ಕವಿಯ ಸೋಲು
UNIVERSAL LIBRARY OU_202315 LIBRARY
UNIVERSAL
ಕವಿಯ ಸೋಲು
ಎಂ. ಆರ್. ಶ್ರೀನಿವಾಸಮೂರ್ತಿ
ಬೆಲೆ ೧೨ ಆಣೆ
ಎಲ್ಲ ಹಕ್ಕುಗಳನ್ನೂ ಕಾದಿಡಲಾಗಿದೆ
ಬೆಂಗಳೂರು ಸಿಟಿ ಬೆಂಗಳೂರು ಪ್ರೆಸ್ಸಿನಲ್ಲಿ ಸೂಪರಿಂಟೆಂಡೆಂಟರಾದ ಟಿ. ಸುಬ್ರಹ್ಮಣ್ಯ ಅಯ್ಯರವರಿಂದ ಮುದ್ರಿಸಲ್ಪಟ್ಟಿತು.
೧೯೩೩
ಅನುಕ್ರಮಣಿಕೆ
[ಸಂಪಾದಿಸಿ]ವಿಷಯ |
ಪುಟಗಳು |
೧ | ೧ |
೨ | ೨ |
೩ | ೧೭ |
೪ | ೨೦ |
೫ | ೨೨ |
೬ | ೩೩ |
೭ | ೩೭ |
೮ | ೩೯ |
೯ | ೪೫ |
೧೦ | ೪೭ |
೧೧ | ೬೦ |
೧೨ | ೬೩ |
೧೩ | ೬೭ |
೧೪ | ೬೯ |
೧೫ | ೭೧ |
೧೬ | ೭೪ |
೧೭ | ೮೫ |
ಕವಿಯ ಸೋಲು
ದೇವರಿಗೆ
[ಸಂಪಾದಿಸಿ]ಅಂತರಂಗದ ಶಕ್ತಿ
ವಿಶ್ವವಾಳುವ ಶಕ್ತಿ;
ಅಂತರಂಗದ ದೀಪ್ತಿ
ವಿಶ್ವ ಬೆಳಗುವ ದೀಪ್ತಿ–
ನಡುವಿರುವ ಮಾಯಮೋಹನನೆಲ್ಲ ಕಳಚಯ್ಯ.
ಸ್ಧೂಲ ಸೂಕ್ಷ್ಮದ ಭಾರ
ಪಂಚಭೂತದ ಭಾರ,
ಕಾಲಪಾಶದ ಉರುಲು
ಪಂಚೇಂದ್ರಿಯಗಳುರುಲು-
ಆತ್ಮಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ.
ಬ್ರಹ್ಮಾಂಡ ಕೋಟಿಗಳು
ಪ್ರಳಯಕ್ಕೆ ತುತ್ತಾಗಿ
ಬ್ರಹ್ಮದಲಿ ಅಡಗಿರಲಿ ;
ಮೇಲೆ ಹಾರುವ ಶಕ್ತಿ
ಸರ್ವ ಶಕ್ತಿಗಳೆನಗೆ, ಸಹನೆ ನಿನಗಿರಲಯ್ಯ.
ತತ್ವಜ್ಞಾನಿ
[ಸಂಪಾದಿಸಿ]ಜಟಕಾ ಹೊಡೆಯುವ ಕೆಲಸ ಬಿಟ್ಟು
ಹೆಂಡಿರ ಮಕ್ಕಳ ಎಲ್ಲರ ಬಿಟ್ಟು
ತಟ್ಟನೆ ಬಲು ವೈರಾಗ್ಯವ ತೊಟ್ಟು
ನಡೆದೇ ನಡೆದನು ಜಟಕಾ ಸಾಬ
ಸಾಬಿಯು ಜನರಲ್ಲಿ ರಂಗು ಗುಲಾಬಿ
ಹೆಂಡಿರು ಮಕ್ಕಳು ಹುಡುಕಾಡಿದರು
ಪೇಟೆಯ ಸಾಸಿಗಳಲೆದಾಡಿದರು.
"ಅಯ್ಯೋ ! ಹೋದನೆ ನಮ್ಮಯ ಸಾಬಿ !
ಎಲ್ಲರ ಮೆಚ್ಚಿನ ಜಟಕಾ ಸಾಬಿ !
ಬೀಡಿಯ ಕುಡಿಯದ ಒಳ್ಳೆಯ ಸಾಬಿ !
ಎಂದೆಲ್ಲಾ ಜನ ಹಲುಬುತ್ತಿರಲು
ಊರೇ ಸಾಜಿಯ ಮಾತಾಗಿರಲು
ಕಣ್ಮರೆಯಾದನು ಜಟಕಾ ಸಾಬಿ
ಸಾಬಿಯ ಜನರಲಿ ರಂಗು ಗುಲಾಬಿ.
ತಾರಾಗಡಣದಿ ಬಲು ಹುಡುಕುತ್ತ
ಭೂಮಿಯು ಸುತ್ತಿತು ಸೂನ ಸುತ್ತ
ಹುಡುಕೇ ಹುಡುಕಿತು ಸುತ್ತೇ ಸುತ್ತಿತು
ಒಂದೆರಡಾಯಿತು, ನಾಲ್ಕೂ ಆಯಿತು,
ಮಡಿಲೊಳಗಿರುವಾ ಕುಲದೀಪಕನ
ಬಾಳ್ಮೆಯ ಕಡಲಿನ ಸುಖ ಚಂದ್ರಮನ
ಕಡುದುಕ್ಕದಿ ಊರೆಲ್ಲಾ ತೊಳಲಿ
ಹುಡುಕುವ ಮಾತೆಯ ರೀತಿಯಲ್ಲಿ,
ಕಾಣದೆ ಹೋದನು ನಾಲ್ಕೇ ವರ್ಷ
ಬಂದಾಗುಕ್ಕಿತು ಎಲ್ಲರ ಹರ್ಷ,
ಎಲ್ಲಡಗಿದ್ದನೋ ! ಏಕಡಗಿದ್ದನೋ !
ಬಲ್ಲವರುಂಟೇ ಸಾಬಿಯ ಮರ್ಮ,
ಒಂದಾಗಿದ್ದುದು ಬಲು ಕಸಿಮಾಡಿ
ಚಂದದಿ ಬೆಳಸಿದ ಮೊಳದ ಬಾಡಿ
ಮೈಮೇಲಿದ್ದುದು ಕಾವಿಯ ಬಟ್ಟೆ
ಕೈಯಲ್ಲಿದ್ದುದು ಭಿಕ್ಷದ ತಟ್ಟೆ
ಕೊರಳು ಮಣಿಗಿಣಿಗಳು ಏನಿಲ್ಲ
ಬೂಟಾಟದ ಚಿಹ್ನೆಗಳೆಲ್ಲ
ಸಂಸಾರದ ಜಂಜಾಟವ ಹೊಲ್ಲ
ಹೊನ್ನನು ಹೆಣ್ಣನು ಮಣ್ಣನು ಒಲ್ಲ
ಕುಹಕ ಕುವಾಕ್ಯಗಳೊಂದೂ ಸಲ್ಲ
ಶಾಂತಿಯ ಕಾಂತಿಯ ಮೂರುತಿಯವನು
ಸಾತ್ವಿಕ ಸಾಕಾರದ ಘನನವನು
ದಾರಿಯ ತೋರ್ಪಾ ಜ್ಯೋತಿರ್ಲತೆಯು
ಹೊನ್ನನು ಮಾಳ್ಪಾ ಪರುಷದ ಮಣಿಯು.
ತತ್ವನ ಹೇಳಲು ಚೌಕದಿ ನಿಂತ
ಹೊಳೆದವು ತತ್ವದ ಸಾಲಿನ ದಂತ
"ಇವನೊಬ್ಬನು ಹೊಸಬನು ಮೌಲಾನ
ಉತ್ತರ ದೇಶದ ಘನ ಮೌಲಾನ
ಬಾಯಿಗೆ ಬರುವುದು ಎಲ್ಲ ಕುರಾನ
ಜಗದೊಳಗಿನ ಸಿದ್ದಾಂತಗಳೆಲ್ಲ
ಈತನ ಕೈಯಲ್ಲಿ ಸಕ್ಕರೆ ಬೆಲ್ಲ;
ಕನ್ನಡ ಬಲ್ಲನು ಕನ್ನಡ ಜಾಣ
ಇವನೇ ಕುಮತ ಧ್ವಂಸಕ ಬಾಣ
ಇಸ್ಲಾಮಿನ ಸಂತಸ ಸುಮಬಾಣ
ಎಂದೆಲ್ಲಾ ಜನ ಬಳಿ ಸೇರಿದರು
ನೆರೆ ಕಿಕ್ಕಿರಿಯುತ ಗುಡಿ ಕಟ್ಟಿದರು
ಬಿಡುಗಣ್ಣಿಂದವನಂ ನೋಡಿದರು
ನಾಲಗೆ ತಣಿವನ್ನಂ ಹೊಗಳಿದರು.
ಕಣ್ಣದು ತಿಳಿವಿನ ಮಣಿದಂತಿಹುದು
ಮುಖವದು ಮೋಕ್ಷದ ಫಲದಂತಿಹುದು
ದಾಡಿಯ ತತ್ವದ ಮಳೆಯಂತಿಹುದು
ನುಡಿಯಾನಂದದ ಹೊನಲಂತಿಹುದು
ಶಾಂತಿಯ ದಾಂತಿಯ ಮೃದುವಾಣಿಯಲಿ
ಸರಸ ಸುಗೀತದ ನುಡಿ ಚಾಳ್ಮೆಯಲಿ
ತತ್ವಜ್ಞಾನಿಯು ಹೇಳುತ ನಿಂತ
ತತ್ವನ ಹೇಳುತ ಚೌಕದಿ ನಿಂತ.
"ಘನತರ ತತ್ವನ ಹೇಳುವೆ ನಿಮಗೆ
ಅಲ್ಲಾ ಕೊಡುವನು ಸೌಖ್ಯವ ನಿಮಗೆ
ಬೀದಿಯ ಮಾತೆಂದರಿಯಲು ಬೇಡಿ
ಘನ ತತ್ವಾಮೃತ, ಸವಿಯನ್ನು ನೋಡಿ,
ಹಿಂದಿನ ಕತೆಯನು ಹೇಳುವೆ ನಿಮಗೆ
ಇಂದಿನ ಗತಿಯದು ತಿಳಿವುದು ನಿಮಗೆ
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಜಗವನು ಉಳಿಸುವ ಉನ್ನತ ಧರ್ಮ,
ಕಡಿದಾಡುವ ಬಡಿದಾಡುವ ಜನರ
ಮಕ್ಕಳ ಹೆಣ್ಣಳ ಕೊಲ್ಲುವ ಜನರ
ಕಲ್ಲೂ ಮಣ್ಣೂ ಪೂಜಿಪ ಜನರ
ಸಭ್ಯರ ಮಾಡಲು ಒಟ್ಟಿಗೆ ಮಾಡಲು
ದೇವರು ಯೋಚಿಸಿ ಹೊರಟನು ಮುಂದೆ
ಒಡನೆಯೆ ಸೈತಾನ್ ಹೊರಟನು ಹಿಂದೆ
ದೇವರು ಸಂಕಲ್ಪಿಸಿ ಹೊರಟಿರಲು
ಬೆನ್ನಲೆ ಸೈತಾನನು ಬರುತಿರಲು
ದೇವರು ಕೇಳಿದ ಜೋದ್ಯವಪಟ್ಟು
ಮನದಲಿ ಕರುಣವ ಸಂಕಟಪಟ್ಟು
'ಎಲ್ಲಿಗೆ ಪಯಣವು ? ಏನುದ್ದೇಶ ?
ಆರಿಗೆ ಹೂಡಿದೆ ಸರ್ವ ವಿನಾಶ ?'
ಸೈತಾನ್ ಎಂದನು ನಗೆ ಸೂಸುತ್ತ
ವಕ್ರದ ನೋಟವ ನೆರೆ ಬೀರುತ್ತ
'ನಿನ್ನಯ ಕೆಲಸಕೆ ಅರಬೀಸ್ಥಾನ
ಎನ್ನದು ಕೆಲಸಕೆ ಹಿಂದೂಸ್ಥಾನ'
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ"
ಈ ಮಾತನ್ನು ಕೇಳಿದ ಕೆಲ ಜನರು
"ಇವನೊಬ್ಬನು ಹೆದ್ದಾಡಿದ ಸಾಬಿ
ದಾಡಿಯು ಬೆಳೆದರೆ ಬೆಳೆವುದೆ ಬುದ್ದಿ
ಸಾಬಿಯ ಬುದ್ದಿ, ಕತ್ತೆಯ ಲದ್ದಿ”
ಎಂದೆಲ್ಲಾ ಕೋಪದಿ ಕೂಗಿದರು.
ಆದುದು ಗಜಬಿಜೆಯಾಗುಂಪಿನ
ಜ್ಞಾನಿಯು ಹೇಳಿದ ಸಂತೋಷದಲಿ
"ದಾಡಿಯ ಹಳಿಯದೆ ಬೆಳೆಯಿಸಿರಣ್ಣ
ದಾಡಿಯ ಮೋಕ್ಷಕೆ ಒಯ್ಯುವುದಣ್ಣ
ದಾಡಿಯೆ ತತ್ವಜ್ಞಾನಿಯು ಗುರುತು
ದಾಡಿಯ ವೀರರ ಧೀರರ ಗುರುತು
ಬಾಡಿಯೆ ಸಣ್ಣಳ ಮೆಚ್ಚಿನ ಗುರುತು
ದಾಡಿ ಏಕಚ್ಚತ್ರದ ಗುರುತು ;
ಮೀಸೆಯ ಬೋಳಿಸಿ ಗಡ್ಡ ಬೋಳಿಸಿ
ಶೌರ್ಯವ ಧೈರ್ಯವ ಎಲ್ಲಾ ಬೋಳಿಸಿ
ಮಿಣಮಿಣ ಮೆರೆಯುವ ಹೇಡಿಗಳನ್ನು
ನಮ್ಮಲಿ ಕೂಡರು ಗೊಂಬೆಗಳನ್ನು.
ಕೇಳಿರಿ, ನಿಮ್ಮಯ ಪೂರ್ವದ ಜನಗಳು
ವೇದವ್ಯಾಸರು ವಾಲ್ಮೀಕಿಗಳು
ದಾಡಿಯ ಬೆಳೆಯಿಸ ಕವಿತೆಯು ಬಂತು
ಕವಿತೆಯ ಜತೆಯಲಿ ಘನತೆಯು ಬಂತು
ಕವಿತೆಯು, ಘನತೆಯು ಲೋಕದಿ ನಿಂತು
ಇಂದೂ ಮನ್ನಣೆ ಪಡೆಯುತ್ತಿಹುದು
ಎಂದೆಂದೂ ಮನ್ನಣೆ ಪಡೆಯುವುದು,
ಹಿಂದಿನ ಋಷಿಗಳು ವನವಾಸಿಗಳು
ದಾಡಿಯ ಬೆಳೆಯಿಸೆ ಮಾತಸಸಿಗಳು
ದಾಡಿಗೆ ಈಗಲು ಬೆಲೆಯುಂಟಣ್ಣ
ದಾಡಿಯೆ ಶೀಲದ ಧ್ವಜಪಟವಣ್ಣ
ದಾಡಿಯ ಹಳಿಯದೆ ಬೆಳೆಯಿಸಿರಣ್ಣ
ದಾಡಿಯ ಮೋಕ್ಷಕೆ ಒಯ್ಯುವುದಣ್ಣ.”
ಈ ಮಾತನು ಕೇಳಿದ ಕೆಲ ಜನರು
ಆ ಜ್ಞಾನಿಯ ದುರ ದುರ ನೋಡಿದರು
ಹುಲ್ಲೆಗಳೆಲ್ಲಾ ಹುಲಿಯನು ತಿನ್ನಲು
ಗಿಳಿಗಳ ಬಳಗವು ಗಿಡುಗನ ತಿನ್ನಲು
ಹವಣಿಪ ತೆರದಲಿ ನೋಡಿದರವರು.
"ಇವನೇ ಆಗಿನ ಜಟಕಾ ಸಾಬಿ
ಅವನೆ ಈಗಿನ ತತ್ವಜ್ಞಾನಿ.
ಜಟಕಾ ಹೊಡೆಯಲು ಹೋಗಿ ಸಾಬಿ
ನೀನೇ ಲೋಕದಿ ಬಲು ಅಜ್ಞಾನಿ”
ಎಂದಾ ದುರುಳರು ಕೂಗಾಡಿದರು.
ಶಾಂತಿಯ ಸತ್ಯದ ನಸುನಗೆಯಲ್ಲಿ
ತಮದ ತುರಂಗವನೋಡಿಸುತಲ್ಲಿ
ಎಲ್ಲರ ಮೆಚ್ಚಿನ ಒಳ್ನುಡಿಯಲ್ಲಿ
ಆ ಜ್ಞಾನಿಯು ಉತ್ತರ ಹೇಳಿದನು
ತಿಳಿವಿನ ಹೊನಲನು ನೆರೆ ಹರಿಸಿದನು.
"ಹಗಲಿರುಳೆನ್ನದೆ ದುಡಿದೂ ದುಡಿದು
ಹೆಂಡಿರ ಮಕ್ಕಳ ಸಾಕುವನರಿದು
ಜಟಕಾ ಸಾಬಿಯ ಮಾತೇಕಣ್ಣ
ತಿಳಿಯದೆ ಮಾತನು ಆಡುವಿರಣ್ಣ.
ಜಟಕಾ ಹೊಡೆಯುವ ಸಾಬಿಯೆ ರಾಜ
ಆರಿಗು ಸಗ್ಗದ ಸಾಬಿಯೆ ಸಾಜ
ಹಂಗಿಲ್ಲದ ಬಾಳ್ಳೆಯೆ ಬಲು ತಾಜ
ತೇಜೆಯ ಹೂಡುವ ತೇಜದಿ ಬಾಳುವ
ರಾಜನ ಪದವಿಯ ಬದಿಗೊತ್ತಾಳುವ
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ,
ಪಾಸನು ಮಾಡಿದ ಜಾಣರು ನೀವು
ಹಂಗಿನ ಭಿಕ್ಷವ ಬೇಡುವ ನೀವು
ಮಾನವ ತಿಳಿಯದೆ ಮಾನವ ತೊರೆದು
ಬಣ್ಣನೆ ಮಾತನು ಕಲಿತಾಡುವಿರಿ
ಸಾಜನ ರಾಜನ ಬರಿದೇಳಿಸಿರಿ,
ದುಡಿವುದೆ ಮಾನವು ಬೇಡಪಮಾನ
ಒಮ್ಮನದಿಂ ದುಡಿದವ ಸುಲ್ತಾನ
ಸುಮ್ಮನೆ ಕುಳಿತರೆ ಬರಿಯಪಮಾನ
ಅವರನ್ನು ಹಿಡಿದುಂಬುವ ಸೈತಾನ.
ಜಟಕಾ ಚಕ್ರವ ಸಾಬಿಯು ಹಿಡಿದು
ಸೈತಾನನ ಸೋಮಾರಿಯ ಕಡಿದು
ಅಲ್ಲಾ ಮೆಚ್ಚಲು ಸೈ ಸೈ ಎನಲು
ತಾನದಿ ಗಾನದಿ ನೆರೆ ಬದುಕೆನಲು
ಬದುಕುವ ಜಟಕಾ ಹೊಡೆಯುವ ಸಾಬಿ
ಮೆಚ್ಚುವಳವನನು ಕಮಲದ ಬೀಬಿ.
ತುರುಕರ ಮಾತಿಗೆ ಸೈತಾನ್ ಬಾರ
ಆವಕೋಲುಮೆಗೆ ಕೊಡುವನು ಬಂಗಾರ
ಬಾಳಿನ ನಾಡಿನ ಮೇಲಧಿಕಾರ
ನಿಮಗೇನಿರುವುದು ಬರಿಯಂಗಾರ !
ಹಿಂದಿನ ಜಟಕ ಹೊಡೆಯುವ ಸಾಬಿ
ಇಂದಿನ ಉತ್ತಮ ತತ್ವಜ್ಞಾನಿ;
ಜಟಕಾ ಹೊಡೆದವ ಸುಲ್ತಾನಾಗುವ
ಸುಮ್ಮನೆ ಕುಳಿತವ ಅವನಾಳಾಗುವ,
ಓದಿದ ಚಾಣರು! ಹೇಳುವುದೇನು
ಓದಿತು ತಿಳಿ ನೀವೋದಿದರೇನು ?
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ,
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ,
ಒಂದೇ ದೇವರು, ಒಂದೇ ಮತವು
ಸರ್ವ ಸಮರ್ಪಕ ತುರುಕರ ಮತವು
ನೀವೇ ಸೇರಿ ತುರುಕರ ಮತಕೆ
ಈ ಮತ ಬರುವುದು ನಿಮ್ಮಭಿಮತಕೆ.?
ಗುಂಪಿನ ತುಂಟರು ಆರೂ ಕೆಲರು
"ಹೆಂಡಿರ ಮಕ್ಕಳ ಬಿಟ್ಟೋಡಿದವ !
ತತ್ವನ ಹೇಳುವ ಬಲು ಭಂಟಿನಿವ!
ತತ್ವವ ಕೇಳುವ ಹೆಡ್ಡರು ನಾವು
ನಡಯಿರೋ ಕೆಲಸಕೆ ಹೋಗುವ ನಾವು "
ಎಂದಾಜ್ಞಾನಿಯ ಜರಿದಾಡಿದರು.
ಶಾಂತಿಯ ಸತ್ಯದ ನಸುನಗೆಯಲ್ಲಿ
ಮನಸನು ಸೆಳೆಯುವ ಹೊಸ ಬಗೆಯಲ್ಲಿ
ಅವರನ್ನು ಕರೆದನು ತತ್ವಜ್ಞಾನಿ
ಸೈರಣ ಸಮತಾ ಭಾವದ ಮಾಸಿ.
"ಉತ್ತರ ಹೇಳುವೆ ಹೋಗದಿರಣ್ಣ
ಆಡಿದ ಮಾತಿಗೆ ಮುನಿಸಿಲ್ಲಣ್ಣ
ತತ್ವಜ್ಞಾನಿಗೆ ಮುನಿಸೇ ಕಣ್ಣ?
ಇದ್ದರೆ ಆಗದು ನಮ್ಮಯ ಕೆಲಸ.
ಲೋಕವ ಗೆಲ್ಲುವ ಧರ್ಮದ ಕೆಲಸ.
ಹೋಗುವ ಹೋದರೆ ಹೋಗದು ಗಾಡಿ
ಹೊಟ್ಟೆಗೆ ಹಾಕುವ ಜಟಕಾ ಗಾಡಿ
ಹಿರಿಮಗ ದುಡಿವನು ಕಾಸು ತರವನ್ನ,
ಅಮ್ಮನ ತಮ್ಮನ ನೆರೆ ಪೋಷಿಸಲು
ನೀ ಹೋದರೆ ಉಳಿಯುವುದೇನಣ್ಣ?
ಜಟಕಾ ಸಾಬಿಯ ಜರಿಯದಿರಣ್ಣ
ಜಟಕಾ ಸಾಬಿಯು ಹುರುಪಿನ ಟಗರು
ಜಗವನು ಗೆಲ್ಲುವ ಕಾಳಗ ಟಗರು
ಅವನನು ಏಳಿಸಿ ಫಲವೇನಣ್ಣ
ಬದುಕುವ ಮಾತನ್ನು ಹೇಳುವೆನಣ್ಣ
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಲ್ಲಿವಾಸಿಗಳಾಗಿ, ”
"ತತ್ವದ ಮಾತನ್ನು ಹೇಳುತಲಿದ್ದೆ
ಸೈತಾನ್ ಹೊರಟುದ ಹೇಳುತಲಿದ್ದೆ,
ಕೋಪವ ಮಾಡದೆ ಕೇಳಿರಿ ನೀವು
ಸತ್ಯಕೆ ತಾಳ್ಮೆಯ ತಾಳಿರಿ ನೀವು
ದೇವರು ಅರಬೀಸ್ಥಾನಕ್ಕೆ ಹೋಗಲು
ಸೈತಾನ್ ಬಂದನು ಇಲ್ಲಿಯೇ ನೆಲಸಲು
ಬೂದಿಯನೆರಚುತ ಬಣ್ಣವ ಬಳಿಯುತ
ಮಟ್ಟಿಯ ತಳೆಯುತ ಸೈತಾನ್ ಊದಲು
ಮಂತ್ರವ ಹೇಳುತ ಬಳಗವ ಕೂಗಲು
ತೆಗೆದರು ಶಿವದಾರವ ಜನಿವಾರ
ಹೊರಟರು ಸೈತಾನಿನ ಪರಿವಾರ
ಕಲ್ಲನು ಮಣ್ಣನು ಹೂಡಿದಲ್ಲಿ
ಬರಿ ಜಗಳವ ತಂದಿಕ್ಕಿದಲ್ಲಿ
ಇಲ್ಲದ ಭೇದವ ಮಾಡಿದರಿಲ್ಲಿ
ನಿಮ್ಮಯ ಸತ್ವವ ಹೀರಿದರಿಲ್ಲಿ
ಬೆಂಡಸು ಹೆಣವನು ತೋರಿದರಿಲ್ಲಿ
ಪರಮಾತ್ಮನ ಮರೆಮಾಡಿದರಿಲ್ಲಿ
ಸೈತಾನ್ ಮಾಡಿದ ಮೋಸವ ತಿಳಿದು
ನಿಮ್ಮಯ ಮನದಾ ಮೋಹನ ಕಳೆದು"
ಎಂದಾ ಜ್ಞಾನಿಯು ಹೇಳುತ್ತಿರಲು
ಜನರೆಲ್ಲಾ ರೇಗುತ ಕೂಗಿಡಲು
ಹಿಡಿದರು ಅವನನ್ನು ಪೊಲೀಸ್ ಜನರು-
ನ್ಯಾಯಸ್ಥಾನಕೆ ಎಳೆದಾಡಿದರು.
ನ್ಯಾಯಾಧೀಶರ ಸಮ್ಮುಖದಲ್ಲಿ
ತತ್ವಜ್ಞಾನಿಯು ಕುಳಿತಿಹನಲ್ಲಿ
ಏನೇನೆಂದರು ಮಾತಾಡದೆಯ
ಆರೇನೆಂದರು ತಾ ಕೇಳದೆಯೇ
ಕುಳಿತಿರುವನು ಗಾಢ ಸಮಾಧಿಯಲ್ಲಿ
ಸಾತ್ವಿಕ ಕಳೆಯನ್ನು ನೆರೆ ಬೀರುತಲಿ.
ಹೇಳುವ ಮಾತನು ಪೋಲೀಸ್ ಜನರು
ದೂರುವ ಮಾತನು ಗುಂಪಿನ ಜನರು
ನ್ಯಾಯಾಧೀಶನು ಕೇಳುತಲಾಗ
ಕೊಟ್ಟನು ತಿಂಗಳು ಶಿಕ್ಷೆಯನಾಗ.
ತತ್ವಜ್ಞಾನಿಯು ಕಣ್ಣನು ತೆರೆದು
ಜ್ಞಾನದ ಬೆಳಕಿನ ತೆರೆಯನು ತೆರೆದು
ಹೊರಡಲು, ಧರ್ಮದ ಮೂರುತಿ ಎಂದನು
“ ತಿಂಗಳು ಶಿಕ್ಷೆಯ ಕೊಟ್ಟಹೆನೀಗ
ಹೇಳುವ ಮಾತನು ಕೇಳುವೆನೀಗ
ಆಡುವುದಿದ್ದರೆ ನೀನಾಡುವುದು,
ತತ್ವಜ್ಞಾನಿಯು ನಸುನಗುತೆಂದನು
"ಧರ್ಮದ ಮೂರುತಿ ! ನಾನೇನೆಂಬೆನು
ಸತ್ಯವ ನುಡಿದರೆ ಜೈಲಿಗೆ ಹಾಕಿ
ಮಧ್ಯವ ನುಡಿದರೆ ಬಿರುದನ್ನು ಹಾಕಿ ;
ಲೋಕವೆ ಕೆಟ್ಟಿತು ಒಲು ದುಷ್ಯಾಲ
ಧರ್ಮಕೆ ಬಂದುದು ಬಲು ಬರಗಾಲ,
ಸತ್ಯದ ಮಾತಿಗೆ ಶಿಕ್ಷೆಯದುಂಟೆ ?
ಸತ್ಯವ ತಡೆಯುವ ಗೋಡೆಗಳುಂಟೆ ?
ಸತ್ಯವ ಬಿಗಿಯುವ ಸರಳುಗಳುಂಟೆ ?
ಸತ್ಯವ ಸೋಲಿಪ ಧೀರರದುಂಟೆ ?
ಲೋಕವೆ ದೊಡ್ಡದು ಬಂದೀಖಾನೆ
ಸೈತಾನ್ ಮಾಡಿದ ಬಂದೀಖಾನೆ,
ತತ್ವವ ತಿಳಿದರೆ ಗೋಡೆಗಳುರುಳಿ
ಪಂಚೇಂದ್ರಿಯ ಬಂಧನ ತಾನುರುಳಿ
ಮನಸಿನ ಮದಗಜ ನೆಲದಲ್ಲಿ ಹೊರಳಿ
ಬಿಗಿಸಿದ ಸರಳದು ಸುತ್ತಲು ಅರಳಿ
ಮೋಕ್ಷವೆ ಎದುರಿಗೆ ನಿಂದಿಹುದಣ್ಣ
ತುರುಕರ ಮತವೇ ಶಾಶ್ವತವಣ್ಣ;
ಒಂದೇ ದೇವರು, ಒಂದೇ ಮತವು
ಸರ್ವ ಸಮರ್ಪಕ ತುರುಕರ ಮತವು.
ಬದುಕುವ ಮಾತನ್ನು ಹೇಳುವೆನಣ್ಣ
ತುರುಕನು ಹೇಳಲು ಕೇತೇನಣ್ಣ
ಸತ್ಯವೆ ದೇವರು ಸತ್ಯವ ಹೇಳುವೆ
ಸತ್ಯಕೆ ಜಾತಿಯ ಏತಕೆ ನೋಡುವೆ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ,
ಹೆಚೂ ಕಡಮೇ ಎಂಬುದ ಕಳೆದು
ಸರ್ವರು ಸಮವಾಗಿಹುದನು ತಿಳಿದು
ಮೂರ್ತಿಯ ಹಂಗನು ನೆಟ್ಟನೆ ತೊರೆದು
ದೇವರನೊಲಿಸುವ ಜಟಕಾ ಸಾಬಿ
ನಿಲುಕದು ಅಲ್ಲಿಗೆ ನಿಮ್ಮಯ ಬುದ್ದಿ.
ಇರುವುದೆ ನರಕವು ಜಟಕಾ ಸಾಬಿಗೆ
ಇರುವುದೆ ಮುಕ್ತಿಯು ನಿಮಗೊಬ್ಬರಿಗೆ ?
ಅವನನು ಏಳಿಸಿ ಮೆರೆಯುವ ನೀವು
ಬಾಳನು ತಿಳಿಯದ ಹೆಡ್ಡರು ನೀವು
ಧರ್ಮವನರಿಯದ ಕುರುಡರು ನೀವು
ಕಲ್ಲನು ಮಣ್ಣನು ಉಂಬಿರಿ ನೀವು.
ಜಾಣರ ಮತವೇ ಒಡೆದಿಹ ಮಡಕೆ !
ಜಾಣರ ಜಾತಿಯೆ ಬಿಚ್ಚಿದ ಪೊರಕೆ !
ಮೋಕ್ಷಾಮೃತವದು ತುಂಬುವುದುಂಟೆ ?
ಕರ್ಮದ ಕಸವನು ಗುಡಿಸುವುದುಂಟೆ ?
ಧ್ಯಾನಿಸಿ ವನದಲ್ಲಿ ಸಾಧಿಸಿ ತಿಳಿದರು
ಉತ್ತಮ ತತ್ವವ ಹಿಂದಿನ ಜನರು
ಇಸ್ಲಾಂ ತತ್ವವ ಬಿತ್ತಿದವರು
ನಿಜದಲಿ ಬೆರೆಯುತ ಮುಕ್ತಿಯ ಪಡೆದರು
ತಿಳಿವನು ಜಗಕೆಲ್ಲಾ ಹರಡಿದರು.
ಕತ್ತಲೆಗೂಡಿದ ದೇಗುಲದಲ್ಲಿ
ಗೊಬ್ಬರ ತುಂಬಿದ ಕಗ್ಗವಿಯಲ್ಲಿ
ಕೊರಳನು ಬಿಗಿಯುವ ಸೆರೆಮನೆಯಲ್ಲಿ
ಮನಸಿನ ಕತ್ತಲೆ ಹರಿಯುವುದೆಲ್ಲಿ ?
ಉನ್ನತ ಭಾವಗಳೇರುವುದೆಲ್ಲಿ ?
ನೆಲಸಮ ಮಾಡಿರಿ ಕತ್ತಲೆ ಗೂಡನು
ಜಗಳವ ಬೆಳಸುವ ಭೇದದ ಬೀಡನು
ಕೂಡಲೆ ಹರಿವುದು ಬೆಳಕಿನ ಕಡಲು
ದಾಹವ ನೀಗುವ ಮುಕ್ತಿಯ ಕಡಲು
ವಿಶ್ವವ ಬೆಳಗುವ ದಿವ್ಯ ಜ್ಯೋತಿ
ಐಕ್ಯದ ಮಾರ್ಗವ ಬೆಳಗುವ ದೀಪ್ತಿ ;
ಒಂದೇ ಜಾತಿಯು ಒಂದೇ ಮತವು
ಶಕ್ತಿಯ ಗಳಿಸುವ ನಚ್ಚಿನ ಮತವು ;
ಒಂದೇ ದೇವರ ಮಕ್ಕಳು ನೀವು
ಸೋದರಭಾವದಿ ಕಲೆವುದು ನೀವು;
ಸೈತಾನ್ ಮಾಡಿದ ಮೋಸವ ತಿಳಿಯಿರಿ
ಒಟ್ಟಿಗೆ ಬದುಕುವ ಬುದ್ಧಿಯ ತಳೆಯಿರಿ
ಒಟ್ಟಿಗೆ ಕಲೆತರೆ ತುರುಕರು ನೀವು
ಮೋಕ್ಷವ ಪಡೆಯುವ ವೀರರು ನೀವು
ಬಿಡಿ ಬಿಡಿ ನಿಂತರೆ ತುರು, ಕರು, ನೀವು
ಸೈತಾನ್ ಹುಲಿಗಳ ಬಾಯಿಗೆ ನೀವು
ಎಂದೇ ಪರಿಯಲಿ ತತ್ವಜ್ಞಾನಿ
ನುಡಿಯಲು, ಹೇಳಿದ ಮಹದಭಿಮಾನಿ
ನ್ಯಾಯಾಧೀಶನು ಖಾತಿಯಲಾಗ
"ವರ್ಷದ ಶಿಕ್ಷೆಯ ಕೊಟ್ಟಿಹೆನೀಗ
ಶಾಂತಿಯ ರಕ್ಷಣವೆ ಮಾಡಲೆ ಬೇಕು
ಕ್ರಾಂತಿಯ ಮೊಳಕೆಯ ತುಳಿಯಲೆ ಬೇಕು
ಜೈಲಲ್ಲಿದ್ದರೆ ಹುಚ್ಚಿಳಿಯುವುದು
ಕುದಿಯುವ ಮೆದುಳದು ತಂಪಾಗುವುದು"
ಎಂದಾಡುತ ವಂದಕೆ ತೆರಳಿದನು
ತತ್ವಜ್ಞಾನಿಯು ನಗೆಸೂಸಿದನು.
ಆದುದು ತತ್ವಜ್ಞಾನಿಗೆ ಶಿಕ್ಷೆ
ಶಾಂತಿಯ ಬದುಕಿಗೆ ಕಟ್ಟಿದ ರಕ್ಷೆ.
ಅವನನು ತಂದರು ಜೈಲಿನ ಮನೆಗೆ
ಜನರು ಬೀಗವ ಕಿರುಬಾಗಿಲಿಗೆ,
ಹಿಗ್ಗಿದ ಜನರೊಡನೆಯೆ ಕುಗ್ಗಿದರು
ಕಣ್ಣೀರಿಕ್ಕುತ ಮನೆ ಸೇರಿದರು.
ನ್ಯಾಯಾಧೀಶನು ಮಲಗುವ ಮನೆಯಲಿ
ನಿದ್ದೆಯ ಮಾಡುತ ನಟ್ಟಿರುಳಿನಲಿ
ಬೆಚ್ಚುತ ಬೆದರುತ ಕಂಪಿಸುತಾಗ
ನೀನಾರೆನ್ನುತ ಕೂಗಿದನಾಗ
"ಕಲ್ಲಿನ ಗೋಡೆಯು ಕಬ್ಬಿಣ ಬಾಗಿಲು
ವಿರಿಹೆಯೆಂತೋ ಕಟ್ಟಿನ ಕಾವಲು !”
ತತ್ವಜ್ಞಾನಿಯು ನಸುನಗುತೆಂದನು
"ನಾನೇ ಬಂದಿಹೆ ಅಂಜಿಕೆಯೇನು ?
ಅಂಗೈ ಹಣ್ಣಿಗೆ ಕನ್ನಡಿಯುಂಟೆ ?"
ಕ್ರಾಂತಿಯ ಉದ್ಧಮ ತಡೆಯುಂಟೆ ?
ಕಾಲಜ್ಞಾನಿಗೆ ಗೋಡೆಗಳುಂಟೆ ? :
ಎಂದಾ ಕಿಟಿಕಿಯ ಬಾಗಿಲು ತೆರೆದನು
ನಸುನಗುತಲ್ಲಿಂ ಮೆಲ್ಲಗೆ ನಡೆದನು.
ತತ್ವಜ್ಞಾನಿಯು ಜೈಲಲ್ಲಿರುವನು
ಊರಲ್ಲಿರುವನು ನಾಡಲ್ಲಿರುವನು
ಮನೆ ಮನೆಯಲ್ಲೂ ಅವನೇ ಇರುವನು
ದೇಶದ ತುಂಬಾ ಅವನೇ ಇರುವನು.
ಸತ್ಯವ ತಡೆಯುವ ಗೋಡೆಗಳುಂಟೆ ?
ಜ್ಞಾನಿಯ ತಡೆಯುವ ಸರಳುಗಳುಂಟೆ ?
ಬೂಟಾಟಿಕೆ
ನಾವು ಬಡಜೀವಿಗಳು ನೀವು ಮಾತಸಸಿಗಳು
ದೃಷ್ಟವನ್ನು ತೋರಿರಯ್ಯ ;
ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ
ಒಂದನ್ನು ತೋರಿರಯ್ಯ,
ಹಿರಿಯ ಮರಗಳನಾಳ್ಳ ಯತಿವರರು ಕೆಲರುಂಟು
ಡಂಬದಲಿ ಮೆರೆವರುಂಟು ;
ಉಪವಾಸ ನಿಯಮದಲ್ಲಿ ಜಗವ ಜಯಿಸುವರುಂಟು
ಒಳಬೆಳಗ ಕಾರುಂಟು,
ಗುಹೆಯಲ್ಲಿ ಅಡಗಿರ್ದು ವರ್ಷಗಳ ಕಳೆದಾಯ್ತು
ಹಿರಿಯ ರಿಸಿ ಎಂಬುದಾಯು;
ದಿಕ್ಕು ದಿಕ್ಕುಗಳಿಂದ ನೋಡಹೋಗುವರಾಯು
ಜಗವೆಲ್ಲ ಕೀರ್ತಿಯಾಯು,
ಏನು ಫಲವಾಯ್ಕೆಂದು ಪಾಮರರು ಕೇಳುವೆವು
ತಿಳಿವನ್ನು ನೀಡಿರಯ್ಯ ;
ಜ್ಞಾನ ಭಕ್ತಿಯುಮಿಲ್ಲ, ಮೂಢ ಭಕ್ತಿಯಲ್ಲ
ಸಿಕ್ಕವಯ್ಯ,
ಭಕ್ತಿಯಿಂ ಸಾಧಿಸಿದ ಪೊಸ ಬಗೆಯ ಶಕ್ತಿಯಿಂ
ನಂಬುಗೆಯ ನೀಡಿರಯ್ಯ;
ಯೋಗದಿಂ ಗಳಿಸಿರುವ ದಿವ್ಯತರ ಶಕ್ತಿಯಂ
ಮೆರೆದೆಮ್ಮ ಸಲಹಿರಯ್ಯ,
ಕೌಶಿಕನ ಶಸ್ತ್ರಾಸ್ತ್ರಜಾಲಮಂ ವಾಸಿಷ್ಠ
ದಂಡವದು ನುಂಗಿತೆಂದು
ಹಿಂದಾದ ದೃಷ್ಟಗಳ ನಾವೆಲ್ಲ ಕೇಳಿಹೆವು
ಇಂದೇನು ಕಾಣೆವಯ್ಯ,
ಆಕಾಶಯಾನವಂ ಸುಟ್ಟು ಬಟ್ಟಡಬಹುದು
ಜಹಜುಗಳನದ್ದಬಹುದು
ಘೀಳಿಡುವ ಅಶನಿಗಳ ಬಾಯಿಮುಚ್ಚಿಸಬಹುದು
ಕತ್ತಿಗಳ ಮುರಿಸಬಹುದು.
ಕಲ್ಲನ್ನು ಜನರಾಗಿ ಜನರನ್ನು ಕಲ್ಲಾಗಿ
ಮಾರ್ಪಡಿಸಿ ತೋರಬಹುದು
ಏಕ ಕಾಲದಿ ನೀವು ಹಲವು ಕಡೆ ಕಾಣುತ್ತ
ಭೀತಿಯಂ ಬೀರಬಹುದು.
ಸತ್ತವರನೆಬ್ಬಿಸಲು ಬದುಕುವರ ಸಾಯಿಸಲು
ನೋಡಿ ನಂಬುವೆನಯ್ಯ,
ಮೂಢ ಮತಿಗಳು ನಾವು, ಬಡ ಜೀವಿಗಳು ನಾವು
ನಂಬುಗೆಯು ಸಾಲದಯ್ಯ.
ನಮ್ಮಂತೆ ನೀವಿರಲು ನಿಸ್ಸತ್ವರಾಗಿರಲು
ಸೆರೆಯಲ್ಲಿ ಕೊಳೆಯುತಿರಲು
ನ್ಯಾಯದಲಿ ಧರ್ಮದಲಿ ದೈವದಲಿ ಯೋಗದಲ್ಲಿ
ನಂಬುಗೆಯು ಬಾರದಯ್ಯ.
ಶುಷ್ಕ ವೇದಾಂತಕ್ಕೆ ಮಾತಿನಾ ಜಗಳಕ್ಕೆ
ಜೀವಗಳ ತೆತ್ತರೇಕೋ ?
ಯುಗಪುರುಷರವತಾರ ಬರಿಹೊಟ್ಟೆ ನಾಡಿನಲಿ
ಅಡಿಗಡಿಗೆ ಮಾಡಲೇಕೋ ?
ರಾಮಕೃಷ್ಣರು ಬೇಡ ಘೋಷ ಗೀಷರು ಬೇಡ
ಬಂದ ಫಲ ಕಂಡೆವಯ್ಯ
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ
ಅವನೆನಗೆ ದೇವರಯ್ಯ,
ಏಕಾಗಬಾರದು?
ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ
ಕೆಂಗದಿರ ಹೊಂಗದಿರ ಜಿಹೈಯಲಿ ನುಡಿಯಿತ್ತು
"ಈರೇಳು ಲೋಕಗಳಿಗಾಧಾರವಾಗಿಹೆನು,
ಎಲ್ಲವಂ ಧರಿಸಿಹೆನು ; ಸೂರ್ಯತಾರೆಗಳೆನ್ನ
ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ
ಎಳ್ಳನಿತು ಲಂಘಿಸವು”, ಈ ಕೆಚ್ಚುನುಡಿಗೇಳಿ
ಸಾಗರದ ವಾರಿರಾಶಿಯಲೊಂದು ಹನಿಯದ್ದು
“ಎಲೆ ಮೇರುಪರ್ವತವೆ ! ಹದಿನಾಲ್ಕು ಲೋಕಗಳ
ಆಧಾರಗೀಧಾರವೆಂಬ ನುಡಿಯಂತಿರಲಿ
ಮುನಿದೆನಾದರೆ ಕೊಟ್ಟಿ ಮುಳುಗಿಸುವೆ ಹೆಸರುಸಿರು
ನಿನಗಿಲ್ಲವೆಂಬಂತೆ, ತಿಳಿಯದೇಂ ಪೌರುಷವು ?”
ಎಂದು ತನ್ನಯ ಬಲುಮೆ ಮಹಿಮೆಗಳನಾಡಿತ್ತು,
ಸೈಕತದ ರಾಶಿಯಲ್ಲಿ ಒಂದು ಕಣ ತಾನೆದ್ದು
"ಲೇಸಾಯ್ತು ನಿನ್ನ ನುಡಿ! ಮುನಿಯದೆಯ ವಿಸ್ತಾರ
ಸಾಗರದ ಹನಿಗಿನಿಯುಮೇನುಮುಂ ಇರದಂತೆ
ಕುಡಿಯುವೆನು, ಪೈಜೆಯಿದೆ ಹೂಡುನೀಂ ಪಂಥವನು"
ಎಂದಾಗ ಸಾಮರ್ಧ್ಯರುನ್ನತಿಯನಾಡಿತ್ತು.
ಪಂಧಗಳ ಪೌರುಷಕೆ ಮನುಜ ಕೋಟೆಯು ನಕ್ಕು
“ ಈ ಹುಚ್ಚು ಬಲು ಸೊಗಸು, ಕೇಳ್ವರಿಗೆ ಬಲು ಸೊಗ
ಹೆಡ್ಡರಿಗೆ ಹುಚ್ಚು ಹಿಡಿದರೆ ಮಾತು ಸೊಗಸುಂಟು”
ಎಂದವರನೇಳಿಸಿತು, ಆಗ ನಿರ್ದೆಹದಲ್ಲಿ
ಏಕಾಗಬಾರದೆಂದೊಂದು ದನಿ ನಭದಲ್ಲಿ
ನುಣ್ಣನೆಯ ಸಣ್ಣ ದನಿ ಗೀತಮಂ ಹಾಡಿತ್ತು.
" ಏಕಾಗಬಾರದದು
ಆಗಲೇ ಆಗುವುದು
ಹನಿಯ ನುಡಿ ಕಣದ ನುಡಿ
ದಿಟದ ನುಡಿಯನು
ನಕ್ಕ ಮನವರೆಲ್ಲ
ಅತ್ತು ಹೋಗುವರೀಗ
ಕಣದಲ್ಲಿ ಹಸಿಯಲ್ಲಿ
ಇರುವೊಂದು ಪರಮಾಣು
ಕೊಚ್ಚಿ ಬಿಸುಡುವುದೀಗ
ಕುಡಿದು ತೇಗುವುದೀಗ
ಆ ಕಾಲ ಬಂದಿಹುದು
ಈಗಲೇ ಬಂದಿಹುದು.
ಕಣದಂತೆ ಹನಿಯಂತೆ
ತಿಳಿದು ಸಾಧಿಪ ಜನರು
ಎನ್ನೊಳಗೆ ತಪ್ಪದೆಯೆ
ಸಮರಸವ ಹೊಂದುವರು
ಲೋಕಗಳ ಸೃಷ್ಟಿಸರು
ಲೋಕಗಳನಾಳುವರು
ಲೋಕಗಳ ನುಂಗುವರು
ಏಕಾಗಬಾರದು
ಆಗಲೇ ಆಗುವುದು."
ದೇವಯಾನಿ
ಮರದ ನೆಳಲ ತಂಪಿನಲ್ಲಿ
ಮೆಲ್ಲ ಮೆಲ್ಲನೇರುತಾ
ಗಿರಿಯ ಕಳೆದು ಸಂಖ್ಯೆಯಲ್ಲಿ
ಕಚನ ಮನದಿ ಒಯಸುತಾ
ನಡೆದಳವಳು ದೇವಯಾನಿ
ಪ್ರಣಯ ಭರದಿ ಕುಗ್ಗುತಾ
ಬಿನದ ಬನದ ನಡುವೆ ನಿಂದು
ಕಣ್ಣ ನೀರು ಸುರಿಸುತ್ತಾ
ಸಂಜೆಗೆಂಪ ತಳಿರುಗೆಂಪ
ತುಟಿಯ ಕೆಂಪು ಮಾರಲು
ಅಲರ ಕಂಸ ಎಲರ ಕಂಪ
ಉಸಿರು ಕಂಪು ಜರಿಯಲು
ತಂಪಿನಲರು ಕಂಪಿನೆಲರು
ಮುಂಗುರುಳನು ತಿದ್ದಲು
ಮನದಿ ಪೊಸತು ರಾಗವೇರಿ
ಸುಖಕೆ ಪುಳಕವೇರಲು
ನಡೆದಳಂದು ನಿಂದಳಂದು
ಬೆಚ್ಚನುಸಿರು ಸುಯ್ಯುತಾ
ಕಚನ ನೆನೆದು ನೆನೆದು ಮನದಿ
ವಿರಹದುರಿಯ ತಾಳುತಾ
ಮೆಲ್ಲನೊಂದು ಮುಗಿಲು ಬಂದು
ತನ್ನ ತೋಳಲಪ್ಪಲು
ನಲ್ಲನೆಂದು ದೇವಯಾನಿ
ಹರುಷದಿಂದ ನಿಂದಳು
ಎಳೆಯ ತಳಿರು ಹೊಳೆವ ತಳಿರು
ನುಣ್ಣದವನು ಚುಂಬಿಸಿ
ಸುಖದ ಭಾವ ಸುಗ್ಗಿದೋರಿ
ತಳಿರು ಮುಖದಿ ಬಿಂಬಿಸೆ
ನಡೆದು ಬಳಲಿ ಮರವ ನೆಮ್ಮೆ
ಬನದ ನಡುವೆ ನಿಂದಳು
ಕಚನ ಬರವನೆದುರುನೋಡಿ
ದೃಷ್ಟಿ ದೂರ ನೆಟ್ಟಳು
ಸುಖವು ದುಃಖವೊಂದೆ ಕಾಲ
ದಲ್ಲಿ ಮನದಿ ಮೂಡಲು
ನೋಡಿ ಹಿಗ್ಗಿ ಸುಯ್ದು ತಗ್ಗಿ
ಕಚನ ಕಡೆಗೆ ನಡೆದಳು.
ಕಚನ ಬಳಿಗೆ ಬಂದು ನಿಂದು
ನಲ್ಮೆ ಕೋಡಿವರಿಯಲು,
ಮುಖವನೆತ್ತಿ ನೋಡಿ ನಾಚಿ
ಮೆಲ್ಲನಿಂತು ನುಡಿದಳು
"ಇಳಿಸು ಹೊರೆಯು ನಿನ್ನ ಹೊರೆಯ
ಎನ್ನ ಮನದ ಹೊರೆಯನು
ದೈತ್ಯರೊಡನೆ ಸೇರಿ ಸೇರಿ
ತಂದೆ ಕಠಿನನಾದನು.
ಇಳಿಸು ಹೊರೆಯ ದೂರವಿಲ್ಲ
ನಾನೆ ಹೊತ್ತು ತರುವೆನು
ನಲ್ಮೆ ನುಡಿಯನಾಡಿ ಪಾಡಿ
ನಿನ್ನ ದಣಿವ ಕಳೆವೆನು."
ಕಚನು ನಿಂದು ಹೊರೆಯನಿಳಿಸಿ
ನುಡಿದ ದೇವಯಾನಿಯಂ
"ತಾಯೆ ! ನಿನ್ನ ಒಲುಮೆ ಹೆಚ್ಚು
ಇಲ್ಲಿಗೇಕೆ ಬಂದೆಯೌ
ಏಕೆ ಬಂದೆ ತಾಯೆ ನೀನು
ಮನೆಯ ಬಿಟ್ಟು ಕಾಡಿಗೆ
ಕಲ್ಲುಮುಳ್ಳು ಇರುವ ದಾರಿ
ತುಳಿದು ಬಂದೆಯಡವಿಗೆ.
ಕಣ್ಣನೀರು ಸುರಿವುದೇಕೆ
ಮನದಿ ದುಃಖವೇತಕೌ
ಆವ ಕಜ್ಜ ನಿನ್ನನೀಗ
ಕಾಡಿಗಿಲ್ಲಿ ತಂದಿತೌ."
'ತಾಯೆ' ಮಾತು ಕಿವಿಗೆ ಶೂಲ
ಕಾದ ಸೀಸವಾಗಲು
"ಏನು ಮಾತು ಕಲಿತೆ ನೀನು
ಏನು ಮಾತು ! ” ಎಂದಳು.
"ಏನು ಕಲಿತರೇನು ಫಲವು
ದೇವಗುರುವ ಪುತ್ರನು
ಕಲಿಯಲಿಲ್ಲ ನಲ್ಮೆವಾತು
ದೇವಯಾನಿ ಕಲಿಪಳು
ಎಳೆಯ ಗರುಕೆ ಸೊಂಪುಪಾಸು
ಮೇಲೆ ತಳಿರು ತೋರಣ
ಸಂಜೆಗೆಂಪಿನಾರತಿಯಲಿ
ನಲ್ಮೆವಾತು ಕಲಿಪಳು.
ಪ್ರಿಯಳು ಓಪಳೆಂಬ ಮಾತು
ನಿನ್ನ ಲೋಕದಿಲ್ಲವೆ?
ಚನ್ನೆ ರನ್ನೆ ಎಂಬ ಮಾತು
ಅಲ್ಲಿ ನುಡಿವರಿಲ್ಲವೆ?
ಏನು ಲೋಕ ದೇವಲೋಕ!
ಹಿಗ್ಗಿ ಎಲ್ಲ ನುಡಿವರು
ಒಳ್ಳೆ ಮಾತು ನಲ್ಮೆವಾತು
ನುಡಿವ ಜಾಣರಿಲ್ಲವು.
ಬಹಳ ದೂರ ನಡೆದು ಬಂದು
ನಿನ್ನ ಕಾಲು ನೋವುದು
ಕಾಲನೊತ್ತಿ ನೋವು ತೆಗೆದು
ನಲ್ಮೆವಾತು ಕಲಿಪೆನು."
ಎಂದು ನುಡಿದು ದೇವಯಾನಿ
ಕಚನ ಮುಖವ ನೋಡಲು
ಮೃದು ಮೃಣಾಳ ಬಾಹುವಿಂದ
ಅವನ ಭುಜವ ಸೋಕಲು.
ಕಚನು ಸರಿದು ನುಡಿದ "ತಾಯೆ!
ಕಾಲುಗೀಲು ನೋಯದು.
ಕಾಡುಮೇಡು ತಿರುಗಿ ತಿರುಗಿ
ದಿನವು ಬಳಕೆಯುಂಟದು."
“ನಿನ್ನ ನೋವು ನಿನಗೆ ಅರಿದು
ನಾನು ಜಾಣೆ ಅರಿವೆನು.
ನಲ್ಮೆ ಕಣ್ಗೆ ಕಂಬುದೆಲ್ಲ
ಬರಿಯ ಕಣ್ಗೆ ಕಾಣದು."
ಎಂದು ನುಡಿಯೆ ದೇವಯಾನಿ
ಕಚನು ಹೊತ್ತು ನೋಡುತ
ನುಡಿದನೊಡನೆ “ನೋಡು ತಾಯೆ,
ಬಂತು ಕಪ್ಪು ಕವಿಯುತ
ಗುರುವು ಕರೆವ ಹೊತ್ತು ಬಂತು
ಮೂಡಿ ಬರುವ ಚಂದ್ರನು
ಹೊತ್ತುಮೀರಿ ಹೋದರಲ್ಲಿ
ಗುರುವು ಕೋಪಗೊಂಬನು.”
“ಎನ್ನಲಿಹುದು ಗುರುವ ಹರಣ
ಮಗಳ ಸುಖವ ಬಯಸುವ
ಎನ್ನ ನಿನ್ನ ಇಲ್ಲಿ ನೋಡೆ
ಮೆಚ್ಚಿಮಿಕ್ಕಿ ಹರಸುವ.
ನಿನ್ನನೊಂದು ಕೇಳಲೆಂದು
ಮನವು ತವಕಗೊಳ್ವುದು
ಇತ್ತ ನೋಡಿ ನಾಚದೆನಗೆ
ಮಾರುನುಡಿಯ ಕೊಡುವುದು.
ದೇವಲೋಕದಿರುವರಂತೆ
ರಂಭೆ ಮೇನಕಾದ್ಯರು
ತಮ್ಮ ಚೆಲುವು ಮಿಗಿಲದೆಂದು
ಗರ್ವದಿಂದ ನುಡಿವರು.
ನೀನು ನೋಡಿರುವುದುಂಟೆ
ಅವರ ರೂಪು ಬೆಡಗನು
ಇಂಧ ಚೆಲುವು ಅವರಲುಂಟೆ
ಕಿವಿಯೊಳುಸಿರು ಕೇಳ್ವೆನು.”
ಎಂದು ನುಡಿದು ದೇವಯಾನಿ
ಕಚನ ಕರವ ಹಿಡಿಯಲು
ಬಿಡಿಸಿಕೊಂಡು ಸರಿದು ದೂರ
ಮೆಲ್ಲನಿಂತು ನುಡಿದನು.
"ಓದು ಕಲಿವ ಹುಡುಗ ನಾನು
ರಂಭೆ ಗಿಂಭೆ ತಿಳಿಯೆನು;
ಚೆಲುವು ಗಿಲುವು ಎಂದರೇನೊ
ಗುರುವು ತಿಳಿಸಲಿಲ್ಲವು."
"ಆರು ಬಂದು ತಿಳಿಸಲೇಕೆ
ಕಣ್ಗೆ ಚೆಲುವು ರೂಪನು
ವರುಷ ವರುಷ ತುಂಬಿ ಬರಲು
ತನಗೆತಾನೆ ತಿಳಿವುದು.
ದಿನಕೆ ದಿನಕೆ ತಿಳಿವು ತುಂಬಿ
ಮೀನಗಣ್ಣು ಚಲಿವುದು,
ಚೆಲುವು ಬಲೆಯ ಕಣ್ಣಿನಲ್ಲಿ
ಸಿಕ್ಕಿ ಚಲಿಸದಿರುವುದು.
ನಿನ್ನ ಹಡೆದ ತಾಯಿ ತಂದೆ
ಏನು ನೋಂಪಿ ನೋಂತರೋ
ಇನಿತು ಸುಗುಣ ಇನಿತು ರೂಪ
ನಿನ್ನೊಳೆಂತು ಸೇರಿತೋ !
ನಿನ್ನ ನೆಪದಿ ಮನದಲೊಂದು
ಕಿಚ್ಚು ಉರಿಯುತಿರುವುದು
ನಿನ್ನ ಬಿಟ್ಟು ಜೀವವಿರದು
ನೀನೆ ಪೊರೆಯಬೇಹುದು.
ನಿನ್ನ ಕೊರಳ ಹಾರ ಪದಕ
ಎನ್ನ ನೀನು ಧರಿವುದು,
ನಿನ್ನ ಮಡದಿ ರನ್ನೆಯೆಂದು
ದೇವಲೋಕಕೊಯ್ವುದು.
ನಾನು ನೀನು ಮದುವೆಯಾಗೆ
ಗುರುಗಳವರು ಬಿಗರು.
ದೈತ್ಯ ಗುರುವು ದೇವ ಗುರುವು
ಸೇರಿ ಸಂಧಿವಾಳ್ಪರು.
ಇಂದಿನಿಂದ ಕಲಹವಿಲ್ಲ
ದೇವ ದೈತ್ಯ ಜಾತಿಗೆ,
ಮುಂದೆ ಅಣ್ಣ ತಮ್ಮ ಎಂದು
ಪ್ರೇಮದಿಂದ ಸೇರುಗೆ."
ಇಂತು ನುಡಿಯೆ ದೇವಯಾನಿ
ಕಚನು ಎದ್ದು ನಿಂದನು.
"ಏಳು ತಾಯೆ, ಗುರು ಕುಮಾರಿ
ನಿನಗೆ ಕೈಯ ಮುಗಿವೆನು.
ಧರ್ಮವನ್ನು ನೀನು ಬಲ್ಲೆ
ಗುರುವು ಎನಗೆ ಪಿತನಲೆ
ಪಿತನ ಮಗಳು ಎನ್ನ ತಂಗಿ
ಜಾಣೆ ನೀನು ತಿಳಿಯದೆ."
ಎನಲು ಕಚನು, ದೇವಯಾನಿ
ಕಣ್ಣನೀರು ಸುರಿದಳು
"ಜಾಣತನದ ಮಾತು ಬೇಡ
ಧರ್ಮವನ್ನು ಬಲ್ಲೆನು.
ಹೆಣ್ಣು ಕೊಟ್ಟ ಮಾವನೊಬ್ಬ
ತಂದೆಯೆಂಬರಲ್ಲವೆ
ತಂದೆಯೆಂದರರ್ಥವೇನು
ಜಾಣ ನಿನಗೆ ತಿಳಿಯದೆ.
ನೀನೆ ಎನ್ನ ಜೀವಮಣಿಯು
ನೀನೆ ಎನ್ನ ದೈವವು
ಕಂಡ ದಿನವೆ ಮನದಿ ವರಿಸಿ
ನೀನೆ ಪತಿಯದೆಂದೆನು.
ಎನ್ನ ಬಿಟ್ಟು ನೀನು ಪೋಗೆ
ವಿಷವ ಕುಡಿದು ಸಾವೆನೊ
ವಿರಹದುರಿಯ ತಾಳದೀಗ
ಕಮರಿ ಬಿದ್ದು ಸಾವೆನೊ”
ಎಂದು ನುಡಿದು ದೇವಯಾನಿ
ಬಿಕ್ಕಿ ಅಳುತ ನಿಲ್ಲಲು
ದೈತ್ಯ ಗುರುವು ಎತ್ತಲಿಂದೊ
ಅಲ್ಲಿ ಬಂದು ನಿಲ್ಲಲು
ಕಚನು ನೋಡಿ ದೂರ ಸರಿದು
ಭಯದಿ ಕೈಯ ಮುಗಿದನು
ತಾನು ನಿರಪರಾಧಿಯೆಂದು
ದೃಷ್ಟಿಯಲ್ಲೆ ನುಡಿದನು.
ಒಮ್ಮೆ ಮಗಳ ಒಮ್ಮೆ ಕಚನ
ಗುರುವು ನೋಡಿ ನಿಂದನು,
ತಪದ ಬಲುಮೆ ಮನದ ಒಲುಮೆ
ತೂಗಿ ತೂಗಿ ಸುಯ್ದನು.
ದೇವ ಜಾತಿ ದೈತ್ಯ ಜಾತಿ
ಋಷಿಗಳೆಂಬುದಿಲ್ಲವು
ಹೆಣ್ಣು ಹಡೆದು ಕರಗದಿರುವ
ತಂದೆತಾಯಿಯಿಲ್ಲವು.
ತನ್ನ ಹೃದಯ ಕರಗೆ ನೋಡಿ
ಮಗಳ ಮುಖದ ದೈನ್ಯವಂ
ಕಚನ ಕೈಯಲಿಟ್ಟ ಗುರುವು
ಮಗಳ ಕರಸರೋಜವಂ.
“ಮೆಲ್ಲನಿವಳ ಕರೆದುತಾರ
ಎನ್ನ ಮುದ್ದು ಮಗಳನು
ಇವಳ ಸುಖದಿ ಪೊರೆವ ಭಾರ
ನಿನಗೆ ವಹಿಸಿಕೊಟ್ಟೆನು.”
ಎಂದು ಗುರುವು ಮುಂದೆ ನಡೆಯೆ
ಕೋಕಿಲೊಂದು ಮಂತ್ರ ಪಾಡೆ
ತಾರೆ ಹೂವನೆರಚಿ ಚಂದ್ರ
ಅಮೃತವರ್ಷ ಕರೆದನು.
“ದೇವಯಾನಿ ಪುಣ್ಯಶಾಲಿ
ಬಹಳ ಕಾಲ ಸುಖದಿ ಇರಲಿ"
ಎಂದು ಹರಸಿ ಶುಕಮಹರ್ಷಿ
ನಗುತ ತಪಕೆ ನಡೆದನು.
ಕಲ್ಲು ತಂದು ರೂಪುಮಾಡಿ
ದೇವನೆಂದು ಕರೆದು ನಿನ್ನ
ಎಲ್ಲ ಜಗದ ಒಡೆಯನಾಗಿ
ಕಾವುದೆಂದೆನು.
ಮೆಯ್ಯ ತೊಳೆದು ಹಾಲನೆರೆದು
ಹೂವು ಮುಡಿಸಿ ಗಂಧವಿಕ್ಕಿ
ತುಯ್ಯಲಿಟ್ಟು ದೀಪವಿಟ್ಟು
“ದೇವ” ಎಂದನು.
ನಾನು ಮಾಡೆ ನೀನು ಆದೆ
ನಾನು ಕಟ್ಟಿ ನಿನಗೆ ಗುಡಿಯು
ನಾನು ಒರೆಯೆ ನಿನಗೆ ತುತಿಯು
ನನೆ ಹಿರಿಯನು.
ಮರುಳನಂತೆ ಹಾಡಿ ಹಿಂದೆ
ಹಿರಿಯತನವ ಹರಿ ನಿನಗೆ
ಗರುವದೇವನೆಂದು ಕರೆದು
ಬಿರುದ ಹೊರಿಸಿದೆ.
ಇನಿತು ಕೃತಿಗಳೆನ್ನದಿರಲು
ಪುಣ್ಯ ಪಾಪ ಎಂಬ ಭಾರ
ಕರ್ಮಗಿರ್ಮ ಎಂಬ ಬಲೆಯ
ನೀನು ಹಾಕಿದೆ.
ನಾನು ತಗ್ಗಿ ತಗ್ಗಿ ನಡೆಯೆ
ನೀನು ಬೀಗಿ ಬೀಗಿ ಮೆರೆವೆ
ಮಾನವಿಲ್ಲ ನಿನಗೆ, ನೀನೆ
ಜಗದಿ ಭಂಡನು.
ದೇವನೆಂದು ನಿನ್ನ ಮಾಡಿ
ಜೀವದುಸಿರು ನಿನಗೆ ಕೊಟ್ಟು
ಸಾವುದಾಯ್ತು, ಎನ್ನ ಭೂತ
ಎನ್ನ ತಿಂದಿತು.
ನಿನ್ನ ಗುಡಿಯು ನಿನ್ನ ಮೂರ್ತಿ
ಕಲ್ಲು ಗುಡಿಯು ಕಲ್ಲು ಮೂರ್ತಿ
ಭಿನ್ನವಾಗೆ ನೊಂದು ನಾನು
ಅತ್ತು ಮರುಗುವೆ.
ಎಲ್ಲ ಜನರ ಹೃದಯದಲ್ಲಿ
ನೆಲಸಿಯವರ ಕಷ್ಟ ದುಃಖ
ನೋಡಿ ನೋಡಿ ಕರಗದಿರುವೆ
ಕಟುಕನಲ್ಲವೆ?
ಮಾಯೆಯೆಂಬ ಬಲೆಯ ಬೀಸಿ
ಮನುಜ ವಿಾನ ಹಿಡಿದು ತಿಂಬ
ಜಾಲಗಾರ ನಿನಗದೆಂತು
ದಯೆಯದಿಪ್ಪುದು.
ಹೊಲ್ಲೆತನವ ಪೆರ್ಮೆಯೆಂದು
ಎಲ್ಲ ಗುಣವ ಹೇಳಿಕೊಂಡು
ಕಳ್ಳನಂತೆ ಅಡಗಿಕೊಂಡು
ಕೈಗೆ ಸಿಕ್ಕದೆ,
ನೀಚತನಕೆ ನೀನೆ ಹೇಸಿ
ನಾಚಿಕೊಳುತ ಮುಖವ ಮರೆಸಿ
ಗೋಚರಿಸದ ತಿರುಗುತಿರುವೆ
ಲೋಕವರಿಯಲು.
ನಾಡನಾಳ್ಳ ಸಾರ್ವಭೌಮ
ಬಿರುದು ಪಡೆದ ಚಕ್ರವರ್ತಿ
ಕಣ್ಣ ಕಾಂಬ ತೆರದಿ ನೀನು
ಕಾಣ ಬೇಡವೆ?
ರೂಪು ದೇಹ ಏನುಮಿಲ್ಲ
ಸೈಪು ಪಾಪ ಏನುಮಿಲ್ಲ
ಕಷ್ಟ ದುಃಖ ಅಂಟಲಿಲ್ಲ
ದೇವನೇತಕೆ?
ಸಹಜನೆಂದು ಹಿರಿಯನೆಂದು
ಪರಮನೆಂದು ದೇವನೆಂದು
ಕಹಳೆ ಕೊಂಬು ಇಡಿಸಿಕೊಂಬೆ
ತೋರು ನೀನೆಲೆ!
ಎಲ್ಲಿಗೆ?
ಕಾಲವಾಹಿನಿಯಲ್ಲಿ ಸಿಕ್ಕಿ ನಾವೆಲ್ಲಿಗೋ
ತೆರಳುತಿಹ ಭೀತಿಯಿಹುದು ;
ಮೇಲೆ ವಿಷವೀಚಿ ಮಲೆಗಳು ನುಗ್ಗುತ್ತ
ಬರುತಿಹವು ಕೊಚ್ಚುತಿಹವು.
ಕುರುಡಾದ ನಿಯಮವೊ ಕುಂಟಾದ ವಿಧಿಗಳೊ
ಈವರೆಗೆ ಪೊರೆದುವಯ್ಯ ;
ಹರಿದು ಹೋಗಿಹವೀಗ ರಕ್ಷಣೆಯ ಬಂಧಗಳು
ಕಾವುದನು ಕಾಣೆನಯ್ಯ
ಬಂಡೆಗಳು ಏನಿಹಿ ನೀರಸುಳಿಯೇನಿಹುದೊ
ಕತ್ತಲೆಯು ಮುತ್ತುತಿಹುದು;
ಕಂಡ ದಾರಿಯಮಲ್ಲ ಹೇಳುವರು ಮೊದಲಿಲ್ಲ
ಎತ್ತಲುಂ ಜ್ಯೋತಿಯಿಲ್ಲ.
ಸುತ್ತಲುಂ ಉರಿದಾಹ ಜೀವನಕೆ ಬಡಿದಾಟ
ತಿಮಿತಿಮಿಂಗಿಲದ ನೋಟ
ಸಾತ್ವಿಕದ ರಾಜಸದ ಬುಗ್ಗೆಗಳು ತೋರಿಲ್ಲ
ಸಮತೆ ಸೈರಣೆಗಳಿಲ್ಲ.
ಹಿರಿಯರಲಿ ಗೌರವವು ದೈವದಲ್ಲಿ ನಂಬಿಕೆಯು
ಹೆಸರಿಲ್ಲದಾಗುತಿಹವು ;
ದೊರೆಯೆಂಬ ಗುರುವೆಂಬ ಪೂಜ್ಯಭಾವಗಳೆಲ್ಲ
ಉಸಿರಿಡದೆ ಮೆತ್ತಗಿಹವು.
ಕಿರಿಯರಿಗೆ ಹಿರಿಯರಿಗೆ ನಾಡಲ್ಲಿ ಆರಿಗುಂ
ನಿಯಮಗಳ ಸಹನೆಯಿಲ್ಲ;
ಸರಪಳಿಯ ಕಿತ್ತೆಸೆದ ಮದ್ಯಾನಗಳ ಗುಂಪು
ನಯನೀತಿ ಗಣನೆಯಿಲ್ಲ.
ಎಲ್ಲರುಂ ಅರಿವಿಲ್ಲದೆಳಮಕ್ಕಳಂದದಲಿ
ಉರಿಯೊಡನೆ ಕುಣಿಯುತಿಹರು ;
ಎಲ್ಲಿಯುರಿ ಹತ್ತುವುದೊ ಹಡಗಲ್ಲಿ ಮಗುಚುವುದೊ
ಪರಿಹರಿಸಿ ಕಾವರಾರು ?
ಹುಚ್ಚು ಹೊಳೆಯನು ನೋಡಿ ವಿಷವಾಹಿನಿಯ ನೋಡಿ
ಬೆರಗುವಟ್ಟಿರುವೆನಯ್ಯ ;
ಎಚ್ಚರಿಕೆ ಕೊಡಲಿಂದು ಆವ ಬೆಳಕದು ಬಂದು
ಪೊರೆಯುವುದೊ ಕಾಣೆನಯ್ಯ.
ಹಿರಿಯ ದಾನಿ
ಕುರುಡನೊಬ್ಬ ಕೋಲನೂರಿ
ಮರದ ಕೆಳಗೆ ನಿಂದಿರು
ಕರವ ನೀಡಿ ಬೇಡುತಿದ್ದ
ಪುರದ ಜನರನ್ನು,
"ಹುಟ್ಟು ಕುರುಡ ಕಾಸನೀಡಿ
ಹೊಟ್ಟೆಗಿಲ್ಲ ದಯವ ತೋರಿ
ಬಟ್ಟೆಯೆಂಬುದರಿಯೆ ” ಎಂದು
ಪಟ್ಟಣಿಗರನು.
ಬೇಡುತಿದ್ದ ದೈನ್ಯದಿಂದ
ಆಡುತಿದ್ದ ಶಿವನ ಮಾತ
"ಮಾಡಿರಯ್ಯ ಧರ್ಮವನ್ನು
ನೋಡಿ ಹೋಗದೆ."
ಬಂದರಲ್ಲಿ ಪುರದ ಜನರು
ಮಂದಿಯೆನಿತೊ ಲೆಕ್ಕವಿಲ್ಲ
ಒಂದು ಕಾಸು ಕೊಡದೆಯವಗೆ
ಮುಂದೆ ನಡೆದರು.
ದೊಡ್ಡ ನಾಮ ದೊಡ್ಡ ಮುದ್ರೆ
ಅಡ್ಡ ಬೂದಿ ನಡೆದುವೆಷೆ
ಗೊಡ್ಡು ತತ್ವ ಹೇಳಿಕೊಂಡು
ಜಡ್ಡು ಹಿಡಿದವು.
ಹಿರಿದು ಸರಿಗೆ ಹಿರಿದು ಸೇಟ
ಸರಿದು ನಡೆದ ಸಾಹುಕಾರ
ಕುರುಡನಾಲೂ ತಿಳಿದು ಹೇಳಿ
ಅರಿಯ ಬಲ್ಲಡೆ.
ಚಲನ ಚಿತ್ರ ನೋಡಲೆಂದು
ಕಲೆಯ ತಿರುಳ ನೋಡಲೆಂದು
ಮಲಿನಮನರು ಹೋದರೆಷ್ಟೋ
ನಲಿಯುತಲ್ಲಿಗೆ.
ಎನಿತು ಜನರು ಬಂದರೇನು
ಎನಿತು ಜನರು ಹೊದರೇನು
ನೆನೆದರಿಲ್ಲ ಕುರುಡನಿರವ
ಮನದ ರಂಗದಿ.
"ಇವನ ಕೂಗು ಕಿವಿಗೆ ಅಲಗು
ಇವನ ರೂಪು ಕಣ್ಗೆ ಘೋರ
ಜವನ ಪುರಕೆ ಹೋಗದೇಕೆ
ಇವನು ನಿಂತನು.
ಪಾಪಮಾಡಿ ಕುರುಡನಾಗಿ
ತಾಪಬಡುತ ಕೊರಗಿ ಸೊರಗಿ
ಈ ಪುರದಲಿ ಬಂದು ನಿಂದು
ರೂಪುಗೆಡಿಪನು"
ಹೀಗೆ ಜನರು ಕೆಲರು ಆಡಿ
ಹೋಗುತಿರಲು ಬೀದಿಯಲ್ಲಿ
ಕೂಗಿ ಕೂಗಿ ಕುರುಡನವನು
ಬಾಗಿ ನಿಂದನು.
ಕಾಲುಗಂಜಿಗಳು ತೋಳು
ಕೂಲಿಮಾಡಿ ಉಂಬ ಹೆಣ್ಣು
ಆಲಿಸುತ್ತ ಅವನ ಕೂಗ
ಸೋತು ಬಂದಳು.
ಹಣ್ಣು ಮಡಲಲಿಟ್ಟುಕೊಂಡು
ಹೆಣ್ಣು ಮಗಳು ಬಂದಳವಳು,
ಕಣ್ಣು ಅರಳೆ ನೋಡಿಯವನ
"ಅಣ್ಣ !” ಎಂದಳು.
ಸೋಗದ ಮಾತು ಸುಧೆಯ ಮಾತು
ಬಗೆಯ ಹಿಡಿವ ನಲ್ಮೆವಾತು
ವುಗಲು ಕಿವಿಯ "ಶಿವನೆ !” ಎಂದು
ಮೊಗವನೆತ್ತಿದ.
"ಕಾಸ ನೀಡಿ ಧರ್ಮದವರು
ಲೇಸನೀವ ಶಿವನು ನಿಮಗೆ
ಹೇಸಬೇಡಿ ಕುರುಡನೆಂದು
ಘಾಸಿಪಟ್ಟೆನು.”
"ಕಾಸು ಎನ್ನ ಬಳಿಯೊಳೆಲ್ಲ
ಕಾಸು ಕೊಟ್ಟು ಕೊಂಡೆ ಹಣ್ಣ
ಆಸೆಪಟ್ಟು ತಿನ್ನಲೆಂದು
ಈಸು ನಿನಗಿದೆ."
ಮಡಲಲಿದ್ದ ಹಣ್ಣ ತೆಗೆದು
ಎಡದ ಕೈಯಲದನು ಹಿಡಿದು
ನಡುವ ಮರೆದು ಚೂರಿಯಿಂದ
ಒಡನೆ ಕೊಟ್ಟಳು.
ಹಣ್ಣಿನೊಳಗೆ ರಸದ ಮಾವು
ಬಣ್ತೀವಿ ಬೆಳೆದ ಮಾವು
"ಅಣ್ಣ ಕೊಳ್ಳೊ" ಎಂದು ಕೈಗೆ
ಉಣ್ಣಲಿತ್ತಳು.
"ಶಿವನೆ|" ಎಂದು ಕಣ್ಣೆ ಒತ್ತಿ
"ಶಿವನೆ!” ಎಂದು ಎದೆಗೆ ಒತ್ತಿ
ಶಿವನ ಮಾತಿನೊಡನೆ ಹಣ್ಣ
ಸವಿಯು ಹೆಚ್ಚಲು,
ತಿಂದು ಕುರುಡ ಕೈಯ ಮುಗಿದ,
ಇಂದುಧರನು ಮೆಚ್ಚುತಿರಲು
ನಿಂದ ಮಗಳು ಧರೆಗೆ ಬಗ್ಗಿ
ವಂದಿಸಿದ್ದಳು.
ಅವಳ ಕಣ್ಗೆ ಕುರುಡನಲ್ಲ
ಶಿವನೆ ಎಂದು ತಿಳಿದಳವಳು
ಅವನ ಮನಕೆ ಹೆಣ್ಣದಲ್ಲ
ಶಿವನ ಕಂಡನು.
ಕಣ್ಣು ಇದ್ದು ಕುರುಡರೆಷ್ಟೋ
ಮಣ್ಣು ಹಿಡಿವ ಕಲ್ಲು ಹಿಡಿವ
ಒಣ್ಣ ಬಳೆವ ಬೀಗಿ ಮೆರವ
ಸಣ್ಣ ಮನುಜರು.
ಮೇಲು ಜಾತಿ ಕೀಳು ಜಾತಿ
ನೂಲು ಜಾತಿ ಎನಲು ಬೇಡ
ಶೂಲಿಯೊಲಿದ ಜಾತಿಯಲ್ಲಿ
ಶೀಲ ದೊಡ್ಡದು.
ದೀನನಲ್ಲಿ ದೇವನಿಹನು
ದಾನಿಯಲ್ಲಿ ದೇವನಿಹನು
ದೀನದಾನಿಯಲ್ಲದವರ
ಶ್ವಾನ ಎಂಬುದು.
ಕುರುಡ ಕುಂಟ ಹೆಳವರಲ್ಲಿ
ಮರುಕಗೊಂಡು ಬೋನವಿಕ್ಕು
ಹರನು ಮೆಚ್ಚಿ ತೇಗಿ ತಾನು
ಹರಸಿ ಪೊರೆವನು.
ಪುಣ್ಯಶಾಲಿ
ನೀವೆಲ್ಲ ಪುಣ್ಯಶಾಲಿಗಳಮ್ಮ
ಹಠತೊಟ್ಟು ಬೈಗಳಿಂ ಕೋಪದಿಂ
ಕೋರಿಕೆಯ ಸಾಧಿಸಿರಿ, ಸುಖಿಸುವಿರಿ
ಒಡವೆ ವಸ್ತುವ ಪಡೆದು ಮೆರೆಯುವಿರಿ,
ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ
ಬೈಗಳಂ ಮುನ್ನ ನಾ ಕಲಿತಿಲ್ಲ
ಅಸುವೊಂದು ದೇಹವೆರತಾಗಿಹುದು
ಎಂದು ಸಂಸಾರ ನಡೆಸುವೆನಮ್ಮ.
ಎನ್ನ ಪತಿ ಮನೆಗೆ ಬರೆ ಮುಗುಳು ನಗೆ ಸೂಸುವೆನು
ಬಂದವರನುಪಚರಿಸಿ ಸಲ್ಲುಡಿಯ ನುಡಿಯುವೆನು
ಏಕಾಂತದಲಿ ಮೆಲ್ಲನವರ ಬಳಿ ಸಾರುವೆನು
ತನಿವಣ್ಣು ಕೆನೆವಾಲು ತಾಂಬೂಲ ನೀಡುವೆನು.
ವಿನಯದಿಂ ಮೃದು ಮಧುರವಾಣಿಯಂ
“ಎಲೆ ಸಲ್ಲ! ಮಾತೊಂದು ಸಡೆಸುವೆಯ
ಕೇಳಲೋ ಬೇಡವೋ ಎನ್ನುವೆನು.
ಒಡನವರು ನಗುನಗುತ
ಬರ ಸೆಳೆದು ಬಿಗಿದಪ್ಪಿ
"ಎಲೆ ದೇವಿ! ಎನ್ನುವರು
ಹಮಳೆಯ ಸುರಿಯುವರು
ಜಡೆ ಮುಡಿಯ ನೇವರಿಸಿ
ಬಳಿಯಲ್ಲಿ ಕುಳ್ಳಿರಿಸಿ
ತಂದೆತಾಯ್ಗಳ ಬಿಟ್ಟು ಬಂದಿರುವೆ
ಒಡಹುಟ್ಟಿದರ ಬಿಟ್ಟು ಬಂದಿರುವೆ
ನಾನೆ ಪರಮಾರಾಧ್ಯನೆಂದೆಂದು
ಕನಸಿನಲ್ಲಿ ನೆನೆಸಿನಲಿ ತಿಳಿದಿರುವೆ
ಕುಸುಮ ಕೋಮಲ ಹೃದಯದಲಿ ಬಯಕೆ ಏನಿಹುದೊ
ಏನಿಹುದೊ ಈ ಎನ್ನ ಗೃಹಲಕ್ಷ್ಮಿ ಹೃದಯದಲಿ!
ರಾಣಿಯಲ್ಲವೆ ನೀನು
ನಾನು ನಿನ್ನಯ ತೊತ್ತು
ಸರ್ವಸ್ವ ನಿನಗಿರಲು
ಸರ್ವಾಧಿಕಾರಮಂ
ನಿನಗೆ ನಾ ಕೊಟ್ಟಿರಲು
ಎನ್ನ ಬೇಡಲದೇಕೆ !!
ಎಂದೆನ್ನ ಆದರಿಸಿ ನುಡಿಯುವರು
ಕೊರಳ ಸರಿಗೆಯ ಕೀಲಿ ತೋರುವರು.
ಪ್ರೇಮ ಭಾಂಡಾಗಾರ ಎನಗಿರಲು
ಕನಕ ಭಾಂಡಾಗಾರ ಎನಗಿರಲು
ಎಲ್ಲವು ಎನ್ನ ಕೈಯೊಳಗಿರಲು
ಒಪ್ಪದಲ್ಲಿ ಸಂಸಾರ ನಡೆಸುತಿರೆ
ಶಾಂತಿ ಸುಖ ನಗುವೆಲ್ಲ ತುಂಬುತಿರೆ
ಒಡವೆ ವಸ್ತುವನಿಟ್ಟು ಮೆರೆಯದಿರೆ
ಏನು ಕುಂದಪ್ಪುದೋ ನಾನರಿಯೆನಮ್ಮ;
ನೀವೆಲ್ಲ ಪುಣ್ಯಶಾಲಿಗಳಮ್ಮ
ಎನಗೇನು ಆ ಪುಣ್ಯ ಬೇಡಮ್ಮ.
ಪೂಜಾರಿ
ದೇವರ ಸತ್ಯವು ಊರಲಿ ಹರಡಿತು
ಬಂದರು ಭಕ್ತರು ತಮತಮಗೆ |
ಹೂವನು ಕಾಯನು ಹಣ್ಣನು ಜೋಡಿಸಿ
ತಂದರು ಹರಕೆಯ ಬೇಡಲಿಕೆ.
ದೇವರ ಮಹಿಮೆಯು ಹೆಚ್ಚಾಗಿರುವುದು
ಕರುಗುಡಿ ಬಾಗಿಲು ಬಿಗಿದಿಹುದು
ದೇವರ ನೆಡಲು ಕಂಡಿಗಳಿರುವುವು
ಕಿರುಬಾಗಿಲ ಬೆಳಕಂಡಿಗಳು.
ಬಂದವರೆಲ್ಲರು ಕಾಯಿಗಳೊಡೆವರು
ಹೊರಗಡೆ ಕರ್ಪುರ ಹಚ್ಚುವರು |
ತಂದಿಹ ಮುಡುಪನು ದೇವರು ಕೊಳ್ಳಲು
ಹೊರಗಡೆ ತಪ್ಪದೆ ಬಿಟ್ಟಿಹರು.
ಸಂಕಟಪಟ್ಟವರೊಬ್ಬರೆ ಬಂದರೆ
ಸಂಜೆಯಲೇಕಾಂತದಲಿ |
ಬಿಂಕವ ಬಿಟ್ಟಾ ದೇವರು ನುಡಿವನು
ಅಂಜಿಕೆ ಕಳೆವನು ನಲ್ಮೆಯಲಿ.
ಪೂಜಕನಾವನೊ ಕಣ್ಣಲಿ ಕಾಣರು
ಅನುದಿನ ಪೂಜೆಯು ನಡೆಯುವುದು ?
ಜಾಜಿಯ ಮಲ್ಲಿಗೆ ಹೊಸ ಹೂಮಾಲೆಯು
ದಿನ ದಿನ ಕೊರಳಲಿ ಮೆರೆಯುವದು.
ಸತ್ಯದ ದೇವರು ಏಳಡಿ ಎತ್ತರ
ಮರಡಿ ಪೀಠದ ಮೇಲಿಹನು |
ನಿತ್ಯದ ಪದವಿಯನೀಯುವ ದೇವರು
ಮೂರಿಹನೆಲ್ಲರ ಮಹಿಮೆಯನು.
ಉಟ್ಟಿಹ ಪೀತಾಂಬರ ಮಿರಮಿರುಗುತ
ಭಕ್ತರ ಮನವನು ಸೆಳೆಯುವುದು |
ತೊಟ್ಟಿಹ ಆಭರಣವು ಝಗಝಗಿಸುತ
ಭಕ್ತರ ಕಂಗಳ ಕೊರೆಯುವುದು.
ದೇವರ ಮುಂಗಡೆ ನಂದಾದೀವಿಗೆ
ದೀಪಸ್ತಂಭವು ಬೆಳಗುವುದು |
ಜೀವನ ದೇವನ ಸತ್ಯಸ್ವರೂಪ
ದೀಪ್ತಿಯೆ ಎಂಬುದ ತೋರುವುದು.
ದೇವರ ಮುಖವನ್ನು ನೋಡುತ ನಿಂದನು
ಕಣ್ಣೀರ್ಗರೆಯುತ ಪೂಜಾರಿ |
“ಏವೆನು ದೇವರೆ!” ಎನ್ನುತ ಬಿಕ್ಕುತ
ಕಣ್ಣೀರ್ಗರೆದನು ಪೂಜಾರಿ.
"ಬೆನ್ನಲಿ ನಿಲ್ಲುತ ಮೋಸವ ಮಾಡುವೆ
ಇಲ್ಲದ ಭರವಸೆ ನೀಡುವೆನು |
ನಿನ್ನಯ ಸೇವೆಯ ನೆಪದಲ್ಲಿ ದಿನವೂ
ಬಳ್ಳದ ಪಾಪವ ಗಳಿಸುವೆನು.
ದೇವರು ಆಡಿದನೆಂದೇ ನಂಬುತ
ಭಕ್ತರು ಧೈರವ ತಾಳುವರು 1
ಕಾವನು ತಮ್ಮನು ಕಷ್ಟಗಳಿಂದಲಿ
ಮುಕ್ತರು ತಾವೆಂದರಿಯುವರು.
ಏನೇನಾದರು ಆಡಲು ಬಾರದು
ನಿಲ್ಲುವೆ ಹಿಂಗಡೆ ನಾನೆಂಬೆ |
ನದಿ ಕೇಳುತ ದುಃಖದ ಹೊರೆಯನು
ಸೊಲ್ಲದು ಬರುವುದು ಬಾಯಿಂದೆ.
ನಿನ್ನಿಂದಲ್ಲವೆ ಈ ಬೂಟಾಟಿಕೆ
ಮಿಕ್ಕಿನ ಮೊಸದ ಜೀವನವ |
ನಿನ್ನಿಂದಲ್ಲವೆ ಗುಡಿ ಗೋವರಗಳು
ಠಕ್ಕನ ವಾಸದ ಮಂದಿರವು,
ಬಡವರು ನಿನಗೆಂದೇ ಮುಂದೊಟ್ಟಿದ
ಸಣ್ಣಳ ಕಾಯ್ಸಳ ರಾಶಿಯನು |
ಆಡಿದ ಮಾತಿಗೆ ತಪ್ಪದೆ ತಂದಾ
ನಾಣ್ಯದ ಮುಡುಪಿನ ಗುಡ್ಡೆಯನು ;
ಎಲ್ಲವ ನೋಡಿಯು ಮನದಿ ನಿಂದು
ಇಕ್ಕಿದೆ ಶೂಲವ ಎನ್ನೆದೆಗೆ |
ಸುಳ್ಳಿನ ಬಾಳೆಗೆ ಲಂಚ ಕೊಡಿಸಿ
ಅಕ್ಕನ ಮೆಲ್ಲನೆ ಮಾಡಿಸಿದೆ.
ನಾಳೆಯೆ ಬರುವರೆ ಇಂದೇ ಬರುವರೋ
ದುಕ್ಕವ ಕಣ್ಣಲಿ ಸೂಸುತ್ತ |
ಬಾಳನು ಕೆಡಿಸಿದ ಮೋಸದ ದೇವರು
ಮುಕ್ಕನ ಹೂಳೆಂದಾಡು ;
ಪೊರೆಯುವೆನೆನ್ನು ತ ಮುಡುಪನು ತಿಂದನು
ನಾಚದೆ ಹೊಟ್ಟೆಯ ಕುದಿಸಿದನು |
ಕರುಣಾಹೀನಗೆ ಕರುಣವ ತೋರದೆ
ಆಚೆಗೆ ತಳ್ಳಿ ದೇವರನು.
ಎಂದವರೆಲ್ಲರು ದುಃಖದಿ ಕೋಪದಿ
ಬಂದೀ ಗುಡಿಯನ್ನು ಮುತ್ತುವರೊ !
ಇಂದೇ ಹೊತ್ತಿಸಿ ಗುಡಿಯನ್ನು ಹೊತ್ತಿಸಿ
ಅಂದದ ಮೂರ್ತಿಯು ಸೀಯುವರೋ
ನಿನ್ನಿಂದಲ್ಲವೆ ಎನಗೀ ಪಾಪವು
ಹೃದಯವ ಬೇಯಿಪ ಸಂಕಟವು !
ನಿನ್ನಂತೆಯೆ ನಾನೂ ಕಲ್ಲಾದರೆ
ಒದಗದು ಎನಗೀ ವೇದನೆಯು.
ನಾಳೆಯೆ ಮೂರ್ತಿಯನೊಡೆವೆನು
ಭಕ್ತರಿಗರಿಪೆನು ಮೋಸವನು |
ಮಳನ ತಪ್ಪನ್ನು ಮನ್ನಿಸಿರೆನ್ನುತ
ಭಕ್ತರ ಕಾಲಲ್ಲಿ ಬೀಳುವೆನು.
ಬೇಡುವೆನವರಾ ಪಾದದ ಧೂಳಿಯ
ಇಕ್ಕುತ ಶಿರದಲಿ ಬೇಡುವೆನು |
ಕೋಡಿಯ ಹರಿಯಿಸಿ ಕಣ್ಣೀರಿಂದಲಿ
ಭಕ್ತರ ಪದಗಳ ತೊಳೆಯುವೆನು.”
ಎನುತಾ ದೇವರ ನೋಡುತ ನಿಂದನು
ದುಃಖದಿ ತುಂಬಿದ ಪೂಜಾರಿ |
ಏನೊಂದುತ್ತರ ಬಾರದೆರಲು
ದುಃಖದಿ ಹೊರಟನು ಪೂಜಾರಿ.
ಹಣ್ಣೂ ಕಾಸೂ ಕಾಯಿಗಳೆಲ್ಲವ
ತಂದನು ದಿನ ದಿನ ತರುವಂತೆ 1
ಕಣ್ಣ ಕಾಲೂ ಇಲ್ಲದ ಬಡವರ
ಮಂದಿಗೆ ಕೊಟ್ಟನು ಬಿಡದಂತೆ,
ದೇವರ ಒಡವೆಯ ದೇವರಿಗೊಪ್ಪಿಸಿ
ಹೊತ್ತಿಹ ಭಾರವಳುಹಿದನು |
ನೋವನು ಮಾಣಿಸಿ ಆರಿಗು ಕಾಣದೆ
ಕತ್ತಲೆ ದಾರಿಯ ಹಿಡಿದಿಹನು.
ಮರುದಿನ ತಪ್ಪದೆ ಸುತ್ತಿಗೆ ಹಾರೆಯ
ತಂದನು ದುಃಖದಿ ಪೂಜಾರಿ !
ಕಿರುಬಾಗಿಲ ಬೀಗವ ಬಿಗಿದಿಕ್ಕುತ
ನಿಂದನು ಒಳಗಡೆ ಪೂಜಾರಿ,
ಶಿಲ್ಪಿಯು ಮಾಡಿದ ಭಕ್ತಿಯ ಕಾಣಿಕೆ
ಚೆಲುವನು ತುಂಬಿದ ಮೂರ್ತಿಯದು |
ಕಲ್ಪಿಸಿ ದೇವರ ಹೃದಯದಿ ಕಾಣುತ
ನಲವಿಂ ಮಾಡಿದ ವರ್ತಿಯುದು,
ಸುತ್ತಿಗೆ ಹಾಕಿಯ ಭೀತಿಯು ತೋರದು
ಸೌಮ್ಯದ ಮೂರ್ತಿಯ ಮುಖದಲ್ಲಿ |
ಚಿತ್ತದಿ ನಗುವಂತಾ ಬಾಯ್ದೆರೆಗಳು
ರಮ್ಯದ ತೆರದಿವೆ ಮುಖದಲ್ಲಿ.
ಪೆರೆನೊಸಲಲಿ ತಿದ್ದಿದ ಮುಂಗೂದಲು
ಹಿರಿಯ ಕಿರೀಟದ ಮಣಿಕಾಂತಿ |
ಎರಡೂ ಕಿವಿಯಲಿ ತೂಗುವ ಕುಂಡಲ
ಕೊರಳಲಿ ಮೌಕ್ತಿಕ ಹಿತಕಾಂತಿ,
ನೋಡುತ ನಿಂದನು, ನೋಡುತ ನಿಂದನು
ಸುತ್ತಿಗೆ ಹಿಡಿದಾ ಪೂಜಾರಿ |
ಕೂಡಿತು ಕಣ್ಣಲಿ ಚಾರಿತು ಬಿಸಿಹನಿ
ಅತ್ತಲೆ ತಿರುಗಿದ ಪೂಜಾರಿ.
ಹೊರಬಾಗಿಲಲೊಬ್ಬರು ಬರೆ ಕಾಣುತ
ಹಿಂಗಡೆ ಹೋದನು ಭೀತಿಯಲಿ |
ಬರುವರು ಆರೋ ನೋಡುವೆನೆನ್ನುತ
ಹಿಂಗದೆ ಸೋಡಿದ ಮರುಕದಲಿ.
ಕಾಣಲು ಬಂದಳು ಸಾದ್ವೀಮಣಿಯು
ಮಡಿಲಲ್ಲಿರುವುದು ಎಳಗೂಸು |
ಪ್ರಾಣದ ರತ್ನ ವನಪ್ಪುವ ತೆರದಲಿ
ಅಡಗಿಸಿ ಅಪ್ಪಿಹ ಎಳಗೂಸು.
ಒಳಗುಡಿ ಹೊಸ್ತಿಲ ಮೇಲದನಿಟ್ಟಳು
ನೋಡಿದಳಾ ಜೀವದ ಕಣಿಯ
ಘಳಿಲನೆ ದೇವಗೆ ತಾ ಪೊಡಮಟ್ಟಳು
ಬೇಡಿದಳಾ ಲೋಕದ ದಣಿಯು,
"ಆರನು ಹೆತ್ತೆನು ಗಂಡೂ ಹೆಣ್ಣೂ
ಕುಳಿಯಲಿ ಇಟ್ಟೆನು ಆರನ್ನು |
ಹೊರುವುದು ತಪ್ಪದು ಹೆರುವುದು ತಪ್ಪದು
ಬೆಳೆದುದ ಕಾಣೆನು ಒಂದನ್ನು.
ಇದೆಯೋ ದೇವರೆ, ಏಳನೆಯ ಮಗುವು
ನಿನ್ನಿ ಮಡಿಲಲಿ ಹಾಕಿಹೆನು |
ಇದನೋಂದಾದರು ಬೆಳಸುವ ಭಾರ
ನಿನ್ನಯ ಮೇಲೆಯೆ ಇಟ್ಟಿಹೆನು.
ಕಳ ಕಳ ನಗುವಾ ಎಂತಹ ಚೆಲುವಿನ
ರನ್ನದ ಮಗುವೆಂಬುದ ನೋಡು |
ಪುಳಪುಳಕನೆ ಕನ್ನೈದಿಲ ಕಂಗಳ
ನಿನ್ನೆಡೆ ತಿರುಹುತ್ತಿದೆ ನೋಡು;
ಹೃದಯದ ಉತ್ಸವ ಚೆಲುವಿನ ಪುತ್ತಳಿ
ಎನ್ನಯ ತಂದೆಯ ನುಡಿಯುವೆನು |
ಇದನೊಂದಾದರು ಬೆಳೆಯಿಸಿಕೊಟ್ಟರೆ
ಚಿನ್ನದಿ ಮಗುವನು ಸಲಿಸುವೆನು.”
ಆಡಿದ ಮಾತನ್ನು ಕೇಳುತ ಕೇಳುತ
ಕಣ್ಣೀರ್ ತುಂಬಿದ ಪೂಚಾರಿ |
ಬಾಡಿತು ಮುಖವದು ಕಣ್ಣೀರ್ ಹರಿಯಿತು
ಹೆಣ್ಣಿಗೆ ನುಡಿದನು ಪೂಜಾರಿ.
"ಅಳದಿರು ಮಗಳೆ ಅಳದಿರು ತಾಯೀ
ನಿನ್ನೀ ನಗುವನು ಸಲಹುವೆನು |
ಬೆಳೆಯುವ ಮಕ್ಕಳನ್ನೂ ಕೊಡುವೆನು
ರನ್ನದ ಮಕ್ಕಳ ಪೊರೆಯುವೆನು.”
ಆಡಿದ ಭರವಸೆ ಕೇಳುತಲೆದ್ದಳು
ಹರುಷದಿ ಕಂಗಳು ತುಂಬಿರಲು |
ಜೋಡಿಸಿ ಕೈಗಳ “ಸತ್ಯದ ದೇವರೆ
ಕರುಣದಿ ಪೊರೆಯೈ” ಎಂದವಳು
ಮಗುವನ್ನು ಎತ್ತುತ ತನ್ನೆದೆಗಪ್ಪುತ
ಚುಂಬಿಸಿ ಮುಖವನ್ನು ನೋಡುತ್ತ !
ನಗುವನು ಬೀರುತ ದೇವಗೆ ತೋರುತ
ಕುಂಬಿಸಿ ನಡೆದಳು ಮನೆಯತ್ತ.
“ಅಯ್ಯೋ ದೇವರೆ !" ಎನ್ನುತ ನಿಂದನು
ಎಂತೀ ಮಗುವನು ಸಲಹುವೆನು |
ಹುಯ್ಯಲು ಇಡುವಾ ಸಾಧ್ವಿಯ ಮಕ್ಕಳ
ಪಂತದಿ ಬೆಳೆಯಿಸಿ ನಡೆಸುವೆನು.
ಸೆರಗಿನ ಕೊನೆಯಲ್ಲಿ ಕಣ್ಣೀರೊರಸುತ
ಮತ್ತೊಬ್ಬಳು ಸಾಧ್ವೀಮಣಿಯು
ಕಿರುಬಾಗಿಲ ಬಳಿ ನಡುಗುತ ಬಂದಳು
ಕುತ್ತಿಗೆ ಹಿಡಿಯಿತು ದುಃಖವದು.
ನುಡಿಯಲು ಆರಳು, ನಿಲ್ಲಲು ಆರಳು
ಬಾಗಿಲ ಮೆಲ್ಲನೆ ನೆಮ್ಮಿದಳು |
ಇಡಿದಾ ದುಃಖದಿ “ದೇವರೆ !” ಎಂದಳು
ಸಾಗವು ಮುಂದಿನ ಮಾತುಗಳು.
ಮಾತಿಗೆ ಮೀರಿದ ದುಃಖವನೆಂತೋ
ತಡೆಯುತ ಸಾಧ್ವಿಯು ಸೆರಗಿನಲಿ |
ದಾತಗೆ ದೇವಗೆ ತುಂಬಿದ ಕಣ್ಣಲಿ
ನುಡಿದಳು ಮೆಲ್ಲನೆ ಬಿಕ್ಕುತಲಿ.
"ಕೊಳ್ಳೈದೇವರೆ, ಎನ್ನೀ ಪ್ರಾಣವ
ಉಳುಹಿಸಿಕೊಡು ಪತಿದೇವನನು |
ಒಳ್ಳಿತ ಮಾಡೈ, ಕರುಣವ ತೋರೈ
ಕಳೆಯದೆ ಮಂಗಳಸೂತ್ರವನು.
ತಳ್ಳದಿರೆನ್ನನು ದುಸ್ಸಹ ನರಕಕೆ
ದಳ್ಳುರಿ ವೈಧವ್ಯಕೆಯನ್ನು |
ಕೊಳ್ಳೈ ದೇವರೆ ಸಾಧ್ವಿಯ ಜೀವನ
ಕೊಳ್ಳದೆ ಜೀವದ ಪತಿಯನ್ನು.
ಬಾರೈ ದೇವರೆ, ಎನ್ನ ಯ ಬಾಳಿಗೆ
ನಂಬಿಕೆಯೀಗಲೆ ನುಡಿಯುವುದು |
ಆರುವ ದೀಪಕೆ ಆಯುವ ತೈಲವ
ತುಂಬಿಸಿ ಬೆಳಗಿಸಿ ಕರುಣಿವುದು.
ಸತಿಯಳ ಜೀವವು ಕವಡೆಯು ಬಾಳದು
ಉಳಿದರು ಹೋದರು ಜಗವಳದು |
ಪತಿಯೆಂಬುವ ಸೌಭಾಗ್ಯದ ಸೂರ್ಯನು
ಮುಳುಗಲು ಕಲೆ ಮುಸುಕುವುದು.
ಮರಳೆನು ಮನೆಕಡೆ ಎದೆ ನಡುಗುವುದು
ಮುತ್ತೈದೆಯ ಸಾವಿಚ್ಛಿಪೆನು |
ತೊರೆದಿಹೆ ಭಯವನು ಸಾವಳಿಗೇಕೆ?
ಇತ್ತೀ ಕೊಳದಲೆ ಬೀಳುವೆನು."
ಅಂಗನೆಯಳುತಿರೆ ಮರೆಯಲ್ಲಿ ಅರ್ಚಕ
ಬಿಕ್ಕುತ ಬಿಕ್ಕುತ ನಿಂದಿಹನು |
ಕಂಗಳ ನೀರನು ಮಿಡಿಯುತ ತೊಡೆಯುತ
ಅಕ್ಕರೆ ಭರವಸೆ ನೀಡಿಹನು.
"ಅಳದಿರು ಮಗಳೇ !” ಎನ್ನಲು ಒಡನೆಯ
ಬಿಗಿಯಿತು ಕಂಠವು ಅರ್ಚಕಗೆ !
ಪುಳಕಿತಳಾದಳು ಚಮಕಿತಳಾದಳು
ಮುಗಿದಳು ಕೈಗಳ ಆ ದನಿಗೆ.
"ಅಳಲನು ಕಳೆವೆನು ಪತಿಯನು ಪೊರೆವೆನು
ಹದುಳದಿ ನಡೆಸುವ ನಿಮ್ಮನ್ನು |
ಅಳದಿರು ಮಗಳೇ, ಅಳದಿರು ತಾಯೀ
ಮುದದಲಿ ನಡೆಯೌ ಮನೆಗಿನ್ನು.”
ಕನಸೋ ನೆನೆಸೋ ಎನ್ನುತ ಸಾಧ್ವಿಯು
ನಿಂದಳು ಚಣ ಮೈಮರೆಯುತಲಿ |
ಮನದೊಳು ಮೂಡಿತು ಹರುಷವು ಕೂಡಲೆ
ವಂದಿಸಿ ನಡೆದಳು ತ್ವರಿತದಲಿ.
"ಅಯ್ಯೋ !” ಎನ್ನುತ ಮುಂದಕೆ ಬಂದನು
ಸುತ್ತಿಗೆ ಹಿಡಿದಾ ಪೂಜಾರಿ ।
ಸುಯ್ಯುತ ನೋಡಿದ ದೇವರ ಮುಖವನು
ಅತ್ತನು ಬಳ ಬಳ ಪೂಜಾರಿ.
"ಲೋಕದ ತೊಡಕನು ಬಿಡಿಸದೆ ದೇವರ
ಪಾಪದ ಭೀತಿಯ ತೊಲಗಿಸದೆ !
ಏಕಿಂತೆಲ್ಲರ ದುಃಖಕೆ ಸಿಕ್ಕಿಸಿ
ತಾಪಕೆ ನೀಗುರಿ ಮಾಡಿಸುವೆ ?
ಲೋಕದ ದುಃಖವ ನೋಡುತ ನೋಡುತ
ಭರವಸೆ ಜೀವನವೆನಿಸುವುದು |
ಸಾಕೈ ದೇವರ ಭರವಸೆ ಕೊಡುವೆನು
ಪೊರೆಯುವ ಶಕ್ತಿಯ ಕರುಣಿಪುದು.
ನಿನ್ನಯ ಹೆಸರಲಿ ನಿನ್ನಯ ಮರೆಯಲಿ
ನೋವನ್ನು ಕಳೆಯಲು ಆಡುವೆನು |
ನಿನ್ನೀ ಮೂರ್ತಿಯನೊಡೆದದ್ದಾದರೆ
ಆವನ ಮರೆಯಲಿ ನಿಲ್ಲುವೆನು.”
ಆಯಿತು ಅಲ್ಲಿಯೆ ಕಾಂತಿಯ ವಿಗ್ರಹ
ಒಡನೆಯೆ ಬೆಳಗಿತು ಮಂದಿರವು |
ಭಯದಿಂದರ್ಚಕ ಕೈಗಳ ಮುಗಿದನು
ಹಿಡಿದನು ದೇವರ ಪದಗಳನು.
ಮಂದಸ್ಮೇರವ ದೇವರು ಬೀರುತ
ಮುಂದಿನ ಮಾತನು ಆಡಿದನು |
"ಮಂದಿಯ ಸಲಹಿದೆ ನೀನೇ ದೇವರು
ಕುಂದದೆ ನೀಡಿದೆ ಅಭಯವನು.
ದಯವೇ ದೇವರು, ದೇವರ ದಯೆಯು
ಭರವಸೆ ತಪ್ಪದೆ ಫಲಿಸುವುದು |
ಭಯದಲಿ ರಕ್ಷಣೆ ಬೇಡುವ ದೀನರ
ಪೊರೆಯುವ ಶಕ್ತಿಯು ದೊರೆಯುವದು.
ಗೊಡ್ಡೋ ಗಿಡ್ಡೋ ನಂಬಿಕೆಯಿದ್ದರೆ
ತೊರೆಯನು ದಾಟಿಪ ಹರುಗೋಲು |
ಗಡ್ಡೆಯನೇರಿಸಿ ಕಷ್ಟವ ನೀಗಿಸಿ
ಕರೆಯನು ಕಾಣಿಪ ಸಾಧನವು."
ಬೆಳಕೂ ಮಾತೂ ಅಡಗಲು ಒಡನೆಯೆ
ಮೆಲ್ಲನೆ ಎದ್ದನು ಪೂಜಾರಿ |
ಕಳೆದುವು ಕೆಲದಿನ, ದೇವರು ಕರೆದನು
ಅಲ್ಲಿಗೆ ಹೋದನು ಪೂಜಾರಿ.
ಬಿತ್ತರ ದೇಗುಲವಲ್ಲಿಯೆ ಇರುವುದು
ದೇವರು ಒಳಗಡೆ ನಿಂದಿಹನು |
ಸುತ್ತಿಗೆ ಹಾರೆಯು ಮೂಲೆಯಲ್ಲಿರುವುದು
ಆವನೊ ಅರ್ಚಕ ಕಾಣುವನು.
ದೇವರ ಸತ್ಯವು ಮಾಸುತ ಬಂದಿತು
ಗೋಡೆಯ ಕಲ್ಗಳು ಉರುಳಿದುವು !
ಸೇವೆಗೆ ಬಂದವರೆಲ್ಲರು ಕದಿಯುತ
ಮಾಡದ ಮನೆಗಳ ಕಟ್ಟಿದರು.
ನಿಮ್ಮ ಪತ್ರ ಬಂದು ಸೇರಿ
ಎರಡು ಮೂರು ಬಾರಿಯೋದಿ
ಎಲ್ಲ ತಿಳಿದೆನು.
ನೀವು ನನಗೆ ಗಂಡನಲ್ಲ
ನಾನು ನಿಮಗೆ ಹೆಂಡಿರಲ್ಲ
ನೀವು ತಿಳಿವುದು.
ಕುಂಟು ಕಾಲು ಬಚ್ಚು ಬಾಯಿ
ಮೆಳ್ಳುಗಣ್ಣು, ನಿಮ್ಮ ಸೇವೆ
ಮಾಡಲಾರೆನು.
ಬ್ರಹ್ಮ ಹಿಂದೆ ಗಂಟು ಹಾಕಿ
ಗಂಡಹೆಂಡಿರಾದವೆಂದು
ನೀವು ಬರೆವಿರಿ.
ಬ್ರಹ್ಮಗಿಮ್ಮ ಹಾಕಲಿಲ್ಲ
ಅಪ್ಪ ತಂದು ನನಗೆ ನಿಮಗೆ
ಗಂಟುಹಾಕಿದ.
ಹೆತ್ತ ತಂದೆ ಮಾರಿಕೊಂಡು
ಮೃತ್ಯುವಾಗಿ ಕೊಲ್ಲಲ್ಲಿಂತು
ಮಾಡಲೇನಿದೆ.
ಶಾಸ್ತ್ರ ಗೀಸ್ತ್ರ ತಿಳಿಯೆ ನಾನು
ಬರದ ಜನರು ಹೆಂಡಿರಾಗಿ
ಸೇವೆಮಾಡಲಿ.
ನೋಟ ಬೇಟ ಗಂಡಿಗೆಂದು
ಧರ್ಮಶಾಸ್ತ್ರ ಹೆಣ್ಣಿಗೆಂದು
ನುಡಿವರೆಲ್ಲರು.
ಕೋರ್ಟು ಗೀರ್ಟು ಆಡಬೇಡಿ
ಜಡ್ಡಿ ಧರ್ಮವೇನು ಬಲ್ಲ
ನಾನು ತಿಳಿಸುವೆ.
ಕುರ್ಚಿಮೇಲೆ ಕುಳಿತುಕೊಂಡು
ಏನೋ ಗೀಚಿ ಎದ್ದು ಬರುವ
ಮಾತಿದಲ್ಲವು.
ತನ್ನ ಮಗಳ ನಿಮಗೆ ಕೊಟ್ಟು
ತನ್ನ ಮಗನ ಎನಗೆ ಕೊಟ್ಟು
ಮದುವೆ ಮಾಡಲಿ.
ಎನ್ನ ದುಃಖ ಆರಿಗುಂಟು
ಬಾಳಬೇಕು, ಬಾಳಲಾರೆ
ಹಾಳು ಲೋಕವು.
ಬಯ್ವ ಜನರು ಜರಿವ ಜನರು
ಅವರಿಗೇನು, ಬಾಯಿ ಕೊಬ್ಬು
ನೋವು ತೆಗೆವರೆ?
ಬಲ್ಲೆನವರ ಮನದ ಭಾವ
ಇಂದು ನಾನು ಸೂಳೆಯಾಗೆ
ಸುಖಿಪರೆಲ್ಲರು.
ಭೂಮಿ ಮೇಲೆ ಇರುವಳಲ್ಲ
ಇಂದೆ ನಾನು ಕೆರೆಗೆ ಬಿದ್ದು
ಜನ್ಮ ನೀಗುವೆ.
ಶಾಸ್ತ್ರ ಧರ್ಮ ತಣ್ಣಗಾಗಿ
ಬಯ್ವ ಜನರು ಉರಿದು ಹೋಗಿ
ಲೋಕವಡಗಲಿ.
ವೇದಾಂತ ಹೇಳಬಹುದು
ಎಲ್ಲರೂ ಕೇಳಬಹುದು
ಶಾಲನ್ನು ಸುತ್ತಿಕೊಂಡು
ಬಿರುದನ್ನು ಧರಿಸಿಕೊಂಡು
ವ್ಯಾಖ್ಯಾನ ಮಾಡಬಹುದು
ಪುಸ್ತಕವ ಬರೆಯಬಹುದು
ವೇದಾಂತ ಸಮಯಕ್ಕೆ ಬರುವುದೇನು ?
ಕರುಳನ್ನು ಸಂತವಿಡಲಪ್ಪುದೇನು ?
ಕಷ್ಟಗಳು ಬಂದು ಮುತ್ತಿ
ದುಃಖಗಳು ಬಂದು ಒತ್ತಿ
ರೋಗಗಳು ಬಂದು ಹತ್ತಿ
ಸಾಲಗಳು ಬಂದು ಸುತ್ತಿ
ಕಣ್ಣು ಬಿಡುತಲಾಗ
ಮತಿಗೆಟ್ಟು ಹೋಗುವಾಗ
ವೇದಾಂತ ಬರುವುದನ್ನು ನೋಡಬೇಕು
ವೇದಾಂತ ನುಡಿವುದನು ಕೇಳಬೇಕು.
ತಾನಿದ್ದು ಮುದುಕನಾಗಿ
ಬೆಳೆದ ಮಗ ತೀರಿಹೋಗಿ
ಮೊಮ್ಮಗನು ಬಳಿಗೆ ಬಂದು
ಬೆಪ್ಪಾಗಿಯಳುತ ನಿಂದು
ಬಸಿರೆಲ್ಲ ಕುದಿಯುವಾಗ
ಕೊರಳ ಸೆರೆ ಬಿಗಿಯುವಾಗ
ಹೆಣವನ್ನು ಸುಡುಗಾಡಿಗೊಯ್ಯುವಾಗ
ಚಿಕ್ಕ ಸೊಸೆ ಮುಸುಕಿಟ್ಟು ಕೊರಗುವಾಗ;
ಮುಡುಪನ್ನು ಕಟ್ಟಿತಂದು
ಮುದ್ದು ಮಗಳಳುತ ನಿಂದು
ಪತಿಭಿಕ್ಷೆ ಬೇಡಲಾಗಿ
ಕಡೆಗೆಲ್ಲ ತೀರಲಾಗಿ
ತನ್ನ ಪತಿ ಹೋದನೆಂದು
ತನ್ನ ಬಾಳ್ ಮುಗಿಯಿತೆಂದು
ನೆಲದಲ್ಲಿ ಮೈಮರೆದು ಬೀಳುವಾಗ
ಕನ್ನೊಡೆದು ಎದೆಬಿಚ್ಚಿ ನೋಡುವಾಗ;
ಮುದ್ದಾಡಿ ಬೆಳಸಿದಂಧ
ಮನೆಯೆಲ್ಲ ಬೆಳಗಿದಂಧ
ಮಗುವನ್ನು ಮೃತ್ಯು ಹಿಡಿದು
ಹೆತ್ತವಳು ಬಸಿರು ಹಿಡಿದು
“ಎನ್ನ ಕಂದನ್ನ ಕೊಡಿರಿ
ಎನ್ನ ರತ್ನನ್ನ ಕೊಡಿರಿ”
ಎಂದಂದು ಬಿಕ್ಕುತ್ತ ಕೇಳುವಾಗ
ತೊಡೆ ಮೇಲೆ ಜೀವವದು ನಂದುವಾಗ;
ಊರಾಚೆ ಗುಣಿಯ ತೊಡಿ
ಇಡಲಲ್ಲಿ ಅಣಿಯ ಮಾಡಿ
'ಬದುಕಿದೆಯೋ ಏನೋ !' ಎಂದು
ಭ್ರಮೆಯಿಂದ ಆಸೆ ಬಂದು
ಮತ್ತೊಮ್ಮೆ ಮುಟ್ಟಿ ನೋಡಿ
ಕಡೆಗೊಮ್ಮೆ ಮುಖವ ನೋಡಿ
ಮಣ್ಣಿಂದ ಕಂದನ್ನ ಮುಚ್ಚುವಾಗ
ಜಗವೆಲ್ಲ ಕಣ್ಗಂದು ಸುತ್ತುವಾಗ;
ಇವರಾರ ಮಕ್ಕಳೆಂದು
ಅವರಾರ ನೆಂಟರೆಂದು
ಋಣ ಶೇಷ ತೀರಿತೆಂದು
ಸಾಲಿಗರು ಹೋದರೆಂದು
ಕಣ್ಣೀರು ಬತ್ತಿಸುತ್ತ
ಎದೆ ಕಲ್ಲು ಮಾಡಿಸುತ್ತ
ವೇದಾಂತ! ವೇದಾಂತ ! ಇರುವುದೇನು
ಇದ್ದರೂ ಅದರಿಂದ ಬಂದುದೇನು?
ಕಲ್ಲೆದೆಯ ನೀರುಮಾಡಿ
ಕಣ್ಣೀರು ಹರಿದು ಕೋಡಿ
ಮಾಲಿನ್ಯ ಹೋಗುತಿರಲು
ಕರುಣ ರಸ ತುಂಬುತಿರಲು
ಆರ್ತರಿಗೆ ಮರುಗುವಂತೆ
ಕೈನೀಡಿ ಸಲಹುವಂತೆ
ವೇದಾಂತ ನಮಗೆಲ್ಲ ತಿಳಿವ ತರಲಿ
ಶುದ್ಧಾತ್ಮ ಮಾನವರ ಮಾಡುತಿರಲಿ.
ಚಂಡಿಗೆ ಮೊರೆ
ಚಂಡಿ! ನೀ ಗುಣವಂತೆ ಬರಿದೆ ದೂರಿದನವನು,
ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು
ಕಂಡ ಕಂಡವರೆಲ್ಲ ಚಂಡಿತನವೆನಲಾಯು,
ನಿನ್ನಂಧ ಸುಗುಣಿಗಳು ಈಗೆಲ್ಲಿ ದೊರೆಯುವರು !
ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ
ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ.
ಬಾರೆಂದೊಡಂ ಇಲ್ಲ ಹೋಗೆಂದೊಡಂ ಇಲ್ಲ
ಬೇಕೆಂದೊಡಂ ಬೇಡೆಂದೊಡಂ ಇಲ್ಲ
ಕಪ್ಪಕಾಣಿಕೆಗಿಲ್ಲ ನುಡಿಗೆ ಮೊದಲಿಲ್ಲ
ಕೋಪತಾಪಕುಮಿಲ್ಲ ಬೇಡಿಕೆಗೆ ಮುನ್ನಿಲ್ಲ
ಏನೇನ ಸೇಳ್ಕೊಡಂ ಅವರಲ್ಲಿ ನಿಷ್ಫಲಂ
ಅವರ ಕೈವಿಡಿದರ್ಗೆ ಇಹದಿ ನಾಯಕ ನರಕ.
ಜಗದ ಮೊಂಡುಗಳೆಲ್ಲ ಒಳಸಂಚು ಮಾಡಿಹರೂ
ಹಿರಿಯ ಗುರು ಬೋಧಕಳು ಆವ ದೇವತೆಯಿಹಳೊ
ಶಿಷ್ಯಯರು ಇಂತಿರಲು ಮಾತಾಯಿ ಎಂತಿಹಳೊ
ಇದ್ದಿದ್ದು ಆಕೆಗೇನಪರಾಧ ಮಾಡಿದೆವೋ !
ನಿನ್ನ ಗುಣವರಿತರಿತು ವಿಪರೀತಮಂ ನುಡಿದು
ಬಾಳಲಾರದೆ ತಾನು ಕೋಪದಿಂ ಶಾಪಮಂ
ಕೊಟ್ಟ ತಾಪಸನನುದ್ಧಾಲಕನ ಬುದ್ಧಿಯಂ
ದುರ್ಬುದ್ಧಿಯಂ ಜರೆದು ನಿನ್ನ ಮನ್ನಿಸರಮ್ಮ !
ಸೂಯ್ಯೋದಯಕೆ ಚನ್ನಕೋವಳೆಯು ನಗಲೇನೊ
ಚಂದ್ರೋದಯಕೆ ಚನ್ನ ತಾವರೆಯು ನಗಲೇನೆ
ನಿಯಮ ಪಲ್ಲಟವಾಗಿ ಬೇರೊಂದು ವಿಧಿಯಾಗಿ
ಬೆಳಗಿದೊಡೆ ಸಾಲದೇಂ ? ನೀನಿಂದು ಬಾರಮ್ಮ !
ನಿನ್ನ ಸುಗುಣದ ಸಿರಿಯ, ನಿನ್ನ ಘನತರ ವಿಧಿಯ
ಈ ಹೆಂಗಳಿಗೆ ತೋರಿ ಗುಣವಂತೆಯೆನಿಸಮ್ಮ.
ಅವರಲ್ಪ ಸಂಸಾರವಂ ದುಃಖಸಾಗರವ
ನಿನ್ನೊಲುಮೆಯಂ ಬೀರಿ ಸುಖಜಲಧಿ ಮಾಡಮ್ಮ !
ಕಣ್ಣೀರ ಕೋಡಿಗಳು ಚಿಂತಾಗ್ನಿ ನಂದಿಲ್ಲ
ಕಲಿತ ವಿದ್ಯೆಗಳಿಂದ ಅಜ್ಞಾನವಳಿದಿಲ್ಲ
ಲೋಕವಾಳಿದೊಡೇನು ಆಳಾಗಲೊಪ್ಪುವರು
ಶಾಂತಿ ದೊರೆತೊಡೆ ಸಾಕು, ಏನಾದತಾಗುವರು ;
ಆಳಲ್ಲ ಅರಸಲ್ಲ ಏನುಮಂ ಸೈರಿಸರು
ಪತಿಯ ಬಾಳ್ಳೆಯ ಲತೆಗೆ ವಿಷವಾಗಿ ಹರಿಯುವರು
ಅವರ ಹರುಷದ ಗುಡಿಗೆ ಸಿಡಿಲಾಗಿ ಎರಗುವರು
ಈ ಹೆಂಗಳನು ಕೋಟಿ ಕೌಂಡಿನ್ಯನರಿದವರೆ
ಬ್ರಹ್ಮಂಗೆ ರುದ್ರಂಗೆ ವಿಷ್ಣುವಿಂಗಳವಲ್ಲ!
ವಿಪರೀತೆಯಾದೊಡಂ ಗುಣವಂತೆ ನೀನಮ್ಮ
ಚಂಡಿಯೆನಿಸಿರ್ದೊಡಂ ಹದಿಬದೆಯು ನೀನಮ್ಮ
ವೇದಜಡ ಛಾಂದಸಂ ಸುಖಿಸಿದ ದೂರಿದಂ
ಅರೆಯಾಗಿ ಹೋಗೆಂದು ನೆವಮಿಲ್ಲದುಸುರಿದಂ
ಲೋಕ ನಿನ್ನನು ಹಳಿದು ಮರುಗುವುದು ತಾಪಸಗೆ
ಲೋಕಮತವನು ನಚ್ಚಿ ನಡೆಯೆಂದು ನುಡಿಯುವರು
ಎಂತು ನಚ್ಚುವುದೆಂತು ಮೆಚ್ಚುವುದು ವಿಪರೀತ
ಲೋಕಮಂ, ಎಂತು ನಡೆಯುವುದು ನಾನರಿಯೆನಮ್ಮ.
ಜಾಣ-ಕೋಣ
"ಎಲ್ಲಾ ತಿಂಡಿಯು ನನಗೇ ಬೇಕು
ಎಲ್ಲಾ ಹಣ ನನಗೇ ಬೇಕು
ಆರಿಗು ಚರನು ಗೀರನು ಕೊಡೆನು"
ಕೊಡೆನೆನ್ನುತ ಎಳ ಮಗ ಹರಮಾಡಿದನು.
“ಅಣ್ಣನು ತಮ್ಮನು ಎಲ್ಲರು ಇರುವರು
ಅಕ್ಕನು ತಂಗಿಯು ಎಲ್ಲರು ಇರುವರು
ನಾನೂ ಅಮ್ಮಾ ಎಲ್ಲರು ಇರುವೆವು
ಒಂದಿಷ್ಟಿಷ್ಟನು ನಮಗೂ ಕೊಡಬೇಕು."
“ಆರಿಗು ಕೊಡೆನು ಎಲ್ಲವು ನನ್ನದು”
ಎನ್ನುತ ಎಳ ಮಗ ಹಠಮಾಡಿದನು;
ಅಣ್ಣ ತಮ್ಮ ಅಕ್ಕ ತಂಗಿ
ಎವೆಯಿಕ್ಕದೆ ತಿಂಡಿಯ ನೋಡಿದರು.
ಅಪ್ಪನ ಕೈಹಿಡಿದೆಳೆಯುತ ಕೇಳುತ
ಎಳ ಮಗು ಕೈಯಿಂದೆಳೆಯಲು ಹೋಗಿ
ನನಗೇ ತನಗೇ ಎಂದಳುತಿರಲು
ತಂದೆಯು ಮಗನನು ಮುದ್ದಿಸಿ ಆಡಿದನು.
"ಬಾರಲೆ ರನ್ನ ! ಹೊಳಪಿನ ಚಿನ್ನ !
ನಗುತಾ ಕೊಟ್ಟರೆ ನೀನೇ ಜಾಣ
ಅಳುತಾ ಕೊಟ್ಟರೆ ನೀನೇ ಕೋಣ
ಕೊಡದಿರೆ ನೀನೆನ್ನಯ ಮಗನಲ್ಲಣ್ಣ.”
ಲೋಕದ ತಂದೆಯು ಮಗುವಿನ ತಂದೆಗೆ
"ಅಹುದೆಲೆ ಮಗನೇ ! ?” ಎನುತಿಂತೆಂದನು
"ನಾ ಹೇಳಲು ಕಹಿ ನೀ ಹೇಳಲು ಸಿಹಿ
ಎಲ್ಲಿಯು ನಡೆಸುವ ಮಕ್ಕಳು ಬಹುಕಡಮೆ.
ನಗುತಾ ಕೊಟ್ಟರೆ ಅವನೇ ಜಾಣ
ಅಳುತಾ ಕೊಟ್ಟರೆ ಅವನೇ ಕೋಣ
ಏನೋ ಎಂತೋ ಏನೂ ಕೊಡದಿರೆ
ಅವನೇನೂ ನನ್ನಯ ಮಗನಲ್ಲಣ್ಣ.”
ಮುಪ್ಪು
ದೇಹ ಗಳಿಯುತ್ತಿರಲು
ಮನಕೆ ಮೌವನವಯ್ಯ
ಮನಕೆ ಯಣವನವಿರಲು
ಆಸೆಗಳು ಹೆಚ್ಚಯ್ಯ,
ಸಾಧಿಸುವ ಶಕ್ತಿಗಳು
ಭೋಗಿಸುವ ಶಕ್ತಿಗಳು
ಕುಂದುತ್ತ ಬರಬರಲು
ನೊಂದು ಸಾಯುವೆವಯ್ಯ,
ನರೆಸುಕ್ಕುಗಳ ನೋಡಿ
ಮೋಸ ಹೋಗಲು ಬೇಡ
ಮನಕೆ ಸುಕ್ಕುಗಳಿಲ್ಲ
ಹಿರಿಯತನ ಮುನ್ನಿಲ್ಲ.
ಸಾಯುವಾ ಕಾಲಕ್ಕೆ
ಎನಿತೊಂದು ಆಸೆಗಳು,
ಮುಂದಿನಾ ಜನ್ಮಕ್ಕೆ
ಎನಿತೊಂದು ಬಿತ್ತುಗಳು.
ಆಡಿ ತೋರದೊಡೇನು
ಮಾಡಿ ತೋರದೊಡೇನು
ಮಡುತಿರೆ ಮನದಲ್ಲಿ
ಪಾಪ ವಾಸನೆಯಾಯ್ತು
ವಿಷಯಗಳ ಸುಖಕಿಂತ
ಹಿರಿಯ ಸುಖವೊಂದುಂಟು
ಗುರು ಕರುಣ ಬಂದಲ್ಲಿ
ಆ ಸುಖದ ತಿಳಿವುಂಟು
ಹಿರಿಯ ಸುಖ ಕಂಡಾಗ
ಮುಮ್ಮ ಬಂದಡಸುವುದು
ನಾಯಿಗಳು ಸಾಯುವುವು
ಮನವು ಬಯಲಾಗುವುದು.
ಮನಕೆ ಮುಪ್ಪಾಗದೆಯೆ
ಹಿರಿಯ ಸುಖ ತಾನಿಲ್ಲ
ಮನವೆ ಕರ್ಮದ ಮಲ
ಮನವನ್ನೆ ಕೊಲ್ಲುವುದು.
ಈ ಮುಪ್ಪು ಬಂದವರ
ಕಣ್ಣಿಟ್ಟು ಹುಡುಕುತಿರು
ಅವರ ನೆಲೆ ಸಿಕ್ಕಾಗ
ಹಿಂದೆಯೇ ನಡೆಯುತಿರು.
ಮುಪ್ಪಿನಲಿ ಸುಖವುಂಟು
ಜವ್ವನದಿ ಕುಂದುಂಟು
ಮುಪ್ಪನ್ನು ಬಯಸುವುದು
ಶ್ರಮದಿಂದ ಸಾಧಿಪುದು.
ಲಲಿತಾಂಗಿ
ತುಂಬು ಜವ್ವನದಬಲೆ
ಸತಿರಹಿತೆ ಶೋಕಾರ್ತೆ
ಕಾಡುಮೇಡನು ದಾಟಿ
ಭಯದಿಂದ ಓಡಿಹಳು
ಒಬ್ಬಳೇ ಓಡಿಹಳು
ಅಡಗಿಹಳು ಗುಹೆಯಲ್ಲಿ
ಬಾಲೆ ಲಲಿತಾಂಗಿ.
ಹುಲಿಕರಡಿಯೆಲ್ಲಿಹವೊ
ವಿಷಸರ್ಪವೆಲ್ಲಿಹವೊ
ಎಂದಾಕೆ ನಡುಗಿಹಳು
ನಡುಗಿ ಗುಹೆಯನು ಬಿಟ್ಟು
ಮುಂದೆ ಮುಂದೋಡಿಹಳು
ಮೈಮರೆತು ಓಡಿಹಳು
ಬಾಲೆ ಲಲಿತಾಂಗಿ.
ಹಿಂದೆ ನೋಡಿದರತ್ತ
ರಾವುತರು ಬರುತಿಹರು
ವೇಗದಿಂದಟ್ಟಿಹರು
ಹಗಲೆಲ್ಲ ಹಗಲೆಲ್ಲ
ಓಡಿಹಳು ಚೀರುತ್ತ
ಬೀಳುತ್ತ ಏಳುತ್ತ
ಬಾಲೆ ಲಲಿತಾಂಗಿ.
ದೀನ ರಕ್ಷಕನೆಂಬ
ಬಿರುದಿಂದು ದೇವಂಗೆ
ಎಂತು ಸಲುವ್ರದೆ ಕಣೆ
ಆರಿಂದು ದೇವಿಯನು
ಚೆಲುವೆಯನು ಬಾಲೆಯನು
ಆರ್ತೆಯನ್ನು ಕಾಯುವರು
ದಂಡನಾಧನ ಮಡದಿ
ಲಲಿತಾಂಗಿ ದೇವಿಯನು.
ಕಂದಿಹಳು ಕುಂದಿಹಳು
ಗುರುತಿಸರು ಆರಿಲ್ಲ
ಬಿಟ್ಟ ಮಂಡೆಯು ಕೆದರಿ
ಮೈಯೆಲ್ಲ ಧೂಳಾಗಿ
ಉಟ್ಟ ಸೀರೆಯು ಹರಿದು
ಹೆದರಿ ಓಡುತಲಿಹಳು
ರಾಹು ಕೈ ಚಂದ್ರನೋ
ಗತಿಗೆಟ್ಟ ದೇವಿಯೋ
ರತಿಯೊಂದು ಪ್ರೇತವೋ
ಮಾನವಿಯು ಇವಳಲ್ಲ
ಹುಚ್ಚುರೂಪನು ತಾಳಿ
ಕಿಚ್ಚನೊಡಲಲಿ ತಾಳೆ
ವನದೇವಿ ಓಡಿಹಳು
ಚೆಲುವು ಕಣಿ ಓಡಿಹಳು
ದಂಡನಾಧನ ಮಡದಿ
ಬಾಲೆ ಲಲಿತಾಂಗಿ.
ಕಲ್ಲು ಮುಳ್ಳನು ತುಳಿದು
ಕಾಲೆಲ್ಲ ಸಿಡಿಯುತಿದೆ
ಕೆನ್ನಿ ರು ಹರಿಯುತಿದೆ
ನಿಲಲಿಲ್ಲ ನಿಲಲಿಲ್ಲ
ಕಾಡೊಳಗೆ ನೆಲೆಯಿಲ್ಲ
ಆರ್ತರಿಗೆ ದಿಕ್ಕಿಲ್ಲ
ಓಡಿಹಳು ಲಲಿತಾಂಗಿ,
ಹೇಷೆಗಳ ಕೆಲೆವಗಳು
ಖುರಪುಟದ ಸಪ್ಪಳವು
ರಾವುತರ ಕೇಕೆಗಳು
ಕಾಡಿನಲಿ ತುಂಬುತ್ತ
ಮಾರುದನಿ ತೋರುತ್ತ
ಬಗ ಕುಲವ ಹಾರಿಸಲು
ಮೃಗತತಿಯನೊಡಿಸಲು
ಓಡಿದುವು, ಓಡುತಿರೆ
ಬಾಲೆ ಲಲಿತಾಂಗಿ,
ಕನಕ ಪುತ್ತಳಿಯಂತೆ
ಸಿಂಗರದ ಸಿರಿಯಂತ
ಮಧುಮಾಸ ವನದಂತೆ
ಚೆನಿಂ ತೀವಿರುವ
ಹೆಣ್ಮಣಿಯು ಕೋಮಲೆಯು
ಮೇಲುಸಿರು ಸೂಸುತ್ತ
ಶಕ್ತಿಯದು ಕುಂದುತ್ತ
ಬಾಯಾರಿ ಸೊರಗಿಹಳು
ತಲ್ಲಣಿಸಿ ನಿಂದಿಹಳು
ಬಾಲೆ ಲಲಿತಾಂಗಿ,
ಮರ ಮರದ ಮರೆಯಲ್ಲಿ
ನಿಂತು ನೋಡುತ ಬಾಲೆ
ರಾವುತರ ತಂಡವನು
ರಾಕ್ಷಸರ ತಂಡವನು
ಕುಸಿಯುತ್ತ ಮುಗು
ಕಣ್ಣೀರು ತುಂಬುತ್ತ
'ಹೆಣ್ಣಾಗಿ ಹುಟ್ಟುವುದು
ರೂಪವತಿಯಾಗಿಹುದು
ಏರು ಜವ್ವನವಿಹುದು
ಕೇಡಿಂಗೆ ಕಾರಣವು'
ಎಂದಾಕೆ ಮರುಗುತ್ತ
ಭೀತಿಯಿಂದೋಡಿಹಳು
ದಂಡನಾಧನ ಮಡದಿ
ಬಾಲೆ ಲಲಿತಾಂಗಿ.
“ಎನ್ನ ಪತಿ ಕಣ್ಮುಚ್ಚಿ
ಪರದೇಶಿಯಾದೆನೈ
ಕಾಯುವರು ಆರಿಲ್ಲ
ನಿಷ್ಕರುಣಿಯಾಗದಿರು
ಎಲೆ ವಿಧಿಯೆ, ಬೇಡುವೆನು
ಈಗೆನ್ನ ತೊರೆಯದಿರು
ಅಹಿತರಿಗೆ ನೀಡದಿರು
ಬೇಡುವೆನು ದೈನ್ಯದಲಿ
ಮಾನರಕ್ಷಣಗೆ”
ಎಂದಾಕೆ ದುಃಖದಲ್ಲಿ
ಕಣ್ಣೀರು ತುಂಬಿದಳು.
ಎರಡು ಚಣ ನಿಲ್ಲುತ್ತ
ಬೆವರನ್ನು ಬಸಿಯುತ್ತ
ಓಡಲಾರದೆ ನಿಂದು
ದೃಷ್ಟಿ ಹಿಂದಕೆ ಸಂದು
ಹಿಂದೆಯೇ ಕಾವುತರು
ಹೆಜ್ಜೆ ಹೆಜ್ಜೆಯ ಬಿಡದೆ
ಮುಂಬರಿದು ಬರುತಿರಲು
ಮತ್ತೆ ಬಿಟ್ಟೋಡಿಹಳು
ಬಾಲೆ ಲಲಿತಾಂಗಿ.
ಭಯದಿಂದ ಓಡುತಿರೆ
ಓಡುತ್ತ ಬೀಳುತಿರೆ
ಸೂರ್ಯನುಂ ಬೀಳುತಿರೆ
ಹೊತ್ತು ಹೋಗುತ ಬಂತು
ಕಪ್ಪಕವಿಯುತ ಬಂತು
ಅಲ್ಲಲ್ಲಿ ತಾರೆಗಳು
ಮಡಿದುವು ಮಿನುಗಿದುವು
ಮಸಕಿನಲ್ಲಿ ಮುಂದೊಂದು
ಹೆದ್ದೊರೆಯು ಕಾಣಿಸಿತು
ಹೆಬ್ಬಾವು ಕಾಣಿಸಿತು
ದಾರಿಯನ್ನು ಬಂಧಿಸಿತು.
ತುಂಬು ಹೊಳೆ ಮುಂದುಗಡೆ
ರಾವುತರು ಹಿಂದುಗಡೆ
ದಿಕ್ಕು ತೋರದೆ ನಿಂದು
ಕಣ್ಣು ಸುತ್ತುತ ಬಂದು
ಅರಿವು ಅಳಿಯುತ ಬಂದು
ಮುಂದೆ ಗತಿಯೇನೆಂದು
ತೋರೆ ಸಾವೆ ಮೇಲೆಂದು
ಹೆದ್ದೊರೆತ ಮಾತೆಯನು
ದೈನ್ಯದಲಿ ಬೇಡಿದಳು
ದಂಡನಾಧನ ಮಡದಿ
ಬಾಲೆ ಲಲಿತಾಂಗಿ.
“ಎಲೆ ತಾಯೆ ! ಇಂಬುಗೊಡು
ಪೆಸ್ಕೊಡಲು ಇಂಬುಗೊಡು
ಶರಣಾಗಿ ಬಂದಿಹೆನು
ಗತಿಗೆಟ್ಟು ಬಂದಿಹೆನು
ಮಾನವನು ಬಿಡಲಮ್ಮೆ
ಜೀವದಿಂದಿರಲಮ್ಮೆ
ಮಾನಾಪಹಾರಿಗಳು
ದುಷ್ಟ ರಾವುತರವರು
ದುಷ್ಟ ರಾಜನ ದಂಡು
ಹಿಂದಟ್ಟಿ ಬರುತಿಹರು
ಎನ್ನ ಪಾಲಿಪರಿಲ್ಲ
ಎನ್ನ ಮೊರೆ ಬಯಲಾಯ್ತು
ಕಷ್ಟದಿಂ ಕಂಗೆಟ್ಟಿ
ಊರು ಮನೆಯನು ಬಿಟ್ಟೆ
ಕಾಡಿನಲಿ ಬೇಸತ್ತೆ
ಆರ್ತರಿಗೆ ದಿಕ್ಕಿಲ್ಲ
ಭೂತನಾಥನ ಸೇವೆ
ಭುವನೇಶ್ವರಿಯ ಸೇವೆ
ಇಂದಿನಲಿ ಬರಿದಾಯ್ತು
ದಂಡನಾಧನ ಮಡದಿ
ಇಂದು ಈ ಗತಿಯಾಯ್ತು!
ಎಳೆ ತಾಯೆ ಇಂಬುಗೊಡು
ಪೆಣ್ಣೊಡಲು ಇಂಬುಗೊಡು
ಬಂದಿಹೆನು ಶರಣಾಗಿ"
ಎಂದಬಲೆ ಬೇಡಿದಳು
ಕಣ್ಣೀರು ಸುರಿಸಿದಳು
ಬಾಲೆ ಲಲಿತಾಂಗಿ.
"ಬಾ ಮಗಳೆ ! ಬಲು ಬಳಲಿ
ಬಸವಳಿದು ಬಂದೆ, ಬಾ !
ಮಾನವನು ಕಾಯುವೆನು
ಕೀರ್ತಿಯನ್ನು ಸಾರುವೆನು
ನೊಂದ ಜೀವನ ಸಲಹಿ
ತಣ್ಣಿನೊಳು ಸೈತಿಟ್ಟು
ಸಂತೈಸಿ ಪೊರೆಯುವೆನು”
ಎಂಬೊಂದು ಮೃದು ಮಧುರ
ಭಾಷಣವು ಕೇಳಿಸಿತು
ಕೇಳುತಿರೆ ಭೀತಿಯಲಿ
ಬಾಲೆ ಲಲಿತಾಂಗಿ.
ತಿರುಗಿ ನೋಡಿದಳೊಮ್ಮೆ
ನಡುಗಿದಳು ಮಗುದೊಮ್ಮೆ
ಮುಂದೆ ನೋಡಿದಳೊಮ್ಮೆ
ಭೀತಿಯಿಂ ಕಡೆಗೊಮ್ಮೆ
ಒಂದೇ ನಿಮಿಷದ ಆಯು
ಮರುಚಣವೆ ಕತ್ತಲೆಯು
ಬಿಮ್ಮೆಂಬ ಕತ್ತಲೆಯು
ಕತ್ತಲೆಯ ಹೆಗ್ಗವಿಯು
ಏನಿಹುದೋ ಎಂತಹುದೊ !
ಹೆದರಿದಳು ನಡುಗಿದಳು ;
ಜೀವವಾಹಿನಿಯಲ್ಲ.
ಜೀವಾಪಹಾರಿಣಿಯು
ನೀಲ ಮೃತ್ಯುಚ್ಛಾಯೆ
ಕಾಲಪಾಶಚ್ಛಾಯೆ
ನೋಡಿದಳು ನಡುಗಿದಳು ;
ಮುಂದಿಹುದು ತೋರೆ ಸಾವು
ಮಾನದಿಂದಾ ಸಾವು
ಎದೆಗೆಡಲು ಬಾಳುಂಟು
ಏ ಬಾಳೊ | ತೆಗೆಯೆಂದು
ಎದೆ ಗಟ್ಟಿ ಮಾಡಿದಳು
ಹೆದ್ದೊರೆಯ ನೋಡಿದಳು
ಬಾಲೆ ಲಲಿತಾಂಗಿ.
ಮಾನವನೆ ಬಯಸುತ್ತ
ತನ್ನ ಕತೆ ನೆನೆಯುತ್ತ
ದುಃಖದಿಂ ತುಂಬುತ್ತ
ನರಸತಿಗೆ ಮುನಿಯುತ್ತ
"ಪರರೊಡವೆ ಬಯಸುವರು
ಪರವಧುವ ಕೋರುವರು
ಲೋಕ ಕಂಟಕರಿವರು
ವಂಶವಿದು ಬೆಳೆಯದಿರಲಿ;
ಕ್ರೂರ ಶತ್ರುಗಳಿವರ
ರಾಜ್ಯದೈಸಿರಿ ಪಿಡಿದು
ಭೋಗ ಭಾಗ್ಯವ ಪಿಡಿದು
ಇವರ ಮಡದಿಯರೊಡನೆ
ಇವರ ಮಡದಿಯುರುಡುಗೆ.
ಸುಳಿಸುಳಿದು ಪೊರಡಿಸಲಿ
ಗತಿಗೆಡಿಸಿ ಸರಳಿಸಲಿ
ಎನ್ನೊಡಲ ಕಷ್ಟಗಳು
ಎಂದೆಂದು ಮರೆಯದಿರಲಿ"
ಎಂದು ಬಿರುನುಡಿ ನುಡಿದು
ಕಣ್ಣೀರು ಹರಿಯುತಿರೆ
ತುಂಬು ಹೊಳೆ ಹರಿಯುತಿರೆ
ದುಃಖ ಮೂರ್ಛಿತೆಯಾಗಿ
ಕ್ರೋಧ ಮೂರ್ಛಿತೆಯಾಗಿ
ಶಪಿಸಿದಳು ಬಾಲೆ
ತುಂಬು ಹೊಳೆ ಪಾಲಾಗಿ
ಬಿದ್ದಳಾ ಬಾಲೆ.
ಕಾರ್ಮೋಡ ತಂಡಗಳು
ಸಿಡಿಲು ಕಿಡಿಗಳ ಸೂಸಿ
ನಭದಲ್ಲಿ ಗಜರಿದವು
ಬೆಟ್ಟಗಳು ಮೊಳಗಿದವು
ಭೂಮಾತೆ ನಡುಗಿದಳು
ಕತ್ತಲೆಯ ಮೊತ್ತದಲಿ
ಕಾಳರಕ್ಕಸಿ ರೂಪು
ದೆಸೆದೆಸೆಗೆ ಮುಡಿದುದು
ಪರರೊಡನೆ ಬಯಸುವರ
ಕಬಳಿಸುವ ತೆರದಲ್ಲಿ.
ಇಲ್ಲೊಮ್ಮೆ ಮುಳುಗಿದಳು
ಅಲ್ಲೊಮ್ಮೆ ತೇಲಿದಳು
ಬಂಡೆಯನು ತಾಗಿದಳು
ಸಾವೆಂದು ಕೂಗದೆಯೆ
ಭಯವೇನು ಇಲ್ಲದೆಯೆ
ತೇಲಿದಳು ಮುಳುಗಿದಳು;
ಕೊಚ್ಚಿ ಹೋದಳು ದೂರ
ಪಾಪಿ ನೆಲದಿಂ ದೂರ
ಮುಳುಗಿದಳು ತೇಲಿದಳು;
ಸುಳಿಯಲ್ಲಿ ಸಿಕ್ಕಿದಳು
ಸುಳಿಯೊಡನೆ ಸುತ್ತಿದಳು
ಬಿಟ್ಟ ಮಂಡೆಯು ಚೆದರಿ
ಉಟ್ಟ ಸೀರೆಯು ಉಬ್ಬಿ
ಸುತ್ತುತ್ತ ಇಳಿಯುತ್ತ
ಚೆಲುವು ಮುಖ ತಿರುಹುತ್ತ
ತಣ್ಪೀವ ತಾಯಿಯನು
ನೆರೆಪೊರೆವ ತಾಯಿಯನು
ತೆಕ್ಕೆಯಲಿ ಬಿಗಿದಪ್ಪಿ
ನಲ್ಮೆಯಿಂ ಕಣ್ಮುಚ್ಚಿ
ಮೆಲಮೆಲನೆ ಇಳಿದಿಳಿದು
ನರಲೋಕದತ್ತಣಿಂ
ಮರೆಯಾಗಿ-ಮರೆಯಾಗಿ,
ಪಾಪಿಗಳ ಕಾಮುಕರ
ಕಣ್ಣಿಂದ ಮರೆಯಾಗಿ-
ಜಲದೇವಿಯುದರದೊಳು
ಅಡಗಿ ಹೋದಳು ದೇವಿ
ದಂಡನಾಧನ ಮಡದಿ
ಚೆಲುವೆ ಲಲಿತಾಂಗಿ.
ಕವಿಯ ಸೋಲು
(ಏಕಾಂಕ ನಾಟಕ)
ಪಾತ್ರಗಳು
೧. ಕವಿರಾಜ
೨. ಘೂಕರಾಜ
ಕನಿಯ ಸೋಲು
(ಏಕಾಂಕ ನಾಟಕ)
[ಕವಿಯ ಮನ ಬೆಳಗಿನ ಜಾವ, ಕವಿ ತನ್ನ ಕೊರಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ; ಕೊರಡಿಯ ಕಿಟಕಿಗಳು ಉತ್ತರಾಭಿಮುಖವಾಗಿವೆ, ಎರಡೂ ಕಿಟಕಿಗಳಿರುವುವು,ಸುಮಾರು ನಾಲ್ಕು ಅಡಿ ಉದ್ದ ಮೂರಡಿ ಆಗಲ ಒಂದೊಂದಕ್ಕೂ ಮೇಲಿನ ಬಾಗಿಲು ಕೆಳಗಿನ ಬಾಗಿಲು ಎಡ ಬಲ ಭಾಗಗಳಲ್ಲಿ ಇರುವುವು. ಕೊರಡಿಯ ಉದ್ದ ೧೨ ಅಡಿಗಳು, ಅಗಲ ೧೦ ಅಡಿಗಳು, ಎತ್ತರ ೧೦ ಅಡಿಗಳು. ಒಳಗಡ ವಿದ್ಯುತ್ತಿನ ದೀಪ ಉರಿಯುತ್ತಿದೆ, ಕವಿಯು ಮಂಚದಮೇಲೆ ಒಬ್ಬನೇ ಮಲಗಿದ್ದಾನೆ. ಮಂಚ ೬|| ಅಡಿ ಉದ್ದ, ೩|| ಅಡಿ ಅಗಲವಿದೆ ತಲೆಯ ಭಾಗದಲ್ಲಿ ಕವಿಯು ತಾನು ಬರೆದ ಕವಿತೆಗಳನ್ನೆಲ್ಲ ಸೇರಿಸಿ ಇಟ್ಟಿರುವನು. ಹಿಂದಿನ ಸಾಯಂಕಾಲ ಹೆಚ್ಚಾಗಿ ಕಾಫಿ ಕುಡಿದದ್ದರಿಂದ ಕವಿಗೆ ಸರಿಯಾಗಿ ನಿದ್ದೆ ಬಾರದೆ ಆಗಾಗ ಹೊರಳು ತಿರುವನು. ಮನೆಯ ಮುಂಭಾಗದ ಮರದ ಮೇಲೆ ಮೂಕರಾಜನು ಅಸಮಾಧಾನ ದಿಂದ ಬಂದು ಕುಳಿತಿರುವನು. ಕೊರಡಿಯ ಕಿಟಕಿಗಳು ಮುಚ್ಚಿರುವುದರಿಂದ ಎರಡು ಬಾರಿ ಕೂಗುವನು, ಕವಿ ಎದ್ದು ಕಿಟಕಿಯೊಂದನ್ನು ತೆಗೆದು ನೋಡಿ, ಪುನಃ ಮಲಗಿಕೊಳ್ಳುವನು. ಆಗ ಘಟಕರಾಜನು ಕೂಗುವನು, ಮಾತಿಗಾರಂಭ ಮಾಡುವನು.]
ಘೂ. ರಾ.- ಹೊತ್ತಾಯಿತೇಳಯ್ಯ ಸಾಕು ನಿನ್ನಯ ಗರ್ವ,
- ಎನಗೆ ಉತ್ತರಕೊಟ್ಟು ಬಳಿಕ ನೀ ಮಲಗಯ್ಯ,
ಕವಿ ರಾ.- ಅರುಣೋದಯಕೆ ಮುನ್ನ ಕೂಗುವನು ಆರಿವನು ?
ಘೂ. ರಾ.-ನಾ ಬರುವೆನೆಂದರಿದು ಪಾಪಿ ರವಿಯಂದದಲಿ
- ಹೆದರಿ ಹಾಸಿಗೆ ಹಿಡಿವೆ; ನಾ ತೆರಳೆ, ಧೈಯ್ಯದಿಂ
- ಬಿಟ್ಟಿದ್ದು ರಾಗಮಂ ಬೀರುತಿಹೆ! ಏನಯ್ಯ
- ಲಜ್ಜೆಯೆಲ್ಲದ ಬಾಳು.
ಕವಿ ರಾ.- ನಿದ್ದೆಗಣ್ಣಾಗಿಹುದು,
- ಮಂಜು ತೆರೆ ಮರೆಯಲ್ಲಿ ಕಾಂಬಂತೆ ಕಾಣುವುದು.
- ನೀನೊಳಗೆ ಬಾರಯ್ಯ, ಘೂ.ರಾ.- ಪರಮಪಾತಕ ನೀನು!
- ರವಿಯ ಮರಿಗಳ ತಂದು ಅವರ ಮಧ್ಯದಿ ನಿಂದು
- ಏನೆನ್ನ ಕರೆಯುವೆಯೊ, ಆದರವ ತೋರುವೆಯೋ !
- ಸಾಯೆ ಸರಸಂ ಸಾಕು, ದುರ್ಬುದ್ಧಿಯದು ಸಾಕು
- ನಿನ್ನ ಮನೆ ಹೋಗಲೊಲ್ಲೆ, ನಿರಪರಾಧಿಗಳಾವು,
- ಎಮ್ಮನೀ ಹಳಿದಿರುವೆ ಅಪಮಾನ ಮಾಡಿರುವೆ.
- ಹೇಳಯ್ಯ, ಕಾದ ಸೀಸವನೆಂದು ಸುರಿದೆವೋ
- ನಿನಗೆ ಕೆಡಕೇನು ಮಾಡಿರುವೆವೋ ಹೇಳಯ್ಯ,
- ತಲೆಯೆತೆ ಕೆರಯುವೆಯೋ ಮೇಲೇನು ನೋಡುವೆಯೊ
- ಕಣ್ಣುಗಳನೇಕುಜ್ಜುವೆಯೊ, ಅರಿಯದಂತೇಕೆ
- ನಟಿಸುವೆಯೊ ಆಷಾಢಭೂತಿಯೆಂಬುದ ಬಲ್ಲೆ.
ಕವಿ ರಾ.- ನಿಮ್ಮ ನಾನೆಂದು ಹಳಿದೆನೆ ? ನಿಮಗೆ ನಾನೆಂದು
- ಅಪಮಾನ ಮಾಡಿದೆನೋ ? ನೆನಪಿಲ್ಲ, ನೆನಪಿಲ್ಲ.
- ನೀನಾರೊ ಮೊದಲೆನಗೆ ತಿಳಿದಿಲ್ಲ. ಆರಯ್ಯ?
ಘೂ.ರಾ.-ಅಹುದಹುದು ನೆನಪಿಲ್ಲ! ಏಕಿರುವುದೋ ನಿನಗೆ !
- ಏನಾನುಮೊಂದು ಉಪಕಾರವಂ ನೀ ಮಾಡೆ
- ಬಹುಕಾಲ ನೆನಪಿಹುದು; ದಿಟವಯ್ಯ, ದಿನ ದಿನವು
- ಲೆಕ್ಕವಿಲ್ಲದ ರೀತಿ ಅಪಕಾರ ಮಾಡುತಿರೆ
- ನೆನಪಿಲ್ಲ! ನೆನಪಿಲ್ಲ! ದುಷ್ಟ ಮಾನವ ಜನ್ಮ !
- ಪಕ್ಷಿಗಳು ನಾವು ನಿಮ್ಮಂತಲ್ಲ.
ಕವಿ ರಾ.- ಏಕಯ್ಯ
- ಬಲು ಮುನಿಸು ? ನೆನಪಾಗದೆಂದು ದಿಟ
- ನುಡಿಯುತಿರೆ ಏನೇನೋ ಆಡುತಿದೆ, ದೂರುತಿಹೆ.
ಘೂ.ರಾ.- ರಕೋಪವನವನ್ನು ನಾವೆಲ್ಲ ಬಿಟ್ಟಿಹೆವು.
- ನೀನವರ ನಮಗೆ ಹೋಲಿಸಬಹುದೆ? ಹೇಳಯ್ಯ, ಕವಿ ರಾ.- ಅಹಹಾ! ನೆನಪಾಯ್ತು! ಬಂದಿರುವನಾರೆಂದು
- ಅರಿವಾಯು, ಭಾಗ್ಯದೇವತೆ ನೀನು ಬಂದಿರುವೆ
- ದಯವಿಟ್ಟು ಬಾರಯ್ಯ,
ಘೂ, ರಾ.~ ಇವಗೆಷ್ಟು ಸಂತೋಷ !
- ಪಾಪಕಾರವ ಮಾಡಿ ನಲಿಯುತಿಹ ರಾಕ್ಷಸನು !
ಕವಿ ರಾ.- ಈ ಕವಿಯ ಮಂದಿರವ ಪಾವನವ ಮಾಡಯ್ಯ.
ಘೂ, ರಾ.~ ಕವಿರಾಜ ! ಭಾಪುರೇ!
ಕವಿ ರಾ.-ಎನ್ನ ದೊರೆ ಚಿತ್ರವಿಸು,
- ನಿನ್ನ ಸುಡಿ ದಿಟವಕ್ಕೆ ಚಿತ್ರವಿಸು, ಅವರಲ್ಲಿ
- ಕುಳಿತಿರಲು ಕಂಡಂತೆ ಆಡಿದೆನು. ನಿಮಗೇಕೆ
- ಕೋಪವೆಂಬುದನರಿಯೆ ಅಪಮಾನವೇನಾಯ್ಯೋ
- ನಾನರಿಯೆ,
ಘೂ, ರಾ- ಹಸುಗೂಸು ! ನೀನರಿಯೆ! ಎಂತರಿವೆ!
- ಕಿವಿಯಲ್ಲಿ ಕೇಳಿದೆವು ಮನದಲ್ಲಿ ಕೊರಗಿದವು
- ಬೆಳಕು ಕಂಡಂತೆ ಸಂಕಟವಾಯು, ಬಸಿರೆಲ್ಲ
- ಕುದಿಯಾಯ್ತು.
ಕವಿ ರಾ.- ಕಂಡಂತೆ ಆಡಿದರೆ ತಪ್ಪಾಯೆ?
ಘೂ. ರಾ.- ಕಂಡಂತೆ ಆಡಿದೆಯ? ಸಟೆಯ ಹೇಳುವೆಯೆ?
- ಕವಿಯೆಂಬ ಹುಚ್ಚಿನಲಿ ಬಂದಂತೆ ಆಡುವುದೆ?
- ಅವರಂತೆ ನಮಗೇನು ನರೆತ ಹುಬ್ಬುಗಳಿವೆಯೆ ?
- ಅವರಂತೆ ಕಣ್ಣುಗಳು ಪಾತಾಳಕಿಳಿದಿವೆಯೆ ?
- ಅವರಂತೆ ಗೂನುಬೆನ್ನಲಿ ಕುಳಿತು ಮಡಕೆಯಲಿ
- ಕಲ್ಲನಾಡಿಸುವಂತೆ ಮಾತನೇನಾಡುವೆವೆ?
ಎಮ್ಮ ಹೆಸರೆತ್ತಿ ಹೋಲಿಸಬಹುದೆ? ಶಿವ ಶಿವಾ!
ನಮಗಾದ ಅಪಮಾನ ಮತ್ತಾರಿಗೂ ಬೇಡ,
ಮಾಡಬಹುದೇನಯ್ಯ? ಇದು ಧರ್ಮವೇನಯ್ಯ?
“ ಚಿನ್ನ ದಾನಾಡಿನಲಿ" ಹುಟ್ಟಿ ಬೆಳೆದವರಾವು
"ಗಂಧದಾ ಗುಡಿಯಲ್ಲಿ" ಹೆಜ್ಜೆಗಲಿತವರಾವು
"ಬೀಣೆಯಾ ಬೆಡಗಿನಲಿ" ಒಡನಾಡಿದವರಾವು
ಬ್ರಾಹ್ಮಣಗೆ ಲಕ್ಷ್ಮಿಯಂ ಒಲಿಸಿಕೊಟ್ಟವರಾವ
ಕಶ್ಯಪನು ದಾವೋಯಂ ತಂದೆತಾಯಿಗಳೆಮಗೆ
ನೆಲಸಿತ್ತು ನಮ್ಮಲ್ಲಿ ಬುದ್ದಿಯುಂ ಸತ್ಯವುಂ
ಸಂಗೀತ ಸಾಹಿತ್ಯ ಚೌಷಷ್ಠಿ ಕಲೆಗಳುಂ
ಲೋಕದೊಳು ನಮ್ಮಂತೆ ಪಂಡಿತರು ಇಲ್ಲಯ್ಯ,
ನಾರದಗೆ ಸಂಗೀತ ವಿದ್ಯೆಯಂ ಬೋಧಿಸಿದ
ಗಾನಬಂಧುವು ಎಮ್ಮ ಕುಲಜನಾಗಿಹನಯ್ಯ,
ವಿಷ್ಣುಶರ್ಮನ ಕಧೆಯು ಪಂಚತಂತ್ರದ ಕಥೆಯು
ಎಮ್ಮಿಂದ ಬೆಳೆಯಿತ್ತು, ಅದರ ಕಳೆಯೇರಿತ್ತು.
ಸಂಗೀತ ಸಾಹಿತ್ಯ ನಿಪುಣರಲ್ಲದೆ, ರಾಜ
ನೀತಿಯಲ್ಲಿ ಮುಂಚಿದವರಾರುಂಟು ಹೇಳಯ್ಯ,
ಮಲಯಕೇತುವಿನಯ್ಯ ಪರ್ವತಾಧಿಪನ ಬಳಿ
ಎಮ್ಮ ಹೆಸರವನೊಬ್ಬ ಮಂತ್ರಿತನ ಮಾಡಿದನು
ಶತ್ರುಮಂಡಲಕೆಲ್ಲ ಕಗ್ಗ ಪ್ಪು ಕವಿಸಿದನು
ಸಚಿವರಲಿ ಆತನೇ ನಚ್ಚಿಕೆಗೆ ಮೆಚ್ಚಿಕೆಗೆ
ಹೆಸರಾಗಿ ಗುಹೆಗೆ ಕತ್ತಲೆಯಂತೆ ಮೆರೆದನಯ್ಯ,
ಮತ್ತೆ ನೀಂ ಕೇಳಯ್ಯ, ಇರುಳಲ್ಲಿ ನಿಮರ
ತೋಟಿಗಳು ತಳವಾರರಲ್ಲಲ್ಲಿ ತೂಕಡಿಸಿ
ನಿದ್ದೆಗೈಯುತ್ತಿರಲು, ಕಳ್ಳಬಂಟರು ಬಂದು
ಕವಿಯ ಸೋಲು
- ಹೊಂಚುತಿರೆ, ಕೂಗುವೆವು ಕಾಹಿನವರಂದದಲಿ
- ಎಚ್ಚರದಿ ತಿರುಗುವೆವು; ಅಪಶಕುನವಾಯ್ತೆಂದು
- ಹೆದರಿಯೋಡುವರವರು. ಉಪಕಾರವಿಷ್ಟಿರಲು
- ಸುಟ್ಟ ಮಾನವ ಜಾತಿ ಉಪಕಾರವೆಣಿಸುವುದೆ!
ಕವಿ ರಾ.-ಮುಂಗಾರ ಮೊದಲ ಮಳೆ ಜಿರೆಂದು ಸುರಿವಂತೆ
- ಆಲಿಕಲ್ಗಳ ಮಳೆಯು ರಪರಪನೆ ಹೊಡೆವಂತೆ
- ಎಡೆಬಿಡದೆ ನೀಯೆನ್ನ ತಲೆಮೇಲೆ ಮಾತುಮಳೆ
- ಹೊಡೆಯುತ್ತಿವೆ. ಎನ್ನ ದೊರೆ! ಶಾಂತಿಯ೦ ತಾಳಯ್ಯ,
- ನಾನೆರಡು ಮುತ್ತುಗಳನಾಡುವೆನು ಕೇಳಯ್ಯ.
ಘೂ, ರಾ - ಮುತ್ತುಗಳೆ! ಭಾಪುರೇ! ಕವಿರಾಜ!
ಕವಿ ರಾ- ಎನ್ನ ದೊರೆ!
- ನಿನ್ನ ನುಡಿ ಹಿರಿಯ ನುಡಿ ಫಲಿಸುವುದು. ಎನ್ನ ನುಡಿ
- ಚಿತ್ತವಿಸು, ನಿಮಗೆ ನಾನಪಕಾರ ಮಾಡಿದೆನೆ?
- ನಿಮಗಲಂಕಾರಮಂ ನಮಗಲಂಕಾರಮಂ
- ನಲ್ಮೆಯಿಂದಾಡಿದೆನು; ಹಳಿವೆಣಿಕೆ ಎನಗಿಲ್ಲ
- ಮೆಚ್ಚುನುಡಿಯಾಡಿದೆನು; ನಿಮ್ಮ ಉಪಕೃತಿ ಹಿರಿದು
- ನಿಮ್ಮ ದೆಸೆಯಿಂದೆಮಗೆ ಉಪಮಾನ ದೊರೆಯಿತ್ತು,
ಘೂ, ರಾ.- ಉಪಮಾನ ನಿಮಗಾಯು, ಅಪಮಾನ ನಮಗಾಯ್ತು
- ಆಡಿ ಫಲವೇನಯ್ಯ ಬಣ್ಣನೆಯ ಕೊಂಕು ನುಡಿ;
- ರಕ್ತೋಪವನವನ್ನು ಬಿಟ್ಟಿಹೆವು, ಇನ್ನೀಗ
- ಈವೂರು, ಈ ದೇಶ ಎಲ್ಲವಂ ಬಿಡಲಿಹೆವು.
ಕವಿ ರಾ.-ಅರಸು ಮುನಿದರೆ ತಿಳುಹುವುದು ಕಷ್ಟ, ಹೇಳೆನ್ನ
- ದೊರೆಯೆ! ನೀನಿಂತು ಮುನಿದರೆ ನಾನು ಬದುಕುವೆನೆ?
- ಒಲುಮೆಯಿಂ ಎರಡು ನುಡಿ ಕೇಳಯ್ಯ ತಪ್ಪಾಯ್ತು.
೯೧
ಘ, ರಾ. ಎರಡು ನುಡಿ ಕೇಳಾಯ್ತು, ಎಲ್ಲವಂ ಕೇಳ್ತಾಯ್ತು ತಡಮಾಡಿ ಫಲವಿಲ್ಲ, ಇನ್ನೆನಗೆ ಹೊತ್ತಾಯ್ತು ಆಗಲೇ ಪಾಪಿ ಸತ್ಯನು ರಕ್ತವಂ ಕಾರಿ ಹರಣ ಬಿಡುತಿಹನಲ್ಲ. ಕವಿ ರಾ. ತಸ್ಸನೆಸಗಿದೆನಯ್ಯ, ತಪ್ಪನೊಪ್ಪಿದಮೇಲೆ ಮನ್ನಿ ಪುದು ಹಿರಿಯತನ ನೀನೆನ್ನ ಮ ಪುದು, ದಯೆಯಿಂದ ಮನ್ನಿ ಪುದು. ಆರನೇಂ ಬಿಡಬೇಡಿ, ದೇಶವಂ ಬಿಡಬೇಡಿ ರಸವನದಲ್ಲಿ ಮತ್ತೆ ನೀವೈತಂದು ದರ್ಶನವ ಕೊಡಿರಯ್ಯ, ನಿಮ್ಮ ಬೇಡುವೆನಯ್ಯ, ಒಂದೊಂದು ಉಪಮಾನ ಒಂದೊಂದಲಂಕಾರ ನಾನು ಹೇಳುತ್ತಿರಲು ಒಂದೊಂದು ಜಾತಿಯಂ ಜೋಪದಿಂ ಬಿಡುತಿರಲು ನಾಡು ಬಯಲಾಗುವುದು. ಅಲ್ಲಿದ್ದ ಸಿಂಹ ಹುಲಿ ನರಿ ಕರಡಿಗಳನೆಲ್ಲ ಇಂತೆಯೇ ಧೂರ್ತತನದಲ್ಲಿ ಕಳೆದುಕೊಂಡಿದೆವು ಕಡೆಗಲ್ಲಿ ಕಾಡುಕಪಿಯದು. ಕುರಿಯಿಲ್ಲ ಕಾಡುಮನುಜನುಮಿಲ್ಲ, ಎಲ್ಲವಂ ಬಯಲಾಯ್ತು ; ನೀವಾದೊಡಂ ಅಲ್ಲಿ ನೆಲಸಿರ್ದು ಆಗಾಗ ದರ್ಶನವ ಕೊಡತೆಮಗೆ ಸಂತಸವ ಬಿರುತಿರಿ ಬಿಟ್ಟೆನ್ನ ಹೋಗದಿರಿ ಕಾಲೂರಿ ಬೇಡುವೆನು ; ಬಂಧುಗಳು ಬಳಗಗಳು ನೀವೆಲ್ಲ ಹೋಗುತಿರೆ ನಾಡಿನಲಿ ಚೆಲುವೂಂಟೆ ಗೆಲುವುಂಟೆ ಸುಖವುಂಟೆ ? ಎಲ್ಲರುವಂತೆ ನೀನಪಮಾನ ಮಾಡಿರುವೆ ಸಾಕ್ಷಿಗಳು ಆರಾರು ಇಲ್ಲದಿರೆ ನೀನೆನ್ನ ಘ, ರಾ.ಕಏಯ ಸೋಲು ಕವಿ ಲಾ- ಕಾಲ್ವಿಡಿದು ಬೇಡುತಿಹೆ. ಮುನಿಸಿನ್ನು ಬೇಡಯ್ಯ, ಕಾಲ್ವಿಡಿದು ಬೇಡಿರುವ ವಿಷಯವಂ ಜಗಕೆಲ್ಲ ತಿಳಿವಂತೆ ಮುದ್ರಿಪೆನು ; ಓದುವವರಾರುಂಟು ಅವರ ಕೈಯಲ್ಲಿ ಕೊಟ್ಟು ಎಲ್ಲರಿಗೆ ತಿಳಿಸುವೆನು ; ಬೀದಿ ಬೀದಿಯ ಹೊಕ್ಕು ಡಂಗುರವ ಹಾಕುವೆನು ; ಪತ್ರಿಕೆಗಳೆನಿತುಂಟೋ-ದಿನ ದಿನದ ಪತ್ರಿಕೆಯು ವಾರ ವಾರದ ಪತ್ರಿಕೆಯು, ಮಾಸಪತ್ರಿಕೆಯು ಅದಕೆಲ್ಲ ಕಳುಹುವೆನು ; ಮೂರು ತಿಂಗಳಿಗೊಮ್ಮೆ ತಡೆತಡೆದು ಮರು ವರ್ಷಕ್ಕೊಮ್ಮೆ ಬರುತ್ತಿರುವ ಪತ್ರಿಕೆಗಳಾದೊಡಂ ಹುಡು) ಹುಡುಕಿ ಕಳುಹುವೆನು. ಎಲ್ಲರುಂ ಹೊಗಳುವರು ಎನ್ನ ದೊರೆ ! ನಿನಗೇನು ನಾಡಲ್ಲಿ ಹೊಗಳಿಕೆಯೆ ತುಂಬಿಹುದು, ಹೇಳಲೇಂ ಕೇಳಲೇಂ! ಮುಗಿಲನ್ನು ಮುಟ್ಟಿಸುವ ಹೊಗಳಿಕೆಯು ಸಗ್ಗಕ್ಕೆ ಏರಿಸುವ ಹೊಗಳಿಕೆಯು, ತಾರೆಗಳ ಸೂಡಿಸುವ ಚಂದ್ರನಂ ಚುಂಬಿಸುವ ಹೊಗಳಿಕೆಯು ಮೇರುಮಂದರಗಳಿಗೆ ತೂಗು ಉಯ್ಯಲೆ ಕಟ್ಟಿ ತೂಗುವಾ ಹೊಗಳಿಕೆಯು, ಎನ್ನ ದೊರೆ ! ಈಯೆನ್ನ ನಾಡಿನಲಿ ನಿನ್ನ ಹೊಗಳದರುಂಟೆ ? ಏನಿಲ್ಲ ಮೆಂದೊಡಂ ಚಾಮುಂಡಿಗೇರಿಸಲಿ, ಶಿವಗಂಗೆ ಸಾಕೇಳು, ಅವರಾರು ಹೊಗಳದಿರ್ದೊಡೆಯೇನು ? ಏನು ಗತಿ? ಎನ್ನದಿರು, ಬೇರೊಂದು ಹೆಸರಿನಲ್ಲಿ ನಾ ಹೊಗಳಿ ಕೈಲಾಸಕೇರಿಸುವೆ, ಅಲ್ಲದೊಡೆ ವೈಕುಂಠಕೇರಿಸುವೆ, ಸಂಕೋಚ ಬೇಡಯ್ಯ.
ನೀನೊಮ್ಮೆ ಮಂದಹಾಸವ ಸೂಸಿ ಎನ್ನ ಗೃಹ ಬೆಳಗಯ್ಯ, ನಿನ್ನ ಮನದಣಿವಂತೆ ಬಣ್ಣಿಸಲೆ?
(ಘೂಕರಾಜನು ಎಳನಗೆಯನ್ನು ಮಿತವಾಗಿ ನಗುವನು.)
ಸಪ್ತಪಾತಾಳದಲಿ ಕಗ್ಗವಿಯ ಮೂಲೆಯಲಿ
ಮಿನುಗುವಾ ನೀಲಮಣಿಗಳೊ ಕಣ್ಣ ಪಾಪೆಗಳೊ
ಪಾತಾಳ ಗೃಹದ ಮುಂಬಾಗಿಲಲಿ ಸಿಂದಿರುವ
ಎಷ್ಟು ಚಕ್ರಗಳೊ ನೇತ್ರ ಪರಿವೇಷ ಶೋಭೆಗಳೊ-
ಘೂ, ರಾ.- ಸಾಕಯ್ಯ ವರ್ಣನೆಯು, ತಪ್ಪನ್ನು ಒಪ್ಪಿರುವೆ,
ಮೆಚ್ಚಿದೆನು. ಊರಿನಲ್ಲಿ ದೇಶದಲ್ಲಿ ನಾವಿದ್ದು
ಕಳೆಯನ್ನು ಕಟ್ಟುವೆವು ; ಮುನಿಸನ್ನು ಬಿಟ್ಟಿಹೆವು.
ಆದರೀ ನುಡಿಯೊಂದು ಹೇಳುವೆನು ಕೇಳಯ್ಯ
ಅವರು ತೊಲಗುವ ತನಕ ರಕೋಪವನವನ್ನು
ಇಟ್ಟಿಣಿಕಿ ನೋಡಲೊಲ್ಲೆವು ನಾವು; ಅವರೆಂದು
ಉಪವನಕೆ ಕಾಲಿಡದೆ ಬೇರೆಡೆಗೆ ಪೋಗುವರೋ
ಅಂದಲ್ಲಿ ಬಂದಾವು ನೆಲಸುವೆವು. ನಿನಗೊಪ್ಪೊ ?
ಕವಿ ರಾ.-ಎನ್ನ ದೊರೆ! ಎನಗೆಪ್ಪ, ಇನ್ನು ಮಾಡುವುದೇನು
ಅವರೆಂದು ತೋಲಗುವರೋ ನಾನರಿಯೆ. ದೇಶದಲ್ಲಿ
ರಮ್ಯ ವಸ್ತುಗಳೆಲ್ಲ ಹೆರರ ಅನುಭವದಲ್ಲಿ
ಸಾಲುಮಳಿಗೆಗಳೆಲ್ಲ ಹೆರರ ಕೈವಶದಲ್ಲಿ
ನಾವೆಲ್ಲ ನಿರ್ಲಿಪ್ತರಾಗಿಹೆವು. ಎನ್ನ ದೊರೆ1
ರಕ್ಕೋಪವನವನ್ನು ನೀವೆಲ್ಲ ಬಿಟ್ಟಿರಲು
ನಾನೇನು ಬಿಟ್ಟರೆನೆ? ಬಿಟ್ಟಿಹೆನು ಬಿಟ್ಟಿಹೆನು,
ಗೊಗೇಶ್ವರಾಲಯಕೆ ದಿನ ದಿನವು ನಾ ಹೋಗಿ
ಶಾಂತಿಯಂ ಪಡೆಯುವೆನು ; ಎನ್ನು ಮಂ ನಾಡುಮರ
ದಯೆಯಿಂದ ಉಳಿಸಿರುವೆ, ನಿನಗೀಗ ಸಾಷ್ಟಾಂಗ
೯೪
ವಂದನೆಯು, ನಾಡಲಿಹ ಕ್ರಿಮಿ ಕೀಟ ಮೃಗಪಕ್ಷಿ
ಎನ್ನ ಬಂಧುಗಳಯ್ಯ, ತರುಲತೆಗಳೆಲ್ಲವುಂ
ಎನ್ನ ಬಳಗಗಳಯ್ಯ, ನೋಡಿ ಸುಖಿಸುವೆನಯ್ಯ.
(ಘೂಕರಾಜನು ವಂದಿಸಿ ಹೊರಟುಹೋಗುವನು.)