ವಿಷಯಕ್ಕೆ ಹೋಗು

ಕೆಲವು ಸಣ್ಣ ಕಥೆಗಳು

ವಿಕಿಸೋರ್ಸ್ದಿಂದ

ಕೆಲವು ಸಣ್ಣ ಕಥೆಗಳು (1930)
by ನಿರಂಜನ
90996ಕೆಲವು ಸಣ್ಣ ಕಥೆಗಳು1930ನಿರಂಜನ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ಕೃತಜ್ಞತೆ

[ಸಂಪಾದಿಸಿ]

ಕಳೆದ ಮೂರು ವರ್ಷಗಳಿಂದ ನನ್ನ ಸಮಗ್ರ ಕಥಾಸಮುಚ್ಚಯ ‘ಧ್ವನಿ'ಯ ಕನಸನ್ನು ನಾನೂ, ಮಗಳು ಸೀಮಂತಿನಿಯನೂ ಕಾಣತೊಡಗಿದ್ದೆವು. ಅದು ಸಾವಿರ-ಸಾವಿರದಿನ್ನೂರು ಪುಟಗಳ ನೂರು-ನೂರರವತ್ತು ಕಥೆಗಳನ್ನು ಸಂಕಲಿಸಿ ಮುದ್ರಿಸುವ ಯೋಚನೆ. ಕಥೆಗಳನ್ನು ಪೋಣಿಸುವ ಕೆಲಸ ನಡೆದಿದಾಗ,ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. (ಡಾ.) ಬಿ. ಎ. ವಿವೆಕ ರೈ ಅವರಿಂದ ಒಂದು ಸಂದೇಶ ಬಂತು: “ಧ್ವನಿಯಿಂದ, ಕೆಲವು ಕಥೆಗಳನ್ನು ಆರಿಸಿ ಪ್ರತ್ಯೇಕಿಸ ಬಹುದಲ್ಲ?” ಆ ಸಲಹೆಯ ಪರಿಣಾಮವೇ 'ನಿರಂಜನ: ಕೆಲವು ಸಣ್ಣ ಕಥೆಗಳು' ಸಂಕಲನ.

ಅದಕ್ಕೆ ಒಂದು ಮೌಲಿಕ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. (ಡಾ.) ಹಂಪನಾ ಬರೆದರು.

ನನ್ನ ಆ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಲಯದ ೧೯೮೬-೮೭ರ ಪ್ರಥಮ ಪದವಿ ಪರೀಕ್ಷೆಗೆ ಅವಿಸ್ತರ ಪಠ್ಯವೆಂದು ಸ್ವೀಕೃತವಾಯಿತು. ಆ ಆವೃತ್ತಿಯನ್ನು ಪುತ್ತೂರಿನ ಲಲಿತ ಪ್ರಕಾಶನದವರು ಹೊರತಂದರು.

ಅರ್ಧ ಶತಮಾನದ ನನ್ನ ಸಹಿತ್ಯ ಕೃಷಿಯನ್ನು(೧೫,೦೦೦ ಪುಟಗಳಿಗೂ ಹೆಚ್ಚು) ಮೂವತ್ತು ಸಂಪುಟಗಳಲ್ಲಿ ಪ್ರಕಟಿಸಲು ಮುಂದೆ ಬಂದವರು ಕನ್ನಡ ಅಕ್ಷರಲೋಕದಲ್ಲಿ ಸಾಹಸಕ್ಕೆ ಇನ್ನೊಂದು ಹೆಸರಾದ ಐಬಿಎಚ್ ಪ್ರಕಾಶನದ ಜನರಲ್ ಮಾನೇಜರ್ ಶ್ರೀ ಜಿ. ಕೆ. ಅನಂತರಾವನ್. ಈ ವಿಶಿಷ್ಟ ಸರಣಿಯ ಮೊದಲ ಎರಡು: ಜೋಡಿ ಸಂಪುಟ 'ಧ್ವನಿ'. ಇದು ಪ್ರಕಟವಾಗುತ್ತಿದ್ದಂತೆ,ಒಂದು ಸಂದೇಶ ಬಂತು. ಈ ಸಲ ಧಾರವಾಡದಿಂದ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೆಶಕ ಪ್ರೊ. (ಡಾ.) ಎಸ್.ಎಂ. ವೃಷಭೇಂದ್ರಸ್ವಾಮಿ ಅವರಿಂದ. “ನಿರಂಜನ: ಕೆಲವು ಸಣ್ಣ ಕಥೆಗಳು' ಕರ್ನಾಟಕ ವಿಶ್ವವಿದ್ಯಾಲಯದ ಬಿ. ಎ. ಪದವಿ ಪ್ರಥಮ ಭಾಗಕ್ಕೋಸ್ಕರ ಉಪಪಠ್ಯವೆಂದು ಆಯ್ಕೆಯಾಗಿದೆ.”

ಆ ಕಾರಣದಿಂದ 'ನಿರಂಜನ: ಕೆಲವು ಸಣ್ಣ ಕಥೆಗಳು' ಸಂಕಲನದ ಈ ಹೊಸ ಆವೃತ್ತಿ ಹೊರಬರುತ್ತಿದೆ.

ಮೇಲೆ ಹೆಸರಿಸಿರುವ ಎಲ್ಲ ಮಹನೀಯರಿಗೆ ನಾನೂ, ಪುಸ್ತಕದ ಕೃತಿ ಸ್ವಾಮ್ಯ ಹೊಂದಿರುವ ಸೀಮಂತಿನಿಯನೂ ಕೃತಜ್ಞರು.


೧೫ನೇ ಮೇ ೧೯೮೭
-ನಿರಂಜನ

'ಕಥೆ'
515 (ಹೊಸತು 702), 7ನೇ ಮುಖ್ಯ ಬೀದಿ
46ನೇ ಅಡ್ಡರಸ್ತೆ, 5ನೇ ಬಾಕ್'
ಜಯನಗರ, ಬೆಂಗಳೂರು-560 041.

ಮುನ್ನುಡಿ
7
೧ ಬಾಪೂಜಿ!...ಬಾಪೂ!...
೨ "ಎಣ್ಣೆ! ಚಿಮಿಣಿ ಎಣ್ಣೆ!"
೩ ಮೈಖೆಲ್‍ಮಾಸ್ ಪಿಕ್‍ನಿಕ್
೧೪
೪ ರಕ್ತ ಸರೋವರ
೧೯
೫ ಕೊನೆಯ ಗಿರಾಕಿ
೨೬
೬ ತಿರುಕಣ್ಣನ ಮತದಾನ
೩೫
೭ ಒಂದೇ ನಾಣ್ಯದ ಎರಡು ಮೈ
೪೫
೮ ಒಂಟಿ ನಕ್ಷತ್ರ ನಕ್ಕಿತು
೫೬
೯ ಹಮಾಲ ಇಮಾಮ್ ಸಾಬಿ
೬೪
೧೦ ಹರಕೆಯ ಖಡ್ಗ
೮೦
ಕಥೆಗಾರನ ಟಿಪ್ಪಣಿ
೯೨

ಮುನ್ನುಡಿ

[ಸಂಪಾದಿಸಿ]

ನಿರಂಜನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ನಮ್ಮ ಸಮಕಾಲೀನ ಸಾಹಿತಿಗಳಲ್ಲಿ ಅವರು ಮಹತ್ವದ ಲೇಖಕರು. ಅವರ ಬರವಣಿಗೆಯ ಹರಹು ಸಾಕಷ್ಟಿದೆ. ಅವುಗಳಲ್ಲಿ ಕಥೆ ಕಾದಂಬರಿ ಅಂಕಣ ಬರೆಹ ಪ್ರಮುಖವಾದುದು. ಇವಲ್ಲದೆ ಅವರು ಕಿರಿಯರಿಗಾಗಿ ಸಿದ್ಧಪಡಿಸಿಕೊಟ್ಟ 'ಜ್ಞಾನಗಂಗೋತ್ರಿ' ವಿಶ್ವ ಕೋಶದ ಏಳು ಸಂಪುಟಗಳು ಕನ್ನಡಕ್ಕೆ ಹೊಸದು, ವಿಶಿಷ್ಟ. ಅವರ ಸಂಪಾದಕತ್ವದಲ್ಲಿ ಹೊರಬಂದ 25 ಸಂಪುಟಗಳ 'ವಿಶ್ವಕಥಾ ಕೋಶ'ವೂ ಆ "ಮಾದರಿಯಲ್ಲಿ ಮೊದಲನೆಯದು; ಅದು ಕನ್ನಡ ಕಥೆಗಳ ಭಂಡಾರಕ್ಕೆ ಬೆಲೆಯುಳ್ಳ ವಿನೂತನ ಕೊಡುಗೆ.

ಕರ್ನಾಟಕದ ಗಡಿಗಳನ್ನು ದಾಟಿ ಅನ್ಯಭಾಷಾವಲಯಕ್ಕೆ, ಜಾಗತಿಕ ವೇದಿಕೆಗೆ ಪರಿಚಿತರಾಗಿರುವ ಕನ್ನಡದ ಕೆಲವೇ ಲೇಖಕರಲ್ಲಿ ನಿರಂಜನ ಗಣ್ಯರು. ಚಿರಸ್ಮರಣೆ, ವಿಮೋಚನೆ ಮೃತುಂಜಯ ಮೊದಲಾದ ಅವರ ಕಾದಂಬರಿಗಳು ತೆಲುಗು ತಮಿಳು ಮಲೆಯಾಳಂ ಬಂಗಾಳಿ ರಷ್ಯನ್ ಇಂಗ್ಲಿಷ್ ಮುಂತಾದ ಸಂಪನ್ನ ಭಾಷೆಗಳಿಗೆ ಅನುವಾದಗೊಂಡಿವೆ. ನಿರಂಜನರ ಕುಲಾವಿಗೆ ಅನೇಕ ಸಾಧನೆಗಳ ಗರಿಗಳಿವೆ. ಬಹುಮುಖ ಪ್ರತಿಭೆಯ ಅವರ ದೈತ್ಯಶಕ್ತಿ, ಹಲವು ಕಾರ್ಯಕ್ಷೇತ್ರಗಳಲ್ಲಿ ಪ್ರಕಟವಾಗಿದೆ. ಪ್ರತಿಕೂಲ ಪರಿಸ್ಥಿತಿಗಳು ತೊಡರುಗಾಲು ಹಾಕಿ ಬದುಕು ಎಸೆದ ಸವಾಲುಗಳನ್ನು ತಮ್ಮ ಚಿರಂತನ ಕ್ರಿಯಾಶೀಲತೆಯಿಂದ ಎದುರಿಸಿದ ನಿರಂಜನರು ಕಡೆಗೆ ಕಾಲನನ್ನೂ ಕಡೆಗಣಿಸಿ 'ಮೃತ್ಯುಂಜಯ'ರಾದದ್ದೇ ಒಂದು ರೋಚಕ ಕಾದಂಬರಿ. ಕ್ಷೇಯೋಭೆಗೊಳ್ಳಲು ಸಹಜವಾಗಿಯೇ ಇರುವ ವಾತಾವರಣದ ನಡುವೆಯೂ ಪ್ರಾಂಜಲ ಅಂತಃಕರಣವನ್ನು ಕಲುಷಿತ ವಾಗದಂತೆ ಆದ್ರರ್ಯವಾಗಿರಿಸಿಕೊಂಡರು. ಭಿನಾಭಿಪ್ರಾಯಗಳ ವ್ಯವಸ್ಥೆಗಳೊಂದಿಗೆ ರಾಜಿ ಮಾಡಿಕೊಳ್ಳದೆ ಆರೋಗ್ಯಕರ ಅಂತರವಿಟ್ಟುಕೊಂಡವರು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಹೇಳುವುದಾದರೆ ನಿರಂಜನ ತುಂಬ ಎತ್ತರದ ವ್ಯಕ್ತಿತ್ವದವರು. ಬರವಣಿಗೆಯನ್ನು ಗಂಭೀರವಾಗಿ, ಒಂದು ಶಿಸ್ತಾಗಿ ಸ್ವೀಕರಿಸಿದವರು. ಕೆಲವು ಸಣ್ಣ ಕಥೆಗಳು' ಆಯ್ದ ಹತ್ತು ಕಥೆಗಳ ಸಂಕಲನ, ವಾಸ್ತವವಾಗಿ ಅವರ ಕಥೆಗಳ ಸಂಖ್ಯೆ ದೊಡ್ಡದು, ಅಷ್ಟು ಕಥೆಗಳೂ ಒಂದೆರಡು ಸೇರಿದರೆ ನಿರಂಜನರ ಒಟ್ಟು ಕಥೆಗಳ ಸ್ವರೂಪದರ್ಶನವಾದೀತು. ಅಂಥದೊಂದು ಪ್ರಯತ್ನ ನಡೆದಿದೆ. ಅವರ ಸಮಗ್ರ ಕಥೆಗಳ ಬೃಹತ್ ಸಂಪುಟವೊಂದು 'ಧ್ವನಿ' ಎಂಬ ಹೆಸರಿನಿಂದ ಇಷ್ಟರಲ್ಲೇ ಹೊರಬರಲಿದೆ. [] ಪ್ರಾಯಃ ಒಬ್ಬ ಕಥೆಗಾರನ ಇಷ್ಟೊಂದು ಕಥೆಗಳು ಇರುವ ಸಮಗ್ರ ಗ್ರಂಥ ಕನ್ನಡದಲ್ಲಿ ಇನ್ನೊಂದು ಇರಲಾರದು, ಇಷ್ಟು ಕಥೆಗಳನ್ನು ಬರೆದ ಇನ್ನೊಬ್ಬ ಕಥೆಗಾರ ಯಾರು ಎಂದೂ ಹುಡುಕಬೇಕಾದೀತು. ಸಂಖ್ಯೆಯ ಹೆಚ್ಚಳಕ್ಕಾಗಿ ಹೀಗೆ ಬೀಗಿ ಹೇಳುತ್ತಿಲ್ಲ. ಗುಣ ಗ್ರಾಹಿ ವಸ್ತುನಿಷ್ಠ ವಿಮರ್ಶೆಯ ಮಾನದಂಡದಿಂದಲೂ ನಿರಂಜನರು ನಮ್ಮ ಸತ್ವಯುತ ಬರೆಹಗಾರರೆಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ.

ಸಮಕಾಲೀನ ಕನ್ನಡ ಸಾಹಿತ್ಯ ವಲಯದಲ್ಲಿ ನಿರಂಜನ ಯಾಕೆ ಮತ್ತು ಹೇಗೆ ಒಬ್ಬ ಮಹತ್ವದ ಲೇಖಕರೆಂಬುದನ್ನು ಪರಿಗ್ರಹಿಸಲು ಈ ಸಂಕಲನದ ಹತ್ತು ಕಥೆಗಳು ದಿಕ್ಕ ಚಿಯಾಗಬಲ್ಲುವು. ಒಂದು ವ್ಯವಸ್ಥಿತ ಸಂಯೋಜನೆ ಯಿಂದಾಗಿ ಈ ಸಂಕಲನಕ್ಕೆ ಚಾರಿತ್ರಿಕ ಸ್ಥಾನವೂ ಪ್ರಾಪ್ತವಾಗಿದೆ. ನಿರಂಜನರು ಬರೆದಿರುವ ಕಥೆಗಳ ಮೊತ್ತ ಹೆಚ್ಚಿದೆಯೆಂದು ಆಗಲೇ ಹೇಳಿದ್ದೇನೆ. ಆ ರಾಶಿ ಯಿಂದ ಕೇವಲ ಹತ್ತು ಕಥೆಗಳನ್ನು ಎತ್ತಿಕೊಳ್ಳುವುದು ಸುಲಭದ ಕೆಲಸವಲ್ಲ. ಆ ಬಗೆಯ ಗುರುತರ ಹೊಣೆಯನ್ನು ಅರಿತು ಈ ಸಂಕಲನವನ್ನು ಸಿದ್ಧ ಪಡಿ ಸಿರುವುದರಿಂದ ಇದಕ್ಕೊಂದು ಪ್ರಾತಿನಿಧಿಕ ಸ್ವರೂಪ ಬಂದಿದೆ. ಕಾಲು ಶತ ಮಾನದ ಕಾಲಮಾನ ಘಟಕದಲ್ಲಿ, 1941 ರಿಂದ 1965ರ ಅವಧಿಯಲ್ಲಿ ಬರೆದ ಕಥೆಗಳಲ್ಲಿ ಹತ್ತನ್ನು ಆರಿಸಲಾಗಿದೆ. ಕಥೆಗಾರರ ಕಥನ ಕಲೆಯ ವಿಕಾಸದ ಮಜಲುಗಳನ್ನು ಅರಿಯಲೂ ಈ ಸಂಕಲನ ನೆರವಿಗೆ ನಿಲ್ಲಬಹುದು.

ತೀರ ಇತ್ತೀಚಿನವರೆಗೂ ನಿರಂಜನರು ಪ್ರವಾಸಿಯಂತೆ ಬಾಳಿದವರು. ಅವರು ಇದ್ದು ಬಂದ .ಸ್ಥಳಗಳು, ಕಾರ್ಯಕ್ಷೇತ್ರ ಭಿನ್ನವಾದುವು. ಇಲ್ಲಿನ ಕಥೆಗಳು ಕೂಡ ವಿವಿಧ ಜಾಗಗಳಲ್ಲಿದ್ದು ಬರೆದಿದ್ದಾರೆಂದು ಅವರ ಟಿಪ್ಪಣಿಗಳಿಂದ ತಿಳಿದುಬರುತ್ತದೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಮೊದಲಾದ ಊರುಗಳು ಈ ಕಥೆಗಳ ಜನ್ಮ ಸ್ಥಳಗಳು. ಅದರಿಂದ ಭಾಷಾ ಪ್ರಭೇದವೂ ಸೇರಿಕೊಂಡಿದೆ. ವಿವರಗಳಲ್ಲಿರುವ ಪ್ರಾದೇಶಿಕ ಭಿನ್ನತೆಯ ಗಣನೀಯವಾಗಿದೆ. ಯುದ್ಧ ಕಾಲದ ಕಥೆಗಳೊಂದಿಗೆ ಬೇರೆ ಬಗೆಯ ಕಥೆಗಳೂ ಬೆಸೆದುಕೊಂಡು ಒಟ್ಟು ಸಂಕಲನ ಹಲವು ಧ್ವನಿ-ವರ್ಣಗಳ ಸಮುಚ್ಚಯವಾಗಿದೆ. ಈ ಹತ್ತು ಕಥೆಗಳಲ್ಲಿ ಎಷ್ಟೊಂದು ವೈವಿಧ್ಯ! ವಿವಿಧ ವರ್ಗ, ಜಾತಿ, ಸ್ವಭಾವದ ಜನರನ್ನು ಕಾಣುತ್ತೇವೆ. ಪರಿಶಿಷ್ಟರು, ಕ್ರಿಶ್ಚಿಯನರು, ಸಾಬರು, ಶಿಷ್ಟರು, ದುಷ್ಟರು, ನಮಕ್ ಹರಾಮರು ಎಲ್ಲ ಇಲ್ಲಿದ್ದಾರೆ. ಎಲ್ಲರೂ ಒಳ್ಳೆಯ ವರೂ ಅಲ್ಲ, ಕೆಟ್ಟವರೂ ಅಲ್ಲ. ಜೀವನ ಇರುವುದು ಹಾಗೆ. ಮನುಷ್ಯ ಸ್ವಭಾವ ಅಂತಹುದು. ಇಂಥವರು ನಮ್ಮ ನೆರೆಹೊರೆಯಲ್ಲಿ ಇರುತ್ತಾರೆ, ನಮ್ಮ ಮನೆಯೊಳಗೇ ಇರುತ್ತಾರೆ, ಕಡೆಗೆ ನಾವೇ ಆಗಿರುತ್ತೇವೆ. ಕೆಲವು ವಿಶಿಷ್ಟ ಕ್ಷಣಗಳಲ್ಲಿ ಕಥೆಯ ನಿರ್ದಿಷ್ಟ ಸಂದರ್ಭಗಳು ನಮ್ಮ ಮುಖಕ್ಕೆ ಹಿಡಿದ ಕನ್ನಡಿಗಳಾಗಬಹುದು.

ಇಲ್ಲಿನ ಕಥೆಗಳಿಗೆ ಒಂದು ಒಟ್ಟು ಒಳನೋಟವನ್ನು ಹರಿಸುವ ಮೊದಲು ಬಿಡಿಬಿಡಿಯ ಚೆಲುವನ್ನು ನೋಡಬಹುದು. ನಿರಂಜನ ಇನ್ನೂ ಶಾಲಾ ಬಾಲಕನಾಗಿರುವಾಗಲೇ 'ಮೋಹಜಾಲ' ಕಥೆಯನ್ನು ಬರೆದವರು. ಸಾಹಿತ್ಯವಾಗಲಿ, ಮೋಹವಾಗಲಿ ತಿಳಿಯದಿದ್ದ ದಿನಗಳಲ್ಲಿ, ಗಿಡದಿಂದ ಸಹಜವಾಗಿ ಒಳಗಿನೊತ್ತಡದಿಂದಲೇ ಮೊಗ್ಗು ಮೂಡುವಂತೆ ಕಥೆ ಹುಟ್ಟಿತ್ತು. ಹೀಗೆ 1937 ರಿಂದ ಆರಂಭವಾಗಿ ಇಂದಿನವರೆಗೆ ನಿರಂತರವಾಗಿ ಬರೆಯುತ್ತ ಬಂದಿರುವ ಕಥೆಗಳಲ್ಲಿ ಹತ್ತನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಈ ಸಂಗ್ರಹದಲ್ಲಿರುವ ಮೊದಲನೆಯ ಕಥೆ ರಚಿತವಾದದ್ದು 1941, ಕಡೆಯ ಕಥೆ 1965, ಅಂದರೆ 25 ವರ್ಷಗಳ ಬೆಳೆಯಲ್ಲಿ ಆಯ್ದ ಹತ್ತು ತೆನೆಗಳು ಇಲ್ಲಿನ ಕಥೆಗಳು.

'ಬಾಪೂಜಿ! ಬಾಪೂ!' ಈ ಕಥಾಗುಚ್ಚದ ಮೊದಲ ಪುಷ್ಪ, ಸ್ವಾತಂತ್ರದ ರೂವಾರಿಯಾದ ಬಾಪೂಜಿ ಇನ್ನೂ ಬದುಕಿದ್ದಾಗಲೇ 1941ರಲ್ಲಿ, ಅವರು ಸತ್ತಂತೆ ಕಲ್ಪಿಸಿ ಬರೆದ ಕಥೆಯೆಂಬ ಕಾರಣಕ್ಕಾಗಿಯೂ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ. ಕಲೆ ಭವಿಷ್ಯದರ್ಶಿ ಎಂಬ ಲಕ್ಷಣಕ್ಕೆ ಈ ಕಥೆ ಲಕ್ಷ್ಯವಾಗಿದೆ. ಸ್ವಾತಂತ್ರ್ಯ ಗಳಿಸುವ ಪೂರ್ವದಲ್ಲಿ ಇದ್ದ ಆಸೆ ಆಕಾಂಕ್ಷೆ ಧೈಯೋದ್ದೇಶಗಳು ಸ್ವಾತಂತ್ರ್ಯ ಪಡೆದ ಕೆಲವೇ ವರ್ಷಗಳಲ್ಲಿ ವಿಫಲವಾದದ್ದು ಈಗ ಲೋಕ ಅರಿತಿರುವ ವಾಸ್ತವವಾಗಿದೆ. ಆದರೆ ಸ್ವಾತಂತ್ರ ಬರುವ ಮೊದಲೇ ಅದರ ಹೊಸ್ತಿಲ ಹತ್ತಿರ ನಿಂತುಕೊಂಡು ಕಥೆಗಾರರು ಮುಂದೇನಾಗಬಹುದು ಎಂದು ಆಲೋಚಿಸುತ್ತಿದ್ದಾರೆ. ಆ ಮುನ್ನೋಟ ಕಂಡ ದೃಶ್ಯಾವಳಿ ಇಲ್ಲಿ ಸವಿವರವಾಗಿ ದಾಖಲಾಗಿದೆ. ಕಾರ್ಖಾನೆಯ ಮಾಲಿಕ ಈಗ ವಿದೇಶಿ ಅಲ್ಲ ನಮ್ಮವನೇ ಇದ್ದಾನೆ. ಅವನ ತಲೆಯ ಮೇಲೆ ಖಾದಿ ಟೋಪಿಯ ಇದೆ. ಬಾಪೂಜಿಯವರ ತೈಲ ಚಿತ್ರವನ್ನೂ ತೂಗುಹಾಕಿದ್ದಾನೆ. ಯಂತ್ರಗಳ ಯಜಮಾನ ಹೊರಗೆ ದೇಶಭಕ್ತನ ವೇಷದಲ್ಲಿ ರಾರಾಜಿಸುತ್ತಿದ್ದಾನೆ. ಒಳಗೆ ಬೇರೆಯೇ ಆಗಿದ್ದಾನೆ. ಸತ್ಯ, ಅಹಿಂಸೆ, ಗ್ರಾಮೋದ್ಧಾರ ಮುಂತಾದ ಸ್ವಾತಂತ್ರ್ಯದ ಮಂತ್ರಗಳು ತಮ್ಮ ಅರ್ಥ ಕಳೆದುಕೊಂಡಿವೆ. ಹೇಳುವುದು ಒಂದು ಮಾಡುವುದು ಮತ್ತೊಂದು, ಈ ನಡೆನುಡಿಗಳ ನಡುವಣ ವಿರಸದೂರವನ್ನು ಇರುಳಿನ ಕನಸು ಸಾಬೀತುಪಡಿಸುತ್ತದೆ. ಆತ್ಮಶೋಧನೆಯ ಕ್ಷಣದಲ್ಲಿ ಬಾಪೂಜಿ ಮಾತಿನ ಚಾಟಿಯಿಂದ ಬಡಿದಂತಾಗುತ್ತದೆ. ಶೋಧನೆ ಹಾಗೂ ಸಮೀಕ್ಷೆಯ ಲಹರಿಯಲ್ಲಿ ಕಥೆ ಮುಂದುವರಿಯುತ್ತದೆ. ಸ್ವಾತಂತ್ರದ ಕನಸು, ನಿರೀಕ್ಷೆ ಕೈಗೂಡದೆ ಹತಾಶೆ ಮಡಗಟ್ಟಿದ ಕ್ಷಣಗಳಲ್ಲಿ ಮೂಡಿದ ಭಾವನೆಗಳ ಪ್ರಕುಬ್ಧ ಸರೋವರವಾಗುತ್ತದೆ, ಆಯಕಟ್ಟಿನ ಜಾಗಗಳಲ್ಲಿ ಕುಳಿತ ಪ್ರಮುಖರು, ಮುಂದಾಳುಗಳು ವ್ಯವಸ್ಥೆಯೊಂದಿಗೆ ಷಾಮೀಲಾಗಿ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದನ್ನು ಹಲವು ತುಣುಕುಗಳಲ್ಲಿ ಕಥೆಗಾರರು ಪರಾಮರ್ಶಿಸಿದ್ದಾರೆ. ಯಾದವೀ ಕಲಹ, ಅಸ್ಪೃಶ್ಯತೆ, ವಿಧೇಯತೆಯ ಸೋಗು- ಇವು ಜೀವಂತವಾಗಿರುವಾಗ 'ಇಲ್ಲ, ಜಗತ್ತು ಇನ್ನೂ ಎಚ್ಚೆತ್ತಿಲ್ಲ' ಎಂಬ ತೀರ್ಮಾನ ಅನಿವಾದ್ಯವಾಗುತ್ತದೆ. ಬಿಡುಗಡೆಯ ಮಂಗಲ ಪ್ರಭಾತ ಬಯಸಿದರೆ ಅದಕ್ಕೆ ಪ್ರತಿಯಾಗಿ ದೊರೆತದ್ದು ಇದೇ ಏನು ಎಂದು ಚಿಂತಿಸ ತೊಡಗುತ್ತೇವೆ.

"ಎಣ್ಣೆ! ಚಿಮಿಣಿ ಎಣ್ಣೆ!” ಯುದ್ಧದ ಕರಾಳ ಹಸ್ತ ಎಷ್ಟು ಕ್ರೂರ ಎಂಬುದರ ಚಿತ್ರಣ. ಯುದ್ಧ ಭಸ್ಮಾಸುರ, ಗೋಳದ ಎಲ್ಲೋ ಮೂಲೆಯಲ್ಲಿ ಯುದ್ಧವಾದರೆ ಅದರ ಬಿಸಿ ಇಡೀ ಭೂಮಂಡಲಕ್ಕೆ ತಟ್ಟುತ್ತದೆ. ಆ ಪಾಪದ ಹೊರೆ ಯಾರ ಯಾರ ಹೆಗಲಿಗೋ ಸಾಗುತ್ತದೆ, ಸಂಬಂಧಪಟ್ಟಿರಲಿ, ಪಡದಿರಲಿ, ಎಲ್ಲರೂ ಬೆಲೆ ತೆರಬೇಕಾಗುತ್ತದೆ. ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತವೆ. ಸುಲಿಗೆ ಮಾಡುವವರಿಗೆ ಸುಗ್ಗಿ. ಉಂಡವನೇ ಜಾಣ. ಸಣ್ಣ ಸಂಸಾರಗಳು ನರಕಕೂಪಗಳಾಗಿ ಕೊಳೆಯುತ್ತವೆ. ಅಶಕ್ತರು ಹುಳುಗಳಂತೆ ಉದುರಿ ಹೋಗುತ್ತಾರೆ. ಯುದ್ಧ ರಾಕ್ಷಸನ ಬಕಾಸುರ ಹೊಟ್ಟೆಗೆ ಎಷ್ಟು ಬಿದ್ದರೂ ತುಂಬುವುದಿಲ್ಲ, ಯುದ್ಧದ ಕಪ್ಪು ನೆರಳಲ್ಲಿ ಮುಗ್ಧ ಸೋಮನ ಬಾಳು ಹೇಗೆ ಮುರುಟಿ ಹೋಗುತ್ತದೆಂಬುದು ಸಾಂಕೇತಿಕ ನಿದರ್ಶನ. ಅಂಥ ಎಷ್ಟೋ ಅಮಾಯಕರ ಬದುಕು ಮೂರಾಬಟ್ಟೆಯಾಗುತ್ತದೆ. ಸೋನು, ಅವನ ಮಗು ಯುದ್ಧದ ದಾಹಕ್ಕೆ ಎರಡು ಅಗಳು ಮಾತ್ರ. ಅರಳಬೇಕಾದ ಸಸಿಗಳು ಬಾಡುತ್ತವೆ. ದಾರುಣ ಘಟನೆಗಳು ಬಹುರೂಪಿಯಾಗಿ ಬಹು ವ್ಯಾಪಕವಾಗಿ ರಿಂಗಣ ಕುಣಿಯುತ್ತವೆ.

ಸೋಮ ವಂಚನೆಯ ಪರಿಚಯವೂ ಇರದ ಸಾದಾ ಸೀದಾ ಹಳ್ಳಿಯ ಮುಕ್ಕ. ಅವನ ಬಯಕೆಗಳು ತೀರಾ ಪರಿಮಿತ, ಪುಡಿಕಾಸುಗಳ ಸಂಪಾದನೆಯಿಂದ ಸಂತೃಪ್ತ. ಸರಳವಾದ ಬದುಕು, ಅತಿ ಸರಳವಾದ ಬಯಕೆ, ಬಡತನದ ರೇಖೆಗೂ ಕೆಳಗಿರುವ ಸೋಮನ ಹೃದಯ ಉದಾರವಾಗಿದೆ. ತಾನು ಹೀಗಿದ್ದರೂ ಆತನಿಗೆ ಇತರರ ಒಳಿತು ಕುರಿತು ಕಳಕಳಿ. ಜನ ಯಾಕೆ ಹೀಗೆ ಮೋಸ ಮಾಡಬೇಕೆಂಬುದು ಅವನಿಗೆ ಅರ್ಥವಾಗದ ಒಗಟು. ಯುದ್ಧ ಯಾತಕ್ಕಾಗಿ ಎಲ್ಲಿ, ಯಾರಿಗಾಗಿ, ತನಗೂ ಅದಕ್ಕೂ ಏನು ಸಂಬಂಧ-ಇವೆಲ್ಲಾ ಯಕ್ಷಪ್ರಶ್ನೆಗಳೇ. ಒಂದು ವಾರಕ್ಕೆ ಬೇಕಾದ ಒಂದು ಶೀಷೆ ಚಿಮಿಣಿ (ಸೀಮೆ ಎಣ್ಣೆ ಸಿಗಲಿಲ್ಲವೆಂಬುದಷ್ಟೇ ಅವನ ತಕರಾರು. ತನಗೆ ತಿಳಿದ ಪರಿಚಿತ ಅಂಗಡಿಯ ರಾಯರು ಕೂಡ ದಿನ ದಿನಕ್ಕೆ ಕ್ಷಿಪ್ರಗತಿಯಲ್ಲಿ ಹೊಂದಿದ ಮಾರ್ಪಾಟಿನಿಂದ ಆತ ಚಕಿತನಾಗುತ್ತಾನೆ. ದುಬಾರಿ ಬೆಲೆ ತೆತ್ತು ದವಸಧಾನ್ಯ ಕೊಳ್ಳುವುದು ತನ್ನಿಂದ ಅಸಾಧ್ಯವೆಂಬ ಹತಾಶ ಸ್ಥಿತಿಗೆ ತಲುಪಿದ ಮೇಲೆ ದೇಹದಲ್ಲಿ ಇಂಗುತ್ತಿರುವ ನೆತ್ತರು ನೆನಪಿಗೆ ಬರುತ್ತದೆ. ಆದರೆ ಪ್ರತಿಭಟಿಸಲು ಬೇಕಾದ ದಾಸ್ತಾನು ಅವನಲ್ಲಿಲ್ಲ. ತನ್ನ ಅಂಗಡಿಯಲ್ಲಿ ಹಗಲು ವ್ಯಾಪಾರವಿಲ್ಲ. ಚಿಮಿಣಿ ಎಣ್ಣೆ ಖರೀದಿಸಿ 'ವೋಚರ್' ಕೇಳಲು ಧೈರಮಾಡಿ ಅಮಾನಿತನಾಗುತ್ತಾನೆ. “ಅನ್ಯಾಯ' ಎಂದು ಹೇಗೋ ಕೂಗುತ್ತಾನೆ. ಮನೆಯಲ್ಲಿ ಮಗಳು ಜ್ವರತಪ್ತಳು. ಕೂಳಿನ ಮುಖ ಕಂಡರೆ ತಾನೆ! ಚಿಮಿಣಿ ಎಣ್ಣೆಯ ಹಂಬಲ ಹೊತ್ತು ಕೈಯಲ್ಲಿ ದೀಪದ ಬುಡ್ಡಿ ಹಿಡಿದು ಹೊರಟ ಸೋಮನ ಪ್ರಜ್ಞೆ ತಪ್ಪುತ್ತದೆ. ಬವಳಿಯಿಂದ ಅರೆ ಅರಿವಿಗೆ ಮರಳಿದ್ದು ಹೋಟಲಿನವರು ಎಸೆದ ಬಿಸಿನೀರಿನಿಂದ, ಬುದ್ಧಿ ಮಾಂದ್ಯಕ್ಕೆ ತಿರುಗಿದ್ದ ಸೋಮ 'ಎಣ್ಣೆ' ಎಂದು ಕೂಗುತ್ತಾ ಹೊರಟರೆ ಹುಡುಗರು ಅವನಿಗೆ ಹುಚ್ಚನ ಪಟ್ಟ ಕಟ್ಟಿದರು. ನಿರ್ದಯಿ ಸಮಾಜ ಆತನನ್ನು ಕಂಡದ್ದು 'ಹುಚ್ಚ'ನಾಗಿ, ವಾಹನವೊಂದು 'ಹುಚ್ಚ' ಸೋಮನನ್ನು ಚರಂಡಿಗೆಸೆದು ಮುಂದೆ ಸಾಗಿತ್ತು. ಸೋಮ ಗುಡಿಸಿ ಬಿಸಾಕಿದ ಕಾಲಕಸಕ್ಕಿಂತ ಕಡೆಯಾಗಿದ್ದ, ಯುದ್ಧ ಕರುಣಿಸಿದ್ದ ಜೀವನ ವಿಧಾನಕ್ಕೆ ಬಲಿಯಾಗಿದ್ದ. ಮೌಲ್ಯಗಳು ಅಪಮೌಲ್ಯವಾಗುವುದು ಈ ಕಥೆಯ ಜೀವನಾಡಿ, ಶ್ರೀಸಾಮಾನ್ಯನ ನಿತ್ಯ ಜೀವನ ನಿರ್ವಹಣೆಗೆ ಬೇಕಾಗುವ ಸೀಮೆ ಎಣ್ಣೆಯ ಮಾರಾಟ ವಿಚಾರದಲ್ಲೂ ಜನ ಚಕ್ಕಂದವಾಡಬಲ್ಲರೆಂದ ಮೇಲೆ ಬೇರೆ ಯಾವುದಕ್ಕೆ ತಾನೇ ಹೇಸುತ್ತಾರೆ!

'ಮೈಖೆಲ್‌ಮಾಸ್‌ ಪಿಕ್‌ನಿಕ್' ಕೂಡ ಈ ಶತಮಾನದ ಐದನೆಯ ದಶಕದ ಆರಂಭ ವರ್ಷಗಳಲ್ಲಿ ಪ್ರಕಟವಾದ ಕಥೆ: ಮೊದಲಿನ ಎರಡು ಕಥೆಗಳೂ ಅಷ್ಟೆ, ಇನ್ನೂ ಇಪ್ಪತ್ತರ ಹರೆಯ ದಾಟದ ಚಿಗುರು ಮೀಸೆಯ ತರುಣನ ವಿಚಾರ ತರಂಗಗಳನ್ನು ಈ ಸಂಕಲನದ ಮೊದಲನೆಯ ಮೂರು ಕಥೆಗಳು ಗರ್ಭಿಕರಿಸಿಕೊಂಡಿವೆ. 'ಮೈಖೆಲ್‌ಮಾಸ್ ಪಿಕ್ನಿಕ್ ಕಥೆಯಲ್ಲಿರುವುದು ಆತ್ಮರತಿಯಲ್ಲಿ ತಲ್ಲೀನಳಾದ ಬೆಡಗಿಯೊಬ್ಬಳ ವಿಡಂಬನೆ. ಲಿಲ್ಲಿ- ಮೇರಿ ಎರಡು ಧ್ರುವಗಳು. ಲಿಲ್ಲಿ ವಿಲಾಸಿನಿ, ಸಿಡುಕಿ, ವೈಯಾರ ಹಾವಭಾವ ವಿಭ್ರಮಗಳ ಮೋಹಿನಿ. ಜತೆಗೆ ತನ್ನ ಮೈಮಾಟಕ್ಕೆ ಸಾಟಿಯಿಲ್ಲವೆಂಬ ಕನಸುಣಿ. ತಾನುಂಟೊ ಮೂರು ಲೋಕವುಂಟೆ ಎಂಬ ಧೋರಣೆ ತಳೆದು ಸಡಗರಿಸುವವಳು. ಆಕೆಯನ್ನು ಹೆತ್ತವರು ಅದೇ ಗತ್ತಿನ ಮನೋಧರ್ಮದವರು. ಇಷ್ಟು ಸಾಲದೆಂಬಂತೆ ಲಿಲ್ಲಿಗೆ ಮೇಲು ಕೀಳೆಂಬ ಸಾಮಾಜಿಕ ದೂರಗಳಲ್ಲಿ ಆದರ. ತನಗಿಂತ ಕೆಳಗಿನ ಅಂತಸ್ತಿನವಳಾದ ಮೇರಿಯ ವಿಚಾರದಲ್ಲಿ ಮರುಕವಿಲ್ಲ. ಸಹಪಾಠಿ ಗೆಳತಿಯನ್ನು ಅರ್ಥ ಮಾಡಿಕೊಂಡು ಸ್ಪಂದಿಸಬಲ್ಲ ತಂತಿ ಕಳೆದುಕೊಂಡಿದ್ದಾಳೆ. ವಿನಾಕಾರಣ ಅತೃಪ್ತಳಾಗುತ್ತಾಳೆ. ಅಸಹನೆ ತುಂಬಿ ತುಳುಕುತ್ತದೆ. ಮೇರಿಯ ಅಣ್ಣ ಕಳಿಸಿದ ಹಣ್ಣಿನ ಬುಟ್ಟಿಯನ್ನು ಮುಟ್ಟಲೂ ಆರಳು ಅವಳ ವಿಚಾರ ಕೇಳಲೂ ಆರಳು. ನೆಮ್ಮದಿಯಾಗಿರಲು ಎಲ್ಲ ಅನುಕೂಲಗಳಿದ್ದರೂ ಅಲ್ಲಿ ಅಸುಖಿ. ಮೇರಿ ಇನ್ನೊಂದು ತುದಿ. ಲಿಲ್ಲಿಯಲ್ಲಿ ಮರೆಯಾಗಿರುವ ಮಾನವೀಯ ಅಂಶಗಳು ಮೇರಿಯಲ್ಲಿ ಸೇರಿಕೊಂಡಿವೆ. ಹೊರಗೆ ಹೋಗಿ ಖುಶಿಪಡುವ ವಯಸ್ಸಿನಲ್ಲಿ ಮನೆಯ ಪರಿಸ್ಥಿತಿಗೆ ಎಚ್ಚರವಾಗುತ್ತಾಳೆ. ಬಡತನದ ನಡುವೆಯೂ ಹೃದಯವನ್ನು ಕಳೆದುಕೊಂಡಿಲ್ಲ. ಕಷ್ಟಗಳ ಅಗ್ನಿ ಪರೀಕ್ಷೆಯಲ್ಲಿ ಬೆಳಗುತ್ತಾಳೆ. ಹೀಗೆ ಎರಡು ವೈದೃಶ್ಯಗಳನ್ನು ಒಡ್ಡಿ ಪಾತ್ರಗಳ ಗುಣ ಸ್ವಭಾವಗಳು ಢಾಳಾಗಿ ಕಾಣುವಂತಾಗಿದೆ. ಅಮಾನವೀಯ ಕಿಗಳ ವರ್ತನೆ ಸಾಮಾನ್ಯ ಉಡುಗೆ ತೊಡುಗೆಯಿಂದ ಅಂಕುರಿಸಿ ಪಲ್ಲವಿಸುವುದನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಘಟನೆಗಳು ಕಡಮೆ. ಭಾವತರಂಗಗಳ ಕ್ರಿಯಾತ್ಮಕ ಚಲನೆಗೆ ಆದ್ಯತೆ ಕೊಡಲಾಗಿದೆ. ಅಂತರಂಗದ ಸುರುಳಿ ಉರುಳಿಸುವುದರಲ್ಲಿ ಕಥೆಗಾರರು ಕುಸುರಿ ಕೆತ್ತನೆ ಕೆಲಸ ಮಾಡಿದ್ದಾರೆ.

'ರಕ್ತ ಸರೋವರ' ಈಗಿನ ಜಮ್ಮು-ಕಾಶ್ಮೀರ ರಾಜ್ಯದ ರಾಜಧಾನಿ ಶ್ರೀನಗರದಲ್ಲಿರುವ 'ದಲ್ ತಟಾಕ'ವನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತ ಹಂದರ ಹಬ್ಬಿಸಿರುವ ವಿಫಲ ಹೋರಾಟದ ಕಥೆ, ದಲ್ ಸರೋವರ ನೋಡಿದವರ ಕಣ್ಮನಗಳನ್ನು ಸೂರೆಗೊಳ್ಳುವ, ಒಮ್ಮೆ ಅದರಲ್ಲಿ ವಿಹರಿಸಬೇಕೆಂಬ ಆಸೆಗಳನ್ನು ಕೊನರಿಸುವ ಮೋಹಕ ತಟಾಕ, ಅದರಲ್ಲಿ ಅರಳಿದ ಕೆಂದಾವರೆಗಳು ಕಣ್ಣಿಗೆ ಹಬ್ಬ. ಅವು ಸಾಮಾನ್ಯರಿಗೆ ಎಟಕುವ ಹೂಗಳಲ್ಲ. ಅರಳಿಯೂ ಬಾಡಿ ಹೋಗುವ, ಅರಳದೆ ಮುದುಡಿ ಹೋಗುವ ಮಾನವ ಪುಷ್ಪಗಳೂ ಕಾಶ್ಮೀರದಲ್ಲಿವೆ- ಜೈನಬಿ, ಶೇಕ ಇದ್ದ ಹೊಲ ಕಳೆದುಕೊಂಡು ಕಂಗಾಲಾದ ಜನರ ಅದುಮಿಟ್ಟ ದುಃಖ ದುಮ್ಮಾನದ ಒಡಬಾಗ್ನಿ ಒಳಗೊಳಗೆ ಕುದಿದು ಹೊರಬರಲು ಅಣಿಯಾಗಿತ್ತು. ಅಂಥ ದಿನ ಬಂದೇ ಬಂತು. ಡೋಗ್ರಾ ಅರಸೊತ್ತಿಗೆಯ ವಿರುದ್ದ ಶ್ರೀನಗರದಲ್ಲಿ ಕ್ರಾಂತಿ ಆಯಿತು. ರೈತರು ಬಂಡಾಯವೆದ್ದರು. ಅಂತೆ ಕಂತೆಗಳ ಸಂತೆಮಾತು ಯುವಕರ ಧಮನಿಗಳಿಗೆ ಕಾವು ಕೊಟ್ಟಿತು.

ಸಾವಿಗೆ ಹೆದರದೆ ಮುನ್ನುಗ್ಗುವ ಹವಣಿಕೆ ಆಯಿತು. ಅವರ ಬಯಕೆಗಳಿಗೆ ಜಾತಿಗಳು ಅಡ್ಡ ಬರಲಿಲ್ಲ. ಶೇಕ, ಕಿಶನಚಂದ, ಇನ್ನೂ ಕೆಲವರು, ಒಟ್ಟು ೭೬ ಜನ ಗಂಡುಗಲಿಗಳ ದಂಡು ಒಂದು ರಾತ್ರಿ ದಂಡ ಯಾತ್ರೆಗೆಂದು ಸಂಚು ಹೂಡಿ ಹೊರಟರು. ಎಲ್ಲರೂ ತಾಯ್ ನೆಲದ ಮಮತೆಯ ಮಕ್ಕಳು. ಒಂದೇ ಗುರಿ, ಒಂದೆ ದಾರಿ. ಆರು ದೋಣಿಗಳಲ್ಲಿ ನೌಕಾಪಡೆಯಂತೆ, ಇರುಳಿನೊಡಲನ್ನು ಸೀಳಿ ಬೆಳಕಿನೆಡೆಗೆ ಧಾವಿಸುವ ಧೀರರಂತೆ ಮುನ್ನುಗ್ಗಿದರು. ಕಾಶ್ಮೀರದ ಮಹಾರಾಜನನ್ನು ಸೆರೆಹಿಡಿಯುವುದೆ, ಪರಿಸ್ಥಿತಿಯ ಅರಿವು ಮಾಡಿ ಕೊಡುವುದೆ, ಹೃದಯ ಪರಿವರ್ತನೆಗೆ ಪ್ರಯತ್ನಿಸುವುದೆ-ಭಾವನೆಗಳ ತಾಕಲಾಟ ನಡೆದಿತ್ತು. ಗುರಿಮುಟ್ಟಿ ಕಾರ್ಯ ಕೈಗೂಡುವುದು ಇನ್ನೇನು ಕೂಗಿ ನಳತೆಯಲ್ಲಿದೆ ಎಂಬಷ್ಟರಲ್ಲಿ ಗುಂಡಿನ ಸುರಿಮಳೆ, ಇಂಕ್ವಿಲಾಬ್ ಜಿಂದಾಬಾದ್ ಎಂಬ ಜಯಘೋಷಣೆ ಬಂದೂಕಿನ ಗರ್ಜನೆಯಲ್ಲಿ ಲೀನವಾಯಿತು. ಬಿಡುಗಡೆಯ ಹೋರಾಟ ಅಧಿಕಾರದ ಅಸ್ತ್ರಗಳಲ್ಲಿ ಕರಗಿಹೋಯಿತು. ಅಳಿದುಳಿದವರಷ್ಟೇ ಹಿಂತಿರುಗಿದರು. ಶೇಕನ ಸುಳಿವಿಲ್ಲ. ಮಡಿದ ವಿ೬ ಜನರಲ್ಲಿ ಶೇಕನೂ ಒಬ್ಬ, ಜನರ ಭಾವನೆಗಳು ರಕ್ತಸಿಕ್ತವಾಗಿದ್ದುವು, ವಿಹಾರ ಸರೋವರ ರಕ್ತ ಸರೋವರವಾಗಿತ್ತು.

ಯಾವುದೇ ಸ್ವಾತಂತ್ರ ಸಂಗ್ರಾಮದ ಒಡಲಾಳದಲ್ಲಿರುವ ಸಾವು ನೋವಿನ ದಾರುಣ ಚಿತ್ರ ಹೃದಯ ಬಿರಿಯುವಂತೆ ಈ ಕಥೆಯಲ್ಲಿ ಸಾರ್ವತ್ರಿಕಗೊಂಡಿದೆ. ಹಿಂದೂ ಮುಸ್ಲಿಂ ಅಂತರಗಳಿಲ್ಲದ ಸೌಹಾರ್ದಯುತ ಪರಿಸರ ಗಮನ ಸೆಳೆಯುತ್ತದೆ. ಬೇರುಬಿಟ್ಟ ವ್ಯವಸ್ಥೆಯ ಕಪಿಮುಷ್ಟಿಯನ್ನು ಬಿಡಿಸುವುದು ಎಷ್ಟು ಕಷ್ಟವಿದೆ ಎಂಬುದನ್ನು ಚೆನ್ನಾಗಿ ಮನಗಾಣಿಸಲಾಗಿದೆ. ಆಳುವ ಅರಸರ ಸುಖನಿದ್ರೆ ಮುಖ್ಯವಾದ ಸಶಸ್ತ್ರ ಪಡೆಗೆ ಪ್ರಜೆಗಳ ಹಂಬಲ ಅರ್ಥವಾಗದ್ದು ದುರಂತದ ಪ್ರಖರತೆಯನ್ನು ಹೆಚ್ಚಿಸಿದೆ.

'ಕೊನೆಯ ಗಿರಾಕಿ' ಕರುಣೆ ಕೋಡಿಯಾಗಿ ಹರಿದಿರುವ ಕಥೆ, ಓದುಗರಿಗೆ ಕರುಳು ನುಲಿದುಕೊಂಡು ಕಿತ್ತು ಬರುವ ಅನುಭವವಾಗುತ್ತದೆ. ಸಮಾಜದ ಕಾಠಿಣ್ಯಕ್ಕೆ ಒಳಗಾಗುವ ಸೋಷಿತೆ ಕಾಣಿಯ ಬದುಕಿಗೆ ಮಮ್ಮಲ ಮರುಗುತ್ತೇವೆ. ತನ್ನವೇ ಆದ ಸಂವೇದನೆಗಳಿದ್ದರೂ ಅವನ್ನು ಹೇಳಿಕೊಳ್ಳಲಾಗದ ಕಾಣಿಯ ದುಸ್ಥಿತಿಗಾಗಿ ಮೂಕವೇದನೆಯೊಂದೇ ಉತ್ತರವಾಗಲಾರದು. ನಮ್ಮ ಸುತ್ತ ಒಂದು ತಪ್ತ ಬದುಕು ಹೇಗೆ ಸಾಗಿದೆ ಎಂಬುದರ ಅರಿವೂ ಇರಬೇಕು. ಜತೆಯ ಜನರೇ ನಮ್ಮ ಸಹಮಾನವರ ಶೋಷಣೆಯಲ್ಲಿ ನಿರತರಾಗಿರುತ್ತಾರೆಂಬುದು ದುರಂತದ ತೀವ್ರತೆಯನ್ನು ಮತ್ತಷ್ಟು ಮೊನಚಾಗಿಸುತ್ತದೆ. ನುಗ್ಗೆ ಕಾಣಿಗೆ ಲೋಕಜ್ಞಾನ ಕಡಿಮೆ. ಹಣಕಾಸು ಎಣಿಕೆಯೂ ತಿಳಿಯದು. ನೋಟಿನ ನಿರ್ದಿಷ್ಟ ಬೆಲೆ ಎಷ್ಟೆಂಬುದು ತಿಳಿಯದಾದರೂ ಅದರ ಮಹತ್ವ ಮಾತ್ರ ಗೊತ್ತಾದದ್ದು ಬದುಕಿನ ಅನಿವಾರ ಪಾಠಕಲಿಸಿದಾಗ, ಮನುಷ್ಯನಿಗೆ ಮಾಂಸದ ಹಸಿವು ಎಷ್ಟು ಗಾಢ! ಹರೆಯ ಇರುವ ಹೆಣ್ಣಾದರೆ ಆಯಿತು. ಆಕೆ ಮೂಕಿಯೊ ಟಾಕಿಯೊ ಯಾರಾದರೂ ನಡೆದೀತು. ಹಾಸಿಗೆಯ ಸುಖ ಕೊಡುವ ಹೆಣ್ಣಿಗೂ ಹೃದಯವಿದೆ, ನೋವು ನಲಿವುಗಳಿವೆ, ಸಂವೇದನೆ ಕನಸುಗಳಿವೆ ಎಂಬ ಭಾವನೆ ಕಿಂಚಿತ್ತೂ ಇಲ್ಲದ ಕಾಮತೃಷೆಯ ಜನರ ಮೈದಾಳಿಗೆ ಬಾಡಿಹೋದ ಬದುಕು ಕಾಣಿಯದು. ದಳ್ಳಾಳಿಯೊಬ್ಬ ಈಕೆಯ ದೇಹವನ್ನೇ ಅಂಗಡಿ ಮಾಡಿ ಇಂದ್ರಿಯ ವ್ಯಾಪಾರಕ್ಕೆ ಇದು ಕಾಣಿಗೂ ದೇಹಮಾರಿ ದುಡ್ಡು ಸಂಪಾದಿಸುವ ದಾರಿ ತೋರಿಸಿದ್ದ. ಆದರೆ ಕಾಣಿಯ ಕೊನೆಯ ಉಸಿರು ಎಳೆಯುವ ಕಡೆಯ ದಿನಗಳ ದುಃಖ ದುಮ್ಮಾನ ಹಗೆಗಳಿಗೂ ಬೇಡ, ತನ್ನವರೆನ್ನುವವರು ಯಾರೂ ಇಲ್ಲ. ಇದ್ದವರನ್ನೂ ಎಂದೋ ತಾನೇ ತೊರೆದು ಬಂದಿದ್ದಳು. ಅಂದು ಹಸಿಬಿಸಿ ಮಾಂಸ ತಬ್ಬಿ ಬಂದ ತರುಣನೂ ಇಲ್ಲ. ತನ್ನ ತಾರುಣ್ಯ ಬಾಚಿಕೊಳ್ಳಲು ಪಾಳಿಯಲ್ಲಿ ನಿಂತು ದಾಳಿ ಮಾಡಿ ಖುಶಿಪಡೆದವರಲ್ಲಿ ಯಾರೊಬ್ಬನೂ ಇಲ್ಲ. ಕಾಣಿಯ ಸಾವು ಅನಾಥರ ಶೋಷಿತರ ಸಾವು, ಚಿಮಿಣಿ ಎಣ್ಣೆ ಕಥೆಯ ಸೋಮನ ಸಾವಿನೊಡನೆ ಕಾಣಿಯ ಸಾವನ್ನು ತೂಗಿ ನೋಡಬಹುದು. ವಸ್ತು ಸರಳವಾಗಿದ್ದರೂ ಯಾವುದೊ ಪ್ರಸಂಗವೊಂದಕ್ಕೆ ಸ್ಪಂದಿಸಿದ ಕಥೆಗಾರರ ಆಲೋಚನೆ ಸಂಕೀರ್ಣ ವಾಗಿ ಕೆನೆಗಟ್ಟಿರುವುದು ಕಾಣಿಯ ವಾಸ್ತವಿಕ ಪಾತ್ರ ಚಿತ್ರಣದಲ್ಲಿ,

'ತಿರುಕಣ್ಣನ ಮತದಾನ' ಚುನಾವಣೆಯ ನಾಟಕವನ್ನು ಚೆನ್ನಾಗಿ ವಿಡಂಬಿಸಿರುವ ಹೃದ್ಯವಾದ ಕಥೆ, ಮತದಾನದ ಮಹಿಮೆಯನ್ನು ವಿಶ್ಲೇಷಿಸಿರುವ ಈ ಕಥೆ ಒಂದು ಪ್ರಹಸನದಂತಿದೆ. ಓಟು ಕೀಳುವ ಸಲುವಾಗಿ ಅಭ್ಯರ್ಥಿಗಳು ಮತದಾರರಿಗೆ ಒಡ್ಡುವ ಆಸೆ ಆಮಿಷಗಳ ಬಣ್ಣದ ದೊಡ್ಡ ಬಲೆ, ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆ ಹೆಚ್ಚುತ್ತಾ ಹೋಗುವ ಪ್ರಚಾರದ ಕಾವು, ಹುಸಿ ಆಶ್ವಾಸನೆಗಳ ಸುರಿಮಳೆ, ಕೃತಕ ಸೌಜನ್ಯದ ಅಭಿನಯ, ಶ್ರೀಸಾಮಾನ್ಯನಿಗೊಮ್ಮೆ ಅಪರೂಪಕ್ಕೆ ಸಿಗುವ ಗೌರವ-ಇವೆಲ್ಲಾ ಪ್ರಭಾವಶಾಲಿಯಾಗಿ ಸಂಭಾಷಣೆಯ ಶೈಲಿಯಲ್ಲಿ ದಾಖಲಾಗಿವೆ. ಪ್ರಾಮಾಣಿ ಕತೆಯ ಪತನ ಹೆಪ್ಪುಗಟ್ಟಿರುವ ಈ ಕಥೆಯಲ್ಲಿ ಪ್ರಜಾಸತ್ತೆಯಲ್ಲಿ ಚುನಾವಣೆ ನಿರ್ವಹಿಸಬೇಕಾದ ಮುಖ್ಯ ಪಾತ್ರ ತನ್ನ ಆರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಕುಸಿಯುತ್ತಿದೆ ಎಂಬುದು ಎಲ್ಲಿಯೂ ವಾಚ್ಯಗೊಳ್ಳದೆ. ಉದ್ದಕ್ಕೂ ಧ್ವನಿತವಾಗುತ್ತದೆ. ತನ್ನ ಪಾವಿತ್ರ್ಯವನ್ನೂ ಮೌಲ್ಯವನ್ನೂ ಬರಿದುಮಾಡಿಕೊಂಡ ವ್ಯವಸ್ಥೆಯ ಭಾಗವಾಗಿ ಕರಗಿಹೋಗದೆ ಒಬ್ಬ ಸಾಮಾನ್ಯ ಪ್ರಜೆ ತಿರು ಕಣ್ಣ ಹೇಗೆ ಅದರ ಹೊರಗೇ ಉಳಿದನೆಂಬ ಧ್ವನಿ 'ತಿರುಕಣ್ಣ ಈ ಸಾರಿ ಓಟು ಪೋಲು ಮಾಡಲಿಲ್ಲ' ಎಂಬ ವಾಕ್ಯದಲ್ಲಿದೆ. ಈ ಸಂಕಲನದ ಮೊದಲಲ್ಲಿರುವ ಬಾಪೂ' ಕಥೆಯೊಂದಿಗೆ ಈ ಕಥೆಯನ್ನು ತೌಲನಿಕವಾಗಿ ಅಭ್ಯಾಸ ಮಾಡಬಹುದು.

ನಿರಂಜನರ ಹಲವು ಕಥೆಗಳಲ್ಲಿ ಕಂಡುಬರುವ ಹಿನ್ನೆಲೆ ತಂತ್ರ ಒಂದೇ ನಾಣ್ಯದ ಎರಡು ಮೈ' ಕಥೆಯಲ್ಲ ಔಚಿತ್ಯಪೂರ್ಣವಾಗಿ ಹೊಂದಿಕೊಂಡಿದೆ. ಉತ್ತಮ ಪುರುಷದಲ್ಲಿ ಇಲ್ಲಿನ ನಿರೂಪಣೆಯಿದೆ. ಸ್ವಾತಂತ್ರ ಪ್ರೇಮ ಕಥೆಗಾರರು ಎರಡನೆಯ ಸಲ ಕಾರವಾರದ ತೀರದಲ್ಲಿ ನಿಂತಾಗ ಹಳೆಯ ಹಿಂದಿನ ನೆನಪುಗಳು ಹೃದಯಪಟಲದ ಮೇಲೆ ಹಾದುಹೋಗುತ್ತವೆ. ಅಂದಿಗೂ ಇಂದಿಗೂ ಸಾಕಷ್ಟು ನೀರು ಹರಿದಿದೆ. ಹಿಂದಿನ ಸಲ ಕಾರವಾರಕ್ಕೆ ಹೋದದ್ದು ದಾಸ್ಯ ವಿಮೋಚನೆಗೆ ಧ್ವನಿಯೆತ್ತಿದ ಅಪರಾಧಕ್ಕಾಗಿ ಸೆರೆಮನೆ ವಾಸಕ್ಕಾಗಿ, ಇಂದಿನ ಬರುವಿಕೆಯೇ ಬೇರೆ. ಸ್ವಾತಂತ್ರ ಬಂದರೂ ಗೋವೆಗಿನ್ನೂ ಬಿಡುಗಡೆ ಸಿಕ್ಕಿರದ ದಿನಗಳು, ಅಲ್ಲಿಗೂ ಬಿಸಿ ತಾಕಿತ್ತು.

ಆದರೆ ಕಥೆಯ ಸ್ವಾರಸ್ಯ ಗರ್ಭಿಕೃತವಾಗಿರುವುದು ಈ ಸ್ಥಿತ್ಯಂತರಗಳ ನಡುವೆಯೂ ಭ್ರಷ್ಟರು ಹೇಗೆ ಅಬಾಧಿತರಾಗಿ ವಿಜೃಂಭಿಸುತ್ತಿರುತ್ತಾರೆ ಎಂಬುದರಲ್ಲಿ. ಅಂದು ಕಾರಾಗೃಹದಲ್ಲಿ ತನ್ನ ಕಡೆಯವರನ್ನು ಸೆರೆಬಿಡಿಸುವ ಅದೇ ಪ್ರಭಾವಶಾಲಿ ಇಂದೂ ತನ್ನ ವರ್ತುಲವನ್ನು ಬದಲಾಯಿಸಿಲ್ಲ. ಕಳ್ಳ ಸಾಗಣೆಯ ಸಾಕು ತಂದೆಯೇ ಈಗ ಕಮಾಂಡರ್ ಆಗಿ ನಿಯಂತ್ರಿಸುತ್ತಿದ್ದಾನೆ. ಇಂಥ ಗೂಂಡಾಗಳ ಯಾಜಮಾನ್ಯದಲ್ಲಿ ಚಳವಳಿಗೆ ದೊರೆತಿರುವ ದುಸ್ಥಿತಿಗಾಗಿ ವಿಷಾದವೆನಿಸುತ್ತದೆ. ಈ ಕಥೆಯಲ್ಲಿ ಬರುವ ವರ್ಣನೆಗಳು ವಿಮರ್ಶಕರ ಗಮನ ಸೆಳೆಯುತ್ತವೆ. ಕಥೆಗಾರರೊಳಗೆ ಕುಳಿತಿರುವ ಕವಿ ಇಲ್ಲಿ ಮೇಲುಗೈ ಪಡೆದಿದ್ದಾನೆ. ದಟ್ಟವಾದ ನಿಸರ್ಗದ ಸುಂದರ ಚಿತ್ರಣ ಚಿತ್ತಾಕರ್ಷಕ ಶೈಲಿಯಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿದೆ. ನಿರಂಜನರು ವೈಜ್ಞಾನಿಕ ದೃಷ್ಟಿಕೋನದವರು. ವೈಚಾರಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುವವರು. ರೂಢಮೂಲವಾದ ಅರ್ಥಹೀನ ಮೂಢನಂಬಿಕೆಗಳ ಗುಹೆಗಳಿಂದ ಬೆಳಕಿನೆಡೆಗೆ, ವಿಜ್ಞಾನ ಕರುಣಿಸಿದ ಅನುಕೂಲಗಳು ನಮ್ಮ ವಿಚಾರಗಳನ್ನು ಹೊರಳಿಸುವ ಕಥೆ 'ಒಂಟಿ ನಕ್ಷತ್ರ ನಕ್ಕಿತು.' ಭಾರೀ ಆಣೆಕಟ್ಟುಗಳು ನಿರ್ಮಾಣವಾಗುವಾಗ ನೆಲ-ಹೊಲ, ಮನೆ, ಮಠ, ಮಂದಿರ, ಗುಡಿ ಗೋಪುರ, ಊರು ಕೇರಿಗಳು ಮುಳುಗಬೇಕಾಗಬಹುದು. ಆಗ ಜನಕ್ಕೆ ಸರಕಾರ ಮುನ್ಸೂಚನೆ ಮತ್ತು ತಕ್ಕಷ್ಟು ಪರಿಹಾರ ಕೊಡುತ್ತದೆ. ದೊಡ್ಡ ಸುಖಕ್ಕಾಗಿ ಸಣ್ಣ ಪುಟ್ಟ ತೊಂದರೆಗಳು ಅನಿವಾರ್ಯವಾದಲ್ಲಿ ಜನ ಅದಕ್ಕೆ ಸಿದ್ಧರಾಗಬೇಕು.

ಆದರೆ ಕೆಲವರಿಗೆ ಬದಲಾವಣೆ ಪ್ರಿಯವಾಗುವುದಿಲ್ಲ. ಒಂದು ರೀತಿಯ ಜೀವನ ವಿಧಾನಕ್ಕೆ ಒಗ್ಗಿದ ಮನಸ್ಸುಗಳಿಗೆ ಪರಿವರ್ತನೆಗೆ ಹೊಂದಿಕೊಳ್ಳುವುದಕ್ಕೆ ಹಿಂಜರಿಕೆ. ರಾಮನ ತಂದೆ ಹಿರಿಯ ಅಂಥವನು. ಆತ ಹಳೆಯ ತಲೆ ಮಾರಿನವನು. ಹಿಂದಿನ ಕಾಲದ ನಂಬಿಕೆಗಳಿಗೆ ಮುಗಿಬಿದ್ದವನು. ಅಪ್ಪ ನೆಟ್ಟ ಆಲಕ್ಕೆ ಕೈಮುಗಿದವನು. ಹುಟ್ಟಿದ ಹಳ್ಳಿ ಬಿಡುವುದೆಂದರೆ ಪ್ರಾಣ ಬಿಟ್ಟಂತೆ ದೈವನಿಷ್ಠ ಸಮಾಜದ ಅವಿಭಾಜ್ಯ ಅಂಗವಾದ ಆತನಿಗೆ ತಾನು ಬಲವಾಗಿ ಬಾಲ್ಯದಿಂದ ನಂಬಿದ ದೈವ ಇರುವ ಗ್ರಾಮ ನೀರಿನಲ್ಲಿ ಮುಳುಗಿ ಹೋಗುವುದೆಂದರೆ ಊಹೆಗೂ ನಿಲುಕದ್ದು. ಆದರೆ ಸತ್ಯ ಮತ್ತು ವಾಸ್ತವ ತುಂಬ ವಿಚಿತ್ರವಾಗಿರುತ್ತದೆ. ಗುಡಿಯ ಮುಳುಗಿತ್ತು. ಹನುಮಂತರಾಯನೂ ಮುಳುಗಿದ. ಪ್ರಳಯ ಮಾತ್ರ ಆಗಲಿಲ್ಲ. ಹಿರಿಯಜ್ಜನ ಕಲ್ಪನೆ ತತ್ತರಿಸಿತು, ವಿಚಾರ ಶಕ್ತಿಗೆ ಹಿಡಿದಿದ್ದ ತುಕ್ಕು ಕಳಚಿತು, ಕಣ್ಣಿನ ಪೊರೆ ಬಿಟ್ಟಂತೆ ಕಣ್ಣೆದುರಿನಲ್ಲೇ ಧುತ್ತೆಂದು ಸಾಕ್ಷಾತ್ಕಾರವಾದ ಆಣೆಕಟ್ಟಿನ ಸೌಲಭ್ಯಕ್ಕೆ ಮನಸ್ಸು ಸ್ವಾಗತಗೀತೆ ಹಾಡುತ್ತದೆ. ಅತ್ತ ಆಣೆಕಟ್ಟಿನಲ್ಲಿ ನೀರು ತುಂಬಿ ತೆರೆದ ತೂಬುಗಳಿಂದ ಜಲಧಾರೆ ನುಗ್ಗಿ ಹರಿಯಿತು; ಇತ್ತ ತನ್ನ ಮನೆಯಲ್ಲೂ ಹೊಸ ಜೀವ ಹುಟ್ಟಿತ್ತು, ಹೊಸ ಅರಿವಿನ ಬಾಗಿಲು ತೆರೆದಿತ್ತು. ಚಲನಶೀಲ ಬದುಕಿನ ಸ್ಥಿತ್ಯಂತರಗಳನ್ನು ಕನ್ನಡಿಸುವ ಈ ಕಥೆ ಹಳೆಯ ನಂಬಿಕೆಗಳಿಂದ ಬಿಡಿಸಿಕೊಳ್ಳುವುದರಲ್ಲಿ ಇರುವ ಮೌಡ್ಯದ ತೊಡರನ್ನು ಸೂಕ್ಷ್ಮವಾಗಿ ಸೆರೆಹಿಡಿದಿದೆ.

ಇಡೀ ಸಂಕಲನದಲ್ಲಿ ತನ್ನ ಸಾವಯವ ಸಮಗ್ರತೆಯಿಂದ ಕಲಾತ್ಮಕವಾಗಿ ಯಶಸ್ವಿಯಾಗಿರುವ ಚಲೋ ಕಥೆ 'ಹಮಾಲ ಇಮಾಮ್‌ಸಾಬಿ', ಅಜ್ಞಾತನೊಬ್ಬನ ಅಚ್ಚುಕಟ್ಟಾದ ಒಂದು ಪುಟ್ಟ ಜೀವನಚರಿತ್ರೆಯಂತಿರುವ ಈ ಕಥೆ ದಂತದ ಕೆತ್ತನೆಯಂತೆ ಸುಂದರವಾಗಿದೆ. ಹಮಾಲ ಇಮಾಮ ಈ ಇಂಡಿಯಾದ ಲಕ್ಷಾಂತರ ಜನರ ಒಬ್ಬ ಪ್ರತಿನಿಧಿ, ಅವನ ಒಟ್ಟು ಸಂಸಾರ ಹುಟ್ಟಿದ್ದು ಬಾಳಿದ್ದು ಅರಳಿದ್ದು ಮಾಗಿದ್ದು ಬಾಡಿದ್ದು-ಈ ಏರಿಳಿತಗಳ ಉಯ್ಯಾಲೆಯಲ್ಲಿ ಕಥೆ ಜೀಕುತ್ತದೆ. ಹುಟ್ಟಿದ ಮಕ್ಕಳೆಲ್ಲ ಹಡೆದವರ ಹತ್ತಿರ ಉಳಿದಾರೆ! ತಂದೆ ತಾಯಿಯರ ನೋವು ನಲವಿಗೆ ದಕ್ಕುವವರು ಯಾರು? ಇಮಾಮನದು ರೈಲು ನಿಲ್ದಾಣದ ಬದಿಯಲ್ಲೇ ಬೆಳೆದ ಬದುಕು; ಕಷ್ಟ ಸುಖ ರೈಲಿನಂತೆಯೇ ಬರುತ್ತದೆ ಹೋಗುತ್ತದೆ. ತನ್ನ ದೀರ್ಘ ಜೀವನವನ್ನೆಲ್ಲಾ ರೈಲ್ವೆ ಸ್ಟೇಷನ್ನಿನಲ್ಲೇ ಸವೆಸಿದ್ದಾನೆ. ಆದರೆ ರೈಲಿನಲ್ಲಿ ಮಾತ್ರ ಒಮ್ಮೆಯೂ ಪ್ರಯಾಣ ಮಾಡಿರಲಿಲ್ಲ!

ಇಮಾಮ ಶಾಲೆಗೆ ಮಣ್ಣು ಹೊತ್ತವನಲ್ಲ. ತನ್ನ ವಯಸ್ಫೂ ಸರಿಯಾಗಿ ತಿಳಿಯದ ಮುಕ್ಕ, ಕಾಯಕದಲ್ಲೇ ಕೈಲಾಸ ಕಂಡವನು. ಸುಳ್ಳು ತಟವಟಗಳಿಗೆ ದೂರ ಉಳಿದವನು ಬಾಳಿನುದ್ದಕ್ಕೂ ಬಡತನದ ಬುತ್ತಿಯನ್ನು ಬೆನ್ನಿಗೆ ಕಟ್ಟಿಕೊಂಡವನು. ನಿಯತ್ತು ನೇಮ ಉಸಿರಾದವನು, ಒಮ್ಮೆ ಅಚಾನಕ್ ಸೇತುವೆ ಬಿರಿದು ಸಂಭವಿಸಿದ್ದ ರೈಲ್ವೆ ಅವಘಡದಲ್ಲಿ ನಿಸ್ವಾರ್ಥ ಬುದ್ಧಿಯಿಂದ ದುಡಿದವನು, ಅಂದು ನಿಜವಾದ 'ಸೇವೆ' ಸಲ್ಲಿಸಿದ್ದಕ್ಕೆ ಹಣದ ಬೆಲೆ ಕೊಡಲು ಬಂದವರಿಗೆ ಒಪ್ಪದವನು. ಅದು ಏರುಂಜವ್ವನದ ಕಾಲ; ಹಣಕ್ಕೆ ಪ್ರಾಧಾನ್ಯವಿರಲಿಲ್ಲ. ಸಾವಿನ ದವಡೆಗೆ ಸಿಕ್ಕಿ ನರಳುತ್ತಿದ್ದವರ ನೆರವಿಗೆ ಸ್ವಪ್ರೇರಿತನಾಗಿ ಧಾವಿಸಿದ್ದು ಮನುಷ್ಯನಾಗಿ ಮಾಡಬೇಕಾದ ಕರ್ತವ್ಯಪ್ರಜ್ಞೆಯಿಂದ. ಬರಿಗೈಲಿ ಹಿಂತಿರುಗಿದರೂ ನೆಮ್ಮದಿಯ ನಗೆಯಿತ್ತು. ಆದರೆ ಜತೆಯ ಜನ ನುಡಿದ ಕಿಚ್ಚಿನ ನುಡಿಗಳೇ ಬೇರೆ- ಭಾರೀ ಸಂಪಾದನೆ ಆಗಿದ್ದೇಕು!'-ಎಲ್ಲವನ್ನೂ ರೊಕ್ಕದ ಲೆಕ್ಕದಲ್ಲೇ ನೋಡುವ ಜನಕ್ಕೆ ದುಃಖದಲ್ಲಿರುವವರೂ ಒಂದೆ, ಸುಖದಲ್ಲಿರುವವರೂ ಒಂದೆ. ಕತ್ತಲು ಬೆಳಕುಗಳಿಗೆ ವ್ಯತ್ಯಾಸವನ್ನೇ ಗುರುತಿಸದವರ, ಮನುಷ್ಯ ಸಂಬಂಧಗಳಿಗೆ ಬೆಲೆಯೇ ಇಲ್ಲದವರ ಬಾಯಲ್ಲಿ ಬೇರೆ ಮಾತು ಬರುವುದಾದರೂ ಹೇಗೆ?

ಸಾಮಾಜಿಕವಾಗಿ ಕೆಳಗಿನ ಸ್ತರದಲ್ಲಿರುವ ಹವಾಲನಾದ ಇಮಾಮನ ಚಿತ್ರ ಸಂಸ್ಕಾರದ ಎತ್ತರವೇ ಬೇರೆ. ಆತ ಹೃದಯವಂತ. ಕೇವಲ ಕಾಸಿಗಾಗಿ ಕೆಲಸ ಮಾಡುವ, ಕಾಸಿಗೆ ತಕ್ಕ ಕಜ್ಜಾಯ ಕೊಡುವ ವ್ಯವಹಾರಿಯಲ್ಲ, ಶ್ರೀಮಂತರು ಸ್ವಯಿಚ್ಛೆ, ಸ್ವಸಂತೋಷದಿಂದ ಹಣಕೊಡಲು ಮುಂದಾದಾಗಲೂ ಬೇಡವೆಂದವನು, ಕೂಲಿಯವನು ನಿಜ, ಆದರೆ ವಿನಾಕಾರಣ ಹಾಗೂ ನಿಗದಿತ ಮೊತ್ತಕ್ಕೆ ಮೀರಿ ಪಡೆಯುವುದು ಪಾಪ. ಈ ನೆಲೆಯಲ್ಲಿ ಇಮಾಮ ದೊಡ್ಡವ, ಘನಂದಾರ, ಓದುಗರ ಗೌರವಾಭಿಷೇಕಕ್ಕೆ ಪಾತ್ರನಾಗುವವನು. ಒಳನೋಟಕ್ಕೆ ಇನ್ನೆರಡು ಸoಗತಿಗಳು ನಿಚ್ಛಳವಾಗುತ್ತವೆ ರೈಲು ಮನೆಯ ಪರಿಸರ ನಿರ್ಮಿಸುವಿಕೆ ಮತ್ತು ಮೊಮ್ಮಗನ ಜನನದ ಒತ್ತಡದ ಪ್ರಕ್ರಿಯೆ. ಕಥೆಗಾರರ ಚುರುಕು ಕಣ್ಣು ಸವಿವರವಾಗಿ ರೈಲು ನಿಲ್ದಾಣದ ಒಟ್ಟು ಆವರಣವನ್ನೂ ಅಲ್ಲಿನ ವ್ಯವಹಾರವನ್ನೂ ಫೋಟೋ ತೆಗೆದಿಟ್ಟಿದೆ. ಪೋರ್ಟರುಗಳ ನಿಕಟ ಪರಿಚಯ, ರೈಲುಗಳ ಆಗಮನ ನಿರ್ಗಮನ ಕಾಲದ ಜನಸಮ್ಮರ್ದ ಹಮಾಲನ ಸ್ವoತ ಸಂಸಾರದವರು ಊಟ ತಿಂಡಿ ತರುವುದು, ಜತೆಗಾರರ ಗುಣಸ್ವಭಾವ ಪ್ರಕಟವಾಗುವ ಸಂದರ್ಭಗಳು, ಸ್ಟೇಷನ್ನಿನ ಪರಿಸರ, ಕಲ್ಲುಬೆಂಚು, ನೀರಿನ ನಳ (ನಲ್ಲಿ), ಸಾಲುಮರ ಕಟಕಟೆ-ರೈಲ್ವೆ ಪ್ರಪಂಚವೇ ಇಲ್ಲಿದೆ.

ಮೊಮ್ಮಗನ ಜನನ ಪ್ರಸಂಗ ತಾತನನ್ನು ಬಹುವಾಗಿ ಕಾಡುತ್ತದೆ. ಜೀವವನ್ನೇ ಹಿಂಡುತ್ತದೆ. ಆ ತಳಮಳ ಇಡೀ ದಿನ ಹಮಾಲ ಇಮಾಮನನ್ನು ನಿಸ್ತೇಜಗೊಳಿಸುತ್ತದೆ. ಸೊಸೆಯ ಹೆರಿಗೆ ಸಸೂತ್ರವಾಗಿ ಆದೀತೊ ಇಲ್ಲವೊ ಎoಬುದೊoದೇ ಹಳವಂಡಕ್ಕೆ ಕಾರಣವಲ್ಲ. ತಾನೂ ಲೆಕ್ಕಕ್ಕೆ ಐವರು ಮಕ್ಕಳ ತಂದೆ. ಆದರೆ ಮೊದಲಿನ ನಾಲ್ಕು ಜನ ಬoದೊಡನೆ ಮುoಬಯಿಗೆ ಪಾಕಿಸ್ತಾನಕ್ಕೆ ಸರ್ಕಸಿಗೆ ಹೊರಟು ಹೋದರು. ಐದನೆಯ ಮಗನೊಬ್ಬ ಮುಪ್ಪಿನ ಕಾಲಕ್ಕೆ ಈ ಅಪ್ಪನ ಬಳಿ ಇದ್ದಾನೆ. ಆ ಕಡೆಯ ಮಗನಿಗೆ ಈಗ ಮಗುವೊಂದು ಹುಟ್ಟಲಿದೆ. ತನ್ನ ವಂಶದ ಎರಡನೆಯ ಕುಡಿ ದಾoಗುಡಿಯಿಡಲಿದೆ. ತನ್ನ ಮನೆಯಲ್ಲಿ ಇನ್ನೊಂದು ಜೀವ ಅರಳಲಿದೆ. ಅದನ್ನು ಕಣ್ಣಾರೆ ಕಾಣುವ ಹoಬಲ.ಈ ಬಯಕೆ ಎಲ್ಲಿ ಹೆಚ್ಚುಕಡಮೆಯಾಗಿ ತಾನು ಕಟ್ಟಿಕೊಂಡಿರುವ ಕನಸು ಒಡೆದೀತೊ ಎಂಬ ಹೆದರಿಕೆ. ಆತನ ಆತಂಕದ ಕ್ಷಣಗಳನ್ನು ಹಿನ್ನೆಲೆಯಾಗಿರಿಸಿ ಮಾನಸಿಕ ಒತ್ತಡಕ್ಕೆ ಒಳಗಾದ ವ್ಯಕ್ತಿಯೊಬ್ಬನ ವರ್ತನೆಯನ್ನು ಕಥೆಗಾರರು ಚಿತ್ರಕಾರನಂತೆ ಅದ್ಭುತವಾಗಿ ಕಂಡರಿಸಿದ್ದಾರೆ. ಕುಸುರಿ ಕೆಲಸದ ಈ ನಯ ನಾಜೂಕು ವಿಮರ್ಶಕರ ವಿಶೇಷ ಗಮನಿಕೆಗೆ ಅರ್ಹವಾಗಿದೆ.

ದಿನದ ದುಡಿಮೆ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಇಮಾಮನಿಗೆ ಮೊಮ್ಮಗು ಹುಟ್ಟಿದ ಹರ್ಷದ ಸುದ್ದಿ ತಿಳಿಯುತ್ತದೆ. ಆನಂದಾಧಿಕ್ಯದಿಂದ ಎದೆಯೊಡೆಯುತ್ತದೆ. ಆದರೆ ಒಟ್ಟು ಕಥೆಯ ಚೌಕಟ್ಟಿನಲ್ಲಿಟ್ಟಾಗ ಆ ಸಾವೂ ಸಾರ್ಥಕವಾಗುತ್ತದೆ, ಅರ್ಥಪೂರ್ಣವಾಗುತ್ತದೆ. ಮನೆಯಲ್ಲೋಂದು ಹೊಸ ಜೀವದ ಉದ್ಭವ ಹಳೆಯ ಜೀವದ ಅವಸಾನ. ಜೀವನ ಜೋಕಾಲಿ ನಿಲ್ಲುವುದಿಲ್ಲ. ಅದು ನಿರಂತರ. ಜೀರ್ಣವಾದ ಶರೀರ ಬಿದ್ದ ಜಾಗದಲ್ಲೇ ಚಿಗುರೊಡೆಯುತ್ತ ಮತ್ತೊಂದು ಜೀವ ಚಿಮ್ಮಿರುತ್ತದೆ.

ಈ ಸಂಕಲನದ ಕಡೆಯ ಕಥೆ 'ಹರಕೆಯ ಖಡ್ಗ' ಉಳಿದ ಒoಬತ್ತಕ್ಕಿoತ ಭಿನ್ನವಾಗಿದೆ. ಇದು ಐತಿಹಾಸಿಕ ವಸ್ತುವನ್ನು ಒಳಗೊಂಡಿರುವುದೊಂದೇ ಈ ಭಿನ್ನತೆಗೆ ಕಾರಣವಲ್ಲ. ಹಿನ್ನೆಲೆಯ ತಂತ್ರವೇ ಆದರೂ ನಿರೂಪಣೆಯಲ್ಲಿ ನಾವೀನ್ಯವಿದೆ. ಸಪ್ಪೆ ಇತಿಹಾಸಕ್ಕೆ ಜೀವಕಳೆ ಬಂದಿದೆ. ಸ್ವಾಭಿಮಾನದ ಕೆಚ್ಚು ಕಥೆಯ ಕೇಂದ್ರಬಿಂದುವಾದರೂ ಮುಖ್ಯ ಪಾತ್ರದ ಸೂಕ್ಷ್ಮಸಂವೇದನೆಗೆ ಕೊಟ್ಟಿರುವ ಒತ್ತನ್ನು ಗುರುತಿಸಬೇಕು. ಮೈಸೂರು ಚರಿತ್ರೆಯ ಗಣಿಯಾಳದಲ್ಲಿ ತೆಳುರೇಖೆಯಾಗಿ ಹಾದುಹೋಗಿರುವ ಅಪ್ರಸಿದ್ಧ ವಸ್ತುವನ್ನು ಪುನರ್ ಸ್ರಿಷ್ಟಿಸಿರುವುದೂ ಒoದು ಹೆಚ್ಚಳವೇ. ಉಸಿರು ನಿಲ್ಲುವ ಕಡೆಯ ಗಳಿಗೆಯಲ್ಲಾ ತನ್ನ ವ್ಯಕ್ತಿತ್ವದ ಮುಖ್ಯ ಧಾತುವನ್ನು ಬಿಟ್ಟುಕೊಡದ ಧೋಂಡಿಯಾನ ಪಾತ್ರ ಯಾವ ಹೆಚ್ಚಿನ ವ್ಯಾಖ್ಯಾನವನ್ನೂ ಬಯಸದೆ ತನ್ನಷ್ಟಕ್ಕೇ ಬೆಳಗಿದೆ. ಐತಿಹಾಸಿಕ ವಸ್ತುವನ್ನು ನಿರಂಜನರು ಹೇಗೆ ನಿರ್ವಹಿಸುತ್ತಾರೆ ಎಂಬುದಕ್ಕೆ `ಕಲ್ಯಾಣಸ್ವಾಮಿ' ಕಾದಂಬರಿಯನ್ನು ಓದಬೇಕು, 'ಹರಕೆಯ ಖಡ್ಗ' ಕರ್ನಾಟಕ ಇತಿಹಾಸದ ನಿಕ್ಷೇಪದಿಂದ ತೆಗೆದ ಅಪರೂಪದ ಒಂದು ರತ್ನವೆಂಬುದನ್ನು ಓದುಗರಿಗೆ ಮನಗಾಣಿಸಿಕೊಡುವುದರಲ್ಲಿ ಕಥೆ ಯಶಸ್ವಿಯಾಗಿದೆ. ಅತಿ ಭಾವುಕತೆಯಿಂದ ಬಳಲದೆ ವೈಚಾರಿಕ ನೆಲೆಯಲ್ಲಿ ಚಲಿಸಲು ಪೂರ್ವಸ್ಮರಣೆಯ ಸುಳಿ ಸಹಾಯಕವಾಗಿದೆ. ಒಂಟಿ ನಕ್ಷತ್ರ ನಕ್ಕಿತು, ಹಮಾಲ ಇಮಾಮ್ ಸಾಬಿ ಕಥೆಗಳಲ್ಲಿರುವಂತೆ ಇಲ್ಲಿಯೂ ಮುಂದೆ ಬೆಳೆಯಲಿರುವ ಎಳೆಯ ಚೇತನ ವೊಂದಿದೆಯೆಂಬುದನ್ನು ಗಮನಿಸಬಹುದು.

ನಿರಂಜನರ ಶೈಲಿಯ ಕುರಿತು ಎರಡು ಮಾತು.ನಿರಂಜನರ ಬರವಣಿಗೆಯಲ್ಲಿ ಮೊದಲ ಗುಣ ಆತ್ಮೀಯತೆ, ಪ್ರಸನ್ನತೆ, ಅಲಂಕಾರಗಳ ಹೊರೆಯಿಂದ ಕುಸಿಯುವ ರಂಜಕ ಶೈಲಿ ಅವರ ಯಾವ ಕಥೆ ಕಾದಂಬರಿಯಲ್ಲೂ ಸಿಗಲಾರದು. ಸರಳತೆಯೇ ಅದರ ಜೀವಾಳ. ನಿರಲಂಕೃತವಾಗಿರುವುದೊಂದೇ ಅಲ್ಲ, ದುಂದು ಗಾರಿಕೆಯೂ ಇರುವುದಿಲ್ಲ. ನೇರವೂ ಪಾರದರ್ಶಕವೂ ಆದ ಶೈಲಿಯ ಸೊಗ ಸನ್ನು ಯಾವ ಕಥೆಯಲ್ಲಿ ಬೇಕಾದರೂ ಕಾಣಬಹುದು. ಕೆಲವೊಮ್ಮೆ ಕ್ರಿಯಾ ಪದಗಳೇ ಇರದ ಪುಟ್ಟ ವಾಕ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಾರೆ. ಚಿತ್ರ ಬಿಡಿಸಿದಂತೆ, ಮೂರ್ತಿ ಕೆತ್ತಿದಂತೆ ಸಂದರ್ಭಗಳನ್ನು ಸವಿವರವಾಗಿ ನಿರೂಪಿಸುತ್ತಾರೆ.
ಎರಡು ಮೂರು ತಲೆಮಾರುಗಳ ಪ್ರಸ್ತಾಪವಿರುವ ಇಲ್ಲಿನ ಕೆಲವು ಕಥೆಗಳಲ್ಲಿ ವಿಶಿಷ್ಟ ಆಶಯವೊಂದು ಹೊಳಲುಗೊಡುತ್ತಿದೆ. ಅಜ್ಜ-ಮೊಮ್ಮಕ್ಕಳು ಒoದೇ ಕಥೆಯಲ್ಲಿ ಅರ್ಥಪೂರ್ಣವಾಗಿ ಕಾಣಿಸಿಕೊಳ್ಳುತ್ತಾರೆ. ವಯಸ್ಸಿನ ಅಂತರದೊಂದಿಗೆ ಬದಲಾದ ಬದುಕಿನ ವೈದೃಶ್ಯವೂ ಪ್ರಕಟಗೊಂಡಿದೆ. ಹೊಸ ನಾಗರಿಕತೆಯ ಪ್ರವೇಶದಿಂದ ಆಗಿರುವ ವ್ಯತ್ಯಾಸಗಳ ಧ್ರುವಗಳನ್ನು ತೋರಿಸಲಾಗಿದೆ.

ನಿರಂಜನ ಯಾವ ಪೂರ್ವ ಗ್ರಹಿಕೆಗಳೂ ಇಲ್ಲದ ಮುಕ್ತ ಮಣಸ್ಸಿನ ಲೇಖಕರು. ಅವರು ತೆರೆದ ಕಣ್ಣುಗಳಿಂದ ಬದುಕನ್ನು ನೋಡುತ್ತಾರೆ. ಈ ನಿಡುಬಾಳಿನ ಒಳಿತು ಕೆಡಕುಗಳಿಗೆ ತುಡಿಯುತ್ತಾರೆ. ತಮ್ಮ ಮಿಡಿತಗಳಿಗೆ ಸ್ಪಂದನಗಳಿಗೆ ನುಡಿಯ ಆಕಾರ ಕೊಟ್ಟು ಕಥೆಯ ಕವಚ ತೊಡಿಸುತ್ತಾರೆ. ಅವರ ಕಥೆಗಳ ಒಟ್ಟು ಪ್ರೇರಣೆಗಳು ಯಾವುವು, ಪರಿಕಲ್ಪನೆಗಳೇನು, ಧೋರಣೆಯ ಸ್ವರೂಪ ಯಾವುದೆಂಬುದನ್ನು ඒಈ ಹಿನ್ನಲೆಯಿoದ ಖಚಿತವಾಗಿ ಗುರುತಿಸಬಹುದಾಗಿದೆ. ಬಿರುಕು ಬಿಡುತ್ತಾ ಮನುಶ್ಯತ್ವ ಕುಸಿಯುತ್ತಿರುವುದಕ್ಕಾಗಿ ದಟ್ಟವಾದ ನಿಟ್ಟುಸಿರೊಂದು ಎಲ್ಲ ಕಥೆಗಳಲ್ಲಾ ಕೇಳಿಬರುತ್ತದೆಯಲ್ಲವೆ? ಮಧುರತಮವಾದ ಮನುಶ್ಯ ಸoಬoಧಗಳು ಹಳಸಿಕೊoಡು ಬದುಕು ಅಸಹ್ಯವಾಗುತ್ತಿರುವುದು ನಿಜ. ಎಲ್ಲಿಂದ ಬಂದುವು ಈ ಕಂದರಗಳು? ಜೀವಂತವಿದ್ದ ಆ ಸುಖ ಸೌಹಾರ್ದ ಎಲ್ಲಿ ಮಾಯವಾಯಿತು? ಅಮೃತ ಸ್ವರೂಪಿಯಾಗಿದ್ದ ಪ್ರೀತಿಯ ಸೆಲೆ ಬತ್ತಿದ್ದಾದರೂ ಹೇಗೆ? ಜಿನುಗುವ ಅಂತಃಕರಣ ನಿoತಿದ್ದಾದರೂ ಏಕೆ? ತೇವವಿಲ್ಲದೆ ಒಣಗಿದ ಎದೆಗಳ ನಡುವೆ ಹೇಗೆ ಬಾಳುವುದು? ಕಣ್ಣರಳಿಸುವ ಕಡೆ ಬದುಕಿನ ಕ್ರೂರ ಮುಖ ಕಾಣಿಸುತ್ತದೆ. ನಿರ್ದಯ ನಿಷ್ಟುರ ವರ್ತನೆಯ ಜನ ಬದುಕನ್ನು ಅಮಾನವೀಯ ಹ್ರುದಯಶೂನ್ಯ ಗೋರಿಯನ್ನಾಗಿಸುತ್ತಾ ಹೊರಟಿರುವುದನ್ನು ಇಲ್ಲಿನ ಕಥೆಗಳು ಪ್ರಬಲವಾಗಿ ಬಿಂಬಿಸಿವೆ. ನಂಬಿಕೆಯ ತಾಳಿ ಕಿತ್ತುಹೋದ ಮೇಲೆ ಸಂಶಯ ಪಿಶಾಚಿ ಕ್ಲಾಡುತ್ತದೆ. ಪ್ರತಿಯೊoದನ್ನೂ ಗುಮಾನಿಯಿಂದಲೇ ನೋಡುವವರ ನಡುವೆ, ಬದುಕು ದುರ್ಭರವಾಗುತ್ತದೆ, ತನ್ನ ಅರ್ಥವಂತಿಕೆಯನ್ನು ನೀಗಿಕೊಳ್ಳುತ್ತದೆ. ಇoಥ ಕಠೋರತೆಯ ಅದುರಿನಲ್ಲಿ ಇನ್ನೂ ಅಲ್ಲಲ್ಲಿ ಕೋಮಲತೆ ಮಾನವೀಯತೆಯ ರೇಖೆಗಳು ಮಿoಚುತ್ತಿರುತ್ತವೆ ಎoಬುದನ್ನೂ ಕಥೆಗಳು ಧ್ವನಿಸುತ್ತವೆ.

ಇಲ್ಲಿನ ಕಥೆಗಳಲ್ಲಿ ಪ್ರತಿಪಾದಿತವಾಗುವ ಈ ಬಗೆಯ ಪ್ರಕ್ರಿಯೆ ಪರಿಕಲ್ಪನೆಗಳಿಗೆ ಪ್ರಧಾನವಾಗಿರುವ ಪ್ರೇರಣೆಯೆಂದರೆ ಬದ್ಧತೆ, ನಿರಂಜನ ಹೇಗೆ ಅವಕಾಶವಾದಿಯಲ್ಲವೋ ಹಾಗೆಯೇ ಪಲಾಯನವಾದಿಯನೂ ಅಲ್ಲ. ಅವರು ಇಹದ ಬದುಕಿಗೆ ಬದ್ದರಾದವರು. ಮಾನವೀಯ ಮೌೌಲ್ಯಗಳಿಗೆ ಮುಗಿಬಿದ್ದವರು. ಬದುಕನ್ನು ಒಪ್ಪಿಕೊಂಡವರು, ಬದುಕನ್ನೇ ಅಪ್ಪಿಕೊಂಡವರು. ತಮಗೆ ಈ ಬದುಕು ಕಲಿಸಿದ ಪಾಠ ಇದನ್ನೇ ಎಂದು ಅವರು ಡೆಕ್ಕನ್ ಹೆರಾಲ್ಡ ಪತ್ರಿಕೆಗೆ (5–3–1984) ಬರೆದ ಲೇಖನದಲ್ಲಿ ಹೇಳಿಕೊಂಡಿದ್ದಾರೆ:

“What should be the writer’s task in the context? Deeply concerned with the Fate of man, he shall always, in all spheres, fight the forces of evil and unhold human values. Humanism alone can be the guiding spirit in everything that he does. A committed writer he is, committed to Life in its totality.

Now, in 1984, the writer, past middle age, continues to be firm in his commitment to life; his concern for man remains as deep as ever; and his faith in humanism undiminished.”

ತನ್ನ ಉಡಿಯಲ್ಲಿ ಮಾನವೀಯ ಮೌಲ್ಯಗಳನ್ನು ತುoಬಿಕೊoಡಿರುವ ನಿರoಜನ ಇನ್ನೂ ಬರೆಯುತ್ತಿದ್ದಾರೆ. ಅವರ 'ಬುದ್ಧಿ ಭಾವ ಬದುಕು' ಹಸಿರಾಗಿದೆ. ಪ್ರವಾಹದ ಎದುರು ಈಸಿದ್ದಾರೆ. ಈಸಬೇಕು ಇದ್ದು ಜೈಸಬೇಕು .ಹೌದು, ನಿರಂಜನರು ಜೈಸಿದ್ದಾರೆ. ಅವರು ಸುಮಾರು ಅರ್ಧ ಶತಮಾನದ ಸುದೀರ್ಘ ಸಾಹಿತ್ಯಕ ಜೈತ್ರಯಾತ್ರೆಯಲ್ಲಿ ಎಷ್ಟೋ ದಾಖಲೆಗಳನ್ನು ದಾಟಿದ್ದಾರೆ. ಅವರ ಲೇಖಣಿಯ ಮಸಿ ಕಡಮೆಯಾದುದಿಲ್ಲ. ಅದು ಅಕ್ಷಯ; ಕನ್ನಡದ ಭಾಗ್ಯ

ಡಾ. ಹಂಪ. ನಾಗರಾಜಯ್ಯ

ಬಾಪೂಜಿ!...ಬಾಪೂ!...

[ಸಂಪಾದಿಸಿ]

ಬಾಪೂಜಿ ದಿವಂಗತರಾಗಿದ್ದರು!

ಭಾರತದ ಕ್ರಾಂತಿಪುರಷರಾದ, ಭಾರತಿಯನ್ನು ಬಂಧವಿಮುಕ್ತಳನ್ನಾಗಿ ಮಾಡಿದ, ಬಾಪುಜಿ ಅಂತರ್ಧಾನರಾಗಿದ್ದರು!

****

ಭುರ್ ....ಭುರ್ರ್ ರ್ರ್......!

ಆ ಹಳ್ಳಿಯ ನಿವಾಸಿಗಳೆಲ್ಲ ಹೊರಗೋಡಿ ಬಂದರು. ಸ್ವತಂತ್ರ ಭಾರತದ ವಿಮಾನಪಡೆಯೊಂದು ಭಾರತದ ಸಮುದ್ರ ತೀರಗಳನ್ನು ರಕ್ಶಿಸುತ್ತ ಹಾರಾಡುತ್ತಿತ್ತು ಹಳ್ಳಿಗರು ಅಜ್ಞಾನದಿಂದ, ವಾಯುನಾವೆಗಳ ಜೋಗುಳ್ಳಕ್ಕೆ ಕ್ಶಣಕಾಲ ನಿದ್ರಾವಶರಾದಂತೆ ತಲೆದೂಗಿ, ಬಳಿಕ ಸಂಭ್ರಮದಿಂದ ಸಂತೊಷ ಪ್ರದರ್ಶನ ಮಾಡಿದರು.

****

ಒಂಭತ್ತು ಗಂಟೆಗಳ ದುಡಿತ!

ಕಾರ್ಖಾನೆಯ ಕರ್ಣಭೇದಕ ಧ್ವನಿ. ಚಲಿಸುವ ಯಂತ್ರಗಲ ಭೀಕರ ಸದ್ದು. ಅಲ್ಲಿ ಕುಳಿತಿರುವವರು ಸೆಠ್‍ಜಿ ರಾಜರಾಮ್‍ಜಿ. ಭಾರತದ ಉತ್ಪಾದನ ಶಾಖೆಯ ಸಮಿತಿಯ ಸದಸ್ಯರಲೊಬ್ಬರು. ಹಿಂದಿಂನಿಂದಲೂ ಹೆಸರಾಂತ ಉದ್ದಿಮೆದಾರರು ಬಂಡವಾಳಶಾಹಿ ಪದ್ಧತಿಯ ಆಧಾರಸ್ತಂಭ. ತನ್ನ ಹಣದ ಬೆಂಬಲದಿಂದ, ಜನತೆಯ ಮತದಾನವೆಂಬ ಸೋಗಿನ ಮೂಲಕ, ಆ ಸ್ಥಾನಕ್ಕೆರಿದವರು.

ಅವರ ಅಧೀನದಲ್ಲೆ, ವಿಮಾನ-ಹಡಗು-ಯಂತ್ರನಿರ್ಮಾಣಗಳ ಕಾರ್ಖಾನೆಗಳಿರುವುದು. ಅಲ್ಲಿಯೇ ಹಳ್ಳಿಯ ಜನತೆಯನ್ನು ನಗರಗಳಲ್ಲಿ ಆಕರ್ಷಿಸುವ ಸೂಜಿಗಲ್ಲು ಅಡಕವಾಗಿರುವುದು. ಅವರ ನಿರ್ಮಾಣ ಗ್ರುಹಗಳಲ್ಲಿಯೆ, ಬಡ–ಇನ್ನೂ ಬಡ–ಭಾರತೀಯರು ಬೆವರಿಳಿಸಿ ದುಡಿಯುತ್ತಿರುವುದು. ಆದರೆ ರಾಜಾರಾಮ್‌ಜಿ ರಾಷ್ಟ್ರೀಯವಾದಿಗಳು. ಅವರ ಉಡುಗೆ ಯಂತ್ರ ಕೃತವಾದರೂ ತಲೆಯಮೇಲೊಂದು ಖಾದಿಯ ಟೊಪ್ಪಿಗೆ ಇದೆ. ಕೇಂದ್ರ ಸರಕಾರದ ಅನುಜ್ಞೆ ಅದು: "ದಿವಂಗತ ಬಾಪೂಜಿಯವರ ಸ್ಮಾರಕವಾಗಿ ಎಲ್ಲರೂ ಸದಾ ಕಾಲವೂ ಖಾದಿ ಟೋಪಿಗಳನ್ನು ಧರಿಸಬೇಕು!"

****

ವಿಜ್ಞಾನದ ಕೈಮಾಟ. ಎಲ್ಲೆಲ್ಲೂ ವಿದ್ಯುತ್ ಸಂಚಾರ.

ಆ ನಿರ್ಮಾಣ ಗೃಹದ ದೃಷ್ಟಿಯಿಡಿ. ಈ ನಾಡಿನ 'ಸ್ವಾತಂತ್ರ್ಯ' ರಕ್ಷಣೆಗಾಗಿ ಅಲ್ಲಿ ಯುದ್ಧ ಸಾಮಗ್ರಿಗಳ ಸಿದ್ಧತೆಯಾಗುತ್ತಿದೆ. ಶ್ರೀಮೂರ್ತಿಯವರ ಯೋಜನೆಯಂತೆ ಬಾಪೂಜಿಯವರ ತೈಲಚಿತ್ರ ಅಲ್ಲಿಯೂ ಆ ಯಂತ್ರಗಳೆಡೆಯಲ್ಲಿಯೂ ಕಾಣಬರುತ್ತಿದೆ. ಹಶ್! ದಿವಂಗತರಿಗೆ ಸ್ಮಾರಕ ಅದು...

ನಮ್ಮ ನಾಡಿನ ಹಣವಿನ್ನು ಪರದೇಶಗಳಿಗೆ ಹೋಗದು. ಪರರ ಹಣ ನಮಗೆ ಬರಬೇಕು. ಅದಕ್ಕಾಗಿ ಅರ್ಥಾತ್ 'ಸ್ವಾತಂತ್ರ' ರಕ್ಷಣೆಗಾಗಿ, ಸಿದ್ಧತೆ. ಶಸ್ತ್ರ ತಯಾರಿಯ ಸ್ಪರ್ಧೆ!

****

ಸೇ‌ಠ್‌ಜಿ ನಿದ್ರಿಸಿದ್ದರು; ಅವರ ಗುಡಾಣ ಹೊಟ್ಟೆ ನಿದ್ರಿಸುತ್ತಿತ್ತು.

ಏನೋ ದುಃಸ್ವಪ್ನ ಬಿತ್ತು. ಸೇ‌ಠ್‌ಜಿ ಆ ಅಂಧಕಾರದಲ್ಲಿ ಎವೆ ತೆರೆದರು.

ಕೋಣೆಯ ಮೂಲೆಯಲ್ಲೊಂದೆಡೆ ಕೊಂಚ ಮಸುಕುಮಸುಕಾಗಿ ಬೆಳಕು ಕಾಣಬಂದಿತು. ಬಳಿಕ ಅದು ಪ್ರಕಾಶಮಾನವಾಯಿತು. ಸೇ‌ಠ್‌ಜಿ ಅತ್ತನೋಡಿ ಒಂದು ನುಣ್ಣನೆಯ ಕೇಶಹೀನ ತಲೆಯನ್ನು ಕಂಡರು. ಅದು ಮುಖತಿರುಗಿಸಿ ನಿಂತಿದ್ದಿತು.

"ಆ!" ಎಂದು ಸೇ‌ಠ್‌ಜಿ ಕಿರಿಚಿದರು.

ಆ ತಲೆ ಅವರತ್ತ ಹೊರಳಿತು. ಅದು ಶುಭ್ರವಾಗಿ ಪ್ರಜ್ವಲಿಸುತ್ತಿತ್ತು. ಮುಂದಕ್ಕೆ ಬಂದ ಮೂಗು, ಹಲ್ಲಿಲ್ಲದ ಬಾಯಿ, ಸುಕ್ಕುಬಿದ್ದ ಮುಖದೊಗಲು,

"ಬಾಪೂಜಿ!... ನಮಸ್ತೆ..." ಎಂದರು ಸೇ‌ಠ್‌ಜಿ, ಕೃತ್ರಿಮ ಮಧುರತೆಯಿಂದ ಮಾತಾಡಲು ಅವರು ಯತ್ನಿಸಿದರು. ಆದರೂ ಅದು ಕರ್ಕಶವಾಗಿಯೇ ಇತ್ತು.

ಆ ತಲೆ ತಾನು ಬಾಪೂಜಿ ಎಂಬಂತೆ ಮೇಲಕ್ಕೂ ಕೆಳಕ್ಕೂ ಅಲುಗಾಡಿತು.

ಸೇ‌ಠ್‌ಜಿ ಪಾದಸ್ಪರ್ಶಕ್ಕೆಂದು ಮುಂದಕ್ಕೆ ನೆಗೆದರು. ಆ ರುಂಡದ ಮುಖದ ಮೇಲಿನ ವಿಚಿತ್ರ ನಗುವನ್ನು ಕಂಡು ದಂಗಾದರು. ಆ ನಗುವಿನಲ್ಲಿ ತಿರಸ್ಕಾರವಡಗಿತ್ತು.

  ಬಾಪೂಜಿ!... ಬಾಪೂ!...                                        3
  “ನನಗೆ ಪ್ರಣಾಮ ಮಾಡಲು ಅರ್ಹತೆಯಿಲ್ಲ ನಿನಗೆ!” ಎಂದು ಆ ರುಂಡ ಮೆಲ್ಲನೆ ಮಾತಾಡಿತು: 
"ನನ್ನನು ನೀನು ವಂಚಿಸಿದ್ದೀಯ."
ಸೇಠ್ ಜಿ ಕುಸಿಕುಳಿತರು.
 ರುಂಡ ಮಾತಾಡಿತು ನಿಧಾನವಾಗಿ:  
“ಸತ್ಯ..ಅಹಿಂಸೆ..ಗ್ರಾಮಗಳ ಉದಾರ...ಆ..ಆ...” 
 ಕಂಬನಿ ತಟಕುತಟಕಾಗಿ ಆ ರುಂಡದ ಗುಳಿಗಳಲ್ಲಿ ಅಡಗಿದ್ದ ಕಣ್ಣುಗಳಿಂದ ಕೆಳಗೆ ಹರಿದು ಉರುಳಿತು..
 ... ಸೇಠ್ ಜಿಗೆ ಪುನಃ ನಿದ್ರೆ ಬಂದಿತು...
 ...ಸತ್ಯ? ಅಹಿಂಸೆ? ಗ್ರಾಮೋದ್ಧಾರ ?
 ಚಹಾಪಾನ ಮಾಡುತ್ತಿದ್ದ  ಸೇಠ್ ಜಿ ಮುಗುಳ್ನಕ್ಕರು.
 ಸತ್ಯ? ರಾಜಕಾರಣದಲ್ಲಿ ಸತ್ಯಕ್ಕೆ ಸ್ಥಾನವೆಲ್ಲಿ? ಒಬ್ಬರು ಮತೊಬ್ಬರನ್ನು ವಂಚಿಸುವ, ಸೋಲಿಸುವ,      
 ನಾಶಮಾಡುವ ತಂಡ ರಾಜಕಾರಣಜ್ಞರದು.  
   ಅಹಿಂಸೆ? ಈ ಮಾತಿಗೆ ಅರ್ಥವಿಲ್ಲ. ಕೂಲಿಗಾರರಿಗೆ ಹಿಂಸೆ ಕೊಡದೆ ಹೋದರೆ ಅವರು 
 ದುಡಿಯುವರೆ? ಹಿಂಸೆ ಇಲ್ಲದೆ ಸ್ವತಂತ್ರ ಭಾರತದ ರಕ್ಷಣೆ ಯಾಗುವುದೆ?
 ಹುಂ!?
 ಗ್ರಾಮೋದ್ಧಾರ? ಜಮೀನ್ದಾರರು ಆ ಭಾರ ಹೊತ್ತಿರುವರಲ್ಲ! ಇಷ್ಟ ರಿಂದ ಬಾಪೂಜಿ
 ಸಂತುಷ್ಟರಾಗಲೇಬೇಕಲ್ಲ?
    *                   *                    * 
 “ನನ್ನ ಸರ್ವಸ್ವವೇ!” ಎಂದು ಹೋರಿಗಳನ್ನು ಪ್ರೀತಿಯಿಂದ ಮೈದಡವುವ ರೈತನಿಲ್ಲ-ತನ್ನ ಹೊಲ    
 ಇದೆಂದು ಮಣ್ಣನ್ನು ಆತ ಮುದ್ದಿಸುವ ಹಾಗಿಲ್ಲ... 
 
 ಹಗಲು ಹೊಲದಲ್ಲಿ ದುಡಿದು ಹೊತ್ತು ತಿರುಗಿದಾಗ, ಹೆಂಡತಿ ತರುವ ಬುತ್ತಿಯನ್ನು ತಿಂದು ತೇಗುವ, 
 ತನ್ನ ದುಡಿತದ ಫಲವೆಂದು ತೆನೆ ಬಿಟ್ಟು ಜೂಲಾಡುವ ಭತ್ತದ ಸಸಿಗಳನ್ನು ಕಂಡು ತಲೆದೂಗುವ-    
 ಬೋರೇಗೌಡನಿಲ್ಲ!
 ಓ!..ಅದೆಷ್ಟು ಜನ ನಿರುದ್ಯೋಗಿಗಳು! 
     *                    *                    *                                        
   ಸರ್ರ್ ಸರ್ರ್‍ರ್...
  ಚರಕದ ಸದ್ದು! ಹ್ಹಾ!
  ಅಲ್ಲೊಬ್ಬ ಮುದುಕ ನೂಲೆಳೆಯುತ್ತಿದ್ದಾನೆ-ಎಣ್ಣೆಯಾರುತ್ತಲಿರುವ 4                                           ನಿರcಜನ: ಕೆಲವು ಸಣ್ಣ ಕಥೆಗಳು
  ಹಣತೆಯೊಂದರ ಮುಂದುಗಡೆ. ಅದರ ಸಂಗೀತ, ಮಾಧುರ್ಯ ಇನ್ನೂ ಇದೆ... ಆದರೆ ಅದು
  ಆ ಚರಕದ ಚರಮಗೀತೆಯ ಧ್ವನಿ...
     ನೂಲೆಳೆಯುತ್ತಿರುವವರು ಶ್ರೀ! ಜ. ಸ. ಮುದುಕಪ್ಪ, ಬಾಪೂಜಿ ಜೀವಿಸಿದಾಗ ಅವರ ಬಲಗೈ
  ಬಂಟನಾಗಿ ಗ್ರಾಮೋದ್ಧಾರದ ವಿಷಯದಲ್ಲಿ ಅಹೋರಾತ್ರಿ ತಲೆ ಚಚ್ಚಿಕೊಂಡು ಅಸಂಖ್ಯ ಯೋಜನೆಗಳನ್ನು  
  ನಿರ್ಮಿಸಿದವರು. ಒಂದಲ್ಲ ಒಂದು ದಿನ ಶಾಂತಿಯ ಜಗತ್ತಿನಲ್ಲಿ ಕನಸುಗಳು ನೆನಸಾಗುವುವೆಂದು 
  ಅವರು ಎಣಿಸಿದ್ದರು.
 
  ಅಂದು ಶ್ರೀ ಕೋಪಾನಲರು ಭಾರತೀಯ ಸ್ವಾತಂತ್ರ್ಯಾ ಸಂಗ್ರಾಮದ ಸೂತ್ರಧಾರಿಗಳಲ್ಲಿ ಒಬ್ಬರಾಗಿದ್ದರು. 
  ಬಾಪೂಜಿಯ ಮೆಚ್ಚಿನವರಾಗಿದ್ದರು. ಇಂದು ಕೂಡ ಸ್ವತಂತ್ರ ಸರಕಾರದ ವೃದ್ಧ ಚಾಣಕ್ಯರು ಅವರೆ.   
  ಪ್ರಜಾಧಿಕಾರಿ ಸೋಜಾಜಿಯವರು ಇವರ ಕೈಯೊಳಗಿನವರೇ.
 
  ಅಂತಹ ಕೋಪಾನಲರಿಗಾಗಿ ಮುದುಕಪ್ಪ ಕಂಬನಿ ಮಿಡಿಯುತ್ತಿದ್ದಾರೆ. ತಮ್ಮ ಅಖಂಡ ಮೈತ್ರಿ 
  ಸಹವಾಸಗಳಿಗೆ ಭಂಗ ಬಂತೆಲ್ಲಾ ಎಂದು.
     *                    *                   *   
  ಈ ಸರಕಾರ ನಮ್ಮದಲ್ಲ! ಬಂಡವಾಳಗಾರರು ನಮಗೆ ಮೋಸ ಮಾಡಿದ್ದಾರೆ. ಸಾಮ್ರಾಜ್ಯಶಾಹಿಯ  
  ನಾಶಕ್ಕಾಗಿ ಹೇಗೆ ಹೆಣಗಿದೆವೋ ಹಾಗೆಯೇ ಈ ಅನ್ಯಾಯದ ಸರಕಾರದ ಅಂತ್ಯಕ್ಕಾಗಿ ಹೆಣಗೋಣ'..
    ಎಂದು ಉಗ್ರಪಕ್ಷೀಯನೊಬ್ಬ, ಒಂದು ಗುಪ್ತ ಸಭೆಯ ಮುಂದೆ ಕೂಗಿ ಕೊಳ್ಳುತ್ತಿದ್ದ, ಸಾರ್ವಜನಿಕ   
  ಸಭೆಗಳನ್ನು ಸೇರಿಸಲು ಅನುಮತಿ ಇಲ್ಲ! ಅಭಿಪ್ರಾಯ ಸ್ವಾತಂತ್ರ್ಯವಿಲ್ಲ! ನಮ್ಮ ನಾಡಿನ ಶ್ರೇಯಸ್ಸಿಗಾಗಿ
  ನಮ್ಮವರೊಳಗೇ ಯಾದವೀ ಕಲಹ!
     *                     *                  *  
 
  ಬಾಪೂಜಿ ಜೀವಿಸಿದ್ದಾಗಲೇ ತನ್ನಲ್ಲಿನ ದೇವಾಲಯಗಳ ಬಾಗಿಲನ್ನು ಹರಿಜನರಿಗಾಗಿ ತೆರೆದೆಸೆದಿದ್ದ   
  ತಿರುವಾಂಕೂರಿನ ಒಂದು ಹಳ್ಳಿ.
 “ಹೋ, ಹಂ!-ಹೋ-ಹೋ”
  ನಂಬೂದಿರಿ ಬಾಹ್ಮಣನೊಬ್ಬ ಮನೆಗೆ ಹೋಗುತ್ತಲಿದ್ದ. ಅಸ್ಪೃಶ್ಯರು ತನ್ನ ಆಗಮನವನ್ನರಿತು ದೂರ  
  ಸರಿಯಲೆಂದು ಅಂಥ ಶಬ್ದ ಮಾಡುತ್ತಿದ್ದ.
  ಹರಿಯ ಜನರು-ಹರಿಜನರು.
  ಹರಿಜನ?
  ಆ ಪದ, ರೂಢಿಯಿಂದಲೇ ಅಳಿಸಿ ಹೋಗುತ್ತಿದೆ.       
    ಬಾಪೂಜಿ!ಬಾ...ಪೊ!..                                      5  
  ರಾತ್ರೆಯ ಹನ್ನೆರಡು ಬಡೆಯಿತು. ತಮ್ಮ ಆಫೀಸಿನಲ್ಲಿ ತಮ್ಮ ದಫ್ತರುಗಳ ಮೇಲೆಯೇ  
 ಪ್ರಜಾಧಿಕಾರಿ ಸೋಜಾಜಿ ನಿದ್ದೆ ಹೊಗ್ಗಿದ್ದರು. ಅಲ್ಲಲ್ಲಿ ತಲೆಯೆತ್ತಿದ್ದ ಇತರ ಪಕ್ಷಗಳನ್ನು ಹೇಗೆ 
 ಸದೆಬಡೆಯಲೆಂದು ಯೋಚಿಸಿ ಯೋಚಿಸಿ ಅವರಿಗೆ ನಿದ್ದೆ ಬಂದಿತ್ತು, ವಿದ್ಯುದ್ದೀಪಗಳು  
 ಉರಿಯುತ್ತಲೇ ಇದ್ದುವು. ಆಗಲೇ ಅವರು ಕನವರಿಸತೊಡಗಿದ್ದರು. 
    ಆಗ ಸ್ವರ ಕೇಳಿಸಿತು:
    'ಹೊ! ನನ್ನನ್ನು ನೀವೆಲ್ಲರೂ ವಂಚಿಸಿಬಿಟ್ಟಿರಿ!'
    ಸೋಜಾಜಿ ದೃಷ್ಟಿ ಮೇಲೆತ್ತಿ ನೋಡಿದರು.
    ಅರ್ಧ ನಗ್ನ ಶರೀರವೊಂದು ತನ್ನ ಊರುಗೋಲಿನ ಮೆಲೆ ಬಾಗಿ ನಿಂತಿದೆ.
 ಅದರ ತಲೆಯ ಹಿಂದುಗಡೆಯಿಂದ ಜಾಜ್ವಲ್ಯಮಾನವಾದ ಬೆಳಕೊಂದು  ಪ್ರಕಾಶಿಸುತ್ತಿದೆ. ಅದರ  
 ಉಪನಯನಗಳಿಂದ ತೀಕ್ಷ್ಮನೋಟ ಸೋಜಾಜಿಯವರನ್ನು ನೋಡುತ್ತಿದೆ.
    ಸೋಜಾಜೆ ದಿಗ್ಭ್ರಮೆಗೊಂಡು ಎದ್ದರು. 
    ಬಾಪೂಜಿ ಎದುರಿಗಿದ್ದರು.
    'ನಮಸ್ತೇ' ಎನ್ನೋಣವೇ ಎಂದರೆ ಸ್ವರ ಗಂಟಲಲ್ಲೇ ಇಂಗಿ ಹೋಗಿತ್ತು;
 ಕೈ 'ಕಾಲ್‍ಬೆಲ್ಲಿನತ್ತ ಧಾವಿಸುತಿತ್ತು.
    "ತಡೆ!"
    ಎಂದಿತು ಬಾಪುಜಿಯ ಪ್ರತಿಮೆ_
    "ನಿನ್ನ ವಿಚಾರಣೆಗೆ ಬಂದಿದ್ದೇನೆ!"
 ಸೋಜಾಜಿಯವರ ಕರ್ಣಕುಹರಗಳನ್ನು ಆ ಅಮೃತಗಾನ ಪ್ರವೇಶಿತು.
 ಅದರ ನುಡಿಯಲ್ಲಿ ಕಠೋರತೆಯಿದ್ದರೂ ಸೊರಹಿನಲ್ಲಿ ಮಾರ್ದವತೆ ಇತ್ತು.
    “ನನ್ನ ನಾಡನ್ನು ಅಧೋಗತಿಗಿಳಿಸಿದ್ದೀರಿ!”
    ".........."
    " ನನ್ನನ್ನು...ನನ್ನಲ್ಲಿ ವಿಶಾಸವಿಟ್ಟಿದ್ದ ಅಪಾರ ಜನಸ್ತೋಮವನ್ನು ನೀವು    
 ಉಪಾಯದಿಂದ ವಂಚಿಸಿದ್ದೀರಿ!”
    "...ಕ್ಷಮಿಸಬೇಕು ಬಾಪೂಜಿ...ಅರ್ಥವಾಗುವದಿಲ್ಲ.”
    "ಆ!....... ಅರ್ಥವಾಗುವುದಿಲ್ಲ? ನಾನು ಯಾವುದನ್ನು ನನ್ನ ಜೀವಿತದ  
 ಧ್ಯೇಯವೆಂದೆಣಿಸಿದ್ದೆನೋ ಅದನ್ನು ನೀವು ಕಡೆಗಣಿಸಿದ್ದೀರಿ. ಯಾವ ಶಾಂತಿಮಯ ಜಗತ್ತಿನ 
 ಕಲ್ಪನೆಯನ್ನು ನಾನು ಮಾಡುತ್ತಿದ್ದೆನೋ ಅದನ್ನು ಮಣ್ಣು ಗೂಡಿಸಿದ್ದೀರಿ...." 6 ನಿರ೦ಜನ:ಕಲವು ಸಣ್ಣ ಕಥೆಗಳು

“ಬಾಪೂಜಿ!..ಕೊನೆಯ ತನಕ ನಾವು ನಿಮ್ಮ విಧೇಯ ಹಿಂಬಾಲಕರಾಗಿ ಉಳಿದೆವು."

“ಸಂಶಯವೇನು? ವಿಧೇಯತೆಯ ಸೋಗನ್ನು ನೀವು ಕೆಲವರು ಹಾಕಿ ಕೊಂಡಿದ್ದೀರಿ .ನಿಜವಾಗಿಯೂ ನನ್ನನ್ನು ಅನುಸರಿಸುತ್ತಿದ್ದ ಅಸಂಖ್ಯ ಸರಳ ಹೃದಯರನ್ನು ನೀವು ಮೋಸಗೊಳಿಸಿದ್ದೀರಿ.ಯಂತ್ರದೇವತೆಯ ಅಡಿಯಾಳಾ ಗಿದ್ದೀರಿ ಇಂದು! ಹಿಂಸೆಗೆ . ಅಸತ್ಯದ ಪ್ರತಿಪಾದಕರಾಗಿದ್ದೀರಿ...." -

....ಸೋಜಾಜಿ ತುಟಿಪಿಟಕ್ಕೆ ನ್ನದೆ ಅವನತಶಿರರಾಗಿದ್ದರು. “ನಾನು ಹೋಗುತ್ತೇನೆ!...” ಕಣ್ಣೀರು ಕೋಡಿಗಟ್ಟಿ ಆ ಅಸ್ಥಿ ನಿರ್ಮಿತ ಮುಖದ ಮೇಲಿಂದ ಪಳಪಳನೆ ಹರಿಯುತ್ತಿತ್ತು.

“ಪುನಃ ಬರುವುದಿಲ್ಲ.ಆದರೆ ಎಚ್ಚರ! ನಿಮ್ಮ ವರ್ತನೆಯಿಂದ ಭೀಕರ ಪಾಪಕ್ಕೆ ನೀವು ಬಲಿಯಾಗುವಿರಿ. ನನ್ನ ವರ್ತ್ಯಂತುತ್ಸವವನ್ನು ಆಚರಿಸುವಂತೆ ಮಾಡಿದರೆ, ಆ ದಿನ ಎಲ್ಲರಿಗೂ ರಜಾ ಸಿಗುವಂತೆ ಮಾಡಿಬಿಟ್ಟರೆ, ನಿಮ್ಮ ಬಾಪೂಜಿಯ ಅತ್ಮಕ್ಕೆ ತೃಪ್ತಿಯಾಗುತ್ತೆ ಅಂದುಕೊಂಡಿರಾ?...ಎಚ್ಚತ್ತಿರಾದರೆ ಶ್ರೇಯಸ್ಸಿದೆ-ಇಲ್ಲವೆ ಸರ್ವನಾಶ!...”

ತಮ್ಮ ಊರುಗೋಲನ್ನೆತ್ತಿ ಬಾಪೂಜಿ ಆಕಾಶದತ್ತ ಶೂನ್ಯದೃಷ್ಟಿಯನ್ನು ಬೀರುತ್ತಿದ್ದರು. ಸುತ್ತಲೂ ಸಹಸ್ರ ಉಲ್ಕಾಪಾತವಾದಂತೆ ನೋಟ.. ಭೂಮಿ ಬಿರಿದಂತೆ ಕ೦ಪನ!

ಆ ಬೆಳಕು ಹೊರಟುಹೋಯಿತು. ಸೋಜಾಜಿ ನಿಶ್ಟಾತರಾಗಿದರು. ಅವರ ದೃಷ್ಟಿ ಅರ್ಥಶೂನ್ಯವಾಗಿತ್ತು. ಗೊರಕೆಯ ಸ್ವರದಂತೆ ಶಾಸ ಒಳಕ್ಕೂ ಹೊರಕ್ಕೂ ಓಡಾಡುತ್ತಿತ್ತು

   *              *       *         *

ಊರುಗೋಲಿನ ಆ ಪಥಿಕರು-ಬಾಪೂಜಿಯ ಪ್ರತಿಛಾಯೆ-ಕೊನೆಯಿಲ್ಲದ ಆ ಹಾದಿಯಲ್ಲಿ ನಡೆಯುತ್ತಿದ್ದರು. ಉಷಾ ಮೆಲ್ಲಮೆಲ್ಲನೆ ಎಚ್ಚರುತ್ತೆದ್ದಳು.

ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದುವು.ದೂರದ ಕ್ರೈಸ್ತ ದೇವಾಲಯದ ಗಂಟೆ ಬಾರಿಸುತ್ತಿತ್ತು, ಮಸೀದಿಯ ಗುರು ಕರೆಕೊಡುತ್ತಿದ್ದ. ದೇವಮಂದಿರ ದಲ್ಲಿ ಅರ್ಚಕರು ಉಚ್ಛಸ್ವರದಲ್ಲಿ ಮಂತ್ರಪಠನ ಮಾಡುತ್ತಿದ್ದರು.ಹೆಂಗಳೆಯರು ದನಿಗೊಡುತ್ತಿದ್ದರು. ಪ್ರಕೃತಿಮಾತೆ ಮೆಲ್ಲಮೆಲ್ಲನೆ ಎಚ್ಚರುತ್ತಿದ್ದಳು. ಪ್ರಭಾತವೆ?... ಮಂಗಲ ಪ್ರಭಾತವೆ? ಅದು ಸತ್ಯ ಶಾ೦ತಿ ಸಮತೆಗಳ ನೆಲೆವೀಡಾಗಿತ್ತು.
ಪಥಿಕರು, ಅಲ್ಲಿ ಕ್ಷಣ ಹೊತ್ತು ನಿಂತು, ತಲೆಯೆತ್ತಿ ಸುತ್ತಲೂ ನೋಡಿದರು...

****

ವಿಮಾನಗಳ ಸದ್ದು, ಉಗಿಬಂಡಿಗಳ ಕೂಗು, ಕಾರ್ಖಾನೆಗಳ ಗದ್ದಲ, ಗುಲ್ಲು, ರಣಕಹಳೆ!
...ಪಥಿಕರು ಇಳಿಮೊಗರಾಗಿ ಪುನಃ ನಡೆದರು.
ಆವರೂ ಅ೦ದುದು ಇದು:
- 'ಇಲ್ಲ, ಜಗತ್ತು ಇನ್ನೂ ಎಚ್ಚತ್ತಿಲ್ಲ.'

-೧೯೪೧

"ಎಣ್ಣೆ!ಚಿಮಿಣಿ ಎಣ್ಣೆ!"

ಸೋಮ ಎಣಿಕೆ ಹಾಕಿದ: ಟಪಾಲು ಬಸ್ಸು ಬಂದಾಗ ಮಾರಿದ ಬೀಡ ೨೧;ಬೇರೆ ಮಾರಾಟ ೯;ಶಾಲೆಯ ಹುಡುಗರು ಕೊಂಡುಕೊಂಡ ಬೀಡಿ ೧೦ ಪೈಯದು; ಚಿಲ್ಲರೆ ಮಾರಾಟ ೬ ಪೈಯದು. ನೆಲಗಡಲೆಗೆ ಗಿರಾಕಿ ಬಂದಿರಲಿಲ್ಲ.ಅಂತೂ ಆ ದಿನ ನಾಲಾಣೆಯ ವ್ಯಾಪಾರವಾಗಿತ್ತು. ಮನೆಯ ವೆಚ್ಚ ನಿರ್ವಹಣೆಗೆ ಸಾಲದು ಆ ಹಣ.ಮತ್ತೆ, ನಾಳೆಯ ವ್ಯಾಪಾರಕ್ಕೆ ಬೀಡಿ ಕೊಳ್ಳಲು ದುಡ್ಡು ಬೇಕು.ಅವನ ಹೆಂಡತಿ ಎರಡನೆಯ ಬಾರಿ ಬಾಣಂತಿಯಾಗುವ ಪ್ರಯತ್ನದಲ್ಲಿ ಒಂದು ವರ್ಶದ ಹಿಂದೆ ಫ್ರಾಣ ಕಳೆದುಕೊಂಡಿದ್ದಳು. ನಿತ್ರಾಣಿಯಾಗಿದ್ದ ಹೆಂಗಸು.. ಅವಳು ಬಿಟ್ಟು ಹೋಗಿದ್ದುದು ಮೂರು ವರ್ಷಗಳ ಹೆಣ್ಣಮಗು. ಸೋಮನ ಜೀವನದ ಉಸಿರಾಗಿ ಅವಳು ಇರುತ್ತಿದ್ದಳು. ದಿನದ ಗಳಿಕೆಯಿಂದ ಬದುಕು ಸಾಗಬೇಕು. ಪಕ್ಕದಲ್ಲಿದ್ದ ರಾಯರ ಭಂಡಸಾಲೆಯಿಂದ ಅವನು ದಿನಕ್ಕೆ ಸಾಲುವಷ್ಟು ಅಕ್ಕಿಯನ್ನೊಯ್ಯುತ್ತಿದ್ದ.

ತಿಂಗಳಿಗೆ ಮೂರು ರೂಪಾಯಿ ಬಾಡಿಗೆಯ ಅಂಗಡಿ, ಮುಂಜಾನೆ ಮಗಳೊಡನೆ ಬರುತ್ತಿದ್ದ, ಅವಳಿಗೆ ಆಗಾಗ್ಗೆ ಒಂದೆರಡು ನೆಲಗಡಲೆ ಕಾಳುಗಳ ತಿನಿಸು. ಅವರಿಬ್ಬರೂ ಮನೆಗೆ ವಾಪಸಾಗುವುದು ಸಂಜೆಗೆ.

ತನ್ನ ಪತ್ನಿಯೊಡನೆ ಸೋಮನ ಸಂಸಾರ ಸಾಗುತ್ತಿದಾಗ ಎಂಜಿನಿಯರರ ಬಂಗಲೆಯಲ್ಲಿ ಕಸಗುಡಿಸುವ ಕೆಲಸವಿತ್ತು ಸೋಮನಿಗೆ .ತಿಂಗಳಿಗೆ ಐದು ರೂಪಾಯಿ ಸಂಬಳ. ಯುದ್ಧ ಶುರುವಾದ ಮೇಲೆ ಅವನು ಯಾರ ಹಂಗೂ ಇಲ್ಲದ ಸ್ವತಂತ್ರ ಅಂಗಡಿಕಾರನಾದ. ಹೆಂಡತಿ ಇದ್ದಿದ್ದರೆ, ತನ್ನ ಸ್ವ-ಉದ್ಯೋಗ ಕಂಡು ಎಷ್ಟು ಸಂತೋಷಪಡುತ್ತಿದ್ದಳೋ-ಎಂದು ಸೋಮ ಒಮ್ಮೊಮ್ಮೆ ಉದ್ಗಾರವೆತ್ತುತ್ತಿದ್ದ.

ಬೀಡಿ ಸೇದುವವರಿಗಾಗಿ ಚಿಕ್ಕದೊಂದು ಮಿಣಿಮಿಣಿ ದೀಪವನ್ನು ಅಂಗಡಿಯಲ್ಲಿ ಹಚ್ಚಿಡಬೇಕು. ಅದಕ್ಕೂ ಮನೆಯಲ್ಲಿ ರಾತ್ರಿ ಕೊಂಚ ಹೊತ್ತು ಉರಿಸುವುದಕ್ಕೂ ಚಿಮಿಣಿ ಎಣ್ಣೆ ಬೇಕು . ವಾರಕ್ಕೊಂದು ಬಾಟಲಿ ಎಣ್ಣೆ ಸೋಮ ಕೊಳ್ಳು ತ್ತಿದ್ದ. ಸೋಮ ಅಂಗಡಿಕಾರನಾದಾಗಿನಿಂದಲೂ ರಾಯರ ಪಡಸಾಲೆಯ
ಖಾಯಂ ಗಿರಾಕಿ. ನಗದು ಹಣ ಪಡೆದು ಸಾಮಾನು ಕೊಳ್ಳುತ್ತಿದ್ದ ಸೋಮ
ರಾಯರಿಗೆ ಇಷ್ಟನಾದ ವ್ಯಕ್ತಿ. ಅವನೊಡನೆ ನಯವಾಗಿ ಮಾತನಾಡುತ್ತಿದ್ದರು.
ಆ ದೊಡ್ಡ ಅಂಗಡಿಯ ರಾಯರು ತನಗೆ ತೋರುತ್ತಿದ್ದ ಗೌರವದಿಂದ ಸೋಮ ಸಂತೃಪ್ತ.
ಯುದ್ಧ ಯುದ್ದ ಎಂದೆಲ್ಲ ಜನರು ಹೇಳುತ್ತಿದ್ದರು. ಅದೇನೆಂದು ತಿಳಿದು
ಕೊಳ್ಳಲು ಸೋಮ ಯತ್ನಿಸುತ್ತಿದ್ದ. ಆದರೆ, ತಲೆಗೆ ಒಂದೂ ಹೋಗದು.
ಒಬ್ಬರು ಇನ್ನೊಬ್ಬರ ಮೇಲೆ ಯುದ್ಧ ಹೂಡುವುದಾದರೂ ಯಾಕೆ? ಅದು
ಅವನಿಗೆ ಬಗೆಹರಿಯದ ಪ್ರಶ್ನೆ.ಆದರೂ, ದಿನಾಲೂ ತನ್ನ ಅಂಗಡಿಯನ್ನು
ಹಾದುಹೋಗುತ್ತ ಎರಡು ಪೈಗಳ ಬೀಡಿ ಕೊಳ್ಳುತ್ತಿದ್ದ ಅಕ್ಕಸಾಲಿಗರ ಜವ್ವನಿಗ
ರಾಮಪ್ಪನೊಡನೆ, ಯುದ್ಧದ ಬಗೆಗೆ ಸೋಮ ಪ್ರಶ್ನೆ ಕೇಳದ ದಿನವಿಲ್ಲ. ಅನು
ದಿನದ ವೃತ್ತಾಂತವೇನೂ ಅವನಿಗೆ ಬೇಕಾಗಿರಲಿಲ್ಲ. ಯುದ್ಧದ ಅಂತ್ಯ ಏನಾ
ಗುವುದು? ಮಂಗಳೂರಿಗೆ ವೈರಿಗಳು ಬರುವರೊ? ದವಸಧಾನ್ಯಗಳ ಏರಿದ ಬೆಲೆ
ತಗ್ಗುವುದೊ?
ಊರಿನಲ್ಲಿ ಜಿನಸಿನ ಅಂಗಡಿಗಳ ಲೂಟಿ ನಡೆದು ಅಕ್ಕಿಮುಡಿಗಳು ಸೂರೆ
ಯಾದಾಗ, ರಾಯರು ಹೆದರಿದರು. ಅವರು ಬಾಗಿಲು ಮುಚ್ಚಿದರು.
ಆಗ ಸೋಮ ಹೇಳಿದ:
“ಬರಲಿ ನೋಡುವ, ನಾನಿದ್ದೇನೆ, ನಿಮ್ಮ ಭಂಡಸಾಲೆಯಿಂದ ಒಂದು
ಕಾಳು ಕೂಡ ಮಿಸುಕದ ಹಾಗೆ ನೋಡಿಕೊಳ್ಳುತ್ತೇನೆ.ಲುಚ್ಚರು! ದರೋಡೆ
ಗಾರರು! ಮೈಮುರಿದು ದುಡಿಯುವುದಕ್ಕೆ ಇವರಿಗೆ ರೋಗ!”
ರಾಯರ ಭಂಡಸಾಲೆ ಲೂಟಿಯಾಗಲಿಲ್ಲ.ಸೋಮನಂತಹ ಧೈರ್ಯವಂತ
ಹತ್ತಿರ ಇರುವನೆಂದು ಅವರು ಸಮಾಧಾನ ತಳೆದರು.
ದವಸಧಾನ್ಯಗಳ ಎಣ್ಣೆ ಜಿನಸುಗಳ ಬೆಲೆ ಏರುತ್ತ ಸಾಗಿತ್ತು.ವ್ಯಾಪಾರಿ
ಗಳೆಲ್ಲ ಬಡವರನ್ನು ಸುಲಿಯುತ್ತಿದ್ದಾರೆ ಎಂದು ಅಕ್ಕಸಾಲಿಗ ಹೇಳುತ್ತಿದ್ದ.
“ಛೆ! ಛೆ! ಹಾಗೂ ಉಂಟೆ?” ಎಂದು ಉತ್ತರಿಸುತ್ತಿದ್ದ ಸೋಮ.
ರಾಯರಂತಹ ವ್ಯಾಪಾರಿಗಳ ಮೇಲೂ ಆರೋಪವೆ? ಅವರೆಷ್ಟು ಸತ್ಯ
ಸಂಧರು!-ಎಂದುಕೊಳ್ಳುತ್ತಿದ್ದ ಮನಸ್ಸಿನಲ್ಲೆ.

2
ದಿನಹೋದಂತೆ ಜೀವನ ಕಷ್ಟವಾಗುತ್ತ ಬಂತು. ಯಾವುದರ ಬೆಲೆಯೂ
ತಗ್ಗುವ ಲಕ್ಷಣ ಕಾಣಿಸಲಿಲ್ಲ. ಸೋಮನ ಸಂಪಾದನೆಯೊ ಮೊದಲಿನಷ್ಟೇ.

ನೆಲಕಡಲೆಯ ಬೆಲೆಯನ್ನು ಸೇರಿಗೆ ಮೂರರಿಂದ ನಾಲ್ಕು ದುಡ್ಡಿಗೆ ಏರಿ
ಸಿದ. ಪ್ರಯೋಜನವಾಗಲಿಲ್ಲ.
ಮಗುವಿಗಷ್ಟು ಸರಿಯಾಗಿ ಉಣಬಡಿಸಿದರಾಯಿತು ಎಂದುಕೊಂಡು,
ತಾನು ಅರೆಹೊಟ್ಟೆ ಉಣ್ಣತೊಡಗಿದ.
**** ಆ ದಿನ ಸಂಜೆ ಸೋಮ ತನ್ನ ಅಂಗಡಿಯ ಬಾಗಿಲಿಕ್ಕಿ, ಅರ್ಧಸೇರು ಅಕ್ಕಿ
ಕೊಳ್ಳಲು ರಾಯರ ಭಂಡಸಾಲೆಗೆ ಹೋದ. ರಾಯರು ಕೂಗಾಡುತ್ತಿದ್ದರು.
ಸೋಮ ಕಿವಿಗೊಟ್ಟು ಕೇಳಿದ.
ಹೊಸ ಆಜ್ಞೆ. ಅಂಗಡಿಗಳಲ್ಲಿನ ಸಕ್ಕರೆ ದಾಸ್ತಾನನ್ನು ಸರಕಾರದ ಅಧಿಕಾರಿ
ಗಳು ಬಂದು ನೋಡುವರಂತೆ ಹೆಚ್ಚಿನ ಬೆಲೆಗೆ ಮಾರಿದರೆ ಶಿಕ್ಷಿಸಬಹುದಂತೆ.
ಸೋಮ ಯೋಚಿಸಿದ: ಹೀಗೂ ಉಂಟೆ? ಎಂತಹ ಅನ್ಯಾಯ! ಇಂತಿಷ್ಟು
ಬೆಲೆಗೆ ಮಾರುವುದಕ್ಕೂ ಸರಕಾರದ ಅಪ್ಪಣೆ ಬೇಕೆಂದರೆ ಬೇರೇನು ಉಳಿಯಿತು?
ಕಣ್ಣು ಬಾಯಿಗಳಲ್ಲಿ ಕೆಂಡಕಾರುತ್ತ ರಾಯರು ಗರ್ಜಿಸಿದರು:
“ಕಲೆಕ್ಟರರ ರಾಜ್ಯಭಾರ ಶುರುವಾಗಿದೆ! ಮೊಗಲ್ ದರ್ಬಾರ್!”
ಬಹಳ ಕೆಟ್ಟ ಕ್ರಮವಪ್ಪ ಇದು_ಎಂದುಕೊಂಡ ಸೋಮ.
ಭಂಡಸಾಲೆಯ ಮುಂದೆ ನಿಂತಿದ್ದ ಗಿರಾಕಿಗಳನ್ನು ಉದ್ದೇಶಿಸಿ ರಾಯರು
ಗರ್ಜಿಸಿದರು: “ಇವರಿಗೆಲ್ಲ ಯುದ್ಧನಿಧಿಗೆ ಚಂದಾಕೊಡಲಿಕ್ಕೆ ನಾವು ಬೇಕು. ಹಣ ರಾಶಿ
ರಾಶಿಯಾಗಿ ಸುರಿಯಬೇಕು. ಸಾಮಾನು ಮಾತ್ರ ಕಮ್ಮಿ ಬೆಲೆಗೆ_ನಷ್ಟಕ್ಕೆ-
ಮಾರಬೇಕು!”
ಸೋಮನಿಗೆ ಅನಿಸಿತು: ಅದು ಕೂಡದೇ ಕೂಡದು. ಸರಕಾರಕ್ಕೆ ಹಣ
ಕೊಡುವಾಗ ನಾವು ಹೇಳಿದಂತೆ ಅದು ಕೇಳಬೇಡವೆ? ಹೌದು. ಅವನು ಕೂಡಾ
ಯುದ್ಧನಿಧಿಗೆ ಹಣ ಕೊಟ್ಟಿದ್ದ. ಒಂದಾಣೆ, ಬಹಳ ಕಷ್ಟದಿಂದ. ಯಾರೋ
ಅಧಿಕಾರಿಗಳು ಬಂದು ಅಂಗಡಿಯ ಮುಂದೆ ಇಂಗ್ಲಿಷ್ ಮಾತನಾಡಿದ್ದರಿಂದ
ಅವರ ಡಬ್ಬಿಗೆ ಆ ಹಣ ಹೋಗಿತ್ತು.
ರಾಯರ ದೃಷ್ಟಿ ತನ್ನ ಮೇಲೆ ಬಿದ್ದಾಗ ಸೋಮ ಕೇಳಿದ:
ಅರ್ಧ ಸೇರು ಅಕ್ಕಿ.”

“ಐದು ದುಡ್ಡು” ಎಂದರು ರಾಯರು.
"ಎಣ್ಣೆ! ಚಿవిుణి ಎಣ್ಣೆ!”
11


ಯಾರ ಮೇಲಿನ ಸಿಟ್ಟು ಇದು? ಹಿಂದಿನ ದಿನವಷ್ಟೇ ನಾಲ್ಕು ದುಡ್ಡಿಗೆ
ಕೊಂಡುಹೋಗಿದ್ದನಲ್ಲ? ಒಂದೇ ದಿನದಲ್ಲಿ ನಾಲ್ಕು ಪೈ ಹೆಚ್ಚಾಯಿತು.

ರಾಯರು ಕೂಗಿ ನುಡಿದರು:
“ಬೇಕಾದರೆ ಕೊಂಡುಹೋಗು. ಇಲ್ಲದಿದ್ರೆ ಕಲೆಕ್ಟರಲ್ಲಿಗೆ ಹೋಗು!”

****

ಮತ್ತೊಂದು ಸಂಜೆ ತನ್ನ ಅಂಗಡಿ ಮುಚ್ಚುತ್ತಿದಾಗ ಸೋಮ ಹೊಸ
ಹೊಸ ಸಾಮಾನು ಗಾಡಿಯಿಂದಿಳಿದು ಅಂಗಡಿಯ ಒಳಹೋಗುತ್ತಿದ್ದುದನ್ನು
ಕಂಡ. ಚಿಮಣಿಎಣ್ಣೆ ಡಬ್ಬಗಳೂ ಹಲವು ಇದ್ದಂತೆ ತೋರಿತು.
ಮಾರನೆಯ ದಿನ ಎಣ್ಣೆ ತರಬೇಕು. ಮನೆಯ ಬುಡ್ಡಿ ದೀಪವೂ ಬರಿದು;
ಅಂಗಡಿಯ ಚಿಮಣಿಯೂ ಖಾಲಿ. ಸಂಜೆಯವರೆಗೆ ಕಾಯುವಂತಿಲ್ಲ.
ದುಡ್ಡಿರಲಿಲ್ಲ.ಸದ್ಯಕ್ಕೆ ಕಾಲು ಬಾಟಲಿ ತರೋಣ ಎಂದು, ಪುಡಿಕಾಸಿ
ನೊಡನೆ ರಾಯರ ಭಂಡಸಾಲೆಗೆ ಹೋದ.
ಅಲ್ಲಿ ಹೇಳಿದರು:
"ಕಾಲು ಬಾಟ್ಲಿಗೆ ఒంದಾಣೆ-ఇವತ್ತಿನಿಂದ.”
“ತುಂಬಾ ಹೆಚ್ಚಾಯಿತಲ್ಲ ಧನಿಗಳೇ" ಎಂದ.
ಅವರು ಉತ್ತರ ಕೊಡಲಿಲ್ಲ. ಬೇಕಿದ್ದರೆ ಕೊಳ್ಳಬೇಕು ಅಷ್ಟೆ.
ಬೇಕಿದ್ದರೆ? ಉಹ್! ಬೇಡವೇ ಮತ್ತೆ? ಅಂಗಡಿಗೆ ಹೋಗಿ ಮತ್ತೂ ಒಂದೆ
ರಡು ಕಾಸು ಹುಡುಕಿ ತಂದು, ಒಂದಾಣೆ ತೆತ್ತು, ಸೋಮ ಎಣ್ಣೆ ಕೊಂಡ.ಅವ
ನಿಗೆ ತುಂಬಾ ದುಃಖವಾಯಿತು. ಹಣ ಹೆಚ್ಚು ಕೊಡಬೇಕಾದ್ದೊಂದು; ರಾಯರ
ಬಗ್ಗೆ ತಾನು ತೋರಿಸುತ್ತಿದ್ದ ಪ್ರೀತಿಯ ನೂರರಲ್ಲಿ ಒಂದಂಶವನ್ನೂ ಪ್ರತಿಯಾಗಿ
ಅವರು ತೋರಿಸಲಿಲ್ಲ ಎಂಬುದು ಇನ್ನೊಂದು.

****

ಮರುದಿನ ಬೆಳಿಗ್ಗೆಯೂ ಸೋಮ ಎಣ್ಣೆ ತಂದ.
ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದ ಅಕ್ಕಸಾಲಿಗ ಒಂದು ಸುದ್ದಿ
ಹೇಳಿದ. ಉತ್ತಮ ಚಿಮಣಿ ಎಣ್ಣೆಯನ್ನು ಬಾಟಲಿಗೆ ೩ ಆಣೆ ೭ ಪೈಗೂ,
ಕೀಳು ತರಹೆಯನ್ನು ೩ ಆಣೆ ೨ ಪೈಗೂ, ಮಾರಬೇಕೆಂದು ಸರಕಾರ ಆಜ್ಞಾ
ಪಿಸಿದೆ. ಹೆಚ್ಚು ಬೆಲೆ ಕೇಳಿದರೆ ವೋಚರ್ ಕೊಡಿ ಎನ್ನಬೇಕು.
ಸೋಮ ಕೇಳಿದ:
"ವೋಚರ್ ಅಂದ್ರೆ?”

“ఒంದು ಚೀಟಿ. ಎಷ್ಟು ಬೆಲೆಗೆ ಮಾಡಿದ್ದೂಂತ ಅದರಲ್ಲಿರ್‍ತದೆ.”

12
ನಿರಂಜನ: ಕೆಲವು ಸಣ್ಣ ಕಥೆಗಳು

"ಹಞ್. ಅದನ್ನು ಏನು ಮಾಡ್ಬೇಕು?”
“ಅಧಿಕಾರಿಗಳಿಗೆ ತೋರಿಸಿದರೆ ವ್ಯಾಪಾರಿಗೆ ಶಿಕ್ಷೆ.”
ಸಂಜೆ ಸೋಮ ಮತ್ತೆ ರಾಯರ ಭಂಡಸಾಲೆಗೆ ಹೋದ, ಬಾಟಲಿ
ಯೊಡನೆ.
ಅಲ್ಲಿ ಅಂದರು:
“ಬೆಳಗ್ಗೆ ಕೊಂಡು ಹೋಗಿದ್ದಿ, ಈಗ ಇಲ್ಲ!”
ಇದು ಮನೆಗೆ-ಎಂದರೆ ಅವರು ಕೇಳಬೇಕಲ್ಲ?
ಸ್ವಂತ ಉದ್ಯೋಗದ ಜೀವನದಲ್ಲಿ ಅದೇ ಮೊದಲ ಬಾರಿ ಇನ್ನೊಂದು
ಅಂಗಡಿಗೆ ಸೋಮ ಹೋದ. ಕಾಲು ಬಾಟಲಿಗೆ ೧ ಆಣೆ ೧ ಪೈ ಎಂದರು ಅಲ್ಲಿ!
ಥರಥರನೆ ನಡುಗುತ್ತ, ತಾನೇನು ಚಿಲ್ಲರೆಯವನಲ್ಲ ಎಂಬ ಭಾವನೆಯಿ೦ದ
ಸೋಮ, "ವೋಚ‌ರ್ ಕೊಡಿ" ಎಂದ.
ಸಾಹುಕಾರರು ಪಾದದಿಂದ ಹಿಡಿದು ತಲೆಯ ತನಕ ಸೋಮನನ್ನು
ನೋಡಿ, ವಿಕಟವಾಗಿಯೇ ನಕ್ಕು, "ಎಂಥ ವೌಚರ್?" ಎಂದು ಕೇಳಿದರು.
ಸೋಮನ ಸಿಟ್ಟೆಲ್ಲ ಒಮ್ಮಲೆ ಹೊರಬಂದು ಅವನು ಕೂಗಾಡಿದ:
ಪಾಪ ಕಟ್ಟಿಕೊಳ್ಳಬೇಡಿ! ಬಡವರನ್ನು ಕೊಲ್ಲಬೇಡಿ! ಸರಕಾರ ಶಿಕ್ಷೆ
ಕೊಟ್ಟೀತು! ದೇವರು ಶಾಸ್ತಿ ಮಾಡ್ತಾನೆ!”
ಸೋಮನ ಮಾತು ಮುಗಿಯುತ್ತಿದ್ದಂತೆಯೇ ಅಂಗಡಿಯ ಆಳು ಅವ
ನನ್ನು ಹೊರದಬ್ಬಿದ.
ಸಾಹುಕಾರರು ಧನವೇದಿಕೆಯ ಮೇಲಿಂದ, ವ್ಯಾಪಾರಕ್ಕೆ ಬಂದವರೊಡನೆ
ಹಿಟ್ಲರನ ಸಾಹಸಗಳನ್ನು ಬಣ್ಣಿಸತೊಡಗಿದರು.
...ಆಚೆ ಅಂಗಡಿಯವರಂತೂ ತಮ್ಮ ಆಳುಗಳ ನಗುವಿನ ಹಿಮ್ಮೇಳ
ದೊಂದಿಗೆ ಸೋಮನನ್ನು ಅವಮಾನಿಸಿದರು.
ಅಳುತ್ತಿದ್ದ ಮಗುವನ್ನೆತ್ತಿಕೊಂಡು ಅವನು ಮನೆಗೆ ಬಂದ.

****

ಮರುದಿನ ಅಕ್ಕಸಾಲಿಗ ಹೇಳಿದ: ಇತರ ಅ೦ಗಡಿಗಳ ಅವಸ್ಥೆ ಏನು ಅಂತ
ನೋಡಬಹುದಲ್ಲ?
ಸೋಮ ಹೊರಟ.
ವೌವ್‌ಚರ್ ಗಿವ್ ಚರ್ ಇಲ್ಲವೆಂದರು ಒಂದೆಡೆ.
ಸರಕಾರವೇ ಎಣ್ಣೆ ಕೊಟ್ಟೀತು, ಹೋಗು!-ಎಂದರು ಇನ್ನೊಂದೆಡೆ.

ಹೀಗೆಯೇ ಎಲ್ಲೆಲ್ಲೂ . 
"ಎಣ್ಣೆ !ಚಿಮಿಣಿ ಎಣ್ಣೆ!”
13

ಮೂರನೆಯ ದಿನ ಅಕ್ಕಸಾಲಿಗ ಹೇಳಿದ:
“ನಾವೆಲ್ಲ ಒಂದಾಗಿ ಅಧಿಕಾರಿಗಳಲ್ಲಿಗೆ ಹೋಗ್ವೇಕು!”

****

ಆ ರಾತ್ರೆ ಕೂಳಿಲ್ಲದೆ ಬೆಳಕಿಲ್ಲದೆ ಇರಬೇಕಾಯಿತು.
ಹಗಲು ವ್ಯಾಪಾರ ಇರಲಿಲ್ಲ.
ರಾತ್ರೆ ಜಡಿಮಳೆ ಬೀಸಿತು, ಮಾಡು ಹಾರಿತು; ಗೋಡೆ ಕುಸಿಯಿತು.
ಬೆಳಗ್ಗೆ ನೋಡುವಾಗ ಮಗುವಿನ ಮೈ ಕೆಂಡದಂತೆ ಕಾದಿತ್ತು. ಸೋಮ ತಲೆ
ಯನ್ನು ಕೆದರಿಕೊಂಡ.. ಕಣ್ಣುಗಳು ಊದಿದ್ದುವು.
“ಅನ್ಯಾಯ!” ಎಂದು ಕೂಗಿದ.
ಎದ್ದು, ಪುನಃ ಅದೇ ಶಬ್ದವನ್ನು ಉಚ್ಛರಿಸಿದ.
ಬರಿದಾಗಿದ್ದ ದೀಪದ ಬುಡ್ಡಿಯನ್ನೆತ್ತಿಕೊಂಡು, ಹೊರಕ್ಕೆ ಧಾವಿಸಿದ.
ನೆಲಗಡಲೆಯ ಡಬ್ಬ ಉರುಳಿತು.
ಉರುಳಲಿ, ನನಗದು ಬೇಡ-ಎಂದುಕೊಂಡ.
ಅವನು ನಡೆದದ್ದು ಊರಿನ ಮೈದಾನಕ್ಕೆ.
ಪೋಲೀಸ್ ಸೂಪರಿಂಟೆಂಡೆಂಟರು ಕವಾಯತು ನೋಡುತ್ತಿದ್ದರು.
ಸೋಮ ಅವರ ಬಳಿಗೆ ಓಡಿ “ಎಣ್ಣೆ!” ಎಂದ.
ಸಾಹೇಬರು ಕ್ಷಣಹೊತ್ತು ಅವನನ್ನು ದಿಟ್ಟಿಸಿದರು.
ಸೋಮ ಅವರ ಮುಖದ ಹತ್ತಿರಕ್ಕೆ ದೀಪದ ಬುಡ್ಡಿಯನ್ನು ನೂಕಿ,
“ಎಣ್ಣೆಕೊಡು!" ಎಂದ.

****

....ಹೋಟಲಿನವರು ಮುಖದ ಮೇಲೆ ಬಿಸಿನೀರೆರಚಿದರೇನೊ. ಬಿಸಿಲಲ್ಲಿ
ಬಿದ್ದಿದ್ದ ಸೋಮನಿಗೆ ಎಚ್ಚರವಾಯಿತು. ಸುತ್ತಲೂ ಪೋಕರಿ ಹುಡುಗರು,
ಒಬ್ಬ ಕೂಗಿದ: "ಎಣ್ಣೆ!" ಹಲವರು ಮಾರ್ದನಿ ಕೊಟ್ಟರು. ಸೋಮ ತನ್ನ
ಕೈಯತ್ತ ನೋಡಿದ. ಜಜ್ಜಿ ಹೋಗಿದ್ದ ದೀಪದ ಬುಡ್ಡಿ ಸಮಿಪದಲ್ಲೇ ಇತ್ತು.
ಸ್ಫೂರ್ತಿಗೊಂಡವನಂತೆ ಸೋಮ , ಆ ಬುಡ್ಡಿಯನ್ನು ಹಿಡಿದೆತ್ತಿ, “ఎణ్ణి!"
ಎಂದು ಕಿರಿಚುತ್ತ ಎದ್ದುನಿಂತ. ಹುಡುಗರು “ಎಣ್ಣೆ!” ಎಂದರು; “ಹುಚ್ಚ!”
ಎಂದರು. ಸೋಮ ಓಡಿದ. ಹುಚ್ಚನಂತೆ ಓಡಿದ.

ಒಂದು ಕಾರು ಬೇರೆ ಬೀದಿಯಿಂದ ಸರಕ್ಕನೆ ತಿರುಗಿ ಬಂದು, ಎದುರಾದ
ಸೋಮನನ್ನು ಚರಂಡಿಗೆ ಎಸೆದು, ನಿಲ್ಲದೆ ಮುಂದಕ್ಕೆ ಧಾವಿಸಿತು. ನಿಂತು
ಹೊರಡುವುದೆಂದರೆ ವೃಥಾ ಪೆಟ್ರೋಲ್ ಖರ್ಚು!

一೧೯೪೨


ಮೈಖೆಲ್‌ಮಾಸ್ ಪಿಕ್‌ನಿಕ್

ಅಲಾರಂ ಘಂಟೆ ಐದು ಹೊಡೆಯಿತು-ಟ್ರಿನ್... ಟ್ರಿನ್...ಟ್ರಿನ್...
ಲಿಲ್ಲಿ ಎದ್ದಳು. ವಿದ್ಯುತ್ ದೀಪವನ್ನು ಹಚ್ಚಿ ಕಿಟಕಿಯ ಕೆಳಬಾಗಿಲನ್ನು
ತೆರೆದಳು. ಕೆಳಗೆ ಉದ್ಯಾನದ ಹೂ ಗಿಡ ಬಳ್ಳಿ ಎಲೆಗಳ ಮೇಲೆ ಹನಿಹನಿಯಾಗಿ
ಮಳೆ ಸುರಿಯುತ್ತಿತ್ತು. ಅಲ್ಲಿಂದ ನೀರು ತಟಕು ತಟಕಾಗಿ ಕೆಳಗುರುಳುತ್ತಿತ್ತು.

ಮಮ್ಮಿ ಬೇಗನೆ ಏಳುವಳೊ ಇಲ್ಲವೊ!
ಹಾವುಗೆ ಮೆಟ್ಟ, ಬಾಬ್ ಮಾಡಿದ್ದ ತಲೆಗೂದಲನ್ನು ಹಿಂದಕ್ಕೆ ಸರಿಸಿ,
ನಿಲುವುಗನ್ನಡಿಯಲ್ಲಿ ಇಣಿಕಿ ನೋಡಿದಳು ಲಿಲ್ಲಿ. ಅವಳ ಹೆಮ್ಮೆಯ ಮೂಗು!
“ನಿನ್ನ ಮೂಗಿಗಾಗಿ ಮನಸೋತಿದ್ದೇನೆ” ಎಂದು ಕಾಲೇಜಿನ ರಮಣ ಅವಳಿಗೆ
ಬರೆದಿದ್ದನ್ನಲ್ಲ?

“ಬೇಬಿ!” ಎಂದಿತೊಂದು ಸ್ವರ ಕೆಳ ಹಜಾರದಿಂದ.. ಆಕೆ ಅಡುಗೆ
ಮನೆಯ ಅಜ್ಜಿ. ಪಿಕ್ನಿಕ್ಗೆ ಹೋಗುವವಳು ಬೇಬಿಯಾದರೂ ತಾನೇ
ಹೋಗುತ್ತಿರುವಷ್ಟು ಉತ್ಸಾಹ ಅಜ್ಜಿಗೆ. ಲಿಲ್ಲಿ ಪಟಪಟನೆ ಮೆಟ್ಟಿಲಿಳಿದು
ಹೋಗಿ ಅಜ್ಜಿಗೆ, “ಗುಡ್ ಮಾರ್ನಿಂಗ್” ಎಂದಳು. ಮಮ್ಮಿಯೂ ಎದ್ದು
ಬಂದರು, ಪಪ್ಪನೂ ಮುಖ ತೋರಿಸಿದರು.

“ಏನು ಕತ್ತಲೆ!..ಸಾಲದ್ದಕ್ಕೆ ಈ ಮಳೆ ಬೇರೆ!” ಎಂದು ಅವರು
ಗೊಣಗಿದರು.

ಹಿಂದಿನ ಸಂಜೆ లిల్లి ಮೇರಿಯನ್ನು ಕಂಡಿದ್ದಳು. ತಾನು ಪಿಕ್ನಿಕ್ಗೆ
ಬರಲೆತ್ನಿಸುವುದಾಗಿ ಹೇಳಿದ್ದಳು ಮೇರಿ. ಕೊಳಕು ಹುಡುಗಿ; ಒಳ್ಳೆಯ ಒಂದು
ಜತೆ ಡ್ರೆಸ್ ಇಲ್ಲ; ಆಕೆಗೆ ಒಂದು ಜತೆ ಎತ್ತರದ ಹಿಮ್ಮಡಿಯ ಷೂಗಳಿದ್ದುವು.
ಆದರೇ ದುರಸ್ತಿಗೆ ಹೋದಮೇಲೆ ಹಿಂತಿರುಗಿ ಬಂದಿರಲಿಲ್ಲ. ಆದರೂ ಮೇರಿ
ಯನ್ನು ಕರೆದುಕೊಂಡು ಹೋಗಬಹುದಿತ್ತು. ಅವಳಿಗೆ ತಿಂಡಿಗಿಂಡಿ ಕೊಡ
ಬಹುದಿತ್ತು, ಧನಿಕರಾದ ತಾವು ಎಷ್ಟು ಒಳ್ಳೆಯವರೆಂದು ತೋರಿಸಬಹುದಿತ್ತು.
ಅಂಥ ಹೀನ ಹುಡುಗಿಯ ಜತೆಯಲ್ಲಿ ತಿರುಗಾಡುವುದೆಂದರೂ ಲಿಲ್ಲಿಗೆ ಹೆಮ್ಮೆಯೇ
ಮೈಖೆಲ್ ಮಾಸ್ ಪಿಕ್‌ನಿಕ್
15


ಅವರಿಬ್ಬರಲ್ಲಿ ಹುಡುಗರೆಲ್ಲ ನೋಡುವುದು ತನ್ನನ್ನು. ಅವರಿಗೆ ಬೇಕಾದುದು ತಾನು, ಮೇರಿಯಲ್ಲ! ಫೋನ್ ಮಾಡಿ ಹೇಳೋಣವೆಂದರೆ ಮೇರಿಯ ಮನೆಯಲ್ಲಿ ಫೋನ್ ಎಲ್ಲಿಂದ ಬರಬೇಕು? ಅದು ಗುಡಿಸಲು-ಹಟ್ಟಿ! ಅವರೊಡನೆ ಬೆರೆಯುವುದು ತನ್ನ ಮನೆತನದ ಗೌರವಕ್ಕೆ ಒಂದು ರೀತಿಯಲ್ಲಿ ಕುಂದೇ ಸರಿ. ಮೇರಿ ಜಾಣೆ ನಿಜ. ತಾನು బలు ಪ್ರಯಾಸದಿಂದ ಪಾಸ್ ಮಾರ್ಕ್ಸ್ ಪಡೆದರೆ ಮೇರಿ ನಿರಾಯಾಸವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತಿದ್ದಳು... ಆದರೆ ಕಾನ್‌ವೆಂಟಿನ ಸಿಸ್ಟರ್‌ಗಳೇನೂ ఆ ಭಿಕಾರಿಯನ್ನು ಪ್ರೀತಿಸುತ್ತಿರಲಿಲ್ಲ. ಒಬ್ಬ ಟೀಚರ್ ಮಾತ್ರ ಮೇರಿಯನ್ನು ಮೆಚ್ಚುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, ಆ ಟೇಚರ್ ಕೂಡ ಬಡವೆ. ಅವಳ ಉಡುಗೆ ಅದನ್ನು ತೋರಿಸುತ್ತಿತ್ತು. ಅದಕ್ಕಿಂತಲೂ ಮುಖ್ಯ ವಿಷಯ ಹುಡುಗರು ಬರೆಯುತ್ತಿದ್ದ ಕಾಗದ. ಅವರು ಬರೆಯು ತ್ತಿದುದು ತನಗೆ-ತನ್ನಂಥ ಹುಡುಗಿಯರಿಗೆ; ಮೇರಿಗಲ್ಲ! ಅಲ್ಲಿಗೆ ಒಮ್ಮೆ ನೆನಪಾಯಿತು:

    “ನನ್ನ ಆಂಟಿಗೆ ವಾಂತಿ ಭೇದೀಂತ ತೋರುತ್ತೆ. ಆಸ್ಪತ್ರೆಗೆ ಕರಕೊಂಡು

ಹೋಗೋದಿಲ್ಲ. ಇಲ್ಲಿಯೇ ಔಷಥೋಪಚ ಮಾಡ್ತೀವಿ. ಪಿಕ್ನಿಕ್ಗೆ ಬರಲಾಗುತ್ತೊ ಇಲ್ಲವೊ,” ಎಂದು ಮೇರಿ ಸಂದೇಹದ ಸ್ವರವೆತ್ತಿದ್ದಳು ಹಿಂದಿನ ದಿನ. T

    ಹಾಗಾದರೆ-
    ಆದರೂ ಆಳನ್ನು ಕಳುಹಿ ನೋಡಬೇಕೆಂದು ಲಿಲ್ಲಿಗೆ ತೋರಿತು,
    ಮೇರಿ ಬಂದರೆ ತನಗೊಬ್ಬ ಸೇವಕಿ ಇದ್ದಂತೆಯೂ ಆಗುವುದಲ್ಲವೆ?
    ಕಾರ್ ಶೆಡ್ಡಿನಿಂದ ಹೊರಬಂದು ಸಿಧ್ಧ್ಗವಾಗಿ ನಿಂತಿತು. ಆರು ಘಂಟೆಗೆ

ತಲಪುವಂತೆ ರೈಲ್ವೆಸ್ಟೇಶನ್ನಿಗೆ ಆ ಕಾರಿನಲ್ಲಿ ಹೋಗಬೇಕು. ಅಲ್ಲಿ ಬೇರೆ ಹುಡುಗಿಯರೆಲ್ಲ ಇರುವರು. ಅವರೆದುರು ಬಲು ಠೀವಿಯಿಂದ ಕೆಳಗಿಳಿದು, ಹಲೋ ಹಲೋ ಎಂದು ವಂದಿಸುತ್ತ, ಎದೆಯೆತ್ತಿ, ತಲೆಯೆತ್ತಿ ನಡೆಯಬೇಕು.

    ಕಾರಿನ ಡೈವರ್ ಜಾನ್ನಿಯನ್ನು ಸಮೀಪದಲ್ಲೆ ಇದ್ದ ಮೇರಿಯ ಮನೆಗೆ 

ಕಳುಹಿದುದಾಯಿತು.

    ಪಪ್ಪ ಕೆಳಗಿಳಿದವರು ರೇಡಿಯೊ ತಿರುವಿದರು. ಆಹ್ವಾದಕರ ಸಂಗೀತದ 

ತೆರೆಗಳು ಬರುತ್ತಿದುವು. ಲಿಲ್ಲಿ ತನ್ನ ಪ್ರೀತಿಯ ಹಾಡನ್ನು ಇಳಿದನಿಯಲ್ಲಿ ಹಾಡುತ್ತ ಬಚ್ಚಲು ಮನೆಗೆ ಹೋಗಿಬಂದಳು. ಅಜ್ಜಿಯ ಸಂಭ್ರಮ ಹೇಳ ತೀರದು, ಆಕೆಯ ಉತ್ಸಾಹದ ಪರದಾಟದಿಂದ ಕೆಲಸ ಮಾತ್ರ ಯಾವುದೂ 16 ನಿರಂಜನ: ಕೆಲವು ಸಣ್ಣ ಕಥೆಗಳು ఆ గుత్తిర్లిల్ల. ಲಿಲ್ಲಿ ಮೇಕಪ್‍ಗೆ ಆರಂಭಿಸಿದಳು. ಹೆಚ್ಚು ಮಾಡಿಕೊಳ್ಳಬಾರದು. ಮೆಳ್ಳೆಗಣ್ಣಿನ ಸಿಸ್ಟರ್ ಒಬ್ಬಳಿಗೆ ಮೇಕಪ್ ಕಂಡರೆ ಆಗುವುದಿಲ್ಲ..." ತಮ್ಮ ಪಾಲಿಗಂತೂ ಆತ್ಮನಿಗ್ರಹವೇ ಗತಿ.... ಇತರರು ಚೆನ್ನಾಗಿದ್ದರೂ ಅಸೂಯೆ ಇವರಿಗೆ,” ರೆಂದುಕೊಂಡಳು లిల్లి. ನಿಲುವುಗನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡಿ, ಹೆಮ್ಮೆಯಿಂದ ಭುಜ ಅಲುಗಿಸಿದಳು. ಮೇಲು ತುಟಿಯ ಲಿಪ್‍ಸ್ಟಿಕ್ ಕೊಂಚ ಹೆಚ್ಚು ಮೇಲಕ್ಕೆ ಹೋಗಿ ಕಾಣದ ಮೀಸೆಯನ್ನು ಕೆಂಪಾಗಿಸಿತು. ಅದನ್ನು ತೊಡೆಯುತ್ತ ಲಿಲ್ಲಿ ಯೋಚಿಸಿದಳು:

    ತನಗೆ ಮೆಚ್ಚುಗೆಯಾಗುವುದು ಯಾರ ಮೀಸೆ? ರಮಣನದೆ? ಫ್ರೆಡ್ಡಿಯದೆ?
   ಲಿಲ್ಲಿಯ ಶೃಂಗಾರವಾಗುತ್ತಿದ್ದಾಗ ಡ್ರೈವರ್ ವಾಪಸು ಬಂದ.

"ಮೇರಿಯ ಆಂಟಿಗೆ ಕಾಹಿಲೆ ಜಾಸ್ತಿಯಾಗಿದೆಯಂತೆ. ಆಕೆ ಬರೋದಿಲ್ಲ ವಂತೆ,” ಎಂದು ಆತ ವರದಿ ಒಪ್ಪಿಸಿದ. ಮಮ್ಮಿ ಒಂದು ಕಪ್ ಟೀ ಮತ್ತು ಬಿಸ್ಕತ್ತು ತಂದರು. ಘಟ್ಟಿ ಹಾಲನ್ನು ಹಾಕಿ ಮಾಡಿದ್ದ ಟೀ ಅದು. ಥರ್ಮಾಸ್ ಫ್ಯಾಸ್ಕಿನಲ್ಲೂ ತುಂಬಿದು ದಾಯಿತು. లిల్లి ತನ್ನ ಹೊಸ ಹೊಸ ಸ್ಕೌಟ್ ಡ್ರೆಸ್ ಹಾಕಿಕೊಂಡಳು.ಬ್ಲೂ ಬರ್ಡ್ ಷೂಸ್ ಮೆಟ್ಟಿಕೊಂಡಳು. ಮತ್ತೆ ಕೆದರಿದ ಕ್ಯಾಪನ್ನು ಕಂಡು ಕೆರಳಿ, ಶೃಂಗಾರ ಮಾಡಿದಳು. ನಿಲುವುಗನ್ನಡಿಯ ಎದುರು, ತನ್ನನ್ನು ತಾಯಿಗೆ ತೋರಿಸುತ್ತ, లిల్లి ಒಂದು ಸುತ್ತು ತಿರುಗಿದುದಾಯಿತು. “Perfect!” ಎಂದರು ಮಮ್ಮಿ. ಅದು ಅವರ ಭಾಷೆ. ದೇಶ ಭಾರತ ನಿಜ. ಆದರೆ ಅವರ ಮನೆ ಮಾತು ಪರದೇಶದು. ಸೂಟ್ಕೇಸನ್ನು ಕಾರಿನಲ್ಲಿರಿಸಿದರು. ಒಂದು ದಿನದ ಪಿಕ್ನಿಕ್ಗಾಗಿ ಆರು ಜತೆ ಡ್ರೆಸ್ ಗಳನ್ನು ಲಿಲ್ಲಿ ತೆಗೆದುಕೊಂಡಿದ್ದಳು. ಬೇತಿಂಗ್ ಸೂಟನ್ನೂ ಮರೆತಿರಲಿಲ್ಲ. ಸಿಸ್ಟರ್ ಗಳ ಕಣ್ಣು ತಪ್ಪಿಸಿ ಈಸುಹೋಗುವ ಅವಕಾಶ ದೊರೆತರೆ? ಕೇರಂಬೋಡರ್ಲೂ ಇತ್ತು, ಉಳಿದ ಹುಡುಗಿಯರಲ್ಲಿ ಕೆಲವರಿಗಿ೦ತಲಾದರು ತಾನು ದೊಡ್ಡವಳಾಗುವುದು ಬೇಡವೆ? ವಯಲಿನ್, ಗಿಟಾರ್, ಯಾವುದನ್ನೂ ಅಲ್ಲಿ ಬಿಟ್ಟಿರಲಿಲ್ಲ. ಪಪ್ಪನೂ ಮಮ್ಮಿಯೂ ಗುಪ್ಪಾಲೋಚನೆ ಮಾಡಿ ಗ್ರಾಮಾ ಪೆದೋನ್ ಪೆಟ.ಗೆಯನೂ ಹಲವು ರೆಕಾರ್ಡುಗಳನ್ನೂ ತೆಗೆದಿರಿಸಿದರು. ಲಿಲಿ ಮೈಖೆಲ್ಮಾಸ್ ಪಿಕ್ನಿಕ್ 17 ಬೇಡನೆ? . "ಬೈ....ಬೈ..."ಎನ್ನುತ್ತ ಲಿಲ್ಲಿ ಹೊರಟಳು. ಕಾರು ಹೊರಟಿತು.ಗೇಟು ದಾಟಿ ದೊಡ್ಡ ಬೀದಿಗೆ ತಿರುಗುವಲ್ಲೇ ಮೇರಿಯ ಗುಡಿಸಲು... ... ಕಾರನ್ನು ನಿಲ್ಲಿಸಿದುದಾಯಿತು. ಮೇರಿ ಹೊರಬಂದಳು.ಅತ್ತು ಅತ್ತು ಆಕೆಯ ಕಣ್ಣುಗಳು ಕೆಂಪಗಾಗಿದ್ದುವು. ಆಂಟಿಗೆ ಸೌಖ್ಯವಿಲ್ಲವೆಂಬ ವ್ಯಥೆ ಯೇನೋ! ಆದರೆ ಆ ವಿರೂಪವನ್ನು ನೋಡಿ ಲಿಲ್ಲಿಗೆ ತಿರಸ್ಕಾರ ಹುಟ್ಟಿತು. ಆದರೂ, ಮೇರಿ ತನ್ನ ಡ್ರೆಸ್ ನೋಡಲಿ ಎಂದು ಲಿಲ್ಲಿ ಕೆಳಕ್ಕಿಳಿದಳು. ರೈನ್ ಕೋಟು ಕೈಮೇಲಿತ್ತು. "ನೀನು ಬರುವುದಿಲ್ಲವಲ್ಲಾ” ಎಂದಳು ಲಿಲ್ಲಿ, ಆದರೆ ಆ ಧ್ವನಿಯಲ್ಲಿ ವಿಷಾದದ ಛಾಯೆಯಿರಲಿಲ್ಲ . "ಇಲ್ಲ,ಸಾರಿ" ಎಂದಳೂ ಮೇರಿ. లిల్లి ಕೈಗೆ ಕಟ್ಟಿದ್ದ ಚಿಕ್ಕಾಸಗಲದ ಕೈಗಡಿಯಾರವನ್ನು ನೋಡುತ್ತ; “ಓ! ಟೈಮ್ ಆಯಿತು. ಹಾಳು ಮಳೆ ಬೇರೆ..ಹೋಗ್ತೀನಿ...ಡ್ರೆಸ್ ಹೇಗಿದೆ?” ಎಂದು ಕೇಳಿದಳು. “Fine !” ಎಂದಳು ಮೇರಿ. ದೊಡ್ಡವರ ಮಕ್ಕಳು ಏನು ಕೇಳಿದರೂ 'ಫ್ಲೈನ್' ಎನ್ನಬೇಕೆಂದು ಅವಳಿಗೆ ಆಕೆಯ ಆಂಟಿ ಕಲಿಸಿಕೊಟ್ಟಿದ್ದರು. ಕಾರಿನಲ್ಲಿ ಕುಳಿತು ಮುಂದುವರಿಯುತ್ತ ಲಿಲ್ಲಿ ಕರವಸ್ತ್ರ ಬೀಸಿದಳು. ಮೇರಿಯ ಕೈಬೆರಳುಗಳು ಮಾತ್ರ ಅಲುಗಿದುವು. ಆಕೆಯ ಕಣ್ಣಗಳಿಂದ ಕೋಡಿಕಟ್ಟಿ ಹರಿಯುತ್ತಿತ್ತು ಅಶ್ರುಧಾರೆ.

      *                  *            *             *

........ರಾತ್ರೆಯ ರೈಲುಗಾಡಿಯಲ್ಲಿ ಲಿಲ್ಲಿ ವಾಪಸ್ಸು ಬಂದಳು. ಮಳೆ

ಸುರಿದು ಪಿಕ್ನಿಕ್ ಬರಿಯ ರೈಲು ಪ್ರವಾಸದಲ್ಲೇ ಮುಕ್ತಾಯವಾಗಿತ್ತು.

ಗ್ರಾಮಾಫೋನ್ ರೆಕಾರ್ಡುಗಳಿಗೆ ಸಿಸ್ಟರ್'ಗಳು ಬಹಿಷ್ಕಾರ ಹಾಕಿದ್ದರು. ಸ್ಕೌಟ್ ಡ್ರೆಸ್ಸೇ ಕೊನೆಯವರೆಗೂ ಗತಿಯಾವಿುತು. ಎಂತಹ ಅವಮಾನ! ಆ ರಮಣ ಬೇರೆ. ಆತ ರೈಲು ನಿಲ್ದಾಣದಲ್ಲಿ ಕಾದಿದುದು ನಳಿನಿಗಾಗಿ; ತನಗೋಸ್ಕರವಲ್ಲ, 'ಕುರೂಪಿ'ಯಾದ ನಳಿನಿ.. ಕಾರು ಲಿಲ್ಲಿಯೊಡನೆ ತಮ್ಮ ಬೀದಿಯ ಬಳಿ ಬಂದಾಗ ಮೇರಿ ಅಲ್ಲೇ ನಿಂತಿದ್ದಳು. ಜೊತೆಯಲ್ಲಿ ಯಾವನೋ ಒಬ್ಬ ಯುವಕನಿದ್ದ, ಸೈನಿಕನ ಉಡುಪಿನಲ್ಲಿ, ರಾತ್ರೆ ಹೊತ್ತಾದುದೇ ಚೆನ್ನಾಯಿತು; ಹಗಲಾಗಿರುತ್ತಿದ್ದರೆ, 18 ನಿರಂಜನ: ಕೆಲವು ಸಣ್ಣ ಕಥೆಗಳು ಮೇಕಪ್ ಕೆಟ್ಟಿದಾಗ, ತನ್ನನ್ನು ಅವನು ಕಾಣಬೇಕಾಗಿತ್ತಲ್ಲವೆ? ಆದರೆ ಅವನು ಯಾರು? ಮೇರಿಯ ಸ್ನೇಹಿತ-ಆತ ಯಾರು? .......ಕಾರು ಮನೆ ಸವಿಾಪಿಸುತ್ತಿದ್ದಂತೆ ಮೇರಿ, “ಗುಡ್ನೈಟ್” ಎಂದಳು. లిల్లి ಉತ್ತರಿಸಲಿಲ್ಲ. ....ಮನೆಯಲ್ಲೂ ಲಿಲ್ಲಿ ಸಿಡುಕಿನ ಮುಖವಾಡ ಧರಿಸಿದಳು. ಮನಬಿಚ್ಚಿ ಯಾರೊಡನೆಯೂ ಮಾತಾಡಲಿಲ್ಲ. - ಕೆಳ ಹಜಾರದ ಕೊಠಡಿಯಲ್ಲಿ ಹಣ್ಣು ತುಂಬಿದ ಬುಟ್ಟಿ ಇತ್ತು. ಊಳಿಗದ ಹುಡುಗಿ ಹೇಳಿದಳು. “ಮೇರಿಯ ಅಣ್ಣ ಯುದ್ಧದಿಂದ ವಾಪಸು ಬಂದಿದ್ದಾನೆ. ಆತ ಕಳಿಸಿ ಕೊಟ್ಟಿರೋದು ಈ ಬುಟ್ಟಿ.” "ಬಾಯ್ ಮುಚ್ಚು!” ಎಂದು లిల్లి ಗರ್ಜಿಸಿದಳು. "ಮೇರಿಯ ಆಂಟೀನ ಆಸ್ಪತ್ರೆಗೆ ತಗೊಂಡು ಹೋದರು" ಎಂದಳು ಅದೇ ಹುಡುಗಿ. “ಬಾಯಿ ಮುಚ್ಚು ಎಂದೆನಲ್ಲ!” ಎಂದು ಲಿಲ್ಲಿ ಮತ್ತೂ ಸ್ವರವೇರಿಸಿ ಗದರಿದಳು.

                                                        -೧೯೪೩ 19

೪ ರಕ್ತ ಸರೋವರ ಕಣ್ಣೋರೆಸಿಕೊಂಡಳು ಜೈನಬಿ. ನುಂಗಲಾಗದೊಂದು ಉಗುಳು ಗಂಟಲಲ್ಲಿ ತಡೆದು ನಿಂತಿತ್ತು .ಮಾತು ಹೊರಡುತ್ತಿರಲಿಲ್ಲ. ಮುದುಕ ಮಾವ ಮುಸ್ಸಂಜೆಯ ನಮಾಜು ಮಾಡುತ್ತಿದ್ದ, ಪುಟ್ಟ ಮಗು ಓಡಿಯಾಡಿ ಬಸವಳಿದು ನಿದ್ದೆ ಹೋಗಿತ್ತು, ಶೇಕ ಮೂಕನಾಗಿ ಕುಳಿತಿದ್ದ, ತುಟಿಯಲುಗುತ್ತಿರಲಿಲ್ಲ; ಆದರೆ ಕಣ್ಣ ಮಾತಾಡುತ್ತಿತ್ತು. ಮನಸ್ಸು-ಭಾವನೆಗಳನ್ನು ಮುಗ್ಧಗೊಳಿಸುವ ನೀರವತೆ ಸುತ್ತಲೂ ಹರಡಿತ್ತು. ನೆರೆಮನೆಯೊಂದರಲ್ಲಿ ನಡೆಯುತ್ತಿದ್ದ ಕೊರಾನಿನ ಪಠನ ಅಲೆಯಲೆ ಯಾಗಿ ಬಂದು ಬಂದು ಆ ಮೂರು ಜೀವಗಳ ಸುತ್ತಲೂ ಅವ್ಯಕ್ತ ಜಾಲವನ್ನು ಹೆಣೆಯುತ್ತಿತ್ತು. ಶೇಕ ಆ ಸ್ವಪ್ನ ಸಮಾನ ಮೌನವನ್ನು ಭೇದಿಸಿ ಹೇಳಿದ: “ಬೆಳಕು ಹರಿಯುವ ಹೊತ್ತಿಗೆ ಮರಳಿ ಬರುತ್ತೇವೆ ಜೈನಬಿ.” ಜೈನಬಿ ಆ ದಲ್ ತಟಾಕವನ್ನು ನೋಡಿದ್ದಳು. ಕೆಂದಾವರೆಗಳಿಗಾಗಿ ಆಸೆಪಟ್ಟಿದ್ದಳು. ಮದುವೆಯಾದ ಮೊದಲ ದಿನಗಳಲ್ಲೊಮ್ಮೆ, "ಶೇಕ! ಒಂದು ಬಾರಿ ಶಿಕಾರಾ (ದೋಣಿ)ದಲ್ಲಿ ಕುಳಿತು ನಾವು ವಿಹಾರಕ್ಕೆ ಹೋಗಬಾರ ದೇಕೆ?” ಎಂದಿದ್ದಳು. “ಹುಚ್ಚಿ ಬೇರೆ ಊರಿನಿಂದ ಬರುವ ಶ್ರೀಮಂತರು • ಮಾತ್ರ ಅಲ್ಲಿ ವಿಹರಿಸುವುದು. ಅದು ರಾಜರ ಸರೋವರ, ನಮ್ಮಂಥವರು ಅಲ್ಲಿಗೆ ಹೋಗಬಾರದು” ಎಂದು ಶೇಕ ಉತ್ತರ ಕೊಟ್ಟಿದ್ದ. ಅದು ಮೂರು ವರ್ಷಗಳ ಹಿಂದಿನ ಮಾತು. ತಮ್ಮ ಬಡ ಗುಡಿಸಲಿನಲ್ಲಿ - ತಾವೇ ರಾಜರಾಣಿಯರಾಗಿ ಶೇಕ ಮತ್ತು ಜೈನಬಿ ಬಾಳಿದರು. ಸುಂದರ ನಾಡಾದ ಕಾಶ್ಮೀರದಲ್ಲಿ ಅರಳಿಯೂ ಬಾಡಿ ಹೋಗುವ, ಅರಳದೆ ಮುದುಡಿ ಹೋಗುವ, ಮಾನವ ಸುಮಗಳು ಲೆಕ್ಕವಿಲ್ಲದಷ್ಟು. ಅವು ಗಳಲ್ಲಿ ಜೈನಬಿ ಒಂದೂ ಹೂ, ಶೇಕ ಒಂದು ಹೂ. ಅವು ವನಸುಮಗಳೂ ಅಲ್ಲ; ಉದ್ಯಾನದ ಹೂಗಳೂ ಅಲ್ಲ; ಆ ರಾಜ 20 ನಿರಂಜನ: ಕೆಲವು ಸಣ್ಣ ಕಥೆಗಳು ರಾಣಿಯರು ಬಾಳಿನಲ್ಲಿ ಸುಖ ಕಾಣಲಿಲ್ಲ. ವಿಕಾಸವಿಲ್ಲದ ಪರಿಮಳವಿಲ್ಲದ ಪುಷ್ಪಗಳಾದರು. ಬಡತನ ಅವರ ಸಂತೋಷವನ್ನು ಕೆಡಿಸಿತು. ಇದ್ದ ಹೊಲವನ್ನು ಜಹಗೀರುದಾರ ಕಸಿದುಕೊಂಡ. ಔಡುಗಚ್ಚಿ ನೌಜವಾನ ಶೇಕ ಕೂಗಾಡಿದ: - “ಎಂಥ ಅಬ್ಬರ! ಎಂಥ ದರ್ಪ! ನೋಡೋಣ-ಇದಕ್ಕೂ ಒಂದು ಕೊನೆ ಇದೆ.ಒಂದಲ್ಲ ಎಂದು ದಿನ ಇದನ್ನು ನಿಲ್ಲಿಸೇನು.. ನನ್ನ ಈ ಬಿಗಿ ಮುಷ್ಟೈಯಲ್ಲಿ ಶಕ್ತಿ ಇಲ್ಲ? ನನ್ನ ಈ ತೋಳುಗಳಲ್ಲಿಸಾಮರ್ಥ್ಯವಿಲ್ಲ? ಹುಂ ಹುಂ!" ಅವನಪ್ಪ ಮುದುಕ ಖುದಾ ಪರವರ್ದಿಗಾರ್! ನನ್ನ ಮಗನ ಬಾಯಿಂದ ಏನು ಮಾತಾಡಿಸುತ್ತಿದ್ದಿ?ನನ್ನ ಶೇರ್ ನಿಂದ ಏನು ಮಾಡಿಸುತ್ತಿದ್ದಿ?" ಎಂದು ಚಿಂತಿಸಿದ. ಕೊನೆಗೊಮ್ಮೆಆ ದಿನ ಬಂದಿತು! ఆ ರಾತ್ರೆ, ಅಮಾವಾಸ್ಯೆಯ ನಡು ವಿರುಳಿನಲ್ಲಿ, ದಲ್ ಸರೋವರವನ್ನು ದಾಟ ಪ್ರದೇಶದ ಯುವಜನ ಅತ್ತ, ಕಡೆ ಇದ್ದ ರಾಜರ ಬೀಡಿನ ಮೇಲೆ ಏರಿ ಹೋಗುವರು! ಕಾಶ್ಮೀರದಲ್ಲಿ ಕ್ರಾಂತಿ ಯಾಗಿತ್ತಂತೆ. ಶ್ರೀನಗರದ ಬೀದಿ ರಕ್ತಕಾಲುವೆಯಾಯಿತಂತೆ. ಪೋಲೀಸರೂ ಸಂಪು ಹೂಡಿದರಂತೆ. ಮಿಲಿಟರಿಯವರು ಹೆಂಗಸರು ಗಂಡಸರು ಮಕ್ಕಳ ತಲೆಗಳನ್ನು ಚೆಂಡಾಡಿದರಂತೆ. ಹಿಂದಿನ ವರ್ಷ ಅವರ ಊರಿಗೆ ಬಂದಿದ್ದ 'ಕಾಶ್ಮೀರದ ಸಿಂಹ? ಅಬ್ದುಲ್ಲಾನನು ಮಹಾರಾಜರು ಸೆರೆ ಹಿಡಿದರಂತೆ. ಊರು-ಊರು ಗಳಲ್ಲಿ ಬಂಡಾಯವೆದು ರೈತರು ಸ್ವತಃ ತಮ್ಮ ಜಹಗೀರುದಾರರನ್ನು ಕೈದು ಮಾಡಿದರಂತೆ-ಹೀಗೆ ಎಷ್ಟೋ ಸುದ್ದಿ ಕಿವಿಯಿಂದ ಕಿವಿಗೆ ಹಾಯ್ದು ಆ ಊರಿಗೆ ಬಂತು. ತಮ್ಮ ಹೊಲಕ್ಕೆ ತಾವೊಡೆಯರಾಗಬಹುದೆಂದು ರೈತರು ಹುಚ್ಚರಾದರು. ಮುದುಕ ಮುದುಕಿಯರು " ಮುಂದೇನಾಗುತ್ತದೆ? ಮುಂದೇನಾಗುತ್ತದೆ ?” ಎಂದು ತವಕಗೊಂಡರು. ಯುವಕ ರೈತರುಒಬ್ಬರ ಮುಖವನ್ನೊಬ್ಬರು ನೋಡಿದರು. ಒಬ್ಬರು ಒಂದು ಮಾತನ್ನೂ ಆಡಲ್ಲಿಲ್ಲ್ಸ, ಪ್ರತಿಯೊಬ್ಬರ ಕರ್ತವ್ಯ ಎಲ್ಲರಿಗೂ ತಿಳಿದಿತ್ತು. ......ಯಾವಾಗಲೂ ಒಂದು ಸಣ್ಣ ನಿದ್ದೆಯಾಗುವ ಹೊತ್ತು ಕಳೆಯುವುದ ರೊಳಗೆ ಊರ ಗಂಡಾಳುಗಳು ತಟಾಕದ ದಂಡೆಯಲ್ಲಿ ಬಂದು ಕೂಡ ಬೇಕಾಗಿತ್ತು. ಮಲಗಿದ್ದ ಪುಟಾಣಿಯ ಹಣೆಯನ್ನು ಚುಂಬಿಸಿ, ಜೈನಬಿಯನ್ನು ಎದೆ ಗವಚಿಕೊಂಡು, ಆ ಮುದ್ದು ಮುಖವನ್ನು ಎರಡೂ ಕೈಗಳಿಂದ ಸವರಿ, “ಬರುತ್ತೇನೆ ಜಾನ್, ನಾಳೆ ಬೆಳಗಾಗುವುದರೊಳಗಾಗಿ ಬರುತ್ತೇನೆ” ಎಂದು ರಕ್ತ ಸರೋವರ 21 ಹೇಳಿ ಶೇಕ ಹೊರಟ ತಂದೆ, ಕಿಶನಚಂದನ ಮನೆಯವರೆಗೆ ಬಿಂದು ಮಗನನ್ನು ಬೀಳ್ಕೊಟ್ಟಿ.

    ಕಿಶನಚಂದ ಹಿಂದೂ ಹುಡುಗ. ಶೇಕನ ಒಡನಾಡಿ.  ಮದುವೆಯಾಗಿ 

ಆರು ತಿಂಗಳೂ ಆಗಿರಲಿಲ್ಲ. ಹುಡುಗಿ ನೀರಾ "ಹೊಗುತ್ತೀಯಾ? ಹೋಗಲೇ ಬೇಕೆ?” ಎಂದು ಗೋಳಾಡಿದಳು.

   ಎಲ್ಲ ಮಾತೂ ವ್ಯರ್ಥವಾದ ಮೇಲೆ ಇದ್ದೊಬ್ಬಳೇ ತಾಯಿ ಹೇಳಿದಳು.

“ನಿನ್ನ ಹಟ ನಿನಗೆ. ಒಳ್ಳೇದು. ಹೋಗು. ಹೋಗಿ ಬಾ. ನನಗಾಗಿ ಅಲ್ಲ ವಾದರೂ ಈ ಹೆಣ್ಣು ಕೂಸಿನ ಮೋರೆ ನೋಡಿ ಹಿಂದೆ ಬಾ-” ಎಂದು.

  ಜತೆಯಲ್ಲೇ,“ಶೇಕ,ಕಿಶೂ ನಿನಗಿಂತಲೂ ಸಣ್ಣವ. ನಿನ್ನ ತಮ್ಮ ಅಂತ 

ಜೋಪಾನವಾಗಿ ನೋಡಿಕೋ. ಯಾವ ಹೊತ್ತಿಗೂ ಅವನ ಜತೆ ಬಿಡಬೇಡ” ಎಂದು ತುಂಬಿ ಬರುತ್ತಿದ್ದ ಕಂಬನಿಯನ್ನು ಒತ್ತಿಹಿಡಿದು ಆ ತಾಯಿ ದೈನ್ಯದಿಂದ ಮಾತಾಡಿದಳು.

        *         *        *        *
   ಆ ಊರಿನ ಎಪ್ಪತ್ತಾರು  ಗಂಡುಗಲಿಗಳು  ಅವರು  ಆ ತಾಯ್ನೆಲದ

ಮಮತೆಯ ಮಕ್ಕಳು. ಈ ರಾತ್ರಿ ಅವರೊಂದು ಮಹಾಸಾಹಸದ ಕೆಲಸ ವನ್ನು ಮಡುವರು. ಅವರ ಹಿರಿಯರೊಂದೂ ಆಂಥಾದ್ದನ್ನು ಮಡಿರಲಿಲ್ಲ. “ನಮ್ಮ ನಾಡಿನ ಇತಿಹಾಸದಲ್ಲೇ ಇಂಥ ಪರಿಸ್ಥಿತಿ ಬಂದದ್ದಿಲ್ಲ" ಎಂದು ಅವರ

ಹಳ್ಳಿಯ ಸಾಲೆಯ ಮಾಸ್ತರನೂ ಆ ದಿನ ಹೇಳಿದ್ದ.
    ಶಿಕಾರಾಗಳು ಸಿದ್ಧವಾಗಿದ್ದವು.  ಆರು ದೋಣಿಗಳಲ್ಲಿ ಆ ಎಪ್ಪತ್ತಾರು

ಮಂದೆ ಕುಳಿತು ಹುಟ್ಟುಹಾಕಿದ್ದರು. ನಿದ್ರಿಸಿದ್ದ ಸರೋವರವನ್ನು ಸೀಳಿ ಅವರ 'ನೌಕಾಪಡೆ'ಮುಂದೆ ಸಾಗಿತು.

   ಅಲ್ಲೇ ಒಂದೂವರೆ ಮೈಲಿನಾಚೆ ವಾಯವ್ಯದ ದಂಡೆಯಲ್ಲಿ ಕಾಶ್ಮೀರದ 

ಮಹಾರಾಜರು ರಾಣೀವಾಸದೊಡನೆ ಸುಖನಿದ್ರೆ ಮಾಡುತ್ತಿದ್ದಾರೆ. ಪ್ರಧಾನಿ ಕಾಕನ ಕೈಯಲ್ಲಿ ರಾಜ್ಯಸೂತ್ರವನ್ನು ಕೊಟ್ಟು,ಬಂದೂಕು ಮಶಿ‍ನ್‍ಗನ್ನುಗಳ ಗು೦ಡಿನ ಸಪ್ಪಳದಿಂದ ದೂರವಿರಬೇಕೆಂದು ಆ ವಿಹಾರ ಸರೋವರದ ದಂಡೆಗೆ ಅವರು ಬಂದಿದ್ದಾರೆ. ಅಲ್ಲಿ ಕೆಂಪು ತಾವರೆಗಳ ಮೇಲಿಂದ ಕಂಪಿನಲರು ಬೀಸು ವುದು. ಹೊರಗಿನೆಲ್ಲ ಗೊಂದಲಗಳನ್ನು ಮರೆತು ಆ ಅಮೃತ ಶಾಂತಿಯಲ್ಲಿ, ಭೂಮಿಯ ಮೇಲಿನ ಸ್ವರ್ಗದಲ್ಲಿ, ಸುಖವಾಗಿರಬಹುದು. ಆದರೆ ಪ್ರಧಾನಿ ಕಾಕ ಹೇಳಿದ್ದ:"ಈ ಪ್ರಜೆಗಳನ್ನು ನಂಬುವ ಹಾಗಿಲ್ಲ ಮಹಾರಾಜ. ಹಳ್ಳಿ ಯವರಾದರೇನು? ಯಾವ ಹೊತ್ತಿನಲ್ಲಿ ಏನು ಮಾಡುವರೋ ಹೇಳುವುದು 22 ನಿರಂಜನ: ಕೆಲವು ಸಣ್ಣ ಕಥೆಗಳು ಹೇಗೆ?” “ಹೂಂ” ಎಂದರು ರಾಜರು. ಸುಸಜ್ಜಿತ ಸೇನೆಯೂ ಅವರ ರಕ್ಷಣೆಗೆ ಹೊರಟಿತು.

   ಕೆಲವೆಡೆ ಸ್ವಚ್ಛ ನೀರಿನ ಮೇಲೆ, ಬೇರೆ ಕೆಲವೆಡೆ ತಾವರೆಗಳ  ದಂಟು_

ದಳಗಳನ್ನು ಸರಿಸಿ, ದೋಣಿಗಳು ಸಾಗಿದುವು.ಆ ಎಪ್ಪತ್ತಾರು ಮಂದಿ ಉಸಿರು ಬಿಗಿ ಹಿಡಿದು ಕುಳಿತಿದ್ದರು. ಹುಟ್ಟಿನದೊಂದು ಏಕನಾದ, ನೀರಿನ ಸುಳು ಸುಳು ಸಪ್ಪಳ-ಇವೇ ಸಂಗೀತವಾಗಿತ್ತು.

    ಅವರೇನು ಮಾಡುವರು? ಆ ದಂಡೆಯನ್ನು ಸೇರಿ ಅವರೇನು ಮಾಡು

ವರು? ಒಬ್ಬನೆಂದಿದ್ದ:"ಆ ರಾಜನಿಗೆ ನಮ್ಮ ಕಷ್ಟಗಳನ್ನು ವಿವರಿಸಿ ಹೆಳೋಣ. ಅವನ ಮನಸ್ಸನ್ನು ಬದಲಿಸೋಣ" ಆ ಮಾತಿಗೆ ಹಲವರು ಥೂ_ಥೂ ಎಂದಿ ದ್ದರು, ಕಣ್ಣಲ್ಲಿ ನೆತ್ತರಿಲ್ಲದ, ಹೃದಯ ಕಲ್ಲಾಗಿದ್ದ, ಮಾನವಿಯತೆಯ ಅರಿವಿಲ್ಲದೆ ಮಹಾರಾಜನ ಮನಸ್ಸನು ಬದಲಿಸುವುದೆ?

   ಹಿಂದಿನ ದಿನ ನಗರದ ವಿದ್ಯಾಲಯದಿಂದ ಓದು ನಿಲ್ಲಿಸಿ  ಹಿಂದೆ  ತಮ್ಮ

ಹಳ್ಳಿಗೆ ಬಂದಿದ್ದು ಇಬ್ಬರು ತರುಣರಲ್ಲೊಬ್ಬ, “ಹೃದಯ ಪರಿವರ್ತನೆಯಂತೆ! ಅವನಿಗೆ ಹೃದಯವಿದ್ದರಲ್ಲವೆ ಪರಿವರ್ತನೆ?” ಎಂದಿದ್ದ. ಇನ್ನೊಬ್ಬ, “ಮಹಾ ರಾಜನನ್ನು ಸೆರೆ ಹಿಡಿಯೋಣ. 'ಕಾಶ್ಮೀರ ಸಿಂಹ'ನ ಬಿಡುಗಡೆಯಾಗುವವರೆಗೆ ಬಂದೀಖಾನೆಯಲ್ಲಿಡೋಣ. ಆಮೇಲೆ ಗಂಟುಮೂಟೆ ಸಹಿತ ಕಾಶ್ಮೀರದಿಂದ ಹೊರಕ್ಕಟ್ಟೋಣ" ಎಂದು ತೀರ್ಪು ಕೊಟ್ಟಿದ್ದ.

   ದೂರ  ದೂರ-ಒಂದು  ಯುಗವಾಗಿ  ತೋರುತ್ತಿದ್ದವು  ಆ  ಕೆಲವು

ಸಂದಿಗ್ಧ ನಿಮಿಷಗಳು. ನೂರುನೂರೇ ಗಜ ಮುಂದೆ ಮುಂದಕ್ಕೆ, ಅರಸು ಭವನದ ವಿದ್ಯುದ್ದೀಪಗಳಲ್ಲಿ ಆಗಲಿನ್ನೂ ಪ್ರಜ್ವಲಿಸುತ್ತಿದ್ದ ಕೆಲವು, ದೂರದ ಹತ್ತಾರು ನಕ್ಷತ್ರಗಳಂತೆ ಕಾಣುತ್ತಿದ್ದುವು.

   ಇನ್ನೆರಡು  ಫರ್ಲಾಂಗು  ಮುಂದೆ  ಹೋದರಾಯಿತು,  ಅವರ ಗುರಿ

ಸಮೀಪಿಸುವುದು. ದಂಡೆ ಸಿಗುವುದು. ಅನಂತರ ಅವರ ಕಾರ್ಯ ಕೈಗೂಡು 'ವುದು.

    ಅಲ್ಲಿ ಆಗಲೆ ಆಚೆ ದಂಡೆಯ ವಿದ್ಯುದ್ದೀಪಗಳು ಬೆಳಗಿ ಅನಂತ  ತಾರೆ

ಗಳಾದುವು. ಕಾವಲುಗಾರರಿಗೆ ಸುಳಿವು ಹತ್ತಿತೇನೋ. ಶಿಕಾರಿಯ ವಿದ್ಯುತ್ ಕಂದೀಲು ಸರೋವರದುದ್ದಕ್ಕೂ ಬೆಳಕು ಹಾಯಿಸಿತು. ಢಂ_ಎಂದೊಂದು ಗುಂಡು ದೋಣಿಗಳೆಡೆಯಿಂದ ಸುಂಯ್‍ಗುಟ್ಟ ಹಾದುಹೋಯಿತು. ನಗರದ ಆ ವಿದ್ಯಾರ್ಥಿ ಯುವಕ ಆರಂಭಿಸಿದ:

   "ಇಂಕ್ವಿಲಾಬ್!_" ರಕ್ತ ಸರೋವರ                                    23
    ಎಪ್ಪತ್ತಾರು ಕಂಠಗಳೂ ಒಮ್ಮೆಲೆ ಘೋಷಿಸಿದುವು
    "ಜಿಂದಾಬಾದ್!"
    "ಕಶ್ಮೀರ್ ಬಾಗಿ_"
    "ಜಿಂದಾ ಹೈ!"
    "ಛೋಡ್‍ದೋ"
    "ಇಂಕ್ವಿಲಾಬ್!_"
    "ಜಿಂದಾಬಾದ್"
    ಢಂ_ಢಂ_ಢಂ_ಎಂದು ಹತ್ತಾರು ಬಂದೂಕುಗಳಿಂದ  ಗುಂಡು  ಹಾರಿ

ಬಂತು. ಮುಂದಿದ್ದ ದೋಣಿಯಿಂದೋಬ್ಬ ಕಾಶ್ಮೀರದ ರಾಷ್ಟ್ರೀಯ ಗೀತೆಯನ್ನು ಹಾಡತೊಡಗಿದ. ಢಂ-ಢಂ-ತಾಳ ಮೇಳದೊಡನೆ ಆ ಗೀತ ಮಹಾ ಸಂಗೀತ ವಾಯಿತು. ಶೇಕ ಪಲ್ಲವಿ ಹಾಡಿದ; ಕಿಶನ್ ಪಲ್ಲವಿ ಹಾಡಿದ. ಎಲ್ಲರೂ ಹಾಡಿದರು. "ಸ್ವಾತಂತ್ರ್ಯ ಸಮತೆಯ ನೂತನ ಕಾಶ್ಮೀರವನ್ನು ಕಟ್ಟುವ ವೀರರು ನಾವ್! ವೀರರು ನಾವ್! ಸೋಲನರಿಯದ ಸಿಂಹಹೃದಯದ ವೀರರು ನಾವ್ ವೀರರು ನಾವ್!"

   ಮತ್ತೆ ಅದೇ ಎಪ್ಪತ್ತಾರು ಕಂಠಗಳಿಂದ ರಣ ಗರ್ಜನೆ “ಇಂಕ್ವಿಲಾಬ್-

ಜಿಂದಾಬಾದ್!"

   ಎಪ್ಪತ್ತಾರೂ, ಎಪ್ಪತ್ನನಾಲ್ಕೊ,ಎಪ್ಪತ್ತೆರಡೊ!  ಬಲಿದಾನಕ್ಕೆ ಆರಂಬ

ವಾಗಿತ್ತು. ಆಚೆ ದಡದ ಸಿಪಾಯಿಗಳೆಲ್ಲ ಎಚ್ಚತ್ತಿದ್ದರು. ರಾಜರ ಸುಖ ಸ್ವಪ್ನ ಕಡಿದು ಹೋಯಿತು. ಬಾಹುಬಲದ ವಜ್ರಹೃದಯದ ಸ್ವಾತಂತ್ರ್ಯಯೋಧ ರೆಡೆಗೆ ಮರ್ದನದ ಶೋಷಣೆಯ ಕ್ರೂರ ಗುಂಡುಗಳು ಧಾವಿಸಿಬಂದವು.

    ದೋಣಿಗಳು ಮುಂದೆ ಸಾಗುತ್ತಲೆ ಹೋದುವು.   ಜಯಘೋಷ ನಡೆ

ಯುತ್ತಲೇ ಇತ್ತು. ಆ ಯುವಕ ಹಾಡುತ್ತಲೇ ಇದ್ದ. ಶೇಕ-ಕಿಶನರು ಪಲ್ಲವಿಗೆ ದನಿ ಕೂಡಿಸುತ್ತಲೆ ಇದ್ದರು.

   ಒಂದು ದೋಣಿಗೆ ಗುಂಡು ತಗಲಿ ತೂತು ಬಿದ್ದು  ಜನ  ನೀರುಪಾಲಾ

ದರು. ಸರೋವರಕ್ಕೆ ಬಿದ್ದ ಜನ ಈಸಾಡಿದರು. ಇನ್ನೊಂದು ದೋಣಿ ದಡದ ತೀರಕ್ಕೆ ಬಂತು. ಆ ಇರುಳಲ್ಲಿ ಬಯನೆಟುಗಳು ಬೇಟೆ ಸಿಗದೆ ಒಂದಕ್ಕೊಂದು ತಗಲಿದುವು.

   ದೋಣಿಗಳಲ್ಲಿದ್ದ    ಜನ  ನೋಡುತ್ತಲೇ   ಇದ್ದರು.   ವಿದ್ಯುದ್ದೀಪದ 24                      ನಿರಂಜನ: ಕೆಲವು ಸಣ್ಣ ಕಥೆಗಳು

ಬೆಳಕಿನಲ್ಲಿ ಕಾಣಿಸುತ್ತಲೇ ಇತ್ತು. ಆ ಯುವಕನೂ ಇನ್ನೊಬ್ಬನೂ ದಡವನ್ನೇ ರಿದರು. ಯುವಕನೆದೆಗೆ ಮಿಲಿಟರಿಯವನೊಬ್ಬ ಬಯನೆಟಿನಿಂದ ತಿವಿದ. ಆ ಸಲದ "ಇಂಕ್ವಿಲಾಬ್" ಅವನ ಕೊನೆಯ ಗರ್ಜನೆಯಾಯಿತು. ಬಯನೆಟು ಸಹಿತ, ಅದನ್ನು ಹಿಡಿದುಕೊಂಡಿದ್ದ ಮಿಲಿಟರಿಯವನನ್ನೂ ಬರಸೆಳೆದು ಆ ಯುವಕ ತಟಾಕದ ಆಳಕ್ಕೆ ಇಳಿದು ಹೋದ.

   ದಡದ ಸಮೀಪವಿದ್ದ  ಮತ್ತೊಂದು ದೋಣಿ ಒಡೆಯಿತು.  ಕ್ಷಣ ಕಾಲ

ರಣ ಗರ್ಜನೆ ಇರಲಿಲ್ಲ. ಶೇಕ-ಕಿಶನ್ ಇಬ್ಬರೂ ಹುಟ್ಟುಬಿಟ್ಟು ಉದ್ವಿಗ್ನರಾಗಿ ಎದ್ದು ನಿಂತರು. ಶೇಕ ಕೂಗಿದ. “ಇಂಕ್ವಿಲಾಬ್!” ಈಸುತ್ತಿದ್ದ ಜನ, ಮುಳುಗುತ್ತಿದ್ದ ಜನ, ಜೀವಂತವಿದ್ದ ಜನ "ಜಿಂದಾಬಾದ್" ಎಂದು ಮರು ನುಡಿದರು.

   ಮತ್ತೊಮ್ಮೆ  ಶೇಕ  ಕೂಗಿದೆ: "ಇಂಕ್ವಿಲಾಬ್!"  ಮರು  ನುಡಿಯ

ಘೋಷಣೆಯ ನಡುವೆ ಗುಂಡೊಂದು ಬಂದು ಶೇಕನೆದೆಯಲ್ಲಿನಾಟಿತು.“ಹಾ!” ಎಂದ ಕಿಶನ್. ದೋಣಿಯಲ್ಲಿ ನಿಂತಿದ್ದ ಶೇಕ ಉರುಳಿ ಹೋದ-ಕೆಳಕ್ಕೆ, ನೀರಿನ ಆಳಕ್ಕೆ!"ಹಾ!ಅಯ್ಯೋ!” ಎಂದ ಕಿಶನ್. ಆಳಕ್ಕೆ ಆ ಸಿಂಹ ಜೀವ ಇಳಿದು ಹೋಗುತ್ತಿತ್ತು.

   ...ಹೋರಾಟ  ವಿಫಲವಾದಾಗ ಉಳಿದ ಮೂರು ದೋಣಿಗಳು  ಹಿಮ್ಮೆ

ಟ್ಟಿದುವು. ಕೆಲವರು ಈಸಾಡಿ ಈಚೆ ದಡ ಸೇರಿದರು. ದೂರದಿಂದ ಬರುತ್ತಿದ್ದ ಗುಂಡುಗಳಿಗೆ ಬೆಚ್ಚಿಬೀಳುತ್ತ ತಪ್ಪಿಸಿಕೊಳ್ಳುತ್ತ ಇವರು ಇತ್ತ ಬಂದರು.

   ದಡ ಸೇರಿದವರು ಅಲ್ಲೆ ಬಿದ್ದುಕ್ಂಡರು  ಆ  ವಿಸ್ತಾರ  ಸರೋವರದಲ್ಲಿ

ಯಾವ ದಂಡೆಗೆ ಹೋದರೋ ಏನೋ ಎಂದು ರಾಜರ ಮಿಲಿಟರಿ ಅವರನ್ನು ಬೆನ್ನಟ್ಟಲಿಲ್ಲ.

   ಯಾವುದೋ ಜೀವ ದನಿತೆಗೆದು ಅಳುತ್ತಿತ್ತು.
      *          *         *         *
   ಮಾತು ಬಾರದ ಮೂಕ ಕಿಶನ್ ಮನೆಗೆ ಬಂದ.
   "ಬಂದೆಯಾ_ಬಂದೆಯಾ?" ಎಂದಳು ಹೆಂಡತಿ ನೀರಾ.
   "ಬಾ_ಬಾ ಮಗನೆ!" ಎ೦ದಳು ತಾಯಿ.
   ಕಿಶನ್ ಮಾತಾಡಲ್ಲೋಲ್ಲ.
   "ಮಗೂ! ಮಗೂ! ಯಾಕೆ ಹೀಗೆ? ಶೇಕ ಎಲ್ಲಿ?"
   ಶೇಕನ ತಂದೆ ನಡೆಗೋಲನ್ನೂ ರುತ್ತ ಬಂದು ಕೇಳಿದ:
   "ಕಿಶನ್! ಎಲ್ಲಿ ನನ್ನ ಶೇರ್? ಎಲ್ಲಿ ನನ್ನ ಶೇಕ?" ರಕ್ತ ಸರೋವರ                                      25
    ಜೈನಬಿ ಹುಚ್ಚಿಯಂತೆ ಧಾವಿಸಿ ಬಂದು ಕಿಶನನ ಹೆಗಲನ್ನಲುಗಿಸಿ ಚೀರಾ

ಡಿದಳು:

   “ಅಣ್ಣ ಅಣ್ಣ ! ಎಲ್ಲಿ? ಶೇಕೆ ಎಲ್ಲಿ?"
   ಶೇಕ,  ವಿಹಾರ   ಸರೋವರದ  ಜಲಗರ್ಭದಲ್ಲಿ  ಸಮಾಧಿಸ್ಥನಾಗಿದ್ದ.

ಶಾಂತಿಯ ಪರಮ ಶಾಂತಿಯ ತಾಣ ಅದು. ಅಲ್ಲಿ ಹೂರಾಶಿಯ ಕೆಳಗೆ ಕೆಂದಾವರೆಯ ದಂಟುಗಳಡಿಯಲ್ಲಿ ಆ ವೀರ ವಿರಮಿಸುತ್ತಿದ್ದ.

   ಶೇಕನ ಮನೆಯ ಸುತ್ತುಮುತ್ತಲಿನವರೆಲ್ಲ ಬಂದು ಸರೋವರದ  ದಂಡೆ

ಯಲ್ಲಿ ನಿಂತು ನೋಡಿದರು. ಅಲ್ಲೇ ಒಂದು ಮೈಲಿನಾಚೆ ಇಪ್ಪತ್ತಾರು ಜೀವ ಗಳು ಪ್ರಾಣ ಬಿಟ್ಟಿದುವು. ಅಲ್ಲೆ_ಓ ಅಲ್ಲೇ ಶೇಕ ಕಣ್ಮರೆಯಾಗಿದ್ದ.

    ಬೆಳಕು ಚೆನ್ನಾಗಿ ಹರಡಿತ್ತು.  ಬೇಕೊ ಬೇಡವೊ  ಎಂದು  ಸೂರ್ಯ

ಮೇಲೆ ಬರುತ್ತಿದ್ದ. ಹಿಮರಾಶಿ “ಒಲ್ಲೆ ಕರಗಲೊಲ್ಲೆ!” ಎನ್ನುತ್ತಿತ್ತು. ತಾವರೆಗಳು “ಬೇಡ ನಾವು ಅರಳುವುದಿಲ್ಲ!” ಎನ್ನುತ್ತಿದ್ದವು. ಗಾಳಿ ಮೆಲ್ಲ ಮೆಲ್ಲನೆ ತಟಾಕದ ಮೇಲಿಂದ ಬೀಸುತ್ತಿತ್ತು. ವಿಹಾರ ಸರೋವರ ರಕ್ತ ಸರೋವರವಾಗಿ ರುದ್ರಭೀಕರವಾಗಿತ್ತು.


                                         _೧೯೪೬ 26



ಕೊನೆಯ ಗಿರಾಕಿ
ಆ ಸರ್ಕಲಿನಾಚೆ ಯಾರೂ ಹೋಗಲೊಲ್ಲರು. ಕಟ್ಟಡಗಳ ಅಡೆತಡೆಯಿಲ್ಲದ
ವಿಸ್ತಾರ ಭೂಮಿಯ ಮೇಲಿಂದ ಬೀಸುತ್ತಿದ್ದ ತಂಗಾಳಿ ದುರ್ಗಂಧವನ್ನು
ತರುತ್ತಿತ್ತು. ಜನ ಗುಜುಗುಜು ಮಾತಾಡುತ್ತಿದ್ದರು. ಅದೆಲ್ಲ ಅಸ್ಪಷ್ಟ ಕಲರವ.
ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು ಹಾದು
ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣ ಹೊರಳಿಸಿ,
ಮತ್ತೆ ತಲೆಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು..................ನಿಲ್ಲುವವರು ಯಾರೂ
ಇರಲಿಲ್ಲ..........
ನಿಧಾನವಾಗಿ ಪುರಸಭೆಗೆ ವರದಿ ಹೋಯಿತು.
****
ಅದೊಂದು ದಿನ ಬೆಳಗ್ಗೆ ಕಾಣಿ ಎದ್ದು ನೋಡುತ್ತಾಳೆ-ರಾತ್ರಿ ಜತೆಯಲ್ಲಿ
ಮಲಗಿದ್ದ ಸಂಗಡಿಗನಿಲ್ಲ. ಹದಿನಾರರ ಆ ಹುಡುಗಿ ಹತ್ತು ದಿನಗಳ ಹಿಂದೆ
ಅವನ ಬೆಂಬತ್ತಿ ಕರ್ನಾಟಕದ ರಾಜಧಾನಿಗೆ ಓಡಿಬಂದಿದ್ದಳು-ತಮಿಳುನಾಡಿ
ನೊಂದು ಊರಿಂದ.ತಿರುಪೆ ಎತ್ತುವ ಗರೀಬ ಆತ.ಒಂದು ಕೈ ಮೊಂಡು.
ಆದರೆ ಒಂದು ರಾತ್ರೆ, ಇನ್ನೊಂದು ತೋಳಿನಿಂದ ಆಕೆಯನ್ನು ಆತ ಬಳಸಿ ಬರ
ಸೆಳೆದಿದ್ದ. ಕಂಪಿಸುತ್ತಿದ್ದ ಹೃದಯದಿಂದ ಆಕೆ ಆತನನ್ನು ನೋಡಿದಳು; ಆ
ಬಲಿಷ್ಟ ತೋಳನ್ನು ನೋಡಿದಳು. ಎರಡು ಕೈಗಳ ಶಕ್ತಿಯೂ ಇತ್ತದಕ್ಕೆ.
ಅಲ್ಲಿಂದ ಆ ರಾತ್ರೆಯೇ ಅವರು ಓಡಿಹೋದರು.
ಮನೆ ಇತ್ತು ಆಕೆಗೆ-ಚಿಕ್ಕ ಗುಡಿಸಲು.ಹೊಲವಿತ್ತು ಆಕೆಯ ತಾಯ್ತಂದೆ
ಯರಿಗೆ-ಒಕ್ಕಲುತನದ ಒಂದಿಷ್ಟು ಹೊಲ. ಆ ವರ್ಷವೇ ಕೈಬಿಟ್ಟುವು; ಎಲ್ಲವೂ
ಹೊರಟುಹೋದವು! ದೇಶಪ್ರೇಮಿಯಾದ ಆ ಹಿರಿಯ ಜಮೀನ್ದಾರ ಹೆಚ್ಚು
ಗೇಣಿ ಕೇಳಿದ. ಕೊಡದೆ ಹೋದರೆ ಹೊಸ ಒಕ್ಕಲನ್ನು ಹುಡುಕುವುದಾಗಿ
ಹೇಳಿದ. ಹಾಗೆಯೇ ಆಯಿತು. ಕಾಣಿಯ ತಾಯ್ತಂದೆಯರು ಹೊಲ ಕಳೆದು
ಕೊಂಡರು.ಮಡಿಕೆ ಕುಡಿಕೆಗಳೊಡನೆ ಗುಳೆ ಹೊರಟಿತು ಆ ಸಂಸಾರ.ಹಿರಿಯ


ಕೊನೆಯ ಗಿರಾಕಿ
27

ಮಗ ಕೂಲಿಯಾಗುವೆನೆಂದು ಮದರಾಸಿಗೆ ಹೋದ. ಕಿರಿಯವನು ಜಗಳಾಡಿ
ದೇಶಾಂತರ ಹೋದ. ತಂದೆ-ತಾಯಿ ಮೂಕಿಯಾದ ಮಗಳನ್ನು ಕಟ್ಟಿಕೊಂಡು
ಊರೂರು ಸುತ್ತಿದರು.
ಎಷ್ಟು ಸುತ್ತಾಡಿದರೂ ಕೆಲಸ ಸಿಗಲಿಲ್ಲ, ಬೇಡಿಬೇಡಿ ಸರ್ವೀಸಾದ ಬಳಿಕ,
ಭಿಕ್ಷೆ ಎತ್ತುವ ಕೆಲಸ ಅವರಿಗೆ ಖಾಯಮಾಯಿತು.
ತಾಯ್ತಂದೆಯವರನ್ನು ಬಿಟ್ಟು ಬಂದಾಗ ಆ ಮೂಕಿಗೆ ಸ್ವಲ್ಪ ದುಃಖ
ವಾಗಿತ್ತು- ಎಂಬುದನ್ನು ಒತ್ತಿ ಹೇಳುವುದು ವಾಸಿ. ಯಾಕೆಂದರೆ ಯಾವುದೋ
ಮನೆಯ ಮಾಡಿನ ಕೆಳಗೆ ಬೀದಿಯ ಬಳಿ ಆ ರಾತ್ರೆ ತನ್ನೊಡನೆ ಹೊರಳಾಡಿದ
ಮೊಂಡುಕೈಯ ಯುವಕ ಭಿಕ್ಷುಕ, ಆಕೆಗೊಂದು ಆಧಾರವಾಗಿದ್ದ.
ನಿಮಿಷ ನಿಮಿಷಕ್ಕೂ ಕುಸಿದು ಬೀಳುವ ಆಧಾರ ಅದು.
ಓಡಿಬಂದ ಮೇಲೆ ಆ ದೊಡ್ಡ ನಗರದಲ್ಲಿ ಕಳೆದುದು ಹತ್ತೇ ದಿನ.
ಹನ್ನೊಂದನೆಯ ಬೆಳಗು ಮುಂಜಾನೆ ಆಕೆ ಒಬ್ಬಳೆ, ಆಶ್ರಯಕ್ಕೆ ಹುಲ್ಲು
ಕಡ್ಡಿಯೂ ಇಲ್ಲದ ಮಹಾ ಆಳದಲ್ಲಿ ಕೈಕಾಲು ಬಡಿಯುತ್ತಿದ್ದಳು.
ಆ ದಿನವೆಲ್ಲ ಆ ಮೂಕಿಯ ಕಣ್ಣಗಳಿಂದ ಬಳಬಳ ಕಣ್ಣೀರು ಸುರಿಯು
ತ್ತಲೇ ಇತ್ತು, ಆಕೆ ಹೊಟ್ಟೆ ಹಿಸುಕಿಕೊಂಡು, ಕೂತಲ್ಲೆ ಗೋಡೆಗೆ ಹಣೆಚಚ್ಚಿ
ಕೊಂಡು, ಗೊಳೋ ಎಂದು ರೋದಿಸಿದಳು. ಅಲ್ಲಿ ಇಲ್ಲಿ ಸುತ್ತಾಡಿದಳು. ಆತ
ಸಿಗಲಿಲ್ಲ, ಯಾವ ಗಾಡಿ ಹತ್ತಿ ಯಾವ ಊರಿಗೆ ಟಿಕೆಟಿಲ್ಲದ ಪ್ರವಾಸವನ್ನು
ಕೈಗೊಂಡಿದ್ದನೊ ಆ ಮಹಾರಾಯ!
ರೈಲು ನಿಲಾಣದ ಹಿಂದಿದ್ದ ಕೆರೆಗೆ ಕಾಣಿ ಹೋದಳು. ನೀರಲ್ಲಿ ಕಾಲು
ಗಳನ್ನು ಇಳಿಬಿಟ್ಟು ಕೂತಳು. ರವಿಕೆಗೆ ಸಿಕ್ಕಿಸಿದ್ದ ಬಾಚಣಿಗೆಯನ್ನು ತೆಗೆದು,
ತಲೆಗೆ ಕೈಯಿಂದ ನೀರು ಹನಿಸಿ, ಬಾಚಿದಳು. ಅದೇ ಕೆರೆಯ ನೀರನ್ನು ಸ್ವಲ್ಪ
ಕುಡಿದಳು. ಹಾಗೆಯೆ ಉದ್ದಕ್ಕೂ ಆ ಕಾಲುಹಾದಿಯಲ್ಲಿ ನಡೆದುಹೋದಳು.
ಆಕೆ ರೂಪವತಿಯಲ್ಲ, ತೆಳ್ಳನೆಯ ಜೀವ. ಆದರೆ ವಯಸ್ಸಿಗೆ ಮೀರಿ ಮೈ
ತುಂಬಿತ್ತು, ಬರಿಯ ದೇಹಮಾಂಸಕ್ಕಾಗಿ ಹಂಬಲಿಸುವವರಿಗೆ ಆಕೆ ಮನದಣಿ
ಯುವ ಊಟವಾಗಿದ್ದಳು.

ನಡೆದು ಹೋಗುತ್ತ ಹೋಗುತ್ತ ಆಕೆಯೊಮ್ಮೆ ತಿರುಗಿ ನೋಡಿದಳು.
ಯಾವನೋ ಒಬ್ಬ ಸಿಗರೇಟು ಕುಡಿದುಕೊಂಡು ಹಿಂಬಾಲಿಸಿಕೊಂಡು ಬರುತ್ತಿದ್ದ.
ಬೀದಿಯ ದೀಪಗಳು ಹತ್ತಿಕೊಂಡುವು. ಯಾವುದೋ ಹೊಸ ಪ್ರಪಂಚದ
ಬಾಗಿಲು ತನ್ನ ಪಾಲಿಗೆ ತೆರೆದ ಹಾಗೆ ಕಾಣಿ ಆ ದೀಪಗಳತ್ತ ಪಿಳಿಪಿಳಿ ನೋಡಿ
ದಳು. ಒಂದು ಸೈಕಲ್‌ ಎದುರುದಿಕ್ಕಿನಿಂದ ಹರಿದುಹೋಯಿತು. ಪೋಲೀಸನ 
28
ನಿರಂಜನಃ ಕೆಲವು ಸಣ್ಣ ಕಥೆಗಳು

ಸಿಳ್ಳೊಂದು ಎಲ್ಲಿಂದಲೋ ಸದ್ದು ಮಾಡಿತು....ಆಕೆ ಮತ್ತೊಮ್ಮೆ ಹಿಂತಿರುಗಿ
ನೋಡಿದಳು.ಆತ ಬರುತ್ತಲೇ ಇದ್ದ.
ಫುಟ್ ಪಾತಿನ ಮೇಲೆ ಒಂದು ದೇವದಾರು ಮರದ ಬಳಿ ಆಕೆ ನಿಂತಳು.
ಆತ ಸಮೀಪ ಬಂದ. ತಿಂಡಿಯ ಪೊಟ್ಟಣವನ್ನು ಆತ ಮುಂದಕ್ಕೆ ನೀಡಿದ.
"ಆ ಆ”ಎಂದು ಆಕೆಯ ಗಂಟಲಿಂದ ಸ್ವರ ಹೊರಟಿತು. ಪೊಟ್ಟಣವನ್ಯಾಕೆ ಬಿಚ್ಚಿ
ಆ ಚೌಚೌವನ್ನು ಗಬಗಬನೆ ತಿಂದಳು. ಆತ ಇನ್ನೊಂದು ಸಿಗರೇಟು ಹಚ್ಚಿದ.
ಬೆಳಗ್ಗಿಂದಲೇ ನಿನ್ನ ನೋಡ್ತಾ ಇದ್ದೆ” ಎಂದನಾತ.
ಆಕೆ, ಆತನ ತುಟಯಲುಗುತ್ತಿದ್ದುದರಿಂದಲೆ ಎಷ್ಟನ್ನೋ ಅರ್ಥಮಾಡಿ
ಕೊಂಡಳು. ಕಿವಿಯ ಭೇರಿಯ ಮೇಲೆ ತಣ್ಣನೆ ಸದ್ದೇನೋ ಆಗುತ್ತಿತ್ತು;
ಆದರೆ ಆರ್ಥವಾಗುತ್ತಿರಲಿಲ್ಲ.
ಆಕೆ "ಕಕಾಕ ಅ ಆ ಅ” ಎಂದೇನೋ ಹೇಳಿದಳು.ಕಣ್ಣೀರು ಚಿಮ್ಮ
ತೊಡಗಿತು.
“ಚು ಚು ಚ್” ಎಂದು ಆತ ಸಂತಾಪಸೂಚಿಸಿದ. ಬಾ, ಎಂದು ಕೈ
ಸನ್ನೆ ಮಾಡಿದ. ಆಕೆ ತಲೆಬಾಗಿಸಿಕೊಂಡು ಆತನನ್ನೇ ಹಿಂಬಾಲಿಸಿದಳು..
ನಾಯಿ ವಿನಮ್ರವಾಗಿ ಹಿಂದಿನಿಂದ ಹೋಗುವಂತೆ ಸಾಗಿದಳು.
ಯಾವುದೋ ಆಶ್ರಯದಲ್ಲಿ ಹಾಗೆ ಆ ರಾತ್ರಿ ಬೆಳಗಾಯಿತು.
ಆ ರೀತಿ ನಾಲ್ಕು ದಿನ ಕಳೆದುವು. ಆಕೆಯನ್ನು ಅವನು ಸಿಂಗರಿಸಿದ.
ಅರ್ಧಮಾತಿನಿಂದ ಅರ್ಧ ಕೈಸನ್ನೆಯಿಂದ ವಿವರಿಸಿ ಹೇಳಿದ:
“ನಾನು ಹೊಸಬರನ್ನು ಕರಕೊಂಡು ಬರ್ತೀನಿ. ನೀನು ಸುಮ್ಮಗಿರಬೇಕು.
ಬಾಯಿ ಬಿಚ್ಚಬಾರದು. ಮೂಕಿ ಅಂತ ತೋರಿಸಬಾರದು.”
ಆಕೆ ಕುಂಯ್ ಕುಂಯ್ ಎನ್ನುತಿದ್ದಳು. ತನ್ನನ್ನು ಮೂಕಿ ಎಂದು
ಸಂಬೋಧಿಸಿದ ಆತ ಹಾವ ಭಾವ ಮಾಡಿದಾಗ ಆಕೆಗೆ ತುಂಬ ಸಿಟ್ಟು ಬರು
ತಿತ್ತು. ಆದರೆ ಕುಂಯ್ ಕುಂಯ್ ಶಬ್ದದಲ್ಲೇ ಆ ಸಿಟ್ಟು ಮುಕ್ತಾಯವಾಗು
ತಿತ್ತು.
ಆತ ಯಾರನ್ನೋ ಕರೆದು ತಂದ.ಸಂಭಾವಿತರಂತೆ ಕಾಣುತ್ತಿದ್ದ ರವರು.
ಅವರೆದುರು ಆತ ಹಾಗೆ ಹಲ್ಲುಕಿರಿಯುತ್ತಿದ್ದ. ತಿಂಡಿಯ ತುಣುಕಿನ ಮೇಲೆ
ನಾಯಿಯ ಕಣ್ಣಿದ್ದ ಹಾಗೆ! ಅವನ ದೃಷ್ಟಿ ಅವರ ಜೇಬುಗಳ ಮೇಲಿತ್ತು.

ಬಂದವರಲ್ಲೊಬ್ಬ ಶುದ್ದ ಪಶು. ಆಕೆಯ ಅಂಗಾಂಗಗಳನ್ನೆಲ್ಲಾ ಹಿಡಿದು
ನೋಯಿಸತೊಡಗಿದ.
ಕೊನೆಯ ಗಿರಾಕಿ
29

ಆಕೆ ನೋವು ತಡೆಯಲಾರದೆ “ವೆ ವೆ ವೇ ವೆ” ಎಂದು ಪ್ರತಿಭಟಿಸಿದಳು.
ಎರಡೂ ಕೈಯಿಂದ ದಬ್ಬಿ ಅವನನ್ನು ಕೆಳಕ್ಕೆ ಬೀಳಿಸಿದಳು. ರಂಪವಾಯಿತು.
ಆಕೆಯ ಯಜಮಾನನು ಬಡ ನಾಯಿಗೆ ಹೊಡೆವ ಹಾಗೆ ಆಕೆಗೆ ಬಡೆದ. ಆಕೆ
ಮುದುಡಿಕೊಂಡು ಮೂಲೆಯಲ್ಲಿ ಬಿದ್ದಳು. ಬಂದವರು ಮುಖ ಸಿಂಡರಿಸಿಕೊಂಡು
ಹೊರಟುಹೋದರು.
ನಡುರಾತ್ರೆ ಆತ, ಬಿದ್ದಿದ್ದ ಜಾಗದಿಂದ ಆಕೆಯನ್ನೆತ್ತಿ ಚಾಪೆಯ ಮೇಲೆ
ಇರಿಸಿದ. “ನೋವಾಯಿತೇ? ನೋವಾಯಿತೇ?” ಎಂದ. ಆಕೆ ಏನನ್ನೂ ಹೇಳ
ಲಿಲ್ಲ. ಕಣ್ಣುಗಳಲ್ಲಿ ಮಾತ್ರ ಏನೇನೋ ವಿವಿಧ ವಿಕಾರಗಳಾಗುತ್ತಿದ್ದುವು. ಆದರೆ
ಆ ಅಲ್ಪ ಮಾನವನಿಗೆ ಅದರ ಅರ್ಥವಾಗಲಿಲ್ಲ.
ಅಂದಿನಿಂದ ಕಾಣಿ ಬಲು ಮೆದುವಾದಳು.
ಆತನನ್ನು ಆಕೆ ಪ್ರೀತಿಸಲಿಲ್ಲ. ಮೊದಲ ಸಾರೆ ಮೊಂಡು ಕೈ ಯವನನ್ನು
ಪ್ರೀತಿಸಿದ ಹಾಗೆ ಯಾರನ್ನೂ ಆಕೆ ಪ್ರೀತಿಸಲಿಲ್ಲ.
ದುಡ್ಡಿನ ಬೆಲೆ ಕಾಣಿಗೆ ತಿಳಿಯದು. ಎಷ್ಟು ಬರುತ್ತಿತ್ತೋ ಏನೋ.
ಎರಡು ಸೀರೆ-ರವಕೆ, ಜಂಪರ್, ರಾತ್ರೆ ಹೊರಹೋಗುವಾಗ ಹಾಕಿಕೊಳ್ಳಲು
ತೂತಾಗಿದ್ದ, ಆದರೆ ಉಣ್ಣೆಯ, ಸ್ತ್ರೀ ಕೊಟ್ಟು; ಮುಡಿಯಲು ಹೂ; ಮೂಗಿಗೆ
ಹೊಡೆಯುವ ಎಣ್ಣೆ - ಕೂದಲಿಗೆ; ಹೊಟ್ಟೆ ತುಂಬ ಊಟ-ತಿಂಡಿ... ಹಾಗೆ ದಿನ
ಕಳೆಯಿತು.
ಸದ್ಯಃ ಆಕೆ ಬಸುರಿಯಾಗಲಿಲ್ಲ!
ಇಷ್ಟಿದ್ದರೂ ಒಂದು ದಿನ ಆಕೆಗೆ ಎದೆ ನೋವಾಯಿತು. ಹೊರಳಾಡಿದಳು.,
ವಿಲಿವಿಲಿ ಒದ್ದಾಡಿದಳು. ತನ್ನ ಹಳ್ಳಿಯ, ತಾನು ಹುಟ್ಟಿದ ಗುಡಿಸಲಿನ ತನ್ನ
ಭಾಷೆಯಾಡುವ ಜನರ, ಮೊಂಡುಕೈಯ ಮೊದಲ ಜತೆಗಾರನ ನೆನಪಾಯಿತು.
ಓಹೋ ಓಓ- ಎಂದೆಲ್ಲ ಸ್ವರವೆತ್ತಿದಳು. ಎರಡು ದಿನವೂ ರಾತ್ರೆಯೂ ಹೀಗೇ
ಆಯಿತು. ಗಿರಾಕಿಗಳು ಬರುವುದಾಗಲೇ ಇಲ್ಲ.
ಮೂರನೆಯ ಬೆಳಗು ಮುಂಜಾನೆ, ಅಲ್ಲಿದ್ದ ತಿಂಡಿಯನ್ನೆಲ್ಲ ಬಟ್ಟೆಬರೆಯ
ನೆಲ್ಲ ಕಟ್ಟಿಕೊಂಡು ಆಕೆ ಓಡಿಹೋದಳು. ನಗರದ ಇನ್ನೊಂದು ಅಂಚನ್ನು
ತಲಪಿ ಅದನ್ನೂ ದಾಟಿದಳು.
ದಾಟಿ ಮುಂದೆ ನಡೆದುದೊಂದು ಹಳ್ಳಿಗೆ. ಹೊಲ, ಉಳುತ್ತಿದ್ದ ಒಂದು
ಜೊತೆ ಎತ್ತು, ರೈತರು...ಎಲ್ಲವನ್ನೂ ಆಕೆ ಮೌನದಿಂದ ನೋಡಿದಳು. ಕೆದರಿದ
ತಲೆಕೂದಲನ್ನು ಬಾಚುವುದೂ ನೆನಪಾಗಲಿಲ್ಲ ಆಕೆಗೆ.ಒಂದಾಣೆಯ ಪುಟ್ಟ ಕನ್ನಡಿ
೩೦ ನಿರಂಜನ: ಕೆಲವು ಸಣ್ಣ ಕಥೆಗಳು


ಯಲ್ಲಿ ತನ್ನ ಪ್ರತಿರೂಪವನ್ನು ನೋಡುವ ಬಯಕೆಯೂ ಆಗಲಿಲ್ಲ. ತಿಂಡಿ ತಿನ್ನುವುದೂ ಬೇಕೆನಿಸಲಿಲ್ಲ.
ಮಳೆಹನಿ ಬಿದ್ದು ಸುತ್ತಲಿನ ನೆಲವೆಲ್ಲ ಹಸುರಾಗಿತ್ತು. ಚಿಗುರು ಹುಲ್ಲಿನ ಮೇಲೆ ಕಾಣಿ ಒಂದೆಡೆ ಕುಳಿತಳು.
ತನ್ನ ಬಾಲ್ಯದ ನೂರೊಂದು ನೆನಪುಗಳು ಒತ್ತರಿಸಿ ಬಂದುವು. ಮುಖ ಸಣ್ಣದಾಯಿತು. ನಿಧಾನವಾಗಿ ಜೊಂಪು ಹತ್ತಿ ಅಲ್ಲೆ ಒರಗಿ ನಿದ್ದೆಹೋದಳು.
ಸಂಜೆ, “ಶ್ ಶ್ ಏಯ್ ಏಯ್” ಎಂದು ಕೆಲವು ರೈತ ಹೆಂಗಸರು ಎಬ್ಬಿಸಿದಾಗಲೇ ಆಕೆ ಕಣ್ಣು ತೆರೆದದ್ದು.
ಕತ್ತಲಾದಂತೆ ಆ ಹಳ್ಳಿಯಲ್ಲಿ ಆಕೆಗೆ ಹೆದರಿಕೆಯಾಯಿತು. ಧಾವಿಸುತ್ತ ಧಾವಿಸುತ್ತ ಕಾಣಿ ನಗರ ಸೇರಿದಳು.
ಒಂದು ಕೊನೆಯಲ್ಲಿ ಆ ಶಾಲೆ ಇತ್ತು. ರಾತ್ರಿ ಅಲ್ಲಿ ಯಾರೂ ಇರುತ್ತಿರಲಿಲ್ಲ, ಅಲ್ಲಿಯೇ ಜಗಲಿಯ ಒಂದು ಮೂಲೆಯಲ್ಲಿ ಆಕೆ ಮಲಗಿದಳು.
* * * *
ಬೆಳಗಾದೊಡನೆಯೆ ಎದ್ದು ಹೋದಳಾಕೆ. ಹೋಗುತ್ತ ಮೈಮೇಲಿನ ಬಟ್ಟೆ ಸರಿಪಡಿಸಿಕೊಂಡಳು; ಕೊಂಚಮಟ್ಟಿಗೆ ಸಿಂಗರಿಸಿಕೊಂಡಳು.
ಹಾಗೆಯೇ ಸುತ್ತಾಡಿದಾಗ ಆ ಜಾಗದ ಪರಿಚಯವಾಯಿತು. ವಿಸ್ತಾರ ಭೂಮಿ-ಸುತ್ತಲೂ ಹಸುರು ಹುಲ್ಲು. ಅಲ್ಲೆ ಆ ಸರ್ಕಲ್-ಅದರ ನಡುವಿನಲ್ಲಿ ಕಾರಂಜಿ, ಯಾರದೋ ಒ೦ದು ಪ್ರತಿಮೆ. ದೂರದಲ್ಲಿ ಒಂದೇ ಒಂದಾದ ಯಾವುದೋ ದೊಡ್ಡ ಕಟ್ಟಡ.
ಮೂಲೆಯಲ್ಲಿ ಕಡಲೆಕಾಯಿ ಮಾರುತ್ತ ಕುಳಿತಿದ್ದವನೊಬ್ಬನಿಗೆ ಇದ್ದ ಪುಡಿ ಕಾಸು ಸುರಿದು, ಕಾಸಿನ ಬೆಲೆ ಏನೆಂಬುದನ್ನು ಆ ಮೂಕಿ ಕಲಿತಳು.
ಹಸಿವು ಇಂಗಲಿಲ್ಲ.
ಕತ್ತಲಾದಾಗ ಆ ಸರ್ಕಲಿನ ಬಳಿ ಹೋಗಿ ಒಂದು ಮೂಲೆಯಲ್ಲಿ ಕುಳಿತಳು. ಕೇಂದ್ರದ ಒಂದೇ ಒಂದು ದೀಪದಿಂದ ಮಂದ ಪ್ರಕಾಶವಷ್ಟೆ ಬೀಳುತ್ತಿತ್ತು. ಹಾದುಹೋಗುತ್ತಿದ್ದವರು ಆಕೆಯನ್ನು ನೋಡಿ ಹೋಗುತ್ತಿದ್ದರು. ನೋಡಿದ ಒಬ್ಬಿಬ್ಬರು ಮುಂದೆ ಹೋದ ಬಳಿಕ ತಿರುಗಿ ನೋಡುತ್ತಿದ್ದರು.

ಗಂಭೀರನಾಗಿ ಕಾಣುತ್ತಿದ್ದ ಮನುಷ್ಯನೊಬ್ಬ ಕನ್ನಡಕವನ್ನು ಸರಿಪಡಿಸುತ್ತ ಆ ಹಾದಿಯಲ್ಲಿ ಎರಡು ಬಾರಿ ಸುಳಿದ. ಕಾಣಿ ಎದ್ದು ನಿಂತು ಸರ್ಕಲಿನಿಂದ ಹೊರಕ್ಕೆ ಬಯಲಿನತ್ತ ನಡೆದಳು-ಎಲ್ಲೋ ಮರದತ್ತ. ಯಾವುದೋ ಪೊದೆಯ ಬಳಿಗೆ. ಆ ಮನುಷ್ಯ ಹಿಂದೆ ಮುಂದೆ ನೋಡುತ್ತ ಆಕೆಯನ್ನು ಹಿಂಬಾಲಿಸಿದ.
ಕೊನೆಯ ಗಿರಾಕಿ
31


....ಮರುದಿನ ಕಾಗದದ ಚೂರನ್ನು ಕೊಟ್ಟರೆ ತಿಂಡಿಯೂ ಬರುವುದು,
ಊಟವೂ ಬರುವುದು, ಚಿಲ್ಲರೆ ಕಾಸೂ ವಾಪಸು ಬರುವುದು, ಎಂದು ಕಾಣಿ
ಕಲಿತಳು. ಎಷ್ಟು ವಾಪಸು ಬರುತ್ತಿತ್ತೊ ಏನು ಕತೆಯೊ-ಅಷ್ಟೆಲ್ಲ ಜ್ಞಾನವಿರಲಿಲ್ಲ
ಆಕೆಗೆ.
ಅಂದಿನಿಂದ ಹಗಲು ಅಲೆದಾಟ, ಸಂಜೆ ಸರ್ಕಲಿನಲ್ಲಿ ಒಂದೋ ಎರಡೋ
ಪರಿಚಯ; ಸಮೀಪದ ಹುಲ್ಲುಗಾವಲಿನ ಹಾಸಿಗೆಯಲ್ಲಿ ಆಕೆಯೇ ಒಂದು
ಸಾರಿಯೋ ಎರಡು ಮೂರು ಸಾರಿಯೋ ಸಾಯುವುದು- ಸತ್ತು ಜೀವಿಸುವುದು.
ಜೀವಿಸಿ ಮತ್ತೆ ಮಾರನೆಯ ರಾತ್ರೆ ಸಾಯುವುದು.
ಹಾಗೆಯೇ ಕಾಲ ಕಳೆಯಿತು....
ಎಂಥೆಂಥವರೆಲ್ಲ ಆಕೆಯ ಬಳಿಗೆ ಬರುತ್ತಿದ್ದರೊ ಆಕೆಗೆ ತಿಳಿಯದು.
ಕುಡುಕ 'ಲಫಂಗ'ರಿರಬಹುದು; ದಿಕ್ಕುಗೆಟ್ಟ ಭ್ರಮರ ಜೀವನದ ವಿಲಾಸಿಗಳಿರ
ಬಹುದು; ಹಗಲೆಲ್ಲ ಸಾಂಪ್ರದಾಯಿಕ ಬುದ್ಧಿಮತ್ತೆಯ ಸೋಗು ಧರಿಸುವ
ಕಾಮುಕರಿರಬಹುದು; ಮನೆಯ ಅತೃಪ್ತಿಯನ್ನು ಹೋಗಲಾಡಿಸುವ ದಾಹಿಗಳಿರ
ಬಹುದು....... ಆಕೆಗೆ ತಿಳಿಯದು. ಮಾತು ಬರುತ್ತಿದ್ದರೆ, ಏನಾದರೂ ಅರ್ಥ
ವಾಗುತ್ತಿತ್ತೋ ಏನೋ. ಮುಖ ನೋಡಿದರೆ ಅದರ ಹಾವಭಾವದಿಂದ ಸ್ವಲ್ಪ
ವಾದರೂ ತಿಳಿಯಬಹುದಿತ್ತು. ಆದರೆ ಆ ರಾತ್ರೆ ಹೊತ್ತಿನಲ್ಲಿ ಬಂದವರ ಮುಖ
ಕಾಣುವುದೇನು ಬಂತು?
ಇದು ಮಾನವೀಯವೆ? ಪಾಶವಿಕವೆ? ಎಂಬುದೂ ಆಕೆಗೆ ತಿಳಿಯದು.
ಪ್ರೇಮ-ಕಾಮಗಳ ವಿಚಾರವನ್ನು ಬಲ್ಲವಳಲ್ಲ ಆಕೆ. ಎಳೆ ಮೀಸೆಯವರಿರಲಿ-
ಮುದುಕರಿರಲಿ, ಆಕೆಗೆರಡೂ ಸಮವೇ. ದೇಹ ಬಳಲಿದಾಗ ಆಕೆ ನರಳುವಳು.
ನೋವಾದಾಗ ಗಂಟಲಿನಿಂದ ಅರ್ಥವಾಗದ ವಿಕೃತ ಸ್ವರ ಹೊರಡಿಸುವಳು....
ತಾನು ಮೂಕಿ. ಮೂಕಿಯಿಂದ ತೃಪ್ತಿ ಬಯಸುವವರ ಮನಸ್ಸಿನಲ್ಲಿ
ಏನೇನು ಅನುಭವಗಳಾಗುತ್ತವೆಂಬುದೂ ಗೊತ್ತಿಲ್ಲ, ಕಾಣಿಗೆ. ನಡೆಯುವುದೆಲ್ಲ
ಯಾಂತ್ರಿಕ ವ್ಯವಹಾರ. ಆಕೆಯೊಂದು ಉಸಿರಾಡುವ ಯಂತ್ರ.
****
ಮಳೆ ಬಲವಾಯಿತು. ಗಿರಾಕಿಗಳು ಬರಲಿಲ್ಲ. ಆಗಾಗ್ಗೆ ಸಂಪಾದನೆ ಕಡಿಮೆ
ಯಾಯಿತು. ಜೀವ ಸಣ್ಣಗಾಯಿತು. ಕಾಣಿ ಬಡಕಲಾದಳು. ತಾನೇ ಎದ್ದು
ಜನರಿದ್ದೆಡೆಗೆ ಹೋಗಿ ಅವರ ಸುತ್ತಮುತ್ತ ಸುಳಿಯಲಾರಂಭಿಸಿದಳು.
ಕೆನ್ನೆಗಳು ಗುಳಿಬಿದ್ದುವು; ಕಣ್ಣು ಕೆಳಕ್ಕಿಳಿಯಿತು. ಜ್ವರ ಬರತೊಡಗಿತು.

ಮತ್ತಷ್ಟು ಹೆಚ್ಚು ಸಿಂಗಾರಮಾಡಿಕೊಂಡಳಾಕೆ.
32
ನಿರಂಜನ: ಕೆಲವು ಸಣ್ಣ ಕಥೆಗಳು

ಆಕೆ ದೂರದಲ್ಲಿ ಬಳಕುತ್ತ ನಡೆಯುತ್ತಿದ್ದರೆ, ಆ ಉಣ್ಣೆ ಕೋಟನ್ನು
ಧರಿಸಿದ್ದರೆ, ತಲೆಗೆ ಹೂ ಮುಡಿದಿದ್ದರೆ, ಸುಮಾರಾಗಿ ಕಾಣಿಸುತ್ತಿದ್ದಳು. ಆದರೆ
ಹತ್ತಿರದಲ್ಲಿ ಮುಖವಿಟ್ಟು ನೋಡಿದರೆ, ಎರಡು ಕಣ್ಣುಗಳಲ್ಲಿ ಎರಡು ದೆವ್ವಗಳು
ನರ್ತಿಸುತ್ತಿದ್ದಂತೆ ತೋರುತ್ತಿತ್ತು.
ಕೆಲವು ಪುಂಡರು ಆಕೆ ಮಲಗುತ್ತಿದ್ದ ಶಾಲೆಗೆ ಬರುತ್ತಿದ್ದರು ರಾತ್ರೆ
ಹೊತ್ತು. ಆದರೆ ಪುಡಿಕಾಸು ಬಿಚ್ಚುತ್ತಿರಲಿಲ್ಲ. ಆಕೆ ಜಗಳಾಡುತ್ತಿದ್ದಳು.
ಅವರೂ ಪೀಡಿಸಿ ಬಲಾತ್ಕರಿಸುತ್ತಿದ್ದರು. ಅವರ ನಗೆಯೊ-ವಿಕಟ ಅಟ್ಟಹಾಸವೊ!
ಪ್ರತಿಭಟನೆ ವಿಫಲವಾದಾಗ ಕಾಣಿ ತೇಕುತ್ತ ತೇಕುತ್ತ ಆದದ್ದಾಗಲೆಂದು ತಲೆ
ಬಾಗುತ್ತಿದ್ದಳು.
ಜ್ವರ ಹೆಚ್ಚಿತು. ಕೆರೆಯಲ್ಲಿ ಸ್ನಾನಮಾಡಬೇಡವೆಂದು ಆಕೆಯ ಮನಸ್ಸು
ಹೇಳಿದಂತಾಯಿತು.
ಚರ್ಮಕ್ಕೇನೋ ರೋಗ ಬಡಿಯಿತು. ಯುವತಿ ಕಾಣಿ ತುಂಬ ನರಳಾ
ಡಿದಳು.
ಮೈಯಿಂದ ಕೆಟ್ಟ ವಾಸನೆ ಬರತೊಡಗಿತು.
ಕಾಣಿ ಇರುವ ತಾಣ ಬದಲಿಸಿದಳು. ಒಂದು ಫರ್ಲಾಂಗಿನಾಚೆ ಇದ್ದ
ಮುರುಕು ಮನೆಯೊಂದರ ಬಳಿಗೆ ಹೋದಳು. ಅಲ್ಲೊಬ್ಬ ನಡುವಯಸ್ಸಿನ
ಭಿಕ್ಷುಕ ತನ್ನ ಅರಮನೆ ಕಟ್ಟಿಕೊಂಡಿದ್ದ.
ಆತ ಮೂರು ದಿನ ಅವಳಿಗಿಷ್ಟು ಗಂಜಿ ನೀಡಿದ.
ಆಕೆ, ಮುರಿದಿದ್ದ ಮಾಡಿನೆಡೆಯಿಂದ ಆಕಾಶದತ್ತ ಬಿರಬಿರನೆ ನೋಡುತ್ತ
ಮಲಗಿದಳು.
ನಾಲ್ಕನೆಯ ದಿನ ಜ್ವರ ಸ್ವಲ್ಪವಾಸಿ ಎಂದು ತೋರಿತು. ಆಕೆ ಎದ್ದು
ಕುಳಿತಳು. ಆ ಭಿಕ್ಷುಕ, ಆಸೆಯಿಂದ ಅವಳ ಕಡೆ ನೋಡಿದ. ಆಕೆಯ ಮುಖದ
ಮೇಲೆ ಯಾವ ಭಾವನೆಯೂ ಇರಲಿಲ್ಲ, ಅಂಥ ಭಾವನೆಗಳನ್ನು ಅನುಭವಿಸುವ
ಸಾಮರ್ಥ್ಯವೆಲ್ಲ ಆಕೆಯಲ್ಲಿ ನಶಿಸಿಹೋಗಿತ್ತು. ಆತ ಆ ದಿನ ಭಿಕ್ಷುವೆತ್ತುವು
ದಕ್ಕೂ ಹೋಗದೆ ಅವಳೊಡನೆಯೇ ಇದ್ದು ಬಿಟ್ಟ. ರೋಗಪೀಡಿತವಾಗಿದ್ದ ಆತನ
ದೇಹ, ಬಹಳ ದಿನ ಬಯಕೆಯನ್ನು ಈಡೇರಿಸಹೊರಟಿತ್ತು.

ಸಂಜೆ ಕಾಣಿ, ತನ್ನ ಕರಿಯ ಕೋಟನ್ನು ಹೊದ್ದುಕೊಂಡು, ನಿಧಾನವಾಗಿ
ನಡೆಯುತ್ತ ಹುಲ್ಲುಗಾವಲನ್ನು ದಾಟಿ, ಸರ್ಕಲಿನತ್ತ ಹೋಗಿ, ಕತ್ತಲೆಯಿದ್ದ ಆ
ಒಂದು ಮೂಲೆಯಲ್ಲಿ ನಿಂತಳು. ಆಕೆಗೆ ಬವಳಿ ಬಂದ ಹಾಗಾಗುತ್ತಿತ್ತು. ಊರಿನ
ಹೊಲ, ತಾಯಿ-ತಂದೆ, ಮೊಂಡು ಕೈಯ ಜೊತೆಗಾರ, ಇವರೆಲ್ಲ ಕಣ್ಣ ಮುಂದೆ
ಕೊನೆಯ ಗಿರಾಕಿ
33

ಬಂದ ಹಾಗಾಯಿತು. ಕೂಲಿಯಾಗಲೆಂದು ಮದರಾಸಿಗೆ ಹೋದ ಅಣ್ಣನೂ
ಜಗಳಾಡಿ ಮನೆಬಿಟ್ಟ ತಮ್ಮನೂ ಎದುರಲ್ಲಿ ನಿಂತು “ಕಾಣಿ” ಎಂದು ಕರೆದ
ಹಾಗಾಗುತ್ತಿತ್ತು....ಹೃದಯವೆಲ್ಲ ನೋವಿನಿಂದ ತುಂಬಿತು........
ಬಹಳ ಹೊತ್ತು ನಿಂತಿರಲಾರದೆ ಆಕೆ ಅಲ್ಲಿಯೇ ಮೂಲೆಯಲ್ಲಿ ಕುಸಿ ಕುಳಿ
ತಳು. ದೂರದಲ್ಲಿ ಕಡಲೆಕಾಯಿ ಮಾರುವಾತನ ಕಾಗದದೊಳಗಿನ ದೀಪ ಬಾ
ಎನ್ನುತ್ತಿತ್ತು. ಆದರೆ ಪುಡಿಕಾಸಿರಲಿಲ್ಲ. ಕೈಚಾಚಿ ಬಾಚಿ ಕಡಲೆಕಾಯಿ ಒಯ್ದು
ಬಿಡಬೇಕೆಂದು ತೋರಿತು. ಆದರೆ ಸಾಮರ್ಥ್ಯವಿರಲಿಲ್ಲ.
ಗಂಟೆ ಒಂದು ಕಳೆಯಿತು. ಒಂದೂವರೆಯಾಯಿತು. ಕಾರಂಜಿಯ ಬಳಿ
ಕುಳಿತವರೆಲ್ಲ ಒಬ್ಬೊಬ್ಬರಾಗಿ ಮನೆಯ ಕಡೆ ಹೊರಟರು. ಕಾಣಿ ಒಬ್ಬೊಬ್ಬ
ರನ್ನೇ ಆಸೆಯ ದೃಷ್ಟಿಯಿಂದ ನೋಡಿದಳು.
ಕೊನೆಗೊಬ್ಬ ಬಂದು ದೂರದಲ್ಲೇ ನಿಂತ. ಧಾಂಡಿಗ ದೇಹ, ಪೋಲಿ
ಸ್ವರೂಪಿ. ತೋಳು ಬೀಸಿ ಸನ್ನೆ ಮಾಡಿದ. ಆಕೆ ಎದ್ದು ನಿಂತು ಪ್ರಯಾಸದಿಂದ
ಕಾಲೆಳೆದುಕೊಂಡು ಆತನನ್ನು ಹಿಂಬಾಲಿಸಿದಳು.
ಆತ ಯಾವನೋ
ಹೊಸಬ. ಅಲ್ಲೇ ಪೊದರಿನಾಕೆ ಆಕೆಯನ್ನಾತ
ಕೆಡವಿದ. “ಗರಕ್” ಎಂದಳು ಕಾಣಿ.......
....ಸಿಡಿಮಿಡಿಗೊಂಡು ಆತ ಎದ್ದು ನಿಂತು ಮೈಕೊಡವಿದ. “ಥುತ್!”
ಎಂದು ಆಕೆಯ ಮೇಲೆ ಉಗುಳಿದ. ಕಾಣಿ ಎದ್ದು ಕುಳಿತುಕೊಳ್ಳಲು ಯತ್ನಿಸಿ
ದಳು. ಆದರೆ ಶಕ್ತಿಯೇ ಇರಲಿಲ್ಲ.
ಆತ ಮತ್ತೊಮ್ಮೆ “ಥುತ್!” ಎಂದು ಹೊರಟ.
ಕಾಸು ಕೊಡಲಿಲ್ಲ.
ಕಾಣಿ ಆರ್ತನಾದ ಮಾಡುವಂತೆ ಬಾಯಿ ತೆರೆದಳು; ಆದರೆ ಸ್ವರ ಹೊರಡ
ಲಿಲ್ಲ. ಏಳಬೇಕೆಂದು ಮತ್ತೊಮ್ಮೆ ಪ್ರಯತ್ನಿಸಿದಳು; ಸಾಧ್ಯವಾಗಲಿಲ್ಲ.
ಆತ ಬೇಗಬೇಗನೆ ಹೆಜ್ಜೆ ಇಡತೊಡಗಿದ.
ಕೊನೆಗೊಮ್ಮೆ ಆಕೆ ತೆವಳಿ ಎದ್ದಳು.
ಹೆತ್ತ ಎಳೆಗೂಸನ್ನು ಕಸಿದೊಯ್ಯುವ ಪಾಪಿಯ ಬೆನ್ನಟ್ಟುವಂತೆ, ಆಕೆ
ಓಡಿದಳು.
“ಲೊಬೊಲೊಬೊ” ಎಂದಾಕೆ ಬೊಬ್ಬಿಟ್ಟಳು. “ಯವವಾ ಕಕಾಕ
ಆಆ” ಎಂದು ಚೀರಿದಳಾಕೆ.
ಈತ ದುಡ್ಡು ಕೊಡದೆ ಓಡುತ್ತಿದ್ದಾನೆ. ಆಕೆ ತನ್ನ ಭಾಷೆಯಲ್ಲಿ ನ್ಯಾಯ

5
34
ನಿರಂಜನ: ಕೆಲವು ಸಣ್ಣ ಕಥೆಗಳು

ಮೀರಿ ವರ್ತಿಸಬೇಡವೆಂದು ಕೇಳುತ್ತಿದ್ದಾಳೆ; ನಾಳೆಯ ಒಂದು ತುತ್ತು ಅನ್ನ
ಕಸಿಯಬೇಡವೆಂದು ಮೊರೆಯಿಡುತ್ತಿದ್ದಾಳೆ.
ಈತ ಗಾಬರಿಯಾಗಿ ನಿಂತು ನೋಡಿದ. ಜನರಿನ್ನೂ ಇದ್ದರು. ಅವರಿಗೆ
ಕೇಳಿಸಬಹುದು. ಯಾರಾದರೂ ತನ್ನನ್ನು ಬೆನ್ನಟ್ಟಬಹುದು.......
ಆ ಆಸಾಮಿ ಥಟಕ್ಕನೆ ಹಿಂತಿರುಗಿದ. ಆಕೆಯ ಗಂಟಲಿಗೆ ಕೈ ಹಾಕಿ
ಹಿಸುಕಿ ನೆಲಕ್ಕುರುಳಿಸಿದ. “ಹೊಲಸು ರಂಡೆ!” ಎಂದು ಶಪಿಸಿದ. ಆಕೆಯ
ಹೊಟ್ಟೆಗೆ ಬೂಟುಗಾಲಿನಿಂದ ಒದೆದ.
ಕಾಣಿ ಹಾಗೆಯೇ ಬಿದ್ದು ಕೊಂಡಳು...........ಗಂಟಲಲ್ಲಿ ಏನೋ ಸ್ವರ
ಬರುತ್ತಿತ್ತು. ಆದರೆ ಅದು ಹೊರಗೆ ಕೇಳಿಸುತ್ತಿರಲಿಲ್ಲ.
ಉಸಿರಾಡುತ್ತಿತ್ತು... ಮೆಲ್ಲಮೆಲ್ಲನೆ....ನಿಂತು ನಿಂತು....ನಿಧಾನವಾದ
ಉಸಿರು...ಕೊನೆಯ ಒಂದೆರಡು ಉಸಿರಾಟ.
****
ಬೆಳಗಾಯಿತು.
...ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು
ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣು
ಹೊರಳಿಸಿ, ಮತ್ತೆ ತಲೆಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು. ನಿಲ್ಲುವವರು ಯಾರೂ ಇರಲಿಲ್ಲ...
.... ಪುರಸಭೆಯ ವ್ಯಾನು ಬಂದು ಕಳೇಬರವನ್ನು ಒಯ್ಯುವುದೆಂದು
ಯಾರೋ ಹೇಳುತ್ತಿದ್ದರು.
ಕಾಣಿಯ ದೇಹದ ಮೇಲೆ ಎತ್ತರದಲ್ಲಿ ಗಿಡಗವೊಂದು ಸುತ್ತು ಸುತ್ತು
ಬರುತ್ತಿತ್ತು.
ಅದನ್ನೇ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು.
ಸುತ್ತು ಬರುತ್ತಲೇ ಇತ್ತು ಗಿಡುಗ, ಕೆಳಗೆ ನೋಡುತ್ತ.
-ಕೊನೆಯ ಗಿರಾಕಿ.

-೧೯೫೧

35

ತಿರುಕಣ್ಣನ ಮತದಾನ

ಕೆಲಸ ಕಳೆದುಕೊಂಡು ತಿಂಗಳು ಮೂರಾಗಿತ್ತು ನಿಜ. ಆದರೂ ಬೆಳಗ್ಗೆ
ಕಾರಖಾನೆಯ ಸಿಳ್ಳು ಕೇಳಿಸಿದಾಗ ತಿರುಕಣ್ಣನಿಗೆ ಎಚ್ಚರವಾಗಿಯೇ ಆಗು
ತಿತ್ತು. ಅಭ್ಯಾಸ ಬಲ. ಆದರೆ ಈಗ ಏಳಬೇಕಾದ್ದೇ ಇಲ್ಲವಲ್ಲ! ಎರಡನೆಯ
ಸಿಳ್ಳು ಕೇಳಿಸಿದಾಗಲಂತೂ ಮುಸುಕನ್ನು ಮತ್ತಿಷ್ಟು ಗಟ್ಟಿಯಾಗಿ ಹೊದೆದು
ಕೊಂಡು ತಿರುಕಣ್ಣ ಮಲಗುತ್ತಿದ್ದ. ಅವನ ಆರೇಳು ವರ್ಷದ ಮಗಳಂತೂ
ಏಳುವ ಗೊಡವೆಗೇ ಹೋಗುತ್ತಿರಲಿಲ್ಲ.
ಆದರೆ ಬೆಳಗ್ಗೆ ಆ ಸಿಳ್ಳಿನ ಜತೆಗೆ ಕಾರಿನೊಂದು ಕಿರಿಚಾಟ ಕೇಳಿಸಿತು.
ಒಂದೇ ಸಮನೆ ಕೂಗಿ ಕರೆಯುತ್ತಿದ್ದ ಹಾರನ್!
ಯಾರೋ ತನ್ನ ಗುಡಿಸಲಿನ ಬಾಗಿಲನ್ನೇ ತಟ್ಟಿದ ಹಾಗಾಯಿತು.
ಏನೋ ಅಪಾಯದ ಮುನ್ಸೂಚನೆ ಇದು-ಎಂದು ಅಂಜಿದ ತಿರುಕಣ್ಣ.
ಆದರೆ ಮೃದುವಾದ ಇಂಪಾದ ಒಂದು ಸ್ವರ ಕೇಳಿಸುತ್ತಿತ್ತು:
“ಮಿಸ್ಟರ್ ತಿರುಕಣ್ಣನ್, ಮಿಸ್ಟರ್ ತಿರುಕಣ್ಣನ್!”
ಆ ಜೀವಮಾನದಲ್ಲೇ ಮೊದಲ ಸಾರಿಗೆ ಅಂಥ ಸಂಬೋಧನೆ! ಅದೇನೋ
ಎಂಥ ಶಬ್ದವೋ ಆತನಿಗೆ ಅರ್ಥವೂ ಆಗಲಿಲ್ಲ.
ಆದರೂ ಆತ ಎದ್ದು, ಕಂಬಳಿ ಹೊದ್ದುಕೊಂಡು, ಬಾಗಿಲನ್ನು ಬದಿಗೆ
ಸರಿಸಿ ಬಾಗಿ ಹೊರಬಂದ.
ಥಳಥಳಿಸುವ ದೊಡ್ಡದೊಂದು ಕಾರು ದೂರದಲ್ಲಿ ನಿಂತಿತ್ತು. ಪಾಶ್ಚಾತ್ಯ
ರೀತಿಯಲ್ಲಿ ಉಣ್ಣೆಯ ಪೋಷಾಕು ಧರಿಸಿದ್ದ ಸಾಹೇಬರೊಬ್ಬರು ಅಲ್ಲಿ ಇದ್ದರು.
ಗುಡಿಸಲಿನ ಕೊಳಕು ಅಂಗಳದಲ್ಲಿ ಇನ್ನೊಬ್ಬ ಯುವಕ ನೂರಾರು ಹಾಳೆಗಳಿದ್ದ
ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದ. ಬಾಗಿಲು ತಟ್ಟಿ ಹೇಳಿದ:
“ನೀವೇನೋ ತಿರುಕಣ್ಣನ್?”
“ನಾನೇ ಬುದ್ಧಿ, ತಿರುಕಣ್ಣ.”

ಪುಸ್ತಕವಿದ್ದವನು ಓದಿ ಹೇಳಿದ:
36
ನಿರಂಜನ: ಕೆಲವು ಸಣ್ಣ ಕಥೆಗಳು

“೯ಎ೦೦೬೮೩ ತಿರುಕಣ್ಣನ್ ಮತ್ತು ೯ಎ೦೦೬೮೪ ಆರೋಗ್ಯಮ್ಮ”
ತಿರುಕಣ್ಣನಿಗೆ ಅರ್ಥವಾಗಲಿಲ್ಲ. ಆತ ವಿನೀತನಾಗಿ ಕೇಳಿದ:
“ನನ್ನಿಂದೇನು ಮಾಪರಾಧವಾಯ್ತು ಸ್ವಾಮಿ?”
“ಛೇ! ಏನೂ ಇಲ್ಲ.......ಇಕೋ ಇವರು ಸ್ವತಂತ್ರ ಭಾರತದ ಸ್ವತಂತ್ರ
ಚುನಾವಣೇಲಿ ಸ್ವತಂತ್ರ ಉಮೇದುವಾರರು.ಇವರಿಗೆ ನೀನೂ ಓಟು ಮಾಡ
ಬೇಕು, ನಿನ್ನ ಹೆಂಡತಿಯೂ ಓಟು ಮಾಡಬೇಕು. ಗುರುತು ಕಾರು. ಕಾರು
ಗುರುತು...”
“ಅದೆಂಥಾದೋ ತಿಳೀಲಿಲ್ವೆ ಬುದ್ಧಿ.”
ಮತ್ತೊಮ್ಮೆ ಆತ ಸಹನೆಯಿಂದ ವಿವರಿಸಿದ:
“ನಾನು ನನ್ನ ಹೆಂಡ್ತಿ, ಅದ್ದೆಂಗೆ?”
“ಯಾಕೆ?”
“ಅವಳಿಲ್ವಲ್ಲಾ!”
“ಎಲ್ಲಿಗೋಗವ್ಳೆ?”
“ಬರೋ ಹಂಗೇ ಇಲ್ವಲ್ಲಾ!”
“ಏನು ಸಮಾಚಾರ?”
ಸ್ವಲ್ಪ ತಡೆದು ತಿರುಕಣ್ಣನ್ ಹೇಳಿದ:
“ಹಯ್ಯೋ ಒಂಟೋದ್ಧಲ್ಲಾ ಬುದ್ದಿ ಒಂದು ವಾರದ ಇಂದೇನೇ.....
ಭೇದಿ ಅತ್ಕೊಂಡಿತ್ತು. ಅಂಗೇ ಒಂಟೋದ್ಲಲ್ಲಾ...”
“ಅಯ್ಯೋ ಪಾಪ! ಎಂಥ ಅನ್ಯಾಯ!”
ತನ್ನ ಬಗ್ಗೆ ಕನಿಕರ ತೋರಿಸುತ್ತಿದ್ದಾರೆ ಎಂದುಕೊಂಡ ತಿರುಕಣ್ಣನ್.
“ಎಂಥ ಅನ್ಯಾಯ! ನಮ್ಮ ಒಂದು ಸೂರ್ ಓಟು ಹೊರಟೋಯ್ತಲ್ಲಾ!”
ತಿರುಕಣ್ಣನಿಗೆ ಆಶ್ಚರ್ಯವಾಯಿತು. ಇನ್ನೊಬ್ಬ ಕೇಳಿದ:
“ಯಾವ ಮಿಲ್ಲಿಗಪ್ಪಾ ನೀವು ಹೋಗಿರೋದು?”
“ಅದೂ ಆಗೋಯ್ತು ಬುದ್ಧಿ. ಮನೆಗೆ ಕಳಿಸ್ಬುಟ್ರು ನಾಕ್ತಿಂಗ್ಳಾಯ್ತು..
ಅದೇನೋ ತುಂಬಾ ಕಾಯಿಲೆಯಾಗಿತ್ತು. ಇಳಿದೋಗ್ಬಿಟ್ಟಿದ್ದೆ. 'ಈ ಕಾಯಿಲೆ
ವಾಸೀನೇ ಆಗಂಗಿಲ್ಲ-ಹೊರಟೋಗು' ಅಂದ್ರು.”
“ಎಂಥ ಅನ್ಯಾಯ! ಇದಕ್ಕೊಸ್ಕರವೇ ನಮ್ಮ ಯಜಮಾನರು
ಎಲೆಕ್ಷನ್‌ಗೆ ನಿಂತಿದ್ದಾರೆ. ಆರೋಗ್ಯಮ್ಮನ ಓಟಂತೂ ಅನ್ಯಾಯವಾಗಿ
ಹಾಳಾಯ್ತು. ನಿನ್ನ ಓಟನ್ನು ಅವರಿಗೆ ದಯಪಾಲ್ಸು” ಇನ್ನೊಬ್ಬ ಹೇಳಿದ.

"ಅಂಗೇ ಆಗ್ಲಿ ಬುದ್ಧಿ.”
ತಿರುಕಣ್ಣನ ಮತದಾನ
37

“ನಿಮ್ಮ ಕೇರೀಲಿ ಇನ್ನೂ ರೈವತ್ತು ಓಟುಗಳಿವೆ. ಅಷ್ಟಕ್ಕೂ ಯಜ
ಮಾನರಿಗೇ ಕೊಡಿಸು. ಎಲೆಕ್ಷನ್ ಆದ್ಮಲೆ ನೂರು ರೂಪಾಯಿ ಕೊಡ್ತಾರೆ.”
ಅಪನಂಬಿಕೆಯ ಕಣ್ಣಿನಿಂದ ತಿರುಕಣ್ಣನ್ ನೋಡಿದ. ಅವನು ಚೇತರಿಸ
ಕೊಂಡು “ನಿಜವಾ ಬುದ್ದಿ?” ಎಂದು ಕೇಳಬೇಕು ಎನ್ನುವುದರೊಳಗೇ ಕಾರು
ಹೊರಟು ಹೋಗಿತ್ತು.
ನೂರು ಯಾಕೆ, ಬೇರೆಯವರಿಗೆ ಗೊತ್ತಾದರೆ ಐವತ್ತಕ್ಕೂ ಆ ಕೆಲಸ
ಒಪ್ಪಬಹುದು, ಎಂದು ತಿರುಕಣ್ಣನ್ ಲೆಕ್ಕಾಚಾರ ಹಾಕಿದ. ಸ್ವಲ್ಪ ಅಡ್ವಾನ್ಸಾ
ದರೂ ತಗೊಂಡಿದ್ದರೆ_ಎಂದು ಹಲುಬಿದ. ಆ ಯಜಮಾನರ ಮನೆ ಎಲ್ಲಿದೆ
ಯೆಂತಲಾದರೂ ತಿಳಕೊಂಡಿದ್ದರೆ?
****
ಮತ್ತೆ ನಿದ್ದೆ ಬರಲಿಲ್ಲ. ಮಗಳನ್ನೆಬ್ಬಿಸಿ ಮಂಡಿ ಸಾಹುಕಾರರ ಮನೆಗೆ,
ಮುಸುರೆ ತಿಕ್ಕಲು ಕಳುಹಿಸಿಕೊಟ್ಟ. ಹಿಂದೆ ಆರೋಗ್ಯಮ್ಮ ಮಾಡುತ್ತಿದ್ದ
ಕೆಲಸ ಅದು. ತಿರುಕಣ್ಣನ ಪಾಲಿನ ಅದೃಷ್ಟದ ಬಾಗಿಲು ಪೂರ್ಣ ಮುಚ್ಚಿರ
ಲಿಲ್ಲ, ಎಂತಲೇ ತಾಯಿಯ ಕೆಲಸ ಮಗಳಿಗೆ ದೊರಕಿತ್ತು. ಒಪ್ಪೊತ್ತಿನ ಊಟ
ಮತ್ತು ಎರಡು ರೂಪಾಯಿ ಸಂಬಳ. ಆ ಎರಡು ರೂಪಾಯಿ ಹುಳಿ ಹೆಂಡದ
ಬಾಬತ್ತು. ಸ್ವಂತ ಹೊಟ್ಟೆಗೆ ತಿನ್ನಬೇಕಾದರೆ ತಿರುಕಣ್ಣನ್ ದುಡಿದು ತರ
ಬೇಕಾಗಿತ್ತು. ಸಾಯುವದಕ್ಕೆ ಮುಂಚೆ ಆರೋಗ್ಯಮ್ಮ ಗಂಡನಿಗೊಂದು
ಕೊಡಲಿ ತೆಗೆಸಿಕೊಟ್ಟಿದ್ದಳು. ನಡು ವಯಸ್ಸಿನಲ್ಲಿ ಸೌದೆ ಒಡೆಯುವುದನ್ನು
ಅವನು ಕಲಿತಿದ್ದ. ಆದರೆ ಅವನದು ಸಹಿಸಲಾಗದ ಕೆಮ್ಮು; ದೇಹವೂ ಬಡಕ
ಲಾಗಿತ್ತು. ಎರಡು ಮಣ ಒಡೆಯುವುದರೊಳಗೆ ಸಾಕೋಸಾಕು ಎನಿಸುತ್ತಿತ್ತು.
ಈ ದಿನ ಕೊಡಲಿಯನ್ನು ಹೆಗಲಿಗೇರಿಸಿಕೊಂಡು ತಿರುಕಣ್ಣ ಹೊರಟಾಗ
ಬೆಳಗ್ಗೆ ನಡೆದಿದ್ದ ವಿಚಿತ್ರ ಘಟನೆಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿದ್ದ.
ಅವನ ಮೊದಲ ಹುಡುಗ ಆರು ವರ್ಷಗಳ ಹಿಂದೆಯೇ ಮನೆ ಬಿಟ್ಟು
ಓಡಿಹೋಗಿದ್ದ. ಅವನೂ ಇದ್ದಿದ್ದರೆ? ಅವನಿಗೂ ಒಂದು ಓಟು ಇರುತ್ತಿತ್ತೋ
ಏನೋ. ಆರೋಗ್ಯಮ್ಮನೂ ಅಷ್ಟೇ. ಇನ್ನೂ ಒಂದಷ್ಟು ದಿನ ಬದುಕಿದ್ದರೆ?
ಅಂತೂ ತನ್ನ ಅದೃಷ್ಟ ಖುಲಾಯಿಸಿತು...ಆರೋಗ್ಯಮ್ಮ ಇದ್ದಿದ್ದರೆ ಅವಳೆ
ದುರು ಜಂಭ ತೋರಿಸಬಹುದಾಗಿತ್ತು.

ಈ ವಿಷಯ ಯಾರಿಗೂ ಹೇಳಬಾರದು, ಎಂದುಕೊಂಡ ತಿರುಕಣ್ಣನ್,
ಹೇಳಿದರೆ ಸಿಗುವ ಹಣಕ್ಕೆ ಎಲ್ಲಿ ಕಲ್ಲು ಬೀಳುವುದೋ ಎಂಬ ಭಯ, ಆದರೆ
ಸಂಜೆ, ಕೇರಿಯ ಕೆಲಸಗಾರರು ವಾಪಸು ಬಂದಾಗ, ಮನೆ ಮುದುಕರೋ
38
ನಿರಂಜನ: ಕೆಲವು ಸಣ್ಣ ಕಥೆಗಳು

ಹುಡುಗರೋ ಕಾರು ಬಂದಿದ್ದ ವಿಷಯ ಹೇಳುತ್ತಾರೆ. ಅಂತೂ ನಡೆದದ್ದನ್ನು
ತಾನು ಹೇಳಲೇಬೇಕು.
ಮಧ್ಯಾಹ್ನವಾದ ಮೇಲೆ, ತಿರುಕಣ್ಣನ್ ಮೆಲ್ಲನೆ ಈ ವಿಷಯ ಸೌದೆ
ಡಿಪೋದ ವೆಂಕಟಪ್ಪನಿಗೆ ತಿಳಿಸಿ ಸಲಹೆ ಕೇಳಿದ.
“ಅಯ್ಯೋ ಬೆಪ್-ಮಗ್ನೇ... ಇನ್ನೂ ಬತ್ತಾರೆ ಕಣೋ ಒಂದಷ್ಟು
ಜನಾ....ಎಲ್ರೂ ಬೇಡ್ಕೊಂಡು ಬರ್ತಾರೆ. ನನಕ್ಕೊಡಿ ಓಟು ನನಕ್ಕೊಡಿ
ಅಂತ....ಎಲ್ಲಾ ಮೋಸ. ಮಕ್ಳು...”
ತಿರುಕಣ್ಣನಿಗೆ ತುಂಬ ನಿರಾಸೆಯಾಯಿತು.
ಕೇರಿಯವರ ಕಾಟ ತಪ್ಪಿಸಿಕೊಳ್ಳಲು ಆ ಸಂಜೆ ತಡವಾಗಿ ತಿರುಕಣ್ಣ
ವಾಪಸು ಹೋದ. ಬೆಳಗ್ಗೆ ನಡೆದದ್ದು ಅವನ ಮನಶ್ಯಾಂತಿಯನ್ನು ಕದಡಿತ್ತು.
ಅದಕ್ಕೆ ಪರಿಹಾರವಾಗಿ ಅವನು ಆ ಸಂಜೆ ನಾಲ್ಕಾಣೆಯಷ್ಟನ್ನು ಕುಡಿದ;
ಬಿಮ್ಮನೆ ಮುಖ ಮಾಡಿಕೊಂಡು, ನಾಲಿಗೆಯನ್ನು ಬಿಗಿಹಿಡಿದು, ಒಂದು ಸ್ವರ
ವನ್ನೂ ಹೊರಡಿಸದೆ, ಬೀದಿಯುದ್ದಕ್ಕೂ ನಡೆದ.
ಮರುದಿನ ಭಾನುವಾರ ಅವನ ಎಲ್ಲ ಭ್ರಮೆಯೂ ಹೊರಟು
ಹೋಯಿತು. ಕೇರಿಯ ಬೇರೆ ನಾಲ್ಕಾರು ಜನರಿಗೂ ಅದೇ ನೂರು ರೂಪಾ
ಯಿಯ ಆಶ್ವಾಸನೆ ದೊರೆತಿತ್ತಂತೆ!
“ಎಲ್ಲಾ ಮೋಸ! ಥೂ!” ಎಂದು ತಿರುಕಣ್ಣನ್ ಉಗುಳಿದ.
ಅನಂತರದ ದಿನಗಳೆಲ್ಲ ತಮಾಷೆಯಾಗಿದ್ದುವು. ಆ ಕಾರುಗಳ ಓಡಾಟ
ವೇನು! ಗಟ್ಟಿ ಸ್ವರಗಳ ಕಿರಿಚಾಟವೇನು! ಆ ಅಂಗಲಾಚಿ ಬೇಡುವ ಸೌಜನ್ಯ
ವೇನು!
ಒಂದು ಮರವನ್ನೇ ಕಡಿದು ಲಾರಿಯೊಳಗೆ ಇರಿಸಿಕೊಂಡು “ಮರಕ್ಕೆ
ಓಟು ಕೊಡಿ!” ಎನ್ನುತ್ತಿದ್ದರು.
ಇನ್ನೊಂದು ವ್ಯಾನಿನ ಮೇಲೆ ಒಂದು ಗುಡಿಸಲನ್ನೇ ಕಟ್ಟಿದ್ದರು,
“ಗುಡಿಸಲು ನಮ್ಮ ಗುರುತು, ನಮ್ಮ ಗುರುತು ಗುಡಿಸಲು” ಎನ್ನುತ್ತಿದ್ದರು.
ಕೇರಿಯ ಮಕ್ಕಳಂತೂ ದಿನವೂ ಧೂಳೆಬ್ಬಿಸುತ್ತಿದ್ದುವು: “ಯಾರಿಗೆ
ಓತ್-ಮರಕ್ಕೆ ನೇತ್_ಕೋತಿಗೆ ಓತ್-ಓತ್ ಫಾ ಕಾಂಗ್ ಲೇಸ್,”....
ಒಬ್ಬ ಕೆಲಸದಾಕೆ ಎಂಬುದನ್ನು ಮರೆತು ತಿರುಕಣ್ಣನ ಮಗಳೂ ಆ
ಹುಡುಗರ ಜತೆ ಸೇರುತ್ತಿದ್ದಳು.
ಹಾಗೇ, ದಿನ ಕಳೆಯಿತು.

ತಿರುಕಣ್ಣನನ್ನು ಕೇಳಿಕೊಂಡು ಬರುತ್ತಿದ್ದ ಜನ ಬಹಳ.
ತಿರುಕಣ್ಣನ ಮತದಾನ
39

“ತಿರು-ಕಣ್ಣಾ” ಎಂದೊಬ್ಬನು ಕೂಗಿದರೆ, “ತಿರುಕಣ್ಣ ಇದ್ದಾರೆಯೆ?”
ಎಂದಿನ್ನೊಬ್ಬ ರಾಗವಾಗಿ; ಮೂರನೆಯವನು "ತಿರ್ಕಣ್ಣನ್ ಇರ್ಕಾರಾ?”ಎಂತ.

“ಆಗಲಿ ಸಾಮಿ, ಆಗಲಿ ಬುದ್ಧಿ, ಕೊಡ್ತೀನಿ ಓಟು” ಎಂದು ಹೇಳಿ
ಹೇಳಿ ತಿರುಕಣ್ಣನಿಗೆ ಸಾಕಾಗಿ ಹೋಯಿತು.

.... ಮೈಯ ನಿಶ್ಯಕ್ತಿ ಹೆಚ್ಚುತ್ತಿತ್ತು. ರೇಷನ್ ತರಲು ಸಾಕಷ್ಟು ಹಣವೇ
ಇರುತ್ತಿರಲಿಲ್ಲ. ಹೆಂಡದಂಗಡಿಯವನು, “ನಿನಗಿನ್ನು ಸಾಲ ಕೊಡೋಕಾಗಲ್ಲ,
ಕಾರ್ಖಾನೇಲಿ ಕೆಲ್ಸ ಇದ್ದವರಿಗಷ್ಟೇ ಸಾಲ, ಹೋಗು” ಎಂದು ಖಡಾಖಂಡಿತ
ವಾಗಿ ಹೇಳಿದ್ದ.

ಗುಡಿಸಲಿನ ಬಾಡಿಗೆ ಎರಡು ತಿಂಗಳಿಂದ ಬಾಕಿ ಇತ್ತು. ಅದರ ಮಾಲಿಕ
ಹೋದ ತಿಂಗಳೇ ಹೇಳಿದ್ದ: “ನೀನು ಬೇರೆ ಕಡೆಗೆ ಹೋಗೋದು ವಾಸಿ”
ಎಂತ.

****

ಕೆಳಗೆ ಮೂರನೆಯ ಬೀದಿಯಲ್ಲಿ ಒಂದು ಹಳೆಯ ಕಟ್ಟಡವಿತ್ತು.
ಯಾಕೋ ಅದರ ಬಾಗಿಲು ತೆರೆಯುತ್ತಿರಲಿಲ್ಲ. ಆ ಜಗಲಿಗೆ ತನ್ನ ಬಿಡಾರ
ಸಾಗಿಸಿ ಬಿಡಬೇಕು ಎಂದು ಕಣ್ಣನ್ ಯೋಚಿಸುತ್ತಿದ್ದ. ಮುಂದೆ ಪೋಲೀಸರು
ಬಂದು ಕಾಡಿಸಿದರೆ, ಮಗಳನ್ನು ಮಂಡಿ ಸಾಹುಕಾರರ ಮನೆಯಲ್ಲೇ ಬಿಟ್ಟು
ಬಿಡುವುದು, ತಾನು ಸೌದೆ ಡಿಪೋವನ್ನು ಆಶ್ರಯಿಸುವುದು ಎಂದು ತಿರು
ಕಣ್ಣನ್ ತೀರ್ಮಾನಕ್ಕೆ ಬಂದ.

ಆ ಸಂಜೆ ಸ್ವಲ್ಪ ಮಟ್ಟಿಗೆ 'ಡಂಗಾಗಿ'ಯೇ ಅವನು ಗುಡಿಸಲಿಗೆ
ಮರಳಿದ್ದ.

ಅಲ್ಲಿ ಅವನ ಹಟ್ಟಿಯ ಎದುರು ಹತ್ತಾರು ಜನ ಗುಂಪು ಕೂಡಿ ಮಾತ
ನಾಡುತ್ತಿದ್ದರು. ನಡುವೆ ಅವರ ಸಂಘದ ಅಧ್ಯಕ್ಷ ರಂಗೇಶಿ,

ಒಬ್ಬ ಯುವಕ ಕೆಲಸಗಾರ ಕೂಗಾಡುತ್ತಿದ್ದ....

“ಎಲ್ಲಾ ಬುಟ್ಟುಡಣ್ಣ ರಂಗೇಶಿ, ನಿನ್ತಾವ ಎಲ್ಲೈತೆ ದುಡ್ಡು ? ಫ್ಯಾಕ್ಟರಿ
ಯವರು ಅತ್ಸಾವಿರ ಕೊಡ್ತಾರೇಂತ ನೀನೂ ಚುನಾವಣೆಗೆ ನಿಂತುಕೊಂಡಿದ್ಯ...
ನಂಗೊತ್ತಿಲ್ವಾ! ಹಹ್ಹ!”

ರಂಗೇಶಿ ಶಾಂತನಾಗಿ ಉದ್ದುದ್ದ ಭಾಷಣ ಕೊಡಲು ಶುರುಮಾಡಿದ.
ಆದರೆ ನೆರೆದಿದ್ದವರಲ್ಲಿ ಬಹಳ ಜನ ಹೊರಟುಹೋದರು; ಕೂತಿದ್ದವರು
ಕೆಲವರು ಮಾತ್ರ. ಏಳುವುದೂ ಒಂದು ಆಯಾಸದ ಕೆಲಸವೇ ಎಂದು,

ಕುಳಿತೇ ಇದ್ದರು.
40
ನಿರಂಜನ: ಕೆಲವು ಸಣ್ಣ ಕಥೆಗಳು

ಕೊನೆಗೆ ರಂಗೇಶಿ ತಿರುಕಣ್ಣನ ಬಳಿಗೆ ಬಂದ.

ಅದೇ ರಂಗೇಶಿ! ಆ ದಿನ ಡಿಸ್ಮಿಸ್ ಆದಾಗ ಅವನ ಬಳಿ ಹೋಗಿ
ಕಾಲು ಹಿಡಿದು ಗೋಗರೆದು ತಿರುಕಣ್ಣ ಅತ್ತಿದ್ದ. ಆಗ, “ನೀನು ಸಂಘದ
ಮೆಂಬರಲ್ವಲ್ಲಾ” ಎಂದು ಉತ್ತರ ಬಂದಿತ್ತು. ಅವನನ್ನು ಸಿಗಿದು ಹಾಕ
ಬೇಕು, ಎನ್ನುವಷ್ಟು ಸಿಟ್ಟು ಬಂತು ತಿರುಕಣ್ಣನಿಗೆ.

“ಅಂತೂ ನೀನೂ ನಿಂತ್ಬಿಟ್ಟೆ ಚುನಾವಣೆಗೆ!” ಎಂದ ತಿರುಕಣ್ಣ ವ್ಯಂಗ್ಯ
ವಾಗಿ.

ಅದೇ ಧ್ವನಿಯಲ್ಲಿ ಮತ್ತೂ ಹೇಳಿದ.

“ಆರೋಗ್ಯ ಒಂಟೋದ್ಲು. ಇಲ್ದಿದ್ರೆ ಎಲ್ಡು ಓಟು ಬರ್‌ತಿತ್ತು
ನಿಂಗೆ!”

“ಇಲ್ಲ ತಿರುಕಣ್ಣ, ನೀನು ಒಳ್ಳೆಯವನು. ಮಾಲಿಕರಿಗೆ ಹೇಳಿ ಕೆಲಸ
ಕೊಡಿಸ್ತೀನಿ. ಒಂದೇ ಶರ್ತ. ಈ ಕೇರಿಯ ಎಲ್ಲಾ ಓಟನ್ನೂ ನೀನು ನಂಗೇ
ಕೊಡಿಸ್ಬೇಕು” ಎಂದು ರಂಗೇಶಿ ವಯ್ಯಾರವಾಗಿ ಹೇಳಿದ.

ತಿರುಕಣ್ಣ ಗಟ್ಟಿಯಾಗಿ ಕರ್ಕಶವಾಗಿ ಉತ್ತರಕೊಟ್ಟ:

“ಓಗೋಗು...... ಮುಚ್ಕೊಂಡು ಹೋಗು........ ನಿನ್ನ ಬಂಡ್ವಾಳ್ವೆಲ್ಲ
ಬೀದಿಗೆಳ್ದೇನು........ಓಗ್!"

ಇದಾದ ಮರುದಿನವೇ ಗುಡಿಸಲಿನ ಮಾಲಿಕ ಬಂದು ಗುಡಿಸಲಿನಲ್ಲಿದ್ದ
ಕುಡಿಕೆ ಮಡಿಕೆಗಳನ್ನೆಲ್ಲ ಬೀದಿಗೆಳೆದು ತಿರುಕಣ್ಣನನ್ನು ಹೊರಹಾಕಿದ. ಬಲು
ಸಂಕಟವಾಯಿತು ತಿರುಕಣ್ಣನಿಗೆ. ಗುಡಿಸಲನ್ನು ಬಿಡಬೇಕೆಂದು ತಾನಾಗಿಯೇ
ಹಿಂದೆ ಯೋಚಿಸಿದ್ದಾಗ ಆ ನೋವು ತಿಳಿದಿರಲಿಲ್ಲ. ಈಗ ಬಿಡಲೇಬೇಕಾಗಿ
ಬಂದಾಗ ಅವನ ಕರುಳು ಕಿವುಚಿ ಬರುತ್ತಿತ್ತು. ಆ ಹಲವು ನೆನಪುಗಳು...
ಆರೋಗ್ಯಮ್ಮನ ಕೊನೆಯ ದಿನಗಳು.

ಆದರೂ ಅವನು ಬೇರೆ ಗತಿ ಇಲ್ಲದೆ ಆ ಜಗಲಿಗೆ ಹೊರಟು ಹೋದ.

****

ಚುನಾವಣೆಯ ಸಂಭ್ರಮ ನಡದೇ ಇತ್ತು.
ಆ ದಿನ ಮತ್ತೆ ಮೂರು ಪಕ್ಷಗಳ ಸ್ವಯಂ ಸೇವಕರು ಸೌದೆ ಅಂಗಡಿಗೆ
ಬಂದರು. ಕಣ್ಣು ತಪ್ಪಿಸಲು ಎಷ್ಟು ಯತ್ನಿಸಿದರೂ ಗಂಟೆಗಟ್ಟಲೆ ಕಾದು
ಅವರು ಅವನನ್ನು ಪೀಡಿಸಿದರು.

“ತಿರುಕಣ್ಣನ್ ತಿರುಕಣ್ಣನ್! ನಮಗೆ ಓಟು-ನಮಗೆ!”

ಆ ಸಾಯಂಕಾಲ ಇನ್ನೊಂದು ದೊಡ್ಡ ಕಾರು ಬಂತು. ಅದರ ಎದುರು
ತಿರುಕಣ್ಣನ ಮತದಾನ
41

ಎರಡೆತ್ತುಗಳನ್ನು ಎತ್ತಿ ಕಟ್ಟಿದ್ದರು. ಭಾರಿ ದೇಹದ ವ್ಯಕ್ತಿಯೊಬ್ಬರು ಕೆಳಕ್ಕಿಳಿ
ದರು. ಅವರು “ಕೇರಿಯ ತಿರುಕಣ್ಣ ಇದ್ದಾರೆಯೆ?” ಎಂದು ಕೇಳಿದರು.

ಈ ಸಾರೆ ಗಡಸು ದನಿಯಲ್ಲೇ ತಿರುಕಣ್ಣ, “ಯಾಕ್ಸಾಮೀ?” ಎಂದ.
ಬಂದವರು ದೇಶಾವರಿ ನಗೆ ಬೀರಿದರು. ಅವರ ಜತೆಯಲ್ಲಿದ್ದವನೊಬ್ಬ
ಹೇಳಿದ:
“ರಾಯರ ಪರಿಚಯ ಇದೆ ಅಲ್ವೇನಪ್ಪಾ?”
ತಿರುಕಣ್ಣ ಅವರ ಖಾದಿಟೋಪಿಯತ್ತ ನೋಡುತ್ತ, “ಓಹೋ! ಇಲ್ಲೆ?”
ಎಂದ.
“ಯಾರು ಹೇಳು?” ಎಂದರು ಸ್ವತಹ ರಾಯರು.
“ಇನ್ಯಾರು ಬುದ್ಧಿ ? ಸರ್ಕಾರದೋರು.”
ಕ್ಷಣ ಕಾಲ ರಾಯರು ಸುಮ್ಮನಾದರು.

ಬಳಿಕ “ನಿಮಗೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ಸಿನೋರು. ನೆಹ್ರೂ
ಹೇಳಿದ್ದಾರೆ... ನನಗೆ ಓಟು ಹಾಕಪ್ಪ_”

ನಗೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ಸಿನವರನ್ನು ಸ್ಮರಿಸಿ ತಿರುಕಣ್ಣ
ನಸುನಕ್ಕ.

... ಬೀದಿಗಳಲ್ಲಿ ಕೂಗಾಟ ಹೆಚ್ಚುತ್ತ ಹೋಯಿತು. 'ಪವಿತ್ರ ಹಕ್ಕನ್ನು
ಚಲಾಯಿಸಿ' 'ಘನವಾದ ಓಟನ್ನು ನೀಡಿ' 'ಮತದಾನ ಮಾಡಿ' 'ನಿಮ್ಮ ಮಕ್ಕಳ
ಹೆಸರಲ್ಲಿ, ವೀರ ಸಂತಾನದ ಹೆಸರಲ್ಲಿ, ನಿಮ್ಮ ಪವಿತ್ರ ಮತವನ್ನು ದಯ
ಪಾಲಿಸಿ...'

ಮೂರು ವಾರಗಳ ಹಿಂದೆ ಒಂದು ಬೆಳಗು ಮುಂಜಾನೆ ಸ್ವತಂತ್ರ
ಕಾರೊಂದು ತನ್ನ ಮನೆ ಬಾಗಿಲಿಗೆ ಬಂದಿದ್ದುದನ್ನು ತಿರುಕಣ್ಣ ಮರೆತುಬಿಟ್ಟಿದ್ದ.
ನೋಡಿ ನೋಡಿ ಬೇಜಾರವಾಗಿದ್ದ ದಿನನಿತ್ಯದ ನಾಟಕವಾಗಿತ್ತು, ಆ ಬೀದಿಯ
ನೋಟ.

"ಇನ್ನು ಆರೇ ದಿನ-ಐದೇ ದಿನ-ನಾಲ್ಕೇ ದಿನ- ಅಗೋ ಇನ್ನು ೪೮
ಗಂಟೆಗಳ ಒಳಗಾಗಿ!”

ಆ ದಿವಸ ಯಾರೂ ಸೌದೆ ಒಡೆಸಲೇ ಇಲ್ಲ. ಡಿಪೋದಲ್ಲೂ ಸೌದೆ
ಇರಲಿಲ್ಲ. ಮೂರು ಬಾರಿ ಸೇದಿ ಮುಗಿಸಿದ್ದ ಬೀಡಿಯನ್ನೇ ಮತ್ತೂ ಚೀಪುತ್ತ
ತಿರುಕಣ್ಣ ಒಂದೆಡೆ ಕುಳಿತ.

“ಇನ್ನು ಇಪ್ಪತ್ತನಾಲ್ವೇ ಗಂಟೆ... ಅದೋ ಆ ಸುಪ್ರಭಾತದಲ್ಲಿ....
42
ನಿರಂಜನ: ಕೆಲವು ಸಣ್ಣ ಕಥೆಗಳು

ಭಾರತೀಯ ಸಂಸ್ಕೃತಿ..."
ಆ ಮಾತುಗಳಿಗೆ ಯಾವ ಅರ್ಥವೂ ಇದ್ದಂತೆ ತೋರಲಿಲ್ಲ ತಿರುಕಣ್ಣನಿಗೆ.

...ಚುನಾವಣೆಯ ದಿನ ಬಂತು. ಯಾವ ಗದ್ದಲವೂ ಆ ಬೆಳಗ್ಗೆ
ಕೇಳಿಸಲಿಲ್ಲ.

"ಅಂತೂ ಪೀಡೆ ತೊಲಗಿತು!” ಎಂದುಕೊಂಡ ತಿರುಕಣ್ಣ. ಮಗಳ
ಮೇಲೂ, ತಾನೂ, ಮತ್ತೊಮ್ಮೆ ಕಂಬಳಿಯ ಮುಸುಕನ್ನೆಳೆದು ಮಲಗಿದ.
ಬಿಸಿಲೇರಿತು.
ತಿರುಕಣ್ಣ ಎದ್ದು ಕುಳಿತ.

ಬಹುಶಃ ತನಗಾಗಿ ಆ ದೊಡ್ಡ ಮನುಷ್ಯರೆಲ್ಲ ಹುಡುಕುತ್ತಿರಬಹುದು
ಎಂಬ ಯೋಚನೆ ಬಂತು. ಆದ್ದರಿಂದ ಒಂದು ರೀತಿಯ ಸಮಾಧಾನವೇ
ಆಯಿತು ಆತನಿಗೆ. ಭಿಕ್ಷೆ ಬೇಡಿಕೊಂಡು, ದಾನ ಕೇಳಿಕೊಂಡು, ತನ್ನ ಬಳಿಗೂ
ಬರುವವರಿದ್ದಾರಲ್ಲಾ ಎಂಬ ಹೆಮ್ಮೆ ಅವನಿಗೆ. ಆದರೆ ಅದು ಒಣ ಹೆಮ್ಮೆ.
ಅವನ ಕೆಮ್ಮು ಇದ್ದ ಹಾಗೆ.

ಆ ನೂರು ರೂಪಾಯಿ ಬರಲೇ ಇಲ್ಲ. ಆ ರಂಗೇಶಿಯ ಕಾಲು ಹಿಡಿ
ದಿದ್ದರೆ, ಅಥವಾ ಆ ಮರಕ್ಕೋ, ಗುಡಿಸಲಿಗೋ ಆತುಕೊಂಡಿದ್ದರೆ, ಅಥವಾ
ಎತ್ತಿನ ಹಿಂದೆಯಾದರೂ ಓಡಿದ್ದರೆ, ಏನಾದರೂ ಪ್ರಯೋಜನವಾಗುತ್ತಿತ್ತೋ
ಏನೋ. ಜೀವಮಾನವೆಲ್ಲ ದೇಹಶ್ರಮವನ್ನು ಮಾರಿಯೆ ಬದುಕಿದ ಆ ಜೀವಕ್ಕೆ
ಈ ಮಾರಾಟವೇನೂ ಹೊಸದಲ್ಲ. ಆದರೆ ಅವನ ಕಣ್ಣಿಗೆ ಕಾಣದೇ ಇದ್ದ,
ರಹಸ್ಯಮಯವಾದ, ಆರೋಗ್ಯಮ್ಮನ ಹೆಸರಿನ ಜತೆಯಲ್ಲೇ ಬರೆಯಲ್ಪಟ್ಟಿದ್ದ,
ತನ್ನ ಹಕ್ಕೆಂದು ಹೇಳಲಾದ ಒಂದು ಓಟನ್ನು ಮಾರಲು ಅವನ ಮನಸ್ಸು
ಒಡಂಬಡಲಿಲ್ಲ.

****

ಮಧ್ಯಾಹ್ನ ಬಂತು. ಮಗಳು ಆಗಲೇ ಹೊರಟು ಹೋಗಿದ್ದಳು.
ಹೊಟ್ಟೆ ಚುರುಕೆನ್ನುತ್ತಿತ್ತು. ಇದ್ದ ಬಿಡಿಕಾಸುಗಳನ್ನು ಜೇಬಿಗೆ ಸೇರಿಸಿ ತಿರುಕಣ್ಣ
ಹೊರಹೊರಡಲು ತೀರ್ಮಾನಿಸಿದ. ಆದರೆ ಮರುಕ್ಷಣದಲ್ಲೆ ಆತನಿಗೆ ಭಯ
ವಾಯಿತು. ಆ ಉಮೇದುವಾರರೆಲ್ಲಾದರೂ ತನ್ನನ್ನು ಕಂಡುಹಿಡಿದರೆ?....
ಯೋಚಿಸಿದಂತೆಲ್ಲ ಆ ಭಯ ಹೆಚ್ಚಿತು.

ಅಂತೂ ಹೊಟ್ಟೆ ಕೇಳದೆ ಇದ್ದಾಗ ತಿರುಕಣ್ಣ ಮೆಲ್ಲನೆ ಬೀದಿಗೆ ನುಸುಳಿ
ಆರು ಕಾಸಿನ ಕಡಲೆಕಾಯಿಯನ್ನೂ ಮೂರು ಕಾಸಿನ ಬೀಡಿಯನ್ನೂ ತಂದ.
ಕಡಲೆಕಾಯಿ ಭೋಜನವಾದ ಮೇಲೆ ಮತ್ತೊಮ್ಮೆ ನುಸುಳಿ ಹೋಗಿ ಬೀದಿ ೪೩

ತಿರುಕಣ್ಣನ ಮತದಾನ

ನಳ್ಳಿಯ ನೀರು ಕುಡಿದು ಬಂದ. ಬೀಡಿ ಹಚ್ಚಿ,ಹೊಗೆಯಾಡುತ್ತಿದುದನ್ನು ಮೋಜಿನಿಂದ ನೋಡಿದ.

ಈಗ ಓಟು ಕೊಡುವ ಉತ್ಸವ ನಡೆಯುತ್ತಿರಬಹುದೇನೋ, ಅದನ್ನು ನೋಡುವ ಕುತೂಹಲವುಂಟಾಯಿತು ಕ್ಷಣ ಕಾಲ. ಅದು ಹೇಗಿರುವುದೋ ಏನೋ! ಆದರೂ ಹೆದರಿಕೆ! ಯಜ್ಞದ ಪಶುವಾಗಿ ತನ್ನನ್ನೂ ಹಿಡಿದೊಯ್ದರೆ?

ತಿರುಕಣ್ಣ ಸ್ವಲ್ಪ ಹೊತ್ತು ಮಲಗಿಕೊಂಡ. ನಿದ್ದೆ ಬರಲಿಲ್ಲ. ಎಳೆಂಟು ವರ್ಷಗಳ ಹುಡುಗನಿದ್ದಾಗಲೇ ಅವನು ದುಡಿತ ಆರಂಭಿಸಿದ್ದ. ಅಂತೂ ನಾಲ್ವತ್ತು ವರ್ಷಗಳ ದುಡಿಮೆ ಮುಗಿದ ಹಾಗಾಗಿತ್ತು....ಆ ವರ್ಷಗಳು....

ತಿರುಕಣ್ಣನಿಗೆ ಏನೇನೋ ನೆನಪಾಗತೊಡಗಿತು....

ಆತ ಎದು ಕುಳಿತು, ಮನಸ್ಸನ್ನು ಹಿಂಡುವ ಈ ಯೋಚನೆಗಳನ್ನೆಲ್ಲ ಬದಿಗೆ ತಳ್ಳುವ ಹಾಗೆ ಒಂದಿಷ್ಟು ಹೆಂಡ ಗಂಟಲೊಳಗೆ ಇಳಿಬಿಡುವುದು ಸಾಧ್ಯವಾಗಿದ್ದರೆ! ಯಾರಾದರೂ ನಾಲ್ಕು ಪುಡಿಕಾಸು ದಾನ ಮಾಡಿದರೆ? ಯಾವನಾದರೂ ಸ್ನೇಹಿತ ಕಂಡು ಬಂದರೆ?

ಲೋಹ ಚುಂಬಕದ ಹಾಗೆ ಪಡಖಾನೆ ಅವನನ್ನು ಸೆಳೆಯುತ್ತಿತ್ತು.

ಸಂಜೆಯ ಹೊತ್ತು ತಿರುಕಣ್ಣ ಬೀದಿಗಿಳಿದ ಕುರುಚಲು ಗಡ್ಡದ, ಕೆದರಿದ ಕೂದಲು, ಮಾಸಿದ ಹರಕು ಬಟ್ಟೆಯ, ಕೊಳಕು ದೇಹದ, ತಿರುಕಣ್ಣ ಮೆಲ್ಲನೆ ನಡೆದು ಹೋದ.

ಅಲ್ಲೇ... ಆ ಸ್ಕೂಲಿನ‍ಲ್ಲೆ...!

ಓ! ಅವನಿಗೆ ಗೊತ್ತೇ ಇರಲಿಲ್ಲ!

ಪ್ರಮಾದ ನಡೆದು ಬಿಟ್ಟಿತ್ತು.

ಮೊದಲ ದಿನ ಕಾರಿನಲ್ಲಿ ಬಂದವರಲ್ಲಿ ಒಬ್ಬ ತಿರುಕಣ್ಣನ ಗುರುತುಹಿಡಿದ.

“ ಓ! ಮಿಸ್ಟರ್ ತಿರುಕಣ್ಣ...”

“ತಿರುಕಣ್ಣ? ಎಲ್ಲಿ? ಬಂದರೆ?"

“ಇನ್ನು ಎರಡೇ ನಿಮಿಷ ಇದೆ.

"ಬನ್ನಿ, ಹೀಗೆ ಬನ್ನಿ..."

"ಆಲದಮರ!"

“ಎತ್ತು!”

"ಗುಡಿಸಲು!"

"ಕಾರು"

“ಅಯ್ಯಾ, ದೀಪ!" 44

ನಿರಂಜನ: ಕೆಲವು ಸಣ್ಣ ಕಥೆಗಳು

"ಬುಡ್ದಿ"

నాలు ಜನ ತಿರುಕಣ್ಣನನ್ನು ಪಿಸುನುಡಿಯುತ್ತ ಸುತ್ತುವರಿದರು. ಉಳಿದವರು ಹಿಂದೂ ಮುಂದೂ ಓಡಾಡಿದವರು. ಪ್ರತಿಭಟಿಸುವ ಶಕ್ತಿ ಇರಲಿಲ್ಲ ತಿರುಕಣ್ಣನಿಗೆ.ಅವನ ತೆರೆದ ತುಟಿಗಳು ನಗುತ್ತಲೇ ಇದುವು.

ಒಬ್ಬ ಪೋಲೀಸಿನವನು ಬಂದು ತಿರುಕಣ್ಣನನ್ನು ಕೆಂಗಣ್ಣಿನಿಂದ ನೋಡಿದ.

“ಏನಾರ್? ಗಲಾಟೆ ಮಾಡ್ತಿದಾನಾ? ಇಲ್ಕೊಡಿ....... ಲಾಕಪ್ಪಿಗೆ ಸೇರಿಸ್ತೀನಿ."

ತಿರುಕಣ್ಣನ ಮುಖ ಬಿಳಿಚಿಕೊಂಡಿತು. ಆದರೆ ಓಟಿನವರು ಪೋಲೀಸಿನವರನ್ನು ದಿಗ್ಭ್ರಮೆಗೊಳಿಸಿದರು. "ಇನ್ನೊಂದೇ ನಿಮಿಶ ಉಳಿದಿರೋದು. ಹೀಗೆ ಬನ್ನಿ.." "೯ಎ ೦೦೬೮೩ ತಿರುಕಣ್ಣನ್! ೯ಎ ೦೦೬೮೪ ಹೆಂಡತಿ ಆರೊಗ್ಯಮ್ಮ ಸತ್ಹೋಗಿದಾಳೆ."


ತಿರುಕಣ್ಣನಿಗೆ ಬವಳಿ ಬಂತು. ಕೈಕಾಲುಗಳು ಕುಸಿದು ಬೀಳುವ ಹಾಗಾಯಿತು.

ಅಷ್ಟರಲ್ಲೇ-ಗಂಟೆ ಬಾರಿಸಿದರು.

"ಅನ್ಯಾಯವಾಗಿ ನಮ್ಮ ಒಂದು ಓಟು, ತಿರುಕಣ್ಣನ ಓಟು ವ್ಯರ್ಥವಾಯಿತಲ್ಲ."

“ಅನ್ಯಾಯ! ಅನ್ಯಾಯ!”

ಚೀತರಿಸಿಕೊಂಡು ತಿರುಕಣ್ಣ ಹೇಳಿದ:

“ಓಗ್ಲೇಳಿ..ಅನಾಯ ಏನ್ಬಂತು?” 

ದೊಡ್ಡ ಮನುಷ್ಯರೊಬ್ಬರು ರೇಗಿಕೊಂಡು ಕೂಗಿದರು:

“ನಿನಗೇನು ಗೊತ್ತೊ ಮುಠಾಳ? ಒಂದು ಓಟಿನ ಬೆಲೆ ನಿನಗೇನು ಗೊತ್ತು?”

ಇನ್ನೊಬ್ನರು ಬಂದು ಕೇಳಿದರು:

“ತಿರುಕಣ್ಣನ್ ಓಟು ಪೋಲು ಮಾಡಿದರೆ?

ಯಾರೋ ಉತ್ತರ ಕೊಟ್ಟರು:

"ಇಲ್ಲ, ತಿರುಕನ್ಣ ಇ ಸಾರಿ ಓಟು 'ಪೋಲು' ಮಾಡಲಿಲ್ಲ.

45

ಒಂದೇ ನಾಣ್ಯದ ಎರಡು ಮೈ

ರಾತ್ರಿಯ ಹೊತ್ತು ಬೆಂಗಳೂರು ಬಿಟ್ಟ ನಾವು ಹುಬ್ಬಳ್ಳಿ ತಲುಪಿದಾಗ
ಮಧ್ಯಾಹ್ನವಾಗಿತ್ತು. ಇಡಿಯ ಕಂಪಾರ್ಟಮೆಂಟಿನಲ್ಲಿ ಇದ್ದವರು ನಾಲ್ವೇ ಜನ.
ಪ್ರತಿಯೊಬ್ಬರೂ ಕಾಲು ಚಾಚಿ ಹೊರಳಾಡುವಷ್ಟು ಜಾಗ. ಸುಖ ಪ್ರಯಾಣವೇ
ಎನ್ನಬೇಕು. ರಾತ್ರಿಯೆಲ್ಲ ರೈಲುಗಾಡಿಯ ಸದ್ದೇ ನಮ್ಮ ನಿದ್ದೆಗೆ ಜೋಗುಳ
ವಾಯಿತು. ಬೆಳಗಾದ ಬಳಿಕ ಹರಿಹರದಲ್ಲಿ ಕಾಫಿ ಕುಡಿದು, ತುಂಗಭದ್ರೆಯನ್ನು
ದಾಟಿ, ಮತ್ತೂ ಉತ್ತರಕ್ಕೆ ಮೈ ಚಾಚಿದ್ದ ಕನ್ನಡ ಭೂಮಿಯ ವಿಸ್ತಾರವನ್ನು
ದಿಟ್ಟಿಸುತ್ತ ನಾವು ಸಾಗಿದೆವು.

ನಾವು ನಾಲ್ಕು ಜನ ಎಂದರೆ, ನನ್ನ ಪರಮ ಸ್ನೇಹಿತರು ಮೂವರು
ಮತ್ತು ನಾನು. ಆ ಮೂವರು ಯಾರು ಎನ್ನಲೆ? ಒಬ್ಬ ಪೋಲೀಸ್ ಅಧಿಕಾರಿ
ಮತ್ತು ಇಬ್ಬರು ಪೊಲೀಸರು. ಜತೆಯಲ್ಲಿದ್ದ ನಾನು ಅವರ ಕೈದಿ!

ಹುಬ್ಬಳ್ಳಿಯ ನಿಲ್ದಾಣದಲ್ಲಿ ಹತ್ತು ಜನ ಸಶಸ್ತ್ರ ಪೊಲೀಸರು ಗೌರವ
ರಕ್ಷೆ ಸಲ್ಲಿಸಿದರು-ಪೋಲೀಸ್ ಅಧಿಕಾರಿಗೆ ಮತ್ತು ನನಗೆ ಅವರು ಆಗ ತೊಟ್ಟ
ದ್ದುದು ಗಾಂಭೀರ್ಯದ ಮುಖವಾಡ. ಅದರ ಹಿಂದೆ ಕುತೂಹಲದ, ವಿಸ್ಮಯದ,
ನಿರಾಸೆಯ ಭಾವಗಳನ್ನು ಕಾಣುವುದು ಕಷ್ಟವಾಗಿರಲಿಲ್ಲ. ಮೂರು ವರ್ಷಗಳ
ಕಾಲ ಕಾದು, ನೀರಿನಂತೆ ಹಣ ವೆಚ್ಚ ಮಾಡಿ, ಕೊನೆಗೂ ಸಿಕ್ಕಿ ಬಿದ್ದ ಆರೋಪಿ
ಇಷ್ಟೇನೇ_ಎನಿಸಿರಬೇಕು ಅವರಿಗೆ.

ಕೈದಿಗಳನ್ನೊಯ್ಯುವ ಕರಿಯ ಮೋಟಾರು ಗಾಡಿ, ನೂರು ಮೈಲಿಗಳಾ
ಚೆಯ ಸಮುದ್ರ ತೀರದಿಂದ ಬಂದು ಕಾದಿತ್ತು-ನಮಗಾಗಿ.

ಹುಬ್ಬಳ್ಳಿ ಮಾರ್ಗವಾಗಿ ಗೋಕರ್ಣಕ್ಕೆ ಎಂದಾದರೂ ನೀವು ಹೋಗಿದೀ
ರೇನು? ಆ ದಾರಿಯಲ್ಲಿ ಬಹಳ ದೂರ ಸಾಗಿ ಉತ್ತರಕ್ಕೆ ತಿರುಗಿದರೆ ಕಾರವಾರ
ಸಿಗುತ್ತದೆ. ಕೆಲವು ವರ್ಷಗಳ ಅನಂತರ ಒದಗಿ ಬಂದಿದ್ದ ಪ್ರಯಾಣ. ಅದೂ
ಸರಕಾರದ ಅತಿಥಿಯಾಗಿ! ವಾಸ್ತವದಇ ರುವಿಕೆಯಲ್ಲಿ ನಾನು ಸೆರೆಯಾಳು; ಆದರೆ
ಕಲ್ಪನೆಯ ಸೃಷ್ಟಿಯಲ್ಲಿ, ಕೆಂಪು ಮಣ್ಣಿನ ಸುಡು ಭೂಮಿಯಿಂದ ಕಡಲತಡಿಗೆ
46
ನಿರಂಜನ: ಕೆಲವು ಸಣ್ಣ ಕಥೆಗಳು

ಧಾವಿಸುತ್ತಿದ್ದ ಸ್ವೇಚ್ಛಾವಿಹಾರಿ, ಕೋಳ ಕೈಯನ್ನು ಕಟ್ಟಿತ್ತೇ ಹೊರತು
ಹೃದಯವನ್ನು ಬಿಗಿದಿತ್ತೆ? ಮೆದುಳಿಗೆ ಬಂಧನ ಉಂಟೆ?

ರಣಗುಡುತ್ತಿದ್ದ ಬಿಸಿಲು. ಬೆವರುತ್ತ-ಒಣಗುತ್ತ, ಬೆವರುತ್ತ-ಒಣಗುತ್ತ,
ಮುದುಡಿದ್ದ ಮಾನವರು. ಓಡುತ್ತಿದ್ದ ಕರಿಯ ವಾಹನ ಎಬ್ಬಿಸುತ್ತಿದ್ದುದು
ಧೂಳಿನ ಮೋಡವನ್ನು. ಎರಡು ಬದಿಗಳಲ್ಲೂ ಬಿದಿರು ಮೇಳೆ. ಬೀದಿಯು
ದ್ದಕ್ಕೂ ಅವುಗಳ ಕಮಾನು. ಅಲ್ಲಲ್ಲಿ ಬಿದಿರ ರೆಂಬೆಗಳ ತುಂಟತನ ಬೇರೆ. ಇಳಿ
ಜಾರು ಹಾದಿಯಲ್ಲಿ ಮೋಟಾರು ಸಾಗುತ್ತಿದ್ದರೆ, ಸರ್‍ರನೆ ಕೆಳಕ್ಕೆ ಸರಿದು ವಾಹ
ನದ ಮೈ ಮುಟ್ಟಿ ಮತ್ತೆ ಚಂಗನೆ ಮೇಲಕ್ಕೇರುವ ಚಪಲ. ಬಿದಿರುಗಳಾಚೆ
ಬರಿಯ ಗುಡ್ಡ. ಗುಡ್ಡಗಳನ್ನು ದಾಟಿ ಮರಗಳು, ದಟ್ಟನೆಯ ಕಾಡು. ಆಕಾಶ
ವನ್ನು ಮೋಡ ದಟ್ಟಿಸಿತೇನೋ ಎನ್ನುವ ಹಾಗೆ ಒಮ್ಮೆಲೆ ಕವಿಯುತ್ತಿದ್ದ
ಕಾಡಿನ ಕತ್ತಲು. ಮರುಕ್ಷಣದಲ್ಲೇ,ಯಮಗಾತ್ರದ ಕೊಂಬೆಗಳ ಮೇಲೆ ಕುಳಿತು
ನಗುವ ಸೂರ್ಯ. ಅಲ್ಲಲ್ಲಿ ಸುಟ್ಟು ಬೂದಿಯಾದ, ಅರೆಸುಟ್ಟು ಕರಿಯಾದ
ಮರ ಗಿಡಗಳು, ಉರಿಯುತ್ತ, ಹೊಗೆಯಾಡುತ್ತ ಉಳಿದ ಮರದ ಕೊರಡು.
ವನದೇವ ಅಲ್ಲಿ ಅಡುಗೆ ಬೇಯಿಸಿ ಉಂಡಿದ್ದನೆಂಬುದಕ್ಕೆ ಅದು ಕುರುಹು,
ಮತ್ತೆ ಅಲ್ಲಲ್ಲಿ ಜುಳು ಜುಳು ಹರಿಯುವ ತಿರುತೊರೆ-ಉಪನದಿ; ಚಲಿಸದೆ ನಿಂತ
ಕಪ್ಪು ನೀರಿನ ಕೆರೆ. ಕ್ಷಣವೂ ನಿಲ್ಲದೇ ಹೊರಟೇ ಹೋಗುವ ಜನರನ್ನು ಕಂಡು
ಅಣಕಿಸುತ್ತಿದ್ದ ಕೋತಿಗಳು; ಕರಿ ಮುಸುಡಿನ ಕೆಂಪು ಮುಸುಡಿನ 'ಮಂಗ್ಯಾ.'
ಆಗೊಮ್ಮೆ ಈಗೊಮ್ಮೆ ಹೆಬ್ಬಾವು ಬೀದಿ ದಾಟಿತ್ತೆಂಬುದಕ್ಕೆ ಸಾಕ್ಷ್ಯವಾಗಿ ಉಳಿ
ದಿದ್ದ ಗುರುತು, ಹಾದಿಯ ಇಳಕಲು ನೇರವಾದುದಲ್ಲ; ಸುರುಳಿಯಾದ ಹಾವಿನ
ಹಾಗೆ. ತಿರುತಿರುಗಿ ಹೊರಟಲ್ಲಿಗೇ ಬರುತ್ತಿರುವವೇನೋ ಎಂಬ ಭ್ರಮೆ ಹುಟ್ಟಿ
ಸುವಂತೆ. ಎದುರಿನಿಂದ ಮೋಟಾರು ಬಂದಾಗಲಂತೂ ಧೂಳಿನ ಬೆಟ್ಟ ಕರಗಿ
ನೆಲಕ್ಕಿಳಿಯುವ ತನಕ ಒಂದು ಹೆಜ್ಜೆ ದೂರವೂ ಕಾಣಿಸದಂತಹ ಪರಿಸ್ಥಿತಿ.
ರೊಯೋ ಎನ್ನುವ ಬಸ್ಸಿನ ಗೀತಕ್ಕೆ ಮಾರುಹೋಗಿ ಕುಳಿತವರಿಗೆ ತೂಕಡಿಕೆ-
ಮಂಪರು-ನಿದ್ದೆ. ಪೋಲೀಸ್ ಅಧಿಕಾರಿಯ ಭುಜಕ್ಕೆ ತಲೆಯೊರಗಿಸುವ ಕೈದಿ.
ಕೈದಿಯನ್ನು ಮರೆತು ನಿದ್ದೆ ಹೋಗುವ ಅಧಿಕಾರಿ... ಈ ಬೇಗೆಯಲ್ಲಿ ಆಗಾಗ್ಗೆ
ಸಣ್ಣನೆ ಕದ್ದು ಬೀಸಿ ಕಚಗುಳಿ ಇಟ್ಟು ಕಣ್ಮರೆಯಾಗುತ್ತಿದ್ದ ತಂಗಾಳಿ.

ನಾವು ಅಂಕೋಲ ತಲುಪಿದಾಗ ಕತ್ತಲಾಗಿತ್ತು. ಅಲ್ಲಿಂದ ಕಡಲಿನುದ್ದಕ್ಕೂ
ಒಂದು ಗಂಟೆಯ ಹಾದಿ ಕಾರವಾರಕ್ಕೆ. ನಮ್ಮ ವಾಹನ-ಅಂದರೆ ಸರಕಾರಕ್ಕೆ
ಸೇರಿದ ಪೋಲೀಸರ ವಾಹನ-ಬೆಳಕಿನ ಎರಡು ಕಣ್ಣುಗಳಿಂದ ಹಾದಿ ನೋಡುತ್ತ
ಸಾಗಿತು.ಹುಣ್ಣಿಮೆಯನ್ನು ಸಮೀಪಿಸುತ್ತಿದ್ದ ಚಂದಿರ ಆಗಲೇ ಹಾಲು ಚೆಲ್ಲಿದ್ದ. ಕಡಲ ಮೇಲಿನಿಂದ ತೆರೆಗಾಳಿ ಬೀಸುತ್ತಿತ್ತು, ದೂರದಿಂದ ಕೇಳಿಸುತ್ತಿದ್ದ ತೆರೆಗಳ ಸದ್ದು...ದಾರಿ, ತೀರದ ಸಮಿಪಕ್ಕೆ ಬಂದಾಗಲಂತೂ ಭೊರ್ಗರೆವ ಮೊರೆತ... ಒಣ ಮೀನಿನ, ಹಸಿ ಮೀನಿನ ವಾಸನೆ...

ಹಿಂದೊಮ್ಮೆ ನಾನು ಕಂಡಿದ್ದ ಪ್ರದೇಶ. ಆಗಿನಂತೆಯೇ ಈಗಲೂ. ಪಶ್ಚಿಮ ಸಮುದ್ರದ ತೆರೆಗಳ ತೆಕ್ಕೆಗಳಲ್ಲೇ ಮಲಗಿರುವ ಊರು ಕಾರವಾರ... ಎತ್ತರಕ್ಕೆ ಬೆಳೆದ ಗಾಳಿ ಮರಗಳು- ಸರುವೆ ಮರಗಳು. ಒಟ್ಟಿಗಿದ್ದರೂ ಒಂಟಿ ಜೀವ, ಪ್ರತಿಯೊಂದು ಮರವೂ.. ಅವುಗಳ ಸುಯ್ಲಾಟವೇ ఒంದು ಸಂಗೀತ. ಕಡಲ ದಂಡೆ, ಮರಗಳ ರಾಶಿ, ನುಣ್ಣನೆಯ ಮರಗಳು, ದೊರಗು ಮರಳು, ಬಿಳಿಯ ಚಿಪ್ಪುಗಳು, ಬಣ್ಣ ಬಣ್ಣದ ಚಿಪ್ಪುಗಳು. ಒಂದು ಫರ್ಲಾಂಗಿನಾಚೆ ನಡುಗಡ್ಡೆಯ ಮೇಲೆ ಇದ್ದ ದೀಪಸ್ತಂಭ, Light House. ತಿರುತಿರುಗುತ್ತ ತೀರಕ್ಕೆ ಪ್ರತಿ ನಿಮಿಷವೂ ಅದು ಹಾಯಿಸುತ್ತಿದ್ದ ಪ್ರಕಾಶ, ತಿಂಗಳ ಬೆಳಕಿನ ಮಬ್ಬಿನಲ್ಲಿ ಆಕಾಶವನ್ನೇ ಅಪ್ಪಿಕೊಂಡಿದ್ದ ಕಡಲು! ಎಂತಹ ಸೊಬಗು! ఒంಟಿ ಯಾಗಿ ಯಾರೂ ಇಲ್ಲಿಗೆ ಬರಬಾರದು-ಬರಬಾರದು. ತೆರೆಗಳ ಡಬಾಲ್-ಸುಯ್, ಡಬಾಲ್-ಸುಯ್, ಜುಳು ಜುಳು ಜುಳು, ನರನ ಕಲೆಯರಿಯದ ಕೈ, ಮುಟ್ಟಿ ಹೊಲಸು ಮಾಡದೆ ಉಳಿದಿರುವ ರೂಪರಾಶಿ...

“ಸ್ಟೇಷನ್ ಮುಂದೆ నిಲ್ಸು!"

ಸಮಾಧಿಯಿಂದ ಎಚ್ಚತ್ತು ನಾನು ಪಕ್ಕಕ್ಕೆ ತಿರುಗಿ ನೋಡಿದೆ. ಆ ಗಡಸು ಧ್ವನಿಯಿಂದ ಆಜ್ಞೆ ಇತ್ತವನು ಅಧಿಕಾರಿ.

ವಾಹನ ನಿಂತಿತು. ಕತ್ತಲು ವಿದ್ಯುದ್ದೀಪವಿಲ್ಲ. ಮಂದವಾದ ಲಾಟೀನು ಬೆಳಕು.

“ಇವರ್ನ ಲಾಕಪ್ಪಿಗೆ ಸೇರ್ಸು!” । ಅದು ದಫೇದಾರನಿಗೆ ಆಜ್ಞೆ ಬಳಿಕ ನನ್ನ ಕಡೆ ತಿರುಗಿ--

“ನಾಳೆ ಸಿಗ್ತೀನಿ ಮಿಸ್ಟರ್ ಇವರೆ..

ಮರಳ ರಾಶಿಯಿರುವ ಸಮುದ್ರ ದಂಡೆಗಲ್ಲ, ಸರಳ ಬಾಗಿಲಾಚೆಗಿನ ಲಾಕಪ್ಪಿಗೆ! ಕಿರ್ರೆಂದಿತು ಬಾಗಿಲು.

"ಎಲ್ಲಿ, ಸರೊಳ್ಳಿ! ಇನ್ನೊಬ್ರಿಗೆ ಜಾಗ ಮಾಡಿ!"

ತುಂಬಿದ್ದ ಲಾಕಪ್ಪು, ಎಚ್ಚರಗೊಂಡ ಕೆಲವರು ಎದ್ದು ಕುಳಿತರು, ಲಾಟಿನಿನ ಬೆಳಕಿಗೆ ಆ ಪಿಳಿ ಪಿಳಿ ಕಣ್ಣುಗಳನ್ನು ಕಂಡೆ. ಗೊರಕೆ ನಿಂತು ನಿದ್ರಾ ಭಂಗವಾಯಿತೆಂದು ಒಬ್ಬ ನರಳಾಡಿದ. ಇನ್ನೊಬ್ಬ ಸೊಳ್ಳೆಯನ್ನು ಕೊಲ್ಲಲೆಂದು ತನ್ನ ಕೆನ್ನೆಗೆ ತಾನೇ ಹೊಡೆದುಕೊಂಡ. ಬೇರೊಬ್ಬ ಕೈಗಳಿಗೆ ತುರಿಸುವ ಕೆಲಸ
48
ನಿರಂಜನ: ಕೆಲವು ಸಣ್ಣ ಕಥೆಗಳು

ಕೊಟ್ಟ. ಮೂಲೆಯಲ್ಲಿ ಕರಿದಾದೊಂದು ಪೀಪಾಯಿ ಇತ್ತು. ಮೀನಿನ, ಹೆಂಡದ
ವಾಸನೆ. ನನಗೆ ಉಸಿರುಕಟ್ಟಿತು.

“ಒಳಗ್ಹೋಗಿ!”

ಅಧಿಕಾರಿ ಬಹುವಚನದಿಂದ ಸಂಬೋಧಿಸಿದ್ದನೆಂದು, ಈತನೂ ಅಷ್ಟರ
ಮಟ್ಟಿನ ಗೌರವವನ್ನಿತ್ತ.

ಕಿರ್‍ರೆಂದು ಬಾಗಿಲು ಮುಚ್ಚಿತು. ಕೊಟಕ್ ಎಂದಿತು ಬಿಗಿದುಕೊಂಡ
ಬೀಗ. ದೀಪ ಮರೆಯಾಯಿತು. ಲಾಕಪ್ಪಿನೆದುರು ಮರದ ಪೀಠದ ಮೇಲೆ
ಬಂದೂಕುಧಾರಿಯಾದ ಪೋಲೀಸರವನು ಕಾವಲು ಕುಳಿತ. ಅಪಾಯಕಾರಿ
ಯಾದ ಕೈದಿಯನ್ನು ಅಷ್ಟು ದೂರದಿಂದ ತಂದಿದ್ದ ಇತರ ಪೋಲೀಸರು, ತಮ್ಮ
ಕೆಲಸ ಮುಗಿಯಿತೆಂದು ಲೈನುಗಳಿಗೆ ಹೊರಟರು.

ನನ್ನ ಚೀಲದಲ್ಲಿದ್ದುದು, ಹೊದ್ದುಕೊಳ್ಳಲೆಂದು ತಂದಿದ್ದ ಚಾದರ,
ಓದಲು ಪುಸ್ತಕಗಳು. ಆ ಚೀಲವನ್ನು ಕೈಲಿ ಹಿಡಿದೇ ಒಂದು ಕ್ಷಣ ದಿಗ್ಮೂಢ
ನಾಗಿ ಅಲ್ಲೇ ನಿಂತೆ. ಕತ್ತಲಲ್ಲೂ ಕಾಣಲು ಕಣ್ಣುಗಳು ಯತ್ನಿಸಿದುವು. ಕೂಡು
ದೊಡ್ಡಿಯಲ್ಲಿ ಮಲಗಿಕೊಂಡಿದ್ದ ಮಾನವ ಪ್ರಾಣಿಗಳು. ಬಗೆಬಗೆಯ ಗೊರಕೆಯ
ಸ್ವರಗಳು... ಯಾವುದೋ ಮೂಲೆಯಿಂದ ಮೂತ್ರದ ವಾಸನೆ ಬರುತ್ತಿತ್ತು....
ಗೋಡೆಯನ್ನು ಸಮೀಪಿಸಿ ಚಾದರವನ್ನು ಹಾಸಿದೆ. ಪುಸ್ತಕಗಳ ಚೀಲ ತಲೆ
ದಿಂಬಾಯಿತು. ಸೊಳ್ಳೆಗಳೆಲ್ಲ ಹೊಸಬನಾದ ನನ್ನ ಬಳಿಗೇ ನಾಲ್ಕೂ ಕಡೆಗಳಿಂದ
ಧಾವಿಸಿ ಬಂದು ನನ್ನ ಸುಖ ದುಃಖ ವಿಚಾರಿಸಿದುವು. ಲಜ್ಜೆಗೊಂಡು ನಾನು
ಅಂಗೈಗಳಿಂದ ಮುಖ ಮುಚ್ಚುವ ಹಾಗಾಯಿತು....

ತೆರೆಗಳ ಸದ್ದು ಕೇಳಿಸುತ್ತಿತ್ತು ಈಗಲೂ; ಸ್ಟೇಷನ್ನಿನ ಆವರಣದ
ಹೊರಗಿದ್ದ ಯಾವುದೋ ಮರದ ಮಾತಿನಮಲ್ಲಿ ಎಲೆಗಳ ಕಿಚಕಿಚ ರವ,
ದೂರದ ಬೀದಿಯಲ್ಲಿ ಗಡಗಡನೆ ಹಾದು ಹೋದ ಮುರುಕಲು ಮೋಟಾರು...
ಯೋಚನೆ ಅತ್ತಿತ್ತ ಸುತ್ತಾಡಿ ಆಯಾಸಗೊಂಡು ದೇಹದ ಚಾವಣಿಯೊಳಕ್ಕೆ
ಮರಳಿ ನುಸುಳಿತು.

ಮನುಷ್ಯ ಅಂತರ್ಮುಖಿಯಾಗುವುದು ಇಂತಹ ಘಳಿಗೆಯಲ್ಲೆ!

ನಿದ್ದೆ, ಬಹಳ ಹೊತ್ತು ಕಾಡಿಸಿದ ಬಳಿಕ ಶರಣು ಬಂತು.

ರಾತ್ರಿ ಕಳೆದು ಬೆಳಕು ಬೀದಿಯಿಂದ ತೂರಿ ಬರುತ್ತಿದ್ದ ಸೂರ್ಯ ಕಿರಣ
ಗಳು. ಒಬ್ಬೊಬ್ಬರಾಗಿ ನಿದ್ದೆ ಕಳೆದು ಏಳುತ್ತಿದ್ದ ಆ ಜನ... ಕೊಂಕಣಿ ಮಾತು-
ಕನ್ನಡ. ಕೊಳೆಯಾಗಿದ್ದ ಬಟ್ಟೆಬರೆ. ನನ್ನನ್ನು ಕುರಿತು ಕುತೂಹಲದ ದೃಷ್ಟಿ,
ಅಲ್ಲಿ ಪ್ರಾತರ್ವಿಧಿಯ ಪ್ರಶ್ನೆಯಿಲ್ಲ. ಮುಖ ತೊಳೆಯಲು ನೀರಿಲ್ಲ. ನೆಲವನ್ನು
ಒಂದೇ ನಾಣ್ಯದ ಎರಡು ಮೈ
49

ತಗಲಿದ ಅಂಗೈಯನ್ನು ಎತ್ತಿ ನೋಡಿದೆ. ಧೂಳು ಮೆತ್ತಿಕೊಂಡಿತ್ತು. ಚಾದರವೂ
ಕೆಂಪು, ಪ್ರವಾಸದಿಂದ ಕಂಗೆಟ್ಟಿದ್ದ ಬಿಳಿಯ ಪೋಷಾಕೂ ಕೆಂಪು. ನನ್ನ ಸ್ಥಿತಿ
ಕಂಡು ನನಗೇ ನಗು ಬಂತು.

ಅಲ್ಲಿದ್ದ ಕೈದಿಗಳಲ್ಲೊಬ್ಬ ಕೇಳಿದ:
“ಯಾವೂರು?”
ಆ ಯುವಕರಿಗೆಲ್ಲಾ ಆತನೆ ಹಿರಿಯನೆಂಬುದು ಸ್ಪಷ್ಟವಾಗಿತ್ತು.
ನಾನು ಧ್ವನಿಯಲ್ಲಿ ಆತ್ಮೀಯತೆಯನ್ನು ತುಂಬಲು ಯತ್ನಿಸುತ್ತ,
“ಮೈಸೂರು ಕಡೆ” ಎಂದೆ.
ಇನ್ನೊಂದು ಪ್ರಶ್ನೆ ಬಂತು:
“ಯಾವ ಕೇಸು?”
ಅದನ್ನು ತಿಳಿಯ ಹೇಳುವುದು ಸುಲಭವಾಗಿರಲಿಲ್ಲ. ಆದರೂ ಪ್ರಯತ್ನ
ಪಟ್ಟೆ. ಏನೋ ಬರೆದು ಸರಕಾರದ ಕೈದಿಯಾದೆನೆನ್ನುವುದನ್ನು ಅವರು ನಂಬು
ವುದು ಕಷ್ಟವಾಗಿತ್ತು.
"ಅಂತೂ ನೀವು ಸರಕಾರದ ವಿರುದ್ಧ ತಾನೆ?” ಎಂದು ಆತ ಕೇಳಿದ.
“ಹೌದು! ಹೌದು!”
“ಹಾಗಾದರೆ, ನಾವೂ ನೀವೂ ಸ್ನೇಹಿತರೇ!”
ಆ ಸ್ನೇಹಿತರು ತಮ್ಮ ಕತೆ ಹೇಳಿದರು.
ಪಾನನಿಷೇಧವಿದ್ದ ಕಾರವಾರ
ಪ್ರದೇಶಕ್ಕೆ ಗೋವಾದಿಂದ ವಿದೇಶೀ ಪಾನೀಯಗಳನ್ನು ಸಾಗಿಸುತ್ತಿದ್ದರೆಂದು ಆ
ಏಳು ಜನರನ್ನೂ ಹಿಡಿದಿದ್ದರಂತೆ.
ಅದು ಗೌರವದ ಕೆಲಸವೆನ್ನುವಂತೆ ಮುಖ್ಯಸ್ಥ ಹೇಳಿದ:
“ಇದೆಲ್ಲಾ ನಮಗೆ ಹೊಸತಲ್ಲ. ನಮ್ಮ ನಾಯಕರಿದ್ದಾರೆ. ಬಂದು
ಒಂದು ಮಾತು ಹೇಳಿದರೆ ಸಾಕು. ಕೇಸು ಬಿಟ್ಹೋಗ್ತದೆ. ಹಿಂದೆಯೂ ಎಷ್ಟೋ
ಸಲ...”
ಅವರ ನಾಯಕರ ಪ್ರತಾಪದ ಕಥೆ ಸ್ವಾರಸ್ಯಪೂರ್ಣವಾಗಿತ್ತು.
"ಅವರ ಹೆಸರೇನು?” ಎಂದು ನಾನು ಕೇಳಿದೆ.
“ನಾಯಕ್ ಅನ್ನೋದೆ ಅವರ ಹೆಸರು” ಎಂದ ಆತ...ಆದರೆ ಅವನ
ಕಣ್ಣಂಚಿನಲ್ಲಿ ತುಂಟತನದ ನಗೆಯನ್ನು ಕಂಡಂತಾಗಿ, ನನಗೆ ಬೇಸರವೆನಿಸಿತು.
ಪ್ರಭಾವಶಾಲಿಗಳಾದ ಸಮರ್ಥರ ಕಥೆ ಯಾರಿಗೆ ತಿಳಿಯದು? ಇವರ
ನಾಯಕನೂ ಅಂತಹ ವ್ಯಕ್ತಿಯಾಗಿರಬಹುದು ಎಂದುಕೊಂಡೆ ನಾನು. ಎತ್ತರದ

ದೇಹ, ಅಗಲವಾದ ಎದೆ, ನೀಳವಾದ ಬಾಹು... 7
50
ನಿರಂಜನ: ಕೆಲವು ಸಣ್ಣ ಕಥೆಗಳು

ಸ್ವಲ್ಪ ಹೊತ್ತಿನಲ್ಲಿ ಸರಪಳಿ ಹಾಕಿದ ಸೀಮೆ ನಾಯಿಯೊಡನೆ ಕುಳ್ಳಗಿನ,
ಮುದುಡಿದ ಎದೆಯ ವ್ಯಕ್ತಿಯೊಬ್ಬ ಬಂದ. ಎಣ್ಣೆ ನೀರು ಸೋ೦ಕಿಯೇ ಇಲ್ಲ
ವೇನೋ ಎನ್ನುವಂತಹ ಒರಟಾದ ತಲೆ ಕೂದಲು. ಪುಟ್ಟ ಮುಖದಲ್ಲಿ ಪುಟ್ಟ
ಬಾಯಿ. ನಾಲ್ಕಾರು ದಿನದಿಂದ ಬೆಳೆದಿದ್ದ ಕುರುಚಲು ಗಡ್ಡ. ಚಪ್ಪಲಿ
ಪಾಯಜಾಮ, ಶರಟು. ಯಾವುದೋ ದೊಡ್ಡವರ ಮನೆಯ ನಾಯಿಯನ್ನು
'ವಾಕಿಂಗ್' ಕರೆದೊಯ್ಯುತ್ತಿರುವ ಜವಾನ-ಎಂದು ಯಾರಾದರೂ ಭಾವಿಸುವ
ಹಾಗಿದ್ದ.

ಆದರೆ ಆತ ಬಂದೊಡನೆಯೇ ಲಾಕಪ್ಪಿನಲ್ಲಿದ್ದ ಏಳು ಜನರೂ ಎದ್ದು
ನಿಂತರು. ನೀರವತೆ, ವಿನಮ್ರತೆ, ಗೌರವ; ಆತ್ಮೀಯತೆಯ ಪಿಸುದನಿ. ಆತನೋ
ಮಿತಭಾಷಿ. ಚುಟುಕು ಪ್ರಶ್ನೆಗಳು-ಚುಟುಕು ನಿರ್ದೇಶ... ಪೋಲೀಸರೂ ಆತ
ನೆದುರು ಗೌರವದಿಂದ ಎದ್ದು ನಿಂತಿದ್ದರು. ಆತ ಯಾರಿರಬಹುದೆಂದು ಊಹಿಸು
ವುದು ನನಗೆ ಕಷ್ಟವಾಗಲಿಲ್ಲ. ಆ ನಾಯಕನನ್ನು ಕುರಿತು ನಾನು ಮಾಡಿದ್ದ
ಎಣಿಕೆ ತಪ್ಪಾಯಿತಲ್ಲಾ ಎಂದು ನಾಚುವಂತಾಯಿತು.

ಆತ ನನ್ನನ್ನೂ ಒಮ್ಮೆ ನೋಡಿದ. ಆದರೆ ವಿವರ ತಿಳಿದ ಬಳಿಕ 'ಹುಂ!'
ಎಂದನೇ ಹೊರತು, ನನ್ನ ವಿಷಯದಲ್ಲಿ ಆಸಕ್ತಿ ತೋರಲಿಲ್ಲ.
ಬಿಂದಿಗೆಯಲ್ಲಿ ನೀರು ಬಂತು. ಮೂತ್ರ ಶಂಕೆಗೆ ಕುಳಿತಿದ್ದ ಮೂಲೆಯಲ್ಲೆ
ಅವರು ಮುಖ ತೊಳೆದರು. ಹೋಟೆಲಿನಿಂದ ಹೇರಳವಾಗಿ ಬಂದ ತಿಂಡಿ ತಿಂದರು.
ಚಹಾ ಕುಡಿದರು. ಅವರ ಆಹ್ವಾನವನ್ನು ಸ್ವೀಕರಿಸಲೂ ಆಗದೆ, ನಿರಾಕರಿಸಲೂ
ಆಗದೆ, ಒಂದು ಕಪ್ ಚಹವನ್ನು ನಾನು ಕೈಗೆತ್ತಿಕೊಂಡೆ.
ಹೊರಟು ಹೋಗಿದ್ದ ನಾಯಕ ಬಿಸಿಲೇರಿದಾಗ ಮತ್ತೆ ಬಂದ. ಜಾಮೀ
ನಿನ ಮೇಲೆ ಅವರನ್ನೆಲ್ಲ ಬಿಡುಗಡೆ ಮಾಡಲು ಏರ್ಪಾಟಾಗಿತ್ತು
. ಲಾಕಪ್ಪಿನಲ್ಲಿ ಕರಿಯ ಪೀಪಾಯಿ ಮತ್ತು ನಾನೂ-ಇಬ್ಬರೇ ಉಳಿದೆವು.
ಆಗ ಹೊರಗೆ ಕಾವಲಿದ್ದ ಪೋಲೀಸರವನು ಹೇಳಿದ:
“ಈ ನಾಯಕನ ಪ್ರತಾಪ ಏನ್ಹೇಳ್ತೀರಾ ಸ್ವಾಮಿ? ಕಾನೂನು ಕಸಕ್ಕೆ
ಸಮ ಟೋನಿ ಅಂತ್ಲೂ ಆತನ್ನ ಕರೀತಾರೆ. ಫಿಲಿಪ್ ಅಂತೂ ಹೆಸರಿದೆ.
ಬೇರೆಯೂ ಏನೇನೋ ಹೆಸರು. ಸಾರಾಯಿ, ಗಡಿಯಾರ, ಪೆನ್ನು, ಬಂಗಾರ-
ಸ್ವಾಮಿ ಬಂಗಾರ-ಔಷಧಿ, ಅದೇನೇನೋ ಗೋವಾದಿಂದ ಈಚೆಗೆ
ಸಾಗಿಸ್ತಾನೆ, ಒಂದು ನೂರು ಜನರನ್ನ ಇಟ್ಕಂಡು ಸಾಕ್ತಾನೆ, ನಾಲ್ಕು
ದೋಣಿಗಳಿವೆ. ಒಂದು ಸ್ಟೀಮ್ ಲಾಂಚಿದೆ. ನೋಡೋಕೆ ನಮ್ಮ ಜನರ
ಹಾಗಿದಾನೆ. ಆದರೆ ಯಾವ ದೇಶದೋನೂಂತ ಹೇಳೋದೆ ಕಷ್ಟ. ಇವತ್ತು
ಇಲ್ಲಿರಾನೆ. ನಾಳೆ ಗೋವಾದಲ್ಲಿ, ನಾಡದ್ದು ಲೋಂಡಾದಲ್ಲಿ. ದೊಡ್ಡ ದೊಡ್ಡ ಅಧಿಕಾರಿಗಳು, ಸಾಹುಕಾರ್‍ರು ಎಲ್ರಿಗೂ ಬೇಕಾದವನೇ. ಏನ್ಹೇಳ್ತೀರಾ ಅವನ ದರ್ಬಾರು...! ಬಡ ಕನಿಷ್ಠ ಬಿಲ್ಲನಿಗೆ ನನಗ್ಯಾಕ್ಬೇಕು? ಮಾತ್ಸ ಹೇಳ್ದೆ ಅಷ್ಟೆ... ಯಾರಿಗೂ ಹೇಳ್ಬೇಡಿಪ್ಪ ಸದ್ಯಃ....ಹೂಂ... ನಿಮಗೆ ಯಾರೂ ಜಾವಿನು ನಿಲ್ಲೋದಿಲ್ವೊ?"

ಉತ್ತರ ಕೊಡಲಾಗದೆ ಮುಗುಳು ನಕ್ಕೆ ನಾನು...
.........................
ಇದು ಹಲವು ವರ್ಷಗಳ ಹಿಂದಿನ ಮಾತು.

ಪುನಃ ಮೊನ್ನೆಯೊಮ್ಮೆ ಕಾರವಾರಕ್ಕೆ ಹೋಗಿದ್ದೆ 'ಪರಮ ಸ್ಟೇಹಿತರಿಲ್ಲದೆ,? ನಾನೊಬ್ಬನೇ, ಸ್ವತಂತ್ರ ಪ್ರಜೆಯಾಗಿ. ಅದೇ ಹಾದಿ. ಅದೇ ಬಿದಿರು ಮೆಳೆಯ ಕಮಾನು ಉದ್ದಕ್ಕೂ. ದೂರದಿಂದ ನೀಲಿಯಾಗಿ, ಹತ್ತಿರ ಕಪ್ಪಾಗಿ, ತೋರುವ ಹೆಸಿರು ಗಿಡಮರಗಳ ದಟ್ಟಡವಿ. ಹಿಂದಿನ ಕಿರುತೊರೆ, ಉಪನದಿ, ಕೆರೆಗಳೇ.

ಸರಕಾರಿ ಸಾರಿಗೆಯ ಆ ದೊಡ್ಡ ವಾಹನದಲ್ಲಿ ಮಾತುಕತೆಯಾಗುತ್ತಿತ್ತು.

“ಹುಬ್ಬಳ್ಳಿ-ಕಾರವಾರ ರಸ್ತೆಗೆ ಡಾಮರು ಹಾಕ್ತಾರಂತ್ರಿ."

"ಯಾರೋ ಅಂದ್ರು-ರೈಲ್ವೆ ಹಾಕಿಸೋ ಯೋಜನೇನೂ ಅದೆ ಅಂತೆ."

ನಾಳೆಯ ಕನಸು. ಸಾಧ್ಯತೆಯ ಮಾತು. ರಾಷ್ಟ್ರ ಕಟ್ಟುವ ಯೋಚನೆ. ಯೋಜನೆಗಳ ಯೋಚನೆ. ಕ್ಷಣಕಾಲವಾದರೂ ಕಚಗುಳಿ ಇಡುತ್ತಿದ್ದ ತಣುಪು ಗಾಳಿಯಷ್ಟೆ ಹಿತಕರವಾದ ಮಾತು.

ಆದಕ್ಕೆ ಅದನ್ನು ಮೀರಿಸುವ ಹಾಗೆ ಆರಂಭವಾಯಿತೊಂದು ಸಂಭಾಷಣೆ- ಗೋವಾಕ್ಕೆ ಸಂಬಂಧಿಸಿ. ಇಬ್ಬರ ಮಾತಿಗೆ ಎಲ್ಲರೂ ಧ್ವನಿ ಕೂಡಿಸುವವರೇ. ಕಾತರ__ಉದ್ವೇಗ__ಶಂಕೆ__ಕನಿಕರ...

“ಸ್ವಾತಂತ್ರ್ಯದ ದಿನ ಹತ್ತು ಸಾವಿರ ಜನ ಹೋಗ್ತಾರಂತ್ರೀ."

“ಅವರು ಕರುಣೆ ಇಲ್ದೋರು ಕಣ್ರೀ. ನಾಗರಿಕ ಭಾಷೆ ಅವರಿಗೆ ಎಲ್ಲಿ ಅರ್ಥವಾದೀತು?”

“ಏನೇ ಹೇಳಿ ಗೋವಾ ಸ್ವತಂತ್ರವಾಗೋದು ಸುಲಭವಲ್ಲ."

“ಸುಲಭವೋ ಕಷ್ಟವೋ ನಮ್ಮ ಕರ್ತವ್ಯ ನಾವು ಮಾಡಬೇಕು..."

«ಒಂದಲ್ಲ ಒಂದು ದಿವ್ಸ ಗೋವಾ ಭಾರತಕ್ಕೆ ಖಂಡಿತ ಸೇರ್‍ಕೊಳ್ಳುತ್ತೆ. ಗ್ಯಾರಂಟ-ನೋಡ್ಕೊಳ್ಳಿ!"

"ವಾಹೆವ್ವಾ!"

ಮಾತು ನಿಜ. ಆದರೂ ಜೀವಂತ ರಾಷ್ಟ್ರದ ಉಸಿರಾಡುವ ಪ್ರಜೆಗಳು ಅಡುವ ಮಾತು. ಸಿದ್ಧಿ ಹೊಂದಿದ ಸುಸ್ನರವಲ್ಲದೆ ಹೋದರೂ ಸಾಕಷ್ಟು ಇಂಪಾದ ಧ್ವನಿಯೇ. ನಾವು ಸ್ವತಂತ್ರರೆನ್ನುವುದಕ್ಕೆ ಸಾಕ್ಷ್ಯವೀಯುವಂತಹ ಲೋಕ ಪ್ರಶ್ನೆ.

ನಿಲ್ದಾಣದಲ್ಲಿ ಕಾದಿದ್ದ ಕಾರವಾರದ ಬರೆಹಗಾರ ಗೆಳೆಯರೊಬ್ಬರೊಡನೆ ಅವರ ಮನೆಗೆ ಹೊರಟಿ. ಅಲ್ಲಿಯೇ ಪೋಲೀಸ್‌ ಸ್ಟೇಷನ್ನು ಜಡವಾಗಿ ನಿಂತಿತ್ತು. ನಾನು ಮರೆಯಲಾಗದ ಕಂಬಿಗಳು-ಲಾಕಪ್ಟು-ಒಳಗಿದ್ದ ಏಳುಜನ-ಪೀಪಾಯಿ-ನಾಯಕನ ಕಥೆ...

ಸಂಜೆ ಕಡಲ ತೀರದುದ್ದಕ್ಕೂ ನಾನೂ ಆ ಗೆಳೆಯರೂ ನಡೆದುಹೋದಿವು. ದೂರದಲ್ಲೊಂದು ಹಡಗು. ಅದೇ ಆಗ ಬೆಳಕು ಹಾಯಿಸತೊಡಗಿದ್ದ ದೀಪಸ್ತಂಭ. ಭೋರ್ಗರೆಯುತ್ತಿದ್ದ ಕಡಲು. ದಡ ಸೇರಿದೊಡನೆ ಬೆನ್ನು ತಿರುಗಿಸುತ್ತಿದ್ದ ಉತ್ತರಕುಮಾರ ತೆರೆಗಳು. ಡಬಾಲ್-ಸುಯ್‌, ಡಬಾಲ್‌-ಸುಯ್, ಜುಳು ಜುಳು ಜುಳು...

ಇಷ್ಟಿದ್ವರೂ ನಾವು ಆಡುತ್ತಿದ್ಹುದು ಗೋವಾದ ಮಾತು.

"ಹಾಯಾಗಿ ನಾಲ್ಕು ದಿನ ಇರೋಣ ಅಂತ ನೀವು ಬಂದರೆ ಇಲ್ಲಿ ಈ ಗದ್ದಲ" ಎಂದರು ಗೆಳೆಯರು.

ನಾನೆಂದೆ:

“ಹಾಗೇನಿಲ್ಲ. ನನ್ಮು ಜನ ಹೊಸ ಇತಿಹಾಸ ಬರೀತಿರುವಾಗ ಇಷ್ಟು ಹತ್ತಿರ ನಿಂತು ನಿರೀಕ್ಸಿಸೋದು ದೊಡ್ಡ ಅವಕಾಶವೇ."

ಅನರು ಹಿಂದಿನ ದಿನ ಕಾಳೀನದಿಯನ್ನು ದಾಟಿ ಸದಾಶಿವಗಡಕ್ಕೆ ಹೋಗಿದ್ವರಂತೆ. ಮಾಜಾಳಿ ಅಲ್ಲಿಗೆ ಬಲು ಸಮೀಪ. ಗೋವಾದ ಗಡಿ ಆ ಊರು.

“ಕಣ್ಣಾರೆ ಕಂಡೆ-ಅಬ್ಬ! ಒಂದೇ ಹೊಟ್ಟೇಲಿ ಹುಟ್ಟಿದೋರು ನಾವು ಅಂತ ಕೂಗ್ಳೊಂಡು ನಮ್ಮ ರಾಷ್ಟ್ರಧ್ವಜ ಹಿಡ್ಕೊಂಡು ಹೋಗ್ತಿದ್ರೆ, ಆ ಕಡೆಯಿಂದ ಎಂಥಾ ಹಿಂಸೆ ಕೊಡ್ತಿದ್ರೂಂತ! ಲಾಠಿ ಬೀಸಿ ಶರೀರ ನಬ್ಚು ಗುಜ್ಜು ಆಗೋ ಹಾಗೆ ಹೊಡಿಯೋದು. ನೆತ್ತಿ ಕೂದಲು ಕೀಳೋದು. ಮೀಸೆ ಸುಡೋದು. ಹಲ್ಲು ಮುರಿಯೋದು, ಹೊಲಸು ಮಾತು, ಹೊಲಸು ಬೈಗಳು. ಥೂ-ಥೂಥೂ-ನೆನೆಸ್ಕೊಂಡ್ರೆ ಮೈ ಉರಿಯುತ್ತೆ."

ಅಷ್ಟು ಹೇಳಿ, "ಹೂಂ' ಎಂದು ನಿಟ್ಟುಸಿರುಬಿಟ್ಟು, ಅವರು ಸುಮ್ಮನಾದರು.

ಇಬ್ಬರನ್ನೂ ಬೇಸರದ ಮಹಾ ಸಾಗರದಲ್ಲಿ ಅದ್ದಿತು ಆ ಮೌನ. ನಡೆದು ಸಾಕಾಗಿ ಮರಳದಿಣ್ಣೆಯ ಮೇಲೆ ಕುಳಿತೆವು. ಸವಿೂಪದಲ್ಲೆ ಎಳೆಯ ಹುಡುಗರು ಆಟನಾಡುತ್ತಿದ್ದರು. ಒದ್ದೆ ಮರಳನ್ನು ತಟ್ಟಿ ಕಟ್ಟುತ್ತಿದ್ದ ಗೂಡು ಮನೆಗಳು. ಬೇರೇನೂ ಮಾಡಲಾಗದಿದ್ದರೂ ಆ ಮನೆಗಳನ್ನು ಕಬಳಿಸಿ, ಮಕ್ಕಳನ್ನು ಹೆದರಿಸಿ, ಪಿಸಿ ಪಿಸಿ ಪಿಸಿ ಎಂದು ನಗುತ್ತ ಹಿಂತಿರುಗುತ್ತಿದ್ದ ತೆರೆಗಳು. ಪುನಃ ಮಕ್ಕಳ ಯತ್ನ. ಪುನಃ ಕಣ್ಣುಮುಚ್ಚಾಲೆ...

ಅಟ್ಟಹಾಸ ಮಾಡುತ್ತ, ಬಲು ದೂರದಿಂದಲೇ ಗರ್ಜಿಸುತ್ತ ತೆರೆಯೊಂದು ಬಂತು. ಆ ಸದ್ದನ್ನು ಭೇದಿಸಿಕೊಂಡು ಗಟ್ಟಿಯಾದ ಸ್ವರದಲ್ಲಿ ನನ್ನ ಸ್ನೇಹಿತರೆಂದರು:

“ಗುಂಡಾಗಳ್ನ ಬಾಡ್ಗೆಗೆ ನೇಮಿಸ್ಕೊಂಡಿದಾರೆ. ಪೋಲಿ ಅಲೆಯೋ ಜನಕೈಲ್ಲ, ಕಳ್ಳಕಾಕರಿಗೆಲ್ಲ, ಈಗ ಕೆಲಸ. ಏನ್ಸೇಳ್ತೀರಾ....?

ಮಾರನೆಯ ದಿನ ಸ್ನೇಹಿತರಿಗೆ ಬಿಡುವಿತ್ತು. ನದಿ ದಾಟಿ ಸುತ್ತಾಡಿ ಬರೋಣವೆಂದು ನಾವು ಹೊರಟಿವು.

“ಕೋಡಿಬಾಗದ ಈ ದಡದಲ್ಲಿ ದೋಣಿ ಇರಲಿಲ್ಲ. ಆಚೆಯ ದಡದಿಂದ ಅದೇ ತಾನೆ ಅದು ಹೊರಡುತ್ತಿತ್ತು.”

ನಮ್ಮ ಸಮೀಪದಲ್ಲೆ ಹತ್ತು ಜನ ಸಶಸ್ತ್ರ ಪೋಲೀಸರು ದಡದ ರಕ್ಷಣೆಗೆ ನಿಂತಿದ್ದರು.

“ಇವತ್ತು ಸತ್ಯಾಗ್ರಹ ಇದೆಯೇನಪ್ಪಾ?” ಎಂದರು ನನ್ನ ಸ್ನೇಹಿತರು. 'ಹೂಂ ಸ್ವಾಮೀ, ಮಧ್ಯ್ಯಾಹ್ನ ಒಂದು ತಂಡ ಹೊರಡುತ್ತಂತೆ.'

ಆ ಕ್ಷಣವೇ ಅವರಲ್ಲೊಬ್ಬ ಪೋಲೀಸಿನನನು ನನಗೆ ಸಲಾಂ ಮಾಡಿದ. ಬಡಕಲು ಮುಖದ ಮೇಲಿನ ನಿರ್ದುಷ್ಟವಾದ ನಗೆ. ಆತನೇ-ವರ್ಷಗಳ ಹಿಂದೆ ಬಂದೂಕು ಹಿಡಿದು ನಾವಿದ್ದ ಲಾಕಪ್ಟಿನೆದುರು ಕಾವಲು ಕುಳಿತಿದ್ದ ವ್ಯಕ್ತಿ. ಅನಂತರವೂ ವಿಚಾರಣೆಗೆಂದು ಕಾರವಾರಕ್ಕೆ ಬರುತ್ತಿದ್ದಾಗಲೆಲ್ಲ ಅವನನ್ನು ಕಂಡಿದ್ದೆ. ಆತ ಕೇಳಿದ:

“ಆರೋಗ್ಯವಾಗಿದೀರಾ ಸ್ವಾಮಿ?”

“ಇಷ್ಟರ ಮಟ್ಟಗಿದೀನಪ್ಪ-ನೀವೆಲ್ಲಾ ಜೆನ್ನಾಗಿದ್ದೀರೋ?"

ಆತ ಪುನಃ ಹಲ್ಲುಕಿರಿದ.

ದೋಣಿ ಇನ್ನೂ ಎಷ್ಟೋ ದೂರದಲ್ಲಿತ್ತೆಂದು ಆ ಪೋಲೀಸನೊಡನೆ ನಾನು ಮಾತನಾಡುತ್ತ ನಿಂತೆ.

ಗಂಭೀರ ಧ್ವನಿಯಲ್ಲಿ ಪ್ರತಿಯೊಂದು ಮಾತನ್ನೂ ತೂಗಿ ತೂಗಿ ಆತನೆಂದ:

“ಯುದ್ಧ ಶುರುವಾದರೂ ಆಗ್ಬಹುದು."

ನನಗೆ ನಗು ಬಂತು. ತನ್ನ ಮಾತಿಗೆ ನಾನು ಬೆಲೆ ಕೊಡಲಿಲ್ಲವೆಂದು ಆತನಿಗೆ ಬೇಸರವೇನೂ ಆಗಲಿಲ್ಲ. ಯೋಚಿಸುತ್ತಿದ್ದಂತೆ ಹಣೆಯನ್ನು ನೆರಿಗೆ ಕಟ್ಟುತ್ತ ಆತ ಹೇಳಿದ.

“ಬಹಳ ಕಷ್ಟ. ಅವರು ಸಿದ್ಧವಾಗಿದಾರೆ. ಎಂಥೆಂಥೋರೆಲ್ಲ-ನೋಡಿ, ಆ ನಾಯಕ. ಹ್ಞಾ! ನಿಮಗೆ ಆವತ್ತು ಹೇಳಿರ್‍ಲಿಲ್ವೆ ಅವನ ವಿಷಯ?"

ನನ್ನ ಕುಶೂಹಲ ಕೆರಳಿತು.

“ಯಾರು? ಆ ನಾಯಕ? ಟೋನಿ? ಏನಾಯ್ತು?”

"ನಿಮಗೆ ಗೊತ್ತೇ ಇಲ್ವೇನು? ಈ ಭಾಗದಲ್ಲೆಲ್ಲ ಆಚೆ ಕಡೆ ಆವನದೇ ರಕ್ಷಣೆ. ಈಗ ಕಮಾಂಡರ್‌ ಆಗಿದಾನೆ. ಆ ನಾಯಿಗಳಿಗೆಲ್ಲಾ ಯೂನಿಫಾರ್ಮ್ ಕೊಟ್ಟಿದಾನೆ. ಬಂದೂಕು ಸಹ. ಕಳ್ಳ ಸಾಮಾನು ಸಾಗ್ಸೋ ಕೆಲಸ ಮಾಡಿ ಅವನ ಕೂಳು ತಿನ್ತಿದ್ದೋರೆಲ್ಲ ಈಗ ಸೈನಿಕರು. ಹ್ಯಾಗಿದೆ? ಹ್ಞೆ? ಅಯ್ಯೋ!"

ಈ ಮಾತುತತೆಗೆ ವಿಸ್ಮಯದಿಂದಲೂ ಆಸಕ್ತಿಯಿಂದಲೂ *ಕಿವಿಗೊಡುತ್ತಿದ್ದ ನನ್ನ ಸ್ನೇಹಿತರು ಅಂದರು:

“ಅಂತರರಾಷ್ಟ್ರೀಯ ಖದೀಮ ಆ ಟೋನಿ! ಗೋವಾ ವಿಮೋಚನೆಯಾದ್ಮೇಲೆ ಅವನಿಗೂ ಅನ್ನ ಇರೋದಿಲ್ಲ; ಅವನ ಅನ್ನದಾತರಿಗೂ ಇಲ್ಲಿ ಅನ್ನವಿರೋದಿಲ್ಲ...ಅದಕ್ಕೇ ಈಗ ಕಮಾಂಡರ್ ಆಗಿದಾನೆ."

..ದೋಣಿ ಬಂತು__ಉಗಿಯಂತ್ರವಿದ್ದ ದೋಣಿ, ಇತರ ಹಲವರೊಡನೆ ನಾವೂ ಕುಳಿತೆವು. ನನ್ನ ಗೆಳೆಯರು ನಮ್ಮಿಬ್ಬರ ಪರವಾಗಿ ಎರಡಾಣೆ ತೆತ್ತರು.

ಯಾರೋ ಒಬ್ಬರು ಕೊಟ್ಟಿದ್ದ ನಾಣ್ಯ ಸವೆದಿತ್ತೆಂದು ಗದ್ದಲವಾಯಿತು.

ಸವಕಲು ನಾಣ್ಯ__

-ಬಡಕಲಾಗಿ ಕುಸಿದು ಸಾಯುತ್ತಲಿರುವ ಸಾಮ್ರಾಜ್ಞಶಾಹಿಯ ಹಾಗೆ.

ಸೀಮೆ ನಾಯಿಯನ್ನು ಕೈಲಿ ಹಿಡಿದಿದ್ದ ಆ ನಾಯಕನ ಚಿತ್ರ...

ಲೂಟ, ದರೋಡೆ, ಸುಲಿಗೆ ಕಳ್ಳವ್ಯಾಪಾರ; ಲಂಚರುಷುವತ್ತಿನ ರಾಜ್ಯ. ಇದು ಆತನ ಜೀವನದ ಒಂದು ಮುಖ; ಸ್ವಾತಂತ್ರ್ಯ ಶಕ್ತಿಯ ದಮನ ದಬ್ಬಾಳಿಕೆ-ಅದೇ ಜೀವನದ ಇನ್ನೊಂದು ಮುಖ.

ನಾಣ್ಯ ಸವೆದಂತೆ ರೂಪುರೇಖೆಗಳು ಅಳಿದು ಎರಡೂ ಮೈ ಒಂದೇ ಆಗುತ್ತವೆ-ಒಂದೇ. ಒಂದೇ ನಾಣ್ಯದ ಎರಡು ಮೈ. ಮುಂದೆ, ಮೈಗಳೇ ಇಲ್ಲದ ಆಯುಸ್ಸು ಮುಗಿದ, ಸವಕಲು ನಾಣ್ಯ.

-೧೯೫೫


ಒಂಟಿ ನಕ್ಷತ್ರ ನಕ್ಕಿತು

ಶುಭ ಮುಹೂರ್ತ ಸನ್ನಿಹಿತವಾಗಿತ್ತು.

ಅಡ್ಡಪಂಚೆಯ "ಮೇಲೆ ರೇಶಿಮೆಯ ಅಂಗಿತೊಟ್ಟು, ರಾಮ ಗುಡಿಸಲಿನಿಂದ ಹೊರಬಂದ. ಮದುವೆಗೆಂದು ಹಿಂದೆ ಹೊಲಿಸಿದ್ದ ಅಂಗಿ, ಬೆಳೆದ ಮೈ ಮಾಂಸಖಂಡಗಳಿಗೆ ಹೊದಿಕೆಯಾಗಿ ಈಗ ಬಿರಿಯುತ್ತಿತ್ತು. ತುಂಬು ಮುಖಕ್ಕೆ ಶೋಭೆಯಾಗಿತ್ತು ಕುಡಿಮೀಸೆ. ನೀಳವಾಗಿತ್ತು ತಲೆಗೂದಲು.

ಅಲ್ಲಿಯೇ ಹಿತ್ತಿಲ ಬೇಲಿಗೊರಗಿ ನಿಂತಿದ್ದ ಲಚ್ಚಿ, ನೋವಿನ ಆಯಾಸದ ನಿಟ್ಟುಸಿರು ಬಿಟ್ಟು, ಕಾರತ ತುಂಬಿದ ಧ್ವನಿಯಲ್ಲಿ ಕೇಳಿದಳು:

"ನೀವೂ ಓಗ್ರೀರಾ?"

"ಊಂ. ಬಿರ್‍ನೆ, ಬಂದ್ಬಿಡ್ತ್ವೀವಿ" ಎನ್ನುತ್ತ ಆತ, ಗುಡಿಸಲ ಕಡೆಗೆ ನೋಡಿ ಅಸಹನೆಯ ಸ್ವರದಲ್ಲಿ ಕರೆದ:

"ಅಪ್ಪಾ! ಒತ್ತಾಗೋಯ್ತು! ಒರಡಾನ!"

ಹೊರಬಂದವನು ಮನೆಯ ಹಿರಿಯ. ಮಾಸಿದ ಪಂಚೆ. ಹರಕಲು ಅಂಗಿಯ ಮೇಲಿದ್ದ ಹಳೆಯ ಕೋಟು. ಇಳಿಮುಖವಾಗಿದ್ದ ಬಿಳಿಮೀಸೆ. ಸುಕ್ಕುಗಳನ್ನು ಆವರಿಸಿದ್ದ ನರೆತ ಗಡ್ಡ. ತೆಳ್ಳಗಾಗಿದ್ದ ತಲೆಗೂದಲನ್ನು ಮುಚ್ಚಿದ್ದ ರುಮಾಲು. ಅಪನಂಬಿಕೆಯ ನೆಟ್ಟಿನೋಟವಾಗಿ ಹೆಪ್ಪುಗಟ್ಟಿದ್ದ ಕಣ್ಣುಗಳು. ಎಕ್ಸಡ ಮೆಟ್ಟಿ ಆತನೆಂದ:

"ನಡಿ"

ಸೊಸೆಯನ್ನು ಹುಡುಕಿಬಂದ ಮನೆಯೊಡತಿ, ಬಾಗಿಲಲ್ಲೆ ತಡೆದು ನಿಂತಳು. ಮನೆಬಿಟ್ಟು ಹೊರಟದ್ದ ಮಗನನ್ನೂ ತನ್ನವನನ್ನೂ ಕೆಂಡಳು:

ಅವಳನ್ನು ದಿಟ್ಟಿಸಿ ಹಿರಿಯನೆಂದ:

"ಅದೇನೈತೋ ನೋಡ್ಬರ್‍ತೀನಿ."

.......ಬಿಸಿಲು. ಸೂರ್ಯ ನೆತ್ತಿಯಾಚೆಗೆ ಆಗಲೆ ಸರಿದಿದ್ದರೂ ಚುರುಕು ಮುಟ್ಟಿಸುತ್ತಿದ್ದ ಖಾರಬಿಸಿಲು. ಬೇಸಗೆಯೇನೊ ಮುಗಿಯುತ್ತ ಬಂದಿತ್ತು. ಆದರೆ, ಮೋಡಗಳ ಸುಳಿವಿರಲಿಲ್ಲ. ಹಾದಿ ನಡೆಯುತ್ತಿದ್ದ ಹಿರಿಯನನ್ನು, ಎಂದಿನ ಸಂಕಟವೇ ಇಂದೂ ಬಾಧಿಸಿತು. ಮತ್ತೂ ಹತ್ತಾರು ದಿನ ಮಳೆ ಬರದೇ ಹೋದರೆ? ಈ ಸಲದ ಬಿತ್ತನೆಯ ಗತಿ? ವರ್ಷಕ್ಕೊಂದೇ ಆದ ಪೈರಿನ ಗತಿ...? ಗುಡ್ಡದ ಮರೆಯಲ್ಲಿ ಕ್ಷಾಮರಾಕ್ಷಸ ಹೊಂಚು ಹಾಕುತ್ತ ಅಡಗಿ ಕುಳಿತಿದ್ದ. ತಾಯ್ನೆಲ ಭಣಗುಡುತ್ತಿತ್ತು. ಪೊರೆಕಳಚಿದ ಹಾವು, ಪ್ರಕೃತಿ, ಉದ್ದಕ್ಕೂ ಒರಗಿತ್ತು ಆ ಬಿಳಿಯ ಪೊರೆ. ಪುಡಿ ಪುಡಿಯಾಗಿದ್ದ ಕಣಕಣವಾಗಿದ್ದ ಕಾಲುಹಾದಿ, ದಾರಿ ತುಳಿಯುತ್ತ ಆ ಬಿಳಿಯ ಗೆರೆಯನ್ನು ಹಿರಿಯ ನೋಡಿದ ದೃಷ್ಟಿಯೊಡನೆ ನಡುಬಾಗಿತು. ಹೃದಯದ ಭಾರದಿಂದ ತಪ್ಪಿಸಿಕೊಂಡ ಬಿಸಿಯುಸಿರು ದೀರ್ಘವಾಗಿ ಹೊರಬಂತು.

ಹಿರಿಯನ ಸಂಕಟವನ್ನು ಗ್ರಹಿಸಿದ ರಾಮ, ಕನಸಿನ ಲೋಕದಿಂದ ಕೆಳಕ್ಕಿಳಿದು ಬಂದ. ಎಂದಿಗಿಂತ ಭಿನ್ನವಾದ ಆ ದಿನದಲ್ಲೂ ಆ ಹೊತ್ತಿನಲ್ಲೂ ಹಾಗಿರಬೇಕೆ ತನ್ನ ತಂದೆ?

“ಏನಪ್ಪಾ ಅದು?”

"ಈ ದುರ್ಗತಿ ನಮಗೆ ಬಂತಲ್ಲಾ ಅಂತ ಯೋಚಿಸ್ತಿದ್ದೆ, ಮಗಾ."

“ಸಾಕು, ಸಾಕು! ನಿನ್ನದು ಯಾವಾಗಲೂ ಒಂದೇ ಹಾಡು!"

ಬಿಸಿಲಿನಷ್ಟೇ ಬಿಸಿಯಾಗಿದ್ದ ಉಗುಳನ್ನು ಹಿರಿಯ ನುಂಗಿದ. 'ಉಚ್ಮುಂಡೆ!' ಎಂದುಕೊಂಡ ಮನಸಿನಲ್ಲೆ. 'ಒಂದೇ ಹಾಡು'... ಹೂಂ... ಹೀಗಾಗಬಹೂದೂಂತ ಯಾರಿಗೆ ಗೊತ್ತಿತ್ತು? ತನ್ನ ಹಿರಿಯ ಮಗನಿಗೇ ಈ ರೀತಿ ಹುಚ್ಚು ಹಿಡಿಯುವುದೆಂದರೆ?ಸಾಲದುದಕ್ಕೆ, ಶಹರದಲ್ಲಿ ಓದುತ್ತಿದ್ದ ಎರಡನೆಯ ಮಗ ಕೃಷ್ಣ ಕೂಡಾ....

"ಕಲಿಗಾಲ..."


ಕೆಟ್ಟ ಸುದ್ದಿಯನ್ನು ಕೇಳಿದ ಆ ದಿನ, ತನ್ನ ಓರಗೆಯವರಷ್ಟೋ ಜನ ನಕ್ಕಿದ್ದರು.

___'ಆದರೆ ಹೋದರೆ, ಅಜ್ಜಿಗೆ ಮೀಸೆ ಬಂದರೆ...!'

___'ಐ-ಬಿಡಿ!'

ಗಾಳಿಯಲ್ಲಿ ಸುದ್ದಿ, ತೇಲಿ ಬಂದಿತ್ತು-ತೇಲಿ ಹೋಗಿತ್ತು.

ಸ್ವಲ್ಪ ಸಮಯದ ಅನಂತರ, ಅದನ್ನೆಲ್ಲರೂ ಮರೆತಿದ್ದ ಹೊತ್ತಿಗೆ, ಹೊಸ ಜನ ಅಲ್ಲಿಗೆ ಬಂದರು -ಹ್ಯಾಟು ಬೂಟು ತೊಟ್ಟ ಅಪರಿಚಿತರು. ಅವರ ಹಿಂದೂ ಮುಂದೂ ಓಡಾಡಿದರು ಗ್ರಾಮಾಧಿಕಾರಿಗಳು.

-'ಹಳ್ಳಿಯನ್ನು ಬಿಟ್ಟು ಹೋಗ್ಬೇಕು.'
-('ಅಹಾ! ಎಲ್ಲಿಗೆ? ಯಾರಪ್ಪನ ಮನೆಗೆ?')
-'ಏ ಗೌಡ! ನೀನೊಬ್ಬನೇ ಅಲ್ಲ ಕಣಯ್ಯ!'
-'ರೀ, ಗೌರವ ಕೊಟ್ಟು ಮಾತನಾಡಿ.'
-'೦h! I see !'
-'ಒಟ್ಟು ಹನ್ನೆರಡು ಹಳ್ಳಿ ಖಾಲಿಯಾಗ್ತವೆ.'
-'ಅನ್ನೆರಡು ಅಳ್ಳಿ?'

-'ಹೂಂ. ದೇಸಾಯರು, ಜೋಡೀದಾರ್‍ರು, ಇನಾಂದಾರ್‍ರು-ಎಲ್ರೂ ಒಪ್ಕೊಂಡಿದಾರೆ. ಸಣ್ಣ ಪುಟ್ಟ ಆಸ್ತಿ ಪಾಸ್ತಿ ಇರೋ ನಿಮ್ಮದೇನಪ್ಪ ಇನ್ನು?'

ಮಹಾ ಬುದ್ದಿವಂತರೇ ಸರಿ. ಚತುರೋಪಾಯಗಳೂ ಗೊತ್ತಿದ್ದುವು ಅವರಿಗೆ. ಪರಿಹಾರ-ಹಣ. 'ಬೇರೆ ಕಡೆ ಭೂಮಿ ಕೊಂಡ್ಕೋಬಹುದು.' ಅಥವಾ ಹೊಲಕ್ಕೆ ಬದಲು ಹೊಲ (ಬಂಜರು ಭೂಮಿಗೇನು ಬರಗಾಲ?) ಸಾವಿರಾರು ಜನರಿಗೆ ಕೆಲಸ ಬೇರೆ.

"ಕೆಲಸ? ಎಂಥ ಕೆಲಸ?"
“ಕೂಲಿ ಕೆಲಸ."
“ಕೂಲಿ? ನಾವು ರೈತರು. ಕೂಲಿ-ನಾಲಿ ಮಾಡೋವರಲ್ಲ!"
"ಈ ರೈತರಿಗೆ ಒಂದೂ ಅರ್ಥವಾಗೋದಿಲ್ಲ"
"ಹುಂ!"
"ಈ ಹಳ್ಳಿಗಳೆಲ್ಲ ನೀರಿನ ಕೆಳಗೆ ಮುಳುಗುತ್ತೆ ಗೌಡರೆ!"
"ನೀರಿನ ಕೆಳಗೆ? ಮುಣುಗುತ್ವೆ?”
“ಹೌದು. ಸಾವಿರ ಎಕರೆ ಮುಳುಗಿದರೇನ್ರ,? ಲಕ್ಷ ಎಕರೆ ಭೂಮಿಗೆ ನೀರು ಸಿಗುತ್ತೆ. ಅಷ್ಟೇ ಅಲ್ಲ-”
“ಸಾಕು! ಸಾಕು!"
ಸಿಡಿಮಿಡಿಗೊಂಡು ತಾನು ದಡದಡನೆ ಅಲ್ಲಿಂದ ಹೊರಟು ಬಿಟ್ಟಿದ್ದ. ರಾಮ ಮಾತ್ರ ಆ ಜನರ ಜತೆಯಲ್ಲಿ, ಮಾತುಗಳಿಗೆ ಕಿವಿಗೊಡುತ್ತ, ನಿಂತಿದ್ದ. ಹುಚ್ಮುಂಡೆ! ಕತ್ತಲಾಗುವ ಹೊತ್ತಿಗೆ ಮನೆಗೆ ಬಂದ.

"ಅಲ್ಲೇನೊ ಮಾಡ್ತಿದ್ದೆ ಇಷ್ಟೊತ್ತು?”

“ಇಕಾ, ಕಾಜಗ ಕೊಟ್ಟವ್ರೆ. ಇದರೊಳಗೆಲ್ಲಾ ಪಿರಿಂಟ್‌ ಮಾಡೈತೆ."

“ಫಿರಿಂಟ್‌ ಮಾಡೈತೆ- ಮಣ್ಣು!”

****

ಮುಂದಿ ಆಗಬೇಕಾಗಿದ್ದುದು ಆಗಿಯೇ ಹೋಯಿತು. ರಾಮ ಪಲ್ಲವಿ ನುಡಿದ:

“ನಡಿ, ಓಗಾನ. ಎಲ್ಲಾರಿಗಾಗೋದು ನಮಗೂ ಆಗ್ತೇತೆ."

ಹೊಲವನ್ನು ಮಾರಲಿಲ್ಲ ನಾನು. ಬದಲಿ ಭೂಮಿಯನ್ನು ಕೊಟ್ಟಿರು. ಮೂರೆಕರೆಗೆ ಮೂರೆಕರೆ. ನದಿಯ ದಂಡೆಯಲ್ಲಲ್ಲ. ಕೆಳಕ್ಕೆ, ಒಳಕ್ಕೆ.

ಹುಟ್ಟಿ ಬೆಳೆದ ಹಳ್ಳಿಯ ಹನುಮಂತರಾಯನ ಗುಡಿಯ ಮುಂದೆ ನಿಂತು ನಾನೆಂದೆ:

“ಓಗ್ಬರ್‍ತೀನಪ್ಪ. ಅಳ್ಳಿ ಮುಣಿಗಿಸ್ಬೌದು, ನಿನ್ನನ್ನು ಮುಣಿಗಿಸೋಕಾತದಾ? ಮನಿಸ್ಯರು ತಿಳೀದೆ ತಪ್ಮಾಡ್ತಾ ಅವರೆ. ಕ್ಸಮ್ಸಪ್ಪಾ..."

ವಲಸೆ ಬಂದವರನ್ನು ಅಣಕಿಸಿತು ಬರಿದಾಗಿದ್ದ ಹೊಸ ಮಣ್ಣು. ಆ ನೆಲಕ್ಕೆ ಕೈ ಬಡೆದು, ಅಂಥ ಸ್ಥಿತಿಗೆ ನಮ್ಮನ್ನು ತಂದವರಿಗೆ ನಾನು ಶಾಪವಿತ್ತೆ; ಹಣೆ ಚಚ್ಚಿಕೊಂಡು ಮನದಣಿಯೆ ಅತ್ತೆ.

.... ಆ ದಿವಸದಿಂದ ಇವತ್ತಿನವರೆಗೆ- ಈ ಮೂರು ವರ್ಷಗಳ ಕಾಲ-ಏನನ್ನೆಲ್ಲ ಕಂಡೆ ನಾನು!

ಮೊದಮೊದಲು, ಎಲ್ಲೋ ಕೇಳಿದ ಯಾವುದೋ ಸುದ್ದಿ ಎನ್ನುವ ಹಾಗೆ-ಬಳಿಕ ಉತ್ಸಾಹದಿಂದ, ನನ್ನ್ನ ಮಗ ರಾಮನೇ ಬಂದು ಹೇಳುತ್ತಿದ್ದ.

“ಎಲ್ರೂ ಬಂದ್ಬಿಟ್ಫವ್ರೆ. ನದೀಲಿ ತಳ ಎಷ್ಟು ಆಳಕ್ಕೈತೆ ಅಂತ ಭೈರಿಗೆ ಕೊರೆದು ನೋಡ್ತವ್ರೆ. ದೊಡ್ದೊಡ್ಡ ಲಾರಿಗ್ಳು ಬಂದವೆ-ಅತ್ತಿಪ್ಪತ್ತು. ಮಿಸ್ನುಗಳೂ ಯಂತ್ರಗಳೂ ಬಂದ್ಬಿಟ್ಟಿವೆ. ಅದೇನೋ ಕ್ರೇನೂಂತ ತಗೊಂಡ್ಬಂದವ್ರೆ ಅಪ್ಪಾ. ತೆಂಗಿನಮರದಂತೆ ಎತ್ತರಕ್ಕೈತೆ. ಎಂಗ್ಬೇಕಾದರೂ ತಿರುಗ್ತೇತೆ. ಕೈಯಿಂದ ಕಡ್ಡೀನ ಇಂಗೆತ್ತಿ ಅಂಗ್ಮಡ್ಗಾಕಿಲ್ವ ನಾವು?-ಅಂಗೇನೆ, ಎಸ್ಟ್‌ ಬಾರದ್ಸಾಮಾನಿದ್ರೂ ಒಂದ್ಕಡೆಯಿಂದ ಇನ್ನೊಂದ್ಕಡೆಗಿಡ್ತೇತೆ."

ನಮ್ಮ ನದಿ. ಬೇಸಗೆಯಲ್ಲಿ ಕಿರುಬೆರಳಿನೆಷ್ಟು ನೀರು. ಮಳೆ ಬಂದಾಗ ಕೆರಳಿದ ಮಹಾ ಕಾಳಿ. ಏನಾದರೇನು? ಮನುಷ್ಠ ಮಾಡುವ ತಪ್ಪಿಗೆ ಅದು ದೇವರು ಕೊಡುವ ಶಿಕ್ಷೆ. ಅಂಥ ದೇವರ ಶಕ್ತಿಯೊಡನೆ ಈ ಜನರ ಸೆಣಸಾಟ. ನಾಸ್ತಿಕರು! ಹುಂ!

ರಾಮನೆಂದ:

“ಹಾಫೀಸರ್‌ಗಳಲ್ಲಿ ಬಿರಾಮರು, ಲಿಂಗವಂತರು, ಒಕ್ಸಲಿಗರು, ಸಾಬರು, ಕೆರಸ್ತಾನರು-ಎಲ್ಲ ಜಾತಿಯವರೂ ಅವರೆ."

ಕಟ್ಟುನಿಟ್ಟಾಗಿ ನಾನೆಂದೆ:

“ಅವರ ಜತೆ ನೀನು ಸೇರ್‍ಕೊಬ್ಯಾಡ."

ದಿನ ಕಳೆದ ಹಾಗೆ ಜನರೆಲ್ಲ ಅವರ ಜತೆ ಸೇರಿದರು. ಕೆಲಸದ ಜಾಗಕ್ಕೆ ಅಂಟಿಕೊಂಡೇ ಊರು ಹುಟ್ಟಿತು. ಎಲ್ಲೆಲ್ಲಿಂದಲೋ ಜನರು ಬಂದರು. ಸಾವಿರ ಹತ್ತು ಸಾವಿರ-ಇಪ್ಪತ್ತು ಸಾವಿರ ಜನ. ಹೆಣ್ಣಾಳು, ಗಂಡಾಳು. ಹಟ್ಟಗಳನ್ನು ಕಟ್ಟಿದರು. ಜತೆಯಲ್ಲಿ "ಹೋಟಿಲು ಬಂತು... ದಿನಸಿನಂಗಡಿ, ಹೆಂಡದಂಗಡಿ...ಮಣ್ಣು ಅಗೆಯುವವರು, ಕಲ್ಲು ಕಡಿಯುವವರು....ಮನುಷ್ಯರು, ಯಂತ್ರಗಳು. ಕೆವಿ ಕಿವುಡಾಗುವ ಹಾಗೆ ಹಗಲೆಲ್ಲ ಸದ್ದು. ಮಣ್ಣು ತೋಡಿ ಕಲ್ಲಿರಿಸಿದರು. ಕಲ್ಲು, ಗಾರೆ; ಕಲ್ಲು ಗಾರೆ.

"ಮಳೆ ಬರಲಿ, ಆಗ ತಿಳೀತದೈೆ ಎಂದುಕೊಂಡೆ.

ಮಳೆ ಬಂತು. ಕಟ್ಟಿದ್ದು ಮಿಸುಕಲಿಲ್ಲ.

ನವರಾತ್ರಿಯ ರಜೆಯಲ್ಲಿ ಮನೆಗೆ ಬಂದ ಕೃಷ್ಣನೆಂದ:

“ಅಣೆಕಟ್ಟು ಕಟ್ಟಿದ್ಮೇಲೆ ಮಹಾಪೂರ ಬರೋದಿಲ್ಲ. ಕಾಲಿವೆ ಕಡಿದು ಊರೂರಿಗೆ ನೀರು ತಗೊಂಡು ಹೋಗ್ತಾರೆ. ಎಲ್ಲೆಲ್ಲೂ ಬೆಳೆ ಬೆಳೀತದೆ. ವಿದ್ಯುಚ್ಛಕ್ತಿ ಉತ್ಪಾದಿಸ್ತಾರೆ. ಮನೆಮನೆಗೆ ದೀಪ ಬರ್‍ತದೆ. ಕಾರ್ಖಾನೆಗಳು ಹುಟ್ಕೋತವೆ. ನದೀಲಿ ದೊಡ್ಡ ದೊಡ್ಡ ದೋಣಿಗಳು ಸಂಚಃರಮಾಡ್ತವೆ.?"

ರೇಗುತ್ತ ನಾನೆಂದೆ;

“ನಮ್ಮ ಅಳ್ಳಿ ಏನಾಗ್ತೇತೆ?”
“ಹಳ್ಳಿ ಮುಳುಗೋಗ್ತದೆ."
"ಅಂಗಂತೀಯಾ ನೀನೂ?”
"ಈ ಪುಸ್ತಕದಲ್ಲಿ ಬರೆದವರೆ."
“ಉಚ್ಮುಂಡೆ! ನಿನ್ನ ಪುಸ್ತಕನ ಸುಡ್ತು!"

ಹುಡುಗರು ಮೊದಲು ಕೆಟ್ಟರು. ವಯಸ್ಸಾದವರು ಆಮೇಲೆ. ಲೋಕ ತಲೆಕೆಳಗಾಗಿ ಹಾಳಾಗುತ್ತಿದ್ದುದನ್ನು ನೋಡಲು ನಾನೊಬ್ಬನೆ ಉಳಿದೆನೆಠಿಸಿತು.

ಭೂಮಿತಾಯಿ ಮುನಿಸಳು ಅರೆ ಹೊಟ್ಟಿ ನೆಡವಿದಳು.

...ವರ್ಷ ಒಂದಾಯಿತು. ಅನಂತರವೂ ಒಂದು. ನದಿಗೆ ಅಡ್ಡವಾಗಿ ಮರಳಿನ ಗೋಡೆ ಕಟ್ಟ, ಅದರ ಹಾದಿಯನ್ನೆ ಬದಲು ಮಾಡಿದರು. ಎರಡೂ ಕಡೆಗಳಿಂದ ಬಂದಿದ್ದ ಅಣೆಕಟ್ಟು ನಡುವೆ ಕೂಡಿಕೊಂಡಿತು. ನೀರು ನಿಂತು ಕೆರೆಯಾಯಿತು. ನದಿ ಆಳನಾಯಿತು.

ಆಗ ಬಲ್ಲಿದನಾಗಿದ್ದ ರಾಮನನ್ನು. ಕೆಣಕಿ ಕೇಳಿಜಿ.

“ಅಳ್ಳಿಗಳನ್ನ ಯಾವತ್ತು ಮುಣುಗಿಸ್ತಾರೆ?”

"ಇನ್ನೇನು, ಮುಣುಗೋಗ್ತವೆ.?

“ಉಂ! ಅನುಮಂತರಾಯನ ಗುಡಿಯೊಳಕ್ಕೆ ನೀರು ನುಗ್ಲಿ. ಅಮ್ಯಾಕೆ ಯೋಳ್ತೀನಿ!

ಗುಡಿಯೊಳಕ್ಕೆ ನೀರು ನುಗ್ಗಿತು. ಗುಡಿ ಮುಳುಗಿತು. ಹನುಮಂತರಾಯ ಆಕ್ಷೇಪಿಸಲಿಲ್ಲ. ಕೆರೆ ಸರೋವರವಾಯಿತು. ಸರೋವರ ನೀರಸಾಗರವಾಯಿತು. ದೇವರು ತುಟಿಪಿಟ್ಟಿನ್ನಲಿಲ್ಲ.

ನನ್ನೊಳಗಿನದೇನೋ ಕುಸಿದುಬಿದ್ದಂತಾಯಿತು.

ನಾನು ಕಾಹಿಲೆ ಮಲಗಿದುದು ಆಗಲೇ...

****

ನಿಶ್ಶಕ್ತನಾಗಿ ಎದ್ದ ಬಳಿಕ, ಅಣೆಕಟ್ಟಿನ ಪ್ರಸ್ತಾಸವನ್ನೇ ಹಿರಿಯ ಮಾಡಲಿಲ್ಲ. ಬದುಕಿನಲ್ಲಿ ಆತ ಒಂದಿಷ್ಟಾದರೂ. ಆಸಕ್ತಿ ತೋರಲು ಕಾರಣ, ಅದೇ ಮೊದಲ ಬಾರಿ ಸೊಸೆ ಲಚ್ಚಿಗೆ ನೀರು ನಿಂತುದು. ರಾಮನ ಮುಖದ ಮೇಲೆ ಆಗ ಮೂಡಿದ ಮುಗುಳುನಗೆ, ಕರಿಯ ಕಲ್ಲಿನಲ್ಲೆ ಕೊರೆದ ನಿತ್ಯ ಮಲ್ಲಿಗೆಯಾ ಯಿತು...

ಕಿಂವದಂತಿಯ ಕೀಚಲು ಧ್ವನಿ ಕೇಳಿಸಿತೊಮ್ಮೆ :

“ನರಬಲಿ ಕೊಡ್ತಾರಂತಪ್ಪೋ! ಅಯ್ಯಪ್ಪೊ!"

ಎಳೆಯರು-ಮೂರನೆಯವನಾದ ಒಬ್ಬ ಹುಡುಗ, ಕೊನೆಯ ಸಂತಾನವಾದ ಹುಡುಗಿ-ಮನೆಯಲ್ಲೇ ಬಂದಿಗಳಾದರು. ತುಂಬಿದ ಬಸುರಿ ಲಚ್ಚಿ, ಹಿತ್ತಲು ದಾಟ ಹೊರಕ್ಕಿಳಿಯಲಿಲ್ಲ.

“ಸುಮ್ಸುಮ್ನೆ ಪುಕಾರು ಉಟ್ಟಿಸ್ತಾರೆ" ಎಂದ ರಾಮ.

ಆದರೆ, ಕೆಲಸವೆಲ್ಲ ಮುಗಿಯುತ್ತ ಬಂದಿದ್ದಂತೆ, ಒಂದು ಯಂತ್ರದಡಿಗೆ ಬಿದ್ದ ಇಬ್ಬರು ಆಳುಗಳು ಬಲಿಯಾದಾಗ, ಜನರೆಲ್ಲ ಕ್ಷಣ ಕಾಲ ಉಸಿರು ಬಿಗಿಹಿಡಿದರು...

....................

...ಅಂತೂ ಕೊನೆಗೊಮ್ಮೆ ಬಂದಿತ್ತು ಈ ಫಳಿಗೆ.

ತಂದೆಯನ್ನು ಕರೆದವನು ರಾಮನೇ.

“ನಾನ್ಯಾಕೊ ಬರ್ಲಿ?”
“ಇಲ್ಲ ಅಪ್ಪ, ನೀನು ನಿನ್ನ ಕಣ್ಣಿಂದ್ಲೇ ನೋಡ್ಬೇಕು.”
ಅದಕ್ಕೆ ಆತ ತನ್ನಾಕೆಗೆ ಹೇಳಿದ್ದ.
“ಅದೇನೈತೋ ನೋಡ್ಬರ್ತೀನಿ.”

ಅವರನ್ನು ಹಾದು ಮುಂದೆ ಹೋದವರು ಓಡುತ್ತ ಹೋದವರು-ಹಲ ವರು.ಹುಡುಗರಿಗೆ ಯುವಕರಿಗೆ ಮುದುಕರಿಗೆ-ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ತಗ್ಗಿನಿಂದ ಮೇಲಕ್ಕೆ ನಡೆದು ಬಂದಂತೆ ಅವರ ಕಣ್ಣಿಗೆ ಬಿತ್ತು-ಸಹಸ್ರ ಜನರನ್ನು ಹೊತ್ತು ಎತ್ತರದಲ್ಲಿ ಭವ್ಯವಾಗಿ ನಿಂತಿದ್ದ ಅಣೆಕಟ್ಟು ಮೇಲೂ ಜನರು, ಕೆಳಗೂ ಜನರು. ಒಂದೇ ಕಡೆ ನೆರೆದಿತ್ತು, ಹತ್ತೂರುಗಳ ಜಾತ್ರೆ. ನೀರಿನ ಅಲೆಗಳು, ಮಾತಿನ ಹಾಡಿನ ಅಲೆಗಳು, ಹರ್ಷೋದ್ಗಾರ, ಜಯಜಯಕಾರ. ನಗೆ-ಎಲ್ಲ ಜನರಿಂದಲೂ ಹೊರಟು, ವಿರಾಟ್‍ರೂಪ ತಳೆದು, ಗಿರಿಕಂದರ ಕಾನನಗಳನ್ನು ಕುಲುಕಿ ಅಲುಗಿಸಿ ನಗಿಸುತ್ತಿದ್ದ ನಗೆ. ತಳಿರುತೋರಣಗಳು, ಬಣ್ಣದ ಕಾಗದ ಗಳು. ನದಿಯ ಕತ್ತಿಗೆ ನೂರು ಹಾರಗಳಾಗಿದ್ದವು, ಸೂರ್ಯನ ಕೊನೆಯ ರಶ್ಮಿಗೆ ಮಿನುಗುತ್ತಿದ್ದ ಗಾಜಿನ ದೀಪಗಳು.

ಮೇಲೆ ಹೋಗಲು ಹಾದಿಯಿರಲಿಲ್ಲ. ಜಾಗವಿರಲಿಲ್ಲ.
“ತಡವಾಗಿ ಬಂದ್ವಿ,” ಎಂದು ರಾಮ ಗೊಣಗಿದ.
“ಏನು ಕೊಳ್ಳೆ ಹೋದದ್ದು? ಇಲ್ಲೇ ಇರಾನ,” ಎಂದ ಹಿರಿಯ.
ಜಲಾಶಯದೊಳಕ್ಕೆ ಸೂರ್ಯ ಧುಮುಕಿರಬೇಕು. ಒಮ್ಮೆಲೆ ಕತ್ತಲಾಯಿತು. ಮತ್ತೆ ಒಮ್ಮೆಲೆ, ಗಾಜಿನ ಬುರುಡೆಗಳೆಲ್ಲ

ದೀಪದ ಉಂಡೆಗಳಾದುವು. ನದಿಯ ಕೊರಳಹಾರಗಳ ಹಲವು ಸಹಸ್ರ ಮಣಿಗಳು ವರ್ಣರಂಜಿತವಾಗಿ ಬೆಳಗಿದುವು.

ಆಗ ಇದ್ದಕ್ಕಿದ್ದಂತೆ, ರುದ್ರ ಕಡಲು ಭೋರ್ಗರೆಯುತ್ತ ಏರಿ ಬಂದಂತಹ ಸದ್ದಾಯಿತು.
ಹಿರಿಯನ ಅಂಗಾಂಗಗಳು ತಣ್ಣಗಾದುವು.
(ಶಿಕ್ಷೆ ವಿಧಿಸಲು ಆ ಘಳಿಗೆಯನ್ನೇ ಆರಿಸಿದ್ದನೆ ದೇವರು?)
“ಅಗೋ!” ಎಂದ ರಾಮ, ಉಳಿದೆಲ್ಲ ಸದ್ದನ್ನೂ ಮೀರಿಸುವ ಏರುದನಿ

ಯಲ್ಲಿ. ಅಣೆಕಟ್ಟಿನೆರಡು ತೆರೆದ ದ್ವಾರಗಳಿಂದ, ಕೋಟಿ ಶ್ವೇತಾಶ್ವಗಳು ಕರ್ಣಭೇದಕವಾಗಿ ಕೆನೆಯುತ್ತ, ಬಾಯಿಗಳಿಂದ ನೊರೆಯುಗುಳುತ್ತ, ಮುನ್ನುಗ್ಗುತ್ತಿದ್ದುವು. ಕುಪ್ಪಳಿಸುತ್ತ ಹಾರುತ್ತ ಕಿಲಕಿಲನೆ ನಗುತ್ತ ನೀರು ಧುಮುಧುಮುಸಿ ಹರಿಯಿತು, ಕಾಲಿವೆಗಳಲ್ಲಿ, ಉಪಕಾಲಿವೆಗಳಲ್ಲಿ.

ಎಚ್ಚತ್ತ ಹಿರಿಯ. "ಓ!" ಎಂದ.

ಬಾಗಿದ್ದ ನಡು ನಿಡಿದುಕೊಂಡಿತು. ಜಡವಾಗಿದ್ದ ಕಾಲುಗಳು ಚೇತನಗೊಂಡವು.

ಮತ್ತೆ ಅಂದ: "ಓ! ಓ!"

ದೂರಕ್ಕೆ ದೂರಕ್ಕೆ--ಅತನ ಹೊಲಗಳಿದ್ದ ಕಡೆಗೂ-ನೀರು ಧಾವಿಸುತ್ತಿತ್ತು.

ಬೇರೊಂದನ್ನೂ ಗಮನಿಸದೆ ಹಿರಿಯ ಆ ನೀರನ್ನೆ ನೋಡಿದ; ಆ ನೀರಿನ ಹಿಂದೆಯೇ ಓಡಿದ.

ತಂದೆಯಷ್ಟೇ ವೇಗವಾಗಿ ಓಡುವುದು ರಾಮನಿಗೂ ಕಷ್ಟವೆನಿಸಿತು.

...ಗುಡಿಸಲ ಮುಂದೆ ರಾಮನ ತಾಯಿ ನಿಂತಿದ್ದಳು. ಚಿಕ್ಕ ಹುಡುಗನಂತೆ ಓಡುತ್ತ ಬಂದ ಗಂಡನನ್ನು ನೋಡಿ ಅಕೆಯೆಂದಳು:

“ಲಚ್ಚಿಗೆ ಎರಿಗೆಯಾಯ್ತು! ಗಂಡು ಮಗು!"

“ಓ!" ಎಂದ ಹಿರಿಯ. ಧಾರಾಕಾರವಾಗಿ ಸುರಿಯುತ್ತಿದ್ದ ಕಂಬನಿಯನ್ನೊರಸಿಕೊಳ್ಳುತ್ತ.

-"ಓ ಓ!"

ಎಲ್ಲ ಬೇಗೆಯನ್ನೂ ಮರೆಸುವ ಹಾಗೆ ಬೀಸುತ್ತಿತ್ತು ತಣ್ಣನೆಯ ಗಾಳಿ. ವಾತಾವರಣ ತುಂಬಿತ್ತು, ಹಾಲುಹೊಳೆಯ ಜುಳುಜುಳು ಗೀತದಿಂದ. ಮಂದವಾಗಿ ಕಾಣಿಸುತ್ತಿದ್ದುವು, ಬಲು ದೂರದಲ್ಲಿ ಅಣೆಕಟ್ಟಿನ ದೀಪಮಾಲೆಗಳು.

ಮೇಲ್ಗಡೆ ಆಕಾಶದಲ್ಲಿ ಕೋಟಿ ನಕ್ಷತ್ರಗಳಿದ್ದುವು.

ಅವುಗಳನ್ನೇ ಮುಗ್ಧನಾಗಿ ಹಿರಿಯ ನೋಡಿದ.

ಪಶ್ಚಿಮದಲ್ಲಿ ಒಂಟಯಾಗಿಯೆ ಇದ್ದೊಂದು ನಕ್ಷತ್ರ ಅವನನ್ನು ಕಂಡು ನಕ್ಕಿತು.

ಅದನ್ನು ಗಮನಿಸಿದ ಹಿರಿಯ ರುಮಾಲನ್ನೆಳೆದು, ತಲೆಯಾಡಿಸುತ್ತ, ಅಂದ:

“ಉಚ್ಮುಂಡೆ!"

ಆ ನಕ್ಷತ್ರ ಮತ್ತೆ ನಕ್ಕಿತು.

__೧೯೫೭
ಮೊದಲ ಮಳೆ ಕಳೆದ ಬಳಿಕ, ಸೂರ್ಯ ಧೈರ್ಯಗೊಂಡು ಮತ್ತೊಮ್ಮೆ ಚಕ್ರ ಕುಣಿತ ಆರಂಭಿಸಿದ್ದ.

ನೀಲಿ ವರ್ಣದ ವೇದಿಕೆಯ ಮೇಲೆ ಹಗಲು, ಕರಿ ಪರದೆಯ ಹಿಂದೆ ರಾತ್ರೆ, ಕತ್ತಲು ಆವರಿಸಿದಾಗ ಚಂದ್ರನೊಂದು ಕಂದೀಲು, ನೀರು ಕುಡಿದು ನೆಲ ತೃಪ್ತವಾಗಿತ್ತು. ಗಿಡಮರಗಳೆಲ್ಲ, ಹಸಿರುಮಯ. ಮನುಷ್ಯ ತುಳಿವ ದಾರಿಗೆರೆಯ ಎರಡು ಪಕ್ಕಗಳಲ್ಲೂ ಗರಿಕೆಹುಲ್ಲು ಟಿಸಿಲೊಡೆದು ಮುಸಿಮುಸಿ ನಗುತ್ತಿತ್ತು.

ಬಹಳ ಹೊತ್ತು ನೆಲೆಸಿದ ನೀರವತೆಯನ್ನು ಭೇದಿಸಿ ಒಂದು ಸದ್ದು ಬಂತು.
ಫೋನ್ ಯಂತ್ರದ ಖಣಖಣತ್ಕಾರ. ಅದನ್ನು ಹಿಂಬಾಲಿಸಿ:
“ಹಲ್ಲೋ....ಹಲ್ಲೋ...."
ಇನ್ನೊಂದು ನಿಲ್ದಾಣದ ವೃತ್ತಿ ಬಂಧುವಿನೊಡನೆ ಈ ಮಾಸ್ತರರ ಸಂವಾದ.
ಹೆಬ್ಬಾಗಿಲ ಹೊರಗೆ ಸಿಮೆಂಟಿನ ಒರಗು ಬೆಂಚಿನ ಮೇಲೆ, ಹೂಬಿಸಿಲಲ್ಲಿ ಮೈ ಕಾಯಿಸುತ್ತ ಇಮಾಮಸಾಬಿ ಕುಳಿತಿದ್ದ.
“ಅರೇ, ಗಾಡಿ ಔಟಾಯಿತೇನು ಹಾಗಾದರೆ?”
ನಿರ್ಜನವಾಗಿದ್ದ ನಿಲ್ದಾಣ. ಔಟಾಗುವುದೆಂದರೇನು? ಲೋಕಲನ್ನು ಕಳುಹಿಬಂದು ಅರ್ಧ ಘಂಟೆ ಕೂಡ ಆಗಲಿಲ್ಲವಲ್ಲ ಇನ್ನೂ?
ಮಾಲ್‌ಗಾಡಿಯೇ ಇರಬೇಕು. ಮುಂದಿನ ನಿಲ್ದಾಣದಲ್ಲೋ ಅದರಾಚೆಗೋ ಕ್ರಾಸಿಂಗ್. ಇಳಿಸುವ ಸಾಮಾನು ಇದ್ದರಷ್ಟೆ ಅದಿಲ್ಲಿ ನಿಲ್ಲಬಹುದು.ಇಲ್ಲವೆಂದಾದರೆ, ಸಿಗ್ನಲಿನ ಗೌರವರಕ್ಷೆ ಸ್ವೀಕರಿಸಿ, ಹಸುರು ನಿಶಾನೆಯಿಂದ ಗಾಳಿ ಹಾಕಿಸಿಕೊಂಡು, ಮುಂದಕ್ಕೆ ಪಯಣ.
ಮಾಲ್‌ಗಾಡಿಯೊಂದೇ ಅಲ್ಲ. ಮೇಲ್ ಎಕ್ಸ್ ಪ್ರೆಸ್ ಗಾಡಿಗಳೂ ಹಿಂದೆ ಅಲ್ಲಿ ನಿಲ್ಲುತ್ತಿರಲಿಲ್ಲ. ಒಮ್ಮೆಯಷ್ಟೇ ವಿಶೇಷ ಸಂದರ್ಶಕರು ಬಂದರೆಂದು ಮೇಲ್‌ಗಾಡಿ ನಿಂತುದು, ಆಗಿನ ತಳಿರು ತೋರಣಗಳ ಸಂಭ್ರಮ, ಇಮಾಮ್‍ಸಾಬಿಗೆ ನೆನಪಿತ್ತು. ಬಂದಿಳಿದುದು ಒಬ್ಬ ಆಂಗ್ಲ ಉಚ್ಛಾಧಿಕಾರಿ. ಅರಸರಲ್ಲ, ವೈಸರಾಯರೋ ರೆಸಿಡೆಂಟರೋ-ಯಾರೋ ಒಬ್ಬರು. ಇಮಾಮ್ ಆಗಿನ್ನೂ ಮೂವತ್ತು ವರ್ಷಗಳ ಜವ್ವನಿಗ.

ಆಗ ಅವನ ವಯಸ್ಸು ಖಚಿತವಾಗಿ ಅಷ್ಟೇ ಎಂದು ಹೇಳಲು ಯಾವ ಆಧಾರವಿತ್ತು? ಬೀಬಿ ಮನೆಗೆ ಬಂದ ವರ್ಷ ಅದು, ಎರಡನೆಯ ಬೀಬಿ. ಚೊಚ್ಚಿಲ ಹೆರಿಗೆಗೆಂದು ತವರುಮನೆಗೆ ಹೋದ ಮೊದಲಿನಾಕೆ ಮರಳಿರಲಿಲ್ಲ. ಪ್ರಸವದ ವೇಳೆ, ಬಸಿರಲ್ಲಿದ್ದ ಜೀವದೊಡನೆ ಆಕೆಯೂ ಅಪಮೃತ್ಯುವಿಗೆ ಗುರಿಯಾಗಿದ್ದಳು. ಅದು, ಇಮಾಮ್‍ಸಾಬಿಯ ಚಿತ್ತಫಲಕದ ಮೇಲೆ ಅಳಿಸಲಾಗದ ಚಿತ್ತನ್ನು ಉಳಿಸಿ ಹೋದ ಘಟನೆ. ಆ ಯಾತನೆಯನ್ನು ಮೂಲೆಗೊತ್ತಿ ಇನ್ನೊಬ್ಬಳ ಕೈ ಹಿಡಿಯಲು, ಆರೆಂಟು ವರ್ಷಗಳ ಅವಧಿಯೇ ಅವನಿಗೆ ಬೇಕಾಯಿತು. ಆಗ ಆತನ ಸೋದರ ಮಾವ ಅಂದಿದ್ದ:

“ಮೂವತ್ತು ವರ್ಷವಾಯ್ತು ನಿನಗೆ. ಇನ್ನು ತಡಮಾಡ್ಬೇಡ."

ಅನಂತರವೂ ದಿನ ತಿಂಗಳು ವರ್ಷಗಳ ಲೆಕ್ಕವಿಡುವ ಗೊಡವೆಗೆ ಇಮಾಮ್‌ಸಾಬಿ ಹೋದವನಲ್ಲ. ಗಳಿಸಿದ ದುಡ್ಡನ್ನಷ್ಟು ಹೆಂಡತಿಗೆ ದಿನವೂ ಒಪ್ಪಿಸಿದರಾಯ್ತು ಅವನ ಕೆಲಸ. ಬೀಬಿ ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ. ಅವಳು ಹೆತ್ತುದು ಒಟ್ಟು ಐದು ಮಕ್ಕಳನ್ನು. (ಒಂದರ ಅನಂತರ ಒಂದಾಗಿ, ಐದೂ ಗಂಡೇ.) ತಮ್ಮ ವಿವಾಹವಾಗಿ ಎಷ್ಟು ಕಾಲವಾಯಿತು? ಮಕ್ಕಳ ವಯಸ್ಸೆಷ್ಟು-ಎಂಬುದನ್ನೆಲ್ಲ ಕೂಡಿಸಿ ಕಳೆದು ಹೇಳುತ್ತಲಿದ್ದವಳು ಇಮಾಮ್‍ಸಾಬಿಯ ಹೆಂಡತಿಯೇ.

ಇದೇ ಮೊನ್ನೆ ಆಕೆ ಅಂದಿದ್ದಳು:

"ಈ ಬಕ್ರೀದ್‌ಗೆ ನಮ್ಮ ಲಗ್ನ ಆಗಿ ಮುವತ್ತು ವರ್ಸ ಆಯ್ತೂಂದ್ರೆ...?

ಅವನಿಗೆ ಅಚ್ಚರಿಯಾಗಿತ್ತು.

"ಹಾಂ? ಹೌದಾ?... ಹಾಗಾದರೆ ನನಗೆಷ್ಟು ವರ್ಷ ಈಗ?"

“ನನ್ನ ಕೇಳ್ತೀರಲ್ಲ? ಅರವತ್ತು ಆಗ್ಲಿಲ್ವೇನು?”

“ಹೌದಾ? ಸರಿ! ಮುದುಕ ಅದೆ ಅನ್ನು!”

“ನೀವು ಮುದುಕ, ನಾನು ಮುದುಕಿ."

ಜೀವನದುದ್ದಕ್ಕೂ ಬಡತನದ ಬುತ್ತಿಯೇ ಆದರೂ, ನೇಗಿಲಗೆರೆಗಳಿಲ್ಲದ ಸುಕ್ಳುಗಳಿಲ್ಲದ ಸೊಂಪಾದ ಮುಖ; ಮೇಣದ ಬೊಂಬೆಯಂತಹ ದುಂಡಗಿನ ಮೃದುಶರೀರ. ಮುಗ್ಧ ಹಸುಳೆಯ ಛಾಯೆ ತುಟಗಲ್ಲಗಳಲ್ಲೆಲ್ಲ. ಮುಖದ ಮೇಲೆ ಬಿಳಿಯ ಬೆಳೆಯಿತ್ತು. ಸೋತು ಜೋತ ತೆಳ್ಳಗಿನ ಮೀಸೆ. ವಿರಳವಾಗಿ ಬೆಳೆದು ತಿಂಗಳಿಗೊಮ್ಮೆ ಕ್ಷೌರಿಕನ ಕತ್ತಿಗೆ ಬಲಿಯಾಗುತ್ತಿದ್ದ ಗಡ್ಡ. ಮಗುತನವನ್ನು ಮರೆಸಲು ಎಳೆಯನೊಬ್ಬ ಕೃತ್ರಿಮ ಗಡ್ಡ-ಮೀಸೆಗಳನ್ನು ಅಂಟಿಸಿಕೊಂಡಹಾಗಿತ್ತು, ಆ ನೋಟ. ಮಹಾ ಸಾತ್ವಿಕನಂತೆ ತೋರುತ್ತಲಿದ್ದ, ನಡುಎತ್ತರದ ಈ ಮನುಷ್ಯ...

'ಕುಕ್‌' 'ಕುಕ್‌'? ಸದ್ದು ಕೇಳಿಸತೊಡಗಿತು, ದೂರದೊಂದು ಹಿಟ್ಟಿನ ಗಿರಣಿಯಿಂದ.

'ಮಿಲ್‌ ಶುರುವಾಯ್ತು.'

ಗಿರಣಿಯ ಕೂಗಿನಿಂದ ಕೆರಳಿತೆನ್ನುವಂತೆ ಕತ್ತೆಯೊಂದು ಅರಚುತ್ತ ದೂರ ಸಾಗಿತು ಹತ್ತಿರದಿಂದ.

ಇಮಾಮ್‌ಸಾಬಿ ಕುಳಿತಿದ್ದ ಒರಗು ಬೆಂಚು ಹೊಸದು. ನಿಲ್ದಾಣದ ಹೊರ ಆವರಣದಲ್ಲಿ ಅಂತಹವು ಎರಡು ಇರಲೆಂದು ರೇಲ್ವೆ ಇಲಾಖೆಯವರು ತರಿಸಿ ಹಾಕಿದ್ದರು. ಅವುಗಳ ಮೇಲೆ ಕುಳಿತವರ ಕಣ್ಣಿಗೆ, ಹೊಸದಾಗಿ ನೆಟ್ಟು ಬೆಳೆಸಿದ್ದ ಹೂವಿನ ಗಿಡಗಳು ಕಾಣುತ್ತಿ ದ್ದುವು.. ದೀಪಸ್ತಂಭದ ಬುಡದಲ್ಲಿ ಮುಳ್ಳುತಂತಿಯ ವೃತ್ತದೊಳಗೆ ಬಂದಿಗಳಾಗಿ (ಸುರಕ್ಷಿತವಾಗಿ) ಬಣ್ಣ ಬಣ್ಣದ ಬಗೆಬಗೆಯ ಹೂಗಳಿದ್ದುವು. ಮೊಗ್ಗುಗಳು; ಅರೆಬಿರಿದ, ಪೂರ್ಣವಾಗಿ ಅರಳಿ ಬಾಡಿ ಜೋಲುತ್ತಿದ್ದ ಹೂಗಳು.

ವಯಸ್ಸಿನೊಡನೆ ಮಂದವಾಗುತ್ತ ನಡೆದಿದ್ದ ಇಮಾವ್‌ಸಾಬಿಯ ದೃಷ್ಟಿ, ಹೂವಿನ ಸಸಿಗಳ ಮೇಲೆ ಸೋಮಾರಿಯಂತೆ ಎರಗಿತು. ಆ ಸೊಬಗಿನ ಆಸ್ವಾದನೆ ಅವನ ಸಾಮರ್ಥ್ಯಕ್ಕೆ ನಿಲುಕದ್ದು. ನೋಟ ಪುಷ್ಪರಾಶಿಯ ಮೇಲಿದ್ದರೂ ಆತ ಯೋಚಿಸುತ್ತಿದ್ದುದು ಬೇರೆಯೇ ಒಂದು;

ಕಿರಿಯ ಮಗನ ಹೆಂಡತಿ ತುಂಬಿದ ಗರ್ಭಿಣಿ. ಬೀಬಿ ನುಡಿದಿದ್ದಳು---"ಇವತ್ತೋ ನಾಳೆಯೋ ಆಗಬಹುದು, ಚೊಚ್ಚಲು."

ಚೊಚ್ಚಲು--

ಆ ಅಂಶ ಮತ್ತೆ ಮತ್ತೆ ನೆನಪಾಗಿ, ಇಮಾಮ್‍ಸಾಬಿಯ ಒಳಗೆ ಚಳಿ ಚಳಿ ಎನಿಸುತ್ತಿತ್ತು.

ಅವನು ತಾತನಾಗಲಿದ್ದುದು ಅದೇ ಮೊದಲನೆಯ ಸಲವೇನೂ ಅಲ್ಲ. ಹಾಗೆ ನೋಡಿದರೆ, ರೆಂಬೆಗಳು ವಿಶಾಲವಾಗಿ ಹರಡಿದ್ದ ವೃಕ್ಷ ಆತ. ಆದರೇನು? ಕೊಂಬೆಗಳು ಬಲಿತಂತೆ ಬೇಕೆ ಬೇರೆ ದಿಕ್ಭುಗಳಿಗೆ ಅವುಗಳನ್ನು ಕಡಿದೊಯ್ದಿದ್ಹರು. ಈಗ ಉಳಿದಿದ್ದುದು ಕಾಂಡ ಮತ್ತು ಕೊನೆಯ ರೆಂಬೆ ಮಾತ್ರ. ಎಲ್ಲ ಗಂಡು ಸಂತಾನವೆಂದೇ ಅಸೂಯೆ ಪಟ್ಟವರೆಷ್ಟು ಜನ! ಹಾಗೆ ಅವರು ಅಡಿದ್ದೇ ಕೆಡಕು ಮಾಡಿತೋ ಏನೋ. ಇಮಾಮ್‍ಸಾಬಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇ ಬಂತು. ಕಿರಿಯ ಒಬ್ಬನ ಹೊರತಾಗಿ ಯಾರೂ ಅವನಿಗೆ ದಕ್ಕಲಿಲ್ಲ.

ಕೂ ಎಂಜಿನಿನ ಜುಕುಜುಕುಜೂ ಆಟವೇ ಎಳೆಯರಿಗೆ. ಹಿರಿಯವನಿಗಿಷ್ಟು ಸಾಲೆ ಓದಿಸಿ ರೈಲ್ವೆಯಲ್ಲಿ ನೌಕರಿ ದೊರಕಿಸಿಕೊಡಬೇಕೆಂದು ಇಮಾಮ್‌‍ಸಾಬಿ ಆಸೆ ಕಟ್ಟಿಕೊಂಡಿದ್ದ. ಆದರೆ, ಹಿರಿಯವನಿಗಷ್ಟೇ ಅಲ್ಲ, ಅವನ ಮಕ್ಕಳು ಯಾರಿಗೂ ಸಾಲೆ ಪ್ರಿಯವಾಗಲಿಲ್ಲ.

“ಅಪ್ಪನಿಗೂ ಹೆಬ್ಬೆಟ್ಟಿನ ಗುರುತು; ಮಕ್ಕಳಿಗೂ ಹೆಬ್ಬಿಟ್ಟಿನ ಗುರುತು. ಅಲ್ಲಾನಿಗೆ ಇದೇ ಇಷ್ಟವೆಂದಾದರೆ ಹಾಗೆಯೇ ಅಗಲಿ” ಎಂದುಕೊಂಡ ಇಮಾಮ್‍ಸಾಬಿ|

ಕುಡಿಮೀಸೆ ಚಿಗುರುವ ವೇಳೆಗೆ ದೊಡ್ಡವನು ಜಟಕಾವಾಲನಾದ. ಸೊಸೆ ತವರಿಗೆ ಹೋಗಿ, ಇಮಾಮ್‍ಸಾಬಿಯ ಮೊಮ್ಮಗನೊಡನೆ ಮರಳಿದಳು.

ಆದರೆ ಆ ಬಗೆಯ ಸಮೃದ್ಧ ಬದುಕಿನ ಸೌಭಾಗ್ಯ ಬಹಳ ದಿನ ಇಮಾಮ್‌‍ಸಾಬಿಗೆ ದೊರೆಯಲಿಲ್ಲ. ಮಗ ಜಗಳವಾಡಿ, ತಾನು ಸಂಪಾದಿಸಿ ಕೂಡಿಟ್ಟಿದ್ದ ಹಣದೊಡನೆ, ಮತ್ತೊಮ್ಮೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಮಗುವಿನೊಡನೆ ಮನೆ ಬಿಟ್ಟು ಮುಂಬಯಿಗೆ ಹೊರಟುಹೋದ.

ಅನಂತರ ಇಬ್ಬರು ಜಗಳವಾಡದೆಯೇ ಮನೆಬಿಟ್ಟು ಹೋದರು, ಉತ್ತರ ಹಿಂದೂಸ್ಥಾನಕ್ಕೆಂದು.

ಊರಿಗೊಮ್ಮೆ ಸರ್ಕಸ್‌ ಬಂದು ಬೀಡು ಬಿಟ್ಟಿತು. ಇಪ್ಪತ್ತು ದಿನ ಅಲ್ಲಿದ್ದು ಡೇರೆ ಕಿತ್ತಾಗ ಇಮಾಮ್‌ಸಾಬಿಯ ನಾಲ್ಕನೆಯ ಹುಡುಗ ನಾಪತ್ತೆಯಾದ. ಸರ್ಕಸಿನವರು ಅಪಹರಿಸಿರಬೇಕೆಂಬ ಶಂಕೆ ತಂದೆಗೆ. ಆ ಶಂಕೆ ಬೇಗನೆ ನಿರಸನವಾಯಿತು.

ಕೊನೆಯ ಮಗನನ್ನು ತಂದೆ ತಾಯಿ ಬಹಳ ಜೋಪಾನವಾಗಿ ಬೆಳೆಸಿದರು. ಆರೈಕೆ ಅತಿಯಾಗಿತ್ತೆಂದೇ ಆತ ಬಡಕಲು ಶರೀರದವನಾದ. ಒಮ್ಮೆ ಆತ ವಿಷಮಶೀತಜ್ವರಕ್ಕೆ ತುತ್ತಾದಾಗಲಂತೂ ಇಮಾಮ್‍ಸಾಬಿ ಅರೆಹುಚ್ಛನಾದ. ಅವನ ಹೆಂಡತಿ, ಮುಸಲ್ವಾನ-ಹಿಂದೂ ದೇವರಿಬ್ಬರಿಗೂ ಹರಕೆಹೊತ್ತಳು... ಹುಡುಗ ಕುತ್ತಿನಿಂದ ಪಾರಾದ... ಹಳ್ಳಿಯ ಹುಡುಗಿಯೊಬ್ಬಳು ಅವನ ಮಡದಿ ಯಾಗಿ ಬಂದಳು.

ಆ ಕಿರಿಯವನೇ, ತನ್ನ ಜೀವನಾಧಾರವಾದ ರೈಲ್ವೆ ಶಾಖೆಗೆ ಇಮಾಮ್‍ಸಾಬಿ ನೀಡಿದ ಕಾಣ್ಕೆ. ಹಿಂದೆ ಇಬ್ಬರೇ ಹಮಾಲರಿದ್ದ ನಿಲ್ದಾಣದಲ್ಲಿ ಈಗ ನಾಲ್ವರಿದ್ದರು. ಇಮಾಮ್‌ಸಾಬಿಯ ಮಗ ಕರೀಂ ಐದನೆಯವನಾದ.

"ನನಗೆ ವಯಸ್ಸಾಯ್ತು. ಇನ್ನು ಕರೀಂ ಇರ್ತಾನೆ."

“ನೀನು ರಾತ್ರಿ ನಿದ್ದೆ ಕೆಡ್ಬೇಡ, ದಾದಾಮಿಯಾ ತ್ರೀ-ಆಪ್‌-ಫೋರ್‌-ಡೌನ್‌ ಎಲ್ಲಾ ಕರೀಂ ನೋಡ್ಕೊಳ್ಲಿ."

“ಹೂಂ, ಹೂಂ."

ಹೂಂ-ಎಂದನಾದರೂ, ಸದಾ ಕಾಲವೂ ರಾತ್ರಿಯ ದುಡಿಮೆಯನ್ನು ಮಗನಿಗೇ ವಹಿಸಿಕೊಡಲಿಲ್ಲ ಇಮಾಮಸಾಬಿ,. ಒಂದು ವಾರ ಇವನಾದರೆ ಒಂದು ವಾರ ಅವನು.

ಆ ಹುಡುಗಿ, ತನ್ನ ಕಿರಿಯ ಸೊಸೆ, ಈಗ ತುಂಬಿದ ಗರ್ಭಿಣಿ. ಹಳ್ಳಿಯಲ್ಲಿ ಬಾಣಂತಿತನಕ್ಕೆ ಅನುಕೂಲವಿಲ್ಲವೆಂದು ಇಮಾನ್‌‍ಸಾಬಿ ಇಲ್ಲಿಯೇ ಇರಿಸಿಕೊಂಡಿದ್ದ. ಅಲ್ಲದೆ, ಹೆಣ್ಣು ಮಕ್ಕಳಿಲ್ಲದ ಆ ಮುಗ್ಧೆಯ ಬಗೆಗೆ ವಿಶೇಷ ಒಲವನ್ನು ತೋರಿಸುತ್ತಲಿದ್ದ ಇಮಾಮ್‌ಸಾಬಿಯ ಹೆಂಡತಿ ಆ ಹುಡುಗಿಗೆ ಅತ್ತೆಯೂ ಆಗಿದ್ದಳು, ಅಮ್ಮನೂ ಆಗಿದ್ದಳು.

ಚೊಚ್ಚಲ ಹೆರಿಗೆ ಬೇರೆ__

ಬೆನ್ನು ಹುರಿಯನ್ನು ನಡುಕ ಮುತ್ತಿಡಲು, ಇಮಾಮ್‍ಸಾಬಿ ತನ್ನಷ್ಟಕ್ಕೆ ಅಂದುಕೊಂಡ:

“ಈಗ ಸೂಲಗಿತ್ತಿ ಇದ್ದಾಳೆ. ತಾನೆಲ್ಲ ನೋಡ್ಫೊಳ್ತೀನಿ ಅಂದಿದಾಳೆ. ಐದು ರೂಪಾಯಿ ಕೊಟ್ಟರಾಯ್ತು."

ಆ ಸಾರೆ, ತನ್ನ ಮೊದಲ ಬೀಬಿಯ ಹೆರಿಗೆಯ ವೇಳೆ, ಸೂಲಗಿತ್ತಿ ಇರಲಿಲ್ಲ.

ತಳವೇ ಇಲ್ಲವೇನೋ ಎನ್ನುವಂತಹ ಆಳದಿಂದ ಇಣಿಕಿ ನೋಡುತ್ತಿತ್ತು ನೋವಿನ ಆ ನೆನಪು.

“ಈಗ ಯಾಕೆ ಆ ಇಚಾರ..."

ಇದಕ್ಕಿಂತಲೂ ಹಿಂದಕ್ಕೆ ಸರಿಯತು ಸ್ಮರಣೆ.

ತಂದೆಯನ್ನು ಕಳೆದುಕೊಂಡಿದ್ದರೂ ಬಾಲ್ಯ ಸುಖಕರವಾಗಿಯೇ ಇತ್ತು ಸೋದರಮಾವ ನೀಡಿದ್ದ ಆಶ್ರಯದ ನೆರವಿನಿಂದ.

ಆ ಮಾವನೂ ಹಮಾಲ. ರೈಲ್ವೆ ಸ್ಪೇಷನ್ಸಿನ ಮುಖದರ್ಶನ ಏಳು, ಎಂಟಿರ ಹರೆಯದವನಾಗಿದ್ದಾಗಲೇ ತನಗೆ ಆಗಿತ್ತು. ಪ್ರತಿಯೊಂದು ಗಾಡಿಯನ್ನೂ ಇದಿರುನೋಡುತ್ತ ತಾನು ಕಳೆಯುತ್ತಿದ್ದ ಆ ದಿನಗಳು...

ಧಡ್‌ ಧಡಾಲ್!

[ಸಿಡಿಮದ್ದು ಕಲ್ಲುಬಂಡೆಗಳನ್ನು ಒಡೆದಂತಹ, ಬೆಟ್ಟದೊಂದು ತುಣುಕು ಜಾರಿ ಪ್ರಪಾತಕ್ಕೆ ಬಿದ್ದಂತಹ, ಸಹೆಸ್ರ ತೋಫುಗಳು ಏಕಕಾಲದಲ್ಲೇ ಗುಂಡಿನ ಮಳೆಗಳೆದಂತಹ್ ಸದ್ದು]

“ಆಕ್ಸಿಡೆಂಟ್!"

ಇಮಾಮ್‌ಸಾಬಿ ಹೌಹಾರಿ ಎದ್ದು ಬೊಬ್ಬಿಟ್ಟ:

“ಆಕ್ಸಿಡೆಂಟ್!"

ಬೆಂಕಿ ಬಿದ್ದ ಮನೆಯ ಎದುರು ನಿಂತು ಆರ್ತನಾದ ಮಾಡುವ ಎಳೆಯ ಬಾಲಕನಂತೆ ಅರಚುತ್ತ ಇಮಾಮ್‌ಸಾಬಿ, ನಿಲ್ದಾಣದ ಹೆಬ್ಬಾಗಿಲಿನತ್ತ ಧಾವಿಸಿದ.

ಓಡುತ್ತ, ಏದುಸಿರು ಬಿಡುತ್ತ, ಅತ ಕೂಗಿ ಕೇಳಿದ:

"ಎಲ್ಲಿ ಏನಾಯ್ತು?"

ಕಿವಿಯಿಂದ ಧ್ವನಿ ಕೇಳಿ, ತಮ್ಮ ಕೊಠಡಿಯಿಂದ ಹೊರಬಂದ ಸ್ಟೇಶನ್‌ ಮಾಸ್ತರು, ಓಡಿಬರುತ್ತಲಿದ್ದ ಇಮಾನರ್‌ಸಾಬಿಯನ್ನು ತಡೆಯುತ್ತ ಅಂದರು:

“ಯಾಕಪ್ಪಾ? ಏನಿದು?”

ಮಾಸ್ತರು ಅಲ್ಲಿಗೆ ಹೊಸಬರು. ಆದರೂ ಇಮಾಮ್‌ಸಾಬಿಯ ಬಗೆಗೆ ಆಗಲೇ ಅವರು ಸಾಕಷ್ಟು ತಿಳಿದಿದ್ದರು. ಅವರ ನೋಟ ಛೇಡಿಸುತ್ತಿತ್ತು. ಮುಗುಳುನಗೆ ಮೂಡಿತ್ತು ಮುಖದ ಮೇಲೆ.

“ಆಕ್ಸಿಡೆಂಟ್‌ ಆಗಿಲ್ವ ಮಾಸ್ತರ್‌ಸಾಬ್‌?"

“ಮತ್ತೆ ಕನಸು ಬಿತ್ತೇನಪ್ಪ?”

ನಿಲ್ದಾಣದೆದುರಿಗೆ ಮೂರನೆಯ ಸಾಲಿನಲ್ಲಿ ಕಟ್ಟಿಗೆ ತಾಗಿ ನಿಂತಿತ್ತು ಮಾಲ್‌ಗಾಡಿ. ತುಂಬಿದ್ದ ಡಬ್ಬಿಯೊಂದನ್ನು ತಂದು ಎಂಜಿನು, ಗಾಡಿಗೆ ಅಂಟಿಸಿತ್ತು. ಆಗ ಕೊಂಡಿ ತಗಲಿ, ತಮಗೆ ನೋವಾಯಿತೆಂದು ಎಲ್ಲ ಡಬ್ಬಿಗಳೂ ತುಸು ಗದ್ದಲ ಮಾಡಿದ್ದುವು.

ಅದೇ ಸದ್ದು-ಧಡ್‌ಧಡಾಲ್‌.

ಆಕ್ಸಿಡೆಂಟ್!

ನಾಚಿಕೆಯಿಂದ ಇಮಾಮ್‌ಸಾಬಿಯ ಮುಖ ಕೆಂಪೇರಿತು.

“ವಯಸ್ಸಾಗೋಯ್ತು ನಂಗೆ!” ಎಂದು ನುಡಿದು, ತಲೆ ತಗ್ಗಿಸಿ ನೆಲ ನೋಡುತ್ತ, ಪ್ಲಾಟ್‌ಫಾರ್ಮಿನುದ್ದಕ್ಕೂ ಆತ ನಡೆದುಹೋದ.

ಕಟ್ಟಡ ಮುಗಿದು ಕಪ್ಪು ಪಟ್ಟಿಯ ಬೇಲಿ ಮೊದಲಾದೆಡೆ, ಹೊರಗೆ ಬೆಳೆದು ಒಳಕ್ಕೂ ನೆರಳು ನೀಡಿದ್ದ ಹುಣಸೆಮರದ ಕೆಳಗೆ ಬೇಲಿಗೊರಗಿ ರುಮಾಲು ತೆಗೆದು ಕೆಳಕ್ಕೆಳೆದು, ಸುರಳಿ ಬಿಚ್ಚಿಕೊಂಡ ತುದಿಯಿಂದ ತಲೆಯನ್ನೂ ಮುಖವನ್ನೂ ಒರೆಸಿದ.

ಹೇಗೆ ಬೇಸ್ತು ಬಿದ್ದೆ ತಾನು!

ಹಿಂದೆಯೂ ಹತ್ತಾರು ಸಾರೆ ಆ ರೀತಿ ಅವನಿಗೆ ಆಗಿತ್ತು. ಗಾಢನಿದ್ರೆಯಲ್ಲೂ ಕನಸು ಕಂಡು. ಮೂಕನಂತೆ ಅಸ್ಪಷ್ಟ ಸ್ವರ ಹೊರಡಿಸುತ್ತ ಆತ ಗಡಬಡಿಸಿ ಎದ್ದುದಿತ್ತು. ಅವನು ಯುವಕನಾಗಿದ್ದಾಗ ಅವನ ಊರಿನಿಂದ ಕೆಲವೇ ಮೈಲುಗಳಾಚೆ ಸಂಭವಿಸಿದ್ದೊಂದು ರೈಲು ಅವಘಡದ ಪ್ರತಿಧ್ವನಿ ಅದಿಲ್ಲ. ಅಪಘಾತನನ್ನು ಕಣ್ಣಾರೆ ಕಂಡಿರಲಿಲ್ಲ ಇಮಾಮ್‌ಸಾಬಿ. ಆದರೂ ಅದು ಸಂಭವಿಸಿದ ಕೆಲವೇ ಗಂಟಿಗಳಲ್ಲಿ, ಆತ ಸ್ಥಳಕ್ಕೆ ಬಂದಿದ್ದ. ಕತ್ತಲಲ್ಲಿ ಬರಿಗಾಲಲ್ಲೇ ನಡೆದು ತಲುಪಿದ್ದ. ಮುಂದೆ ಕೆಲವೇ ನಿಮಿಷಗಳಲ್ಲಿ, ವೈದ್ಯಕೀಯ ಸಹಾಯವನ್ನೂ ಮತ್ತಿತರ ಪರಿಹಾರವನ್ನೂ ರಿಲೀಫ್‌ ಟ್ರೈನು ತಂದಿತ್ತು. ಅದರಲ್ಲಿದ್ದ ನಗರದ ರೈಲ್ವೆ ಆಳುಗಳನ್ನು ಇಮಾಮ್‌‌ಸಾಬಿ ಸೇರಿಕೊಂಡು ಆರ್ತರಿಗೆ ನೆರವು ನೀಡಿದ್ದ. ಮುಳುಗಿ ಸಾಯಲು ಸಾಕಷ್ಟು ನೀರಿಲ್ಲದ ನದಿ. ಆದರೂ ಹಳೆಯ ಸೇತುವೆ ಬಿರುಕುಬಿಟ್ಟು, ಎಂಜಿನ್‌ ಹಾಗೂ ಎದುರಿನ ಮೂರು ಡಬ್ಬಿಗಳು ಕೆಳಕ್ಕೆ ಉರುಳಿದ್ದುವು. ಪ್ರಯಾಣಿಕರ ಆಕ್ರಂದನ ಕರ್ಣ ಭೇದಕವಾಗಿತ್ತು. ಅವಸರ ಅವಸರವಾಗಿ ವ್ಯವಸ್ಥೆಗೊಳಿಸಿದ ಸರ್ಚ್ ಲೈಟುಗಳ ಬೆಳಕಿನಲ್ಲಿ, ಸಾವಿನ ಬೋನು ಕತ್ತರಿಗಳಲ್ಲಿ ಸಿಲುಕಿಕೊಂಡವರ-ಬದುಕಿ ಉಳಿದವರ- ರಕ್ಷಣೆಗಾಗಿ ಯತ್ನ ನಡೆಯಿತು. ಬಾಹುಗಳಲ್ಲಿ ನೂರು ಜನರ ಬಲವಿದ್ದವರಂತೆ ಇಮಾಮಸಾಬಿ ದುಡಿದ. ಬೆಳಕು ಹರಿದು ಸೂರ್ಯ ನಡುನೆತ್ತಿಗೆ ಬರುವ ಹೊತ್ತಿಗೆ ಆ ದುಡಿಮೆ ಮುಗಿಯಿತು. ಸತ್ತವರ ಶವಗಳೆಲ್ಲ ದೊರೆತಿದ್ಹುವು. ಐವತ್ತೆಂಟು ಜನ. ಗಂಭೀರ ಸ್ವರೂಪದ ಗಾಯಗಳಾಗಿದ್ದವರು ಇಪ್ಪತ್ತೆರಡು ಮಂದಿ. ಸಣ್ಣ ಪುಟ್ಟ ಗಾಯಗಳು ಇನ್ನೂ ಹಲವರಿಗೆ.

ಮುಂದೆ ಅನೇಕ ವರ್ಷಗಳ ನಂತರವೂ ಕನಸಿನಲ್ಲಿ ಕಾಣುವಷ್ಟು ಭೀಕರವಾಗಿತ್ತು ಆ ಫಟನೆ.

ಅಂದು ದುಡಿಮೆ ಮುಗಿದಾಗ, ಎಲ್ಲ ಬಳಲಿಕೆಯೂ ಒಟ್ಟಿಗೆ ಕಾಣಿಸಿಕೊಂಡು ಕಾಲು ಕಟ್ಟಿತು. ಅವಘಡದ ಸನ್ನಿವೇಶವನ್ನು ನೋಡಲೆಂದು ಇಮಾಮ್‌‌ಸಾಬಿ ಕುಳಿತ. ಮೈ ಥರಥರನೆ ನಡುಸುತ್ತಿತ್ತು. ತೀವ್ರಗೊಂಡಿದ್ದ ಎದೆಗುಂಡಿಯ ಬಡಿತ ಇನ್ನೂ ಕಡಿಮೆಯಾಗಿರಲಿಲ್ಲ. ತಲೆ, ಮುಖ, ಕಂಕುಳು, ಎದೆ-ಎಲ್ಲ ಬೆವತಿದ್ದುವು.

ಕಂಪಿಸುತ್ತಿದ್ದ ಬೆರಳುಗಳಿಂದ ಕೆಂಪು ರುಮಾಲನ್ನು ಸರಿಪಡಿಸುತ್ತ ಊರಿನಿಂತ ಬಂದಿದ್ದ ಹಲವರೊಡನೆ, ರಾತ್ರೆ ತಾನು ಕಂಡುದನ್ನು ಅವರಿಗೆ ಬಣ್ಣಿಸುತ್ತ, ಇಮಾವರ್‌ಸಾಬಿ ಹಿಂದಿರುಗಿದ.

ಅವನನ್ನು ಇದಿರ್ಗೊಂಡವರಲ್ಲಿ ಕೆಲವರು ಹೇಳಿದ್ದರು:

“ಭಾರಿ ಸಂಪಾದನೆಯಾಗಿರ್‍ಬೇಕು ಇಮಾಮ್‌ಗೆ!”

ಅದನ್ನು ಕೇಳಿ, ರಕ್ತವೆಲ್ಲ ಮುಖಕ್ಕೇರಿ ಬಂದ್ಕು ಕಣ್ಣಿಗೆ ಕತ್ತಲು ಕವಿದಂತಾಯಿತು ಈತನಿಗೆ.

ಇವನು ಸ್ವರವೇರಿಸಿ ಅಂದಿದ್ದ:

"ಥೂ ನಿಮ್ಮ! ನೀವು ಮನುಷ್ಯರೊ ಮೃಗಗಳೊ?"

ಶ್ರೀಮಂತ ಪ್ರಯಾಣಿಕರು ಕೆಲವರು ಅವನಿಗೆ ಹಣ ಕೊಡಲು ಬಂದಿದ್ಹುದು ನಿಜ. ಆದರೆ ಬಿಡಿಕಾಸನ್ನೂ ಅವನು ಮುಟ್ಟಿರಲಿಲ್ಲ.

ಹಣಕಾಸಿನ ವಿಷಯದಲ್ಲಿ ಅವನಿಗೂ ಅವನ ಸಹೋದ್ಯೋಗಿಗಳಿಗೂ ನಡುವೆ ಸದಾಕಾಲವೂ ಭಿನ್ನಾಭಿಪ್ರಾಯವಿದ್ದೇ ಇತ್ತು. ಹೊಸ ಮುಖಗಳನ್ನು ಕಾಡಿಸಿ ಪೀಡಿಸಿ ಅದೆಷ್ಟು ಕಿತ್ತುಕೊಳ್ಳಲು ಅವರು ಯತ್ನಿಸುತ್ತಿದ್ದರು! ಎಷ್ಟೋ ಸಾರಿ ಯಶಸ್ವಿಗಳಾಗುತ್ತಿದ್ದರು. ಯಾರಾದರೂ ಗದರಿದರೆ ಜಗಳ ಕಾಯುತ್ತಿದ್ದರು. ಇಮಾಮ್‌ಸಾಬಿ ಮಾತ್ರ, ಅಷ್ಟು ಕೊಡಿ--ಇಷ್ಟು ಕೊಡಿ ಎಂದು ಯಾವತ್ತೂ ಕೇಳಿದವನಲ್ಲ. "ಎಷ್ಟು ಕೂಲಿ?" ಎಂದು ಯಾರಾದರೂ ಪ್ರಶ್ನಿಸಿದರೆ, ಇಂತಿಷ್ಟು-ಎಂದು ನ್ಕಾಯಸಮ್ಮತವಾದುದನ್ನು ತಿಳಿಸುತ್ತಿದ್ದ....

ಮತ್ತೆ ಹಲ್ಲೋ! ಹಲ್ಲೋ! (ಫೋನಿನ ಖಣಖಣತ್ಯಾರ)

ನೌಕರಿ ಘಂಟಿ ಬಾರಿಸಿದ.

ಕೆಲ ನಿಮಿಷಗಳ ಅನಂತರ ಬೀಗ ತೆಗೆದು ಹಿಡಿಯನ್ನು ಎಳೆದ. ಕೈಕಂಬ ಮಿಸುಕಿ ಸಿಗ್ನಲ್‌ ಬಿತ್ತು.

ಘಂಟಿಯ ಸಪ್ಸಳ ಇಮಾಮ್‌ಸಾಬಿಗೆ ಕೇಳಿಸಿದುದು ಸ್ವಲ್ಪ ಅಸ್ಪಷ್ಟವಾಗಿಯೇ. ಕೈಕಂಬ ಕಾಣಿಸುತ್ತಿದ್ದುದೂ ಮಸುಕು ಮಸುಕಾಗಿಯೇ. ಆದರೂ ಸಿಗ್ನಲ್‌ ಬಿತ್ತೆಂಬುದನ್ನು ಅಭ್ಯಾಸ ಬಲದಿಂದ ಆತ ಬಲ್ಲ.

ನಿಲ್ದಾಣದ ನೀರವತೆ ಮಾಯವಾಗಿ ಗುಸುಗುಸು ಸದ್ದು ಆಗಲೇ ಕೇಳಿಸತೊಡಗಿತ್ತು. ಸೋಮಾರಿಯಾದೆ ತಾನು-ಎಂದು ಛೀಗಳೆಯುತ್ತ ಇಮಾವರ್‌ ಸಾಬಿ ಎದ್ದು ರುಮಾಲು ಸುತ್ತಿದ. ಅವನ ಬರಿಯ ಪಾದಗಳು ದೇಹದ ಭಾರ ವನ್ನು ಹೊತ್ತು ಮಹಾದ್ವಾರದೆಡೆಗೆ ಚಲಿಸಿದುವು.

ಗೂಡ್ಸ್‌ ಕಟ್ಟೆಯಲ್ಲಿದ್ದ ಮೂವರು ಹೆಮಾಲರು ಅದೆಷ್ಟು ಹೊತ್ತಿಗೆ ಇತ್ತ ಜಿಗಿದರೊ! ಪ್ರಯಾಣಿಕರ ಸುಖದುಃಖ ವಿಚಾರಿಸುವುದರಲ್ಲಿ ಅವರಾಗಲೇ ಮಗ್ನರಾಗಿದ್ದರು. ಯುವಕರು. ಒಬ್ಬ ನಂತೂ ಮಹಾ ಖದೀಮ.

ಪ್ಯಾಸೆಂಜರ್‌ ಗಾಡಿ. ಹತ್ತುವವರೂ ಕಡಮೆ, ಇಳಿಯುವವರೂ ಕಡಮೆ. ಇಮಾಮ್‍ಸಾಬಿ ಹೊರಗೆ ಹೋಗದೆ ಒಳಗೇ ನಿಂತ.

ಲಗುಬಗೆಯಿಂದ ಗಾಡಿ ಬಂತು. ನಿಂತು ಮುಂದಕ್ಕೆ ಸಾಗಿತು. ಕಣ್ಣೆದುರು ಅತ್ತಿತ್ತ ಸರಿದ ಜನರು ತುಂತುರು ಮಳೆಯಂತೆ ಚೆದರಿ ಮಾಯವಾದರು.

ಅಪರಿಚಿತನಂತೆ ಕಂಡ ಒಬ್ಬರ ಹಗುರವಾದ ಸೂಟ್‌ಕೇಸನ್ನು ಇಮಾಮ್‌‍ಸಾಬಿ ಹೊರಕ್ಕೊಯ್ದು ಜಟಕಾದಲ್ಲಿರಿಸಿದ. ಅವರಿತ್ತ ಎರಡಾಣೆಯನ್ನು ತನ್ನ ನೀಲಿ ಅಂಗಿಯ ಜೇಬಿಗೆ ಸೇರಿಸಿದ.

ಮೊದಲಾದರೆ, ಹೋಗುತ್ತಿದ್ದವರು ಬರುತ್ತಿದ್ದವರೆಲ್ಲ ಪರಿಚಿತರೇ. ಈಗ ಕೆಲವು ವರ್ಷಗಳಿಂದ ಬೀಡಿ ಕಾರಖಾನೆಗಳಾಗಿ, ಹತ್ತಿ ಹಿಂಜುವ ಒಂದು ಗಿರಣಿಯೂ ಪ್ರಾರಂಭವಾಗಿ, ಊರಿನ ಜನಸಂಖ್ಯೆ ಹೆಚ್ಚಿತ್ತು. ಹಲವು ಹೊಸ ಮುಖಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದುವು.

ಸ್ವತಃ ನಿಲ್ದಾಣವೇ ಎಷ್ಟೊಂದು ಬದಲಾಗಿ ಬಿಟ್ಟಿತ್ತು! ಸೀಮೆಎಣ್ಣೆಯ ಆಗಿನ ಮಿಣಿ ಮಿಣಿ ದೀಪಗಳೆಲ್ಲಿ, ಢಾಳಾಗಿ ಉರಿಯುವ ಈಗಿನ ವಿದ್ಯುತ್‌ ಬಲ್ಬುಗಳೆಲ್ಲಿ! ಆಗ ಸ್ಟೇಷನ್‌ ಮಾಸ್ಟರು ಎಲ್ಲ ಕೆಲಸವನ್ನೂ ಮಾಡಬೇಕಾಗಿತ್ತು. ಬಕೆಟ್‌ ಮಾರುವುದು, ಕೀಲಿಕೈ ಕೊಡುವುದು, ಪಡೆಯುವುದು, ಬಾವುಟ ಬೀಸುವುದು, ಗೇಟು ತೆರೆದು ಇಳಿದವರನ್ನು ಹೊರಬಿಡುವುದು-ಪ್ರತಿಯೊಂದನ್ನೂ. ಈಗ ಅವರಿಗೊಬ್ಬ ಸಹಾಯಕನಿದ್ದ. ಗೂಡ್ಸ್‌ ವಿಭಾಗವನ್ನು ನೋಡಿಕೊಳ್ಳಲು ಮತ್ತೂ ಒಬ್ಬನಿದ್ದ. ಹಿಂದಿನ ಕಟ್ಟಡವೂ ಗುರುತು ಸಿಗದಂತೆ ಮಾರ್ಪಾಟು ಹೊಂದಿತ್ತು. ಹೆಂಚುಗಳೆಲ್ಪ ಮಾಯವಾಗಿ ತಾರಸಿ ಛಾವಣಿಗಳು ಎತ್ತರದಲ್ಲಿ ಹರಡಿಕೊಂಡಿದ್ದುವು. ಹಳೆಯ ತಲೆಮಾರಿನ ಮಾಸ್ತರುಗಳೂ ಈಗಿಲ್ಲ. ಇತ್ತೀಚಿನ ಒಬ್ಬಿಬ್ಬರಂತೂ ಇಮಾಮ್‌ಸಾಬಿಯನ್ನು "ಹಮಾಲ್‌" ಎನ್ನುತ್ತಿರಲಿಲ್ಲ; "ಫೋರ್ಟರ್" ಎಂದು ಕರೆಯುತ್ತಿದ್ದರು. ಕೈಗೆ ಕಟ್ಟಿಕೊಳ್ಳಲು ಹಿತ್ತಾಳೆಯ ಬಿಲ್ಲೆಗಳು ಬಂದಿದ್ದುವು. ಪೋರ್ಟರನ ನಂಬರು, "ಒಂದು ಮಣವನ್ನು ಮೀರದ ಹೇರಿಗೆ ಎರಡಾಣೆ." ಅದನ್ನು ಧರಿಸಲೇಬೇಕಾಗಿ ಬಂದಾಗ ಇಮಾಮ್‌‌ಸಾಬಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಅಷ್ಟು ಮಟ್ಟಿನ ಅವಿಶ್ವಾಸಕ್ಕೂ ಪ್ರಾಪ್ತವಾಯಿತೆ ತನ್ನ ವೃತ್ತಿ? ಇಂತಹ ಅವಮಾನವನ್ನೂ ಸಹಿಸಬೇಕೆ ತಾನು? ಆದರೆ ಅವನ ಮಗ ಕರೀಮನಿಗೆ ಆ ಬಗೆಯ ಯಾವ ಕಸಿವಿಸಿಯೂ ಇಲ್ಲ. "ರೂಲ್ಸ್‌ ಬಾಬಾ, ರೂಲ್ಸ್‌" ಎನ್ನುತ್ತಿದ್ದ ಆತ.

ಎರಡು ತಲೆಮಾರುಗಳ ನಡುವಿನ ಅಂತರ ನೆನೆದು ಇಮಾಮ್‌ಸಾಬಿಗೆ ಸೋಜಿಗನೆನಿಸುತ್ತಿತ್ತು.

..ಅರಿವಿಲ್ಲದಂತೆಯೇ ತನ್ನ ಮುಖವನ್ನು ಆವರಿಸಿದ ಮಂದಹಾಸವನ್ನು ಬದಿಗೆ ಸರಿಸುತ್ತ ಇಮಾಮ್‌ಸಾಬಿ, ಮತ್ತೆ ಹೊರಗಿನ ಒರಗುಬೆಂಚಿನತ್ತ ಸಾಗೋಣವೇ ಎಂದು ನೋಡಿದ. ಆದರೆ ಬಿಸಿಲಿನ ಝಳ ಕಣ ಇನ್ನು ಕುಕ್ಕಿತು. ಪ್ಲಾಟ್‍ಫಾರ್ಮಿನುದ್ದಕ್ಕೂ ಎರಡು ಸಾರೆ ಅತ್ತಿತ್ತ ನಡೆದ.

ಇನ್ನೂ ಪೂನಾದಿಂದ ಬರುವ ಮೇಲ್‌ಗಾಡಿ. ಅದಾದ ಮೇಲೆ ಹೆಂಡತಿ ತರುವ ಬುತ್ತಿಯೂಟ. ಮುಂದೆ, ಬೆಂಗಳೂರಿನಿಂದ ಬರುವ ಮೇಲ್‌ಗಾಡಿ. ನಾಲ್ಕರ ಸುಮಾರಿಗೊಂದು ಲೋಕಲ್‌. ಸಂಜೆಗೆ ದಕ್ಷಿಣಾಭಿಮುಖವಾಗಿ ಪ್ಯಾಸೆಂಜರ್‌. ಅದರ ನಿರ್ಗಮನದ ಬಳಿಕ ತಾನು ಮನೆಗೆ....

"ಇವತ್ತೋ ನಾಳೆಯೋ ಆಗಬಹುದು."

_ಇವತ್ತು. ರಾತ್ರೆಯೇ ಆಗಲೂಬಹುದು.

ಗೇಟಿನ ಹೊರಗೆ ಗೋಡೆಗೊರಗಿ ಇಮಾಮ್‍ಸಾಬಿ ಕುಳಿತ. ಜನ ಬರತೊಡಗಿದ್ದರು. ಮೂರನೆಯ ತರಗತಿಯವರು.

ಫೋನ್ ಕರೆ ಗಂಟೆ.

ಒಂಟಿ ಎತ್ತಿನ ಗಾಡಿಯಲ್ಲಿ ಸಾಮಾನು ಹೇರಿಸಿಕೊಂಡು ಸಂಸಾರವೊಂದು ಬಂತು. "ಯಾರು? ಕಾಣಿಸುತ್ತಿಲ್ಲ ಸರಿಯಾಗಿ.

ಅಬ್ದುಲ್ಲನ ಸ್ವರ ಕೇಳಿಸಿತು.

"ಬಾ ದಾದಾಮಿಯಾ."

ಇಮಾವು ಸಾಬಿ ಎದ್ದು ಅಬ್ದುಲ್ಲನನ್ನು ಹಿಂಬಾಲಿಸಿದ.

"ಒಟ್ಟು ಹನ್ನೊಂದು ಸಾಮಾನು. ಮೊದಲೇ ಹೇಳಿಬಿಡಿ. ಆಮೇಲೆ ತಕರಾರು ಬೇಡ.

ಅಬ್ದುಲ್ಲ:

"ಮೂರು ರೂಪಾಯಿ ಕೊಟ್ಬಿಡಿ ಬುದ್ದಿ..."

"ಮೂರು ರೂಪಾಯಿ! ಎಲ್ಲಾದರೂ ಉಂಟೆ? ಒಂದು ರೂಪಾಯಿ ಕೊಡ್ತೀನಿ- ಇಬ್ಬರಿಗೂ ಸೇರಿಸಿ."

ನರೆಗೂದಲಿಗೆ ಗೌರವ ಕೊಡುವವನಂತೆ ಇಮಾಮ್‌ಸಾಬಿಯತ್ತ ತಿರುಗಿ ಆತ ಮತ್ತೂ ಅಂದ:

"ಸರಿಯೇನಪ್ಪ?"

ಅಬ್ದುಲ್ಲನ ಕೆಕ್ಕರಗಣ್ಣನ್ನ ಲಕ್ಷ್ಯಕ್ಕೆ ತರದೆ ಇಮಾಮ್‌ಸಾಬಿಯೆಂದ:

"ಅನ್ನೆರಡನ್ನೆರಡಾಣೆ ಕೊಡಿ ಸೋಮಿ."

..ರೈಲು ಬಂದು ಹೋಯಿತು. ದೊರೆತ ಒಂದೂವರೆಯಿಂದ ಎಂಟಾಣೆಯ ನಾಣ್ಯವನ್ನು ಅಬ್ದುಲ್ಲ ಇಮಾಮ್‌ ಸಾಬಿಗೆ ಕೊಟ್ಟು, ಬಳಿಕ ತನ್ನ ಜೇಬಿನೊಳಗಿಂದ ಸಣ್ಣ ಪುಟ್ಟ ನಾಣ್ಯಗಳು ಕೆಲವನ್ನು ತೆಗೆದು ಮುದುಕನಿಗೆ ಕೊಡುತ್ತ ಅಂದ:

“ಇಪ್ಪತ್ತೈದು ನಯೇ ಸೈಸೆ...... ನೀನು ಬಾಯಿ ಮುಚ್ಕೊಂಡಿದ್ದಿದ್ದರೆ ಒಂದೊಂದು ರೂಪಾಯಿಯಾದರೂ ಬರ್‍ತಿತ್ತು."

“ಹೋಗಲಿ ಬಿಡು," ಎಂದ ಇಮಾಮ್‍ಸಾಬಿ.

ನಯೇ ಪೈಸೆಗಳ ಲೆಕ್ಕ ಅವನಿಗೆ ತಿಳಿಯದು. ಆದರೆ ತನ್ನ ಕಣ್ಣೆದುರಲ್ಲೇ ಬೆಳೆದ ಅಬ್ದುಲ್ಲನಾಗಲೀ ಹುಡುಗರಾಗಲೀ ತನಗೆ ಮೋಸಮಾಡಲಾರರೆಂಬ ವಿಶ್ವಾಸವಿತ್ತು ಅವನಿಗೆ.

ಇನ್ನೊಬ್ಬ ಹಮಾಲ ಅತ್ತ ಬರುತ್ತ ಅಂದ:

"ಪೂನಾ ಗಾಡಿ ತೊಂಬತ್ತು ಮಿನಿಟ್‌ ಲೇಟ್‌."

ಗಾಡಿ ತಡವಾಗುವುದಂತೂ ಹೊಸದಲ್ಲ. ತಡವಾಗದ ದಿನವಾದರೂ ಯಾವುದು? ಹತ್ತಿಪ್ಪತ್ತು ವರ್ಷಗಳ ಹಿಂದೆಯೊಂದು ಯುದ್ಧ ನಡೆದಿತ್ತಲ್ಲ? ಆಗ ಅಸ್ತವ್ಯಸ್ತವಾಗಿದ್ದ ರೈಲು ವ್ಯವಸ್ಥೆ ಸರಿ ಹೋಗಿಯೇ ಇರಲಿಲ್ಲ.

ನಿಲ್ದಾಣ ಮತ್ತೆ ನಿರ್ಜನವಾಯಿತು. ಮಾಸ್ತರರು ಊಟಕ್ಕೆ ಹೋದರು. ಇಬ್ಬರು ಹಮಾಲರು ಊಟಕ್ಕೆ ತೆರಳಿದರು. ಒಬ್ಬ ಪ್ಲಾಟ್‌ ಫಾರ್ಮಿನ ಮೇಲೆಯೇ ಒಂದೆಡೆ ಮೈ ಚೆಲ್ಲಿ, ಕೆಂಪು ರುಮಾಲನ್ನು ದಿಂಬಾಗಿ ಮಾಡಿ, ನಿದ್ದೆ ಹೋದ.

ಇಮಾಮ್‍ಸಾಬಿ ಪ್ಲಾಟ್‌ಫಾರ್ಮಿನ ಉತ್ತರ ತುದಿಗೆ ಸಾಗಿ, ಮರದ ನೆರಳಿನಲ್ಲಿ ಕುಳಿತ... ಅವನ ಬೀಬಿ ಊಟ ತರುತ್ತಿದ್ಹುದು ಆ ತಾಣಕ್ಕೆ. ಒಳಹಾದಿಯಾಗಿ ಅಲ್ಲಿಗೆ ಬರುತ್ತಿದ್ದಳು ಅಕೆ.

ಮರದ ಕೆಳಗೆ ಕುಳಿತು "ಅದೆಷ್ಟು ಹೊತ್ತಾಯಿತೋ. ಬೀಜಿ ಇಷ್ಟರಲ್ಲೇ ಬರಬೇಕಾಗಿತ್ತು. ಯಾಕೆ ಬರಲಿಲ್ಲ?

ಇಮಾಮ್‌ಸಾಬಿಯ ಗುಂಡಿಗೆ ಡವಡವನೆಂದಿತು.

ಬೇಲಿಯ ಪಟ್ಚಿಗಳೆಡೆಯಿಂದ ಅವನ ಕಣ್ಣುಗಳು, ಪೊದೆ ಪೊದರು ಗಳನ್ನು ಬಳಸುತ್ತ ಸಾಗಿದ್ದ ಕಾಲುದಾರಿಯತ್ತ ಹರಿದುವು. ಮಬ್ಬು ಮಬ್ಬಾಗಿ ಕಾಣಿಸುತ್ತಿತ್ತು ಎಲ್ಲವೂ-ಹಸುರು ನೋಡಿ ನೋಡಿ ನೋವಾಗಲು ಅತ ಎವೆಮುಚ್ಚಿದ. ಗುಡ್ಡದಾಚೆಗಿಂದ ತಪ್ಪಿಸಿಕೊಂಡು ಬಂದ ಸಣ್ಣನೆಯ ತಂಗಾಳಿಯೊಂದು ಬೀಸಿದಂತೆ, ಸ್ವಲ್ಪ ಹಾಯೆನಿಸಿತು. ಯೋಚನೆಗಳ ಪೆಟ್ಟಿಗೆಯ ಮುಚ್ಚಳ ಮುಚ್ಚಿಕೊಂಡಿತು. ತಲೆ ಎದೆಯ ಮೇಲಕ್ಕೆ ತಾಗಿತು, ತೂಕಡಿಕೆ ಬಂತು.

"ಬಾಬಾ"
.............
"ಬಾಬಾ!"
ಇಮಾಮ್‌ಸಾಬಿ ಹೌಹಾರಿ ಎದ್ದ.
"ಏನಾಯ್ತು? ಏನಾಯ್ತು?"
"ನಾನು ಬಾಬಾ. ಊಟ ತಂದಿದೀನಿ."
"ಹ್ಞಾ..."

ಬೀಬಿಯ ಬದಲು ಮಗ ಕರೀಮನೇ ಬಂದಿದ್ದ.

ತಂದೆ ಕೇಳಲಿದ್ದ ಪ್ರಶ್ನೆಯನ್ನು ಮೊದಲೇ ಗ್ರಹಿಸುತ್ತ ಅವನೆಂದ:

"ಅವಳು ನೋವು ತೀನ್ತಾ ಇದ್ದಾಳೆ.

ವೃದ್ಧನ ಎದೆಗುಂಡಿಗೆ ಮತ್ತೆ ಬಲವಾಗಿ ಬಡಿದುಕೊಂಡಿತು.

"ಎಷ್ಟು ಒತ್ತಾಯ್ತು?”
"ಅತ್ತು ಗಂಟೆಯಿಂದ."
"ಸೂಲಗಿತ್ತಿ?"
"ಬಂದವಳೆ. ಚೊಚ್ಚಲು; ತಡವಾಗ್ಬೌದು ಅಂದ್ಲು."

ಬುತ್ತಿಯನ್ನು ಬಿಚ್ಚುತ್ತ ಇಮಾಮ್‌‌ಸಾಬಿಯೆಂದ:

"ಹೂಂ, ಹೂಂ."

ಬೀಬಿ ಬುತ್ತಿ ತಂದಾಗ, "ಕುಡಿಯುವ ನೀರು" ಎಂದು ಬರೆದ ಗಡಿಗೆಯತ್ತ ಇಮಾಮನೇ ಹೋಗಿ ನೀರು ತರುತ್ತಿದ್ದ. ಇಂದು, ಕಾಲುಗಳಲ್ಲಿ ಬಲವೇ ಇಲ್ಲ-ಎನಿಸಿತು. ಅಲ್ಲದೆ-ಬಳಿಯಲ್ಲೆ ಮಗನಿದ್ದ.

"ನೀರು ತಾ."

ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟಿಯಲ್ಲಿ ಕರೀಂ ನೀರು ಹಿಡಿದ ತಂದ.

....ಊಟ ಮುಗಿದಾಗ ತಂದೆ ಮಗಳಿಗೆ ಅಂದ:

"ನೀನು ಮನೇಲೇ ಇರು."

...ಒರಗಿ ಕುಳಿತಲ್ಲೇ. ಸೊಸೆಯನ್ನು ಕುರಿತು ಯೋಚಿಸುತ್ತಿದ್ದಂತೆಯೇ, ಇಮಾಮ್‌ಸಾಬಿಗೆ ಜೊಂಪು ಹತ್ತಿತು. ಆದರೆ, ಹತ್ತಿಪ್ಪತ್ತು ನಿಮಿಷಗಳಲ್ಲೆ ಮಾಸ್ತರರ ಆಳಗಂಟಲ “ಹಲ್ಲೋ_ಹಲ್ಲೋ-” ಅವನನ್ನು ಎಚ್ಚರಿಸಿತು.

ನೆರಳು ಸರಿದು, ಕೊಂಬೆಗಳೆಡೆಯಿಂದ ಬಿಸಿಲು ಅವನ ಅಂಗಾಂಗಗಳ ಮೇಲೆ ಬಿದ್ದಿತ್ತು.

ಗಾಡಿ ತಡವೆಂದು ತಿಳಿಯದೆ ಜನ ಬರತೊಡಗಿದ್ದರು. ಜಟಕಾ ಬಂಡಿಗಳು ಬಂದುವು. ಅರಳೆ ಹಿಂಜುವ ಗಿರಣಿಯೊಡೆಯರ ಕಾರೂ ಬಂತು. ಆದರೆ ಇಮಾಮ್‌ಸಾಬಿಯನ್ನು ಮೌಢ್ಯ ಆವರಿಸಿಬಿಟ್ಟಿತ್ತು. ಪಾದಗಳು ಚಲಿಸುತ್ತಿರಲಿಲ್ಲ. ಪ್ರಯಾಣಿಕರತ್ತ ಅವನ ಗಮನವಿರಲಿಲ್ಲ.

ಒಮ್ಮೆ ಅಬ್ದುಲ್ಲನೆಂದ:

“ನಿಂತೇ ಬಿಟ್ಟೆಯಲ್ಲ, ದಾದಾಮಿಯಾ?”

ಇಮಾಮ್‌ಸಾಬಿ ಉತ್ತರವೀಯಲಿಲ್ಲ. ಮುಗುಳು ನಗಲು ಯತ್ನಿಸಿದ, ಯತ್ನಿಸಿ ವಿಫಲನಾದ.

ಮನೆಗೆ ಹೊರಟುಬಿಡಬೇಕೆನಿಸಿತು. ರೈಲಿನ ಅವಘಡದ ರಾತ್ರಿ ಅಲ್ಲಿ ಕೇಳಿದಂತಹ ಆರ್ತನಾದವೇ ಈಗಲೂ? ಹೋಗಿ ತಾನು ಮಾಡುವುದಾದರೂ ಏನು?

ಸಂಜೆಯ ಪ್ಯಾಸೆಂಜರ್ ನೋಡಿಕೊಂಡೇ ಹೊರಡುವೆ ಎಂದು, ಇಮಾಮ್‌ಸಾಬಿ ಗಟ್ಟಿ ಮನಸ್ಸು ಮಾಡಿದ.

ಮೇಲ್‌ಗಾಡಿ ಬಂದು, ಮುಂದಕ್ಕೆ ಸಾಗಿತು.

ಸದಾ ಚಲಿಸುತ್ತಿರುವ ಜನರು. ಹೆಂಗಸರು, ಗಂಡಸರು, ಮಕ್ಕಳು. ತನ್ನಷ್ಟೇ ವಯಸ್ಸಾದವರು ಕೂಡ. ತಾನು ಮಾತ್ರ ಒಮ್ಮೆಯೂ ರೈಲಿನಲ್ಲಿ ಪ್ರಯಾಣ ಮಾಡಿರಲಿಲ್ಲ. ಜೀವಮಾನವನ್ನೆಲ್ಲ ರೈಲುಮನೆಯಲ್ಲೇ ಸವೆದಿದ್ದರೂ ಗಾಡಿಯಲ್ಲಿ ಮಾತ್ರ ಒಮ್ಮೆಯೂ ಎಲ್ಲಿಗೂ ಹೋಗಿರಲಿಲ್ಲ, (ವಿಸ್ಮಯಗೊಳಿಸುವಂತಹ ತಥ್ಯ.) ಆದರೆ ತನ್ನ ಮಕ್ಕಳು-ಮೊದಲಿನ ಮೂವರು-ರೈಲು ಗಾಡಿಯಲ್ಲಿ ಕುಳಿತೇ ದೂರದ ಊರುಗಳಿಗೆ ಹೋಗಿಬಿಟ್ಟಿದ್ದರು, ತನ್ನ ಕಣ್ಣು ತಪ್ಪಿಸಿ. ಈಗ ಇದ್ದಕ್ಕಿದ್ದಂತೆ ಅವರು ಬಂದರೆ-ಹಿರಿಯವನನ್ನು ಪರಿಚಯದವರೊಬ್ಬರು ಮುಂಬಯಿಯಲ್ಲಿ ಕಂಡಿದ್ದರಂತೆ. (ತಂದೆಯಂತೆ ಹಮಾಲನೇ!) ನಾಲ್ವರು ಮಕ್ಕಳಂತೆ. ಕೆಲವು ವರ್ಷಗಳೇ ಆಗಿದ್ದುವು ಆ ಮಾತಿಗೆ. ಇಮಾಮ್ ಸಾಬಿಯ ಆಯುಷ್ಯದಲ್ಲಿ ಅಂಚೆಯ ಮೂಲಕ ಒಂದೇ ಒಂದು ಕಾಗದ ಆತನಿಗೆ ಬಂದಿತ್ತು ಮೂರನೆಯ ಮಗನಿಂದ. ಅಣ್ಣನೊಡನೆ ಪಾಕಿಸ್ತಾನಕ್ಕೆ ಹೋಗುವು ದಾಗಿ ಬರೆದಿದ್ದ. ಅದೊಂದು ಹೊಸ ದೇಶ-ಪಾಕಿಸ್ತಾನ. ಚಾಕು ಕಲ್ಲು ಈಟಿಗಳ ಆ ಕತೆಯನ್ನು ಇಮಾಮ್‌ಸಾಬಿ ಕೇಳಿ ತಿಳಿದಿದ್ದ, ಸ್ವಲ್ಪ ಸ್ವಲ್ಪ....ಇನ್ನು ನಾಲ್ಕನೆಯವನು. ಆ ಸರ್ಕಸ್ ತಾನು ಬದುಕಿರುವಾಗಲೇ ಒಮ್ಮೆ ಮತ್ತೆ ಈ ಊರಿಗೆ ಬಂದಿದ್ದರೆ....ಇಮಾಮ್ ಸಾಬಿಯ ಮಗ ಡೊಂಬರಾಟಕ್ಕೂ ಇಳಿದ. ಆಹಾ!...

ವೃದ್ಧ ನೀಳವಾಗಿ ಉಸಿರುಬಿಟ್ಟು, ಗೊತ್ತು ಗುರಿ ಇಲ್ಲದೆ ಅತ್ತಿತ್ತ ನಡೆದಾಡಿದ. ಸಿಗ್ನಲ್ ಕಂಬದ ಈಚೆಗಿದ್ದ ನೀರಿನ ಟ್ಯಾಂಕಿನ ಬಳಿ ಸಾರಿ, ಅಲ್ಲೇ ಕೆಳಗೆ ದಿನ್ನೆಯ ಮೇಲೆ ಕುಳಿತ. ಸೂರ್ಯನ ತಾಪ ಕಡಿಮೆಯಾಗತೊಡಗಿತ್ತು. ಅಲ್ಲಿಂದ ಅವನಿಗೆ, ನೀಳವಾಗಿ ಮಲಗಿ ಹಸುರು ರಾಶಿಯೊಳಗೆಲ್ಲೊ ಮಾಯವಾಗಿದ್ದ ರೈಲು ಕಂಬಿಗಳು ಕಾಣಿಸುತ್ತಿದ್ದುವು.

ಮನೆಯ ನೆನಪು ಮತ್ತೆ ಮತ್ತೆ ಮುದುಕನನ್ನು ಬಾಧಿಸಿತು. “ದೇವರೆ! ಎಲ್ಲಾ ಸುಸೂತ್ರವಾಗಿ ನಡೆಸ್ಕೊಡು” ಎಂದ ಆತ. ತುಸು ಧ್ವನಿ ತೆಗೆದೇ ಅನನ್ಯ ಭಕ್ತಿಯಿಂದ ಬಿಕ್ಕುತ್ತ ಪ್ರಾರ್ಥಿಸಿದ.

....ಲೋಕಲ್ ಬಂದು ಹೋಯಿತು.
....ಇನ್ನು ಉತ್ತರದಿಂದ ಬರುವ ಪ್ಯಾಸೆಂಜರ್.
....ಆಕಳು, ಮೇಕೆ, ಕುರಿಗಳು ಹಿಂಡು ಹಿಂಡಾಗಿ ಹಾದುಹೋದವು.

ಗೃಹಾಭಿಮುಖವಾಗಿ.

ಇಮಾಮ್‌ಸಾಬಿ, ಸಿಗ್ನಲ್‌ಕಂಬಿಯ ರುಂಯ್ ಸಪ್ಪಳ ಕೇಳಿಸಿದಂತಾಗಿ ಎದ್ದ. ಪ್ರಯತ್ನ ಪೂರ್ವಕವಾಗಿ ಚುರುಕಾಗಿ ನಡೆಯುತ್ತ ನಿಲ್ದಾಣದತ್ತ ಬಂದ.

ಹೊರಗೆ, ಬೆಳಗ್ಗೆ ಕುಳಿತಿದ್ದಲ್ಲೇ ಒರಗುಬೆಂಚಿನ ಮೇಲೆ ಆಸೀನನಾದ.

ಒಂದು ಜಟಕಾ ಅವನ ಹತ್ತಿರದಿಂದಲೇ ಬಂತು. ಅದನ್ನು ಕಂಡೂ ಕಾಣದವನಂತಿದ್ದ ಇಮಾಮ್‌ಸಾಬಿ. ಕೆಳಕ್ಕೆ ಇಳಿದವನು ಸಿಗರೇಟು ಸೇದುತ್ತಲಿದ್ದ ಯುವಕನೊಬ್ಬ. ತಾನು ಏಳದೆ ಕುಳಿತೇ ಇದ್ದುದನ್ನು ಕಂಡು ಆತ ಅಚ್ಚರಿಗೊಂಡಂತೆ ಇಮಾಮ್‌ಸಾಬಿಗೆ ಭಾಸವಾಯಿತು. ಜಟಕಾದವನು ಕರೆದ:

“ಆವೋ ದಾದಾಮಿಯಾ.”
ಜ್ಞಾ-ಹೋಗಬೇಕು ತಾನು.
ಒಂದು ಸೂಟ್‌ಕೇಸು: ಒಂದು ಕಿಟ್.
“ಇಂಟರ್, ಸಾಬ್?”
ಯುವಕ ಅಬ್ಬರಿಸಿದ:
"ಸೆಕೆಂಡ್ ಕ್ಲಾಸ್! ಇಂಟರಂತೆ_!" ಇಮಾಮ್‌ಸಾಬಿಯ ಮುಖ ಕೆಂಪೇರಿತು. ಇಂಟರ್ ತರಗತಿ ಇತ್ತೆಲ್ಲಿ ಈಗ? ಆದರೂ, ಮತ್ತೆ ಮತ್ತೆ ಹಳೆಯದಕ್ಕೆ ಅಂಟಿಕೊಳ್ಳುತ್ತಿತ್ತು, ಅವನ ಮನಸ್ಸು.

ಬೇರೆಯೂ ಕೆಲ ಪ್ರಯಾಣಿಕರಿದ್ದರು. ಆದರೆ ಇಮಾಮ್‌ಸಾಬಿ ಅತ್ತ ನೋಡಲೂ ಇಲ್ಲ.

ಜುಕುಜುಕು ಧ್ವನಿ....

ನಿಲ್ಲುವುದೇ ಇಲ್ಲವೇನೋ ಎನ್ನುವಂತೆ ನೇರವಾಗಿ ಮುಂದಕ್ಕೋಡಿ ನಿಂತು ಬಿಡುವ ಗಾಡಿ.

ಎಲ್ಲಿತ್ತು ಸೆಕೆಂಡ್ ಕ್ಲಾಸ್?
“ಎಲ್ಲಯ್ಯಾ ಇದೆ?”
ಇಮಾಮ್‌ಸಾಬಿಗೆ ಏನೂ ಕಾಣಿಸುತ್ತಿರಲಿಲ್ಲ.
ರೇಗುತ್ತ ಯುವಕನೇ ಅತ್ತ ಓಡಿದ, ಇತ್ತ ಓಡಿದ. ವಿನೀತನಾಗಿ ಅವನನ್ನು ಹಿಂಬಾಲಿಸಿದ, ವೃದ್ಧ.
“ಇಲ್ಲೇ ಒಳಗಿಡು!”
ಇನ್ನು ಎರಡಾಣೆಗೆ (ಎಷ್ಟು ನಯೆಪೈಸೆಗೊ?) ಕೈ ನೀಡಬೇಕು.
ನಾಣ್ಯ ನಾಲ್ಕಾಣೆಯ ತುಣುಕಿನಂತೆ ಕಂಡಿತು.
ಯುವಕನೆಂದ:
“ಮುದುಕನಾದೆ ನೀನು. ಹೋಗು!”

ಇಮಾಮ್‌ಸಾಬಿಗೆ ಇದ್ದಕ್ಕಿದ್ದಂತೆ ಅಳು ಬಂತು. ಅದನ್ನಾತ ಕಷ್ಟಪಟ್ಟು ಅದುಮಿ ಹಿಡಿದು, ಗಾಡಿ ಚಲಿಸಿದಂತೆ, ನಿಲ್ಮನೆಯಿಂದ ತಾನು ಹೊರಕ್ಕೆ ಕಾಲಿರಿಸಿದ.

ಇಳಿದವರನ್ನು ಹೊತ್ತುಕೊಂಡೋ ಬರಿದಾಗಿಯೋ ಜಟಕಾ ಗಾಡಿಗಳು ತೆರಳುತ್ತಿದ್ದುವು. ನಡೆದೇ ಹೋಗುತ್ತಿದ್ದರು ಹಲವರು. ಮತ್ತೊಮ್ಮೆ ಎಲ್ಲವೂ ಶಾಂತವಾಗತೊಡಗಿತ್ತು. ಸೂರ್ಯ ಗುಡ್ಡಗಳಾಚೆ ಅವಿತಿದ್ದ.

ಮಬ್ಬು ಬೆಳಕು ಎಲ್ಲವನ್ನೂ ಆವರಿಸಿತು. ಇಮಾಮ್‌ಸಾಬಿಗೆ ಇದ್ದುದೊಂದೇ ಯೋಚನೆ-ಮನೆಗೆ ತಾನು ಹೋಗ ಬೇಕು, ನೇರವಾಗಿ. ಮಗುವಿಗೆ ಎಷ್ಟು ಸಂಕಟವಾಗುತ್ತಿದೆಯೋ ಏನೋ, ಪಾಪ!

ಎಷ್ಟು ಬೇಗನೆ ಹೆಜ್ಜೆ ಇರಿಸಿದರೂ ಮಾರ್ಗಕ್ರಮಣ ನಿಧಾನವಾಗಿಯೇ ಆಗುತ್ತಲಿತ್ತು. ಹೃದಯವೊಂದು ಭಾರಗೊಂಡು, ಅದರ ಹೊರಗೆ ದೇಹವೇ
ಹಮಾಲ ಇಮಾಮ್‌ಸಾಬಿ
79

ಕುಸಿಯುವುದೇನೋ ಎನಿಸುತ್ತಿತ್ತು.
ಮೂರು ಫರ್ಲಾಂಗುಗಳ ದೂರ ಸಾಗಲು ಅದೆಷ್ಟು ಹೊತ್ತು
ಹಿಡಿಯಿತೊ?
ಅದೇ ಮನೆ (ಗುಡಿಸಲು). ಯಾರು ಬರುತ್ತಿರುವವರು? ಕರೀಂ?
ಏನಾಯ್ತು?
ಓಡುತ್ತ ಬರುತ್ತಿದ್ದ ಹುಡುಗ.
ಆ_
“ಬಾ ಬಾ!”
ಓ ದೇವರೆ_
“ಗಂಡು ಮಗು!”
“ಹಾ!”
ಬವಳಿ ಬಂದಂತಾಯಿತು ಇಮಾಮ್‌ಸಾಬಿಗೆ. ಪೂರ್ಣಚಂದ್ರನಂತೆ
ಮುಖವಗಲಗೊಂಡಿತು. ಕಣ್ಣುಗಳಿಂದ ಆನಂದಾಶ್ರು ಒಸರಿತು.
ಆತ ಕೈಯನ್ನು ಮುಂದಕ್ಕೆ ಚಾಚಿದ.
ಕರೀಂ ಅದನ್ನು ಹಿಡಿದುಕೊಂಡ.
ಏನನ್ನೋ ಹೇಳುತ್ತಲೇ ಇದ್ದ ಮಗ.
ಏನನ್ನೋ ಹುಚ್ಚು ಸಂತಸದ ತೊದಲು ಮಾತಿನಹಾಗಿತ್ತು ಅದು.
ನಾಲ್ಕು ಹೆಜ್ಜೆ. ಮನೆ.
“ಅಮ್ಮಾಜಾನ್! ಬಾಬಾ ಬಂದ್ರು!”
ಶೇಖರಿಸಿ ಇಟ್ಟಿದ್ದ ಸಕ್ಕರೆಯಿಂದೊಂದು ಚಿಟಕಿ ತೆಗೆದು ಬೀಬಿ ಹೊರಕ್ಕೆ
ಒಡಿಬಂದಳು.
ಇಮಾಮ್‌ಸಾಬಿ ನಿಲ್ಲಲಾಗದೆ, ಗೋಡೆ ಹಿಡಿದು, ಕುಸಿದು ಕುಳಿತಿದ್ದ.
ಬಾಗಿಲ ಚೌಕಟ್ಟಿಗೊರಗಿ.
ಬೀಬಿ ಸಕ್ಕರೆಯನ್ನು ಆತನ ಬಾಯಿಗೆ ಹಾಕಲೆಂದು ಬಾಗಿದಳು.
ಬಾಗಿದವಳೇ ಚೀರಿದಳು.
ಕೆಂಪು ರುಮಾಲು, ನೀಲಿ ಅಂಗಿ, ಕೊಳಕು ಧೋತರ, ಎಲ್ಲವೂ
ಇದ್ದುವು. ತೆರೆದ ಜೇಬಿನಲ್ಲಿ ನಾಣ್ಯಗಳಿದ್ದುವು, _ದಿನದ ಸಂಪಾದನೆಯಿತ್ತು.
ಇಮಾಮ್‌ಸಾಬಿ ಮಾತ್ರ ಇರಲಿಲ್ಲ.

_೧೯೬೧


೧೦

ಹರಕೆಯು ಖಡ್ಗ

“ಮೋನ್ಯಾ...”

“ಅಪ್ಪಾಜಿ...”
“ಏನಾಟ ಅದು?”
“ಯಾನಿಲ್ಲಪ್ಪಾಜಿ...ಹಿಹ್ಹಿ!”
ನಾಲ್ಕು ವರ್ಷಗಳ ಹಸುಳೆಗೆ ಮಣಭಾರ ಹೊರುವ ಹಟ.

“ತಂದೆಯ ಖಡ್ಗ ಈಗಲೇ ಎತ್ತೋಕೆ ನೋಡ್ತೀಯೇನೋ? ಶಹಭಾಸ್!!”

ಎತ್ತುವುದೇನು బంలేు? ಖಡ್ಡ ಮಿಸುಕಲೂ ಇಲ್ಲ, ಆದರೂ, ಏನೋ ಸಾಧಿಸಿದೆನೆಂಬ ಸಮಾಧಾನ ಮೋನ್ಯಾನಿಗೆ. ಬಲಬದಿಯ ಕೆನ್ನೆಯಲ್ಲಿ ಗುಳಿ ಬಿದ್ದಿತು, ಆತ ನಕ್ಕಾಗ. ಅಹಲ್ಯೆಗೆ-ಅಲ್ಲ ರಾಣಿಗೆ (ಅವಳ ಗಂಡನ ಪಟ್ಟಾಭಿಷೇಕವಾದಂದಿನಿಂದ ಹಾಗೆ) ಯಾತನೆಯಲ್ಲಿಯೂ ಹರ್ಷ. ತನ್ನ ಗಂಡ ಸಂಸ್ಕಾರದ-ಅಲ್ಲ, ರಾಣಿವಾಸದ-ಜತೆ ಕಳೆಯುವ ವೇಳೆ, ಉಪಾಹಾರ ಸ್ವೀಕರಿಸುವ ಕೆಲವೇ ನಿಮಿಷ.

ಇನ್ನರ್ಧ ಘಳಿಗೆಯಲ್ಲಿ ಡೇರೆ ಕೀಳಬೇಕು. ಇಲ್ಲಿಂದ ಇನ್ನೆಲ್ಲಿಗೆ ಪಯಣವೊ? ಇದಕ್ಕೆ ಯಾವಾಗ ಕೊನೆಯೊ?

ಮನಸ್ಸು ಮುದುಡಿದ ಆ ವೇಳೆಯಲ್ಲಿ ಚೇತೋಹಾರಿಯಾಗುತ್ತಿದ್ದವನು ಮೋನ್ಯಾ.

ಅದೇನು ಮಾಯೆಯೊ? ಶಿಕಾರಿಪುರದ ದೇವಾಲಯದಲ್ಲಿ ಪೂಜೆ ಮಾಡಿಸಿ ಮರಳಿದ ಬಳಿಕ ಅಲ್ಲವೆ ತಾನು ಗರ್ಭವತಿಯಾದದ್ದು? ಹುಟ್ಟಿದ ಕ್ಷಣದಿಂದಲೂ ಸುಖ ಕಾಣಲಿಲ್ಲವಲ್ಲ ಮಗು? ಆದರೂ ನಗು, ನಗು..ತನಗೆ ಮೋಸ ಮಾಡಿದರೆಂದು ಗಂಡ ಕ್ರುದ್ಧ, ತಪ್ತ. ಮೋನ್ಯ ಅಂಬೆಗಾಲಿಡುವ ಹೊತ್ತಿಗೆ ಸುಲ್ತಾನರೊಡನೆ ವಿರಸ, ಮತಾಂತರದ ದಂಡನೆ, ಸೆರೆಮನೆ. ಪಟ್ಟಣ ಆಂಗ್ಲರ ವಶವಾಗಿ, ಬಿಡುಗಡೆ ಪ್ರಾಪ್ತವಾದ ಮೇಲೆ ತೂಗುಯ್ಯಾಲೆಯ ಬದುಕು-ಮೇಲಕ್ಕೆ ಹೋಯಿತು, ಕೆಳಕ್ಕೆ ಬಂತು-ಮತ್ತೆ ಮೇಲಕ್ಕೆ ಮತ್ತೆ ಕೆಳಕ್ಕೆ, ಮತ್ತೆ....

ರಾಜಧಾನಿಗೆ ಸ್ಥಳ ಗೊತ್ತುಮಾಡಿ, ಕೋಟೆ-ಅರಮನೆ ಕಟ್ಟಿಸಿ ರಾಜ್ಯವಾಳುವುದಕ್ಕೆ ಮುನ್ನವೇ ಯುದ್ಧ, ಯುದ್ಧ ಯುದ್ಧ.

ಗಂಡ ಹಿರಿಯುತ್ತಿದ್ದುದು ಸಾಮಾನ್ಯ ಯೋಧ ಎರಡು ಕೈಗಳಲ್ಲೂ ಹಿಡಿದು ಎತ್ತಲಾಗದ ಖಡ್ಗ. ಇಕ್ಕಡೆಗಳ ಅಲಗಿಗೆ ಆಹುತಿಯಾದವರು ಅದೆಷ್ಟು ಸಹಸ್ರ ವೈರಿಗಳು!

ಏನೋ ಸದು ಹೊರಗೆ. ನಿತ್ಯದ್ದಲ್ಲ. ಮಹಾರಾಜನಿಗೆ ಕಸಿವಿಸಿ. ಎಡಗಣ್ಣೊಂದು ಬೆಳಗಿನಿಂದಲೇ ಅದರುತ್ತಿದೆ. ತಿಂಗಳುಗಟ್ಟಲೆ ನಿದ್ದೆ ಕೆಟ್ಟರೆ ಇನ್ನೇನು ತಾನೆ ಆದೀತು?

ಶಿಬಿರ ಹೊರಡಲು ಅಣಿಯಾಗುತ್ತಿರಬೇಕು.
ಆದರೂ, ಈ ಸಪ್ಪಳ?
ಬಿರುಗಾಳಿ? ಗುಡುಗಿನ ಚಲನೆ?
ಖಂಡಿತ ಅಲ್ಲ; ಇದು ದಂಡು.
“ಮೋನ್ಯಾ!”
“ಯಾನಪ್ಪಾಜಿ?”
“ಅಮ್ಮನತ್ರಕ್ಕೆ ಹೋಗು."
“ಯುದ್ಧಕ್ಕೆ ಹೊಂಟ್ಯಾ?”
“ಒಳಗ್‍ಹೋಗು ಅಂದೆ!"

ಗುಡಾರದ ಅರಿವೆ ಬಾಗಿಲನ್ನು ಸರಿಸಿದರು, ಧಾವಿಸಿ ಬಂದು ಏದುಸಿರು ಬಿಡುತ್ತಿದ್ದ ರಕ್ಷಕಭಟರು.

“ಮ-ಹಾ-ಪ್ರಭೂ, ಮ-ಹಾ-ಪ್ರ-ಭೂ!"
“ಏನದು ಬೊಗಳ್ರೋ! ಫರಂಗಿಯವರ ದಂಡು ಬಂತೆ?”
"ಔದು ಮಹಾ-ಪ್ರಭೂ....ನಾಲ್ಕು ದಿಕ್ಕಿಂದ ಮುತ್ಗೆ...”
“ನಡೀರಿ ಆಚ್ಗೆ! ಕಹಳೆ! ಭೇರಿ! ನನ್ನ ಖಡ್ಗ!”
ಅಹಲ್ಕೆ-ಅಲ್ಲ, ರಾಣಿ-ಅಂದಳು:
“ಆರತಿ ತರ್ತೀನಿ."
“ಆರತಿ! ಆರತಿ! ತಡವಾಯ್ತು!”

-ಟೊಂಕದ ಪಟ್ಟಿಯನ್ನು ಬಿಗಿಯುತ್ತ, ಮೀಸೆಯ ಮೇಲೆ ಕೈಯಾಡಿಸುತ್ತ, ಮಹಾರಾಜ ಗುಡುಗಿದ. ಆರತಿ ಬೆಳಗಿದ ತಾಯಿಗಂಟಿಕೊಂಡು ತಂದೆಯ ಕಡೆ ಬೆರಗುನೋಟ ಬೀರುತ್ತ, ಮೋನ್ಯಾ ಅ೦ದ;

“ನಾನೂ ಬತ್ತಿನಿ, ಅಪ್ಪಾಜಿ..”
ಆಮೇಕೆ, ಆಮೇಕೆ!

-ಎನ್ನುತ್ತ ಮಹಾರಾಜ ಹೊರಕ್ಕೆ ತೇಲಿದ ಸುಂಟರಗಾಳಿಯಾಗಿ, ಅಲ್ಲಿನ ಕಲರವದಲ್ಲಿ ಬೆರೆಯಲು, ರಣಾಂಗಣದಲ್ಲಿ ಮೆರೆಯಲು, ಅಸಮಾನ ಖಡ್ಗದಿಂದ ವೈರಿ ಶಿರಸ್ಸುಗಳನ್ನು ಕಡಿಯಲು.

“ಜಯ ಚಾಮುಂಡೇಶ್ವರೀ!”
_"ಜಯ ಮಹಿಷಾಸುರಮರ್ದಿನೀ!"

ಗುಡಾರದೊಳಗೆ ಮೋನಾ ತಾಯಿಯನ್ನು ಕಾಡಿದ: “ನನಗೊಂದು ಕತ್ತಿ ಕೊಡು, ಕೊಡಮಾ ಒಂದು ಕತ್ತಿ ...”

****

"ಧೋಂಡಿಯಾ...

ಧೋಂಡಿಯಾ ವಾಘ್...

ಚನ್ನಗಿರಿಯ ಮಣ್ಣಿನಲ್ಲಿ ಹುಟ್ಟಿದ ಆ ಹುಲಿಯ ಆರ್ಭಟಕ್ಕೆ ಪರಕೀಯರ ಪಡೆ ಗದಗದ ನಡುಗುತ್ತಿತ್ತು.

ಆ ರಣಧೀರನ ದಂಡನ್ನು ಬೆನ್ನಟ್ಟೀ ಬೆನ್ನಟ್ಟೀ, ಅಲೆದೂ ಅಲೆದೂ ಬಳಲೀ ಬಳಲೀ ಹಣ್ಣಾದ ಆ೦ಗ್ಲರ ಶ್ರೇಷ್ಠ ಸೇನಾನಿಗಳಲ್ಲೊಬ್ಬ-ವೆಲ್ಲೆಸ್ಲಿ-ಹತಾಶನಾಗಿ ಉದ್ಗರಿಸಿದ್ದ:

“ಈ ಧೋಂಡಿಯಾನನ್ನು ಯಾವಾಗ ಹಿಡಿಯುವೆನೋ ದೇವರಿಗೇ ಗೊತ್ತು!”

ಅಂತೂ ಕೊನೆಗೊಮ್ಮೆ ದೇವರಿಗೆ ಅರಿತಿದ್ದ ಘಳಿಗೆ ಸವಿನೂಪಿಸಿತ್ತು.

****

ಸುತ್ತುವರಿಯಲ್ಪಟ್ಟಿ ಐದು ಸಾವಿರ ಅಶ್ವಾರೋಹಿಗಳ ದಂಡಿಗೂ ಇಮ್ಮಡಿ ಬಲದ ವೈರಿ ಪಡೆಗಳಿಗೂ ಹೊಯ್ ಕಯ್.

“ಫಯರ್! ಫಯರ್!”
“ಹಿಮ್ಮೆಟ್ಟಬೇಡಿ! ಹಾರಿಸಿಗುಂಡು! ತುಂಡರಿಸಿ! ಕತ್ತರಿಸಿ!”

ವ್ಯೂಯ ರಚನೆಗಾಗಲೀ ಅತ್ತಿತ್ತ ಸರಿಯುವುದಕ್ಕಾಗಲೀ ಅವಕಾಶವಿಲ್ಲದ ತಾಣ.

ಅಭಿಮನ್ಯು ಮಹಾನ್‍ವೀರ.

ಆದರೆ, ವ್ಯೂಹದಿಂದ ಹೊರಬರುವ ದಾರಿ ಯಾವುದು? ಯಾವುದು?
ಎರಡು ಗಂಟೆಗಲ ಕಾಲ ಅವ್ಯಾಹತ ಹೋರಾಟ.

ಧೋಂಡಿಯಾನ ಯೋಧರ ಸ್ಟೈರ್ಯ ಕ್ರಮೇಣ ಕುಸಿಯಿತು. ಕಾಣನಲ್ಲ ನಾಯಕ? (ಎಲ್ಲಿ ಮಹಾರಾಜರು?) ಆತನನ್ನು ಹೊತ್ತು ಮಿಂಚಿನಂತೆ ಸುಳಿಯುವ ಕಂದು ಬಣ್ಣದ ಕುದುರೆ ಎಲ್ಲಿ?

“ಮಹಾಪ್ರಭುಗಳು ಓಡ್‍ಹೋದ್ರು!”
(ಸುಳ್ಳು! ಸುಳ್ಳು!)
("ಓಡಿ! ಓಡಿ!")
(ನಿಲ್ಲಿರೋ ನಿಲ್ಲಿರೋ ನನ್ಮಕ್ಕಳ್ರಾ!!”)

ಗಾಯಗೊಂಡು ಬಿದ್ದಿದ್ದ ಮಹಾರಾಜರ ದೇಹ ನೆಲದ ಮೇಲೆ, ಶವಗಳ ನಡುವೆ, ತೆವಳುತ್ತಿತ್ತು.

ಅರಿರುವ ಗಂಟಲಿಗೆ ಎಲ್ಲಿಂದಾದರೂ ಒಂದಿಷ್ಟು ನೀರು?

****

ನೀರು, ನೀರೂ ನೀರೂ...

ತುಂಗಾ-ಭದ್ರಾ ತುಂಗಭದ್ರಾ...ವರದಾ...ಕೃಷ್ಣಾ...ಮಲಪ್ರಭಾ... ಮಹಾಪೂರಗಳಲ್ಲಿ ಈಸಿದೆ.ಬಾನೊಡೆದು ಸುರಿದ ಕೋಡಿಮಳೆಯಲ್ಲಿ ತೋಯಿಸಿಕೊಂಡೆ. ಈಗ ಕುಡಿಯಲೂ ನೀರಿಲ್ಲ.

ನೀಲು, ನೀರೂ ನೀರೂ...
“ಎರಡು ಲೋಕಗಳ ಅರಸ ಎಂದು ಕರೆದುಕೊಂಡ ನನಗೆ-”
“ಮಂತ್ರಿ ತಿಪ್ಪಯ್ಯಾ!"

“ಮಹಾಪ್ರಭೂ....” “ಗೊಣಗ್ತಿದೀಯಲ್ಲ, ಏನದು?” “ಏನಿಲ್ಲ, ಏನಿಲ್ಲ" “ಬೊಗಳೋ!” “ಇಹ್ಹಿ!” - - - “ನಾಚೈ ನನ್ಮಗ್ನಿಗೆ-ಮಂತ್ರಿ ಪದವಿಯಿಂದ ನಿನ್ನನ್ನ ಬರ್ತಫ್ ಮಾಡೇನು, ಹುಷಾರ್!”

“ಮಹಾಪ್ರಭುಗಳು-”
"ಏನು?"
“ಈರೇಳು ಲೋಕಗಳ ಮಾರಮಣ ಅಂತ ಹೆಸರಿಟ್ಟುಕೊಂಡರೆ...”
“ಈರುಳ್ಳಿಯಾ?”
“ಈರೇಳು, ಅಂದರೆ ಹದಿನಾಲ್ಕು. ನಮ್ಮ ಪುರಾಣದಲ್ಲಿ-”
“ಕಟ್ಟು ಕಂತೆ ಪುರಾಣಾನ!”
“ಮೂರು ಲೋಕಗಳ ಗಂಡಾಂತಾದನ್ರಿ-”
“ಯಾವುದೋ ಅದು?”
“ಸ್ವರ್ಗ, ಮರ್ತ್ಯ, ಪಾತಾಳ...”

"ಪಾತಾಳ ಸುಟ್ಟಿತು. ಈಗಿರೋದು ಮುಂದೆ ಬರೋದು ಸಾಕು. ಎರಡು ಲೋಕಗಳ ಅರಸ!"

“ಅಪ್ಪಣೆ.”
“ಜಂಗಮರಿಗೆ ದಾಸೋಹ, ಬ್ರಾಹ್ಮಣರಿಗೆ ಸಂತರ್ಪಣೆ, ಫಕೀರರಿಗೆ ಭಿಕ್ಷೆ”
“ಏರ್ಪಾಟಾಗ್ರದೆ.”
ಹಾಲು ಮೊಸರುಗಳ ಹೊಳೆ ಹರಿಯಿತೆ! ನೀರಂತೂ ಹೇರಳವಾಗಿತ್ತು.
ಈಗ ಒಂದು ಗುಟುಕು?

****

ನೀರು, ನೀರೂ ನೀರೂ...
ಇದು ರಕ್ತದ ಮಡು. ಶವದ್ವೀಪಗಳು...

అಲ್ಲವಪ್ಪಾ, ಅಲ್ಲ. ಇದು ರಕ್ತದ ಸಮುದ್ರ ಅಗೋ ಬಿಳಿಯರ ಹಾಯಿ ಹಡಗುಗಳು. ಬಾವುಟ? ಊಹೂಂ, ಹಾಯಿ...ದಡಹಾಯಿಸೋ ದೇವಾ. ಎಷ್ಟು ಇಂಪಾದ ಕಂಠ! ಹಾಡುತ್ತಿರುವವಳು ತನ್ನ ತಾಯಿ...ಶಿಕಾರಿಪುರದ ಕದನದಲ್ಲಿ ತನಗೆ ಸೋಲಾಗಿ (ಸ್ಟೀವನ್‍ಸನ್ ಅವನ ಹೆಸರು. ಕಿಲ್ಲೇದಾರನನ್ನು ಹಿಡಿದು ನನ್ನ ಪಡೆಗಳ ಕಣ್ಣಿಗೆ ಬೀಳುವಂತೆ ತೂಗಹಾಕಿದ. ಪುಕ್ಕಲು ಮುಂಡೇವು ಓಡಿದುವೂ ಓಡಿದುವು. ನಿಲ್ಲಿರೋ, ನಿಲ್ಲಿರೋ ನನ್ಮಕ್ಕಳ್ರಾ), ತಾನೊಂದು ದೋಣೆ ಏರಿ, ಕುಮುದ್ವತಿ ನದಿಯನ್ನು ದಾಟಿ ನಾಡಿನ ಉತ್ತರಕ್ಕೆ ಓಡಬೇಕಾಗಿ ಬಂದಾಗ... ದಡ ಹಾಯಿಸೋ ದೇವಾ....

“ಧೋಂಡಿಯಾ...”
"ಹಾಂ???

“ಭಾರೀ ಬೇಟೇಂತ ಕಾಣ್ತೇತೆ. ನಿನ್ನಪ್ಪ ಯಾವಾಗ ಬರ್ತಾರೋ ಯಾನೋ. ನೀನು ಉಣ್ಣು, ಮರಿ.”

"ಊಹೂಂ, ಹುಲಿಮರಿ ತಂದ್ಕೊಡ್ತೀನಂತ ಅಂದಿದಾರೆ. ಅದು ಬಂದ್ಮೇಲೇನೇ ಊಟ"

“ನಿನಗ್ಯಾಕಪ್ಪ ಹುಲಿ?
“ಆಟ ಆಡೋಕೆ, ಸವಾರಿ ಮಾಡೋಕೆ.”
“ಭಗವಂತ!! ಎಂಥೆಂಥಾ ಆಸೆಯಪ್ಪಾ ಈ ಮಗೂಗೆ!”
“ಅಮ್ಮಾ.”
“ಯಾನೋ?”
“ಅಪ್ಪ ಹುಲಿ ಕೊಡ್ತಾನೆ. ನೀನೊಂದು ಕಿರೀಟ ಕೊಡ್ಡಮ್ಮ”
“ಯಾಕೊ ಧೋಂಡೂ?”
“ರಾಜನ ಆಟ ಆಡೋಕೆ.”
“ಹೊಹ್ಹೊ ನನ ರಾಜ!"
ಹುಲಿ ಬಂತು; ತನ್ನನ್ನೂ ಹುಲಿ ಮಾಡಿತು.
ಧೊಂಡಿಯಾ ವಾಘ್-ಧೊಂಡಿಯಾ ವ್ಯಾಘ್ರ...
ಹುಲಿಯಾಟ ಆಡಿದೆ: ರಾಜನ ಆಟವನ್ನೂ ಆಡಿದೆ...
ಮೋನ್ಯಾ ಖಡ್ಗ ಕೇಳಿದನಲ್ಲ?

ಇನ್ನು ಅವನ ಸರದಿ. ಯುದ್ಧದ ಆಟ ಆಡ್ತಾನೆ. ರಾಜನ ಆಟವನ್ನೂ ಆಡ್ತಾನೆ... ಯಾವ ಕಡೆ ಹೋಗಲಿ? ಎಡಕ್ಕೋ ಬಲಕ್ಕೋ? ಆತ? ಪಾಪ! ಹಬೀಬುಲ್ಲ ಸತ್ತು ಬಿದ್ದಿದಾನೆ. ಹೈದರಾಲಿ ಖಾನರದೇ ಮುಖ ಇವನದು.

ಇಕ್ಕೇರಿಯಿಂದ ಪಟ್ಟಣಕ್ಕೆ ಬಂದ ಯುವಕ ತಾನು.
“ಸನ್ನಿಧಾನದಲ್ಲಿ ಅರಿಕೆ...”
"ಯಾರೀತ?"

“ನಗರದಿಂದ ಬಂದಿದಾನೆ. ಮಹಾಶೂರ. ಧೊಂಡಿಯಾ ವಾಘ್ ಅಂತ ಕರೀತಾರೆ."

“ಮಲೆನಾಡಿನ ಹುಲಿಯೋ ನೀನು?”
“ಮಾತಾಡು ಧೊಂಡಿಯಾ.”
ಗಂಟಲು ಸರಿಪಡಿಸಿ ಯುವಕನೆಂದ:

"ಯುದ್ಧ ವಿದ್ಯೆ, ಕುದುರೆಸವಾರಿ ಬಲ್ಲೆ. ತಂದೆ ತಾಯಿ ತೀರಿಕೊಂಡಿದ್ದಾರೆ. ನಾನು ಒಬ್ಬಂಟಿಗ. ಸೈನ್ಯದಲ್ಲಿ ಕೆಲಸ ಕೊಟ್ಟದ್ದೇ ಆದರೆ...."

“ನಂಜಪ್ಪನನ್ನು ಕರೀರಿ. ಖಡ್ಗ ಇದೆಯೇನೊ ಹುಲಿಹುಡುಗ?”
“ಖಡ್ಗ ಕುದುರೆ ಎರಡೂ ಇವೆ.”
“ಸರಿ, ಹತ್ತು ಕುದುರೇನ. ನಂಜಪ್ಪನ ಜತೆ ಕತ್ತಿ ವರಸೆ ಆಗಲಿ....”

ಖಾನರು, “ಸಾಕು ನಿಲ್ಸಿ!"–ಎನ್ನದಿದ್ದರೆ ಆ ನಂಜಪ್ಪ ಸತ್ತುಹೋಗುತ್ತಿದ್ದ.

(ಸತ್ತಿದ್ದರೆ ಚೆನ್ನಾಗಿತ್ತು. ಮುಂದೆ ಆಜನ್ಮ ತನ್ನ ಶತ್ರುವಾದ.)
ಮೈಸೂರು ದಂಡನ್ನು ತಾನು ಸೇರಿದೆ.
-“ಭೇಷ್ ಧೊಂಡಿಯಾ!”
-“ಭಪ್ಪರೆ ಧೊಂಡಿಯಾ!”
ಎಷ್ಟು ಸಾರೆ ಹೊಗಳಿದರು ಖಾನರು...
“ತಾನು ಸರದಾರನಾಗಬೇಕಿತ್ತು.”
ಆದರೆ ಖಾನರು ಸತ್ತರು.
.. ತನಗೆ ಸಾವು? ಬಾಯಿ ಆರಿ ಆರಿ ಸಾವು?

ఆ... ನಾವು ಸಿದ್ಧರಾಗುವುದಕ್ಕೆ ಮುಂಚೆಯೇ ಅವರು ನಮ್ಮ ಮೇಲೆ ಬಿದ್ದರು. ಯಾರ ನಡುವಿನಲ್ಲವೂ ನೀರಿನ ಚೀಲವಿಲ್ಲ... ಹಾ... ಆ... ****

ನೀರು, ನೀರೂ ನೀರೂ...

ಟಿಪ್ಪು ಸುಲ್ತಾನನಿಗೆ ತಾನು ವಿಧೇಯನಾಗಿಯೇ ಇದ್ದೆ. ಆದರೆ ಆ ನಂಜಪ್ಪ ತನ್ನ ದಾರಿಯ ಮುಳ್ಳಾದ.

ಕಾರ್ನ್‍ವಾಲಿಸ್ ‍ ಶ್ರೀರಂಗಪಟ್ಟಣವನ್ನು ಮುತ್ತಿ, ಮೈಸೂರು ಸೈನ್ಯಕ್ಕೆ ಸೋಲಾದಾಗ, ತಾನು ಹೊರಬಿದ್ದು ಧಾರವಾಡದತ್ತ ಹೋದೆ.

ದಾರಿಯಲ್ಲಿ...

ಗಾಯಗೊಂಡು ಯಾತನೆ ಅನುಭವಿಸುತ್ತಿರುವಾಗಲೂ ಆಕೆಯ ನೆನಪಾಗುತ್ತಿದೆಯಲಾ?

ಹೊಲದಲ್ಲಿ ದುಡಿಯುವ ಹೆಣ್ಣು ತನಗೆ ಎಷ್ಟೊಂದು ಕೊಟ್ಟಳು! ಆಶ್ರಯ, ಆತಿಥ್ಯ....ಏನು ಜೀವ, ಏನು ಕಸುವು ಆ ಮೋಹಕ ದೇಹದಲ್ಲಿ! ತನಗೆ ನೀಡಿದಳು, ತನ್ನಿಂದ ಪಡೆದಳು...

“ಹ್ವಾದಿ ಅಂದರ ಮತ್ತ ಬರತೀಯೆಲ್ಲಿ ರಾಜ?”
"ಬರತೀನಿ ಬಸವಿ.”
“ರಾಜ್ಯ ಕಟ್ಟಾಂವ ಹೆಣ್ಣಿಗೆ ಮರುಳಾಗಬಾರದು.”
“ನೀನೇ ರಾಜ್ಯಲಕ್ಷ್ಮಿ"
“ಲಕ್ಸುಮಿಯೋ ಪಾರೋತಿಯೋ, ಅದಕ ಅಂತೀನೀ, ಇಲ್ಲಿ ಇರೋ ಗಂಟ ಉಣ್ಣು, ನೀಡತೀನಿ, ಹಸಿವು ಇ೦ಗೋ ಮಟ ಉಣ್ಣು.”

“ನನ್ನ ಹಸಿವು ಹಿಂಗಬೇಕಾದರೆ ಫರಂಗಿಯೋರನ್ನ ಈ ದೇಶದಿಂದ ಓಡಿಸಬೇಕು, ಬಸವಿ.”

“ಸಾವಿರ ಕುದುರೆ ಸರದಾರ, ಓಡಿಸೀಯಂತೆ.”
“ಬಾ. . . .”
“ಬಂದ್ನಿ ರಾಜ...”
ಹಸಿವು, ನೀರಡಿಕೆ...
ಆಹಾರವಲ್ಲ. ಒಂದು ಗುಟುಕು ನೀರು...

****

ನೀರು, ನೀರೂ ನೀರೂ....
ಬಾ ಅಂದರು.

ಸುಲ್ತಾನರು ಸೈನ್ಯದಲ್ಲಿ ಭಡತಿ ಕೊಡುತಾರೆ, ದಳಪತಿ ಮಾಡುತಾರೆ.... ನಿನ್ನ ಮೇಲೆ ಸುತರಾಂ ಸಿಟ್ಟಿಲ್ಲ.

ತಾನು ಬಂದೆ. ಬರಬಾರದಾಗಿತ್ತು, ಬಂದೆ.
ಒಮ್ಮೆ ಪಟ್ಟಣ ಸೇರಿದ ಮೇಲೆ ಕಿವಿಗೆ ಬಿದ್ದ ರಾಗ ಬೇರೆಯೇ.

ಒಂಟಿ ಸಲಗನಾಗಬೇಡ-ಎಂದರು ಗೆಳೆಯರು. ಚನ್ನಗಿರಿಯಿಂದ ಹೆಣ್ಣು ತಂದು ಮದುವೆಯಾಯಿತು.

ದೂರು. ಚಾಡಿ. ಯಾರದೋ ಮಸಲತ್ತು,

ಗಂಡು ಮಗುವಿಗೆ ತಂದೆಯಾದೆ ಎಂದು ಸಡಗರ, ಇಲ್ಲಿ ತನ್ನ ಬದುಕು ವ್ಯರ್ಥವಾಗುತ್ತಿದೆಯಲ್ಲ ಎಂಬ ದುಗುಡ.

ಒಂದು ದಿನ...

ಹಿಡಿದು ಕೈಕಾಲುಗಳನ್ನು ಕಟ್ಟಿ ಕೆಡವಿದರು, ತಲೆ ಬೋಳಿಸಿದರು.

“ಧಾರವಾಡದಲ್ಲಿ ಆಳಬೇಕೂಂತಿದ್ದೆಯಾ? ಇದು ನಿನಗೆ ಶಿಕ್ಷೆ. ಇನ್ನು ನಿನ್ನ ಹೆಸರು ಗುಲಾಮ್.”

“ನನ್ನ ಹೆಸರು ಧೋಂಡಿಯಾ!”

ದೇಹ ಜರ್ಜರಿತವಾಗುವಂತೆ ಹೊಡೆದರು. ಮೂರ್ಛೆ ಹೋದವನನ್ನು ಸೆರೆಮನೆಗೆ ಎಸೆದರು. ఆల్లి ಮುಖಕ್ಕೆ ನೀರೆರಚಿದರು.

ನೀರೆರಚಿದರು.
ನೀರು....
****
88
ನಿರಂಜನ:ಕೆಲವು ಸಣ್ಣ ಕಥೆಗಳು

ನೀರೂ....ನೀರೂ....
ಪರಕೀಯ ಕಪಟಿಗಳೂ ಸ್ವಕೀಯ ಧೂರ್ತರೂ ಸೇರಿ ಮೈಸೂರಿಗೆ ಮುಳಿ
ವಾದರು. ಟಿಪ್ಪು ಹೋರಾಡುತ್ತ ಮಡಿದ....'ನನ್ನ ಸ್ನೇಹಿತನಲ್ಲವಾದರೂ
ಒಪ್ಪಬೇಕಾದ್ದೆ-ಗಂಡುಮಗು.'
ತನ್ನನ್ನು ಬಿಟ್ಟರು. ತಮ್ಮನ್ನು ಸೇರಿಕೊಳ್ಳುತ್ತಾನೆ ಎಂದುಕೊಂಡಿರ
ಬೇಕು!
ತಾನು ಹಕ್ಕಿಯಾದೆ, ಗಿಡುಗನಾದೆ, ಪಕ್ಷಿ ಸಂಕುಲದ ರಾಜನಾದೆ.
ಯಾವ ವಂಶದವನು ಧೊಂಡಿಯಾ?
ಅಹ್ಹ! ಯಾವ ವಂಶದವರು ಹೈದರ್-ಟಿಪ್ಪು?
ಅವರು ರಾಜ್ಯ ಕಟ್ಟಬಹುದಾದರೆ ತಾನು ಕಟ್ಟಬಾರದೆ?
ಗೆಲುವು, ಸೋಲು-ಗೆಲುವು, ಸೋಲು....
ಅಂತಿಮ ವಿಜಯ ನಮ್ಮದಾಗಬೇಕು.
ಬಿಳಿದೊಗಲ ಸುಲಿಗೆಗಾರರನ್ನು ಸಪ್ತ ಸಾಗರಗಳ ಆಚೆಗೆ ಅಟ್ಟಬೇಕು.
-'ಅರರೆ ಎನ್ನಯ ಸಮಾನರ್‍ಯಾರು?'
-'ನಾನು ಅಸಮಾನ. ಎರಡು ಲೋಕಗಳ ಅರಸ ಈ ಧೊಂಡಿಯಾ.'
ಪಂತ ಗೋಖಲೆ ತನ್ನನ್ನು ಸೋಲಿಸಿದ್ದ. ತಾನು ಅವನನ್ನು ಸೋಲಿಸಿದೆ.
ಆಂಗ್ಲರ ಹಸ್ತಕರಾಗುವವರಿಗೆಲ್ಲ ಮರಾಠರದೇ ದುರ್ಗತಿ! ಗೋಖಲೆಯ
ಗುಂಡಿಗೆ ಬಗೆದು ಆ ನೆತ್ತರನ್ನು ಮೀಸೆಗೆ ಮುಟ್ಟಿಸಿ, ಪ್ರತೀಕಾರದ ಪ್ರತಿಜ್ಞೆ
ಯನ್ನು ಈಡೇರಿಸಿಕೊಂಡೆ.
ದುಶ್ಯಾಸನರು.
ತಾನೋ ಭೀಮ, ಬಲಭೀಮ.
ಕೊಲ್ಲಾಪುರದ, ಸುರಪುರದ ಅರಸರು ತನಗೆ ನೆರವಾಗಬೇಕು. ಕಿತ್ತೂರಿನ
ದೊರೆ ತನ್ನನ್ನು ಸೇರಬೇಕು. ಎಲ್ಲರೊಂದಾದರೆ ಆಂಗ್ಲರ ಕತೆ ಮುಗಿದಂತೆ.
ಶಿರಹಟ್ಟಿಯ ಕಾಳಗ... ಕನಕಗಿರಿಗೆ ದೇವದುರ್ಗಕ್ಕೆ... ನಿಜಾಮನ ಆಧಿ
ಪತ್ಯದಲ್ಲಿ...ಊಹೂಂ, ಹೇಗಾದರೂ ಮಾಡಿ ತಾನು ಮೈಸೂರಿಗೆ ಮರಳ
ಬೇಕು. ಫರಂಗಿಯವರು ದಣಿದು ಬೇಸತ್ತು, ಬೆನ್ನಟ್ಟುವ ಕೆಲಸವನ್ನು ಬಿಟ್ಟು
ಬಿಡುವಂತೆ ಮಾಡಬೇಕು...
ಇದು ಕೋಣಗಲ್. ಇಲ್ಲಿ ಈ ಇರುಳಿಗೆ ವಿಶ್ರಾಂತಿ.
ಕಣ್ಣುಗಳು ಭಾರವಾಗುತ್ತಿವೆ. ಇದು ನಿದ್ರೆಯ ಆರಂಭವೊ? ವಿಶ್ರಾಂತಿಯ
ಕೊನೆಯೊ?

ನೀರಿಗಾಗಿ ಬಾವಿ ತೋಡುತ್ತಿದ್ದೇನೆ. ಕನಸು.
ನೆನಸು? ಹಳೆಯ ನೆನಪು?
ಪಟ್ಟಣದಿಂದ ತಪ್ಪಿಸಿಕೊಂಡು ಬಂದವನು ಶಿಕಾರಿಪುರದ ದೇವಾಲಯದಲ್ಲಿ

ಪೂಜೆ ಸಲ್ಲಿಸಿದೆ.

ಸಂಗಡಿಗರು ರಾಜ ಖಡ್ಗವನ್ನು ತಂದರು. ಅದನ್ನು ಎತ್ತಿ ಬಳಸ ಬಲ್ಲ

ವನು ಧೊಂಡಿಯಾ ಒಬ್ಬನೇ.

"“ಮಂಗಳಾರತಿಯಾಗುತ್ತಿದೆ.”
“ಹ್ಞ."
“ಹರಕೆಗಳಿದ್ದರೆ...”
“ಹ್ಞ, ಮೈಸೂರನ್ನು, ಕರ್ನಾಟಕವನ್ನು ಸ್ವತಂತ್ರಗೊಳಿಸುತ್ತೇನೆ.

ಮರಾಠರನ್ನು ಕೃಷ್ಣಯಾಚೆಗೆ, ಆಂಗ್ಲರನ್ನು ಕಡಲಿನಾಚೆಗೆ ಅಟ್ಟುತ್ತೇನೆ. ಎಲ್ಲ ವೈರಿಗಳಿಗೆ ನೀರು ಕುಡಿಸುತ್ತೇನೆ. ದೇವರ ಸಾಕ್ಷಿಯಾಗಿ ಈ ಖಡ್ಗವನ್ನೀಗ ಎತ್ತಿಕೊಳ್ಳುವೆ. ಯತ್ನ ಯಶಸ್ವಿಯಾಯಿತೆಂದರೆ ದೇವಾಲಯಕ್ಕೆ ಬಂಗಾರದ ಕಳಶವಿಡಿಸುತ್ತೇನೆ.”

“ಹಾಗೆಯೇ ಆಗಲಿ.”
ಗುರಿ ಸಾಧಿಸಬೇಕು. ಹರಕೆ ಸಲ್ಲಿಸಬೇಕು.
“ಎಲ್ಲ ವೈರಿಗಳಿಗೆ ನೀರು ಕುಡಿಸು....”

****

ನೀರು, ನೀರೂ ನೀರೂ...
ಸಾವಿನ ಸಮ್ಮುಖದಲ್ಲಿರುವ ಎರಡು ಲೋಕಗಳ ಅರಸನಿಗೆ ನೀರು....
ಸಾವಿನ ಸಮ್ಮುಖ?
ಅದು ಸುಳ್ಳು. ಇದು ಹೊಸ್ತಿಲು. ವಿಜಯದ ಹೊಸ್ತಿಲಲ್ಲಿರುವ ಎರಡು

ಲೋಕಗಳ ಅರಸನಿಗೆ ಒಂದು ಗುಟುಕು ನೀರು ಬೇಕು, ನೀರು.

ಬಗ್ಗಿ, ಬಗ್ಗಿ ಬರುತ್ತಿರುವ ಈತ ಯಾರು? ಇವನು ಹುಡುಕುತ್ತಿರು

ವುದು ಯಾರನ್ನು ? ದೊರೆ ಧೊಂಡಿಯಾನನ್ನು ಹಿಡಿದು ಆಂಗ್ಲರಿಗೆ ಕೊಡುವ ಆಸೆಯೋ?

ತಾನು ಕಣ್ಣು ಮುಚ್ಚಿಕೊಳ್ಳಬೇಕು; ಸತ್ತವನಂತೆ ನಟಿಸಬೇಕು.
(ನಟಿಸುವುದೇನು ಬಂತು? ವಾಸ್ತವವಾಗಿ ತಾನು ಸತ್ತೇ ಇಲ್ಲವೆ? ಹೊಟ್ಟೆ ಯಲ್ಲಿ ಗುಂಡು, ಕತ್ತಿಗೆ ನೆಟ್ಟಿರುವ ಈಟಿ. ರಕ್ತ ಹರಿಯುತ್ತಿದೆಯಲ್ಲ? ಹುಟ್ಟಿದ

ವನು ಸಾಯಬೇಕೆನ್ನುವುದು ಪ್ರಕೃತಿ ನಿಯಮ? ನಾನು, ನಾನು....)

“ಮಹಾಪ್ರಭೂ..."
ಪಿಸುದನಿ.
ಈ ಸ್ವತ ಪರಿಚಿತ, ಸ್ವಾಮಿನಿಷ್ಠ ಯೋಧನೇ ಇರಬೇಕು.
ಮೆಲ್ಲನೆ ಕಣ್ಣು ತೆರೆದೆ....
ಆತ ತನ್ನ ಮಗ್ಗುಲಲ್ಲಿ ಮಲಗಿದ್ದಾನೆ.
“ಯಾ-ರು?”
“ಅಪ್ಪಣ್ಣ...
ಅಪ್ಪಣ್ಣ-ಬಲ್ಲೆ, ನಂಬುಗೆಯ ಬಂಟ.
“ನೀರೂ....”

****

ಅಪ್ಪಣ್ಣ ತನ್ನ ಬೆನ್ನ ಮೇಲಿದ್ದ ತೊಗಲ ಚೀಲದಿಂದ ದೊರೆಗೆ ನೀರುಣಿ

ಸಿದ-ಸ್ವಲ್ಪ ಸ್ವಲ್ಪವಾಗಿ, ಎರಡು ಗುಟುಕು.

“ಸಾ-ಕು.”
ಅವನು ವರದಿ ಇತ್ತ:
“ನಮಗೆ ಸೋಲು. ಬೇಹುಗಾರ ನಿನ್ನೆ ತಿಳಿಸಿದ್ದು ನಿಜವಲ್ಲ. ರಾತ್ರೆ ವೈರಿ

ಗಳು ನಮ್ಮ ಸಮೀಪದಲ್ಲೇ ಇದ್ರು, ಘಾತವಾಯ್ತು. ಈಗ....ಈಗ...”

“ಏನು?”
“ಪ್ರಭುಗಳು ತಪ್ಪಿಸಿಕೊಂಡು....”
ಆಳ ಆಳಕ್ಕೆ ದೇಹ ಕುಸಿಯುತ್ತಿದ್ದಂತೆ ಕಂಡಿತು.
ತಿಪ್ಪಯ್ಯನ ಸಲಹೆಯನ್ನು ಸ್ವೀಕರಿಸಬೇಕಾಗಿತ್ತು. ಪಾತಾಳವನ್ನು

ಬಿಟ್ಟುದು ತಪ್ಪು. ಮೂರು ಲೋಕಗಳ ಅರಸ ಎನ್ನಬೇಕಾಗಿತ್ತು.

“ನಾ-ನು....ಅವರ....ಕೈಗೆ... ಸಿಗೋದಿಲ್ಲ...ಅ....ಪ್ಪಣ್ಣ...”
ಅಪ್ಪಣ್ಣ ಕಣ್ಣಗಲಿಸಿದ.ಅರಿವು ಮೂಡಿದೊಡನೆ ಆ ಕಣ್ಣುಗಳಿಂದ ಕಾರಂಜಿ

ಗಳು ಪುಟಿದುವು.

“ಪ್ರಭೂ!”
“ಇ-ಷ್ಟು ಕೆಲಸ ಮಾಡಪ್ಪ....ಈ-ಖಡ್ಗವನ್ನ...ಶಿಕಾರಿಪುರಕ್ಕೆ...ಒಯ್ದು

....ದೇವಸ್ಥಾನದಲ್ಲಿ... ಇಡು...ಕೆಲಸ....ಮುಗಿಯಲಿಲ್ಲ.... ಹರಕೆ....ಬಾಕಿ...

ಮೋನ್ಯಾ... ನನ್ನು ....ನೋಡಿಕೋ...ಅವನು... ದೊಡ್ಡವನಾದ್ಮೇಕೆ...ಆ..... ಖಡ್ಡ....ಎತ್ತಿಕೊಂಡು...ವಿದೇಶೀ... ವೈರಿಗಳನ್ನು....ಸಂಹಾರ ಮಾಡ್ತಾನೆ....

ಹರಕೆ...ಬಂಗಾರದ...ಕಳಸ...ಕಟ್ಟಿಸ್ತಾನೆ...”

“ಅಪ್ಪಣೆ ಪ್ರಭೂ!”

“ಮೋನ್ಯಾ... ಮೋನ್ಯಾ...ಓ... ದೇವರೇ...ದೇವರೇ...”

ನೇರವಾಗಿದ್ದ ಈಟಿ ಬಲಕ್ಕೆ ಬಾಗಿ ನೆಲಕ್ಕೆ ತಾಕಿತು.

ಹುಲಿಯ ಮುಖ ಮಣ್ಣನ್ನು ಮುಟ್ಟಿತು.

ನಡುಗುತ್ತಿದ್ದ ಕೈಗಳಿಂದ ಅಪ್ಪಣ್ಣ ಪ್ರಯಾಸಪಟ್ಟು ಹರಕೆಯ ಖಡ್ಡವನ್ನು ಎತ್ತಿಕೊಂಡ. ಬಾಪೂಜಿ! ಬಾಪೂ!

ಕತೆಯ ಮೊದಲ ಪ್ರಕಟಣೆ ೧೯೪೧ರಲ್ಲಿ, ಮಂಗಳೂರಿನ 'ರಾಷ್ಟ್ರಬಂಧು'
ಸಾಪ್ತಾಹಿಕದಲ್ಲಿ.
ಗಾಂಧಿಜಿಯ ಕೊಲೆಯಾದದ್ದು ೧೯೪೮ ರಲ್ಲಿ. ಆದರೆ, ಅದಕ್ಕೂ ಏಳು
ವರ್ಷ ಮೊದಲೇ ಬರೆದ ನನ್ನ ಕತೆಯಲ್ಲಿ ಅವರು ದಿವಂಗತರಾಗಿದ್ದರು;
ದೇಶಕ್ಕೆ ಸ್ವಾತಂತ್ರ್ಯವೂ ಬಂದಿತ್ತು! ಶೀರ್ಷಿಕೆಯ ಕೆಳಗೆ ದಪ್ಪಕ್ಷರದಲ್ಲಿ
ಗಾಂಧೀಜಿ ಶತಾಯುವಾಗಲೆಂಬ ಆಶಯದೊಡನೆ ಎಂದೂ
ಬರೆದಿದ್ದೆ.
ಕತೆಯನ್ನು ಮೊಳೆ ಜೋಡಿಸಿ ಪುಟ ಕಟ್ಟಿದರು. ಅದರ ಪ್ರೂಫ್ ಸಹಾ
ಯಕ ಸಂಪಾದಕ ಶ್ರೀ ಕೆ. ಕೃಷ್ಣರಾಯರ ಬಳಿಗೆ ಹೋಯಿತು. ಬದುಕಿ
ರುವಾಗಲೇ ಗಾಂಧಿಜಿಯನ್ನು ಪ್ರೇತಾತ್ಮ ಮಾಡುವುದೆಂದರೆ? ಅವರು
ಆಕ್ಷೇಪಿಸಿದರು. ಪುಟ, ಸಂಜೆ, ಸಂಪಾದಕರ ಮನೆಗೆ ಹೋಯಿತು.ಮರು
ದಿನ ಬೆಳಗ್ಗೆ ಕಾರ್ಯಾಲಯಕ್ಕೆ ಬಂದ ಶ್ರೀ ಕಡೆಂಗೋಡ್ಲು ಶಂಕರ
ಭಟ್ಟರು ಮುಗುಳುನಗುತ್ತ “ಏನುಕೃಷ್ಣರಾಯರೆ?ಗಾಂಧಿಜಿ ಸಾಯೋದೇ
ಇಲ್ವೊ?” ಎಂದರು.
ಉಪ ಸಂಪಾದಕ ಬರೆದ ಈ ಕತೆ ಅಚ್ಚಾಯಿತು.

ಎಣ್ಣೆ! ಚಿಮಿಣಿ ಎಣ್ಣೆ!

ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾದ ಮೊದಲ ಕನ್ನಡಕತೆ ಇದು.
ನನಗೆ ಗೊತ್ತಿರುವಷ್ಟರ ಮಟ್ಟಿಗೆ. ಪ್ರಥಮ ಪ್ರಕಟಣೆ ೧೯೪೨ ಆಗಸ್ಟ್
೨ರ 'ರಾಷ್ಟ್ರಬಂಧು'ವಿನಲ್ಲಿ. ಪ್ರಕಟವಾದ ಎರಡು ಮೂರು ದಿನಗಳಲ್ಲೆ
ದಕ್ಷಿಣ ಕನ್ನಡದ ಐ.ಸಿ.ಎಸ್. ಕಲೆಕ್ಟರು ಸಂಪಾದಕರನ್ನು ಕರೆಸಿದರು.
ಕತೆಯಾಗಲೇ ಇಂಗ್ಲಿಷಿಗೆ ಭಾಷಾಂತರಗೊಂಡು ಕಲೆಕ್ಟರರ ಮುಂದಿತ್ತು.
ಕಲೆಕ್ಟರ್ ಎಚ್ಚರಿಕೆಯ ನುಡಿ ಆಡಿ ಸಂಪಾದಕರನ್ನು ಹೋಗಗೊಟ್ಟರು.
ಮೂವತ್ತಮೂರು ವರ್ಷಗಳ ಬಳಿಕ ೧೯೭೫ರಲ್ಲಿ, ಮಂಗಳೂರಿನ
"ಅರುಣ' ಸಾಪ್ತಾಹಿಕ ನನ್ಸ್ಟಿಂದ ಒಂದು ಕತೆ ಬಯಸಿತು. ಸಂಪಾದಕ
ಯು, ಎನ್‌. ಶ್ರೀನಿವಾಸ ಭಟ್ಟರು "ಹಳೆಯದೂ ಆಗಬಹುದು' ಎಂಬ
ಸೂಚನೆಯನ್ನೂ ಇತ್ತಿದ್ದರು. ಈ ಕತೆಯನ್ನು ಪ್ರತಿ ಮಾಡಿ ಕಳಿಸಿದೆ.
ಅದು ಎಮರ್ಜೆನ್ಸಿ ಕಾಲಾವಧಿ. ಯಾವುದೇ ಪತ್ರಿಕೆಯ ಅಂತಿಮ
ಪ್ರೂಫ್‌ ಡಿ. ಸಿ. (ಡೆಪ್ಯೂಟಿ ಕಮಿಷನರ್‌) ಅವರಿಂದ 'ಓ.ಕೆ.' ಆಗ
ಬೇಕು. 'ಎಣ್ಣೆ! ಚಿಮಿಣಿ ಎಣ್ಣೆ' ಪುಟ ಸೆನ್ಸಾರ್‌ ಆಯಿತು. "ಈ ಕತೆ
ಅಚ್ಚು ಮಾಡಬೇಡಿ” ಎಂಬ ಆಜ್ಞೆಯೊಂದಿಗೆ ಹಿಂದಿರುಗಿ ಬಂತು!

ಮೈಖೆಲ್‌ಮಾಸ್‌ ಪಿಕ್‌ನಿಕ್‌

ಕ್ರಿಸ್ತೀಯ ಬದುಕು, ಆಚಾರ-ವಿಚಾರ, ಬಹಳ ಹಿಂದಿನಿಂದಲೂ ನನಗೆ
ಕುತೂಹಲದ ವಿಷಯ. ಆದರೆ, ಅಲ್ಲಿಯೂ ಎರಡು ವರ್ಗಗಳನ್ನು ನಾನು
ಗಮನಿಸಿದ್ದೆ, ಸಮಾಜದ ಇತರ ಮತ-ಪಂಗಡಗಳಲ್ಲಿ ಇರುವಂತೆ.
ಈ ಕತಿ ಮೊದಲು ಅಚ್ಚಾದದ್ದು 'ರಾಷ್ಟ್ರಬಂಧು'ವಿನಲ್ಲಿ, ೧೯೪೩ ರಲ್ಲಿ.

ರಕ್ತ ಸರೋವರ

೧೯೪೬ರಲ್ಲಿ ಕಾಶ್ಮೀರದಲ್ಲಿ, ಡೋಗ್ರಾ ಅರಸೊತ್ತಿಗೆಯ ವಿರುದ್ಧ ಜನ
ದಂಗೆ ಎದ್ದರು. ಅಲ್ಲೂ ಬೇರೆ ಆಶ್ರಿತ ರಾಜ್ಯಗಳಲ್ಲೂ ನಡೆದ ಜನತೆಯ
ಸಮರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಒಂದಂಗವಾಗಿತ್ತು.
ಅಲ್ಲಿಂದ ತೊಟ್ಟಿಕ್ಕಿ ಹರಿಯತೊಡಗಿದ ಸುದ್ದಿ ದೇಶದ ಮೈಯಲ್ಲಿ
ರೋಮಾಂಚ ಉಂಟಿಮಾಡುತ್ತಿತ್ತು. ನನ್ನ್ನ ಕಣ್ಣಿಗೆ ಕಂಡುದು ಕೆಂಪಗಿನ
ದಲ್‌ತಟಾಕ. ಧಾರವಾಡದ ಪ್ರೊ. ಶಿ.ಶಿ. ಬಸವನಾಳರು ತಮ್ಮ 'ಜಯ
ಕರ್ನಾಟಕ' ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದರು.

ಕೊನೆಯ ಗಿರಾಕಿ

ನನ್ನ ಮೂರು ವರ್ಷಗಳ ಭೂಗತ ಜೀವನದ ಕೊನೆಯ ವರ್ಷ-೧೯೫೦.
ಶಾತಾ ವಿಜ್ಞಾನ ಮಂದಿರ ಮತ್ತು ಮಲ್ಲೇಶ್ವರಂ ಹೈಸ್ಕೂಲುಗಳ ನಡುವೆ
ಒಂದು ವೃತ್ತ. (ಕಾರಂಜಿ ಇರಲಿಲ್ಲ.) ಸುತ್ತಲೂ ಒಂದುವರೆ ಅಡಿ ಎತ್ತ
ರದ ಕಟಿಕಟೆ. ಅಲ್ಲಿ, ಮೊದಲೇ ಗೊತ್ತುಪಡಿಸಿದ ದಿನಗಳಲ್ಲಿ, ರಾತ್ರೆ
ಒಂಭತ್ತೂವರೆಯಿಂದ ನಾನು ಕುಳಿತಿರಬೇಕು, ಒಂದು ಚೀಲದೊಡನೆ.
ಹತ್ತರೊಳಗೆ ಜಾಲಹಳ್ಳಿ ಕಡೆಯಿಂದ ಯಾರಾದರೂ ಬರುವರು. ಅವರಿಗೆ
ಆ ಚೀಲ ದಾಟಸಬೇಕು; ಪತ್ರಿಕೆಗಳಲ್ಲಿ ಅಚ್ಚಾಗದ ವಿಷಯಗಳ ಬಗ್ಗೆ
ತುಸು ಮಾತನಾಡಬೇಕು. ಬಳಿಕ ಒಂದು ಸೈಕಲ್‌ ಆಚೆಗೆ; ಇನ್ನೊಂದು
ನಗರದೊಳಗಿನ ಇಕ್ಕಟ್ಟಿನ ಸ್ಥಳಕ್ಕೆ.
ಆ ವೃತ್ತದಲ್ಲಿ ಕುಳಿತಿದ್ದ ಒಂದೆರಡು ಸಲ 'ಕಾಣಿ'ಯನ್ನು ಹೋಲುವ
ಒಬ್ಬಳು ಆ ಕಾಲುದಾರಿಯಲ್ಲಿ ಸುತ್ತುವುದನ್ನು ಕಂಡಿದ್ದೆ. ಒಬ್ಬಿಬ್ಬರು
ಅವಳ ಜತೆ ಪೊದೆಗಳತ್ತ ಸಾಗಿದ್ದರು. ಒಮ್ಮೆ ಅವಳ ಕಿರಿಚಾಟ ಕೇಳಿ
ಸಿತು. ಮೂಗರ ಪ್ರಲಾಪ...ಆ ಕಟ್ಟಿಯಲ್ಲಿ 'ಸಂಗಾತಿ'ಗಾಗಿ ಕಾಯುವ
ಕೆಲಸ ನಿಂತಿತು. ಬಳಿಕ 'ಕಾಣಿ'ಯನ್ನು ನಾನು ಕಾಣಲಿಲ್ಲ.
ಮನಸ್ಸು ಮೆದುಳಿನ ಯಾವ ಮೂಲೆಯಲ್ಲಿದೆಯೊ? ಆ ಘಟನೆ ಈಟ
ಯಂತೆ ಅದನ್ನು ತಿವಿದಿತ್ತು. ಒಂದು ವರ್ಷ ಕಳೆದ ಮೇಲೆ ಚೌಕಟ್ಟು,
ಹಿನ್ನಲೆ- ಎಲ್ಲವನ್ನೂ ಕಲ್ಪಿಸಿಕೊಂಡು 'ಕೊನೆಯ ಗಿರಾಕಿ' ಬರೆದೆ. ಆ
ಜೀವಕ್ಕೆ 'ಕಾಣಿ' ಎಂದು ಹೆಸರಿಟ್ಟೆ. ಕತೆ ಬರೆದ ಮೇಲೆ ಅದಕ್ಕೆ ಪ್ರೇರಣೆ
ಯಾದ ಸಂದರ್ಭವನ್ನು ನೆನಪಿನ `ಗವಿಯೊಳಕ್ಕೆ ತಳ್ಳಿದೆ.
'ಕತೆಗಾರ' ಮಾಸಪತ್ರಿಕೆಯಲ್ಲಿ 'ಕೊನೆಯ ಗಿರಾಕಿ' ಮೊದಲು ಬೆಳಕು
ಕಂಡಿತು. ಸಂಪಾದಕರು: ಜಿ. ಎ. ನರಸಿಂಹಮೂರ್ತಿ.

ತಿರುಕಣ್ಣನ ಮತದಾನ

ನಾನು ಎಷ್ಟೋ ಮಂದಿ ತಿರುಕಣ್ಣರನ್ನು ನೋಡಿದ್ದೇನೆ. ಆರೋಗ್ಯ
ಮ್ಮಂದಿರು ಸತ್ತದ್ದೂ ಗೊತ್ತು. ಮತಗಟ್ಟೆಯಿಂದ ಮಾನಸಿಕವಾಗಿ
ಎಷ್ಟೊಂದು ದೂರ ಅವರು!.... ಇಲ್ಲ; ಈಗ ಪರಿಸ್ಥಿತಿ ಬದಲಾಗಿದೆ ಎನ್ನು
ತ್ತೀರಾ? ನೋಟಿಗೆ ಪ್ರತಿಯಾಗಿ ಓಟು? ಹೆಂಡವೆಂಬ ದ್ರವ ಇಂಧನದ
ಕರಾಮತ್ತು?

ಒಂದೇ ನಾಣ್ಯದ ಎರಡು ಮೈ

ಎಸ್‌. ಎನ್‌. ಶಿವಸ್ವಾಮಿ ಮೈಸೂರು ಆಕಾಶವಾಣಿಯ ದಕ್ಷ ಅಧಿಕಾರಿ.
ಸಾಹಿತ್ಯವನ್ನು ಆ ಮಾಧ್ಯಮಕ್ಕಾಗಿ ಸೊಗಸಾಗಿ ದುಡಿಸಿಕೊೊಂಡವರು.
ಅವರು ಕೇಳದೆ ಇರುತ್ತಿದ್ದರೆ, ಇದನ್ನು ನಾನು ಬರೆಯುತ್ತಲೂ ಇರಲಿಲ್ಲ,
ಇದು ಪ್ರಸಾರವಾಗುತ್ತಲೂ ಇರಲಿಲ್ಲ. ಮುಂದೆ ಅಚ್ಚಾಗುತ್ತಲೂ ಇರ
ಲಿಲ್ಲ ಎನ್ನುವುದು ಅಷ್ಟೇ ನಿಜ. ಕತೆಯ ಪೂರ್ವಾರ್ಧ, ನಡೆದದ್ದು.
ನಾನೇ ಮುಖ್ಯ ಪಾತ್ರ. ಉತ್ತರಾರ್ಧ, ಕಲ್ಪನೆ. ಒಂಟಿ ನಕ್ಷತ್ರ ನಕ್ಕಿತು

೧೯೪೭ರ ಬೇಸಗೆಯಲ್ಲಿ ಹರಪನಹಳ್ಳಿಯಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ, ಹುಬ್ಬಳ್ಳಿಯಿಂದ. 'ಜನಶಕ್ತಿ' ಸಾಪ್ತಾಹಿಕ ಅದೇ ಆಗ ಆರಂಭವಾಗಿತ್ತು. ಅವಸರದಲ್ಲಿ ಹಿಂತಿರುಗಬೇಕು. ತುಂಗಭದ್ರಾ ಜಲಾಶಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಆಗ. ಅಲ್ಲಿದ್ದ ಎಂಜಿನಿಯರೊಬ್ಬರಿಗೆ ಪರಿಚಯ ತಿಳಿಸುವ ಕಾಗದ ನನ್ನ ಬಳಿ ಇತ್ತು. ಹರಪನಹಳ್ಳಿಯಿಂದ ಅಲ್ಲಿಗೆ ಧಾವಿಸಿದೆ. ಹಲವು ಸಹಸ್ರ ಜನ ದುಡಿಯುತ್ತಿದ್ದ ಚಿತ್ರವನ್ನು ನೋಟದಲ್ಲಿ ಸೆರೆಹಿಡಿದು ಮನಸ್ಸಿನಲ್ಲಿ ದಾಖಲಿಸಿದೆ. ೧೯೫೭ ರಲ್ಲಿ ದಿಲ್ಲಿಯ ಸಾಹಿತ್ಯ ಸಮಾರೋಹಕ್ಕೆ ಕರೆದರು. (ಆಕಾಶವಾಣಿ ವ್ಯವಸ್ಥೆ) ಅಲ್ಲಿ ಈ ಹೊಸ ಕತೆಯ ವಾಚನ. ದೇಶದ ಹದಿನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಸಾರ, ಒಳಗಿದ್ದ ಮಸುಕು ರೇಖೆಗಳನ್ನು ಆಧರಿಸಿ ಚಿತ್ರ ರಚಿಸಿದೆ, ಬಳಸಿದ್ದು ಕಲ್ಪನೆಯ ಬಣ್ಣಗಳನ್ನು, ಹೀಗೆ ಸಿದ್ಧವಾಯಿತು-ಒಂಟಿ ನಕ್ಷತ್ರ ನಕ್ಕಿತು.' ದಿಲ್ಲಿ ಯಾತ್ರೆಯಲ್ಲಿ ಜತೆಗಿದ್ದರು: ಶ್ರೀರಂಗ, ವಿ. ಸೀ. ಬೇಂದ್ರೆ ಮತ್ತು ನಾ. ಕಸ್ತೂರಿ, ವೇದಿಕೆಯ ಮೇಲೆ ಭಾರತೀಯ ಕತೆಗಾರರ ಜತೆ ಕುಳಿತವರು ಆಗಿನ ಪ್ರಧಾನಿ ಜವಾಹರಲಾಲ ನೆಹರು.

ಹಮಾಲ ಇಮಾಮ್‍ಸಾಬಿ

ಇಮಾಮ್‌ಸಾಬಿಯ ರೂಪದರ್ಶಿಯನ್ನು ನಾನು ಕಂಡದ್ದು ಧಾರವಾಡದ ರೈಲು ನಿಲ್ದಾಣದಲ್ಲಿ, ಆ ಊರಿನಲ್ಲಿ ನಾನು ವಾಸವಾಗಿದ್ದಾಗ, ೧೯೫೮- ೬೧ರ ಅವಧಿಯಲ್ಲಿ. ಮುಖಚರ್ಯೆ, ವಯಸ್ಸಿಗೆ ಸಂಬಂಧಿಸಿ ಮಾತ್ರ ಏಕರೂಪತೆ. ಮಿಕ್ಕಿದ್ದು ಕಲ್ಪನೆ.

ಮೊದಲ ಪ್ರಕಟಣೆ 'ಪ್ರಜಾಮತ' ದೀಪಾವಳಿ ವಿಶೇಷಾಂಕದಲ್ಲಿ (೧೯೬೧). ಸಂಪಾದಕರು: ಹ. ವೆಂ. ನಾಗರಾಜ ರಾವ್,

ಹರಕೆಯ ಖಡ್ಗ

ಟಿಪ್ಪು (ಟೀಪೂ) ಬ್ರಿಟಿಷರ ವೈರಿಯಾಗಿದ್ದ. ಅವರಿಗಿದಿರಾಗಿ ಹೋರಾಡುತ್ತ ಮಡಿದ. ಅವನ ಮರಣಾನಂತರ ಕೆಲ ವರ್ಷ-ಹತ್ತೊಂಭತ್ತನೆಯ ಶತಮಾನದ ಆದಿ ಭಾಗ-ಕನ್ನಡ ನೆಲದಲ್ಲಿ ಆಂಗ್ಲರಿಗೆ ದುಃಸ್ವಪ್ನವಾದವನು ಚನ್ನಗಿರಿಯ ಧೋಂಡಿಯಾ ವಾಫ್, ೧೯೫೦ ರ ವರ್ಷಗಳಲ್ಲಿ ಭಾರತ ಸ್ವಾತಂತ್ರ ಸಂಗ್ರಾಮದ ಹಿನ್ನೆಲೆಯ ಬಗೆಗೆ ಅರಸಾಟ ನಡೆಸಿದಾಗ, ಕಳೆದ-ಅಂದರೆ ಸಾವಿರದ ಎಂಟುನೂರರ ಈಚೆಗಿನ-ಅನೇಕ ವೀರಪ್ರೇತಗಳ ಪರಿಚಯ ನನಗಾಯಿತು. ಅವರಲ್ಲಿ ನನ್ನ ಗಮನ ಸೆಳೆದವನು ಧೋಂಡಿಯಾ ವಾಘ್.

೧೮೫೭ರ ಸಿಪಾಯಿ ದಂಗೆಯನ್ನು ಈ ದೇಶದಲ್ಲಿ ಬ್ರಿಟಿಷರಿಗಿದಿರು ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯುವುದು ರೂಢಿಗೆ ಬಂದಿದೆ. ಆ ದೃಷ್ಟಿಯಲ್ಲಿ ೧೯೫೭ ಸ್ವಾತಂತ್ರ ಹೋರಾಟದ ಶತಮಾನೋತ್ಸವದ ವರ್ಷವಾಯಿತು. ವಿಜೃಂಭಣೆಯ ಆಚರಣೆಯೂ ನಡೆಯಿತು. ಆದರೆ, ೧೮೫೭ಕ್ಕೂ ಮುಂಚೆ ಆರು ದಶಕ ಕಾಲ ಪರಕೀಯರ ವಿರುದ್ಧ ನಡೆದ ಪ್ರತಿಭಟನೆಯನ್ನು ಅಳಿಸುವುದು ಹೇಗೆ?....ಸೃಜನಶೀಲ ಬರೆಹಗಾರ ಪ್ರೇತಗಳಿಗೆ ಜೀವ ತುಂಬಲು ಯತ್ನಿಸಿದರೆ 'ಹರಕೆಯ ಖಡ್ಗ'ದಂತಹ ಕತೆಗಳು ರೂಪು ತಳೆಯಲೇಬೇಕು.

೧೯೬೫ ಆಗಸ್ಟ್ ೨೯ರ 'ಸುಧಾ' ಸಂಚಿಕೆಯಲ್ಲಿ ಈ ಕತೆ ಮೊದಲು ಪ್ರಕಟವಾಯಿತು. ಸಂಪಾದಕರು: ಇ. ಆರ್. ಸೇತೂರಾಂ, ಎಂ. ಬಿ. ಸಿಂಗ್.

ಈ ಕಥಾ ಸಂಕಲನವನ್ನು ಕುರಿತು

ಸಮಕಾಲೀನ ಕನ್ನಡ ಸಾಹಿತ್ಯವಲಯದಲ್ಲಿ ನಿರಂಜನ ಯಾಕೆ ಮತ್ತು ಹೇಗೆ ಒಬ್ಬ ಮಹತ್ವದ ಲೇಖಕರೆಂಬುದನ್ನು ಪರಿಗ್ರಹಿಸಲು ಈ ಸಂಕಲನದ ಹತ್ತು ಕಥೆಗಳು ದಿಕ್ಸೂಚಿಯಾಗಬಲ್ಲುವು. ಒಂದು ವ್ಯವಸ್ಥಿತ ಸಂಯೋಜನೆಯಿಂದಾಗಿ ಈ ಸಂಕಲನಕ್ಕೆ ಚಾರಿತ್ರಿಕ ಸ್ಥಾನವೂ ಪ್ರಾಪ್ತವಾಗಿದೆ. ಶತಮಾನದ ಕಾಲಮಾನ ಘಟಕದಲ್ಲಿ, 1941 ರಿಂದ 1965ರ ಅವಧಿಯಲ್ಲಿ ಬರೆದ ಕಥೆಗಳಲ್ಲಿ ಹತ್ತನ್ನು ಆರಿಸಲಾಗಿದೆ. ಕಥೆಗಾರರ ಕಥನ ಕಲೆಯ ವಿಕಾಸದ ಮಜಲುಗಳನ್ನು ಅರಿಯಲೂ ಈ ಸಂಕಲನ ನೆರವಿಗೆ ನಿಲ್ಲಬಹುದು.

(ಮುನ್ನುಡಿಯಿಂದ)
ಡಾ. ಹಂಪನಾ

ಐಬಿಎಚ್ ಪ್ರಕಾಶನ
ಗಾಂಧಿನಗರ, ಬೆಂಗಳೂರು 560 009

  1. 156 ಕಥೆಗಳುಳ್ಳ 'ಧ್ವನಿ' ಜೋಡಿಸಂಪುಟ ಐಬಿಎಚ್ ಪ್ರಕಾಶನದಿಂದ ಪ್ರಕಟವಾಗಿದೆ.