ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ ಅರಸು
ತ್ರಿಗುಣವೆಂಬ ಪ್ರಧಾನರು
ವಶೀಕರಣವೆಂಬ ಸೇನಬೋವ ಸಂಚಲವೆಂಬ ತೇಜಿ
ಅಷ್ಟಮದವೆಂಬ ಆನೆ
ಈರೈದು (ಮನ್ನೆಯ) ನಾಯಕರು
ಇಪ್ಪತ್ತೈದು ಪ್ರಜೆ
ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ
ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು_ ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು
ಅಜಾತನೆಂಬ ಶರಣ ಪ್ರಧಾನಿ ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು
ಅರಸು ಕೂಡಲಚೆನ್ನಸಂಗಯ್ಯನು
ಒಲಿದ ಕಾರಣ.