ಅರ್ಧನಾರೀಶ್ವರನೆಂಬರು ಅನುವನರಿಯದವರು. ತ್ರಿಪುರವಿಜಯನೆಂಬರು

ವಿಕಿಸೋರ್ಸ್ದಿಂದ



Pages   (key to Page Status)   


ಅರ್ಧನಾರೀಶ್ವರನೆಂಬರು
ಅನುವನರಿಯದವರು.
ತ್ರಿಪುರವಿಜಯನೆಂಬರು
ವಿರೋಧಿಗಳಾದವರು.
ಕಾಮಾರಿಯೆಂಬರು
ಕಣ್‍ಕಾಣದವರು.
ಜಟಾಜೂಟಕೋಟೀರಭಾರನೆಂಬರು
ಜಾಣರಲ್ಲದವರು.
ನಮ್ಮ
ಗುಹೇಶ್ವರಲಿಂಗ
ಇಂತಹ
ಬಹುರೂಪದವನಲ್ಲ
!