ತನುವ ಮನಶುದ್ಧನಾಗಲರಿಯೆನಯ್ಯ ನಿಮಗೊಪ್ಪಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವ
ನಿಮಗೊಪ್ಪಿಸಿ
ತನುಶುದ್ಧನಾಗಲರಿಯೆನಯ್ಯ
ನಾನು.
ಮನವ
ನಿಮಗೊಪ್ಪಿಸಿ
ಮನಶುದ್ಧನಾಗಲರಿಯೆನಯ್ಯ
ನಾನು.
ಧನವ
ನಿಮಗೊಪ್ಪಿಸಿ
ಧನಶುದ್ಧನಾಗಲರಿಯೆನಯ್ಯ
ನಾನು.

ತನುಮನಧನದಲ್ಲಿ
ಶುದ್ಧನಲ್ಲದ
ಪ್ರಪಂಚಿನ
ಡಂಭಕ
ನಾನಯ್ಯ
ಅಖಂಡೇಶ್ವರಾ.