ಗುರುವಿನಲ್ಲಿ ಎರಡನೆಯ ಗುಣವನರಸಿದಡೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುವಿನಲ್ಲಿ
ಗುಣವನರಸಿದಡೆ
ಒಂದನೆಯ
ಪಾತಕ.
ಲಿಂಗದಲ್ಲಿ
ಶಿಲೆಯನರಸಿದಡೆ
ಎರಡನೆಯ
ಪಾತಕ.
ಜಂಗಮದಲ್ಲಿ
ಕುಲವನರಸಿದಡೆ
ಮೂರನೆಯ
ಪಾತಕ.
ಪಾದೋದಕದಲ್ಲಿ
ಸೂತಕವನರಸಿದಡೆ
ನಾಲ್ಕನೆಯ
ಪಾತಕ.
ಪ್ರಸಾದದಲ್ಲಿ
ರುಚಿಯನರಸಿದಡೆ
ಐದನೆಯ
ಪಾತಕ.
ಇಂತೀ
ಪಂಚಮಹಾಪಾತಕರ
ಎನಗೊಮ್ಮೆ
ತೋರದಿರಯ್ಯ
ಅಖಂಡೇಶ್ವರಾ.