ಎನ್ನ ನೀನೆ ಸ್ಥೂಲತನುವಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ
ಸ್ಥೂಲತನುವಿನ
ಜಾಗ್ರಾವಸ್ಥೆಯಲ್ಲಿ
ಸಕಲ
ದೃಶ್ಯದ
ಲೀಲೆಯನಾಡುವಾತನು
ನೀನೆ
ಅಯ್ಯಾ.
ಎನ್ನ
ಸೂಕ್ಷ್ಮತನುವಿನ
ಸ್ವಪ್ನಾವಸ್ಥೆಯಲ್ಲಿ
ದೃಶ್ಯಾದೃಶ್ಯದ
ಲೀಲೆಯನಾಡುವಾತನು
ನೀನೆ
ಅಯ್ಯಾ.
ಎನ್ನ
ಕಾರಣತನುವಿನ
ಸುಷುಪ್ತ್ಯಾವಸ್ಥೆಯಲ್ಲಿ
ಕೇವಲ
ನಿರವಯ
ಲೀಲೆಯನಾಡುವಾತನು
ನೀನೆ
ಅಯ್ಯಾ
ಅಖಂಡೇಶ್ವರಾ.