ಕರ್ನಾಟಕ ಗತವೈಭವ/೬ನೆಯ ಪ್ರಕರಣ
೬ನೆಯ ಪ್ರಕರಣ
ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ
(೫ನೆಯ ಶತಕದವರೆಗೆ )
- *ಕರ್ನಾಟಕ ಕಾಲೇಜ ಅಸೋಸಿಯೇಶನ್ನದ ವತಿಯಿಂದ ಗವರ್ನರ ಸಾಹೇಬರಿಗೆ ನಿವೇದಿಸಿದ ರಿಪೋರ್ಟನ೦ಥ ಮಹತ್ವದ ಲೇಖದಲ್ಲಿ ಸಹ ಈ ಬಗೆಯು ಭಯಂಕರವಾದ ತಪ್ಪುಗಳು ಸೇರಿದ್ದನ್ನು ನೋಡಿ ಯಾವ ಇತಿಹಾಸಾಭಿಮಾನಿಗೆ ವ್ಯಸನವಾಗಲಿಕ್ಕಿಲ್ಲ? ಕರ್ನಾಟಕ-ಇತಿಹಾಸ ಮ೦ಡಲದ ಅವಶ್ಯಕತೆಯ ಬಗ್ಗೆ ಇದಕ್ಕಿ೦ತ ಹೆಚ್ಚಿನ ಆಧಾರವು ಬೇಡ. ೪೨ಕರ್ನಾಟಕ ಗತವೈಭವ
ಸಂಗತಿಗಳನ್ನು ಇಲ್ಲಿ ಸಂಕ್ಷೇಪವಾಗಿ ಹೇಳಿಟ್ಟರೆ ಹೊಸದಾಗಿ ದೊರೆತ ಸಾಧನಗಳ ಪ್ರಯೋಜನ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಅರಸರ ಆಳಿಕೆಗಳ ಕ್ರಮವಾದ ಇತಿಹಾಸವನ್ನು ಹೇಳುವುದೇ ಈಗ ನಡೆದುಬಂದ ಪದ್ಧತಿ. ಅದಕ್ಕನುಸಾರವಾಗಿ, ಸಾಮಾನ್ಯ ವಾಚಕರು ಕೂಡ ನೆನಪಿನಲ್ಲಿಡಬಹುದಾದ ಮತ್ತು ಪ್ರತಿಯೊಬ್ಬ ಕನ್ನಡಿಗನೂ ಅವಶ್ಯವಾಗಿ ಕಲಿಯತಕ್ಕ ಸಂಗತಿಗಳನ್ನಷ್ಟೇ ಹೇಳಿ, ಅತಿ ಪ್ರಾಚೀನಕಾಲದಿಂದ ಕೊನೆಯವರೆಗಿನ ಇತಿಹಾಸ ಕ್ಷೇತ್ರದಲ್ಲಿ ನಮ್ಮ ವಾಚಕರನ್ನು 'ಮೊಟಾರ' ವೇಗದಿಂದ ಅಡ್ಡಾಡಿಸಿಕೊಂಡು ಬರುತ್ತೇವೆ.
ರಾಮಾಯಣಕಾಲದಲ್ಲಿ ನರ್ಮದೆಯ ದಕ್ಷಿಣಕ್ಕೆ ದಂಡಕಾರಣ್ಯವೆಂಬ ಮಹಾ ಕಾಂತಾರವಿತ್ತು, ಕರ್ನಾಟಕದಲ್ಲಿ ಆಗ ಬೆಳೆದ ಅಡವಿಗೆ ಮತಂಗವನವೆಂದು ಹೆಸರು, ಅದರಲ್ಲಿ, ಮತಂಗ, ಗಾಲವ, ಜಮದಗ್ನಿ ಮುಂತಾದ ಖುಷಿಗಳು ತಪಶ್ಚರ್ಯೆ ಮಾಡುತ್ತಿದ್ದರು. ಆದರೆ ಆ ಕಾಲದಲ್ಲಿ ಕೂಡ ಸುಗ್ರೀವನ ರಾಜಧಾನಿಯಾದ ಕಿಷ್ಕಿಂಧಾ ಪಟ್ಟಣವು ಭರಭರಾಟಿಯಲ್ಲಿ ಇದ್ದೇ ಇತ್ತು, ಈಗಿನ ಹಂಪ ಅಥವಾ ಪಂಪಾಪಟ್ಟಣವೇ ಆ ಕಿಷ್ಕಿಂಧೆ. ಈಗಿನಂತೆ ಆಗಲೂ ಕೂಡ ಅದೊಂದು ಪವಿತ್ರ ಕ್ಷೇತ್ರವೆಂದೆಣಿಸಲ್ಪಡುತ್ತಿತ್ತು, ವಿಜಯನಗರವೆಂದರೂ ಇದೇ !
ಸಾರಾಂಶ:- ಈ ಪಟ್ಟಣವು ಕರ್ನಾಟಕದಲ್ಲಿ ಅತಿ ಪ್ರಾಚೀನಕಾಲದಿಂದ ಪ್ರಸಿದ್ದವು. ಕರ್ನಾಟಕ ವೈಭವದ ಸಮಾಧಿಯೂ ಇಲ್ಲಿಯೇ ಆಯಿತು. ಯಾಕೆಂದರೆ, ಕನ್ನಡನಾಡಿನ ಕೊನೆಯ ಅರಸರಾದ ವಿಜಯನಗರದ ರಾಜರು ಇದೇ ಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳಿದರು, ೧೫೬೫ರಲ್ಲಿ ತಾಳಿ ಕೋಟಿಕಾಳಗದಲ್ಲಿ ಅವರು ಸೋತುದರಿಂದ ಅವರ ವೈಭವವೆಲ್ಲವೂ ಮಣ್ಣು ಪಾಲಾಯಿತು. ಇರಲಿ, ಗೋಕರ್ಣದ ಮಹಾಬಳೇಶ್ವರಲಿಂಗವು ರಾವಣನಿಂದ ಸ್ಥಾಪಿತವಾಯಿತಂಬ ಕಥೆಯುಂಟು, ಈ ದೇವಸ್ಥಾನದ ಉಲ್ಲೇಖವು ರಾಮಾಯಣ ಕಾಲದಲ್ಲಿಯೂ ಇರುತ್ತದೆ. ಇದು ರಾಮಾಯಣ ಕಾಲದ ಸ್ಥಿತಿಯಾಯಿತು.
ವಿರಾಟನೆಂಬ ರಾಜನು ರಾಜ್ಯ ಮಾಡುತ್ತಿದ್ದನು. ಶಾಲಿವಾಹನ ಶಕದ 12ನೆಯ ಶತಮಾನದಲ್ಲಿಯೂ, ಹಾನಗಲ್ಲಿಗೆ ವಿರಾಟಕೋಟಿಯೆಂಬ ಹೆಸರಿತ್ತೆಂದು ಆ ಕಾಲದ ಶಿಲಾಲಿಪಿಗಳಿಂದ ತಿಳಿಯುತ್ತದೆ. ಹಾನಗಲ್ಲಿನಲ್ಲಿ ಹಳೇ ಕೋಟಿಯನ್ನೂ ಕೀಚಕನ ಗರಡಿಮನೆಯನ್ನೂ ಜನರು ಈಗಲೂ ತೋರಿಸುತ್ತಾರೆ, ವಿರಾಟ ರಾಜ್ಯದ ದಕ್ಷಿಣಕ್ಕೆ ಅದಕ್ಕೆ ಹೊಂದಿ ಸುಶರ್ಮನೆಂಬ ಅರಸನ ತ್ರಿಗರ್ತದೇಶದ ರಾಜ್ಯವಿತ್ತೆಂದು ವಿರಾಟ ಪರ್ವದಲ್ಲಿ ಹೇಳಿದೆ. ತ್ರಿಗರ್ತವೆಂದರೆ ಮೂರು ದಿಕ್ಕುಗಳಲ್ಲಿ ತಗ್ಗುಳ್ಳ ಸೀಮೆಯೆಂಬರ್ಥವು. ಈ ವರ್ಣನೆಯು ಮೈಸೂರಸೀಮೆಗೆ ಸರಿಹೊಂದುತ್ತದೆ.ಒಟ್ಟಿಗೆ, ಕೌರವ ಪಾಂಡವರ ಕಾಲದಲ್ಲಿ ಗೋಮಂತಕ, ಮತ್ಸ, ತ್ರಿಗರ್ತ ಈ ಮೂರು ರಾಷ್ಟ್ರಗಳೂ ಕರ್ನಾಟಕದಲ್ಲಿದ್ದು ಎಂದು ಸ್ಪಷ್ಟವಾಗುತ್ತದೆ. ಆನಿಗೊಂದಿಯೆಂಬುದೇ ಮಹಾಭಾರತದಲ್ಲಿಯ ಉಪಪ್ಲಾವ್ಯ. ಮಹಾಭಾರತದ ಭೀಷ್ಮ ಪರ್ವದಲ್ಲಿ ಕರ್ನಾ ಟಕದ ಹೆಸರು ಬಂದಿದೆ.
ಗ್ರಂಥದಲ್ಲಿಯೂ ಕರ್ನಾಟಕ ಎಂಬ ಶಬ್ದವು ಬಂದಿದೆ. ಆದರೆ ಇವೆಲ್ಲವುಗಳಿಂದ ಹೆಚ್ಚಿನ ಐತಿಹಾಸಿಕ ಸಂಗತಿಗಳೇನೂ ಗೊತ್ತಾಗುವುದಿಲ್ಲ. ಇರಲಿ.
ಹಿಂದುಸ್ಥಾನದ ವಿಷಯವಾಗಿ ನಮಗೆ ಗೊತ್ತಿದ್ದ ಇತಿಹಾಸವು ನಂದ, ಚಂದ್ರಗುಪ್ತರ ಕಾಲದಿಂದ ಎಂದರೆ ಕ್ರಿ.ಪೂ.ದಲ್ಲಿ ೪-೫ ಶತಮಾನಗಳಿಂದ ಪ್ರಾರಂಭವಾಗುತ್ತದೆಂದು ಹೇಳಬಹುದು, ಚಂದ್ರಗುಪ್ತನು ಕ್ರಿ.ಪೂ. ೩೨೧ರಲ್ಲಿ ಆಳಿದನೆಂಬ ಸಂಗತಿಯೇ ಎಲ್ಲಕ್ಕೂ ಪ್ರಾಚೀನವಾದ ಮತ್ತು ವಿಶ್ವಸನೀಯವಾದ ಐತಿಹಾಸಿಕ ಸಂಗತಿಯು ಹಿಂದುಸ್ಥಾನದ ಪ್ರಾಚೀನ ಇತಿಹಾಸದಲ್ಲಿ ಮುಖ್ಯವಾಗಿ ಎರಡು ಭಾಗಗಳನ್ನು ಮಾಡಬಹುದು, ಒಂದು ಉತ್ತರ ಹಿಂದುಸ್ಥಾನದ ಎಂದರೆ ವಿಂಧ್ಯದ ಉತ್ತರದ ಇತಿಹಾಸ. ಮತ್ತೊಂದು ದಕ್ಷಿಣ ಹಿಂದುಸ್ಥಾನದ ಅಥವಾ ದಕ್ಷಿಣಾ ಪಥದ ಇತಿಹಾಸ. ಇವೆರಡು ಇತಿಹಾಸಗಳು ಭಿನ್ನ ಭಿನ್ನವಿರುತ್ತವೆ. ಇವೆರಡರ ಸುಧಾರಣೆಯು ಭಿನ್ನ; ಇವೆರಡಕ್ಕೂ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯಿರುತ್ತದೆ. ಆದರೂ ದಕ್ಷಿಣಾ ಪಥದ ಇತಿಹಾಸದ ಸಂಬಂಧವು ನಡುನಡುವೆ ಉತ್ತರ ಹಿಂದುಸ್ಥಾನದ ಕೂಡ ಬಂದಿರುವುದರಿಂದ, ನಾವು ಉತ್ತರ ಹಿಂದುಸ್ಥಾನದಲ್ಲಿ ಯಾವ ಯಾವ ರಾಜವಂಶಗಳು ಆಗಿ ಹೋದುವೆಂಬುದನ್ನು ಸ್ವಲ್ಪದರಲ್ಲಿ ಹೇಳುತ್ತೇವೆ.
ಮಾನದಲ್ಲಿ ಮಾಯವಾದರು, ಈ ಅವಧಿಯಲ್ಲಿಯೇ ಪೇಶಾವರದಲ್ಲಿ ಕಾನಿಷ್ಕನೆಂಬ ಬಲಾಡ್ಯ ಅರಸನು ಕ್ರಿ. ಶ. ೧೨೩ ರ ವರೆಗೆ ಆಳಿದನು. ಮುಂದೆ ಉತ್ತರದಲ್ಲಿ ಚಂದ್ರಗುಪ್ತನೆಂಬುವನು ೩೨೦ ನೆಯ ಇಸ್ವಿಯಲ್ಲಿ ಗುಪ್ತ ವಂಶವನ್ನು ಸ್ಥಾಪಿಸಿದನು. ಈ ಗುಪ್ತ ವಂಶದ ಸಮುದ್ರಗುಪ್ತನೆಂಬುವನು ಅತ್ಯಂತ ಪರಾಕ್ರಮಿಯು. ಇವನನ್ನು ಹಿಂದುಸ್ಥಾನದ ನೇಪೋಲಿಯನ್ನನೆಂದು ಹೇಳುತ್ತಾರೆ. ಅವನು ೩೭೫ ರಲ್ಲಿ ಮರಣಹೊಂದಿದನು. ಈ ಗುಪ್ತ ವಂಶವು ಉತ್ತರದಲ್ಲಿ ೪೮೦ ನೆಯ ಇಸ್ವಿಯ ವರೆಗೆ ಪ್ರಬಲವಾಗಿತ್ತು. ಈ ಗುಪ್ತ ವಂಶವು ಪರದೇಶಿಯ ಹೂಣರಿಂದ ಹಾಳಾಗಿ ಮಗಧದೇಶದ ರಾಜಕೀಯ ವರ್ಚಸ್ಸು ಹೊರಟುಹೋಯಿತು, ಮುಂದೆ ಉತ್ತರದಲ್ಲಿ ಸಾರ್ವಭೌಮನಾದ ಅರಸನೆಂದರೆ ಕನೋಜದ ಶೀಲಾದಿತ್ಯ ಹರ್ಷವರ್ಧನನೇ. ಇವನು ಕ್ರಿ. ಶ. ೬೦೬ ರಿಂದ ೬೪೭ರವರೆಗೆ ಆಳಿದನು. ಅವನನ್ನು ಕರ್ನಾಟಕದ ೨ನೆಯ ಪುಲಿಕೇಶಿಯು ಸೋಲಿಸಿದಂದಿನಿಂದ ಉತ್ತರ ಹಿಂದುಸ್ಥಾನದ ಉಜ್ವಲ ಇತಿಹಾಸವು ಮುಗಿಯಿತು. ಉತ್ತರದಲ್ಲಿ ಮುಂದೆ ಸಾರ್ವಭೌಮರಾಗಲಲ್ಲ. ಇರಲಿ, ಈ ಮೇರೆಗೆ ಉತ್ತರ ಹಿಂದುಸ್ತಾನದ ವೈಭವದ ಇತಿಹಾಸವು ಕ್ರಿ. ಪೂರ್ವದ ೩೨೧ರಿಂದ ಅಂದರೆ ಚಂದ್ರಗುಪ್ತನ ಕಾಲದಿಂದ ಕ್ರಿ. ಶ. ೬೪೮ರವರೆಗೆ ಅಂದರೆ ಹರ್ಷವರ್ಧನನ ಮರಣದವರೆಗೆ ಸುಮಾರು ೯೦೦ ವರ್ಷ ನಡೆಯಿತೆಂದು ಹೇಳಬಹುದು.
ಈ ಪ್ರಕಾರ, ಉತ್ತರ ಹಿಂದುಸ್ಥಾನ ಇತಿಹಾಸದ ಸ್ವಲ್ಪ ಕಲ್ಪನೆಯನ್ನು ಮಾಡಿ ಕೊಟ್ಟಿರುವೆವಷ್ಟೆ. ಇನ್ನು ಈ ಇತಿಹಾಸದ ಸಂಬಂಧವು ನಮ್ಮ ಕರ್ನಾಟಕದ
ಇತಿಹಾಸಕ್ಕೆ ಯಾವ ಯಾವ ಕಾಲಕ್ಕೆ ಉಂಟಾಗುತ್ತದೆಂಬುದನ್ನು ಹೇಳುತ್ತೇವೆ.
ಮೇಲಾಗಿ ಚಂದ್ರಗುಪ್ತನು ತನ್ನ ಗುರುವಾದ ಭದ್ರಬಾಹುವನ್ನು ಕರೆದುಕೊಂಡು ದಕ್ಷಿಣ ದೇಶಕ್ಕೆ ಬಂದಿದ್ದನೆಂದೂ ಅವರೀರ್ವರು ಮೈಸೂರು ಪ್ರಾಂತದಲ್ಲಿಯ ಚಂದ್ರಗಿರಿಯಲ್ಲಿ ತಪಶ್ಚರ್ಯ ಮಾಡಿದರೆಂದೂ ಇತ್ತ ಕಡೆಯ ಆರನೆಯ ಶತಮಾನದ ಕೆಲವು ಶಿಲಾಲಿಪಿಗಳಿಂದ ಗೊತ್ತಾಗಿರುವ ಸಂಗತಿಯ ಮೇಲಿನ ಊಹೆಗೆ ಮುಂದೆ ಪುಷ್ಟಿಯನ್ನು ಕೊಡುತ್ತದೆ. ಅಶೋಕನ ಕಾಲದಲ್ಲಂತೂ ಈ ದೇಶವು ಅವನ ಅಧೀನದಲ್ಲಿತ್ತೆಂಬುದನ್ನು ಇಲ್ಲಿ ದೊರೆಯುವ ಅವನ ಶಿಲಾಶಾಸನಗಳೇ ಹೇಳುತ್ತವೆ. ಆ ಶಾಸನಗಳು ಮೊಳಕಾಲ್ಮುರು ತಾಲುಕಿನಲ್ಲಿಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಗುಡ್ಡಗಳಲ್ಲಿ ದೊರೆತಿರುತ್ತವೆ. ರಾಯಚೂರ ಜಿಲ್ಲೆಯೊಳಗಿನ ಲಿಂಗಸೂರ ತಾಲುಕ ಪೈಕಿ 'ಮಸ್ತಿ' ಎಂಬಲ್ಲಿಯೂ ಒಂದು ಶಾಸನವು ಮೊನ್ನೆ ಮೊನ್ನೆ ಸಿಕ್ಕಿರುತ್ತದೆ. ಅಶೋಕನ ಕಾಲಕ್ಕೆ ಬನವಾಸಿಯಲ್ಲಿ ಕದಂಬ ಅರಸರಿದ್ದರು. ಅಶೋಕನು (ಕ್ರಿ. ಪೂ. ೨೩೧) ರಕ್ಷಿತನೆಂಬ ಧರ್ಮೋಪದೇಶಕನನ್ನು ಬನವಾಸಿಗೂ ಮಹಾದೇವನೆಂಬುವನನ್ನು ಮಹಿಷಮಂಡಲಕ್ಕೂ ಕಳುಹಿಸಿರುವುದಾಗಿ ಆಧಾರವು ದೊರೆಯುತ್ತದೆ.
ಮುಂದೆ ನಾಲ್ಕನೆಯ ಶತಮಾನದಲ್ಲಿ, ಗುಪ್ತ ವಂಶದ ಸಮುದ್ರಗುಪ್ತನೆಂಬುವನು ಹಿಂದುಸ್ಥಾನವನ್ನೆಲ್ಲ ಪಾದಾಕ್ರಾಂತ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹೋಗಿ ಕರ್ನಾಟಕದೊಳಗಿನ ೧೧ ರಾಜ್ಯಗಳಲ್ಲಿ ಹಾಯ್ದು ಉತ್ತರಕ್ಕೆ ತೆರಳಿದನು. ಸಮುದ್ರಗುಪ್ತನ ತರುವಾಯ ಕರ್ನಾಟಕಕ್ಕೆ ಸಂಬಂಧಪಟ್ಟ ಉತ್ತರದ ಸಾರ್ವಭೌಮ ರಾಜನೆಂದರೆ ಹರ್ಷವರ್ಧನನೇ. ಕರ್ನಾಟಕದ ಪ್ರಖ್ಯಾತ ರಾಜನಾದ ೨ನೆಯ ಪ್ರಲಕೇಶಿಯು ಕ್ರಿ.ಶ. ೬೩೪ರಲ್ಲಿ ಸೋಲಿಸಿದ ಹರ್ಷವರ್ಧನನು ಇವನೇ.
ಆದರೆ ಕರ್ನಾಟಕವೆಲ್ಲವೂ ಇವರ ವಶವಾಗಿರಲಿಲ್ಲ. ರಾಷ್ಟ್ರಕೂಟ, ಪಲ್ಲವ, ಗಂಗ, ಬಾಣ, ಕದಂಬ ಮುಂತಾದ ಚಿಕ್ಕಚಿಕ್ಕ ರಾಜ್ಯಗಳು ಆಗ ಈ ದೇಶದಲ್ಲಿ ಆಳುತ್ತಿದ್ದಂತೆ ತೋರುತ್ತದೆ. ಆಂಧ್ರಕೃತ್ಯರು ಕ್ರಿ.ಶ. ೨೨೫ರ ವರೆಗೆ ಆಳಿದರು. ಮುಂದೆ ಸುಮಾರು ೧೦೦ ವರ್ಷಗಳ ಇತಿಹಾಸವು ಚೆನ್ನಾಗಿ ಗೊತ್ತಾಗಿರುವುದಿಲ್ಲ. ಆಗ ಕ್ಷತ್ರಪರೆಂಬ ಪರದೇಶಸ್ಥರು ಪ್ರಬಲವಾದಂತೆ ತೋರುತ್ತದೆ, ಮುಂದೆ ೫ನೆಯ ಶತಮಾನದಲ್ಲಿ ಚಾಲುಕ್ಯರು ತಲೆಯೆತ್ತಿದರು. ಈ ಚಾಲುಕ್ಯರು ಮುಂದೆ ಇಡೀ ಕರ್ನಾಟಕವನ್ನಲ್ಲ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡದ್ದರಿಂದ ಕರ್ನಾಟಕದ ವೈಭವದ ಇತಿಹಾಸವು ಅಲ್ಲಿಂದ ಪ್ರಾರಂಭವಾಗುತ್ತದೆ. ಆದರೆ ಅವರ ಇತಿಹಾಸವನ್ನು ಪ್ರಾರಂಭಮಾಡುವ ಮೊದಲು ಕದಂಬ, ಗಂಗರ ವಿಷಯವಾಗಿ ಸಂಕ್ಷೇಪವಾಗಿ ಹೇಳುವ ಅವಶ್ಯವಿದೆ, ಏಕೆಂದರೆ ಇವು ಕರ್ನಾಟಕಕ್ಕೆ ಎಲ್ಲಕ್ಕೂ ಹಳೆಯ ರಾಜವಂಶಗಳು.
ಕದಂಬ ವಂಶಾವಳಿ*
ಮಯೂರಶರ್ಮ | ಮಯೂರವರ್ಮ | ||||||||||||||
ಕಾಕುಸ್ಥವರ್ಮ (೪ ನೇ ಶತಮಾನ) | |||||||||||||||
ಶಾಂತಿವರ್ಮ | ಕೃಷ್ಣವರ್ಮ | ||||||||||||||
ಮೃಗೇಶವರ್ಮ | ವಿಷ್ಣುವರ್ಮ | ||||||||||||||
ರವಿವರ್ಮ | ಭಾನುವರ್ಮ | ಶಿವರಥ | ಸಿಂಹವರ್ಮ | ||||||||||||
ಹರಿವರ್ಮ | ಕೃಷ್ಣವರ್ಮ | ||||||||||||||
ದೇವವರ್ಮ | |||||||||||||||
- *ಈ ವಂಶಾವಳಿಯಲ್ಲಿ ಮುಖ್ಯವಾದ ಹೆಸರುಗಳನ್ನು ಮಾತ್ರವೇ ಕೊಟ್ಟಿರುತ್ತದೆ. ೪೮ಕರ್ನಾಟಕ ಗತವೈಭವ
ಕದಂಬರು
ಕದಂಬರ ವಿಷಯವಾಗಿ ಗೊತ್ತಿರುವ ಸಂಗತಿಗಳೇನಂದರೆ- ಇವರ ಮೂಲ ಪುರುಷನು ಮಯೂರಶರ್ಮನು. ಇವನು ಸೊರಬ ತಾಲುಕ ಸ್ಥಾನಗುಂಡೂರ ಅಥವಾ ತಾಳಗುಂದ ಎಂಬಲ್ಲಿಯ ಬ್ರಾಹ್ಮಣನು, ಇವನು ಕಂಚಿಗೆ ವೇದಾಧ್ಯಯನಕ್ಕಾಗಿ ಹೋದಾಗ ಅಲ್ಲಿಯ ಪಲ್ಲವ ಅರಸನಿಂದ ಅವಮಾನಿತನಾದುದರಿಂದ ಕ್ಷತ್ರಿಯ ಧರ್ಮವನ್ನು ಸ್ವೀಕರಿಸಿ ಬನವಾಸಿಯಲ್ಲಿ ಕದಂಬರಾಜ್ಯವನ್ನು ಸ್ಥಾಪಿಸಿದನು. ಈ ಕದಂಬರು ೩ ನೆಯ ಶತಮಾನದಿಂದ ೬ನೆಯ ಶತಮಾನದವರೆಗೆ ಸ್ವತಂತ್ರವಾಗಿ ಆಳಿದರು. ಈ ವಂಶದಲ್ಲಿ ಕಾಕುಸ್ಥವರ್ಮ, ಕೃಷ್ಣವರ್ಮ ಮುಂತಾದ ಅರಸರು ಪ್ರಬಲರಾಗಿದ್ದರು. ಮುಂದೆ ಚಾಲುಕ್ಯರು ೬ನೆಯ ಶತಮಾನದಲ್ಲಿ ಇವರ ಸ್ವಾತಂತ್ರವನ್ನು ಹರಣ ಮಾಡಿದರು. ಮುಂದೆ ಈ ಕದಂಬರು ಅನೇಕ ಶತಮಾನಗಳವರೆಗೆ ಮಾಂಡಲಿಕ ಅರಸರಾಗಿ ಅಳಿದರು.
ಗಂಗ ವಂಶಾವಳಿ*
ಮಾಧವ-ಕೊಂಗುಣಿವರ್ಮ (೧೦೩) | ||
↓ | ||
ಅವನೀತ (೪೩೦-೪೮೨) | ||
↓ | ||
ದುರವಿನೀತ (೪೮೨-೫೧೭) | ||
↓ | ||
ಶಿವಮಾರ (೬೭೦-೭೧೩) | ||
↓ | ||
ಶ್ರೀ ಪುರುಷ (೭೨೬-೭೭೬) | ||
↓ | ||
ರಾಜಮಲ್ಲ (೮೭೦-೯೦೭) | ||
↓ | ||
ಬೂತುಗ (೯೩೮-೯೫೩) | ||
↓ | ||
ಮಾರಸಿಂಹ (೯೬೧-೯೭೪) | ||
↓ | ||
ರಾಚಮಲ್ಲ (೯೭೪-೯೮೪ |
- *ಈ ವಂಶಾವಳಿಯಲ್ಲಿ ಮುಖ್ಯವಾದ ಹೆಸರುಗಳನ್ನು ಮಾತ್ರವೇ ಕೊಟ್ಟಿರುತ್ತದೆ.
ಗಂಗರು
ಮೈಸೂರ ಸರಕಾರದವರು ತಮ್ಮ ಪ್ರಾಂತದ ಶಿಲಾಲಿಪಿಗಳನ್ನು ಹೊರಗೆಡುಹಿರುವುದರಿಂದ, ಆ ಪ್ರಾಂತದಲ್ಲಿ ಹಿಂದಕ್ಕೆ ಆಳಿದ ಗಂಗವಂಶದ ವಿಷಯವಾಗಿ ನಮಗೆ ಹೆಚ್ಚಿಗೆ ಸಂಗತಿಗಳು ಗೊತ್ತಾಗಿವೆ. ಅವರು ಸಾರ್ವಭೌಮ ಅರಸರಲ್ಲ ದಿದ್ದರೂ ಅವರಲ್ಲಿ ಅನೇಕ ಪ್ರಸಿದ್ದ ರಾಜರು ಆಳಿರುವರು. ಗಂಗರು ಮೈಸೂರಿನಲ್ಲಿ ೨ನೆಯ ಶತಮಾನದಿಂದ ೧೧ನೆಯ ಶತಮಾನದವರೆಗೆ ಆಳಿದರು. ಅವರ ರಾಜ್ಯಕ್ಕೆ ಗಂಗವಾಡಿ ಎಂದು ಹೆಸರು. ಕೋಲಾರ, ತಳಕಾಡುಗಳೇ ಅವರ ರಾಜಧಾನಿಗಳು, ಮಾಧವ ಅಥವಾ ಕೊಂಗುಣಿವರ್ಮನು ಇವರ ಮೂಲಪುರುಷನು. ಈ ವಂಶದಲ್ಲಿ ಹರಿವರ್ಮ, ಅವನೀತ, ದುರ್ವಿನೀತ, ಶಿವಮಾರ, ಶ್ರೀ ಪುರುಷ ಮುಂತಾದ ಅರಸರು ಪ್ರಬಲರಾಗಿದ್ದರು. ಅವರಲ್ಲಿ ಶ್ರೀ ಪುರುಷನೇ ಶ್ರೇಷ್ಠನು (೭೨೬-೭೭೬). ಈ ವಂಶದಲ್ಲಿ ಅನೇಕ ಅರಸರು ಗ್ರಂಥಕರ್ತರಾಗಿದ್ದರು. ಆ ವಿಷಯವನ್ನು ಮುಂದೆ ಹೇಳುವೆವು. ರಾಚಮಲ್ಲನೆಂಬ ಈ ವಂಶದ ಅರಸನ ಕಾಲದಲ್ಲಿ ಅವನ ಮಂತ್ರಿಯಾದ ಚಾಮುಂಡರಾಯನು ಶ್ರವಣಬೆಳುಗುಳದ ಅತ್ಯಂತ ಭವ್ಯವಾದ ಗೋಮಟೇಶ್ವರ ಎಂಬ ಜೈನಮೂರ್ತಿಯನ್ನು ೯೮೩ ರಲ್ಲಿ ಸ್ಥಾಪಿಸಿ ದನು. ಈ ಗಂಗರು ನಡುನಡುವೆ ಚಾಲುಕ್ಯರಾಷ್ಟ್ರಕೂಟರಿಗೆ ಮಾಂಡಲಿಕರಾಗಿದ್ದರು. ಮುಂದೆ ಈ ರಾಜ್ಯವು ಚೋಳರಾಜ್ಯದಲ್ಲಿ ಲೀನವಾಯಿತು.