ವಿಷಯಕ್ಕೆ ಹೋಗು

ಕಂಗಳಲ್ಲಿ ಕರಸ್ಥಳದ ನೋಟ,

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಕಂಗಳಲ್ಲಿ ಕರಸ್ಥಳದ ನೋಟ
ಅಂಗವಿಕಾರವೆಂಬುದನರಿಯ ನೋಡಾ
ಮನದ ಕೊನೆಯ ಮೊನೆಯ ಮೇಲಣ ಅನುಭಾವ ಗಮನಗೆಟ್ಟು
ಭಾವ ನಿರ್ಭಾವವೆಂಬುದನರಿಯ
ನೋಡಾ. ಕೂಡಲಸಂಗಮದೇವರಲ್ಲಿ ಪ್ರಭುದೇವರಿಂದಲಾನು ಬದುಕಿದೆನು ಕಾಣಾ
ಚೆನ್ನಬಸವಣ್ಣಾ.