ಊರ ಮಧ್ಯದ ಕಣ್ಣ

ವಿಕಿಸೋರ್ಸ್ದಿಂದ



Pages   (key to Page Status)   


ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು. ಬಳಗ ಘನವಾದ ಕಾರಣ_ಹೆಣನೂ ಬೇಯದು ಕಾಡೂ ನಂದದು. ಮಾಡ ಉರಿಯಿತ್ತು ಗುಹೇಶ್ವರಾ.