ವಿಷಯಕ್ಕೆ ಹೋಗು

ಎಕ್ಸ್‌ಕ್ಯೂಸ್ ಮಿ - ಪ್ರೀತಿಗೆ ಜನ್ಮ

ವಿಕಿಸೋರ್ಸ್ದಿಂದ
(ಎಕ್ಸ್‍ಕ್ಯೂಸ್ ಮಿ ಪ್ರೀತಿಗೆ ಜನ್ಮ ಇಂದ ಪುನರ್ನಿರ್ದೇಶಿತ)

ಚಿತ್ರ: ಎಕ್ಸ್‌ಕ್ಯೂಸ್ ಮಿ

ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್
ಸಂಗೀತ: ಆರ್.ಪಿ.ಪಾಟ್ನಾಯಕ್
ಗಾಯನ: ರಾಜೇಶ್ ಕೃಷ್ಣನ್


ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ.. ಭೂಮಿಗೆ ತಂದೂ ಎಸೆದಾ
ಹಂಚಲು ಹೋಗಿ.. ಬೇಸರ ವಾಗಿ.. ಹಂಚಿಕೊ ಹೋಗಿ ಎಂದಾ!

ಕೊನೆಗು ಸಿಗದೇ ಪ್ರೀತೀ....!

|ಸಂಗಡಿಗರು| ಬದುಕು ರಣಭೂಮಿ |೨|
ಜಯಿಸಲಿ ಪ್ರೇಮಿ

ಅವನ ಅವಳ ಬದುಕು ಮುಗಿದರೂನು..
ಅವರಾ ಪ್ರೀತಿ ಗುರುತೂ ಸಾಯದಿನ್ನು

ಬಿರುಗಾಳಿಗೆ ಸೂರ್ಯ ಹಾರಿಹೋದರು ಪ್ರೀತಿಯು ಹಾರದು
ಈ ಜಗದ ಎಲ್ಲ ಗಡಿಯಾರ ನಿಂತರು ಪ್ರೀತಿಯೂ ನಿಲ್ಲದು

|ಸಂಗಡಿಗರು| ಬದುಕು ಸುಡು ಭೂಮಿ |೨|
ನಡುಗನು ಪ್ರೇಮಿ

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ.. ಭುಮಿಗೆ ತಂದೂ ಎಸೆದಾ

ಹಂಚಲು ಹೋಗಿ.. ಬೇಸರ ವಾಗಿ.. ಹಂಚಿಕೊ ಹೋಗಿ ಎಂದಾ!

ಯಮನು ಶರಣು ಎನುವಾ ಪ್ರೀತಿ ಒಂದೆ
ದನಿಕ ತಿರುಕಾ ಪ್ರೀತಿ ಮುಂದೆ ಮುಂದೆ

ಹಳೆ ಗಾದೆ ವೆದಾಂತ ಭೂದಿಯಾದರು ಪ್ರೀತಿಯು ಸಾಯದು
ತಿರುಗಾಡುವ ಭೂಮಿ ನಿಂತೆಹೋದರು ಪ್ರೀತಿಯು ನಿಲ್ಲದು

|ಸಂಗಡಿಗರು| ಬದುಕು ಮರ ಭೂಮಿ |೨|
ಮಳೆಹನಿ ಪ್ರೇಮಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ