂಡೆಯಲ್ಲೆಲ್ಲ ಕೆಲದಿನಗಳ ಹಿಂದಿನ ಮಳೆಯಿಂದ ಹಚ್ಚನೆಯ ಹಸಿಹುಲ್ಲು ಚಿಗುರಿತ್ತೆಂಬುದನ್ನೂ ಅಲ್ಲೆಲ್ಲ ಹಾಯಾಗಿ ಬಿದ್ದುಕೊಂಡು ನಿಸರ್ಗದೇವತೆಯನ್ನು ಕಣ್ದಣಿಯೆ ಕಂಡು ಆನಂದಿಸಬಹುದೆಂಬುದನ್ನೂ ನಾನೊಬ್ಬನೇ-ಕವಿ ಹ್ರುದಯನಾದ ನಾನೊಬ್ಬನೇ ಇತರರಿಗಿಂತ ಚೆನ್ನಾಗಿ ಅರಿತಿದ್ದೆ.
ಅದಕ್ಕಾಗಿಯೇ ನಿನ್ನೆ ಆ ಕಡೆ ಹೋದುದು.ಕೊಳದತ್ತ ಇಣಿಕುವುದು ನನ್ನ ಅಭ್ಯಾಸ; ಮಳೆಯ ನೀರಿನಿಂದಾಗಿ ತುಂಬಿಕೊಂಡಿದ್ದ ಆ ಕೆರೆಯಲ್ಲಿ ತಾವರೆಯ ಮೊಗ್ಗುಗಳೇನಾದರುಾ ಕಾಣಸಿಗುತ್ತವೋ ಎಂಬ ಆತುರ ನನಗೆ.

ನೋಡಿದೆ; ತಾವರೆಯ ಎಲೆಗಳು ಒಂದಷ್ಟು ನೀರಿ ಮೇಲೆ ಹರಡಿದ್ದುದನ್ನು ಕಂಡೆ. ತಲೆಯೆತ್ತಿದೆ ಕಣ್ಣಿಗೆ ಇನ್ನೊಂದು ನೋಟ ಕಂಡಿತು.ಆಚೆಯ ಪಕ್ಕದಲ್ಲಿ ಹದಿನಾರು ವರುಷದ ಹರಿಜನರ ಹುಡುಗಿಯೊಬ್ಬಳು ಆ ಕೊಳದಲ್ಲಿ ಮಿಂದಿದ್ದವಳು.ಮುಡಿಯನ್ನು ಗಂಟಕ್ಕಿ,ಒದ್ದೆಬಟ್ಟೆಯನ್ವುಟ್ಟದ್ದು ಮೆಲ್ಲಗೆ ತನ್ನ ಕೇರಿಯತ್ತ ಸಾಗುತ್ತಿದ್ದಳು. ಪಡುಗಡೆಯಿಂದ ಕೆಂಪು ಕಾರುತ್ತಿದ್ದ ಸೂರ್ಯ ಅವಳನ್ನು ನನಗೆ ತೋರಿಸಿಕೊಟ್ಟ. ನಾನು ನಿಂತಲ್ಲೇ ನಿಂತೆ;
೩೮
ಅನ್ನಪೂರ್ಣಾ

ಕಲ್ಲಿನಂತೆ. ಕಮಲದೊಂದು ಮೊಗ್ಗು ಗಾಳಿಯಲ್ಲಿ ತೇಲುತ್ತಾ ಹೋದಂತಿತ್ತು
ನೆಟ್ಟದ್ರುಷ್ಟಿಯನ್ನು ಬಹುಹೊತ್ತು ಹಿಂದೆಗೆಯಲಿಲ್ಲ.
ಅವಳು ಹಿಂದಿರುಗಿ ನನ್ನನ್ನು ನೋಡಲಿಲ್ಲ. ನನ್ನ ಭಾಗ್ಯ.
ರಘುಾ ನಿನಗೆ ಹುಚ್ಚು! ಆ ಹರಿಜನರ ಹುಡುಗಿಯಲ್ಲಿ ಏನು ಕಂಡು
ಕೊಂಡೆಯಪ್ಪ ?
ಇಲ್ಲ ಒಳ್ಳೆಯ ನಿರಾಶೆಯಾಯಿತು ಈ ಸಂಜೆ.
ನಿನ್ನೆ ಹೊರಟುದಕ್ಕಿಂತ ಮುಂದಾಗಿಯೇ ಹೊರಗೋಡಿದೆ. ಕೊಳ
ವನ್ನು ಸಮಿಾಪಿಸಿ, ನೇರವಾಗಿ ಎದುರುದಡಕ್ಕೆ ದ್ರುಷ್ಟಿ ಹಾಯಿಸಿದೆ; ಪುನ್ಹ
ಗಾಳಿಯಲ್ಲಿ ತೇಲುವ ಆ ಹೂವನ್ನು ನೋಡುವ ಆಶೆ. ಆದರೆ ನಿರಾಶನಾದೆ
ಅಯ್ಯೋ! ಆಕೆ ಒಂದು ವೇಳೆ ಕೊಳದಲ್ಲಿ ಮುಳುಗಿ ಹೋಗಿದ್ದರೆ?
ಹುಚ್ಚು! ರಘೂ ನಿನಗೆ ಬೇಗನೆ ಹುಚ್ಚು ಹಿಡಿಯುತ್ತದೆ.
ಒಂದಾದರೂ ತಾವರೆಯ ಮೊಗ್ಗು ಹೊರಸೂಸಿದೆಯೆ ನೋಡೋಣ
ವೆಂದುಕೊಂಡೆ. ಇಲ್ಲ, ಅದೂ ಇರಲಿಲ್ಲ. ಪುನ್ಹ ನಿರಾಶೆ.
ಉಸ್ಸಪ್ಪ! ಕಳೆದ ರಾತ್ರಿ ನಿದ್ದೆಹಿಡಿಯಿತು ಸ್ವಲ್ಪ‌ ಮಟ್ಟಿಗಾದರೂ
ಐದು ದಿನಗಳ ಬಳಿಕ ನಿನ್ನೆ ಸಂಜೆ‌ ಅವಳನ್ನು ಕಂಡೆ.ಅದೇ ಎದುರು ದಡ
ದಸ್ಲಿ ಬಟ್ಟೆ ಎಲ್ಲಿಯ ಬಟ್ಟೆ ? ಬಟ್ಟೆಯ ಚಿಂದಿಗಳನ್ನೋಗೆಯುತ್ತಿದ್ದಳು
ಮರದ ಎಡೆಯಲ್ಲಿ ಮರೆಯಾಗಿ, ಬಹು ಹೊತ್ತು ಅತ್ತ‌ನೋಡಿದೆ. ಕದ್ದು
ನೋಡಿದುದರಿಂದ ಒಂದು ಪಾಪದ ಹೊರೆಯನ್ನು ಹೆಚ್ಚಾಗಿ ತಲೆಯ ಮೇಲೆ
ಹೊರಿಸಿದಂತಾಯಿತು....
ಅವಳು ಹೋದ ಬಳಿಕ ಎದುರಿಗೆ ಬಂದು ಕೊಳದಲ್ಲಿಣಿಕಿದೆ. ಒಂದು
ತಾವರೆಯ ಮೊಗ್ಗು ತಲೆದೋರಿತ್ತು.
ಮೊಗ್ಗು! ತಾವರೆಯ ಮೊಗ್ಗು!....ಸುತ್ತಲೂ ಯಾರೂ ಇರಲಿಲ್ಲ....
ಮತ್ತೆ ಆ ಮೊಗ್ಗನ್ನು ನೋಡಿದೆ....
ಅಬ್ಬ! ನಾನು ಮಾಡಿದ ಸಾಹಸವಾದರೂ ಎಷ್ಟು! ಅದು ವಿಶ್ವ
ಪ್ರಯತ್ನವೇ ಸರಿ! ಆ ಮುಸುರೆ ತಿಕ್ಕುವವಳಿಗೆ ಏನು ಕೊಡಲಿ?...ನನಗೆ

ಸಹಾಯ ಮಾಡಿದ ಉಪಕಾರಕ್ಕೆ.....ಆ ಹುಡುಗಿಯ ಹೆಸರು,ಮುದರೆ.
೩೯
ಕೆಸರು ಕೊಚ್ಚೆಯ ಕಮಲ

ಮುದರೆ ! ? ಇಸ್ಸಿಯಪ್ಪ....ಎಂಥ ಹೆಸರು!.... ಮುದರೆ. ಸರಿ, ಸರಿ,
ಆ ರೂಪಕ್ಕೆ ಆ ಹೆಸರೇ ಒಪ್ಪುತ್ತಿರಬೇಕು. ನಾನು ಬಲ್ಲೆನೆ?
ಇನ್ನು ಆ ಒಂದೇ ಒಂದು ಮೊಗ್ಗೋ ? ಸರಿ,ಸರಿ. ಬಲಿಯುತ್ತಾ
ಇದೆ; ಬೆಳೆಯುತ್ತಾ ಇದೆ.
*****
ಒಗೆದ ಅಂಗಿ-ಬಟ್ಟೆಯುಟ್ಟು,ಟ್ಟೋಪಿಯಿಟ್ಟು,ಕುಲು ಕುಲು ನಗುತ್ತ
ಹೊರ ಹೊರತಟೆ.
ಇದ್ದಕ್ಕಿದ್ದಂತೆ ರತ್ನನ ನೆನಪಾಯಿತು.ರತ್ನ ಪೂವಮ್ಮನನ್ನು-ಅವನ ತಂಗಿ
ಪೂವಮ್ಮನನ್ನು-ಮಡಿಕೇರಿಯ ಬೆಟ್ಟದ ಮೇಲೆ ಸಂಧಿಸಿದ ನೆನಪಾಯಿತು.
ಆಗ ಅವನು ಹಾಡಿದ್ದ :
ರೂಪು ರಾಗಕ್ ತಕ್ಕಂತ್ ಯೆಸರು!
ಎಂಗ್ ನೋಡಿದ್ರು ಒಪ್ಪೋ ಯೆಸರು!
ಪೂವಮ್ಮಾ ! ಪೂವಮ್ಮಾ !
ಪೂವಮ್ಮಾ ! ಪೂವಮ್ಮಾ !
ಈ ಹರಿಜನ ಹುಡಿಗಿಯೂ ಹಾಗಾದರೆ ನನ್ನ ತಂಗಿಯೇ ?
ಏಕಾಗಬಾರದು ?......
ನನ್ನ ಕಮಲದ ಮೊಗ್ಗು ಚನ್ನಾಗಿ ಬಲಿತಿತ್ತು. ದುಂಡಗೆ,ಉಬ್ಬಿ,
ತನ್ನ ಮೊನೆಯಿಂದ ನನ್ನನ್ನಣಕಿಸಿತು. ಆಗ ಹೇಳಿದೆ, ' ಆಣಕಿಸು ಮರೀ,
ಎಷ್ಟು ದಿನ ಆಣಕಿಸುವೆ ನೋಡೋಣ ! '
ಜೀವನ ಎಷ್ಟು ಉಲ್ಲಾಸಕರ!
ನಾನು ತಪ್ಪದೇ ಈಗ ಅವಳನ್ನು-ಮುದರೆಯನ್ನು-ಕಾಣಲು ಶಕ್ತನಾಗಿ
ದ್ದೇನೆ. ಹೊಲದಲ್ಲಿ ದುಡಿದು ಬಂದು ಸಂಜೆ ಮೈ ತೊಳೆಯಲೂ ಗುಡಿಸಲಿಗೆ
ನೀರನ್ನೂಯ್ಯಲೂ ಆಕೆ ಕೊಳಕ್ಕೆ ಬರುವಳು.
ಹುಡುಗಿಗೆ! ಅರಿಯದು,ತನ್ನನ್ನು ಈ ರಘು ನೋಡುತ್ತಿದ್ದಾನೆಂದು!
ಕಮಲವೂ ಎಸಳು ಎಸಳಾಗಿ ಆರಳುತ್ತಿದ್ದಿತು. ಅನುದಿನವೂ ಆದು
ವಿಕಾಸವಾಗುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಲಾಲಲಲಾ ಎಂದು

ಹಾಡುತ್ತಿದ್ದೇನೆ !'

೪೦
ಅನ್ನಪೂರ್ಣಾ

ಈ ದಿನ ಹೋದಾಗ ನನ್ನ ಕಮಲ ಅರಳಿತು.ಪೂರ್ಣವಾಗಿ-
ಸಂಪೂರ್ಣವಾಗಿ ಅರಳಿತ್ತು; ಹುಣ್ಣಿಮೆಯ ಚಂದ್ರನಂತೆ ಅರಳಿತ್ತು. ಅದರ
ಚೆಲುವಿಗೆ ನಾನು ಮರಳಾದೆ. ಅದರ ಶೋಭೆಗೆ ಮನಸೋತೆ. ಏನು
ಚೆನ್ನಾದ ಪುಷ್ಪ !
ನನ್ನನ್ನು ನಾನು ಮರೆತು, ಹಾಗೆಯೇ ಕೊಳಕು ಕೊಳದ ಆ ಒಂದೇ
ಒಂದು ಕಮಲದತ್ತ ದೃಷ್ಟಿಯಿಡುತ್ತಾ ಈ ಕಡೆ ನಾನು ನಿಂತಿದ್ದೆ. ಆ ಕಡೆ ಅವ
ಳಿದ್ದಳು. ಮುದರೆ! ಸ್ನಾನ ಮಾಡಿ ಮನೆಗೆ ಹೋಗಲು ಹೊರಟು ನಿಂತಿದ್ದಳು.
ಕೊಳದತ್ತ ನೋಡುತ್ತಲಿದ್ದ ನನ್ನನ್ನೇ ದಿಟ್ಟಿಸುತ್ತಿದ್ದಳು. 'ನೀರಲ್ಲಿ ಏನು
ಕಳಕೊಂಡಿದ್ದಾನೆ. ಈ ಪ್ರಾಣಿ ' ಎಂದು ಭಾವಿಸುತ್ತಿದ್ದಿರಬೇಕು. ನಾನು
ತಲೆತ್ತಿದೆ. ಪರಸ್ಪರ ನೋಡಿಕೊಂಡೆವು. ಅನಿವಾರ್ಯವಾಗಿ ಒಂದು
ಮುಗುಳ್ನಗು ನನ್ನ ಮುಖವನ್ನಾಕ್ರಮಿಸಿತು. ಅಷ್ಟು ದೂರದಲ್ಲಿ ಆಕೆಗೆ ಅದು
ಕಂಡಿರಬಹುದೇ ? ಒಡನೆಯೇ ತಲೆ ತಗ್ಗಿಸಿ ತಿರುಗಿ ಹೋದವಳು ನಕ್ಕಿರ
ಬೇಕೆಂದು ನನ್ನ ವಿಶ್ವಾಸ.
ಅಂತೂ ಕೊಳದಲ್ಲೊಂದು ಕಮಲ....ಕೊಳದ ಹೊರಗೊಂದು
ಕಮಲ....
ದುರಂತ ! ಈ ಶಬ್ದದ ಪ್ರತ್ಯಕ್ಷಾನುಭವ ನನಗಾಯಿತು.
ಕಳೆದ ರಾತ್ರಿಯಿಡೀ ನಿದ್ದೆಯಿರಲಿಲ್ಲ ; ಢಿಕ್ಕೀ ಢಮಾ ಡುಮ್ಕ್ ಢಿಕೀ
ಎಂಬ ದುಡಿಯ ಸದ್ದಿನ ಕಾರಣದಿಂದ.
ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿಗೆಂದು ಒರಗಿಕೊಂಡೆ....ಆಗಲೂ
ಅದೇ ದುಡಿ ವಾದನ. ನಾನು ಸಿಟ್ಟಿಗೆದ್ದು ಕೆಲಸದವಳನ್ನು ಕೂಗಿ "ಅದೆಂಥಾ
ಸದ್ದು ? " ಎಂದೆ.
" ಮುದರೆಯ ಮದುವೆ " ಎಂದು ಉತ್ತರ ಬಾಮತು.
ಸರಿ. ಮತ್ತೆ ಎಲ್ಲಿಯ ನಿದ್ದೆ ನನಗೆ ?
ದುಡಿಯ ಸದ್ದು ನನ್ನ ಕಿವಿಗಳಲ್ಲಿ ಬಲವಾಯಿತು. ಮುದರೆಯ
ಮದುವೆ, ಮುದರೆಯ ಮದುವೆ ಎಂದು.
ಕೊಳದತ್ತ ಧಾವಿಸಿದೆ.
ಬಳಿಯ ದೇಗುಲದ ಅರ್ಚಕ , ಉದ್ದನ್ನ ಬಿದಿರೊಂದಕ್ಕೆ ಕತ್ತಿಕಟ್ಟಿ ಆ
ತಾವರೆಯ ಹೂವನ್ನು ದಂಟು ಸಹಿತ ಕರಕರ ಕೊಯ್ಯುತ್ತಿದ್ದ. ಕೊಲೆಪಾತಕ !
ನಾನು ಸಿಟ್ಟು ಕಾರುತ್ತಾ ' ಇದೇನ್ರಿ ? ' ಅಂದೆ.
ತನ್ನ ಹಕ್ಕನ್ನೂ ಪ್ರಶ್ನಿಸಿದ ಮಹಾನುಭಾವ ಯಾವನಪ್ಪಾ ? ಎಂಬ
ಭಾವನೆಯಿಂದಲೇ ಆ ಅರ್ಚಕ ಹಿಂದಿರುಗಿ ನೋಡುತ್ತಾ, 'ದೇವರ ಪೂಜೆಗೆ'
ಎಂದ.
ನಾನು ಸುಮ್ಮನಾದೆ.
ಢಿಕ್ ಢಿಮಗಳೊಡನೆ ಮದುವೆಯ ಮನೆಯಿಂದ ಮಂದಿಯ ಮೆರ
ವಣಿಗೆ ಹೊರಡುತ್ತಿತ್ತು. ಮುದರೆ ತನ್ನ ಪತಿಗೃಹಕ್ಕೆ ಸಾಗುತ್ತಿದ್ದಳು....
*****
ಮುದರೆ ತನ್ನ ಪತಿಗೃಹಕ್ಕೆ ತೆರಳಿದಳು. ಕೆಸರು ಕೊಚ್ಚೆಯ ಕಮಲ
ದೇವರ ಅರ್ಚನೆಗಾಗಿ ಗರ್ಭಗುಡಿಯನ್ನು ಪ್ರವೇಶಿಸಿತು.