ನವೋದಯ

ವಿಕಿಸೋರ್ಸ್ದಿಂದ

ನವೋದಯ
by ನಿರಂಜನ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!






ನವೋದಯ

ಹಾಸುಗೆ, ಟ್ರಂಕು_ಎರಡೂ ದೊಡ್ಡವೇ. ಜತೆಯಲ್ಲೆ, ಸಾಮಾನುಗಳನ್ನು
ತುಂಬಿದ್ದೊಂದು ಗೋಣಿಚೀಲ. ಆ ಚೀಲವನ್ನು ಮೆಲ್ಲನೆ ಮುಟ್ಟಿದರೂ ಸಾಕು,
ಒಳಗಿನ ಡಬ್ಬ ಪಾತ್ರೆಗಳು ಕುಯ್ಯೋ ಮುರ್ರೋ ಎನ್ನುತ್ತಿದ್ದುವು. ರೈಲುಗಾಡಿಯಿಂದ
ಅವುಗಳನ್ನೆಲ್ಲ ಕೆಳಗಿಳಿಸಿದ ಕೂಲಿಯಾಳು, ದಂಪತಿಯತ್ತ ನೋಡಿ ಕೇಳಿದ:
"ಬಸ್ಗೋಗ್ತೀರಾ ಬುದ್ಧಿ?"
ಜಯದೇವ ನಿಂತಲ್ಲಿಂದಲೆ ನಿತ್ಯಾನಂದ ಮೋಟಾರನ್ನು ಹುಡುಕುತ್ತ ನಿಲ್ದಾಣ
ದಾಚೆಗೆ ದೃಷ್ಟಿಹರಿಸಿದ್ದ. ಅದು ಮೂರು ವರ್ಷಗಳಿಗೆ ಹಿಂದೆ ಆತ ಪ್ರಯಾಣ ಮಾಡಿದ್ದ
ವಾಹನ.
ಆಳಿನ ಮಾತು ಕೇಳಿಸಿ ಆತನೆಂದ:
"ಏನಪ್ಪ?... ಹೂಂ. ಬಸ್ಗೇ ಕಣಯ್ಯ."
"ನಡೀರಿ ಬುದ್ಧಿ. ಎತ್ಕೊಂಬತ್ತೀನಿ."
ಮುಖ್ಯವಾದ ವಿಷಯವನ್ನೇ ಜಯದೇವ ಮರೆತುದನ್ನು ಗಮನಿಸಿ ಸುನಂದಾ
ಅಂದಳು:
"ಎಷ್ಟಪ್ಪಾ ಕೂಲಿ?"
ಅಮ್ಮನವರೂ ಮುಖ್ಯರಾದವರೆಂಬುದನ್ನರಿತು,ಅವರೆಡೆಗೆ ತಿರುಗಿದ ಆಳು.
"ನೀವು ಕೊಟ್ಟಿದ್ದು ಇಸಕೋತೀನ್ರವ್ವಾ."
ಸುನಂದೆಯ ಮುಂಜಾಗರೂಕತೆಯನ್ನು ಕoಡು, ನಸುನಕ್ಕು ಜಯದೇವನೆಂದ:
"ಇಲ್ಲಿಯವರು ಬೆಂಗಳೂರಿನ ಕೂಲಿಗಳ ಹಾಗಲ್ಲ ಕಣೇ. ಇವರು ಜಗಳಾಡೊಲ್ಲ:
ತುಂಬಾ ಸಂಭಾವಿತರು."
"ಬುದ್ಧಿಯೋರಿಗೆ ತಿಳೀದಾ..." ಎಂದ ಆಳು, ಹಲ್ಲುಕಿಸಿದು.
ರೈಲುಗಾಡಿ ಶಿಳ್ಳು ಹಾಕಿ ನಿಲ್ದಾಣ ಬಿಟ್ಟು ಮುಂದಕ್ಕೆ ತೆರಳಿತು. ಜನರು
ಹೊರಹೋಗುತ್ತಲೇ ಇದ್ದರು.
ಮೋಟಾರಿನಲ್ಲಿ ಸೀಟಿಗೋಸ್ಕರ ಹಿಂದೆ ನಡೆಸಿದ್ದ ಪರದಾಟದ ನೆನಪಾಗಿ ಜಯ
ದೇವ, ಆಳನ್ನು ಅವಸರಪಡಿಸುತ್ತ ಹೇಳಿದ:
"ಬೇಗ್ಬೇಗ್ನೆ ಎತ್ಕೊ೦ಡು ನಡೀಪ್ಪಾ."
“ಇನ್ನೂ ಬಸ್ಸು ಬ೦ದಿಲ್ರಾ...."
"ಇಲ್ಲಿಂದಲೇ ಅಲ್ವೇನಯ್ಯ ಬಸ್ಸು ಹೊರಡೋದು?"
“ನೀವ್ಹೇಳೋದು ಯಾವತ್ತಿನ್ಮಾತು? ಈಗಿರೋದು ಸರ್ಕಾರಿ ಬಸ್ಸು. ಬೆಳಗಿನ  ಜಾವ ದ್ಯಾವನೂರಿನಿ೦ದ ಒಂಟು ಇಲ್ಲಿಗ್ಬತ್ತದೆ."
“ಹಾಗೇನು?"ಎಂದ ಜಯದೇವ.
ನಿತ್ಯಾನಂದ ಸರ್ವೀಸಿನಲ್ಲಿ ಪ್ರವಾಸ-ಸುನಂದಾ ಅನುಭವಿಸಲು ಬಯಸಿದ್ದ ಸುಖ
ಗಳಲ್ಲೊಂದು. ಜಯದೇವ ಹಿಂದೆ ಬರೆದಿದ್ದ ಕಾಗದದಲ್ಲಿ ಆ ವಿವರವನ್ನು ಆಕೆ ಓದಿ
ದ್ದುದು, ಈಗಲೂ ಕಣ್ಣಿಗೆ ಕಟ್ಟಿತ್ತು. ಹಿಂತಿರುಗಿ ಬಂದ ಬಳಿಕ ಬಾಯ್ದೆರೆಯಾಗಿಯೂ
ಅದನ್ನು ಆತ ಬಣ್ಣಿಸಿದ್ದ. ಈಗ__
"ನಿತ್ಯಾನ೦ದ ಬಸ್ಸು ಇಲ್ವ೦ತೆ ಕಣೇ."
ಆ ಧ್ವನಿಯಲ್ಲಿತ್ತು ನಗೆಯಾಟದ ವಿಷಾದ. ಸುನಂದಾ ಮುಗುಳು ನಕ್ಕಳು.
ಅದರ ಹಿನ್ನೆಲೆ ಅರ್ಥವಾಗದ ಆಳು ಹೇಳಿದ:
"ಯಾಕ್ಬುದ್ಧೀ... ಸರ್ಕಾರಿ ಬಸ್ಸು ಪಸಂದಾಗೈತೆ. ದೊಡ್ಬಸ್ಸು ಆಕವ್ರೆ."
"ಸೀಟು ಸಿಗುತ್ತೇನಯ್ಯ?"
"ಓ..."
ಭಾರವನ್ನೆತ್ತಲು ಜಯದೇವ ನೆರವಾದ. ಒಂದೊಂದು ಸಾರೆ ಒಂದೊಂದು.
ಡಬ್ಬ ಪಾತ್ರೆಗಳ ಸದ್ದಾದಾಗ ಸುನಂದಾ ಹೌಹಾರಿ ಬಿದ್ದಳು.
"ಮೆತ್ಗಪ್ಪಾ. ಕೆಳಕ್ಕೆ ಕುಕ್ಬೇಡ."
ಹೋಟೆಲಿಗೆ ಸ್ವಲ್ಪ ದೂರದಲ್ಲೆ ಇತ್ತು ಬಸ್ಸು ನಿಲ್ಲುವ ಜಾಗ. ಅಲ್ಲಿ ಜನರ
ದೊಂದು ಗುಂಪು ನೆರೆದಿತ್ತು. ಸುನಂದೆಯೊಡನೆ ಜಯದೇವ ಅತ್ತ ಬಂದಂತೆ ಯಾರೋ
ಅಂದರು:
"ನಮಸ್ಕಾರ. ಬೆಂಗಳೂರಿಂದ ಬರೋಣವಾಯ್ತೆ?"
ಪ್ರತಿ ನಮಸ್ಕಾರ ಮಾಡುತ್ತ, ಆ ವ್ಯಕ್ತಿ ಯಾರಿರಬಹುದೆ೦ದು ಜಯದೇವ,
ನೆನಪುಗಳ ರಾಶಿಯನ್ನು ಕೆದರಿದ. ಮುಖವೇನೋ ಪರಿಚಿತವಾಗಿತ್ತು. ತಾನು ಪಾಠ
ಹೇಳಿದ್ದ ಯಾವನೋ ವಿದ್ಯಾರ್ಥಿಯ ತಂದೆ. ಯಾವುದೋ ಹೆಸರು...
ಯಾರಾದರೇನು? ಶಿಷ್ಟಾಚಾರಕ್ಕೆ ಕೊರತೆಯೆ?
"ಬೆಂಗಳೂರಿಂದ್ಲೆ ಬಂದ್ವಿ.. ತಾವು?"
"ಅರಸೀಕೆರೆಗೆ ಹೋಗಿದ್ದೆ. ಸ್ವಲ್ಪ ಕೆಲಸವಿತ್ತು... ಈಗ ನಮ್ಮೂರು ಕಡೇನೇ
ಹೊರಟಿದೀರಿ ಅಂತ ಕಾಣುತ್ತೆ."
"ಹೌದು."
ಆ ವ್ಯಕ್ತಿ"ಸಂತೋಷ" ಎಂದ. ಸುನಂದೆಯ ಕಡೆಗೊಮ್ಮೆ ನೋಡಿ ಪುನಃ
"ಸಂತೋಷ"ಎಂದ.
ಸುನಂದೆ ತಾನು ಕೈಹಿಡಿದ ಹೆಂಡತಿ_ಎಂದು ಜಯದೇವ ಆತನಿಗೆ ಬಿಡಿಸಿ
ಹೇಳುವ ಅಗತ್ಯವೇ ಇರಲಿಲ್ಲ. ಅವರು ಅನ್ಯೋನ್ಯವಾಗಿದ್ದ ರೀತಿಯೆ ಸಾರುತಿತ್ತು,
ಆ ಇಬ್ಬರೂ ನವ ವಧೂವರರೆಂಬುದನ್ನು. ಯಾವ ಸಂದೇಹಕ್ಕೂ ಎಡೆ ಇರದ ಹಾಗೆ ಆಕೆಯ ವಕ್ಷಸ್ಥಲವನ್ನು ಆಲಂಕರಿಸಿತ್ತು ಮಾಂಗಲ್ಯ ಸೂತ್ರ.
ಆಳು ಹೇಳಿದ:
"ನೀವು ಕಾಫಿಗೀಫಿ ಕುಡ್ಕಂಬನ್ನಿ ಬುದ್ಧಿ. ಸಾಮಾನು ನಾನು ನೋಡ್ಕೊಂತೀನಿ."
ಜಯದೇವನ ಮನಸ್ಸಿನಲ್ಲಿದ್ದುದೂ ಅದೇ ವಿಚಾರ. ಉಡುಪಿಮಾವನ ಆ
ಹೋಟೆಲಿನ ಪರಿಚಯ ಮಾಡಿಕೊಡುವೆನೆಂದು ಸುನಂದೆಗೆ ಆತ ಮಾತು ಕೊಟ್ಟಿದ್ದ
ಬೇರೆ. ಆದರೆ ಈಗ, ನಮಸ್ಕರಿಸಿದ ಪರಿಚಿತರೊಬ್ಬರು ಅಲ್ಲೇ ಇದ್ದರು. ಅವರನ್ನು
ಕರೆಯದೆ ಇಬ್ಬರೇ ಹೋಟೆಲಿಗೆ ಹೋಗುವುದು ಸಾಧ್ಯವಿರಲಿಲ್ಲ.
ಪುಣ್ಯಾತ್ಮ ನಿರಾಕರಿಸಲಪ್ಪ_ಎಂದು ಮನಸ್ಸಿನಲ್ಲೆ ಪ್ರಾರ್ಥಿಸುತ್ತ ಜಯದೇವ
ನೆಂದ:
"బన్ని."
ಎಲ್ಲಿಗೆ ಎಂಬುದನ್ನು ವಿವರಿಸಿ ಹೇಳಲಿಲ್ಲ ಆತ. ದೃಷ್ಟಿ ಮಾತ್ರ ಹೋಟೆಲಿನ
ಕಡಿಗೆ ಸರಿದು 'ಅಲ್ಲಿಗೆ' ಎಂದಿತು.
"ಬೇಡಿ ಬೇಡಿ.ಬೆಳಗ್ಗೆ ಸ್ನಾನಮಾಡದೆ ನಾನೇನೂ ತಗೊಳ್ಳೋದಿಲ್ಲ."
ಆಚಾರದ ಮಾತು ಎಂದ ಬಳಿಕ ಆಗ್ರಹದ ಪ್ರಶ್ನೆ ಎಲ್ಲಿಯದು? ಮಡಿಯವರಿಗೆ
ಮೌನವಾಗಿಯೆ ವಂದಿಸಿ, ಸುನಂದೆಯೊಡನೆ ಜಯದೇವ ಹೋಟೆಲಿನ ಕಡೆಗೆ ಸಾಗಿದ.
ಸುನಂದಾ ಕೇಳಿದಳು:
"ಯಾರೂಂದ್ರೆ ಸ್ನೇಹಿತರು?"
"ನನಗೆ ಗೊತ್ತಿದ್ದರೆ!"
"ಮತ್ತೆ! ಕಾಫಿಗೆ ಕೂಡಾ ಕರೆದಿರಿ..."
"ಅವರಾಗಿ ಮಾತನಾಡಿಸಿದಾಗ ಇನ್ನೇನು ಮಾಡೋಣ? ಆ ಊರಿನವರೇ ಇರ
ಬೇಕು ಯಾರೋ."
"ಸರಿಹೋಯ್ತು!"
ಹೆಂಗಸು ಒಳಗೆ ಬಂದಳೆಂದು ಅತ್ತ ಮುಖ ತಿರುಗಿಸಿ ಮಿಕಿಮಿಕಿ ನೋಡುವವರೇ
ಎಲ್ಲರೂ. ಹುಡುಗನೊಬ್ಬ ಬಂದು "ಹೀಗ್ಬನ್ನಿ ಸಾರ್" ಎಂದು, ಪ್ರತ್ಯೇಕವಾಗಿ
ದ್ದೊಂದು ಕೊಠಡಿಗೆ ಅವರನ್ನು ಕರೆದೊಯ್ದ.
"ಹೊಲಸು ಹೋಟೆಲು,"ಎಂದಳು ಸುನಂದಾ,ಮೂಗಿನಿಂದ ಸ್ವರ ಹೊರಡಿಸಿ.
ಆದರೆ ವಾಸ್ತವವಾಗಿ ಆ ಊರಿನ 'ಸುಂದರ' ಮುಖಕ್ಕೆ ಮೂಗುಬಟ್ಟಾಗಿದ್ದ
ಹೋಟೆಲು ಅದು.
"ಇನ್ನು ಹ್ಯಾಗಿರುತ್ತೇಂತಿದ್ದೆ?"
"ಕೆಟ್ಟ ವಾಸ್ನೆ!"
“ಒಂದು ನಿಮಿಷ ಸಹಿಸ್ಕೊ."


41

ಜಯದೇವನ ನಿರ್ದೇಶದಂತೆ ಹುಡುಗ, ಎರಡೆರಡು ಇಡ್ಲಿ ಚಟ್ಣಿ ಬೆಣ್ಣೆ ತಂದ.

"ಹೋಟ್ಲಲ್ಲಿ ಯಾವಾಗಲೂ ಇಡ್ಲೀನೇ ಮೇಲು. ಎಣ್ಣೆ ಅವಾಂತರ ಇರೋ
ದಿಲ್ಲ" ಎಂದ ಜಯದೇವ. ಅದು, ಸ್ವಾನುಭವದಿಂದ ಆತ ಸಿದ್ಧಗೊಳಿಸಿದ್ದ ಸೂತ್ರ.
ಅಷ್ಟರಲ್ಲೆ ಹೊರಗೆ ಗರ್ ಗರ್ ಎಂದು ರೇಡಿಯೋ ಸದ್ದಾಯಿತು_ನೀರು ಬರು
ವುದಕ್ಕೆ ಮುಂಚೆ ಕೊಳಾಯಿ ಸಂಕಟದ ಸ್ವರ ಹೊರಡಿಸುವಂತೆ.
'ಸಾಯಂಕಾಲ ಏಳುಕಾಲು ಗಂಟೆಯಿಂದ ಏಳೂವರೆ ವರೆಗೆ'_
"ಕಾರ್ಯಕ್ರಮ ವಿವರಣೆ ಆಗ್ತಾ ಇದೆ," ಎಂದಳು ಸುನಂದಾ, ಉತ್ಸಾಹದ
ಧ್ವನಿಯಲ್ಲಿ.
ಜಯದೇವನ ಹುಬ್ಬುಗಳು ಚಲಿಸಿದುವು. ಬೇರೆಯೊಂದು ಕಾರಣಕ್ಕಾಗಿ ಆತ
ನಿಗೆ ಸೋಜಿಗವಾಗಿತ್ತು.
"ಹೋದ ಸಾರೆ ಬಂದಾಗ ಈ ಹೋಟ್ಲಲ್ಲಿ ರೇಡಿಯೋ ಇರಲಿಲ್ಲ ಕಣೇ."
ಹುಡುಗ ಕಾಫಿ ತಂದಿರಿಸಿದ. ದೊಡ್ಡ ಗ್ಲಾಸುಗಳ ತುಂಬಾ ದ್ರಾವಕವಿತ್ತು.
ಆದರೆ ಬಣ್ಣ ಏನೇನೂ ಆಕರ್ಷಕವಾಗಿರಲಿಲ್ಲ.
"ಕಲಗಚ್ಚು ನೀರಿನ ಹಾಗಿದೆ. ಇಂಥ ಕಾಫಿ ಕೊಟ್ಟು ದುಡ್ಡು ಮಾಡ್ದೋರು
ರೇಡಿಯೋ ಇಡೋದಕ್ಕೇನು?" ಎಂದಳು ಸುನಂದಾ,ಕಟುವಾದ ಧ್ವನಿಯಲ್ಲಿ.
"ಬೆಂಗಾಡಿನಲ್ಲಿ ಅರವಟ್ಟಿಗೆ ಇದ್ದ ಹಾಗೆ ಈ ಹೋಟ್ಲು. ಆತ ಇಷ್ಟು
ಕೊಡೋದೇ ದೊಡ್ದು. ಇದೂ ಇಲ್ದಿದ್ರೆ__"
"ನಿಮ್ಮ ಆ ಊರಲ್ಲೂ ಇಂಥದೇ ಅರವಟ್ಟಿಗೆ ತಾನೆ ಇರೋದು? ಒಂದು ವರ್ಷ
ವೆಲ್ಲ ಆ ಅಮೃತ ಕುಡಿದೂ ಕುಡಿದೂ ಕಾಹಿಲೆ ಮಲಗಿದ್ದಿರಿ!"
ಜಯದೇವ ನಕ್ಕ. ಆದರೆ ಮುಂದೆ ಮಾತುಕತೆಗೆ ಅವಕಾಶವಿಲ್ಲದ ಹಾಗೆ,
ಮೋಟಾರು ಬಂದ ಸದ್ದಾಯಿತು.
"ಬಸ್ ಬಂತು! ಬೇಗ್ನೆ ಕುಡಿ!"
ಒಳಕ್ಕೆ ಇಣಿಕಿ ಹುಡುಗನೆಂದ:
"ಇನ್ನೂ ಕಾಲು ಗಂಟೆ ಟೈಮಿದೆ ಸಾರ್. ಡ್ರೈವರೂ ಕಂಡಕ್ಟರೂ ಕಾಫಿಗೆ
ಇಲ್ಲಿಗೇ ಬರ್ತಾರೆ.
ಸಮಾಧಾನಪಡಿಸುವ ಆಶ್ವಾಸನೆ.ಆದರೂ ಕುಳಿತಿರಲು ಸ್ಥಳ ಸಿಗದೇ ಹೋಗುವು
ದೇನೋ:ಎಂಬ ಕಾತರ.
ಹುಡುಗ ಕೇಳಿದ:
"ಇನ್ನೇನು ಬೇಕು ಸಾರ್?"
"ಬಿಲ್ಲು."
"ಹೋಗಿ ಹೇಳ್ತೀನಿ;"
ಸುನಂದಾ ಮುಂದಾದಳು. ಆಕೆಯನ್ನು ಹಿಂಬಾಲಿಸಿ ಜಯದೇವ ಹೊರಟ.
ಆತ 'ಗಲ್ಲ'ವನ್ನು ಸಮೀಪಿಸಿದಂತೆ ಹುಡುಗನ ಕೀರಲು ಧ್ವನಿ ಕೇಳಿಸಿತು:
“ದೋ ಇಸಂ__ಎಂಟಾಣೆ!"
ರೂಪಾಯಿಯ ನೋಟು ಕೊಟ್ಟು ಚಿಲ್ಲರೆ ಪಡೆಯುತಿದ್ದ ಜಯದೇವನ ದೃಷ್ಟಿ
ಮೇಜಿನ ಮೇಲಿದ್ದ ಪತ್ರಿಕೆಯ ಕಡೆಗೆ ಹೊರಳಿತು. ಹಿಂದಿನ ಸಂಜೆ ಬೆಂಗಳೂರಲ್ಲಿ
ಆತ ಓದಿದ್ದ ಶಿರೋನಾಮೆಯೆ. ದಿನಾಂಕ ಮಾತ್ರ ಆ ದಿನದ್ದು. ಜಯದೇವ, ಆ
ಉಪಾಹಾರ ಗೃಹದ ಒಡೆಯನ ಮುಖ ನೋಡಿದ. ಆ ವ್ಯಕ್ತಿಯೇ. ಮೂರು
ವರ್ಷಗಳಿಗೆ ಹಿಂದೆ ಜಯದೇವ ದುಡ್ಡು ಕೊಡುತ್ತ ಆತನೊಡನೆ ಚರ್ಚಿಸಿದ್ದ_ಪತ್ರಿಕೆ
ಆ ದಿನದ್ದೆ? ಹಳೆಯದೆ? ಎಂದು.
ಆದರೆ ಹೋಟೆಲಿನವನಿಗೇನೂ ಅದರ ನೆನಪಿದ್ದಂತೆ ತೋರಲಿಲ್ಲ. ಜಯ
ದೇವನ ಮುಖಪರಿಚಯವೂ ಆಗಲಿಲ್ಲ ಆತನಿಗೆ. ಸಾಲದುದಕ್ಕೆ, ಆಗಲೆ ಹೊರಕ್ಕಿಳಿದು
ನಿಂತಿದ್ದ ಸುನಂದಾ ಬೇರೆ ಆ ಮನುಷ್ಯನ ಗಮನವನ್ನು ಸ್ವಲ್ಪ ಮಟ್ಟಿಗೆ ಸೆಳೆದಿದ್ದಳು.
ಕೆಂಪು ಮೋಟಾರು ಹತ್ತು ಹೆಜ್ಜೆ ಆಚೆಗೆ ನಿಂತಿತ್ತು. ಎದುರು ಬದಿಯಿಂದ
ತಮ್ಮನ್ನು ಹಾದು ಹೋಟೆಲಿನೆಡೆಗೆ ಹೋದ ಖಾಕಿ ಉಡುಗೆಯ ಮೋಟಾರು ಚಾಲಕ
ನನ್ನೂ ಬೇರೆ ಒಬ್ಬಿಬ್ಬರನ್ನೂ ಗಮನಿಸದೆ ಜಯದೇವ ಮತ್ತು ಸುನಂದಾ ಬೇಗ
ಬೇಗನೆ ಹೆಜ್ಜೆಹಾಕಿದರು.
"ಬಸ್ನೊಳಗೆ ಬೇರೆ ಬೇರೆ ಕೂತ್ಕೊಬೇಕೇನೊ ನಾವು?" ಎಂದು ಸುನಂದಾ
ಬೇಸರದ ಸ್ವರದಲ್ಲಿ ಅಂದಳು.
"ಮಹಾ! ಒಂದು ಘಂಟೆ ಹೊತ್ತು ಬಿಟ್ಟಿರೋದಕ್ಕೆ ಆಗೊಲ್ವೇನೋ."
"ಹೂಂ. ಆಗುತ್ತೆ!"
ಹಾಗೆ ಹೇಳುವಾಗಲೆಲ್ಲ ಆಕೆ ಕತ್ತುಕೊಂಕಿಸುತ್ತಿದ್ದ ರೀತಿ ಮೋಹಕವಾಗಿರು
ತ್ತಿತ್ತು. ಜಯದೇವ, ಆ ನೋಟದ ಸವಿಯೂಟವನ್ನು ಕಳೆದುಕೊಳ್ಳಲು ಇಷ್ಟಪಡದೆ,
ಅವಸರವಾಗಿ ನಡೆಯುತ್ತಿದ್ದಾಗಲೂ ಅಕೆಯ ಕಡೆಗೊಮ್ಮೆ ದೃಷ್ಟಿಬೀರಿದ.
ನೂಕುನುಗ್ಗುಲು ಸ್ವಲ್ಪ ಮಟ್ಟಿಗಿತ್ತು. ಕಂಡಕ್ಟರು ಬಾಗಿಲಲ್ಲೆ ನಿ೦ತು
ಒಬ್ಬೊಬ್ಬರನ್ನೆ ಒಳಕ್ಕೆ ಬಿಡುತ್ತಿದ್ದ.
"ಸಾಮಾನು ಮ್ಯಾಕೆ ಆಕ್ತೀನಿ ಬುದ್ಧಿ," ಎಂದ ಆಳು, ಜಯದೇವನನ್ನು
ನೋಡಿ.
"ಹೂನಪ್ಪ."
ಆತ ಮೋಟಾರಿನ ಬಳಿಗೆ ಬಂದೊಡನೆ ಒಳಗಿನಿಂದ ಸ್ವರ ಕೇಳಿಸಿತು:
"ಮೇಸ್ಟ್ರೇ, ನಿಮಗೆ ಎರಡು ಸೀಟು ಇಟ್ಟಿದೀನಿ. ನಿಧಾನವಾಗಿ ಬನ್ನಿ."
ಹಾಗೆ ಹೇಳಿದವನು, ಜಯದೇವನನ್ನು ಆ ಬೆಳಗ್ಗೆ ಮಾತನಾಡಿಸಿದ್ದ ಮನುಷ್ಯ.
'ಮೇಸ್ಟ್ರೇ' ಎಂಬ ಸಂಬೋಧನೆ ಕೇಳಿ ಸುನಂದಾ ಜಯದೇವನತ್ತ ನೋಡಿದಳು.
ಶಾಲಾ ಉಪಾಧ್ಯಾಯನಾದ ಗಂಡ. ಆ ಒಂದು ಕ್ಷಣ, ಜಯದೇವನ ಕಿವಿಗಳೂ


ಕೆಂಪೇರಿದುವೇನೊ ಎನಿಸಿತು ಆಕೆಗೆ. ಆ ಗದ್ದಲದಲ್ಲೂ ಗಂಡನನ್ನು ಕಣ್ಣುತುಂಬ
ನೋಡಿದಳು ಸುನಂದಾ. ಆಕೆಯ ತುಟಿಗಳು ತಮಗೆ ಅರಿವಿಲ್ಲದಂತೆಯೇ ಮಂದ
ಹಾಸ ಸೂಸಿದುವು.
ಅಕ್ಕಪಕ್ಕದಲ್ಲೇ ಇದ್ದುವು ಸೀಟುಗಳು.ಇಬ್ಬಿಬ್ಬರೇ ಕುಳಿತುಕೊಳ್ಳುವ ವ್ಯವಸ್ಥೆ.
"ನಿಮ್ಮಿಂದ ತುಂಬಾ ಉಪಕಾರವಾಯ್ತು," ಎಂದು ಆ ಪರಿಚಿತರಿಗೆ ಜಯದೇವ ಹೇಳು
ತ್ತಿದ್ದಂತೆಯೆ, ಸುನಂದಾ ರಸ್ತೆಯ ಬದಿಗಿದ್ದ ಕಡೆ ತಾನು ಕುಳಿತಳು. ಸಾಮಾನುಗಳೆಲ್ಲ
ಮೇಲಕ್ಕೆ ಹೋದುವೇ ಏನೆಂದು ಇಣಿಕಿ ನೋಡಿ ಜಯದೇವ, ತಾನೂ ಸುನಂದೆಯ
ಬಳಿಯಲ್ಲೆ ಆಸೀನನಾದ.
"ಸೀಟು ಅನುಕೂಲವಾಗಿದೆಯೊ?" ಎಂದ ಆತ, ತನ್ನ ಚಪ್ಪಲಿಯಿಂದ ಆಕೆಯ
ಚಪ್ಪಲಿಯನ್ನು ತುಳಿದು.
ಪಾದ ಕೊಸರಿಕೊಳ್ಳುತ್ತ , ತನಗೆ ನೋವಾಯಿತೆಂದು ಮೈಯಕುಲುಕಾಟದ
ಮೂಲಕ ಸುನಂದಾ ಹುಸಿಮುನಿಸು ತೋರಿದಳು. ಜತೆಯಾಗಿಯೆ ಕುಳಿತುಕೊಳ್ಳು
ವುದು ಸಾಧ್ಯವಾಯಿತಲ್ಲ ಎಂದು ಪರಮ ಸಂತೋಷವಾಗಿತ್ತು ಆಕೆಗೆ.
ಕೆಲಸವಾಯಿತೆಂದು ಕೈತೀಡುತ್ತ ಆಳು ಮೋಟಾರಿನ ಮಗ್ಗುಲಲ್ಲಿ ನಿಂತ.
ಆಗ ಸುನಂದಾ ಅಂದಳು:
"ಪೆಟ್ಟಿಗೆ ಸರಿಯಾಗಿ ಇಟ್ಟಿದಾನೋ ಇಲ್ವೋ. ಅದರೊಳಗೆ ಉಪ್ಪಿನಕಾಯಿ
ಭರಣಿ ಇದೇಂದ್ರೆ...."
ಆಳಿಗೆ ಆ ಮಾತು ಕೇಳಿಸಿತ್ತು:
"ಸರಿಯಾಗಿ ಮಡಗಿವ್ನಿ. ಏನ್ರವ್ವ, ನಂಗೆ ಅಷ್ಟೂ ತಿಳೀದಾ?"
ಜಯದೇವ ಕೊಟ್ಟುದು ನಾಲ್ಕಾಣೆಯ ನಾಣ್ಯ.
"ಒಂದಾಣೆ ವಾಪಸ್ಕೊಡಪ್ಪಾ!"
ఆ ಮಾತಿಗೆ ಆಳು ಬೆಲೆ ಕೊಡದೆಯೇ ಹೇಳಿದ:
"ನಾಕಾಣೀನ ಬುದ್ಧೀ? ಎಲ್ಲಾದ್ರೂ ಉಂಟಾ? ಕೊಡೀ ಇನ್ನೊಂದು ನಾಕಾಣಿ
ನಾರಾ."
ಅದು ಯಾಚನೆಯ ಧಾಟಿಯಾಗಿತ್ತು_ಜಗಳದ ಪೂರ್ವ ಸಿದ್ಧತೆಯಲ್ಲ. ಆದರೂ
ಆ ಮಾತುಕತೆ ಇಷ್ಟವಾಗದೆ ಸುನಂದಾ ಅಂದಳು:
"ಕೊಟ್ಟಿದ್ದನ್ನ ಇಸ್ಕೋತೀನಂತ ಆಗ್ಲೆ ಹೇಳ್ಲಿಲ್ವೇನಪ್ಪಾ?"
"ಬಡವಾ ಕಣ್ರವ್ವ. ನಿಮ್ಹೆಸರೇಳಿ__"
ಜಯದೇವನಿಗೋಸ್ಕರ ಸೀಟು ಕಾದರಿಸಿದ್ದ 'ಪರಿಚಿತ,' ಗದರುವ ಧ್ವనిಯಲ್ಲಿ
ನುಡಿದ:
"ಹೋಗೋ! ನಾಕಾಣೆ ಸಾಲ್ದ ನಿಂಗೆ? ಹುಂ! ಹೋಗು!"
ಆಳು ಉತ್ತರವೀಯಲಿಲ್ಲ. ಅವನ ಕಣ್ಣುಗಳು ಬಿರುನೋಟದಿಂದಲೆ ಆ

ನವೋದಯ

325

ಮನುಷ್ಯನನ್ನು ನುಂಗಬಯಸಿದುವು. ಸಹಪ್ರಯಾಣಿಕರ ಗಮನ ಸೆಳೆಯುವುದಕ್ಕೆ
ಮುಂಚೆಯೆ ಈ ಪ್ರಕರಣ ಮುಕ್ತಾಯವಾಗಲೆಂದು ಮತ್ತೂ ಎರಡಾಣೆ ತೆಗೆದು ಜಯ
ದೇವ ಹೊರಚಾಚಿದ.
ಆ ನಾಣ್ಯ ಕೈಗೆ ಬಿದ್ದೊಡನೆ ಆಳಿಗೆ ಸಂತೋಷವಾಯಿತು.
"ಬತ್ತೀನಿ ಬುದ್ಧೀ", ಎಂದು ನಡುಬಾಗಿಸಿ ನಮಿಸಿ,ಆತ ಪಕ್ಕಕ್ಕೆ ಹೊರಳಿದ.
"ಈ ಕೂಲಿಗಳೇ ಹಾಗೆ. ಎಷ್ಟು ಕೊಟ್ಟರೂ ತೃಪ್ತಿಯಿಲ್ಲ" ಎಂದು ಹಿಂಬದಿ
ಯಲ್ಲಿ ಕುಳಿತವರು ತೀರ್ಪಿತ್ತರು.
ಎಲ್ಲರಿಗೂ ಟಿಕೆಟ್ ಕೊಟ್ಟು ಮುಗಿದ ಬಳಿಕ ಕಂಡಕ್ಟರನೂ ಕಾಫಿಗೆ ಹೋದ.
ಅದನ್ನು ನೋಡಿದ ಯಾರೋ ಗೊಣಗಿದರು:
"ಇವನೂ ಎದ್ನಲ್ಲಪ್ಪ ಕಾಫಿಗೆ. ಎಷ್ಟು ಹೊತ್ತಾಗುತ್ತೋ ಈ ಬಸ್ಸು ಹೊರ
ಡೋದು..."
ಇನ್ನೊಬ್ಬರು ಸಮಾಧಾನಪಡಿಸಿದರು:
ಇಲ್ರೀ, ಸರಕಾರಿ ಬಸ್ಸು. ಟೈಮಿಗೆ ಸರಿಯಾಗಿ ಬಿಟ್ಬಿಡ್ತಾನೆ. ಇನ್ನೂ ಐದು
ನಿಮಿಷ ಇದೆ."
"ಏನು ಸರಕಾರಿ ಬಸ್ಸೋ! ನಿತ್ಯಾನಂದವೇ ಅನುಕೂಲವಾಗಿತ್ತು. ನಾವು ಹೇಳಿದ
ಕಡೆ ನಿಲ್ಲಿಸ್ತಿದ್ದ," ಎಂದು ಕೇಳಿಸಿತು ಮೂರನೆಯ ಸ್ವರ.
"ಅಲ್ವೇ ಪಾಪ! ನೀವು ವರ್ಷಕ್ಕೊಮ್ಮೆ ಪ್ರಯಾಣ ಮಾಡೋರೂಂತ ಕಾಣ್ತದೆ. ದಿನಾ ಹೋಗ್ತಾ ಬರ್ತಾ ಇದ್ವಲ್ಲ, ನಮ್ಮನ್ನು ಕೇಳಿ. ಮೈಮೂಳೆ ಒಂದಾದರೂ ಭದ್ರ
ವಾಗಿ ಉಳಿದಿದ್ರೆ!"
"ಅದೇನೋಪ್ಪ, ನಮ್ಮ ಕಡೆ ಚೆನ್ನಾಗಿರೋ ಖಾಸಗಿ ಬಸ್ಸುಗಳೂ ಇವೆ."
“ಯಾವುದು ನಿಮ್ಮೂರು?"...
ಸುನಂದಾ ಆ ಸಂಭಾಷಣೆಗೆ ಕಿವಿಗೊಡುತ್ತಿರಲಿಲ್ಲ. ತಾನು ಗೃಹಿಣಿಯಾಗಿ
ಬದುಕು ಆರಂಭಿಸುವ ಊರನ್ನು ನೋಡಲು ಆಕೆ ಆತುರಗೊಂಡಿದ್ದಳು. ಹಾಗೆಯೇ
ಹೊಸ ಹಾದಿಯನ್ನು ಮರಹೊಲಗಳನ್ನು ಮನೆ ಗುಡಿಸಲುಗಳನ್ನು ಕಾಣುವ ತವಕ.
ಜಯದೇವ ಮೆಲು ಧ್ವನಿಯಲ್ಲಿ ಕೇಳಿದ:
"ಏನು ಯೋಚ್ನೆ?"
"ಏನೂ ಇಲ್ಲ."
“ಬೇಜಾರಾಗಿದೆಯೇನು?"
"ಇಲ್ವಲ್ಲಾ. ಯಾಕೆ ಬೇಜಾರು?"
"ಸುಳ್ಳು. ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ. ಅಮ್ಮನನ್ನು ಜ್ಞಾಪಿ
ಸಿಕೋತಿದೀಯ ನೀನು!"
ಹೆತ್ತವರನ್ನು ಬಿಟ್ಟುಬರಲು ಹೆಣ್ಣಿಗಾಗುವ ಸಂಕಟ ಹೊಸದಲ್ಲವಲ್ಲ. ಸುನಂದೆ ಯನ್ನೂ ಸ್ವಾಭಾವಿಕವಾಗಿಯೇ ಅದು ಬಾಧಿಸುತ್ತಿರಬೇಕೆಂಬುದು ಜಯದೇವನ
ಊಹೆ.
ಆತನ ಮಾತಿಗೆ ಸಣ್ಣನೆ ನಕ್ಕು, ಸುನಂದಾ ಪಿಸುಗುಟ್ಟಿದಳು:
"ನಿಮಗೊಂದು ಹುಚ್ಚು!"
ಆ ಮಾತನ್ನು ಪುಷ್ಟೀಕರಿಸಲೆಂದು ತೋರು ಬೆರಳಿನಿಂದ ಗಂಡನ ತೊಡೆಯನ್ನು
ಆಕೆ ತಿವಿದಳು.
"ಏನು ಧೈರ್ಯ!" ಎಂದ ಜಯದೇವ, ಒಳಗಿನ ಸಂತೋಷವನ್ನು ತೋರ
ಗೊಡದೆ, ಗಾಂಭೀರ್ಯದ ಮುಖವಾಡ ಧರಿಸಿ.
ಕಾಫಿಗೆಂದು ಇಳಿದಿದ್ದವರು ಬಂದರು. ಹೊಸಬರು ಯಾರೂ ಹತ್ತಿಲ್ಲವೆಂಬು
ನ್ನು ಮನವರಿಕೆ ಮಾಡಿಕೊಂಡು ಕಂಡಕ್ಟರು 'ರೈಟ್'ಕೊಟ್ಟ. ಬರಿಯ 'ರೈಟ್'
ಹಳೆಯಕಾಲದ ಪದ್ಧತಿ. ಹಾಗೆಂದು, ಬಾಯ್ದೆರೆಯಾಗಿ ರೈಟ್ ಹೇಳುವುದರ ಜತೆಗೆ,
ಎರಡು ಸಾರೆ ಗಂಟೆಯನ್ನೂ ಆತ ಬಾರಿಸಿದ.
ಮೋಟಾರು ಓಡಿತು. ಭಾರ ಅದರ ಜೊತೆಗೆ ವೇಗ. ಕೆಂಪು ಧೂಳಿನ ದಟ್ಟ
ನೆಯ ಮೋಡವೆ ವಾಹನದ ಹಿಂದೆ ರೂಪುಗೊಂಡು ಗಗನದೆತ್ತರಕ್ಕೆ ಏರಿತು.
ಬೀದಿಯ ಎತ್ತರ ತಗ್ಗುಗಳ ಮೇಲೆ ಏರಿ ಇಳಿಯುತ್ತ ಬಸ್ಸು ಧಾವಿಸಿತು.
ಅಂತಹ ಕುಲುಕಾಟವಾದಾಗಲೆಲ್ಲ ಸುನಂದೆಯ ಮೈ ವಾಲುತ್ತಿತ್ತು ಜಯದೇವನ
ಕಡೆಗೆ...
...ಮೂರನೆ ತರಗತಿಯ ಟಿಕೆಟೇ ಸಾಕು, ಎಂದಿದ್ದ ಜಯದೇವ. ಆದರೆ
ವೇಣು ತಂದುದು ಇಂಟರಿನ ಟಿಕೆಟುಗಳು.
'ಇವನ್ನ ಯಾಕ್ತಂದೆ?' ಎಂದು ಕೇಳಿದ್ದಕ್ಕೆ ಆತ ಉತ್ತರವಿತ್ತಿದ್ದ:
'ಇನ್ನು ಇಂಟರ್ ಕ್ಲಾಸೇ ಇರೋದಿಲ್ಲ ಕಣೋ. ಸೆಕೆಂಡು ಅಂತ ನಾಮಕರಣ
ಮಾಡ್ತಾರಂತೆ. ಇಂಟರ್ ಟಿಕೆಟು ತಗೊಳ್ಳೋ ಭಾಗ್ಯ ಎಲ್ಲಿರುತ್ತೆ ಆಮೇಲೆ?'
ಜಯದೇವನ ತಂದೆ ಏನನ್ನೂ ಹೇಳದೆ ನಿಂತರು. ಮಗನ ವರ್ತನೆಯನ್ನು
ಸಮರ್ಥಿಸಿದವರು ಸುನಂದೆಯ ತಂದೆಯೇ.
'ರಾತ್ರಿ ಪ್ರವಾಸ. ಕೂತಿರೋದಕ್ಕೂ ಜಾಗ ಇಲ್ದೆ ಒದ್ದಾಡ್ಕೊಂಡು ಹೋಗ್ಬೇಡಿ.
ಇಂಟರ್ನಲ್ಲಿ ಒಂದಿಷ್ಟು ನಿದ್ದೇನಾದರೂ ಮಾಡ್ಬಹುದು.'
ಅವರು ಹೇಳಿದ್ದಂತೆಯೆ 'ಒಂದಿಷ್ಟು ನಿದ್ದೆ' ಸಾಧ್ಯವಾಗಿತ್ತು. ಎದುರುಗಡೆ
ಮೇಲು ಭಾಗದಲ್ಲಿ ಮಲಗಿದ್ದವನೂ ಕೆಳಗೆ ಕುಳಿತಿದ್ದವರಲ್ಲಿ ಒಬ್ಬನೂ ತನ್ನನ್ನೆ ನುಂಗು
ವವರಂತೆ ನೋಡುತ್ತಿದ್ದರೆಂದು ಸುನಂದಾ ಮೊದಮೊದಲು ತುಂಬಾ ಸಂಕೋಚ
ಪಟ್ಟಳು. ಬಳಿಕ ಒರಗುವ ಕಡೆಗೆ ಮುಖಮಾಡಿ , ಕಾಲು ಮುದುಡಿಸಿ, ಚಾದರ
ಹೊದೆದು ಮಲಗಿದಳು. ಆಕೆಯ ತಲೆಯ ಭಾಗದಲ್ಲಿ ಜಯದೇವ ಒರಗಿ ಕುಳಿತೇ_
ಕಾವಲು ಕುಳಿತೇ_ನಿದ್ದೆಹೋದ... ... ಬಸ್ಸು ಆಗೊಮ್ಮೆ ಈಗೊಮ್ಮೆ ನಿಂತಾಗಲೆಲ್ಲ, ಧೂಳು ಒಳಕ್ಕೆ ನುಗ್ಗುತ್ತಿತ್ತು.
ಆಗ 'ಇಸ್ಸಿಯಪ್ಪ' ಎನ್ನುತಿತ್ತು ಸುನಂದೆಯ ಮನಸ್ಸು. ಮೊದಲ ಸಾರೆ ಧೂಳು
ನುಗ್ಗಿದಾಗಲಂತೂ 'ಈ ಬದೀಲಿ ನಾನು ಕೂತ್ಕೋಬಾರದಾಗಿತ್ತು' ಎನಿಸಿತು ಆಕೆಗೆ.
ಎಳೆಯ ಹುಡುಗರ ಹಾಗೆ ಹೊರಗೆ ನೋಡುತ್ತ ಕುಳಿತಿರದಿದ್ದರೆ ಏನು ಕೊಳ್ಳೆ ಹೋಗುತ್ತಿತ್ತೊ_ಎಂದುಕೊಂಡಳು. ಮರುಕ್ಷಣವೆ, ಸ್ವಾಥ್ರಿ ತಾನು: ಅವರು ಕುಳಿ
ತಿದ್ದರೆ ಅವರಿಗೇ ಧೂಳಿನ ಸ್ನಾನ ಆಗುತಿತ್ತು; ತಾನು ಕುಳಿತು ಅದನ್ನುತಪ್ಪಿಸಿದ
ಹಾಗಾಯಿತು, ಈಗ_ಎಂದು ಸಮಾಧಾನಪಟ್ಟುಕೊಂಡಳು.
ಓಡುತ್ತಿದ್ದ ಮೋಟಾರನ್ನು ಬೆನ್ನಟ್ಟಿ ಬರುತ್ತಿದ್ದ ಸೂರ್ಯ. ಹಿಂದಿನಂತೆಯೇ,
ಹೊರಗೆ ಉರಿ ಹೆಚ್ಚಿದಂತೆ ಒಳಗೆ ಅಸಹನೆ ಹೊಗೆಯಾಡಿತು.
ಯಾರೋ ಒಬ್ಬರು ಕಡ್ಡಿಗೀರಿದರು.ಬೀಡಿಸುಟ್ಟ ವಾಸನೆ ಹೊರಟಿತು.
"ಯಾರ್ರೀ ಅದು? ಆರಿಸ್ರಿ ಬೀಡೀನಾ!"
ಕಂಡಕ್ಟರನ ಧ್ವನಿಯಲ್ಲಿ ದರ್ಪವಿತ್ತು, ಬೇಸರ ನೀಗಲು ಒಂದು ಅವಕಾಶ
ದೊರೆಯಿತು ಜನರಿಗೆ. ಕಂಡಕ್ಟರನ ದೃಷ್ಟಿಯನ್ನೆ ಹಿಂಬಾಲಿಸಿ
ಅವರು, ಹೊಗೆ ಹೊರ
ಟಿದ್ದ ಮೂಲೆಯನ್ನು ಕಂಡರು.
"ಸರ್ಕಾರಿ ಬಸ್ಸಪ್ಪೋ!" ಎಂದ ಇನ್ನೊಬ್ಬ ಯಾವನೋ.
ಕಂಡಕ್ಟರು ಮತ್ತೊಮ್ಮೆ ಗದರಿ ನುಡಿಯುವ ಅಗತ್ಯವೇ ಇಲ್ಲದಂತೆ, ಉರಿಯು
ತ್ತಿದ್ದ ಬೀಡಿಯೊಂದು ಹೊರಬಿದ್ದು ಕಿಡಿ ಹಾರಿಸುತ್ತ ಧೂಳಿನ ಮೋಡದ ಎಡೆಯಲ್ಲಿ
ಮರೆಯಾಯಿತು.
ಬಿಸಿಲು ಬಲವಾಗಿ ಮೈಗಳು ಬೆವರೊಡೆದುವು.
"ಸೆಖೆ!" ಎಂದಳು ಸುನಂದಾ.
ಜಯದೇವನೆಂದ:
"ಬದೀಲಿ ಬಿಸಿಲು ಜಾಸ್ತಿ.ಧೂಳು ಬೇರೆ.ಈಚಗೆ ಕೂತ್ಕೋತೀಯಾ?"
"ಬೇಡಿ!"
ವಯಸ್ಸಾದ ಹೆಂಗಸರಿಬ್ಬರು ಮುಂದೆ ಕುಳಿತಿದ್ದರು. ಎಳೆಯರಿರಲಿಲ್ಲ. ಅಳುವ
ಮಕ್ಕಳಿರಲಿಲ್ಲ. ಅವರ ಕಡೆಯ ಗಂಡಸೊಬ್ಬರು, ಉಣ್ಣೆಯ ಪೋಷಾಕು ಧರಿಸಿ ತಲೆಗೆ
ಜರೀಪೇಟ ಸುತ್ತಿದ್ದ ವ್ಯಕ್ತಿ. ಬೇಗೆ ತಡೆಯಲಾಗದೆ ಅವರು ಕತ್ತೆತ್ತಿ ತಲೆಯನ್ನು
ಅತ್ತಿತ್ತ ಆಡಿಸಿದರು. ಬಳಿಕ ಪಕ್ಕದಲ್ಲಿದ್ದವರನ್ನು ನೋಡಿ ನಸುನಕ್ಕು ಅವರೆಂದರು: "ಈ ಬಸ್ಸುಗಳಿಗೆಲ್ಲ ಫ್ಯಾನು ಹಾಕಿಸ್ಬೇಕಪ್ಪಾ!יי
"ಹೊ ಹ್ಹೋ!"ಎಂಬ ನಗೆಯಷ್ಟೇ ಅವರಿಗೆ ದೊರೆತ ಉತ್ತರ.
ತೂಕಡಿಸಿದಂತಾಗಿ ಸುನಂದಾ ಜಯದೇವನ ಭುಜಕ್ಕೆ ಒರಗಿದಳು.ಆತನ
ಕಣ್ಣುಗಳಿಗೂ ನಿದ್ದೆ ಒತ್ತರಿಸಿಬರುತ್ತಿತ್ತು.

ತಲೆ ಭಾರವಾಗಿ ಮುಂದಕ್ಕೆ ಬಾಗಿದಾಗ ಒಮ್ಮೆಲೆ ಎಚ್ಚರಗೊಂಡ ಜಯದೇವ.

328

ಸೇತುವೆ

ನಾಚಿಕೆಗೇಡು, ಯಾರಾದರೂ ನೋಡಿದರೋ ಏನೋ, ಎಂದು ಆತ ಅತ್ತಿತ್ತ ದೃಷ್ಟಿ
ಹೊರಳಿಸಿದ. ಅಂತಹ ವಿಶೇಷ ಆಸಕ್ತಿಯೇನೂ ಯಾರಿಗೂ ಅಲ್ಲಿ ಇರಲಿಲ್ಲ.
ಮಂಪರಿನ ಪರದೆ ಸರಿದು ಎಚ್ಚತ್ತು ಕುಳಿತ ಸುನಂದಾ ಕೇಳಿದಳು:
"ನೋಡೋಕೆ ಎಷ್ಟೊಂದು ಬೋಳುಬೋಳಾಗಿದೆ,ಅಲ್ವಾ?"
ಹಿಂದಕ್ಕೆ ಧಾವಿಸುತ್ತಿದ್ದ ಒಂಟಿಮರಗಳನ್ನು ನೆಲಹೊಲಗಳನ್ನೂ ನೋಡಿ ಜಯ
ದೇವ ಉತ್ತರವಿತ್ತ:
"ಹೂಂ. ಮಳೆ ಬರೋವರೆಗೂ ಹೀಗೆಯೇ. ಆ ಮೇಲೆ ಎಲ್ಲಾ ಹಸುರಾಗುತ್ತೆ.
ಆಗ ಚೆನ್ನಾಗಿರುತ್ತೆ, ನೋಡೋಕೆ."
....ನಿತ್ಯಾನಂದ ಸರ್ವಿಸಿನಲ್ಲಾಗಿದ್ದರೆ ಒಂದು ಗಂಟೆಯ ಪ್ರವಾಸ. ಸರ್ಕಾರಿ
ಬಸ್ಸು ಹತ್ತು ನಿಮಿಷ ಮುಂಚಿತವಾಗಿಯೆ ಊರು ಸೇರಿತು.
ಜಯದೇವನ ಹಿಂದೆಯೆ ಕುಳಿತಿದ್ದ ಮನುಷ್ಯ ಕೇಳಿದ:
"ಎಲ್ಲಿ ವಸತಿ ಮಾಡ್ತೀರಿ ಮೇಸ್ಟ್ರೆ?"
ಮುಖ್ಯೋಪಾಧ್ಯಾಯರಿಗೇನೋ ತಾನು ಬರುವ ವಿಷಯ ತಿಳಿಸಿ ಜಯದೇವ
ಕಾಗದ ಬರೆದಿದ್ದ. ಮನೆ ಸಿಗುವವರೆಗಿನ ತಾತ್ಕಾಲಿಕ ವ್ಯವಸ್ಥೆಯನ್ನು ಅವರು ಮಾಡಿ
ದ್ದರೂ ಮಾಡಿರಬಹುದು.
"ಎಲ್ಲೀಂತ ತೀರ್ಮಾನಿಸಿಲ್ಲ ಇವರೆ. ಸ್ಟ್ಯಾಂಡಿಗೆ ಯಾರಾದರೂ ಬಂದಿದಾ
ರೇನೊ ನೋಡ್ಬೇಕು."
ಬಸ್ಸು ನಿಂತು ಕೆಲವರಿಳಿದರು. ಸಾಮಾನುಗಳನ್ನು ಮೆಲ್ಲಗೆ ಇಳಿಸುವಂತೆ ಒಬ್ಬ
ಆಳಿಗೆ ಜಯದೇವ ನಿರ್ದೇಶವಿತ್ತ.
ಶಾಲೆಯ ಹುಡುಗರೇನಾದರೂ ಕಾಣಿಸುವರೇ ಎಂದು ಆತ ಅತ್ತಿತ್ತ ನೋಡಿದ.
ಒಬ್ಬನೇ ಆಗಿದ್ದರೆ ಯಾವ ಯೋಚನೆಯೂ ಇರಲಿಲ್ಲ. ಈಗ, ಸುನಂದೆಯೂ ಜತೆ
ಯಲ್ಲೆ ಇದ್ದಾಗ__
ಯಾರೂ ಬಂದಿರಲಿಲ್ಲ.
ಆದರೆ 'ಅಪರಿಚಿತನಾದ ಆ ಪರಿಚಿತ' ಆಹ್ವಾನವಿತ್ತ:
“ಮನೆ ಸಿಗೋವರೆಗೆ ಬೇಕಾದರೆ ನಮ್ಮಲ್ಲೇ ಇರಬಹುದು.ಬಡವರ ಮನೆ.
ನಿಮಗೆ ಅನನುಕೂಲವಾಗದೇ ಇದ್ದರೆ__"
ಮನೆ ಸಿಗುವವರೆಗೆ ಅಲ್ಲವಾದರೂ ಆ ದಿನದ ಮಟ್ಟಿಗೆ ಅವರ ಮನೆಗೆ ಹೊರಟು
ಬಿಡುವುದೇ ಸರಿ__ಎನಿಸಿತು ಜಯದೇವನಿಗೆ.
ಅಷ್ಟರಲ್ಲೆ ಸ್ವರ ಕೇಳಿಸಿತು:
"ನಮಸ್ಕಾರ ಸಾರ್."
ಎತ್ತರವಾಗಿ ಬೆಳೆದಿದ್ದ ಸ್ಫುರದ್ರೂಪಿ ಯುವಕ. ನಾಟಕದ ನಟರಂತೆ ಕತ್ತಿನ
ವರೆಗೂ ಇಳಿಬಿಟ್ಟಿದ್ದ ತಲೆಗೂದಲು.


ನವೋದಯ

329

ಯಾರೆ೦ಬುದು ತಿಳಿಯದೆ ಹೋದರೂ ಜಯದೇವ ವ೦ದನೆ ಸ್ವೀಕರಿಸಿದ.
ಆ ಯುವಕನೆಂದ:
"ನಂಜುಂಡಯ್ನೋರು ಆಗಲೆ ಬಂದಿದ್ರು ಸಾರ್. ನೀವು ಬಂದ ತಕ್ಷಣ ಮನೆ
ಕಡೆಗೆ ಕಳಿಸ್ಕೊಡ್ಬೇಕೂಂತ ಹೇಳಿದ್ರು. ಸಂಸಾರ ಸಮೇತ ನೀವಲ್ಲಿಗೇ ಹೋಗ್ಬೇಕಂತೆ
ಸಾರ್."
ಸಂಸಾರ ಸಮೇತ ಎಂದಾಗ ಅವನ ಕಣ್ಣುಗಳು ಮಿನುಗಿದುವು; ಸುನಂದೆಯನ್ನು
ಆದರದಿಂದ ಕoಡುವು.
ಜಯದೇವನನ್ನು ಮನೆಗೆ ಕರೆದ ಆ ಇನ್ನೊಬ್ಬನೆಂದ:
"ಹಾಗಾದರೆ ನಾನು ಬರ್ತೀನಿ ಮೇಸ್ಟ್ರೇ, ನಮಸ್ಕಾರ."
"ನಮಸ್ಕಾರ. ನಾವು ನಂಜುಂಡಯ್ಯನವರಲ್ಲಿಗೆ ಹೋಗ್ತೀವಿ."
ಯುವಕ ಮತ್ತೂ ಹೇಳಿದ:
"ಜಟಕ ಬರೋವರೆಗೂ ಕಾಯ್ತೀರಾ ಸಾರ್?"
"ಈಗ ಜಟಕಾ ಇದೆಯೇನಯ್ಯ ಈ ಊರಲ್ಲಿ?"
"ಹೂ೦ ಸಾರ್, ಒಂದು ವರ್ಷವಾಯ್ತು. ಹುಸ್ನೆ ಸಾಬಿ ಜಟಕಾ ಕಟ್ಟಿದ್ದಾನೆ."
ಆ ಊರಲ್ಲಿ ಜಟಕಾ ಓಡಾಡುವುದು ಅಪೂರ್ವ ದೃಶ್ಯವೇ. ಆದರೆ, ಅದನ್ನು
ನೋಡಲೆಂದು ಕಾದಿರುವುದು ಸಾಧ್ಯವಿರಲಿಲ್ಲ.
"ಜಟಕಾ ಬರೋದು ಎಷ್ಟು ಹೊತ್ತಾಗುತ್ತೋ ಏನೋ?"
"ಅದೇನೋ ನಿಜ ಸಾರ್. ಒಂದೊಂದ್ಸಲ ಈ ಬಸ್ ಬರೋ ಹೊತ್ತಿಗೆ
ಇರುತ್ತಾನೆ. ಒಂದೊಂದ್ಸಲ ಪತ್ತೇನೆ ಇರೋದಿಲ್ಲ."
ಜಯದೇವ ಸುನಂದೆಯತ್ತ ನೋಡಿದ. "ಏನು ಮಾಡೋಣ್ವೆ?" ಎ೦ದು
ಕೇಳಲಿಲ್ಲ. ಕೆಲಸವಿಲ್ಲದೆ ಅಲೆಯುತ್ತಿದ್ದ ಹುಡುಗರು ಬೇರೆ ಮೂವರು ನಾಲ್ವರು
ಅವರನ್ನು ಸುತ್ತುಗಟ್ಟಿ, ಮಿಕಿಮಿಕಿ ಮುಖ ನೋಡುತ್ತ ನಿಂತರು. ಆವರೆಗೂ ಅಲ್ಲಿ
ನಿಂತಿದ್ದ ಬಸ್ಸು ಹೊರಟಿತು. ಹೋಟೆಲಿನಿಂದ ಹೊರ ಬರುತ್ತಿದ್ದವರೆಲ್ಲ ಸಾಮಾನು
ಗಳೊಡನೆ ನಿಂತಿದ್ದ ಜೋಡಿಯನ್ನು ಕುತೂಹಲದಿಂದ ನೋಡಿದರು.
ಸಾಮಾನು ಸರಂಜಾಮಗಳೊಡನೆ ನೇರವಾಗಿ ನಂಜುಂಡಯ್ಯನವರ ಮನೆಗೆ
ಹೋಗುವುದು ಜಯದೇವನಿಗೆ ಇಷ್ಟವಿರಲಿಲ್ಲ.
ಆತ ಕೇಳಿದ:
"ಈ ಬೆಡ್ಡಿಂಗ್ ಮತ್ತು ಗೋಣಿಚೀಲ ಸ್ವಲ್ಪ ಹೊತ್ತು ಇಲ್ಲೆ ಇಡಬಹುದಾ?"
"ಅದಕ್ಕೇನ್ಸಾರ್? ನನ್ನ ಅಂಗಡಿ ಪಕ್ಕದಲ್ಲೇ ಇಟ್ಕೋತೀನಿ. ನೆರಳಿದೆ."
ಡಬ್ಬದ ತಗಡಿನ ಛಾವಣಿ ಇದ್ದ ಬೀಡಾ ಬೀಡಿ ಅಂಗಡಿ ಇತ್ತು ಅಲ್ಲೇ.
ಆದರೆ ಸಾಮಾನುಗಳನ್ನು ಕೆಳಕ್ಕಿಳಿಸಿದ ಆಳು ಹೇಳಿದ:
42


330

ಸೇತುವೆ

"ಇಡೋದು ಯಾಕ್ಬುದ್ಧೀ? ನಡೀರಿ. ಎಲ್ಲಾ ಒತ್ಕೊಂಡು ಬತ್ತೀನಿ."
ಆತನ ಕಣ್ಣಿದ್ದುದು ಸಂಪಾದನೆಯ ಮೇಲೆ.
"ಟ್ರಂಕೊಂದನ್ನ ಹೊತ್ಕೊಂಡು ಬಾಪ್ಪ ನೀನು.”
"ಅಂಗೇ ಆಗ್ಲಿ."
ಉಳಿದ ಸಾಮಾನುಗಳೆರಡು ಅಂಗಡಿಯ ಪಕ್ಕಕ್ಕೆ ಸರಿದುವು. ಧೂಳಾಗದಂತೆ
ಆಳು ಬೆಡ್ಡಿಂಗನ್ನು ಗೋಣಿಯ ಮೇಲಿರಿಸಿದ.
ಜಯದೇವ ಹೊರಡುತಿದ್ದಂತೆ ಆ ಯುವಕ ಕೇಳಿದ:
"ನನ್ನ ಗುರುತು ಸಿಗ್ಲಿಲ್ವೆ ಸಾರ್?"
"ಇಲ್ವಲ್ಲಾ..."
"ನೀವು ಮೊದಲ್ನೇ ಸಲ ಬಂದಾಗ ಆ ಹೋಟ್ಲಲ್ಲಿ ಸಪ್ಲಯರ್ ಆಗಿದ್ದೆ."
(ಜಯದೇವ ನೆನಪಿನ ಭಂಡಾರದೊಳಕ್ಕೆ ಇಣಿಕಿದ.
'ನೀನು ಸ್ಕೂಲಿಗೆ ಹೋಗ್ತೀಯಾ?'
'ಇಲ್ಲಾ ಸಾರ್...')
"ಹೌದಲ್ಲ! ಎಷ್ಟೊಂದು ಬೆಳೆದುಬಿಟ್ಟಿದೀರಪ್ಪಾ!"
(ಬಹುವಚನ ಈ ಸಾರೆ.)
ಆ ಯುವಕನ ಮುಖವರ್ಣ ನಸುಗೆಂಪಿಗೆ ತಿರುಗಿತು.
"ಈಗ ಸ್ವಂತದ ಅಂಗಡಿ ಇಟ್ಟಿದೀನಿ."
"ಸಂತೋಷ."
"ಆಗಾಗ್ಗೆ ಬರ್ತಾ ಇರಿ ಸಾರ್.""ಹೂನಪ್ಪಾ."
ಜಯದೇವನನ್ನು ಸುನಂದಾ ಹಿಂಬಾಲಿಸಿದಳು. ಆಕೆಯ ದೃಷ್ಟಿ ಮಾತ್ರ ಸುತ್ತು
ಮುತ್ತೆಲ್ಲ ಸಂಚರಿಸಿತು.
ಜಯದೇವ ಕೇಳಿದ:
"ಹ್ಯಾಗಿದೆ ಊರು?"
"ಚೆನ್ನಾಗಿದೆ."



ಶಿಕ್ಷಕ ವೃತ್ತಿಯನ್ನು ಅವಲಂಬಿಸಿ ಒಂದು ವರ್ಷದ ಅನುಭವದೊಡನೆ
ಬೆಂಗಳೂರಿಗೆ ಹಿಂತಿರುಗಿದಾಗ ಜಯದೇವ, ನೇರವಾಗಿ ಸುನಂದೆಯ ಮನೆಗೆ ಹೋಗಿದ್ದ.


ನವೋದಯ

331

ಆಗ ಬಾಗಿಲಲ್ಲೆ ಇದ್ದ ಸುನಂದಾ "ಮೇಸ್ಟ್ರು ಬಂದ್ರು!" ಎಂದು ಕೈ ತಟ್ಟಿ ನಕ್ಕು,
ಒಳಕ್ಕೆ ನುಸುಳಿದಳು. ಪುನಃ ಹೊರಬರುವುದು ಬಹಳ ತಡವಾಯಿತು.
"ಬಾ ಜಯಣ್ಣ. ಚೆನ್ನಾಗಿದೀಯೇನಪ್ಪ?"ಎಂದು ಸುಖದುಃಖ ವಿಚಾರಿಸಿ
ದವರು ಸುನಂದೆಯ ತಾಯಿ. ಕಣ್ಣೆದುರಲ್ಲೆ ಇದ್ದ ಹುಡುಗ, ಪ್ರಪಂಚ ಪರ್ಯಟನ
ಮಾಡಿ ಮರಳಿದ ಹಾಗಿತ್ತು, ಅವರ ದೃಷ್ಟಿಯಲ್ಲಿ.
"ಚೆನ್ನಾಗಿದೀನಮ್ಮ."
ಇಷ್ಟರ ಮಟ್ಟಿಗಿದೀನಮ್ಮ-ಎನ್ನುವ ಉತ್ತರ ಜಯದೇವನಿಗೆ ಇಷ್ಟವಿರಲಿಲ್ಲ.
ಆದರೆ 'ಅಮ್ಮ' ಎಂದಾಗ ಮಾತ್ರ ನಾಲಗೆ ಸ್ವಲ್ಪ ತಡವರಿಸಿತು. 'ಅಮ್ಮ' ಎಂಬ
ಸಂಬೋಧನೆಯೇ ರೂಢಿಯಾಗಿದ್ದರೂ 'ಅತ್ತೆ' ಎನ್ನುವ ಬಯಕೆಯಾಗಿತ್ತು ಆತನಿಗೆ.
ತಾಯಿ, ಮಗಳು ಕಾಣಿಸದೆ ಇದ್ದುದನ್ನು ಗಮನಿಸಿದರು.
"ಸುನಂದಾ, ಎಲ್ಲಿದೀಯೇ? ಎಲ್ಲಿಲ್ಲದ ನಾಚಿಕೆ ಅದೇನು ಬಂತೊ ಈಗ?"
ಆ ಮಾತು ಜಯದೇವನಿಗೆ ಪ್ರಿಯವೆನಿಸಿತು. ಸುನಂದಾ ಹಿಂದೆಂದೂ ತನ್ನೆದು
ರಿಗೆ ನಾಚಿದವಳಲ್ಲ. ಈಗಿನ ನಾಚಿಕೆಗೆ ಕಾರಣ?
ತಾಯಿ ಮತ್ತೊಮ್ಮೆ ಮಗಳನ್ನು ಕರೆದರು:
“ಏ ಸುನಂದಾ!”
ಒಳಗಿನಿಂದ ಸ್ವರ ಕೇಳಿಸಿತು:
"ಕಾಫಿಗೆ ನೀರಿಡ್ತಿದೀನಿ ಅಮ್ಮ."
ಇಂಪಾಗಿತ್ತು ಆ ಸ್ವರ.
ಸುನಂದೆಯ ತಾಯಿ ಜಯದೇವನನ್ನು ಕುರಿತು ಹೇಳಿದಳು:
“ಯಾವಾಗ ಬರ್ತೀನಿ ಅಂತ ಸ್ಪಷ್ಟವಾಗಿ ಬರೀಬಾರದಾಗಿತ್ತಾ?"
[ತಿಳಿಸದೆ ಬಂದ ಅಳಿಯನ ವಿಷಯವಾಗಿ ಆಕ್ಷೇಪವೇನೋ!]
"ಕಾಗದ ಬರೆಯೋಕೆ ಪುರಸೊತ್ತೇ ಇರ್ಲ್ಲಿಲ್ಲ ಅಮ್ಮ. ಹೊರಡೋಕ್ಮುಂಚೆ
ಅಷ್ಟೊಂದು ಕೆಲಸ ಇತ್ತು."
“ಅದೇನು ಕೆಲಸವೊ! ತುಂಬಾ ಇಳಿದ್ಹೋಗಿದೀಯಪ್ಪ. ಕೆಟ್ಟ ಹೋಟ್ಲೂಟ
ದಿಂದ್ಲೇ ಹೀಗಾಗಿರಬೇಕು."
ಹೆತ್ತ ತಾಯಿಯ ಬದಲು ಬೇರೊಂದು ಹೆಂಗಸು ಹೇಳಿದ್ದ ಮಾತು. ಆದರೂ
ಪರಿಣಾಮ ಅಂತಹದೇ. ಮಧುರ ಯಾತನೆಯ ನೆನಪುಗಳು ಆತನನ್ನುಕಾಡಿದುವು.
ಗಂಟಲು ಒತ್ತರಿಸಿ ಬಂತು. ಮಾತಿಗಿಂತ ಮೌನವೇ ಲೇಸೆನಿಸಿತು.
ಜಯದೇವ ಸುಮ್ಮನಿದ್ದುದನ್ನು ಕಂಡು ಆಕೆಯೇ ಅಂದರು:
"ಹಾಸಿಗೆ ಟ್ರಂಕು ಕೊಠಡೀಲಿ ಇಡು. ಕೈಕಾಲು ಮುಖ ತೊಳ್ಕೊ. ಆಮೇಲೆ
ಸ್ನಾನ ಮಾಡುವಿಯಂತೆ."
"ಹೂಂ."
"ಇನ್ನೇನು, ವೇಣು ಬರೋ ಹೊತ್ತು. ಆಗ್ಲೇ ಆರೂವರೆಯಾಯ್ತೂಂತ
ಕಾಣುತ್ತೆ. ಎಷ್ಟು ಬೇಗ್ನೆ ಕತ್ತಲಾಗುತ್ತೇಂತ ಈಗ."
ತಾಯಿ ಒಳ ಹೋದ ಬಳಿಕ ಮಗಳು ಬಂದಳು. ಕಣ್ಣುತುಂಬ ಪರಸ್ಪರರನ್ನು
ನೋಡುವುದರಲ್ಲಿ ಎರಡು ನಿಮಿಷ ಕಳೆಯಿತು.
ಜಯದೇವ ಕೇಳಿದ:
"ವೇಣುಗಿನ್ನೂ ಪರೀಕ್ಷೆ ಮುಗಿದಿಲ್ವ?"
"ಶನಿವಾರಕ್ಕೆ ಮುಗಿಯುತ್ತೆ. ಪ್ರ್ಯಾಕ್ಟಿಕಲ್ಲು ನಡೀತಾ ಇದೆ ಈಗ."
ಸುಮ್ಮನಿದ್ದು, ಸುನಂದೆಯನ್ನು ದಿಟ್ಟಿಸಿ ನೋಡಿ, ಬಳಿಕ ಗೋಡೆಯತ್ತ ತಿರುಗಿ
ಆತನೆಂದ:
"ನೀನು ಕಾಲೇಜಿಗೆ ಹೋಗ್ಲೇ ಇಲ್ಲ."
ಸುನಂದಾ ಉತ್ತರ ಕೊಡಲಿಲ್ಲ. ನೆಲ ನೋಡಿದಳು.
ಒಳಗಿನಿಂದ ತಾಯಿಯ ಧ್ವನಿ ಕೇಳಿಸಿತು.
"ಸುನಂದಾ, ಒಂದಿಷ್ಟು ಉಪ್ಪಿಟ್ಟು ಮಾಡ್ತಿಯೇನೆ?"
"ಹೂನಮ್ಮ," ಎನ್ನುತ್ತ ಸುನಂದಾ ಮರೆಯಾದಳು.
ಎಷ್ಟೊಂದು ದೊಡ್ಡವಳಾಗಿದ್ದಳು! ಅಂಗಾಂಗಗಳು ತುಂಬಿಕೊಂಡಿದ್ದುವು. ತನ್ನ
ಮಾಟವಾದ ಇರವನ್ನು ಸಾರುತ್ತಿತ್ತು ಎದೆ. ಆತನ ದೃಷ್ಟಿಯನ್ನು ಇದಿರಿಸುತ್ತ ಸೆರಗು
ಸರಿಪಡಿಸಿದ್ದಳು ಸುನಂದಾ.
...ಒಬ್ಬಳೇ ಇದ್ದಾಗ ಸುನಂದಾ ತೋರಿದ ಸಂಕೋಚ, ಆಕೆಯ ಅಣ್ಣ ವೇಣು
ಗೋಪಾಲ ಮನೆಗೆ ಬಂದಾಗ ಸ್ವಲ್ಪ ಕಡಮೆಯಾಯಿತು.
“ಇದೇನೇ ಇದು? ಪರಿಚಯವೇ ಇಲ್ದೋಳ ಹಾಗೆ ಮಾಡ್ತಿಯಲ್ಲೇ!" ಎಂದು
ವೇಣು ಪರಿಹಾಸ್ಯ ಮಾಡಿದ.
ಸಂಕೋಚ ಕಡಮೆಯಾದರೂ ಹಿಂದಿನ ಸಲಿಗೆ ಮತ್ತೆ ಮುಖ ತೋರಿಸಲಿಲ್ಲ.
ಒಬ್ಬರನ್ನೊಬ್ಬರು ನೋಡುತ್ತಿರಲು, ಸಮೀಪದಲ್ಲೆ ಇರಲು, ಮಾತನಾಡಲು
ಇಬ್ಬರಿಗೂ ಆಸೆಯಾಗುತ್ತಿತ್ತು. ಆದರೆ ಇಬ್ಬರಿಗೂ ಅರಿವಿಲ್ಲದಂತೆಯೆ ಮಾತಿನಲ್ಲಿ
ನೋಟದಲ್ಲಿ ಗೋಪ್ಯ ಸುಳಿಯುತ್ತಿತ್ತು.
ವೇಣು ಬಲು ಆಸಕ್ತಿಯಿಂದ ಸ್ನೇಹಿತನ ಮಾತುಗಳಿಗೆ ಕಿವಿಗೊಟ್ಟ. ಕತ್ತಲಾಗಿ
ದೀಪಹತ್ತಿಕೊಂಡು ಹೊತ್ತು ಬಹಳವಾದರೂ ಜಯದೇವನ ಕಥನ ಮುಗಿಯಲಿಲ್ಲ.
ಗೆಳೆಯ ಓದು ಮುಂದುವರಿಸಲು ನಿರ್ಧರಿಸಿದನೆಂದು ವೇಣುವಿಗೆ ಸಂತೋಷವಾಗಿತ್ತು.
ಆದರೆ ಓದು ಮುಗಿಸಿದ ಬಳಿಕ ಅದೇ ಹಳ್ಳಿಗೆ ಉಪಾಧ್ಯಾಯನಾಗಿ ಮತ್ತೆ ಹೋಗಲು
ಜಯದೇವ ಮಾಡಿದ್ದ ನಿರ್ಧಾರ ಮಾತ್ರ ತಮಾಷೆಯಾಗಿ ಕಂಡಿತು.
"ಅಂತೂ ಹುಡುಗೀರಿಗೂ ಪಾಠ ಹೇಳ್ತಾ ಇದ್ದೆ ಅನ್ನು," ಎಂದ ವೇಣು,
ಕೀಟಲೆ ಮಾಡುವ ಧ್ವನಿಯಲ್ಲಿ, ತಂಗಿಯ ಕಡೆಗೊಮ್ಮೆ ನೋಡಿ.
"ಎಂಥೆಂಥ ಹುಡುಗೀರು ಇದ್ದರೂಂತ! ಆವತ್ತೆ ಬರೆದಿರ್ಲಿಲ್ವೆ ನಾನು?"
"ಬರೆದಿದೆ ಕಣಯ್ಯ. ಇಲ್ಲಾ ಅಂದ್ನೆ? ಪುನಃ ಅಲ್ಲಿಗೇ ಹೋಗ್ಬೇಕೂಂತ ಹಟ
ತೊಟ್ಟಿದೀಯಲ್ಲ,ಅದಕ್ಕಂದೆ!"
ಆ ನಗೆಮಾತುಗಳನ್ನು ಕೇಳಿ ಸಹಿಸುವ ಧೈರ್ಯವಿದ್ದರೂ ಆ ನಿಮಿಷದಲ್ಲಿ
ಸುನಂದಾ ಸೋತು ಹೋದಳು. ಬದಲಾಗುತ್ತಿದ್ದ ಮುಖದ ಛಾಯೆಯನ್ನು ಮರೆ
ಮಾಚಲಾರದೆ ತಟ್ಟನೆದ್ದು ಆಕೆ ಒಳನಡೆದಳು.
ಅದನ್ನು ದಿಟ್ಟಿಸಿ, ನಕ್ಕು, ವೇಣು ನುಡಿದ:
"ನೋಡಿದೆಯೇನೋ. ಮತ್ಸರ ಅನ್ನೋದು ಸ್ತ್ರೀ ಜಾತಿಗೆ ರಕ್ತಗತವಾಗಿರುತ್ತೆ!"
ಜಯದೇವನ ಮುಖ ಕೆಂಪಗಾಯಿತು. ಆದರೆ ಆ ಭಾವವಿಕಾರವನ್ನು ಸ್ನೇಹಿತ
ಕಂಡುಹಿಡಿಯಬಾರದೆಂದು ಆತ ಗಟ್ಟಿಯಾಗಿ ನಕ್ಕ.
ವೇಣುವಿನ ತಂದೆ ಶ್ರೀಪತಿರಾಯರು ಕ್ಲಬ್ಬಿನಿಂದ ಎಂದಿನಂತೆ ತಡವಾಗಿ
ಬಂದರು. ಜಯದೇವನನ್ನು ಕಂಡು ಅವರಿಗೆ ಸಂತೋಷವಾಯಿತು. ಆಠಾರಾ
ಕಚೇರಿಯಲ್ಲಿ ಹಿರಿಯ ಗುಮಾಸ್ತೆಯಾಗಿ, ರಾಜ್ಯ ಯಂತ್ರದ ಸಹಸ್ರ ಕೀಲಿಗಳಲ್ಲಿ
ಒಂದಾಗಿ, ನಿವೃತ್ತರಾದವರು ಅವರು. ದೊರೆಯುತ್ತಿದ್ದ ವಿರಾಮ ವೇತನ ಅತ್ಯಲ್ಪ.
ಆದರೆ ಪಿತ್ರಾರ್ಜಿತವಾಗಿ ಬಂದಿದ್ದ, ತಕ್ಕ ಮಟ್ಟಿಗೆ ಪ್ರಶಸ್ತವಾಗಿದ್ದ, ಮನೆ ಇತ್ತು.
ಬಾಡಿಗೆ ಕೊಡಬೇಕಾದುದಿರಲಿಲ್ಲ. ಹಳ್ಳಿಯಲ್ಲಿ ಹೊಲವಿತ್ತು-ಎಂಟು ಎಕರೆ. ರೈತ
ಮನಸ್ಸು ಮಾಡಿದ ವರ್ಷ, ಪ್ರಕೃತಿಯೂ ಮುನಿಯದೆ ಇದ್ದರೆ, ಒಂದಿಷ್ಟು ಅಕ್ಕಿ ಬರು
ತ್ತಿತ್ತು. ಆ ತೊಂದರೆಗಳೇನಿದ್ದರೂ ಔದಾರ್ಯದ ವಿಷಯದಲ್ಲಿ ಮಾತ್ರ ಅವರು
ಬಡವರಾಗಿರಲಿಲ್ಲ. ಸದ್ಗುಣಿಯಾದ ಜಯದೇವ ಅವರ ಮನಸ್ಸನ್ನು ಸೆಳೆದುದು
ಸ್ವಾಭಾವಿಕವಾಗಿತ್ತು.
ಅವರು ಕೇಳಿದರು:
"ಹಳ್ಳಿ ಬೇಸರ ಬಂತೇನಪ್ಪಾ?"
"ಏನೇನೂ ಇಲ್ಲ, ಸಾರ್."
ಜಯದೇವನ ವಿಚಾರಗಳನ್ನು ತಿಳಿದಾಗಲಂತೂ ಅವರ ಕಣ್ಣುಗಳಲ್ಲಿ ನಗೆ
ಮಿಂಚಿತು.
"ಒಳ್ಳೆದಪ್ಪಾ. ಸಾಹಸಿಗಳನ್ನು ಕಂಡರೆ ನನಗೆ ಯಾವಾಗಲೂ ಇಷ್ಟ.
ನೋಡೋ ವೇಣು. ಕಲಿತ್ಕೋ. ಇನ್ನೊಂದು ವರ್ಷವಾದ್ಮೇಲೆ ನೀನೂ ಉದ್ಯೋಗ
ಹುಡುಕಿಕೊಂಡು ಆಖಾಡಕ್ಕಿಳೀತೀಯ."
"ಏನೇ ಆದರೂ ಮೇಸ್ಟ್ರ ಕೆಲಸವೊಂದು ಬೇಡವಪ್ಪಾ ನಂಗೆ!" ಎಂದು
ವೇಣು ನಕ್ಕ.
"ನಮ್ಮ ಹಣೇಲಿ ಬರೆದಿದ್ದು ಬಿ. ಎಸ್. ಸಿ. ಕೋರ್ಸೇ. ಏನು ಮಾಡೋಣ
ಹೇಳು?" ಎಂದು ಶ್ರೀಪತಿರಾಯರು ನಿಟ್ಟುಸಿರುಬಿಟ್ಟರು. ಮಗನಿಗೆ ತಾಂತ್ರಿಕ ಶಿಕ್ಷಣ

ಕೊಡಿಸಬೇಕು, ಎಂಜಿನಿಯರಿಂಗ್ ಓದಿಸಬೇಕು, ಎಂದು ಅವರು ತುಂಬಾ ಆಸೆಪಟ್ಟಿ
ದ್ದರು. ಆದರೆ ಸೀಟು ದೊರೆತಿರಲಿ‍ಲ್ಲ. ಆ ಸದಸ್ಯರ ಈ ಸದಸ್ಯರ ಕಾಲುಕಟ್ಟಿ ಕೇಳಿ
ಕೊಂಡುದೆಲ್ಲ ವ್ಯರ್ಥವಾಗಿತ್ತು.
ಸುನಂದೆಯ ತಾಯಿ, ಜಯದೇವನಿಗೆ ಗತಿಸಿದ ಅಮ್ಮನ ನೆನಪು ಮಾಡಿಕೊಟ್ಟರೆ,
ಶ್ರೀಪತಿರಾಯರನ್ನು ನೋಡಿದಾಗಲೆಲ್ಲ ತನ್ನ ತಂದೆಯ ಚಿತ್ರ ಆತನ ಕಣ್ಣಿಗೆ ಕಟ್ಟು
ತಿತ್ತು. ಅದು ಕನಕಪುರದ ಕರೆ. ವಾಸ್ತವವಾಗಿ ನೋಡಿದರೆ, ನೇರವಾಗಿ ಅಲ್ಲಿಗೇ
ಹೋಗಬೇಕಿತ್ತು ಆತ. ಆದರೆ ಅಲ್ಲಿ ಆತನಿಗಾಗಿ ಯಾವ ವಾತ್ಸಲ್ಯ ಕಾದಿತ್ತು? ತಿಳಿವಳಿಕೆ
ಬ೦ದಂದಿನಿಂದ, ಮಲತಾಯಿ ಅಧಿಕಾರಿಣಿಯಾಗಿದ್ದ ಆ ಮನೆ ಜಯದೇವನಿಗೆ ಮೋಹಕ
ವಾಗಿ ಕಂಡಿರಲಿಲ್ಲ. ಅದು ಎಷ್ಟಿದ್ದರೂ ಅವನ ಪಾಲಿಗೆ ನಾಲ್ಕು ದಿನ ಹೋಗಿ ಇದ್ದು
ಬರಬೇಕಾದ ಸಂಬಂಧಿಕರ ಮನೆ.
ಈ ರೀತಿಯ ಅನಾಸಕ್ತಿ ಆವರಿಸಿದ್ದರೂ ತಂದೆಯನ್ನು ಕಾಣಬೇಕು ಎನಿಸು
ತ್ತಿತ್ತು ಆತನಿಗೆ ಒಮೊಮ್ಮೆ. ಹಾಗೆಯೇ ತನ್ನ ತಮ್ಮನ, ತಂಗಿಯ, ನೆನಪಾಗುತ್ತಿತ್ತು.
ವೇಣುವಿನ ಮನೆಯಲ್ಲಿ ಎರಡು ದಿನಗಳಿದ್ದ ಬಳಿಕ ಜಯದೇವ ಹೇಳಿದ:
"ಕಾನಕಾನಹಳ್ಳಿಗೆ ಹೋಗ್ಬಿಟ್ಟು ಬರ್ತಿನಿ, ಅಮ್ಮ."
ಸುನಂದೆಯ ತಾಯಿ ಅಂದರು:
“ನಾನು ಆ ವಿಷಯವೇ ಕೇಳೋಣಾಂತಿದ್ದೆ ಕಣೋ."
ಜಯದೇವ ಹತ್ತು ರೂಪಾಯಿಗಳ ಹತ್ತು ನೋಟು ಅವರ ಮುಂದಿರಿಸಿದ.
“ತಗೊಳ್ಳಿ. ನನ್ನ ಸಂಪಾದ್ನೇಲಿ ಮಿಗಿಸಿದ್ದು. ಬೇಕಾದಾಗ ಕೇಳಿ ಇಸ್ಕೋತಿನಿ."
"ಯಾಕಪ್ಪಾ, ನಿನ್ನ ಮನೆಗೆ ತಗೊಂಡು ಹೋಗೊಲ್ವೆ?"
"ಇಲ್ಲೇ ನನ್ನ ಖರ್ಚಿಗೇ ಬೇಕಾಗುತ್ತಲ್ಲ. ಇಟ್ಕೊಳ್ಳಿ."
ಆ ಮನೆಗೆ ಒಯ್ದರೆ ಜಯದೇವನಿಗೆ ಬೇಕಾದಾಗ ಹಣ ಸಿಗಲಾರದೆಂದು ತಿಳಿದಿದ್ದ
ಆಕೆ ಒತ್ತಾಯಿಸಲಿಲ್ಲ.
"ನಿನ್ನಿಷ್ಟ. ತೆಗೆದಿಡ್ತೀನಿ. ಬೇಕಾದಾಗ ಕೇಳು."
ವೇಣು ಸುನಂದೆಯರಿಗೆ ಜಯದೇವ ಹೇಳಿದ:
"ಒಂದು ವಾರ ಬಿಟ್ಕೊಂಡು ನೀವಿಬ್ಬರೂ ನಮ್ಮ ಹಳ್ಳಿಗೆ ಬನ್ನಿ"
ಹಿಂದೆ ಒಂದೆರಡು ಸಾರೆ ಆತ ಕರೆದಿದ್ದರೂ ಹೋಗುವುದಾಗಿರಲಿಲ್ಲ. ಈ ಸಲ
ವಾದರೂ ಹೋಗಲೇಬೇಕೆ೦ದು ಸುನಂದಾ ಆಸೆ ವ್ಯಕ್ತಪಡಿಸಿದಳು. ಪರೀಕ್ಷೆಗೆಂದು ಓದಿ
ಬೇಸರಗೊಂಡಿದ್ದ ವೇಣುಗೋಪಾಲ ಅಂತಹ ಪ್ರವಾಸಕ್ಕೆ ಸಿದ್ಧನಾಗಿಯೇ ಇದ್ದ.
"ಅಮ್ಮ, ಜಯಣ್ಣ ಊರಿಗೆ ಕರೀತಿದಾನೆ ನಮ್ಮನ್ನ," ಎಂದ ವೇಣು.
"ಹೋದರಾಯ್ತು, ಅದಕ್ಕೇನು?"ಎಂದರು ತಾಯಿ.
"ಬರುತ್ತಾ ನಾಲ್ಕು ಇದ್ದಿಲು ಮೂಟೆ ತರ್ತೀವಿ. ಕಾನಕಾನಹಳ್ಳಿ ಇದ್ದಿಲು
ಬಹಳ ಪ್ರಸಿದ್ದಿ!"  “ಓಹೋ, ಒಂದು ಗಾಡೀನೆ ಹಟ್ಟಿಸ್ಕೊಂಡ್ಬಾ!"
ಆಕೆಯೇನೋ ಹಾಗೆ ಮಾತಾಡಿದರು. ಆದರೂ ಮನಸ್ಸಿನ ಸಾಗರದಲ್ಲಿ ಆಸೆಯ
ದೋಣಿ ಇನ್ನೂ ಅನಿರ್ದಿಷ್ಟವಾಗಿಯೆ ಚಲಿಸುತ್ತಿತ್ತೆಂದು ಅವರಿಗೆ ಸಂಕಟವಾಗಿತ್ತು.
ಇಂದಲ್ಲ ನಾಳೆ, ಬಾಯಿಬಿಟ್ಟು ಹೇಳಲೇ ಬೇಕಾದ, ಕೇಳಲೇ ಬೇಕಾದ, ವಿಷಯ.
ಜಯದೇವನ ತಂದೆ ಬೇರೇನಾದರೂ ಏರ್ಪಾಟು ಮಾದುವುದಕ್ಕೆ ಮುಂಚೆಯೇ___
....ಕನಕಪುರದಲ್ಲಿ ಮಗನನ್ನು ಕಂಡು ತಂದೆಗೆ ಸಂತೋಷವೇ ಆಯಿತು. ಆದರೂ
ಮಾತುಗಳಲ್ಲಿ ಅದನ್ನು ವ್ಯಕ್ತಪಡಿಸುವ ಸ್ವಭಾವ ಅವರದಲ್ಲ.
"ಚೆನ್ನಾಗಿದೀಯೇನೊ?" ಎಂದರು. ಅದೊಂದು ಪ್ರಶ್ನೆಯಲ್ಲೆ ಅಡಕವಾಗಿತ್ತು
ಮಗನನ್ನು ಕುರಿತಾದ ಅವರ ಎಲ್ಲ ಒಲವು.
"ಹೂಂ," ಎಂದ ಜಯದೇವ.
ಆತನ ಮಲತಾಯಿ ಮಾತ್ರ ರಾಗವೆಳೆದರು:
"ನಿನ್ನ ಪಾಲಿಗೆ ನಾವು ಯಾರೂ ಬದುಕಿಯೇ ಇಲ್ಲ ಅನ್ನೋ ಹಾಗೆ ಮಾಡಿದಿ
ಯಲ್ಲೋ. ಅಮ್ಮ ಅಪ್ಪ ಅಂದ್ಮೇಲೆ ತಿಂಗಳಿಗೊಂದಾದರೂ ಕಾಗದ ಬರೀ ಬೇಡ್ವೆ
ನೀನು? ನಿನ್ನ ಸಂಬಳ ಕಳಿಸ್ಕೊಡೂಂತ ನಾವೇನೂ ಕೇಳ್ಲಿಲ್ಲ. ಆದರೆ ಕಾಗದಾನಾರೂ-"
ಅದರ ಜತೆಯಲ್ಲೆ ಅರ್ಧ ನಿಮಿಷದ ಅಳು ಬೇರೆ.
ಜಯದೇವ ಏನನ್ನೂ ಹೇಳಲಿಲ್ಲ. ಆದರೆ ತಂಗಿಯನ್ನೂ ತಮ್ಮನನ್ನೂ
ಕಂಡಾಗ, 'ಇವರಿಗೋಸ್ಕರ ಏನಾದರೂ ತರಬೇಕಿತ್ತು' ಎನಿಸಿತು. ಮರುಕ್ಷಣವೇ,
"ಹಿಂದೆಯೂ ತ೦ದವನಲ್ಲ. ಈಗಲೂ ಅಷ್ಟೆ,"ಎಂದು ಸುಮ್ಮನಾದ.
ಹೈಸ್ಕೂಲಿನ ಕೊನೆಯ ಹಂತವನ್ನು ತಲುಪಿಯೇ ಇರಲಿಲ್ಲ ಅವನ ತಂಗಿ ಸತ್ಯ
ವತಿ. ಒಂದು ವರ್ಷ ತೇರ್ಗಡೆಯಾಗಲಿಲ್ಲವೆಂದು, ಯಾವನೋ ಉಪಾಧ್ಯಾಯನ
ಮೇಲೆ ರೇಗಿ, ಆತನನ್ನು ಹೀನಾಯವಾಗಿ ಬಯ್ದು, ಮಗಳನ್ನು ಶಾಲೆಬಿಡಿಸಿಬಿಟ್ಟಿ
ದ್ದರು ಜಯದೇವನ ಚಿಕಮ್ಮ. ಹೀಗೆ ಓದು ನಿಂತು ಹೋಯಿತೆ೦ದು ಆ ಹುಡುಗಿ,
ಬೇಸರಪಟ್ಟವಳೇನೂ ಅಲ್ಲ. ಅದೇ ಹೊತ್ತಿಗೆ, ಆ ಊರಿಗೆ ಬಂದು ಡೇರೆ ಹೊಡೆ
ದಿತ್ತು ಒಂದು ಟೂರಿಂಗ್ ಟಾಕೀಸು. ಬರುತ್ತಿದ್ದ ಚಿತ್ರಗಳು ಹಳೆಯವೇ ಆದರೂ ಆ
ಹೊಸ ಲೋಕದಲ್ಲಿ ಸತ್ಯವತಿ ಸುಖಿಯಾಗಿದ್ದಳು.
ಆಕೆ ಕೇಳಿದಳು:
"ಅಲ್ಲಿ ಸಿನಿಮಾ ಇದೆಯಾ ಜಯಣ್ಣ?"
“ಊಹೂಂ."
"ಅಷ್ಟೇನಾ? ಬೇಜಾರು ಹಾಗಾದರೆ."
“ಹೂಂ."
"ಬರ್ತಾ ಬೆಂಗಳೂರಲ್ಲಿ ಸಿನಿಮಾ ನೋಡಿದಿಯಾ?"
ನೋಡೋಣವೆಂದು ವೇಣು ಸಲಹೆಮಾಡಿದ್ದ. ಆದರೆ ಆತನ ಪರೀಕ್ಷೆ ಪೂರ್ತಿ  ಯಾಗಿ ಮುಗಿದಿರಲಿಲ್ಲವೆಂದು ಜಯದೇವನೇ ಹಿಂತೆಗೆದಿದ್ದ.
"ಇಲ್ಲ ಕಣೇ."
ಈ ಅಣ್ಣ ರಸಿಕನಲ್ಲವೇ ಅಲ್ಲವೆಂದು ಸತ್ಯವತಿ ನಿರಾಸೆಗೊಂಡಳು.
ಬೆಂಗಳೂರಿನಲ್ಲಿ ಓದು ಆರಂಭಿಸಿದ್ದ ತಮ್ಮ ಮಾಧೂ ತನ್ನ ಪರೀಕ್ಷೆ ಮುಗಿಸಿ
ಊರಿಗೆ ಬ೦ದು ಆಗಲೆ ಎರಡು ವಾರಗಳಾಗಿದ್ದುವು.
"ನೋಡು ಜಯಣ್ಣ. ಮಾಧೂ ವಾರಕ್ಕೊಂದ್ಸಲ ಸಿನಿಮಾಕ್ಕೆ ಹೋಗ್ತಾನಂತೆ."
ಅದು, ಅಂತಹ ಅವಕಾಶವಿಲ್ಲದೆ ತಂಗಿ ಕೋಟ್ಟ ದೂರು.
ಮಾಧೂ "ಶ್!" ಎಂದ. "ಅಮ್ಮನಿಗೆ ಕೇಳಿಸುತ್ತೆ. ಸುಮ್ನಿರೇ," ಎಂದು
ಅಂಗಲಾಚಿದ.
ಆದರೆ ಸತ್ಯವತಿ ತಿಳಿಯದೆ?
"ಹೂಂ. ಅಮ್ಮ ಸಿನಿಮಾ ನೊಡ್ಬೇಡ ಅಂತಾರೇನೋ? ಹಾಸ್ಟೆಲು ಖರ್ಚಿ
ಗಲ್ದೆ, ಬಂದಾಗ್ಲೆಲ್ಲ, ಅಮ್ಮನ ಕೈಯಿಂದ ಜಾಸ್ತಿ ಇಸ್ಕೊಂಡ್ಹೋಗ್ತೀಯಾ ಮತ್ತೆ..."
ಆ ಅಣ್ಣ ಆಕೆಯ ಜಡೆ ಹಿಡೆದು ಕುಲುಕಿ, ಕೆಂಗಣ್ಣು ತೋರಿಸಿ ಹೊರಹೋದ.
ಅಮ್ಮನಿಗೆ ಕೇಳಿಸಬಹುದೆನ್ನು ವುದಕ್ಕಿಂತಲೂ ಜಯದೇವನ ಎದುರು ತಂಗಿ ಆ ಪ್ರಸ್ತಾಪ
ಮಾಡಿದವಳೆಂಬುದೇ ಆತನ ಮುನಿಸಿಗೆ ಕಾರಣ.
ಎರಡು ದಿನಗಳಲ್ಲೆ ಆ ಮನೆ ಬೇಸರವಾಯಿತು ಜಯದೇವನಿಗೆ. ತಾನು ಹುಟ್ಟಿ
ಬೆಳೆದ ಕಟ್ಟಡದಲ್ಲೇ ಆತ ಅಪರಿಚಿತ. ಟೂರಿಂಗ್ ಟಾಕೀಸಿನ ಚಲಚ್ಚಿತ್ರ ನೋಡಿದು
ದಾಯಿತು. ಊರು ಸುತ್ತಿದುದಾಯಿತು. ಹೊಲಗಳಲ್ಲಿ ಹೊತ್ತು ಕಳೆದುದಾಯಿತು.
ಬರುತ್ತ, ವೇಣುವಿನ ಮನೆಯಿಂದ ಒಂದಷ್ಟು ಪುಸ್ತಕಗಳನ್ನಾದರೂ ತರಬಾರದಾಗಿತ್ತೆ
ತಾನು? ಈಗ ಪೆಟ್ಟಿಗೆಯಲ್ಲಿದ್ದುದು ಎರಡೇ. ಹಳೆಯವು. ಅವುಗಳನ್ನೆ ಜಯದೇವ
ಮತ್ತೆ ಮೆಲುಕು ಹಾಕಿದ.
ವೇಣು ಸುನಂದೆಯರಂತೂ ಬರುವ ಚಿಹ್ನೆ ಕಾಣಿಸಲಿಲ್ಲ.
ಆತನ ತಂದೆ ಕೇಳಿದರು:
"ಮುಂದಿನ ವರ್ಷವೂ ಅದೇ ಸ್ಕೂಲ್ನಲ್ಲಿ ಇರಬೇಕೂಂತಿದೀಯ ಜಯಾ?"
ತನ್ನ ಯೋಜನೆ ತಂದೆಗೆ ಇಷ್ಟವಾಗಬಹುದೆಂದು ಎಣಿಸಿದ್ದ ಜಯದೇವ. ಹಿಂದೆ
ಒಮ್ಮೆ ಅವರೇ ವಿಷಾದದಿಂದ ಕೇಳಿದ್ದರು:
'ಅಂತೂ ಬಿ.ಎ. ಮುಗಿಸೋಕೆ ಆಗ್ಲಿಲ್ಲ, ಅಲ್ವೇನೋ?'
ಆಗ ಉತ್ತರವಿತ್ತಿದ್ದ :
'ಅದರ ಯೋಚನೆಯೇ ಇಲ್ಲ ಅಪ್ಪಾ....'
ಈಗ 'ಯೋಚನೆ' ಇತ್ತು. ಅದನ್ನು ಆತ ತಂದೆಗೆ ತಿಳಿಸಿದ.
ಒಮ್ಮೆಲೆ ಏನನ್ನೂ ಹೇಳದೆ, ಸ್ವಲ್ಪ ಹೊತ್ತು ಸುಮ್ಮನಿದ್ದ ಬಳಿಕ ಅವರೆಂದರು:
"ಶಾನುಭೋಗರ ಕೆಲಸ ವಂಶಪಾರಂಪರ್ಯವಾಗಿ ಬಂದದ್ದು. ನನ್ನ ಜತೇಲಿ
ಅದೂ ಮುಕ್ತಾಯವಾಗಲಿ ಅಂತಿಯೇನು? ನಾಳೆ ಈ ಕೆಲಸ ಮಾಡೋರು ಯಾರು?
ಜಮೀನು ನೋಡ್ಕೊಳ್ಳೋರು ಯಾರು? ಈ ಮನೇಲಿ ಇರೋರು ಯಾರು?"
"ಮಾಧೂ ಇದಾನಲ್ಲ."
"ಮಾಧೂ ಈ ಕೆಲಸ ಮಾಡೋದು ನಿಮ್ಮಮ್ಮನಿಗೆ ಇಷ್ಟವಿಲ್ಲ."
'ನಿಮ್ಮಮ್ಮ! ಎಂದರೆ ಜಯದೇವನ ಚಿಕ್ಕಮ್ಮ.
ತಂದೆಯ ಮನಸ್ಸನ್ನು ನೋಯಿಸಬೇಕಾದ ಪ್ರಮೇಯ ಬಂತೆಂದು ಜಯದೇವನಿಗೆ
ಸಂಕಟವಾಯಿತು. ಸ್ಪಷ್ಟವಾಗಿ ಹೇಳದೆ ಇರುವುದೂ ಕಷ್ಟವೇ.
ಆಡಬೇಕಾದ ಮಾತುಗಳನ್ನು ಆರಿಸುತ್ತ ಸ್ವಲ್ಪ ಹೊತ್ತು ಕಳೆದು ಆತನೆಂದ:
"ಉಪಾಧ್ಯಾಯ ವೃತ್ತೀಲೆ ಇರಬೇಕೂಂತ ನಾನು ಯಾವತ್ತೋ ನಿರ್ಧಾರ
ಮಾಡಿದೀನಿ, ಅಪ್ಪಯ್ಯ."
ನಿರಾಶರಾದ ತಂದೆ ಬೀದಿಯನ್ನೆ ದಿಟ್ಟಿಸಿ ನೋಡುತ್ತ ಅಂದರು;
"ಇಷ್ಟು ವರ್ಷವೆಲ್ಲ ನಿನ್ನ ನಿರ್ಧಾರ ನೀನೇ ಮಾಡಿದೋನು. ಈಗ ನಾನು
ಹೇಳೋದೇನಿದೆ?"
"ನಾನೇನು ಮಾಡ್ಲಿ ಅಪ್ಪಯ್ಯ?"
ಅಂತಹ ಕರಿ ಮೋಡದೆಡೆಯಲ್ಲೂ ಸೂರ್ಯರಶ್ಮಿ ಬರಲು ಅವಕಾಶವಿತ್ತು.
"ಈ ಊರಲ್ಲೇ ನೀನು ಉಪಾಧ್ಯಾಯನಾಗಬಾರದೆ? ಆದಷ್ಟು ದಿವಸ ಎರಡು
ಕೆಲಸಾನೂ ನೋಡ್ಕೊಂಡು ಇರಬಹುದು."
ಸದ್ಯಃ ಈ ಸಂಭಾಷಣೆ ಮುಗಿದರೆ ಸಾಕೆನಿಸಿ ಜಯದೇವನೆಂದ:
"ನೋಡೋಣ ಅಪ್ಪಯ್ಯ. ಮುಂದೆ ಯಾವಾಗಲಾದರೂ ಇಲ್ಲಿಗೇ ಬಂದ
ರಾಯ್ತು."
ಆ ಮಾತಿನಿಂದ ಜಯದೇವನ ತಂದೆಗೆ ತುಸು ತೃಪ್ತಿ ಎನಿಸಿತು. ಒಳಬಾಗಿಲ
ಕಡೆಗೊಮ್ಮೆ ದೃಷ್ಟಿ ಬೀರಿ ಅವರೆಂದರು:
"ಹಾಗೆ ಮಾಡು. ಇಲ್ಲಿಯೂ ಈಗ ಹೈಸ್ಕೂಲಿದೆ."
ಅಷ್ಟರಲ್ಲೆ ಜಯದೇವನ ಚಿಕ್ಕಮ್ಮ ಅತ್ತ ಬಂದರು.
"ಏನ್ಸಮಾಚಾರ? ಏನ್ಮಾತಾಡ್ತಾ ಇದ್ದೀರಿ?" ಎಂದರು.
ವಿಷಯ ತಿಳಿದಾಗ ಅವರ ಪ್ರತಿಕ್ರಿಯೆ ಬುಸುಗುಟ್ಟುತ್ತಲೆ ಬಂತು.
"ಈ ಒಂದು ವರ್ಷ ಸಂಪಾದ್ನೆ ಮಾಡಿ ಕಟ್ಟಿಟ್ಟದ್ದು ಕಾಣ್ತಾ ಇದೆಯಲ್ಲ. ಇಷ್ಟು
ಓದಿದ್ದು ಸಾಲ್ದೇನೋ? ಇಬ್ಬರ ಖರ್ಚೂ ನೋಡ್ಕೊಳ್ಳೋರು ಯಾರು? ಹೀಗೇಂತ
ಮೊದಲೇ ಗೊತ್ತಿದ್ರೆ ಮಾಧೂನ ಮನೇಲಿ ಇರಿಸ್ಕೋಬಹುದಾಗಿತ್ತು.”
ಜಯದೇವ ಅಲ್ಲಿಂದೇಳುತ್ತ ಅಂದ:
"ನನ್ನ ಖರ್ಚಿನ ವಿಷಯ ನೀವು ಯೋಚಿಸ್ಬೇಡಿ. ಆ ಜವಾಬ್ದಾರಿ ನನಗೇ

43

338

ಸೇತುವೆ

ಇರಲಿ.”

“ನೋಡಿದಿರಾ? ಹ್ಯಾಗೆ ತಲೆಗೇ ಹೊಡೆದ ಹಾಗೆ ಹೊಡೆದ ಹಾಗೆ ಮಾತಾಡ್ತಾನೆ!" ಎಂದು
ಆತನ ಚಿಕ್ಕಮ್ಮ ಅಳಲು ಸಿದ್ಧವಾದರು.
ಆ ದೃಶ್ಯವನ್ನು ನೋಡಲು ಜಯದೇವ ಅಲ್ಲಿ ನಿಲ್ಲಲಿಲ್ಲ.
ನೂರು ರೂಪಾಯಿ ಉಳಿಸಿದ್ದ ವಿಷಯ ಆತ ಆವರೆಗೂ ಹೇಳಿರಲಿಲ್ಲ. 'ಎಷ್ಟು
ಹಣ ಬೇಕಪ್ಪಾ?” ಎಂದು ತಂದೆಯೇನಾದರೂ ಕೇಳಿದರೆ, ಅದರ ಪ್ರಸ್ತಾಪ ಮಾಡಿದ
ರಾಯಿತೆಂದುಕೊಂಡಿದ್ದ. ಈಗಂತೂ ಅಂತಹ ಪ್ರಸ್ತಾಪದ ಅಗತ್ಯ ತೋರಲಿಲ್ಲ.
ವೇಣು ಸುನಂದೆಯರು ಬರುವುದು ಚಿಕ್ಕಮ್ಮನಿಗೆ ಇಷ್ಟವಾಗುತ್ತದೋ
ಇಲ್ಲವೋ ಎಂಬ ಶಂಕೆ ಜಯದೇವನನ್ನು ಬಾಧಿಸುತ್ತಲೇ ಇತ್ತು. ಅವರು ಬರುವುದನ್ನು
ಕಾಯದೆ ತಾನೇ ಬೆಂಗಳೂರಿಗೆ ಹೊರಟುಬಿಟ್ಟರಾಯಿತು ಎಂದೂ ಯೋಚಿಸಿದ. ಇಲ್ಲಿ,
ಎದ್ದರೂ ಬೇಸರ ಕುಳಿತರೂ ಬೇಸರ ಎನ್ನುವಂತಾಗಿತ್ತು.
ಆ ಸ್ಥಿತಿಗತಿಗಳ ಸೂಕ್ಷ್ಮಪರಿಚಯಮಾಡಿಕೊಟ್ಟು, ವೇಣುಗೆ ಕಾಗದ ಬರೆಯ
ಬೇಕೆಂದು ಜಯದೇವ ಎಣಿಸುತ್ತಿದ್ದಾಗಲೇ ಒಂದು ದಿನ ವೇಣುಗೋಪಾಲನ ಆಗಮನ
ವಾಯಿತು. ಬಂದಿದ್ದುದು ಆತನೊಬ್ಬನೇ.
“ಸುನಂದಾ ಬರೋದಿಲ್ಲ ಅಂದಳೇನೊ?" ಎಂದು ಜಯದೇವ ಕೇಳಿದ.
"ಹೊರಟಿದ್ಲು. ಆದರೆ ಕೊನೆ ಘಳಿಗೇಲಿ ಅಪ್ಪ ಅಮ್ಮ ಅದೇನೇನೊ ಮಂತ್ರಾ
ಲೋಚನೆ ನಡೆಸಿ, ನೀನೊಬ್ನೇ ಹೋಗು-ಅಂದ್ರು."
ಆ ಮಾತಿನಿಂದೇನೂ ಸಮಾಧಾನವಾಗುವಂತಿರಲಿಲ್ಲ ಜಯದೇವನಿಗೆ.
“ನೀನು ಬರೋ ವಿಷಯ ತಿಳಿಸಿ ಕಾಗದ ಬರೆಯೋಕೆ ಏನಾಗಿತ್ತು? ಬಸ್
ಸ್ಟ್ಯಾಂಡಿಗಾದರೂ ಬರ್ತಿದ್ನೆಲ್ಲ."
"ಈ ಊರಲ್ಲಿ ನಿನ್ನ ಮನೆ ಹುಡುಕೋದು ಮಹಾ ಕೆಲಸ ಅಂತ್ಲೋ. ಶಾನು
ಭೋಗರು ಅಂದ್ಮೇಲೆ-"
ತಂದೆಯೊಡನೆ ನಡೆಸಿದ್ದ ಮಾತುಕತೆಯ ನೆನಪಾಗಿ ಜಯದೇವ ಸಣ್ಣನೆ ನಕ್ಕ.
"ಯಾಕ್ನಗ್ತೀಯಾ?" ಎಂದು ಕೇಳಿದ ವೇಣುಗೋಪಾಲ.
"ಯಾಕೂ ಇಲ್ಲ. ಅಂತೂ ಬಂದೆಯಲ್ಲ," ಎಂದು ಜಯದೇವ ಮಾತು
ಬದಲಿಸಿದ.
ವೇಣುಗೋಪಾಲ ಬಂದುದರಿಂದ ಬೇಸರ ಕಳೆಯಲು ಜಯದೇವನಿಗೆ ಅನು
ಕೂಲವಾಯಿತು. ವೇಣು, ಮಾಧವನೊಡನೆ ಸುಲಭವಾಗಿ ಹೊಂದಿಕೊ೦ಡ. ಸತ್ಯ
ವತಿಯಂತೂ ನಿತ್ಯಕ್ಕಿಂತ ಹೆಚ್ಚಿನ ಬೆಡಗುಬಿನ್ನಾಣದಿಂದ ಬೆಂಗಳೂರಿನ ನವಯುವಕ
ನೆದುರು ಶೋಭಿಸಿದಳು. ಜಯದೇವನಿಗೆ ಅಚ್ಚರಿಯನ್ನುಂಟು ಮಾಡಿದವರೆಂದರೆ
ಆತನ ಚಿಕ್ಕಮ್ಮ. ಆಕೆ ಮಲಮಗನ ಸ್ನೇಹಿತನೆಂದು ವೇಣುಗೋಪಾಲನನ್ನು ಅನಾ
ದರದಿಂದ ಕಾಣಲಿಲ್ಲ. ಬದಲು, ಬಗೆ ಬಗೆಯ ತಿಂಡಿ ಮಾಡಿ ಸತ್ಕರಿಸಿದರು. ಆತ

ನವೋದಯ

339

ಭಾವೀ ಅಳಿಯನಾಗಬಹುದೆಂಬ ವಿಚಾರ ಅವರಲ್ಲಿ ಮೂಡಿತ್ತು ಎಂದಲ್ಲ. ಅಠಾರಾ
ಕಚೇರಿಯ ಅಂತಸ್ತಿನೊಡನೆಯೇ ತಮ್ಮ ಬೀಗತನ ಎಂಬುದನ್ನು ಒಪ್ಪಲು ಸಿದ್ಧರಿರ
ಲಿಲ್ಲ ಆಕೆ. ಆದರೂ, ಮಗಳು ಸಿಂಗಾರ ಮಾಡಿಕೊಳ್ಳುತ್ತಿದ್ದುದನ್ನು ಕಂಡಾಗಲೆಲ್ಲ,
ಬಂದವನ ವಿಷಯದಲ್ಲಿ ಅವರ ಪ್ರೀತಿ ಹೆಚ್ಚುತ್ತಿತ್ತು.
ಜಯದೇವ ಗೆಳೆಯನಿಗೆ೦ದ:
"ನನಗಿಲ್ಲದ ಗೌರವ ನಿನಗೆ! ನೀನು ಬಂದೇಂತ ಒ೦ದಿಷ್ಟು ತಿಂಡಿ ರುಚಿಯಾದರೂ
ನಾನು ನೋಡೋ ಹಾಗಾಯ್ತು."
ನಿಜ ಸಂಗತಿಯ ಅರಿವು ಇಲ್ಲದ ಯಾರೂ ಆ ಮಾತನ್ನು ನಂಬುವುದು ಸಾಧ್ಯ
ವಿರಲಿಲ್ಲ. ಕಾನಕಾನಹಳ್ಳಿಯ ತನ್ನ ಮನೆಯ ವಿಷಯ ಹೆಚ್ಚಾಗಿ ಏನನ್ನೂ ಜಯದೇವ
ಹೇಳಿದವನಲ್ಲವಾದರೂ ಸೂಕ್ಷ್ಮವಾದ ನಿರೀಕ್ಷಣೆಯಿ೦ದ ಸಾಕಷ್ಟು ಸತ್ಯಾ೦ಶವನ್ನು
ತಿಳಿಯುವ ಸಾಮರ್ಥ್ಯ ವೇಣುಗೋಪಾಲನಿಗಿತ್ತು.
ಗೆಳೆಯನತ್ತ ನೋಡಿ ಆತನೆಂದ:
"ವಿಚಿತ್ರ ಹೆಂಗಸು ಕಣೋ ನಿನ್ನ ಚಿಕ್ಕಮ್ಮ."
ವೇಣು ಜಯದೇವನ ಮನೆಯಲ್ಲಿ ಉಳಿದುದು ನಾಲ್ಕೇ ದಿನ. ಹೊರಡುತ್ತ ಆತ
ಸ್ನೇಹಿತನನ್ನು ಬೆ೦ಗಳೂರಿಗೆ ಕರೆದ.
"ಬೇಕಾದರೆ ನಿನ್ನ ಅಪ್ಪಯ್ಯನಿಗೆ ಹೇಳ್ತೀನಿ. ಈಗ್ಲೇ ಹೊರಟ್ಬಿಡೋಣ."
ಜಯದೇವ ಒಪ್ಫಲಿಲ್ಲ.
“ನೀನು ಹೋಗು. ಒಂದು ವಾರ ಬಿಟ್ಕೊಂಡು ಬಂದ್ಬಿಡ್ತೀನಿ."
...ಆ ಮಾತಿನಂತೆ ಒಂದು ವಾರದ ಬಳಿಕ ಬೆಂಗಳೂರಿಗೆ ಹೋದ ಜಯದೇವ.
ಮುಂದಿನದು ಕಾಲೇಜು ಸೇರುವ ಸಿದ್ಧತೆ. ಶಿಕ್ಷಣದ ವರ್ಷಾರಂಭಕ್ಕೆ ಒಂದೂವರೆ
ತಿಂಗಳ ಅವಧಿ ಇತ್ತಾದರೂ ಜಯದೇವನ ತಯಾರಿಗೆ ಅದು ಅಲ್ಪವೇ.
ವೇಣು, ಜಯದೇವ, ಇಬ್ಬರೂ ರಜಾಕಾಲದಲ್ಲಿ ಎಲ್ಲಾದರೂ ಕೆಲಸಕ್ಕೆ ಸೇರ
ಬೇಕೆಂದು ಶ್ರೀಪತಿರಾಯರು ಸಲಹೆ ಮಾಡಿದರು.
"ಬಂದಷ್ಟು ಬರಲಿ. ಅದರಲ್ಲಿ ಅವಮಾನವೇನೂ ಇಲ್ಲ," ಎಂದರು.
ಅವಮಾನದ ಮಾತೆಲ್ಲಿಯದು? ಕೆಲಸವಿರಲಿಲ್ಲ ಅಷ್ಟೆ. ಸ್ವತಃ ಶ್ರೀಪತಿರಾಯರೇ
ಓಡಾಡಿ ಹುಡುಕಿದರು. ಒಂದು ಅಂಗಡಿಯಲ್ಲಿ ಲೆಕ್ಕ ಬರೆಯುವ ತಾತ್ಕಾಲಿಕ ಕೆಲಸ
ಒಬ್ಬರ ಮಟ್ಟಿಗೆ ದೊರೆಯಿತು. ಜಯದೇವನನ್ನೆ ಶ್ರೀಪತಿರಾಯರು ಅಲ್ಲಿಗೆ ಕರೆ
ದೊಯ್ದರು.
ನಡುವೆ ಓದು ನಿಲ್ಲಿಸಿ ಜಯದೇವ ಉಪಾಧ್ಯಾಯನಾದುದರಿಂದ, ಸಹಪಾಠಿ
ವೇಣು ಒಂದು ವರ್ಷ ಮುಂದಕ್ಕೆ ಹೋಗಿದ್ದ.ಆದರೆ ಪುನಃ ಜತೆ ದೊರೆಯಿತೆಂದು
ಅವನಿಗೆ ಸಂತೋಷವಾಯಿತು. ಜಯದೇವ ಈಗ ಎಲ್ಲ ಪುಸ್ತಕಗಳನ್ನೂ ಕೊಳ್ಳ
ಬೇಕಾದುದಿರಲಿಲ್ಲ. ವೇಣುವಿನ ಕೆಲ ಟಿಪ್ಪಣಿಗಳೂ ಆತನ ನೆರವಿಗಿದ್ದುವು.

340

ಸೇತುವೆ

ತರಗತಿಯ ಪರೀಕ್ಷೆಯಲ್ಲಿ ವೇಣು ಉತ್ತೀರ್ಣನಾಗಿದ್ದ. ಕಾಲೇಜು ಶಿಕ್ಷಣದ
ಮೊದಲ ವರ್ಷದ ಸುಖ ಅನುಭವಿಸಿದ್ದ ಮಾಧು ಮಾತ್ರ ತನ್ನ ತರಗತಿಯಲ್ಲಿ
ಮತ್ತೊಮ್ಮೆ ಕುಳಿತುಕೊಳ್ಳುವಂತಾಯಿತು.
ಅಂಗಡಿಯ ಕೆಲಸವನ್ನು ಬಿಟ್ಟು ಜಯದೇವ ಕಾಲೇಜು ಸೇರುವುದಕ್ಕೆ ಮುಂಚೆ
ಯೊಮ್ಮೆ ತಂದೆಯನ್ನು ಕಂಡುಬಂದ.
ಹೆಂಡತಿ ಸಮೀಪದಲ್ಲಿರಲಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಆತನ ತಂದೆ
ಕೇಳಿದರು:
"ನೀನೂ ಹಾಸ್ಟೆಲ್ನಲ್ಲೆ ಮಾಧೂ ಜತೇಲೆ ಇರ್ತೀಯೇನೊ?"
ಅದು 'ಅಮ್ಮ'ನಿಗೆ ಒಪ್ಪಿಗೆಯಾಗದ ವಿಷಯ ಎಂದು ತಿಳಿಯದವನೆ
ಜಯದೇವ?
"ಬೇಡಿ ಅಪ್ಪಯ್ಯ. ವೇಣು ಮನೇಲಿ ಅನುಕೂಲವಾಗಿದೆ. ಅಲ್ಲೇ ಇರ್ತೀನಿ."
"ಹಾಗೇ ಮಾಡು. ಫೀಸಿಗೇನ್ಮಾಡ್ತೀಯಾ?"
"ಮೊದಲಿನ ಕಸಬೇ ಇದೆಯಲ್ಲ? ಎರಡು ಮೂರು ಕಡೆ ಪಾಠ ಗೊತ್ಮಾಡ್ಕೊ
ಳ್ತೀನಿ."
"ಹೂಂ...ಆಗಾಗ್ಗೆ ಮಾಧೂನ ನೋಡ್ತಿರು."
ಮಾಧು ಬರುವುದು ಎರಡು ದಿನ ತಡವಾಗುತ್ತದೆಂದು ಜಯದೇವ ಮೊದಲೇ
ಹೊರಟ. ಬಸ್ಸಿಗಾಗಿ ಕಾಯುತ್ತ ಆತ ನಿಲ್ದಾಣದಲ್ಲಿ ನಿಂತಿದ್ದಂತೆಯೆ ತಂದೆ ಕಾಣಿಸಿ
ಕೊಂಡರು. ಅವರು ಮಗನ ಸಮೀಪಕ್ಕೆ ಬಂದರು. ಅತ್ತಿತ್ತ ನೋಡಿ, ಜೇಬಿಗೆ ಕೈ
ಹಾಕಿ, ಪಿಸುದನಿಯಲ್ಲಿ ಅಂದರು:
"ತಗೋ."
ಅವರ ಅಂಗೈಯಲ್ಲಿ ಐದು ರೂಪಾಯಿಯ ಎರಡು ನೋಟುಗಳು ಮಡಚಿ
ಕುಳಿತಿದ್ದುವು.
"ಬೇಡಿ, ನನ್ನ ಹತ್ತಿರ ಇದೆ, ಅಪ್ಪಯ್ಯ."
“ಇರಲಿ, ತಗೊಳೋ."
ಜಯದೇವನಿಗೆ ಒಮ್ಮೆಲೆ ನಗಬೇಕೆನಿಸಿತು, ಅಳಬೇಕೆನಿಸಿತು.ತಂದೆಯ ವಿಷಯ
ವಾಗಿ ಅವನಿಗೆ ಕನಿಕರ ಮೂಡಿತು. ಅವರ ಮನಸ್ಸು ನೋಯಬಾರದೆಂದು ಆತ ಆ
ಹಣ ಸ್ವೀಕರಿಸಿದ. ಆ ಹತ್ತು ರೂಪಾಯಿಗಳಿಗೋಸ್ಕರ ಮನೆಯಲ್ಲಿ ಬಳಿಕ ಆಗುವ
ರಾಧ್ಧಾ೦ತವನ್ನು ಕಲ್ಪಿಸಿಕೊಂಡು ಆತನ ಮನಸ್ಸು ಮುದುಡಿತು.
....ಬೆಂಗಳೂರಲ್ಲಿ ಶ್ರೀಪತಿರಾಯರು ಒಂದು ಮಾತು ಹೇಳಿದರು:
"ಸುನಂದೇನ ಕಾಲೇಜಿಗೆ ಸೇರಿಸೋಣಾಂತಿದೀನಿ, ಜಯಣ್ಣ .”
ಸಂತೋಷವನ್ನು ಬಚ್ಚಿಡುವುದಾಗಲಿಲ್ಲ ಜಯದೇವನಿಂದ. ಆತನ ಮುಖ
ಪ್ರಸನ್ನವಾಯಿತು.

ನವೋದಯ

341

"ಚೆನ್ನಾಗಿರುತ್ತೆ .”
"ಚೆನ್ನಾಗಿರುತ್ತೋ ಇಲ್ಲವೋ. ಹುಡುಗಿ ಇಂಟರೂಂತಂದ್ರೆ ಮದುವೆ ಮಾರ್ಕೆಟಿ
ನಲ್ಲಿ ಒಂದಿಷ್ಟು ಬೆಲೆ ಬರುತ್ತೆ-ಅದಕ್ಕೋಸ್ಕರ!"
ವಿಷಾದಕ್ಕಿಂತಲೂ ಹಾಸ್ಯದ ಛಾಯೆಯೇ ಆ ಧ್ವನಿಯಲ್ಲಿ ಕಂಡು ಬಂತು. ಬೇಸರ
ಪಡುವ ಅಗತ್ಯವಿರಲಿಲ್ಲ.
"ಹಾಗೇನಿಲ್ಲ. ಓದೋದು ಅಂದ್ರೆ ಸುನಂದೆಗೂ ಇಷ್ಟವೇ."
ಸುನಂದೆಯ ಪರ ವಾದಿಸಿದ ಜಯದೇವ. ಸುತ್ತಲಂತೂ ಆಕೆಯ ಸುಳಿವು
ಇರಲಿಲ್ಲ.
ಮೊದಲ ಒಂದೆರಡು ತಿಂಗಳು ಬಿಡುವಿತ್ತು. ಬಳಿಕ ಬೆಳಗ್ಗೆಯೂ ಹುಡುಗರಿಗೆ
ಪಾಠ, ಸಂಜೆಯೂ ಪಾಠ. ಆತ ಉಪಾಧ್ಯಾಯನಾಗಿದ್ದುದನ್ನು ತಿಳಿದ ಗೆಳೆಯರಂತೂ
"ಮೇಸ್ಟ್ರು" ಎಂದೇ ಜಯದೇವನನ್ನು ಸಂಬೋಧಿಸಿದರು. ತರಗತಿಯಲ್ಲಿ ಚುರುಕಾ
ಗಿದ್ದುದರಿಂದ ಪ್ರಾಧ್ಯಾಪಕರ ಮೆಚ್ಚುಗೆ ದೊರೆಯಿತು. ಆತನ ಸಾಹಸೀ ಜೀವನದ
ಪರಿಚಯ ಅವರಿಗೆ ಆದಾಗಲಂತೂ ಮೆಚ್ಚುಗೆಯೊಡನೆ ಗೌರವವೂ ಬೆರೆಯಿತು.
ನಡುವೆ ವೇಣು ಒಂದು ಭಾನುವಾರ, ಮಾಧುವನ್ನು ಮನೆಗೆ ಕರೆದು ತಂದ.
ಆತ ಸುಂದರ ಉಡುಗೆಯ 'ಶಿಸ್ತುಗಾರ.' ಸಂಕೋಚ ಪ್ರವೃತ್ತಿ ಇತ್ತಾದರೂ ಸರಳತೆ
ಇರಲಿಲ್ಲ.
..."ನಿನ್ನ ತರಗತೀನೆ ಕಣೇ," ಎಂದು ಸುನಂದೆಗೆ ವೇಣು ಆತನ ಪರಿಚಯ
ಮಾಡಿಕೊಟ್ಟ. ಮಾಧುವಿನೆದುರು, ಹಿಂದಿನ ವರ್ಷ ಆತ ಅನುತ್ತೀರ್ಣನಾಗಿದ್ದ
ವಿಷಯ ಪ್ರಸ್ತಾಪಿಸಲಿಲ್ಲ.
....ಜನವರಿಯಲ್ಲೊಮ್ಮೆ ಜಯದೇವನ ತಂದೆ, ಬಹಳ ಕಾಲದಿಂದ ಬರದೇ
ಇದ್ದ ಮಗನನ್ನು ಹುಡುಕಿಕೊಂಡು ಬಂದರು. ನೆಪಕ್ಕೆಂದು ಕಂದಾಯ ಖಾತೆಯ
ಕೆಲಸವೂ ಒಂದಿತ್ತು.
ಸಂಜೆ ಕಳೆದು ಚೆನ್ನಾಗಿ ಕತ್ತ ಲಾಗಿದ್ದುದರಿಂದ ಜಯದೇವ ಮನೆಯಲ್ಲೇ ಇದ್ದ.
ಶ್ರೀಪತಿರಾಯರು ಗೋವಿಂದಪ್ಪನವರನ್ನು ಆದರದಿಂದಲೇ ಬರಮಾಡಿ
ಕೊಂಡರು. ಕಾನಕಾನಹಳ್ಳಿ ದೂರವಿದ್ದುದರಿಂದ ಗೋವಿಂದಪ್ಪನವರ ನಡೆನುಡಿ
ಯಲ್ಲೀಗ ಧಾರಾಳತನವಿತ್ತು. ಆದರೆ, ಜಯದೇವನ ಪ್ರಸ್ತಾಪ ಬಂದಾಗಲೆಲ್ಲ ತಪ್ಪಿ
ತಸ್ಥನ ಧ್ವನಿಯೂ ಮಾತಿನಲ್ಲಿರುತ್ತಿತ್ತು.
ಶ್ರೀಪತಿರಾಯರು ಒತ್ತಾಯಿಸಿದರೆಂದು ಜಯದೇವನ ತಂದೆ ಆ ರಾತ್ರೆ
ಅಲ್ಲಿಯೇ ಊಟ ಮಾಡಿದರು. ಅವರಿಗೆಲ್ಲ ಬಡಿಸಿದ ಸುನಂದೆಯ ಪರಿಚಯವನ್ನು
ಹೊಸಬರಿಗೆ ಮಾಡಿಕೊಡಲು ಶ್ರೀಪತಿರಾಯರು ಮರೆಯಲಿಲ್ಲ.
ತಾವು ಉಳಿದುಕೊಂಡಿದ್ದ ಸ್ನೇಹಿತರ ಮನೆಗೆ ಗೋವಿಂದಪ್ಪನವರು ಹೊರ
ಟಂತೆ ಜಯದೇವ ಕೇಳಿದ:

342

ಸೇತುವೆ

"ಮಾಧೂ ಸಿಕ್ಕಿದ್ನಾ?"
“ಹೂಂ. ಸಾಯಂಕಾಲ ಹಾಸ್ಟೆಲಿಗೆ ಹೋಗಿದ್ದೆ."
ಜಯದೇವನಿಗೆ ತಿಳಿದಿದ್ದ ಹಾಗೆ, ಸಾಯಂಕಾಲ ಎಷ್ಟೋ ಸಲ ಮಾಧು
ವಿಧ್ಯಾರ್ಥಿನಿಲಯದಲ್ಲಿ ಇರುತ್ತಿರಲಿಲ್ಲ.
“ಬರ್ತೀನಿ ಅಂತ ಮೊದಲೇ ಬರೆದಿದ್ರೇನು?"
“ಹೂಂ..."
ಬೀದಿಗಿಳಿದ ತಂದೆಯೊಡನೆ ಮಗನೂ ಸ್ವಲ್ಪ ದೂರ ಬಂದ. ಭೇಟಿಯ ಕೊನೆ
ನಿಮಿಷಗಳಲ್ಲಿ ಮೌನ ಸರಿಯಲ್ಲವೆಂದು ಜಯದೇವ ತಿಳಿದಿದ್ದರೂ ಯಾವ ವಿಷಯ
ಮಾತನಾಡಬೇಕೆಂದು ಆತನಿಗೆ ತೋಚಲಿಲ್ಲ. ಗೋವಿಂದಪ್ಪನವರೇ ಬಾಯಿತೆರೆದುದ
ರಿಂದ ಆ ಸಮಸ್ಯೆ ಬಗೆಹರಿಯಿತು.
ಅವರೆಂದರು:
“ನಿನಗೆ ಪರೀಕ್ಷೆ ಯಾವತ್ತು?"
"ಏಪ್ರಿಲ್ ನಲ್ಲಿ."
"ಅಭ್ಯಾಸ ಚೆನ್ನಾಗಿ ಮಾಡ್ತಿದೀಯಾ?”
"ಹೂಂ."
“ಬೇಸಿಗೆ ರಜಾದಲ್ಲಿ ಮನೆಗೆ ಬಂದ್ಬಿಡು. ನಿನ್ನ ಹತ್ತಿರ ಸ್ವಲ್ಪ ವಿಷಯ
ಮಾತಾಡೋದಿದೆ."
ಏನು ವಿಷಯ? ಎಂದು ಅಲ್ಲಿಯೇ ಕೇಳುವ ಅಪೇಕ್ಷೆಯಾಯಿತಾದರೂ ಅದನ್ನು
ಅದುಮಿಹಿಡಿದು, “ಆಗಲಿ, ಬರ್ತೀನಿ," ಎಂದಷ್ಟೆ ಜಯದೇವ ಹೇಳಿದ.
ಒಂದು ನಿಮಿಷ ಸುಮ್ಮನಿದ್ದ ಬಳಿಕ ಆತನ ತಂದೆಯೇ ಅಂದರು:
"ಈ ಸಲ ನಿನ್ನ ತಂಗೀ ಮದುವೆ ಮಾಡ್ಬೇಕೂಂತಿದೀನಿ ಕಣೋ."
“ವರ ನೋಡಿದೀರಾ?"
"ಎರಡು ಮೂರು ಕಡೆ ನೋಡಿದ್ದಾಯ್ತು. ಮೂರನೆ ಹುಡುಗ ನಿಮ್ಮಮ್ಮ
ನಿಗೆ ಇಷ್ಟವಾಗಿದಾನೆ. ಅವನನ್ನೇ ಗೊತ್ಮಾಡೋಣಾಂತಿದೀನಿ."
"ಸತ್ಯವತಿ ಒಪ್ಪಿದ್ದಾಳಾ?
"ಓಹೋ. ಅವಳೇನು ಒಪ್ಪದೆ?”
"ಸರಿ ಮತ್ತೆ."
“ಬೇರೆಯೂ ಒಂದೆರಡು ವಿಷಯ ಮಾತಾಡ್ಬೇಕು. ಅಂತೂ ಬಂದ್ಬಿಡು."
“ಹೂಂ..."
....ಕಾನಕಾನಹಳ್ಳಿಯಲ್ಲಿ ಶಾನುಭೋಗರ ಮಗಳ ಮದುವೆ ಅದ್ದೂರಿಯಿಂದಲೆ
ಜರಗಿತು. ಮಗಳು ಒಬ್ಬಳೇ ಎಂದು, ಗೋವಿಂದಪ್ಪನವರು ಯಾವುದಕ್ಕೂ ಕಡಮೆ
ಮಾಡಲಿಲ್ಲ. ಉದ್ಯೋಗ ಸಿಗದೇ ಇದ್ದರೂ ಪದವೀಧರನಾಗಿದ್ದ ವರ. ಅನುಕೂಲ

ನವೋದಯ

343

ವಂತರ ಕುಟುಂಬ. ವಧೂವರರ ಜೋಡಿಯನ್ನು ಎಲ್ಲರೂ ಹೊಗಳುವವರೇ.
ಆ ಸಂದರ್ಭದಲ್ಲಿ ಹೆಣ್ಣ ಹೆತ್ತವರ ಕಣ್ಣಿಗೆ ಹೆಚ್ಚಾಗಿ ಬೀಳುತ್ತಿದ್ದವನು ಜಯ
ದೇವ. ಆಸೆಯಿಂದ ಎಷ್ಟು ಕಣ್ಣುಗಳು ಆತನನ್ನು ಕಂಡುವೊ! ಗೋವಿಂದಪ್ಪನವರ
ಮೊದಲ ಮಗ ಎಂದು ಎಲ್ಲರೂ ಆತನೆಡೆಗೆ ಬೊಟ್ಟು ಮಾಡುವವರೇ.
ಸತ್ಯವತಿಯ ಜೊತೆಯಲ್ಲಿ ಒಬ್ಬಳು ಹುಡುಗಿ ಇರುತ್ತಿದ್ದಳು. ಆಗಾಗ್ಗೆ ಅತ್ತಿತ್ತ
ಓಡಾಟವೂ ಆಕೆಯದೇ. ಚೆಲುವೆ. ನೋಡಿದವರೆಲ್ಲ ಕೇಳುವವರೇ:
"ಯಾರ ಮಗಳು ಆಕೆ?"
ಬೆಂಗಳೂರಿನ ಆ ಬೆಡಗುಗಾತಿ -ಶ್ರೀಪತಿರಾಯರ ಮಗಳು ಸುನಂದಾ.
ವೇಣುವೂ ಅಲ್ಲಿದ್ದ. ಶ್ರೀಪತಿರಾಯರೂ ಬಂದಿದ್ದರು.
ಜಯದೇವನಿಗೆ ಆಶ್ರಯವಿತ್ತಿದ್ದ ಅವರು ಬಂದರೆಂದು ಗೋವಿಂದಪ್ಪನವರಿಗೆ
ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ ಅವರ ಹೆಂಡತಿಗೆ ಮಾತ್ರ ಸುನಂದೆಯ 'ಕಾರ
ಭಾರ' ಒಪ್ಪಿಗೆಯಾಗಲಿಲ್ಲ.
"ಚೆಲ್ಲು ಹುಡುಗಿ! ನಾಚಿಕೆ ಇಲ್ಲದ್ದು!" ಎಂದು, ಪಕ್ಕದಲ್ಲಿದ್ದವರೊಡನೆ ಅವರು
ಟೀಕಿಸಿ ನುಡಿದರು.
...ಮದುವೆಯ ಸ೦ಭ್ರಮ ಮುಗಿದು, ಮನೆ ಮೊದಲಿನ ರೂಪಕ್ಕೆ ಮರಳಿದ
ಬಳಿಕ, ಗೋವಿಂದಪ್ಪನವರು ಒಂದು ಸಂಜೆ ಮಗನನ್ನು ಕರೆದರು.
"ನನಗೆ ವಯಸ್ಸಾಗ್ತಾ ಬಂತು ಕಣೋ."
ಶಾನುಭೋಗರ ಕೆಲಸಕ್ಕೆ ಸಂಬಂಧಿಸಿದ ಹಳೆಯ ಮಾತೇ ಇರಬೇಕೆಂದು ಜಯ
ದೇವ ಸುಮ್ಮನಿದ್ದ.
ಮೊದಲ ವಾಕ್ಯದ ಬಳಿಕ ಕೆಲ ನಿಮಿಷ ತಡೆದು ಗೋವಿಂದಪ್ಪನವರು ಎಂದರು:
“ನಿನ್ನದೊಂದು ಮದುವೆ ಆಗ್ಬೇಕೂಂತ ನಿಮ್ಮಮ್ಮ ಹೇಳ್ತಾನೇ ಇದಾಳೆ.”
ಜಯದೇವ ನಸುನಕ್ಕ.
"ಈಗೇನು ಅವಸರ ಅಪ್ಪಯ್ಯ?"
"ಅವಸರವೆ? ನೀನಿನ್ನೂ ಚಿಕ್ಕ ಕೂಸು ಅಂದ್ಕೊಡ್ಯಾ? ಇಪ್ಪತ್ನೂರು ಕಳೀತು
ಆಗಲೇ... "
"ವಿದ್ಯಾಭ್ಯಾಸ ಮುಗಿದು ಕೆಲಸ ಭದ್ರವಾದ್ಮೇಲೆ ಆ ಯೋಚ್ನೆ."
“ಮನೇಲೆ ಉದ್ಯೋಗ ಇರುವಾಗ ನೀನು ಊರೂರು ಅಲಕೊಂಡು ಯಾಕೆ
ಹೋಗ್ಬೇಕೂಂತ?"
"ಅಪ್ಪಯ್ಯ, ಪುನಃ ಹಿ೦ದಿನ ಮಾತು ಎತ್ಬೇಡಿ."
"ಹಾಗಾದರೆ, ನಿಮ್ಮಮ್ನಿಗೆ ನೀನೇ ಸಮಾಧಾನ ಹೇಳು. ಒಬ್ಬಳೇ ಎಷ್ಟೂಂತ
ದುಡೀತಾಳೆ? ಸೊಸೆ ಬೇಗ್ನೆ ಮನೆಗೆ ಬರಲೀಂತ ಹೇಳ್ತಿರೋದು ಅವಳೇನೇ..."
ಒಬ್ಬ ಹುಡುಗಿಯನ್ನು ಕೊರಳಿಗೆ ಕರಿಮಣಿ ಸರ ಬಿಗಿದು ತಂದು ಚಿಕ್ಕಮ್ಮನ
ವಶಕ್ಕೊಪ್ಪಿಸುವ ಕಾಲ್ಪನಿಕ ದೃಶ್ಯ ರುದ್ರವಾಗಿತ್ತು. ತಾನೇ ಅಪರಿಚಿತನಂತಿರುವ ಆ
ಮನೆಯಲ್ಲಿ, ಸುನಂದೆ ಸೊಸೆಯಾಗುವುದನ್ನು ಜಯದೇವ ಚಿತ್ರಿಸಿ, ಕಸಿವಿಸಿಗೊಂಡ.
ದೃಢವಾಗಿದ್ದ ಧ್ವನಿಯಲ್ಲಿ ಆತನೆಂದ:
"ಈ ವಿಷಯದಲ್ಲಿ ನನ್ನನ್ನ ಒತ್ತಾಯಪಡಿಸ್ಲೇಬೇಡಿ ಅಪ್ಪಯ್ಯ.ನನಗೆ ಹಿಂಸೆ
ಯಾಗುತ್ತೆ."
ಗೋವಿಂದಪ್ಪನವರು ತಮ್ಮ ಮೇಲೇಯೆ ತಾವು ಸಿಟ್ಟಾಗಿ ಅಸ್ಪಷ್ಟವಾಗಿ
ಏನನ್ನೊ ಗೊಣಗುತ್ತ ಅಂಗಳಕ್ಕಿಳಿದರು.
ಆ ರಾತ್ರೆ ಜಯದೇವ ಊಟಕ್ಕೆ ಕುಳಿತಾಗ ಆತನ ಚಿಕ್ಕಮ್ಮ ಕುಟುಕು ಮಾತ
ನ್ನಾಡಿದರು.
"ಹುಷಾರಾಗಿರ್ಬೇಕಪ್ಪ ಜಯೂ. ಬೆಂಗಳೂರು. ಮೋಸ ಹೋದೀಯಾ
ಎಲ್ಲಾದರೂ!"
ಇದು ಸುನಂದೆಯ ನಿಮಿತ್ತದಿಂದ ಹೊರಟ ವ್ಯಂಗ್ಯೋಕ್ತಿ ಎಂದು ಸುಲಭವಾಗಿ
ಊಹಿಸಿದ ಜಯದೇವ ಕಿಡಿಕಿಡಿಯಾದ. ಆತ ಉಗುಳು ನುಂಗಿ,ಒಂದು ತುತ್ತು
ಅನ್ನವನ್ನೂ ನುಂಗಿ, ತಟ್ಟೆಯಲ್ಲಿದ್ದುದನ್ನು ಹಾಗೆಯೇ ಬಿಟ್ಟಿದ್ದ.
"ಅಬ್ಬಾ, ಅಹಂಕಾರವೇ!" ಎಂದು ಆತನ ಚಿಕ್ಕಮ್ಮ ರೇಗಾಡಿದರು.
...ಆ ವರ್ಷ ಪರೀಕ್ಷೆಯ ಫಲಿತಾಂಶದ ವಿಷಯದಲ್ಲಿ ಸ್ವಲ್ಪ ಕಾತರನಾಗಿದ್ದ
ವನು ವೇಣು ಒಬ್ಬನೇ. ಚೆನ್ನಾಗಿ ಮಾಡಿದ್ದೆನೆಂಬ ಆತ್ಮವಿಶ್ವಾಸವಿದ್ದರೂ ಏನಾಗು
ವುದೋ ಎಂಬ ಕಳವಳ ಬಾಧಿಸುತ್ತಲೆ ಇತ್ತು. ಕೊನೆಯಲ್ಲಿ ಫಲಿತಾಂಶ ಪ್ರಕಟವಾಗಿ
ದ್ವಿತೀಯ ವರ್ಗದಲ್ಲಿ ಆತ ಉತ್ತೀರ್ಣ ಎಂಬುದು ಗೊತ್ತಾದಾಗ ಶ್ರೀಪತಿರಾಯರ
ಮನೆಯಲ್ಲಿ ಸಂತಸದ ಸುಗ್ಗಿಯಾಯಿತು...
ಜಯದೇವನ ಪಾಲಿಗಿನ್ನು ಎರಡನೆಯ ವರ್ಷದ ಓದು. ವಿಧ್ಯಾರ್ಥಿ ಜೀವನದ
ಕೊನೆಯ ವರ್ಷ ಎಂದರೂ ಸರಿಯೆ.
ಪಾಠ ಹೇಳಿ ದೊರೆತುದನ್ನೆಲ್ಲ ಯಾವಾಗಲೂ ಆತ ವೇಣುವಿನ ತಾಯಿಯ ಕೈಗೆ
ಒಪ್ಪಿಸುತ್ತಿದ್ದ. ಊಟ ಕಾಫಿಗಳಂತೂ ಆ ಮನೆಯಲ್ಲೇ. ಹೊರಗಿನ ಖರ್ಚು ಅಗತ್ಯ
ವಾದಾಗ ವೇಣುವಿನ ಜತೆಯಲ್ಲಿ ಅದು ನಡೆಯುತ್ತಿತ್ತು. ಎಂದಾದರೊಮ್ಮೆ ಅವರು
ಬಟ್ಟೆಬರೆ ಕೊಳ್ಳುತ್ತಿದ್ದುದೂ ಒಟ್ಟಾಗಿಯೇ.
ಹೀಗೆ ಮನೆಯವನೇ ಆಗಿದ್ದ ಜಯದೇವ, ಸುನಂದೆಯೊಡನೆ, ಯಾವ ಅತಿ
ರೇಕಕ್ಕೂ ಅವಕಾಶ ಕೊಡದಂತಹ ಬಾಂಧವ್ಯವನ್ನು ಬೆಳೆಸಿದ್ದ. ಸುನಂದೆಯೊಬ್ಬಳ
ಹೊರತಾಗಿ ಉಳಿದವರೆಲ್ಲ ಈಗಲೂ ಆತನನ್ನು "ಜಯಣ್ಣ" ಎಂದೇ ಕರೆಯುತ್ತಿದ್ದರು.
ಹೆಸರು ಹಿಡಿದು ಕರೆಯುವ ಅವಕಾಶವೇ ಸಿಗದಂತೆ ಜಾಣ್ಮೆಯಿಂದ ವರ್ತಿಸುತ್ತಿದ್ದಳು
ಆಕೆ. ತಮ್ಮಿಬ್ಬರ ಹೊರತಾಗಿ ಯಾರೂ ಇಲ್ಲದ ಸಂದರ್ಭಗಳಲ್ಲಿ ಮೆಲ್ಲನೆ, 'ಜಯ,
ಇದರರ್ಥವೇನ್ರಿ?' 'ಜಯ, ಅದರರ್ಥವೇನ್ರಿ?' ಎಂದು ಕೇಳುತ್ತಿದ್ದಳು. ಅಪ್ಪಿತಪ್ಪಿ

ನವೋದಯ

345

ಸಂಬೋಧನೆ ಏಕವಚನಕ್ಕಿಳಿದಾಗಲಂತೂ ಅನಿರ್ವಚನೀಯ ಆನಂದದ ಅನುಭವ
ಜಯದೇವನಿಗೆ ಆಗುತ್ತಿತ್ತು.
ಮನೆಯೊಳಗೆ ಯಾರೂ ನಿರ್ದಿಷ್ಟವಾಗಿ ಆ ವಿಷಯವನ್ನು ಬಹಿರಂಗವಾಗಿ
ಚರ್ಚಿಸಿರಲಿಲ್ಲವಾದರೂ ಹೊರಗೆ,ಜನ, ನಿಸ್ಸಂಕೋಚವಾಗಿ ಆಡಿಕೊಳ್ಳುತ್ತಿದ್ದರು.
ಸುನಂದೆಯ ತಾಯಿ ಸ್ನೇಹಿತರಲ್ಲಿಗೆ ಹೋದಾಗ, ಮಾತು ಬಂದೇ ಬರುತ್ತಿತ್ತು.
"ಚಿನ್ನದಂಥ ಹುಡುಗ ನೀವೇ ಸಾಕ್ತಾ ಇದೀರಿ. ಮನೆಯಳಿಯನೇ ಅನ್ನಿ!
ಮುದ್ದಿಸಿ ಸಾಕಿದ ಮಗಳಿಗೆ ಯೋಗ್ಯನಾದ ಗಂಡ."
....ವೇಣುವಿನ ತಾಯಿ ಆ ಮಾತನ್ನು ಅಲ್ಲಗಳೆಯುತ್ತಲೂ ಇರಲಿಲ್ಲ, ಪುಷ್ಟೀಕರಿ
ಸುತ್ತಲೂ ಇರಲಿಲ್ಲ.
ವೇಣು ನಾಲ್ಕಾರು ತಿಂಗಳು ಅಲ್ಲಿ ಇಲ್ಲಿ ಅಲೆದ ಬಳಿಕ ಇಂಡಿಯನ್ ಟೆಲಿಫೋನ್
ಇಂಡಸ್ಟ್ರೀಸ್ನಲ್ಲಿ ಕೆಲಸ ದೊರಕಿಸಿದ.
ಸುನಂದಾ ಆಗ ಕೇಳಿದಳು:
"ಅಲ್ಲಿ ಕೆಲಸ ಮಾಡೋರಿಗೆಲ್ಲಾ ಒಂದೊಂದು ಟೆಲಿಫೋನ್ ಕೊಡ್ತಾರಂತೆ,
ಹೌದಾ?"
"ಹೂಂ. ಕೊಡ್ತಾರೆ. ನಿನ್ನ ಗಂಡನ ಜತೆ ಹಳ್ಳಿಗೆ ಹೋದಾಗ ಅದನ್ನು
ತಗೊಂಡು ಹೋಗು. ಅಮ್ಮನ ಜತೆ ದಿನಾ ಮಾತಾಡ್ಬಹುದು."
"ಹೋಗಣ್ಣ. ನಿಜವೇ ಅಂತ ಕೇಳಿದ್ರೆ ಲೇವಡಿ ಮಾಡ್ತಾನೆ."
'ಗಂಡನ ಜತೆ ಹಳ್ಳಿಗೆ'__ಇಂತಹ ಪದಗಳು ಬಂದಾಗಲೆಲ್ಲ ಜಯದೇವ ಸುನಂದೆ
ಯರಿಬ್ಬರ ಮುಖಗಳೂ ಕೆಂಪಡರುತ್ತಿದ್ದುವು.
ಪಾಠ ಪ್ರವಚನಗಳು ಭರದಿಂದಲೆ ಸಾಗಿದುವು. ಆ ವರ್ಷದ್ದು ಪಬ್ಲಿಕ್ ಪರೀಕ್ಷೆ
ಯೆಂದು ಮಾಧುವೂ ಆಸಕ್ತಿಯಿಂದ ಓದುತ್ತಿದ್ದ.ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ
ಸುನಂದೆಯಂತೂ ಪುಸ್ತಕಕೀಟವಾದಳು.
ಒಂದು ದಿನ ವೇಣುವೆಂದ:
"ಓದು ಮುಗಿಯೋದು ಅಂದರೆ ಯಾವುದೋ ಬಂಧನದಿಂದ ಬಿಡುಗಡೆ ಆದ
ಹಾಗೆ. ಡಿಗ್ರಿಯೇನೋ ಬಂತು. ಆದರೆ ನಮಗೆ ತಿಳಿದಿರೋದು ಅತ್ಯಲ್ಪ ಎನಿಸುತ್ತೆ.
ನಿಜವಾದ ಅಧ್ಯಯನ ಶುರುವಾಗೋದು ಲೋಕ ಜ್ಞಾನದ ಜತೆಯಲ್ಲೇ."
ಆಡಿದ ಮಾತಿನಂತೆಯೆ ನಡೆಯುವ ಮನುಷ್ಯ ಆತ. ಉಚಿತ ವಾಚನಾಲಯಕ್ಕೆ
ಹೋಗುವುದರ ಬದಲು ಮನೆಗೇ ದಿನಪತ್ರಿಕೆ ಬಂತು. ಒಳ್ಳೆಯ ಪುಸ್ತಕಗಳೂ ವೇಣು
ವಿನ ಜತೆ ಬರತೊಡಗಿದುವು.
ಜಯದೇವನಿಗೆ ಪ್ರಿಯವಾದ ವಿಷಯವೊಂದಿತ್ತು _ವಿದ್ಯಾಭ್ಯಾಸದ ಸುಧಾರಣೆ.
ಆ ವರ್ಷ ಪ್ರೌಢಶಾಲೆಯವರೆಗೂ ವಿಧ್ಯಾರ್ಥಿಗಳ ಪರೀಕ್ಷೆ ಬೇಗನೆ ಮುಗಿಯಿತು.
44

346

ಸೇತುವೆ

ಮತ್ತೆ, ಜನವರಿಯ ಕೊನೆಯಲ್ಲಿ, ಸರ್ವೋದಯ ದಿನದಂದು ಶಾಲೆ ಆರಂಭ.
"ಇದರಿಂದ ಏನಯ್ಯ ಪ್ರಯೋಜನ?" ಎಂದು ಕೇಳಿದ ವೇಣು.
"ಇದೊಂದು ಪ್ರಯೋಗ. ಮಾಡಿ ನೋಡು ಅನ್ನೊಲ್ವೆ? ಹಾಗೆ."
"ಶಾಲೆ ಶುರುವಾಗೋ ದಿನ ಬದಲಾಯಿಸ್ಬಿಟ್ಟರೆ ಸುಧಾರಣೆಯಾಯ್ತೆ?"
ಆಳುವವರ ಬುದ್ಧಿವಂತಿಕೆಗೇ ಸವಾಲು ಹಾಕುವ ನಿಷ್ಠುರ ಮಾತುಗಳು. ಜಯ
ದೇವ ಹೊಸ ಯೋಜನೆ ಸರಿಯೆ ತಪ್ಪೆ ಎಂದು ತಟಕ್ಕನೆ ಉತ್ತರ ಕೊಡಲು ನಿರಾ
ಕರಿಸಿದ. ಮಾಧ್ಯಮಿಕ ಶಾಲೆಯ ಎಳೆಯ ಹುಡುಗರಿಗೆ ಸಾರ್ವಜನಿಕ ಪರೀಕ್ಷೆ ಇನ್ನಿಲ್ಲ
ಎಂಬುದನ್ನು ಆತ ಸ್ವಾಗತಿಸಿದ್ದ. ರಜಾದಿನಗಳ ಬದಲಾವಣೆಯಿಂದ ಪ್ರಯೋಜನ
ತೋರದೆ ಇದ್ದರೂ ಏನೋ ಬದಲಾಗುತ್ತಿದೆ ಎಂಬ ಭಾವನೆಯನ್ನು ಬೆಳೆಸಲು ಅದು
ಸಹಾಯಕವಾದರೂ ಆಗಬಹುದೆಂದು ಆತ ನಿರೀಕ್ಷಿಸಿದ.
... ಪರೀಕ್ಷೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಗೋವಿಂದಪ್ಪನವರು ಹಾಸಿಗೆ
ಹಿಡಿದಿರುವರೆಂಬ ವಾರ್ತೆ ಬಂತು. ಮಾಧುವಿಗೆ 'ಬಾ' ಎಂದು ಬರೆದಿದ್ದರು ಆತನ
ತಾಯಿ. ಮಾಧು ಅಣ್ಣನನ್ನೂ ಕರೆದ. ಇಬ್ಬರೂ ಕನಕಪುರಕ್ಕೆ ಧಾವಿಸಿದರು.ಆದರೆ
ಭಯಕ್ಕೆ ಕಾರಣವೇನೂ ಇರಲಿಲ್ಲ. ಉರಿಬಿಸಿಲನ್ನು ಲೆಕ್ಕಿಸದೆ ಸ್ವಲ್ಪ ಹೆಚ್ಚಾಗಿ ಹೊಲ
ತೋಟಗಳಲ್ಲಿ ಓಡಾಡಿದರೆಂದು ನೆಗಡಿ-ಜ್ವರ ಅವರನ್ನು ಬಾಧಿಸಿದ್ದುವು. ಮೂರನೆಯ
ದಿನವೆ ಅವರು ಎದ್ದು ಕುಳಿತರು. ಸದ್ಯಃ ಪರೀಕ್ಷೆಗೆ ಕುಳಿತುಕೊಳ್ಳುವುದು ಸಾಧ್ಯ
ವಾಯಿತಲ್ಲ ಎಂದು ಜಯದೇವನಿಗೆ ಸಮಾಧಾನ ಎನಿಸಿತು.
..... ಶ್ರೀಪತಿರಾಯರು ಈಗೀಗ ಹೊಲಗಳ ಕಡೆ ಹೋಗಿ ಬರತೊಡಗಿದರು.
ಮನಸ್ಸಿನಲ್ಲೆ-ಅಥವಾ ಏಕಾಂತದಲ್ಲಿ ಗೃಹಿಣಿಯ ಜತೆಗೂಡಿ-ಮಾಡಿದ್ದ ನಿರ್ಧಾ
ರಕ್ಕೆ ಮಕ್ಕಳ ಸಮ್ಮತಿ ಪಡೆಯುವವರಂತೆ, ಒಮ್ಮೆ ಅವರೆಂದರು:
"ನನ್ನ ಕಾಲದಲ್ಲೇ ಹೊಲದ ಗತಿ ಹೀಗಾಯ್ತು. ಮುಂದೆ ಅದನ್ನು ನೋಡ್ಕೊ
ಳ್ಳೋರು ಯಾರು? ಈ ಹೊಸ ಶಾಸನ ಬಂದ ಮೇಲಂತೂ ನಾವು ಮಾಡೋದು
ಏನೂ ಇಲ್ಲ. ಯಾರಿಗಾದರೂ ಮಾರಿ ಬಿಡೋದೇ ಮೇಲು."
"ಅಷ್ಟೆ. ಬಂದ ಹಣದಿಂದ ಇಲ್ಲೊಂದು ಮನೆ ಕೊಂಡರಾಯ್ತು. ಭೂಮಾಲಿಕರ
ಬದಲು ಮನೆ ಮಾಲಿಕರು ಎನ್ನಿಸ್ಬಿಡೋದು!" ಎಂದ ವೇಣು.
"ಮನೆ ಕೊಳ್ಳೋ ವಿಷಯ ಆ ಮೇಲೆ. ಮೊದಲು ಮಾರೋಣ.
ಏನಂತೀಯಾ?"
"ಹ್ಯಾಗೆ ಸರಿಯೋ ಹಾಗೆ ಮಾಡಣ್ಣ.”
ಬಹಳ ದಿನಗಳ ಮೇಲೆ ಸುನಂದೆಯ ತಾಯಿ ಜಯದೇವನಿಗೆ ಹೇಳಿದರು:
"ನಮ್ಮ ಹೊಲ ಮಾರಿ ನಾಲ್ಕು ಸಾವಿರದ ಇನ್ನೂರು ರೂಪಾಯಿ ಬಂತು
ಕಣೋ."
ಮಾತು ಕೇಳಿಸಿತೆಂಬಂತೆ ತಲೆಯಾಡಿಸಿ ಜಯದೇವ ಸುಮ್ಮನಿದ್ದ.

ನವೋದಯ

347

.....ಪರೀಕ್ಷೆ ಸಮೀಪಿಸಿತು ಎನ್ನುವಷ್ಟರಲ್ಲಿ ಹುಡುಗರು ಮುಷ್ಕರ ಹೂಡಿದರು.
'ಪರೀಕ್ಷೆ ಮುಂದಕ್ಕೆ ಹಾಕಿ' ಎಂದು ಗದ್ದಲ ಮಾಡಿದರು. ಕಲ್ಲುಗಳು ಹಾರಾಡಿದುವು.
ಲಾಠಿಗಳು ಕಾಣಿಸಿಕೊಂಡುವು.
ಒಂದು ತಿಂಗಳ ಕಾಲ ಮುಂದೆ ಬಿತ್ತು ಪರೀಕ್ಷೆ.
"ಒಳ್ಳೆ ಗೋಳು. ಈಗ ಮುಗಿದೇ ಹೋಗಿದ್ದರೆ ವಾಸಿಯಾಗಿತ್ತು," ಎಂದ
ಜಯದೇವ.
"ಹೋಗಲಿ ಬಿಡಿ. ಚೆನ್ನಾಗಿ ಓದ್ಕೊಳ್ಳಿ. ಫಸ್ಟ್ ಕ್ಲಾಸ್ ಬರುವಿರಂತೆ,"
ಎಂದು ಶ್ರೀಪತಿರಾಯರು, ಸುನಂದಾ ಮತ್ತು ಜಯದೇವ ಇಬ್ಬರನ್ನೂ ಉದ್ದೇಶಿಸಿ
ಹೇಳಿದರು.
....ಅಂತೂ ಒಮ್ಮೆ ಪರೀಕ್ಷೆ ಮುಗಿದ ಬಳಿಕ, ಪರ್ವತ ಭಾರವನ್ನು ಭುಜದಿಂದ
ಕೆಳಕ್ಕೆ ಇಳಿಸಿದಂತಾಯಿತು ಜಯದೇವ ಸುನಂದೆಯರಿಗೆ.
ತಾವೂ ಆ ದಿನಕ್ಕೋಸ್ಕರವೇ ಕಾದಿದ್ದರೇನೋ ಎಂಬಂತೆ ಶ್ರೀಪತಿರಾಯರು
ಒಂದು ಸಂಜೆ ಜಯದೇವನೊಬ್ಬನನ್ನೆ ಜತೆಯಲ್ಲಿ ಕರೆದೊಯ್ದರು.
ಅನಂತರದ ಸಂಭಾಷಣೆಯನ್ನು ಜಯದೇವ ನಿರೀಕ್ಷಿಸಿಯೇ ಇದ್ದ.
"ನಿನ್ನ ಮದುವೆಯ ವಿಷಯ ಗೋವಿಂದಪ್ಪನವರು ಏನು ಹೇಳ್ತಿದಾರೆ
ಜಯಣ್ಣ?"
"ಆವತ್ತೆ ಹೇಳಿದೆನಲ್ಲ ಸಾರ್. ಬೇಗ್ನೆ ಮಾಡ್ಕೊ ಅಂತಾರೆ."
"ಫಲಿತಾಂಶ ಬಂದ ತಕ್ಷಣ ಪುನಃ ಉಪಾಧ್ಯಾಯನಾಗ್ತಿ, ಅಲ್ವೆ?"
"ಹೂಂ. ಆ ಹಳ್ಳಿಗೇ ಹೋಗ್ತೀನಿ."
"ಯಾಕೆ, ಹೈಸ್ಕೂಲಲ್ಲಿ ಎಲ್ಲಾದರೂ ಕೆಲಸ ಸಿಗಲಾರದೇನು?"
"ಸಿಗಬಹುದು. ಆದರೂ ಅಲ್ಲಿಗೆ ಹೋಗಿ ಸ್ವಲ್ಪ ದಿನ ಇರಬೇಕೂಂತ ಆಸೆ".
“ಒಂಟಿಯಾಗಿ ಪುನಃ ಅಲ್ಲಿಗೆ ಹೋಗೋದಿಲ್ಲ ತಾನೇ?"
ಎಷ್ಟು ಬೇಡವೆಂದರೂ ಮುಖ ಕೆಂಪೇರಿತ್ತು; ಕತ್ತು ಅಲುಗಿತು.
ಜಯದೇವ ಸುಮ್ಮನಿದ್ದನೆಂದು ಅವರೇ ಮಾತು ಮುಂದುವರಿಸಿದರು.
"ಸುನಂದಾದು ಇಂಟರ್ ಮುಗೀತು. ಮುಂದೆ ಓದೋ ವಿಷಯದಲ್ಲಿ ಕುತೂ
ಹಲವೇನೂ ಇಲ್ಲ ಆಕೆಗೆ. ಏನ್ಮಾಡೋಣಾಂತೀಯ?"
ಒಳ್ಳೆಯ ಸಂದಿಗ್ಧ! ಆತನೆ ಉತ್ತರ ಕೊಡಬೇಕಾದವನು?
"ನಾನು ಹ್ಯಾಗ್ಸಾರ್ ಹೇಳ್ಲಿ ?”
"ನೀನಲ್ದೆ ಇನ್ಯಾರಯ್ಯ ಹೇಳ್ಳೇಕು?"
ಪುನಃ ಮೌನ. ಶ್ರೀಪತಿರಾಯರೇ ಜಯದೇವನನ್ನೊಮ್ಮೆ ದಿಟ್ಟಿಸಿ ಅಂದರು:
"ಯಾಕೆ? ನಮ್ಮ ಹುಡುಗಿಯ ಕೈ ಹಿಡಿಯೋದು ಇಷ್ಟ ಇಲ್ವೋ?"
ಅರಳಿದ ಮುಖವನ್ನು ಮರೆಸಲೆಂದು ತಲೆತಗ್ಗಿಸಿದ ಜಯದೇವ.

348

ಸೇತುವೆ

ಶ್ರೀಪತಿರಾಯರು ನಕ್ಕರು:
"ಇದೊಳ್ಳೇ ನಾಚ್ಕೆ. ಅಥವಾ, ಕೋಪಿಸ್ಕೊಂಡಿದೀಯೊ ಎಲ್ಲಾದರೂ? ಎಲ್ಲಿ,
ಮುಖ ನೋಡೋಣ."
ಜಯದೇವ ತಲೆ ಎತ್ತಿದ.
"ಇಲ್ಲ ಸಾರ್."
"ಹಾಗಾದರೆ ಇನ್ನು ಸಾರ್ ಅನ್ಬೇಡ-ಮಾವ ಅನ್ನು."
ಜಯದೇವ ಮುಗುಳು ನಕ್ಕ, ಹೀಗಿದ್ದರೂ ಹೇಳಬೇಕಾದುದು ತನ್ನ ಕರ್ತವ್ಯ
ಎಂಬಂತೆ ಅವರು ಮತ್ತೂ ಅಂದರು:
"ಇಲ್ಲಿ ದಾಕ್ಷಿಣ್ಯದ ಪ್ರಶ್ನೆ ಇಲ್ಲ ಜಯಣ್ಣ. ನೀನು ಒಪ್ಪಿದರೆ ಅಳಿಯಾಂತ
ಕರೀತೀನಿ. ಇಲ್ಲದೇ ಹೋದರೆ ಮಗ ಅಂತ ಭಾವಿಸ್ತೀನಿ."
ತಾನು ಮಾತನಾಡದೆ ಇರಬಾರದೆಂದು ಜಯದೇವ ನುಡಿದ:
"ಯಾವುದು ಹ್ಯಾಗೇಂತ ನಿಮಗೆ ತಿಳೀದಾ?"
"ಬುದ್ಧಿವಂತಿಕೆಯ ಉತ್ತರ ಕಣೋ. ಹೋಗಲಿ. ನಾಳೆ ಒಳ್ಳೇ ದಿನ. ನಿಮ್ಮೂ
ರಿಗೆ ಹೋಗೋಣ್ವೊ? ಕನ್ಯಾಸೆರೆ ಬಿಡಿಸ್ಕೊಳ್ಳೀಂತ ಪ್ರಾರ್ಥಿಸೋದು ಹೆಣ್ಣು ಹೆತ್ತವರ
ಧರ್ಮ."
"ಪ್ರಾರ್ಥನೆ ಅಂತಲ್ಲ. ನಮ್ಮ ತಂದೇನ ನೀವು ನೋಡೋದರಿಂದ_"
"ಅದಕ್ಕೇ ಕಣಯ್ಯ ಹೋಗೋದು. ಸುನಂದೆಯನ್ನೂ ಕರಕೊಂಡು
ಹೋಗೋಣವೋ?"
"ಬೇಡಿ. ಅವರೆಲ್ಲ ಹೋದ ವರ್ಷವೇ ಆಕೇನ ನೋಡಿದಾರಲ್ಲ."
"ಸರಿ. ಸರಿ."
...ವಿಷಯ ತಿಳಿದಾಗ ಅಡಕತ್ತರಿಯೊಳಗೆ ಸಿಲುಕಿಸಿ ಹಾಗಾಯಿತು ಜಯದೇವನ
ತಂದೆಯ ಪರಿಸ್ಥಿತಿ. ಅವರಾಕೆ ಹೊರಗಿನವರಿಗೂ ಕೇಳಿಸುವಂತೆ ಒಳಗಿನಿಂದಲೇ
ಚೀರಾಡಿದರು. "ಆವತ್ತು ನೋಡಿದರೇನಾಯ್ತು? ತೋರಿಸೋಕೇಂತ ಹುಡುಗೀನ
ಕರಕೊಂಡು ಬರೋದು ಬೇಡ್ವೇನು?" ಎಂದು ಟೀಕಿಸಿದರು. ಆ ಸಂಬಂಧವೇ ತನಗೆ
ಒಪ್ಪಿಗೆ ಇಲ್ಲ ಎಂದರು. ಮಗಳ ಮದುವೆಗೆ ಆದ ವೆಚ್ಚ, ಸೊಸೆ ಬಂದಾಗಲಾದರೂ
ಮರಳಿ ದೊರೆಯಬೇಕೆಂಬುದು ಆಕೆಯ ಅಪೇಕ್ಷೆ.
"ಅದೆಲ್ಲ ದೊಡ್ಡ ವಿಷಯವಲ್ಲ; ಕಾಲಸ್ಥಿತಿಗೆ ಹೊಂದಿಕೊಂಡು ಅದರ ಏರ್ಪಾಟು
ಮಾಡೋಣ," ಎಂದರು, ಹೊಲ ಮಾರಿ ಬಂದಿದ್ದ ಶ್ರೀಪತಿರಾಯರು.
ಗೋವಿಂದಪ್ಪದವರಿಗೇನೋ ಆ ಜೋಡಿ ಒಪ್ಪಿಗೆಯಾಗಿತ್ತು. ಆದರೆ ಸ್ಪಷ್ಟ
ವಾಗಿ ಹಾಗೆ ಹೇಳುವ ಧೈರ್ಯವಿರಲಿಲ್ಲ.
"ಕಾಗದ ಬರೀತೀನಿ," ಎಂದರು.
ಶ್ರೀಪತಿರಾಯರೆಂದರು:

ನವೋದಯ

349

"ಈ ತಿಂಗಳಲ್ಲೇ ಲಗ್ನವಿದೆ. ಮುಗಿಸಿ ಬಿಟ್ಟರೆ ಮೇಲು."
“ಆಗಲಿ. ಆಗಲಿ.”
ಶ್ರೀಪತಿರಾಯರನ್ನು ಬೀಳ್ಕೊಡಲು ಬಸ್ ನಿಲ್ದಾಣಕ್ಕೆ ಬಂದ ಜಯದೇವ
ಹೇಳಿದ:
"ಮನಸ್ಸಿಗೆ ಬೇಸರವಾಯ್ತಲ್ವೆ?"
"ಇದೆಲ್ಲಾ ಸ್ವಾಭಾವಿಕ ಕಣಪ್ಪ.”
"ನಮ್ಮ ತಂದೆ ಒಪ್ಪಿದಾರೇಂತ್ಲೇ ಭಾವಿಸಿ. ಅವರ ಒಪ್ಪಿಗೆ ತಗೊಂಡು ಭಾನು
ವಾರದೊಳಗೆ ಬಂದ್ಬಿಡ್ತೀನಿ."
"ಅಷ್ಟು ಮಾಡು."
"ನಮ್ಮ ಚಿಕ್ಕಮ್ಮ ಮದುವೆಗೆ ಬರದೆ ಇದ್ದರೆ ನೀವು ಬೇಜಾರು ಮಾಡ್ಕೊ
ಬಾರ್‍ದು.”
“ಏನೇನಿಲ್ಲ. ಜನರಿಗೂ ಅಷ್ಟು ಗೊತ್ತಿಲ್ವೆ? ಒಂದು ಮದುವೆಗೇಂತ ಎಲ್ರೂ
ಮನೆ ಬಿಟ್ಟು ಬರೋಕಾಗುತ್ಯೆ?!"
ಆ ಸರಸೋಕ್ತಿ ಕೇಳಿ ಜಯದೇವ ಮುಗುಳುನಕ್ಕ.
...ಕೊನೆಗೆ ನಡೆದುದೂ ಅಷ್ಟೆ. ಗಂಡನ ಮನೆಗೆ ಹೋಗಿದ್ದ ಸತ್ಯವತಿ ಬರುವ
ಪ್ರಶ್ನೆ ಇರಲಿಲ್ಲ. ಮಾಧುವಿನೊಡನೆ ಗೋವಿಂದಪ್ಪನವರು ಬಂದಿಳಿದರು. ನೆರೆದವರ
ದೃಷ್ಟಿಯಲ್ಲಿ ಜಯದೇವ ತಾಯಿ ಇಲ್ಲದ ತಬ್ಬಲಿ. (ಸತ್ಯ ಸಂಗತಿಯೇ.) ವಧುವಿನ
ಕಡೆಯ ನೆಂಟರಿಷ್ಟರಿಗಂತೂ ಲೆಕ್ಕವಿರಲಿಲ್ಲ. ಎಷ್ಟೇ ವೆಚ್ಚವಿಲ್ಲವೆಂದರೂ ಸಾವಿರದೈ
ನೂರು ರೂಪಾಯಿ ಮಟಮಾಯವಾಯಿತು. ಸುನಂದೆ ಜಯದೇವರು ನವದಂಪತಿ
ಯಾದರು.
ಆ ಸಡಗರದ ಕಾವು ಆರುವುದಕ್ಕೆ ಮುನ್ನವೆ ‍ಫಲಿತಾಂಶ ಹೊರಬಿತ್ತು.
ಮೊದಲ ವರ್ಗದಲ್ಲಿ ಉತ್ತೀರ್ಣಳಾಗಿದ್ದಳು ಸುನಂದಾ. ಜಯದೇವ ವೇಣು
ವಿನ ಮೇಲ್ಪಂಗ್ತಿಯನ್ನೆ ಅನುಸರಿಸಿದ್ದ.
ತಾಯಿ ತಂದೆ ಸಮೀಪದಲ್ಲಿ ಇದ್ದುದನ್ನು ಗಮನಿಸದೆ, ಜಯದೇವನ ತೋಳನ್ನು
ಸುನಂದಾ ಚಿವುಟಿದಳು.
"ಆಯ್," ಎಂದ ಜಯದೇವ.
ಆತನ ಅತ್ತೆ ಮಾವ ತಲೆ ಎತ್ತಿದಾಗ, ದಂಪತಿ ದೂರದೂರವಾಗಿ ಗಂಭೀರ
ವಾಗಿಯೇ ನಿಂತಿದ್ದರು. ಆದರೆ, ಅಂತಹ ಆಟ ಆ ಹಳಬರಿಗೇನು ಹೊಸದೆ?
ಜಯದೇವ ಹೇಳಿದ:
"ಇಂಟರ್ನಲ್ಲಿ ಫಸ್ಟ್ ಕ್ಲಾಸ್ ಬರೋದು ಸುಲಭ. ಬಿ.ಎಸ್ ಸೀಲಿ ಹಾಗಲ್ಲ."
"ಗೊತ್ತು ಮಹಾ," ಎಂದಳು ಸುನಂದಾ.
ವೃದ್ಧ ದಂಪತಿ ನಕ್ಕರು.

350

ಸೇತುವೆ

...ಶಾಸ್ತ್ರ ಹಲವು ವಿಷಯ ಹೇಳುತ್ತಿತ್ತು. ಆದರೆ ಪರಿಸ್ಥಿತಿ ಅನುಕೂಲವಿರ
ಬೇಡವೇ? ಆ ಕಾರಣದಿಂದ ಕಾನಕಾನಹಳ್ಳಿಯ ಮನೆ ಸುನಂದೆಯ ಪಾಲಿಗೆ ಪತಿಗೃಹ
ವಾಗಲಿಲ್ಲ. ಅಲ್ಲಿಗೆ ಹೋಗಲೇ ಇಲ್ಲ ಅವರು. ಬದಲು, ಉಪಾಧ್ಯಾಯ ಜಯದೇವ
ನನ್ನು ಇದಿರು ನೋಡುತ್ತಿದ್ದ ಊರಿಗೇ ಅವರು ಹೊರಟರು.
ನಂಜುಂಡಯ್ಯ, ತಿಮ್ಮಯ್ಯ, ಇಂದಿರಾ-ಅಷ್ಟೊಂದು ಜನ ವಿದ್ಯಾರ್ಥಿಗಳು...
ಅವರಿಗೆಲ್ಲ ಆಹ್ವಾನ ಪತ್ರಿಕೆಯನ್ನು ಜಯದೇವ ಕಳುಹಿದ್ದ.
ఆ ಊರಿನ ಪರವಾಗಿಯೆ ಎಂಬಂತೆ, ನಂಜುಂಡಯ್ಯನಿಂದ ಶುಭಾಶಯ
ಬಂದಿತ್ತು.
ಆತ ದುಡಿದಿದ್ದುದು ಒಂದೇ ವರ್ಷವೆಂದು ಅನಂತರದ ಅಧ್ಯಯನದ ಎರಡು
ವರ್ಷ ಸರಕಾರದ ದೃಷ್ಟಿಯಲ್ಲಿ ರಜೆಯಾಗಲಿಲ್ಲ. ಆದರೆ ವಿದ್ಯಾಧಿಕಾರಿ ಆ ಊರಿಗೇ
ಆ ಶಾಲೆಗೇ ಜಯದೇವನನ್ನು ಕಳುಹಲೊಪ್ಪಿದರು.
ಪತ್ನಿಯೊಡಗೂಡಿ ಬೆಂಗಳೂರು ಬಿಡುವ ಹೊತ್ತಿಗೆ ಜಯದೇವನ ತಂದೆ ಮಗ
ನನ್ನು ಬೀಳ್ಕೊಡಲೆಂದು ಬಂದರು.
ದೂರದ ಪಯಣ ಬೆಳೆಸಿದ ఆ ಇಬ್ಬರಿಗೂ ಆಶೀರ್ವಾದದ ಹೊರೆ
ಬೆಂಗಾವಲಿಗಿತ್ತು.



"ಎಷ್ಟು ದೂರ ಇದೆ ಇನ್ನೂ?" ಎಂದು ಸುನಂದಾ ಕೇಳಿದಳು. ಆಕೆಯ ಕಾಲು
ಗಳು ಆಗಲೇ ಸೋತಿದ್ದುವು.
"ಬಂದ್ಬಿಡ್ತು. ಈ ಬೀದೀಲಿ ಹೋಗಿ, ಆ ಓಣಿಗೆ ತಿರುಗಿ, ಸ್ವಲ್ಪ ಮುಂದಕ್ಕೆ
ಹೋದ್ರೆ__"
ಪರಿಹಾಸ್ಯದ ಧ್ವನಿಯಿಂದಲೆ ಜಯದೇವ ಹಾಗೆ ನುಡಿದ.
"ಸಾಕ್ರೀ. ಸುಮ್ನೆ ನಡೆಸ್ತಿದೀರ. ಜಟಕಾದಲ್ಲಾದರೂ ಬರಬಹುದಾಗಿತ್ತು."
“ಯಾಕೆ? ಬೆಂಗಳೂರಿನ ಟಾರು ರಸ್ತೆಗಿಂತ ಇದು ವಾಸಿಯಲ್ವೇನೊ? ಧೂಳು

ಎಷ್ಟೊಂದು ಮೃದುವಾಗಿದೆ ನೋಡು"
"ಹೋಗ್ರೀ,ಪ್ರಾಣ ಹೋಗ್ತಿದ್ರೂ, ತಮಾಷೆಯೇ ನಿಮಗೆ."
ಎರಡೂ ಬದಿಗಳಲ್ಲಿ ಅಲ್ಲಲ್ಲಿ ಬಾಗಿಲ ಬಳಿಗೆ ಬಂದು ಹೆಂಗಸರು, ಹೊಸಬರ
ಆಗಮನವನ್ನು ದಿಟ್ಟಿಸುತ್ತಿದ್ದರು. ಮೊದಲು ಅವರ ಕಣ್ಣಿಗೆ ಬೀಳುತ್ತಿದ್ದುದು ಸೀರೆ;
ಬಳಿಕ ಸೀರೆಯುಟ್ಟಿದ್ದವಳ ಮುಖ; ಅನಂತರ ಆ ಸೀರೆಯನ್ನು ಕೊಂಡುಕೊಟ್ಟ ಗಂಡ_
ಗಂಡಸು. ಜಯದೇವನ ಗುರುತು ಹಿಡಿದವರೂ ಒಬ್ಬಿಬ್ಬರಿದ್ದರು. ಅ೦ಥವರು
ಎರಡನೆಯ ಬಾರಿ, ಭಾಗ್ಯವಂತೆ ಸುನಂದೆಯನ್ನು ಕುತೂಹಲದಿಂದ ನೋಡಿದರು.
ಮತ್ತೂ ಒಂದಷ್ಟು ದೂರ ಮೌನವಾಗಿ ನಡೆದ ಬಳಿಕ ಸುನಂದಾ ಪುನಃ
ಕೇಳಿದಳು:
"ಎಲ್ರೀ ಇದೆ ಆ ಮನೆ?"
"ಇನ್ನೂ ಒಂದು ಮೈಲಾಗುತ್ತೆ," ಎಂದ ಜಯದೇವ.
"ಹೂಂ. ನನ್ಕೈಲಾಗಲ್ಲ ನಡೆಯೋಕೆ."
“ಹಾಗಾದರೆ ಈ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ತಗೊಳ್ಳೋಣ, ಬಾ."
ನಡೆಯುತ್ತಿದ್ದ ಜಯದೇವ ಒಂದು ಮನೆಯ ಮುಂದೆ ನಿಂತ.
"ತಮಾಷೆ ಮಾಡ್ಬೇಡಿ ನೀವು. ಕೂತೇ ಬಿಡ್ತೀನಿ, ನೋಡ್ಕೊಳ್ಳಿ."
"ತಮಾಷೆ ಯಾತಕ್ಕೆ? ಬಾ ಒಳಕ್ಕೆ."
ಪೆಟ್ಟಿಗೆ ಕೆಳಗಿಡೆಂದು ಆಳಿಗೂ ಜಯದೇವ ಹೇಳಿದ.
ಇವರನ್ನೆಲ್ಲ ಕಂಡು ಮನೆಯೊಡತಿ ಬಾಗಿಲ ಬಳಿಗೆ ಬಂದು ಅಂದಳು:
"ಬನ್ನಿ. ಒಳಗ್ಬನ್ನಿ."
ಪಿಸುಗುಟ್ಟುತ್ತ ಸುನಂದಾ ಕೇಳಿದಳು:
“ಯಾರ ಮನೇಂದ್ರೆ ಇದು?"
“ಕರೀತಾ ಇದಾರೆ. ಬಾ ಹೋಗೋಣ."
ಮನೆಯೊಡತಿ ಮತ್ತೂ ಅಂದಳು:
"ಇನ್ನೇನು ಬಂದ್ಬಿಡ್ತಾರೆ. ಒಳಗ್ಬಂದು ಕೈಕಾಲು ತೊಳ್ಕೊಳ್ಳಿ."
"ಇದೇನಾ ನಂಜುಂಡಯ್ಯನವರ ಮನೆ?" ಎಂದಳು ಸುನಂದಾ,ತಾನು ಮೊದಲೇ
ಊಹಿಸದೆ ಬೇಸ್ತುಬಿದ್ದೆ ಎಂದು ಸಂಕಟಪಡುತ್ತ.
ಜಯದೇವ ನಸುನಕ್ಕ.
ಹಳೆಯ ಕಾಲದ ಮನೆ. ಕಿಟಕಿಗಳು ಚಿಕ್ಕವಾಗಿದ್ದರೂ ಗೋಡೆಗಳು ದಪ್ಪಗಿದ್ದು
ಭದ್ರವಾಗಿದ್ದುವು. ಅಲ್ಲಿಯೆ ಇತ್ತು ನಂಜುಂಡಯ್ಯನವರ ಕೊಠಡಿ. ಜಯದೇವನಿಗೆ
ಚೆನ್ನಾಗಿ ನೆನಪಿತ್ತು: ಪುಸ್ತಕಗಳು ತುಂಬಿದ ಬೀರುಗಳೆರಡು. ರಾಜಾ ರವಿವರ್ಮ
ನಿಂದ ಮೊದಲಾಗಿ ಒಂದು ಪಾಶ್ಚಾತ್ಯ ವಕ್ರಕೃತಿಯವರೆಗೆ ಗೋಡೆಯ ಮೇಲೆ ಚಿತ್ರ
ಗಳು. ಬಾಗಿಲಿಗೆ, ಬಣ್ಣ ಬಣ್ಣದ ಗಾಜಿನ ಮಣಿಗಳನ್ನು ಹೊತ್ತಿದ್ದ ತೆಳು ಪರದೆ.
ನಯನಾಜೂಕು ಇಲ್ಲದೆ ಹೋದರೂ ಒಳ್ಳೆಯ ಮರದಿಂದ ಮಾಡಿದ ಮೇಜು
ಕುರ್ಚಿಗಳು...
ಎಲ್ಲವೂ ಹಿಂದಿನಂತೆಯೇ...
“ನೀವು ಸ್ನಾನ ಮಾಡಿ. ಅಷ್ಟೊತ್ತಿಗೆ ಬಂದ್ಬಿಡ್ತಾರೆ," ಎಂದಳು ಮನೆಯ
ಯಜಮಾನಿತಿ.
ಆಳನ್ನು ಕಳುಹಿಕೊಟ್ಟು ಜಯದೇವ ಹೇಳಿದ:
"ಆರೋಗ್ಯವಾಗಿದೀರಾ ಅಮ್ಮ? ಮರೆತು ಬಿಟ್ಟಿರೀಂತ ತೋರುತ್ತೆ."
"ಇಲ್ಲರೀ ಇಲ್ಲ."
ಆರೋಗ್ಯವಾಗಿದೀರಾ? ಎನ್ನುವ ಪ್ರಶ್ನೆಗೆ ಉತ್ತರಕೊಡುವುದನ್ನು ಆಕೆ
ಮರೆತಳು.
"ನೋಡಿ. ಈ ಸಲ ಒಬ್ನೇ ಬಂದಿಲ್ಲ."
“ಸಂತೋಷರಿ. ಇಬ್ಬರೂ ಬರ್ತೀರೀಂತ ಅವರು ಹೇಳಿದ್ದಾರೆ...."
ಸುಮಾರು ಐದು ವರ್ಷದ ಹೆಣ್ಣು ಮಗುವೊಂದು ಲಂಗದ ತುದಿಯನ್ನು
ಚೀಪುತ್ತ ಎದುರು ಬಂದು ನಿಂತಿತು.
“ಈಕೆ ನಿಮ್ಮ ಎರಡ್ನೆ ಮಗಳು ಅಲ್ವೆ? ಹೋದ್ಸಲ ಬಂದಾಗ ಚಿಕ್ಕವಳಾಗಿದ್ಲು.”
"ಹೌದ್ರೀ."
“ದೊಡ್ಡವಳೆಲ್ಲಿ?"
"ಸ್ಕೂಲ್ಗೋಗಿದಾಳೆ. ಇನ್ನು ಸ್ವಲ್ಪೊತ್ನಲ್ಲಿ ಅವಳೂ ಬಂದ್ಬಿಡ್ತಾಳೆ. ಈಗೆಲ್ಲ
ಬೆಳಗ್ಗೇನೇ ಶಾಲೆ ಮಾಡವ್ರೆ."
“ಹೌದು. ಹಾಗೇಂತ ಕೇಳ್ದೆ. ಎಲ್ಲಿ ನಿಮ್ಮ ಅತ್ತೆಯವರು ಕಾಣಿಸ್ತಾ ಇಲ್ವಲ್ಲ?"
ಆ ಪ್ರಶ್ನೆ ಅನಿರೀಕ್ಷಿತವಾಗಿತ್ತೇನೋ ಎಂಬಂತೆ ಆಕೆ ಒಂದು ನಿಮಿಷ
ಅಳುಕಿದಳು.
"ಯಾಕ್ರೀ, ನಿಮಗೆ ಗೊತ್ತೇ ಇಲ್ಲೇನು? ನಮ್ಮ ಅತ್ತೆಯವರು ತೀರ್ಕೊಂಡು
ಆಗಲೇ ಒಂದು ವರ್ಷವಾಯ್ತು."
ಆಕೆಯ ಮಟ್ಟಿಗೆ ಅತ್ತೆಯ ಸಾವು ಬಹು ಮುಖ್ಯ ವಿಷಯವೇ; ಜಯದೇವನಿಗೆ
ಅದು ತಿಳಿಯದೆ ಇರುವುದಂತೂ ಆಶ್ಚರ್ಯದ ಸಂಗತಿಯೇ.
"ಅಯ್ಯೊ ಪಾಪ."
ಅಷ್ಟರಲ್ಲಿ ಹೆಬ್ಬಾಗಿಲಿನಾಚೆ ಬೂಟಿನ ಸಪ್ಪಳ ಕೇಳಿಸಿತು. ಅದರ ಜತೆಯಲ್ಲೆ
ನಂಜುಂಡಯ್ಯನವರ ಸ್ವರವೂ ಬಂತು.
"ಹಲ್ಲೋ, ಅಂತೂ ಬಂದೇ ಬಿಟ್ಟಿರಾ? ಭೇಷ್! ಬಹಳ ಸಂತೋಷ!"
ಆತ್ಮೀಯತೆಯನ್ನು ಸಾರುವ ಹಸ್ತಲಾಘವ.
"ಆರೋಗ್ಯವೆ ಸಾರ್?"
ತನಗಿಂತ ಹಿರಿಯವನೆಂದು ತೋರಿಸಬೇಕಾದ ಗೌರವಕ್ಕೆ ಆ ಸಾರ್ ಪದ ಅಗತ್ಯ
ವಾಗಿತ್ತು.
"ಇಷ್ಟರ ಮಟ್ಟಿಗಿದೀನಿ, ಜಯದೇವ್."
ಸುನಂದೆಯತ್ತ ఒಮ್ಮೆ ನೋಡಿ, ಜಯದೇವನ ಬೆನ್ನಿಗೆ ಸಲಿಗೆಯಿಂದ ಗುದ್ದಿ
ಅವರೇ ಅಂದರು:
"ಸಾಹಸಿ ಕಣ್ರೀ ನೀವು! ಅದ್ಭುತ ಮನುಷ್ಯ! ಹೇಳಿದ ಹಾಗೆ ಮಾಡಿಯೇ
ಬಿಟ್ಟಿರಲ್ಲ!"
"ನೆನಪಿದೆಯೇ ನಂಜುಂಡಯ್ಯನವರೇ? ಹೋದ ಸಾರೆ ಬಂದಿದ್ದಾಗ ಹೇಳಿದ್ರಿ_
ನನ್ನನ್ನು ಕಂಡರೆ ಅಸೂಯೆಯಾಗುತ್ತೇಂತ. 'ಯಾಕೆ' ಅಂತ ನಾನಂದಿದ್ದೆ. 'ನೀವು
ಭಾಗ್ಯಶಾಲಿ. ಒಬ್ಬರೇ ಇದೀರ. ಭುಜಕ್ಕಿನ್ನೂ ನೊಗ ತಗಲಿಸಿಕೊಂಡಿಲ್ಲ,' ಅಂದಿದ್ರಿ.
ಈಗ__"
"ಹೊ ಹ್ಹೋ!" ಎಂದು ನಂಜುಂಡಯ್ಯ ನಕ್ಕರು.
"ನಿಮ್ಮ ಜ್ಞಾಪಕಶಕ್ತಿ ಜೋರಾಗಿಯೇ ಇದೆ," ಎಂದು ಪ್ರಶಂಸೆಯ ಮಾತನ್ನೂ
ಆಡಿದರು.
ಏನೋ ಮರೆತು ಹೋಗಿದ್ದವನಂತೆ ಜಯದೇವ, ಪರಸ್ಪರರ ಪರಿಚಯ ಮಾಡಿ
ಕೊಡುತ್ತ ಅಂದ:
"ಇವರು ನಂಜುಂಡಯ್ಯನವರು; ಇವರು ಸುನಂದಾ."
ನಂಜುಂಡಯ್ಯ ಸುನಂದೆಯರೊಳಗೆ ನಮಸ್ಕಾರ ಪ್ರತಿನಮಸ್ಕಾರಗಳಾದುವು.
"ನಿಮ್ಮ ಜಯದೇವರು ದೊಡ್ಡ ಕ್ರಾಂತೀನೇ ಮಾಡ್ಬಿಟ್ರಮ್ಮ ಈ ಊರಿಗೆ
ಬಂದು. ಅವರು ಇಲ್ಲಿದ್ದ ಒಂದು ವರ್ಷ_ಅಬ್ಬ! ನೆನಸಿಕೊಂಡರೆ ಈಗಲೂ ಮೈ
ಮುಳ್ಳಾಗುತ್ತೆ."
"ಇದು ಹೊಗಳಿಕೇನಾ ತೆಗಳಿಕೇನಾ, ಸಾರ್?" ಎಂದು ಜಯದೇವ ಕೇಳಿದ.
"ಇದರಲ್ಲಿ ವಿನಯದ ಮಾತೇ ಇಲ್ಲ ಜಯದೇವ್. ನೀವು ಮಾಡಿದ್ದೇ
ಉಂಟಂತೆ, ನಾನು ಹೇಳೋದೇನು ದೊಡ್ಡ ವಿಷಯ?"
"ಹಾಗಾದರೆ, ಈ ಊರಲ್ಲಿದ್ದು ನಿಮಗೆಲ್ಲ ತೊಂದರೆ ಕೊಟ್ಟೆ ಅನ್ನಿ!"
"ಛೆ! ಛೆ! ಉಂಠೆ ಎಲ್ಲಾದರೂ? ತೊಂದರೆ ಕೊಟ್ಟೋರು ಬೇರೆ ಜನ. ಅವ
ರೆಲ್ಲಾ ಇಲ್ಲಿಂದ ಹೊರಟೂ ಹೋದ್ರು."
ಇನ್ನು ಆರಂಭವಾಯಿತು ಎಂದುಕೊಂಡ ಜಯದೇವ. ಆದರೆ, ಈಗ ಆತನಿಗೆ
ಸಾಕಷ್ಟು ಅನುಭವವಿತ್ತು. ವ್ಯಕ್ತಿಗಳ ಪರಿಚಯವಿತ್ತು. ಮಾತು ಮಾತಿಗೂ ಮುಖ
ಬಾಡಿಸಿ ಬೇಸರಪಡಬೇಕಾದ ಅಗತ್ಯವಿರಲಿಲ್ಲ.
ಆತ ಕೇಳಿದ:
"ನನ್ನ ಕಾಗದ ಆಗಲೆ ಬಂತಲ್ವೆ?"
"ಒಂದಲ್ಲ, ಎರಡು ಕಾಗದ."
“ಎರಡು?”
"ಹೂ೦. ಒಂದನ್ನ ನಂಜುಂಡಯ್ಯನವರಿಗೆ ಬರೆದಿದ್ರಿ. ಇನ್ನೊಂದನ್ನ
ಮುಖ್ಯೋಪಾಧ್ಯಾಯರಿಗೆ."

45

354

ಸೇತುವೆ

"ಹೌದು."
"ಅರ್ಥವಾಗ್ಲಿಲ್ವೇನ್ರಿ ಇನ್ನೂ? ಎರಡೂ ನನಗೇ ಬ೦ದುವು."
"ಓ!"
ನಂಜುಂಡಯ್ಯನವರೇ ಮುಖ್ಯೋಪಾಧ್ಯಾಯರಾಗಿದ್ದರು ಹಾಗಾದರೆ. ಜಯ
ದೇವನ ಮುಖದ ಮೇಲೆ ಆಶ್ಚರ್ಯದ ಹೊಳಪನ್ನು ಕಂಡರೂ ನಂಜುಂಡಯ್ಯ
ಕೇಳಿದರು:
"ಸಪ್ಪಗಿದೀರಲ್ಲ? ವೆಂಕಟರಾಯರು ಹೋದರೂಂತ ವ್ಯಥೆಯೋ?"
ಜಯದೇವ ನಕ್ಕ.
"ಒಳ್ಳೇ ಮಾತು!"
"ಅವರಿಗೆ ಒಂದು ಕೈ ತೋರಿಸೋಣಾಂತ್ಲೇ ನೀವು ಬಂದಿದೀರಿ. ಇಲ್ಲಿ ನೋಡಿದ್ರೆ
ಆ ಆಸಾಮೀನೇ ಇಲ್ಲ!"
"ಹಾಗೇನಿಲ್ಲವಪ್ಪ. ಊರು ಇಷ್ಟವಾಯ್ತೂಂತ್ಲೇ ಬಂದೆ."
"ಹ ಹ್ಹ! ಅಂತೂ ಬಂದಿರಲ್ಲ!"
ನಂಜುಂಡಯ್ಯ ಒಳ ಹೋಗಿ ಉಡುಪು ಬದಲಾಯಿಸಿದರು. ಮಲ್ಲಿನ ಪಂಚೆ,
ತೆಳ್ಳನೆಯ ಜುಬ್ಬ...
"ನೀವು ಮದುವೆ ಮಾಡ್ಕೊಂಡ ಮೇಲೂ ಉಡುಗೆ ತೊಡುಗೆ ಹಿಂದಿನ ಹಾಗೇ
ಇದೆಯಲ್ಲ. ಏನ್ರಿ ಇದು? ಪಾಯಜಾಮ ತೊಟ್ಕೊಂಡು ಯಾವಾಗಲೂ ಹುಡುಗನ
ಹಾಗೇ ಇರೋಣ ಅಂತಲೋ?" ಎಂದು ನಂಜುಂಡಯ್ಯ ಹೊರ ಬಂದು ಜಯದೇವ
ನನ್ನು ನೋಡುತ್ತ ಅಂದರು.
"ಒಬ್ಬೊಬ್ಬರಿಗೆ ಒಂದೊಂದು ರೀತಿ ಬಟ್ಟೆ ಇಷ್ಟವಾಗುತ್ತೆ. ಅಲ್ವೆ?" ಎಂದ
ಜಯದೇವ.
"ನಿಮ್ಮದು ಯಾವಾಗಲೂ ವಿಚಿತ್ರವಾಗಿಯೇ ಇರಬೇಕಲ್ರಿ. ಮನುಷ್ಯನ
ಹಾಗೆಯೇ ಉಡುಪು."
ಶಾಲೆಯಿಂದ ಓಡುತ್ತ ಬಂದ ದೊಡ್ಡ ಮಗಳನ್ನು ನೋಡಿ ಅವರೆಂದರು:
"ಒಳಗೆ ಹೋಗಿ ಸ್ನಾನಕ್ಕೆ ನೀರು ಕಾದದೇನೊ ನೋಡು."
"ದೊಡ್ಡ ಮಗಳಲ್ವೆ? ಯಾವ ಕ್ಲಾಸು?" ಎಂದು ಜಯದೇವ ಕೇಳಿದ.
ಆ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನೇನೂ ತೋರದೆ ಅವರು ಉತ್ತರ
ವಿತ್ತರು:
"ಮಾಧ್ಯಮಿಕ ಎರಡನೆಯ ವರ್ಷ."
"ಅಂದಹಾಗೆ ನಿಮ್ಮ ಚಿಕ್ಕ ತಮ್ಮ ವಿರೂಪಾಕ್ಷ ಎಲ್ಲಿ? ಬೆಂಗಳೂರಲ್ಲೆ ಹೈಸ್ಕೂಲು
ಓದ್ತೀನಿ ಅಂತಿದ್ದ."
"ವಿರೂಪಾಕ್ಷನೆ? ದಾವಣಗೆರೆಯ ಒಬ್ಬರು ಅತನನ್ನ ದತ್ತಕ್ಕೆ ತಗೊಂಡ್ರು. ಈಗ

ನವೋದಯ

355

ಅವರ ಮನೇಲೆ ಇದ್ದು ಓದ್ತಿದಾನೆ."
"ಹಾಗೇನು?”
ನೀರು ಕಾದಿದೆ- ಎಂದು ವರದಿ ಕೊಟ್ಟಳು, ಹುಡುಗಿ ಬಂದು. ಚಾಪೆಯ
ಮೇಲೆ ಕುಳಿತಿದ್ದ ಜಯದೇವ ಸುನಂದೆಯರನ್ನು ಸಂಕೋಚ ಪಡುತ್ತ ಆಕೆ
ನೋಡಿದಳು.
“ಏಳಿ, ಸ್ನಾನಮಾಡಿ," ಎಂದರು ನಂಜುಂಡಯ್ಯ.
ಎಳ್ಳಿನಷ್ಟು ಸಂದೇಹವೂ ಇರಬಾರದೆಂದು ಅವರೇ ನಗುತ್ತ ಅಂದರು:
"ನಿಮ್ಮ ಹೆಂಡತಿಯನ್ನೂ ಇಷ್ಟರಲ್ಲೆ ನಿಮ್ಮ ಜಾತಿಗೆ ಸೇರಿಸ್ಕೊಂಡಿದೀರಿ ತಾನೆ?
ಊಟ ಉಪಚಾರ... "
ಸುನಂದೆಗೆ ಅದರ ಅರ್ಥ ಹೊಳೆಯುವುದು ಅರೆಕ್ಷಣ ತಡವಾಯಿತು. ಜಯ
ದೇವ ಮಾತ್ರ ಅಂಗೈ ಬೀಸಿ ಅಂದ:
"ಓಹೋ! ಆ ವಿಷಯದಲ್ಲಿ ಯಾವ ಯೋಚ್ನೇನೂ ಮಾಡ್ಬೇಡಿ."
"ಕೇಳುವ ಅಗತ್ಯವೇ ಇರ್ಲಿಲ್ಲ. ನಿಮ್ಮ ಜೋಡಿ ನೋಡಿದರೆ ಗೊತ್ತಾಗೊಲ್ವೆ?
ಆದರೂ ಸಂಶಯ ಯಾತಕ್ಕೇಂತ__"
"ಸರಿ, ಸರಿ."
ಮನೆಯ ಯಜಮಾನಿತಿ ಬಾಗಿಲಬಳಿ ಕಾಣಿಸಿಕೊಂಡಳು.
"ನಿಮಗೆ ಕುಡಿಯೋಕೆ ನೀರು ಬೇಕೆ?"
ಗಂಡನಿಲ್ಲದೆ ಇದ್ದಾಗ ಸ್ಪಷ್ಟವಾಗಿ ಕೇಳಿಸುತ್ತಿದ್ದ ಸ್ವರ ಈಗ ಕ್ಷೀಣವಾಗಿತ್ತು.
“ಎಲಾ ಇವಳ! ಇನ್ನೂ ಕುಡಿಯೋಕೆ ನೀರು ಕೂಡಾ ಕೊಟ್ಟಿಲ್ವೇನು?"ಎಂದು
ನಂಜುಂಡಯ್ಯ ಗುಡುಗಿದರು.
"ನಾವು ಬರೋದಕ್ಕೂ ನೀವು ಬರೋದಕ್ಕೂ ಹೆಚ್ಚು ಕಡಮೆ ಸರಿ ಹೋಯ್ತು,"
ಎ೦ದು ಜಯದೇವ ಸಮಾಧಾನಪಡಿಸುವ ಮಾತನ್ನಾಡಿದ.
ಬಳಲಿದ ಸುನಂದೆಗೆ ನೀರು ಬೇಕಾಗಿತ್ತು. ಎರಡು ಲೋಟ ಕುಡಿದು ಆಕೆ
ದಣಿವಾರಿಸಿಕೊಂಡಳು.
ಸುನಂದೆ ಸ್ನಾನಕ್ಕೆ ಹೋದಬಳಿಕ ನಂಜುಂಡಯ್ಯ ಒಮ್ಮೆಲೆ ಅಂದರು:
"ನಾನು ಕೇಳೋದು ಮರೆತ್ಬಿಟ್ಟೆ. ಮನೆ ಸಾಮಾನೆಲ್ಲ ಎಲ್ಲಿಟ್ಟಿದೀರಿ?"
ಎಲ್ಲಿ ಎಂಬುದನ್ನು ಜಯದೇವ ತಿಳಿಸಿದ. ಅದಕ್ಕೆ ಅವರೆಂದರು:
"ಪರವಾಗಿಲ್ಲ. ಆದರೂ ಇಲ್ಲಿಗೇ ತರಿಸ್ಬಿಡೋದು ವಾಸಿ. ಸ್ಕೂಲು ಜವಾನನಿಗೆ
ಹೇಳಿ ಕಳಿಸ್ತೀನಿ."
ವೆಂಕಟರಾಯರಿಗೇನಾಯ್ತೆಂದು ತಿಳಿಯುವ ಕುತೂಹಲ ಜಯದೇವನಿಗೂ
ಇತ್ತು. ಹೊರಕ್ಕೆಳೆದು ತಂದ ಎರಡು ಕುರ್ಚಿಗಳ ಮೇಲೆ ಇಬ್ಬರೂ ಕುಳಿತ ಬಳಿಕ,
ನಂಜುಂಡಯ್ಯ ತಾವಾಗಿಯೇ ಆ ವಿಷಯ ಪ್ರಸ್ತಾಪಿಸಿದರು.

356

ಸೇತುವೆ

"ಆವತ್ತು ನಾನು ನಿಮ್ಮ ಪಕ್ಷ ವಹಿಸ್ಲಿಲ್ಲಾಂತ ನಿಮಗೆ ಬೇಜಾರಾಗಿರ್ಬೇಕು,
ಅಲ್ವೆ ಜಯದೇವ್?"
"ಹಾಗೇನಿಲ್ಲ ಸಾರ್. ನೀವಾದರೂ ಏನು ಮಾಡೋಕೆ ಆಗ್ತಿತ್ತು? ಇದ್ದಿದ್ರಲ್ಲೂ
ಕಟ್ಟಕಡೇಲಿ ನಾಲ್ಕು ಒಳ್ಳೇ ಮಾತಾಡ್ದೋರು ನೀವೇ."
ಜಯದೇವನ ಈ ಉತ್ತರ ಕೇಳಿ ಎಷ್ಟೋ ಹಾಯೆನಿಸಿತು ನಂಜುಂಡಯ್ಯ
ನವರಿಗೆ.
“ಎಂಥ ಘಾಟೀ ಮುದುಕ ಅಂತೀರಾ ಆ ಆಸಾಮಿ? ಗುರುದಕ್ಷಿಣೆ ಸುಲಿದದ್ದೇ
ಸುಲಿದದ್ದು. ಲೋಯರ್ ಸೆಕೆಂಡರಿ ಪರೀಕ್ಷೆ ಹೋದ್ಮೇಲಂತೂ ಅವರ್‍ನ ಹಿಡಿಯೋರೇ
ಇಲ್ಲ. ಮಾತೆತ್ತಿದರೆ ಫೀಸು. ಹುಡುಗರ ಕೈಲಿ ಬಿಟ್ಟಿ ಬೇಗಾರಿ ಮಾಡಿಸೋದಕ್ಕಂತೂ ಲೆಕ್ಕವೇ ಇರಲಿಲ್ಲ. ಊರಿನಲ್ಲಿ ಒಳಜಗಳ ಹುಟ್ಟಿಸೋದಕ್ಕೆ ಮಿತಿ ಇರ್‍ಲಿಲ್ಲ.
ಸಾಕಾಯ್ತಪ್ಪ!"
“ಆಮೇಲೆ?"
"ಆಮೇಲೇನು? ಹಾರಾಟಕ್ಕೂ ಒಂದು ಕೊನೆ ಬೇಡ್ವೆ? ಸೂಕ್ಷ್ಮವಾಗಿ ಹೇಳಿ
ದ್ದಾಯ್ತು. ನಾಟಲಿಲ್ಲ. ಒಂದು ದಿನ ಸ್ಪಷ್ಟವಾಗಿಯೂ ಹೇಳ್ದೆ. ಊಹೂಂ.
ಕಡೆಗೆ ಇದ್ದೇ ಇದೆಯಲ್ಲ-ಶಂಕರಪ್ಪ ಮದ್ದು ಅರೆದ್ರು."
ಮೂರು ವರ್ಷಗಳಿಗೆ ಹಿಂದೆಯೂ ಶಂಕರಪ್ಪ ಮದ್ದು ಅರೆದಿದ್ದರು, ಸಾತ್ವಿಕ
ರಂಗರಾಯರಿಗೋಸ್ಕರ. ಈಗ ನಿಜವಾದ ರೋಗಿಗೋಸ್ಕರವೂ ಅವರು ಮದ್ದು
ಅರೆದರು...
"ಹೀಗೆಲ್ಲಾ ఆಯ್ತೆ?"
"ಹೂ೦. ಅಂತೂ ಕಳೆದ ಆಗಸ್ಟ್ನಲ್ಲಿ ಅವರಿಗೆ ವರ್ಗವಾಯ್ತು."
"ಎಲ್ಲಿಗೆ?"
"ಆಹ್ಹಾ! ಅದನ್ನು ಕೇಳಿ. ತಪ್ಪು ಮಾಡಿದವರ್‍ನ ಕೊಪ್ಪಕ್ಕೆ ಹಾಕ್ತಾರೆ ಅನ್ನೋ
ಒಂದು ಗಾದೆ ಗೊತ್ತು ತಾನೆ?"
"ಹೂಂ.ಬಹಳ ದೂರಕ್ಕೆ ವರ್ಗವಾಯ್ತೆನೊ?"
"ದೂರಕ್ಕೇನು, ಕೊಪ್ಪದ ಊರಿಗೇ! ಆ ಮನುಷ್ಯನ ವಿಷಯದಲ್ಲಿ ಗಾದೆ
ಅಕ್ಷರಶಃ ನಿಜವಾಗಿ ಹೋಯ್ತು."
"ಆ ಕೊಪ್ಪದಿಂದಲೂ ಮೈಸೂರಿನ ಡಾಕ್ಟರಿಗೂ ಬೆಂಗಳೂರಿನ ಲಾಯರಿಗೂ
ಅವರು ಗಿರಾಕಿ ಕಳಿಸೋದಿಲ್ಲಾ೦ತ ಏನು ಭರವಸೆ?"
"ಅದೆಲ್ಲಾ ನಿಮಗೆ ನೆನಪಿದೆ ಹಾಗಾದರೆ!"
"ಹ್ಯಾಗೆ ಮರೆಯೋಕಾಗುತ್ತೆ ಹೇಳಿ?"
ಒಳ ಬಾಗಿಲ ಕಡೆ ನೋಡಿ ಸ್ವಲ್ಪ ಸ್ವರ ತಗ್ಗಿಸಿ ನಂಜುಂಡಯ್ಯ ಎಂದರು:
"ಮೊನ್ನೆ ಆ ಇಂದಿರಾನ ತಾಯಿ ಸಿಕ್ಕಿದ್ಲು. ಇನ್ನೂ ಆ ಹುಡುಗಿಗೆ ಮದುವೆ

ನವೋದಯ

357

ಇಲ್ಲ. ಚಿಕ್ಕ ವಯಸ್ಸೂಂತ ಇಟ್ಕೊಳ್ಳೋಣ. ಇಲ್ಲೇ ಒಂದು ಹೈಸ್ಕೂಲಿದ್ದಿದ್ರೆ
ಮಗಳ್ನ ಓದಿಸ್ಬಹುದಾಗಿತ್ತು, ಅಂದ್ಲು. ಆಮೇಲೆ ಟೀಚರ್ ಕೆಲಸಾನೋ ಅದೋ
ಇದೋ-"
ಆ ಪ್ರಸ್ತಾಪ ಜಯದೇವನಿಗೆ ಅಪ್ರಿಯವೆನಿಸಲಿಲ್ಲ. ಆದರೆ ಸ್ವರ ತಗ್ಗಿಸಿ
ನಂಜುಂಡಯ್ಯ ಮಾತನಾಡಿದುದು ಆತನಿಗೆ ತಮಾಷೆಯಾಗಿ ತೋರಿತು. ಗಟ್ಟಿ
ಯಾಗಿಯೆ ಆತನೆಂದ:
"ಆ ಇಂದಿರೇನ ತೋರಿಸ್ಕೊಡ್ತೀನೀಂತ ನನ್ನ ಹೆಂಡತಿಗೆ ಬೇರೆ ಹೇಳಿದೀನಪ್ಪ.
ಇಬ್ಬರೂ ಬಂದಾಗ ಊಟಕ್ಕೆ ಬರಬೇಕೂಂತಲೂ ಆವತ್ತೆ ಕರೆದಿದಾರೆ."
"ಓಹೋ. ನಿಮ್ಮ ಮನೆಯವರಿಗೆ ಪ್ರತಿಯೊಂದು ವಿಷಯವೂ ತಿಳಿಸಿಬಿಟ್ಟಿ ದೀರಿ ಹಾಗಾದರೆ."
"ನಮ್ಮೊಳಗೆ ಮುಚ್ಚುಮರೆ ಹ್ಯಾಗೆ ಸಾಧ್ಯ?"
ನಂಜುಂಡಯ್ಯ ಸುನಂದೆಯ ವಿದ್ಯಾಭ್ಯಾಸದ ವಿಷಯವಾಗಿ ಪ್ರಶ್ನಿಸಿದರು. ಪದ
ವೀಧರೆಯೇ ಎಂಬ ಅವರ ಊಹೆ ಸುಳ್ಳಾಗಿತ್ತು. ಆದರೂ ಅತೃಪ್ತಿಗೆ ಅವಕಾಶ
ವಿರಲಿಲ್ಲ.
"ವಿದುಷಿಯಾದ ಹೆಂಡತಿ. ಅನುಕೂಲೆ. ಇನ್ನೇನ್ರಿ ಬೇಕು? ನಮ್ಮನೇಲಿ
ನೋಡಿದಿರೋ ಇಲ್ಲವೋ. ಓದೋಕೆ ಬಂದರೂ ಪುಸ್ತಕ ಮುಟ್ಟೋದಿಲ್ಲ.
ಏನ್ಹೇಳ್ತೀರಾ?"
“ಆದರೆ ಅವರ ಲೋಕಾನುಭವ ಈಗಿನ ಹುಡುಗೀರಿಗೆ ಎಲ್ಲಿ ಬರಬೇಕು?"
ನಂಜುಂಡಯ್ಯನಿಗೆ ಮನಸ್ಸಮಾಧಾನವಾಗಲೆಂದು ಹೇಳಿದ ಮಾತು.
"ಲೋಕಾನುಭವಕ್ಕೇನ್ರಿ? ಎರಡು ಹೆತ್ಮೇಲೆ ತಾನಾಗಿಯೇ ಎಲ್ಲಾ ಅನುಭವವೂ
ಬರುತ್ತೆ."
ಅದೇ ಕೊನೆಯ ಅಭಿಪ್ರಾಯವೆಂಬಂತೆ ಕೈಯಲ್ಲಾಡಿಸಿದರು ನಂಜುಂಡಯ್ಯ.
ಗಂಡಸರ ಸ್ನಾನವೂ ಮುಗಿದ ಬಳಿಕ ಅವರೆಲ್ಲ ಊಟಕ್ಕೆ ಕುಳಿತರು. ಒಂದು
ಸಾಲಿನಲ್ಲಿ ಜಯದೇವ ಮತ್ತು ಸುನಂದಾ. ಅದಕ್ಕೆ ಅಡ್ಡವಾಗಿ ನಂಜುಂಡಯ್ಯ ಮತ್ತು
ಮಕ್ಕಳು.
ಚಿಕ್ಕವಳನ್ನು ಕುರಿತು ನಂಜುಂಡಯ್ಯ ಹೇಳಿದರು:
"ಹೊಸ ಮುಖ ಅಂತ ಸುಮ್ನಿದಾಳೆ ಪೋರಿ. ಇಲ್ದೇಹೋದ್ರೆ ಕೇಳ್ಬೇಡಿ
ಆಕೆಯ ತುಂಟತನ. ಸಾಕಪ್ಪಾ ಅನಿಸಿ ಹೋಗುತ್ತೆ."
"ಈ ವಯಸ್ನಲ್ಲಿ ತುಂಟತನ ಸ್ವಾಭಾವಿಕ," ಎಂದ ಜಯದೇವ. ಸುನಂದೆಯ
ಕಡೆಗೆ ತಿರುಗಿ, "ಅಲ್ವಾ?" ಎಂದೂ ಕೇಳಿದ.
"ಅವರನ್ನೇನು ಕೇಳ್ತೀರಿ, ಪಾಪ!" ಎಂದು ನಂಜುಂಡಯ್ಯ ನಕ್ಕರು.
ಸುನಂದೆಯ ಮುಖ ಕೆಂಪಗಾದರೂ ಆಕೆ ಮುನಿದುಕೊಳ್ಳಲಿಲ್ಲ.

358

ಸೇತುವೆ

ಆ ಊಟದ ಮನೆಗೆ ಸಂಬಂಧಿಸಿದ ಹರಟೆಯ ನೆನಪುಗಳು ಮರುಕಳಿಸಿದಂತೆ
ಜಯದೇವನೆಂದ:
"ಹಿಂದಿನ ಸಾರೆ ಊಟಕ್ಕೆ ಕೂತಾಗ, ಇವರು ಹೊಸ್ಮೇಸ್ಟ್ರು ಅಂತ ನಿಮ್ಮವ್ವನಿಗೆ
ಪರಿಚಯಮಾಡ್ಕೊಟ್ಟಿದ್ರಿ.
"ಹೌದು...ನಿಮಗೆ ಗೊತ್ತಾಗಿರ್ಬೇಕು, ಅಲ್ವೆ?"
"ಇಲ್ಲಿಗೆ ಬಂದ್ಮೇಲೆ ತಿಳೀತು."
"ಸಾಯೋ ಕಾಲಕ್ಕೆ ಅವ್ವ ದೊಡ್ಡಣ್ಣನ ಮನೇಲಿದ್ಲು."
ಆ ಮನೆಯ ಇನ್ನೊಂದು ಭಾಗದಲ್ಲೆ ವ್ಯಾಪಾರಿ ದೊಡ್ಡಣ್ಣ ವಾಸವಾಗಿದ್ದುದು.
"ಏನಾಗಿತ್ತೊ?"
"ನೆಪಕ್ಕೊಂದು ಕಾಹಿಲೆ. ಮುಖ್ಯ ವೃದ್ಧಾಪ್ಯ. ಕೊನೇ ಘಳಿಗೇಲಿ ಎಲ್ಲಾ
ಗಂಡುಮಕ್ಕಳೂ ಪಕ್ಕದಲ್ಲೇ ಇದ್ವಿ.
"ವಯಸ್ಸಾಗಿತ್ತು ಅಲ್ವೆ?"
"ಎಪ್ಪತ್ತೆರಡಾಗಿತ್ತು."
"ಸರಿ."
ಊಟದ ಹೊತ್ತಿನಲ್ಲಿ ತಾನು ಆ ಮಾತೆತ್ತಿದುದು ತಪ್ಪಾಯಿತೆನಿಸಿತು ಜಯದೇವ
ನಿಗೆ, ಆದರೆ ಅಷ್ಟರಲ್ಲೆ ನ೦ಜು೦ಡಯ್ಯ, ಅಡುಗೆ ಮನೆಯ ಬಾಗಿಲಿಗೆ ಆತುಕೊಂಡು
ಮೌನವಾಗಿ ನಿಂತಿದ್ದ ತಮ್ಮ ಹೆಂಡತಿಯನ್ನುದ್ದೇಶಿಸಿ ಲವಲವಿಕೆಯಿಂದ ಅಂದರು:
"ಯಾಕ್ನಿಂತಿದೀಯಾ? ನೀಡು-ಇನ್ನೂ ಅಷ್ಟು ನೀಡು. ಬೆಂಗಳೂರೋರ್‍ಗೆ
ಸಂಕೋಚ ಜಾಸ್ತಿ . ಅದೂ ಮದುವೆಯಾದ ಹೊಸತಿನಲ್ಲಿ-
ಮಾತನ್ನು ಅಲ್ಲಿಗೇ ತಡೆದು ನಿಲ್ಲಿಸಿ ಪುನಃ ಅವರೇ ಅಂದರು:
"ನಿಮ್ಮ ಮನೆಯವರಂತೂ ಮಾತೇ ಆಡೋದಿಲ್ಲ."
ಜಯದೇವ ಸುನಂದೆಯ ಕಡೆಗೆ ತಿರುಗಿದ. ಆ ಸೂಚನೆಯ ಅಗತ್ಯವೇ ಇಲ್ಲ
ವೆಂಬಂತೆ ಸುನಂದಾ ತಾನಾಗಿಯೇ ಮಾತನಾಡಿದಳು:
“ಹಾಗೇನೂ ಇಲ್ಲ. ಸಂಕೋಚ ಎಲ್ಲೀದು?"
“ಅಂದ್ಮೇಲೆ ಕೇಳಿ ಹಾಕಿಸ್ಕೊಳ್ಳಿ," ಎ೦ದರು ನಂಜುಂಡಯ್ಯ.
“ಹೂಂ."
ಊಟದ ಅಂತಿಮ ಘಟ್ಟದಲ್ಲಿ ಮನೆಯ ವಿಷಯಕ್ಕೆ ಮಾತು ಹೊರಳಿತು.
"ಅವ್ವ ತೀರ್ಕೊಂಡ ಎರಡು ತಿಂಗಳಲ್ಲೇ ದೊಡ್ಡಣ್ಣ ಮನೆ ಖಾಲಿ ಮಾಡಿದ.
ಈಗ ಅಂಗಡಿ ಮನೆ ಎರಡೂ ಜತೇಲೆ ಇವೆ. ನೀವು ಬರ್‍ತೀರಿ ಅನ್ನೋದು ಎರಡು
ತಿಂಗಳು ಮುಂಚೆಯೇ ಗೊತ್ತಾಗಿದ್ದಿದ್ರೆ ಹಾಗೇ ಇಡಿಸ್ತಾ ಇದ್ದೆ. ಈಗ ಯಾರೋ
ಒಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದಾನೆ."
ಒಳ್ಳೆಯದೇ ಆಯಿತು ಎಂದುಕೊಂಡ ಜಯದೇವ. ನಂಜುಂಡಯ್ಯನ ಜತೆ
ಯಲ್ಲೆ ಒಂದೇ ಆವರಣದೊಳಗೆ ವಾಸ ಮಾಡುವ ಇಚ್ಛೆ ಏನೇನೂ ಆತನಿಗೆ ಇರಲಿಲ್ಲ.
“ಯಾಕೆ, ಬಾಡಿಗೆಗೆ ಬೇರೆ ಮನೆ ಸಿಗೋದು ಅಷ್ಟೊಂದು ಪ್ರಯಾಸವೆ?"
"ಹಾಗೇನಿಲ್ಲ. ಹುಡುಗರಿಗೆ ಮೊನ್ನೆಯೇ ಹೇಳ್ದೆ. ಎರಡು ಮೂರು ನೋಡಿ
ಟ್ಟಿದಾರೆ. ಯಾವುದು ಅನುಕೂಲವಾಗುತ್ತೋ ಅದನ್ನ ಆರಿಸ್ಕೊಳ್ಳಿ....ಏನಿದ್ದರೂ
ಬೆಂಗಳೂರಲ್ಲಿ ವಾಸವಾಗಿದ್ದೋರಿಗೆ ಈ ಊರು ಹಿಡಿಸೋದು ಸ್ವಲ್ಪ ಕಷ್ಟವೇ. ಸರಿ
ತಾನೆ?"
ಕೊನೆಯ ವಾಕ್ಯವಿದ್ದುದು ಸುನಂದೆಯನ್ನುದ್ದೇಶಿಸಿ. ಆಕೆ ನಂಜುಂಡಯ್ಯನ
ದೃಷ್ಟಿಯನ್ನಿದಿರಿಸಿ ಮುಗುಳುನಕ್ಕು ಅಂದಳು:
"ಅಂಥದೇನಿಲ್ಲ."
"ಗೊತ್ತು,ಗೊತ್ತು, ಇದ್ದರೂ ಕೂಡಾ ನಾಲ್ಕು ದಿವಸದಲ್ಲಿ ಸರಿ ಹೋಗುತ್ತೆ,"
ಎಂದರು ನಂಜುಂಡಯ್ಯ.
ಊಟದ ಬಳಿಕ ಅಡಿಕೆ ಎಲೆ ಬಂತು. ನಂಜುಂಡಯ್ಯ, ಬಂಗಾರದ ಗಿಲೀಟು
ಹಾಕಿದ್ದ ತಮ್ಮ ಸಿಗರೇಟು ಕೇಸು ಹೊರತೆಗೆದರು.
"ಈಗಲಾದರೂ ನೀವು ಸೇದಬಹುದೊ?"
ಸುನಂದಾ ಕಳವಳದಿಂದ ಗಂಡನ ಮುಖ ನೋಡಿದಳು. ಆ ನೋಟವನ್ನು
ಗಮನಿಸಿದ ಜಯದೇವನೆಂದ:
"ಬೇಡಿ. ಕ್ಷಮಿಸಿ."
"ಮದುವೆಯಾದ ಮೇಲೂ ಇದೆಂಥಾದ್ರಿ ಮಡಿ? ಯಾಕೆ, ನಿಮ್ಮವರು ఆಕ್ಷೇಪಿ
ಸ್ತಾರೋ?"
ಸುನಂದಾ ಕತ್ತು ಕೊ೦ಕಿಸಿ ನುಡಿದಳು:
"ನನ್ನ ಆಕ್ಷೇಪವೇನೂ ಇಲ್ಲವಪ್ಪ."
"ಸರಿ ಮತ್ತೆ. ತಗೊಳ್ಳಿ."
"ತಗೊಳ್ಲೇನ್ರಿ?" ಎಂದ ಜಯದೇವ, ಹೆಂಡತಿಯ ಕಡೆ ನೋಡಿ.
"ಹಹ್ಹಾ! ನಿಮ್ಮನ್ನು ನೋಡಿದರೆ ಕನಿಕರವಾಗುತ್ತೆ ಜಯದೇವ್."
“ಒಂದು ತಗೊಳ್ಳಿ," ಎಂದಳು. ಸುನಂದಾ, ಪ್ರಪಂಚದಲ್ಲಿ ತನಗಿಂತ ಹೆಚ್ಚಿನ
ಸುಖಿ ಇರುವುದು ಸಾಧ್ಯವಿಲ್ಲವೆಂಬ ಠೀವಿಯಿಂದ.
ನಂಜುಂಡಯ್ಯ ಕೊರೆದ ಕಡ್ಡಿ ಜಯದೇವನ ಸಿಗರೇಟನ್ನೂ ಸುಟ್ಟಿತು. ಮೊದಲ
ಕೆಮ್ಮಿನ ಬಳಿಕ, ಆತನ ಬಾಯಿಯಿಂದಲೂ ಹೊಗೆ ಸರಾಗವಾಗಿ ಹೊರಟಿತು.
ಆ ಸಂಭಾಷಣೆಯನ್ನು ಕೇಳಿದ ಮನೆಯೊಡತಿ ಸೆರಗಿನಿಂದ ನಗು ಮರೆಸಿ ಒಳ
ಹೋದಳು.
ಸುನಂದೆಗೆ ಸಾಮಾನುಗಳ ಚಿಂತೆ ಹತ್ತಿತು.
ಎಷ್ಟೆಂದರೂ ಯಜಮಾನಿತಿ. ಎಚ್ಚರಿಕೆವಹಿಸಬೇಕಾದುದು ಸ್ವಾಭಾವಿಕ.

360

ಸೇತುವೆ

ನಂಜುಂಡಯ್ಯ, ಶಾಲೆಯ ಜವಾನನನ್ನು ಕರೆದುತರಲು ದೊಡ್ಡ ಮಗಳನ್ನು
ಕಳುಹಿಸಿದರು.
ಸುನಂದೆಯ ಕಡೆ ತಿರುಗಿ, "ನೀವೇನೂ ಯೋಚಿಸ್ಬೇಡಿ. ಒಳಗಿಡೆ ಚಾಪೆ
ಹಾಸ್ತಾರೆ. ಸ್ವಲ್ಪ ವಿಶ್ರಾಂತಿ ತಗೊಳ್ಳಿ. ನಾವು ಒಂದಿಷ್ಟು ಮಾತಾಡ್ತಾ ಕೂತಿರ್ತೀವಿ,"
ಎಂದರು. ಆಗದೆ ಜಯದೇವ್?" ಎಂದು ಒಪ್ಪಿಗೆಯನ್ನೂ ಕೇಳಿದರು.
"ಧಾರಾಳವಾಗಿ," ಎಂದ ಜಯದೇವ. ಊಟವಾದ ಬಳಿಕ ಮೈ ಜಡವಾಗಿ
ಆತನಿಗೂ ವಿಶ್ರಾಂತಿ ಬೇಕೆನಿಸಿತ್ತು. ಆದರೆ ನಂಜುಂಡಯ್ಯ ತಾನಾಗಿಯೇ ಆ ಪ್ರಸ್ತಾಪ
ಮಾಡುವ ತನಕ ಆತನೇನೂ ಮಾಡುವಂತಿರಲಿಲ್ಲ.
ಸುನಂದಾ ತೋಳ ಮೇಲೆ ತಲೆ ಇಟ್ಟೊಡನೆಯೇ ನಿದ್ದೆ ಹೋದಳು.
ಕೊಠಡಿಯಲ್ಲಿ ತಾವಿಬ್ಬರೇ ಉಳಿದಾಗ, ನಂಜುಂಡಯ್ಯ ಕುರ್ಚಿಯ ಮೇಲೆ
ಕುಳಿತು ಮೇಜಿನ ಮೇಲೆ ಕಾಲಿರಿಸುತ್ತ, ಮತ್ತೊಂದು ಸಿಗರೇಟು ಹಚ್ಚಿ ಮಾತಿಗೆ
ಆರಂಭಿಸಿದರು:
"ಒಟ್ಟಿನಲ್ಲಿ ನನಗೆ ತುಂಬಾ ಸಂತೋಷವಾಗಿದೆ, ಜಯದೇವ್. ನೀವು ಬಂದದ್ದು
ಬಹಳ ಒಳ್ಳೆದಾಯ್ತು. ಒಂದು ಮಾಧ್ಯಮಿಕ ಶಾಲೆಯಲ್ಲಿ ಇಬ್ಬರು ಪದವೀಧರರರು!
ನೋಡಿದ ಯಾರಾದರೂ ನಾವು ಹುಚ್ಚರೂಂತ ತಿಳ್ಕೋಬೇಕು!"
ತೂಕಡಿಕೆ ಬಂದಂತಾದರೂ ಎವೆಗಳನ್ನು ಬೇರೆ ಬೇರೆಯಾಗಿಯೆ ಇಡಲು ವಿಶ್ವ
ಪ್ರಯತ್ನ ಮಾಡುತ್ತ ಜಯದೇವ ಕುಳಿತ. ತಾನು ಮಾತನಾಡುವುದರಿಂದ ನಿದ್ದೆಯ
ಕಾಟವಾದರೂ ತಪ್ಪಬಹುದೆಂದು ಆತನೆಂದ:
"ಈಗ ಎಷ್ಟು ಜನ ಇದಾರೆ ಒಟ್ಟು?"
“ಅದೊಂದು ವಿಷಯದಲ್ಲಿ ಮಾತ್ರ ನಮ್ಮದು ದುರ್ಭಾಗ್ಯದ ಊರೇ. ನೀವು
ಹೋದ್ಮೇಲೆ ಏಳೆಂಟು ತಿಂಗಳು ಆ ಸ್ಥಾನಕ್ಕೆ ಯಾರೂ ಬರ್ಲಿಲ್ಲ. ಆ ಮೇಲೊಬ್ಬ
ಬಂದ ಲಕ್ಕಪ್ಪ ಅಂತ-ಲಕ್ಕಪ್ಪಗೌಡ. ಎಸೆಸ್ಎಲ್ಸಿ. ಇನ್ನಾದರೂ ಕೆಲಸ ಸ್ವಲ್ಪ
ಕಡಮೆಯಾಗುತ್ತೇನೋ ಅಂತ ಯೋಚಿಸ್ತಾ ಇದ್ದಾಗಲೇ ಆ ವೆಂಕಟರಾಯನನ್ನು
ಹೊತ್ತು ಹಾಕಿದ್ದಾಯ್ತು. ಆ ಮೇಲೆ ನನ್ನ ಸಹಾಯಕ್ಕೆ ಹೊಸಬರು ಒಬ್ಬರೂ ಇಲ್ಲ."
"ಹಾಗಾಯ್ತೇನು? ಮೂರು ಜನ ಇದ್ದಿದ್ರೆ ನನಗೆ ಬಹುಶಃ ಇಲ್ಲೇ ಅವಕಾಶ
ಸಿಗ್ತಿರ್ಲಿಲ್ವೋ ಏನೊ?"
“ ಹೂಂ ಹೂಂ. ಅದೇನೋ ನಿಜಾಂತಿಟ್ಕೊಳ್ಳಿ. ಒಂದು ರೀತೀಲಿ ನೋಡಿದರೆ
ಆ ಜಾಗ ಭರ್ತಿಯಾಗದೇ ಇದ್ದದ್ದು ಒಳ್ಳೇದಾಯ್ತ.”
ಜಯದೇವ ತುಸು ಯೋಚಿಸಿದ. ಮುಖ್ಯೋಪಾಧ್ಯಾಯ ನಂಜುಂಡಯ್ಯ
ನವರು ತನ್ನ ವಿಷಯವಾಗಿ ಆದರಪೂರ್ವಕ ಮಾತನಾಡಿದ್ದರು. ಹಿಂದಿನದಕ್ಕಿಂತ
ಭಿನ್ನವಾಗಿತ್ತು ಅವರ ಈಗಿನ ವರ್ತನೆ. ರಂಗರಾಯರನ್ನು ಹಿಂದೆ ಕಟುವಾಗಿ ದ್ವೇಷಿ
ಸಿದ ವ್ಯಕ್ತಿ ಇವರೇ ಎನ್ನುವುದು ಕಷ್ಟವಾಗಿತ್ತು.

ನವೋದಯ

361

ಈ ಮಾರ್ಪಾಟಿಗೆ ಬೇರೇನಾದರೂ ಕಾರಣವಿರಬಹುದೆ_ ಎಂದು ತಿಳಿಯಲೆತ್ನಿ
ಸಿತು ಆತನ ಮನಸ್ಸು. ನಿರ್ದಿಷ್ಟವಾದ ಯಾವ ಕಾರಣವೂ ಇದ್ದಂತೆ ಅವನಿಗೆ
ತೋರಲಿಲ್ಲ.
ಆತ ಕೇಳಿದ:
"ಯಾವ ಊರಿನವರು ಈ ಲಕ್ಕಪ್ಪ?"
"ನಾಗಮಂಗಲದೋನು, ಮಂಡ್ಯದ ಹತ್ತಿರ. ಅಬ್ಬ! ಅದೇನು ದರ್ಪ ಅವನಿಗೆ
ಅಡರಿಬಿಟ್ಟಿದೇಂತ! ಒಕ್ಕಲಿಗರು, ಆಳುವವರು ಅಂತ ಏನು ಅಹಂಕಾರ!"
ನಂಜುಂಡಯ್ಯನದು ಯಾರನ್ನಾದರೂ ನಿಂದಿಸುತ್ತಲೇ ಇರಬೇಕಾದ ವ್ಯಕ್ತಿತ್ವ
ಎ೦ಬುದು ಜಯದೇವನಿಗೆ ಹೊಳೆದರೂ ಆ ಮಾತು ಅವನ ವಿಚಾರ ಶಕ್ತಿಯನ್ನು
ಕೆದಕಿತು. ಬೇರೊಬ್ಬ ವ್ಯಕ್ತಿಯ ನೆನಪಾಯಿತು ಆತನಿಗೆ.
"ಇಲ್ಲಿ ಪ್ರಾಥಮಿಕ ಶಾಲೇಲಿ ತಿಮ್ಮಯ್ಯ ಮೇಸ್ಟ್ರೂಂತ ಒಬ್ಬರಿರ್ಲಿಲ್ವೇ?”
"ಯಾರು, ಆ ನಾಟಕದ ಖಯಾಲಿ ಮನುಷ್ಯ! ಇದಾನೆ ಇಲ್ಲೇ."
"ತಮಾಷೆ ವ್ಯಕ್ತಿ. ಆವತ್ತು ನಾಟಕ ಬರ್ಕೊಟ್ಟಿದ್ರಲ್ಲಾ."
"ಹೌದು, ಹೌದು."
ಆ ತಿಮ್ಮಯ್ಯನ ಜಾತಿ ಗೊತ್ತಿದ್ದರೂ ಜಯದೇವನೆಂದ:
“ಆತನೂ ಒಕ್ಕಲಿಗ ಅಂತ ಕಾಣುತ್ತೆ."
"ಹೂ೦. ಹೂ೦. ಆದರೆ ಅವನು ಪೆದ್ದು. ಈ లಕ್ಕಪ್ಪನಿಗೂ ಅವನಿಗೂ
ಎಲ್ಲಿಯ ಹೋಲಿಕೆ? ಈತನ ಕಡೆಯೋರು ಯಾರೋ ಅಸೆಂಬ್ಲೀಲಿ ಬೇರೆ ಇದಾರಂತೆ."
"ಲಕ್ಕಪ್ಪನೂ ರಾಜಕೀಯದ ಮನುಷ್ನೇನು ಹಾಗಾದರೆ?”
"ಬಹಿರಂಗದ ರಾಜಕೀಯ ಏನೂ ಇಲ್ಲ. ಅಂತರಂಗದಲ್ಲಿ ಮಾತ್ರ ಕೆಲಸ
ನಡಿಸ್ತಾನೆ. ಕುಳ್ಳಗೆ-ಹ್ಯಾಗಿದಾನೆ ಅಂತೀರಾ?”
"ದೇಶದ ರಾಜಕೀಯ ಹ್ಯಾಗಿರುತ್ತೋ ಹಾಗೆಯೆ ನಮ್ಮ ಜೀವನ ಕ್ರಮ ಅಂತ
ಕಾಣುತ್ತೆ. ಯಾವ ಊರಿಗೆ ಹೋದರೂ ಇದೇ ಗೋಳು."
ಹೆಚ್ಚು ಊರು ಸುತ್ತಿದವನೇನೂ ಅಲ್ಲ ಜಯದೇವ. ಆದರೂ ಅನುಭವಿಯಂತೆ
ಆ ಮಾತು ಹೊರಟಿತ್ತು.
ಜಯದೇವನ ವಿಚಾರ ಸರಣಿಯನ್ನು ನಂಜುಂಡಯ್ಯ ಖಂಡಿಸಲಿಲ್ಲ. ಬದಲು
ಕಿಟಿಕಿಯ ಹೊರನೋಡುತ್ತ ಕುಳಿತರು.
ಮೌನದ ಆ ಅವಕಾಶ ಸಾಧಿಸಿ ನಿದ್ದೆ, ಜಯದೇವನಿಗೆ ಸುತ್ತಿದ್ದ ಉರುಲನ್ನು
ಬಿಗಿಗೊಳಿಸಿ ಎಳೆಯತೊಡಗಿತು.
"ಈ ಊರಲ್ಲಿ ಹೈಸ್ಕೂಲು ಸ್ಥಾಪಿಸೋ ವಿಷಯ ಹಿಂದೆ ಹೇಳಿರ್ಲಿಲ್ವೆ?"
ತೂಕಡಿಸುತ್ತಿದ್ದ ಜಯದೇವನಿಗೆ ಆ ಮಾತು ಗುಡುಗಿನಂತೆ ಕೇಳಿಸಿ ಆತ
46

362

ಸೇತುವೆ

ಹೌಹಾರಿ ಬಿದ್ದ.
"ಹೌದು, ಹೌದು. ಹೇಳಿದ್ದಿರಿ."
ಜಯದೇವ ನಿದ್ದೆಯ ಪೀಡೆಗೆ ಒಳಗಾಗಿದ್ದ ದೃಶ್ಯವನ್ನು ಕಂಡು ನಂಜುಂಡಯ್ಯ
ನಸುನಕ್ಕರು.
"ಅದಕ್ಕೇಂತ ಒಂದು ಸಮಿತಿ ರಚಿಸಿದ್ವಿ. ಸಮಿತಿ ಅಂದ್ಮೇಲೆ ಎಲ್ಲರಿಗೂ ಪ್ರಾತಿ
ನಿಧ್ಯ ಇರಬೇಕು ತಾನೆ? ಅವರ ಜನಕ್ಕೆ ಎರಡು ಸೀಟು ಕೊಡಬೇಕಾಯ್ತು. ಈಗ ఆ
ಇಬ್ಬರು ನಮಗೆ ಕೊಡ್ತಿರೋ ತೊಂದರೆ ಎಷ್ಟೂಂತ !'"
ಮೂಲತಃ ಏನೂ ಬದಲಾಗಿಯೇ ಇರಲಿಲ್ಲ. ಹಿಂದಿನಂತೆಯೇ ಇತ್ತು ಪ್ರತಿ
ಯೊಂದೂ.
ಜಯದೇವನಿಂದ ಯಾವ ಪ್ರತಿಕ್ರಿಯೆಯೂ ಬರದೇ ಇದ್ದುದನ್ನು ಕಂಡು
ನಂಜುಂಡಯ್ಯನೆಂದರು:
"ನಾನು ಯಾಕೆ ಹೇಳ್ಲಿ ಇದನ್ನೆಲ್ಲ? ನೀವು ಬಂದಿದೀರಲ್ಲ. ನಿಮಗೇ ಗೊತ್ತಾ
ಗುತ್ತೆ. ಸ್ವಲ್ಪಹೊತ್ತು ಮಲಕೊಳ್ಳಿ ಇನ್ನು. ಸಾಯಂಕಾಲ ಮನೆ ನೋಡ್ಕೊಂಡು
బರೋಣ."
ಜಯದೇವ, ಕೃತಜ್ಞತೆಯಿಂದ ಅವರಿಗೆ ತಲೆಬಾಗಿ ವಂದಿಸುತ್ತ ಎದ್ದ.



ಎಚ್ಚರವಾದಾಗ ಜಯದೇವನ ಮೈಯೆಲ್ಲ ಬೆವತು ಹೋಗಿತ್ತು. ಸೂರ್ಯನ
ತಾಪ ಹೊರಗೆ ಕಡಮೆಯಾಗಿದ್ದಂತೆ ಕಂಡರೂ ತಣ್ಣನೆಯ ಗಾಳಿ ಬೀಸಲು ಇನ್ನೂ
ಮೊದಲಾಗಿರಲಿಲ್ಲ. ಒಳ ಹಜಾರದಿಂದ ಸುನಂದೆಯ ಮಾತು ಕೇಳಿಸುತ್ತಿತ್ತು.
ನಂಜುಂಡಯ್ಯನ ಹೆಂಡತಿಯೊಡನೆ ಸಂಭಾಷಣೆ. ಪಕ್ಕದ ಕೊಠಡಿಯಿಂದ ಹಾಳೆ ಮಗು
ಚಿದ ಸದ್ದು ಬರುತ್ತಿತ್ತು, ಕ್ರಮಬದ್ಧವಾಗಿ. ನಂಜುಂಡಯ್ಯ ಏನನ್ನೋ ಓದುತ್ತ
ಕುಳಿತಿರಬೇಕು.
ಏಳಬೇಕು ತಾನಿನ್ನು. ಎಷ್ಟು ಹೊತ್ತಾಯಿತು?
ಕೈಗಡಿಯಾರದ ನೆನಪು. ಉಣ್ಣೆಯ ಸೂಟು, ವಾಚು, ಸೈಕಲ್ಲು ಯಾವುದೂ
ಬೇಡವೆಂದ ಅಳಿಯ. ಆದರೆ ಮದುವೆಯ ಸಮಯದಲ್ಲೊಂದು ಉಡುಗೊರೆ ಬಂದಿತು!
ಟೈಂ-ಪೀಸು!
'ಉಪಯುಕ್ತ ವಸ್ತು.' ಎಂದಿದ್ದ ಜಯದೇವ.
ಈಗ ಅದು ಪೆಟ್ಟಿಗೆಯೊಳಗೆ ಮಲಗಿತ್ತು. 'ನಡೆಯುತ್ತಿತ್ತೊ ಇಲ್ಲವೋ.'

ನವೋದಯ

363

ಯಾರಾದರೂ ಅದರ ಕಿವಿ ಹಿಂಡಿದ್ದರೆ ತಾನೆ?
ಸರಸರ ಸದ್ದು. ಸೀರೆಯ ಅಂಚು. ತನಗೆ ಪರಿಚಿತವಾದುದೇ. ಮಲಗಿದ್ದ
ಜಾಗಕ್ಕೆ ಆವರಣವಿದ್ದು, ಇತರರು ನೋಡಲು ಆಸ್ಪದವಿಲ್ಲದೆ___
"ಎಚ್ಚರವಾಯ್ತೇನ್ರಿ?"
“ಊಂ. . . "
[ತಾನು ರಾಗವೆಳೆಯುವುದು ನಂಜುಂಡಯ್ಯನಿಗೆ ಕೇಳಿಸಿದರೂ ಕೇಳಿಸಲಿ.
ಯಾರ ಹೆದರಿಕೆ?]
“ಏಳಿ."
ಮುದ್ದು ಮುಖ ಬಾಗಿ ತನ್ನನ್ನೇ ನೋಡುತ್ತಿತ್ತು. ಆ ತೋಳನ್ನು ಹಿಡಿದು
ತನ್ನೆ ಡೆಗೆ ಎಳೆದರೆ_
ಪಿಸುದನಿಯಲ್ಲಿ ಮಾತು:
“ಕಾಫಿ ಮಾಡಿಟ್ಟಿದಾರೆ, ಆರ್ಹೋಗ್ತಾ ಇದೆ.”
“ಊಂ . . . "
ಮುಖ ಮೇಲಕ್ಕೆ ಹೋಯಿತು. ಪಾದಗಳು ಚಲಿಸಿದುವು. ಸೀರೆಯ ಅಂಚನ್ನು
ಹಿಡಿದುಕೊಳ್ಳಲೆಂದು ಜಯದೇವ ಕೈ ಮುಂದಕ್ಕೆ ಚಾಚಿದ. ಆದರೆ ಹಿಡಿತಕ್ಕೆ ಏನೂ
ಸಿಗಲಿಲ್ಲ.
ಮೂರು ವರ್ಷಗಳಿಗೆ ಹಿಂದೆ ಒಮ್ಮೆ ಅಂಥದೇ ಹಗಲು...
ಎಷ್ಟು ಒಳ್ಳೆಯವರು ರಂಗರಾಯರ ಪತ್ನಿ ಸಾವಿತ್ರಮ್ಮ!
ಆಕೆ ಅಂದಿದ್ದರು:
'ಏಳಿ, ಬಚ್ಚಲು ಮನೆಗೆ ಹೋಗಿ ಮುಖ ತೊಳಕೊಂಡು ಬನ್ನಿ. ಕಾಫಿ
ಇಳಿಸಿದೀನಿ.'
ಕನ್ನಡಿಯಲ್ಲಿ ಮುಖ ನೋಡದೆಯೇ ತಾನು ತಲೆಗೂದಲು ಬಾಚಿಕೊಂಡುದನ್ನು
ಕಂಡು ಆಕೆಗೆ ಆಶ್ಚರ್ಯವಾಗಿತ್ತು.
ಸೊಗಸಾಗಿತ್ತು ಅವರು ಮಾಡಿದ್ದ ಕಾಫಿ.
ಆಕೆ ನೀಡಿದ್ದ ಆಹ್ವಾನವೊ?
'ಮನೆ ಮಾಡೋತನಕ ನಮ್ಮಲ್ಲೇ ಇದ್ಬಿಡಿ.'
ಜಯದೇವ ಈಗ 'ಮನೆಮಾಡಿದ್ದ.' ಸಾವಿತ್ರಮ್ಮ ಆ ಊರಲ್ಲಿ ಇರುತ್ತಿದ್ದರೆ,
ಅವರಿಗೆ ನಮಿಸಿ ಆಶೀರ್ವಾದ ಕೇಳುತ್ತಿದ್ದ. ಜತೆಯಲ್ಲೆ ಸುನಂದೆಯನ್ನು ಹೆಮ್ಮೆ
ಯಿಂದ ಕರೆದೊಯ್ಯುತ್ತಿದ್ದ. ಅವರಿರಲಿಲ್ಲ ಈಗ. ಆಗಿನ ಪ್ರಕರಣದಿಂದ ಎಷ್ಟೊಂದು
ನೊಂದಿರಬೇಡ ರಂಗರಾಯರು! ಅವರು ಕೊಡಗನೂರಿಗೆ ಹೂರಟು ಹೋದ ಮೇಲೆ
ಒಂದು ಕಾಗದವನ್ನೂ ಬರೆಯಲಿಲ್ಲ. ಬೆಂಗಳೂರಲ್ಲಿ ಅವರ ಮಗ ಅಳಿಯ ಇಬ್ಬರೂ
ಇದ್ದರು. ಸಾವಿತ್ರಮ್ಮನೂ ಅಲ್ಲಿಯೇ ಇದ್ದರೇನೋ. ರಂಗರಾಯರೂ ಆಗಾಗ್ಗೆ

364

ಸೇತುವೆ

ಅಲ್ಲಿಗೆ ಬರುತ್ತಿದ್ದಿರಬಹುದು. ಆದರೆ ತನ್ನಲ್ಲಿ ಅವರ ಮಗನ-ಅಳಿಯನ-ವಿಳಾಸ
ಇರಲಿಲ್ಲ. ಉತ್ತರ ದೊರೆಯಬಹುದೆಂಬ ಆಸೆಯಿಂದ ಕೊಡಗನೂರಿಗೇ ಒಮ್ಮೆ ಆತ
ಬರೆದಿದ್ದ. 'ವಿಳಾಸದಾರರು ಕೊಡಗನೂರಲ್ಲಿಲ್ಲ'-ಎಂಬ ಗುರುತಿನೊಡನೆ ಕಾಗದ
ವಾಪಸು ಬಂದಿತ್ತು. ಎಲ್ಲಿಗೆ ಹೋದರೊ? ಸ್ವಾಭಿಮಾನಿಯಾದ ಅವರು ರಾಜಿನಾಮೆ
ಕೊಟ್ಟಿದ್ದರೂ ಕೊಟ್ಟಿರಬಹುದು. ಆಕಸ್ಮಿಕ ಭೇಟಿಯಂತೂ ಬೆಂಗಳೂರಿನಲ್ಲಿ ಆಗಲಿಲ್ಲ.
ವಿದ್ಯಾಧಿಕಾರಿಗಳ ಕಚೇರಿಗೆ ಹೋಗಿ ವಿಚಾರಿಸಿದ್ದರೆ ಪ್ರಾಯಶಃ ತಿಳಿಯುತ್ತಿತ್ತು...
ಕುರ್ಚಿ ಸರಿಸಿದ ಸದ್ದಾಯಿತು. ನಂಜುಂಡಯ್ಯ ಎದ್ದರು. ಹೊರ ಬಂದು,
ಜಯದೇವನ ಯೋಚನೆಗಳಿಗೆ ಪೂರ್ಣ ವಿರಾಮ ಹಾಕುತ್ತ ಅವರೆಂದರು:
"ಎಚ್ಚರವಾಯ್ತೆ ಜಯದೇವ್? ನಾಲ್ಕಾಯ್ತು ಘಂಟೆ."
[ಹಿಂದೆ ಮಿಸ್ಟರ್ ಜಯದೇವನಾಗಿಯೆ ಆತ ಇರುತ್ತಿದ್ದ. ಆದರೆ ಈಗ
ಯಾವಾಗಲೂ ಆತ್ಮೀಯನಾದ ಜಯದೇವ.]
"ಎದ್ಬಿಟ್ಟೆ."
ಎದ್ದು ಕುಳಿತ ಜಯದೇವನ ಕಣ್ಣಿಗೆ, ಸುತ್ತಿದ ಹಾಸಿಗೆಯೂ ತುಂಬಿದ ಗೋಣಿ
ಚೀಲವೂ ಕಾಣಿಸಿದುವು.
ಆತ ಉದ್ಗಾರವೆತ್ತಿದ:
"ಓ! ಸಾಮಾನುಗಳು ಬಂದುವೇನು? ಗೊತ್ತೇ ಆಗ್ಲಿಲ್ಲ ನನಗೆ!"
"ನಾನೇ ಇಳಿಸ್ದೆ. ನಿಮಗೆ ಗೊತ್ತಾಗೋಕೆ ಈ ಲೋಕದಲ್ಲಿ ಆಗ ನೀವು ಇದ್ದರೆ
ತಾನೆ?"
"ಯಾಕ್ಸಾರ್,ನೀವು ಮಧ್ಯಾಹ್ನದ ಹೊತ್ತು ಮಲಗೊಲ್ವೆ?"
"ಇಲ್ಲವಪ್ಪ! ರಾತ್ರೆ ನಿದ್ದೆ ಇಲ್ದೆ ಸಂಕಟ ಪಡೋರು ಯಾರು? ಅದಕ್ಕೋಸ್ಕರ
ಹಗಲು ಹಾಸಿಗೆ ಹತ್ತಿರಕ್ಕೆ ನಾನು ಸುಳಿಯೋದೇ ಇಲ್ಲ."
ನಂಜುಂಡಯ್ಯನವರ ಮಗಳು ಕಂಚಿನ ಚೊಂಬಿನಲ್ಲಿ ನೀರು ತಂದಳು_ಜಯ
ದೇವ ಮುಖ ತೊಳೆಯಲೆಂದು.
ಎರಡು ನಿಮಿಷ ತಡೆದು ಕಾ‌ಫಿಯ ಲೋಟಗಳು ಬಂದುವು, ಖಾರದ ಅವಲಕ್ಕಿ
ಯೊಡನೆ.
...ಆ ಹೊಸ ವಾತಾವರಣಕ್ಕೆ ಸುನಂದಾ ಸುಲಭವಾಗಿ ಹೊಂದಿಕೊಂಡುಳು.
ಸರಳ ಜೀವಿಯಾದ ಪಾರ್ವತಮ್ಮನೊಡನೆ ಆಕೆ ಸ್ನೇಹ ಬೆಳೆಸಿದುದರಲ್ಲಿ ಆಶ್ಚರ್ಯ
ವೇನೂ ಇರಲಿಲ್ಲ. ಬಹಳ ಕಾಲದಿಂದ ನಡೆದು ಬಂದಿದ್ದ ರೀತಿನೀತಿಗಳಲ್ಲಿ ಸ್ವಲ್ಪ
ಅಂತರವಿದ್ದರೂ ಸಹೃದಯತೆ ಮೃದುಲ ಮನೋವೃತ್ತಿಗಳು ಅವರಿಬ್ಬರ ಬಾಂಧವ್ಯಕ್ಕೆ
ಬೆಸುಗೆಯಾದುವು.
ಅಡುಗೆ ಮನೆಯ ಸುರಕ್ಷಿತ ಸ್ಥಳದಲ್ಲಿ ಪಾರ್ವತಮ್ಮನೆಂದಳು:
"ನೀವು ನಮ್ಮ ಮನೇಲಿ ಊಟ ಮಾಡಿದಿರೀಂತ ಹೊರಗೆ ಗೊತ್ತಾದ್ರೆ ಗಲಾಟೆ

ನವೋದಯ

365

ಯಾಗ್ತದೆ."
ಆದರೆ ಬೆಂಗಳೂರಿನ ಹುಡುಗಿಯ ಪ್ರಪಂಚ ಆ ಅಡುಗೆಮನೆಗಿಂತ ಸ್ವಲ್ಪ ಹೆಚ್ಚು
ವಿಸ್ತಾರವಾಗಿತ್ತು.
"ಏನ್ಮಾಡ್ತಾರೆ?"
ಪಾರ್ವತಮ್ಮನಿಗೆ ಅದು ಗೊತ್ತಿರಲಿಲ್ಲ. ಗಲಾಟೆಯನ್ನು ಕಲ್ಪಿಸಿಕೊಳ್ಳಲು
ಯತ್ನಿಸುತ್ತ ಆಕೆಯೆಂದಳು:
"ತಮ್ಮ ತಮ್ಮೊಳಗೆ ಮಾತಾಡ್ಕೊಳ್ತಾರೆ."
"ಅಷ್ಟೆ ತಾನೆ? ಅವರ ನಾಲಗೆಗೆ ಒಳ್ಳೇ ವ್ಯಾಯಮವಾಗುತ್ತೆ."
ಪಾರ್ವತಮ್ಮನ ಪಾಲಿಗೆ ಅದು ದಿಟ್ಟತನದ ಮಾತು. ಅದನ್ನು ಕೇಳಿ ಆಕೆಗೆ
ಮೆಚ್ಚುಗೆಯಾಯಿತು.
...ಗಂಡಸರು ಹೊರಡಲು ಸಿದ್ಧರಾದರು.
"ಬಹಳ ಸೆಖೆ. ಈ ಸಲ ಮಳೆಯೂ ತಡ," ಎಂದರು ನಂಜುಂಡಯ್ಯ, ತಮ್ಮ
ಉಣ್ಣೆಯ ಕೋಟನ್ನು ಧರಿಸಿಕೊಳ್ಳುತ್ತ.
"ಬೆಂಗಳೂರಲ್ಲೂ ಈ ವರ್ಷ ಸೆಖೆ ಜಾಸ್ತಿ," ಎಂದ ಜಯದೇವ.
"ಮನೆ ನೋಡೋದಕ್ಕೆ ನಿಮ್ಮ ಮಿಸೆಸ್ಸೂ ಬರ್ತಾರೇನು?"
"ಹೌದು. ಅವರು ಒಪ್ಪಬೇಕಲ್ಲ!"
"ಸ್ವಂತ ಮನೇಲಿ ಬೆಳೆದ ನನಗೆ ಬಾಡಿಗೆ ಮನೆ ತಾಪತ್ರಯ ಹ್ಯಾಗೆ ಗೊತ್ತಾ
ಗ್ಬೇಕು ಹೇಳಿ."
ತನ್ನ ಅಂತಸ್ತನ್ನು ತೋರಿಸಿಕೊಳ್ಳುವ, ತಿಳಿಯದೇ ಆಡಿದ, ಮಾತು.
"ನಿಜ, " ಎಂದ ಜಯದೇವ. ತಾನು ಹುಟ್ಟಿದ್ದು ಸ್ವಂತ ಮನೆಯಲ್ಲೆ, ಸುನಂದಾ
ಹುಟ್ಟಿ ಬೆಳೆದುದು ಸ್ವಂತ ಮನೆಯಲ್ಲಿ, ಎಂಬುದನ್ನು ಹೇಳ ಹೋಗಲಿಲ್ಲ ಆತ.
ಅವನ ಸೂಚನೆಯಂತೆ ಸುನಂದೆಯೂ ಸಿದ್ದವಾಗಿ ಬಂದಳು.
ಹೆಂಡತಿಯೊಡನೆ ವಾಯುಸೇವನೆಗೆ ಹೋಗುವ ಅಭ್ಯಾಸವನ್ನು ಇಟ್ಟುಕೊಂಡ
ವರೇ ಅಲ್ಲ ನಂಜುಂಡಯ್ಯ. ಆದರೆ ಬೇರೆ ದಂಪತಿಯ ಜತೆ ಆಧುನಿಕನಾಗಿ ತಾನೂ
ಹೋಗುವುದು ಅವರಿಗೆ ಇಷ್ಟವಾಗಿತ್ತು.
ಬೀದಿಗಿಳಿದ ಬಳಿಕ ಆಕಾಶ ನೋಡಿ ಜಯದೇವನೆಂದ:
" ಮೋಡವೇನೋ ಕವಿದಿದೆ."
"ಹತ್ತು ದಿವಸದಿಂದ ಸಾಯಂಕಾಲ ಹೊತ್ತು ಹೀಗೆಯೇ ಇರುತ್ತೆ. ಹನಿ
ಮಾತ್ರ ಊಹು೦," ಎಂದರು ನಂಜುಂಡಯ್ಯ.
ತಮಗೆ ಮೂರನೆಯವಳಾಗಿ ಬೀದಿಯ ಅಂಚಿನಲ್ಲಿ ನಡೆದು ಬರುತ್ತಿದ್ದ ಸುನಂದೆ
ಯನ್ನುದ್ದೇಶಿಸಿ ಅವರೆಂದರು:
"ನಮ್ಮೂರು ಇಷ್ಟವಾಯ್ತೇನ್ರಮ್ಮಾ?"
.

366

ಸೇತುವೆ

“ಇನ್ನೂ ಸರಿಯಾಗಿ ಊರು ನೋಡಿಲ್ವಲ್ಲ", ಎಂದಳು ಸುನಂದಾ.
"ಇಷ್ಟವಾಗುತ್ತೆ, ಆಗದೆ ಏನು?" ಎಂದ ಜಯದೇವ.
ನಂಜುಂಡಯ್ಯ ನಿಧಾನವಾಗಿ ನಡೆಯುತ್ತ, ನಡಿಗೆಗೆ ಅನುಗುಣವಾಗಿ ಸಾವಧಾನ
ವಾಗಿ ಮಾತನಾಡಿದರು:
"ಈಗ ನೋಡೋದಕ್ಕೆ ಕೊಂಪೆಯ ಹಾಗಿದೆ ಊರು. ಇನ್ನೂ ಸ್ವಲ್ಪ ಕಾಲಾವ
ಕಾಶ ಕೊಡಿ. ಒಂದು ಹೈಸ್ಕೂಲು, ವಿದ್ಯಾರ್ಥಿ ನಿಲಯ, ಉದ್ಯಾನ, ಪೌರಸಭಾ ಭವನ,
ಆಸ್ಪತ್ರೆ, ರೈಸ್ ಮಿಲ್ಲು, ಮಾರ್ಕೆಟ್ಟು, ಒಂದು ಸಿನಿಮಾ ಥಿಯೇಟರು-ಇವೆಲ್ಲ
ನಿರ್ಮಾಣವಾದ ಮೇಲೆ ನೋಡುವಿರಂತೆ. ಈ ಗುಡಿಸಲುಗಳೂ ಅಷ್ಟೆ. ಇವನ್ನೆಲ್ಲ
ಕಿತ್ತುಹಾಕಿಸಿ ಕಡಮೆ ಖರ್ಚಿನಲ್ಲಿ ತಾರಸಿ ಮನೆಗಳನ್ನು ಕಟ್ಟಿಸ್ಬೇಕು. ಪ್ರತಿಯೊಂದನ್ನು
ಯೋಜನೆ ತಯಾರಿಸ್ಬೇಕು."
ಇಂಪಾದ ಮಾತು. ಭವಿಷ್ಯತ್ತಿನಲ್ಲಿ ಅವರಿಗಿದ್ದ ನಂಬುಗೆಯಂತೂ ಅಪ್ರತಿಮ
ವಾಗಿತ್ತು.
ಜಯದೇವ ಕೇಳಿದ:
"ರಾಷ್ಟ್ರದ ಪಂಚವಾರ್ಷಿಕ ಯೋಜನೇಲಿ ಈ ಊರು ಸೇರ್ಕೊಳ್ಳೋದಿಲ್ಲ,
ಅಲ್ವೆ?"
"ಸೇರಿಸೋರು ಯಾರು? ನಮ್ಮೂರಿನವರೇನು ಸರ್ಕಾರದಲ್ಲಿ ಮಂತ್ರಿಗಳಾಗಿ
ದಾರೆಯೆ? ಅಥವಾ ಯಾರಾದರೂ ಬಲಾಢ್ಯರು ನಮ್ಮಲ್ಲಿ ಇದಾರೆಯೆ? ಮೊದಲ
ಪಂಚವಾರ್ಷಿಕ ಯೋಜನೆಯಿಂದಂತೂ ನಮ್ಮೂರಿಗೆ ಪ್ರಯೋಜನವಾಗಲಿಲ್ಲ. ಎರಡ
ನೇದರಲ್ಲೂ ನಮಗೆ ಸ್ಥಾನ ಸಿಗೋದು ಅಸಂಭವ. ನಾನ್ಹೇಳ್ತೀನಿ ಜಯದೇವ್.
ನಾವು ಸ್ವಾವಲಂಬಿಗಳಾಗ್ಬೇಕು. ನಮ್ಮೂರಿಗೆ ನಮ್ಮದೇ ಆದ ಒಂದು ಪಂಚವಾರ್ಷಿಕ
ಯೋಜನೆ ತಯಾರಿಸ್ಬೇಕು. ಏನಂತೀರಾ?"
"ಸರಿಯಾದ ಸಲಹೆ."
ಅನಂತರ, ಕಳೆದ ಪಂಚಾಯತ್ ಬೋರ್ಡು ಚುನಾವಣೆಯಲ್ಲಿ ಶಂಕರಪ್ಪ
ನವರನ್ನು ಉರುಳಿಸಲು ಎದುರು ಪಾರ್ಟಿಯವರು ನಡೆಸಿದ ಫಿತೂರಿಯ ವಿವರವನ್ನು
ನಂಜುಂಡಯ್ಯ ಕೊಟ್ಟರು. ಆಗ ಅವರು ಬಳಸಿದ ಪದಗಳು ಕರ್ಣಕಠೋರವಾಗಿದ್ದುವು.
ಒಂದು ನಿಮಿಷದ ಹಿಂದೆ ಊರಿನ ಪುನರ್ನಿಮಾಣದ ಮಾತನ್ನಾಡುತ್ತಿದ್ದ ಮನುಷ್ಯನೆ
ಈ ಮಾತುಗಳನ್ನೂ ಆಡುತ್ತಿದ್ದರೆ? ಎಂದು ಸಂದೇಹ ಹುಟ್ಟಿಸುವ ಹಾಗಿತ್ತು, ಅವರ
ವಾಗ್ಝರಿ.
ಸುನಂದೆಗೆ ಆ ಸಂಭಾಷಣೆಯಲ್ಲಿ ಆಸಕ್ತಿ ಕಡಮೆಯಾಯಿತು. ಮೂವರ ಆ
ಮೆರವಣಿಗೆಯನ್ನು ಎಲ್ಲರೂ ನೋಡುವವರೇ. ಜನರ ದೃಷ್ಟಿಗಳು ತಮ್ಮ ಮೇಲೆ
ನೆಟ್ಟಿದ್ದುವೆಂದು ನಂಜುಂಡಯ್ಯನಿಗೇನೂ ಸಂಕೋಚವೆನಿಸಲಿಲ್ಲ. ತಾವು ಇತರರಿಗಿಂತ
ಮೇಲು ಎಂಬ ಆತ್ಮವಿಶ್ವಾಸದಿಂದಲೆ ಯಾವಾಗಲೂ ಬೀದಿ ನಡೆದ ವ್ಯಕ್ತಿ ಅವರು.
ಹಾದಿಯುದ್ದಕ್ಕೂ ತಮಗೆ ನಮಸ್ಕರಿಸಿದವರಿಗೆ, ಆ ಜನರನ್ನು ಕಡೆಗಣ‍್ಣಿನಿಂದಷ್ಟೆ

ನವೋದಯ

367

ನೋಡಿ, ಹೌದೊ ಅಲ್ಲವೊ ಎನ್ನುವಂತೆ ಸ್ವಲ್ಪ ತಲೆಬಾಗಿಸಿ, ಪ್ರತಿ ನಮಸ್ಕಾರ ಮಾಡು
ತ್ತಿದ್ದರು ನಂಜುಂಡಯ್ಯ. ಜಯದೇವನೂ ಕುತೂಹಲದಿಂದ ಅತ್ತಿತ್ತ ನೋಡುತ್ತಿದ್ದ.
ಜಯರಾಮಶೆಟ್ಟರ ಮನೆ ಆ ಹಾದಿಯಲ್ಲಿರಲಿಲ್ಲ. ಇಂದಿರೆಯರೂ ಇರಲಿಲ್ಲ. ಆದರೂ
ಪರಿಚಯದ ಹಳೆಯ ವಿದ್ಯಾರ್ಥಿಗಳು ಇಬ್ಬರು ಮೂವರು ಕಣ್ಣಿಗೆ ಬಿದ್ದರು. ಗುರುತು
ಹಿಡಿದ ಅವರ ಮುಖಗಳರಳಿದಾಗ ಜಯದೇವನಿಗೂ ಸಂತೋಷವಾಗುತ್ತಿತ್ತು.
ನಂಜುಂಡಯ್ಯನ ಜತೆ ಆತನೂ ಮರುವಂದನೆ ನೀಡುತ್ತಿದ್ದ-ಸ್ವಲ್ಪ ಕೈಯೆತ್ತಿ.
ಸುನಂದೆಗೆ ಮಾತ್ರ, ನೋಡುತ್ತಿದ್ದವರ ದೃಷ್ಟಿಗೆ ಬಲಿಯಾಗುವುದರ ಹೊರತು
ಬೇರೇನೂ ಇರಲಿಲ್ಲ.
ಅಂತೂ ಖಾಲಿಯಾಗಿದ್ದೊಂದು ಮನೆ ಕಾಣಲು ದೊರೆಯಿತು. ಅದಕ್ಕಿದ್ದುದು
ಊರು ಹೆಂಚಿನ ಛಾವಣಿ.
"ಸುತ್ತುಮುತ್ತು ಅನುಕೂಲವಾಗಿಲ್ಲ," ಎಂದಳು ಸುನಂದಾ.
"ಇನ್ನೂ ಎರಡಿವೆ, ನೋಡೋಣ," ಎಂದರು ನಂಜುಂಡಯ್ಯ.
ಆ ಮನೆಗಳನ್ನು ನೋಡಿ ಇಟ್ಟಿದ್ದ ವಿದ್ಯಾರ್ಥಿ, ಅವರಿಗೆಲ್ಲ ಪಥನಿರ್ದೇಶಕನಾದ.
ಆ ಮನೆಗಳೂ ಸುನಂದೆಗೆ ಒಪ್ಪಿಗೆಯಾಗದೆ ಇದ್ದರೆ, ಕರೆದು ತಂದ ತಮಗೆ
ಒಂದು ರೀತಿಯ ಅವಮಾನವಾಗುವುದೆಂದು, ನಂಜುಂಡಯ್ಯ ಹೊಸ ವಾದ ಆರಂಭಿ
ಸಿದರು:
"ಸದ್ಯಕ್ಕೆ ಅವೆರಡರಲ್ಲಿ ಒಂದನ್ನ ಆರಿಸಿ. ಯಾವುದಾದರೂ ಒಳ್ಳೇ ಮನೆ ಖಾಲಿ
ಆದಾಗ ಅದನ್ನು ಕೊಡಿಸೋ ಜವಾಬ್ದಾರಿ ನನಗಿರ್ಲಿ."
"ಹಾಗೇ ಮಾಡೋಣ," ಎಂದ ಜಯದೇವ.
ಸುನಂದೆಯತ್ತ ತಿರುಗಿ ನಂಜುಂಡಯ್ಯನೆಂದರು:
"ಇನ್ನೂ ಒಂದು ಹೇಳ್ತೀನಿ. ಬೆಂಗಳೂರಿನ ಮಟ್ಟದಿಂದ ಈ ಮನೆಗಳನ್ನು
ಅಳೀಬೇಡಿ."
"ಇಲ್ಲವಪ್ಪ," ಎಂದಳು ಸುನಂದಾ.
ಆ ಎರಡು ಮನೆಗಳಲ್ಲಿ ಒಂದು ತಕ್ಕ ಮಟ್ಟಿಗೆ ಅನುಕೂಲವಾಗಿತ್ತು. ದೀಪ,
ಹಿತ್ತಿಲಲ್ಲೆ ಬಾವಿ, ಮೇಲಕ್ಕೆ ಇದ್ದ ನೀರು, ಮನೆಯ ಮುಂದುಗಡೆ ಮುರುಕಲು ಬೇಲಿ
ಆವರಿಸಿದ್ದ ಒಂದಷ್ಟು ಜಾಗ. ಹೊದಿಸಿದ್ದುದು ಮಂಗಳೂರು ಹೆಂಚು. ಹೆಚ್ಚೆಂದರೆ
ಇಪ್ಪತ್ತು ವರ್ಷ ವಯಸ್ಸಾಗಿದ್ದ ಕಟ್ಟಡ. ಒಳಗೆ ಕೊಠಡಿ, ಹಜಾರ, ಅಡುಗೆ
ಮನೆ ,ಬಚ್ಚಲು ಮನೆಗಳಿದ್ದುವು. ಹಿಂಭಾಗದಲ್ಲಿತ್ತು ಕಕ್ಕಸು.
ನಂಜುಂಡಯ್ಯನೆಂದರು:
"ಈ ಮನೆಯ ಮಾಲಿಕರು ನಮ್ಮವರೇ. ಬಾಡಿಗೆ ಹದಿನ್ರೆದು ರೂಪಾಯೀಂತ
ಹೇಳ್ತಿದಾರೆ. ಹನ್ನೆರಡಕ್ಕೆ ಗೊತ್ಮಾಡ್ತೀನಿ. ಲೈಟಿಗೆ ನೀವೇನೂ ಕೊಡಬೇಕಾದ್ದಿಲ್ಲ.
ಶಾಲೆ ಇಲ್ಲಿಂದ ಎರಡೇ ಫರ್ಲಾಂಗು ದೂರ. ನಮ್ಮ ಮನೆಯೂ ಸಮೀಪವೇ.

368

ಸೇತುವೆ

ಏನ್ಹೇಳ್ತೀರಾ?"
ಜಯದೇವ ಸುನಂದೆಯ ಕಡೆ ತಿರುಗಿ ಹೇಳಿದ:
"ಇದೇ ಇದ್ಕೊಳ್ಲಿ. ಆಗದಾ?"
"ಹೂಂ," ಎಂದಳು ಸುನಂದಾ. ಮನೆ ಅವಳ ಮನಸ್ಸಿಗೆ ಬಂದಿತ್ತು. ನಿಂತಲ್ಲೆ
ಆಕೆ, ಮನೆಯ ಒಳ ಭಾಗವನ್ನು ಹೇಗೆ ವ್ಯವಸ್ಥೆಗೊಳಿಸಬೇಕೆಂದು ತನ್ನಷ್ಟಕ್ಕೆ ಎಣಿಕೆ
ಹಾಕಿದಳು."
"ಗೃಹಪ್ರವೇಶ ಯಾವತ್ತು?" ಎಂದು ನಂಜುಂಡಯ್ಯ ಕೇಳಿದರು.
"ಇವತ್ತು ರಾತ್ರಿಯೇ," ಎಂದ ಜಯದೇವ, ಸ್ವಲ್ಪ ತಡವರಿಸುತ್ತ.
"ಛೆ! ಛೆ! ಇವತ್ತು ನಮ್ಮಲ್ಲೇ ವಾಸ. ಏನಿದ್ದರೂ ನಾಳೆ ಬೆಳಗ್ಗೆ ಮಾಡಿ.
ನಾಡದು ಕೆಲಸಕ್ಕೆ ಸೇರ್ಕೊಂಡರಾಯ್ತು."
"ನಮ್ಮಿಂದಾಗಿ ನಿಮಗೆ ಇಲ್ಲದ ತೊಂದರೆ."
"ಆ ಮಾತು ಆಡ್ಬೇಡಿ."
ಮೋಡಗಳು ಸ್ವಲ್ಪ ಚೆದರಿದಂತಾಗಿ ಸಂಜೆ ಸೂರ್ಯನ ಹೊಂಬಣ್ಣ ಕಾಣಿಸಿತು.
ನಂಜುಂಡಯ್ಯ ಆಕಾಶವನ್ನೂ ನೋಡಿದರು; ತಮ್ಮ ಕೈಗಡಿಯಾರವನ್ನೂ
ನೋಡಿದರು.
"ಇನ್ನೂ ಹೊತ್ತಿದೆ. ನಿಮ್ಮ ಹಳೇ ಶಾಲೆ ನೋಡ್ಕೊಂಡು ಹೋಗೋಣ್ವೇ
ನಪ್ಪಾ?" ಎಂದು ಅವರು ಕೇಳಿದರು. "ನಿಮ್ಮ ಮನೆಯವರಿಗೆ ಆಯಾಸವಾಗುತ್ತೊ ಎನೊ?" ಎಂಬ ಸಂದೇಹವನ್ನೂ ವ್ಯಕ್ತಪಡಿಸಿದರು.
ಸುಮ್ಮನೆ ಅಲೆಯಲು ಸುನಂದಾ ಸಿದ್ಧಳಿರಲಿಲ್ಲ. ಆದರೆ, ಶಾಲೆ ಎಂಬ ಪದ
ಕೇಳಿದೊಡನೆ ಆಕೆ ಉತ್ಸಾಹಭರಿತಳಾದಳು. ತನ್ನ ಜಯದೇವ ಉಪಾಧ್ಯಾಯನಾಗಿ
ಪಾಠ ಹೇಳಿಕೊಡುವ ವಿದ್ಯಾಮಂದಿರವನ್ನು ನೋಡಲು ಆಕೆ ನಿರಾಕರಿಸುವುದುಂಟೆ?
"ನನಗೇನೂ ಆಯಾಸವಿಲ್ಲ, ಹೋಗೋಣ," ಎಂದಳು ಸುನಂದಾ.
ಹತ್ತು ಮಾರುಗಳಾಚೆಗೆ, ಆ ಖಾಲಿ ಮನೆಯ ಒಡೆಯರ ವಸತಿ ಇತ್ತು. ಮನೆ ಯನ್ನು ಸ್ವಚ್ಛಪಡಿಸಿ ಇಡುವಂತೆ ಮನೆ ಹೆಂಗಸರಿಗೆ ನಂಜುಂಡಯ್ಯ ಸೂಚನೆ ಇತ್ತರು.
"ಮೇಸ್ಟ್ರಿಗೆ ಮನೆ. ನಾನು ಹೇಳಿದೀನೀಂತ ತಿಳಿಸ್ಬಿಡಿ," ಎ೦ದರು.
ಶಾಲೆ ಸವೂಪಿಸಿದಂತೆ ಜಯದೇವನ ಹೃದಯದ ಬಡಿತ ವೇಗವಾಯಿತು.
ಎಷ್ಟೊಂದು ನೆನಪುಗಳು!
ವಿದ್ಯಾರ್ಥಿಗಳಿಲ್ಲದೆ ಇದ್ದಾಗ ತಾನು ಒಂಟಿ-ಎಂಬ ಭಾವನೆಗೆ ಎಡೆಕೊಡುತ್ತ
ಮಲಗಿದ್ದ ಕಿರುದಾರಿ. ದೂರದಿಂದ ಪುಟ್ಟ ಗೂಡಿನಂತೆ ಕಾಣಿಸುತ್ತಿದ್ದು ಸಮೀಪ
ಸಾಗಿದಂತೆ ದೊಡ್ಡ ಆಕಾರ ತಳೆಯುತ್ತಿದ್ದ ಕಟ್ಟಡ...
ಅಂಗಳದ ಸುತ್ತಲೂ ಬೇಲಿ ಇತ್ತು.
"ಓ! ತೋಟ ಮಾಡಿದಿರಾ? ಈ ಬೇಸಗೇಲಿ ಕೂಡ ಹಸುರಾಗಿದೆ."
“ಜವಾನ ಇದಾನೆ. ಬಾವಿ ತೋಡಿಸಿದೆ. ನೀರು ಹಾಕ್ತಾನೆ."
ಅಂಗಳದ ಹೊರಗೇ ನಿಂತಿದ್ದ ಜವಾನ ನಮಸ್ಕರಿಸಿದ.
"ವೆಂಕಟರಾಯರಿದ್ದಾಗ ಯಾವನನ್ನೋ ತಾತ್ಕಾಲಿಕವಾಗಿ ನೇಮಿಸ್ಲಿಲ್ವೆ? ಆತ
ಆ ಹಳೇ ಗಡಿಯಾರ ಕದ್ಕೊಂಡು ಓಡ್ಹೋದ."
“ఆ ಗಡಿಯಾರ ಸಮಯ ಸರಿಯಾಗಿ ತೋರಿಸುತ್ಲೂ ಇರ್ಲಿಲ್ಲ."
"ಹಹ್ಹಾ! ನೆನಪಿದೆ ನಿಮಗೆ! ಆತ ಒಳ್ಳೇ ಕೆಲಸ ಮಾಡ್ದಾಂತ ನಮಗೆಲ್ಲಾ
ಸಮಾಧಾನವಾಯ್ತು. ಆಮೇಲೆ ಒಂದ್ಸಲ ಮೈಸೂರಿಗೆ ಹೋಗಿದ್ದೋನು ಹೊಸದು
ಒಂದು ಕೊಂಡ್ಕೊಂಡು ಬಂದೆ.”
ಸುನಂದಾ ಆ ಕತೆ ಕೇಳಿ ನಕ್ಕಳು. ತಮ್ಮ ಮಾತಿನ ವೈಖರಿಯಿಂದ ಆಕೆ ಹರ್ಷಿತ
ಳಾದಳೆಂದು ನಂಜುಂಡಯ್ಯ ಸಮಾಧಾನಪಟ್ಟರು.
ಕೈ ಜೋಡಿಸಿಯೇ ನಿಂತಿದ್ದ ಮಧ್ಯವಯಸ್ಸು ದಾಟಿದ್ದ ಆ ಮನುಷ್ಯನನ್ನು
ತೋರಿಸಿ ಅವರೆಂದರು:
"ಈತ ಖಾಯಂ ಜವಾನ. ಎಂಟು ರೂಪಾಯಿ ಸಂಬಳ. ಒಳ್ಳೇ ನಂಬಿಗಸ್ಥ."
ಹೊಗಳಿಕೆಯ ಮಾತು ಕೇಳಿ ಆ ಮನುಷ್ಯನಿಗೆ ಲಜ್ಜೆಯಾಯಿತು.
"ಆಗ ನಿಮ್ಮ ಸಾಮಾನು ತಂದುಹಾಕ್ದೋನು ಇವನೇ. ಬೆಳಿಗ್ಗೇನೆ ಬಸ್
ಸ್ಟ್ಯಾಂಡಿಗೆ ಕಳಿಸೋಕಾಗ್ಲಿಲ್ಲ. ಶಾಲೆ ನಡೀತಿರುವಾಗ ಮಾತ್ರ ಯಾವಾಗಲೂ ಇಲ್ಲೇ
ಇರಿಸ್ಕೋತೀನಿ."
ಜಯದೇವ ಜವಾನನನ್ನು ದಿಟ್ಟಿಸಿದ. ನಂಜುಂಡಯ್ಯ ಆ ಮನುಷ್ಯನೆಡೆಗೆ
ನೋಡಿ ಅಂದರು:
"ಇವರೇ ಕಣೋ ಜಯದೇವ ಮೇಸ್ಟ್ರು. ಹೊತ್ತಾರೆ ಎದ್ದು ಮನೆಗ್ಬಾ.
ಗುರುಸಿದ್ದಪ್ಪನವರ ಖಾಲಿ ಬಿಡಾರಕ್ಕೆ ಇವರ ಸಾಮಾನು ಸಾಗಿಸ್ಬೇಕು. ಸ್ಕೂಲು
ಸುರುವಾಗೋದರೊಳಗೆ ಮುಗಿಸ್ಬಿಡ್ಬೇಕು ಕೆಲಸಾನ. ಕೇಳಿಸ್ತೋ ?”
“ಆಗಲಿ ಬುದ್ಧಿ.”
"ಬುದ್ಧೀಂತ ಅನ್ಬೇಡ, ಸಾರ್ ಅನ್ನೂಂತ, ಎಷ್ಟು ಸಲಾನೋ ನಿಂಗೆ
ಹೇಳೋದು? ಥೂ ಕತ್ತೆ!"
ಹೊಗಳಿಕೆಯ ಮಾತು ಕೇಳಿದಾಗ ಆದಂತೆಯೆ ಈಗಲೂ ಆತನಿಗೆ ಲಜ್ಜೆ
ಯಾಯಿತು.
ನಂಜುಂಡಯ್ಯ ಶಾಲೆಯ ಸುತ್ತಲೂ ಇದ್ದ ಆಟದ ಬಯಲನ್ನು ತೋರಿಸಿದರು.
"ನೀವಿದ್ದಾಗ ಇದೆಲ್ಲ ಪಾಳು ಬಿದ್ದಿತ್ತು, ಅಲ್ವೆ?"
"ಹೌದು."
"ನೋಡಿ, ಆ ನೆಲವನ್ನೆ ಆಟದ ಬಯಲಾಗಿ ಮಾರ್ಪಡಿಸಿದೀನಿ-ಹೆಚ್ಚಿನ ಖರ್ಚೇ
47

370

ಸೇತುವೆ

ಇಲ್ದೆ! ಅವತ್ತೊಮ್ಮೆ, ನೀವು ಹುಡುಗರ ಕೈಲಿ ಕೆಲಸ ಮಾಡಿಸ್ಬೇಕು ಅಂದಾಗ ವೆಂಕಟ
ರಾಯರು ಆಕ್ಷೇಪಿಸಿದ್ರು, ಅಲ್ವೆ? ಆಮೇಲೆ ಸರಕಾರದ ನಿರ್ದೆಶವೇ ಬಂತು. ಶ್ರಮ
ದಾನ! ಹುಡುಗರಿಗೆಲ್ಲ ಒಂದಿಷ್ಟು ತಿಂಡಿಕೊಟ್ಟಿದೀವೀಂತ ಇಟ್ಕೊಳ್ಳೋಣ...ಹ್ಯಾಗಿದೆ
ಬಯಲು?"
ಆಟಗಳನ್ನಾಡುತ್ತಿದ್ದ ಹತ್ತು ಹದಿನೆಂಟು ಹುಡುಗರನ್ನು ಆ ಬಯಲಲ್ಲಿ ಜಯ
ದೇವ ಕಲ್ಪಿಸಿಕೊಂಡು ಸಂತುಷ್ಟನಾದ.
“ಚೆನ್ನಾಗಿದೆ ಸಾರ್."
"ಸಾಮಾನುಗಳೂ ಇವೆ. ಆದರೆ ಆಟ ಆಡಿಸೋರು ಯಾರೂ ಇಲ್ಲ. ಹೀಗಾಗಿ
ಹುಡುಗರು ಬಯಲ್ನ ಉಪಯೋಗಿಸೋದೇ ಕಡಮೆ. ಏನು ಮಾಡೋಣ ಹೇಳಿ?"
'ನನಗೂ ಈ ಆಟಗಳಿಗೂ ಎಣ್ಣೆಸೀಗೆ. ಮೊದಲಿನಿಂದಲೂ ಅಷ್ಟೇ. ನಾನೊಂದು
ಪುಸ್ತಕಕೀಟ,' ಎಂದಿದ್ದರು ನಂಜುಂಡಯ್ಯ ಹಿಂದೆಯೇ.
"ಲಕ್ಕಪ್ಪ ಗೌಡರಿಗೆ ಆಟದಲ್ಲಿ ಆಸಕ್ತಿ ಇಲ್ವೆ?"
“ಆತನೆ!" ಎಂದು ನಕ್ಕು ಸುಮ್ಮನಾದರು ನಂಜುಂಡಯ್ಯ.
"ನಾನೇನೂ ಕ್ರೀಡಾಪಟುವಲ್ಲ ಅನ್ನೋದು ನಿಮಗೆ ಗೊತ್ತಿದೆ. ಆದರೂ
ನನ್ಕೈಲಾದಷ್ಟು ಮಾಡ್ತೀನಿ."
“ಆಗಲಿ ಜಯದೇವ್, ನಿಮ್ಮ ಮನೆಯವರು ಒಪ್ಪಿಗೆ ಕೊಟ್ಟರೆ ಅಗತ್ಯವಾಗಿ
ಆಟವಾಡಿ!"
ದಂಪತಿ ನಕ್ಕರು.
ಆಗಲೆ ತಡವಾಗಿತ್ತೆಂದು, ಅವರು ಶಾಲೆಯ ಒಳ ಹೋಗಲಿಲ್ಲ.
ಹಾದಿ ನಡೆಯುತ್ತಿದ್ದಂತೆ ಜಯದೇವ ನೆನಪು ಮಾಡಿಕೊಟ್ಟ.
"ಹಿಂದೆ ನಾನು ಮೊದಲ್ನೇ ಸಲ ಈ ಊರಿಗೆ ಬಂದ ದಿವಸ ಸಾಯಂಕಾಲ,
ಇದೇ ಹಾದೀಲಿ ನಡಕೊಂಡು ಬಂದಿದ್ವಿ."
[ಆಗ ರಂಗರಾಯರಿದ್ದರೆಂಬುದನ್ನು ಬಾಯಿ ತೆರೆದು ಆತ ಹೇಳಲಿಲ್ಲ.
ನಂಜುಂಡಯ್ಯನವರಿಗೆ ಅದು ನೆನಪಿತ್ತು. ಆದರೂ ಆ ವ್ಯಕ್ತಿಯ ಹೆಸರೆತ್ತಲಿಲ್ಲ.]
"ಹೌದು;ಸುಮಾರು ಇದೇ ಸಮಯ."
"ಆಮೇಲೆ ಆನಂದ ವಿಲಾಸ ಹೋಟ್ಲಿಗೆ ಹೋದ್ವಿ. ಅಲ್ಲಿ ನೀವು ತಿಂಡಿ
ಕೊಡಿಸಿದ್ರಿ."
" ಹಹ್ಹಾ! ಇವತ್ತೂ ಹೋಗ್ಬಹುದಾಗಿತ್ತು. ಆದರೆ ನಿಮ್ಮ ಮನೆಯವರಿದಾ
ರಲ್ಲಪ್ಪಾ. ನಾಳೆ, ನನ್ನ ಗಂಡನಿಗೆ ಕೆಟ್ಟ ಚಾಳಿ ಕಲಿಸ್ದೋನು ಇವನೇ೦ತ, ಅವರು
ರೇಗಿದರೆ ಕಷ್ಟ."
ಸುನಂದಾ ಗಟ್ಟಿಯಾಗಿ ನಕ್ಕಳು.
ಅವರೇನೂ ಹೋಟೆಲಿಗೆ ಹೋಗಲಿಲ್ಲ. ತಿಂಡಿತಿನ್ನು ವುದಕ್ಕಲ್ಲವಾದರೂ

ನವೋದಯ

371

ಜಯದೇವ ಊಟ ಮಾಡಿ ಕಾಹಿಲೆ ಬಿದ್ದ ಆ ಆನಂದ ವಿಲಾಸವನ್ನು ನೋಡಲು
ಸುನಂದಾ ಕುತೂಹಲಿಯಾಗಿದ್ದಳು. ಆದರೆ ಹೋಟೆಲು ಮುಖ್ಯ ಬೀದಿಯಲ್ಲಿದ್ದುದ
ರಿಂದ ಆಕೆ ನಿರಾಶಳಾಗಬೇಕಾಯಿತು.
...ಅವರು ಮೂವರೂ ಮನೆ ಸೇರುವ ಹೊತ್ತಿಗೆ ದೀಪಗಳು ಹತ್ತಿ
ಕೊಂಡಿದ್ದುವು.
ರಾತ್ರೆ ಊಟವಾದ ಬಳಿಕ, ಜಯದೇವ ಎಷ್ಟು ಬೇಡವೆಂದರೂ ಕೇಳದೆ, ತಮ್ಮ
ಕೊಠಡಿಯಲ್ಲೆ ದಂಪತಿ ಮಲಗಲು ಏರ್ಪಾಟು ಮಾಡಿಕೊಟ್ಟರು ನಂಜುಂಡಯ್ಯ.
ತಾವು ಆ ರಾತ್ರೆಯ ಮಟ್ಟಿಗೆ ಒಳಹಜಾರವನ್ನು ಆಶ್ರಯಿಸಿದರು.
ಮಧ್ಯಾಹ್ನ ಒಮ್ಮೆ ಮುದ್ದಿಸಿ ಹೋಗಿದ್ದ ನಿದ್ದೆ ಎಷ್ಟು ಹೊತ್ತಾದರೂ ಬರಲಿಲ್ಲ.
ಕರಿಯ ಮೋಡಗಳು ಕತ್ತಲೆಯೊಡನೆ ಬೆರೆತುಕೊಂಡಿದ್ದುವು. ಆಕಾಶದಲ್ಲಿ ಅಲ್ಲೊಂದು
ಇಲ್ಲೊಂದರಂತೆ ಕಾಣುತ್ತಿದ್ದುವು ನಕ್ಷತ್ರಗಳು. ಹಗಲಿನ ಕಾವು ಆರುತ್ತ ಬಂತು. ಬಳಿಕ
ತಣ್ಣನೆಯ ಗಾಳಿಯೊಂದು ಬೀಸಿತು.
ಜಯದೇವ ಮೆಲ್ಲನೆ ಸುನಂದೆಯ ಮೈ ಮುಟ್ಟಿ ಕೇಳಿದ:
"ನಿದ್ದೆ ಬಂತೇನೆ?"
"ಇಲ್ಲ."
ಜಯದೇವ ಆಕೆಯ ಎದೆಗಡ್ಡವಾಗಿ ತೋಳು ಬಳಸಿದ. ಆಕೆ ಆತನ ಮೈಗೆ
ಒತ್ತಿಕೊಂಡಳು.
ನುಸುಳಿ ಬಂದಿದ್ದ ಗಾಳಿ ಮಾಯವಾಗಿ, ಕೊಠಡಿಯ ಕತ್ತಲು ಮತ್ತೆ ಬಿಸಿ
ಏರಿತು.
ಜಯದೇವನೆಂದ:
"ಮೂರು ವರ್ಷದ ಹಿಂದೆ ಇಲ್ಲಿಗೆ ಬಂದಿದ್ದ ದಿನ, ರಾತ್ರೆ ಹ್ಯಾಗಿತ್ತು ಅಂತೀಯಾ?
ಗುಡುಗು-ಮಿಂಚು-ಮಳೆ! ಅಬ್ಬಾ!"
ಸುನಂದಾ ಕೇಳಿದಳು:
“ಆಗ ಎಲ್ಲಿ ಮಲಗಿದ್ದಿರಿ?"
ಆತನೆಂದ:
“ರಂಗರಾಯರ ಮನೇಲಿ."
ಉತ್ತರ ಸಮರ್ಪಕವಾಗಲಿಲ್ಲವೆಂದು ಮತ್ತೂ ಒಂದು ಮಾತು ಸೇರಿಸಿದ:
"ಒಬ್ಬನೇ."

372

ಸೇತುವೆ

ಪುಟ್ಟ ಸಂಸಾರವೇನೋ ನಿಜ. ಗಂಡು ಮತ್ತು ಹೆಣ್ಣು-ಎರಡು ಗುಬ್ಬಚ್ಚಿಗಳು
ಮಾತ್ರ.ಆದರೆ ಗೂಡು ಸಿದ್ಧಗೊಳಿಸುವ ಕೆಲಸ ಯಾವ ದೃಷ್ಟಿಯಲ್ಲೂ ಅಲ್ಪ
ವಾಗಿರಲಿಲ್ಲ.
ಮೊದಲು ಸಾಮಾನುಗಳನ್ನು ಬಿಚ್ಚಿ ಸ್ಥೂಲವಾಗಿ ವಿಂಗಡಿಸಿ ಅಡುಗೆ ಮನೆಯ
ಉದ್ಘಾಟನೆಯನ್ನು ಸುನಂದಾ ಮಾಡಿದಳು. ಒಂದು ವಾರದಿಂದ ಸಾಮಾನುಗಳನ್ನು
ಆರಿಸಿ, ಸಂಗ್ರಹಿಸಿ, ಕೊ೦ಡುತ೦ದು, ಜೋಡಿಸಿದ್ದರು ಸುನಂದೆಯ ತಾಯಿ. ಮೊದಲ
ಎರಡು ದಿನಗಳಿಗೆ ಬೇಕಾಗುವಷ್ಟು ಅಕ್ಕಿ, ಬೇಳೆ, ಉಪ್ಪುಹುಳಿಖಾರಗಳೂ ಇದ್ದವು.
ಹಪ್ಪಳ ಸೆಂಡಿಗೆಗಳಿದ್ದುವು. ಎಣ್ಣೆ ಇರಲಿಲ್ಲವಾದರೂ ತುಪ್ಪವಿತ್ತು. ಕಟ್ಟಿಗೆಯೊಂದನ್ನೇ
ಸೇರಿಸಿ ಕಟ್ಟಿರಲಿಲ್ಲ ಆಕೆ!
ಮನೆಯ ಒಡೆಯರು ಸ್ವಚ್ಛ ಮಾಡಿದ್ದರೂ ಪೊರಕೆ ಕೈಲಿ ಹಿಡಿದು ಮೈ ಬಗ್ಗಿ
ಮಾಡಬೇಕಾದ ಕೆಲಸ ಮತ್ತೂ ಉಳಿದಿತ್ತು. ಜಯದೇವ ಆ ಕಡೆಗೆ ಗಮನವಿತ್ತ.
ಶಾಲೆಯ ಜವಾನ ಹೊತ್ತು ಹಾಕಿದ್ದ ಸೌದೆ ಹಸಿ. ಧಾರಾಳವಾಗಿ ಹೊಗೆ
ಯಾಡುತ್ತಿತ್ತು. ಆದರೆ ಬೆಂಕಿ ಮಿನುಗುತ್ತಿರಲಿಲ್ಲ. ಫ಼ೂಫ಼ೂ ಎಂದು ಊದಿ ಊದಿ
ಸಾಕಾಯಿತು ಸುನಂದೆಗೆ.
ಕೊನೆಯಲ್ಲಿ ನಿರುಪಾಯಳಾಗಿ ಆಕೆ ಕರೆದಳು:
"ಬನ್ನೀಂದ್ರೆ ಸ್ವಲ್ಪ."
ಗದ್ಗದಿತವಾಗಿದ್ದ ಕಂಠ. ಜಯದೇವ, ಕೈಲಿದ್ದ ಪೊರಕೆಯನ್ನು ಕೆಳಕ್ಕೂ ಇಡದೆ,
ಕಾತರಗೊಂಡೇ ಓಡಿ ಬಂದ.
"ಏನಾಯ್ತೆ?"
ಅಡುಗೆ ಮನೆಯ ತುಂಬ ಹೊಗೆ ಧಾಂದಲೆ ನಡೆಸಿತ್ತು. ಉರಿ ತಾಳಲಾಗದೆ
ಒಸರುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರೆಸುತ್ತ ಸುನಂದಾ ಪರದಾಡುತ್ತಿದ್ದಳು.
ಗೊಳ್ಳೆಂದು ಬಿರಿಯಲು ಧಾವಿಸಿ ಬಂದ ನಗೆಯನ್ನು ತಡೆಹಿಡಿದು ಜಯದೇವ,
ಕಸಬರಿಕೆಯನ್ನು ಕೆಳಕ್ಕೆ ಬಿಸುಟು, ಸುನಂದೆಯನ್ನು ತಬ್ಬಿಕೊಂಡು, ಹಜಾರಕ್ಕೆಳೆದು
ತಂದ. ಆ ಅಪ್ಪುಗೆ ಆಹ್ಲಾದಕರವಾಗಿತ್ತು. ಸುನಂದಾ, ಕಣ್ಣೀರನ್ನು ಹಾಗೆಯೇ
ಹರಿಯಗೊಡುತ್ತ ನಕ್ಕಳು.
ಕಣ್ಣು ತೆರೆದು ಜಯದೇವನ ಮುಖನೋಡಿದಾಗ, ಆಶ್ಚರ್ಯದಿಂದ 'ಆಹ್ಹಾ!'
ಎಂದು ಉದ್ಗರಿಸುತ್ತ ಆಕೆಯೆಂದಳು.
"ಏನೂಂದ್ರೆ ಇದು ಮುಖದ ಮೇಲೆ? ಎಷ್ಟೊಂದು ಕರಿ ಮೆತ್ಕೊಂಡಿದೀರಾ!
ಮೀಸೆ ಬಂದಿದೇಂದ್ರೆ!"
ಜಯದೇವ ಬಾಗಿಲ ಕಡೆಗೊಮ್ಮೆ ಮಿಂಚಿನ ದೃಷ್ಟಿ ಬೀರಿದ, ಒಡನೆಯೇ

ನವೋದಯ

373

ಆಕೆಯ ಮುಖದ ಮೇಲೂ ಮೀಸೆಗಳನ್ನು ಅಚ್ಚೊತ್ತಿದ.
ಸುನಂದಾ ಉಸಿರಿಗಾಗಿ ಚಡಪಡಿಸಿದಳು. ಹಿಡಿತದಿಂದ ಬಿಡಿಸಿಕೊಂಡಳು.
"ಅಹ್ಹಾ! ಅಮ್ನೋರಿಗೆ ಮೀಸೆ ಬಂದಿದೆ!" ಎಂದು ಗಟ್ಟಿಯಾಗಿ ಜಯದೇವ ನಕ್ಕ.
"ಥೂ! ಎನ್ನುತ್ತ, ಗೋಡೆ ಗೂಡಿನೊಳಗಿದ್ದ ಕನ್ನಡಿಯತ್ತ ಸುನಂದಾ ಓಡಿ
ದಳು. ಬಟ್ಟೆಗಳ ರಾಶಿಯಿಂದ ಅಂಗವಸ್ತ್ರವನ್ನು ಆರಿಸಿ ತೆಗೆದು ಮುಖ ಒರೆಸಿಕೊಂಡಳು.
ಜಯದೇವ ಅಡುಗೆ ಮನೆಯನ್ನು ಮರೆತು ಆ ದೃಶ್ಯವನ್ನೆ ನೋಡುತ್ತ ನಿಂತ.
ಆದರೆ ಹೊಗೆ ಅವರನ್ನು ಹುಡುಕಿಕೊಂಡು ಒಳ ಹಜಾರಕ್ಕೂ ಬಂತು.
ಆಗ ಎಚ್ಚೆತ್ತು ಜಯದೇವ ಅಡುಗೆ ಮನೆಯೊಳ ಹೊಕ್ಕು, ಗೋಡೆಯನ್ನು
ಪರೀಕ್ಷಿಸಿ, ಎತ್ತರದಲ್ಲಿದ್ದ ಎರಡು ಬೆಳಕಿಂಡಿಗಳನ್ನು ತೆರೆದ. ಕ್ರಮೇಣ ಹೊಗೆ ಅತ್ತ
ಸರಿಯಿತು. ಒಲೆಯ ಬುಡ ಸರಿಯಾಗಿ ಕಾಣಿಸಿದ ಬಳಿಕ ಜಯದೇವ ಬಲು ಪ್ರಯಾಸ
ಪಟ್ಟು, ಸೌದೆಗೆ ಬೆಂಕಿ ಅಂಟುವಂತೆ ಮಾಡಿದ.
ಸುನಂದಾ ಸಿದ್ಧಗೊಳಿಸಲು ಯತ್ನಿಸಿದ್ದು ಅನ್ನ ಮತ್ತು ಸಾರು ಮಾತ್ರ.
"ಒಂದಿಷ್ಟು ಎಣ್ಣೆ ಇಟ್ಟು ಸೆಂಡಿಗೆ ಕರೀಲೇನು?" ಎಂದು ಸುನಂದಾ ಕೇಳಿದಳು.
"ಏನೂ ಬೇಡ. ಆ ಬೇಳೆಯೊಮ್ಮೆ ಬೇಯಲಿ!"
"ಸ್ನಾನಕ್ಕೆ ಏನ್ಮಾಡ್ತೀರ? ಇನ್ನೊಂದು ಒಲೆ ಈಗ ಹಚ್ಚೋಕಾಗುತ್ತಾ?"
"ತಣ್ಣೀರೆ ಮಾಡ್ಬಿಡೋಣ. ಈ ಬಿಸಿಲಿಗೆ ತಂಪಗೂ ಇರುತ್ತೆ."
"ಬಿಸಿನೀರೇ ಸ್ನಾನ ಮಾಡ್ಬೇಕೂಂತ ಅಮ್ಮ ಹೇಳಿದಾಳೆ."
"ಇದೇನು ಮಲೆನಾಡು ಕೆಟ್ಹೋಯ್ತೆ ಸುನಂದಾ? ನಿಮ್ಮಮ್ಮ ಈ ಊರು
ನೋಡಿದ್ರೆ ತಾನೆ? ಇಲ್ಲಿಯ ಬಾವಿ ನೀರು ಕೂಡ ಕಾಯಿಸ್ದೆ ಕುಡೀಬಹುದು.
ಗೊತ್ತೇನು?"
"ಸರಿ," ಎಂದಳು ಸುನಂದಾ.
...ಹತ್ತಾರು ಹುಡುಗರು ಆ ಹಾದಿಯಾಗಿ ಓಡುವ ಸದ್ದು ಕೇಳಿಸಿತು.
"ಹೀಗೆ ಹುಡುಗರು ಓಡಿದಾಗ ಏನರ್ಥ ಹೇಳು."
"ಹುಡುಗರ ಹಿಂದೆ ಮೇಸ್ಟ್ರು ಬರ್ತಾರೆ; ಊಟಕ್ಕೆ ತಟ್ಟೆ ಇಡ್ಬೇಕೂಂತ."
"ಭೇಷ್!ನಾಳೆಯಿಂದ ಹಾಗೆಯೇ ನೆನಪಿಟ್ಕೊ."
"ಆಗಲಿ ಮಹಾಪ್ರಭು."
ಹುಡುಗರು ಮರೆಯಾದ ಕೆಲ ನಿಮಿಷಗಳಲ್ಲೆ ನಂಜುಂಡಯ್ಯ ಬಂದರು. ಜಯ
ದೇವನ ವೇಷವನ್ನು ನೋಡಿ ನಕ್ಕು ಅವರೆಂದರು:
"ಸೊಗಸಾಗಿ ಕಾಣ್ತೀರ!"
"ಬನ್ನಿ ಸಾರ್ ಒಳಕ್ಕೆ."
ಹಾಸಿಗೆಯ ಸುರುಳಿಯೊಳಗೆ ಅವಿತಿದ್ದ ಚಾಪೆಯನ್ನೆಳೆದು ಬಿಡಿಸುತ್ತ ಜಯದೇವ
ಹೇಳಿದ:

374

ಸೇತುವೆ

"ಕೂತ್ಕೊಳ್ಳಿ ಸಾರ್.
"ನಂಜುಂಡಯ್ಯ ಆ ಆತಿಥ್ಯ ಸ್ವೀಕರಿಸಲು ನಿರಾಕರಿಸಿ ನಿಂತುಕೊಂಡೇ ನುಡಿದರು:
“ಈ ಕೆಲಸವೆಲ್ಲ ಜವಾನ ಮಾಡ್ತಿರ್‍ಲಿಲ್ವೆ? ಅಷ್ಟಕ್ಕೇ ನಿಲ್ಸಿ. ಊಟಮಾಡ್ಕೊಂಡು
ಆತ ಬಂದ್ಬಿಡ್ತಾನೆ. ಹೇಳಿದೀನಿ."
ಸುನಂದಾ ಹೊರಬಂದಳು, ಮುಗುಳುನಗುತ್ತ ನಂಜುಂಡಯ್ಯ ಕೇಳಿದರು.
"ಅಡುಗೆ ಆಯ್ತೇನ್ರೀ?"
“ಆಗ್ತಾ ಇದೆ, ಎಂದಳು ಸುನಂದಾ.
ಆ ಕ್ಷಣದಲ್ಲೆ , ಬಂದವರು ಯಾರೆಂದು ನೋಡಲು ಹೊಗೆಯೂ ಹೊರಗಿಣಿಕಿತು.
"ಆ ಮುಠ್ಠಾಳ ಹಸಿ ಸೌದೆ ತಂದ್ಕೊಟ್ವಿಲ್ಲ ತಾನೆ ಎಲ್ಲಾದರೂ?" ಎಂದು
ಏನೋ ನೆನಪಾದವರಂತೆ ನಂಜುಂಡಯ್ಯನೆಂದರು.
“ಸ್ವಲ್ಪ ಹಸೀನೆ," ಎಂದಳು ಸುನಂದಾ.
"ಸ್ವಲ್ಪ ಏನ್ಬಂತು? ನನಗೆ ಕಾಣಿಸೋದಿಲ್ವೇನು?"
ಇತರ ಸಾಮಾನುಗಳ ಜತೆ, ಬಿಚ್ಚಿದ್ದ ಸೌದೆ ರಾಶಿಯೂ ಅಲ್ಲಿಯೇ ಬಿದ್ದಿತ್ತು.
“ಪರವಾಗಿಲ್ಲ ಒಣಗುತ್ತೆ," ಎಂದ ಜಯದೇವ.
"ಪರವಾಗಿಲ್ವಂತೆ. ಆ ನನ್ಮಗನ ಚರ್ಮ ಸುಲೀಬೇಕು. ಅಷ್ಟೂ ಬುದ್ದಿ ಬೇಡ್ವೆ?
ನಮ್ಮ ಮನೆಯಿಂದ ಒಂದು ಹೊರೆ ಇಸಕೊಂಡು ಬರೋಕೆ ಏನಾಗಿತ್ತು ಆತನಿಗೆ?
ನನಗಂತೂ ಮರೆತ್ಹೋಯ್ತು. ನೀವೂ ಸರಿಯೆ!"
“ಇರಲಿ, ಸಾರ್. ಸರಿಹೋಗುತ್ತೆ."
“ಏನಾದರೂ ಬೇಕಾದರೆ ಹೇಳೀಮ್ಮ, ಹೇಳಿ ಜಯದೇವ್. ಊಟ ಇನ್ನೂ
ಎ‌‌ಷ್ಟು ತಡವೋ ಏನೋ. ಬನ್ನಿ, ನಮ್ಮನೆಗೇ ಹೋಗಿಬಿಡೋಣ. ಏನಂತೀರಾ?"
"ಬೇಡಿ, ಬೇಡಿ, ಅಡುಗೆ ಆಗ್ತಾಬಂತು," ಎಂದಳು ಸುನಂದಾ, ಅಂತಹ ಆಹ್ವಾನ
ತನಗೆ ಅವಮಾನವೆಂಬಂತೆ.
"ಅಡುಗೆ ಆಗುತ್ತೆ. ಆದರೆ ನಿಮ್ಮನ್ನೂ ಇವತ್ತು ಇಲ್ಲೇ ಊಟಕ್ಕೇಳೀಂತ
ಹೇಳೋ ಸ್ಥಿತೀಲಿ ನಾವಿಲ್ಲ, ಅಷ್ಟೆ." ಎಂದ ಜಯದೇವ.
“ಸರಿ, ಸರಿ. ಅಡುಗೆಯೂ ಇಲ್ಲೇ ಅಂದ್ಮೇಲೆ ಗೃಹಪ್ರವೇಶ ಆಗೇ
ಹೋಯ್ತೂಂತನ್ನಿ ಹಾಗಾದರೆ. ಹೋಗಲಿ, ಸಂಜೆ ಕಾಫಿಗಾದರೂ ಬರ್‍ತೀರೋ?
ಬೆಳಗಿನ ಹೊತ್ತು ಶಾಲೆ ಮಾಡಿದ್ಮೇಲೆ, ಸಾಯಂಕಾಲವೆಲ್ಲ ಏನು ಮಾಡೋಣ
ಅಂತಾನೇ ತೋಚೋದಿಲ್ಲ."
"ಇವತ್ತು ಸಾಯಂಕಾಲ...", ಎಂದು ಜಯದೇವ ತಡವರಿಸಿ ನಿಂತ.
“ಅಂಗಡಿಗೆಲ್ಲ ಹೋಗಬೇಕಾಗುತ್ತೋ ಏನೋ. ಆಗಲಿ. ಇವತ್ತು ಪೂರ್ತಿ
ನಿಮ್ಮ ದಿನವೇಂತಿಟ್ಕೊಳ್ಳಿ. ಜವಾನನ ಸಹಾಯವೂ ಬೇಡಾ೦ತ ಅನ್ಬೇಡಿ, ಅಷ್ಟೆ."
ಅಷ್ಟು ಹೇಳಿ ನಂಜುಂಡಯ್ಯ, "ಬರ್‍ತೀನಿ", ಎನ್ನುತ್ತ ಹಾಗೆಯೇ ಹೊರಟು

ನವೋದಯ

375

ಬಿಟ್ಟರು.
ಎರಡು ಗಂಟೆಯ ಹೊತ್ತಿಗೆ ಊಟವಾಯಿತು. ಮಜ್ಜಿಗೆ ನೀರಿಲ್ಲದ ಅನ್ನ
ಸಾರುಗಳ ಊಟ.
'ಊಟ ಮುಗಿಯೋವರೆಗೂ ಮಾತಾಡ್ಬಾರದು. ಚೆನ್ನಾಗಿದೆ ಅಥವಾ ಇಲ್ಲ
ಅನ್ನೋದೆಲ್ಲಾ ಆಮೇಲೆ'_ಎಂಬುದು, ಅವರು ಬೆಂಗಳೂರು ಬಿಡುವುದಕ್ಕೆ
ಮುಂಚೆಯೇ ಸುನಂದಾ ರೂಪಿಸಿದ್ದ ಶರತಗಳಲ್ಲೊಂದು.
ಆ ದಿನ, ತಮ್ಮಿಬ್ಬರದೇ ಸಂಸಾರದ ಮೊದಲ ಅಡುಗೆಯಾಗಿ ಊಟವೂ ಮುಗಿ
ಯಿತು.ಜಯದೇವ ಸುನಂದೆಯನ್ನು ದಿಟ್ಟಿಸಿ ನೋಡುತ್ತಲಿದ್ದನೇ ಹೊರತು ಮಾತು
ಮಾತ್ರ ಆಡಲಿಲ್ಲ.ಗಂಡನ ಅಭಿಪ್ರಾಯ ತಿಳಿಯಲು ಹೆಂಡತಿ ಕಾದು ಬೇಸತ್ತಳು.
ಕೊನೆಗೆ ಸಹಿಸಲಾರದೆ ಆಕೆ ಎಂದಳು:
"ಹೇಗಿತ್ತು ಅಡುಗೆ?"
ಜಯದೇವ ಮುಗುಳು ನಕ್ಕು ನುಡಿದ:
"ಚೆನ್ನಾಗಿತ್ತು ಕಣೇ."
ಸುನಂದಾ ಬಿಕ್ಕುತ್ತ ಅತ್ತಳು:
"ಬೇಳೆ ಬೇಯದೆ ಇದ್ದರೆ ನಾನೇನ್ಮಾಡ್ಲಿ? ಹಸಿ ಸೌದೆ ತರಿಸ್ದೋರು ನೀವೇ
ಅಲ್ವ?ಅಡುಗೆ ಕೆಟ್ಟರೆ ಅದು ನನ್ನ ತಪ್ಪೆ?"
"ಅದಕ್ಕೆ ಯಾಕ್ಚಿನ್ನ ಅಳೋದು?"
"ಮೊಸರಾದರೂ ಕೊಂಡ್ಕೊಂಡಿದ್ದಿದ್ರೆ...."
"ಮರೆತ್ಹೋಯ್ತು. ಏನ್ಮಾಡೋಣ?"
"ಹಿಹ್ಹೀ... ಅಂತೂ ನನಗೆ ಅಡುಗೆ ಮಾಡೋಕೆ ಬರೋಲ್ಲ ಅಂತ ತಾನೇ ನೀವು
ಹೇಳೋದು?"
"ಛೆ! ಛೆ!ಎಲ್ಲಾದರೂ ಉಂಟೆ? ಅಂದೇನಾ ಹಾಗೆ ಯಾವತ್ತಾದರೂ?"
"ಮತ್ತೆ? ಅಡುಗೆ ಚೆನ್ನಾಗಿತ್ತೂಂತ ಯಾಕಂದ್ರಿ?"
"ತಪ್ಪಾಯ್ತು. ಈಗ ನಿಜ ಹೇಳ್ತೀನಿ. ಅಡುಗೆ ಚೆನ್ನಾಗಿರ್ಲಿಲ್ಲ."
ಆ ಮಾತು ಕೇಳಿದ ಮೇಲಂತೂ ಸುನಂದಾ ಜೋರಾಗಿಯೇ ರಾಗವೆಳೆದಳು:
"ಊ......ಊ......ನೀವು ನಮ್ಮಮ್ನಿಗೆ ಬರೀತೀರಾ... ವೇಣೂಗೆ ಬರೀ
ತೀರಾ..."
"ಇಲ್ಲ. ಖಂಡಿತ ಬರೆಯೋಲ್ಲ."
"ಮಾತು ಕೊಡಿ."
ಕೈಯ ಮೇಲೆ ಕೈ ಇಡುವ ವಾಗ್ದಾನಕ್ಕಾಗಿ ಜಯದೇವ ಆಕೆಯ ಬಳಿಗೆ ಬಂದ.
ಹಾಗೆ ಬಂದವನು, ಬಾಹುಗಳಿಂದ ಆಕೆಯನ್ನು ಬಿಗಿಯಾಗಿ ಬಳಸಿದ.
"ಸುನಂದಾ..."
"ಏನು?"
ಆಗಲೆ ಕ್ಷೀಣವಾಗಿತ್ತು ಆಕೆಯ ಸ್ವರ.
"ಗೃಹಪ್ರವೇಶದ ಅಡುಗೇಲಿ ಒಂದು ಕಡಮೆಯಾಗಿತ್ತು."
“ಯಾವುದು?"
“ಸಿಹಿ."
"ಮಹಾ. ನೀವು ಹೇಳಿದ್ರೆ ಮಾಡ್ತಿದ್ದೆ."
"ಇನ್ನೂ ತಡವಾಗಿಲ್ಲ ಬಿಡು. ಒಬ್ಬರಿಗೊಬ್ಬರು ಕೊಟ್ಟುಕೊಂಡರಾಯ್ತು."
ಮಾತಿನ ಜತೆಯಲ್ಲೆ ಕೃತಿ.
"ಥೂ ಬಿಡೀಂದ್ರೆ!"
ಕಂಬನಿಯಿಂದ ತೇವಗೊಂಡಿದ್ದ ಕಣ್ಣುಗಳಿಗೂ ಒಂದೊಂದು.
"ಇನ್ನೆಲ್ಲಾದರೂ ರಂಪ ಮಾಡೀಯೆ! ಹುಂ!"
"ಹೋಗ್ರಿ! ಗುಂಡ ಇದ್ದ ಹಾಗಿದೀರಾ ನೀವು."
ಆಕೆಯನ್ನು ಬಿಟ್ಟು ದೂರ ಸರಿದು ಜಯದೇವನೆಂದ:
"ಅಯ್ಯೋ ಪಾಪ! ಏನೂ ತಿಳೀದ ಎಳೇ ಮಗು ನೀನು."
ಅಷ್ಟರಲ್ಲೇ ಜವಾನ ಬಾಗಿಲ ಬಳಿ ನಿಂತು, ಕೆಮ್ಮಿ, ತನ್ನ ಆಗಮನವನ್ನು
ಸಾರಿದುದರಿಂದ, ಮಾತುಕತೆ ಅಲ್ಲಿಗೆ, ನಿಂತಿತು. ಸುನಂದಾ ಪಿಸು ದನಿಯಲ್ಲಿ ಅಂದಳು;
"ಎಷ್ಟು ಹೊತ್ತಾಯ್ತೋ ಏನೋ ಆತ ಬಂದು...."
"ಇರಲಿ ಬಿಡು.. ನಾವು ಹೊಸತಾಗಿ ಮದುವೆಯಾದೋರೂಂತ ಆತನಿಗೂ
ಗೊತ್ತಿದೆ."
ಶಾಲೆಯ ಜವಾನನ ಕೈಯಲ್ಲಿ ಬಿಟ್ಟಿ ದುಡಿಸಿಕೊಳ್ಳುವುದು ಜಯದೇವನಿಗೇನೂ
ಇಷ್ಟವಿರಲಿಲ್ಲ. ಹೊರಬಂದು ಆತ ಹೇಳಿದ:
"ಇವತ್ತು ಕೆಲಸ ಸ್ವಲ್ಪ ಜಾಸ್ತಿ ಇದೆ ಕಣಯ್ಯ. ಮಾಡೋದಕ್ಕಾಗುತ್ತಾ
నిನ್ಕೈಲಿ?"
“ಹೇಳಿ ಸೋಮಿ."
"ಮೊದಲು ಒಂದು ಪಾವು ಮೊಸರು ಮತ್ತು ಅಚ್ಛೇರು ಒಳ್ಳೇ ಹಾಲು
ತಗೊಂಡ್ಬಾ. ಇಷ್ಟು ಹೊತ್ನಲ್ಲಿ ಸಿಗುತ್ತಾ?"
"ಓ. ಗೌಳಿಗರ ಗಲ್ಲೀಲಿ ಸಿಕ್ಕಿಯೇ ಸಿಕ್ತೈತೆ."
"ಸರಿ ಹಾಗಾದ್ರೆ."
ಎರಡು ಪಾತ್ರೆಗಳೊಡನೆ ಆತ ಹೊರಟಾಗ ಸುನಂದಾ ಎಚ್ಚರಿಕೆಯ ಮಾತನ್ನಾಡಿ
ದಳು:
"ಪಾತ್ರೆ ಒಂದಕ್ಕೊಂದು ಮುಟ್ಟಿಸ್ಬೇಡ. ಹಾಲು ಕೆಟ್ಹೋಗುತ್ತೆ".

"ಆಗಲಿ ತಾಯಿ," ಎಂದ ಜವಾನ.
ಮತ್ತೆ ಸಾಮಾನುಗಳನ್ನು ಸರಿಯಾಗಿ ಜೋಡಿಸಿ ಇಡುವ ಕೆಲಸ ನಡೆಯಿತು.
"ಇದ್ದಿಲು ಒಲೇಲಿ ಅಡುಗೆ ಮಾಡೋದು ಎಷ್ಟು ಸುಲಭ!" ಎಂದಳು ಸುನಂದಾ,
ಬೆಂಗಳೂರಿನ ನೆನಪಾಗಿ.
"ಹೊಗೆ ಬರೋದಿಲ್ಲ, ಅಲ್ವೆ?"
"ಹೂಂ."
"ಸ್ಟವ್ನಲ್ಲಿ ಇನ್ನೂ ಸುಲಭ. ಕೈಗೆ ಕರಿಯಾಗೋದೇ ಇಲ್ಲ."
“ಗೇಲಿ ಮಾಡ್ತಿದೀರಾ? ಇದ್ದಿಲು ಒಲೆ ಕೊಂಡುಕೊಳ್ಳೋಕೆ ಆಗೊಲ್ಲ ಅಂತ
ಸ್ಪಷ್ಟವಾಗಿ ಹೇಳ್ಬಾರ್‍ದೆ?"
"ರಾಶಿ ರಾಶಿಯಾಗಿ ಸೌದೆ ಸಿಗ್ತಿರೋ ಊರಲ್ಲಿ ಇದ್ದಿಲು ಎಲ್ಲಿಂದ್ಬಂತೆ? ಈ
ಊರಲ್ಲಿ ಇದ್ದಿಲು ಒಲೆ ಯಾರೂ ಉಪಯೋಗ್ಸೋದಿಲ್ಲ; ಅಂಗಡೀಲಿ ಅದನ್ನ
ಮಾರೋದೂ ಇಲ್ಲ."
ಹೋಗಲಿ ಬಿಡಿ, ನೀವೇ ಗೆದ್ದಿರಿ," ಎಂದಳು ಸುನಂದಾ ಗಂಡನ ಮಾತು ನಿಜ
ವೆಂಬುದನ್ನು ಮನಗಂಡು.
ಹಾಲು ಮೊಸರು ತ೦ದ ಬಳಿಕ ಜವಾನ, ಒ೦ದು ಹೊರೆ ಒಣಕಟ್ಟಿಗೆಗಾಗಿ
ನಂಜುಂಡಯ್ಯನವರ ಮನೆಗೆ ನಡೆದ.
ಬೆಂಗಳೂರಿನಿಂದ ಅಷ್ಟೊಂದು ತಂದಿದ್ದರೂ ಮನೆಗೆ ಬೇಕಾಗಿದ್ದ ಸಾಮಗ್ರಿಗಳು
ಇನ್ನೂ ಹಲವಿದ್ದುವು. ಗಂಡ ಹೆಂಡತಿ ಇಬ್ಬರೂ ಕುಳಿತು ಪಟ್ಟಿ ಸಿದ್ಧಗೊಳಿಸಿದರು.
ಹತ್ತಾರು ಹೆಸರುಗಳನ್ನು ಬರೆದಾದ ಮೇಲೆ ಸುನಂದಾ ಅಂದಳು:
"ಬಾವಿ ಹಗ್ಗ ಬರೆದೇ ಇಲ್ಲ. ಬೆಳಗ್ಗೆ ಪಕ್ಕದ್ಮನೆಯಿಂದ ಇಸಕೊಂಡು ಬಂದದ್ದು
ವಾಪಸ್ಸು ಕೊಡೋದು ಬೇಡ್ವೇನು?"
"ಅದನ್ನೂ ಬರಿ."
"ವಾರಕ್ಕೊಂದ್ಸಲ ಅಲ್ವೆ ಇನ್ನು ಸಾಮಾನು ತರೋದು?"
“ಹೂಂ. ಏನಿದ್ದರೂ ಭಾನುವಾರವೇ. ಆಗಾಗ್ಗೆ ಜವಾನನ ಕೈಲಿ ಏನೂ
ತರಿಸ್ಬಾರ್‍ದು.”
“ಆಗಲಿ. ಸೂಜಿ ದಾರ ಬೇಕು."
"ಬರ್‍ಕೊ. ಉಣ್ಣೆ ಈಗ್ಲೆ ಬೇಡ ತಾನೆ?"
"ಹೋಗ್ರಿ...."
...ಸೌದೆಯೊಡನೆ ಜವಾನ ಬಂದ ಮೇಲೆ ಉಡುಪು ಧರಿಸಿ ಎರಡು ದೊಡ್ಡ
ಕೈ ಚೀಲಗಳು, ಮೂರು ಸಣ್ಣ ಶೀಷೆಗಳೊಡನೆ ಜಯದೇವ ಸಿದ್ಧನಾದ.
"ನಾನೂ ಬರ್‍ತೀನಿ," ಎಂದಳು ಸುನಂದಾ.
“ಬೇಡ ಕಣೇ. ಇದು ಹಳ್ಳಿ ಊರು. ಬಂದದ್ದೇ ತಡ, ಅಲೆಯೋಕೆ

48
ಹೊರಟ್ರು-ಅಂತ ಜನ ಏನಾದರೂ ಅಂದ್ಕೋತಾರೆ."
"ನಾಚ್ಕೆ ಆಗುತ್ತೇನೋ, ನನ್ನ ಕರಕೊಂಡು ಹೋಗೋಕೆ?"
"ಹಾಗಲ್ವೆ. ಇವತ್ತೇ ಬೇಡ. ಎಲ್ಲಾ ಸ್ವಲ್ಪ ಸ್ವಲ್ಪವಾಗಿ ಮಾಡೋಣ.
ಹೇಳಿದ್ದೆಲ್ಲ ಮರೆತೇ ಹೋಯ್ತೇನು? ನಾವು ಜನರ ಜತೇಲೂ ಇರ್ಬೇಕು ಅವರಿಗಿಂತ
ಸ್ವಲ್ಪ ಭಿನ್ನವಾಗಿಯೂ ಇಲ್ಬೇಕು. ಹೌದಾ?"
"ಹೋಗಿ. ನಿಮ್ಮ ಹತ್ತಿರ ಮಾತಾಡಿ ಏನು ಪ್ರಯೋಜನ?"
"ಸಾಮಾನು ಯಾವುದೂ ಮರೆತಿಲ್ಲ ತಾನೆ?"
"ಇಷ್ಟು ಸಾಕು ಇವತ್ತಿಗೆ."
"ಹೊರಡ್ತೀನಿ ಹಾಗಾದರೆ."
“ಹೂಂ."
ಜಯದೇವ ಒಂದು ನಿಮಿಷ ಸುನಂದೆಯನ್ನು ದಿಟ್ಟಿಸುತ್ತ ನಿಂತ. ಆಕೆಗೆ ನೆನ
ಪಾದಂತೆಯೆ ತೋರಲಿಲ್ಲ. ಆತ ಹೊರಡದೇ ಇದ್ದುದನ್ನು ಕಂಡು ಸುನಂದಾ
ಕೇಳಿದಳು:
"ಯಾಕ್ನಿಂತಿದೀರಾ ಇನ್ನೂ?"
"ಸಾಮಾನೆಲ್ಲ ಸಾಲ ಬರಸ್ಕೊಂಡು ಬರ್‍ಲಾ?"
"ಅಯ್ಯೋ ರಾಮ! ಮರೆತೇ ಹೋಯ್ತು ನಂಗೆ!" ಎನ್ನುತ್ತ ಸುನಂದಾ,
ಪೆಟ್ಟಿಗೆ ತೆರೆದು ಹತ್ತು ರೂಪಾಯಿನ ಒಂದು ನೋಟು ಹೊರತೆಗೆದು, ಕೇಳಿದಳು:
“ಸಾಕಾ ಇಷ್ಟು?"
"ಇನ್ನೂ ಒಂದು ನೋಟು ಕೊಟ್ಟರು."
ಇನ್ನೊಂದನ್ನು ಕೊಡುತ್ತ ಆಕೆಯೆಂದಳು:
"ಉಳಿಯೋದು ಮೂವತ್ತೆ ರೂಪಾಯಿ."
“ಸಂಬಳ ಬರೋ ತನಕ ಅಷ್ಟು ಸಾಕು."
ಜವಾನ, ಉಪಾಧ್ಯಾಯರ ಬರವನ್ನು ಇದಿರು ನೋಡುತ್ತ ಅಂಗಳದಲ್ಲೆ ಇದ್ದ.
ಜಯದೇವನೆಂದ:
“ಹಾಲಿದೆ. ಒಣಗಿದ ಸೌದೆ ಇದೆ. ನಿಮ್ಮಮ್ಮ ಕಟ್ಟಿ ಕೊಟ್ಟ ರವೆ ಇದೆ.
ಬರೋದರೊಳಗೆ ಒಂದಿಷ್ಟು ಉಪ್ಪಿಟ್ಟು ಕಾಫಿ ಮಾಡ್ತೀಯಾ?"
“ಹೂಂ."
"ಎಷ್ಟು ಜನಕ್ಕೆ ಹೇಳು?"
"ಗೊತ್ತು ಹೋಗ್ರಿ. ಮೂರು ಜನಕ್ಕೆ."
"ಬುದ್ಧಿವಂತೆ."
"ಆ ಆನಂದ ವಿಲಾಸ ದಾಟ್ಕೊಂಡು ಹೋಗಬೇಕೇನೋ ದಿನಸಿನ ಅಂಗಡಿಗೆ?"
"ಹೆದರಬೇಡ ಮಹಾರಾಯ್ತೀ. ಅಂಗಡಿ ಮೊದಲೇ ಸಿಗುತ್ತೆ. ಅಲ್ಲಿಂದಲೇ

ನವೋದಯ

379

ವಾಪಸಾಗ್ತೀನಿ."
"ತಡ ಮಾಡಬೇಡಿ. ಒಬ್ಬಳಿಗೇ ಇಲ್ಲಿ ಬೇಜಾರಾಗುತ್ತೆ."
"ಮಧ್ಯರಾತ್ರೆಯೊಳಗೆ ಬಂದ್ಬಿಡ್ತೀನಿ!"
"ಆಂ! ನಾನು ಎಲ್ಲಿಗಾದರೂ ಹೊರಟ್ಹೋಗ್ತೀನಿ, ನೋಡ್ಕೊಳ್ಳಿ!"
"ವಾಪಸು ಬಂದೇ ಬರ್‍ತೀಯಾ. ಇಷ್ಟೊತ್ನಲ್ಲಿ ಊರಿಗೆ ಹೋಗೋಕೆ ಬಸ್ಸಿದ್ದರೆ
ತಾನೆ?"
ಸೋಲನ್ನೊಪ್ಪಿಕೊಳ್ಳುವ ಸಂದರ್ಭ ಬಂದರೂ ಕೊನೆಯ ಅಸ್ತ್ರ ತನ್ನದೇ ಎಂದು
ಸುನಂದಾ ಅಂದಳು:
“ಹೊರಡೋಕೆ ನಿಮಗೆ ಮನಸ್ಸೇ ಬರೊಲ್ವೇನೊ? ಇನ್ನೂ ಇಲ್ಲೇ ಇದೀರಿ!"
“ನಾನು ಕಣ್ಣೆದುರಿಗೆ ಇರೋದು ನಿನಗೆ ಇಷ್ಟವಿಲ್ಲವಾದರೆ, ಇಗೋ ಹೊರಟೆ!"
"ಟೈಂಪೀಸು ನೋಡ್ಕೊಂಡು ಹೋಗಿ. ನಡೀತಿದೆ. ಐದು ಘ೦ಟೆಗೆ ಐದು
ನಿಮಿಷ ಇದೆ ಈಗ. ಆರು ಘಂಟೆಗೆ ಆರು ನಿಮಿಷ ಇರೋದರೊಳಗೆ ಬರ್‍ತೀರಿ
ತಾನೆ?"
“ನೋಡೋಣ."
ನಿಂತು ಬೇಸರವಾಗಿದ್ದ ಜವಾನ ಅಂಗಳದಲ್ಲೆ ಕುಳಿತಿದ್ದ. ನಂಜುಂಡಯ್ಯನವರ
ಮನೆಯಲ್ಲಾದರೆ ಬಾಗಿಲ ಬಳಿ ಯಾವಾಗಲೂ ಅವನು ನಿಂತೇ ಇರಬೇಕು. ಇಲ್ಲಿ
ಹಾಗಲ್ಲ. ಯುವಕ ಹೊಸ 'ಮೇಸ್ಟ್ರು' ಒಮ್ಮೆಯೂ ಆವರೆಗೆ ಮುಖ ಗಂಟಿಕ್ಕಿರಲಿಲ್ಲ.
ಹೊರಬಂದ ಜಯದೇವನನ್ನು ಕಂಡು ಜವಾನ ಎದ್ದು ನಿಂತು, ಕೈಚೀಲ
ಗಳನ್ನೂ ಶೀಷೆಗಳನ್ನೂ ತಾನು ಪಡೆದ. ಬಾಗಿಲ ಬಳಿ ನಿಂತಿದ್ದ ಸುನಂದೆಯನ್ನೊಮ್ಮೆ
ತಿರುಗಿ ನೋಡಿ, ಜಯದೇವ ಬೀದಿಗಿಳಿದ.
ಹಾದಿ ನಡೆಯುತಿದ್ದಂತೆ ಜವಾನ ಹೇಳಿದ:
"ಸೋಮಿಯೋರ್‍ನ ಇದಕ್ಕಿಂದೇನೇ ನಾನು ನೋಡಿವ್ನಿ."
"ಹೌದೇನು? ನಿನ್ಹುಡುಗ ಶಾಲೆಗೆ ಬರ್‍ತಿದ್ನಾ?"
"ಊಂ."
"ಏನು ಹೆಸರು?"
"ಚಿಕ್ಕಣ್ಣ ಅಂತ"
ಜಯದೇವನಿಗೆ ನೆನಪಾಗಲಿಲ್ಲ. ಜ್ಞಾಪಿಸಿಕೊಳ್ಳುವುದು ಅನಗತ್ಯವೆಂದು
ಸೂಚಿಸುವಂತೆ ಜವಾನನೇ ಹೇಳಿದ:
“ಅವನು ಇಸ್ಕೂಲಿಗೋಗಿದ್ದು ಒಂದೇ ವರ್ಸ. ಆಮ್ಯಾಕೆ ಕಳ್ಮುಂಡೇ ಮಗ
ಓಡೋಗ್ಬುಟ್ಟ."
"ಈಗೆಲ್ಲಿದಾನೆ?"
"ಗೊತ್ತಿಲ್ಲ ಸೋಮಿ. ಎಲ್ಗೋದ್ನೊ..."

380

ಸೇತುವೆ

ಆ ಆಳವಾದ ಕಣ್ಣುಗಳು ಬತ್ತಿಯೇ ಹೋಗಿದ್ದುವು. ಇನ್ನು ಆತ ಅಳುವುದು
ಸಾಧ್ಯವೇ ಇಲ್ಲವೇನೋ ಎಂಬಂತೆ. ಜಯದೇವ, ಮೊದಲ ಬಾರಿಗೆ ಕಾಣುವವನಂತೆ
ಸೂಕ್ಶ್ಮವಾಗಿ ಆತನನ್ನು ದಿಟ್ಟಿಸಿದ. ಎಷ್ಟು ವ್ಯಥೆಯನ್ನು ಮುಚ್ಚಿಟ್ಟುಕೊಂಡಿತ್ತೊ
ಆ ಹೃದಯ!
...ಜಯದೇವನಿನ್ನು ಆ ಊರಲ್ಲಿ ಯಾವುದಾದರೂ ಅಂಗಡಿಗೆ ಖಾಯ೦
ಗಿರಾಕಿ. ನಂಜುಂಡಯ್ಯನವರ ಅಣ್ಣನ ಅಂಗಡಿಯನ್ನೇ ಗೊತ್ತುಮಾಡುವುದು
ವಾಸಿಯೋ ಏನೋ.ಬೇರೆ ದೊಡ್ಡ ಅಂಗಡಿಯೊಂದೂ ಇರಲಿಲ್ಲ ಎಂದಲ್ಲ...
ಆದರೆ, ಆ ಬೀದಿಯಲ್ಲಿ ಮೊದಲು ಆತನ ಕಣ್ಣಿಗೆ ಬಿದ್ದುದು, ಜಯರಾಮ
ಶೆಟ್ಟರ ಅಂಗಡಿ. ಹಿಂದಿನ ನೆನಪುಗಳ ಸಿಹಿ ಕಹಿ ದೊರೆಯುವುದಕ್ಕೆ ಮುಂಚೆಯೆ,
ಗಲ್ಲದ ಮೇಲೆ ಕುಳಿತಿದ್ದ ನಾಗರಾಜನನ್ನು ಜಯದೇವ ಕಂಡ. ಆತನ ವಿದ್ಯಾರ್ಥಿಯೇ.
[ಬೆಲೆ ಕಡಮೆಯಾಗದೆ ಹೋದರೂ ಒಳ್ಳೆಯ ಸಾಮಾನಾದರೂ ಸಿಗಬಹುದು ತಾನೆ?]
ನಾಗರಾಜ;ತಾನು ಪಾಠ ಹೇಳಿಕೊಟ್ಟಿದ್ದ ದಿನಗಳು; ಉಚಿತವಾಗಿ ದೊರೆತಿದ್ದ
ಕೊಠಡಿ;ಆತನ ಅಕ್ಕ ಶ್ಯಾಮಲಾ...
ಜಯದೇವನನ್ನು ಗುರುತಿಸಿದ ನಾಗರಾಜ ಹೊರಕ್ಕೆ ನೆಗೆದು ಬಂದು ವಂದಿಸಿದ:
"ನಮಸ್ಕಾರ ಸಾರ್. ನಿನ್ನೆಯೇ ಬಂದಿರೀಂತ ಗೊತ್ತಾಯ್ತು ಸಾರ್. ನಮ್ಮ
ಮನೆಗೆ ಯಾಕ್ಸಾರ್ ಬರ್‍ಲಿಲ್ಲ?"
[ಚಿಕ್ಕವನು. ಇನ್ನೂ ಎರಡು ವರ್ಷ ಏಕವಚನ ಉಪಯೋಗಿಸಿದರೂ ತಪ್ಪಲ್ಲ.
ಅನಂತರ ಆತ ಪ್ರಸಿದ್ಧ ವ್ಯಾಪಾರಿ ನಾಗರಾಜಶೆಟ್ಟಿಯಾಗುವ. 'ಆರೋಗ್ಯವಾಗಿದೀರಾ
ಶೆಟ್ಟರೆ?' 'ಸಾಮಾನು ಕೊಡ್ತೀರೇನಪ್ಪಾ?']
"ದಿನವೆಲ್ಲ ಮನೆ ಏರ್ಪಾಟು ಮಾಡ್ತಾನೇ ಇದೀನಿ, ನಾಗರಾಜ. ಒಂದಿಷ್ಟು
ಸಾಮಾನು ಕೊಂಡುಕೊಳ್ಳೋಕೆ ಅಂತ್ಲೆ ಬಂದೆ."
"ಬನ್ನಿ ಸಾರ್, ಅದಕ್ಕೇನು?"
"ನಿಮ್ಮ ತಂದೆ ಆರೋಗ್ಯವಾಗಿದಾರಾ? ಮನೇಲಿー"
"ಎಲ್ಲರೂ ಆರೋಗ್ಯವಾಗಿದಾರೆ ಸಾರ್. ತಂದೆ ಊರಲ್ಲಿಲ್ಲ. ನಮ್ಮ ಅಕ್ಕನ್ನ
ಕರಕೊಂಡು ಹಾಸನಕ್ಕೆ ಹೋಗಿದಾರೆ ಸಾರ್. ['ಇನ್ನೂ ಹಳೇ ಕಥೆಯೇ.'] ನಮ್ಮಕ್ಕ
ಹೆರಿಗೆಗೆ ಬಂದಿದ್ಲು ಸಾರ್. ['ಸದ್ಯಃ!'] ಗಂಡುಮಗು ಸಾರ್."
"ಸಂತೋಷವಪ್ಪಾ."
"ಏನೇನು ಬೇಕ್ಸಾರ್ ಸಾಮಾನು? ಬನ್ನಿ, ಕೂತ್ಕೊಳ್ಳಿ ಸಾರ್."
ಸಾಬೂನು ತುಂಬಿ ಬಂದಿದ್ದ ಪೆಟ್ಟಿಗೆಯನ್ನೆ ಮಗುಚಿ ಹಾಕಿ ಆಸನ ಸಿದ್ಧಗೊಳಿ
ಸಿದ್ದರು. ಅದಕ್ಕೆ ಹೊಡೆದಿದ್ದ ಡಬ್ಬದ ಪಟ್ಟಿಯೊಂದು, ಪಕ್ಕದಿಂದ ಅಪಾಯಕಾರಿ
ಯಾಗಿ ಹೆಡೆ ಎತ್ತಿತ್ತು. ಪಾಯಜಾಮ ಅದಕ್ಕೆ ಆಹುತಿಯಾಗದಂತೆ ಎಚ್ಚರ ವಹಿಸುತ್ತ
ಜಯದೇವ, ಆ ಪೀಠದ ಮೇಲೆ ಕುಳಿತುಕೊಂಡ.

ನವೋದಯ

381

ಪಟ್ಟಿಯನ್ನೋದಿದ ಬಳಿಕ, "ನೀಲಿ ಒಂದು ಮುಗಿದು ಹೋಗಿದೆ. ಪಕ್ಕದ
ಅಂಗಡಿಯಿಂದ ತರಿಸ್ಕೊಡ್ತೀನಿ ಸಾರ್", ಎ೦ದು ಹೇಳಿ ನಾಗರಾಜ, ಅಂಗಡಿಯ
ಆಳನ್ನು ಅಟ್ಟಿದ.
ಬೇರೆ ಗಿರಾಕಿಗಳು ಹೆಚ್ಚು ಜನ ಇರಲಿಲ್ಲವಾದರೂ ಎಲ್ಲ ಸಾಮಾನುಗಳನ್ನೂ
ಕಟ್ಟಲು ಅರ್ಧ ಘಂಟೆ ಹಿಡಿಯಿತು.
ಹದಿಮೂರು ರೂಪಾಯಿ ಆರಾಣೆ ಒಂಭತ್ತು ಕಾಸಿನ 'ಜುಮ್ಲಾ.'
ಜಯದೇವ ಹಣ ಹೊರತೆಗೆದಾಗ ನಾಗರಾಜನೆಂದ:
"ಪರವಾಗಿಲ್ಲ ಸಾರ್, ಲೆಕ್ಕ ಬರೆದಿಡೋಣ."
"ನಗದಿ ಇಂದು ಕಡ ನಾಳೆ_ಅಂತ ಬೋರ್ಡು ಹಾಕಿದೀಯಲ್ಲಯ್ಯ?"
"ಬೋರ್ಡಿಗೇನ್ಸಾರ್?"
"ಇರಲಿ, ತಗೋ. ಯಾವಾಗಲೂ ನಗದಿ ವ್ಯಾಪಾರವೇ ಮಾಡ್ಬೇಕೂಂತ
ತೀರ್ಮಾನಿಸ್ಬಿಟ್ಟಿದ್ದೀನಿ.”
ನಿರುಪಾಯನಾಗಿ ನಾಗರಾಜ ನೋಟುಗಳನ್ನು ಸ್ವೀಕರಿಸಿ, ಮರಳಿ ಕೊಡಬೇಕಾದ
ಚಿಲ್ಲರೆ ಹಣ ಎಣಿಸಿದ.
"ಸುಗಂಧ ಬತ್ತೀಂತ ಇದೊಂದು ಹೊಸ ಊದುಕಡ್ಡಿ ಬಂದಿದೆ. ಈ ಪ್ಯಾಕೆಟ್ಟು
ತಗೊಳ್ಳಿ ಸಾರ್."
ಗಲ್ಲದ ಮಗ್ಗುಲಿಂದ ಕಟ್ಟು ಹೊರಬಂತು.
"ಇದನ್ನೆ ಕೊಂಡ್ಕೋಬಹುದಾಗಿತ್ತಲ್ಲಯ್ಯ ಹಾಗಾದರೆ? ಎಷ್ಟಿದಕ್ಕೆ?"
"ಇದು ಮಾರಾಟದ್ದಲ್ಲ ಸಾರ್. ಸ್ಯಾಂಪಲ್ ಬಂದಿರೋದು. ಫ್ರೀ ತಗೊಳ್ಳಿ"
ಫ್ರೀ! [ಗುರುಕಾಣಿಕೆ!]
"ಸರಿಯಪ್ಪ."
"ಯಾವಾಗಲೂ ಚೀಟಿ ಕಳಿಸ್ಕೊಟ್ರೆ ಸಾಕು ಸಾರ್. ನಮ್ಮ ಆಳು ಸಾಮಾನು
ತಂದ್ಕೊಡ್ತಾನೆ."
"ಹೂಂ."
[ಎರಡು ವರ್ಷಗಳ ಹಿಂದೆಯಾಗಿದ್ದರೆ ಸ್ವತಃ ನಾಗರಾಜನೇ ಸಾಮಾನು
ತರುತ್ತಿದ್ದ.]
"ನಮ್ಮ ಮನೆಗೆ ಯಾವತ್ತು ಬರ್‍ತೀರಾ ಸಾರ್?"
"ಇನ್ನು ಇಲ್ಲೇ ಇರ್‍ತೀನಲ್ಲಪ್ಪ. ಯಾವಾಗಲಾದರೂ ಬಂದರಾಯ್ತು."
"ಎಲ್ಲಿ ಸಾರ್ ವಾಸ?"
"ಗುರುಸಿದ್ದಪ್ಪನವರ ಮನೆ ಗೊತ್ತಾ?"
"ಅವರ ಮನೇನಾ ಸಾರ್? ಗೊತ್ತು."
"ಬಾ ಒಂದ್ಸಾರೆ."

382

ಸೇತುವೆ

“ನೀವು ಒಬ್ಬರೇ ಇದೀರಾ ಸಾರ್?”
[ಅಯ್ಯೋ, ಪುಣ್ಯಾತ್ಮ!]
"ಒಬ್ನೇ ಇದ್ದಿದ್ರೆ ಇಷ್ಟೆಲ್ಲಾ ತಾಪತ್ರಯ ಇರ್‍ತಿತ್ತೆ ನಾಗರಾಜ?"
"ಗೊತ್ತು ಸಾರ್! ಗೊತ್ತು! ನಿನ್ನೇನೇ ಗೊತ್ತಾಯ್ತು!"
[ಗೊತ್ತಿದ್ದರೂ ಕೇಳಿದ್ದ ಖಿಲಾಡಿ. ಆ ಕಣ್ಣುಗಳಲ್ಲಿ ಮಿಂಚಿದ ಹೊಳಪೋ__
ತುಟಿಗಳ ಮೇಲೆ ಕುಣಿದ ನಗೆಯೋ.]
ಗುರುಶಿಷ್ಯರ ಸಂಭಾಷಣೆಯಿಂದ ಇತರ ಗಿರಾಕಿಗಳಿಗೆ ಸಾಮಾನು ಸಿಗುವುದು
ತಡವಾಯಿತು. ಆದರೆ, ಬೇಗನೆ ಮನೆಗೆ ಹೋಗಬೇಕೆಂಬ ಆತುರವಂತೂ ಯಾರಿಗೂ
ಇರಲಿಲ್ಲ. "ಹೊತ್ತಾಯ್ತು" ಎಂದು ಒಬ್ಬರೂ ಹೇಳಲಿಲ್ಲ. ಎಲ್ಲರೂ ಅಂಗಡಿಯ ಮಾಲಿಕನ ಆದರಕ್ಕೆ ಪಾತ್ರನಾದ ಗಿರಾಕಿಯನ್ನು ನೋಡುತ್ತ ನೀತರು.
ಎಣ್ಣೆಯ ಶೀಷೆಗಳನ್ನೂ ಒಂದು ಚೀಲವನ್ನೂ ಬಾವಿಯ ಹಗ್ಗವನ್ನೂ ಜವಾನನ
ಕೈಗೆಕೊಟ್ಟು, ಇನ್ನೊಂದು ಚೀಲವನ್ನು ತಾನೆತ್ತಿಕೊಂಡು, ಜಯದೇವ ಮನೆಯ ಕಡೆ
ಹೊರಟ.
ಪುಟ್ಟ ಹುಡುಗರು ಬೀದಿಯಲ್ಲಿ ಆಟವಾಡುತ್ತಿದ್ದರು. ಅವರಿಗೆ ಜಯದೇವ
ಅಪರಿಚಿತ. ಆದರೆ ನಾಳೆ, ತಾನು ಉಪಾಧ್ಯಾಯನೆಂಬುದು ಅವರಿಗೆಲ್ಲ ತಿಳಿದಾಗ, ಆ
ಹುಡುಗರು ಪ್ರಾಥಮಿಕ ಶಾಲೆಯವರಿರಲಿ ಮಾಧ್ಯಮಿಕ ಶಾಲೆಯವರಿರಲಿ, ಬೀದಿ
ಯುದ್ದಕ್ಕೂ ನೂರು ನಮಸ್ಕಾರಗಳು ಆತನಿಗೆ...
ಮನೆ ತಲಪಿದಾಗ, ಉಪ್ಪಿಟ್ಟು ಕಾಫಿ ಸಿದ್ಧವಾಗಿದ್ದುವು.
[ಅಸಹನೆಯಿಂದ ಅದೆಷ್ಟು ಬಾರಿ ಬಾಗಿಲಿನ ಹೊರಗಿಣಿಕಿ ಒಳಹೋಗಿದ್ದಳು
ಸುನಂದೆ!]
ಜವಾನ, ನಂಜುಂಡಯ್ಯನವರ ಮನೆಯಲ್ಲಿ ತಿಂಡಿ ತಿಂದಿದ್ದ, ಊಟ ಮಾಡಿದ್ದ.
ಆದರೆ ಕಾಫಿಯ ಗೌರವ ಎಂದೂ ಆತನಿಗೆ ಅಲ್ಲಿ ದೊರೆತಿರಲಿಲ್ಲ. ಜಯದೇವನ ಮನೆ
ಯಲ್ಲಿ ಕಾಫಿಯ ಬಿಸಿ ಲೋಟ ಕೈಗೆತ್ತಿಕೊಂಡಾಗ, ಆ ಬಾಡಿದ ಮುಖದ ಮೇಲೂ
ಮಂದಹಾಸ ಮಿಂಚಿತು.
...ಸಂಜೆ ಕಳೆದು ಇರುಳಾಯಿತು.
ತಾವು ಕಟ್ಟಿದ್ದ ಗೂಡಿನಲ್ಲಿ ಅವರಿಬ್ಬರೇ.
ಅಕ್ಕಪಕ್ಕದ ಮನೆಗಳಿಂದ ಸ್ವರಗಳು ಕೇಳುತ್ತಿದ್ದುವು. ಹುಡುಗರು ಪಾಠ ಗಟ್ಟಿ
ಮಾಡುತ್ತಿದ್ದರು. ಯಾರೋ ನಗುತ್ತಿದ್ದರು. ಗ೦ಡ, ಹೆಂಡತಿಯನ್ನು ಹೊಡೆಯು
ತ್ತಿದ್ದ. ಕುಡಿದು ಗುಡಿಸಲ ಕಡೆ ಹೊರಟಿದ್ದ ಇಬ್ಬರು, ಹಾಡುತ್ತ ತೂರಾಡುತ್ತ ಆ
ಬೀದಿಯಲ್ಲೆ ನಡೆದು ಹೋದರು.
ಊಟ ಮುಗಿದು ದಂಪತಿ ಅಡಿಕೆಯ ಚೂರು ಮೆಲ್ಲುತ್ತಿದ್ದಾಗ, ಸುನಂದಾ
ಕೇಳಿದಳು:

ನವೋದಯ

383

"ನಾಳೆ ಬೆಳಗ್ಗೆ ಕೆಲಸಕ್ಕೆ ಹೋಗ್ತೀರಿ, ಅಲ್ವಾ?"
"ಹೂಂ."
"ನನಗೊಬ್ಬಳಿಗೇ ಇಲ್ಲಿ ಬೇಜಾರು."
"ಅಡುಗೆ ಮಾಡ್ತಾ ಇರುವಾಗ ನನ್ನ ನೆನಪಾದರೆ ತಾನೆ?"
"ಹೌದು. ನೆನಪಾಗೋದೇ ಇಲ್ಲ!"
"ಮಧಾಹ್ನ ಬಂದ್ಬಿಡ್ತೀನಲ್ಲಾ.”
"ಸಾಯಂಕಾಲ ಎಲ್ಲಿಗೂ ಹೋಗ್ಕೂಡದು."
"ಹೂಂ."
ಗೃಹಪ್ರವೇಶದ ಪರಿಶ್ರಮದಿಂದ ಆಗಲೆ ಆಯಾಸವಾಗಿದ್ದರೂ ಇಬ್ಬರಿಗೂ ನಿದ್ದೆ
ಬಂದಾಗ ನಡುವಿರುಳಾಗಿತ್ತು.



ಬೆಳಗ್ಗೆ ಬೇಗನೆ ನಂಜುಂಡಯ್ಯ ಜಯದೇವನ ಮನೆಗೆ ಬಂದರು. ಬಾಗಿಲಲ್ಲೆ
ನಿಂತು ಅವರೆಂದರು:
"ಹೋಗೋಣ್ವೇನ್ರಿ? ಪಾಠ ಶುರುವಾಗೋಕ್ಮುಂಚೆ ಉಪಾಧ್ಯಾಯರ ಸಭೆ
ಮಾಡೋಣ. ಲಕ್ಕಪ್ಪಗೌಡರು ನಿನ್ನೇನೆ ಕೇಳ್ತಾ ಇದ್ರು_ಹೊಸಬರು ಬಂದಿದಾ
ರಂತಲ್ಲಾ, ಎಲ್ಲಿದಾರೇಂತ."
"ಬಂದ್ಬಿಟ್ಟೆ. ಒಂದೇ ನಿಮಿಷ. ಕೂತ್ಕೊಳ್ಳಿ. ಕುರ್ಚಿ ಇಲ್ದೆ ತೊಂದರೇನೇ...
ಚಾಪೆ ಮೇಲೆ ಸರಿ ಹೋಗುತ್ತೋ ಇಲ್ವೋ", ಎಂದ ಜಯದೇವ, ಅತ್ತಿತ್ತ
ಓಡಾಡುತ್ತ.
"ಈ ಸೂಟಿಗೆ ಕುರ್ಚಿ ಬೇರೆ", ಎನ್ನುತ್ತ ನಂಜುಂಡಯ್ಯ ಚಾಪೆಯ ಮೇಲೆ
ಕುಳಿತರು, ಹ್ಯಾಟು ತೆಗೆದು ಪಕ್ಕದಲ್ಲೆ ಇರಿಸುತ್ತ.
ಒಳಗೆ, ಶರಟು ಪಾಯಜಾಮ ತೊಟ್ಟುಕೊಳ್ಳುತ್ತ ಜಯದೇವ ಕೇಳಿದ.
"ನೇರವಾಗಿ ಶಾಲೆಗೆ ಹೋಗದೆ ಬಳಸಿಕೊಂಡು ಬಂದ್ರಲ್ಲಾ ಸಾರ್."
"ನಿಮ್ಮನ್ನೂ ಕರಕೊಂಡೇ ಹೋಗೋಣ ಅನಿಸ್ತು, ಬಂದ್ನೆಪ್ಪ."
"ಒಳ್ಲೇದಾಯ್ತೂಂತಿಟ್ಕೊಳ್ಳಿ."
ಸುನಂದಾ ಎರಡು ಲೋಟಗಳಲ್ಲಿ ಕಾಫಿ ತಂದಳು. ಆಕೆ, ತನ್ನ ಪಾಲಿನದನ್ನೂ
ಕೊಡುತ್ತಿರಬೇಕೆಂದು ಊಹಿಸಿ ನಂಜುಂಡಯ್ಯ ನಿರಾಕರಿಸಿದರು.
"ನನಗ್ಬೇಡಿ. ಈಗ್ತಾನೇ ಆಯ್ತು."

384

ಸೇತುವೆ

ಜಯದೇವ ಸುನಂದೆಯ ನೆರವಿಗೆ ಬಂದ.
"ತಗೊಳ್ಳಿ ಸಾರ್, ಒಳಗಿನ್ನೂ ಇದೆ."
"ನಾನು ಬರ್‍ತೀನೀಂತ ಕನಸು ಬಿದ್ದಿತ್ತೆ?"
ಸುನಂದಾ ಸತ್ಯವನ್ನೇ ನುಡಿಯಬೇಕಾಯಿತು.
"ನಿಜವಾಗಿಯೂ ಒಳಗಿದೆ. ಇವತ್ತು ಮಾಡಿದ್ದು ಸ್ವಲ್ಪ ಜಾಸ್ತಿಯಾಯ್ತು."
"ಹಾಗಾದರೆ ಸರಿ",ಎಂದರು ನಂಜುಂಡಯ್ಯ, ಲೋಟವನ್ನೆತ್ತಿಕೊಳ್ಳುತ್ತ.
ಸೊಗಸಾಗಿದ್ದ ಆ ಕಾಫಿಯನ್ನು ಸ್ವಲ್ಪ ಹೀರಿ, ರುಚಿ ನೋಡಿ, ಅವರು
ಕೇಳಿದರು:
“ಬೆಂಗಳೂರಿಂದ ತಂದಿರಾ ಪುಡೀನ?"
ಉತ್ತರ ಕೊಡಲು ಸುನಂದಾ ಅಲ್ಲಿರಲಿಲ್ಲ. ಜಯದೇವನೆಂದ:
“ಹೂಂ. ನಮ್ಮತ್ತೆಯ ಸರಬರಾಜು."
"ಮಾಡಿರೋದು ಚೆನ್ನಾಗಿದೆ," ಎಂದರು ನಂಜುಂಡಯ್ಯ, ಬರಿಯ ಪುಡಿಗೇ
ಕೀರ್ತಿ ಸಲ್ಲಬಾರದೆಂದು.
ಜಯದೇವನೂ ಕಾಫಿ ಕುಡಿದು ಸಿದ್ಧನಾದ. ನಂಜುಂಡಯ್ಯನೂ ಎದ್ದರು.
ಆದರೆ ಹೇಳಿ ಹೋಗಲು ಸುನಂದೆಯೇ ಅಲ್ಲಿರಲಿಲ್ಲ. ನಂಜುಂಡಯ್ಯನಿಗೆ ತಿಳಿಯ
ಬೇಡವೆ ಆ ಸೂಕ್ಷ್ಮ? ಗೋಡೆ ಛಾವಣಿಗಳನ್ನು ಪರೀಕ್ಷಿಸುತ್ತ, ಟೀಕೆ ಟಿಪ್ಪಣಿಗಳನ್ನು
ಮಾಡುತ್ತ, ಕೈಯಲ್ಲಿದ್ದ ಹ್ಯಾಟನ್ನು ಎದೆಗವಚಿಕೊಳ್ಳುತ್ತ, ಅವರು ಅಲ್ಲಿಯೇ ನಿಂತು
ಬಿಟ್ಟರು.
ಬೇರೆ ಉಪಾಯವಿಲ್ಲದೆ ಜಯದೇವ, ಚಪ್ಪಲಿ ಕಳಚಿ, ತಾನೇ ಅಡುಗೆ ಮನೆ
ಯೊಳಹೊಕ್ಕು ಹೆಂಡತಿಗೆ 'ಹೇಳಿಬರ'ಬೇಕಾಯಿತು.
"ನಡೀರಿ ಸಾರ್."
"ನಡೀರಿ."
ಮನೆಯಾಕೆ ನಂಜುಂಡಯ್ಯನಿಗೆ ಕಾಣಿಸಲಿಲ್ಲ. ಆದರೂ ಶಿಷ್ಟಾಚಾರಕ್ಕೆ ತಪ್ಪ
ಬಾರದೆಂದು, "ಬರ್‍ತೀನ್ರೀ", ಎಂದು ಹೇಳಿ, ಅವರು ಹೊರಗಿಳಿದರು.
......ಬಯಲಿನಲ್ಲಿ ಓಡಾಡುತ್ತ ಗದ್ದಲಮಾಡುತ್ತ ಇಷ್ಟಬಂದಂತೆ ಕುಣಿದಾಡು
ತ್ತಿದ್ದ ಹುಡುಗರು, ನಂಜುಂಡಯ್ಯನವರನ್ನು ನೋಡಿದೊಡನೆ ಶಾಲೆಗೆ ಹಿಂಬದಿಗೆ
ಸರಿದರು. ಹಿಂದೆ ಜಯದೇವ ಅಲ್ಲಿದ್ದಾಗ ಮಾಧ್ಯಮಿಕ ಮೊದಲನೆ ವರ್ಷದಲ್ಲಿದ್ದು
ಈಗ ಕೊನೆಯ ತರಗತಿ ತಲುಪಿದ್ದವರಿಗೆ, ಆತನ ಗುರುತು ಸಿಕ್ಕಿತು. ಆ ದೊಡ್ಡ
ಹುಡುಗರು, ಜಯದೇವ ಮೇಸ್ಟ್ರು ಬಂದರೆಂದು ಸುದ್ದಿ ಹಬ್ಬಿಸಿದರು. ಉಳಿದವರಿಗೆ
ಆತ 'ಹೊಸ ಮೇಸ್ಟ್ರಾ'ದ. ಕೆಲವರಿಗಂತೂ ಹೊಸ ಉಪಾಧ್ಯಾಯರ ಆಗಮನದ
ಸುದ್ದಿಯನ್ನು ಜವಾನನೇ ತಿಳಿಸಿದ್ದ. అంತೂ, ಶಾಲೆಯ ಹಿಂಬದಿಯಲ್ಲಿ ಅಡಗಿದ್ದ
ಹುಡುಗರು ಮತ್ತೆ ಬೆಳಕಿಗೆ ಬಂದು ಇಣಿಕಿ ನೋಡಿದರು.

ನವೋದಯ

385

ಜಯದೇವ ಅದನ್ನು ಗಮನಿಸುತ್ತಿದ್ದನಾದರೂ ನಂಜುಂಡಯ್ಯನವರಿಗೆ ಅತ್ತ
ಲಕ್ಷ್ಯವಿರಲಿಲ್ಲ.
ಜವಾನನ ವಂದನೆಯನ್ನು ಸ್ವೀಕರಿಸುತ್ತ ಅವರು ಕೇಳಿದರು:
"ಲಕ್ಕಪ್ಪ ಗೌಡರು ಬಂದಿಲ್ವೇನೋ?"
“ಇಲ್ಲ ಬುದ್ದೀ."
"ಬೇಗ బನ್ನೀಂತ ಹೇಳಿದ್ರೂ ಹೀಗೆ," ಎಂದು ಜಯದೇವನ బಳಿ ಅವರು
ದೂರುಕೊಟ್ಟರು.
ಉಪಾಧ್ಯಾಯರ ಕೊಠಡಿಯ ಕದ ತೆರೆದು ನಂಜುಂಡಯ್ಯ, [ನಿತ್ಯದ ಪಧ್ಧತಿ
ಯಂತೆ] ಬಾಗಿಲಲ್ಲೆ ನಿಂತು, ತಮ್ಮ ಕೈಗಡಿಯಾರವನ್ನು ಬಿಚ್ಚಿ, ಗೋಡೆಯ ಗಡಿ
ಯಾರಕ್ಕೆ ಅದನ್ನು ಹೋಲಿಸಿ, 'ಕೀ' ಕೊಟ್ಟರು.
ಅವರ ಹಿಂದೆಯೆ ನಿಂತಿದ್ದ ಜಯದೇವ, ಜಗಲಿಯ ಮೂಲೆಯಲ್ಲಿ ಗುಂಪುಕಟ್ಟಿದ
ಹುಡುಗಿಯರೆಡೆಗೆ ನೋಡಿದ. ಲಂಗಗಳು, ಕೆಲ ಸೀರೆಗಳು ಕೂಡ. ಕೈ ಬಳೆಗಳ
ಸದ್ದು,ಕಿಲಕಿಲ ನಗು. ಅಲ್ಲಿ ಇಂದಿರೆ ಇರಲಿಲ್ಲ, ಪ್ರಭಾಮಣಿ ಇರಲಿಲ್ಲ. ಎಲ್ಲರೂ
ಹೊಸಬರೇ. ಕೊನೆಯ ತರಗತಿಯ ಕೆಲವರಿಗೆ ತಾನು ಪಾಠ ಹೇಳಿದ್ದರೂ ಇರಬಹುದು.
ಆದರೆ ಅವರು ಯಾರೋ, ಗುರುತಿಲ್ಲ.
"ಬನ್ನಿ ಜಯದೇವ್ ಒಳಗೆ."
ಸ್ವಚ್ಛವಾಗಿದ್ದ ఆ ಕೊಠಡಿಗೆ ಜಯದೇವ ಜಾಗರೂಕತೆಯಿಂದ ಕಾಲಿರಿಸಿದ.
ವೆಂಕಟರಾಯರ ಕಾಲದಲ್ಲೇ ಈ ಕೊಠಡಿಯಲ್ಲಿ ಮುಖ್ಯ ಬದಲಾವಣೆಗಳಾಗಿದ್ದುವು.
ಈಗಂತೂ ಹೊಸ ಕಳೆಯೆ ಬಂದಿತ್ತು.
ನಂಜುಂಡಯ್ಯ ಆಗಲೇ ಮೇಜಿಗೆ ಮುಖಮಾಡಿದ್ದ ಕುರ್ಚಿಯನ್ನು-ಮುಖ್ಯೋ
ಪಾಧ್ಯಾಯರ ಪೀಠವನ್ನು-ಅಲಂಕರಿಸಿದ್ದರು. ಮೇಜಿನ ಮೇಲೆ ಹ್ಯಾಟು. ಅವರ
ಎದುರುಗಡೆ ಬೇರೆ ಎರಡು ಕುರ್ಚಿಗಳಿದ್ದುವು. ಒಂದರಮೇಲೆ ಕುಳಿತು ಜಯದೇವ,
ಕಿಟಕಿಯಾಚೆಗೆ ದೃಷ್ಟಿಹರಿಸಿದ. ಊರಿನ ಮುಖ್ಯವಾದ ಒಂದೇ ಬೀದಿ, ಈಗಲೂ
ಹಿಂದಿನಂತೆಯೇ ಮಲಗಿತ್ತು. ಕೆಂಪು ಮೈ. ಅದು, ಊರಿಗಿಂತ ಶಾಲೆ ದೂರವಾಗಿದೆ
ಯೆಂಬ ಭ್ರಮೆ ಹುಟ್ಟಿಸುವ ಪ್ರಶಾಂತ ವಾತಾವರಣ.
ಕೊಠಡಿಯೊಳಗೆ, ಹಳೆಯದರ ಜತೆಗೆ ಹೊಸತೊಂದು ಬೀರುವೂ ಇತ್ತು.
ಮರದ ಎತ್ತರವಾದೊಂದು ಪೆಟ್ಟಿಗೆ ಕೂಡ.
ಅದರ ಕಡೆ ಬೊಟ್ಟು ಮಾಡಿ ನಂಜುಂಡಯ್ಯ ಹೇಳಿದರು:
"ಆಟದ ಸಾಮಾನೆಲ್ಲ ಅದರಲ್ಲಿದೆ."
"ತುಂಬಾ ಸುಧಾರಣೆಯಾಗಿದೆ ಸಾರ್."
"ಪುರಸೊತ್ತಾದಾಗ ಪುಸ್ತಕ ಭಂಡಾರ ನೋಡುವಿರಂತೆ. ನೀವು ನಂಬ್ತೀರೋ
49

386

ಸೇತುವೆ

ಇಲ್ಲವೋ, ನಾನು ಎಚ್. ಎಮ್. ಆದಮೇಲೆ ಇಂಗ್ಲಿಷೂ ಕನ್ನಡವೂ ಸೇರಿಸಿ
ಮುನ್ನೂರು ಪುಸ್ತಕ ತರಿಸಿದೆ."
“ಓ!”
“ಆ ವೆಂಕಟರಾಯರು ನಿಧಿ ಮೇಲಿನ ನಾಗರ ಹಾವಾಗಿದ್ರು. [.'ಶಾಲೆಯೊಳಗೆ
ಮಾತುಕತೆ ಎಂದು ಬಹುವಚನದ ಸಂಬೋಧನೆ.] ದುಡ್ಡಿರೋದು ಯಾತಕ್ಕೆ ಹೇಳಿ?
ಕಾನೂನು ಪ್ರಕಾರ ಮೀಸಲಾಗಿರೋದನ್ನ ಖರ್ಚು ಮಾಡದೆ ಇದ್ದರೆ ಅದಕ್ಕೇನರ್ಥ?
ಆ ವಿಷಯದಲ್ಲೆಲ್ಲ ನಾನು ಮೀನಮೇಷ ಎಣಿಸುವವನೇ ಅಲ್ಲ."
ಜವಾನ ಬಂದು ಮೇಜಿನ ಮೇಲಿದ್ದ ಹೂದಾನಿಯನ್ನೊಯ್ದ. ಎರಡು ನಿಮಿಷ
ಗಳಲ್ಲೆ ಹೊಸ ಹೊಗೊಂಚಲಿನೊಡನೆ ಅದು ಮರಳಿ ಬಂತು.
ಜಯದೇವ ಯೋಚಿಸಿದ: ರಂಗರಾಯರಿದ್ದಾಗಲೂ ಇಂತಹ ಶಿಸ್ತು ಓರಣ
ಸಾಧ್ಯವಿರಲಿಲ್ಲವೆ? ನಂಜುಂಡಯ್ಯ ಆಗಲೂ ಆ ವಿಷಯಕ್ಕೆ ಗಮನ ಕೊಡುವುದು
ಆಗುತ್ತಿರಲಿಲ್ಲವೆ? ಆಗದೇನು? ಆದರೆ ಅವರಿಗೆ ಆಸಕ್ತಿ ಇರಲಿಲ್ಲ, ಅಷ್ಟೆ.
ಹಿಂದೆ ಆ ಕೊಠಡಿಯಲ್ಲಿ ಜಯದೇವನಿಗೆ ನಂಜುಂಡಯ್ಯನ ಪರಿಚಯವನ್ನು
ರಂಗರಾಯರು ಮಾಡಿಕೊಟ್ಟಿದ್ದರು. ಆಗಲೂ ನಂಜುಂಡಯ್ಯನವರಿಗೊಂದು ಹ್ಯಾಟಿತ್ತು.
ಬೇರೆ. ಹಳೆಯದು.
ನಂಜುಂಡಯ್ಯ ಸಿಗರೇಟು ಹಚ್ಚಿದರು. ಕಡ್ಡಿ ಎಸೆಯಲು ಮೇಜಿನ ಮೇಲೆಯೆ
ಭಸ್ಮ ಕುಂಡವಿತ್ತು ಈಗ.
ಅವರು ಕೇಳಿದರು:
"ವ್ಯವಸ್ಥೆ ನೋಡಿ ತೃಪ್ತಿಯಾಯ್ತೇನು?"
“ఓಹೋ. ಇಂಥ ಕಡೆ ಕೆಲಸ ಮಾಡೋದಕ್ಕೆ ಹಿತವಾಗಿರುತ್ತೆ; ಮನಸ್ಸಿಗೆ
ಉಲ್ಲಾಸ ಇರುತ್ತೆ."
"ಆ ವಿಷಯ ನಾನು ಭರವಸೆ ಕೊಡಲಾರೆ," ಎ೦ದರು ನಂಜುಂಡಯ್ಯ,
ಸಿಗರೇಟಿನ ಬೂದಿಯನ್ನು ಕುಂಡಕ್ಕೆ ಕೆಡವಿ.
ಅವರ ನೋಟ, ಅಂಗಳ ದಾಟಿ ಕೊಠಡಿಯ ಕಡೆ ಬರುತ್ತಿದ್ದ ಯಾರ
ಮೇಲೆಯೋ ನೆಟ್ಟಿತ್ತು.
ಒಳಕ್ಕೆ ಬಂದ ಸದ್ದು. ಮಾತಿಲ್ಲದೆಯೆ ನಮಸ್ಕಾರ ಸ್ವೀಕಾರ.
ಜಯದೇವ, ಬಂದವರು ಯಾರೆಂದು ತಿರುಗಿ ನೋಡುತ್ತಿದ್ದಂತೆಯೆ
ನಂಜುಂಡಯ್ಯನೆಂದರು:
"ಲಕ್ಕಪ್ಪ ಗೌಡರು. ಇವರು ಜಯದೇವ್."
ಕೊಡೆ ಹಿಡಿದಿದ್ದ ಲಕ್ಕಪ್ಪ ಗೌಡರು, ಕೈಗಳ ಜತೆಯಲ್ಲಿ ಅದನ್ನೂ ಎತ್ತಿ,
"ನಮಸ್ಕಾರ," ಎಂದರು.
ಜಯದೇವ ಎದ್ದುನಿಂತು ನುಡಿದ:
o

ನವೊದಯ

೩೮೭

"ನಮಸ್ಕಾರ."
ಹಾಗೆ ಜಯದೇವ ಎದ್ದುದು ನಂಜುಂಡಯ್ಯನವರಿಗೆ ಇಷ್ಟವಾಗಲಿಲ್ಲ.
ಆ ವಿನಯದ ಅಗತ್ಯವಿತ್ತೆಂದು ಅವರಿಗೆ ತೋರಲಿಲ್ಲ.
ಕೊಡೆಯನ್ನು ಕಪಾಟದ ಹಿಂಬದಿಗೆ ತಗಲಿಸಿ ಬಂದು ಲಕ್ಕಪ್ಪ ಗೌಡರು, ಖಾಲಿ
ಇದ್ದ ಕುರ್ಚಿಯಮೇಲೆ ಕುಳಿತಾಗ, ಜಯದೇವನೂ ಮತ್ತೆ ಆಸೀನನಾದ.
ಖಾದಿಯ ಪಂಚೆ, ಖಾದಿಯ ಜುಬ್ಬ. ಮೇಲೆ ನಸು ಹಳದಿಯ ಮುಚ್ಚು
ಕಾಲರಿನ ಕೋಟು. ಆದೂ ಖಾದಿಯದೇ. ನಂಜುಂಡಯ್ಯ ಹೇಳಿದ್ದಂತೆಯೇ ಕುಳ್ಳ
ಆಕೃತಿ.
ಕುಶಲ ಸಂಭಾಷಣೆಗೆ ಅವಕಾಶವಿಲ್ಲವೆಂಬಂತೆ ನಂಜುಂಡಯ್ಯ ಕೈಗಡಿಯಾರದತ್ತ
ನೋಡಿದರು.
“ಗೌಡರು ತಡವಾಗಿ ಬಂದಿರಿ."
"ಸ್ವಲ್ಪ ತಡವಾಯ್ತು."
"ಜಯದೇವರು ಇವತ್ತೇ ಸೇರ್‍ತಾರೆ. ಪಾಠ ಹಂಚ್ಕೋಬೇಕಾಗಿತ್ತು."
"ಆದಕ್ಕೇನು? ಈಗಲೂ ಮಾಡಬಹುದಲ್ಲ?"
ಗೋಡೆ ಗಡಿಯಾರ ಟಣ್ ಟಣ್......ಎನ್ನತೊಡಗಿತು. ಜವಾನ ಬಂದು,
ಪೆಟ್ಟಿಗೆಯೊಳಗಿಂದ ಘಂಟೆಯನ್ನು ಹೊರ ತೆಗೆದು ಜಗಲಿಗೊಯ್ದು ಢಣ್ ಢಣ್
ಢಣ್ ಢಣ್...... ಎಂದು ಬಾರಿಸಿದ.
"ಅವಸರದಲ್ಲೇ ಆಗುತ್ತಲ್ಲಾಂತ ಬೇಸರ, ಸಮಯಕ್ಕೆ ಸರಿಯಾಗಿ ಕೆಲಸ
ಮಾಡೋದಕ್ಕೆ ನಾವು ಯಾವತ್ತು ಕಲಿತೇವೋ..."
ಗೌಡರು ಹುಬ್ಬು ಗಂಟಿಕ್ಕಿದರು.
"ವಿಷಯಕ್ಕೆ బನ್ನಿ ಸಾರ್. ಇರೋರು ಮೂರು ಜನ. ಹಂಚಿಕೊಳ್ಳೋದು
ಏನು ಮಹಾ ಕೆಲಸ?"
"ನೀವು ಹಿಂದೆ ಯಾವ ಯಾವ ಕ್ಲಾಸು ತಗೋತಿದ್ದಿರಿ ಜಯದೇವ?" ಎಂದು
ನಂಜುಂಡಯ್ಯ ಕೇಳಿದರು.
"ಕನ್ನಡ, ಇತಿಹಾಸ, ಭೊಗೋಳ."
ಲಕ್ಕಪ್ಪ ಗೌಡರೆಂದರು:
"ನೋಡಿ. ಗಣಿತ ನೀವು ತಗೊಳೋದಾದರೆ ಚೆನಾಗಿರುತ್ತೆ. ಕನ್ನಡ ನನಗೆ
ಬಿಟ್ಬಿಡಿ."
“ಆಗಲಿ ಅದಕ್ಕೇನಂತೆ?"
ನಂಜುಂಡಯ್ಯನೂ ಒಪ್ಪಿದರು.
"ಕೆಲಸವಂತೂ ಇನ್ನೊಬ್ಬರು ಬರೋ ತನಕ ಜಾಸ್ತೀನೆ ಇರುತ್ತೆ, ಅಷ್ಟರ ವರೆಗೆ

388

ಸೇತುವೆ

ಸುಧಾರಿಸ್ಕೊಂಡು ಹೋಗೋಣ". ಎಂದರು.
"ಇವತ್ತು ಗುರುವಾರ. ಮೊದಲನೇ ಪಿರೇಡು ಇತಿಹಾಸ-ಏಳನೆ ತರಗತಿಗೆ.
ತಮ್ಮದು ಸಾರ್", ಎಂದು ಲಕ್ಕಪ್ಪ ಗೌಡರೆಂದರು, ಜಯದೇವನನ್ನು ಉದ್ದೇಶಿಸಿ.
“ಸರಿ."
"ಹಾಗಾದರೆ ತಗೊಳ್ಳಿ ಪುಸ್ತಕ. ಅಶೋಕನವರೆಗೆ ಮಾಡಿದೀನಿ. ಅಲ್ಲಿಂದ
ಮುಂದುವರಿಸಿ. ನಾನು ನೋಟ್ಸ್ ಮಾಡ್ಕೊಳ್ಳೋ ಪಧ್ಧತಿ ಇಲ್ಲ. ಕ್ಲಾಸ್ನಲ್ಲೇ ಮುಖ್ಯ
ವಿಷಯ ಹೇಳಿ ಬರೆಸ್ತೀನಿ."
ಜಯದೇವ ಇನ್ನೂ ಯುವಕನೆಂದೇ, ಆತನಿಗಿಂತ ವಯಸ್ಸಿನಲ್ಲಿ ಪ್ರಾಯಶಃ
ಹತ್ತು ವರ್ಷ ದೊಡ್ಡವರಾದ ಲಕ್ಕಪ್ಪ ಗೌಡರು, ಹಿರಿಮೆಯ ಧ್ವನಿಯಲ್ಲಿ ಮಾತನಾಡಿ
ದರು. ಅದನ್ನು ಗುರುತಿಸುವುದು ಸೂಕ್ಷ್ಮ ಸ್ಪರ್ಶಿಯಾದ ಜಯದೇವನಿಗೆ ಏನೇನೂ
ಕಷ್ಟವಾಗಿರಲಿಲ್ಲ.
ಜವಾನ ಬಂದು ಮುಖ್ಯೋಪಾಧ್ಯಾಯರ ಮುಖ ನೋಡಿದ.
ಕೈಗಡಿಯಾರದತ್ತ ದೃಷ್ಟಿ ಹರಿಸಿ ಅವರೆಂದರು:
"ಹೂಂ ಬಾರಿಸು".
ಎರಡನೆಯ ಬಾರಿ ಢಣ್ ಢಣ್ ಎನ್ನುತ್ತಲೆ, ಶಾಲೆಯಲ್ಲಿ ನೀರವತೆ ನೆಲೆಸಿತು.
ಆ ನೀರವತೆಯನ್ನು ಮುಕ್ತಾಯಗೊಳಿಸುತ್ತ ನೂರು ಕಂಠಗಳಿಂದ ಧ್ವನಿ
ಹೊರಟಿತು:
"ಜನಗಣಮನ ಅಧಿನಾಯಕ ಜಯಹೇ..."
ಹುಡುಗರ ಪ್ರಾರ್ಥನೆಯಷ್ಟೇ ಅಲ್ಲ. ಅದು ರಾಷ್ಟ್ರಗೀತ ಕೂಡ. ಎಲ್ಲರೂ
ಎದ್ದು ನಿಂತು ಗೌರವಿಸಬೇಕಾದ ಹಾಡು. ಆದರೆ ಉಪಾಧ್ಯಾಯರ ಕೊಠಡಿಯಲ್ಲಿ ಆ
ಮೂವರು ಕುಳಿತೇ ಇದ್ದರು. ಏಳಲೆಂದು ಜಯದೇವ ತವಕಗೊಂಡ. ಆದರೆ
ಉಳಿದಿಬ್ಬರಿಗೆ ಅದರ ಕಡೆ ಗಮನವೇ ಇರಲಿಲ್ಲ.
ಹುಡುಗರ ಪ್ರಾರ್ಥನೆಯ ನಡುವೆ ತಮ್ಮ ಮಾತು ಕೇಳಿಸದೆ ಹೋಗಬಾರದೆಂದು
ಗಟ್ಟಿಯಾದ ಧ್ವನಿಯಲ್ಲಿ ಲಕ್ಕಪ್ಪಗೌಡರೆಂದರು:
"ನಾನು ಆಗ್ಲೆ ಹೇಳ್ಲಿಲ್ವೆ? ಪಾಠ ಹಂಚಿಕೊಳ್ಳೋದು ಏನು ಮಹಾ ಕೆಲಸ!
ಎರಡೇ ನಿಮಿಷದಲ್ಲಿ ಮಾಡಿ ಮುಗಿಸಿದೆವೊ ಇಲ್ವೊ?"
ಅದಕ್ಕೆ ಕಡಮೆಯಾಗದಂತೆ ತಮ್ಮ ಧ್ವನಿಯನ್ನೂ ಏರಿಸಿ ನಂಜುಂಡಯ್ಯ
ನುಡಿದರು:
"ಇನ್ನು ಮುಂದೆ ಹೀಗೆಲ್ಲಾ ಮಾಡೋದಕ್ಕೆ ಆಗೊಲ್ಲ ಲಕ್ಕಪ್ಪಗೌಡರೆ.: ಇಬ್ಬರೇ
ಇದ್ದಾಗ ಏನೋ ಒಂದು ರೀತಿ. ಮೂರು ಜನ ಇದೀವಿ ಅಂದ್ಮೇಲೆ ಆಗಾಗ್ಗೆ ನಾವು
ಟೀಚರ್ಸ್ ಮೀಟಿಂಗು ಮಾಡ್ಲೇ ಬೇಕು."
"ದಿನಾ ನಾವು ಮೀಟ್ ಮಾಡ್ತಾ ಇರ್ತೀವಲ್ಲ.ಇಷ್ಟು ಮೀಟಿದರೆ ಸಾಲದೋ?

ನವೋದಯ

389

ಮಾತಿನಲ್ಲಿ ಬಿಟ್ಟು ಕೊಡುವ ಹಾಗಿರಲಿಲ್ಲ ಲಕ್ಕಪ್ಪಗೌಡರು. ಈತನನ್ನು ಇದಿರಿ
ಸలు, ನಂಜುಂಡಯ್ಯನವರಿಗೆ ಎಷ್ಟು ಸಹಾಯ ದೊರೆತರೂ ಸಾಲದೆನ್ನಿಸಿತು ಜಯ
ದೇವನಿಗೆ. ಬಂದೊಡನೆಯೆ ಅಂತಹ ಸಹಾಯಕ್ಕೆ ಹೋಗುವ ಸನ್ನಿವೇಶ. ತನ್ನಷ್ಟಕ್ಕೆ
ಇದ್ದು ವಿದ್ಯಾದಾನವನ್ನು ಯಜ್ಞವಾಗಿ ಆರಂಭಿಸಬೇಕೆಂದು ಮಾಡಿದ್ದ ತೀರ್ಮಾನ
ಗಳೆಲ್ಲಿ? ಈಗ ಇವರೊಳಗಿನ ಈ ಚರ್ಚೆ. ತಾತ್ವಿಕವಾಗಿ ನೋಡಿದರೆ ನಂಜುಂಡಯ್ಯ
ನವರ ಅಭಿಪ್ರಾಯವೇ ಸರಿ.
ಯೋಚಿಸುತ್ತಿದ್ದಂತೆಯೆ ಒಮ್ಮೆಲೆ ಮಾತು ಆಡಿದ ಜಯದೇವ.
"ಹಾಗಲ್ಲ ಸಾರ್. ನಿತ್ಯದ ಭೇಟಿಗಿಂತಲೂ ಸರಿಯಾಗಿ ನಡೆಸೋ ಸಭೆಗೆ ಹೆಚ್ಚು
ಬೆಲೆ ಇರುತ್ತೆ."
ನೀವು ಹಾಗಂತೀರೇನು? ಇಬ್ಬರು ಪದವೀಧರರದೂ ಒಂದೇ ಅಭೀಪ್ರಾಯ
ಅಂದ್ಮೇಲೆ, ನನ್ನದೇನಪ್ಪ? ಶಿರಸಾ ವಹಿಸಲೇ ಬೇಕು."
ಲಕ್ಕಪ್ಪಗೌಡರ ಮಾತಿನೊಳಗಿನ ವ್ಯಂಗ್ಯಭಾವ ಅದೇನಿದ್ದರೂ, ಆತ ಅಷ್ಟರ
ಮಟ್ಟಿಗಾದರೂ ಹಾದಿಗೆ ಬಂದನಲ್ಲಾ ಎಂದು ನಂಜುಂಡಯ್ಯನವರಿಗೆ ಸಮಾಧಾನ
ವಾಯಿತು. ಜಯದೇವ ತಮ್ಮ ಪಕ್ಷ ವಹಿಸಿದನೆಂದು ಅವರು ಸಂತೋಷಪಟ್ಟರು.
ಪ್ರಾರ್ಥನೆ ಕೊನೆಮುಟ್ಟಿದೊಡನೆ ಚಂಗನೆದ್ದು ಲಕ್ಕಪ್ಪಗೌಡರು, ಉಪಾಧ್ಯಾ
ಯರ ಹಾಜರಿ ಪುಸ್ತಕ ಹುಡುಕಿದರು.
ಅವರು ಗುರುತು ಹಾಕುತ್ತಿದ್ದಂತೆ ನಂಜುಂಡಯ್ಯನೆಂದರು.
"ನೀವೂ ಹೆಸರು ಬರೆದು ಹಾಜರಿ ಹಾಕಿ ಜಯದೇವ್."
"ಆಗಲಿ ಸಾರ್."
ತಮ್ಮ ಕೆಲಸ ಮುಗಿದು, ತಾವು ಹೋಗಬೇಕಾದ ಮಾಧ್ಯಮಿಕ ಮೊದಲ ತರ
ಗತಿಯ ವಿದ್ಯಾರ್ಥಿಗಳ ಹಾಜರಿ ಪುಸ್ತಕವನ್ನೂ ಎತ್ತಿಕೊಂಡು, ಲಕ್ಕಪ್ಪಗೌಡರು
ಹೊರಟುಹೋದರು.
ಇಬ್ಬರೇ ಉಳಿದಾಗ ನಂಜುಂಡಯ್ಯ ಅಂದರು:
“ನೋಡಿದಿರಾ? ಹ್ಯಾಗಿದ್ದಾನೆ ಆಸಾಮಿ?"
ನೇರವಾಗಿ ಉತ್ತರಿಸಲಾಗದಂತಹ ಕ್ಲಿಷ್ಟ ಪ್ರಶ್ನೆ.
"ಏನು ಹೇಳೋಕೂ ತೋಚೋದಿಲ್ಲ ನನಗೆ."
ಆ ಮಾತು ಕೂಡ ತಮ್ಮ ಪರವಾದುದೇ ಎಂದು ಭಾವಿಸಿದರು ನಂಜುಂಡಯ್ಯ.
"ಸ್ವಲ್ಪ ಹೊತ್ತು ಸಹಿಸ್ಕೊಂಡೆ ಹೀಗಂತೀರೀ. ದಿನ ನಿತ್ಯ ಇದನ್ನೆಲ್ಲ ನಾನು
ಅನುಭವಿಸ್ತಿದೀನಲ್ಲ."
ಜಯದೇವ ಸುಮ್ಮನೆ ನಕ್ಕು, ಮಾಧ್ಯಮಿಕ ಮೂರನೆಯ ತರಗತಿಯ ಹಾಜರಿ
ಪುಸ್ತಕವನ್ನು ತೆಗೆದುಕೊಂಡ.
ಉಳಿದೆರಡು ಹಾಜರಿ ಪುಸ್ತಕಗಳನ್ನು ನಂಜುಂಡಯ್ಯನವರೇ ಎತ್ತಿಕೊಳ್ಳುತ್ತ

390

ಸೇತುವೆ

ಅಂದರು:
"ಎಂಥೆಂಥವರನ್ನೋ ಹಾದಿಗೆ ತಂದಿದೀನಿ. ಇವನೊಬ್ಬ ನನ್ನನ್ನು ಹಂಗಿಸ್ತಿ
ದಾನಲ್ಲ."
ತತ್ವದ್ದಲ್ಲ,-ತೀರ ವೈಯಕ್ತಿಕವಾದ ಪ್ರಶ್ನೆ. ಜಯದೇವನಿಗೆ ನೆನಪಿತ್ತು. ರಂಗ
ರಾಯರಿದ್ದಾಗ-ವೆಂಕಟರಾಯರು ಬಂದಮೇಲೂ ಕೂಡ-ಆಗಾಗ್ಗೆ ಉಪಾಧ್ಯಾಯರ
ಸಭೆಯಾಗಲೆಂದು ನಂಜುಂಡಯ್ಯ ಕೇಳಿದ್ದರೆ? ಅವರು ಮುಖ್ಯೋಪಾಧ್ಯಾಯರಾದ
ಬಳಿಕ ಮಾತ್ರವೇ ಶಿಸ್ತುಪಾಲನೆ ಜೀವ ತಳೆದಿತ್ತು.
ಜಯದೇವನ ಜತೆ ನಂಜುಂಡಯ್ಯ ಏಳನೆಯ ತರಗತಿ ವರೆಗೂ ಬಂದರು.
ವಿದ್ಯಾರ್ಥಿಗಳಿಗೆ ಹೊಸ ಉಪಾಧ್ಯಾಯರ ಪರಿಚಯ ಮಾಡಿಕೊಟ್ಟರು. ಬಳಿಕ ,ಆರ
ನೆಯ ತರಗತಿಗೆ ಲೆಕ್ಕ ಕೊಟ್ಟು ಎಂಟನೆಯ ತರಗತಿಗೆ ಇಂಗ್ಲಿಷ್ ಹೇಳಲು ಅವರು
ಹೊರಟು ಹೋದರು.
ಹುಡುಗರು ಹೊಸಬರಾಗಿದ್ದರೂ ಅಪರಿಚಿತರ ಮುಂದೆ ನಿಂತಂತೆ ಜಯದೇವ
ನಿಗೆ ಭಾಸವಾಗಲಿಲ್ಲ. ಮೊದಲ ಸಾರಿ ಮೊದಲ ತರಗತಿಯನ್ನು ಇದಿರಿಸಿದಾಗ,
ಎಷ್ಟೊಂದು ಅಳುಕಿದ್ದ ಆತ. ಆಗ, ತೇಲುತ್ತಿದ್ದ ತಲೆಗಳ ಸಾಗರವಾಗಿತ್ತು ಒಂದು
ಕ್ಷಣ ಆ ಕೊಠಡಿ, ಆತನ ದೃಷ್ಟಿಗೆ. ಒಮ್ಮಿಂದೊಮ್ಮೆಲೆ ಮೂಕನಾದೆನೇನೋ ಎಂದು
ಭಯಗೊಂಡಿದ್ದ. ಈಗ ಹಾಗಲ್ಲ. ಆತ ಓಡಾಡುತ್ತಿದ್ದುದು ತನ್ನ ಮನೆಯಲ್ಲೇ.
ಬಹಳ ದಿನಗಳಿಂದ ಅಲ್ಲಿರಲಿಲ್ಲ ಅಷ್ಟೆ. ಆ ಹುಡುಗರಿಗೋ? ಆತನ ನಡಿಗೆ ಸಾಕು_
ಮುಗುಳ್ನಗೆ ಸಾಕು.
“ಚೆನ್ನಾಗಿದೀರೇನ್ರೊ?"
ಹೆಚ್ಚಿನ ವಿದ್ಯಾರ್ಥಿಗಳೆಲ್ಲ ಒಮ್ಮೆಲೆ ಕೊಟ್ಟ ಉತ್ತರ:
“ಚೆನ್ನಾಗಿದೀವಿ ಸಾರ್."
ಅದೇನು ಸಾಮಾನ್ಯ ಸದ್ದೆ?
"ಶ್! ಮೆತ್ತಗೆ! ಪಕ್ಕದ ತರಗತೀಲಿ ಪಾಠವಾಗ್ತಾ ಇದೆ.”
ತಪ್ಪು ಮಾಡಿದ ಎಳೆಯರಂತೆ ಹುಡುಗರು ಹಲ್ಲುಕಿಸಿದರು.
ಕುರ್ಚಿ ಭದ್ರವಾಗಿದೆಯೇ ಏನೆಂದು ಜಯದೇವ ಮುಟ್ಟಿನೋಡಿದ. ಹುಡುಗರು
ಮೆಲ್ಲನೆ ನಕ್ಕರು. ಕುರ್ಚಿಯ ಮೇಲೆ ಕುಳಿತು, ಕೈಯಲ್ಲಿದ್ದ ಹಾಜರಿ ಪುಸ್ತಕವನ್ನು
ಮೇಜಿನ ಮೇಲಿರಿಸಿದ.
ಆತನ ದೃಷ್ಟಿ ಸಾಲು ಸಾಲಾಗಿದ್ದ ಹುಡುಗರನ್ನೆಲ್ಲ ನೋಡಿತು. ಅಡ್ಡವಾಗಿರಿ
ಸಿದ್ದ ಬೆಂಚಿನ ಮೇಲೆ ಹುಡುಗಿಯರಿದ್ದರು. ಮತ್ತೆ ಹುಡುಗರೆಡೆಗೇ ಜಯದೇವ
ನೋಡಿದ_ಯಾರನ್ನೋ ಹುಡುಕುವಂತೆ.
ಒಬ್ಬ ಕೇಳಿದ:
“ಯಾರು ಬೇಕ್ಸಾರ್?”

ನವೋದಯ

391

"ಇಲ್ಲಿ ನನ್ನ ಹಳೇ ಸ್ನೇಹಿತರು ಯಾರೂ ಇಲ್ವೇನು?"
ಒಂದು ಮೂಲೆಯಲ್ಲಿ ಗುಜುಗುಜು ಸದ್ದಾಯಿತು. ಹುಡುಗರು ಒಬ್ಬನನ್ನು
ಎತ್ತಿಹಿಡಿದು ನಿಲ್ಲಿಸಿದರು.
"ಶೇಷಪ್ಪ ಸಾರ್."
ಜಯದೇವನಿಗೆ ನೆನಪಾಯಿತು.
"ಶೇಷಪ್ಪ ಕೆ."
ಬೇರೊಂದೆಡೆ ಹುಡುಗರು ಇನ್ನೊಬ್ಬನನ್ನು ಹಿಡಿದು ನಿಲ್ಲಿಸಿದರು.
"ಲಕ್ಷ್ಮೀಕಾಂತಂ ಸಾರ್."
ಆ ಮುಖವೂ ಅಪರಿಚಿತವಾಗಿರಲಿಲ್ಲ.
ಜಯದೇವ ಕೇಳಿದ:
"ನಾನು ಬಂದ್ಮೇಲೆ ಪಾಸಾಗೋಣಾಂತ ಕಾದಿದ್ದಿರೇನ್ರೋ?"
ಆ ಹುಡುಗರಿಬ್ಬರೂ ನಾಚಿದರು, ನಕ್ಕರು. ಆದರೆ ಉಳಿದ ಹಲವರು ಉತ್ತರ
ವಿತ್ತರು:
“ಹೂಂ ಸಾರ್."
"ಸರಿ, ಕೂತ್ಕೊಳ್ಳಿ."
ಎಲ್ಲರಿಗೋಸ್ಕರ ಬೀರಿದ ಒಂದು ಮುಗುಳು ನಗು. ಯಾವ ತೊಂದರೆಯೂ
ಇರಲಿಲ್ಲ. ಅವರೆಲ್ಲ ಆತನ ಹುಡುಗರೇ. ಅಂಥವರಿಗೆ ಪಾಠ ಹೇಳುವುದು ಹುಡು
ಗಾಟವಿದ್ದ ಹಾಗೆ. ಹಾಜರಿ ಪುಸ್ತಕ. ಹಲವು ಹೆಸರುಗಳು.
"ನಾಳೆಯಿಂದ ನಿಮಗೆ ಇತಿಹಾಸ ಹೇಳೋನು ನಾನು."
ಹುಡುಗರಿಗೆ ಗೊತ್ತಾಗಲಿಲ್ಲ. ಒಬ್ಬನೆಂದ:
"ಇವತ್ತು ಸಾರ್?"
[ತರಗತಿಯ ಹಿರೇಮಣಿ ಯಾರೆಂದು ಕೇಳಿಯೇ ಇರಲಿಲ್ಲ ಜಯದೇವ. ಹಾಗೆ
ಪ್ರಶ್ನಿಸಿದ ಹುಡುಗನೇ ಇರಬೇಕೆಂದು ಆತನನ್ನು ಗುರುತಿಟ್ಟುಕೊಂಡ.]
"ಇವತ್ತು ನೀವು ಇತಿಹಾಸ ಹೇಳ್ಬೇಕು. ಈವರೆಗೆ ಏನೇನಾಯ್ತೂಂತ ನನಗೆ
ತಿಳಿಸ್ಬೇಕು."
ಯಾರೂ 'ಆಗಲಿ' ಎನ್ನಲೂ ಇಲ್ಲ: 'ಬೇಡ'ವೆನ್ನಲೂ ಇಲ್ಲ. ಕೆಲವರು
ಪುಸ್ತಕಗಳನ್ನು ತೆರೆದರು: ಕೆಲವರು ಮುಚ್ಚಿದರು.
ಬಳಿಕ, ಒಬ್ಬ ಹುಡುಗನ ಪುಸ್ತಕವನ್ನು ಕೈಗೆತ್ತಿಕೊಂಡು, ಒಂದೊಂದಾಗಿ ಜಯ
ದೇವ ಪ್ರಶ್ನೆ ಕೇಳಿದ. ಉತ್ತರವಾಗಿ ಹುಡುಗರು-ತಿಳಿದವರು-ಇತಿಹಾಸದ ಕಥೆ
ಹೇಳಿದರು. ತಿಳಿಯದವರೂ ಇದ್ದರು. ಅವರನ್ನು ಜಯದೇವ ಅಪಹಾಸ್ಯಕ್ಕೆ
ಗುರಿಮಾಡಲಿಲ್ಲ; ಅವರ ಮೇಲೆ ಮುನಿಯಲಿಲ್ಲ.

392

ಸೇತುವೆ

ಜಗಲಿಯಲ್ಲಿ ನಿಂತು ಜವಾನ ಒಂದು ಗಂಟೆ ಹೊಡೆದ-ಪೀರಿಯಡು ಒಂದಾಯಿ
ತೆಂದು.
ಪುಸ್ತಕ ಮುಚ್ಚಿ ಏಳುತ್ತ ಜಯದೇವ ಕೇಳಿದ:
"ಯಾರು ಹಿರೇಮಣಿ?"
ಎದ್ದು ನಿಂತವನು ಆ ಹುಡುಗನೇ.
.........ಅನಂತರದ ಪಾಠಗಳೂ ಅಷ್ಟೆ.
ವಿರಾಮದ ಹೊತ್ತಿನಲ್ಲಿ ಲಕ್ಕಪ್ಪಗೌಡರು ಜಯದೇವನನ್ನು ಉದ್ದೇಶಿಸಿ
ಹೇಳಿದರು:
"ನಾನು ಮಾತಾಡೋದು ಸ್ವಲ್ಪ ಒರಟು. ತಪ್ಪು ತಿಳ್ಕೋಬೇಡಿ ಸಾರ್."
ಅನಿರೀಕ್ಷಿತವಾಗಿದ್ದ ಮಾತು.
"ಇಲ್ವಲ್ರೀ," ಎಂದ ಜಯದೇವ.
ನಂಜುಂಡಯ್ಯ ಕೊಠಡಿಯ ಒಳಬರುತ್ತ ಕೇಳಿದರು:
"ವಿದ್ಯಾರ್ಥಿಗಳು ಏನಂತಾರೆ ಜಯದೇವರೆ?"
“ಚೆನ್ನಾಗಿಯೇ ಇದಾರೆ."
ಇಲ್ಲದೇನು? ಅವರ ಪಾಲಿಗೆ ನೀವೊಬ್ಬ ಮಾಂತ್ರಿಕ ಇದ್ದ ಹಾಗೆ."



ಭಾನುವಾರ ಜಯದೇವ ಸ್ವಲ್ಪ ತಡವಾಗಿ ಎದ್ದ. ಶನಿವಾರ ಶಾಲೆ ಬಿಟ್ಟು
ಎಲ್ಲರೂ ಹೊರಟಾಗ, ಲಕ್ಕಪ್ಪಗೌಡರಿಗೂ ಕೇಳಿಸುವಂತೆ, ನಂಜುಂಡಯ್ಯ ಹೇಳಿದ್ದರು:
“ನಾಳೆ ಸಾಯಂಕಾಲದ ಕಾಫಿ ತಿಂಡಿಗೆ ನಮ್ಮಲ್ಲಿಗೆ ಬಂದ್ಬಿಡಿ ಜಯದೇವ್-ಸತಿ
ಪತಿ ಇಬ್ಬರೂ."
ಅಂದರೆ, ಸಾಯಂಕಾಲದ ವರೆಗೂ ಹಾಯಾಗಿ ಹೊತ್ತು ಕಳೆಯಲು ಅವಕಾಶ.
ಜಯದೇವ ಮಲಗಿದ್ದಲ್ಲಿಂದಲೆ ಕೇಳಿದ:
"ಹಾಲು ಬಂತೆ ಸುನಂದಾ?"
ಪ್ರಶ್ನೆ ಒಳ ಹಜಾರವನ್ನು ದಾಟಿ ಅಡುಗೆಮನೆಯನ್ನು ತಲಪಿತು. ಅಲ್ಲಿಂದಲೆ
ಆಕೆ ಪ್ರತ್ಯುತ್ತರ ಕೊಟ್ಟಳು:
"ಬಂತು. ಕಾಫಿ ಸೋಸ್ಲೇನು?”
"ಹೂಂ."
"ಅಷ್ಟೇನಾ? ದಯಮಾಡಿಸಿ ಅನಬಾರ್ದೆ?"

ನವೋದಯ

393

"ಏನೆಂದಿರಿ?"
"ಏನಿಲ್ಲ,ಏಳ್ತಾ ಇದೀನಿ,ಅಂದೆ."
ಜಯದೇವ ಎದ್ದು ಅಡುಗೆ ಮನೆಗೆ ಹೋಗಿ ಒಲೆಯ ಮುಂದೆ ಕುಳಿತ. ಆತನ
ಮುಖವನ್ನು ನೋಡಿ ಸುನಂದಾ ನಿಷ್ಠುರದ ಧ್ವನಿಯಲ್ಲಿ ಅಂದಳು:
"ಹೋಗಿ. ಮುಖ ತೊಳಕೊಂಡು ಬನ್ನಿ."
"ಒಂದು ಗುಟುಕು ಕೊಡೇ."
"ಗುಟುಕೂ ಇಲ್ಲ, ಏನೂ ಇಲ್ಲ. ಶಾಲೇಲಿ ಹುಡುಗರಿಗೆ ಹೀಗೇ ತಾನೆ
ಆರೋಗ್ಯ ಪಾಠ ಹೇಳೋದು?"
"ಆರೋಗ್ಯ ನಂಜುಂಡಯ್ಯ ಮಾಡ್ತಾರೆ ಕಣೇ."
"ಏಳ್ತೀರೋ ಇಲ್ಲವೋ?"
ಜಯದೇವ ಹುಸಿಮುನಿಸು ತೋರುತ್ತ ಗೊಣಗುತ್ತ ಎದ್ದು ಬಚ್ಚಲು ಮನೆಗೆ
ನಡೆದ.
......ಮೊದಲ ಲೋಟವನ್ನು ಆತ ಬರಿದುಗೊಳಿಸುತ್ತಿದ್ದಾಗ ಅನಂತರದ
ಕಾರ್ಯಕ್ರಮವನ್ನು ಸುನಂದಾ ವಿವರಿಸಿದಳು:
"ಮೈಗೆ ಎಣ್ಣೆ, ಬಿಸಿನೀರು ಸ್ನಾನ, ಕಾಫಿ ತಿಂಡಿ, ನಿದ್ದೆ."
"ನೀನು?"
"ನನ್ನದು ನಾನು ನೋಡ್ಕೋತೀನಿ."
"ಒಟ್ಟಿನಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಕೈದಿ ನಾನು."
"ಕೈದಿಯಲ್ಲ. ಮುದ್ದಿಸಿ ಕೆಟ್ಟುಹೋಗಿರೋ ಮಗು."
“ಕೆಲಸ ಇದ್ದಿದ್ದರೆ ಇಷ್ಟು ಹೊತ್ತಿಗೆ ಒಂದು ಮುತ್ತು ಸಿಗ್ತಿತ್ತು. ರಜಾದಿನ
ಏನೂ ಇಲ್ಲ. ಮುದ್ದಿಸಿ ಕೆಟ್ಟುಹೋದ ಅಂತ ಬರೇ ಮಾತಿನಲ್ಲಿ ಹೇಳಿದರೆ ಸಾಕೇನು?"
ಸುನಂದಾ ಉತ್ತರಿಸುವುದಕ್ಕೆ ಅವಕಾಶವಿಲ್ಲದಂತೆ, ಹೊರಗಿನಿಂದ ಕರೆದ ಸ್ವರ
ಕೇಳಿಸಿತು:
"ಸ್ವಾಮೀ ಜಯದೇವರೇ, ಇದೀರಾ ಮನೇಲಿ?”
ಸುನಂದೆಗೆ ರೇಗಿತು. ಪಿಸುದನಿಯಲ್ಲಿ ಆಕೆ ಸಿಡಿ ನುಡಿದಳು:
"ಮನೇಲಿಲ್ಲಾಂತ ಕಳಿಸ್ಬಿಡ್ತೀನಿ.”
ಆದರೆ ಜಯದೇವ, ಸ್ವರವನ್ನು ಆಗಲೇ ಗುರುತಿಸಿದ್ದ. ಕರೆದಿದ್ದವರು ಲಕ್ಕಪ್ಪ
ಗೌಡರು.
ತನ್ನ ಗಂಡನ ಸಹೋದ್ಯೋಗಿ ಎಂದಮೇಲೆ ಆಕೆಯಾದರೂ ಹಾಗೆಯೇ ಕಳುಹಿ
ಬಿಡುವುದು ಸಾಧ್ಯವಿತ್ತೆ?
ಬಾಗಿಲು ತೆರೆದುದಾಯಿತು. ಇದಿರ್ಗೊಳ್ಳುತ್ತ ಜಯದೇವನೆಂದ:

50

"ಬನ್ನಿ ಲಕ್ಕಪ್ಪಗೌಡರೇ, ಒಳಗ್ಬನ್ನಿ."
ಅಷ್ಟರಲ್ಲೆ ಸುನಂದಾ ಹಾಸಿಗೆ ಮಡಚಿಟ್ಟು ಬಂದಳು.
ಆಗ ಜಯದೇವನೆಂದ:
"ಇವರು ಯಜಮಾನಿತಿ ಸುನಂದಾ.......ಇವರು ನಮ್ಮ ಶಾಲೇಲಿ ಉಪಾ
ಧ್ಯಾಯರು."
ವಂದನೆಗಳು.
"ಬನ್ನಿ, ಕೊಠಡಿಗೆ ಹೋಗೋಣ,"ಎಂದು ಜಯದೇವ ಲಕ್ಕಪ್ಪಗೌಡರನ್ನು
ಕರೆದೊಯ್ದು, ಚಾಪೆ ಬಿಡಿಸಿದ.
ಅದೇ ಪಂಚೆ, ಜುಬ್ಬ, ಕೋಟು. ಶುಭ್ರವಾಗಿದ್ದುವು. ಸುತ್ತಲೂ ದೃಷ್ಟಿ
ಬೀರುತ್ತ, ಚಾಪೆಯ ಮೇಲೆ ಕುಳಿತು, ಗೌಡರೆಂದರು:
"ಮನೆ ಅನುಕೂಲವಾಗಿದೆಯೆ?"
"ಇದೆ ತಕ್ಕಮಟ್ಟಿಗೆ. ಪರವಾಗಿಲ್ಲ."
ಅನಂತರ, ಬಾಡಿಗೆ ಎಷ್ಟೆಂಬ ಪ್ರಶ್ನೆ.
ಒಂದೆರಡು ನಿಮಿಷ ಹಾಗೆ ಕಳೆದ ಬಳಿಕ ಜಯದೇವ ಕೇಳಿದ:
"ಬೆಳಗ್ಗೇನೇ ಬಂದ್ರಲ್ಲಾ. ಏನ್ಸಮಾಚಾರ?"
"ಹೀಗೇ ಮಾತಾಡಿಸ್ಕೊಂಡು ಹೋಗೋಣ ಅಂತ ಬಂದೆ. ಶಾಲೇಲಂತೂ ಪುರ
ಸೊತ್ತೇ ಇರೋದಿಲ್ಲ."
"ನೀವು ಬಂದದ್ದು ಒಳ್ಳೇದೇ ಆಯ್ತು. ಊಟ ಆಗೋವರೆಗೂ ಹ್ಯಾಗೆ
ಹೊತ್ತು ಕಳೆಯೋಣಾಂತ ನಾನೂ ಯೋಚಿಸ್ತಾನೇ ಇದ್ದೆ."
[ಸುಳ್ಳು. ಉಪಚಾರಕ್ಕೆಂದು ಹೇಳಿದ ಮಾತು.]
“ಈಗ ಬೇರೆ ಯಾರೂ ಇಲ್ಲಿಗೆ ಬರೋದಿಲ್ಲ ತಾನೆ?"
“ನನಗೆ ಗೊತ್ತಿರೋ ಮಟ್ಟಿಗೆ ಯಾರೂ ಬರಲಾರರು."
ಜಯದೇವ ನಿರುತ್ಸಾಹಿಯಾದ. ಮುಂದಿನ ಮಾತುಕತೆಯ ವಿಷಯ ಏನಿದ್ದೀ
ತೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ವಿದ್ಯಾಕ್ಷೇತ್ರದೊಳಗಿನ ರಾಜಕೀಯದ
ಮಾತು. ಅವರ ಮೇಲೆ ಇವರ ದೂರು.
ಲಕ್ಕಪ್ಪಗೌಡರೆಂದರು:
"ನೀವು ಮೊದಲು ಇಲ್ಲೇ ಇದ್ರಂತೆ."
“ಹೌದು.”
“ಆಗ ನಾನು ನಾಯಕನಹಳ್ಳೀಲಿದ್ದೆ......ಈ ವರ್ಷ ಟ್ರೇನಿಂಗಿಗೆ ಹೋಗ್ಬೇ
ಕೂಂತಲೂ ನನಗೆ ಯೋಚನೆ ಇತ್ತು. ಆದರೆ ಮನೇಲಿ ಹೆಂಡತಿ ಕಾಹಿಲೆ ಮಲಗಿ
ತೊಂದರೆಯಾಯ್ತು."
“ಹೌದೆ? ಏನಾಗಿತ್ತು?"

ನವೋದಯ

395

"ಬಾಣಂತಿತನದ ಸಂಕಟ. ಮಗು ಉಳಿಯೋದೇ ಕಷ್ಟವಾಯ್ತು. ಏನೋ
ಹಣೆಬರಹ ಗಟ್ಟಿಯಾಗಿತ್ತೂಂತ ಬದುಕಿಕೊಂಡ್ತು."
"ಎಷ್ಟು ಜನ ಮಕ್ಕಳು?"
"ದೊಡ್ಡೋನೊಬ್ಬ ಏಳು ವರ್ಷದೋನು ಊರಲ್ಲೇ ಇದಾನೆ, ಅಜ್ಜಿ ಜತೇಲಿ.
ಆಮೇಲಿಂದು ಎರಡು ತೀರ್‍ಕೊಂಡ್ವು. ಈಗಿನ್ದು ಹೆಣ್ಣು. ಅವಳಿಗೆ ಕಾಹಿಲೇಂತ
ನಮ್ಮತ್ತೆ ಇಲ್ಲಿಗೇ ಬಂದಿದಾರೆ."
ಅಂತಹ ಸುಖದುಃಖದ ಮಾನವೀಯ ಪೀಠಿಕೆಯ ಬಳಿಕ, ಅಸಹ್ಯವೆನಿಸುವ
ವಾದವೈಖರಿ ಸಾಧ್ಯವಿತ್ತೆ? ಎಲ್ಲರಂತೆ ಸಂಸಾರ ಭಾರ ಹೊತ್ತಿದ್ದ, ನೋವು ನಲಿವು
ಆಹಾರವಾಗಿದ್ದ, ಆ ಮನುಷ್ಯ, ಇನ್ನೊಬ್ಬನ ವಿಷಯವಾಗಿ ವಿಷದ ಫೂತ್ಕಾರ ಮಾಡುವ
ನೆಂದು ಎಣಿಸುವಂತಿತ್ತೆ?
ಏನೋ ಯೋಚನೆಯಲ್ಲಿ ಜಯದೇವ ಮುಳುಗಿದುದನ್ನು ಕಂಡು, ಲಕ್ಕಪ್ಪ
ಗೌಡರೇ ಅಂದರು:
"ಮೊನ್ನೆ ಇಲ್ಲಿಗೆ ಬಂದ ದಿವಸ ನಂಜುಂಡಯ್ಯನವರ ಮನೆಯಲ್ಲೇ ಊಟಕ್ಕಿ
ದ್ರಂತೆ."
"ಹೌದು."
"ನಮ್ಮಲ್ಲಿಗೂ ಒಂದು ದಿವಸ ಊಟಕ್ಕೆ ಕರೆದರೆ ಬರ್‍ತೀರಿ ತಾನೆ?"
"ಬರದೆ ಏನು?"
"ಸಂತೋಷ. ಈಗಲೇ ಕರಕೊಂಡು ಹೋಗೋಣ ಅ೦ದರೆ, ನಾನು ಹೇಳಿ
ಬಂದಿಲ್ಲ. ಮೇಲಿನ ಭಾನುವಾರ ನಮ್ಮಲ್ಲಿಗೆ ದಯಮಾಡಿಸ್ಬೇಕು."
"ಅಂಥ ದೊಡ್ಡ ಪದ ಯಾಕೆ ಲಕ್ಕಪ್ಪಗೌಡರೆ? ಬಾ ಅಂದರೆ ಸಾಕು, ಬರ್‍ತೀನಿ."
"ಒಬ್ಬರಲ್ಲ!"
"ಗೊತ್ತಾಯ್ತು. ಇಬ್ಬರೂ."
ಒಂದು ನಮಿಷ ಸುಮ್ಮನಿದ್ದು ಗೌಡರೆಂದರು:
"ನಿಮ್ಮ ವಿಷಯ ನಾನು ಹಿಂದೆಯೇ ಎಷ್ಟೋ ಕೇಳಿದ್ದೆ ಜಯದೇವರೆ. ನೀವು
ಹೋಗಿ ಸ್ವಲ್ಪ ಸಮಯವಾದ್ಮೇಲೆ ನಾನು ಬಂದದ್ದು. ಆಗಲೂ ಇಲ್ಲಿಯವರ
ಬಾಯಲ್ಲಿ ನಿಮ್ಮ ಮಾತೇ. ಎಲ್ಲರೂ ನಿಮ್ಮನ್ನು ಹೊಗಳುವವರೇ."
ಜಯದೇವ ಮುಗುಳುನಕ್ಕ.
"ಬಯ್ಯಬೇಕಾಗಿತ್ತು. ಯಾಕೆ ಹೊಗಳಿದರೊ?"
"ನನಗಂತೂ ಆಶ್ಚರ್ಯವಾಯ್ತು. ಉಪಾಧ್ಯಾಯ ವೃತ್ತೀಲಿ ಹೆಚ್ಚಿನ ಅನುಭವ
ಇಲ್ದೇ ಇದ್ರೂ ಅಷ್ಟೊಂದು ಜನಪ್ರಿಯರಾಗಿದ್ರಿ ಅಂದ್ಮೇಲೆ_"
"ಏನು ಜನಪ್ರಿಯತೆಯೊ?"
"ಯಾಕಲ್ಲ? ಈಗ ನೋಡಿ, ನಮ್ಮ ಮುಖ್ಯೋಪಾಧ್ಯಾಯರು. ಎಲ್ಲರೂ ಆ

396

ಸೇತುವೆ

ಸ್ಥಾನಕ್ಕೋಸ್ಕರ ಅವರಿಗೆ ಗೌರವ ಕೊಡ್ತಾರೆಯೇ ಹೊರತು,ಆ ಮನುಷ್ಯ ಸ್ವತಃ
ತಾವಾಗಿ ಜನಪ್ರಿಯರಾಗಿದಾರೇನು?"
ಎಷ್ಟೊಂದು ಬೇಗನೆ ಗುರಿ ಸಮೀಪಿಸಿತ್ತು ಮಾತಿನ ಸರಣಿ!
"ಎಲ್ಲರೂ ಒಂದೇ ರೀತಿ ಇರೋದಿಲ್ಲ."
"ಲಕ್ಕಪ್ಪ ಗೌಡರು ಸುಮ್ಮನಾಗಿ ಬಳಿಕ ಒಮ್ಮೆಲೆ ಹೇಳಿದರು:
"ನಾನು ಒಂದು ಮಾತು ಹೇಳ್ತೀನಿ. ದಯವಿಟ್ಟು ತಪ್ಪು ತಿಳ್ಕೋಬಾರದು."
ಹೇಳದಿದ್ದರೆ ಚೆನ್ನಾಗಿತ್ತು ಆ ಮಾತನ್ನು. ಆದರೂ-
“ಹೇಳಿ."
"ಯಾರ ಮೇಲಾದರೂ ಕತ್ತಿಮಸೀತಾನೇ ಇರಬೇಕು ನಂಜುಂಡಯ್ಯನವರಿಗೆ.
ಹಿಂದೆ ನಿಮಗೂ ಸಾಕಷ್ಟು ಹಿಂಸೆಕೊಟ್ಟಿದ್ದರಂತಲ್ಲ?"
"ನನಗೆ ಅದೊಂದೂ ಗೊತ್ತಿಲ್ಲ ಗೌಡರೆ. ನಾನು ಅಂಥದೆಲ್ಲ ನೆನಪಿಟ್ಟು
ಕೊಳ್ಳೋದಿಲ್ಲ."
ಜಯದೇವನ ಧ್ವನಿಯಲ್ಲಿ ಬೇಸರವಿದ್ದರೂ ಗೌಡರು ಗಮನಿಸದೆ ಮುಂದು
ವರಿದರು:
"ಹಿಂದೆಯೂ ಒಂದೆರಡು ಕಡೆ ಈ ಜನರನ್ನ ಕಂಡಿದೀನಿ ಸಾರ್. ಜಾತೀಯ
ವಾದ ಅಂದರೆ ಅವರಿಂದ ಕಲಿತ್ಕೋಬೇಕು."
ಈಗಲಾದರೂ ಸ್ಪಷ್ಟವಾಗಿ ತಾನು ಮಾತನಾಡಲೇಬೇಕೆಂದು ಜಯದೇವ
ತೀರ್ಮಾನಿಸಿದ.
"ಇಡೀ ಜಾತಿಯನ್ನೆ ಅನ್ನೋದಕ್ಕಾಗಲ್ಲ ಗೌಡರೆ. ಬ್ರಾಹ್ಮಣರಾದರೇನು ಲಿಂಗಾ
ಯತರಾದರೇನು ಕೆಟ್ಟವರು ಎಲ್ಲಾ ಕಡೇನೂ ಇರೋದಿಲ್ವೆ?"
[ಆ ಮಾತಿಗೆ 'ಒಕ್ಕಲಿಗರಾದರೇನು' ಎಂಬೊಂದು ಪದವನ್ನು ಸೇರಿಸಲಿಲ್ಲ ಆತ.]
"ಒಪ್ತೀನಿ. ಊರು ಇದ್ದಲ್ಲಿ ಹೊಲಗೇರಿ ಇದ್ದೇ ಇರುತ್ತೆ."
[ಗಾದೆಯೂ ಜಾತಿಗೆ ಸಂಬಂಧಿಸಿಯೇ. ಯಾರು ಹೊಲೆಯ? ಯಾರು?]
“ಏನೇ ಹೇಳಿ. ಈ ಜಾತೀಯ ಭಾವನೆಯೇ ನಮ್ಮ ರಾಷ್ಟ್ರಕ್ಕೊಂದು ಶಾಪ
ಅನಿಸುತ್ತೆ. ಅಬ್ಬ!"
“ಈಗ ನೋಡಿ. ಈ ಊರಲ್ಲಿ ಹೈಸ್ಕೂಲಾಗುತ್ತೆ ಅಂತ ನಿಮ್ಮನ್ನ ಕರೆ
ಸ್ಕೊಂಡಿದಾರೆ."
"ಇಲ್ವಲ್ಲಾ!”
ಆ ಮಾತನ್ನು ನಂಬದವರಂತೆ ಗೌಡರು ಜಯದೇವನನ್ನು ದಿಟ್ಟಿಸಿದರು.
"ಮತ್ಯಾಕೆ ಬಂದಿರಿ ಈ ಕೊಂಪೆಗೆ? ನಾಲ್ವತ್ತು ಮತ್ತು ಹದಿನೈದು ರೂಪಾಯಿ
ಸಂಬಳವೇ ಸಾಕಾದರೆ, ಬೇರೆಲ್ಲೂ ಸಿಗ್ತಿರ್‍ಲಿಲ್ವೆ? ಪದವೀಧರರಾದ್ಮೇಲೂ ಮಾಧ್ಯಾಮಿಕ
ಶಾಲೆಗೇ ಉಪಾಧ್ಯಾಯರಾಗಿ ಯಾರು ಬರ್‍ತಾರೆ ಹೇಳಿ?"
"ನಾನು ಹಣ ಸಂಪಾದನೆಗೋಸ್ಕರ ಈ ವೃತ್ತಿಗೆ ಇಳೀಲಿಲ್ಲ ಗೌಡರೆ."
"ನೀವು ಹೇಳೋದು ನೋಡಿದ್ರೆ, ನಾವೆಲ್ಲ ಇಷ್ಟರಲ್ಲೇ ಸಾವಿರಾರು ರೂಪಾಯಿ
ಆಸ್ತಿ ಮಾಡಿರ್‍ಬೇಕು. ಅಲ್ವೆ?"
ಮಾತಿನ ಕಠೋರತೆ ಕಡಮೆಯಾಗಲೆಂದು ಗೌಡರು ಅದರೊಡನೆ ನಗೆಯನ್ನೂ
ಬೆರೆಸಿದರು.
"ಉಪಾಧ್ಯಾಯರ ವೃತ್ತೀಲಿ ಯಾರೂ ಆಸ್ತಿ ಮಾಡೋದಿಲ್ಲಾಂತಿಟ್ಕೊಳ್ಳಿ."
"ಹೌದಾ? ಹಿಂದೆ ಬಂದಾಗ ನೀವು ಒಬ್ರೇ ಇದ್ರಂತೆ. ಈಗ ಹಾಗಲ್ವಲ್ವಾ!"
ದೋಸೆ ಹುಯ್ದ ಸದ್ದಾಯಿತು ಒಳಗೆ. ಆ ಸುವಾಸನೆ ಕೊಠಡಿಯೊಳಕ್ಕೂ
ಬಂತು.
"ಮನುಷ್ಯ ಬದುಕೋದಕ್ಕೆ ಹಣ ಬೇಕೇ ಬೇಕು.ಆದರೆ ಹಣ ಸಂಪಾದನೆ
ಯೊಂದೇ ಗುರಿಯಾಗಿರುವ ಜನಕ್ಕೆ ಹೇಳಿಸಿದ್ದಲ್ಲ ಉಪಾಧ್ಯಾಯ ವೃತ್ತಿ," ಎಂದ
ಜಯದೇವ.
"ಸರಿ ಸಾರ್. ನಾಳೆ ಹೈಸ್ಕೂಲು ಸ್ಥಾಪನೆಯಾಯ್ತೂಂತ್ಲೇ ಇಟ್ಕೊಳ್ಳೋಣ.
ಆಗ ಅಲ್ಲಿ ನೀವು ಬಿಟ್ಟಿ ದುಡೀತೀರೊ?"
"ಬಿಟ್ಟಿ ಯಾಕೆ ದುಡೀಲಿ?"
"ನಾನ್ಹೇಳ್ತೀನಿ ಕೇಳಿ. ಇನ್ನು ಒಂದು ವರ್ಷದೊಳಗೆ ಹೈಸ್ಕೂಲು ಆಗಿಯೇ
ಆಗ್ತದೆ. ನಿಮ್ಮನ್ನ ತಗೊಂಡೇ ತಗೋತಾರೆ. ನಿಮ್ಮಂಥ ಸಾಧು ಸ್ವಭಾವದವರು_"
[ಸಾಧು ಸ್ವಭಾವ? ತಾನು?]
"ನಾನೇನು ಎಳೇ ಮಗು ಅಂತ ತಿಳಕೊಂಡಿದೀರಾ?"
[ಮುದ್ದಿಸಿ ಕೆಟ್ಟಿರೋ ಮಗು, ಎಂದಿದ್ದಳು ಸುನಂದಾ! ಪಡಬಾರದ ಕಷ್ಟಪಟ್ಟು,
ಬಾಲ್ಯ ಕಳೆದು, ಶಿಕ್ಷಣ ಮುಗಿಸಿ, ಬದುಕಿಗೊಂದು ಗುರಿಯನ್ನು ಕಂಡುಕೊಳ್ಳೋದಕ್ಕೆ
ತಾನು ಪ್ರಯತ್ನಿಸ್ತಾ ಇದ್ದರೆ-]
"ದಯವಿಟ್ಟು ಹಾಗೆ ತಪ್ಪು ತಿಳ್ಕೋಬೇಡಿ. ಈ ಪ್ರಪಂಚದಲ್ಲಿ ನಿಮ್ಮ ಹಾಗೆ
ಸಾತ್ವಿಕರು ಇನ್ನೂ ಇದಾರೆ. ಪ್ರಪಂಚ ಉಳಿದಿರೋದೂ ಅವರಿಂದಲೇ. ಆದರೆ
ಸ್ವಾರ್ಥಿಗಳು ಯಾವಾಗಲೂ ತಮ್ಮ ಕೆಲಸ ಸಾಧಿಸೋಕೆ ಅಂಥವರ್‍ನೇ ಹುಡುಕ್ತಾರೆ."
"ಈ ಊರಿಗೆ ಹೈಸ್ಕೂಲು ಬೇಡ ಅಂತಲೊ ನೀವು ಹೇಳೋದು?"
"ಬೇಡ ಅಂದ್ನೆ ನಾನು? ಆದರೆ ಹೈಸ್ಕೂಲು, ಒಂದು ಕೋಮಿನವರ ಸ್ವತ್ತಾಗ
ಬಾರದೂಂತ ನನ್ನ ಅಭಿಪ್ರಾಯ."
"ಅದು ಸರಿ ಅನ್ನಿ. ಇಲ್ಲಿ ಹಾಗೆ ಆಗೋದಕ್ಕೆ ಅವಕಾಶ ಎಲ್ಲಿದೆ? ಸಮಿತೀಲಿ
ಎಲ್ಲರಿಗೂ ಪ್ರಾತಿನಿಧ್ಯ ಇಲ್ವೇನು?"
[ಇದೆ ಎನ್ನುವುದು ಜಯದೇವನಿಗೆ ಮೊದಲೇ ಗೊತ್ತಿತ್ತು. ನಂಜುಂಡಯ್ಯ
ಆ ವಿಷಯ ಹೇಳಿಯೂ ಇದ್ದರು.]

398

ಸೇತುವೆ

"ಸರಕಾರದ ಮಾನ್ಯತೆ ಸಿಗದೇ ಹೋದೀತೂಂತ ಒಂದೆರಡು ಸ್ಥಾನ ಬೇರೆಯವ
ರಿಗೂ ಕೊಟ್ಟಿದಾರೆ. ಈ ಪ್ರದೇಶದಲ್ಲೆಲ್ಲ ಇವರದೇ ಪ್ರಾಬಲ್ಯವಾದರೂ ಸರಕಾರದ
ಹತ್ತಿರ ಇವರ ಆಟ ಏನೂ ನಡೆಯೋದಿಲ್ಲ ನೋಡಿ."
[ಅಲ್ಲಿ ನಡೆಯುತ್ತಿದ್ದುದು ಬೇರೆಯವರದೇ ಆಟ ಹಾಗಾದರೆ.]
"ನಾನು ಒಂದು ಹೇಳ್ಲೆ ಲಕ್ಕಪ್ಪಗೌಡರೆ? ಖಾಸಗಿ ಉದ್ಯಮವಾಗಿ ವಿದ್ಯಾಭಾಸ
ಕ್ರಮ ನಡೀಲೇಬಾರದು. ಪ್ರಜೆಯ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಸಿ ಕೊಡೋದು
ಸರಕಾರದ ಜವಾಬ್ದಾರಿ. ಸರಕಾರ ಸರಿಯಾಗಿದ್ದರೆ ಯಾವ ಪಕ್ಷಪಾತಕ್ಕೂ ಅವಕಾಶವೇ
ಇರೋದಿಲ್ಲ."
"ಆದರೆ ನಮ್ಮ ದೇಶದಲ್ಲಿ ಸರಕಾರದ ಹತ್ತಿರ ಅಷ್ಟೊಂದು ಹಣ ಬೇಕಲ್ಲ.
ದೊಡ್ಡ ದೊಡ್ಡ ಕೈಗಾರಿಕೋದ್ಯಮಕ್ಕೇ ಹಣ ಇಲ್ದೆ ಇರುವಾಗ ವಿದ್ಯಾಭ್ಯಾಸಕ್ಕೆ
ಎಲ್ಲಿಂದ ತರ್‍ತಾರೆ?"
"ಅಂದ ಮೇಲೆ ಈ ತೊಂದರೆಗಳೆಲ್ಲ ಇದ್ದೇ ಇರ್‍ತವೆ!"
ಲಕ್ಕಪ್ಪಗೌಡರು ಮುಗುಳುನಗಲೆತ್ನಿಸಿ, ವಿಫಲರಾಗಿ, ಹೇಳಿದರು:
"ಹಾಗಾದರೆ ಈ ಜಾತಿಯ ದಬ್ಬಾಳಿಕೆಗೆ ಆಸ್ಪದ ಕೊಡೋಣವೊ?"
ಸುನಂದಾ ಅತ್ತ ಸುಳಿದಳು. ಆ ಕಣ್ಸನ್ನೆಯ ಇಂಗಿತವನ್ನು ತಿಳಿದ ಜಯದೇವ
ಹೇಳಿದ:
"ಇಲ್ಲಿಗೇ ತಂದ್ಬಿಡು."
ಬಳಿಕ ಗೌಡರತ್ತ ತಿರುಗಿ ಆತನೆಂದ:
"ದಬ್ಬಾಳಿಕೆ ಎಲ್ಲಿಂದಲೇ ಬರಲಿ, ಯಾರದೇ ಇರಲಿ, ಅದನ್ನ ನಾವು ಇದಿರಿಸ್ಲೇ
ಬೇಕು."
"ಇಂಗ್ಲಿಷರ ದಬ್ಬಾಳಿಕೆಯನ್ನು ಇದಿರಿಸಿದೋರು ನಾವು."
ಜಯದೇವ ಅವರನ್ನೊಮ್ಮೆ ನೋಡಿ ಹೇಳಿದ:
"ಚಳವಳೀಲಿದ್ದಿರಾ ನೀವು?"
"ಇದ್ದೆ ಸ್ವಾಮಿ. ನಾಲ್ವತ್ತೆರಡನೆ ಇಸವೀಲಿ ನಾನೂ ಆರು ತಿಂಗಳು ಜೈಲಿಗೆ
ಹೋಗಿದೀನಿ. ಕೆಲಸವೇನೋ ತಿರುಗಿ ಸಿಗ್ತೂಂತಿಟ್ಕೊಳ್ಳಿ ಆಮೇಲೆ."
"ಹಾಗೇನು? ನನಗೆ ಗೊತ್ತೇ ಇರ್‍ಲಿಲ್ಲ."
"ಎಂ. ಎಲ್. ಎ. ಮಾಯಣ್ಣ ಇಲ್ವೆ? ಆತ ನಮ್ಮ ಚಿಕ್ಕಪ್ಪನ ಮಗ.”
"ಓ....”
ಎರಡು ತಟ್ಟೆಗಳಲ್ಲಿ ಎರಡೆರಡು ದೋಸೆ, ಜತೆಗೆ ಚಟ್ಣಿ, ಬಂದುವು. ನೀರನ್ನೂ
ಸುನಂದಾ ತಂದಳು.
“ಸರಿಯಾದ ಹೊತ್ನಲ್ಲಿ ಹಾಜರಾದ ಹಾಗಾಯ್ತು ನಾನು!" ಎಂದರು ಗೌಡರು.
"ತಗೊಳ್ಳಿ, ತಗೊಳ್ಳಿ," ಎಂದು ಜಯದೇವ ನಸುನಗುತ್ತ.

ನವೋದಯ

399

ಕಾಫಿಯ ಲೋಟಗಳೂ ಬ೦ದುವು.
ಕಾಫಿ ತಿಂಡಿಯ ನೆಪದಿಂದಲಾದರೂ ವಿಷಯ ಬದಲಾಗಲೆಂದು ಜಯದೇವ
ಕೇಳಿದ:
“ಬೆಳಗ್ಗೆ ಯಾವಾಗಲೂ ಉಪಾಹಾರ ಮುಗಿಸ್ಕೊಂಡೇ ಶಾಲೆಗೆ ಬರ್‍ತೀರೀಂತ
ಕಾಣುತ್ತೆ."
"ಹೌದು. ಶಾಲಾ ಸಮಯ ಬದಲಾಯಿಸ್ಬಿಟ್ಟಿದಾರಲ್ಲ."
"ದೂರದಿಂದ ಬರೋ ಹುಡುಗರಿಗೆ ಬಹಳ ಕಷ್ಟ, ಅಲ್ವ?"
"ಈಗೇನೋ ಬರ್ತಾರೆ. ಆದರೆ ಮಳೆಗಾಲದಲ್ಲಿ ಸಾಧ್ಯವೇ ಇಲ್ಲ. ಮೊನ್ನೆ
ಇನ್ಸ್ ಪೆಕ್ಟರು ಬಂದಿದ್ದಾಗ ಸ್ಪಷ್ಟವಾಗಿ ಹೇಳ್ದೆ-ಇಂಥ ಸುಧಾರಣೆಯಿಂದ ಪ್ರಯೋಜನ
ವಾಗೋದಿಲ್ಲಾಂತ. ಅವರು ನಮ್ಮ ಗುರುತಿನವರೂಂತಿಟ್ಕೊಳ್ಳಿ. ಬಹುಶಃ ಸಮಯ
ಗೊತ್ತುಮಾಡೋದನ್ನೆಲ್ಲ ಆಯಾ ಊರಿನ ಉಪಾಧ್ಯಾಯರಿಗೆ ಬಿಡಬಹುದು.
ಹಾಗೇ೦ತ ಅವರಂದರು."
"ನಮ್ಮಲ್ಲಿ ಹನ್ನೊಂದು ಘಂಟೆಯ ಹೊತ್ತಿಗೆ ಶುರು ಮಾಡಿದ್ರೆ ಸಾಯಂಕಾಲ
ಆಟ ಪಂದ್ಯಾಟಕ್ಕೆ ಅನುಕೂಲವಾದೀತು."
"ನೋಡೋಣ. ಅದೇನು ದೊಡ್ಡ ವಿಷಯ?"
ಉಸಿರು ಕಟ್ಟಿಸುವಂತಹ ಸಂಭಾಷಣೆಯಿಂದ ದೂರ ಸರಿದ ಹಾಗಾಯಿತೆಂದು
ಸರಾಗವಾಗಿ ಉಸಿರಾಡುತ್ತ ಜಯದೇವನೆಂದ:
"ನಮ್ಮ ಶಾಲೆಗೆ ಇನ್ನೂ ಒಬ್ಬರು ಬಂದ್ಬಿಟ್ರೆ ಹೆಚ್ಚು ಅನುಕೂಲವಾಗುತ್ತೆ."
"ನಿಜ."
"ಸಾಕಷ್ಟು ಜನ ಉಪಾಧ್ಯಾಯರು ಇಲ್ದೇ ಹೋದ್ರೆ ಹುಡುಗರ ವಿಷಯ
ವ್ಯೆಯಕ್ತಿಕವಾಗಿ ಗಮನ ಕೊಡೋದಕ್ಕೆ ಆಗೊಲ್ಲ. ವಿದ್ಯಾರ್ಥಿಗಳ ಸಂಖ್ಯೆಯೋ,
ಹೆಚ್ತಾನೇ ಇದೆ."
ಲಕ್ಕಪ್ಪಗೌಡರು ನಕ್ಕರು.
ಯಾಕೆ ಎನ್ನುವ ಮೌನದ ಪ್ರಶ್ನೆಯನ್ನು ಮುಖಭಾವದಿಂದಲೆ ಸೂಚಿಸುತ್ತ,
ಜಯದೇವ ಅವರನ್ನು ನೋಡಿದ.
"ನಾನು, ಕೆಲವು ವರ್ಷಗಳ ಹಿಂದೆ ಈ ವಿಷಯವೆಲ್ಲ ಯೋಚಿಸ್ತಿದ್ದೆ. ಈಗ,
ನೀವು ತಲೆಕೆಡಿಸ್ಕೊಳ್ತಾ ಇದ್ದೀರಿ. ವರ್ಷಗಳು ಉರುಳ್ತವೆ. ವ್ಯಕ್ತಿಗಳು ಬದಲಾಗ್ತಾರೆ.
ಆದರೆ ಸಮಸ್ಯೆಗಳು ಮಾತ್ರ ಹಾಗೇ ಇರ್ತ್ತ‍ವೆ!"
ಬೇರೊಂದು ಸಂದರ್ಭದಲ್ಲಿ ಹಿಂದೆ ರಂಗರಾಯರೂ ಹೆಚ್ಚು ಕಡಮೆ ಅಂತಹದೇ
ಮಾತನ್ನಾಡಿದ್ದರು. ಆದರೆ ಆ ಧ್ವನಿಯಲ್ಲಿ ಕಾತರವಿತ್ತು,-ವ್ಯಂಗ್ಯವಿರಲಿಲ್ಲ.
"ಆಗಲಿ ಲಕ್ಕಪ್ಪ್ ಗೌಡರೇ. ಪುನಃ ಪುನಃ ಜಗ್ಗೋದರಲ್ಲಿ ತಪ್ಪಿಲ್ಲವಲ್ಲ. ಸಾವಿರ
ಜನ ಸೇರಿದಾಗ ಬಂಡೆ ಮಿಸುಕಿದರೂ ಮಿಸುಕಬಹುದು. ಯಾರಿಗೆ ಗೊತ್ತು? ಕಾಲ

400

ಸೇತುವೆ

ಯಾವಾಗಲೂ ಹೀಗೆಯೇ ಇರೋದು ಸಾಧ್ಯವೆ?"
ಗೌಡರು ನೀರಿನ ಲೋಟದೊಡನೆ ಏಳಲೆತ್ನಿಸುತ್ತಿದ್ದುದನ್ನು ಕಂಡು ಜಯ
ದೇವನೆಂದ:
"ತಟ್ಟೇಲೆ ತೊಳ್ಕೊಳ್ಳಿ."
ಕೈ ತೊಳೆದು ಸಣ್ಣನೆ ತೇಗಿ ಗೌಡರೆಂದರು:
"ನಿಮ್ಮಂಥ ಆದರ್ಶ ಸಾಧಕರನ್ನು ಕಂಡರೆ ಗೌರವ ಹುಟ್ಟುತ್ತಪ್ಪ.”
ಜಯದೇವ ಉತ್ತರಕೊಡದೆ, ಬರಿದಾಗಿದ್ದ ತಟ್ಟೆ ಲೋಟಗಳನ್ನೆತ್ತಿಕೂಂಡು
ಒಳಹೋದ.
...ಗೌಡರು ಅಡಿಕೆ ಬೇಡವೆಂದರು. ಬೀಡಿ, ಸಿಗರೇಟು, ನಶ್ಯಗಳ ಅಗತ್ಯವೂ
ಅವರಿಗೆ ಇರಲಿಲ್ಲ.
"ಅದೇ, ಮೊನ್ನೆಯಿಂದ ನೋಡ್ತಿದೀನಿ. ಯಾವ ಚಟವೂ ನಿಮಗೆ ಇರೋ
ಹಾಗೆ ಕಾಣಲಿಲ್ಲ!" ಎಂದ ಜಯದೇವ, ಗೌಡರ ವಿಷಯದಲ್ಲಿ ಮೆಚ್ಚುಗೆ ಸೂಚಿಸುವ
ಆ ಅವಕಾಶಕ್ಕಾಗಿ ಸಮಾಧಾನಪಡುತ್ತ.
"ಹಿಂದೆ ಸೇದ್ತಿದ್ದೆ. ನಂಬ್ತೀರೋ ಇಲ್ಲವೋ, ತಿಂಗಳಿಗೆ ಮೂವತ್ತು ರುಪಾಯಿ
ಅದಕ್ಕೇ ಖರ್ಚಾಗ್ತಿತ್ತು. ಸಂಬಳ ಸಾಲದೆ ಮನೆಯಿಂದ ತರಿಸ್ತಿದ್ದೆ. ಆಮೇಲೆ
ಪ್ಲೂರೆಸೀಂತ ಒಂದಾಯ್ತು ನೋಡಿ. ಅದಕ್ಕೆ ಚಿಕಿತ್ಸೆ ಮಾಡಿಸಿಕೊಂಡೋನು ಸೇದೋದು
ಬಿಟ್ಟೇ ಬಿಟ್ಟೆ," ಎಂದು ಗೌಡರು ವಿವರಣೆ ಇತ್ತರು.
"ನಂಜುಂಡಯ್ಯನವರು ಮಾತ್ರ ಬಹಳ ಸೇದ್ತಾರೆ."
"ಅವರದೇನು ಬಿಡಿ!"
ಈ ಮಾತುಕತೆ ಮುಗಿಯುವುದೇ ಇಲ್ಲವೇನೋ ಎಂದು ಅಸಹನೆಯಿಂದ ಕುದಿ
ಯುತ್ತಿದ್ದ ಸುನಂದಾ, ತಟ್ಟೆ ಲೋಟಗಳೊಡನೆ ಜಯದೇವ ಒಳ ಬಂದಾಗಲೆ ಗೊಣ
ಗಿದ್ದಳು. ಈಗ ಸ್ವತಃ ತಾನೇ ಒಳ ಹಜಾರದ ವರೆಗೂ ನಡೆದು, ಸ್ವರವನ್ನು ಆದಷ್ಟು
ಇಂಪಾಗಿಡಲು ಯತ್ನಿಸುತ್ತ, ಹೇಳಿದಳು:
"ನೀರು ಕಾದಿದೆ. ಸ್ನಾನ ಈಗ್ಮಾಡ್ತೀರೋ? ಆಮೇಲೆ ಮಾಡ್ತಿರೊ?"
ಆ ಮಾತು ಕೇಳಿಸಿದೊಡನೆ ಗೌಡರೆಂದರು:
"ಇನ್ನು ನಾನು ಹೊರಡ್ತೀನಿ. ಪೇಟೆಕಡೆಗೂ ಸ್ವಲ್ಪ ಹೋಗ್ಬೇಕು. ನಾಳೆ
ಹ್ಯಾಗೂ ಸಿಕ್ಕಿಯೇ ಸಿಗ್ತೀವಲ್ಲ"
ಅವರು ಏಳುತ್ತಿದ್ದಂತೆ ಜಯದೇವನೆಂದ:
"ಊಟ ಇಲ್ಲಿಯೇ ಮುಗಿಸ್ಕೊಂಡು ಹೋಗ್ಬಹುದಾಗಿತ್ತಲ್ಲ."
"ಏನೂ ಬೇಡಿ, ಊಟದಷ್ಟೇ ಭರ್ಜರಿಯಾಗಿತ್ತು ತಿಂಡಿ. ಬರೋ ಭಾನುವಾರ
ಮಾತ್ರ__"
“ಆಗಲಿ. ನೆನಪಿದೆ."

ನವೋದಯ

401

"ಹೊರಡ್ಲಾ ಹಾಗಾದರೆ?"
"ಎಲ್ಲಿ, ಕೊಡೆ ತಂದೇ ಇಲ್ವೆ?" ಎಂದ, ಆವರೆಗೂ ಅದನ್ನು ಗಮನಿಸಿದೆ ಇದ್ದ
ಜಯದೇವ.
"ಇಲ್ಲ, ಬಿಸಿಲಾಗೋಕ್ಮುಂಚೆ ಮನೆ ಸೇರ್ತೀನಲ್ಲಾ ಅಂತ ಬರಿಗೈಲೆ ಬಂದೆ,"
ಎನ್ನುತ್ತ ಲಕ್ಕಪ್ಪಗೌಡರು ಅಂಗಳಕ್ಕಿಳಿದರು.
"ಒಳ್ಳೇದು ಲಕ್ಕಪ್ಪಗೌಡರೆ. ನಾನೂ ಸ್ನಾನಕ್ಕೆ ಹೋರಡ್ತೀನಿ."
.....ತಡವಾದರೂ ಸರಿಯೆ ಬಿಡಲೊಲ್ಲೆನೆಂದು ಸುನಂದಾ ಜಯದೇವನ
ನೆತ್ತಿಗೆ ಎಣ್ಣೆ ಇಟ್ಟಳು.
"ಸ್ನಾನವಾದಮೇಲೆ ನಿದ್ದೆ," ಎಂದು ಮತ್ತೊಮ್ಮೆ ನೆನೆಪುಮಾಡಿ ಕೊಟ್ಟಳು
ಆಕೆ.
“ಓಹೋ. ಧಾರಾಳವಾಗಿ. ಇಷ್ಟೆಲ್ಲ ಮಾತುಕತೆಯಾಗಿದೆ. ನಿದ್ದೆ ಮಾಡದೇ
ಇದ್ದರೆ ಬುದ್ದಿ ಭ್ರಮಣೆಯಾದೀತು."
ಸುನಂದಾ ಕೇಳಿದಳು:
"ಇನ್ನು ಸಾಯಂಕಾಲ ನಂಜುಂಡಯ್ಯನವರ ಮನೇಲಿ ಮಾತುಕತೆಯಾದ
ಮೇಲೂ ಹೀಗೆಯೇ ನಿದ್ದೆಮಾಡ್ತೀರಿ ತಾನೆ?"




ತಂಗಿಗೆ ಬರೆದ ಕಾಗದದಲ್ಲಿ ವೇಣು ಕೇಳಿದ್ದ:
"-ಪತ್ರವ್ಯವಹಾರದ ಜವಾಬ್ದಾರಿಯನ್ನೆಲ್ಲ ನಿನಗೇ ವಹಿಸಿದಾರೊ? ನಾಲ್ಕು
ಗೆರೆ ಬರೆಯೋದಕ್ಕೂ ಸಾಹೇಬರಿಗೆ ಪುರಸೊತ್ತಿಲ್ವಂತೊ?"
ಜಯದೇವ ವೇಣುವಿಗೆ ಬರೆದ:
“ರಜಾ ಇದ್ದರೆ ಓಮ್ಮೆ ಬಂದು ಹೋಗು.”
ಕೆಲಸ ಅದೇ ಆಗ ಖಾಯಂ ಆಗಿದ್ದ ವೇಣು, ರಜಾ ಪಡೆಯುವ ಸ್ಥಿತಿಯಲ್ಲಿ
ರಲಿಲ್ಲ......
ನಾಲ್ಕೇ ದಿನಗಳ ಬಳಿಕ ಒಂದು ಸಂಜೆ ಮೇಘದೈತ್ಯ ಗುಡುಗಿದ:
'ಈ ಸಲದ್ದು ನಟನೆಯಲ್ಲ. ನಡು ಮುರಿಯಿತು. ಪುಡಿ ಪುಡಿಯಾಯಿತು
ಮೈ. ಇದೋ ಕಣವಾದೆ, ನೀರಾದೆ.'
ಎಂತಹ ಮಳೆ! ಅದರ ರುದ್ರ ನೃತ್ಯಕ್ಕೆ ಹಿನ್ನಲೆಯಾಗಿ, ರೆಂಬೆ ಕೊಂಬೆಗಳನ್ನು
51

402

ಸೇತುವೆ

ಕಿತ್ತೆಸೆದ, ಮರಗಳನ್ನು ಬುಡಮೇಲು ಮಾಡಿದ, ಮನೆ-ಛಾವಣಿಗಳನ್ನು ಹಾರಿಸಿ
ಕೊಂಡೊಯ್ದ ಗಾಳಿ; ಗುಡುಗು, ಮಿಂಚು. ಒಣಗಿದ್ದ ಹಳ್ಳಗಳು ತುಂಬಿದ ಕೆರೆ
ಗಳಾದುವು. ಬೀದಿ ಗಲ್ಲಿಗಳು ನದಿ ಉಪ ನದಿಗಳಾದುವು. ಮಾನವನ ಮೇಲೆ
ಮುನಿದ ದೇವತೆಗಳು ಆಕ್ರೋಶ ಮಾಡಿದಂತೆ-ಆ ವಿಕಟ ಅಟ್ಟಹಾಸ. ಅಥವಾ
ದಾನವ-ದೇವತೆಗಳ ಯುದ್ಧವೊ?
ಮಳೆ ಆ ವರ್ಷ ತಡವಾಗಿ ಬಂದಿತ್ತು. ಆ ತಪ್ಪಿಗೆಂದು ಹೆಚ್ಚು ಹೊತ್ತು
ಸುರಿಯಿತು.
ಬೆಂಗಳೂರಿನಲ್ಲಿ ಇರುತಿದ್ದುದಕ್ಕಿಂತ ಸ್ವಲ್ಪ ಭಿನ್ನವಾಗಿದ್ದ ಆ ಮಳೆಗಾಲದ ಸವಿ
ಯನ್ನು ಸುನಂದಾ ಉಂಡಳು. ಅಣ್ಣನಿಗೆ ಬಣ್ಣಿಸಿ ಬರೆಯಲು ಮತ್ತೊಂದು ವಿಷಯ
ದೊರೆತಂತಾಯಿತು ಆಕೆಗೆ.
ಮೇಲಧಿಕಾರಿಗಳಿಂದ ಶಾಲೆಗೆ ಪ್ರಚುರ ಪತ್ರ ಬಂತು: ವಿದ್ಯಾರ್ಥಿಗಳ ಅನು
ಕೂಲಕ್ಕೆ ಸರಿಯಾಗಿ ಶಾಲಾಸಮಯ ಬದಲಾಯಿಸಬಹುದೆಂದು.
“ನಾಳೆಯಿಂದ ಹನ್ನೊಂದು ಘಂಟೆಗೆ ಶಾಲೆ," ಎಂದು ಜಯದೇವ ತಿಳಿಸಿದಾಗ
ಸುನಂದೆಗೆ ಸಂತೋಷವಾಯ್ತು.
"ನಮ್ಮಣ್ಣ ಕಾರ್ಖಾನೆಗೆ ಹೋದ ಹಾಗೆ ಬೆಳಗ್ಗೆ ಎದ್ದು ಇನ್ನು ನೀವು ಓಡ
ಬೇಕಾದ್ದಿಲ್ಲವಲ್ಲ," ಎಂದಳು.
"ಅಡುಗೆ ಮಾತ್ರ ಸ್ವಲ್ಪ ಅವಸರದಲ್ಲೆ ಆಗ್ಬೇಕು."
"ಮಾಡಿದರಾಯ್ತು."
...ಲಕ್ಕಪ್ಪಗೌಡರ ಮನೆಯಲ್ಲಿ ಸೊರಗಿ ಕಡ್ಡಿಯಂತಿದ್ದ ಅವರ ಹೆಂಡತಿಯೂ
ಆಕೆಯ ತಾಯಿಯೂ ಭಾನುವಾರ ಮಧ್ಯಾಹ್ನ ಹಬ್ಬದ ಅಡುಗೆಯನ್ನೆ ಸಿದ್ಧ
ಗೊಳಿಸಿದರು.
"ಅದು ಒಂದರ ಹೊರತಾಗಿ ಉಳಿದದ್ದೆಲ್ಲ ಮಾಡಿದೀವಿ," ಎಂದರು ಗೌಡರು,
ನಗುತ್ತ, ರಹಸ್ಯಮಯವಾಗಿ ಮಾತನಾಡುತ್ತ.
'ಅದು' ಎಂದರೆ ಏನೆಂಬುದು ಸುನಂದೆಗೆ ಅರ್ಥವಾಗಲಿಲ್ಲ.
ಜಯದೇವ ನಸುನಕ್ಕು ನುಡಿದ:
"ಇಷ್ಟೆಲ್ಲ ಮಾಡಿಸಿದೀರಲ್ಲ. ಇದನ್ನೆಲ್ಲ ರುಚಿನೋಡಿ ಜೀರ್ಣಿಸಿದರೆ ಸಾಕಾಗಿದೆ."
ಊಟ, ಮಾತು. ಸಿಹಿಯಾದ ಊಟ; ಸದ್ಯಃ ಮಾತು ಕೂಡ ಕಹಿಯಾಗಿರಲಿಲ್ಲ.
...ನಂಜುಂಡಯ್ಯನೂ ಅವರಾಕೆಯೂ ಜತೆಯಾಗಿ ಜಯದೇವನ ಮನೆಗೆ
ಬರಲೇ ಇಲ್ಲ. ಪಾರ್ವತಮ್ಮ ಮಕ್ಕಳೊಡನೆ ಒಮ್ಮೆ ಬಂದು ಹೋದರು.
ಲಕ್ಕಪ್ಪಗೌಡರ ಹೆಂಡತಿಯಂತೂ ಅನಾರೋಗ್ಯದ ದೆಸೆಯಿಂದ ಮನೆ ಬಿಡುವ
ಹಾಗಿರಲಿಲ್ಲ.
ಸುನಂದಾ ಕೇಳಿದಳು:

ನವೋದಯ

403

"ಲಿಂಗಾಯತರ ಮನೆಯಲ್ಲೂ ಊಟವಾಯ್ತು. ಒಕ್ಕಲಿಗರ ಮನೆಯಲ್ಲೂ
ಊಟವಾಯ್ತು. ಇನ್ನು ನಮ್ಮದೇ ಅಂತ ಜಾತಿ ಯಾವುದಾದರೂ ಒಂದು ಉಳಿದಿದೆ
ಯೇನು?"
ಆಕೆ ನಗುತ್ತಲೇ ಹಾಗೆ ಆಡಿದ್ದರೂ ಜಯದೇವನಿಗೆ ಸ್ವಲ್ಪ ಕಸಿವಿಸಿ ಎನಿಸಿತು.
“ಸುನಂದಾ, ಯಾಕೆ ಹಾಗಂತೀಯೆ?"
"ಇನ್ನೇನು ಮತ್ತೆ?"
“ನಾವು ಯಾವ ಜಾತಿ ಹೇಳು."
"ಹೇಳ್ಕೊಟ್ಟಿದೀರಲ್ಲ ಆವತ್ತೆ-ಮನುಷ್ಯಜಾತೀಂತ."
ಬಿರುಸಾದ ಧ್ವನಿ. ಆದರೂ ಅಸಮ್ಮತಿಯ ಛಾಯೆ ಇರಲಿಲ್ಲ.
"ಹೀಗಾಯ್ತೂಂತ ಬೇಸರವೆ ನಿನಗೆ?"
"ನಾನು ಯಾವತ್ತೂ ಹಾಗೆ ಹೇಳಿಲ್ವಲ್ಲ."
"ಬಂಗಾರ, ಒಳ್ಳೆಯವಳು."
"ತಾಳಿ, ಈ ಸಲ ಅಮ್ಮನಿಗೆ ಬರೆಯುವಾಗ ಈ ವರೆಗೆ ಎಲ್ಲೆಲ್ಲಿ ಊಟ ಮಾಡಿ
ದೀವಿ ಅಂತ ವರದಿ ಕೊಡ್ತೀನಿ."
“ಅದೊಂದು ಮಾಡ್ಬೇಡ ಸದ್ಯಃ!"
“ಯಾಕೆ?"
"ಸುಮ್ಸುಮ್ನೆ ವಯಸ್ಸಾದವರ ಮನಸ್ಸು ನೋಯಿಸ್ಬಾರದು."
"ಆಗಲಿ. ನಿಮ್ಮದೇ ರಾಜ್ಯ, ನಿಮ್ಮದೇ ಶಾಸನ."
ಬಂಡಾಯಗಾರಳಾಗಿ ಹೆಂಡತಿ ಹಾಗೆ ಮಾತನಾಡಿದಳೆಂದು ಜಯದೇವ ತಕ್ಕ
ಶಿಕ್ಷೆ ವಿಧಿಸಿದ.
ಸತ್ಕಾರಕೂಟಗಳು ಅಷ್ಟಕ್ಕೆ ಮುಗಿದುವೆಂದೆ? ಶಂಕರಪ್ಪ ತಮ್ಮ ಮನೆಗೆ ಚಹಾಕ್ಕೆ
ಕರೆದರು. ಆ ಊರಿನಲ್ಲೆಲ್ಲ ಸುಶಿಕ್ಷಿತೆಯಾದ ಪತ್ನಿ ಸುನಂದಾ ಒಬ್ಬಳೇ. ಜತೆಗೂಡಿ
ಜಯದೇವ ಬೀದಿಗಿಳಿಯುವುದು ಜನರ ಪಾಲಿಗೊಂದು ರಮ್ಯನೋಟವಾಗಿತ್ತು.
ಶಂಕರಪ್ಪನವರ ಮನೆಗೆ ಹೊರಟ ದಿನ ಮಾತ್ರ ಜಟಕಾ ಗಾಡಿಯೇ ಜಯ
ದೇವನ ಮನೆ ಬಾಗಿಲಿಗೆ ಬಂತು. ಪಂಚಾಯತ ಬೋರ್ಡು ಅಧ್ಯಕ್ಷರೇ ಅದನ್ನು
ಕೊಟ್ಟು ಕಳುಹಿದ್ದರು. ಆ ಊರಿನ ಏಕ ಮಾತ್ರ ವಾಹನ. ಕತ್ತೆಯಂತಹ ಕುದುರೆ;
ಎತ್ತಿನ ಬಂಡಿಯಂತಹ ಗಾಡಿ. ಅದು ಹೊರಟಾಗಲಂತೂ ಬೀದಿಯುದ್ದಕ್ಕೂ ನಾಯಿ
ಗಳು ಅಟ್ಟಿಸಿಕೊಂಡು ಬರುತ್ತಿದ್ದುವು. ಆ ಗಾಡಿಯ ಒಳಗಿರುವವರು ಯಾರೆಂದು
ನೋಡುವ ಕುತೂಹಲ ಎಲ್ಲರಿಗೂ.
ಶಂಕರಪ್ಪನವರೇ ಹೇಳಿದಂತೆ, ಅವರು ಏರ್ಪಡಿಸಿದ್ದು ಸಾರ್ವಜನಿಕ ಸ್ವರೂಪ
ವಿದ್ದ ಸತ್ಕಾರ ಕೂಟ. ಬೋರ್ಡಿನ ಇಬ್ಬರು ಸದಸ್ಯರಿದ್ದರು; ನಂಜುಂಡಯ್ಯನಿದ್ದರು;
ಪೋಲೀಸ್ ಅಧಿಕಾರಿಯಿದ್ದರು; ಬೇರೆಯೂ ಒಬ್ಬಿಬ್ಬರು. ಆನಂದವಿಲಸದ ಸರಬ

404

ಸೇತುವೆ

ರಾಜು. ನೆರೆದವರ ಎದುರು ಅದನ್ನು ತಂದಿಟ್ಟವರು ಮನೆಹುಡುಗರು.
ಬೂಂದಿ ಲಾಡನ್ನು ನುಂಗಿ, ಖಾರಾ, ಶೇವನ್ನು ಕುರುಕುತ್ತಾ ಶಂಕರಪ್ಪ
ಹೇಳಿದರು:
“ನೀವು ತಿರ್‍ಗಾ ನಮ್ಮೂರಿಗೆ ಬಂದದ್ದು ನೋಡಿ ನಮಗೆಷ್ಟು ಸಂತೋಷ
ವಾಯ್ತೂಂತ."
"ತಮ್ಮ ಔದಾರ್ಯ," ಎಂದ ಜಯದೇವ.
“ಅಹ್ವಾನ ಪತ್ರಿಕೆ ಒಂದೆರಡು ದಿವಸ ಮೊದಲೇ ಬಂದಿದ್ರೆ ನಾವು ಮದುವೆಗೂ
ಬರ್‍ತಿದ್ವು. ಅಲ್ವೇನ್ರಿ ಮೇಸ್ಟ್ರೇ?"
"ಹೌದು ಶಂಕರಪ್ಪನವರು ಬಹಳ ಸಂಕಟ ಪಟ್ಕೊಂಡ್ರು. ಆ ದಿವಸ
ಯಾವುದೋ ಕಾರ್ಯಕ್ರಮವಿತ್ತು. ಹೊರಡೋಕಾಗಲಿಲ್ಲ," ಎಂದರು ನಂಜುಂಡಯ್ಯ.
ಆಗಲೇ ಬೇಸರ ಬಂದಿತ್ತು ಜಯದೇವನಿಗೆ. ಏನಾದರೂ ನೆಪ ಹೇಳಿ ಒಬ್ಬನೇ
ಬರದೆ, ಸುನಂದೆಯನ್ನೂ ಅಲ್ಲಿಗೆ ಎಳೆದು ತಂದೆನಲ್ಲ-ಎಂದು ಆತನಿಗೆ ಕೆಡುಕೆನಿಸಿತು.
ಸುನಂದಾ ಗಂಡನ ಪಕ್ಕದಲ್ಲೆ, ಅನಿವಾರ್ಯವೆನಿಸಿದಾಗ ಮಾತ್ರ ಇತರರನ್ನು
ನೋಡುತ್ತ, ಗಂಭೀರವಾಗಿ ಕುಳಿತಳು.
"ತಮ್ಮ ಅಧ್ಯಯನ ಎಲ್ಲಾಯ್ತು?"
"ಮಹಾರಾಣೀಸ್ ಕಾಲೇಜಿನಲ್ಲಿ."
ಆ ಅಧಿಕಾರಿಯ ದೊಡ್ಡಪ್ಪನ ಭಾವನೆ೦ಟನ ಮೈದುನನ ಮಗಳೂ ಅಲ್ಲಿಯೇ
ಓದಿದ್ದಳಂತೆ.
ಆ ಚಹಾ ಕೂಟ ಮುಗಿದು ಹಿಂತಿರುಗುವಾಗ ಸುನಂದಾ ಅಂದಳು:
"ಇನ್ನು ಅಂಥಾ ಕೂಟಗಳಿಗೆ ಕರಕೊಂಡು ಹೋದರೆ ನನ್ನಾಣೆ. ನನಗೆ ಅಸಹ್ಯ
ವಾಗುತ್ತೆ."
"ನನಗೆ ಮಾತ್ರ ಸಂತೋಷವಾಗುತ್ತೇಂತ ತಿಳಕೊಂಡ್ಯಾ? ನಾನು ಒಬ್ಬನೇ ಈ
ಊರಿಗೆ ವಾಪಸು ಬಂದಿದ್ರೆ ಇಷ್ಟೊಂದು ಉಪಚಾರವೂ ಇರ್‍ತಿರ್‍ಲಿಲ್ಲ, ಗೊತ್ತೆ?"
"ಅದೇನಿದ್ದರೂ ಇನ್ನು ಮುಂದೆ ನನ್ನನ್ನ ಕರೀಬೇಡಿ."
"ಎಲ್ಲಿಗೂ ಬರೋಲ್ವ?"
"ಎಲ್ಲಿಗೂ ಬರೋಲ್ಲ."
.......ಒಂದು ದಿನ ವಿರಾಮದ ವೇಳೆಯಲ್ಲಿ, ಉಪಾಧ್ಯಾಯರ ಕೊಠಡಿಯಲ್ಲಿ
ಜಯದೇವನೊಬ್ಬನೆ ಇದ್ದಾಗ, ಹುಡುಗಿಯೊಬ್ಬಳು ಅಲ್ಲಿಗೆ ಬಂದಳು. ಆತನ ಗಮನ
ವನ್ನು ಸೆಳೆದಿದ್ದ ಚುರುಕು ಹುಡುಗಿ. ಹೆಸರನ್ನೂ ಆಗಲೆ ಜಯದೇವ ಗುರುತಿಸಿದ್ದ.
ಚೂಡಾಮಣಿ.
"ಏನಮ್ಮ ಚೂಡಾ?"
ಅಳುಕು. ಸಂಕೋಚ. ಬಾಗಿಲಿಗೆ ಉಗುರಿನಿಂದೊಂದು ಗೆರೆ. ಬಳಿಕ_

ನವೋದಯ

405

"ನಿಮಗೆ ನಮ್ಮಕ್ಕ ಗೊತ್ತೆ ಸಾರ್?"
[ಅಕ್ಕ? ಆ ಮುಖವೇ. ಒಮ್ಮೆಲೆ ಜಯದೇವನಿಗೆ ಹೊಳೆಯಿತು.]
"ಯಾರು, ಪ್ರಭಾಮಣಿಯೆ?"
"ಹೂ೦. ಸಾರ್. ನೀವಿದ್ದಾಗ ಎಲ್.ಎಸ್.ಗೆ ಕಟ್ಟಿದ್ಲು."
"ಗೊತ್ತು."
"ಅವಳ ಸ್ನೇಹಿತೆ, ಇ೦ದಿರಾ೦ತ."
"ಹೌದು, ಇ೦ದಿರಾ_"
"ಅವರಮ್ಮ ಹೇಳಿದ್ರು ಸಾರ್. ನೀವು [ಸ್ವಲ್ಪ ತಡೆದು, ನಾಚಿ,] ನಿಮ್ಮ
ಹೆಂಡ್ತಿಯನ್ನೂ ಕರಕೊಂಡು ಅವರ ಮನೆಗೆ ಊಟಕ್ಕೆ ಬರಬೇಕ೦ತೆ ಸಾರ್. ದಯ
ವಿಟ್ಟು ಬರಬೇಕ೦ತೆ ಸಾರ್."
ನಿರಾಕರಣೆಯ ಪ್ರಶ್ನೆಯೇ ಇರಲಿಲ್ಲ. ಅದು, ವರ್ಷಗಳಿಗೆ ಹಿಂದೆಯೆ ಕೊಟ್ಟಿದ್ದ
ವಾಗ್ದಾನ. ಆಗಾಗ್ಗೆ ಅದರ ನೆನಪಾಗುತ್ತಲೂ ಇತ್ತು.
"ಆಗಲಿ ಚೂಡಾ."
"ಯಾವತ್ತು ಬರ್ತೀರಿಂತ ಹೇಳ್ಲಿ ಸಾರ್?"
"ಮನೇಲಿ ಒ೦ದು ಮಾತು ಕೇಳೋದು ಬೇಡ್ವೆ?"
"ಆಗ್ಲಿ ಸಾರ್. ಆದರೆ ನೀವು ಬರ್ಲೇ ಬೇಕ್ಸಾರ್. ಬಹಳ ಕೇಳ್ಕೊಂಡಿದಾರೆ."
"ಅಗತ್ಯ ಬರ್‍ತೀನಿ."
ತನ್ನ ಕೆಲಸವಾಯಿತೆ೦ದು ಹುಡುಗಿ ಹೊರಡಲು ಉದ್ಯುಕ್ತಳಾದಳು. ಜಯ
ದೇವ ಹೇಳಿದ:
"ನಿಲ್ಲಮ್ಮ ಒ೦ದ್ನಿಮಿಷ. ತಿ೦ಡಿ ತಿ೦ದ್ಯಾ?"
"ಹೂ೦."
"ಪ್ರಭಾಮಣಿ ಎಲ್ಲಿದಾಳೆ ಈಗ?"
"ಬೆಂಗಳೂರಲ್ಲಿ ಸಾರ್. ಅಲ್ಲಿ ನಮ್ಮ ಸೋದರತ್ತೆ ಮನೆ ಇದೆ."
"ಓದ್ತಿದಾಳೇನು?"
"ಹೂ೦ ಸಾರ್. ವಾಣಿ ವಿಲಾಸ ಹೈಸ್ಕೂಲಿಗೆ ಸೇರಿದಾಳೆ ಅದಕ್ಕೇ ಬೆಂಗಳೂರಿಗೆ
ಹೋದದ್ದು."
"ತು೦ಬಾ ಜಾಣೆ ನಿಮ್ಮಕ್ಕ. ನೀನೂ ಹಾಗೇ ಓದ್ಬೇಕು."
"ಓದ್ತೀನಿ ಸಾರ್. [ಒಂದು ಪ್ರಶ್ನೆ ಕೇಳಬೇಕು ಎಂದಿತ್ತು ಆಕೆಯ ಮನಸ್ಸಿ
ನಲ್ಲಿ, ಬಹಳ ದಿವಸದಿಂದ. ಈಗ ಕೇಳುವುದೇ ಸರಿ ಎನಿಸಿತು.] ನಿಮ್ಮೂರು ಬೆಂಗಳೂರು
ಅಲ್ವೆ ಸಾರ್?"
"ಹೌದಮ್ಮ. ನಿಮ್ಮಕ್ಕ ಅಲ್ಲಿರೋದು ಗೊತ್ತಿದ್ದಿದ್ರೆ ಹೋಗಿ ನೋಡ್ತಾ ಇದ್ದೆ.
ಇನ್ನೊಂದ್ಸಲ ಹೋದಾಗ ವಿಳಾಸ ತಗೊಂಡು ಹೋಗ್ತೀನಿ."

406

ಸೇತುವೆ

"ಹೂ೦ ಸಾರ್."
ಹಿಂದೆ, ತನ್ನ ಮನಸ್ಸು ಒಂದು ಕ್ಷಣ ಓಲಾಡುವಂತೆ ಮಾಡಿದ್ದ ಹುಡುಗಿ
ಇ೦ದಿರಾ. ಒಳ್ಳೆಯ ಹುಡುಗಿ.
“ಇಂದಿರಾ ಏನ್ಮಾಡ್ತಿದಾಳೆ ಈಗ?"
"ಮನೇಲೆ ಇದ್ದು ಕಸೂತಿ ಹಾಕೋದು ಕಲೀತಿದಾಳೆ ಸಾರ್."
“ನಿಮ್ಮನೆ ಅವರ ಮನೆಗೆ ಸಮೀಪಾನಾ?"
"ಬಹಳ ಸಮೀಪ ಸಾರ್. ನಾಲ್ಕು ಮನೆ ದಾಟಿದರಾಯ್ತು."
“ಆಗಲಮ್ಮ. ಇನ್ನು ಹೋಗು."
“ಯಾವಾಗ ಬರ್‍ತೀರೀಂತ ಹೇಳ್ಲಿ ಸಾರ್?"
"ನಾಳೆ ತಿಳಿಸ್ತೀನಿ, ಚೂಡಾ."
ಸಂಜೆ ಜಯದೇವ, ಮನೆಯಲ್ಲಿ ಸುನಂದೆಯ ಎದುರು ಆ ಪ್ರಸ್ತಾಪವೆತ್ತಿದ.
"ಇಂದಿರಾ ಗೊತ್ತಲ್ವೇನೆ ನಿಂಗೆ?"
[ಹೆಸರು ಮರೆಯುವುದು ಸಾಧ್ಯವಿದ್ದರೆ!]
"ನಿಮ್ಹುಡುಗಿ!"
“ಅವಳ ತರಗತೀಲೆ ಪ್ರಭಾಮಣೀಂತ ಒಬ್ಬಳು ಹುಡುಗಿ ಇದ್ಲು. ಅವಳ ತಂಗಿ
ಚೂಡಾಮಣೀಂತ__"
[ಎಷ್ಟೊಂದು ಜನ ಹುಡುಗಿಯರು!]
"ಏನು ಸಮಾಚಾರ?"
“ಇಂದಿರೆಯ ತಾಯಿ ಕರೆದಿದಾರೇಂತ ಹೇಳೋಕೆ ಬಂದಿದ್ಲು.”
"ಹೋಗಿ ನೋಡಿದಿರಾ?"
"ಊಟಕ್ಕೆ ಕಣೆ ಕರೆದಿರೋದು. ಇಬ್ಬರನ್ನೂ."
"ಊಟಕ್ಕೆ ಕರೆಯೋರು ಮನೆಗೆ ಬರ್‍ಬೇಕು. ಶಾಲೇಲಿ ಏನು ಕೆಲಸ ಅವರಿಗೆ?"
“ಚೂಡಾಮಣಿ ವಿದ್ಯಾರ್ಥಿನಿ ಕಣೇ. ಏಳನೆ ತರಗತೀಲಿ ಓದ್ತಿದಾಳೆ. ನನ್ನ
ಶಿಷ್ಯೆ."
"ಹಾಗೋ. ಏನ್ಹೇಳಿದಿರಿ? ಒಪ್ಕೊಂಡಿರಿ ತಾನೆ?"
“ಮನೇಲಿ ಕೇಳಿ ಹೇಳ್ತೀನಿ ಅಂದೆ."
"ನಿಜವಾಗ್ಲೂ ?”
"ಹೂ೦. ಅವತ್ತು ಹೇಳ್ಳಿಲ್ವೆ ನೀನು, ಇನ್ನು ಮುಂದೆ ಯಾರ ಮನೆಗೂ
ಬರೋದಿಲ್ಲಾಂತ?”
ಸಂತುಷ್ಟಳಾದಳು ಸುನಂದಾ. ಆಕೆ ಕಾಫಿ ಸೋಸಿ, ತೊಂಬಿದ ಲೋಟವನ್ನು
ಜಯದೇವನ ಮುಂದಿರಿಸಿದಳು.
ಸುನಂದೆ ಸುಮ್ಮನಿದ್ದಳೆಂದು ಜಯದೇವನೆ ಕೇಳಿದ:
“ಏನು ಉತ್ತರ ಕೊಡೋಣ?"
ಇಂದಿರೆಯನ್ನು ನೋಡಬೇಕೆಂದು ಎಷ್ಟೊಂದು ತವಕಿಸುತ್ತಿದ್ದಳು ಸುನಂದಾ.
ಈಗ ಆ ಸಂದರ್ಭ ತಾನಾಗಿಯೇ ಒದಗಿ ಬಂದ ಹೊತ್ತಿನಲ್ಲಿ__
“ಬರೋದಿಲ್ಲ ಅನ್ನೋದಕ್ಕಾಗುತ್ತಾ?"
"ನಿನ್ನಿಷ್ಟ."
"ಭಾನುವಾರ ತಾನೆ ನಿಮಗೆ ಅನುಕೂಲ? ಹೋಗಿ ಬಂದ್ಬಿಡೋಣ."
ಜಯದೇವ ಗಟ್ಟಿಯಾಗಿ ನಕ್ಕ. ಸುನಂದಾ ಕೇಳಿದಳು:
“ಯಾಕೆ ನಗ್ತಿದೀರ?"
"ನೀನು ಒಪ್ತೀಯಾಂತ ನನಗೆ ಮೊದಲೇ ಗೊತ್ತಿತ್ತು."
"ಹ್ಯಾಗೆ?"
"ಇಂದಿರೇನ ನೋಡೋ ಕುತೂಹಲ ಇಲ್ದೆ ಇರುತ್ತ ನಿಂಗೆ?"
ಸುನಂದೆಯ ಗಲ್ಲ ಕಂಪಿಸಿತು. ನಿಂತಲ್ಲಿ ನಿಲ್ಲಲಿಲ್ಲ ತುಟಿಗಳು. ಮೂಗು
ಕುಣಿಯಿತು.
ಅದು ಜಯದೇವನಿಗೆ ಪರಿಚಯವಿದ್ದ ಕಾಹಿಲೆ.
ಬರಿದಾಗಿದ್ದ ಕಾಫಿಯ ಲೋಟವನ್ನು ಕೆಳಗಿರಿಸಿ ಆತ ಔಷಧೋಪಚಾರ
ಮಾಡಿದ.
ಎರಡು ನಿಮಿಷಗಳಲ್ಲಿ ಸುನಂದಾ ಮೊದಲಿನಂತೆಯೆ ಆದಳು. ಅಡುಗೆ ಮನೆ
ಯಲ್ಲಿದ್ದ ಕಾಫಿಯನ್ನು ತಂದು ಜಯದೇವ, ಲೋಟವನ್ನು ಆಕೆಯ ತುಟಿಗಳಿಗೆ
ಇರಿಸಿದ.
......ಭಾನುವಾರಗಳಲ್ಲೆಲ್ಲ 'ಜಯದೇವ ಮೇಸ್ಟ್ರ' ಮನೆಗೆ ಬೀಗ ಬೀಳುತ್ತಿದ್ದು
ದನ್ನು ಗಮನಿಸುತ್ತಿದ್ದ ನೆರೆಹೊರೆಯವರು ಎಂದಿನಂತೆ ಆ ಭಾನುವಾರವೂ ದಂಪತಿ
ಹೊರಬೀಳುವುದನ್ನು ಕಂಡರು.
'ಇವತ್ತು ಯಾರ ಮನೆಗೆ ಊಟಕ್ಕೆ ಹೊರಟಿದಾರೋ' ಎಂಬ ಚರ್ಚೆ ಅವ
ರೊಳಗೆ ನಡೆಯಿತು.
ಹಾದಿಯಲ್ಲಿ ಸುನಂದಾ ಕೇಳಿದಳು:
"ಒಂದು ಪ್ರಶ್ನೆ ಕೇಳ್ತೀನಿ. ಕೋಪಿಸ್ಕೋಬಾರ್‍ದು."
"ಕೇಳು."
"ಈ ಇಂದಿರಾ ಯಾವ ಜನ?"
"ನನಗೆ ಗೊತ್ತಿಲ್ಲ ಕಣೇ."
"ನಿಜವಾಗ್ಲೂ?"
"ಸುಳ್ಳು ಯಾಕೆ ಹೇಳ್ಲಿ?"
"ನನ್ನ ಮೇಲೆ ರೇಗಿ ಹಾಗೆ ಹೇಳ್ತಿದೀರಾ."
"ಇಲ್ಲ ಸುನಂದಾ. ನಿನಗೆ ಅದರಲ್ಲೆಲ್ಲ ನಂಬಿಕೆ ಇಲ್ಲ, ಸುಮ್ನೆ ಕುತೂಹಲಕ್ಕೆ
ಕೇಳ್ದೆ-ಅಂತ ನನಗೆ ತಿಳೀದೆ?"
“ಆದರೂ ಊಹಿಸಿ ಹೇಳೋಕೆ ಆಗೊಲ್ವೆ?"
“ನೋಡೋಕೆ ಬೆಳ್ಳಗಿದಾರೆ. ಇನ್ನೇನೂಂತ ಹೇಳ್ಲೆ?"
ಇಂದಿರೆಯ ಮನೆಯಲ್ಲಿ ಆ ಮಗಳೂ ತಾಯಿಯೂ ತೋರಿದ ಆದರ ಕಂಡು,
ಸುನಂದೆಗೆ ಮಾತೇ ಹೊರಡಲಿಲ್ಲ. ಇಂದಿರೆಯ ತಾಯಿಯನ್ನು ನೋಡುತ್ತ ಆಕೆಗೆ,
ತನ್ನನ್ನು ಹೆತ್ತವಳ ನೆನಪಾಯಿತು. ವಯಸ್ಸಿನಲ್ಲಿ ತನ್ನ ತಾಯಿ ಹಿರಿಯವಳಾಗಿದ್ದರೂ
ಇಬ್ಬರದೂ ತುಂಬುಮುಖ. ಒಂದೇ ರೀತಿಯ ಮೂಗು. ಅಷ್ಟೇ ಎತ್ತರ. ಈ
ಹಣೆಯಲ್ಲಿ ಮಾತ್ರ ಕುಂಕುಮ ಇರಲಿಲ್ಲ. ಇಂದಿರೆಯಂತೂ, ತನ್ನ ಜಯದೇವನನ್ನು
ಮರುಳುಗೊಳಿಸಲು ಯತ್ನಿಸಿದ್ದ ಚದುರೆಯಂತಲ್ಲ. ಮುಗ್ಧೆಯಾದ ತಂಗಿಯಂತೆ
ಸುನಂದೆಗೆ ಕಂಡಳು. ಮೊದಲ ಒಂದೆರಡು ಮಾತುಗಳಾದೊಡನೆಯೆ ಅವರು
ಆತ್ಮೀಯರಾದರು.
ನಡುವೆ, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ತನ್ನ ಇಬ್ಬರು ತಮ್ಮಂದಿರೊಡನೆ
ಚೂಡಾಮಣಿಯೂ ಒಮ್ಮೆ ಬಂದು ಹೋದಳು. ಕರೆದುದು ಇಂದಿರೆಯ ತಾಯಿ
ಯಾದರೂ ಆ ಆಹ್ವಾನವನ್ನು ತಲಪಿಸಿದವಳು ಆಕೆಯಲ್ಲವೆ? ಆಹ್ವಾನಿತರು ಬಂದರೇ
ಏನೆಂದು, ನೋಡಬೇಕಾದ ಜವಾಬ್ದಾರಿ ಆಕೆಗಿಲ್ಲವೆ?
ಚೂಡಾಮಣಿ ಊಟ ಮಾಡಲಿಲ್ಲ. ಆದರೆ ಉಪಾಧ್ಯಾಯರ ಗೌರವಾರ್ಥವಾಗಿ
ತಯಾರಿಸಿದ್ದ ತಿಂಡಿ ತಿಂದಳು.
ಶ್ಯಾವಿಗೆ ಪಾಯಸ, ಒಡೆ ಕೋಡುಬಳೆ, ಸಿಹಿ ಬೂಂದಿ ಖಾರ ಬೂಂದಿ,
ಚಿತ್ರಾನ್ನ, ಅನ್ನ-ಅದು ಸಾಲದೆಂದು ಕುದಿಯಲು ಖೀರು, ಕುಯ್ಯಲು ಚಾಕು
ಬೇಕೇನೋ ಎನಿಸುತ್ತಿದ್ದ ಗಟ್ಟಿ ಮೊಸರು, ಕೇಸರಿ ಹಾಕಿದ್ದ ತಂಪಾದ ನೀರು.
"ಇಷ್ಟೆಲ್ಲಾ ನೀವು ಮಾಡಬಾರದಾಗಿತ್ತು," ಎಂದ ಜಯದೇವ.
"ನೀವೇನು ದಿನಾ ಬರ್‍ತೀರ ಹೇಳಿ?" ಎಂದರು, ದಂಪತಿಯ ಜತೆಯಲ್ಲಿ ಊಟಕ್ಕೆ
ಕುಳಿತಿದ್ದ ಇಂದಿರೆಯ ತಾಯಿ.
"ನನಗಂತೂ ಇ೦ಥ ಒ೦ದು ಅಡುಗೆಯೂ ಮಾಡೋಕೆ ಬರೊಲ್ಲಮ್ಮ," ಎಂದಳು
ಸುನಂದಾ, ಯಾವ ಮುಚ್ಚು ಮರೆಯೂ ಇಲ್ಲದೆ.
"ಅಡುಗೆದೇನು ಮಹಾ! ಎಲ್ಲಾ ತನ್ನಷ್ಟಕ್ಕೆ ಬಂದ್ಬಿಡುತ್ತೆ. ನಮ್ಮ ಇಂದಿರೆಗೆ
ಬರ್‍ತಾ ಇತ್ತೂಂತ ತಿಳಿದ್ರೇನು? ನೆರೆಯವರೆಲ್ಲ ಬಯ್ತಿದ್ರು-ಮುದ್ದಿಸಿ ಮುದ್ದಿಸಿ ಗಂಡು
ಹುಡುಗನ ತರಹೆ ಬೆಳೆಸ್ತಿದೀಯಾ ಅಂತ. ಸ್ಕೂಲು ಮುಗಿಯೋವರೆಗೂ ಅಡುಗೆ
ಮನೆ ಮುಖ ಆಕೆ ನೋಡಿದವಳೇ ಅಲ್ಲ. ಈಗ್ನೋಡಿ. ಇವತ್ತಿನ ಮುಕ್ಕಾಲುಪಾಲು
ಅಡುಗೆಯೆಲ್ಲ ಅವಳದೇ."
ತಾಯಿಯ ಹೊಗಳಿಕೆ ಕೇಳಿ ಲಜ್ಜೆಯಿಂದ ಇಂದಿರಾ, ಒಂದು ಕ್ಷಣ ಅಡುಗೆ

ನವೋದಯ

409

ಮನೆಯಲ್ಲೆ ಅವಿತು ನಿಂತಳು.
ತಾಯಿಯೇ ಕರೆದು ಹೇಳಬೇಕಾಯಿತು:
"ಇನ್ನೂ ಸ್ವಲ್ಪ ಖೀರು ಬಡಿಸೇ ಇವರಿಗೆ."
ಆದರೆ ಖೀರು ಆ ಇಬ್ಬರಿಗೂ ಬೇಕಾಗಿರಲಿಲ್ಲ. ಒಬ್ಬರ ಹೊಟ್ಟೆಯಲ್ಲೂ ಜಾಗ
ವಿರಲಿಲ್ಲ.
ಸುನಂದಾ ಮನಸ್ಸಿಗೆ ಹೊಳೆದುದನ್ನು ಥಟ್ಟನೆ ನುಡಿದಳು:
"ಮನೆ ಬಿಟ್ಟು ಬಂದ್ಮೇಲೆ ಇದೇ ಮೊದಲ್ನೆಸಲ, ಇಷ್ಟು ಹಾಯಾಗಿ ಊಟ
ಮಾಡ್ತಿರೋದು.
"ಇಂದಿರೆಯ ತಾಯಿಗೆ ತಿಳಿಯಿತು, ತವರನ್ನು ಬಿಟ್ಟು ಬಂದಿದ್ದ ಆ ಹೆಣ್ಣಿನ
ಹೃದಯದ ಕಸಿವಿಸಿ.
ಆಕೆಯೆಂದರು:
"ಬೇಜಾರಾದಾಗೆಲ್ಲಾ ನಮ್ಮನೆಗೆ ಬಂದ್ಬಿಡಮ್ಮ. ನಾನು ಅಡುಗೆ ಮಾಡಿ
ಬಡಿಸ್ತೀನಿ."
ಸುನಂದೆಯ ಪಾಲಿಗೆ ಆ ಏಕವಚನದ ಸಂಬೋಧನೆ ಹೃದಯ ಸ್ಪರ್ಶಿಯಾಗಿತ್ತು.
ಜಯದೇವನಂದ:
"ಈಕೆ ಇಲ್ಲಿಗೆ ಬಂದರೆ ನನ್ನ ಗತಿ?"
"ಇದೆಯಲ್ಲ ಆನಂದ ವಿಲಾಸ ಹೋಟ್ಲು. ನೋಡಮ್ಮ ಹಿಂದೆ ನಾವೆಷ್ಟು
ಕರೆದ್ರೂ ಒಂದು ಸಲವಾದರೂ ಇವರು ಊಟಕ್ಕೆ ಬಂದಿದ್ರೆ ಕೇಳು."
ಆ ತಾಯಿ ಸುನಂದೆಗೆ ದೂರುಕೊಟ್ಟಳು. ಸುನಂದಾ ನಕ್ಕಳು. ಆಕೆಗೆ ತಿಳಿ
ಯದೆ, ಹಾಗೆಲ್ಲ ಹೋಗುವವನಲ್ಲ ತನ್ನ ಜಯದೇವ ಎಂದು-?
ಊಟವಾದ ಬಳಿಕ ಚಿಗುರೆಲೆ, ಸುವಾಸನೆಯ ಆಡಿಕೆಪುಡಿ, ಸುಣ್ಣ...
ಯಾವ ಪ್ರತಿಭಟನೆಗೂ ಜಗ್ಗದೆ ಸುನಂದಾ, ಇ೦ದಿರೆಗೆ ತಾನೇ ಬಡಿಸಿದಳು.
ಹೊರಗೆ ಹಜಾರದಲ್ಲಿ ಆರಾಮ ಕುರ್ಚಿಯಮೇಲೆ ಕುಳಿತು ಜಯದೇವ ಒಳಗಿನ
ಇಂಚರಗಳಿಗೆ ಕಿವಿಗೊಟ್ಟ...
ಇಂದಿರೆಯ ತಾಯಿ ಹೇಳಿದರು:
"ಹೈಸ್ಕೂಲು ಬೇಗ್ನೆ ಆಗುತ್ತಂತೆ. ಇಂದಿರಾನ ಸೇರ್ಸೋಣಾಂತಿದೀನಿ."
"ಹಾಗೇ ಮಾಡೀಮ್ಮಾ."
"ಆಗ ನೀವೂ ಅಲ್ಲಿ ಉಪಾಧ್ಯಾಯರಾಗ್ತೀರಿ, ಅಲ್ವೆ?"
"ಇನ್ನೂ ಯಾವುದೂ ಗೊತ್ತಿಲ್ಲ. ಮುಕ್ಕಾಲುಪಾಲು ಆಗಬಹುದು."
ಕೇಳುವ ಸಹೃದಯಿಗೋಸ್ಕರ ಕಾದಿದ್ದರೇನೋ ಎನ್ನುವಂತೆ ಇಂದಿರೆಯ ತಾಯಿ
ಮಾತುಕತೆಯ ನಡುವೆ ಸ್ವವಿಷಯವನ್ನೂ ಹೇಳಿದರು. ಇಂದಿರೆಗೆ ಬಡಿಸುತ್ತಿದ್ದ.
52

410

ಸೇತುವೆ

ಸುನಂದೆಯೂ ಬಾಗಿಲ ಬಳಿ ನಿಂತು ಅದನ್ನು ಕೇಳಿದಳು.
ಅವರು ಶಿರಸಿ ಕಡೆಯ ಜನ. ಮನೆಮಾತು ಕೊಂಕಣಿ. ಆಕೆಯನ್ನು ಕೈಹಿಡಿದು
ಈ ಊರಿಗೆ ತಂದವರು ತುಂಬಾ ಆಸ್ತಿವಂತರಾಗಿದ್ದರು. ನಾಲ್ಕರು ಜಿಲ್ಲೆಗಳಲ್ಲಿ
ಅವರಿಗೆ ಜಮೀನಿತ್ತು. ಇದು ಎರಡನೆ ಸಂಬಂಧ. ಇಂದಿರೆ ಎಂಟು ವರ್ಷದವಳಿದ್ದಾಗ
ಅವರು ತೀರಿಕೊಂಡರು. ಬ್ಯಾಂಕಿನಲ್ಲಿ ಆಕೆಯ ಮತ್ತು ಮಗಳ ಹೆಸರಲ್ಲಿ ಹತ್ತು
ಸಾವಿರ ನಗದು ಹಣ, ಸಮಿಪದಲ್ಲೆ ಹಳ್ಳಿಯಲ್ಲಿ ಇಪ್ಪತ್ತು ಎಕರೆ ಹೊಲ........ .ಆ
ಪುಣ್ಯಾತ್ಮ ಇವರನ್ನು ಅನಾಥರಾಗಿ ಮಾಡಿಹೋಗಿರಲಿಲ್ಲ. ಆದರೂ ಹೆಣ್ಣು ಹೆಂಗಸ
ರಷ್ಟೆ ಒಂದು ಮನೆಯಲ್ಲಿದ್ದು ಮಾನವಾಗಿ ಬಾಳುವುದು ಸುಲಭವೆ? ಸುಲಭವಲ್ಲದು
ದನ್ನೇ ಆಕೆ ಸಾಧಿಸಿದರು. ಶಿರಸಿಗೆ ವಾಪಸು ಹೋಗುವುದಕ್ಕಂತೂ ಅವರು ಇಷ್ಟ
ಪಡಲಿಲ್ಲ. ಗತ ಜೀವನದ ಗೋರಿಯನ್ನು ಅಗೆದು ಆ ಮೂಳೆಗಳ ಮುಖ ನೋಡು
ವುದು ಆಕೆಗೆ ಮನಸ್ಸಾಗಲಿಲ್ಲ.
"ನನಗೆ ಇನ್ನೇನಾಗ್ಬೇಕು ಹೇಳಿ? ಒಳ್ಳೆಯ ವರ ನೋಡಿ ಇಂದಿರೆಯನ್ನು ಆತನ
ಕೈಯಲ್ಲಿಟ್ಟರೆ ನನ್ನ ಕೆಲಸವಾಯ್ತು."
ಮಾತುಗಳು ಶಾಂತವಾಗಿ ಸಾವಧಾನವಾಗಿ ಹೊರಬಂದಿದ್ದುವು. ಉದ್ವೇಗ
ವಿರಲಿಲ್ಲ. ರೋದನವಿರಲಿಲ್ಲ. ಆದರೂ ಕೊನೆಯಲ್ಲಿ ಆ ಕಣ್ಣುಗಳು ಹೌದೋ
ಅಲ್ಲವೋ ಎನ್ನುವಂತೆ ಹನಿಯೂಡಿದುವು.
ಜಯದೇವನೆಂದ:
"ನೀವು ಯಾವ ಯೋಚ್ನೇನೂ ಮಾಡ್ಬೇಡಿ. ಎಲ್ಲಾ ಸರಿ ಹೋಗುತ್ತೆ."
ಸ್ಪಷ್ಟವಾಗಿ ಗೊತ್ತಾದುದೇನೋ ಆ ದಿನವೇ. ಆದರೂ ಆ ಸಂಸಾರದ ವಿಷಯ
ಅಲ್ಪ ಸ್ವಲ್ಪ ಅತ ಹಿಂದೆಯೇ ತಿಳಿದಿದ್ದ.
ಸುನಂದೆಗೆ ಹಾಗಲ್ಲ. ಮೊದಲ ಸಾರೆ ಕೇಳಿದ ಆ ಕಥೆಯಿಂದ ಆಕೆಗೆ ತುಂಬಾ
ಸಂಕಟವೆನಿಸಿತು. ಬೇರೊಂದು ಜೀವಕ್ಕಾಗಿ ತೋರುವ ಯಾತನೆ ಪ್ರೀತಿಯಾಗಿ
 ಮಾರ್ಪಟ್ಟಿತು.
ಇಂದಿರಾ ಹೊರ ಬಂದ ಬಳಿಕ, "ಇನ್ನು ಹೊರಡೋಣ್ವೆ?" ಎಂದು ಜಯ
ದೇವ ಸುನಂದೆಯನ್ನು ಕೇಳಿದ
ಇಂದಿರೆಯ ತಾಯಿ ಒಪ್ಪಲಿಲ್ಲ.
“ಬಿಸಿಲು ಕಡಮೆಯಾಗ್ಲಿ. ಕಾಫಿ ಕುಡ್ಕೊಂಡು ಹೋಗುವಿರಂತೆ," ಎಂದಳು.
ಅವಕುಂಠನವತಿಯಾಗಿ ವಿರಾಜಿಸಿದ್ದಳು ವೀಣಾ-ಹಜಾರದೊಂದು ಮೂಲೆಯಲ್ಲಿ.
ಬಂದಾಗಲೆ ಅದನ್ನು ಕಂಡಿದ್ದ ಸುನಂದಾ ಹೇಳಿದಳು:
“ಇಂದಿರಾ, ಒಂದೆರಡು ಕೀರ್ತನೆ ಹೇಳ್ರಿ."
"ನನಗ್ಬರೋಲ್ರಿ."
ಇಂದಿರೆಯ ತಾಯಿ ಅಂದರು:

ನವೋದಯ

411

“ಹೇಳೆ. ಇವರೇನು ಹೊರಗಿನವರೆ? [ಜಯದೇವ-ಸುನಂದೆಯರ ಕಡೆಗೆ
ತಿರುಗಿ] ಈ ಊರಲ್ಲಿ ಸಂಗೀತ ಮೇಸ್ಟ್ರು ಎಲ್ಲಿ ಸಿಗ್ಬೇಕು? ಶಾಸ್ತ್ರೀಯವಾಗಿ ಅಭ್ಯಾಸ
ವಾಗಿಲ್ಲ. ನನಗೆ ಗೊತ್ತಿರೋ ಒಂದೆರಡು ಕೀರ್ತನೆ ಹೇಳ್ಕೊಟ್ಟಿದೀನಿ."
ಇಂದಿರಾ ವೀಣೆಯನ್ನು ಕೈಗೆತ್ತಿಕೊಂಡು, ತಂತಿಗಳ ಸಮ್ಮತಿ ಕೇಳಿದಳು. ಶ್ರುತಿ
ಸರಿಪಡಿಸಿದಳು.
ವೀಣೆಯ ನಾದಮಾಧುರ್ಯ ಆ ವಾತಾವರಣದ ಮೇಲೆ ಮೋಡಿಬೀಸಿತು.
ಇಂದಿರೆಯ ಕೋಮಲ ಕಂಠ, ಬೀಸಿದ ಬಲೆಯನ್ನು ಬಲಗೊಳಿಸಿತು.
'ನಗುಮೋಮು ಘನ ಲೇನಿ...'
ಅದಾದ ಬಳಿಕ-
'ಶೃಂಗಾರ ಲಹರಿ....'
ಕೊನೆಗೆ_
'ಹಿಮಗಿರಿತನಯೆ ಹೇಮಲತೆ...'
ನುಡಿಸುತ್ತಿದ್ದಾಗ ಇರದಿದ್ದ ಸಂಕೋಚ, ವೀಣೆಯನ್ನು ಕೆಳಗಿರಿಸಿದಾಗ ಇಂದಿ
ರೆಯ ಬಳಿಗೆ ಬಂತು.
ಜಯದೇವನೆಂದ:
"ದಿವ್ಯವಾದ ಕಂಠ!”
ಸುನಂದಾ ಅಂದಳು:
"ಚೆನ್ನಾಗಿತ್ತಮ್ಮ!"....
ಸಂಜೆ ಮೋಡಗಳು ಕವಿದು ಮಳೆ ಬೀಳುವುದಕ್ಕೆ ಮುಂಚೆಯೆ ಜಯದೇವ
ಮತ್ತು ಸುನಂದಾ ಮನೆ ಸೇರಿದರು.
ನೆರೆಮನೆಯ ಹುಡುಗ ಬಂದು ಹೇಳಿದ:
"ಪ್ರಾಥಮಿಕ ಶಾಲೆಯ ತಿಮ್ಮಯ್ಯ ಮೇಸ್ಟ್ರು ಎರಡು ಸಲ ಬಂದಿದ್ರು ಸಾರ್."
ಹರಟೆ ಹೊಡೆಯಲು ಭಾನುವಾರವೇ ಅನುಕೂಲವೆಂದು ಹಳ್ಳಿಯಿಂದಲೇ
ಅವರು ಬಂದಿದ್ದರೇನೋ, ಎಂದು ಜಯದೇವ ಕಸಿವಿಸಿಗೊಂಡ.
"ಯಾರು?" ಎಂದು ಕೇಳಿದಳು ಸುನಂದಾ.
"ಮುದ್ದಣ ಕಣೇ."
“ಓ!"
...ರಾತ್ರೆ ಮಲಗಿದ ಬಳಿಕ ಸುನಂದಾ ಕೇಳಿದಳು:
"ಇಂದಿರೆಯ ತಾಯಿ ಮದುವೆಯಾಗೋಕ್ಮುಂಚೆ ಏನಾಗಿದ್ದರೂಂದ್ರೆ?"
"ಗೊತ್ತಿಲ್ಲ. ಏನೇ ಆಗಿರ್ಲಿ. ಅದು ನಮಗೆ ಮುಖ್ಯವೆ ಹೇಳು?"
"ಅಲ್ಲ..."

412

ಸೇತುವೆ

ಸ್ವಲ್ಪ ಹೊತ್ತು ಸುಮ್ಮನಿದ್ದು ಸುನಂದಾ ಅಂದಳು:
"ಇಂದಿರಾ ಒಳ್ಳೇ ಹುಡುಗಿ."



ವಿರಾಮದ ವೇಳೆಯಲ್ಲಿ ಜಯದೇವನಿಂದೊಂದು ಸಂದೇಶವನ್ನು, ಪ್ರಾಥಮಿಕ
ಶಾಲೆಯ 'ತಿಮ್ಮಯ್ಯ ಮೇಷ್ಟ್ರಿ'ಗೆ ಮಾಧ್ಯಮಿಕ ಶಾಲೆಯ ಜವಾನ ಒಯ್ದು ತಲಪಿಸಿದ:
'ಶಾಲೆ ಮುಗಿದಮೇಲೆ ಸ್ವಲ್ಪ ಹೊತ್ತು ಅಲ್ಲೇ ಇರಬೇಕಂತೆ. ಜಯದೇವ
ಮೇಸ್ಟ್ರು ಬರ್ತಾರಂತೆ.'
ಅದಕ್ಕೆ ಪ್ರತ್ಯುತ್ತರ ಬಂತು:
'ತಾವೇ ಅಲ್ಲಿರಬೇಕು. ನಾವೇ ಬರುವಂಥವರಾಗ್ತೇವೆ.'
ಸಂಜೆ ಶಾಲೆ ಬಿಟ್ಟು ಎಲ್ಲರೂ ಹೋದಮೇಲೂ ಜಯದೇವ ಕಾದು ನಿಂತ.
ತಿಮ್ಮಯ್ಯನವರು ಬೇಗ ಬೇಗನೆ ಕಾಲುಹಾಕುತ್ತ ಬಂದರು. ನೀಳವಾದ ಕೂದಲನ್ನು
ಮುಚ್ಚಿದ್ದುದು, ಎರಡು ವರ್ಷಗಳ ಹಿಂದೆ ತಾನು ಕಂಡಿದ್ದ ಟೋಪಿಯೇ. ಆದೇ
ಹಳೆಯ ಕೋಟು. ಪಂಚೆ ಯಾವೂದೋ ಹೇಳುವಂತಿರಲಿಲ್ಲ. ಎಂದಿನಂತೆ ಮಾಸಿತ್ತು.
ಎಡ ಕಂಕುಳಲ್ಲಿತ್ತು ಛತ್ರಿ.
ಅಂಗಳದ ಬೇಲಿಯ ಹೊರಗೇ ತಮಗೋಸ್ಕರ ನಿಂತಿದ್ದ ಜಯದೇವನನ್ನು
ಕಂಡು, ತಿಮ್ಮಯ್ಯ ದೂರದಿಂದಲೆ ವಂದಿಸಿದರು. ತನಗೆ ಪ್ರಿಯವಾಗಿದ್ದ ಆ ಜೀವ
ವನ್ನು ಇದಿರ್ಗೊಳ್ಳಬೇಕೆಂದು ಜಯದೇವನೂ ನಿಂತಲ್ಲಿಂದ ಮುಂದಕ್ಕೆ ಚಲಿಸಿದ.
ಜಯದೇವ ಹತ್ತಿರ ಬಂದಂತೆ ತಿಮ್ಮಯ್ಯನಿಗೆ ಸಂಕೋಚವೆನಿಸಿತು. ಅವರಿಬ್ಬರ
ಮುಖದಮೇಲೆ ಮಗುತನದ ನಗೆ ಮೂಡಿತು. ಎದುರುಬದುರಾಗಿ ಅವರು ನಿಂತಾಗ
ತಿಮ್ಮಯ್ಯ, ತಮ್ಮ ಎರಡೂ ಕೈಗಳಿಂದ ಜಯದೇವನ ಬಲ ಅಂಗೈಯನ್ನು ಎತ್ತಿ
ಆಡಿಸಿದರು.
"ಆಹಾ! ಸಿಕ್ಕಿಯೇ ಬಿಟ್ಟಿರಿ! ಈ ಬಡವನನ್ನ ಮರೆತೇ ಬಿಟ್ಟಿದ್ರೀಂತ ಕಾಣ್ತದೆ
ನೀವು. ಬಂದು ಇಷ್ಟು ದಿನವಾದರೂ ಮುಖ ತೋರಿಸ್ದೆ ಇರೋದೆ?"
"ಇಲ್ಲ ತಿಮ್ಮಯ್ಯನವರೇ, ಬಂದ ದಿವಸವೇ ನಂಜುಂಡಯ್ಯನವರನ್ನ ನಿಮ್ಮ
ವಿಷಯ ವಿಚಾರಿಸ್ದೆ."
"ಅದೇನೋಪ್ಪ. ನಾನು ಸಮಯಕ್ಕೆ ಸರಿಯಾಗಿ ಬಂದು ಶಾಲೆ ಮುಗಿದ ತಕ್ಷಣ
ಹಳ್ಳಿಗೆ ಹೋಗೋನು. ಈ ಊರಿಗೆ ಯಾರು ಬಂದ್ರು ಯಾರು ಹೋದ್ರೂಂತ ನನಗೆ
ಎಂಗೊತ್ತಾಗ್ಬೇಕು? ಮೊನ್ನೆ ಶನಿವಾರ ದಾರೀಲಿ ನಿಲ್ಲಿಸ್ಬಿಟ್ಟು ಯಾರೋ ಹೇಳಿದ್ರು-

ನವೋದಯ

413

ಜಯದೇವ ಮೇಸ್ಟ್ರು ಬಂದಿದಾರಲ್ಲಾ, ನೋಡಿಲ್ವಾ? _ ಅಂತ. ನೀವು ಲಗ್ನಪತ್ರಿಕೆ
ಕಳಿಸಿದ್ರೇ ಹೊರ್ತು ಬರೋ ವಿಷಯ ತಿಳಿಸಿದ್ರಾ? ನನಗ್ಗೊತ್ತಿಲ್ದೆ ನೀವು ಹ್ಯಾಗ್ಬ
ರೋದು ಸಾಧ್ಯ ಅಂತ _ ಛೆ ಛೆ ಇನ್ಯಾರೋ ಇರ್ಬೇಕು _ ಅಂದ್ಬಿಟ್ಟೆ. ಆತ ಒಂದು
ರೂಪಾಯಿ ಪಂಥ ಅಂದ. ದುಡ್ಡೆಲ್ಲಿಂದ ತರೋಣ? ಇದ್ದರೂ ಇರಬಹುದೂಂತ
ಸುಮ್ನಾದೆ. ನಮ್ಮ ಹೆಡ್ಡಮೇಸ್ಟ್ರಿಗಂತೂ ಏನೂ ಗೊತ್ತಿರ್ಲಿಲ್ಲ. ಆವತ್ತು ಸಾಯಂಕಾಲವೇ
ಬರೋಣ ಅಂದ್ರೆ ಮಳೆರಾಯ ಅಡ್ಡಗಾಲಿಟ್ಟ. ನಿನ್ನೆ ನಿಮಗೋಸ್ಕರವೆ ಬಂದೆ. ಆದರೆ
ಯೋಗ ಇರ್ಬೇಕಲ್ಲ....ಹುಂ...ಅಂತೂ ಇವತ್ತು ಸಿಕ್ಬಿಟ್ರಿ!"
ಅವರ ಹಿಡಿತದಿಂದ ಮೆಲ್ಲನೆ ತನ್ನ ಕೈಯನ್ನು ಜಯದೇವ ಬಿಡಿಸಿಕೊಂಡ.
"ಬನ್ನಿ ತಿಮ್ಮಯ್ಯನವರೇ, ನಮ್ಮ ಮನೆಕಡೆಗೆ ಹೋಗೋಣ."
"ನಡೀರಿ. ಅಮ್ಮಣ್ಣಿಯವರನ್ನು ನಾನು ಕಾಣ್ಬೇಕು."
ನಂಜುಂಡಯ್ಯನವರ ನವುರು ರಾಜನೀತಿಗಿಂತ, ಲಕ್ಕಪ್ಪಗೌಡರು ಒರಟು ರಾಜ
ಕೀಯಕ್ಕಿಂತ, ಈತನ ವ್ಯಕ್ತಿತ್ವ ಎಷ್ಟೊಂದು ಭಿನ್ನ! ನಡೆಯುತ್ತಿದ್ದಂತೆ ತಿಮ್ಮಯ್ಯನ
ಕಡೆಗೆ ದೃಷ್ಟಿ ಬೀರಿದಷ್ಟೂ ಜಯದೇವನಿಗೆ ಸಾಕೆನಿಸುತ್ತಿರಲಿಲ್ಲ.
ಆತ ಕೇಳಿದ:
"ಹೊಸ ನಾಟಕ ಯಾವುದು ಬರೆದಿದೀರಾ ಇತ್ತೀಚೆಗೆ?"
"ನೀವು ಹೋದ್ಮೇಲೆ ಎರಡು ವರ್ಷಗಳಲ್ಲಿ ಒಂದು ನರಪ್ರಾಣಿಯಾದರೂ ನನಗೆ
ಇಂಥ ಪ್ರಶ್ನೆ ಕೇಳಿದ್ದರೆ! ಅಯ್ಯೋ!"
ಎದೆ ಕುದಿತದ ಮಾತು. [ಸಾಕಪ್ಪಾ ಸಾಕು!]
"ಕೃಷ್ಣಪ್ರೇಮ ಆವತ್ತು ಆಡಿದೆವಲ್ಲ. ಈಗಲೂ ಅದು ನನ್ನ ಕಣ್ಣ ಮುಂದೆ
ನಡೀತಿರೋ ಹಾಗಿದೆ."
"ಸರಿ. ನೀವೊಬ್ಬರು ಹೊಗಳ್ತಾ ಇರಿ. ನಾನು ಕೇಳ್ತಾ ಇ‍ರ್‍ತೀನಿ."
“ನಾಟಕದ ವಿಷಯ ಇಷ್ಟವಿಲ್ದೆ ಹೋದರೆ ಈಗ್ಬೇಡ; ಆ ಮೇಲೆ ಮಾತಾ
ಡೋಣ. ಮನೋರವೆು ಹ್ಯಾಗಿದಾರೆ ಹೇಳಿ?"
"ಮನೋರವೆು?"
"ಹೂ೦ ಕಣ್ರೀ."
"ಓಹೋ__ನನ್ನ ಮನೋರಮೇನೋ? ಆ ಕೀರ್ತಿಶಾಲಿಯ ಹೆಸರನ್ನ ನನ
ಗ್ಯಾಕಪ್ಪ ಅಂಟಿಸ್ತೀರಾ? ನನ್ನ ಸೌಭಾಗ್ಯವತಿ ಇದಾಳೆ. ಈ ಆವಧಿಯಲ್ಲಿ ಸಂತಾ
ನಾಭಿವೃದ್ಧಿಯಾಗಿದೆ. ಗಂಡು. ನಾಟಕದ ಖಯಾಲಿಯಿಂದ ಕೆಟ್ಟು ಹೋದ್ರೀಂತ
ಈಗಲೂ ಬಯ್ತಾ ಇರ್ತಾಳೆ. ಎಂಥ ಹುಚ್ಚು ನೋಡಿ. ನಾಟಕದ ಖಯಾಲಿ
ಇಲ್ದೇನೆ ಕೆಟ್ಟು ಹೋಗಿರೋ ಬೇರೆ ಪ್ರಾಥಮಿಕ ಉಪಾಧ್ಯಾಯರು, ಬಡವರಾಗಿ
ರೋರು, ಇಲ್ವೇಂತ? ಅಷ್ಟೂ ಬುದ್ಧಿಬೇಡ್ವೆ ಆಕೆಗೆ?"
ಸಂಸಾರಸಮಸ್ಯೆಯ ವಿಷಯ ಗಹನವಾಯಿತೆಂದೋ ಏನೋ ತಿಮ್ಮಯ್ಯ ಡಬ್ಬ

414

ಸೇತುವೆ

ದಿಂದೊಂದು ಚಿಟಿಕೆ ನಶ್ಯ ಹೊರತೆಗೆದು ಮೂಗಿಗೇರಿಸಿ ನುಡಿದರು:
"ಹುಂ! ಅಂತೂ ಈ ಊರಿಗೇ ವಾಪಸು ಬಂದ್ರಿ. ನೀವು ಬರಬಹುದೂಂತ
ನಾನು ಕನಸ್ನಲ್ಲೂ ಭಾವಿಸಿರ್ಲಿಲ್ಲ."
"ಯಾಕೆ?"
"ಈ ನೀಚರು ಅಷ್ಟೊಂದು ಹಿಂಸೆ ಕೊಟ್ಟಿರ್ಲಿಲ್ವೆ ನಿಮಗೆ?"
"ಮರೆತ್ಬಿಡಿ ಅದನ್ನೆಲ್ಲ."
"ಯಾಕೆ ಮರೀಲಿ? ಹ್ಯಾಗೆ ಮರೀಲಿ? 'ನೊಂದ ಜೀವ' ಅಂತ ನಾನೊಂದು
ಕತೆ ಬರೆದಿದೀನಿ ಅದೇ ವಿಷಯದ ಮೇಲೆ."
"ಹೌದೆ?"
"ತಾಳಿ. ಇವರಿಗೆಲ್ಲ ಮಡಗಿದೀನಿ. ಸಮಯ ಬರ್ಲಿ. ಒಂದು ನಾಟಕ ಬರೆದು
ಇವರ್ನೆಲ್ಲ ಝಾಡಿಸ್ದೇ ಇದ್ರೆ ಆಮೇಲೆ ಹೇಳಿ."
"ನಿಮಗೆ ಸಿಟ್ಟು ಬಂದಾಗ ನೋಡೋಕೆ ಚೆನ್ನಾಗಿರುತ್ತೆ.”
"ಅಯ್ಯೋ! ನನ್ನ ಸಿಟ್ಟಿಗಿಷ್ಟು ಬೆಂಕಿ...ಈಗ ಹೇಳಿ. ಪರೀಕ್ಷೆ ಪಾಸಾಯ್ತೆ?"
“ಆಯ್ತು."
"ಡಿಗ್ರಿ ಮನುಷ್ಯನಾಗೆ ಬಿಟ್ರಿ."
“ಏನು ಡಿಗ್ರಿಯೊ? ಅಂತೂ ಮುಗಿಸ್ಕೊಂಡ್ಬಿಟ್ಟೆ."
"ಇನ್ನು ನೀವು ೬೦-೫-೯೦ ರ ಗ್ರೇಡಿನೋರು. ಈ ಊರಲ್ಲಿ ಯಾಕಿರ್ತೀರಾ
ಹೇಳಿ..."
"ಇರ್‍ತೀನಿ ತಿಮ್ಮಯ್ಯ; ಇರೋಕೆಂತಲೇ ಬಂದಿದೀನಿ."
"ನಂಜುಂಡಯ್ಯನವರ ಹೈಸ್ಕೂಲಾದರೆ ಅಲ್ಲಿಗೆ ಸೇರ್‍ಕೋಬಹುದು."
"ಆದಾಗ ಸೇರಿದರಾಯ್ತು."
“ಅಂತೂ ಈ ಊರಲ್ಲೇ ಇರ್‍ತೀರಿ ತಾನೆ?"
"ಖಂಡಿತವಾಗಿಯೂ ಇರ್‍ತೀನಿ."
ಆ ಆಶ್ವಾಸನೆಯಿಂದ ತಿಮ್ಮಯ್ಯನಿಗೆ ಸ್ವಲ್ಪ ಸಮಾಧಾನವೆನಿಸಿತು. ಎಡ ಕಂಕು
ಳಲ್ಲಿದ್ದ ಛತ್ರಿಯನ್ನವರು ಬಲ ಕಂಕುಳಿಗೆ ತುರುಕಿಸಿ ನಡೆದರು.
“ಸಂಜೆ ಮಳೆಬಂದ್ಬಿಟ್ರೆ ಹಳ್ಳಿಗೆ ಹೋಗೋಕೆ ಕತ್ಲೇಲಿ ತೊಂದರೆಯಾಗುತ್ತಲ್ವ?”
ಎಂದ ಜಯದೇವ, ಮನೆ ಸಿಮೀಪಿಸಿದಂತೆ.
"ಏನು ಮಳೆಯೋ ಏನು ಹಳ್ಳಿಯೋ. ಹೋದರಾಯ್ತು ಬಿಡಿ. ನೀವು
ಸಿಕ್ಕಿರೋ ದಿವಸ ಏನಾದ್ರೇನು?"
ಜಯದೇವ ಬರುವುದು ತಡವಾಯಿತೆಂದು ಸುನಂದಾ ಬಾಗಿಲಲ್ಲೆ ನಿಂತಿದ್ದಳು.
ತಡವಾದುದಕ್ಕೆ ಆತನ ಮೇಲೆ ರೇಗಬೇಕೆಂದು ನಿರ್ಧರಿಸಿ, ಆಡಬೇಕಾದ ಮಾತುಗಳನ್ನು
ಕಲೆಹಾಕಿದ್ದಳು. ಆದರೆ ಆಕೆಯ ದೃಷ್ಟಿಗೆ ಜಯದೇವನೊಬ್ಬನ ಬದಲು ಇಬ್ಬರು

ನವೋದಯ

415

ಬಿದ್ದರು.
'ಇದು ಯಾವುದೊ ಪ್ರಾಣೀನ ಬೇರೆ ಕಟ್ಟೊಂಡು ಬರ್‍ತಾ ಇದಾರಲ್ಲಾ' ಎಂದು
ಆಕೆಯ ಸಿಟ್ಟು ದ್ವಿಗುಣಿತವಾಯಿತು.
ಜಯದೇವ ಒಳಗೆ ಹೆಜ್ಜೆ ಇಟ್ಟು, ಜತೆಗಾರನ ಹೆಸರು ಹೇಳಿದಾಗ ಮಾತ್ರ,
ಸುನಂದೆಯ ಮುಖವರಳಿ ಆಕೆ ಮುಗುಳುನಗೆ ಸೂಸಿದಳು; ಬಂದವರಿಗೆ
ನಮಸ್ಕರಿಸಿದಳು.
"ನಾನೂ ಜಯದೇವರೂ ಹಳೇ ಸ್ನೇಹಿತರು ಅಮ್ಮಣ್ಣಿ", ಎಂದರು ತಿಮ್ಮಯ್ಯ,
ತಮಗೂ ಆಕೆಯ ಗಂಡನ ಮೇಲೆ ಅಧಿಕಾರವಿದೆ ಎಂಬುದನ್ನು ಸೂಚಿಸುತ್ತ.
ಸುನಂದಾ ಬಲ್ಲೆ ಎಂಬಂತೆ ತಲೆಯಲ್ಲಾಡಿಸಿ, ಇಬ್ಬರ ಕಾಫಿ ತಿಂಡಿಗಳನ್ನು
ಮೂವರಿಗೆ ಹಂಚಲೆಂದು ಒಳ ಹೋದಳು.
ಆಗ ತಿಮ್ಮಯ್ಯ ಪಿಸುದನಿಯಲ್ಲಿ ನುಡಿದರು:
"ಸಂತೋಷವಾಯ್ತು ಜಯದೇವರೆ. ಅನುರೂಪ ದಾಂಪತ್ಯ. ಹೀಗೆಯೇ
ಹಚ್ಚಹಸುರಾಗಿಯೇ ಇರೀಪ್ಪ ಯಾವಾಗಲೂ."
ಕೊಠಡಿಯಲ್ಲಿ ಗಾಳಿ ಸಾಲದೆಂದು ಒಳ ಹಜಾರದಲ್ಲೆ ಜಯದೇವ ಚಾಪೆ ಬಿಡಿ
ಸಿದ. ಪಾದಗಳಲ್ಲಿದ್ದ ಧೂಳೆಲ್ಲ ಪಂಚೆಗೆ ಅಂಟುವಂತೆ ಚಾಪೆಯ ಮೇಲೆ ಕುಳಿತು
ಕೊಳ್ಳುತ್ತ ತಿಮ್ಮಯ್ಯ ತಗ್ಗಿದ ದ್ವನಿಯಲ್ಲಿ ಕೇಳಿದರು:
"ಅಮ್ಮಣ್ಣಿಯವರೂ ಓದಿದಾರೋ?"
"ಇಂಟರಾಗಿದೆ."
"ಹೌದೆ?"
ಆಶ್ಚರ್ಯದ ಛಾಯೆ ಮುಖವನ್ನು ಆವರಿಸುವುದರೊಳಗೇ ಹಿಂದಿನ ಸಂಭಾಷಣೆ
ಯೊಂದು ತಿಮ್ಮಯ್ಯನವರ ನೆನಪಿಗೆ ಬಂತು. ಅವರು ಕೇಳಿದರು:
"ಅವರನ್ನೂ ಉಪಾಧ್ಯಾಯಿನಿ ಮಾಡ್ಬೇಕೂಂತಿದೀರೇನೊ?"
“....ಗಂಡ ಹೆಂಡತಿ ಇಬ್ಬರೂ ಶಿಕ್ಷಕ ವೃತ್ತೀಲಿರೋದು ಒಂದು ದೃಷ್ಟೀಲೇನೋ
ಚೆನ್ನಾಗಿರುತ್ತೆ. ಆದರೆ ಸದ್ಯಕ್ಕೇನೂ ಅಂಥ ಯೋಚನೆ ನಮಗಿಲ್ಲ. ಮುಂದೆ ಬೇಕಾದರೆ
ಕೆಲಸಕ್ಕೆ ಸೇರ್‍ಕೊಂಡರಾಯ್ತು."
ಆ ಉತ್ತರದಿಂದ ತೃಪ್ತಿಗೊಂಡ ತಿಮ್ಮಯ್ಯ ಅಂದರು:
"ಅಷ್ಟೆ, ಹಾಗ್ಮಾಡಿ. ಈಗಿರೋ ರೀತೀನೇ ಸುಖ. ನಿಮ್ಮನ್ನು ನೋಡ್ಕೊಳ್ಳೋ
ದಕ್ಕೆ ಒಬ್ಬರಿರೋದು ಬೇಡ್ವೆ?"
ಸುನಂದಾ ಕಾಫಿ ತಿಂಡಿ ತಂದಳು. ಒಡಹುಟ್ಟಿದ ತಂಗಿಯೇನೋ ಎಂಬಂತೆ
ಪ್ರೀತಿಯಿಂದ ಸುನಂದೆಯನ್ನೆ ತಿಮ್ಮಯ್ಯ ನೋಡಿದರು.
ತಿಂಡಿಯನ್ನು ದಿಟ್ಟಿಸ್ಸಿ ಅವರೆಂದರು:
"ನಿಮ್ಮಿಬ್ಬರ ತಿ೦ಡೀಲಿ ನಾನು ಪಾಲು ತಗೋತಾ ಇದೀನಿ. ಅದು ತಪ್ಪೂ೦ತ

416

ಸೇತುವೆ

ಗೊತ್ತಿದೆ. ಆದರೆ, ತಗೊಳ್ದೇ ಇದ್ರೆ, ಮನಸ್ಸಿಗೆ ಸಮಾಧಾನವಾಗೋದಿಲ್ಲ."
"ನಿಮ್ಮ ಹೆಡ್ಮೇಸ್ಟ್ರಿಗೆ ವರ್ಗವಾಯ್ತೇನು?" ಎಂದು ಜಯದೇವ ಕೇಳಿದ.
"ಇಲ್ವಲ್ಲ. ಅವರೇ ಇದಾರೆ. ರುಮಾಲಿನೋರು."
"ನೀವಿಬ್ಬರೂ ಅನ್ಯೋನ್ಯವಾಗಿದೀರಿ. ನಿಮ್ಮನ್ನ ನೋಡಿದರೆ ಅಸೂಯೆ
ಯಾಗುತ್ತೆ."
"ಹೊಹ್ಹೋ," ಎoದು ತಿಮ್ಮಯ್ಯ ನಕ್ಕರು. ಆದರೆ ಮಾಧ್ಯಮಿಕ ಶಾಲೆಯ
ಅಧ್ಯಾಪಕವೃಂದದ ನೆನಪಾದಾಗ ಅವರ ಮುಖ ಗಂಭೀರವಾಯಿತು. ಅವರೆಂದರು:
"ನಿಮ್ಮ ಫಿತೂರಿ ಮೇಸ್ಟ್ರುಗಳ ಶಾಲೆಗಿಂತ ನಮ್ಮದೇ ವಾಸಿ. ಒಪ್ಕೊಳ್ತೀನಿ."
"ನಿನ್ನೆ ನೀವು ಬಂದಾಗ ಇಂದಿರಾ ಮನೆಗೆ ಊಟಕ್ಕೆ ಹೋಗಿದ್ವಿ. ಇಂದಿರಾ
ನಿಮಗೆ ನೆನಪಿಲ್ವೆ?"
“ಕೃಷ್ಣಪ್ರೇಮದ ರಾಧಾ! ನೆನಪಿಲ್ದೆ ಏನು?"
ಅಷ್ಟು ಹೇಳಿ ತಿಮ್ಮಯ್ಯ ಸ್ವರ ತಗ್ಗಿಸಿ ನುಡಿದರು:
"ನೀವು ಅಲ್ಲಿಗೆ ಹೋಗಿ ಒಳ್ಳೇ ಕೆಲಸಮಾಡಿದ್ರಿ. ಅವರು ನಿಜವಾಗಿಯೂ
ಸಂಭಾವಿತ ಜನ."
"ಅಂತೂ ಇಲ್ಲಿಗೆ ಬಂದ್ಮೇಲೆ ಎರಡು ಮೂರು ಕಡೆ ಊಟವಾಯ್ತುಪ್ಪ. ಲಕ್ಕಪ್ಪ
ಗೌಡರ ಮನೇಲಿ__"
ಅಲ್ಲಿ ಅವರು ಊಟಮಾಡಿದರೆಂಬ ಆಶ್ಚರ್ಯಕ್ಕಿಂತಲೂ ತನಗೆ ಹಾಗೆ ಆ ದಂಪತಿ
ಯನ್ನು ಸತ್ಕರಿಸುವ ಅವಕಾಶ ಸಿಗಲಿಲ್ಲವೆಂದು ನೊಂದು ತಿಮ್ಮಯ್ಯ, ಜಯದೇವನನ್ನು
ನಡುವೆ ತಡೆದು ಅ೦ದರು:
“ನೋಡಿದಿರಾ? ನಾನು ಅದೇನು ತಪ್ಪುಮಾಡಿದೆ ಅ೦ತ?...ಹುಂ... ನನ್ನ ಮನೆ
ಹಳ್ಳೀಲಿರೋ ಬದಲು ಇಲ್ಲೇ ಇರ್‍ತಿದ್ರೆ, ಅದು ಹ್ಯಾಗೆ ಬೇರೆಯವರ ಮನೆಗೆ
ಹೋಗ್ತಿದ್ರೋ ನೋಡ್ಕೊಳ್ತಿದ್ದೆ."
ಆ ಉದ್ವೇಗದ ಅನಂತರ ಲಕ್ಕಪ್ಪಗೌಡರ ನೆನಪಾಗಿ ತಿಮ್ಮಯ್ಯನೇ ಅಂದರು:
“ಆತ ದೊಡ್ಮನುಷ್ಯ. ನಿಮ್ಮ ಶಾಲೇಲಿ ಕರ್ಣಾರ್ಜುನ ಯುದ್ಧ ಈಗ್ಲೂ ನಡೀ
ತಿರ್‍ಬೇಕು, ಅಲ್ವೆ?"
"ಊರಿಗೆಲ್ಲ ಗೊತ್ತಾಗ್ಬಿಟ್ಟಿದೆಯೇನು ಅವರ ಜಗಳದ ವಿಷಯ?"
"ಗೊತ್ತಾಗದೆ? ಅವರೇ ಹೋಗಿ ಹೇಳ್ಕೊಂಡು ಬರ್‍ತಾರೆ."
"ಹಾಗಾದರೆ ಆ ಇಬ್ಬರಲ್ಲಿ ಯಾರು ಒಳ್ಳೆಯವರೂಂತ?"
"ಒಬ್ಬ ತ೦ಜಾವೂರು ಠಕ್ಕ, ಇನ್ನೊಬ್ಬ ಕುಂಭಕೋಣಂ ಠಕ್ಕ__ಇಬ್ಬರೂ ಸರಿ
ಯಾಗಿದಾರೆ. ಆ ಲಕ್ಕಪ್ಪಗೌಡ ನನ್ನ ಜಾತಿಯವನೇ. ಹಾಗೇಂತ ಮನಸ್ಸಿನಲ್ಲಿರೋ
ದನ್ನ ಮುಚ್ಚಿಟ್ಟುಕೊಳ್ಳೋ ಮನುಷ್ಯ ನಾನಲ್ಲ."
ಮಾನವನಲ್ಲಿ ಜಯದೇವನಿಗೆ ಇದ್ದ ವಿಶ್ವಾಸಕ್ಕೆ ಸಾಕ್ಷ್ಯಬೇಕಾಗಿತ್ತು. ಅದನ್ನು

ನವೋದಯ

417

ತಿಮ್ಮಯ್ಯ ಒದಗಿಸಿದ್ದರು. ಆದರೆ ಬರಿಯ ಖಂಡನೆಯಿಂದ, ಆಕ್ರೋಶದಿಂದ,
ಪ್ರಯೋಜನವಿತ್ತೆ?
ಆತ ಕೇಳಿದ:
"ಇಷ್ಟಿದ್ದರೂ ನಾವೆಲ್ಲ ಜತೆ ಸೇರ್‍ಕೊಂಡೇ ಕೆಲಸ ಮಾಡ್ಬೇಕಲ್ಲ? ಉದಾಹರಣೆಗೆ
ನಮ್ಮ ಶಾಲೆಯನ್ನೇ ತಗೊಳ್ಳಿ. ನಾವು ಮೂವರೂ ಒಟ್ಟಾಗಿ ಕೆಲಸ ಮಾಡದೆ ಇದ್ರೆ
ಆ ನೂರಾರು ಹುಡುಗರ ಗತಿ ಏನಾಗ್ಬೇಕು?"
“ಈವರೆಗೆ ಆದ ಗತಿಯೇ ಮುಂದಕ್ಕೂ ಆಗುತ್ತೆ."
"ಹಾಗಾದರೆ ನಮ್ಮ ದೇಶವೂ ಅಷ್ಟೆ. ಈಗಿರೋ ಹಾಗೆಯೇ ಮುಂದೆಯೂ
ಇರುತ್ತೆ."
"ಅಲ್ದೆ ಇನ್ನೇನು? ಈ ರಾಷ್ಟ್ರಭಕ್ತರನ್ನ ನಾನು ಬಹಳ ನೋಡಿದೀನಿ. ಪಕ್ಕದ್ಮ
ನೇಲಿ ಒಂದು ಮನುಷ್ಯ ಪ್ರಾಣಿ ಉಪವಾಸ ಬಿದ್ದು ಸಾಯ್ತಿದ್ರೂ 'ಏನಾಯ್ತಪ್ಪಾ
ನಿನೆಗೇಂತ ಕೇಳೋವರಿಲ್ಲ. ಬಾಯಿತೆರೆದರೆ ಮಾತ್ರ, ಮಾರುದ್ದ ದೇಶೋದ್ಧಾರದ
ಭಾಷಣ. ನೀಚ ನನ್ಮಕ್ಳು!"
ಹೊಗೆಯಾಡುತ್ತಿದ್ದ ಜ್ವಾಲಾಮುಖಿ ಆ ಬಡಕಲು ಜೀವ. ಆ ಮೂಳೆಯ
ಹಂದರದೊಳಗೆ ಅಷ್ಟೊಂದು ಬಲವಾದ ಉಗ್ರವಾದ ಭಾವನೆಗಳಿದ್ದುವೆಂದು ಊಹಿಸು
ವುದು ಯಾರಿ೦ದಲೂ ಸಾಧ್ಯವಿರಲಿಲ್ಲ.
ತಿಮ್ಮಯ್ಯ ತಟ್ಟೆಯಲ್ಲಿ ಕೈ ತೊಳೆಯಲು ಒಪ್ಪಲೇ ಇಲ್ಲ. ತಾನೂ ಎದ್ದು
ಜಯದೇವನೂ ಏಳುವಂತೆ ಮಾಡಿದರು. ಮರಳಿ ಕುಳಿತಾಗ ಜಯದೇವ ವಿದ್ಯಾ
ಸುಧಾರಣೆಯ ಮಾತನ್ನೆತ್ತಿದ.
"ಈಗಿನ ಪ್ರಾಥಮಿಕ ಮಾಧ್ಯಮಿಕ, ನಾಲ್ಕು ನಾಲ್ಕು ವರ್ಷ ಸೇರಿಸಿ, ಎಂಟು
ವರ್ಷಗಳ ಪ್ರಾಥಮಿಕ ಶಿಕ್ಷಣ ಇರಬೇಕೂಂತ ಕೊನೇದಾಗಿ ತೀರ್ಮಾನಮಾಡಿದಾರೆ. ಆ
ಮೇಲಿಂದಕ್ಕೆ ಕಾಲೇಜಿನ ಒಂದು ವರ್ಷವನ್ನೂ ಸೇರಿಸಿ ನಾಲ್ಕು ವರ್ಷಗಳ ಸೆಕೆಂಡರಿ
ಶಿಕ್ಷಣ ಅಂತ ಮಾಡ್ತಾರೆ. ಅದು ಮುಗಿಯೋ ಹೊತ್ತಿಗೆ ಹೆಚ್ಚಿನ ಹುಡುಗರು,
ಏನಾದರೂ ಸಂಪಾದನೆ ಮಾಡೋ ಸಾಮರ್ಥ್ಯ ಗಳಿಸಿರ್‍ಬೇಕು. ಅದಾದ್ಮೇಲೆ ಇಷ್ಟ
ಇರೋರಿಗೆ-ದುಡ್ಡಿರೋರಿಗೆ-ಮೂರು ವರ್ಷಗಳ ಕಾಲೇಜು ಶಿಕ್ಷಣ. ಏನನಿಸುತ್ತೆ
ನಿಮಗೆ?"
ತಿಮ್ಮಯ್ಯ ಪಿಳಿಪಿಳಿ ಕಣ್ಣು ಬಿಡುತ್ತ ಹೇಳಿದರು:
"ಏನೂ ಇಲ್ಲ. ಏನನಿಸ್ಬೇಕು? ಯಾರು ಎಂಥ ಸುಧಾರಣೆ ಮಾಡಿದ್ರೆ ಈ ಬಡ
ಉಪಾಧ್ಯಾಯನಿಗೇನ್ರಿ?"
"ಹಾಗಲ್ಲ ತಿಮ್ಮಯ್ಯನವರೆ. ಈಗಿನ ಹಾಗೆ ಬರೇ ಪರೀಕ್ಷೆಗೋಸ್ಕರ ಓದೋದು
ತಪ್ಪಿ, ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ ಸಿಗುತ್ತೇಂತ ಅವರ ಅಭಿಪ್ರಾಯ."

418

ಸೇತುವೆ

“ಯಾರ ಅಭಿಪ್ರಾಯ?"
"ನಮ್ಮನ್ನು ಆಳುವವರದು."
"ಅವರು ಮುಠ್ಠಾಳರು. ನಾನ್ಹೇಳ್ತೀನಿ, ಅವರು ಮುಠ್ಠಾಳರು."
ಜಯದೇವ ನಿರುತ್ತರನಾಗಿ ಕುಳಿತು, ತಿಮ್ಮಯ್ಯನವರ ಮನೋವೇದನೆಯನ್ನು
ಅರ್ಥಮಾಡಿಕೊಳ್ಳಲು ಯತ್ನಿಸಿದ.
ತಿಮ್ಮಯ್ಯನೆ ಅಂದರು:
"ನಾನ್ಹೇಳ್ತೀನಿ ಜಯದೇವರೆ. ಈ ವಿದ್ಯಾಭ್ಯಾಸಕ್ರಮದಲ್ಲಿ ನಿಜವಾಗಿಯೂ
ಸುಧಾರಣೆಯಾಗ್ಬೇಕೂಂತ ನಿಮಗಿದೆಯೇನು? ಹಾಗಾದರೆ ಉಪಾಧ್ಯಾಯರಿಗೆ ಸಿಗೋ
ವೇತನ ಮೊದಲು ಜಾಸ್ತಿಮಾಡಿ. ಇಪ್ಪತ್ತೈದು ರೂಪಾಯಿ ತಲಬಿನ ಮೇಲೆ ಒಬ್ಬ
ನನ್ನು ನೇಮಿಸಿ 'ನೀನು ವಿದ್ಯಾಗುರು' ಅಂದರೆ ಆಗ್ಹೋಯ್ತೆ ಕೆಲಸ? ಹೊಟ್ಟೆ ಚುರ್
ಅಂದಾಗ ಅವನು ಗುರ್ ಅನ್ನದೆ ಇರ್‍ತಾನೇನು? ಉಟ್ಟ ಬಟ್ಟೆಗೆ ಸಾಬೂನು ಹಾಕೋ
ಸಾಮರ್ಥ್ಯ ಇಲ್ಲದವನಿಗೆ ಗೌರವ ಯಾರ್‍ರಿ ಕೊಡ್ತಾರೆ? ಪ್ರಾಥಮಿಕ ಉಪಾಧ್ಯಾಯರಿಗೆಲ್ಲ
ಸರ್ಕಾರ ಕೊಡುತ್ತಲ್ಲ ಈ ಇಪ್ಪತ್ತೈದು ರೂಪಾಯಿ-ಇದೇನು ಸಂಬಳವೊ? ಭಿಕ್ಷವೊ?"
"ನೀವು ಹೇಳೋದರಲ್ಲಿ ಸತ್ಯಾಂಶ ಇದೆ."
"ಅಂಶ ಎಂಥದು? ಅಲ್ಲಿ ಮಿಥ್ಯಾಂಶ ಇಲ್ಲವೆ ಇಲ್ಲ. ಪೂರ್ತಿ ಸತ್ಯವೇ. ಹೋದ
ಜನ್ಮದಲ್ಲಿ ಘೋರ ಪಾಪ ಮಾಡಿದವನೇ ಈ ಜನ್ಮದಲ್ಲಿ ಉಪಾಧ್ಯಾಯನಾಗೋದು."
ಜಯದೇವ ನಿಟ್ಟುಸಿರುಬಿಟ್ಟು ಹೇಳಿದ:
“ಇದು, ಸರಕಾರ ಮೊದಲು ಯೋಚಿಸ್ಬೇಕಾದ ಮುಖ್ಯ ಪ್ರಶ್ನೆ."
"ಆದರೆ ಆಳುವವರ ತಲೆಯೊಳಗಿರೋ ಮೆದುಳೇ ಬೇರೆ. ಏನ್ಮಾಡೋಣ
ಹೇಳಿ? ಇವರ ಈ ಸುಧಾರಣೆ ಇದೆಯಲ್ಲ, ಇದೆಲ್ಲ ಅಡಿಪಾಯ ಇಲ್ದೇನೇ ಅರಮನೆ
ಕಟ್ಟೋಕೆ ಮಾಡೋ ಯತ್ನ."

ಜಯದೇವ ಹೊರಗೊಮ್ಮೆ ನೋಡಿದ. ಬೆಳಕು ಕುಂದುತ್ತ ಬರುತಿತ್ತು.
ತಿಮ್ಮಯ್ಯನನ್ನು ಆತ ದಿಟ್ಟಿಸಿದ. ಕತ್ತಲಾಗುವುದರೊಳಗೆ ತಾನು ಹಳ್ಳಿ ಸೇರಬೇಕೆಂಬು
ದರ ಕಡೆಗೆ ಆತನ ಗಮನವೇ ಇದ್ದಂತೆ ತೋರಲಿಲ್ಲ. ಗೆಲುವಿಲ್ಲದ ಆ ಮುಖ ಕಪ್ಪಿ
ಟ್ಟಿತ್ತು. ಯೋಚನಾ ಮಗ್ನರಾಗಿ ನೆಲವನ್ನೇ ನೋಡುತ್ತಿದ್ದ ತಿಮ್ಮಯ್ಯ, ನಶ್ಯದ
ಡಬ್ಬಕ್ಕೆ ಕೈ ಹಾಕಿದರು. ನಶ್ಯ ಮೂಗಿಗೇರಿದೊಡನೆ ಹಣೆಯೊಮ್ಮೆ ನೆರಿಗೆ ಕಟ್ಟಿ ಶಿಥಿಲ
ವಾಯಿತು. ಅವರು ಜಯದೇವನತ್ತ ತಿರುಗಿದರು.
"ಎಷ್ಟೋ ಕಾಲವಾದ ಮೇಲೆ ಭೀಟಿಯಾಗಿ ಸಂತೋಷದಿಂದಿರೋಣ ಎಂದರೆ
ಏನೇನೋ ಮಾತಾಡ್ಬಿಟ್ಟೆ. ಬುದ್ಧಿ ಇಲ್ದೋನು ನಾನು."
"ಹಾಗ್ಯಾಕಂತೀರಿ? ಹೃದಯ ತೆರೆದು ಇಷ್ಟೆಲ್ಲ ಮಾತಾಡಿದೆವೂಂತ ನನಗೆ
ಸಮಾಧಾನವಾಗಿದೆ."

ನವೋದಯ

419

"ಏನು ಮಾತಾಡಿದೆವೋ. ನೋಡಿ ಜಯದೇವರೆ, ವಯಸ್ನಲ್ಲಿ ಚಿಕ್ಕೋ
ರಾದ್ರೂ ನೀವು ನನಗೆ ಅಣ್ಣ ಇದ್ದ ಹಾಗೆ.”
"ಹಾಗೆಲ್ಲ ಹೇಳ್ಬಾರ್ದು."
"ಆಡಬಾರದ್ದು ಏನಾದರೂ ಅಂದಿದ್ರೆ ಕ್ಷಮಿಸ್ಬಿಡಿ."
"ಆಡಬಾರದ್ದು ನೀವು ಅಂದಿದ್ರೆ ತಾನೆ, ಕ್ಷಮಿಸೋ ಪ್ರಶ್ನೆ?"
ತಿಮ್ಮಯ್ಯನವರೂ ಬಾಗಿಲಿನತ್ತ ನೋಡಿದರು.
"ಇವತ್ತು ಸದ್ಯಃ ಮೋಡದ ಸುಳಿವಿಲ್ಲ. ಕತ್ತಲಾಗೋ ಹೊತ್ತಿಗೆ ಮನೆ
ಸೇರ್‍ತೀನಿ. ಟೈಮೆಷ್ಟಾಯಿತು?"
ತಿಮ್ಮಯ್ಯ ಜಯದೇವನ ಕೈಯತ್ತ ನೋಡಿದರು. ಅದು ಬರಿದಾಗಿತ್ತು.
ಜಯದೇವ ಕತ್ತು ಚಾಚಿ, ಹಜಾರದ ಕಂಭಕ್ಕೆ ಪೀಠ ಹೊಡೆದು ನಿಲ್ಲಿಸಿದ್ದ ಟೈಂಪೀಸನ್ನು
ದಿಟ್ಟಿಸಿ ಹೇಳಿದ:
"ಆರು ಘಂಟೆ."
ತಿಮ್ಮಯ್ಯನ ಬಳಿ ಹಿಂದೆಯೊಂದು ಕಿಸೆಗಡಿಯಾರವಿದ್ದುದು ನೆನಪಾಗಿ ಜಯ
ದೇವ ಕೇಳಿದ:
"ಎಲ್ಲಿ ನಿಮ್ಮ ಕಿಸೆ ಗಡಿಯಾರ?"
"ಅದೇ? ನನ್ನ ಮನೋರಮೆ ಹೋದ ಸಲ ಬಾಣಂತಿಯಾದಾಗ ಮಾರವಾಡಿ
ಕಟ್ಟೆಗೆ ಹೋಯ್ತು. ಸಾಯೋವರೆಗೂ ಬಿಡಿಸ್ಕೊಳ್ದೆ ಇದ್ದರೆ, ಆಮೇಲೆ 'ರಾಷ್ಟ್ರೀಯ
ವಸ್ತುಸಂಗ್ರಹಾಲಯದವರು ತಗೋತಾರೇ'೦ತ ಆ ಸೇಠ್ ಗೆ ಹೇಳಿದೀನಿ. ಪ್ರಾಥಮಿಕ
ಉಪಾಧ್ಯಾಯನ ಕಿಸೆ ಗಡಿಯಾರ-ಪ್ರದರ್ಶಿಸೋದಕ್ಕೆ ಬೇಕಾಗುತ್ತೆ ನೋಡಿ!"
"ಎಷ್ಟು ರೂಪಾಯಿಗೆ ಒತ್ತೆ ಇಟ್ಟಿರಿ?"
"ಭರ್ತಿ ಎರಡು ಕೈ."
"ಹತ್ತು ರೂಪಾಯಿನೆ?"
"ಹೂಂ. ಮಾರವಾಡೀನಾ ಜಾಸ್ತಿಕೊಡೋನು?"
ತಿಮ್ಮಯ್ಯ ಎದ್ದು ನಿಂತು ಹೇಳಿದರು:
"ನನಗಿನ್ನು ಅಪ್ಪಣೆ ಕೊಡಿ, ಹೊರಡ್ತೀನಿ."
ಕೆಲಸದ ನಡುವೆ ಆ ಸಂಭಾಷಣೆಗೂ ಕಿವಿಗೊಡುತ್ತಲಿದ್ದ ಸುನಂದಾ ಹೊರ
ಬಂದಳು.
"ಬರ್ತೀನಿ ತಾಯೀ," ಎಂದರು ತಿಮ್ಮಯ್ಯ.
ಜಯದೇವನೆಂದ:
"ಬಿಡುವಾದಾಗ್ಲೆಲ್ಲ ಭೇಟಿ ದಯಪಾಲಿಸಿ."
"ನಾನೂ ಒಬ್ಬ ಮನುಷ್ಯ ಅಂತ ನೀವು ಗೌರವ ತೋರಿಸ್ತಿದೀರಲ್ಲ. ಭೇಟಿ

420

ಸೇತುವೆ

ಯಾಗದೆ ಹ್ಯಾಗಿರ್ಲಿ?”
"ಇನ್ನೊಂದ್ಸಲ ಬರುವಾಗ ನೀವು ಬರೆದಿರೋದನ್ನು ಎಲ್ಲಾ ತಗೊಂಡ್ಬನ್ನಿ."
"ಭೂಮಿ ತಾಯಿಯ ಪಾಲಿಗೆ ಎಷ್ಟೋ ದಿವಸ ಹಿಂದೆಯೇ ಮಳೆ ಬಂದಿದ್ರೂ
ನನ್ನ ಒಣಗಿದ ನೆಲಕ್ಕೆ ನಾಲ್ಕು ಹನಿ ಬಿದ್ದಿರೋದು ಇವತ್ತೇ! ಆಗಲಿ, ಬರ್‍ತೀನಿ_
ತರ್ತೀನಿ."
ತಿಮ್ಮಯ್ಯ ಹೊರಟುಹೋದ ಬಳಿಕ ಜಯದೇವ ಸುನಂದೆಯನ್ನು ಕೇಳಿದ:
"ಹ್ಯಾಗಿದಾನೆ ಮುದ್ದಣ್ಣ?"
"ಪಾಪ! ಮನೆ ಸೇರೋ ಹೊತ್ತಿಗೆ ಎಷ್ಟು ತಡವಾಗುತ್ತೊ ಏನೊ. ಒಂದು
ತುತ್ತು ಊಟ ಮಾಡ್ಕೊಂಡಾದರೂ ಹೋಗೀಂತ ಅನ್ಬಹುದಾಗಿತ್ತು."



೧೦

ಮಳೆಗಾಲ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಮೆಯಾಯಿತು. ಜಗಲಿ
ತು೦ಬಾ ಕೊಡೆ, ತಾಳೆಗರಿಯ ಗೊರಬೆಗಳೇ ಆದರೂ ತೋಯ್ದು ಒದ್ದೆಯಾಗಿ ನಡು
ಗುತ್ತ ಬರುತ್ತಿದ್ದವರೇ ಹೆಚ್ಚು.
"ಕಡು ಬೇಸಗೆಯಲ್ಲೂ ಇಂಥ ಮಳೆಯಲ್ಲೂ ರಜಾ ಕೊಡಬೇಕಾದ್ದು ನ್ಯಾಯ.
ಡಿಸೆಂಬರ್ ಜನವರಿಗಳ ರಜಾದಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ,"
ಎಂದ ಜಯದೇವ, ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಬಳಿಕ ತನ್ನ ನಿರ್ದಿಷ್ಟ ಅಭಿ
ಪ್ರಾಯವನ್ನು ರೂಪಿಸಿ.
ಸಮೀಪದಲ್ಲಿ ಲಕ್ಕಪ್ಪಗೌಡರಿಲ್ಲದುದನ್ನು ಗಮನಿಸಿ ನಂಜುಂಡಯ್ಯನೆಂದರು:
"ಎಲ್ಲಿಯೋ ಕೂತು ಏನೋ ತೀರ್ಮಾನಮಾಡ್ತಾರೆ, ತೀರಿತು. ಹೇಳುವವರಿಲ್ಲ,
ಕೇಳುವವರಿಲ್ಲ."
ವಾಸ್ತವವಾಗಿ, ಊರ ಪ್ರಮುಖ ಶಂಕರಪ್ಪನವರೂ ನಂಜುಂಡಯ್ಯನವರೂ
ಸರಕಾರಿ ಪಕ್ಷವೇ. ಲಕ್ಕಪ್ಪಗೌಡರೂ ಅದೇ ಪಕ್ಷದವರೇ. ಆದರೆ, ಪಕ್ಷದ ಆವರಣ
ದೊಳಗೆ ಮಾತ್ರ ಇವರ ಜಾತಿಯ ಗುಂಪು ಬೇರೆ; ಅವರ ಜಾತಿಯ ಗುಂಪು ಬೇರೆ.
ಹೊರಗಿನ ಯಾರಾದರೂ ಸರಕಾರಿ ಪಕ್ಷವನ್ನು ಟೀಕಿಸಿದರೆ, ಇವರಿಬ್ಬರೂ ಆತನನ್ನು
ಬಯ್ಯುವವರೇ. ಆದರೆ, ಪಕ್ಷದೊಳಗೆ ಒಬ್ಬ ಏತಿ ಎಂದರೆ ಇನ್ನೊಬ್ಬ ಪ್ರೇತಿ.
ಕನಿಕರಪಡುವಂತಿತ್ತು ನಾಡಿಗೊದಗಿದ ದುರವಸ್ಥೆ ನೋಡಿ.
ಪಾವಿತ್ರ್ಯ ಎಲ್ಲಿತ್ತು?

ನವೋದಯ

421

ಪಾಠ ಹೇಳುವಾಗಲೂ ತುಲನೆಮಾಡುವಾಗಲೂ ವಿದ್ಯಾರ್ಥಿಗಳ ಜಾತಿಗೇ
ಪ್ರಾಧಾನ್ಯ. ಅದನ್ನು ಎಂದಾದರೊಮ್ಮೆ ಬದಿಗೊತ್ತುತ್ತಿದ್ದುದು ದೊಡ್ಡ ಮನೆತನದ
ಪ್ರಶ್ನೆ ಬಂದಾಗ ಮಾತ್ರ. ಅಂತಹ ಸಂದರ್ಭಗಳಲ್ಲಿ ಜಾತಿಯನ್ನು ಮೀರಿಸಿ ನಿಲ್ಲುತ್ತಿತ್ತು
ಸಿರಿವಂತಿಕೆ.
ಜಯದೇವ ಭಾವಿಸಿದ್ದ, ಉಪಾಧ್ಯಾಯನ ವ್ಯಕ್ತಿತ್ವ ಅತಿ ಮುಖ್ಯವಾದುದೆಂದು.
ಆತನ ಅಚ್ಚಿನಲ್ಲೆ ಅಲ್ಲವೆ ನಾಳೆಯ ಪ್ರಜೆಗಳನ್ನು ಎರಕ ಹೊಯ್ಯುವುದು? ಆದರೆ
ಅನುಭವದಲ್ಲಿ ಕಂಡಂತೆ, ಅದು ಬರಿಯ ತತ್ತ್ವ. ಮಾತಿನಲ್ಲಿ ಆಡಬೇಕಾದುದು, ಕೃತಿ
ಯಲ್ಲಿ ತೋರಬೇಕಾದುದಲ್ಲ. ಗುರು ಶಿಷ್ಯರ ಸಂಬಂಧವಂತೂ ತರಗತಿಯ ಆವರಣ
ದೊಳಗೆ ಮಾತ್ರ. ಪ್ರಾಥಮಿಕ ಶಾಲೆಯಲ್ಲೂ ಅಷ್ಟೆ, ವಿಶ್ವವಿದ್ಯಾನಿಲಯದ ಮಟ್ಟ
ದಲ್ಲೂ ಅಷ್ಟೆ.
ಈ ಪರಿಸ್ಥಿತಿಯನ್ನು ಬದಲಾಯಿಸುವುದು ಅಗತ್ಯವಾಗಿತ್ತು. ಆದರೆ ಹೇಗೆ? ಆ
ಯಜ್ಞವನ್ನು ಆರಂಭಿಸಬೇಕಾದವರು ಯಾರು? ಎಲ್ಲಿ?
...ಸುನಂದಾ ಮನೆಯಂಗಳದಲ್ಲಿ ಮಲ್ಲಿಗೆ ಸೇವಂತಿಗೆ ಗುಲಾಬಿಗಳನ್ನು ನೆಟ್ಟಳು.
ಶಾಲೆಯ ಹೂದೋಟದಲ್ಲಿ ಜಯದೇವ ಕೈಯಾಡಿಸಿದ. ಮೇಲಿನಿಂದ ನೀರು
ಹೊಯ್ಯುತ್ತಿದ್ದ, ಆಕಾಶಮಾಲಿ. ಬಣ್ಣ ಬಣ್ಣದ ಹೂಗಳು ಬಣ್ಣದೆಲೆಗಳು ಹಸುರೆಲೆ
ಗಳು ರಮ್ಯವಾಗಿ ಬೆಳೆದುವು.
ಅದನ್ನು ಜಯದೇವ ಬಣ್ಣಿಸಿದಾಗಲೆಲ್ಲ ಸುನಂದಾ ಹೇಳುತ್ತಿದ್ದಳು:
"ಮನೆಗಿಂತ [ನನಗಿಂತ] ಶಾಲೆಯ ಮೇಲೆಯೇ ನಿಮಗೆ ಹೆಚ್ಚು ಪ್ರೀತಿ!"
ಶಾಲೆಯ ಪುಸ್ತಕ ಭಂಡಾರವನ್ನು ವ್ಯವಸ್ಥಿತಗೊಳಿಸಿದ, ಜಯದೇವ. ಈಗ
ಸಂಬಳ ತರಲೆಂದು ಪ್ರತಿ ತಿಂಗಳೂ ತಾಲ್ಲೂಕು ಕೇಂದ್ರಕ್ಕೆ ಹೋಗುತ್ತಿದ್ದವನು ಶಾಲೆಯ
ಜವಾನ. ಆದರೆ ಒಮ್ಮೆ ನಂಜುಂಡಯ್ಯನವರೇ ಸ್ವತಃ ಹೋಗಿ, ಆ ವರ್ಷದ ಮೀಸಲು
ಹಣವನ್ನೂ ವಿನಿಯೋಗಿಸಿ ಹೊಸ ಪುಸ್ತಕಗಳನ್ನು ತಂದರು. ಪುಸ್ತಕಗಳ ಆಯ್ಕೆ
ಸಮರ್ಪಕವಾಗಿರಲಿಲ್ಲ. ತಾನೇ ಹೋಗಿದ್ದರೆ ಚೆನ್ನಾಗಿತ್ತು ಎಂದು ಜಯದೇವ ಮನಸಿ
ನಲ್ಲೆ ಅಂದುಕೊಂಡ. ಕನ್ನಡದಲ್ಲಂತೂ ಅಗ್ಗದ ಸರಕೇ ಜಾಸ್ತಿ. ಬಣ್ಣ ಬಣ್ಣದ್ದು.
ಮೊದಲು ಓದಿ ನೋಡದೆ ಹುಡುಗರಿಗೆ ಕೊಡಲು ಅಂಜಿಕೆಯೇ. ಮಕ್ಕಳಿಗೋಸ್ಕರ
ವೆಂದು ಸೃಷ್ಟಿಯಾಗಿದ್ದ ಸಾಹಿತ್ಯ ಬಲು ಕಡಮೆ. ಆ ಊರಿನ ಒಬ್ಬನೇ ಒಬ್ಬ ಪತ್ರಿಕೆ
ವ್ಯಾಪಾರಿಯಲ್ಲಿ ಸಿಗುತ್ತಿದ್ದುದಂತೂ 'ಚಂದಮಾಮ' ಒಂದೇ.
'ನಾವಿರೋ ಹಾಗೆಯೇ ಇದೆ ನಮ್ಮ ಸಾಹಿತ್ಯವೂ ಕೂಡ,' ಎಂದು ತನ್ನಷ್ಟಕ್ಕೆ
ಜಯದೇವ ನುಡಿದ.
ಪುಸ್ತಕಗಳನ್ನು ಓದಲೆಂದು ಜಯದೇವ ಮನೆಗೊಯ್ದ. ಸುನಂದೆಗೆ ಹೊತ್ತು
ಕಳೆಯಲು ಆ 'ಕಥೆಪುಸ್ತಕ'ದ ಸಾಹಿತ್ಯ ಒಳ್ಳೆಯ ಸಾಧನವಾಯಿತು.
ಒಂದು ದಿನ ತರಕಾರಿ ತುಂಬಿದ ದೊಡ್ಡದೊಂದು ಚೀಲವನ್ನು ಜಯದೇವನ

422

ಸೇತುವೆ

ಮನೆಗೆ ಹೊತ್ತು ತಂದ ತಿಮ್ಮಯ್ಯ, ಅಲ್ಲಿದ್ದ ಒಂದೆರಡು ಪುಸ್ತಕಗಳನ್ನು ನೋಡಿದರು.
"ನಿಮ್ಮ ಭಂಡಾರದಲ್ಲಿ ಕೈಲಾಸಂ ನಾಟಕ ಇದ್ದರೆ ತಂದ್ಕೊಡ್ರಿ. ಹೊಸ ರೀತೀಲಿ
ಬರೆದದ್ದು. ಆದರೂ ಬಹಳ ಚೆನ್ನಾಗಿವೆ," ಎಂದರು.
"ಕೈಲಾಸಂ ನಾಟಕ ಅಂದರೆ ನನಗೂ ತುಂಬಾ ಇಷ್ಟ," ಎಂದ ಜಯದೇವ.
"ಒಂದೆರಡು ಇವೇಂತ ತೋರುತ್ತೆ. ತಂದ್ಕೊಡ್ತೀನಿ" ಎ೦ದು ಆಶ್ವಾಸನೆ ಇತ್ತ.
...ತಿಮ್ಮಯ್ಯನ ಕೈಯಲ್ಲಿ ಮಾಧ್ಯಮಿಕ ಶಾಲೆಯ ಗ್ರಂಥಭಂಡಾರದ ಪುಸ್ತಕ
ಗಳಿದ್ದುದು ನಂಜುಂಡಯ್ಯನಿಗೆ ಗೊತ್ತಾಯಿತು. ಅವರು ಜಯದೇವನಿಗೆ ಆ ವಿಷಯ
ತಿಳಿಸಿದರು.
"ಓದಲೀಂತ ನಾನೇ ಕೊಟ್ಟಿದ್ದೆ ಸಾರ್. ಈ ಊರಲ್ಲಿ ಬೇರೆ ಎಲ್ಲಿ ತಾನೆ ಪುಸ್ತಕ
ಸಿಗುತ್ತೆ ಆ ಮನುಷ್ಯನಿಗೆ?" ಎಂದ ಜಯದೇವ.
"ಅದು ಸರೀಪ್ಪಾ. ಕಳೆದುಹೋದ್ರೆ ಏನುಮಾಡೋಣ? ನಷ್ಟ ಭರ್ತಿಮಾಡೋ
ಛಾತಿಯೂ ಇಲ್ಲವಲ್ಲ ಆ ಬಡಪಾಯಿಗೆ!"
"ಪುಸ್ತಕ ಹುಷಾರಾಗಿ ನೋಡ್ಕೋಳ್ಳೋದಕ್ಕೆ ಹೇಳ್ತೀನಿ."
"ಅಷ್ಟು ಮಾಡಿ. ನೀವು ಕೊಟ್ಟಿರೋದು ಅಂದ್ಮೇಲೆ ನಾನು ಹೆಚ್ಚೇನೂ
ಹೇಳೊಲ್ಲ. ಲಕ್ಕಪ್ಪಗೌಡರು ಕೊಟ್ಟರೇನೋಂತಿದ್ದೆ."
ಕೇಳಲು ಇಂಪಾಗಿರಲಿಲ್ಲ, ಸೂಚ್ಯಾರ್ಥವಿದ್ದ ಕೊನೆಯ ಮಾತು. ಆದರೂ
ಜಯದೇವ ಅದನ್ನು ಸಹಿಸಿದ.
ತಿಂಗಳಿಗೊಂದು ಸಾರೆ ಉಪಾಧ್ಯಾಯರ ಸಭೆ ನಡೆಯಿತು. ಮಳೆಬಾರದ ಸಂಜೆ
ಆಟದ ಬಯಲಿಗೆ ಜಯದೇವ ನಾಯಕನಾದ. ಶ್ರಮದಾನದ ಹಾರೆಪಿಕಾಸಿಗಳೂ ಆತನ
ಕೊರಳಿಗೇ ಆತುಕೊಂಡುವು.
........ಹಾಗೆ ದುಡಿದು ಮೈಯಿಂದ ಬೆವರಿಳಿಸುತ್ತ, ಒಂದು ದಿನ ಸಾಯಂಕಾಲ
ಜಯದೇವ ಮನೆಗೆ ತಡವಾಗಿ ಬಂದಾಗ, ಸುನಂದಾ ಕೂಗಾಡಿದಳು:
"ಈ ಮನೇಲಿ ಒಬ್ಬಳೇ ಇರೋಕೆ ನನ್ಕೈಲಾಗಲ್ಲ!"
ಜಯದೇವ ಮೊದಲು ಮುಗುಳುನಕ್ಕ. ಆದರೆ ಉದ್ವಿಗ್ನಗೊಂಡ ಆಕೆಯ
ಮನಸ್ಸು ಅಷ್ಟರಿಂದಲೇ ಶಮನವಾಗುವಂತಿರಲಿಲ್ಲ.
“ಯಾಕೆ ಸುನಂದಾ? ಬರೋದು ಸ್ವಲ್ಪ ತಡವಾಯ್ತು, ಅಷ್ಟೆ."
"ಸ್ವಲ್ಪವೆ? ನೋಡಿ ಟೈಂಪೀಸು. ಕಾಣಿಸುತ್ತೇನು?"
ಸಣ್ಣ ದೊಡ್ಡ ಮುಳ್ಳುಗಳೆರಡೂ ಆರರ ಬಳಿ ಒಂದಾಗಿದ್ದುವು.
"ನೋಡು, ಕೋಪಿಸ್ಕೊಳ್ಳದೆ ಹ್ಯಾಗೆ ಜತೆಯಾಗಿವೆ, ಎರಡು ಮುಳ್ಳೂ!"
ಸಾಧಾರಣವಾಗಿ ಆಕೆ ಪ್ರಸನ್ನಳಾಗಲು ಅಷ್ಟೇ ಸಾಕಾಗುತ್ತಿತ್ತು. ಆದರೆ ಆ
ಸಂಜೆ ಜಯದೇವನಿಗೆ ಸೋಲಾಯಿತು.
“ಹತ್ತುಸಲ ಬಿಸಿಯಾಗಿ ತಣ್ಣಗಾಗಿರೋ ಕಾಫೀನ ಒಲೆ ಮೇಲಿಟ್ಟಿದೀನಿ.

ನವೋದಯ

423

ಕುಡೀರಿ. ಮೂಲೇಲಿ ಮುಚ್ಚಿಟ್ಟಿರೋ ದೋಸೇನೂ ಇರ್ಬೇಕು. ತಿನ್ನಿ."
ಆ ಸಿಡುಕಿನ ಸ್ವರ ಸಹನೆಯಾಗದೆ ಜಯದೇವ ಕಟುವಾಗಿ ನುಡಿದ:
“ಸುನಂದಾ! ಏನಿದು?"
"ನನ್ನನ್ನ ಯಾಕೆ ಈ ಊರಿಗೆ ಕರೆಕೊಂಡು ಬಂದ್ರಿ, ಹೇಳಿ? ಮನೆ ಕಾವಲು
ಕಾಯೋ ಆಳೆ, ನಾನು?"
ಜಯದೇವ ಸಿಟ್ಟು ತಡೆಯಲಾಗದೆ ಆಕೆಯ ಎರಡೂ ಭುಜಗಳನ್ನು ಹಿಡಿದು
ಬಲವಾಗಿ ಕುಲುಕಿದ.
"ಸುನಂದಾ! ಏನಾಗಿದೆಯೆ ನಿನಗೆ?"
ಆಕೆ ಜಯದೇವನನ್ನು ಹಿಂದಕ್ಕೆ ತಳ್ಳಿದಳು. ಒಮ್ಮೆಲೆ ಅಳತೊಡಗಿದಳು.
ಕೊಠಡಿಗೆ ಹೋಗಿ ಹಾಸಿಗೆಯ ಮೇಲೆ ಉರುಳಿಕೊಂಡಳು.
ಏನು ಮಾಡಬೇಕೆಂಬುದೇ ಜಯದೇವನಿಗೆ ತೋಚಲಿಲ್ಲ. ಆಕೆಯ ಬಳಿಹೋಗಿ
'ತಪ್ಪಾಯ್ತು' ಎನ್ನಬೇಕೆ? ಯಾವ ತಪ್ಪು? ಎಂತಹ ತಪ್ಪು? ಆದುದಾದರೂ ಏನು
ಆಕೆಗೆ?
ಸ್ವಲ್ಪ ಹೊತ್ತು ಆಕೆಯನ್ನು ಹಾಗೆಯೇ ಇರಗೊಡಬೇಕೆಂದು ಜಯದೇವ
ನಿರ್ಧರಿಸಿದ. ತಾನು ಮುಖಕ್ಕೆ ನೀರು ಹನಿಸಲಿಲ್ಲ. ಕಾಫಿ ತಿಂಡಿಯಂತೂ ಬೇಕಾಗಿರ
ಲಿಲ್ಲ ಆತನಿಗೆ. ಬಾಗಿಲ ಬಳಿ ಕುಳಿತು, ತಂಗಾಳಿಗೆ ಮೈಯೊಡ್ಡುತ್ತ, ಸಂಜೆಗತ್ತಲು
ದಟ್ಟವಾಗುತ್ತಿದ್ದುದನ್ನು ನೋಡಿದ. ಎಲ್ಲೆಲ್ಲಿಯೋ ಸಂಚಾರ ಮಾಡುತಿದ್ದ ಮನಸ್ಸು
ಕ್ರಮೇಣ ಅಂತರ್ಮುಖಿಯಾಯಿತು. ತನ್ನನ್ನು ಕುರಿತು, ತನಗೆ ಆತ್ಮೀಯವಾದ
ಜೀವವನ್ನು ಕುರಿತು, ಯೋಚಿಸಿತು.
ತನ್ನನ್ನು ಚೆನ್ನಾಗಿ ತಿಳಿದವಳೇ ಸುನಂದಾ. ಆದರೆ, ತನ್ನೆಲ್ಲ ವಿಚಾರಗಳೂ
ಅಷ್ಟೇ ಆಗಾಧತೆಯಿಂದ ಆಕೆಯ ವಿಚಾರಗಳೂ ಆಗುವುದು ಸಾಧ್ಯವೆ? ತನಗಾದರೋ
ನೂರಾರು ವಿದ್ಯಾರ್ಥಿಗಳ ಒಡನಾಟವಿರುತ್ತಿತ್ತು ದಿನವೂ. ಆಕೆಗೆ? ನೆರೆಯವರೊಡನೆ
ಆಡಿದ ಮಾತನ್ನೇ ಆಡುತ್ತಲಿರುವ ಅವಕಾಶ ಮಾತ್ರ. ಮನೋರಂಜನೆಯಂತೂ
ಇಲ್ಲವೇ ಇಲ್ಲ. ರೇಡಿಯೋ ಕೊಳ್ಳೋಣವೆಂದರೆ, ಅದು ದುಡ್ಡಿನ ಬಾಬು. ಸಿನಿಮಾ_
ಹಳೆಯ ನೆನಪು, ಅಷ್ಟೇ. ನಾಟಕ_ವರ್ಷಕ್ಕೊಮ್ಮೆ ಮಾಧ್ಯಮಿಕ ಶಾಲೆಯ ವಾರ್ಷಿ
ಕೋತ್ಸವವಾದಾಗ. ಪುಸ್ತಕದ ಸಹವಾಸವೊಂದೇ ಎಷ್ಟು ಸಾಕು? ತಾನು ಬೇಗನೆ
ಬಂದಿದ್ದರೆ ಒಂದಷ್ಟು ದೂರ ಜತೆಯಾಗಿ ನಡೆದು ವಾಪಸು ಬರಬಹುದಿತ್ತು. ಒಂದು
ರೀತಿಯ ವಾಯು ವಿಹಾರ. ತನಗಾದರೋ ಧ್ಯೇಯಗಳೇ ಸಿಹಿಯಾದ ಆಹಾರ.
ಆಕೆಗೆ? ಸಂಬಳವನ್ನೇನೋ ಕೈಸೇರಿದೊಡನೆ ತಂದುಕೊಡುತ್ತಿದ್ದ. ವೆಚ್ಚದ ಉಳಿ
ತಾಯದ ಲೆಕ್ಕವಿಡುತ್ತಿದ್ದುದೆಲ್ಲ ಸುನಂದೆಯೇ. ಆದರೆ, ಆ ಅಲ್ಪ ಸಂಬಳದಲ್ಲಿ ಆಗು
ತ್ತಿದ್ದ ಉಳಿತಾಯವಾದರೂ ಎಷ್ಟು? ಏನನ್ನಾದರೂ ಕೊಳ್ಳಬೇಕೆಂಬ ಆಸೆಯೋ
ಏನೋ...ಅಥವಾ, ತಾನೂ ದುಡಿಯಬೇಕೆoದು, ಸಂಪಾದಿಸಬೇಕೆಂದು...

424

ಸೇತುವೆ

ಯೋಚಿಸುತ್ತಿದ್ದಂತೆ ಮತ್ತಷ್ಟು ಬೇಸರವಾಯಿತು ಜಯದೇವನಿಗೆ.
ಹಿಂಬದಿಯಿಂದ ವಿದ್ಯುತ್ ಗುಂಡಿಯೊತ್ತಿದ ಸದ್ದು.
ಸುನಂದಾ ಎದ್ದು ಅಡುಗೆ ಮನೆಗೆ ಹೋದಳು. ಬಳಿಕ ಎಷ್ಟು ಹೊತ್ತಾದರೂ
ಆಕೆ ಹೊರ ಸುಳಿಯಲಿಲ್ಲ. ['ಅಡುಗೆ ಮಾಡುತ್ತಿರಬೇಕು.']
ಜಯದೇವ ಮೆಲ್ಲನೆದ್ದು ಹೊರಬಾಗಿಲಿಗೆ ಅಗಣಿಹಾಕಿ ಕೊಠಡಿಗೆ ನಡೆದ.
ಹಾಸಿಗೆ ಸುನಂದೆಯ ವಿಷಯ ಹೇಳಿತು. ತೋಯ್ದಿತ್ತು ದಿಂಬು. ಜಯದೇವ
ಹಾಸಿಗೆಯಮೇಲೆ ಕುಳಿತು ತೋಯ್ದುಭಾಗಗಳನ್ನು ಮುಟ್ಟಿ ನೋಡಿದ. ಸಂಕಟವೆನಿಸಿತು.
ದಿಂಬನ್ನು ಬದಿಮಗುಚಿ ಅದಕ್ಕೆ ತಲೆ ಇರಿಸಿದ. ಕಾಲು ಚಾಚಿ ಮಲಗಿದ.
ದೇಹ ಮನಸ್ಸು ಎರಡೂ ದಣಿದಿದ್ದುದರಿಂದ, ಆತನಿಗೆ ಅರಿವಿಲ್ಲದಂತೆಯೇ ನಿದ್ದೆ
ಬಂತು....
ಕೋಮಲವಾದ ಬೆರಳುಗಳು ಮೈಮುಟ್ಟುತ್ತಿದ್ದುವು. ಮಧುರವಾದ ಕಂಠ
ಹೇಳುತ್ತಿತ್ತು:
“ಏళి, ಊಟಕ್ಕೇಳಿ."
ಜಯದೇವ ಎಚ್ಚತ್ತು ಮಗ್ಗುಲು ಹೊರಳಿದ. ಆದರೆ ಅಲ್ಲಿ ಯಾರೂ ಇರಲಿಲ್ಲ.
ಕೊಠಡಿಯ ದೀಪ ಎ೦ದಿನ೦ತೆ ಮಂದವಾಗಿ ಉರಿಯುತ್ತಿತ್ತು. ರಾತ್ರೆ, - ಹಗಲಲ್ಲ.
ಎಷ್ಟು ಹೊತ್ತಾಯಿತೋ?
ಸುನಂದಾ ತನ್ನನ್ನು ಕರೆದು ಒಳಹೋಗಿರಬೇಕೆಂದು ಜಯದೇವ ಎದ್ದ.
ಎಂಟು ಗಂಟೆ! ಅಷ್ಟರ ವರೆಗೂ ಅಡುಗೆ ಮನೆಯಲ್ಲಿ ಒಂಟಿಯಾಗಿಯೆ ಹೊತ್ತು
ಕಳೆದಳೆ ಸುನಂದಾ?
ಹಜಾರದ ಒಳಬಾಗಿಲ ಬಳಿ ಜಯದೇವ ನಿಂತ.
ಹಿಂತಿರುಗಿ ನೋಡದೆಯೆ ಸುನಂದಾ ಹೇಳಿದಳು:
"ತಟ್ಟೆ ಇಡ್ತೀನಿ. ಕೈಕಾಲು ಮುಖ ತೊಳಕೊಂಡು ಬನ್ನಿ."
...ತಟ್ಟೆಯ ಮುಂದೆ ಕುಳಿತಾಗಲೂ ಮಾತಿರಲಿಲ್ಲ. ಮೌನ ಸರಿಯಲ್ಲವೆಂದು
ಜಯದೇವ ಹೇಳಿದ:
"ಬಡಿಸ್ಕೊಂಡು ನೀನೂ ಕೂತ್ಕೊ."
"ನಿಮ್ಮದಾಗಲಿ."
ಆತನ ಊಟವಾದೊಡನೆ ಆಕೆ ಹೇಳಿದಳು:
“ಅಡಿಕೆಪುಡಿ ಅಲ್ಲೇ ಇದೆ. ತಗೊಂಡ್ಬಿಡಿ."
ಜಯದೇವ ಅದರ ಗೊಡವೆಗೆ ಹೋಗಲಿಲ್ಲ. ಕೊಠಡಿಗೆ ನಡೆದು ಡಿ. ವಿ. ಜಿ.
ಯವರ "ರಾಜ್ಯಶಾಸ್ತ್ರ" ವನ್ನು ಕೈಗೆತ್ತಿಕೊಂಡ. ಓದಲು ಮನಸಾಗದೆ ಹಾಗೆಯೇ
ಕೆಳಕ್ಕಿರಿಸಿ, ಹಾಸಿಗೆ ಸರಿಪಡಿಸಿ, ಗೋಡೆಗೊರಗಿ ಕುಳಿತ.
ಸ್ವಲ್ಪ ತಡೆದು ಅಡಿಕೆಪುಡಿಯ ಡಬ್ಬದೊಡನೆ ಸುನಂದಾ ಬಂದಳು. ಆಕೆ ಕೇಳಿದಳು:

ನವೋದಯ

425

"ತಗೊಳ್ಲೇ ಇಲ್ವ ನೀವು?"
"ಇಲ್ಲ."
ಇಬ್ಬರಿಗೂ ಇಷ್ಟಿಷ್ಟು.
"ಒಳಗಿನ ಕೆಲಸವಾಯ್ತಾ?"
"ಹೂ○."
"ಹಜಾರದ ದೀಪ ಆರಿಸಿ ಬಾ."
ಆ ಕೆಲಸವನ್ನೂ ಮುಗಿಸಿ ಆಕೆ ಬಂದಳು. ಕೊಠಡಿಯನ್ನೂ ಕತ್ತಲು
ಆವರಿಸಿತು.
ಆಗ ಸುನಂದೆಯನ್ನು ಜಯದೇವ ಬರಸೆಳೆದು ಬಿಗಿಹಿಡಿದು ನುಡಿದ:
"ಸುನಂದಾ, ನನ್ನದು ತಪ್ಪಾಯ್ತು."
ಆತನ ಬಾಯಿಯನ್ನು ಅಂಗೈಯಿಂದ ಆಕೆ ಮುಚ್ಚಿದಳು.
"ತಪ್ಪು ನನ್ನದು. ಕ್ಷಮಿಸಿ."
ಜತೆಯಲ್ಲೆ ಒಂದಿಷ್ಟು ಅಳು.
"ಯಾಕಳ್ತಿಯೇ? ಸುಮ್ನಿರು."
"ನಿಮ್ಮನ್ನ ಕಾರಣವಿಲ್ದೆ ಬೇಜಾರುಪಡಿಸ್ದೆ."
"ಬೇಗ್ನೆ ಬರೋಕೆ ಆಗ್ಲಿಲ್ಲ ಕಣೆ. ಶ್ರಮದಾನದ ಕಾರ್ಯಕ್ರಮ ಇಟ್ಕೊಂಡಿದ್ರು.
ಬೆಳಗ್ಗೆನೇ ಹೇಳಿ ಹೋಗೋಕೆ ಮರೆತ್ಬಿಟ್ಟೆ."
"ನಿಮ್ಮ ನಿತ್ಯದ ಕೆಲಸಕ್ಕೆ ಅಡ್ಡಿ ಬಂದರೆ ನಾನು ಪಾಪಿಯಾಗ್ತೀನಿ."
"ಹುಚ್ಚಿ! ಅಂಥ ಮಾತಾಡ್ಬಾರದು."
"ನನ್ನ ಮೇಲೆ ನಿಮಗೆ ಖಂಡಿತ ಕೋಪ ಇಲ್ವಾ?"
"ಇಲ್ಲ."
“ನನ್ನಾಣೆಗೂ?"
[ಒಂದು ಕೊಟ್ಟ ಬಳಿಕ-]
“ನಿನ್ನಾಣೆಗೂ!"
"ಮತ್ಯಾಕೆ ಕಾಫಿ ಕುಡೀಲಿಲ್ಲ?"
“ಈಗ ತಾ, ಕುಡೀತೀನೀ."
"ಕೆಟ್ಟುಹೋಗಿತ್ತು. ಚೆಲ್ಲಿದೆ."
"ದೋಸೆ?"
“ಭಿಕ್ಷುಕರಿಗೆ ನಾಳೆ ಕೊಟ್ಟರಾಯ್ತೂಂತ, ಇಟ್ಟಿದೀನಿ."
"ನಾಳೆ ಸಂಜೆ ಜಾಸ್ತಿ ಮಾಡಿಡು. ಇವತ್ತಿನ ಪಾಲೂ ಸೇರಿಸಿ ತಿನ್ತೀನಿ."
"ಊಂ. ಅದಾಗೊಲ್ಲ."

54

426

ಸೇತುವೆ

"ಇವತ್ತಿನ್ದು ಇವತ್ತೇ ಸಂದಾಯವಾಗ್ಬೇಕೇನು?"
[ಅವರಿಬ್ಬರಿಗೇ ಸಂಬಂಧಿಸಿದ ಮಾತು. ಸುನಂದೆಗೆ ಅರ್ಥವಾಯಿತು.]
“ಹೂಂ."
ಶಯನ. ಕತ್ತಲೆಯಲ್ಲಿ ಛಾವಣಿ ನೋಡುತ್ತ ಪಿಸುಮಾತು. ಬಳಿಕ ಮುಖಕ್ಕೆ
ಮುಖ.
“ಮುಸುರೆ ತಿಕ್ಕೋಕೆ ಯಾರನ್ನಾದರೂ ಗೊತ್ತು ಮಾಡೋಣ್ವೆ ಸುನಂದಾ?"
"ಖಂಡಿತ ಬೇಡಿ."
"ಯಾವಾಗ್ಲೂ - ಯಾವಾಗ್ಲೂ - ಒಬ್ಬಳಿಂದ್ಲೇ ಕೆಲಸಮಾಡೋಕೆ ಆಗುತ್ತಾ?"
"ಆಗದೆ ಇದ್ದಾಗ ನೋಡ್ಕೊಳ್ಳೋಣ."
"ಒಬ್ಬಳೇ ಇರೋಕೆ ಬೇಸರ ಅಲ್ವಾ?"
"ಹೂಂ."
"ಇನ್ನೊಬ್ಬರು ಯಾರಾದರೂ ಬಂದರೆ?"
“ಯಾರು?"
"ಪೆದ್ದುಕಣೇ ನೀನು."
"ಹೋಗ್ರಿ."
"ಇಷ್ಟರತನಕ ಆಸಾಮಿಯ ಪತ್ತೆ ಇಲ್ಲ. ಮುಂದೆ ಹ್ಯಾಗೆ ಹೇಳೋಣ?”
“ಥೂ!"
"ಸುನಂದಾ......"
"ಏನು?"
“ಕೆಲಸ ಮಾಡಿ ಸಂಪಾದಿಸ್ಬೇಕೂಂತ ನಿನಗೆ ಆಸೇನಾ?"
"ಇಲ್ವಲ್ಲಾ ... "
"ಇಷ್ಟೊಂದು ಓದಿಯೂ ಏನೂ ಮಾಡದೇ ಇದ್ದರೆ?"
"ಏನು ಮಾಡೋದು?"
"ನಾನು ಹೇಳ್ಲಾ?"
"ಹೇಳಿ."
"ಇನ್ನೊಂದು ವರ್ಷವಾದ್ಮೇಲೆ ಅಕ್ಕಪಕ್ಕದ ಚಿಕ್ಕ ಹುಡುಗರ್ನೆಲ್ಲಾ ಮನೇಲಿ
ಸೇರಿಸಿ ಪಾಠ ಹೇಳ್ಕೊಡು."
"ಸರಿ ಸರಿ...."
"ಆಗ ನಿನ್ನ ಮಗನಿಗೋ ಮಗಳಿಗೋ ಆಟವಾಡೋಕೆ ಸ್ನೇಹಿತರು ಬೇಕಾಗ್ತಾರೆ
ಕಣೇ."
"ನಿಮಗೆ ನಾಚಿಕೆ ಇಲ್ಲ."
"ಆ ಮೇಲೆ ವಯಸ್ಕರ ಶಿಕ್ಷಣ ಸಮಿತಿಯವರು, ಇಲ್ಲೊ೦ದು ಶಾಖೆ ತೆರೆದಾಗ,


ನವೋದಯ

427

ಹೆಂಗಸರಿಗೆ ನೀನು ಪಾಠ ಹೇಳ್ಕೊಡು."
ಆ ಸಲಹೆ ಮೆಚ್ಚುಗೆಯಾಯಿತು ಸುನಂದೆಗೆ.
"ಹೂಂ."
"ಸುನಂದಾ...."
“ಏನು?"
"ಹೊಸ ಸೀರೆ ಬೇಕಾ ನಿಂಗೆ?"
"ಬೇಡ. ಅಷ್ಟೊಂದು ಇವೆಯಲ್ಲಾ."
"ಬೆಂಗಳೂರಿಗೆ ಯಾವತ್ತು ಹೋಗೋಣ?"
“ನೀವೇ ಹೇಳಿ."
"ದೀಪಾವಳಿಗೆ ಹೋಗೋಣ್ವೊ?"
“ಹೂಂ."
"ಹಬ್ಬ ಯಾವ ತಿಂಗಳಲ್ಲಿ ಗೊತ್ತೊ?"
“ನವೆಂಬರ್ನಲ್ಲಿ."
"ಈಗಿನ್ನೂ ಆಗಸ್ಟ್ ತಿಂಗಳು. ಈಗ್ಲೆ ನೋಡಿ ತಿಳ್ಕೊಂಡ್ಬಿಟ್ಟಿದೀಯಲ್ಲೆ ಹಬ್ಬ
ಯಾವತ್ತೂಂತ!"
"ಅದೇನು ಮಹಾ!"
"ನಿಮ್ಮ ಅಮ್ಮನ್ನ ನೋಡ್ಬೇಕೂಂತ ಆಸೇನಾ?”
"ಹೂಂ."
"ನಿನ್ನ ಸಹಪಾಠಿಗಳು ಕೇಳ್ತಾರೆ: ಮದುವೆ ಆದ್ಮೇಲೆ ಏನೇನು ಕಂಡ್ಯೇ_ಅಂತ."
“ಹೌದು. ಹೇಳ್ತೀನಿ ಅವರಿಗೆ!"
“ಸುನಂದಾ."
"ಏನು?"
"ಸಾಯಂಕಾಲ ನಾವು ಜಗಳಾಡಿದ್ದು?”
"ಪುನಃ ಜ್ಞಾಪಿಸ್ಬೇಡಿ ಅದನ್ನ!"
"ಎಷ್ಟು ಚೆನ್ನಾಗಿತ್ತೂ...!"
"ತಲೆಕಾಯಿ."
ಸುನಂದೆಯ ತಲೆಗೂದಲ ಮೇಲೆ ಜಯದೇವ ಬೆರಳೋಡಿಸಿದ. ಆಕೆ ಮಿಸು
ಕದೆ ಮಲಗಿದಳು.
"ನಿದ್ದೆ ಬಂತಾ ಸುನಂದಾ?"
"ಹೌದು_ನಿದ್ದೆ ಬರುತ್ತೆ!"
"ನಿನಗೊಂದು ಗಾದೆ ಗೊತ್ತಾ?"
"ಯಾವುದು?"

428

ಸೇತುವೆ

"ಗೊತ್ತಿರುತ್ತೆ. ನಾನದನ್ನ ಅರ್ಧ ಹೇಳ್ತೀನಿ. ನೀನು ಪೂರ್ತಿಮಾಡು."
"ಗೊತ್ತಿದ್ದರೆ ಮಾಡ್ತೀನಿ."
"ಹೂಂ. ಹೇಳ್ಲಾ?"
“ಹೇಳಿ."
“ಗಂಡ ಹೆಂಡಿರ ಜಗಳ_"
“ಉಂಡು ಮಲಗುವ ತನಕ!"


೧೧

ಕರ್ನಾಟಕವಂತೆ! ಕರ್ನಾಟಕ ರಾಜ್ಯಸ್ಥಾಪನೆಯಂತೆ!
ಎಲ್ಲರ ಬಾಯಲ್ಲೂ ಆ ಮಾತೇ. ಪತ್ರಿಕೆಗಳಲ್ಲಿ ರಾಜ್ಯ ಪುನರ್ವಿಂಗಡಣಾ
ಸಮಿತಿಯ ವರದಿ ಪ್ರಕಟವಾಗಿ ಬಿರುಗಾಳಿ ಬೀಸಿತು. ಅಲ್ಲೋಲಕಲ್ಲೋಲವಾಯಿತು
ಮಹಿಷೂರಿನ ಸರೋವರ.
ಆಗುತ್ತಿದ್ದುದು ಏನೆಂದು ಗ್ರಹಿಸಲು ಜಯದೇವ ಶಾಂತನಾಗಿದ್ದು ಪ್ರಯತ್ನಿಸಿದ.
ಆತನ ಕಣ್ಣೆದುರಲ್ಲೆ ಹೊಸ ಇತಿಹಾಸ ರೂಪುಗೊಳ್ಳುತ್ತಿತ್ತು. ಕನ್ನಡ ಮಕ್ಕಳಿಗೊಂದು
ಮನೆ. ಎರಡು ಕೋಟಿ ಕನ್ನಡಿಗರಿಗೆ ತಮ್ಮದೇ ಅದೊಂದು ರಾಜ್ಯ. ನೀರು ನಿಂತು,
ಕೆಟ್ಟು, ದುರ್ವಾಸನೆ ಹೊರಡುತ್ತಿದ್ದ ಕೆರೆಗಿನ್ನು ಹೊಸ ನೀರು. ಸರೋವರವಲ್ಲ,
ಇನ್ನಿದು ಸಾಗರ.
ಲಕ್ಕಪ್ಪಗೌಡರು ಗುಡುಗುತ್ತಲೇ ಶಾಲೆಗೆ ಬಂದರು:
“ಕಲಿಗಾಲ! ಇದು ನಮ್ಮ ರಾಷ್ಟ್ರೀಯ ನಾಯಕತ್ವದ ರಾಜಕೀಯ ದಿವಾಳಿತನ.
ಉಂಟೆ ಎಲ್ಲಾದರೂ? ಮೈಸೂರನ್ನು ನಿರ್ನಾಮಮಾಡುವುದೆಂದರೇನು? ಮಹಾ
ರಾಜರ ಕೂದಲು ಕೊಂಕಲಿ. ರಕ್ತಪಾತವಾದೀತು! ನೋಡ್ಕೊಳ್ಳಿ. ರಕ್ತಪಾತ
ವಾದೀತು! ನಾಲ್ವತ್ತೆರಡರ ಕ್ರಾಂತಿ ಸುಳ್ಳು-ಇದು ಸತ್ಯ."
"ರಾಜಭಕ್ತಿ ನಿಮ್ಮೊಬ್ಬರದೇ ಗುತ್ತಿಗೆ ಅನ್ನೋ ಹಾಗೆ ಮಾತಾಡ್ತೀರಲ್ಲಾ
ಗೌಡರೆ!” ಎಂದರು ನಂಜುಂಡಯ್ಯ, ಬಲು ಸೂಕ್ಷ್ಮವಾಗಿ ತಮ್ಮ ಸಹೋದ್ಯೋಗಿ
ಯನ್ನು ಈಕ್ಷಿಸುತ್ತ.

"ಇದರರ್ಥ ಏನು ಅನ್ನೋದು ನಮಗೆ ಗೊತ್ತಿದೆ ಸಾರ್. ನೀವು ಈ ವಿಷಯ
ಮಾತಾಡ್ಬಾರದು!"
"ಯಾಕಪ್ಪ? ಏನಾಯ್ತು?"
ಮಾತುಕತೆಯ ಹಿನ್ನೆಲೆ ಏನೆಂಬುದನ್ನು ತಿಳಿಯದೆ ಜಯದೇವ, ಗೌಡರ ಧ್ವನಿ

ನವೋದಯ

429

ಕೇళి ಕೌತುಕಪಟ್ಟ. ಎಲ್ಲಿಯೋ ತಪ್ಪು ತಿಳಿವಳಿಕೆಯಾಗಿರಬೇಕೆಂದು ಭಾವಿಸುತ್ತ
ಆತನೆಂದ:
"ರಾಜಪ್ರಮುಖರ ಹುದ್ದೆಯೇ ಇನ್ನು ಇಲ್ವಂತೆ. ನಮ್ಮ ರಾಜ ಪ್ರಮುಖ
ರೊಬ್ಬರನ್ನೇ ತೆಗೆದು ಹಾಕ್ತಾರೆ ಅನ್ನೋದು ಸರಿಯಲ್ಲ."
ನಂಜುಂಡಯ್ಯನವರಿಗೆ ಆ ವಾದ ಮೆಚ್ಚುಗೆಯಾಯ್ತು. ಆದರೆ ಗೌಡರೆಂದರು:
"ಎಲ್ಲಾ ಸೋಗು ಸಾರ್! ನಂಬಬೇಡಿ!"
"ವರದೀಲಿ ಸ್ಪಷ್ಟವಾಗಿಯೇ ಇದೆಯಲ್ಲ. ನಿನ್ನೆ ರಾತ್ರೆ ಅದರ ಸಾರಾಂಶವನ್ನು
ಎರಡು ಸಾರೆ ಓದಿದೆ. ಮೈಸೂರು ಇಲ್ಲಿಯೇ ಇರುತ್ತೆ. ಇದನ್ನೂ ಒಳಗೊಂಡು
ಒಂದು ವಿಸ್ತಾರವಾದ ರಾಜ್ಯ ಬರುತ್ತೆ, ಅಷ್ಟೆ."
"ಇಲ್ಲಿಯೇ ಇರೋದು ಅಂದರೇನು? ನಾವು ಉಳಿಸಿರೋ ಸಂಪತ್ತನ್ನ
ಇನ್ಯಾರೋ ಬಂದು ದೋಚ್ತಾರೆ."
"ಅದರರ್ಥವೇನು ಲಕ್ಕಪ್ಪಗೌಡರೇ? ಇನ್ಯಾರು ಬರ್ತ್ತಾರೆ ಇಲ್ಲಿಗೆ? ನಮ್ಮದೇ
ಅಲ್ವೆ ರಾಜ್ಯ? ಕನ್ನಡ ರಾಜ್ಯ ಅಲ್ವೆ?"
"ಕನ್ನಡ! ಆ ಧಾರವಾಡದವರು ಮಾತಾಡೋ ಭಾಷೇನ ಕನ್ನಡ
ಅಂತೀರೇನು?"
"ಉಚ್ಚಾರ-ಪದಗಳು ಸ್ವಲ್ಪ ಭಿನ್ನವಾಗಿರ್ತವೆ ಅಷ್ಟೆ. ಮೈಸೂರು ಸಂಸ್ಥಾನ
ದಲ್ಲೇ ಇಲ್ವೆ? ಮಲೆನಾಡಿನೋರು ಮಾತಾಡೋದು ಒಂದು ತರಹೆ ಕನ್ನಡ-ಬಯಲು
ಸೀಮೆಯವರದು ಒಂದು ತರಹೆ ಕನ್ನಡ."
"ಭಾಷೆ ಒಂದೇ ಅಲ್ಲ ಸಾರ್. ಅವರ ಸಂಸ್ಕೃತೀನೆ ಬೇರೆ, ನಮ್ಮ ಸಂಸ್ಕೃತೀನೇ
ಬೇರೆ."
ಆ ವಾದ ಜಯದೇವನಿಗೆ ವಿಚಿತ್ರವಾಗಿ ತೋರಿತು.
"ಹ್ಯಾಗಂತೀರಾ? ಕನ್ನಡ ನಾಡಿನ ಪ್ರಾಚೀನ ಇತಿಹಾಸವನ್ನು ನೋಡಿದ್ರೆ,
ಭಾರತೀಯ ಸಂಸ್ಕೃತಿಯ ಆವರಣದಲ್ಲಿ ಕನ್ನಡ ಸಂಸ್ಕೃತಿ ಒಂದು ಬೆಳೆದು ಬಂದದ್ದನ್ನ
ಗುರುತಿಸ್ಬಹುದು. ಮೈಸೂರು ಸಂಸ್ಕ್ರತೀಂತ ಪ್ರತ್ಯೇಕವಾಗಿ ಯಾವುದನ್ನೂ
ಕಾಣೆನಪ್ಪ."
"ನಾವು ಅನ್ನ ತಿಂತೀವಿ. ಅವರು ಜೋಳದ ರೊಟ್ಟಿ, ತಿಂತಾರೆ. ನಾವೂ ಅವರೂ
ಬೇರೆ ಬೇರೆ ಅನ್ನೋದು ಅಷ್ಟರಿಂದಲೇ ಗೊತ್ತಾಗೊಲ್ವೆ?"
"ಇದೆಲ್ಲಾ ಯಾರೂ ಒಪ್ಪೋ ಮಾತಲ್ಲ!"
ಈ ಸಂಭಾಷಣೆಯನ್ನು ಸುಮ್ಮನೆ ಕೇಳುತ್ತ ಸಿಗರೇಟು ಸೇದುತ್ತ ಕುಳಿತಿದ್ದ
ನಂಜುಂಡಯ್ಯ, ಸಿಗರೇಟನ್ನು ಭಸ್ಮಕುಂಡಕ್ಕೆ ಚುರುಟಿ ಹೇಳಿದರು:
"ನೀವು ವರದೀನ ಯಾವುದರಲ್ಲಿ ಓದಿದಿರಿ ಜಯದೇವ್? ಕನ್ನಡ ಪತ್ರಿಕೆ
ಯಲ್ಲೋ - ಇಂಗ್ಲಿಷಿನಲ್ಲೋ?"

430

ಸೇತುವೆ

"ಕನ್ನಡದಲ್ಲಿ."
"ನಾನು ಇಂಗ್ಲಿಷಿನಲ್ಲೋದಿದೆ. ಅದರಲ್ಲಿ ಜಾಸ್ತಿ ವಿವರ ಇತ್ತು."
ಜಯದೇವ ಸಹಜವಾದ ಕುತೂಹಲದಿಂದ ಕೇಳಿದ:
"ಏನಿತ್ತು?"
ಗೌಡರು, ಸಿಗಿದು ನುಂಗುವ ಕಣ್ಣುಗಳಿಂದ ನಂಜುಂಡಯ್ಯನವರನ್ನು
ನೋಡಿದರು.
“ಕರ್ನಾಟಕ ಪ್ರಾಂತ ರಚನೆಗೆ ಮೈಸೂರಿನ ಕೆಲವರ ವಿರೋಧ ಇದೆ ಅನ್ನೋ
ದನ್ನ ಆ ತ್ರಿಮೂರ್ತಿಗಳು ಪ್ರಸ್ತಾಪಿಸಿದ್ದಾರೆ."
"ಹೌದೆ?"
“ಹೂಂ. ಮೈಸೂರು ಲಿಂಗಾಯತರ ರಾಜ್ಯವಾದೀತೂಂತ ಆ ವಿರೋಧಿಗಳಿಗೆ
ಭಯ_ಅಂದಿದ್ದಾರೆ."
“ಓ!" ಎಂದ ಜಯದೇವ.
ಲಕ್ಕಪ್ಪಗೌಡರು ಸ್ವರವೇರಿಸಿ ನುಡಿದರು:
"ಹೌದು ಸ್ವಾಮೀ. ನನಗೂ ಇಂಗ್ಲಿಷು ಬರುತ್ತೆ. ನಾನೂ ಓದಿದೀನಿ. ಹೇಳಿ."
“ಆದರೆ, ಒಕ್ಕಲಿಗರಲ್ಲಿರೋ ಈ ಭಯ ಸರಿಯಲ್ಲ: ಹೊಸ ರಾಜ್ಯದಲ್ಲಿ
ಯಾವುದೇ ಜಾತಿಗೂ ಬಹುಮತವಿರೋದಿಲ್ಲ_ಅಂತ ಅವರು ಸ್ಪಷ್ಟಪಡಿಸಿದ್ದಾರೆ."
“ಅಂಕೆ ಸಂಖ್ಯೇನೂ ಒದಗಿಸಿದಾರೇಂತ ಹೇಳಿ!"
ನಂಜುಂಡಯ್ಯ ನೇರವಾಗಿ ಲಕ್ಕಪ್ಪಗೌಡರನ್ನೆ ಇದಿರಿಸಿ ಕೇಳಿದರು:
“ಯಾಕೆ? ಆ ವಿವರಣೇನ ನೀವು ಒಪ್ಪೋದಿಲ್ವೊ?"
"ಇಲ್ಲ ಸ್ವಾಮೀ. ತಾತ ಮುತ್ತಾತನ ಕಾಲದಿಂದ ಭದ್ರವಾಗಿರೋ ಮೈಸೂರು
ರಾಜ್ಯವನ್ನ ಕದಲಿಸೋದು ಯಾವನಿಂದಲೂ ಸಾಧ್ಯವಿಲ್ಲ!"
ಜಯದೇವನೆಂದ:
"ಪಾಳೆಯಗಾರ ಪದ್ಧತಿಯಿಂದ ಜನರಿಗೆ ಹಿತವಿಲ್ಲಾಂತ ಇತಿಹಾಸ ಹೇಳುತ್ತೆ.
ಸಮಾಜವಾದವೇ ನಮ್ಮ ಗುರೀಂತ ಒಪ್ಕೊಂಡ್ಮೇಲೆ__"
ಗೌಡರೆಂದರು:
"ಒಂದಕ್ಕಿನ್ನೊಂದು ಸೇರಿಸ್ಬೇಡಿ ಜಯದೇವರೆ. ಸಮಾಜವಾದವೇ ಬೇರೆ.
ಮೈಸೂರಿನ ಪ್ರಶ್ನೆಯೇ ಬೇರೆ. ಸಮಾಜವಾದ ಬೇಕೂಂತ ನೆಹರೂ ಹೇಳ್ಕೊಳ್ಲಿ.
ನಮಗೆ ಮಾತ್ರ ನಮ್ಮ ಮಹಾರಾಜರು ಬೇಕು."
"ನೆಹರೂ ಮಾತನ್ನ ಅಷ್ಟು ಹಗುರವಾಗಿ ಕಾಣೋದು ಸರಿಯಲ್ಲ ಅನಿಸುತ್ತೆ,"
ಎಂದ ಜಯದೇವ.
"ಹಗುರವೊ ಭಾರವೊ. ಈ ಕರ್ನಾಟಕ ರಾಜ್ಯಸ್ಥಾಪನೆ ಖಂಡಿತ ಆಗೋದಿಲ್ಲ."
ನಂಜುಂಡಯ್ಯ ನಕ್ಕರು.

ನವೋದಯ

431

“ಆಗಲಿ ಗೌಡರೆ, ನಿಮ್ಮ ರಾಜ್ಯವೇ ಉಳೀಲಿ!"
ಈ ಮಾತಿಗೆ ಪ್ರತಿಭಟನೆ ಸೂಚಿಸಲು ಗೌಡರು ಬಾಯಿ ತೆರೆದರು. ಆದರೆ
ಆಗಲೆ ಜವಾನ ಎರಡನೆಯ ಗಂಟೆಯನ್ನೂ ಬಾರಿಸಿದ.
"ಎರಡು ಬೆಲ್ಲೂ ಅಗ್ಹೋಯ್ತೇನು!" ಎನ್ನುತ್ತ ಗೌಡರು, ತರಗತಿಗೆ ಹೋಗ
ಲೆಂದು ಎದ್ದರು.
...ಆದರೆ ಆ ಚರ್ಚೆ ಅಲ್ಲಿಗೇ ನಿಲ್ಲಲಿಲ್ಲ. ಗುಪ್ತಗಾಮಿನಿಯಾಯಿತು. ಬೂದಿ
ಮುಚ್ಚಿಕೊಂಡೇ ಕೆಂಡ ಅತ್ತಿತ್ತ ಸರಿಯಿತು. ಸಮಾಜವನ್ನೇ ಸಂಸ್ಥಾನವನ್ನೇ ಕಲಕಿದ
ಪ್ರಶ್ನೆ, ಅಧ್ಯಾಪಕರ ಕೊಠಡಿಯನ್ನೂ ಮಲಿನಗೊಳಿಸಿತು.
....ನಂಜುಂಡಯ್ಯನವರ ನಡಿಗೆಯಲ್ಲಿ ಹಿಂದಿಗಿಂತ ಹೆಚ್ಚು ಆತ್ಮವಿಶ್ವಾಸವಿದ್ದು
ದನ್ನು ಜಯದೇವ ಕಂಡ. ಹೈಸ್ಕೂಲು ಸ್ಥಾಪನೆಯ ಯೋಜನೆಯನ್ನು ಸಮರ್ಪಕ
ಗೊಳಿಸುವುದರಲ್ಲೆ ಅವರು ನಿರತರಾದರು.
ಒಂದು ದಿನ ಜಯದೇವನೊಡನೆ ಅವರೆಂದರು:
"ಮುಂದಿನ ಸರ್ವೋದಯ ದಿವಸ ಶಂಕುಸ್ಥಾಪನೆ ಮಾಡಿಸ್ಬೇಕು. ಕಟ್ಟಡ
ವಾಗೋದು ಎಷ್ಟರ ಕೆಲಸ? ಹೊಸ ರಾಜ್ಯ ಶುರುವಾಗೋ ಹೊತ್ತಿಗೆ ನಮ್ಮ
ಹೈಸ್ಕೂಲು ಸಿದ್ಧವಾಗಿರುತ್ತೆ."
ಬೇರೊಂದು ದಿನ, ಒಂದು ಕರಡು ಕಾಗದವನ್ನು ಜಯದೇವನ ಕೈಗೆ ಅವರು
ಕೊಟ್ಟರು. ನಿಧಿಗಾಗಿ ವಿನಂತಿ ಬರೆದುದು ದೇಶೀಯ ಇಂಗ್ಲಿಷಿನಲ್ಲಿ. ಆ ಊರಿಗೆ
ಹೈಸ್ಕೂಲು ಅಗತ್ಯವೆಂಬುದನ್ನು ಮನಗಾಣಿಸಿಕೊಟ್ಟು, ಇಪ್ಪತ್ತು ಸಾವಿರ ರೂಪಾಯಿ
ಗಳ ಕಟ್ಟಡದ ನಿಧಿಗಾಗಿ ಕರ್ನಾಟಕದ ಕೊಡುಗೈ ದೊರೆಗಳನ್ನು ಪ್ರಾರ್ಥಿಸಲಾಗಿತ್ತು.
"ಕರ್ನಾಟಕ ಅನ್ನೋ ಪದವನ್ನೇ ಉಪಯೋಗಿಸಿದೀನಿ," ಎಂದರು
ನಂಜುಂಡಯ್ಯ.
"ಇರಲಿ. ಅದಕ್ಕೇನು?"
"ಕೆಲವರು ಸಿಟ್ಟಾಗ್ತಾರೇಂತಿಟ್ಕೊಳ್ಳಿ."
ಆ ಮಾತಿಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ ಜಯದೇವ ಕೇಳಿದ:
"ಇಪ್ಪತ್ತು ಸಾವಿರ ರೂಪಾಯಿ ಬೇಕಾಗುತ್ತೆ, ಅಲ್ವೆ?"
"ಅಷ್ಟು ಎಲ್ಲಿಗೆ ಸಾಕು? ಉಳಿದಿರೋದನ್ನ ಸರಕಾರದಿಂದ ಕೇಳಿ ತಗೊಳ್ಳೋ
ಣಾಂತಿದೀವಿ. ನಾಳೆ ಬರೋ ಸರಕಾರವಂತೂ ನಮಗೆ 'ಇಲ್ಲ'ಅನ್ನೋದಿಲ್ಲ."
ಹಾಕಿದ್ದ ಸಹಿಗಳಲ್ಲಿ ನಂಜುಂಡಯ್ಯನ ಹೆಸರಿರಲಿಲ್ಲ.
ಅದನ್ನು ಕುರಿತು ಜಯದೇವ ಕೇಳಿದಾಗ ಅವರೆಂದರು:
"ನಾನು ಸರಕಾರಿ ನೌಕರ. ಈ ಕೆಲಸಕ್ಕೆ ರಾಜಿನಾಮೆ ಕೊಡೋವರೆಗೂ ಅಲ್ಲಿ
ಹೆಸರು ಹಾಕೋ ಹಾಗಿಲ್ಲ. ಅವಸರವೇನಂತೆ? ನಿಧಾನವಾಗಿ ಮಾಡಿದರಾಯ್ತು."
ನಾರಾಯಣಗೌಡ ಎಂಬ ಹೆಸರೊಂದಿತ್ತು ಆ ಕರಡು ಕಾಗದದಲ್ಲಿ.

432

ಸೇತುವೆ

"ಇವರು ಯಾರು?"
"ಸಮೀಪದ ಹಳ್ಳೀಲಿದಾರೆ. ಒಬ್ಬ ದೊಡ್ಡ ಜಮೀನ್ಥಾರರು. ಹೆಜ್ಜೆ ಹೆಜ್ಜೆಗೂ
ನಮ್ಮ ಪ್ರಯತ್ನಕೈ ಕಲ್ಲು ಹಾಕ್ತಾ ಬಂದಿರೋದು ಅವರೇನೇ."
"ಇಪ್ಪತ್ತು ಸಾವಿರ ಸಂಗ್ರಹವಾಗುತ್ತೆ ಅಂತೀರಾ?"
"ಧಾರಾಳವಾಗಿ. ಒಂದು ಸಲ ನಾವು ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋಗಿ
ಬಂದರೆ ಸಾಕು. ನಿಮಗೆ ಗೊತ್ತಿಲ್ಲ ಜಯದೇವ್. ಅಲ್ಲಿಯ ಜನ ಧಾರಾಳಿಗಳು."
"ಸಂತೋಷ ಸಾರ್. ಒಟ್ಟಿನಲ್ಲಿ ಹೈಸ್ಕೂಲು ಆಗುತ್ತೆ ಅನ್ನೋದು ಸಮಾ
ಧಾನದ ವಿಷಯ."
"ನಾನೇನೋ ಅದನ್ನ ನನ್ನ ಜೀವನದ ಧ್ಯೇಯವಾಗಿಯೆ ಇಟ್ಕೊಂಡಿದೀನಿ,"
ಎಂದರು ನಂಜುಂಡಯ್ಯ.
ಕರಡು ಕಾಗದವನ್ನು ಜಾಗರೂಕತೆಯಿಂದ ಜಯದೇವ ಮಡಚುತ್ತಿದ್ದುದನ್ನು
ಕಂಡು ಅವರೆಂದರು:
"ಇದರದೊಂದು ಕನ್ನಡ ಭಾಷಾಂತರ ಮಾಡ್ಕೊಡಿ ಜಯದೇವ್. ನನ್ನ ಕನ್ನಡ
ಅಷ್ಟು ಚೆನ್ನಾಗಿಲ್ಲ ಅನ್ನೋದು ನಿಮಗೆ ಗೊತ್ತೇ ಇದೆ."
"ಆಗಲಿ ಸಾರ್. ಅದಕ್ಕೇನು?"
ಆ ರಾತ್ರೆ ಒಳ್ಳೆಯ ಕನ್ನಡ ಭಾಷಾಂತರವನ್ನು ಜಯದೇವ ಸಿದ್ಧಗೊಳಿಸಿದ:
ಅಷ್ಟೇ ಅಲ್ಲ, ಇಂಗ್ಲಿಷ್ ಕರಡಿನಲ್ಲಿ ಮುಖ್ಯವೆಂದು ತೋರಿದ ಕೆಲ ತಪ್ಪುಗಳನ್ನೂ
ತಿದ್ದಿದ.

ತರ್ಜುಮೆಯೊಡನೆ ಕರಡುಪ್ರತಿಯನ್ನು ಹಿಂತಿರುಗಿಸಿದಾಗ, ಕಂಡೂ ಕಾಣದಂತೆ
ಮಾಡಿದ್ದ ತಿದ್ದುಪಡಿಗಳ ವಿಷಯ ಆತ ಹೇಳಲಿಲ್ಲ.
...ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿ, ಜಯದೇವನನ್ನು ವಿಲೀನ ವಿರೋಧಿ
ಯಾಗಿ ಮಾಡಲು ಲಕ್ಕಪ್ಪಗೌಡರು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ದಿನಪತ್ರಿಕೆಯಿಂದ
ಸ್ಛೂರ್ತಿ ಪಡೆಯುತ್ತಿದ್ದ ಅವರ ವಾದಗಳು, ಪ್ರತಿ ದಿವಸವೂ ಏಕನಾದವನ್ನೆ ಹೊರಡಿ
ಸಿದುವು.
_"ಡಿ.ವಿ.ಜಿ. ಕೂಡ ಹೇಳಿದಾರಲ್ರೀ."
_"ದೇಭರ್ಗೇನ್ರಿ ಗೊತ್ತು ನಮ್ಮ ಪರಿಸ್ಥಿತಿ?"
ಜಯದೇವನ ಸಹನೆಯನ್ನೂ ಗಾಂಭೀರ್ಯವನ್ನೂ ಯಾವುದೂ ಕದಡದೆ
ಇದ್ದಾಗ ಗೌಡರೆಂದರು:
"ಉತ್ತರ ಕರ್ನಾಟಕದಲ್ಲಿ ಈ ಜನ ಬ್ರಾಹ್ಮಣರಿಗೆ ಎಂಥ ಹಿಂಸೆ ಕೊಡ್ತಾರೆ
ಅನ್ನೋದು ನಿಮಗೆ ತಿಳೀದು ಸಾರ್."
ಆ ಒಂದು ಮಾತಿಗೆ ಜಯದೇವ ಉತ್ತರವಿತ್ತ:
"ನಾನು ಬ್ರಾಹ್ಮಣನಲ್ಲ, ಯಾವ ಜಾತಿಯವನೂ ಅಲ್ಲ. ಒಂದು ಪಂಗಡ

ನವೋದಯ

433

ಇನ್ನೊಂದು ಪಂಗಡಕ್ಕೆ ಹಿಂಸೆ ಮಾಡಿದರೆ ಅದು ಸರ್ವಥಾ ತಪ್ಪು. ಆದರೆ ಈ ಮಾತು
ಗಳೆಲ್ಲ ಇಪ್ಪತ್ತನೆಯ ಶತಮಾನಕ್ಕೆ ಭೂಷಣವಾಗೋದಿಲ್ಲಾಂತ ನನ್ನ ಅಭಿಪ್ರಾಯ.
ಪ್ರಜಾಪ್ರಭುತ್ವ ತತ್ತ್ವ ನಾವು ಒಪ್ಪಿಕೊಂಡ್ಮೇಲೆ ಇಂಥ ಮಾತಿಗೆಲ್ಲ ಅವಕಾಶವಿಲ್ಲ."
"ನಿಮಗೀಗ ಗೊತ್ತಾಗೋದಿಲ್ಲ ಜಯದೇವರೆ. ಅನುಭವಿಸಿದ್ಮೇಲೆ ಹೇಳ್ತೀರಾ,
ನೋಡ್ಕೊಳ್ಳಿ. ಈ ಹೈಸ್ಕೂಲು ಒಂದಾಗ್ಲಿ: ಅಲ್ಲಿ ನೀವು ಕೆಲಸಮಾಡಿ. ಆಮೇಲೆ
ಹೇಳುವಿರಂತೆ."
"ಅದಕ್ಕೂ ಇದಕ್ಕೂ ಯಾಕೆ ಸಂಬಂಧ ಕಲ್ಪಿಸ್ತೀರಾ ಸುಮ್ನೆ."
"ಸಿಟ್ಟಾಗ್ಬೇಡಿ ಸಾರ್. ನಿಮ್ಮಂಥ ಬುದ್ಧಿವಂತರೂ ಹೀಗೆ ಮೋಸ ಹೋಗ್ತೀರ
ಲ್ಲಾಂತ ನನಗೆ ಬೇಸರ."
...ಒಂದು ಕತೆಯನ್ನೂ ನಾಟಕವನ್ನು ತಂದೊಪ್ಪಿಸಿ ಹೋಗಿದ್ದ ತಿಮ್ಮಯ್ಯ
ನವರು ಬಹಳ ದಿವಸಗಳಿ೦ದ ಬ೦ದಿರಲಿಲ್ಲ. ಕೊನೆಗೊಮ್ಮೆ ಭಾನುವಾರ ದಿನ ಅವರು
ಮುಖತೋರಿಸಿದಾಗ, ಅವರ ಕೃತಿಗಳ ವಿಷಯ ಮಾತನಾಡಿದ ಬಳಿಕ, ಹೊಸ ರಾಜ್ಯ
ಸ್ಥಾಪನೆಯ ಪ್ರಸ್ತಾಪವನ್ನು ಜಯದೇವ ಮಾಡಿದ.
"ಯಾವುದೋ ಒಂದು ಪತ್ರಿಕೇಲಿ ನಾನೂ ಸ್ವಲ್ಪ ಓದಿದೆ," ಎಂದರು
ತಿಮ್ಮಯ್ಯ. ಅವರಲ್ಲಿ ಉದ್ವೇಗವಿರಲಿಲ್ಲ. ಲಕ್ಕಪ್ಪಗೌಡರಲ್ಲಿ ಕಂಡು ಬಂದಿದ್ದಂತಹ
ಆಕ್ರೋಶವೂ ಇರಲಿಲ್ಲ. ನಿಧಾನವಾಗಿ ಅವರೆಂದರು:
"ಕರ್ನಾಟಕ ರಾಜ್ಯವಾದರೆ ಉಪಾಧ್ಯಾಯರ ಸಂಬಳ ಜಾಸ್ತಿ ಮಾಡ್ತಾರಂತೊ?"
"ಒಳ್ಳೇ ಪ್ರಶ್ನೆ ಕೇಳಿದಿರಿ!"
“ಒಂದು ಗಾದೆ ಇದೆ_ಯಾವ ಅರಸು ರಾಜ್ಯವಾಳಿದರೇನು? ರಾಗಿ ಬೀಸೋದು
ತಪ್ಪುತ್ಯೆ?_ಅಂತ."
"ಸ್ವಾತಂತ್ಯ್ರ ಬಂದ ಮೇಲೆ ಹಾಗೆ ಹೇಳೋಕಾಗುತ್ತಾ?"
"ಒಳಗಿನ ಮನಸ್ಸು ಹೇಳ್ಬೇಡ ಅನ್ನುತ್ತೆ. ಆದರೆ ನಮ್ಮ ಪುಢಾರಿಗಳನ್ನ
ನೋಡಿದಾಗ_ಹೋಗಲಿ ಬಿಡಿ, ಯಾಕೆ ಆ ವಿಷಯ?"
"ನಮ್ಮ ಶಾಲೆಯಲ್ಲಂತೂ ದಿನಾ ಇದೇ ಚರ್ಚೆ."
"ಸದ್ಯಃ ಹುಡುಗರಿಗೆ ಇದೊಂದೂ ಅರ್ಥವಾಗೋದಿಲ್ವಲ್ಲ. ಅವರು ಮಹಾ
ರಾಜರಿಗೂ ಜೈ ಹೇಳ್ತಾರೆ. ಕರ್ನಾಟಕ ಮಾತೆಗೂ ಜೈ ಹೇಳ್ತಾರೆ!"
"ನನಗೆ ಏನನಿಸುತ್ತೆ ಗೊತ್ತೆ? ಕೆಟ್ಟು ಹೋಗಿರೋದು ನಮ್ಮ ಪೀಳಿಗೇನೇ.
ಈಗ ಚಿಕ್ಕವರಾಗಿರೋ ಹುಡುಗರು ಪ್ರಾಯಕ್ಕೆ ಬಂದಾಗ ಪರಿಸ್ಥಿತಿ ಬಹಳ ಮಟ್ಟಿಗೆ
ಸುಧಾರಿಸೀತು."
"ನೀವು ಯಾವಾಗಲೂ ಆಶಾವಾದಿಯೇ. ಆಗಲಿ ಸ್ವಾಮೀ, ಹಾಗೇ ಆಗಲಿ.
ಒಂದೇ ಭಾಷೇನ ಆಡೋ ಜನರದೇ ಒಂದು ರಾಜ್ಯವಾದರೆ, ಬೆಳವಣಿಗೆಗೆ ಅವಕಾಶ

55

434

ಸೇತುವೆ

ವಿರುತ್ತೇಂತ ಒಪ್ಕೋತೀನಿ. ಆದರೆ ನಮ್ಮಂಥ ಸಣ್ಣ ಮನುಷ್ಯರನ್ನ ಭಾರದೋರು
ತುಳಿದು ಅಪ್ಪಚ್ಚಿ ಮಾಡಬಾರದು, ಅಷ್ಟೆ. ನಮ್ಮ ಮೇಲೇನಾದರೂ ಸವಾರಿ ಮಾಡಿ
ದರೆ, ಒಕ್ಕಲಿಗರ ರಾಜ್ಯವೂ ಇರೋದಿಲ್ಲ, ಲಿಂಗಾಯತರ ರಾಜ್ಯವೂ ಇರೋದಿಲ್ಲ;
ನಾವೆಲ್ಲ ಸತ್ತು ಪಿಶಾಚಿಗಳಾಗಿ ಹುಟ್ಟಿ, ಭೂತರಾಜ್ಯ ಸ್ಥಾಪಿಸ್ತೇವೆ!"
ಆ ಮಾತುಗಳನ್ನು ಮೆಲುಕು ಹಾಕುತ್ತ ಜಯದೇವ ಹೇಳಿದ:
"ಭೂತರಾಜ್ಯ ಅಂತ ಒಂದು ನಾಟಕವನ್ನೇ ಬರೀಬಹುದು, ಅಲ್ವೆ? ಸತ್ತಿರೋ
ಉಪಾಧ್ಯಾಯರೆಲ್ಲ ಎದ್ದು ಬಂದು, ಕಾಲಗತಿ ವಿಷಯ ಚರ್ಚೆ ಮಾಡೋದು..."
"ಚೆನ್ನಾಗಿರುತ್ತೆ. ನಾನು ಭೂತವಾಗೋಕ್ಮುಂಚೆ ಅಂಥದೊಂದು ಖಂಡಿತ ಬರೀ
ತೀನಿ."
ಎಷ್ಟೋ ದಿನಗಳ ಬೇಸರ ಕಳೆಯಲೆಂದು ಬಂದಿದ್ದ ತಿಮ್ಮಯ್ಯ, ಬಹಳ ಹೊತ್ತು
ಜಯದೇವನ ಮನೆಯಲ್ಲೆ ಹರಟೆ ಹೊಡೆಯುತ್ತ ಕುಳಿತರು.
ದಂಪತಿ ಒತ್ತಾಯಿಸಿದರೆಂದು ಅವರು ಊಟಕ್ಕೆ ಅಲ್ಲಿಯೇ ಎದ್ದರು.
ಆ ದಿನವೆಲ್ಲ ತನ್ನೆದುರು ತಿಮ್ಮಯ್ಯ ನಶ್ಯ ಹಾಕಿಕೊಂಡಿರಲಿಲ್ಲವೆಂಬುದನ್ನು
ಗಮನಿಸಿದ ಜಯದೇವ ಕೇಳಿದ:
"ನಶ್ಯದ ಬುರುಡೆ ತಂದೇ ಇಲ್ವೆ ಇವತ್ತು?"
"ಇಲ್ಲ, ಮರೆತ್ಬಿಟ್ಟೆ."
ಜಯದೇವನಿಗೇನೋ ಸಂದೇಹ ಬಂದು ತಿಮ್ಮಯ್ಯನವರ ಕೋಟಿನ ಜೇಬನ್ನು
ಮುಟ್ಟಿ ನೋಡಿದ. ಡಬ್ಬ ಅಲ್ಲಿತ್ತು.
"ಇದೇನಿದು?"
ಸುಳ್ಳು ಹೇಳಿ ಸಿಕ್ಕಿಬಿದ್ದ ಮಗುವಿನಂತಿತ್ತು ತಿಮ್ಮಯ್ಯನವರ ಮುಖ.
"ಖಾಲಿ ಡಬ್ಬ," ಎಂದರು ಅವರು. ಮತ್ತೂ ಒಂದು ಮಾತು ಸೇರಿಸಿದರು:
"ಡಬ್ಬವೂ ಖಾಲಿ. ಜೇಬೂ ಖಾಲಿ."
"ನಡೀರಿ, ಅಂಗಡಿ ಬೀದಿಗೆ ಹೋಗೋಣ," ಎಂದ ಜಯದೇವ.
ಅಲ್ಲಿ, ಒಂದು ತೊಲೆ ಹೊಸ ನಶ್ಯ ಕಟ್ಟಿಸಿಕೊಳ್ಳುತ್ತಿದ್ದಂತೆ ತಿಮ್ಮಯ್ಯ
ಹೇಳಿದರು:
"ಹುಬ್ಬಳ್ಳಿ ಕಡೆ ಭರ್ಜರಿಯಾದ ನಶ್ಯ ತಯಾರಿಸ್ತಾರೆ."


೧೨

ಜಿಲ್ಲೆಯ ಮಾಧ್ಯಮಿಕ ಶಾಲಾ ಉಪಾಧ್ಯಾಯರ ಸಮ್ಮೇಳನವನ್ನು ಪಕ್ಕದ
ತಾಲ್ಲೂಕು ಕೇಂದ್ರದವರು ಕರೆದಿದ್ದರು. ವರ್ಷಕ್ಕೊಮ್ಮೆಯೊ ಎರಡು ವರ್ಷಗಳಿ

ನವೋದಯ

435

ಗೊಮ್ಮೆಯೊ ನಡೆಯುವ ಸಮ್ಮೇಳನ. ಪ್ರತಿನಿಧಿಯಾಗಿ ಹೋಗಲು ನಂಜುಂಡಯ್ಯ
ನವರಿಗೆ ಇಷ್ಟವಿರಲಿಲ್ಲ.
"ನೀವು ಹೋಗ್ತೀರಾ ಜಯದೇವ್?" ಎಂದು ಅವರು ಕೇಳಿದರು.
ಒಂದೇ ದಿವಸದ ಸಮ್ಮೇಳನ; ಬೆಳಗ್ಗೆ ಹೋಗಿ ಮಾರನೆಯ ಮಧ್ಯಾಹ್ನದೊಳಗೆ
ಹಿಂತಿರುಗಬಹುದು; ಸುನಂದೆಯನ್ನು ಒಪ್ಪಿಸುವುದು ಕಷ್ಟವಾಗದು_ಎಂದೆಲ್ಲ
ಯೋಚಿಸಿ ಜಯದೇವನೆಂದ:
"ಲಕ್ಕಪ್ಪಗೌಡರು ಹೋಗೋಲ್ವಂತೇನು?"
ನಂಜುಂಡಯ್ಯ ನಸುನಕ್ಕು ಹೇಳಿದರು:
"ನೋಡಿ, ಬರ್ತಿದಾರೆ. ಕೇಳಿಬಿಡೋಣ."
ತಾವಾಗಿ ವಂದಿಸುವ ಶಿಷ್ಟಾಚಾರಕ್ಕೆ ಎಂದೋ ಎಳ್ಳುನೀರು ಬಿಟ್ಟಿದ್ದ ಲಕ್ಕಪ್ಪ
ಗೌಡರು, ಕಪಾಟದ ಹಿಂಬದಿಯಲ್ಲಿ ಕೊಡೆಯನ್ನು ತೂಗ ಹಾಕಿ, ಕುರ್ಚಿಯ ಮೇಲೆ
ಕುಳಿತರು.
ನಂಜುಂಡಯ್ಯನವರು ಸಮ್ಮೇಳನದ ವಿಷಯ ತಿಳಿಸಿದಾಗ ಗೌಡರೆಂದರು:
"ಹೋದ ಸಲ ಹೋಗಿದ್ನೆಲ್ಲ. ಅಷ್ಟು ಸಾಕು. ಬಸ್ಚಾರ್ಜು ಕೈಯಿಂದ
ಹಾಕೋಕೆ ನಾನೇನು ತಯಾರಿಲ್ಲ."
ತೃಪ್ತಿಯಾಯ್ತು ತಾನೆ?_ಎಂಬರ್ಥದಲ್ಲಿ ಜಯದೇವನನ್ನು ನ೦ಜು೦ಡಯ್ಯ
ನೋಡಿದರು. ಬಳಿಕ ಅವರೆಂದರು:
"ಈವರೆಗೆ ಒಂದು ಜಿಲ್ಲಾ ಸಮ್ಮೇಳನವನ್ನೂ ಜಯದೇವರು ನೋಡಿಲ್ಲ_"
"ಅವರೇ ಹೋಗಿ ಬರ್ಲಿ," ಎಂದು ಲಕ್ಕಪ್ಪಗೌಡರು ಮಾತು ಮುಗಿಸಿದರು.
...ಸುನಂದಾ ತಾನೂ ಬರುವೆನೆಂದಳು. ಆ ಊರಲ್ಲಿ ಒದಗಬಹುದಾದ
ವಸತಿಯ ತೊಂದರೆಯನ್ನು ವಿವರಿಸಿದ ಬಳಿಕ ಒಬ್ಬನೆ ಹೋಗಲು ಸಮ್ಮತಿ
ದೊರೆಯಿತು.
ಆದರೂ ಆಕೆ ಕೇಳಿದಳು:
"ರಾತ್ರೆಯೇ ವಾಪಸು ಬಂದು ಬಿಡೋಕೆ ಆಗೊಲ್ವೇನು?"
"ಸಮ್ಮೇಳನ ಮುಗಿಯೋದು ಎಷ್ಟು ಹೊತ್ತಾಗುತ್ತೊ? ಬಸ್ಸು ಸಿಗಬೇಕಲ್ಲ.
ಭಾನುವಾರ ಸಮ್ಮೇಳನ. ಸೋಮವಾರ ಬೆಳಗ್ಗೆಯೆ ಅಲ್ಲಿಂದ ಹೊರಟ್ಬಿಡ್ತೀನಿ.
ರಾತ್ರೆ ಹೊತ್ತು ಇಲ್ಲಿ ಮಲಗೋಕೆ ಪಕ್ಕದ್ಮನೆ ಅಜ್ಜಮ್ಮನ್ನ ಕೇಳ್ಕೊಂಡರಾಯ್ತು."
"ಹೂಂ."
ಸಮ್ಮೇಳನದ ವಿವರವನ್ನೂ ತಿಳಿಯುವ ಆಸೆ ಆಕೆಗೆ.
"ಎಷ್ಟು ಜನ ಬರ್ತಾರೆ ಸಮ್ಮೇಳನಕ್ಕೆ?"
"ಒಂದಿನ್ನೂರು ಮುನ್ನೂರು ಜನ ಬರಬಹುದೋ ಏನೋ."
“ಮೇಡಮ್ಗಳೂ ಬರ್ತಾರೇನು?"

436

ಸೇತುವೆ

"ಗೊತ್ತಿಲ್ಲ! ನೀನ್ಯಾಕೆ ಹೆದರ್ಕೋತಿಯಾ?"
ಸುನಂದಾ ಮುಗುಳು ನಕ್ಕಳು.
ಜಯದೇವ ಹೊರಡುವ ಹಿಂದಿನ ದಿನ ನಂಜುಂಡಯ್ಯ ಹೇಳಿದರು:
"ಸೋಮವಾರ ಅರ್ಧ ದಿನವೂ ರಜಾ ಬೇಕಾಗೊಲ್ಲ. ಶಾಲೆ ಶುರುವಾಗೋದ
ರೊಳಗೇ ನೀವು ಬಂದ್ಬಿಡ್ತೀರಾ."
"ಹೌದು."
"ನೀವು ಕೆಲಸಕ್ಕೆ ಸೇರಿದ್ಮೇಲೆ ಒಂದು ದಿವಸವೂ ರಜಾ ತಗೊಂಡಿಲ್ವಲ್ಲಾ ಜಯ
ದೇವ್ ಹಾಗಾದರೆ?"
"ಇನ್ನು ದೀಪಾವಳಿ ಬರುತ್ತಲ್ಲಾ ಸಾರ್. ಆಗ ತಗೊಳ್ಳೋದು ಇದ್ದೇ ಇದೆ."
"ಗೊತ್ತು!"
ಸಮ್ಮೇಳನದಲ್ಲಿ ಆಗಬಹುದಾದ ಚರ್ಚೆಗಳ ಪ್ರಸ್ತಾಪ ಬಂತು.
"ನಮ್ಮದೇನಾದರೂ ನಿರ್ಣಯ ಮಂಡಿಸ್ಬೇಕೆ ಲಕ್ಷಪ್ಪಗೌಡರೆ?" ಎಂದು ಜಯ
ದೇವ ಕೇಳಿದ.
"ಸಮ್ಮೇಳನ ಅಂದ್ಮೇಲೆ ಠರಾವುಗಳು ಇದ್ದೇ ಇರ್ತವೆ," ಎಂದರು
ನಂಜುಂಡಯ್ಯ, ಪರಿಹಾಸ್ಯದ ಧ್ವನಿಯಲ್ಲಿ.
"ನಮ್ಮ ಶಾಲೆಗೆ ಇನ್ನೊಬ್ಬರು ಉಪಾಧ್ಯಾಯರು ಬೇಕೂಂತ ನಿರ್ಣಯ ಪಾಸು
ಮಾಡಿಸಿ," ಎಂದರು ಲಕ್ಕಪ್ಪಗೌಡರು, ಬಹಳ ದಿನಗಳ ಬಳಿಕ ಒಮ್ಮೆ ನಗುತ್ತ.
ಆ ಸಂಜೆ ಆಕಸ್ಮಿಕವಾಗಿ ಕಾಣಲು ಸಿಕ್ಕಿದ ತಿಮ್ಮಯ್ಯ, ಜಯದೇವನ ಪ್ರಯಾಣ
ವಿಷಯ ತಿಳಿದಗ ಅಂದರು:
"ಕೇಳ್ದೋರು ನಡುಗಿ ಹೋಗ್ಬೇಕು. ಅಂಥಾದ್ದೊಂದು ಭಾಷಣ ಹೊಡೆದ್ಬನ್ನಿ
ಜಯದೇವರೆ. ಅವರಿಗೆ ಭೂತ ರಾಜ್ಯದ ಕಥೆ ಹೇಳಿ!"
...ಬಸ್ಸಿನಲ್ಲಿ ಕುಳಿತು ಆ ಊರು ತಲುಪುವವರೆಗೊ ನಿರೀಕ್ಷೆಯೇ_ಸಮ್ಮೇಳನ
ಹಾಗಿರಬಹುದು, ಹೀಗಿರಬಹುದು, ಎಂದು. ಜಿಲ್ಲೆಯ ವಿದ್ಯಾಧಿಕಾರಿ ಅಧ್ಯಕ್ಷರು.
ಸಂಸ್ಥಾನದ ವಿದ್ಯಾಸಚಿವರೇ ಉದ್ಘಾಟನೆಗೆ ಬರಲು 'ದಯವಿಟ್ಟು ಒಪ್ಪಿರುವರೆಂದು
ಸಮ್ಮೇಳನದವರು ಪ್ರಕಟಿಸಿದ್ದರು. ಪ್ರತ್ಯೇಕ ಭಾಷಣದ ಸಾಧ್ಯತೆಯೇನೂ ಜಯ
ದೇವನಿಗೆ ತೋರಲಿಲ್ಲ. ಮೂರು ಠರಾವುಗಳನ್ನೇನೋ ಮಂಡಿಸಬೇಕೆಂದು ರಾತ್ರೆಯೇ
ಆತ ಗುರುತು ಮಾಡಿಕೊಂಡಿದ್ದ. ಉಪಾಧ್ಯಾಯರ ಮೂಲ ವೇತನ ಹೆಚ್ಚಿಸಬೇಕು;
ವರ್ಷವನ್ನು ಹಿಂದಿದ್ದಂತೆಯೇ ಬೇಸಗೆ ಮುಗಿದು ಆರಂಭಿಸಬೇಕು; ಉಪಾಧ್ಯಾಯರ
ಮಕ್ಕಳಿಗೆಲ್ಲಾ ಪ್ರೌಢ ಶಾಲೆಯ ಹಂತದವರೆಗೂ ಉಚಿತ ಶಿಕ್ಷಣ ಕೊಡಬೇಕು_ಹೀಗೆ
ಮೂರು ನಿರ್ಣಯಗಳು. ಅವುಗಳನ್ನು ಮಂಡಿಸುತ್ತ ತಾನು ಹೃದಯ ತೆರೆದು ಮಾತ
ನಾಡಬೇಕು. "ಬಾಂಧವರೇ! ಹಣ ಸಂಪಾದನೆಗೋಸ್ಕರ ನಾವು ಈ ವೃತ್ತಿಗಿಳಿದವರಲ್ಲ.
ಆದರೂ ಈ ಪ್ರಪಂಚದಲ್ಲಿ ಹಣವಿಲ್ಲದೆ ಬದುಕುವುದು ಸಾಧ್ಯವಿಲ್ಲ. ಮನುಷ್ಯರಾಗಿ

ನವೋದಯ

437

ಬಾಳದೆ, ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸಲಾರೆವು. ಅದಕ್ಕೋಸ್ಕರ ಮೂಲ
ವೇತನ ಹೆಚ್ಚಾಗ್ಬೇಕೂಂತ ಕೇಳ್ತಿದ್ದೇವೆ...."
ಊರಿನ ಹೊರವಲಯದಲ್ಲಿ ತಳಿರುತೋರಣಗಳೇನೂ ಇರಲಿಲ್ಲ. ಒಳಗೆ
ಬೀದಿಯ ಗೋಡೆಗಳಲ್ಲಿ ಭಿತ್ತಿಪತ್ರಗಳೂ ಕಾಣಿಸಲಿಲ್ಲ. ಬಸ್ ನಿಲ್ದಾಣದಲ್ಲಿ ಮಾತ್ರ,
ಬಿಳಿಯ ಟೋಪಿ ಧರಿಸಿದ್ದ ಇಬ್ಬರು ಹುಡುಗರು, ಎದೆಗೆ ಬಣ್ಣದ ಕಾಗದದ ಚೂರು
ಗಳನ್ನು ಚುಚ್ಚಿಕೊಂಡು ನಿಂತಿದ್ದರು.
ಜಯದೇವ, ಅವರು ಸ್ವಯಂಸೇವಕರಿರಬಹುದೆಂದು ಊಹಿಸಿ, ಆವರ ಬಳಿ
ಸಾರಿದ.
"ಇಲ್ಲಿ ಉಪಾಧ್ಯಾಯರ ಸಮ್ಮೇಳನ ಎಲ್ಲಾಗುತ್ತೆ ಗೊತ್ತಾ?"
ಅವರಿಗೆ ಗೊತ್ತಿತ್ತು. ಇಬ್ಬರೂ ಒಟ್ಟಿಗೇ ಉತ್ತರವಿತ್ತರು:
"ಮಾಧ್ಯಮಿಕ ಶಾಲೇಲಿ."
"ಎಲ್ಲಿದೆ ಶಾಲೆ?"
ದೊಡ್ಡವನು ಚಿಕ್ಕವನಿಗೆ ಹೇಳಿದ:
"ತೋರಿಸ್ಬಿಟ್ಟು ಬಾರೋ."
ಆ ಹುಡುಗನೂ ಜಯದೇವನೂ ಹೊರಟಂತೆ ದೊಡ್ಡವನೆಂದ:
"ಬಿರ್ನೆ ಬಂದ್ಬಿಡು. ಅಲ್ಲೇ ನಿಂತ್ಬಿಟ್ಟೀಯ ಎಲ್ಲಾದರೂ."
ಶಾಲೆಯ ಮುಂದುಗಡೆ ಚಪ್ಪರ ಹಾಕಿ, ಚಾಪೆ ಹಾಸಿದ್ದರು. ಹತ್ತಾರು ಹುಡು
ಗರೂ ಕೆಲ ದೊಡ್ಡವರೂ ಅಲ್ಲಿ ಓಡಾಡುತ್ತಿದ್ದರು. ಶಾಲೆಯ ಜಗಲಿಯಲ್ಲಿ ಒಂದು
ಮೇಜಿನ ಬಳಿ, ಅದೇ ಪ್ರಾತಃಕಾಲ ನುಣ್ಣಗೆ ಕ್ಷೌರ ಮಾಡಿಸಿಕೊಂಡಿದ್ದ ಮಧ್ಯ ವಯಸ್ಕ
ರೊಬ್ಬರು ಕುಳಿತಿದ್ದರು. ಅವರೆದುರು ರಶೀತಿ ಪುಸ್ತಕವಿತ್ತು; ರಿಬ್ಬನುಗಳಿದ್ದುವು.
ಅದು ಸ್ವಾಗತ ಕಛೇರಿ ಇರಬಹುದೆಂದು ಲೆಕ್ಕ ಹಾಕಿ, ಜಯದೇವ ಅತ್ತ ನಡೆದ.
ಆತನ ಪ್ರಶ್ನೆಗೆ ಅವಕಾಶವನ್ನೇ ಕೊಡದಂತೆ, ಕುಳಿತಿದ್ದವರೆಂದರು:
"ಪ್ರತಿನಿಧಿ ಶುಲ್ಕ ಒಂದು ರೂಪಾಯಿ. ಮುಂಡೇದು ಇನ್ನೂ ಅರುವತ್ತು
ರೂಪಾಯಿ ಕರೆಕ್ಷನೂ ಆಗಿಲ್ವಲ್ಲಾ! ಬಂದದ್ದೇ ತಡ, ರಿಬ್ಬನು ಇಲ್ದೇನೆ ತಿಂಡಿಗೆ ಎದ್ಬಿ
ಟ್ರೂಂತ ಕಾಣುತ್ತೆ. ಏನ್ಹೇಳ್ಲಿ!"
ಜಯದೇವನಿಗೆ ನಗು ತಡೆಯಲಾಗಲಿಲ್ಲ. ರೂಪಾಯಿ ತೆತ್ತ. ಹೆಸರು ಹೇಳಿದ_
ತನ್ನದು, ಶಾಲೆಯದು, ಊರಿನದು.
[ಜಯದೇವ. ಯಾರಿಗೆ ಗೊತ್ತಿತ್ತು? ಎಲ್ಲರ ಹಾಗೆ ಅವನೂ ಒಬ್ಬ, ಅಷ್ಟೆ.]
ಆತ ಕೇಳಿದ:
"ವಿದ್ಯಾಸಚಿವರು ಬಂದಿದಾರೇನು?"
"ಸಚಿವರು! ಅವರು ಯಾಕ್ರಿ ಬರ್ತಾರೆ? ಟೆಲಿಗ್ರಾಂ ಬಂದಿದೆ. ಸಂದೇಹ ಕಳಿಸಿ
ದಾರೆ. ಆಗ್ಹೋಯ್ತು."

438

ಸೇತುವೆ

“ಉದ್ಘಾಟನೆ ಯಾರು ಮಾಡ್ತಾರೆ ಹಾಗಾದರೆ?"
“ನಾವು ನೀವು ಮಾಡೋಕಾಗುತ್ಯೆ? ಪಾತಾಳಗರಡಿ ಹಾಕಿ ಇಲ್ಲೇ ಹುಡುಕ್ಬೇಕು
ಯಾರನ್ನಾದರೂ."
“ವಿದ್ಯಾಧಿಕಾರಿಗಳು?"
"ಮಧ್ಯಾಹ್ನದ ಊಟ ಮುಗಿಸ್ಕೊಂಡು ಟ್ಯಾಕ್ಸಿಮಾಡ್ಕೊಂಡು ಬಂದ್ಬಿಡ್ತಾರೆ.
ಬಿಲ್ಲು ನಾವು ಕೊಟ್ಟರಾಯ್ತು."
"ಹಾಗಾದರೆ ಹತ್ತು ಘಂಟೆಗೆ ಶುರುವಾಗೋದಿಲ್ಲ ಅನ್ನಿ."
"ಹತ್ತು ಘಂಟೆಗೆ? ರಾತ್ರೆ ಹತ್ತು ಘಂಟೆಗೆ ಶುರುವಾದ್ರೆ ನಿಮ್ಮ ಪುಣ್ಯ!"
ಜಯದೇವನ ಕೈಯಲ್ಲಿದ್ದ ಚೀಲವನ್ನು ನೋಡಿ ಅವರೆಂದರು:
"ಜಮಖಾನ ಕಂಬಳಿ ಎಲ್ಲ ಅದರಲ್ಲೇ ತುರುಕ್ಬಿಟ್ಟಿದೀರೊ? ಭೇಷ್. ಕೈಲೇ
ಹಿಡ್ಕೊಳ್ಳಿ. ಕಳೆದು ಹೋದ್ರೆ ಕಷ್ಟ."
ಸಮ್ಮೇಳನವನ್ನು ಕುರಿತಾದ ಆತನ ಕಲ್ಪನೆಯ ಚಿತ್ರಕ್ಕೂ ವಸ್ತುಸ್ಧಿತಿಗೂ
ಎಷ್ಟೊಂದು ಅಂತರವಿತ್ತು!
ಹಣ ಪಡೆದವರು ಹೇಳಿದರು:
"ಸುಮ್ನೆ ನಿಂತ್ಕೋಬೇಡಿ. ನೋಡಿ, ಅಲ್ಲಿ ಕಾಣಿಸುತ್ತಲ್ಲ ಹುಡುಗೀರ ಮಾಧ್ಯ
ಮಿಕ ಶಾಲೆ? ಆ ಜಾಗದಲ್ಲಿ ತಿಂಡಿ ಏರ್ಪಾಟು ಮಾಡಿದಾರೆ. ನೀವೂ ಹೋಗಿ. ಕುರಿ
ಹಿಂಡು ನುಗ್ಗಿದ ಹಾಗೆ ಡೆಲಿಕೇಟುಗಳು ನುಗ್ತಿರೋದು ಕಾಣಿಸೊಲ್ವೆ?"
ಈ ಒರಟು ಭಾಷೆ ಬೇಸರ ಬಂದು, ರೇಗಿ ಏನನ್ನಾದರೂ ಅಂದು ಬಿಡಬೇಕೆಂದು
ಜಯದೇವನಿಗೆ ತೋರಿತು, ಆದರೆ, ಸುಮ್ಮನೆ ಮನಸ್ಸಿನ ನೆಮ್ಮದಿ ಕಳೆದುಕೊಂದು
ಆಗುವ ಪ್ರಯೋಜನವಾದರೂ ಏನೆಂದು, ಆತ ಮಾತನಾಡಲಿಲ್ಲ. ಹುಡುಗಿಯರ
ಮಾಧ್ಯಮಿಕ ಶಾಲೆಗೆ ಹೋಗುವ ಬದಲು ಪೇಟೆ ಬೀದಿಗೆ ತಿರುಗಿದ. ಒಂದೂವರೆ ಆಣೆ
ಕೊಟ್ಟು ದಿನಪತ್ರಿಕೆ ಪಡೆದು, ಯಾವುದೋ ಹೋಟೆಲನ್ನು ಹೊಕ್ಕು ಕುಳಿತ. ಅಲ್ಲಿ
ಸ್ವಲ್ಪ ಹೊತ್ತಿದ್ದ ಬಳಿಕ, ಆ ಊರಿನ ಮುಖ್ಯ ರಸ್ತೆಗಳನ್ನು ಸುತ್ತಿದ. ಊಟದ
ಶಾಸ್ತ್ರವೂ ಮುಗಿದು ಹೋಗಲೆಂದು ಒಂದು ಹೋಟೆಲಿನಲ್ಲಿ ಎಂಟಾಣೆ ದಂಡ ತೆತ್ತ.
ಮರಳಿ ಬಂದ ಹೊತ್ತಿಗೆ, ಬೇರೆ ಬೇರೆ ಊರಿನ ಉಪಾಧ್ಯಾಯರು ಅಲ್ಲಿ ನೆರೆ
ದಿದ್ದರು. ಪೆಟ್ಟಿಗೆಯಲ್ಲಿದ್ದ ಧರ್ಮಾವರದ ಸೀರೆಗಳನ್ನು ಹೊರ ತೆಗೆದು ಉಟ್ಟು
ಶೋಭಿಸುತ್ತಿದ್ದ ಉಪಾಧ್ಯಾಯಿನಿಯರೂ ಕೆಲವರಿದ್ದರು. ಜಯದೇವನ ಸಮವಯಸ್ಕ
ರಾದ ಉಪಾಧ್ಯಾಯರೂ ಇಲ್ಲದಿರಲಿಲ್ಲ.
ವಿದ್ಯಾಧಿಕಾರಿ ಆಗಲೆ ಬಂದುಬಿಟ್ಟಿದ್ದರು.
["ಮಂತ್ರಿಗಳು ಬರೋದಿಲ್ಲಾಂತ ಗೊತ್ತಾದ್ಮೇಲೆ ಇವರೂ ತಡಮಾಡಿದ್ರು."]
ಅವರ ಒಪ್ಪಿಗೆ ಪಡೆದು, ಆ ಊರಿನ ಪುರ ಪ್ರೌಢಶಾಲೆಯ ನಿವೃತ್ತ ಮುಖ್ಯೋ
ಪಾಧ್ಯಾಯರನ್ನು ಉದ್ಘಾಟನೆಗೆ ಕರೆದರು.

ನವೋದಯ

439

ಜಯದೇವ ಒಬ್ಬಿಬ್ಬರೊಡನೆ ಮಾತನಾಡಿದ. ಹೊರಗಿನ ಅವರೆಲ್ಲ, ಉಚಿತ

ವಾಗಿ ಊಟಕೊಡಲಿಲ್ಲವೆಂದು ಸ್ವಾಗತಸಮಿತಿಯವರನ್ನು ಟೀಕಿಸಿದರು.
["ಬರೇ ತಿಂಡಿ-ಬಾಯುಪಚಾರದಲ್ಲೇ ಮುಗಿಸಿದಾರೆ."]
["ನಮ್ಮೂರಿಗೆ ಸಮ್ಮೇಳನ ಕರೆದಿದ್ದಾಗ ನಾವು ಎಷ್ಟು ಚೆನ್ನಾಗಿ ಏರ್ಪಾಟು
ಮಾಡಿದ್ವೀಂತ!"]
ಇದ್ದುದರಲ್ಲೆ ಒಳ್ಳೆಯ ಪೋಷಾಕು ಧರಿಸಲು, ಪರಸ್ಪರ ಪರಿಚಯ ಮಾಡಿ
ಕೊಳ್ಳಲು, ಆ ಸಮ್ಮೇಳನವೊಂದು ಸುಸಂದರ್ಭವಾಗಿತ್ತು, ಅಷ್ಟೆ.
ಜಯದೇವ ಸ್ವಾಗತ ಕಾರ್ಯದರ್ಶಿಯನ್ನು ಸಮೀಪಿಸಿ ಕೇಳಿದ:
"ವಿಷಯ ನಿಯಾಮಕ ಸಮಿತಿ ಯಾವಾಗ ಸೇರುತ್ತೆ?"
ಸರಿಯಾಗಿ ಉಸಿರಾಡುವುದಕ್ಕೂ ಅವರಿಗೆ ಬಿಡುವಿರಲಿಲ್ಲ.
“ತಡವಾಗ್ಹೋಯ್ತು ಕಣ್ರೀ. ಸಮಿತಿ ರಚಿಸೋಕೆ ಆಗುತ್ತೋ ಇಲ್ವೋ.
ವಿದ್ಯಾಧಿಕಾರಿಗಳಿಗೆ ಸಿಟ್ಟು ಬಂದ್ಬಿಟ್ಟಿದೆ. ಸಮ್ಮೇಳನ ಮುಗಿಸಿ ಸಾಯಂಕಾಲವೇ ಅವರು
ಹೊರಟ್ಹೋಗ್ಬೇಕಂತೆ."
ಸಹನೆಗೂ ಒಂದು ಮಿತಿ ಇದೆ ಎನಿಸಿತು ಜಯದೇವನಿಗೆ.
"ಹಾಗಾದರೆ ಸಮ್ಮೇಳನ ಕರೆದಿದ್ದಾದರೂ ಯಾಕೆ ಅಂತ?"
"ರೇಗ್ಬೇಡೀಪ್ಪ ಸದ್ಯಃ. ನೀವು ಮಾತಾಡ್ತಿರೇನು? ಪಟ್ಟೀಲಿ ಸೇರಿಸ್ತೀನಿ. ನಿಮ್ಮ
ಹೆಸರು ಹೇಳಿ."
"ಮಾತಾಡೋ ಛಾನ್ಸಿಗೋಸ್ಕರ ಅಲ್ಲ ಸಾರ್ ನಾನು ಬಂದಿರೋದು. ನಿರ್ಣಯ
ಬರಕೊಂಡು ತಂದಿದೀನಿ."
"ಏನಾದರೂ ಮಾಡೀಪ್ಪ. ನನ್ಕೈಲಾಗಲ್ಲ. ಸಾಹೇಬರು ರೇಗಾಡ್ತಿದಾರೆ,"
ಎನ್ನುತ್ತ ಆ ಮನುಷ್ಯ ಹೊರಟೇ ಹೋದರು.
ಮೂರು ಘಂಟೆಗೆ ಶಾಲಾ ಬಾಲಿಕೆಯರ ಪ್ರಾರ್ಥನೆಯೊಂದಿಗೆ ಸಮ್ಮೇಳನ
ಮೊದಲಾಯಿತು. ಅವರಿಗೋಸ್ಕರ ತಗ್ಗಿಸಿದ್ದ ಧ್ವನಿವರ್ಧಕವನ್ನು ಮತ್ತೆ ಏರಿಸಿದರು.
ಪುರ ಸಭಾಧ್ಯಕ್ಷರಿಂದ ಸ್ವಾಗತ ಭಾಷಣ. ಎಷ್ಟೋ ದಿನಗಳಿಂದ ಓದುತ್ತ ಕಂಠಪಾಠ
ಮಾಡಿದ್ದ ಭಾಷಣದ ಕರಡು ಪ್ರತಿ ಅವರ ಕೈಯಲ್ಲಿತ್ತು.
"ಸನ್ಮಾನ್ಯ ಶ್ರೀ ವಿದ್ಯಾಸಚಿವರೆ___"
ಭಾಷಣ ಬರೆದವರಿಗೆ ಆ ದಿನ ಅದನ್ನು ತಿದ್ದಲು ಮರೆತೇ ಹೋಗಿತ್ತು!
ಸಮ್ಮೇಳನದ ಸಭಿಕರ ಗು೦ಪಿನಿಂದ ಯಾರೋ ಒಬ್ಬರು ನಕ್ಕರು. ಆ ಸಾಹಸಿ
ಯಾರೆಂದು ನೋಡಲು ಉಳಿದವರೆಲ್ಲ ಅತ್ತ ದೃಷ್ಟಿ ತಿರುಗಿಸಿದರು. ಆದರೆ ಆ ವ್ಯಕ್ತಿ
ಅಷ್ಟರಲ್ಲೆ ತಲೆಕೆಳಹಾಕಿದ್ದುದರಿಂದ ಆತನ ಮುಖ ಕಾಣಿಸಲಿಲ್ಲ. ಕಪ್ಪು ಗಾಜಿನ ಕನ್ನಡಕ
ಧರಿಸಿದ್ದ ವಿದ್ಯಾಧಿಕಾರಿ ಮೇಜಿಗೆ ಬಡೆದು ಹೇಳಿದರು:
"ಸೈಲೆನ್ಸ್!"

440

ಸೇತುವೆ

[ಉಪಾಧ್ಯಾಯರೆಲ್ಲ ವಿದ್ಯಾರ್ಥಿಗಳಾಗಿದ್ದರು ಆ ಘಳಿಗೆಯಲ್ಲಿ.]
ಸ್ವಾಗತಾಧ್ಯಕ್ಷರಿಗೆ ಆಗಲೆ ತಮ್ಮ ತಪ್ಪು ಹೊಳಿದಿತ್ತು. ತಿದ್ದೋಣವೆಂದರೆ,
ಉದ್ಘಾಟನೆಮಾಡಲು ಹೊಸತಾಗಿ ಗೊತ್ತಾಗಿದ್ದ ಮಹಾನುಭಾವರ ಹೆಸರೇ ಅವರ
ನಾಲಗೆಯ ತುದಿಗೆ ಬರಲಿಲ್ಲ. ಆ ಗೊಂದಲದಲ್ಲಿ ಅವರ ಕೈಗಳು ನಡುಗಿದುವು.
ವಿದ್ಯಾಧಿಕಾರಿಯ ಹೆಸರನ್ನೋದುವಾಗಲೂ ಅವರು ತಡವರಿಸಿದರು. ಅನಂತರದ ಕೆಲ
ಸಾಲುಗಳಲ್ಲೂ ಪದೋಚ್ಚಾರ ಪದೇ ಪದೇ ತಪ್ಪಿತು.
ಉದ್ಘಾಟಕರು ಮೊದಲು ಮಾತನಾಡಿದುದು ತಮ್ಮ ಅನರ್ಹತೆಯನ್ನು ಕುರಿತೇ.
ಮಾನ್ಯ ಸಚಿವರು ಮಾಡಬೇಕಾಗಿದ್ದ ಪವಿತ್ರ ಕೆಲಸಕ್ಕೆ ತಮ್ಮನ್ನು ನಿಯೋಜಿಸುವುದೆಂದ
ರೇನು? "ಇಂಥದೊಂದು ಯೋಗ ಇತ್ತೂಂತ ಕಾಣುತ್ತೆ." "ಅಥವಾ, ಹಾಳೂರಿಗೆ
ಉಳಿದವನೇ ಗೌಡ ಎಂದರೂ ಸರಿಹೋದೀತು."
ಆಗ ಸಭಿಕರು ಕೆಲವರು ನಕ್ಕರು. ಬೇರೆಯೂ ಕೆಲವರು ನಗಬೇಕೆಂದಿದ್ದರು.
ಆದರೆ, ವಿದ್ಯಾಧಿಕಾರಿ ಪುನಃ ಎಲ್ಲಿ 'ಸೈಲೆನ್ಸ್' ಎನ್ನುವರೋ ಎಂದು ಅವರಿಗೆ
ದಿಗಿಲಾಗಿತ್ತು.
ಉದ್ಘಾಟಕರು ಇನ್ನೂ ಕೆಲ ವಿಷಯಗಳನ್ನು ಸಭಿಕರಿಗೆ ತಿಳಿಸಿಕೊಟ್ಟರು. ವಿದ್ಯಾ
ವಿಹೀನರು ಪಶು ಸಮಾನ. ಅ೦ದಮೇಲೆ, ಮೃಗವನ್ನು ಮಾನವನಾಗಿ ಮಾರ್ಪಡಿಸುವ
ಮಹಾತ್ಮನೇ ಉಪಾಧ್ಯಾಯನೆನ್ನಬಹುದು. ಸ್ವಾತಂತ್ರ್ಯ ಬಂದ ಮೇಲಂತೂ ಅವನ
ಜವಾಬ್ದಾರಿ ಹೆಚ್ಚಿದೆ. ದಾನಗಳ ಈ ಕಾಲದಲ್ಲಿ ವಿದ್ಯಾದಾನವೇ ಶ್ರೇಷ್ಟವಾದದ್ದು.
ಅದನ್ನು ಮಾಡುತ್ತಿರುವ ಆಗರ್ಭ ಶ್ರೀಮಂತನೇ ಉಪಾಧ್ಯಾಯ......
ಭಾಷಣ ತಮಾಷೆಯಾಗಿ ತೋರಿತು ಜಯದೇವನಿಗೆ. ಅದು ವ್ಯಂಗ್ಯಸರಣಿ
ಯಾಗಿದ್ದರೆ ಸಂತೋಷಪಡುವುದು ಸಾಧ್ಯವಿತ್ತು. ಆದರೆ ಉದ್ಘಾಟಕರು ಹಾಗೆ ಭಾವಿ
ಸಿರಲಿಲ್ಲ. ಸತ್ಯವಾದ ಮಾತನ್ನೆ ತಾವು ಆಡುತ್ತಿದ್ದವರಂತೆ, ಗ೦ಭೀರವಾಗಿ, ಪದಗಳನ್ನು
ತೂಗಿ ತೂಗಿ, ಅವರು ಭಾಷಣಕೊಟ್ಟರು.
ಚಪ್ಪರ ತುಂಬಿಯೇ ಇತ್ತು. ನೂರಕ್ಕೂ ಮಿಕ್ಕಿ ಪ್ರತಿನಿಧಿಗಳು. ನೂರಕ್ಕೂ
ಮಿಕ್ಕಿ ಇತರ ಜನ. ಉಪಾಧ್ಯಾಯರ ಸಮ್ಮೇಳನ ನೋಡಲು ಹೇರಳ ಸಂಖ್ಯೆಯಲ್ಲಿ
ನೆರೆದಿದ್ದ ಎಳೆಯ ವಿದ್ಯಾರ್ಥಿಗಳು ಬೇರೆ.
ಸಂದೇಶಗಳ ವಾಚನವಾದ ಬಳಿಕ ಅಧ್ಯಕ್ಷರೆದ್ದರು.
ಪ್ರಾಸ್ತಾವಿಕ ಭಾಷಣವನ್ನು ಮುಖ್ಯ ಭಾಷಣವಾಗಿಯೆ ಅಧ್ಯಕ್ಷರು ಮಾರ್ಪಡಿಸಿ
ದರು. [ ಬೆಂಗಳೂರಿನಿಂದ ತರಿಸಿದ್ದ ದೊಡ್ಡ ಹಾರ ಅವರ ಕತ್ತನ್ನು ಅಲಂಕರಿಸಿತು.]
ಅದು ವಿದ್ಯಾಸುಧಾರಣೆಯ ವರದಿ, ವಿದ್ಯಾಮಂದಿರಗಳಿಗೋಸ್ಕರ ಭೂದಾನ
ಮಾಡುವಂತೆ ಧನಿಕರಿಗೆ ಕರೆ, ಹೊಸ ದೃಷ್ಟಿಯಿಂದ ಸೇವಾ ತತ್ಪರತೆಯಿಂದ ದುಡಿಯು
ವಂತೆ ಉಪಾಧ್ಯಾಯರಿಗೆ ಆದೇಶ.......
"ಶಿಸ್ತು. ಶಿಸ್ತು ಮುಖ್ಯ. ಹರುಕು ಚಿಂದಿ ಉಟ್ಕೊಂಡು, ಗಡ್ಡ ಬಿಟ್ಕೊಂಡು,

ನವೋದಯ

441

ನಮ್ಮ ಉಪಾಧ್ಯಾಯರು ಇರೋದನ್ನ ನೋಡುವಾಗ ನನಗೆ ನಾಚಿಕೆಯಾಗುತ್ತೆ."
[ನುಣುಪಾಗಿ ಸೊಗಸಾಗಿ ಕಾಂತಿಯುತವಾಗಿದ್ದ ಉಣ್ಣೆಯ ಸೂಟು ಧರಿಸಿ
ಹೇಗೆ ಠೀವಿಯಿಂದ ನಿಂತಿದ್ದರು ಅವರು!]
ಕೊನೆಯದಾಗಿ ಅವರ ಸಂದೇಶ:
"ಈ ಸಮ್ಮೇಳನದಿಂದ ಸ್ಫೂರ್ತಿಪಡೆದ ನೀವು నిಮ್ಮ నిಮ್ಮ ಊರುಗಳಿಗೆ
ಹೋಗಿ ಹೊಸ ಉತ್ಸಾಹದಿಂದ ವಿದ್ಯಾಚಟುವಟಿಕೆ ಆರಂಭಿಸಬೇಕು."
ಅವರು ಕುಳಿತಾಗ ಎಲ್ಲರೂ ಕರತಾಡನ ಮಾಡಿದರು.
ಜಯದೇವನ ಪಕ್ಕದಲ್ಲೆ ಇದ್ದ ಒಬ್ಬರು, ಇನ್ನೊಬ್ಬರ ಕಿವಿಗೆ ಉಸುರಿದರು:
"ಸಾಹೇಬರ ದೃಷ್ಟಿ ಯಾವ ಕಡೆಗಿರುತ್ತೆ ನೋಡಿದ್ರಾ?"
"ಹೂ೦," ಎಂದರು ಅವರ ಸ್ನೇಹಿತರು, ಮಹಿಳೆಯರು ಕುಳಿತಿದ್ದ ಕಡೆಗೊಮ್ಮೆ
ಕತ್ತುತಿರುಗಿಸಿ.
"ಕಪ್ಪು ಕನ್ನಡಕ ಹಾಕ್ಕೊಂಡ್ರೆ ಗೊತ್ತೇ ಆಗೋದಿಲ್ಲ!"
ಅದೊಂದು ಪ್ರಹಸನ. ಇಷ್ಟು ನಿರರ್ಥಕವಾಗಿ ಸಮ್ಮೇಳನ ನಡೆಯಬಹುದೆಂದು
ಜಯದೇವ ನಿರೀಕ್ಷಿಸಿರಲಿಲ್ಲ. ನಿರ್ಣಯಗಳ ಚರ್ಚೆ ಇದ್ದರೆ ಈಗ ಆಗಬೇಕು. ಆದರೆ
ಯಾರೂ ಆ ಯೋಚನೆಯನ್ನು ಮಾಡುತ್ತಿದ್ದಂತೆಯೇ ಕಾಣಲಿಲ್ಲ. ತನ್ನ ನಿರ್ಣಯ
ಗಳನ್ನು ಏನು ಮಾಡಬೇಕು? ಕೊಡಬೇಕೆ ಬೇಡವೆ?
ಅಲ್ಲೇ ನಿಂತಿದ್ದ ಯಾವನಾದರೂ ಹುಡುಗನ ಕೈಯಲ್ಲಿ ಕೊಟ್ಟು ಕಳುಹಿಸಿ
ನೋಡುವುದೇ ಸರಿಯೆಂದು ಜಯದೇವ ನಿರ್ಧರಿಸಿದ.
ಆ ಕಾಗದ ಮೊದಲು ಸ್ವಾಗತ ಕಾರ್ಯದರ್ಶಿಯ ಕೈಸೇರಿತು. ಸ್ವಾಗತಾ
ಧ್ಯಕ್ಷರೂ ಗಾಬರಿಯಾಗಿ ಅದನ್ನೋದಿದರು. ಉಧ್ಘಾಟಕರ ಸರದಿ ಬಳಿಕ.
"ಅದೇನು?" ಎಂದರು ಅಧ್ಯಕ್ಷರು.
ಕಾಗದ ತಂದ ಹುಡುಗ ಕೈಕಟ್ಟಿ ವೇದಿಕೆಯ ಬಳಿಯಲ್ಲೆ ನಿಂತ.
ಸಭಿಕರ ದೃಷ್ಟಿಯೆಲ್ಲ ಅಧ್ಯಕ್ಷರ ಮೇಲೆಯೇ ನೆಟ್ಟಿತು. ಅದನ್ನು ಯಾರು
ಬರೆದವರು? ಏನಿತ್ತು ಅದರಲ್ಲಿ?
ಜಯದೇವ ಕಾಗದ ಕಳುಹಿದುದನ್ನು ಕಂಡಿದ್ದವರು, ಸಮೀಪದಲ್ಲೆ ಕುಳಿತಿ
ದ್ದವರು, ವಿಸ್ಮಯದ ದೃಷ್ಟಿಯಿಂದ ಆತನನ್ನು ನೋಡಿದರು. ಹಲವರ ಎದೆಗುಂಡಿಗೆ
ಗಳು ಡವಡವನೆ ಹೊಡೆದುಕೊ೦ಡುವು.
ತೀಕ್ಷ್ಣವಾದ ಧ್ವನಿಯಲ್ಲಿ ಅಧ್ಯಕ್ಷರೆಂದರು:
“ಯಾರು ಈ ಜಯದೇವ? ಇಲ್ಲಿಗೆ ಕರೀರಿ!"
ಮಹತ್ವದ ಕೆಲಸವನ್ನು ನಿರ್ವಹಿಸುವವನಂತೆ, ಕೈಕಟ್ಟಿ ನಿಂತಿದ್ದ ಹುಡುಗ ಜಯ
ದೇವನೆಡೆಗೆ ಓಡಿದ.

56

442

ಸೇತುವೆ

ಜಯದೇವ ಎದ್ದು, ನಿಧಾನವಾಗಿ ಹಾದಿ ಬಿಡಿಸಿಕೊಳ್ಳುತ್ತ , ಎಲ್ಲರ ದೃಷ್ಟಿಯ
ಕೇಂದ್ರವಾಗುತ್ತ, ವೇದಿಕೆಯ ಬಳಿಗೆ ನಡೆದ.
"ಇವನ ಗತಿಯಾಯ್ತಿನ್ನು," ಎಂದರು ಯಾರೋ.
"ಆ ಜುಬ್ಬ ಪಾಯಜಾಮ ನೋಡಿ. ತಾನೂ ಒಬ್ಬ ಪುಢಾರೀಂತ ತಿಳಕೊಂಡ್ಬಿಟ್ಟಿ
ದಾನೆ. ಶುದ್ಧ ಎಳೆ ನಿಂಬೇಕಾಯಿ," ಎಂದರು ಇನ್ನೊಬ್ಬರು.
ಜಯದೇವನಿಂದ ಪ್ರತಿನಿಧಿ ಶುಲ್ಕವನ್ನು ಪಡೆದಿದ್ದ ಉಪಾಧ್ಯಾಯರು-ದೂರ
ದಲ್ಲಿ ನಿಂತಿದ್ದವರು_ಮೂಗಿನ ಮೇಲೆ ಬೆರಳಿಟ್ಟು, "ಎಲ ಎಲಾ!" ಎಂದರು.
ವಿದ್ಯಾಧಿಕಾರಿ, ಪಕ್ಕಕ್ಕೆ ಬಂದು ನಿಂತ ಯುವಕನನ್ನು ಅಡಿಯಿಂದ ಮುಡಿಯ
ವರೆಗೂ ನೋಡಿ ಕೇಳಿದರು:
"ನೀವೇ ಏನು ಜಯದೇವ್?"
"ಹೌದು ಸಾರ್."
"ಯಾವ ಶಾಲೆ?"
ಹೆಸರು ಹೇಳಿದಾಗ, ಏನೋ ಜ್ಞಾಪಿಸಿಕೊಳ್ಳುವವರಂತೆ ಅವರ ಹಣೆನೆರಿಗೆ
ಕಟ್ಟಿತು.
"ನೀವು ಪದವೀಧರರೇನು?"
"ಹೌದು."
[ವಿದ್ಯಾಧಿಕಾರಿಯ ಪಾಲಿಗೆ ಈಗ ಅಪರಿಚಿತನಾಗಿರಲಿಲ್ಲ ಜಯದೇವ.]
ಅವರ ಮೈ, ಉದ್ಧಟ ಠೀವಿಯನ್ನು ಬಿಟ್ಟು ಸ್ವಲ್ಪ ಅತ್ತಿತ್ತ ಆಡಿತು. ಸ್ವರದ
ಕಠೋರತೆ ಕರಗಿತು. ಅವರೆಂದರು:
"ಇಂಥ ನಿರ್ಣಯ ಇಲ್ಲಿ ಮಂಜೂರು ಮಾಡೋದು ನನಗಿಷ್ಟವಿಲ್ಲ ಜಯದೇವ್.
ಅಶಿಸ್ತು ಅವಿಧೇಯತೆ ಬೆಳೆಯೋದಕ್ಕೆ ಇದು ಸಹಾಯಕವಾಗ್ತದೆ."
"ಅದರಲ್ಲಿ ಅಂಥಾದೇನೂ ಇಲ್ವಲ್ಲಾ ಸಾರ್. ಸರಕಾರಕ್ಕೆ ನಮ್ರವಾಗಿ ವಿನಂತಿ
ಮಾಡ್ಕೋತಿದೀವಿ, ಅಷ್ಟೆ."
"ನೀವು ನಿರ್ಣಯ ಮಾಡಿದ ತಕ್ಷಣ ಸರಕಾರ ಅಸ್ತು ಅನ್ನುತ್ತೇನು?"
"ಅನ್ನಲಾರದು. ಆದರೆ ನಮ್ಮ ಮನಸ್ನಲ್ಲಿ ಏನಿದೆ ಅನ್ನೋದು ಸರಕಾರಕ್ಕೆ
ಗೊತ್ತಾಗಲಿ."
ಜಯದೇವನ 'ಹಟಮಾರಿತನ' ಕಂಡು, ಅವರ ಸ್ವರ ಸ್ವಲ್ಪ ಕಠಿನವಾಯಿತು.
"ಇಲ್ಲ, ಈ ನಿರ್ಣಯಗಳಿಗೆ ನಾನು ಸಮ್ಮತಿ ಕೊಡೋದಿಲ್ಲ."
"ನಿಮ್ಮಿಷ್ಟ ಸಾರ್."
"ಹೋಗಿ ಕೂತ್ಕೊಳ್ಳಿ."
ಕಾಗದಕ್ಕಾಗಿ ಜಯದೇವ ಕೈನೀಡಿದ.
"ಅದಿಲ್ಲೇ ಇ‍‍ರ್ಲಿ. ನೀವು ಹೋಗಿ," ಎಂದರು ವಿದ್ಯಾಧಿಕಾರಿ.

ನವೋದಯ

443

ಹೀಗಾಯಿತೆಂದು ಜಯದೇವನಿಗೆ ದುಃಖವಾಗಲಿಲ್ಲ. ಇದೂ ಒಂದು ಅನುಭವ_
ಎಂದುಕೊಂಡು ಮಂದಸ್ಮಿತನಾಗಿಯೆ ಸ್ವಸ್ಥಾನಕ್ಕೆ ಮರಳಿದ.
ಸ್ವಾಗತ ಕಾರ್ಯದರ್ಶಿ ಭಾಷಣಮಾಡಲು ಬಯಸಿದ್ದವರ ಪಟ್ಟಿ ಒಪ್ಪಿಸಿದರು.
"ಇವರೇನು ಭಾಷಣ ಮಾಡ್ತಾರೆ?" ಎಂದರು ಅಧಿಕಾರಿ.
"ಇಂಥದೇ ವಿಷಯ ಅ೦ತಿಲ್ಲ."
"ಅರ್ಥವಿಲ್ಲದ್ದು! ಯಾವ ಭಾಷಣಕ್ಕೂ ನಾನು ಆಸ್ಪದ ಕೊಡೋದಿಲ್ಲ!"
"ಹಾಗೇ ಆಗಲಿ ಸಾರ್,"
"ಇಲ್ನೋಡಿ. ಒಂದೇ ಒಂದು ನಿರ್ಣಯ ಸಮ್ಮೇಳನ ಸ್ವೀಕರಿಸಿದರೆ ಸಾಕು."
"ಯಾವುದು ಸಾರ್.?"
"ನಾನು ಹೇಳ್ತೀನಿ, ಬರೀರಿ."
ತಮ್ಮ ಕುರ್ಚಿಯನ್ನು ಸ್ವಾಗತ ಕಾರ್ಯದರ್ಶಿ ವಿದ್ಯಾಧಿಕಾರಿಯ ಹಿಂಬದಿಗೆ
ಒಯ್ದು, ಅದರಮೇಲೆ ಕುಳಿತು, ಸಾಹೇಬರು ಹೇಳಿದುದನ್ನು ಬರೆದುಕೊಂಡರು.
ಅದು, ಸರ್ಕಾರ ಗೊತ್ತುಪಡಿಸಿದ್ದ ವಿದ್ಯಾಸುಧಾರಣೆಯನ್ನು ಸ್ವಾಗತಿಸುವ
ನಿರ್ಣಯ.
“ಅದನ್ನು ಓದಿ ಬಿಡಿ."
ಕಾರ್ಯದರ್ಶಿ ಎದ್ದು ನಿಂತು ಗಟ್ಟಿಯಾಗಿ ಓದಿದರು ವಿದ್ಯಾಧಿಕಾರಿಯ ನಿರ್ದೇಶ
ದಂತೆ, "ಇದು ಸ್ವೀಕೃತವಾಯಿತೂಂತ ಸೂಚಿಸೋದಕ್ಕೆ ಎಲ್ಲರೂ ಕೈ ಚಪ್ಪಾಳೆ
ತಟ್ಬೇಕು," ಎ೦ದರು. ಹುಡುಗರೂ ಉಪಾಧ್ಯಾಯರೂ ಒಂದಾಗಿಯೇ ಕೈ
ತಟ್ಟಿದರು.
ಹೀಗೆ ಆ ನಿರ್ಣಯವನ್ನು ಸಮ್ಮೇಳನ ಸರ್ವಾನುಮತದಿಂದ ಸ್ವೀಕರಿಸಿತು.
ಅನಂತರ ನಡೆದುದು ಬಲು ಚುಟುಕಾದ ಉಪಸಂಹಾರ ಭಾಷಣ:
"ಸಂಬಳ ಜಾಸ್ತಿಮಾಡೀಂತ ನೀವು ಕೂಗಾಡಿದರೆ ಸಾಲದು. ಅದಕ್ಕೆ ತಕ್ಕ
ಯೋಗ್ಯತೇನ ಬೆಳೆಸ್ಕೋಬೇಕು. ಜನರು ನಿಮಗೆ ಗೌರವ ಕೊಡದೇ ಹೋದರೆ ಅದು
ಸರಕಾರದ ತಪ್ಪಲ್ಲ. ನಿಮ್ಮ ತಪ್ಪು."
ಪರೋಕ್ಷವಾಗಿ ಜಯದೇವನನ್ನುದ್ದೇಶಿಸಿ ಆಡಿದ ಮಾತು, ಅದು.
ಶಿಸ್ತು, ವಿಧೇಯತೆ_ಅದೇ ಪುನಃ ಪುನಃ ಅವರು ಉಚ್ಚರಿಸಿದ ಪ್ರಧಾನ ಘೋಷ.
ವಂದನಾರ್ಪಣೆಯ ಬಳಿಕ ಬಾಲಿಕೆಯರು ಬಂದು ರಾಷ್ಟ್ರಗೀತೆ ಹಾಡಿದರು.
ಮನೋರಂಜನೆಯ ಕಾರ್ಯಕ್ರಮಗಳಿಗಾಗಿ ಹೆಚ್ಛು ಹೆಚ್ಚು ಜನ ಬಂದು ನೆರೆಯು
ತ್ತಿದ್ದಂತೆಯೇ, ವಿದ್ಯಾಧಿಕಾರಿ ವೇದಿಕೆಯಿಂದಿಳಿದು, ಎಲ್ಲರಿಗೂ ವಂದಿಸಿ, ಶಾಲೆಯೊಳಗೆ
ಲಘು ಉಪಾಹಾರ ಸ್ವೀಕರಿಸಿ, ಹಾರದೊಡನೆ ಟ್ಯಾಕ್ಸಿಯನ್ನೇರಿದರು.
ಅವರನ್ನು ಬೀಳ್ಕೊಡಲೆಂದು ಕೆಲ ಉಪಾಧ್ಯಾಯರು ಓಡಾಡಿದರು. ಬೇರೆ
ಕೆಲವರು ಜಯದೇವನನ್ನು ಸುತ್ತುಗಟ್ಟಿದರು.

444

ಸೇತುವೆ

ಯಾವುದರ ಮೇಲಿನ ನಿರ್ಣಯ ಎಂಬುದು ತಿಳಿದಾಗಲಂತೂ ಅವರಿಗಾದ
ಸಂತೋಷ ಅಷ್ಟಿಷ್ಟಲ್ಲ. 'ಧೈರ್ಯ ಇದ್ದಿದ್ದರೆ ಅವರು ಅದನ್ನು ಓಟಿಗೆ ಹಾಕಬೇಕಾ
ಗಿತ್ತು!'-ಎಂದು ಈಗ ಶೌರ್‍ಯದಿಂದ ಅವರು ಮಾತನಾಡಿದರು.
ವಯಸ್ಸಾಗಿದ್ದ ಒಬ್ಬರು ಮಾತ್ರ ಅಂದರು:
"ನಿಮಗಿನ್ನು ಬೇಗನೆ ವರ್ಗವಾಗುತ್ತೆ ನೋಡಿ!"
ಜಯದೇವ ನಸುನಕ್ಕ.
ಪ್ರತಿನಿಧಿಗಳಾಗಿ ಬಂದಿದ್ದ ಉಪಾಧ್ಯಾಯಿನಿಯರ ಕಿವಿಗೂ ಜಯದೇವನ
ಸಾಹಸದ ವರದಿ ತಲಪಿತು. ಮೆಚ್ಚುಗೆಯ ನೋಟಗಳಿಗೆ ಕೊರತೆ ಇರಲಿಲ್ಲ.
ವೃದ್ಧೆಯಾಗಿದ್ದ ಒಬ್ಬಾಕೆ ಹೇಳಿದರು:
"ಪಾಪ! ಇನ್ನೂ ಚಿಕ್ಕ ವಯಸ್ಸು."
"ಯಾಕೆ? ಅವರನ್ನು ಗಲ್ಲಿಗೇರಿಸ್ತಾರೇನು?" ಎಂದು ಯುವತಿಯೊಬ್ಬಳು
ನಗುತ್ತ ಕೇಳಿದಳು. [ಆ ವಿದ್ಯಾಧಿಕಾರಿಯ ವಿಷಯದಲ್ಲಂತೂ ಆಕೆಗೆ ಒಳ್ಳೆಯ ಅಭಿ
ಪ್ರಾಯವಿರಲಿಲ್ಲ.]
......ಕತ್ತಲಾದೊಡನೆಯೆ ವಿವಿಧ ವಿನೋದಾವಳಿ ಕಾರ್ಯಕ್ರಮ ಆರಂಭ
ವಾಯಿತು. ಭಾಗವಹಿಸಿದವರೆಲ್ಲ ಆ ಊರಿನ ಮಾಧ್ಯಮಿಕ ಶಾಲೆಯ ಬಾಲಕರು;
ಹುಡುಗಿಯರ ಶಾಲೆಯ ಬಾಲಿಕೆಯರು. ಅವರು ಆಡಿದ ನಾಟಕಗಳಿಗೂ ಆ ಸಮ್ಮೇಳ
ನಕ್ಕೂ ಯಾವ ಸಂಬಂಧವೂ ಇರಲಿಲ್ಲ. ಸ್ವತಃ ಆ ಉಪಾದ್ಯಾಯರಲ್ಲೇ ನಟರಿರಲಿಲ್ಲ
ವೆಂದೆ? ನಾಟಕಕಾರರಿರಲಿಲ್ಲವೆಂದೆ? ಹಾಡುಗಾರರಿರಲಿಲ್ಲವೆಂದೆ? ಪ್ರತಿಭೆಗೆ ಬರಗಾಲವಿರ
ದಿದ್ದರೂ ಅದು ಬಯಲಿಗೆ ಬರಲು ಅಷ್ಟೊಂದು ಅಡೆತಡೆ...
ಶಾಲೆಯೊಳಗೆ ಕತ್ತಲಿತ್ತು. ಎಲ್ಲ ಶಾಲೆಗಳಂತೆಯೇ ಅಲ್ಲಿಯೂ ದೀಪವಿರಲಿಲ್ಲ.
ಬೆಳಗ್ಗೆ 'ಹಣ ಕಲೆಕ್ಷನ್' ಮಾಡುತಿದ್ದವರು ಕುಳಿತಿದ್ದ ಕುರ್ಚಿ, ಅಲ್ಲಿಯೇ ಇತ್ತು
ಇನ್ನೂ. ಚಪ್ಪರದೊಳಗಿನ ಕಾರ್ಯಕ್ರಮ ಮುಗಿದ ಬಳಿಕ, ಎರಡು ಬೆಂಚುಗಳನ್ನು
ಜೋಡಿಸಿ ಮಲಗಿಕೊಂಡರಾಯಿತೆಂದು ಜಯದೇವ ಆ ಕುರ್ಚಿಯ ಮೇಲೆ ಕುಳಿತ.
ಆ ದಿನದ ಘಟನೆಗಳನ್ನೆಲ್ಲ ಮನಸ್ಸು ಮೆಲುಕು ಹಾಕತೊಡಗಿತು. ಆತನ ವಿಚಾರ
ಧಾರೆಯವರೇ ಆ ಗುಂಪಿನಲ್ಲಿ ಖಂಡಿತವಾಗಿಯೂ ಇದ್ದರು. ಕೆಲವರೊಡನೆ ಮಾತ
ನಾಡಿದ ಸ್ವಲ್ಪ ಹೊತ್ತಿನಲ್ಲೆ ಅದನ್ನು ಆತ ತಿಳಿದಿದ್ದ. ಅಂಥವರೆಲ್ಲ ಒಂದಾಗಿ ಬಲ
ವಾದೊಂದು. ಸಂಘಟನೆಯನ್ನು ಸ್ಥಾಪಿಸುವುದು ಸಾಧ್ಯವಾದರೆ? ಆ ವಿದ್ಯಾಧಿಕಾರಿ
ಯಂತೂ ತನ್ನನ್ನು ಇನ್ನು ಮರೆಯಲಾರರು. ಎಂಥ ಭೂಪತಿ!
ರಂಗರಾಯರಂಥವರು ಹೆಚ್ಚು ಜನ ಈ ಸಮ್ಮೇಳನದಲ್ಲಿ ಇದ್ದಿದ್ದರೆ? ಆದರೆ,
ಅವರು :ಎದ್ದು ನಿಂತು ಮೂಕರಿಗೆ ವಾಣಿಯಾಗುತ್ತಿದ್ದರೋ ಇಲ್ಲವೋ.
ಹಿಂದೆಯೊಮ್ಮೆ ಅವರೇ ತನಗೆ ಹೇಳಿದ್ದರು:
'ಈ ಪ್ರಪಂಚದಲ್ಲಿ ನಾವು ಯಾವಾಗ್ಲೂ ಹೆಚ್ಚು ನಿರೀಕ್ಷೆ ಇಟ್ಕೋಬಾರ್‍ದು

ನವೋದಯ

445

ಜಯದೇವ್. ನಮಗೆ ಯಾವ ಭ್ರಮೇನೂ ಇರಬಾರ್‍ದು. ಆಗ ನಿರಾಶೆಯಾದರೆ
ಹೆಚ್ಚು ದುಃಖವಾಗೋದಿಲ್ಲ. ಸಂಕಟ ಸಹಿಸ್ಕೊಳ್ಳೋ ಸಾಮರ್ಥ್ಯವಿರುತ್ತೆ.'
ಸಮ್ಮೇಳನಕ್ಕೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡೇ ಬಂದಿದ್ದ ಆತ. ಭ್ರಮೆ
ನಿರಸನವಾಗಿತ್ತು. ಸಂಕಟವೂ ಆಗಿತ್ತು ಸ್ವಲ್ಪ. ಅಂದಿನ ಪಾಠದಿಂದ ಮುಂದೆ
ಸಹಾಯವಾಗುವುದು ಖಂಡಿತ. ವಸ್ತು ಸ್ಥಿತಿಯನ್ನು ಹೆಚ್ಚು ಹೆಚ್ಚು ಚೆನ್ನಾಗಿ ತಿಳಿಯು
ವುದರಿಂದಲೇ, ಒಬ್ಬ ಮನುಷ್ಯನಿಂದ ಒಳ್ಳೆಯ ಕೆಲಸ ಸಾಧ್ಯ.
ಜಯದೇವ ಯೋಚಿಸಿದ:
ವಿದ್ಯೆಯ ಕ್ಷೇತ್ರದಲ್ಲಿ ತಾನು ಮಾಡಬೇಕಾದ ಒಳ್ಳೆಯ ಕೆಲಸ ಯಾವುದು?
ಯಾವುದು?
ಆ ಕತ್ತಲೆಯಂತೆಯೇ ಅಸ್ಪಷ್ಟವಾಗಿತ್ತು ಪ್ರತಿಯೊಂದೂ.
ಒಟ್ಟಿನಲ್ಲಿ ಆತ್ಮವಿಶ್ವಾಸ ಉಳಿಸಿಕೊಳ್ಳಬೇಕಾದುದು ಮುಖ್ಯ-ಎಂದು ತನ್ನಷ್ಟಕ್ಕೆ
ಜಯದೇವ ಅಂದುಕೊಂಡ.
ಆತನ ಕೈಬೆರಳುಗಳು, ಪ್ರತಿನಿಧಿ ಎಂಬ ಸಂಕೇತವಾಗಿ ಎದೆಗೆ ಚುಚ್ಚಿದ್ದ ರಿಬ್ಬನಿ
ನೊಡನೆ ಆಟವಾಡಿದುವು.



೧೩

ಸಮ್ಮೇಳನದಿಂದ ಹಿಂತಿರುಗಿದ ಜಯದೇವ ಸುನಂದೆಗೊಮ್ಮೆ ಮುಖ ತೋರಿಸಿ,
ಹಾಜರಿ ಹೇಳಿ, ತಡವಾಯಿತೆಂದು ಶಾಲೆಗೆ ಓಡಿದ.
ನಂಜುಂಡಯ್ಯ ಕೇಳಿದರು:
"ಹ್ಯಾಗಿತ್ತು ಸಮ್ಮೇಳನ?"
ಜಯದೇವನ ವರದಿ ಟೀಕೆಗಳನ್ನು ಕೇಳಿದಾಗ ಅವರೆಂದರು:
"ಅಲ್ಲಿ ಆಗೋದು ಅಷ್ಟೇ ಅಂತ ನನಗೆ ಗೊತ್ತಿತ್ತು."
ಲಕ್ಕಪ್ಪಗೌಡರು ಜಯದೇವನನ್ನು ಕಂಡಾಗ ಕೇಳಿದ ರೀತಿಯೇ ಬೇರೆ:
"ಎಲ್ಲಾ ಸಾಂಗವಾಗಿ ನಡೀತು ತಾನೆ?"
ಅದು ಪರಿಹಾಸ್ಯದ ಧ್ವನಿಯಿಂದ ಕೂಡಿದ್ದ ಪ್ರಶ್ನೆ.
“ಓಹೋ!" ಎಂದು ಜಯದೇವ ಸುಮ್ಮನಾದ.
ಆತ ಸಮ್ಮೇಳನದ ವಿಷಯ ವಿವರವಾಗಿ ಮಾತನಾಡಿದುದು ತಿಮ್ಮಯ್ಯನವ
ರೊಡನೆ, ಆ ಸಂಜೆ ಅವರು ಭೇಟಿಯಾದಾಗ.
ಅವರೆಂದರು:

446

ಸೇತುವೆ

“ಪ್ರಾಥಮಿಕ ಶಾಲಾ ಉಪಾಧ್ಯಾಯರದೂ ಇಷ್ಟೆ. ಮಾಧ್ಯಮಿಕದವರದೂ
ಇಷ್ಟೆ. ಇನ್ನು ಪ್ರೌಢದವರದು ಇದಕ್ಕಿಂತ ಬೇರೆಯಾಗಿರುತ್ತೇಂತ ನಾನು
ನಂಬೋದಿಲ್ಲ."
"ಆ ನಂಬಿಕೆ ನನಗೂ ಇಲ್ಲ," ಎಂದ ಜಯದೇವ.
ಆತನ ಧ್ವನಿಯಲ್ಲಿದ್ದ ವ್ಯಥೆಯನ್ನು ಗಮನಿಸಿ ತಿಮ್ಮಯ್ಯ ಅಂದರು:
“ನೀವ್ಯಾತಕ್ಕೆ ಸಂಕಟಪಟ್ಕೋತೀರಿ ಅಂತ? ಇದನ್ನು ಸರಿಪಡಿಸೋದು ಬ್ರಹ್ಮ
ನಿಂದಲೂ ಸಾದ್ಯವಿಲ್ಲ."
"ಅದು ನಿರಾಶೆಯ ತತ್ತ್ವಜ್ಞಾನ ತಿಮ್ಮಯ್ಯನವರೇ."
"ಹಾಗಾದರೆ ಆಶೆಯ ತತ್ವಜ್ನಾನ ಯಾವುದು? ಸ್ವಲ್ಪ ಹೇಳಿ."
"ಉಪಾಧ್ಯಾಯರಲ್ಲಿ ಜಾಗೃತಿ ಉಂಟುಮಾಡ್ಬೇಕು."
"ಸತ್ತುಹೋಗಿರೋ ಮರಕ್ಕೆ ನೀರೆರೀಬೇಕೂಂತ ಹೇಳ್ತಾ ಇದೀರಿ ನೀವು."
"ಮರ ಸತ್ತಿಲ್ಲ. ನಾವು ನೀವು ಬದುಕಿಲ್ವೇನು?"
"ಆಗಲಪ್ಪಾ. ಈ ನೀರೆರಿಯೋ ಕೆಲಸ ಮಾಡೋರು ಯಾರು?"
“ನೀವು ನಾವೇ. ಇನ್ಯಾರು?"
"ಸರಿಹೋಯ್ತು! ಈ ವಾದಕ್ಕೆ ತುದಿಯೂ ಇಲ್ಲ, ಬುಡವೂ ಇಲ್ಲ."
ತಿಮ್ಮಯ್ಯ ನಶ್ಯದ ಡಬ್ಬ ಎತ್ತಿಕೊಂಡರು. ಅವರು ಯೋಚಿಸತೊಡಗಿದ
ರೆಂಬುದಕ್ಕೆ ಸೂಚನೆ ಅದು. ನಶ್ಯದ ಬಣ್ಣಕ್ಕೆ ತಿರುಗಿದ್ದ ಕರವಸ್ತ್ರದಿಂದ ಮೂಗು
ಒರೆಸಿ ಅವರೆಂದರು:
"ಸಮ್ಮೇಳನ ಯಶಸ್ವಿಯಾಗಿ ನಡೀತೂಂತ ಪತ್ರಿಕೇಲಿ ನಾಳೆ ವರದಿ ಬರುತ್ತೆ."
"ಹೌದು."
"ನಿಮ್ಮ ನಿರ್ಣಯಗಳ ವಿಷಯ ಅದರಲ್ಲಿ ಒಂದು ಸಾಲೂ ಇರೋದಿಲ್ಲ."
"ಯಾಕಿರುತ್ತೆ?"
"ಅದು ಸರಿಯಲ್ಲ, ಅಲ್ಲಿ ನಡೆದದ್ದೆಲ್ಲಾ ದಾಖಲೆಯಾಗ್ಲೇಬೇಕು."
"ಹ್ಯಾಗೆ?"
"ಆ ಕೆಲಸ ನಾನು ಮಾಡ್ತೀನಿ. 'ಯಶಸ್ವೀ ಸಮ್ಮೇಳನ' ಅಂತ ಒಂದು ನಾಟಕ
ಬರೀತೀನಿ."
ಜಯದೇವನಿಗೆ ಆ ಸೂಚನೆ ಇಷ್ಟವಾಯಿತು. ಆತನೆಂದ:
"ನೋಡಿ. ಹತ್ತಿಪ್ಪತ್ತು ಕಡೆ ಆ ನಾಟಕ ಆಡಿದರೆ ಉಪಾಧ್ಯಾಯರಲ್ಲಿ ಜಾಗೃತಿ
ತನ್ನಷ್ಟಕ್ಕೆ ಆಗುತ್ತೆ."
"ಸರಿ, ಕಸದಲ್ಲೂ ರಸ ಕಾಣೋ ನಿಮ್ಮ ಪ್ರವೃತ್ತಿ ಇದ್ದೇ ಇದೆಯಲ್ಲ," ಎಂದು
ಹೇಳಿ ತಿಮ್ಮಯ್ಯ ನಕ್ಕರು.
ಮನೆಯಲ್ಲಿ ಸುನಂದೆಯೂ ವಿವರ ಕೇಳಿದಳು.

ನವೋದಯ

447

"ನಿರ್ಣಯ ಮಂಡಿಸೋದಕ್ಕೆ ಬಿಟ್ಟಿದ್ರೆ ಅವರದೇನು ನಷ್ಟವಾಗ್ತಿತ್ತು?" ಎಂದು
ರೇಗಿದಳು.
"ಬಡವ ಬಾಯಿ ಬಿಡೋದಕ್ಕೆ ಅವಕಾಶಕೊಡಬಾರದು ಅನ್ನೋದು ಅವರ
ಧೋರಣೆ ಕಣೇ."
"ಸ್ವಾತಂತ್ರ್ಯ ಬಂದ್ಮೇಲೂ ಹೀಗ್ಮಾಡೋದೆ?"
"ಸ್ವಾತಂತ್ರ್ಯ ಬಂದರೂ ಮನಸ್ಸಿಗೆ ಹಿಡಿದಿರೋ ಕಿಲುಬು ಅಷ್ಟು ಬೇಗ್ನೆ ಎಲ್ಲಿಗೆ
ಹೋಗುತ್ತೆ ಹೇಳು? ಹಳೇ ಮರ್ಜಿಯ ಜನ ಈಗಲೂ ಇದಾರೆ."
ಇನ್ನು ಗೋಪ್ಯವಾದ ಬೇರೆ ವಿಷಯ ಎನ್ನುವಂತೆ, ಸುನಂದಾ ಮೆಲ್ಲನೆ
ಕೇಳಿದಳು:
"ಮೇಡಮ್‍ಗಳು ಯಾರೂ ಬಂದಿರ್‍ಲಿಲ್ವ ಸಮ್ಮೇಳನಕ್ಕೆ?"
"ಓಹೋ. ಬಂದಿದ್ರು. ಅವರಲ್ಲಿ ಒಬ್ಬಾಕೆ ನಿನ್ನ ಹಾಗೇ ಇದ್ಲು ಕಣೇ."
"ಮಾತಾಡಿಸಿದಿರಾ?"
"ಮನೆಗೆ ಹೋದ್ಮೇಲೆ ಮಾತನಾಡಿಸಿದರಾಯ್ತೂಂತ ಸುಮ್ನಿದ್ದೆ."
ಸುನಂದಾ ನಗುತ್ತಾ ಗಂಡನ ಎದೆಯ ಮೇಲೆ ಕೈಯಾಡಿಸಿದಳು.
...ಲಕ್ಕಪ್ಪಗೌಡರು ಒಂದು ವಾರ ರಜಾ ಪಡೆದು ಊರಿಗೆ ಹೋದರು. ಅಲ್ಲಿ
ಅವರ ತಂಗಿಯ ಮದುವೆ ಗೊತ್ತಾಗಿತ್ತು. ಶಾಲೆಯಲ್ಲಿ ಉಳಿದವರು ಇಬ್ಬರೇ.
ನಾಲ್ಕು ತರಗತಿಗಳನ್ನು ನಡೆಸಿಕೊಂಡು ಹೋಗುವುದು ಅವರಿಗೆ ಪ್ರಯಾಸದ ಕೆಲಸ
ವಾಯಿತು.
ಆದರೆ, ಕೆಲ ದಿನಗಳ ಮಟ್ಟಿಗಾದರೂ ಲಕ್ಕಪ್ಪಗೌಡರಿಲ್ಲವಲ್ಲಾ ಎಂದು ಸಂತೋಷ
ಪಟ್ಟರು ನಂಜುಂಡಯ್ಯ.
ಅವರೆಂದರು:
"ಆತ ಇದ್ದರೆ ಮಾತುಮಾತಿಗೂ ಆತಂಕ. ಈಗ ಸರಾಗವಾಗಿ ಉಸಿರನ್ನಾದರೂ
ಆಡಿಸಬಹುದು."
ಇಂತಹ ಮಾತುಗಳು ಬಂದಾಗಲೆಲ್ಲ ಉಸಿರಾಡಲು ಕಷ್ಟವಾಗುತ್ತಿದ್ದುದು
ಜಯದೇವನಿಗೆ.
ಒಂದು ದಿನ, ಬಹಳ ಹಸನ್ಮುಖಿಯಾಗಿ ನಂಜುಂಡಯ್ಯ ಶಾಲೆಗೆ ಬಂದರು.
"ಜಯದೇವ್! ನಮ್ಮ ಹೈಸ್ಕೂಲಿಗೆ ಮೂರು ಎಕರೆ ಭೂಮಿ ಉಚಿತವಾಗಿ
ಸಿಕ್ತು."
"ಹೌದೆ? ಸಂತೋಷ!"
"ಧರ್ಮಪ್ರವರ್ತಕ ಚೆನ್ನಣ್ಣನವರ ದಾನ. ಹೈಸ್ಕೂಲು ಕಟ್ಟಡಕ್ಕೋಸ್ಕರ
ನಿವೇಶನ ಅಂತ ಭೂದಾನ ಮಾಡಿದಾರೆ"
"ಯಾವ ಕಡೆಗಿದೆ ಸಾರ್, ಜಾಗ?"

448

ಸೇತುವೆ

"ಬಸ್‍ಸ್ಟ್ಯಾಂಡಿಲ್ವೆ? ಅದರ ಉತ್ತರಕ್ಕೆ."
"ನೋಡಿದೀನಿ. ಎತ್ತರದಲ್ಲಿದೆ. ಗಾಳಿ ಚೆನ್ನಾಗಿ ಓಡಾಡುತ್ತೆ."
"ಕಟ್ಟಡದ ಖರ್ಚಿಗೇಂತಲೂ ಸಾವಿರ ರೂಪಾಯಿ ವಾಗ್ದಾನ ಮಾಡಿದಾರೆ.
ಇನ್ನೊಂದು ಸಾವಿರ ಕಿತ್ಕೋಬಹುದು. ಹೈಸ್ಕೂಲಿಗೆ ಅವರ ಹೆಸರೇ ಇಟ್ಟರಾಯ್ತು."
ವಿದ್ಯಾಮಂದಿರಕ್ಕೆ ಯಾವನೇ ಒಬ್ಬ ವ್ಯಕ್ತಿಯ ಹೆಸರಿಡುವುದನ್ನು ಜಯದೇವ
ಎಂದೂ ಇಷ್ಟಪಟ್ಟವನಲ್ಲ. ಅಂತಹ ಹೆಸರುಗಳೆಲ್ಲ ಆತನಿಗೆ ಅಸಹ್ಯವಾಗಿ ತೋರುತ್ತಿ
ದ್ದುವು. ಇಲ್ಲಿ ಈ ಊರಿನ ಹೈಸ್ಕೂಲು ಕಟ್ಟಡಕ್ಕೂ ಅಂತಹದೊಂದು ಹೆಸರು...
ಜಯದೇವ ಮೌನವಾಗಿದ್ದುದನ್ನು ಕಂಡು ನಂಜುಂಡಯ್ಯನೇ ಮುಂದು
ವರಿಸಿದರು:
"ಇಷ್ಟು ಆಗಿರೋದು ಶಂಕರಪ್ಪನವರ ಪ್ರಯತ್ನದಿಂದ. ತಮ್ಮಲ್ಲೇ ಇದ್ದಿದ್ರೆ
ಕಟ್ಟಡಕ್ಕೆ ಬೇಕಾಗೋ ಹಣವನ್ನೆಲ್ಲ ತಾವೊಬ್ರೇ ಕೊಡ್ತಾ ಇದ್ರು ."
"ಶಂಕರಪ್ಪನವರು ದೊಡ್ಡ ಶ್ರೀಮಂತರಲ್ವೆ ಸಾರ್?"
"ಶ್ರೀಮಂತರೇನೋ ನಿಜ. ಆದರೆ ಕಟ್ಟಡದ ಪ್ರಶ್ನೆ ಹಲವಾರು ಸಾವಿರದ್ದು.
ಸಾಲದ್ದಕ್ಕೆ ಸಾರ್ವಜನಿಕ ಕೆಲಸ. ಹತ್ತಾರು ಜನ ಸೇರಿದರೆ ಸುಲಭವಾಗಿ ಆಗುತ್ತೆ.
ಅಲ್ವೆ?"
"ಅದು ನಿಜ."
"ಕಟ್ಟಡಕ್ಕೆ ಚೆನ್ನಣ್ಣನವರ ಹೆಸರೇ ಇರಲೀಂತ ಸಲಹೆ ಮಾಡ್ದೋರೂ ಅವರೇ.
ಅದೀಗ ನಿಜವಾದ ತ್ಯಾಗ!"
ಎಂತಹ ದುರವಸ್ಥೆ ಒದಗಿತ್ತು, 'ತ್ಯಾಗ' ಪದಕ್ಕೆ!
ಜಯದೇವ ಉಗುಳು ನುಂಗಿದ.
ನಂಜುಂಡಯ್ಯನೆಂದರು:
"ಎರಡನೆ ಕರಪತ್ರ ಹೊರಡಿಸ್ಬೇಕು ಜಯದೇವ್. ಅದರಲ್ಲಿ ಈ ಕೊಡುಗೆ

ವಿಷಯ ಜಾಹೀರುಮಾಡ್ಬೇಕು. ಆಗದೆ?"
"ಸರಿ ಸಾರ್."
"ನಿನ್ನೆ ರಾತ್ರೆ ಶಂಕರಪ್ಪನೋರು ಶುಭವಾರ್ತೆ ತಂದಾಗಿನಿಂದ, ನಿಮಗೆ
ಯಾವತ್ತು ತಿಳಿಸೇನು ಅಂತ ತವಕ ಪಡ್ತಾ ಇದ್ದೆ. ನಿಜವಾಗಿಯೂ ನನಗೆ ತುಂಬಾ
ಸಂತೋಷವಾಗಿದೆ. ಎಷ್ಟೋ ಕಾಲದಿಂದ ಕಾಣ್ತಿದ್ದ ಕನಸು ಕೈಗೂಡೋ ಸಂದರ್ಭ
ಒದಗ್ತಿದೆ ಅನ್ನೋದು ಸಾಮಾನ್ಯ ವಿಷಯವೆ?"
ರಂಗರಾಯರೂ ಹಿಂದೆ ಹೇಳಿದ್ದರು_ಕನಸು ಕಾಣುವುದು ಒಳ್ಳೆಯದೆಂದು.
ಕನಸು ಕಾಣದ ಮನುಷ್ಯ ಏನನ್ನೂ ಸಾಧಿಸಲಾರ.
ಜಯದೇವನ ಮೌನ ಅರ್ಥವಾಗದೆ ನಂಜುಂಡಯ್ಯನೆಂದರು:
“ಯಾಕೆ ಸುಮ್ಮನಿದೀರಾ?"

ನವೋದಯ

449

"ಏನು ಹೇಳಬೇಕೋ ತೋಚ್ತಾ ಇಲ್ಲ."
"ನನಗೆ ಗೊತ್ತು. ಹೆಚ್ಚು ಸಂತೋಷವಾದಾಗ ಯಾವಾಗಲೂ ಹೀಗೆಯೇ
ಆಗುತ್ತೆ!"
ಆ ದಿನದ ಸಂಭಾಷಣೆ ಅಲ್ಲಿಗೆ ಮುಗಿಯಿತು.
ಮಾರನೆಯ ದಿನ ಹೆಚ್ಚಿನ ಸುದ್ದಿಯೊಡನೆ ನಂಜುಂಡಯ್ಯ ಬಂದರು.
"ಬರುವ ವರ್ಷ ಸರ್ವೋದಯದ ದಿವಸ ಕಟ್ಟಡದ ಶಂಕುಸ್ಥಾಪನೆ ಮಾಡಿಯೇ
ಬಿಡೋಣ. ಎಷ್ಟು ತಡ ಅಂದರೂ ಮಳೆಗಾಲ ಮುಗಿಯೋದರೊಳಗೆ ಕಟ್ಟಡ ಸಿದ್ಧ
ವಾಗುತ್ತೆ. ಹೊಸ ರಾಜ್ಯ ಸ್ಥಾಪನೆಯಾದ ತಕ್ಷಣವೆ ನಮ್ಮೂರಿನ ಪ್ರೌಢಶಾಲೆಯ
ಉದ್ಘಾಟನೆಯನ್ನೂ ಮಾಡಿಸೋಣ. ಕರ್ನಾಟಕ ಪ್ರಾಂತದಲ್ಲಿ ಹೊಸದಾಗಿ ಸ್ಥಾಪಿತ
ವಾಗೋ ಶಾಲೆಗಳಲ್ಲೆಲ್ಲಾ, ನಮ್ಮದೇ ಮೊದಲಿನದಾಗಬೇಕು. ಏನ್ಹೇಳ್ತೀರಾ?"
ಶೀಘ್ರವಾಗಿ ಬದಲಾಗುತಿದ್ದ ಚಿತ್ರ. ಆ ಕಲ್ಪನೆ ರಮ್ಯವಾಗಿತ್ತು.
"ಯೋಜನೆ ಚೆನ್ನಾಗಿದೆ_ಸೊಗಸಾಗಿದೆ."
"ಚೆನ್ನಣ್ಣನವರ ಕೊಡುಗೆಯ ವರದಿ ಆಗಲೆ ಪತ್ರಿಕೆಗಳಿಗೆ ಹೋಗಿದೆ. ಅಲ್ಲಿ
ಯಾರಿಗಾದರೂ ಬರೆದು, ನಮ್ಮೂರಿನ ವಾರ್ತೆಗಳು ಸರಿಯಾಗಿ ಬರೋಹಾಗ್ಮಾ
ಡ್ಬೇಕು."
...ಲಕ್ಕಪ್ಪಗೌಡರು ಊರಿನಿಂದ ಬಂದರು. ಬೇಗನೆ ಜರಗಲಿದ್ದ ಮಂಡ್ಯ
ಸಮ್ಮೇಳನದ ಸಿದ್ಧತೆಯನ್ನು ಅವರು ಬಾಯ್ದಣಿಯೆ ಬಣ್ಣಿಸಿದರು:
“ಈ ಸಮ್ಮೇಳನದ ಉದ್ದೇಶ ಸಾಧುವಾದದ್ದೂಂತ ನನಗೆ ಅನಿಸೋದಿಲ್ಲ,"
ಎಂದ ಜಯದೇವ.
“ನಿಮಗೆ ತಿಳಿವಳಿಕೆ ಬರೋ ಹೊತ್ತಿಗೆ ಎಷ್ಟೋ ಬದಲಾವಣೆಗಳಾಗಿರ್‍ತವೆ,
ನೋಡ್ತಿರಿ!" ಎಂದರು ಲಕ್ಕಪ್ಪಗೌಡರು.
"ಅದೇ ಮಾತನ್ನು ನಿಮಗೂ ಅನ್ವಯಿಸಬಹುದೆ?" ಎಂದು ನಂಜುಂಡಯ್ಯ
ಮೆಲುದನಿಯಲ್ಲಿ ಕೇಳಿದರು.
“ತಮಗಲ್ಲ ಸಾರ್ ನಾನು ಹೇಳಿದ್ದು," ಎಂದು ಗೌಡರು ಸಿಡಿನುಡಿದರು.
ನಂಜುಂಡಯ್ಯನಿಗೆ ರೇಗಿತು. ಅವರೂ ಸ್ವರವೇರಿಸಿ ಅಂದರು:
"ನಿಮ್ಮ ಜತೇಲಿ ಈ ವಿಷಯ ನಾನಿನ್ನು ಮಾತೇ ಎತ್ತೋದಿಲ್ಲ. [ಮತ್ತಷ್ಟು
ಗಟ್ಟಿಯಾಗಿ] ಕಿರಾತರ ಹಾಗೆ ಯಾಕೆ ಕಿರಿಚ್ಕೋತೀರಾ? ಮನುಷ್ಯರ ಹಾಗೆ ಮಾತಾ
ಡೋಕೆ ಕಲೀರಿ."
"ತಮ್ಮಿಂದ ನಾನದನ್ನು ತಿಳಕೋಬೇಕಾದ್ದಿಲ್ಲ."
"ಸಂತೋಷ."
ಜಯದೇವ, ಈ ಸಂಭಾಷಣೆಯನ್ನು ತಡೆಯಬೇಕೆಂದು, "ಯಾಕ್ಸಾರ್ ಆದ

57

450

ಸೇತುವೆ

ಕ್ಕೆಲ್ಲ ಇಷ್ಟು ಮಾತು?" ಎನ್ನುವುದಕ್ಕೂ ಗಂಟೆಬಾರಿಸಬಹುದೆ_ಎಂದು ಕೇಳಲು
ಬಂದಿದ್ದ ಜವಾನ, ಅಂಜುತ್ತ ಅಂಜುತ್ತ ಮುಖ ತೋರಿಸುವುದಕ್ಕೂ ಸರಿಹೋಯಿತು.
ಉಪಾಧ್ಯಾಯರ ಕೊಠಡಿಯಲ್ಲಿ ಏನು ಗದ್ದಲವಾಗುತ್ತಿದೆಯೆಂದು ನಾಲ್ಕಾರು
ಜನ ಹುಡುಗರೂ ದೂರದಿಂದ ಇಣಿಕಿ ನೋಡಿದರು.
"ಯಾಕ್ನಿಂತಿದೀಯೋ ಹಾಗೆ? ಕತ್ತೆ! ಬಾರಿಸು ಗಂಟೆ!" ಎಂದರು ನಂಜುಂಡಯ್ಯ,
ಜವಾನನಿಗೆ.
ಗೌಡರು ಬುಸುಗುಟ್ಟುತ್ತಲೆ ಎದ್ದು, ಪುಸ್ತಕವೆತ್ತಿಕೊಂಡು ಹೊರಹೋದರು.
ನಂಜುಂಡಯ್ಯ ಅವುಡುಗಚ್ಚಿ, ಹೂಂಕರಿಸಿ, ಅಂದರು:
"ಸಂಸ್ಕೃತಿ ಇಲ್ಲದ ಮನುಷ್ಯ! ನಾವಿಬ್ಬರೂ ಹೈಸ್ಕೂಲಿಗೆ ಹೊರಟ್ಹೋದ್ಮೇಲೆ,
ತಾನೇ ಇಲ್ಲಿಗೆ ಹೆಡ್ ಮೇಸ್ಟ್ರಾಗ್ಬಹುದೂಂತ ಭಾವಿಸಿದಾನೆ. ಏನಾದರೂ ಮಾಡಿ
ಅದನ್ನು ತಪ್ಪಿಸ್ಲೇಬೇಕು."
"ಇನ್ನೂ ಒಂದು ವರ್ಷ ಇದೆಯಲ್ಲ. ಈಗ ಯಾಕ್ಸಾರ್ ಆ ವಿಷಯ?"
ಮರೆತ್ಬಿಡಿ!"
....ಜಯದೇವನಿಗೆ, ಶಾಲೆ ಅಶಾಂತಿಯ ಬೆಂಗಾಡಾದರೆ, ಮನೆ ನಲವಿನ ವಸಂತ
ವಿಹಾರವಾಯಿತು.
ಸುನಂದಾ ತನ್ನ 'ಆರೋಗ್ಯ'ವನ್ನು ಕುರಿತು ಶಂಕೆ ವ್ಯಕ್ತಪಡಿಸಿದಳು. ಮತ್ತೂ
ಒಂದು ತಿಂಗಳು ಕಳೆದಾಗ ಸಂದೇಹಕ್ಕೆ ಆಸ್ಪದವಿರಲಿಲ್ಲ. ಮಧುರವಾದುದೇನೋ
ತನ್ನ ಎದೆಯನ್ನೆಲ್ಲ ಆವರಿಸಿದಂತೆ ಜಯದೇವನಿಗೆ ಭಾಸವಾಯಿತು.
ಆತ ಹೇಳಿದ:
"ಸುನಂದಾ, ಈಗಲಾದರೂ ಕೆಲಸಕ್ಕೆ ಒಬ್ಬಳನ್ನ ಗೊತ್ತುಮಾಡೋಣ."
ಆಕೆ ಒಪ್ಪಲಿಲ್ಲ:
"ಬೇಡಿ. ಈಗಲೇ ನನಗೆ ಏನಾಗಿದೇಂತ?"
ಮತ್ತೂ ಸ್ವಲ್ಪ ದಿನ ಕಳೆದ ಬಳಿಕ ಒತ್ತಾಯಪಡಿಸಿದರಾಯಿತೆಂದು ಜಯದೇವ
ಸುಮ್ಮನಾದ.
ಆದರೆ ಹೃದಯದೊಳಗಿನ ಸುಖ, ಕಟ್ಟೆಯೊಡೆಯಲು ಯತ್ನಿಸುತ್ತಿತ್ತು.
"ಅಮ್ಮನಿಗೆ ಬರೆಯೊಲ್ವ?”
ಸುನಂದಾ ಆ ವಿಷಯ ಆಗಲೆ ಯೋಚಿಸಿದ್ದಳು.
"ಈಗ ಬೇಡಿ. ಹ್ಯಾಗಿದ್ದರೂ ಹಬ್ಬಕ್ಕೆ ಹೋಗ್ತೀವಲ್ಲ. ಆಗ ಹೇಳಿದರಾಯ್ತು."
ತಾರೀಕು ಪಟ್ಟಿಯಲ್ಲಿ, ಕೆಂಪು ಬಣ್ಣ ಬಳೆದು ನಿಂತಿತ್ತು ಹದಿನೈದನೆಯ ಅಂಕೆ.
"ಇನ್ನು ಒಂದೇ ವಾರ. ಮೇಲಿನ ಭಾನುವಾರ ಹೊರಟ್ಬಿಡೋಣ," ಎಂದ
ಜಯದೇವ.
...ನಂಜುಂಡಯ್ಯನೇ ಕೇಳಿದರು, "ಬೆಂಗಳೂರಿಗೆ ಯಾವತ್ತು ಹೊರಡ್ತೀರಾ?"__

ನವೋದಯ

451

ಎಂದು.
ದಿನ ತಿಳಿದಾಗ ಅವರೆಂದರು:
"ಒಂದು ವಾರ ಅಲ್ಲಿರ್ತೀರೇನು?"
"ಇಲ್ಲವಪ್ಪ. ಹಬ್ಬ ಮುಗಿದ ತಕ್ಷಣ ಬಂದ್ಬಿಡ್ತೀನಿ."
"ನಿಮ್ಮ ಹೆಸರಿಗೆ ರಜಾ ಇನ್ನೂ ಬೇಕಾದಷ್ಟಿದೆಯಲ್ಲ."
"ಶಾಲೆ ನಡೀತಿರುವಾಗ ಬರದೇ ಇರೋಕೆ ಬೇಜಾರು."
"ಮದುವೆ ಆದ್ಮೇಲೂ ಈ ಮಾತು ಹೇಳ್ತಿದೀರಲ್ಲ. ಆಶ್ಚರ್ಯ!"
ಜಯದೇವ ನಕ್ಕು ಹೇಳಿದ:
“ಹೋಗಲಿ ಸಾರ್. ನೀವು ಅಷ್ಟು ಒತ್ತಾಯಿಸ್ತೀರಿ ಅಂದ್ಮೇಲೆ ಒಂದೆರಡು
ದಿವಸ ಹೆಚ್ಚಾಗೇ ಅಲ್ಲಿದ್ದು ಬರ್ತೀನಿ."
"ಭೇಷ್! ಬೆಂಗಳೂರಲ್ಲಿ ನಿಮ್ಮಿಂದ ನನಗೆ ಎರಡು ಕೆಲಸವಾಗ್ಬೇಕು."
"ಧಾರಾಳವಾಗಿ ಮಾಡ್ಕೊಂಡು ಬರ್ತೀನಿ."
"ಒಂದು ಸ್ವಾರ್ಥದ್ದು, ಇನ್ನೊಂದು ಪರಾರ್ಥದ್ದು."
"ಹೇಳಿ ಸಾರ್."
"ಆಕಾಶವಾಣಿ ಬೆಂಗಳೂರಿಗೆ ಹೋದ ಈ ಒಂದು ವಾರದಿಂದ ರೇಡಿಯೋ
ಕೊಂಡುಬಿಡಬೇಕೂಂತ ಮನಸಾಗಿದೆ. ಇಷ್ಟು ವರ್ಷ ಅದರ ಯೋಚನೆಮಾಡಿರಲಿಲ್ಲ.
ಆದರೆ ಈ ಹೊಸ ಸನ್ನಿವೇಶದಲ್ಲಿ_"
"ನಿಮ್ಮನೇಲಿ ರೇಡಿಯೋ ಇದ್ದರೆ ನನಗೂ ಅನುಕೂಲ. ಯಾವತ್ತಾದರೂ
ಯಾವುದಾದರೂ ಕಾರ್ಯಕ್ರಮ ಕೇಳ್ಬಹುದು. ಹೇಳಿ, ಯಾವುದು ಬೇಕು?"
"ಆಯ್ಕೆಯ ಜವಾಬ್ದಾರೀನ ನಿಮಗೇ ಬಿಟ್ಟೀದೀನಿ. ಮುನ್ನೂರು ರೂಪಾಯಿ
ಒಳಗಿಂದು."
"ಫಿಲಿಪ್ಸಾಗಲೀ, ಬುಶ್ ಆಗಲೀ ತರ್ತೀನಿ. ನನ್ನ ಭಾವನಿಗೆ ಇದರ ಮಾಹಿತಿ
ಜಾಸ್ತಿ. ಅಷ್ಟು ರೂಪಾಯಿ ಒಳಗೆ, ಚೆನ್ನಾಗಿರೋದೇ ಸಿಗುತ್ತೆ."
"ಇನ್ನೊಂದು, ಹೈಸ್ಕೂಲಿಗೆ ಸಂಬಂಧಪಟ್ಟದ್ದು. ಮುಖ್ಯವಾಗಿರೋ ಎಲ್ಲಾ
ದಿನಪತ್ರಿಕೆಗಳ ಸಂಪಾದಕರನ್ನ ನೀವು ಕಂಡು ಬರಬೇಕು."
ಪತ್ರಿಕಾ ಸಂಪಾದಕರನ್ನು ಕಾಣುವ ಕೆಲಸ ಅಪ್ರಿಯವೇನೂ ಆಗಿರಲಿಲ್ಲ. ಆದರೆ
ಆ ಭೇಟಿಯಿಂದ ಹೆಚ್ಚಿನ ಪ್ರಯೋಜನವಾದೀತೆಂಬ ನಂಬಿಕೆ ಜಯದೇವನಿಗಿರಲಿಲ್ಲ.
"ಅದು ಬಹಳ ಅಗತ್ಯ ಎಂದಾದರೆ, ಕಂಡು ಬರ್ತೀನಿ."
"ಹೌದು, ಅಗತ್ಯ. ವೈಯಕ್ತಿಕವಾಗಿ ಹೋಗಿ ನೋಡೋದು ಯಾವಾಗಲೂ
ಮೇಲು. ಹೈಸ್ಕೂಲು ಸ್ಥಾಪನೆಗೆ ನಾವು ಮಾಡ್ತಿರೋ ಪ್ರಯತ್ನಗಳನ್ನೆಲ್ಲ ವಿವರಿಸಿ
ಹೇಳಿ. ಅವರು ನಾವು ಕಳಿಸೋ ವಾರ್ತೆಗಳನ್ನೆಲ್ಲ ಪೂರ್ತಿಯಾಗಿ ಪ್ರಕಟಿಸಿದರೆ ನಮಗೆ
ತುಂಬಾ ಸಹಾಯವಾಗುತ್ತೆ."

452

ಸೇತುವೆ

"ಆಗಲಿ. ಹೇಳ್ತೀನಿ."
... ಶನಿವಾರ ಮಧ್ಯಾಹ್ನ ‍‍ಇಂದಿರೆಯೂ ಆಕೆಯ ತಾಯಿಯೂ ಸುನಂದೆಯನ್ನು
ಕಾಣಲು ಬಂದರು. ಬೆಳಗ್ಗೆ ಶಾಲೆ ಶನಿವಾರ. ಜಯದೇವ ಮನೆಗೆ ಬರುವ ಹೊತ್ತು.
ಇಬ್ಬರಿಗೋಸ್ಕರ ಮಾತ್ರ ಅಡುಗೆ ಸಿದ್ಧವಾಗಿತ್ತು. ಆದರೂ ಹತಾಶಳಾಗದೆ
ಸುನಂದಾ ಅಂದಳು:
"ಕೂತ್ಕೊಳ್ಳಿ. ನಮ್ಮಲ್ಲೆ ನೀವು ಊಟಮಾಡಿಹೋಗ್ಬೇಕು,"
ಇಂದಿರೆಯ ತಾಯಿ ನಕ್ಕು ಅಂದರು:
"ಇಲ್ಲವಮ್ಮಾ. ನಾಳೆ ನೀವು ಊರಿಗೆ ಹೊರಡೊಲ್ವೆ?"
"ಹೊರಡ್ತೀವಿ."
"ಅದಕ್ಮುಂಚೆ ನೋಡ್ಕೊಂಡು ಹೋಗೋಣಾಂತ ಬಂದ್ವಿ. ಊಟಕ್ಕಲ್ಲ."
"ಛೆ! ಅದು ಹ್ಯಾಗಾಗುತ್ತೆ?"
ಇಂದಿರಾ ಧ್ವನಿ ಕೂಡಿಸಿದಳು:
"ಊಟಕ್ಕೆ ಇನ್ನೊಂದಿವಸ ಬರ್ತೀವಿ."
"ನಿಮ್ಮಿಬ್ಬರನ್ನೂ ಕರೀಬೇಕೂಂತ ಅವರು ಎಷ್ಟೋ ದಿವಸದಿಂದ ಹೇಳ್ತಾ
ಇದ್ರು."
ಇಂದಿರೆಯ ತಾಯಿ ಅಂದರು:
"ನಮ್ಮ ನೆನಪಾದರೂ ಇದೆಯಲ್ಲ ಸದ್ಯಃ! ಮರೆತೇ ಬಿಟ್ಟಿದೀರೇನೋಂತಿದ್ವಿ.
ಒಂದೇ ಊರಲ್ಲಿ ಇದ್ದೂ ಇಷ್ಟು ಅಂತರ ಅಂದರೆ_"
"ನನ್ನ ತಪ್ಪಲ್ಲ ಕಣ್ರೀ. ಸಾಯಂಕಾಲ ಅವರು ಬರೋದೇ ತಡವಾಗಿ. ಭಾನು
ವಾರ ಯಾರಾದರೂ ಬಂದ್ಬಿಡ್ತಿದ್ರು."
ಅಷ್ಟು ಹೊತ್ತಿಗೆ ಜಯದೇವ ಬಂದ. ಹಬ್ಬಕ್ಕೆಂದು ಹೊರಡುವ ಹಿಂದಿನ
ದಿನ ಆ ತಾಯಿ ಮಗಳು ಕಾಣಲು ದೊರೆತರೆಂದು, ಆತನಿಗೆ ಸಂತೋಷವಾಯಿತು.
ಕೈಕಾಲು ತೊಳೆದು ಬಂದ ಆತನನ್ನು ಕುರಿತು, ಇoದಿರೆಯ ತಾಯಿ ಹೇಳಿದರು:
"ಇಬ್ಬರೂ ದಯವಿಟ್ಟು ಚಾಪೆ ಮೇಲೆ ಕುತ್ಕೊಂಬಿಡಿ ಒಂದ್ನಿಮಿಷ."
"ಏನಿದು? ಏನಿದು?"
ಪ್ರತಿಭಟನೆಯಿಂದ ಪ್ರಯೋಜನವಿರಲಿಲ್ಲ. ಬೆಳ್ಳಿಯ ದೊಡ್ಡ ತಟ್ಟೆಯಲ್ಲಿ
ಇಂದಿರಾ ಉಡುಗೊರೆಗಳನ್ನು ಕೊಟ್ಟಳು_ಕಲಾಬತ್ತಿನ ಸೀರೆ; ಜರತಾರಿ ಅಂಚಿನ
ಪಂಚೆ.
ಏನು ಹೇಳಬೇಕೆಂದು ತಿಳಿಯದೆ ಜಯದೇವ ಚಡಪಡಿಸಿದ.
ಆತನೆಂದ:
"ಇದು ಸರಿಯಲ್ಲ."
ದೂರ ನಿಂತಿದ್ದ ಇಂದಿರೆಯ ತಾಯಿ ಹೇಳಿದರು:

ನವೋದಯ

453

"ಸರಿಯಾಗಿದೆ. ನೀವಾಗಿ ಕರೆದಾಗ ಬಂದು ಕೊಡೋಣಾಂತಿದ್ವಿ. ನೀವು
ಕರೀಲೇ ಇಲ್ಲ. ಕಡೆಗೆ ನಾವಾಗೇ ಬಂದ್ವಿ."
"ಕ್ಷಮಿಸೀಮ್ಮಾ. ಏನೇನೋ ಅನನುಕೂಲವಾಯ್ತು."
ಆಕೆ ನಕ್ಕರು:
“ತಮಾಷೆಗೆ ಹೇಳ್ದೆ. ಉಡುಗೊರೆ ದೀಪಾವಳಿಗೆ ಮುಂಚೆ ಕೊಟ್ಟರೂ
ತಪ್ಪೇನಿಲ್ಲ!"
ತಾಯಿ ಮಗಳು ಊಟಮಾಡಲೇ ಇಲ್ಲ. ಬರಿಯ ಪಾನಕವನ್ನಷ್ಟೆ ಕುಡಿದು
ಹೊರಟರು.
ಹೊರಡುವುದಕ್ಕೆ ಮುಂಚೆ ಇಂದಿರೆಯ ತಾಯಿ, ಅಡುಗೆ ಮನೆಯೊಳಕ್ಕೆ ಬಂದು,
ಸುನಂದೆಯ ಮು೦ಗುರುಳು ನೇವರಿಸಿ, ನೆಟಿಕೆ ಮುರಿದು ಹೇಳಿದರು:
"ಆರೋಗ್ಯ ಜೋಪಾನ ಮಗೂ!"
ಆ ತಾಯಿಗೆ ಗೊತ್ತಾಗಿ ಹೋಗಿತ್ತು!
ಸುನಂದೆಯ ಮುಖ ಲಜ್ಜೆಯಿಂದ ಕೆಂಪಾಯಿತು. ಹೊರಗೆ ಜಯದೇವ
ಹೇಳಿದ:
"ದೀಪಾವಳಿ ಮುಗಿಸ್ಕೊಂಡು ನಾವು ಬಂದ್ಮೇಲೆ ದಯವಿಟ್ಟು ನಮ್ಮ ಮನೆ
ಗೊಮ್ಮೆ ಬನ್ನಿ."
ಇಂದಿರೆಯ ತಾಯಿ ಅಂದರು:
"ಬರ್ತೀವಿ ಮೇಸ್ಟ್ರೆ. ಖಂಡಿತ ಬರ್ತೀವಿ."
ಅವರು ಹೋದ ಬಳಿಕ ಜಯದೇವ ಸುನಂದೆಯನ್ನು ಕೇಳಿದ:
"ಒಳಗೆ ಏನು ಹೇಳಿದರೆ ಅವರು?"
"ಏನಿಲ್ಲ!" ಎಂದಳು ಸುನಂದಾ, ಕತ್ತು ಕೊಂಕಿಸಿ.
"ನೀನು ಏನಂತೀಯೋ ಅಂತ ಅವರನ್ನ ಈವರೆಗೂ ಕರೀದೇ ಇದ್ದದ್ದು ಎಷ್ಟು
ತಪ್ಪಾಯ್ತು ನೋಡು."
"ಸಾಕು, ಠಕ್ಕಿನ ಮಾತು ಇನ್ನು ಮೇಲೆ ಕರೆಯೋಣ. ಆಗ ತಪ್ಪು ಮರೆತ್ಬಿ
ಡ್ತಾರೆ."
...ಹೊರಡುವ ಸಿದ್ಧತೆ. ಮನೆಯ ಉಸ್ತುವಾರಿ ನೋಡಲು ನೆರೆಹೊರೆಯವರಿಗೆ
ಪ್ರಾರ್ಥನೆ.
ರಾತ್ರೆ ತಿಮ್ಮಯ್ಯ ಬಂದರು.
"ಏನು? ಹಳ್ಳಿಗೆ ಹೋಗ್ಲಿಲ್ವೆ?"
"ಹೋಗಿ ಬಂದೆ. ನೀವು ನಾಳೆ ಬೆಳಗ್ಗೆ ಹೊರಡ್ತೀರಿ ಅನ್ನೋದು ನೆನಪಾಯ್ತು."
ಅವರ ಕಂಕುಳಲ್ಲಿದ್ದ ದೊಡ್ಡ ಪೊಟ್ಟಣ ಕೆಳಕ್ಕಿಳಿಯಿತು.
"ಏನಿದು?"

454

ಸೇತುವೆ

"ನಮ್ಮೂರು ಚಿಗುರೆಲೆ ಮೈಸೂರು ಚಿಗುರೆಲೆಗಿಂತ ವಾಸಿ. ದುಂಡುಮಲ್ಲಿಗೆ
ಇದೆ. ಮೈಸೂರು ಸಂಸ್ಥಾನದಲ್ಲೇ ಇಲ್ಲ-ಅಂಥಾದ್ದು ಇನ್ನು ಆ ಬದನೇಕಾಯಿ__"
"ನಿಮಗೆ ಬೇರೇನೂ ಕೆಲಸ ಇರ್ಲಿಲ್ಲಾಂತ ತೋರುತ್ತೆ, ಅಲ್ಲ?"
"ಇಲ್ಲ. ಊಟ ಹಾಕಿ. ರಾತ್ರೆ ಇಲ್ಲೇ ಮಲಗ್ತೀನಿ. ಬೆಳಗ್ಗೆ ನಿಮ್ಮಿಬ್ಬರನ್ನೂ
ಬಸ್ಸು ಹತ್ತಿಸಿ ನಮ್ಮ ಹಳ್ಳಿಗೆ ಹೋಗ್ತೀನಿ."



೧೪

ವೇಣು, ರೈಲು ನಿಲ್ದಾಣಕ್ಕೆ ಬಂದಿದ್ದ. ಶ್ರೀಪತಿರಾಯರೂ ಅವರಾಕೆಯೂ
ಅಳಿಯನನ್ನೂ ಮಗಳನ್ನೂ ಆದರದಿಂದ ಬರಮಾಡಿಕೊಂಡರು.
ಮಗಳ ಕಡೆಯಿಂದ 'ಆ ಸುದ್ದಿ'ಯೇ ಇರಲಿಲ್ಲವೆಂದು ಸುನಂದೆಯ ತಾಯಿಗೆ
ಒಂದು ರೀತಿಯ ಆತಂಕವೆನಿಸಿತ್ತು. ಈಗ ಮಗಳನ್ನು ಕಂಡ ಬಳಿಕ ವಿಷಯ ತಿಳಿದು
ಆಕೆ ಹಿರಿ ಹಿರಿ ಹಿಗ್ಗಿದಳು. [ವಯಸ್ಸಾದ ಯಾವ ಹೆಂಗಸಿಗೆ ತಾನೇ ಇಲ್ಲ, ಮೊಮ್ಮಕ್ಕ
ಳನ್ನು ಕಾಣುವ ಆಸೆ?]
ಮಡದಿಯಿಂದ ಅದನ್ನು ತಿಳಿದ ಶ್ರೀಪತಿರಾಯರು, ನರೆತ ಮೀಸೆಯನ್ನು
ಬೆರಳಿಂದ ಮುಟ್ಟಿ, ಮುಗುಳುನಗೆಯನ್ನು ಮರೆಸಿಕೊಂಡರು.
ಹಬ್ಬಕ್ಕೆಂದು ವೇಣುವಿಗಿದ್ದುದು ಒಂದೇ ದಿನದ ರಜಾ. ಆದರೆ, ಭಾವನ ಮತ್ತು
ತಂಗಿಯ ಜತೆ ಇರಬೇಕೆಂದು ಆತ ಮತ್ತೂ ಎರಡು ದಿನಗಳ ರಜಾ ಪಡೆದ.
ಸುನಂದಾ ಹೇಳಬೇಕಾಗಿದ್ದ ವಿಷಯಗಳೇನು ಕಡಮೆಯೆ? ನೋಡಲೇ ಬೇಕಾದ
ಊರು ಎಂದು ಬಾಯಲ್ಲಿ ನೀರೂರುವಂತಹ ಬಣ್ಣನೆ.
"ನಿನ್ನ ನೆನಪು ಮಾತ್ರ ಆಗಾಗ್ಗೆ ಆಗ್ತಿತ್ತಮ್ಮ. ಒಮ್ಮೊಮ್ಮೆ ಹೊರಟು ಬಂದ್ಮಿಡಲೆ
ಅನಿಸ್ತಿತ್ತು."
ಅಂತಹ ಮಾತು ಕೇಳಿದಾಗ ತಾಯಿಯ ಮುಖವರಳುತಿತ್ತು.ಆಕೆ ಮಗಳನ್ನು
ದೃಷ್ಟಿಯಿಂದಲೆ ಮುದ್ದಿಸುತ್ತ ಹೇಳುತ್ತಿದ್ದರು:
"ಹುಚ್ಚು ಹುಡುಗಿ!"
ರೇಡಿಯೊ ಒಂದಿರಲಿಲ್ಲ ಆಕೆಯ_ಗಂಡನ_ಮನೆಯಲ್ಲಿ.
"ಆಕಾಶವಾಣಿ ಬೆಂಗಳೂರಿಗೆ ಬಂದ್ಮೇಲೆ ತುಂಬಾ ಚೆನ್ನಾಗಿ ಕೇಳಿಸುತ್ತೆ. ಅಲ್ವೆ
ಅಮ್ಮ?"
"ನೀನು ಹೋದ್ಮೇಲೆ ಅದನ್ನ ಸರಿಯಾಗಿ ಹಾಕೋರೂ ಇಲ್ಲ ಕಣೇ."
ಸುನಂದಾ ರೇಡಿಯೋದ ಕಿವಿತಿರುವಿದಳು. ನಭೋಮಂಡಲದಲ್ಲಿ, ಪ್ರಪಂಚದ
ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸಂಚಾರ ಮಾಡಿದಳು. ಆ ಸ್ವರಲೋಕದಲ್ಲಿ
ಮೈಮರೆಯುವುದು ಎಷ್ಟು ಹಿತಕರವಾಗಿತ್ತು! ಆದರೆ 'ಅವರು' ಮನೆಯಲ್ಲಿರಲಿಲ್ಲ;
ಅಣ್ಣನ ಜತೆ ಹೊರ ಹೋಗಿದ್ದರು. ಅದರಿಂದಾಗಿ, ಬಾನುಲಿಯ ಇಂಚರ ಬಲು
ಬೇಗನೆ ಆಕೆಯನ್ನು ಬೇಸರಪಡಿಸಿತು.
ವೇಣುವಿಗೆ ಜಯದೇವನೀಗ ಭಾವ. ಹೊರ ಜಗತ್ತಿನ ದೃಷ್ಟಿಯಲ್ಲಿ,
ಸುನಂದೆಯೇ ಅವರಿಬ್ಬರನ್ನು ಬಿಗಿದಿದ್ದ ರಜ್ಜು. ಆದರೆ ವಾಸ್ತವವಾಗಿ ಅದೆಷ್ಟು ಸುಳ್ಳು!
ಸುನಂದೆಗಿಂತಲೂ ಮುಂಚೆಯೇ ಜಯದೇವನನ್ನು ಕಂಡವನು, ಆತನ ಸ್ನೇಹಿತನಾದ
ವನು, ವೇಣು. ಆತನಿಗೆ ಜಯದೇವ ಅಂದೂ ಜಯಣ್ಣನೇ; ಇಂದೂ ಜಯಣ್ಣನೇ.
"ಪಟಾಕಿ ಹಚ್ತಿಯೇನೋ ಜಯಣ್ಣ? ತರಲಾ?"
"ಹೂಂ."
ಶ್ರೀಪತಿರಾಯರೆಂದರು:
"ಆ ಆಟಂಬಾಬ್ ಮಾತ್ರ ತರಬೇಡೀಪ್ಪಾ. ನನ್ನ ಕಿವಿ ಒಡೆದು ಹೋಗುತ್ತೆ."
ಸುನಂದಾ, ಬೆಳಕಿನ ಲೋಕದಲ್ಲಿ ಮಗುವಾದಳು. ನಕ್ಷತ್ರಗಳು ಜಯದೇವನ
ಸುತ್ತಲೂ ಮಿನುಗಿದಾಗ ಆಕೆ ಕೈತಟ್ಟಿ ಕುಣಿದಳು.
ಆಗ ತಾಯಿ, ಮಗಳ ಬಳಿಗೆ ಬಂದು ಅಂದರು:
"ನೀನು ಹಾಗೆಲ್ಲಾ ಚೆಲ್ಲು ಚೆಲ್ಲು ಆಡ್ಬಾರದು ಕಣೇ. ದೇಹಕ್ಕೆ ಆಯಾಸ
ವಾಗುತ್ತೆ."
ಊಟ ಮುಗಿದು ವಿರಾಮವಾಗಿದ್ದ ಹೊತ್ತಿನಲ್ಲಿ ಶ್ರೀಪತಿರಾಯರು ಹೇಳಿದರು:
"ಹೋದ ತಿಂಗಳು ನಿನ್ನ ತಂದೆ ಬಂದಿದ್ರು ಜಯಣ್ಣ. ಏನೋ ಕೋರ್ಟು
ಕೆಲಸವಿತ್ತಂತೆ. ಒಂದು ಕಾಲುಘಂಟೆ ಹೊತ್ತು ಕೂತಿದ್ದು ಹೋದ್ರು."
"ಹೌದೆ? ಒಂದು ಸಲ ಮಾತ್ರ ನನಗೆ ಕಾಗದ ಬರೆದಿದ್ರು."
"ನಾಳೆ ನಾಡಿದ್ನಲ್ಲಿ ಹೋಗಿ ನೋಡ್ಕೊಂಡು ಬರ್ತೀಯೇನು?"
ತಂದೆಯನ್ನು ನೋಡಿ ಬರಬೇಕೆಂಬ ಮನಸೇನೋ ಜಯದೇವನಿಗಿತ್ತು. ಆದರೆ
ಈ ಸಲ ಕಾಲಾವಕಾಶವಿರಲಿಲ್ಲ. ಅಲ್ಲದೆ, ಜನವರಿ ತಿಂಗಳಿಡೀ ಕಳೆಯಬೇಕಾದ
ವರ್ಷದ ರಜಾ ಸಮೀಪಿಸುತ್ತಿತ್ತು. ಆಗ ಹೋಗಿ ಕೆಲವು ದಿನ ಇದ್ದು ಬಂದರಾಯ್ತು_
ಎಂಬ ಯೋಚನೆ ಬೇರೆ.
"ಈ ಸಲ ಬಿಡುವಾಗೊಲ್ಲ ಅಂತ ತೋರುತ್ತೆ. ಜನವರಿಯೆಲ್ಲಾ ರಜಾ ಇದೆ
ಯಲ್ಲ. ಆಗ ಹೋಗ್ತೀನಿ."
"ನಿನಗೆ ಅನುಕೂಲವಿದ್ದ ಹಾಗೆ ಮಾಡು."
ಸುನಂದೆಯ ತಾಯಿ ಹೇಳಿದರು:
"ನಿನ್ನ ತಮ್ಮ ಮಾಧು ಇಲ್ಲೇ ಇದಾನೋ ಏನೋ. ಹೋಗಿ ಕರಕೊಂಡ್ಬ
ರ್ತೀಯಾ ಜಯಣ್ಣ?"

456

ಸೇತುವೆ

“ಇವತ್ತು ಹಬ್ಬ ಅಂತ ಊರಿಗೆ ಹೋಗಿರ್ತಾನೆ. ನಾಳೆ ಸಿಗಬಹುದು.
ನೋಡೋಣ."
ಶ್ರೀಪತಿರಾಯರು ಮಗಳನ್ನು ನೋಡುತ್ತ ಕೇಳಿದರು:
"ಸಿನಿಮಾ ನೋಡ್ಬೇಕೇನೆ ನಿಂಗೆ?"
"ಇವತ್ತು ಗದ್ದಲ ಜಾಸ್ತಿ," ಎಂದ ವೇಣು.
ಮಗಳೆಂದಳು:
"ಆ ಮೇಲೆ ನೋಡಿದರಾಯ್ತು."
ಆರಾಮ ಕುರ್ಚಿಯ ಮೇಲೆ ಕುಳಿತು, ತಮ್ಮ ಪುಟ್ಟ ಸಂಸಾರವನ್ನು ದಿಟ್ಟಿಸಿ
ನೋಡುತ್ತ, ಶ್ರೀಪತಿರಾಯರೆಂದರು:
"ನಮ್ಮ ವೇಣು ತಲೆಹರಟೆ ಮಾಡ್ತಿದಾನೆ. ಸ್ವಲ್ಪ ಬುದ್ಧಿವಾದ ಹೇಳ್ಬಿಟ್ಟು
ಹೋಗು, ಜಯಣ್ಣ."
"ಏನಣ್ಣ ಅದು?" ಎಂದು ವೇಣು, ಗಟ್ಟಿಯಾಗಿ ಗದರುವ ಧ್ವನಿಯಲ್ಲಿ ನುಡಿದ.
"ಅದೇನೊ ಸಮಾಚಾರ?" ಎಂದು ಕೇಳಿದ ಜಯದೇವ.
“ಓಹ್ಹೋ! ಏನೋ ಇದೆ," ಎಂದಳು ಸುನಂದಾ.
ಶ್ರೀಪತಿರಾಯರು ನಕ್ಕು ಅಂದರು:
"ಇನ್ನು ಐದು ವರ್ಷ ಆತನ ಮದುವೆಯ ಮಾತು ಎತ್ಕೂಡದಂತೆ!"
ಜಯದೇವ ನಕ್ಕ.
“ಅಷ್ಟೇನಾ?"
"ಆ ವಿಷಯ ನಿಲ್ಸಿ! ಇಲ್ದೇ ಇದ್ರೆ ಹೊರಗೆ ಹೊರಟ್ಹೋಗ್ತೀನಿ!" ಎಂದ
ವೇಣು.
ಎಲ್ಲರೂ ನಗುತ್ತ ಸಂತೋಷಪಡುತ್ತಿದ್ದರೂ ಆತನ ಮುಖ ಮಾತ್ರ ಕೆಂಪಗೆ
ಉರಿಯುತ್ತಿತ್ತು.
ಜಯದೇವನೆಂದ:
"ಒಳ್ಳೇ ಹುಡುಗಿ ಗೊತ್ಮಾಡಿ ಮಾವ. ಆ ಮೇಲಿಂದು ಆ ಮೇಲೆ."
....ಹಬ್ಬದ ರಾತ್ರೆ ಹಾಸಿಗೆಗಳೆಲ್ಲ ಅತ್ತಿತ್ತ ಚಲಿಸುತ್ತಿದ್ದುದನ್ನು ಕಂಡು ಜಯ
ದೇವ ಕೇಳಿದ:
“ಏನು ವೇಣು ಇದು?"
"ನನ್ನ ಕೊಠಡಿ ಖಾಲಿಮಾಡ್ತಿದೀನಿ ಕಣೋ. ಇದು ನಿಮಗೆ, ದಂಪತಿಗೆ."
"ಛೆ! ಛೆ! ಏನೂ ಬೇಡ, ನಾನೂ ನೀನೂ ಇಲ್ಲೇ ಮಲಕೊಳ್ಳೋಣ...."
ಒಳಗೆ ಸುನಂದೆಯೂ ಅಮ್ಮನಿಗೆ ಹೇಳಿದಳು:
"ನಾನು ನಿನ್ನ ಜತೇಲಿ ಮಲಕೊತೀನಿ ಅಮ್ಮ."
"ಹುಚ್ಚಿ!" ಎಂದು ಆ ತಾಯಿ, ಮಗಳನ್ನು ಟೀಕಿಸಿದರು.

ನವೋದಯ

457

ಆದರೆ ಒಳಗಿಂದೊಳಗೆ ಸುನಂದೆ ಜಯದೇವರಿಬ್ಬರಿಗೂ, ಪ್ರತ್ಯೇಕವಾದ ಕೊಠ
ಡಿಯೆ ತಮಗೆ ದೊರೆಯಿತೆಂದು ಸಂತೋಷವಾಯಿತು.
...ಜಯದೇವ ಸುನಂದೆಯರ ಜತೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದುದು,
ತಿಮ್ಮಯ್ಯ ಮೇಸ್ಟ್ರ ಚಿಗುರೆಲೆ_ದುಂಡು ಮಲ್ಲಿಗೆ_ಬದನೆಕಾಯಿಗಳು ಮಾತ್ರ. ಆದರೆ
ದಂಪತಿ ನೀಡಿದ್ದ ವಿಪುಲವಾದ ವಿವರದ ಫಲವಾಗಿ, ತಿಮ್ಮಯ್ಯನವರೂ ಆ ಬಳಗದ
ಒಬ್ಬ ಅಗೋಚರ ಸದಸ್ಯರಾದರು. ಅವರ ಮಾತುಗಳನ್ನು ಕೇಳಿದವರಿಗೆಲ್ಲ, ತಿಮ್ಮಯ್ಯ
ನವರಿಲ್ಲದ ಊರು ಬಲು ಸಪ್ಪೆ ಎನಿಸುತ್ತಿತ್ತು.
ಶ್ರೀಪತಿರಾಯರು ತಿಳಿಯ ಬಯಸಿದ ಬೇರೆ ಒಂದೆರಡು ವಿಷಯಗಳಿದ್ದುವು.
ಆದರೆ ನೇರವಾಗಿ ಜಯದೇವನೊಡನೆಯೆ ಆ ಪ್ರಸ್ತಾಪ ಮಾಡುವುದು ಅವರಿಗೆ ಸರಿ
ತೋರಲಿಲ್ಲ.
ತಂದೆ ಮಗಳನ್ನು ಕೇಳಿದರು:
"ಮನೆ ದೊಡ್ಡದಾಗಿದೆಯೇನೆ?"
"ಹೂಂ. ಅನುಕೂಲವಾಗಿದೆ."
"ಮನೇಲೆ ಟ್ಯೂಶನ್ ಇಟ್ಕೊಂಡಿದೆಯಾ?"
"ಇಲ್ಲ. ಎಷ್ಟೋ ಹುಡುಗರು ಬಂದು ಕೇಳಿದ್ರೂ ಮನೇಲಿ ಪಾಠ ಹೇಳ್ಕೊ
ಡೋದಿಲ್ಲ ಅಂದ್ಬಿಟ್ರು."
ಅಳಿಯನನ್ನು ಟೀಕಿಸಬೇಕೆನಿಸಿತು ಶ್ರೀಪತಿರಾಯರಿಗೆ. ಅದರೆ ಮಗಳೆದುರು ಆ
ಕೆಲಸಮಾಡಲಿಲ್ಲ.
ಬೇರೊಂದು ಬಳಸು ಪ್ರಶ್ನೆ ಅವರು ಕೇಳಿದರು:
"ಬೆಂಗಳೂರಿಗಿಂತ ಖರ್ಚು ಜಾಸ್ತೀನೇನೆ ಅಲ್ಲಿ?"
"ಇಲ್ಲವಪ್ಪ. ಅಲ್ಲಿ ಎಂಥಾ ಖರ್ಚು?"
ಮುಂದಿನ ಹೆಜ್ಜೆ ಸುಲಭವಾಯಿತೆಂದು ಶ್ರೀಪತಿರಾಯರೆಂದರು:
"ದುಡ್ಡು ಮಿಗಿಸಿದೀರಿ ಅನ್ನು."
"ಮಿಗುವಷ್ಟು ಎಲ್ಲಿರುತ್ತೆ? ಸಂಬಳವೆಲ್ಲ ವೆಚ್ಚಕ್ಕೇ ಸರಿ."
ಶ್ರೀಪತಿರಾಯರ ಮುಖ ಗಂಭೀರವಾಯಿತು. ಹೇಳಬೇಕಾಗಿದ್ದುದು ಮರೆತು
ಹೋಯಿತೆಂಬಂತೆ ಸುನಂದೆಯೇ ಅಂದಳು:
"ಸಾಲ ಮಾತ್ರ ಈವರೆಗೂ ನಾವು ಮಾಡಿಲ್ಲ."
ಗೃಹಿಣಿ ಅಭಿಮಾನದಿಂದ ಹೇಳಿದ ಮಾತು.
ತಂದೆ ಅಷ್ಟರಿಂದಲೆ ತೃಪ್ತರಾಗಬೇಕಾಯಿತು.
ಮನೆಯಲ್ಲಿ, ಜಯದೇವ ತಂದಿದ್ದ ಕರಪತ್ರಗಳು ಅವರ ಕಣ್ಣಿಗೆ ಬಿದ್ದುವು.
ಮೂಗಿಗೆ ಕನ್ನಡಕವೇರಿಸಿ ಕುತೂಹಲದಿಂದ ಅವರು, ಅವುಗಳನ್ನೋದಿದರು.

58

458

ಸೇತುವೆ

ಕನ್ನಡಕ ಕೆಳಗಿಳಿಸಿ, ಅವರು ಅಳಿಯನತ್ತ ತಿರುಗಿದರು.
"ಜನರೆಲ್ಲ ಹ್ಯಾಗಿದಾರೆ ಜಯಣ್ಣ? ನಂಬಿಗಸ್ಥರೋ? ಅಲ್ಲ, ನಂಬಿಸಿ ಕತ್ತು
ಕುಯ್ಯೋ ಆಸಾಮಿಗಳೋ?"
"ಅವರಲ್ಲಿ ಒಬ್ಬಿಬ್ಬರು ಚೆನ್ನಾಗಿ ಗೊತ್ತು. ನಾನಂತೂ ಸ್ಟಾಫಿಗೆ ಸೇರ್ಲೇಬೇಕೂಂತ
ಒತ್ತಾಯಿಸ್ತಿದಾರೆ."
"ಈ ಖಾಸಗೀ ಶಾಲೆಗಳದ್ದೆಲ್ಲ ಸ್ವಲ್ಪ ಕಷ್ಟವೇ ಯಾವಾಗಲೂ. ಮಕ್ಕಳು
ಸಂಬಳ ಸರಿಯಾಗಿ ಕೊಡೋದಿಲ್ಲ."
ಅವರು 'ಮಕ್ಕಳು' ಎ೦ದುದು, ಖಾಸಗಿ ಶಾಲೆಗಳನ್ನು ನಡೆಸುವ ಪ್ರಮುಖ
ರನ್ನು ಉದ್ದೇಶಿಸಿ.
"ಅದೇನೋ ನಿಜ," ಎಂದ ಜಯದೇವ.
ಸ್ವಾನುಭವ ಇರದೇ ಇದ್ದರೂ ಖಾಸಗಿ ಶಾಲೆಗಳ ವಿಷಯ ಆತ ಸಾಕಷ್ಟು ಕೇಳಿ
ತಿಳಿದಿದ್ದ. ಆದರೂ ಆ ಹೈಸ್ಕೂಲು ಯಶಸ್ವಿಯಾಗುವ ವಿಷಯದಲ್ಲಿ ಮಾವನಿಗೆ
ಅಪನಂಬಿಕೆ ಹುಟ್ಟಬಾರದೆಂದು ಆತನೆಂದ:
"ಹೈಸ್ಕೂಲು ಸ್ಥಾಪನೆಗೆ ಊರಿನವರ ಬೆಂಬಲ ಬೇಕಾದಷ್ಟಿದೆ. ಹುಡುಗರಿಗೂ
ಕೊರತೆ ಇಲ್ಲ. ಸುತ್ತುಮುತ್ತಲಿನ ಎಷ್ಟೋ ಹಳ್ಳಿಗಳಿಗೆ ಅದೇ ಕೇಂದ್ರ."
ಅಂತೂ ಹೈಸ್ಕೂಲಿನಲ್ಲಿ ಅಧ್ಯಾಪಕವೃತ್ತಿ, ಈಗಿರುವುದಕ್ಕಿಂತ ಹೆಚ್ಚು ಸಂಪಾದನೆ
ಯಾಗುವ ಉದ್ಯೋಗ_ಎಂಬುದು ಸ್ಪಷ್ಟವಾಗಿತ್ತು.
ಬೆಂಗಳೂರಿನಲ್ಲಿ ಜಯದೇವ ಮಾಡಬೇಕಾದ 'ಹೈಸ್ಕೂಲಿನ ಕೆಲಸ' ಒಂದಿತ್ತು.
ಆ ನಿಮಿತ್ತದಿಂದ ಆ ದಿನವೆಲ್ಲ ವೇಣು ಮತ್ತು ಆತ ಬೆಂಗಳೂರು ಸುತ್ತಿದರು. ಪತ್ರಿಕಾ
ಕಛೇರಿಗಳನ್ನು ಹೊಕ್ಕು ಹೊರ ಬಂದರು. ಸುದ್ದಿಯ ಕಚ್ಚಾ ಮಾಲು, ಬಳಕೆಯ
ಸಾಮಗ್ರಿಯಾಗಿ ಮಾರ್ಪಡುವ ಕಾರಖಾನೆಗಳನ್ನು, ಅವರು ಕಂಡರು.
ಏನೋ ಮಹಾ ಕೆಲಸ ಮಾಡಿದವರಂತೆ ತೃಪ್ತರಾಗಿ, ಕೊನೆಯಲ್ಲಿ, ಪರೇಡ್
ರಸ್ತೆಯಲ್ಲಿದ್ದ ಇಂಡಿಯಾ ಕಾಫಿ ಬಾರನ್ನು ಹೊಕ್ಕು ಕಾಫಿ ಕುಡಿದರು.
ಜಯದೇವನ ಪಾಲಿಗೆ ಅದಕ್ಕಿಂತಲೂ ಹೆಚ್ಚು ಜವಾಬ್ದಾರಿಯದಾಗಿದ್ದ ಕೆಲಸ,
ರೇಡಿಯೋ ಕೊಳ್ಳುವುದು. ಇನ್ನೊಬ್ಬರ ಹಣ. ಎಚ್ಚರಿಕೆಯಿಂದಲೆ ಖರ್ಚು ಮಾಡ
ಬೇಕಾದ ಅಗತ್ಯವಿತ್ತು.
ಆದರೆ ವೇಣು, ಆ ಕೆಲಸವನ್ನು ಸುಲಭಗೊಳಿಸಿದ. ಫಿಲಿಪ್ಸ್ ರೇಡಿಯೋ,
ಹೊದಿಕೆಯ ಪೆಟ್ಟಿಗೆಯೊಳಗೆ ಕುಳಿತು ಅವರ ಮನೆಗೆ ಬಂತು. ಚಿಲ್ಲರೆ ರೂಪಾಯಿಗಳೂ
ಉಳಿದುವು.
"ನಿಮ್ಮ ಮನೆಗೂ ಒಂದು ಬೇಡವೆ?" ಎಂದು ಶ್ರೀಪತಿರಾಯರು ಕೇಳಿದರು,
ಮೊದಲು ಅಳಿಯನನ್ನೂ ಬಳಿಕ ಮಗಳನ್ನೂ ನೋಡುತ್ತ.
ಸುನಂದಾ ಗಂಡನ ಮುಖ ನೋಡಿದಳು. ಆ ತುಟಿಗಳು ಬಿಗಿದು ಕುಳಿತಿದ್ದ

ನವೋದಯ

459

ರೀತಿಯೇ ಉತ್ತರವನ್ನು ಸಾರುತ್ತಿತ್ತು.
"ಊ ಹೂಂ. ಈಗ್ಲೇ ಬೇಡ," ಎ೦ದಳು ಸುನ೦ದಾ.
ಶ್ರೀಪತಿರಾಯರು ಅಳಿಯನ ಮರೆಹೊಕ್ಕರು.
"ನಿಮ್ಮದು ಪ್ರಬಲವಾದ ಆಕ್ಷೇಪವೇನೂ ಇಲ್ಲವಾದರೆ__"
[ಕೊನೆಯ ಪಕ್ಷಕ್ಕೆ ಅದಾದರೂ ಒ೦ದು ಉಡುಗೊರೆ?]
"ದಯವಿಟ್ಟು ಬೇಡಿ. ಇನ್ನೂ ಸ್ವಲ್ಪ ದಿವಸ ನಾವು ಮನೆಗೆ ರೇಡಿಯೋ ತರ
ಬಾರದೂ೦ತ ಮಾಡಿದೀವಿ."
"ನಿಮ್ಮಿಷ್ಟ."
ಹೆಚ್ಚು ಒತ್ತಾಯಿಸುವುದರಿ೦ದೇನೂ ಪ್ರಯೋಜನವಿದ್ದ೦ತೆ ಅವರಿಗೆ
ತೋರಲಿಲ್ಲ.
ಸುನ೦ದೆಯನ್ನು ಹುಡುಕಿಕೊ೦ಡು ಆಕೆಯ ಸ್ನೇಹಿತೆಯರು ಬ೦ದರು.
__"ಕಳ್ಳಿ! ಎಷ್ಟು ದಿವಸವಾಯ್ತೆ ಬ೦ದು?"
__"ಕಾಗದ ಬರೀತೀನಿ ಅ೦ದವಳು, ನೋಡೇ. ಊರು ಬಿಟ್ಟಿದ್ದೇ ತಡ.
ಎಷ್ಟು ಬೇಗ ಮರೆತ್ಬಿಟ್ಲೂ೦ತ!"
__"ಹೋಗಲಿ. ಆ ಊರಿನ ಸಮಾಚಾರವಾದರೂ ಇಷ್ಟು ಹೇಳು."
ಸುನಂದಾ ಹೇಳಿದಳು. ಎಷ್ಟು ಬೇಕೋ ಅಷ್ಟನ್ನೇ.
ಅವರಿಂದ ಆಕೆ ತಿಳಿಯುವ ವಿಷಯಗಳೂ ಇದ್ದುವು.
ಲೆಕ್ಚರರ್ ಪ್ರಮೀಳಾ ಚಂದ್ರಕಾಂತಮ್ ಗೆ ಮದುವೆ. ["ಯಾರೇ ಗಂಡು?"]
"ಚಂಪಕಾಗೆ ಈಗೊಂದು ಮಗುವಾಗಿದೆ ಕಣೇ." [ತನ್ನ ರಹಸ್ಯವೆಲ್ಲಿ ಬಯಲಾಗು
ವುದೋ ಎಂಬ ಭಯ.] "ಶುರೂನಲ್ಲಿ ಮಣಿಪುರಿ ಪೀಸು ತುಂಬಾ ಚೆನ್ನಾಗಿತ್ತು. ಈಗ
ಎಲ್ರೂ ಅದನ್ನೇ ತೊಟ್ಕೋತಾರೆ. ಬೇಜಾರಮ್ಮ."
ದಿಟ್ಟೆಯಾದ ಒಬ್ಬಳು ಮಾತ್ರ ಕೇಳಿದಳು:
"ಸಿಹಿ ಯಾವತ್ತು ಕೊಡಿಸ್ತೀಯೆ?"
ನಟನೆ ಯಶಸ್ವಿಯಾಗಲೇಬೇಕೆಂಬ ದೃಢ ನಿರ್ಧಾರದಿಂದ ಸುನಂದಾ ಹೆಳಿದಳು:
"ಸಾರಿ ಕಣೇ. ಇನ್ನೂ ಬಹಳ ದಿವಸ ನೀನು ಕಾಯ್ಬೇಕಾಗುತ್ತೆ."
"ಯಾಕಮ್ಮಾ?"
"ಯಾಕೆ ಅಂದರೆ!"
ಆ ದಿಟ್ಟೆ ಬೇಸ್ತು ಬಿದ್ದಳು. ಸುನಂದಾ ಮನಸ್ಸಿನೊಳಗೇ ನಕ್ಕಳು.
ಸಂಜೆ ವೇಣು, ಜಯದೇವ, ಸುನಂದೆಯರು ಪೃಭಾತ್ ಚಲಚ್ಚಿತ್ರ ಮಂದಿರಕ್ಕೆ
ಭೇಟಿ ಕೊಟ್ಟರು.
ಮಾರನೆಯ ದಿನ ವೇಣುವಿಗೆ ಬಿಡುವಿರಲಿಲ್ಲ. ಆತ ಕೆಲಸಕ್ಕೆ ಹೋದ. ಜಯ
ದೇವನೊಬ್ಬನೆ ಮಾಧುವಿದ್ದ ವಿದ್ಯಾರ್ಥಿ ನಿಲಯಕ್ಕೆ ಹೋಗಿ, ಹಿಂದಿನ ದಿನವಷ್ಟೆ

460

ಸೇತುವೆ

ಊರಿನಿಂದ ಮರಳಿದ್ದ ಆತನನ್ನು ಭೇಟಿ ಮಾಡಿದ.
"ಏನು ಸಮಾಚಾರ ಊರಲ್ಲಿ?" ಎಂದು ಕೇಳಿದ ಜಯದೇವ.
"ಏನಿಲ್ಲ."
"ಎಲ್ಲರೂ ಆರೋಗ್ಯವಾಗಿದಿರಾ?"
"ಹೂಂ."
"ಸತ್ಯವತಿಯಿಂದ ಕಾಗದ ಬಂದಿತ್ತಾ?"
ಆಗ ಮಾಧು ತಲೆಯೆತ್ತಿ ಅಣ್ಣನನ್ನು ನೇರವಾಗಿ ದಿಟ್ಟಿಸಿ ನೋಡುತ್ತ ಕೇಳಿದ:
"ಸತ್ಯವತಿ ಆಸ್ಪತ್ರೇಲಿ ಎರಡು ತಿಂಗಳಿದ್ಲು. ನಿನಗೆ ಗೊತ್ತೇ ಇಲ್ವ ಜಯಣ್ಣ?"
ಜಯದೇವನಿಗೆ ಗಾಬರಿಯಾಯಿತು.
"ಇಲ್ಲ. ಏನಾಯ್ತು?"
"ಹೆರಿಗೆಗೇಂತ ಬಂದಿದ್ಲು. ಆದರೆ ಮಗು ಸತ್ತು ಹುಟ್ತು. ಆಮೇಲೆ ಏನೇನೋ
ಆಗಿ ಬಹಳ ತೊಂದರೆಯಾಯ್ತಪ್ಪ ಅಂತೂ."
"ಅಯ್ಯೋ ಪಾಪ! ಈಗ ಚೆನ್ನಾಗಿದಾಳಾ?"
"ಹೂಂ. ನಮ್ಮನೇಲೇ ಇದಾಳೆ."
"ಅಪ್ಪಯ್ಯ ಆ ವಿಷಯ ನನಗೆ ಬರೀಲೇ ಇಲ್ಲ."
"ಮರೆತು ಬಿಟ್ರೂಂತ ಕಾಣುತ್ತೆ," ಎಂದ ಮಾಧು.
ಸ್ವಲ್ಪ ತಡೆದು ಆತ ಕೇಳಿದ:
"ಅತ್ತಿಗೇನೂ ಬಂದಿದಾರಾ?"
"ಹೂಂ."
"ಕಾನಕಾನಹಳ್ಳಿಗೆ ಹೋಗೊಲ್ವ ನೀನು? ಅಮ್ಮ ವಿಚಾರಿಸ್ತಾ ಇದ್ರು."
ಯಾವ ಮಾತುಗಳನ್ನು ಉಪಯೋಗಿಸಿ ಆಕೆ ವಿಚಾರಿಸಿರಬಹುದೆಂಬುದನ್ನು
ಊಹಿಸುವುದು, ಜಯದೇವನಿಗೆ ಕಷ್ಟವಾಗಲಿಲ್ಲ.
"ಇಲ್ಲ ಮಾಧೂ. ಈ ಸಲ ರಜಾ ಸಾಲದು. ಜನವರೀಲಿ ಹೋಗ್ತೀನಿ."
ಹೊರಡುವ ಹೊತ್ತಿನಲ್ಲಿ ಜಯದೇವ ಕೇಳಿದ:
"ವೇಣು ಮನೆಗೆ ಬರ್ತೀಯಾ?"
ಮಾಧವನಿಗೆ ಮನಸ್ಸಿರಲಿಲ್ಲ. ಆತನೆಂದ:
"ಇಲ್ಲ ಜಯಣ್ಣ. ನಾನು ಓದ್ಕೋಬೇಕು."
ಆ ಭೇಟಿಯ ಅನಂತರ ಜಯದೇವನ ಹೃದಯ ಭಾರವಾಯಿತು. ವಾಸ್ತವ
ವಾಗಿ, ಒಂದೇ ತಂದೆಯ ಮಕ್ಕಳು. ಆದರೆ ನೋಡಿದವರು, ಪರಸ್ಪರ ಪರಿಚಯ
ವಿದ್ದೀತು_ಎನ್ನಬೇಕು, ಅಷ್ಟೆ. ಕಾಂಡ ಒಂದೇ ಆದರೂ ಕೊಂಬೆಗಳು ಬೆಳೆಯು
ತ್ತಿದ್ದುದು ಬೇರೆಬೇರೆ ದಿಕ್ಕಿಗೆ. ದಿನ ಕಳೆದಂತೆ ಅವುಗಳ ನಡುವಿನ ಅಂತರ ಹೆಚ್ಚುತ್ತಲೆ
ಇತ್ತು.

ನವೋದಯ

461

ಮಗಳನ್ನು ಅಲ್ಲಿಯೇ ಉಳಿಸಿಕೊಳ್ಳಬೇಕೆಂಬ ಇಚ್ಛೆ ತಾಯಿಗೆ. ಆಕೆ ಅಳಿಯನ
ಇಂಗಿತ ತಿಳಿಯ ಬಯಸಿದರು.
"ನಾನೂ ನಿಮ್ಜತೇಲಿ ಬರ್ಲಾ ಜಯಣ್ಣ?"
"ಬನ್ನಿ ಅತ್ತೆ. ಆದರೆ ಇಲ್ಲಿ ನೋಡ್ಕೊಳೋರು ಯಾರು?"
"ಅದೇನೋ ನಿಜವೇ ಆದರೆ ಅಲ್ಲಿ, ಸುನಂದೇನ ನೋಡ್ಕೊಳ್ಳೋರು ಯಾರೂ
ಇಲ್ವಲ್ಲಾ."
ಆಕೆಯ ಮನಸ್ಸಿನಲ್ಲಿ ಇದ್ದುದೇನೆಂಬುದು ಜಯದೇವನಿಗೆ ಹೊಳೆಯಿತು.
ಅತ್ತೆಯ ಮಾತಿನ ಚಾತುರ್ಯಕ್ಕಾಗಿ ಆತ ತಲೆದೂಗಿದ.
ತಾನಿನ್ನು ಒಬ್ಬನೇ ಹಿಂತಿರುಗಬೇಕು ಎಂಬ ಯೋಚನೆ ಬಂದಾಗ ಮಾತ್ರ, ಆತ
ನಿಗೆ ಕಸಿವಿಸಿಯಾಯಿತು.
"ಸುನಂದೇನ ಕೇಳಿ ನೋಡಿ ಅತ್ತೆ. ಇಲ್ಲೇ ಇರ್ತಾಳೋ ಏನೋ."
ಆ ಮಗಳು ಒಪ್ಪಲೇ ಇಲ್ಲ. ಖಡಾಖಂಡಿತವಾಗಿ ಆಕೆ ಅಂದಳು:
"ಆಗೊಲ್ಲಮ್ಮ. ನಾನು ಅವರ ಜತೆ ಹೋಗಲೇಬೇಕು."
ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಜಯದೇವನೆಂದ:
"ಇನ್ನು ಏನಿದ್ದರೂ ಒಂದೂವರೆ ತಿಂಗಳು. ವರ್ಷ ಮುಗಿದೊಡನೆ ವಾಪಸು
ಬಂದ್ಬಿಡ್ತೀವಿ. ಆ ಮೇಲೆ ಸುನಂದಾ ಇಲ್ಲಿಯೇ ಇದ್ದರಾಯ್ತು."
"ಊ...." ಎಂದಳು ಸುನಂದಾ, ಅದಕ್ಕೂ ಒಪ್ಪದೆ.
ತಾಯಿ ಮಾತ್ರ, "ಹಾಗೆಯೆ ಮಾಡಪ್ಪ, ಅದೇ ಸರಿ," ಎಂದರು.
ರಜಾ ಮುಗಿಯಿತು.
ಸುನಂದೆ ಜಯದೇವರಿಬ್ಬರೇ ಪ್ರಯಾಣ ಬೆಳೆಸಿದರು. ಆದರೆ ಅವರ ಜತೆ
ಸುನಂದೆಯ ತಾಯಿ, ಮಗಳಿಗೆಂದು ತಯಾರಿಸಿದ್ದ ಬಗೆಬಗೆಯ ತಿಂಡಿಗಳ ದೊಡ್ಡ
ಬುಟ್ಟಿಯೂ ಹೊರಟಿತು.



೧೫

ನಿಲ್ದಾಣದಲ್ಲಿ ಬಸ್ಸಿನಿಂದ ಹೊರಗಿಳಿಯುತ್ತಿದ್ದಂತೆ ಜಟಕಾ ಸಾಬಿ ಕೇಳಿದ:
"ಬರ್ತೀರಾ ಬುದ್ದಿ?"
ಸುನಂದಾ ಜಯದೇವನ ಮುಖ ನೋಡಿದಳು.
"ಗಾಡಿ ಕುಲುಕುತ್ತೆ, ಬೇಡ," ಎಂದ ಆತ, ಆ ಆಯಾಸಕ್ಕಿಂತ ಸುನಂದೆಯ
ಆರೋಗ್ಯಕ್ಕೆ ಕಾಲ್ನಡಿಗೆಯೇ ವಾಸಿ, ಎಂದು.

462

ಸೇತುವೆ

ಯಾಕೆ ಬೇಡವೆಂದರೆಂಬುದು ಮೊದಲು ಗಾಡಿಯವನಿಗೆ ಅರ್ಥವಾಗಲಿಲ್ಲ.
ಆದರೆ ಸೂಕ್ಷ್ಮ ಹೊಳೆದಾಗ, ಆತನನ್ನು ಕೆಣಕಿದಂತಾಯಿತು.
"ಕೂತ್ಕೊಂಡು ನೋಡಿ ಬುದ್ದಿ. ಅಮ್ಮಾವರಿಗೆ ರವಷ್ಟು ತಕ್ಲೀಫಾದರೂ
ಕಾಸು ತಗೊಣಾಕಿಲ್ಲ. ಇರುವೆ ಸಾಯ್ದಂಗೆ ಗಾಡಿ ಓಡಿಸ್ತೀನಿ."
"ಹಾಗಾದರೆ ಸರಿ," ಎಂದ ಜಯದೇವ.
ಬಸ್ ಪ್ರಯಾಣದಲ್ಲದಂತೂ ತೊಡೆಯಮೇಲೆಯೇ ಇರಿಸಿಕೊಂಡಿದ್ದ ರೇಡಿಯೋ
ಒಂದಿತ್ತು. ಅದನ್ನು ನೋಡಿ ಸುನಂದಾ ಲೇವಡಿಮಾಡಿದ್ದಳು: "ಮಗೂನ ಎತ್ಕೊಂಡ
ಹಾಗಿದೆ,' ಎಂದು. ಆ ಮಗುವನ್ನೊಮ್ಮೆ ನಂಜುಂಡಯ್ಯನವರ ಮನೆಯಲ್ಲಿಳಿಸಿ
ಬಿಟ್ಟರೆ ದೊಡ್ಡ ಭಾರ ಕೆಳಗಿಟ್ಟ ಹಾಗೆ__ಎಂದು ಜಯದೇವನಿಗೆ ಅನಿಸಿತ್ತು.
ಸುನಂದೆಯಷ್ಟೆ ಸೂಕ್ಷ್ಮ ಜೀವಿಯಾಗಿತ್ತು ರೇಡಿಯೋ ಕೂಡಾ.
ಗಾಡಿಯೊಳಗೆ ಕುಳಿತಾಗ ಜಯದೇವ ಹೇಳಿದ:
"ಮೆತ್ತಗೆ ಹೊಡಿಯಪ್ಪ."
"ಅದನ್ನ ನನಗ್ಬುಟ್ಬಿಡಿ ಬುದ್ದಿ. ಮನೆಗ್ತಾನೆ ಓಗೋದು? "
"ಹೂಂ. ಆದರೆ ಈ ರೇಡಿಯೋನ ನಂಜುಂಡಯ್ಯ ಮೇಸ್ಟ್ರ ಮನೇಲಿ ಇಳಿಸ್ಬಿಟ್ಟು
ಹೋಗ್ಬೇಕು."
"ಸೂಟಾಕ್ತಾರಲ್ಲ, ಆ ಮೇಸ್ಟ್ರು?"
"ಅವರೇನೆ."
"ಮನೆ ಗೊತ್ತೈತೆ, ಬನ್ನಿ."
ಸಾಮಾನ್ಯವಾಗಿ ನಾಗಾಲೋಟದಿಂದ ಓಡುವ ಜಟಕಾ, ಈ ದಿನ ಹೀಗೇಕೆ_
ಎಂದು ಊರವರು ಆಶ್ಚರ್ಯಪಟ್ಟರು. ಇಣಿಕಿ ನೋಡಿ ಜಯದೇವನನ್ನು ಗುರು
ತಿಸಿದ ಹುಡುಗರ ತಂದೆಯರು, ನಮಸ್ಕಾರವೆಂದರು.
ಗಾಡಿ ನಿಂತ ಸದ್ದು ಕೇಳಿ ಹೊರಬಂದ ನಂಜುಂಡಯ್ಯ ಬೀದಿಗಿಳಿದರು,
"ಹಲ್ಲೋ" ಎನ್ನುತ್ತ.
"ಸ್ನಾನಕ್ಕೆ ಹೊರಡೋಣಾಂತಿದ್ದೆ. ಅಷ್ಟರಲ್ಲೆ ಸದ್ದುಕೇಳಿಸ್ತು."
"ತಗೊಳಿಪ್ಪಾ," ಎಂದ ಜಯದೇವ.
ನಂಜುಂಡಯ್ಯ ಮಂದಹಾಸ ಬೀರಿ, ರಟ್ಟಿನ ಪೆಟ್ಟಿಗೆಯನ್ನೆತ್ತಿಕೊಂಡರು.
ಜಯದೇವನೂ ಗಾಡಿಯಿಂದಿಳಿದ.
ಸುನಂದೆಯತ್ತ ನೋಡುತ್ತ ನಂಜುಂಡಯ್ಯ ಕೇಳಿದರು,
"ಇಳಿಯೋದಿಲ್ವೆ?"
ಜಯದೇವನೇ ಹೇಳಿದ:
"ತಡವಾಗುತ್ತಲ್ಲ ಸಾರ್. ಬಟ್ಟೆ ಬದಲಾಯಿಸಿ ಸ್ಕೂಲಿಗೆ ಬಂದ್ಬಿಡ್ತೀನಿ."
"ಹಾಗೇ ಮಾಡಿ. ಒತ್ತಾಯಿಸೋದಿಲ್ಲ".

ನವೋದಯ

463

ಜಯದೇವ ಜೇಬಿಗೆ ಕೈ ಹಾಕಿದ.
"ಬಿಲ್ಲು, ದುಡ್ಡು, ತಗೊಂಡ್ಬಿಡ್ತೀರಾ?"
"ಮಿಕ್ಕಿದೆಯೇನು? ಭೇಷ್! ಈಗ ಬೇಡಿ. ಸ್ಕೂಲ್ನಲ್ಲಿ ಕೊಡುವಿರಂತೆ. ತಡ
ವಾಗುತ್ತೆ. ಹೊರಡಿ."
"ಪೆಟ್ಟಿಗೆ ಭದ್ರ!" ಎಂದ ಜಯದೇವ ಗಾಡಿಯನ್ನೇರುತ್ತ.
"ನೋಡ್ಕೊತೀನಿ. ಉದ್ಘಾಟನೆ ಸಾಯಂಕಾಲ ಇಟ್ಕೊಳ್ಳೋಣ!"
ಪಾರ್ವತಮ್ಮ ಬಂದು ಹೊರಗಿಣುಕುವುದರೊಳಗಾಗಿ ಗಾಡಿ ಹೊರಟುಬಿಟ್ಟಿತ್ತು.
.......ದೂರ ಪ್ರವಾಸಮಾಡಿ ಭಿನ್ನವಾದ ಬದುಕನ್ನು ನೋಡಿ ಅವರು ಹಿಂದಿರು
ಗಿದ್ದರು. ಆದರೆ ಇಲ್ಲಿ ಆ ಅವಧಿಯೊಳಗೆ ಯಾವ ಬದಲಾವಣೆಯೂ ಆಗಿರಲಿಲ್ಲ.
ಕಾಗೆಗಳು ಎಂದಿನಂತೆಯೆ ಮನೆಯ ಛಾವಣಿಯ ಮೇಲೆ ಕುಳಿತು ಕಾ ಕಾ ಎನ್ನು
ತ್ತಿದ್ದವು. ಊರು ಹೆಂಚುಗಳೆಡೆಯಿಂದ ಹೊಗೆ ಏಳುತ್ತಿತ್ತು. ಹುಡುಗರು ಶಾಲೆಗೆ
ಹೊರಟಿದ್ದರು...
ಆದರೆ, ಶಾಲೆಯಲ್ಲೊಂದು ಹೊಸ ವ್ಯಕ್ತಿ ಕಾದಿತ್ತು, ಸಿಗರೇಟು ಸೇದುತ್ತ.
ನಂಜುಂಡಯ್ಯನಿಗಿಂತ ಮುಂಚೆಯೇ ಶಾಲೆಯನ್ನು ತಲಪಿದ ಜಯದೇವ ಆ
ವ್ಯಕ್ತಿಯನ್ನು ನೋಡಿದ.
ಲಕ್ಕಪ್ಪಗೌಡರು ಹಸನ್ಮುಖಿಯಾಗಿ ಅವರ ಪರಿಚಯಮಾಡಿ ಕೊಟ್ಟರು.
"ಇದ್ದವರು ಮೂವರೇ ಆಗಿದ್ದೆವು ಈವರೆಗೂ. ಈಗ ನಾಲ್ಕನೆಯವರು
ಬಂದ್ಬಿಟ್ಟಿದಾರೆ. ರಾಮಾಚಾರ್ ಅಂತ."
ರಾಮಾಚಾರಿ ಎದ್ದು, ಸಿಗರೇಟನ್ನು ಎಡಗೈಗೆ ವರ್ಗಾಯಿಸಿ, ಕೈಕುಲುಕಿದರು.
ಇಂಗ್ಲಿಷಿನಲ್ಲಿ ಮಾತು: 'ನಿಮ್ಮನ್ನು ಭೇಟಿಯಾಗಲು ಸಂತೋಷವಾಗ್ತಿದೆ' ಎಂದು.
ಆ ಬಳಿಕ ಲಕ್ಕಪ್ಪಗೌಡರೆಂದರು:
"ಇವರೇ ಜಯದೇವರು ಎಂದರೆ."
ರಾಮಾಚಾರಿ ಹೇಳಿದ:
"ಹೆಸರು ಕೇಳಿದೀನಿ."
ಜಯದೇವ ವಿಚಾರಿಸಿದ:
"ಎಲ್ಲಿಂದ ವರ್ಗವಾಯ್ತು?"
"ಹೆಸರಘಟ್ಟದಿಂದ. ಇದೇ ಮೊದಲ್ನೆ ವರ್ಗ!"
"ಇವರು ಇಷ್ಟು ಚಿಕ್ಕ ವಯಸ್ನಲ್ಲೆ ಟ್ರೇನಿಂಗ್ ಮಾಡ್ಕೊಂಡಿದಾರೆ ಜಯ
ದೇವರೆ," ಎಂದರು ಗೌಡರು.
"ಸಂತೋಷ. ತರಬೇತಾದ ಒಬ್ಬ ಉಪಾಧ್ಯಾಯರಾದರೂ ನಮ್ಮ ಶಾಲೇಲಿ
ದಾರೆ ಅನ್ನೋ ಹಾಗಾಯ್ತು."
ಅಡ್ಡ ಪಂಚೆ, ಹಸುರು ಬಣ್ಣದ ಶರಟು, ಬಟ್ಟೆಯ ಕೋಟು, ಆರೋಗ್ಯದ

464

ಸೇತುವೆ

ಲಕ್ಷಣವೇನೂ ಮುಖದ ಮೇಲೆ ಇರಲಿಲ್ಲ. ಮಿತಿಮೀರಿದ ಧೂಮಪಾನದಿಂದ ತುಟಿ
ಗಳು ಕಪ್ಪಗಾಗಿದ್ದುವು. ತಲೆಯಮೇಲೆ ಕ್ರಾಪಿತ್ತು.
ಆಚಾರಿಯೇ? ಆಚಾರ್ಯರೇ?
'ಥೂ! ಇದೇನು? ನಾನೂ ಬೇರೆಯವರ ಮಟ್ಟಕ್ಕೆ ಇಳಿದೆನಲ್ಲಾ,' ಎಂದು
ಜಯದೇವ ತನ್ನ ಮೇಲೆಯೆ ರೇಗಿದ.
"ಯಾವತ್ತು ಬಂದಿರಿ ನೀವು?"
"ದೀಪಾವಳಿಯ ಮಾರನೆ ದಿವಸವೆ ಬಂದೆ ಸಾರ್."
ಮಾವನ ಮನೆಯಲ್ಲಿ ಇರಲಿಲ್ಲವೆಂದಾಯಿತು ಆತ. ಒಂಟಿ ಜೀವ.
"ఒಬ್ಬರೇ ಇದೀರಾ ?"
"ಹೂಂ ಸಾರ್."
ಲಕ್ಕಪ್ಪಗೌಡರು ಉತ್ಸಾಹದ ಧ್ವನಿಯಲ್ಲಿ ಹೇಳಿದರು:
“ಕರ್ನಾಟಕ ಪ್ರಾಂತ ಬೇಡ ಅನ್ನೋದೆಲ್ಲಾ ಒಕ್ಕಲಿಗರ ರಾಜಕೀಯಾಂತ ಈ
ವರೆಗೂ ಭಾವಿಸಿದ್ರಿ, ಅಲ್ವೆ? ಈಗ್ನೋಡಿ. ಆಚಾರ್ರ ಅಭಿಪ್ರಾಯವೂ ನನ್ನ ಅಭಿ
ಪ್ರಾಯವೂ ಒಂದೇ."
"ಹಾಗೇನು? ನಿಮಗೊಬ್ಬರು ಜತೆಗಾರ ಸಿಕ್ಕಹಾಗಾಯ್ತು. ಆದರೆ ಒಂದು,
ಲಕ್ಕಪ್ಪಗೌಡರೆ. ಈ ವಿಷಯದಲ್ಲಿ ಅಭಿಪ್ರಾಯವೆಲ್ಲ ಜಾತಿಯ ಮೇಲೆ ಹೋಗು
ತ್ತೇಂತ ನಾನು ಯಾವತ್ತೂ ಹೇಳಿಲ್ವಲ್ಲ."
"ನೀವು ಹೇಳದೇ ಇದ್ದರೂ ಪರಿಸ್ಥಿತಿ ಇರೋದು ಹಾಗೆ ತಾನೆ ?"
"ಏನೋಪ್ಪ. ನಾನಂತೂ ಎಲ್ಲರ ಅಭಿಪ್ರಾಯಗಳಿಗೂ ಗೌರವ ಕೊಡ್ತೀನಿ.
ವಿಚಾರಮಾಡಿ ಸಾಧುವಾದದ್ದನ್ನ ಒಪ್ಕೊಳ್ಳೋದು ನಮ್ಮ ಕರ್ತವ್ಯ."
ಅಷ್ಟರಲ್ಲೆ ನಂಜುಂಡಯ್ಯ ಬಂದರು. ಮೂವರೂ ಜತೆಯಲ್ಲಿದ್ದುದನ್ನು
ಕಂಡು ಅವರೆಂದರು:
"ಪರಸ್ಪರ ಪರಿಚಯ ಆಯ್ತು ತಾನೆ?"
"ಆಯ್ತು ಸಾರ್," ಎಂದ, ಹೊಸಬನಾದ_ಎಲ್ಲರಿಗಿಂತಲೂ ಕಿರಿಯವನಾದ_
ರಾಮಾಚಾರಿ.
ಮೇಜಿನ ಮೇಲೆ ದೃಷ್ಟಿಹಾಯಿಸಿ, ಜವಾನನನ್ನು ಕರೆದು, ನಂಜುಂಡಯ್ಯ
ಗದರಿದರು:
"ಪ್ರತಿ ದಿವಸವೂ ಬೆಳಗ್ಗೆ ಈ ಟ್ರೇ ಖಾಲೀ ಮಾಡಿಡೂಂತ ಎಷ್ಟು ಸಲವೊ
ಹೇಳೋದು ನಿಂಗೆ? ಕತ್ತೆ!"
ಸೇದುವವರು ಇಬ್ಬರಾದುದರಿಂದ, ಭಸ್ಮಕುಂಡದೊಳಗೆ ಡುಬ್ಬವೆದ್ದು, ಮೇಜಿನ
ಸ್ವಲ್ಪ ಭಾಗ ಬೂದಿ ಬಳೆದುಕೊಂಡಿತ್ತು.
"ಸಿಗರೇಟು ಸೇದೋಕೆ ಹೆಡ್ಮೇಸ್ಟ್ರಿಗೂ ಒಬ್ಬರು ಜತೆಗಾರರಾದ ಹಾಗಾಯ್ತು,"

ನವೋದಯ

465

ಎಂದ ಜಯದೇವ. ಆ ಸ್ವರದಲ್ಲಿ, ಗೌರವದ, ಸಲಿಗೆಯ ಭಾವಗಳೆರಡೂ ಬೆರೆತಿದ್ದುವು.
"ಹೌದು," ಎಂದರು ನಂಜುಂಡಯ್ಯ, ಒತ್ತಾಯಕ್ಕೋಸ್ಕರ ಸಣ್ಣನೆ ನಕ್ಕು.
ಹೊಸಬನ ಕಡೆ ಅವರು ನೋಡಲೇ ಇಲ್ಲ.
'ಹೆಸರು ಕೇಳಿದೀನಿ', ಎಂದು ಆ ಹೊಸಬ ಹೇಳಿದ್ದುದು ನೆನಪಾಗಿ ಜಯ
ದೇವನೆಂದ:
"ನೀವು ಈ ವರ್ಷ ಜಿಲ್ಲಾ ಸಮ್ಮೇಳನಕ್ಕೆ ಬಂದಿದ್ರಾ ರಾಮಾಚಾರ್?"
[ಜವಾನ ಭಸ್ಮಕುಂಡವನ್ನು ಹೊರಕ್ಕೆ ಒಯ್ದಿದ್ದುದರಿಂದ ರಾಮಾಚಾರಿ, ಉರಿ
ಯುತ್ತಿದ್ದ ಸಿಗರೇಟಿನ ಕೊನೆಯ ತುಂಡನ್ನೆಸೆಯುವುದು ಕಷ್ಟವಾಯಿತು. ಆತ, ಅತ್ತಿತ್ತ
ನೋಡಿ, ಕಿಟಕಿಯ ಮೂಲಕ ಅದನ್ನು ಹೊರಕ್ಕೆಸೆದ.]
ನಂಜುಂಡಯ್ಯ ಅಸಮ್ಮತಿ ಸೂಚಿಸುವ ಧ್ವನಿಯಲ್ಲಿ ಅಂದರು:
"ಹಾಗೆ ಎಸೀ ಬೇಡಿ!"
ರಾಮಾಚಾರಿಯೆಂದ:
"ಸಾರಿ."
ಪದ ವಿಷಾದಸೂಚಕವಾಗಿತ್ತೇ ಹೊರತು, ಸ್ವರದಲ್ಲಿ ಆ ಭಾವವಿರಲಿಲ್ಲ.
ಜಯದೇವನೆಡೆಗೆ ತಿರುಗಿ ರಾಮಾಚಾರಿ ಹೇಳಿದ:
"ಇಲ್ಲ ಸಾರ್. ಬರಬೇಕೂಂತಿದ್ದೆ. ಅನುಕೂಲವಾಗ್ಲಿಲ್ಲ. ನಮ್ಮಲ್ಲಿಂದ
ಹೋಗಿದ್ದೋರೊಬ್ಬರು ಹೇಳಿದ್ರು_ನಿಮ್ಮ ಭಾಷಣ ತುಂಬಾ ಚೆನ್ನಾಗಿತ್ತೂಂತ."
ಜಯದೇವ ನಕ್ಕ.
"ನಾನು ಭಾಷಣ ಮಾಡೇ ಇಲ್ವಲ್ಲ!"
ರಾಮಾಚಾರಿ ತಬ್ಬಿಬ್ಬಾದ.
ಆತನ ನೆರವಿಗೆ ಬರಲು ಬಯಸುತ್ತ ಜಯದೇವ ಮುಂದುವರಿದ:
"ನಾನು ನಿರ್ಣಯಗಳನ್ನ ಕಳಿಸಿದ್ದು ಎಷ್ಟೋ ಅಷ್ಟೆ. ಆ ಸಂದರ್ಭದಲ್ಲಿ ಸ್ವಲ್ಪ
ಗಲಾಟೆಯಾಯ್ತು."
"ಇರಬೇಕು ಸಾರ್. ಅವರು ಹೇಳಿದ್ದು ಆ ವಿಷಯವೇ ಇರಬೇಕು."
ಜಯದೇವ ಆ ರಾಮಾಚಾರಿಯನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿದ. ಆತನಿ
ಗೆನಿಸಿತು:
'ಈತ ಮಹಾ ಅಪಾಯಕಾರಿ. ಮೆಚ್ಚಿಸುವ ಪ್ರವೃತ್ತಿಯ ಮುಖವಾಡದ
ಹಿಂದೆ, ಹಾಲಿಗೆ ಹುಳಿ ಹಿಂಡುವ ಮನೋವೃತ್ತಿ ಇರೋ ಹಾಗಿದೆ.'
ನಂಜುಂಡಯ್ಯ ಹೇಳಿದರು:
"ವರ್ಗ ಮಾಡೋದಕ್ಕೂ ಈಗ ಹೊತ್ತು ಗೊತ್ತು ಅನ್ನೋದಿಲ್ಲ. ವರ್ಷದ
ಕೊನೇಲಿ ಅದೇನೂಂತ ಕಳಿಸ್ತಾರೊ? ನೋಡಿ ಜಯದೇವ್, ಪಾಠಗಳನ್ನ ಹೀಗೆ

59

466

ಸೇತುವೆ

ಗೊತ್ತು ಮಾಡಿದೀವಿ. ನಾವು ಎರಡೆರಡು ಮಾಡ್ತಿದ್ದ ಕಡೆಯೆಲ್ಲ ಒಂದೊಂದು
ಅವರಿಗೆ ಕೊಟ್ಟಿದೆ. ಮುಂದಿನ ವರ್ಷ ಸರಿಯಾಗಿ ಪಾಠ ಪಟ್ಟಿ ತಯಾರಿಸೋಣ."
"ಆಗಲಿ, ಸಾರ್."
ಲಕ್ಕಪ್ಪಗೌಡರು ಮಾತ್ರ ನಸುನಕ್ಕರು.
"ಮುಂದಿನ ವರ್ಷ ಹೈಸ್ಕೂಲು ಬರೋದಿಲ್ವೆ? ಆಗ ನಾಲ್ಕು ಜನ ಎಲ್ಲಿರ್ತಾರೆ
ಈ ಶಾಲೇಲಿ?"
"ಅದಕ್ಕಿನ್ನೂ ಸಮಯವಿದೆ ಅಂದ್ರೆ."
...ಸಂಜೆ ಅಧ್ಯಾಪಕರನ್ನೆಲ್ಲ ನಂಜುಂಡಯ್ಯ ಮನೆಗೆ ಕರೆದರು.
"ಯಾಕೆ ಅಂತ ಈಗ ಹೇಳೋದಿಲ್ಲ. ಅದೊಂದು ರಹಸ್ಯ. ನೀವೆಲ್ಲ ಬನ್ನಿ.
ಬಂದ ಮೇಲೆ ಗೊತ್ತಾಗುತ್ತೆ," ಎಂದರು.
ಜಯದೇವನಿಗೂ ಅದು ರಹಸ್ಯದ ವಿಷಯವಾಗಿರಲಿಲ್ಲ. ಆದರೂ ಆತ
ನಂಜುಂಡಯ್ಯನವರ ಏರ್ಪಾಟಿಗೆ ಊನ ಬರಬಾರದೆಂದು ತುಟಿ ಎರಡು ಮಾಡಲಿಲ್ಲ.
ಆ ಊರಿನ ಏಕಮಾತ್ರ ವಿದ್ಯುತ್ ಉಪಕರಣಗಳ ಅಂಗಡಿಯ ಒಡೆಯನನ್ನು
ನಂಜುಂಡಯ್ಯ ಕರೆಸಿದರು, 'ಏರಿಯಲ್' ಹಾಕಿಸಲೆಂದು_'ಫಿಟ್' ಮಾಡಿಸಲೆಂದು.
ಲಕ್ಕಪ್ಪಗೌಡರು ಬರಲಿಲ್ಲ. ರಾಮಾಚಾರಿ ಹಾಜರಾಗಿ ಹೇಳಿದ:
"ಇದಕ್ಕೇನಾ ಸಾರ್ ಕರೆದಿದು? ತುಂಬಾ ಸಂತೋಷ ಸಾರ್."
ಜಯದೇವ, ಸುನಂದೆಗೊಮ್ಮೆ ಮುಖ ತೋರಿಸಿ, ನಂಜುಂಡಯ್ಯನ ಮನೆಯ
ಕಡೆ ಹೊರಟ. ಹಾದಿಯಲ್ಲಿ ಆತನನ್ನು ಹುಡುಕುತ್ತ ಬಂದಿದ್ದ ತಿಮ್ಮಯ್ಯ ಸಿಕ್ಕಿದರು.
"ನೀವೂ ಬನ್ನಿ. ನಂಜುಂಡಯ್ಯನವರ ಮನೇಲೊಂದು ವಿಶೇಷ ಇದೆ ಇವತ್ತು."
"ಏನು? ನಾಮಕರಣವೆ? ಗಂಡು ಹುಟ್ತೆ?"
"ಎಂಥಾ ಮಗು ಅಂತೀರಾ? ಹುಟ್ಟಿದ ತಕ್ಷಣ ಹಾಡುತ್ತೆ, ಮಾತನಾಡುತ್ತೆ."
ತಿಮ್ಮಯ್ಯನವರಿಗೆ, ಎರಡು ನಿಮಿಷಗಳಿಗಿಂತ ಹೆಚ್ಚುಕಾಲ ಅದು ಒಗಟಾ
ಗಿರಲಿల్ల.
"ಗೊತ್ತು ಬಿಡಿ! ಆ ದಿವಸ ರೇಡಿಯೋ ತರೋಕೆ ಅಂತ ನೀವು ದುಡ್ಡು
ತಗೊಂಡು ಹೋಗಿರ್ಲಿಲ್ವೆ?"
ಎಲ್ಲರೂ ಬರುವುದಕ್ಕೆ ಮುಂಚೆಯೆ ರೇಡಿಯೊವನ್ನು ಸಿದ್ಧಗೊಳಿಸಬೇಕೆಂದು
ನಂಜುಂಡಯ್ಯ ಆಶಿಸಿದ್ದರು. ಆ ಆಶೆ ಫಲಿಸಲಿಲ್ಲ. ಸುಮ್ಮನೆ ಗುರ್ ಗುರ್ ಎಂದು
ಸದ್ದಾಗುತ್ತಿತ್ತೇ ಹೊರತು ಯಾವ ನಿಲಯವೂ ಉತ್ತರ ಕೊಡುತ್ತಿರಲಿಲ್ಲ. ತಡವಾಗುತ್ತ
ದೆಂದು ತಿಮ್ಮಯ್ಯ ಹೊರಟು ಹೊದರು. ರಾಮಾಚಾರಿ ಸಿಗರೇಟು ಸುಟ್ಟ.
ಆ ವಿದ್ಯುತ್ ತಜ್ಞ ತೀರ್ಪುಕೊಟ್ಟ:
"ಮಿಶಿನ್ನಲ್ಲೇ ಏನೋ ಮಿಸ್ಟೀಕಿದೆ ಸಾರ್."
ಜಯದೇವನ ಎದೆ ಧಸಕ್ಕೆಂದಿತು. ಉಳಿದಿದ್ದ ದುಡ್ಡು ಬಿಲ್ಲು ಎರಡನ್ನೂ

ನವೋದಯ

467

ನಂಜುಂಡಯ್ಯನವರ ಕೈಗಿತ್ತು, 'ಇದು ಬಹಳ ಒಳ್ಳೆಯ ಸೆಟ್ ಸಾರ್,' ಎಂದು ಹೇಳಿ,
ಆಗಿನ್ನೂ ಅರ್ಧ ದಿನವಾಗಿರಲಿಲ್ಲ. ಅಷ್ಟರಲ್ಲೇ__
ನಂಜುಂಡಯ್ಯನ ಮುಖ ಕಪ್ಪಿಟ್ಟಿತು.
"ಇನ್ನೊಂದ್ಸಲ ಸರಿಯಾಗಿ ನೋಡಿ," ಎಂದರು.
ಮತ್ತೊಮ್ಮೆ ದೃಷ್ಟಿ ಹಾಯಿಸಿ ಆ ತಜ್ಞನೆಂದ:
"ಊಹೂಂ. ಮಿಸ್ಟೀಕಿರೋದು ಮಿಶಿನ್ನಲ್ಲೇ."
ನಿರಾಶೆಗೊಂಡ ನಂಜುಂಡಯ್ಯನವರ ಮುಖ ಮೆಲ್ಲನೆ ಜಯದೇವನೆಡೆಗೆ
ತಿರುಗಿತು.
ಹೀಗಾಯಿತಲ್ಲ ಎಂದು ತುಂಬಾ ಕೆಡುಕೆನಿಸಿತು ಜಯದೇವನಿಗೆ. ಆತ ಎದ್ದು
ತಾನೂ ಒಮ್ಮೆ ಸೂಕ್ಷ್ಮವಾಗಿ ಪರೀಕ್ಷಿಸಿದ. ಸಂದೇಹ ಮೂಡಿತು. ಹಿಂಭಾಗವನ್ನೇ
ನೋಡಿದ.
ವಿದ್ಯುತ್ತಿನ ಪ್ಲಗ್ಗು ಏರಿಯಲಿನೊಳಹೊಕ್ಕಿತ್ತು, ಅಷ್ಟೆ!
ಅದನ್ನು ಸರಿಪಡಿಸಿದಾಗ__
ಮದ್ರಾಸು ನಿಲಯದಿಂದ ಕೋಕಿಲವಾಣಿಯ ಕಂಠ ಕೇಳಿಸಿತು.
ಮುಗುಳುನಗುತ್ತ ಜಯದೇವ ತಮ್ಮನ್ನು ನೋಡುತ್ತಿದ್ದಂತೆ, ನಂಜುಂಡಯ್ಯ
ಸೂಚಿಯನ್ನು ಎಡಬಲಗಳಿಗೆ ಸರಿಸಿ ಕೊನೆಗೊಮ್ಮೆ ಬೆಂಗಳೂರಿಗೆ ಬಂದರು. ಅಲ್ಲಿ
ಗ್ರಾಮಸ್ಥರಿಗಾಗಿ, ಕಾರ್ಯಕ್ರಮ ನಡೆಯುತ್ತಿತ್ತು.
ಮುಖಭಂಗವಾಗಿದ್ದರೂ ವಿದ್ಯುತ್ ತಜ್ಞ ತನ್ನ ಮಾನ ರಕ್ಷಣೆಗಾಗಿ ಹೋರಾಡಿದ.
"ಈಗಿನ ಸೆಟ್ಟುಗಳೇ ಹೀಗೆ ಸಾರ್. ಎಲ್ಲಾ ಹೊಸ ಹೊಸ ರೀತಿ ಬಂದ್ಬಿಡುತ್ತೆ."
ಆ ಏರ್ಪಾಟಿನಲ್ಲಿ ಹೊಸತೇನೂ ಇರಲಿಲ್ಲವೆಂಬುದು ಜಯದೇವನಿಗೆ ಗೊತ್ತಿತ್ತು.
"ಹೊಸ ರೀತಿ ಇಲ್ಲದೆ ಹೋದರೂ ಒಂದೊಂದ್ಸಲ ಅವಸರದಲ್ಲಿ ಹೀಗಾಗೋದು
ಸ್ವಾಭಾವಿಕ," ಎಂದು ಹೇಳಿ ಜಯದೇವ ಸುಮ್ಮನಾದ.
ಆ ಸಂಜೆ ನಂಜುಂಡಯ್ಯನವರ ಕೊಠಡಿ ಜನರಿಂದ ತುಂಬಿತು. ಅವರ ಇಬ್ಬರು
ಮಕ್ಕಳಂತೂ ರೇಡಿಯೊವನ್ನಿರಿಸಿದ್ದ ಮೇಜಿನ ಬಳಿಯಲ್ಲೆ ನಿಂತರು. ಹಚ್ಚಿದ ಅವಲಕ್ಕಿ
ಯನ್ನು [ಕಾಫಿಗಿಂತ ಸುಲಭವಾದ] ಪಾನಕವನ್ನೂ ತಂದು ತಂದು ಬಾಗಿಲ ಹೊರ
ಗಿಡುತ್ತಿದ್ದ ಪಾರ್ವತಮ್ಮ, ತಮ್ಮ ಸಂತೋಷವನ್ನು ಬಚ್ಚಿಡಲಾರದೆ ತಾವೂ ಒಮ್ಮೊಮ್ಮೆ
ಹೊರಗಿಣಿಕುತ್ತಿದ್ದರು. ನಂಜುಂಡಯ್ಯ ತರಿಸಿದ್ದ ರೇಡಿಯೊವನ್ನು ನೋಡಿ ಹೋಗ
ಲೆಂದು ಬಂದ ಶಂಕರಪ್ಪನವರೆಂದರು:
"ನಮ್ಮ ಮನೇಲಿರೋದು ಜಿ. ಇ. ಸಿ. ದೊಡ್ಡ ಸೈಜಿಂದು. ಇದೂ ಚೆನ್ನಾಗೇ
ಇದೆ. ಪರವಾಗಿಲ್ಲ."
ಜಯದೇವನ ಕಡೆ ತಿರುಗಿ, "ಮೇಸ್ಟ್ರು ಒಳ್ಳೇದನ್ನೇ ಆರಿಸಿ ತಂದಿದಾರೆ," ಎಂದು
ಪ್ರಮಾಣ ಪತ್ರವನ್ನು ಅವರು ಕೊಟ್ಟರು.

468

ಸೇತುವೆ

...ಜಯದೇವ ಮನೆಗೆ ಹೊರಟಾಗ ರಾಮಾಚಾರಿಯೂ ಆತನ ಜತೆ ಬಂದ.
ಆನಂದ ವಿಲಾಸದಲ್ಲಿ ಕೊಠಡಿ ಗೊತ್ತು ಮಾಡಿ, ಅಲ್ಲಿಯೇ ಊಟಕ್ಕಿದ್ದ ಆತ.
"ಹೋಟೆಲು ಊಟ. ಸ್ವಲ್ಪ ಹುಷಾರಾಗಿರ್ಬೇಕು ಕಣ್ರೀ," ಎಂದ ಜಯದೇವ.
"ಏನೂ ದೊಡ್ಡದಲ್ಲ. ನನಗೆ ಈಗಾಗ್ಲೇ ಅಭ್ಯಾಸವಾಗ್ಬಿಟ್ಟಿದೆ," ಎಂದು
ರಾಮಾಚಾರಿ ಉತ್ತರವಿತ್ತ.
"ಈ ಊರು ಇಷ್ಟವಾಯ್ತೆ ನಿಮಗೆ?"
"ಇಷ್ಟವಾಯ್ತೊ ಇಲ್ವೊ_ನಮ್ಮ ಮಾತು ಏನು ನಡೆಯುತ್ತೆ? ಬ್ರಾಹ್ಮಣರಿಗೆ
ಯಾರಿದಾರೆ ಸಾರ್ ಸಹಾಯ ಮಾಡೋರು? ಎಲ್ಲಾ ನಮ್ಮ ಗೋಣು ಮುರಿಯೋ
ಜನರೇ ಹೊರತು_"
"ಒಂದೊದ್ಸಲ ಅನ್ಯಾಯ ಕಂಡಾಗ, ತುಂಬಾ ಬೇಜಾರಾಗುತ್ತೆ. ಒಪ್ಕೊತೀನಿ."
"ಒಂದೊಂದ್ಸಲ ಎಂಥಾದ್ದು? ಯಾವಾಗಲೂ ಅನ್ಯಾಯವೇ. ಬ್ರಾಹ್ಮಣ
ಅಂದರೆ ಇವರ ದೃಷ್ಟೀಲಿ ನಾಯಿಗೆ ಸಮಾನ. ವಿದ್ಯೆಬಾರದವರದೇ ಇವತ್ತು ರಾಜ್ಯ.
ಅವರು ಮಾತಾಡೋ ರೀತಿ ನೋಡಿ. ಒಂದು ಪದವಾದರೂ ಅವರ ನಾಲಿಗೆಯಿಂದ
ಸರಿಯಾಗಿ ಹೊರಡುತ್ತೇನು?"
ಮುಖ್ಯ ಬೀದಿಯನ್ನು ಆಗಲೇ ಅವರು ದಾಟಿ ಬಂದಿದ್ದುದರಿಂದ, ಮುಖದ
ಮೇಲೆ ಅಂಗಡಿಗಳ ಬೆಳಕು ಬೀಳುತ್ತಿರಲಿಲ್ಲ. ರಾಮಾಚಾರಿಯ ಮಾತು ಕೇಳಿ ಜಯ
ದೇವ ಬಲು ಬೇಸರಗೊಂಡ. ಮನೆಯವರೆಗೂ ಆತನನ್ನು ಕರೆದೊಯ್ಯಬೇಕು;
ಇದ್ದುದನ್ನೆ ಆತನಿಗೂ ಬಡಿಸಿದರಾಯಿತು_ಎಂದೆಲ್ಲ ಆತ ಯೋಚಿಸಿದ್ದ. ಆದರೆ ಈಗ,
ಈ ಮಾತುಗಳಾದ ಬಳಿಕ, ರಾಮಾಚಾರಿಯ ಸಹವಾಸ ಆತನಿಗೆ ಬೇಕೆನಿಸಲಿಲ್ಲ.
ಜಯದೇವನೊಮ್ಮೆ ನಿಟ್ಟುಸಿರು ಬಿಟ್ಟು ಹೇಳಿದ:
"ಇದು ಸರಿಯಾದ ದೃಷ್ಟೀಂತ ನಾನು ಭಾವಿಸೋದಿಲ್ಲ ರಾಮಾಚಾರ್. ವಿದ್ಯೆ
ಯೆಲ್ಲ ಬ್ರಾಹ್ಮಣನ ಸೊತ್ತು ಅನ್ನೋ ಕಾಲ ಕಳೀತು. ಅಂಥ ವಾದ ಸರಿಯಲ್ಲ.
ಸಮಾಜದ ಕೆಲಸ ಕಾರ್ಯಗಳು ಸರಿಯಾಗಿ ನಡೀಲೀಂತ ಹಿಂದೆ ವರ್ಣಭೇದಗಳನ್ನು
ಮಾಡಿದರು. ಜವಾಬ್ದಾರೀನ ಹಂಚಿದರು. ಆಗಿನ ಸಮಾಜಕ್ಕೆ ಅದು ಸರಿಯಾಗಿತ್ತು.
ಆದರೆ ಈಗಿನ ಸಮಾಜವ್ಯವಸ್ಥೆಗೆ ಸರಿಹೋಗುತ್ತೇನು?"
ಜಯದೇವನ ವ್ಯಾಖ್ಯಾನ ರಾಮಾಚಾರಿಗೆ ಇಷ್ಟವಿರಲಿಲ್ಲ. ಆತನೆಂದ:
"ನೀವು ಏನೇ ಹೇಳಿ ಸಾರ್. ಅಲ್ಪಸಂಖ್ಯಾತರನ್ನ ಬಹುಸಂಖ್ಯಾತರು ತುಳೀ
ಬಹುದು ಅನ್ನೋದು ಎಲ್ಲಿದೆ?"
"ಅದು ತಪ್ಪು. ಆದರೆ, ಅಲ್ಪ ಸಂಖ್ಯಾತರು ಅನ್ನೋರು ಯಾರು? ಮಂತ್ರಿ
ಮಂಡಲದಲ್ಲಿ ಬ್ರಾಹ್ಮಣರಿಲ್ವೇನು? ದೊಡ್ಡ ದೊಡ್ಡ ಹುದ್ದೆಗಳಲ್ಲಿ ಬ್ರಾಹ್ಮಣರಿಲ್ವೇನು?
ಬ್ರಾಹ್ಮಣರಿಗೆ ಅನ್ಯಾಯವಾಗಿದೆ ಎನ್ನುವಾಗ ಅವರನ್ನು ಬಿಟ್ಟು ತಾನೆ ನೀವು
ಹೇಳೋದು?"

ನವೋದಯ

469

"ಅಂಥವರು ಜಾತಿದ್ರೋಹಿಗಳು!"
"ಇಲ್ಲ ರಾಮಾಚಾರ್. ಬಡವರು ಎಲ್ಲಾ ಜಾತಿಗಳಲ್ಲಿ ಸಿಗ್ತಾರೆ. ಪ್ರತಿಯೊಂದು
ಜಾತೀಲೂ ಅವಕಾಶ ಸಿಗದೆ ನರಳ್ತಿರೋರಿದಾರೆ. ಆದರೆ ಆಳುವವರ ದೃಷ್ಟಿ ಸಂಕುಚಿತ
ವಾಗಿರೋದರಿಂದ ಕೆಲವರಿಗೆ ಹೆಚ್ಚು_ಕೆಲವರಿಗೆ ಕಡಮೆ_ಅನ್ಯಾಯವಾಗ್ತಿದೆ."
"ಅದು ನಿಮ್ಮ ಅಭಿಪ್ರಾಯ."
ಜಯದೇವ ಒಂದು ನಿಮಿಷ ಸುಮ್ಮನಿದ್ದು, ಸಣ್ಣನೆ ನಕ್ಕು, ಹೇಳಿದ:
"ಅಲ್ಲ, ಕನಾರ್ಟಕ ಪ್ರಾಂತವೇ ಬೇಡಾಂತ ನೀವು ಹೇಳಿದಿರಂತಲ್ಲಾ? ಕಾರಣ?"
"ಪ್ರತ್ಯೇಕವಾಗಿ ಬ್ರಾಹ್ಮಣ ಜೀವಿಸೋದು ಸಾಧ್ಯವಿಲ್ಲಾಂತ ನಾನು ತೀರ್ಮಾನಕ್ಕೆ
ಬ೦ದಿದೀನಿ. ನಾವು ಯಾವುದಾದರೂ ಬಲಿಷ್ಠ ಗುಂಪಿನ ಕಡೆ ಸೇರ್‍ಕೋಬೇಕು.
ಲಿಂಗಾಯತರಂತೂ ನಮ್ಮನ್ನ ಹತ್ತಿರ ಸೇರಿಸೋದಿಲ್ಲ, ಈಗ ಒಕ್ಕಲಿಗರಿಗೂ ಲಿಂಗಾಯ
ತರಿಗೂ ವೈಷಮ್ಯ ಇರೋದರಿ೦ದ ನಾವು ಒಕ್ಕಲಿಗರ ಪಕ್ಷ ವಹಿಸ್ಬೇಕು."
ಕಚ್ಚುವ ಇರುವೆಗಳು ಎರಡೂ ಪಾದಗಳನ್ನು ಒಮ್ಮೆಲೇ ಮುತ್ತಿ ಕುಟುಕಿ,
ಮೇಲೇರಿದಂತಾಯಿತು ಜಯದೇವನಿಗೆ. ಎದುರಲ್ಲಿ ಎರಡು ಹಾದಿಗಳು ಕವಲೊಡೆ
ಯುತ್ತಿದ್ದುವು. ಅಲ್ಲಿ ಆತ ನಿಂತ.
ಮನೆಯವರೆಗೂ ಜಯದೇವನ ಜತೆ ಹೋಗಲು ನಿರ್ಧರಿಸಿದ್ದ ರಾಮಾಚಾರಿ
ನಿರುಪಾಯನಾಗಿ ತಾನೂ ನಿಲ್ಲಬೇಕಾಯಿತು.
ಜಯದೇವನೆಂದ:
"ನೀವು ರಾಜಕೀಯದಲ್ಲಿ ಇರ್‍ಬೇಕಾಗಿತ್ತು ರಾಮಾಚಾರಿ. ಅಪ್ಪಿತಪ್ಪಿ ಉಪಾ
ಧ್ಯಾಯವೃತ್ತಿಗೆ ಇಳಿದಿರಿ."
"ರಾಜಕೀಯದಲ್ಲಿ ಮುಂದೆ ಬರೋದಕ್ಕೆ ಅವಕಾಶ ಸಿಕ್ಕಿದ್ರೆ, ಈ ವೃತ್ತಿಗೆ ನಾನಾ
ದರೂ ಯಾಕೆ ಬರ್‍ತಿದ್ದೆ?"
ಅಷ್ಟೆ, ವೃತ್ತಿಯ ಮೇಲೆ ಆತನಿಗಿದ್ದ ಪ್ರೀತಿ, ಗೌರವ.
"ನೀವು ಯಾವ ಉದ್ದೇಶದಿಂದ ವೀರಮೈಸೂರಿಗರಾಗಿದೀರೀಂತ ಲಕ್ಕಪ್ಪ
ಗೌಡರಿಗೆ ಹೇಳ್ಲೇನು?"
"ಅಂಥ ಕೆಲಸ ನೀವು ಮಾಡಲಾರಿರೀಂತ ನನಗೆ ಗೊತ್ತು ಸಾರ್. ಏನೇ ಹೇಳಿ
ದರೂ ಕುಲ ಅನ್ನೋದು-"
"ನನ್ನದು ಮಾನವ ಕುಲ ರಾಮಾಚಾರಿ."
"ನನ್ನದೇನು ದಾನವ ಕುಲವೆ?"
"ಇಂತಹ ಚರ್ಚೆ ನನಗಿಷ್ಟವಿಲ್ಲ. ಇನ್ನು ಮುಂದೆ ಯಾವಾಗಲೂ ನಮ್ಮ ಮಾತು
ಕತೇಲಿ ಇದೊಂದು ವಿಷಯ ಬಿಟ್ಟುಬಿಡೋಣ."
"ಆಗಲಿ ಸಾರ್. ಶುರುವಿನ ಭೇಟೀಲೆ ಇಷ್ಟೆಲ್ಲ ಮಾತಾಡಿದ್ವಿ. ಏನೂ ತಪ್ಪು
ತಿಳ್ಕೊಬೇಡಿ."

470

ಸೇತುವೆ

"ಏನೇನೂ ಇಲ್ಲ."
ರಾಮಾಚಾರಿ ಬೀದಿಗಳ ಕಡೆ ನೋಡಿದಾಗ ಜಯದೇವ ಹೇಳಿದ:
"ನೋಡಿ. ಅದೇ ರಸ್ತೆ. ನೇರವಾಗಿ ಹೋಗಿ. ಆನಂದವಿಲಾಸ ಸಿಗುತ್ತೆ."
...ಮನೆಯಲ್ಲಿ ಸುನಂದಾ ಕೇಳಿದಳು:
"ರೇಡಿಯೋ ಸರಿಯಾಗಿತ್ತೆ? ಯಾಕೆ ಇಷ್ಟು ಹೊತ್ತು?"
"ಸರಿಯಾಗಿತ್ತು. ಆದರೆ ಹೊರಟವನಿಗೆ ಇನ್ನೊಂದು ರೇಡಿಯೋ
ಅಂಟ್ಕೊಳ್ತು."
"ಯಾರು?"
"ರಾಮಾಚಾರ್‍ಯ ಆಂತ. ಹೊಸ ಮೇಸ್ಟ್ರು."
"ಓ, ಚೆನ್ನಾಗಿ ಕೊರೀತಾರಾ?"
"ಕೊರೆಯೋದೆ? ಸಾಮಾನ್ಯ ಭೈರಿಗೆಯಲ್ಲ ಕಣೇ. ಅದು ವಿಷದ ಭೈರಿಗೆ!"



೧೬

ವರ್ಷಕ್ಕೊಮ್ಮೆ ನಡೆಯಬೇಕಾದ ಶಾಲಾ ಸಂದರ್ಶನಕ್ಕಾಗಿ ನ೦ಜು೦ಡಯ್ಯ
ರೇಂಜ್ ಇನ್ಸ್ಪೆಕ್ಟರನ್ನು ಇದಿರು ನೋಡಿದರು.
ಜಯದೇವ ಕೇಳಿದ:
"ರಾಧಾಕೃಷ್ಣಯ್ಯನವರಿಗೆ ವರ್ಗವಾದ್ಮೇಲೆ ಇವರು ಬಂದರೂಂತ ಕಾಣುತ್ತೆ.
ಅಲ್ವೆ?"
"ಹೌದು....ಆ ರಾಧಾಕೃಷ್ಣಯ್ಯ! ನೆನಪಿದೆ ತಾನೆ ನಿಮಗೆ? ಅವರೇನಪ್ಪ,
ವೆಂಕಟರಾಯರು ನಿಮ್ಮ ವಿಷಯವಾಗಿ ಕಳಿಸಿದ ವರದೀನ ಕಸದ ಬುಟ್ಟಿಗೆ ಎಸೆ
ದೋರು."
ಹಿಂದೆ ನಂಜುಂಡಯ್ಯನೂ ಆ ರಾಧಾಕೃಷ್ಣಯ್ಯನನ್ನು ಟೀಕಿಸಿದ್ದರು.
"ಈಗ ಅವರೆಲ್ಲಿದಾರೆ ಸಾರ್?"
"ಚಿತ್ರದುರ್ಗದಲ್ಲೀಂತ ಕಾಣುತ್ತೆ."
ಜಯದೇವ, ಬಹಿರಂಗವಾಗಿ ರಾಧಾಕೃಷ್ಣಯ್ಯನ ಗುಣಗಾನ ಮಾಡಲಿಲ್ಲ.
ಆದರೆ, ಅಂತರಂಗದಲ್ಲಿ ಅವರ ನೆನಪು ಬಹುವಾಗಿ ಆತನನ್ನು ಕಾಡಿತು.
ಒಳ್ಳೆಯ ಮನುಷ್ಯ. ತನ್ನಲ್ಲಿ ಸ್ಫೂರ್ತಿ ತುಂಬುವ ಎಷ್ಟೊಂದು ಮಾತುಗಳನ್ನು
ಅವರು ಆಡಿದ್ದರು!
_'ನಿಮ್ಮಂಥ ಒಂದು ಸಾವಿರ ಜನ ಇದ್ರೆ ಸಂಸ್ಥಾನದಲ್ಲಿ ವಿದ್ಯಾ ಕ್ಷೇತ್ರದಲ್ಲಿ

ನವೋದಯ

471

ನಾವು ಏನು ಬೇಕಾದರೂ ಸಾಧಿಸ್ಬಹುದು.'
_'ನೀವು ಹ್ಯಾಗಾದರೂ ಮಾಡಿ ಕೋರ್ಸು ಮುಗಿಸ್ಬೇಕು.'
_'ಮುಂದಿನ ಆಶೆ ಏನಾದರೂ ಇದ್ರೆ ಅದು ನಿಮ್ಮಂಥ ಯುವಕರಿಂದ.'
ಭವಿಷ್ಯತ್ತಿನ ವಿಷಯವಾಗಿ ನಂಬುಗೆ ಇಟ್ಟುಕೊಳ್ಳುತ್ತ ಅವರು ಹೇಳಿದ್ದರು:
'ಯೌವನ, ಜೋಗದ ಜಲಪಾತ ಇದ್ದ ಹಾಗೆ. ಅದರ ಸದ್ವ್ಯಯ ಆಗ್ಬೇಕು.'
ಯೌವನದ ಜಲಪಾತದ ಸದ್ವ್ಯಯ! ಈ ರಾಮಾಚಾರಿ, ಲಕ್ಕಪ್ಪಗೌಡರು,
ಹೀಗೇಯೇ ಇನ್ನೆಷ್ಟೋ ಸಾವಿರ ಜನ. ಸದ್ವ್ಯಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಆ
ಶಕ್ತಿಯ ಅಪವ್ಯಯವಾಗುತ್ತಿತ್ತು.......
ಹುಡುಗರು ಹೂದೋಟದ ಕಳೆ ಕಿತ್ತರು. ಆಟದ ಬಯಲಿನಿಂದ ಕಾಗದದ
ಚೂರುಗಳನ್ನು ಎತ್ತಿ ದೂರ ಎಸೆದರು. ಶ್ರಮದಾನದ ಅಂಗವಾಗಿ ಅ೦ಗಳದಿಂದ
ಕೆಳಗಿನ ಬೀದಿಯವರೆಗೆ ನಿರ್ಮಿಸಿದ್ದ ರಸ್ತೆಯನ್ನು, ಮತ್ತೊಮ್ಮೆ ಮುಟ್ಟಿನೋಡಿ ಒಪ್ಪ
ಗೊಳಿಸಿದರು.
ಆಗಮಿಸಿದ ಇನ್ಸ್ಪೆಕ್ಟರು ಬಲು ಸಪ್ಪಗಿನ ಮನುಷ್ಯ. ಆ ಸಂದರ್ಭದಲ್ಲಿ
ಪ್ರಮುಖ ವ್ಯಕ್ತಿಯಾಗಿ ಓಡಾಡುತ್ತಿದ್ದವನು ಅವರ ಜವಾನನೇ.
ಶಾಲೆಯ ಉಪಾಧ್ಯಾಯರಲ್ಲಿ ಇಬ್ಬರು ಪದವೀಧರರೆಂದು ಇನ್ಸ್ಪೆಕ್ಟರು,
ನಿತ್ಯದ ಮೃದುತನಕ್ಕಿಂತಲೂ ಹೆಚ್ಚಿನ ವಿನಯದಿಂದಿದ್ದರು. ತಮ್ಮ ಗುಣಪರೀಕ್ಷೆ
ಯನ್ನು ಅವರೇ ಮಾಡುತ್ತಿರುವರೇನೋ ಎನ್ನುವ ಹಾಗೆ.
ನಂಜುಂಡಯ್ಯ ಜಯದೇವನನ್ನು ಪಕ್ಕಕ್ಕೆ ಕರೆದು ಹೇಳಿದರು:
"ಈತ ಯಾವ ಜನ ಗೊತ್ತಾಯ್ತೆ ನಿಮಗೆ?"
[ ರಾಧಾಕೃಷ್ಣಯ್ಯನ ಜಾತಿ ತಿಳಿಯಲು ವೆಂಕಟರಾಯರೂ ಯತ್ನಿಸಿದ್ದರು,
ಹಿಂದೆ.]
"ಇಲ್ಲ."
"ಜವಾನ ಹೇಳಿದ. ['ಹೇಳುವುದೇನು? ಕೇಳಿ ತಿಳಕೊಂಡದ್ದು'] ಎ. ಕೆ.
ನಂತೆ."
"ಎ. ಕೆ.?"
"ಹೂಂ. ಆದಿ ಕರ್ನಾಟಕ. ಅದಕ್ಕೇ ನೀರಲ್ಲಿ ಬಿದ್ದಿರೋ ಬೆಕ್ಕಿನ ಹಾಗೆ ಮೆತ್ತ
ಗಿದಾನೆ."
ಕುಲವನ್ನು ತಿಳಿದು ನಡತೆಯನ್ನು ಅಳೆಯುವ ಅಲ್ಪ ಗುಣ. ನಂಜುಂಡಯ್ಯನ
ಮಾತನ್ನು ಕೇಳಿ ಯಾವ ಮುಖಭಾವವನ್ನೂ ತೋರ್ಪಡಿಸಲಿಲ್ಲ ಜಯದೇವ. ಆತ
ಕೇಳಿದ:
"ಎಲ್ಲ ಆದಿ ಕರ್ನಾಟಕ ಅಧಿಕಾರಿಗಳೂ ಹೀಗೇಯೇ ಮೆತ್ತಗಿರ್‍ತಾರೇನು?"
"ಛೆ! ಛೆ! ಹಾಗೇಂತ ನಾನು ಹೇಳ್ಲಿಲ್ಲ. ಅವರಲ್ಲಿ ಜೋರಾಗಿರೋರೂ

472

ಸೇತುವೆ

ಇರ್‍ತಾರೆ. ನೀವು ನನ್ನನ್ನ ತಪ್ಪು ತಿಳಕೊಂಡಿರಿ..."
ಇನ್ನಷ್ಟು ಎಚ್ಚರಿಕೆಯಿಂದ ಜಯದೇವನೊಡನೆ ಆ ಪ್ರಸ್ತಾಪ ಮಾಡಬೇಕಾ
ಗಿತ್ತು_ಎಂದು ನಂಜುಂಡಯ್ಯ ತಮ್ಮೊಳಗೆ ಹಲುಬಿದರು.
ಇನ್ಸ್ ಪೆಕ್ಟರ ಜಾತಿಯ ವಿಷಯ ಉಳಿದಿಬ್ಬರು ಉಪಾಧ್ಯಾಯರಿಗೂ ತಿಳಿಯಿತು.
ಲಕ್ಕಪ್ಪಗೌಡರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ ಎಲ್ಲರನ್ನೂ
ಉಪೇಕ್ಷಿಸುತ್ತ ಬಿಂಕದಿಂದ ಅತ್ತಿತ್ತ ಚಲಿಸಿದರು.
ರಾಮಾಚಾರಿ ಶಾಲೆಯ ಹಿಂಬದಿಗೆ ಹೋಗಿ ಸಿಗರೇಟು ಸೇದಿ ಬಂದು, ಜಯ
ದೇವನೊಡನೆ ಗೊಣಗಿದ:
"ಹೊಲೆಯ ಬಂದು ನಮ್ಮ ಯೋಗ್ಯತೇನ ಅಳೀಬೇಕೆ? ಇಂಥ ಗತಿ ಒದಗ್ಬೇಕೆ
ನಮಗೆ?"
ಬಲು ಬೇಸರದಿಂದ ಜಯದೇವ ನುಡಿದ:
"ಮನುಷ್ಯ ಯಾವನಾದರೇನು? ಯೋಗ್ಯ ವಿದ್ವತ್ತಿದ್ದರೆ ಪರೀಕ್ಷೆ ಮಾಡೋ
ಅರ್ಹತೆ ಆತನಿಗೆ ಇದ್ದೇ ಇರುತ್ತೆ."
ಈ ಇನ್ಸ್ ಪೆಕ್ಟರಿಗೆ ಅಂತಹ ಅರ್ಹತೆ ಇತ್ತು. ನಡೆ ನುಡಿ ಮೆತ್ತಗಿದ್ದರೂ
ವಿದ್ಯಾರ್ಥಿಗಳನ್ನೂ ಉಪಾಧ್ಯಾಯರನ್ನೂ ಪರೀಕ್ಷಿಸುವುದರಲ್ಲಿ ಅವರು ಜಾಣ್ಮೆ
ತೋರಿದರು.
"ಶ್ರಮದಾನದ ವಿಷಯದಲ್ಲಿ ಹುಡುಗರಿಗೆ ಸಾಕಷ್ಟು ಆಸಕ್ತಿ ಇದೆಯೊ?" ಎಂದು
ಅವರು ಉಪಾಧ್ಯಾಯರನ್ನು ಕೇಳಿದರು.
"ಆ ವಿಭಾಗವನ್ನು ಜಯದೇವರು ನೋಡ್ಕೊಳ್ತಿದಾರೆ," ಎಂದರು
ನಂಜುಂಡಯ್ಯ.
ಇನ್ಸ್ ಪೆಕ್ಟರು ಮುಗುಳು ನಕ್ಕರು.
ಜಯದೇವನೆಂದ:
"ಮುಖ್ಯವಾಗಿ ಕೆಲಸ ಯಾವುದು ಅನ್ನೋದರ ಮೇಲೆ ಅದು ಹೊಂದಿಕೊಂಡಿ
ರುತ್ತೆ. ಹಾಗೆಯೇ ಆ ವಿಷಯದಲ್ಲಿ ಉಪಾಧ್ಯಾಯರು ಉತ್ಸಾಹ ಹುಟ್ಟೋ ಹಾಗೆ
ಮಾಡಿದರೆ, ಹೆಚ್ಚು ಆಸಕ್ತಿ ತೋರಿಸ್ತಾರೆ. ಎರಡೂ ಇಲ್ದೆ ಇದ್ದಾಗ ಅದು ಗುಲಾಮೀ
ಚಾಕರಿಯಾಗುತ್ತೆ. ಮನೇಲಿ ತಾಯ್ತ೦ದೆಯರಿಗೆ ದೂರು ಕೊಡ್ತಾರೆ. ಏನಾದರೂ
ನೆಪ ಹೇಳಿ ತಪ್ಪಿಸ್ಕೊಳ್ತಾರೆ."
ಇನ್ಸ್ ಪೆಕ್ಟರಿಗೆ ಆ ವಿವರಣೆ ತುಂಬ ಇಷ್ಟವಾಯಿತು. ಅವರೆಂದರು:
"ನೀವು ವ್ಯಕ್ತಪಡಿಸಿರೋದು ಸರಿಯಾದ ಅಭಿಪ್ರಾಯ. ನನಗೂ ಹಾಗೇ
ಅನಿಸುತ್ತೆ. ಶ್ರಮದಾನದ ಮೇಲೆ ನೀವು ಒಂದು ನೋಟ್ ಬರೆದುಕೊಡಿ."
ಹಾಗೆ ಹೇಳಿದುದು ಜಯದೇವನಿಗಾದರೂ, ಉತ್ತರವನ್ನು ನಂಜುಂಡಯ್ಯ
ಇತ್ತರು:

ನವೋದಯ

473

"ಆಗಲಿ. ಕಳಿಸ್ಕೊಡ್ತೀವಿ."
ಊಟ ಉಪಚಾರದ ವಿಷಯದಲ್ಲಂತೂ ಆ ಇನ್ಸ್ ಪೆಕ್ಟರಿಂದ ಹೆಚ್ಚಿನ ತೊಂದರೆ
ಯಾಗಲಿಲ್ಲ. ರಾಧಾಕೃಷ್ಣಯ್ಯನಂತೆ ಅವರು, ತಮ್ಮ ವೆಚ್ಚವನ್ನು ತಾವೇ ನಿರ್ವಹಿಸ
ಲಿಲ್ಲ ನಿಜ. ಆದರೆ, ನಂಜುಂಡಯ್ಯ ಮಾಡಿದ ವ್ಯವಸ್ಥೆಯಿಂದಲೆ ತೃಪ್ತರಾದರು.
...ಶಾಲಾಸಂದರ್ಶನ ಮುಗಿದೊಡನೆಯೆ ವಾರ್ಷಿಕೋತ್ಸವದ ಪ್ರಶ್ನೆ ಬಂತು.
ರ್ಷಾಂತ್ಯದ ಪರೀಕ್ಷೆ ಬೇರೆ ಸಮೀಪಿಸುತ್ತಿತ್ತು.
"ದೊಡ್ಡ ಪ್ರಮಾಣದಲ್ಲಿ ಆಚರಿಸೋಣ ಎಂದರೆ ಇದೊಳ್ಳೇ ಪೀಕಲಾಟ
ವಾಯ್ತಲ್ಲ," ಎಂದು ನಂಜುಂಡಯ್ಯ ಪೀಠಿಕೆ ಹಾಕಿದರು.
ದೊಡ್ಡ ಪ್ರಮಾಣದ ಆಚರಣೆಯನ್ನು ಅವರು ಕಲ್ಪಿಸಿದ್ದುದು ಬೇರೆಯೇ
ಉದ್ದೇಶಕ್ಕಾಗಿ. ಹೈಸ್ಕೂಲಿನ ಶಂಕುಸ್ಥಾಪನೆಗೆ ಪೂರ್ವಭಾವಿಯಾಗಿ ನಡೆಯುವ
ಉತ್ಸವ ಭರ್ಜರಿಯಾಗಿದ್ದು ಅಲ್ಲಿ ಹೈಸ್ಕೂಲಿನ ಪ್ರಸ್ತಾಪವಾಗಬೇಕೆಂದು ಅವರು
ಬಯಸಿದ್ದರು.
ಜಯದೇವನೊಬ್ಬನೇ ಇದ್ದಾಗ ನಂಜುಂಡಯ್ಯನೆಂದರು:
"ವಾರ್ಷಿಕೋತ್ಸವಕ್ಕೆ ಯಾರನ್ನು ಕರೆಸೋಣ?"
ಮೂರು ವರ್ಷಗಳ ಹಿಂದೆಯೂ ಆ ಚರ್ಚೆಯಾಗಿತ್ತು. ಜಯದೇವ ಅದನ್ನು
ಮರೆತಿರಲಿಲ್ಲ. ನಂಜುಂಡಯ್ಯನಿಗೂ ನೆನಪಿತ್ತು.
"ನೀವೇ ಹೇಳಿ."
ನಂಜುಂಡಯ್ಯ ನಕ್ಕರು.
"ಯಾರಾದರೂ ಸಾಹಿತಿಗಳನ್ನು ಕರೆಸೋಣ ಅಂತ ನೀವು ಹಿಂದೆ ಹೇಳಿದ್ರಿ. ಈ
ಸಲ ಹಾಗೆ ಮಾಡೀಂತ ನಾನೇ ಹೇಳ್ತಿದ್ದೆ. ನಮ್ಮಲ್ಲಿ ಸಾಂಸ್ಕೃತಿಕ ಜಾಗೃತಿ ಆಗ್ಬೇಕಾದ್ರೆ
ಅಂಥ ಉಪನ್ಯಾಸಗಳು ಅಗತ್ಯ ಅಂತ ಒಪ್ತೀನಿ. ಆದರೆ ಈ ಸಲ__"
'ಆದರೆ' ಪದ ಬಂದೇ ಬರುವುದೆಂದು ಜಯದೇವನಿಗೆ ಗೊತ್ತಿತ್ತು.
ನಂಜುಂಡಯ್ಯ, ಕೆಳಗೊಮ್ಮೆ ನೋಡಿ ತಲೆಯನ್ನು ಮೇಲಕ್ಕೆತ್ತಿ ನುಡಿದರು:
"ನಾವು ಕಟ್ಟಬೇಕಾಗಿರೋ ಹೈಸ್ಕೂಲಿನ ದೃಷ್ಟಿಯಿಂದ ['ಇತ್ತೀಚೆಗಂತೂ
ಇವರು ಹೈಸ್ಕೂಲು ಪದವನ್ನು ಜಪಿಸೋದು ಹೆಚ್ಚಾಗಿ ಹೋಯ್ತು'] ಚೆನ್ನಣ್ಣನವ
ರನ್ನ ಅಧ್ಯಕ್ಷರಾಗಿ ಮಾಡಿದ್ರೆ ಹೆಚ್ಚು ಉಪಯೋಗವಾಗುತ್ತೆ. ಹೌದೇ?"
ಅದೇನೋ ನಿಜವಾಗಿತ್ತು. ಅಲ್ಲಗಳೆಯುವುದರಲ್ಲಿ ಅರ್ಥವಿರಲಿಲ್ಲ. ಇದು
ದುರುದ್ದೇಶವೆಂದು ನಂಜುಂಡಯ್ಯನವರನ್ನು ಆಕ್ಷೇಪಿಸುವುದೂ ಸಮಂಜಸ
ವಾಗಿರಲಿಲ್ಲ.
"ಆಗಬಹುದು ಸಾರ್."
"ವಿವಿಧ ವಿನೋದಾವಳಿ ಜವಾಬ್ದಾರಿಯೆಲ್ಲ ನಿಮ್ಮದೇ."

60

474

ಸೇತುವೆ

"ಆಗಲಿ. ಸಹಾಯಕ್ಕೆ ತಿಮ್ಮಯ್ಯನವರಿದ್ದಾರಲ್ಲಾ."
ಬೇರೆ ದಿನವಾಗಿದ್ದರೆ, ತಿಮ್ಮಯ್ಯನ ವಿಷಯದಲ್ಲಿ ತಮಗೆ ಒಳ್ಳೆಯ ಅಭಿಪ್ರಾಯ
ವಿಲ್ಲವೆ೦ಬುದನ್ನು ಖ೦ಡಿತವಾಗಿಯೂ ನಂಜುಂಡಯ್ಯ ವ್ಯಕ್ತಪಡಿಸುತ್ತಿದ್ದರು. ಅಂತಹ
ಅವಕಾಶವನ್ನು ಎಂದೂ ಅವರು ಕಳೆದುಕೊಳ್ಳುತ್ತಿರಲಿಲ್ಲ. ಆದರೆ ಈ ದಿನ ಸುಮ್ಮ
ನಿದ್ದರು.
"ಹೇಳಿದೆನಲ್ಲಾ ನಿಮ್ಮ ಜವಬ್ದಾರೀ೦ತ. ಸಹಾಯಕ್ಕೆ ಯಾರನ್ನು ಬೇಕಾದರೂ
ಕರಕೊಳ್ಳಿ."
...ಉಪಾಧ್ಯಾಯರ ಸಭೆಯಲ್ಲಿ ಈ ವಿಷಯಗಳು ಚರ್ಚೆಯಾದಾಗ ಮಾತ್ರ
ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಒಮ್ಮತ ತೋರಲಿಲ್ಲ.
ಲಕ್ಕಪ್ಪಗೌಡರು ಸಿಟ್ಟಾಗಿ ಕೇಳಿದರು:
"ಧರ್ಮಪ್ರವರ್ತಕ ಚೆನ್ನಣ್ಣನವರ ಹೊರತಾಗಿ ಯೋಗ್ಯರಾದವರು ಬೇರೆ
ಯಾರೂ ಇಲ್ವೇನು?"
"ಯಾಕೆ, ಚೆನ್ನಣ್ಣನವರಿಗೆ ಏನಾಗಿದೆ?" ಎ೦ದರು ನ೦ಜು೦ಡಯ್ಯ, ಕೆಣಕಿದ
ಫಣಿಯಂತೆ.
"ಬೇರೆ ಯಾರೂ ಇಲ್ವೇ ಅ೦ತ ಕೇಳ್ದೆ."
"ವಿದ್ಯಾಸಂಸ್ಥೆಗೋಸ್ಕರ ಭೂದಾನ ಮಾಡಿರೋರು ನಮ್ಮಲ್ಲಿ ಅವರೊಬ್ಬರೇ."
"ಮಾಧ್ಯಮಿಕ ಶಾಲೆಗೇಂತ ಅವರು ಭೂದಾನ ಮಾಡಿಲ್ವಲ್ಲ?"
"ಯಾವ ಶಾಲೆಗೋಸ್ಕರ ಮಾಡಿದರೆ ಏನ್ರಿ? ಸಂಕುಚಿತ ದೃಷ್ಟಿಯಿ೦ದ ಯಾಕೆ
ನೋಡ್ತೀರಿ ಅದನ್ನ?"
"ಸ೦ಕುಚಿತ ದೃಷ್ಟಿ ಇರೋದು ತಮಗೇ ಸಾರ್."
"ಏನೆ೦ದಿರಿ?"
"ತಮಗೆ ಇಷ್ಟ ಬಂದ ಹಾಗೆ ಮಾಡ್ಕೋಬಹುದು, ಅ೦ದೆ."
"ಇದಕ್ಕೆಲ್ಲ ಜಗಳ ಯಾತಕ್ಕೆ ಗೌಡರೆ?" ಎಂದು ಜಯದೇವ ಸಮಾಧಾನಪಡಿಸಲು
ಯತ್ನಿಸಿದ.
ಲಕ್ಕಪ್ಪಗೌಡರು ಶಾಂತರಾಗಲೆ ಇಲ್ಲ. ಕೊಡೆಯನ್ನು ಕೈಗೆತ್ತಿಕೊಂಡು ಹೊರ
ಬಿದ್ದರು.
ರಾಮಾಚಾರಿ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸದೆ ಸಿಗರೇಟು ಸೇದುತ್ತ
ಕುಳಿತ.
......ಹೆಚ್ಚು ದಿನ ಉಳಿಯಲಿಲ್ಲವೆಂದು ವಾರ್ಷಿಕೋತ್ಸವಕ್ಕೋಸ್ಕರ ಅವಸರ
ಅವಸರವಾಗಿಯೆ ತಯಾರಿ ನಡೆಸಬೇಕಾಯಿತು. ಮೊದಲ ದಿನ ರೇಗಿದ್ದ ಲಕ್ಕಪ್ಪ
ಗೌಡರೂ ಹುಡುಗರನ್ನು ಇದಿರಿಸುವುದು ಕಷ್ಟವಾಯಿತು. ವಿವಿಧ ಸ್ಪರ್ಧೆಗಳು
ಪಂದ್ಯಾಟಗಳು ಆರ೦ಭವಾದುವು. ಆ ಎಳೆಯರು ತೋರಿಸುತ್ತಿದ್ದಷ್ಟು ಉತ್ಸಾಹ
ವನ್ನಾದರೂ ಅವರು ತೋರದೆ ಇದ್ದರೆ? ಹೀಗಾಗಿ, ಮೆಲ್ಲಮೆಲ್ಲನೆ ಅವರೂ ಚಟುವಟಿಕೆ
ಯಲ್ಲಿ ಭಾಗವಹಿಸಿದರು.
ಧರ್ಮಪ್ರವರ್ತಕ ಚೆನ್ನಣ್ಣನವರು 'ದಯೆ ಇಟ್ಟು ಒಪ್ಪಿದು'ದಾಯಿತು.
ಕರಪತ್ರದ ಮುದ್ರಣಕ್ಕಾಗಿ ಸ್ವತಃ ನಂಜುಂಡಯ್ಯನವರೇ ತಾಲ್ಲೂಕು ಕೇಂದ್ರಕ್ಕೆ
ಪ್ರಯಾಣ ಬೆಳೆಸಿದರು.
ಜಯದೇವ ತಿಮ್ಮಯ್ಯನವರನ್ನು ಕರೆದ.
"ಎಲ್ಲಾ ನಮಗೇ ವಹಿಸಿಬಿಟ್ಟಿದಾರೆ. ಏನೇನು ಮಾಡೋಣ?"
ಹಣೆಯನ್ನು ಪೂರ್ತಿ ಮುಚ್ಚುವಂತೆ ಟೋಪಿಯನ್ನು ಮುಂದಕ್ಕೆ ಸರಿಸಿ
ತಿಮ್ಮಯ್ಯ ಹೇಳಿದರು:
"ಇದೊಳ್ಳೇ ಗ್ರಹಚಾರ ಬಂತಲ್ಲಪ್ಪ!"
"ಯಾವ ನಾಟಕ ಆಡೋಣ?"
"ಒಂದೇ ನಾಟಕ ಸಾಲ್ದೆ? ಹುಡುಗ ಹುಡುಗೀರು ಒಟ್ಟಿಗೇ ಪಾತ್ರವಹಿಸಿದರೆ
ಚೆನ್ನಾಗಿರುತ್ತೆ."
"ಅದಕ್ಕಿನ್ನೂ ಬಹಳ ದಿವಸ ಕಾಯ್ಬೇಕು."
"ಹೌದಪ್ಪಾ. ಏನಾದರೂ ತೊ೦ದರೆಯಾದರೆ ಅದೂ ಕಷ್ಟವೇ."
ಜಯದೇವ ನಕ್ಕು ಹೇಳಿದ:
"ಯಾರಿ೦ದ ತೊ೦ದರೆ?"
"ಮಕ್ಕಳಿಗೇನು ಗೊತ್ತಿರುತ್ತೆ ಪಾಪ? ತೊಂದರೆ ಬರೋದೆಲ್ಲಾ ತಾಯ್ತಂದೆಯ
ರಿ೦ದ."
"ಅವರಿಗೆ ಬುದ್ಧಿ ಬರೋ ಹೊತ್ತಿಗೆ ಈಗಿನ ಮಕ್ಕಳೇ ತಾಯ್ತಂದೆಯ
ರಾಗಿರ್ತಾರೆ!"
ತಿಮ್ಮಯ್ಯ ಸ್ವಲ್ಪ ಹೊತ್ತು ಯೋಚಿಸುತ್ತ ಕುಳಿತರು.
ಜಯದೇವ ಕೇಳಿದ:
"ಹೊಳೀತೇ?"
ತಿಮ್ಮಯ್ಯ ಟೋಪಿಯನ್ನು ಹಿಂದಕ್ಕೆ ಸರಿಸಿದರು.
"ಇಲ್ವಲ್ಲಾ!"
ತುಂಟತನದ ನಗೆ ಬೀರುತ್ತ ಜಯದೇವ ಹೇಳಿದ:
"ನಶ್ಯ ಹಾಕಿ ನೋಡಿ."
"ಅಂದ ಹಾಗೆ, ಮರೆತೇ ಬಿಟ್ಟಿದ್ದೆ ಅದನ್ನ. ಅದಕ್ಕೇ ಇಷ್ಟೊ೦ದು ಪೇಚಾಟ!"
ನಶ್ಯವೇರಿಸಿ, "ಹ್ಞೆ ಹ್ಞೆ" ಎ೦ದು ಸದ್ದು ಹೊರಡಿಸಿ, ಗ೦ಟಲು ಸರಿಪಡಿಸಿ,
ತಿಮ್ಮಯ್ಯ ನಕ್ಕರು.
"ನೋಡಿ. ಹೊಸ ರೀತಿ ನಾಟಕ ಮಾಡೋಣ ಈ ಸಲ. ಮೂಕ ನಾಟಕ."

476

ಸೇತುವೆ

ಜಯದೇವನಿಗೆ ಅರ್ಥವಾಗಲಿಲ್ಲ.
“ಮೂಕ ನಾಟಕವೆ?
“ಗಾಬರಿಯಾಗ್ನೆಡಿ. ಪಾತ್ರಗಳು ತೆರೆಯ ಮುಂದೆ ಬರ್ತಾ ಇರ್ಬೇಕು.ಹಿಂದಿ
ನಿಂದ ಹಾಡುಗಳನ್ನೋ ಶ್ಲೋಕಗಳನ್ನೋ ಹೇಳ್ತಾ ಇರ್ಬೇಕು.”
“ಹೂಂ.”
“ವಿಶ್ವದ ಮಹಾ ಪುರುಷರು_ಅಂತ ಹೆಸರಿಡೋಣ.”
“ಮಹಾ ಸ್ತ್ರೀಯರಿಲ್ವೇನು?”
“ಇಲ್ದೆ! ವಿಶ್ವದ ಮಾನವ ಮಣಿಗಳು_ಅಂತ ಹೆಸರಿಟ್ಟರಾಯ್ತು.”
ಅಷ್ಟರಲ್ಲೆ ತಿಮ್ಮಯ್ಯನವರಿಗೆ ಬೇರೊಂದು ವಿಷಯ ಹೊಳೆಯಿತು. ಅವ
ರೆಂದರು:
“ಅಂದಹಾಗೆ, ರಂಗಭೂಮಿ ಮೇಲೆ ಒಂದು ಸಲಕ್ಕೆ ಒಂದೇ ಪಾತ್ರ ಬರೋದ
ರಿಂದ ಸ್ತ್ರೀಪಾತ್ರ ಬೇಕಾದಾಗ ಹುಡುಗೀರ್ನೆ ಆರಿಸೋಣ. ಏನ್ಹೆಳ‍್ತೀರಾ?”
"ಅಷ್ಟು ಮಾಡಬಹುದೂಂತ ತೋರುತ್ತೆ.”
“ಇದನ್ನ ಬರೆಯೋಕೆ ನೀವು ಸಹಾಯ ಮಾಡ್ಬೇಕು, ನಮ್ಮ ದೇಶದ್ದೆಲ್ಲಾ
ಹೆಚ್ಚು ಕಡಮೆ ನನಗೆ ಗೊತ್ತಿದೆ. ಪರದೇಶಗಳ ಮಹಾ ಪುರುಷರು_ಮಹಾ ಸ್ತ್ರೀಯರ_
ವಿಷಯ ನೀವು ನನಗೆ ಮಾಹಿತಿ ಕೊಡಬೇಕು.”
“ಕೊಡೋಣ.”
“ನೇಪಥ್ಯದಲ್ಲಿ ನಿಂತ್ಕೊಂಡು ಕೆಲವು ಹಾಡುಗಳನ್ನ ನಾನು ಹಾಡ್ತೀನಿ. ಉಳಿದು
ವಕ್ಕೆ ಬೇರೆ ಯಾರನ್ನಾದರೂ ಗೊತ್ಮಾಡಬೇಕು.”
“ಯಾರನ್ನು?”
“ಅದೀಗ ಫಜೀತಿ. ಆಮೇಲೆ ನೋಡೋಣ.”
ಆ ಕಾರ್ಯಕ್ರಮವನ್ನು ಕಲ್ಪಿಸಿಕೊಂಡು ಜಯದೇವ ಸಂತೃಪ್ತನಾದ.
“ನಿಜವಾಗಿಯೂ ಈ ಪ್ರತಿಮಾ ನಾಟಕ ಚೆನ್ನಾಗಿರುತ್ತೆ ನೋಡಿ.”
“ನಂಜುಂಡಯ್ಯನವರನ್ನ ಕೇಳಿ. ಒಂದು ವಚನ ಇದೆ_ಹೊಗಳಿ ಹೊಗಳಿ
ಹೊನ್ನ ಶೂಲಕ್ಕೇರಿಸಿದರಯ್ಯ, ಅಂತ. ಈಗ್ಲೇ ಬೇಡಿ ಸ್ವಾಮೀ, ನಾಟಕ ಆಗೋ
ಕ್ಮುಂಚೇನೇ ಶೂಲಕ್ಕೇರೋದಕ್ಕೆ ನನಗಿಷ್ಟ ಇಲ್ಲ.”
“ಸರಿ. ಇನ್ನೊಂದ್ಸಲ ನಶ್ಯ ಹಾಕ್ಕೊತಿರೋ?”
ಕೈ ಬೆರಳುಗಳ ನಡುವೆ ಚಪ್ಪಟೆಯಾಗಿದ್ದ ನಶ್ಯವನ್ನು ಕಣ್ಣಿನಿಂದ ನೋಡುತ್ತ
ತಿಮ್ಮಯ್ಯ ಕೇಳಿದರು:

“ಯಾಕೆ?”
“ಹುಡುಗೀರಿಗೆ ಯಾವ ನಾಟಕ ಅಂತ ನೀವು ಹೇಳ್ಲೇ ಇಲ್ಲ.”
ತಿಮ್ಮಯ್ಯ, ಉಳಿದಿದ್ದ ಆ ನಶ್ಯವನ್ನು ಮೂಗಿಗೇರಿಸಿ ಕೈ ಕೊಡವಿ ಕರವಸ್ತ್ರದಿಂದ

ನವೊದಯ

477


ಮೂಗೊರೆಸಿ, ಮುಗುಳುನಗುತ್ತ ಕುಳಿತರು.
"ಹೋಗಲಿ, 'ಕೃಷ್ಣಪ್ರೇಮ'ವೇ ಹಾಕಿ ಬಿಡೊಣ್ವೊ?" ಎಂದು ಜಯದೇವ
ಕೇಳಿದ.
ತಿಮ್ಮಯ್ಯನವರಿಗೆ ಆ ಸಲಹೆ ಒಪ್ಪಿಗೆಯಾಗಲಿಲ್ಲ.
“ಛೆ! ಛೆ! ಬೇರೆಯೇ ಒಂದು ಬರೆಯೋಣ.ಹಳೇದು ಯಾತಕ್ಕೆ?"
"ನಿಮ್ಮಿಷ್ಟ."
"ಸೂತ ಪುತ್ರ ಕರ್ಣ_ಅಂತ. ಕುಂತಿ, ಮಗನನ್ನ ಬಿಟ್ಟು ಬರೋದು; ಆಮೇಲೆ
ನಾನೇ ನಿನ್ನ ತಾಯೀಂತ ಹೇಳೋಕೆ ಹೋಗೋದು. ಅಷ್ಟೆ. ಹ್ಯಾಗಿರ್ಬೇಕು
ಅಂತೀರಾ ತಾಯಿ ಮಗನ ಸಂವಾದ? ಬಾಣ ಬಿಟ್ಟ ಹಾಗೆ ಹೃದಯಕ್ಕೆ ನೆಡಬೇಕು!"
ಯೋಗ್ಯವಾಗಿಯೇ ಇತ್ತು. ಆ ಕಥಾ ವಸ್ತುವಿನ ನಾಟಕವೂ.
ಇಷ್ಟೆಲ್ಲ ಮಾತನಾಡಿದ್ದರೂ ಆ ಮಾತುಕತೆಯನ್ನೆಲ್ಲ ನಿಷ್ಫಲಗೊಳಿಸುವ
ಬೇರೊಂದು ದೊಡ್ಡ ಪ್ರಶ್ನೆ ಜಯದೇವನ ಮುಂದಿತ್ತು.
"ಗೊತ್ತೆ ತಿಮ್ಮಯ್ಯನವರೆ? ಲೆಕ್ಕ ಹಾಕಿದೀರಾ? ಇನ್ನು ನಮಗಿರೋದು ಎಂಟೇ
ದಿನಗಳ ಕಾಲಾವಕಾಶ."
"ಸೂತ ಪುತ್ರ ಕರ್ಣ ನಾಳೆ ಕೊಡ್ತೀನಿ. ನಾಡದು ಒಂದು ದಿನ ಇಬ್ಬರೂ ರಜಾ
ತಗೊಂಡ್ಬಿಡೋಣ. ఆ ಸಾಯಂಕಾಲದೊಳಗೆ 'ವಿಶ್ವದ ಮಾನವ ಮಣಿಗಳು'
ತಯಾರಾಗುತ್ತೆ."
ತಿಮ್ಮಯ್ಯನವರ ಸೃಷ್ಟಿ ಸಾಮರ್ಥ್ಯದಲ್ಲಿ ಸಂಪೂರ್ಣ ನಂಬುಗೆ ಇದ್ದ ಜಯ
ದೇವ, ಆ ಆಶ್ವಾಸನೆಯ ಬಳಿಕ ನಿಶ್ಚಿಂತನಾದ.
....ಸುನಂದಾ ವಿವಿಧ ವಿನೋದಾವಳಿಯ ವಿವರ ತಿಳಿದು ಸಂತೋಷಪಟ್ಟಳು.
ಮನೆಗೆಲಸದಲ್ಲಿ ನೆರವಾಗಲು ಒಬ್ಬ ಹೆಂಗಸು ಬರತೊಡಗಿದ ಮೇಲಂತೂ ಆಕೆಗೆ
ಹೆಚ್ಚಿನ ಕೆಲಸವಿರಲಿಲ್ಲ.
ಗಂಡನೊಡನೆ ಆಕೆಯೆಂದಳು:
"ನಾಳೆ ತಿಮ್ಮಯ್ಯ ಮೇಸ್ಟ್ರು ನಾಟಕ ತಂದ್ಕೊಡ್ತಾರಲ್ವೆ?"
"ಹೌದು."
"ಬೇಕಿದ್ದರೆ ಅದರದು ಮೂರು ನಾಲ್ಕು ಪ್ರತಿ ಮಾಡ್ಕೊಡ್ತೀನಿ."
ಆಕೆ ಮೊದಲ ವರ್ಷ ಇಂಟರಿನಲ್ಲಿದ್ದಾಗ ಕಾಲೇಜು ದಿನಾಚರಣೆಯ ಸಂಬಂಧ
ದಲ್ಲಿ 'ಶಾಕುಂತಲ' ನಾಟಕವಾಡಿದುದು; ಅದರಲ್ಲಿ ಆಕೆ ಸಖಿಯ ಪಾತ್ರವಹಿಸಿದುದು;
ಆಗ ಸಾಕಷ್ಟು ಪ್ರತಿಗಳಿಲ್ಲದೆ ಮಾತುಗಳನ್ನು ಗಟ್ಟಿಮಾಡಿಕೊಳ್ಳಲು ತೊಂದರೆ
ಯಾದುದು_ಇವೆಲ್ಲವೂ ನೆನಪಾದುವು ಸುನಂದೆಗೆ.
“ಸರಿ ಕಣೇ. ಒಳ್ಳೇ ಸಲಹೆ," ಎಂದು ಜಯದೇವ.
ಕೀಟಲೆ ಮಾಡಬೇಕೆಂದು ಆತನೆಂದ:

478

ಸೇತುವೆ



"ಯಾವುದಾದರೂ ಪಾರ್ಟುಮಾಡ್ತಿಯೇನು?"
"ಸಾಕು ತಮಾಷೆ."
"ಅಂದ ಹಾಗೆ, ಪ್ರತಿಮಾ ನಾಟಕದಲ್ಲಿ ಹಿಂದೆ ನಿಂತ್ಕೊಂಡು ಹಾಡೋರು
ಒಬ್ಬರು ಬೇಕು ಸುನಂದಾ."
ಆಕೆ ಒಂದು ಕ್ಷಣ ಗಂಡನ ಮುಖವನ್ನೇ ಪರೀಕ್ಷಿಸಿದಳು. ಅದು ತಿಳಿ ನೀರಿನಂತೆ
ಇದ್ದುದನ್ನು ಕಂಡು ಆಕೆಯೇ ಅಂದಳು:
"ರಾಧಾ ಇದಾಳಲ್ಲ."
“ಯಾವ ರಾಧಾ?"
"ಕೃಷ್ಣಪ್ರೇಮದ ರಾಧಾ ಕಣ್ರೀ."
"ಓ ಹೌದು! ಆದರೆ ಆಕೆ ಈಗ ವಿದ್ಯಾರ್ಥಿನಿಯಲ್ಲವಲ್ಲ...”
"ನಿಮ್ಮ ಮಾತೇ ಅರ್ಥವಾಗೋದಿಲ್ಲ ನನಗೆ. ಅಲ‍್ರೀ. ತಿಮ್ಮಯ್ಯ ಮೇಸ್ಟ್ರೇ
ಇರಬಹುದಂತೆ. ಹಳೆಯ ವಿದ್ಯಾರ್ಥಿನಿ ಭಾಗವಹಿಸಕೂಡದೊ?"
ಇಂದಿರೆಯನ್ನು ಕರೆಯುವುದು ಯಾವ ರೀತಿಯಿಂದಲೂ ತಪ್ಪಲ್ಲ ಎಂದು ಜಯ
ದೇವನಿಗೆ ಸುಲಭವಾಗಿ ಮನದಟ್ಟಾಯಿತು.
ಆತ ಹೆಂಡತಿಗೆ ಹೇಳಿದ;
"ನಾಡದು ಹ್ಯಾಗೂ ರಜಾ ತಗೋತಿನಿ. ಅವರ ಮನೆಗೊಮ್ಮೆ ಹೋಗ್ಬಿಟ್ವು
ಬರೋಣವೇನೆ? ವಾರ್ಷಿಕೋತ್ಸವದ ಮಾರನೆಯ ದಿವಸ ಇಲ್ಲಿಗೆ ಊಟಕ್ಕೂ ಕರೆದ
ರಾಯ್ತು."
ಆಕೆ, "ಹೂ೦" ಎ೦ದಳು.
...ಇಂದಿರಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದು
ದನ್ನು ಕೇಳಿ ತಿಮ್ಮಯ್ಯನವರಿಗೆ ಸಂತೋಷವಾಯಿತು.
ಆದರೆ ಶಾಲೆಯಲ್ಲಿ ನಾಟಕಗಳ ಅಭ್ಯಾಸವಾಗತೊಡಗಿದಾಗ ರಾಮಾಚಾರಿಯೂ
ಬರಲಾರಂಭಿಸಿದ.
'ಹೆಸರ ಘಟ್ಟದಲ್ಲಿ ನಾವು ಆ ನಾಟಕ ಆಡಿದ್ವಿ, ಈ ನಾಟಕ ಆಡಿದ್ವಿ'ಎನ್ನುವ
ಮಾತೇ ಆತನ ಬಾಯಲ್ಲಿ. ಆರಂಭದ ದಿನ, ಆತನ ಗತ [ವರ್ಷದ] ವೈಭವದ
ಮಾತುಗಳಿಗೆ ತಿಮ್ಮಯ್ಯ ಮೇಸ್ಟ್ರು ಕಿವಿಗೊಟ್ವರು. ಮಾರನೆಯ ದಿನ, ಅಭ್ಯಾಸ
ವಾಗುತ್ತಿದ್ದ ತರಗತಿಯೊಳಗೆ ರಾಮಾಚಾರಿಯ ಇರವನ್ನೇ ಆತ ಮರೆತರು.
ಜಯದೇವನಿಗೂ ಸೂಕ್ಷ್ಮಹೊಳೆಯಿತು. ಆದರೆ, ಆತನೇನು ಮಾಡಬೇಕು?
ರಾಮಾಚಾರಿ ಎಷ್ವೆಂದರು ತನ್ನ ಸಹೋದ್ಯೋಗಿ. ನಾಟಕದ ಅಭ್ಯಾಸವಾಗುವಾಗ
ಇಲ್ಲಿರಬೇಡ_ಎನ್ನುವುದೆ?ಅದು ಖಂಡಿತವಾಗಿಯೂ ಶಿಷ್ವಾಚಾರವಗುವಂತಿರಲಿಲ್ಲ.
ಜಯದೇವನ ಪಾಲಿಗೆ ಕ್ಲಿಷ್ಟವಾಗಿದ್ದ ಆ ಸಮಸ್ಯೆಯನ್ನು ತಿಮ್ಮಯ್ಯನವರು

ಬಲು ಸುಲಭವಾಗಿ ಬಗೆಹರಿಸಿದರು.

ನವೋದಯ

479

ತರಗತಿಯ ಹೊರಗೆ ಕಿಟಿಕಿಗೊರಗಿಕೊಂಡು ರಾಮಾಚಾರಿ ಸಿಗರೇಟು ಹಚ್ಚಿದಾಗ
ತಿಮ್ಮಯ್ಯ ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಹೇಳಿದರು:
“ಸ್ವಾಮೀ! ಧೂಮಪಾನ ನಿಷೇಧಿಸಲಾಗಿದೆ.”
ಆ ಮಾತಿಗೆ ಕೆಲ ಹುಡುಗರು ನಕ್ಕು ಬಿಟ್ಟರು.
ರಾಮಾಚಾರಿಗೆ ಮುಖಭಂಗವಾಯಿತು. ಪ್ರಾಥಮಿಕ ಶಾಲೆಯ ಉಪಾಧ್ಯಾಯ
ರಿಂದ ಎಂತಹ ಅವಮಾನ! ತನಗೆ ಹೇಳಲು ಯಾರು ಆತ? ಎದೆಗಾರಿಕೆಯಾದರೂ
ಎಷ್ಟರದು?
ರಾಮಾಚಾರಿ ಸಿಗರೇಟು ಆರಿಸಲೂ ಇಲ್ಲ; ಅಂಗಳಕ್ಕಿಳಿಯಲೂ ಇಲ್ಲ.
ಮುಗುಳುನಕ್ಕು ಶಾಂತವಾದ ಸ್ವರದಲ್ಲಿ ಜಯದೇವನೆಂದ:
“ರಾಮಾಚಾರ್, ಸಿಗರೇಟು ಸೇದಬಾರದು ಅಂತಾರೆ ನಮ್ಮ ನಿರ್ದೇಶಕರು.”
“ನಮ್ಮ ಶಾಲೆಯ ನಾಟಕಕ್ಕೆ ಅವರು ನಿರ್ದೇಶಕರೇನು?” ಎಂದು ಕೇಳಿದ
ರಾಮಾಚಾರಿ, ಸಿಟ್ಟಿನಿಂದ, 'ನಮ್ಮ' ಮತ್ತು 'ಅವರು' ಪದಗಳನ್ನು ಒತ್ತಿಹೇಳುತ್ತ.
ತಿಮ್ಮಯ್ಯನವರೇ ಉತ್ತರವಿತ್ತರು:
“ಹೌದು ಸ್ವಾಮಿ. ನಮ್ಮ ಶಾಲೆಯಲ್ಲಿ ನಾಟಕವಾದರೆ ನೀವು ನಿರ್ದೇ
ಶಕರಾಗಿ.”
'ನಮ್ಮ' ಮತ್ತು 'ನೀವು' ಪದಗಳನ್ನು ಅವರೂ ಒತ್ತಿ ಹೇಳಿದರು.
“ಅಂಗಳದಲ್ಲಿ ಸೇದಬಹುದು ತಾನೆ?” ಎಂದ ರಾಮಾಚಾರಿ, ಪ್ರಯತ್ನ ಪೂರ್ವಕ
ವಾಗಿ ನಗುತ್ತ, ತನಗಾದ ಪರಾಭವವನ್ನು ಮರೆಮಾಚಲು.
“ಓಹೋ. ಧಾರಾಳವಾಗಿ. ನಾನು ನಶ್ಯ ಹಾಕಿಕೊಳ್ಳೋದೂ ಅಲ್ಲೆ!”
ರಾಮಾಚಾರಿ ಅಂಗಳಕ್ಕಿಳಿಯುತ್ತಿದ್ದಂತೆ ಹುಡುಗಿಯರು ಕಿಸಕ್ಕನೆ ನಕ್ಕರು.
“ಹೂಂ. ನಗಬೇಡಿ. ಎಲ್ಲಿ ಕುಂತಿ? ಮುಂದಕ್ಬಾಮ್ಮ,” ಎಂದರು ತಿಮ್ಯಯ್ಯ.
ಅಷ್ಟು ಸುಲಭವಾಗಿ ಬಿಟ್ಟುಕೊಡುವವನೇ ರಾಮಾಚಾರಿ? ಸಿಗರೇಟು ಸೇದಿ
ಮುಗಿಸಿದ ಬಳಿಕ ಆತ ಹಿಂತಿರುಗಿದ; ಮಾರನೆಯ ದಿನವೂ ಬಂದ.
ಆತನ ಕಣ್ಣುಗಳು ಉಣ್ಣುತ್ತಿದ್ದುದು ಇಂದಿರೆಯನ್ನೇ ಎಂಬುದು ಸ್ಪಷ್ಟ
ವಾಗಿತ್ತು.
ವಾರ್ಷಿಕೋತ್ಸವ ಎರಡೇ ದಿನಗಳ ಅಂತರದಲ್ಲಿದ್ದಾಗ ಆತ ಜಯದೇವನನ್ನು
ಕೇಳಿದ:
“ಹೆಸರಘಟ್ಟದಲ್ಲಿ, ಮೇಕಪ್ ನಾನೇ ಮಾಡ್ತಾ ಇದ್ದೆ. ಇಲ್ಲೂ ಸಹಾಯ
ಬೇಕಾದರೆ_”
ಒಳಗೆ ಏರುತ್ತಲಿದ್ದ ಕಾವನ್ನು ಹತೋಟಿಯಲ್ಲಿರಿಸಿಕೊಳ್ಳುತ್ತ ಜಯದೇವ
ತಿಮ್ಮಯ್ಯನವರೆಡೆಗೆ ಬೊಟ್ಟುಮಾಡಿದ.

“ನೋಡೀಪ್ಪಾ. ಎಲ್ಲಾ ಅವರದೇ ಜವಾಬ್ದಾರಿ.”


480

ಸೇತುವೆ

ಆ ಸಂಭಾಷಣೆ ಕಿವಿಗೆ ಬಿದ್ದಿದ್ದ ತಿಮ್ಮಯ್ಯ ನಿಂತಲ್ಲಿಂದಲೇ ಹೇಳಿದರು:
"ಏನು ಮೇಕಪ್ಪೆ? ಅದೆಲ್ಲಾ ನನ್ನದೇ ಗುತ್ತಿಗೆನಪ್ಪಾ. ಬಿಟ್ಟುಕೊಡೇಕೆ ಆಗಲ್ಲ."
"ಸಂತೋಷ," ಎಂದ ರಾಮಾಚಾರಿ, ಈ ಬಾಣವೂ ನಾಟದೆ ಹೋಯಿತಲ್ಲ
ಎಂದು ದುಃಖಪಡುತ್ತ.
ಆ ಸಂಜೆ ಚೂಡಾಮಣಿ ಮತ್ತಿತರ ಹುಡುಗಿಯ ಜತೆಯಲ್ಲಿ ಇಂದಿರಾ ಹೊರಟು
ಹೋದ ಬಳಿಕ, ಹುಡುಗರು ಚೆದರಿದ ಮೇಲೆ, ಉಪಾಧ್ಯಾಯತ್ರಯರು ಹೊರ
ಬಿದ್ದರು.
ಸ್ವಲ್ಪ ದೂರ ಹಾದಿ ಕ್ರಮಿಸಿ ಕವಲುದಾರಿಗೆ ಬಂದೊಡನೆ ತಿಮ್ಮಯ್ಯ, ರಾಮಾ
ಚಾರಿಯನ್ನು ಕುರಿತು ಕೇಳಿದ:
“ನೀವು ಆನಂದ ವಿಲಾಸಕ್ಕೆ ತಾನೆ ಹೋಗೋದು?"
ಅವರೂ ಅಲ್ಲಿಗೇ ಬರುತ್ತಿರಬಹುದೆಂದು ಭಾವಿಸಿ ರಾಮಾಚಾರಿಯೆಂದ:
"ಹೌದು."
"ಹಾಗಾದರೆ ನೀವು ಹೋಗಿ. ನಾವು ಈ ಕಡೆ ತಿರುಗ್ತೀವಿ."
“ಆಗಲಿ," ಎಂದು ರಾಮಾಚಾರಿ, ಸಿಟ್ಟಿನಿಂದ ಮತ್ತಷ್ಟು ಕಪ್ಪಗಾದ ಮುಖ
ದೊಡನೆ ತನ್ನ ನಿವಾಸದ ಕಡೆಗೆ ನಡೆದ.
ಇಬ್ಬರೇ ಉಳಿದಾಗ ತಿಮ್ಮಯ್ಯನೆಂದರು:
"ಆತ ಶುದ್ಧ ಪೋಲಿ. ಈ ಊರಲ್ಲಿ ಆತನಿಗೆ ಚಪ್ಪಲಿ ಏಟು ಬೀಳದಿದ್ದರೆ
ಆಮೇಲೆ ಹೇಳಿ."
*** *
ಊರಿನ ಜನರ ಪಾಲಿಗೆ ಸ್ಮರಣೀಯ ಎನ್ನಿಸುವ ರೀತಿಯಲ್ಲಿ ಆ ವರ್ಷದ ಶಾಲಾ
ದಿನ_ವಾರ್ಷಿಕೋತ್ಸವ_ಜರಗಿತು. ಸಮಾರಂಭ ಕಳೆಗಟ್ಟಿದುದು ಆ ಊರಿನ ಇತಿಹಾಸ
ದಲ್ಲಿ ಅಭೂತಪೂರ್ವವಾಗಿದ್ದ ಮನೋರಂಜನೆಯಿಂದ.
ನಂಜುಂಡಯ್ಯನವರ ವರದಿ, ಬಹುಮಾನ ವಿನಿಯೋಗ. ಬಲು ಪ್ರಯಾಸ
ಪಟ್ಟು ಧರ್ಮಪ್ರವರ್ತಕರು ಓದಿದ ಅಧ್ಯಕ್ಷಭಾಷಣ_ಎಲ್ಲವನ್ನೂ ಜನ ಮರೆತು ಬಿಡು
ವಂತೆ ಮಾಡಿತ್ತು ವಿವಿಧ_ವಿನೋದಾವಳಿಯ ಕಾರ್ಯಕ್ರಮ.
ಅಧ್ಯಕ್ಷರು, ಶಂಕರಪ್ಪನವರು, ಇನ್ನಿತರರು ಪರದೆಯ ಹಿಂದೆ ಬಂದರು.ಆಗ
ತಾನೆ ಪ್ರೇಕ್ಷಕರ ನಡುವಿನಿಂದೆದ್ದು ಗಂಡನೆಡಗೆ ಬಂದಿದ್ದ ಸುನಂದೆಯೊಡನೆ ಜಯದೇವ
ಅಲ್ಲಿ ನಿಂತಿದ್ದ. ಆತನ ಹಿಂದೆ, ಭುಜದ ಮೇಲಿದ್ದ ಅಂಗವಸ್ತ್ರದಿಂದ ತಿಮ್ಮಯ್ಯ
ಮುಖದ ಬೆವರು ಒರೆಸಿಕೊಳ್ಳುತಿದ್ದರು.
ಬಂದಿದ್ದವರು ಅಭಿನಂದಿಸತೊಡಗಿದೊಡನೆ ಜಯದೇವ "ಅದರ ಯಶಸ್ಸಿ

ಗೆಲ್ಲ ತಿಮ್ಮಯ್ಯನವರೇ ಕಾರಣ," ಎಂದು ಕೈಯೆತ್ತಿತೋರಿಸುತ್ತ ಪಕ್ಕಕ್ಕೆ ಹೊರಳಿದ.

ನವೋದಯ

481

ಆ ಮನುಷ್ಯ ಅಲ್ಲಿರಲೇ ಇಲ್ಲ. ಹೊಗಳುವವರ ಕಣ್ಣಿಗೆ ಬೀಳಬಾರದೆಂದು
ಅವರು ಹೊರಕ್ಕೆ ನುಸುಳಿ ಕತ್ತಲೆಯಲ್ಲಿ ಮರೆಯಾಗಿದ್ದರು.



೧೭

ವಾರ್ಷಿಕೋತ್ಸವ ಮುಗಿದ ಮಾರನೆಯ ದಿನ ಸುನಂದೆಗೆ ಏನೇನೂ ಬಿಡು
ವಿರಲಿಲ್ಲ.
"ಇವತ್ತು ಮಧ್ಯಾಹ್ನದವರೆಗೂ ಇದ್ಬಿಟ್ಟು ಹೋಗು," ಎಂದು ಕೆಲಸದವಳಿಗೆ
ಆಕೆ ನಿರ್ದೇಶವಿತ್ತಳು.
ಮನೆಯೊಳಗಿನ ಚಟುವಟಿಕೆ ಕಂಡು ಆ ಹೆಂಗಸಿಗೆ ಕುತೂಹಲ. ಆಕೆ ಕೇಳಿದಳು:
"ನೆಂಟರು ಬತ್ತಾರೇನವ್ವ?"
ಸಂಬಂಧಿಕರ ಆಗಮನ ಎಂದರೇನೆಂಬುದನ್ನು ತಿಳಿಯದ ಆ ಮನೆಗೆ ನೆಂಟರು!
ಸುನಂದಾ ನಸುನಕ್ಕಳು. ಸುಳ್ಳಾಡುವುದೇ ಸರಿ ಎನಿಸಿತು ಆಕೆಗೆ.
"ಹೂಂ ಕಣೇ. ನೆಂಟರು ಬರ್ತಾರೆ."
ಅದನ್ನು ತಿಳಿದ ಮೇಲಂತೂ ಕೆಲಸದಾಕೆ ಎಲ್ಲಿಲ್ಲದ ಸಡಗರದಿಂದ ಓಡಾಡಿದಳು.
ಹೆಜ್ಜೆ ಹೆಜ್ಜೆಗೂ ರುಚಿನೋಡುತ್ತ ಅಡುಗೆ ಮಾಡಿದಳು ಸುನಂದಾ. ಯಾವು
ದಕ್ಕಾದರೂ ಉಪ್ಪು ಕಡಮೆಯಾಯ್ತೆ? ಸಿಹಿ ಸಾಕೆ? ಅನ್ನ ಸರಿಯಾಗಿ ಬೆಂದಿದೆಯೆ?
ಪ್ರತಿಯೊಂದೂ.
ಕೆಲಸದ ಹೆಂಗಸು ಗಾಡಿಯನ್ನು ಇದಿರು ನೋಡಿದಳು. ಆದರೆ, ನೆಂಟರು
ಬಂದಿಳಿದುದು ಕಾಲ್ನಡಿಗೆಯಲ್ಲೇ. ಅವರ ಪರಿಚಯ ಆಕೆಗಿಲ್ಲವೆ? ಸುಳ್ಳು ಹೇಳಿದ್ದರು
ಅಮ್ಮಾವರು.
ಜಯದೇವ ಅಡುಗೆ ಮನೆಯತ್ತ ತಲೆಹಾಕಿ ಕೇಳಿದ:
"ಎಲ್ಲಾ ಸಿದ್ದವಾಗಿದೆಯೇನೆ?"
"ಹೂಂ."
ಇನ್ನು ಊಟದೆಲೆಗಳನ್ನು ತೊಳೆಯೋಣವೆಂದು ಕೈ ಹಾಕಿದರೆ ಅಲ್ಲೇನಿತ್ತು?
"ಅಯ್ಯೋ! ಊಟಕ್ಕೆ ಎಲೆಯೇ ಇಲ್ಲಾಂದ್ರೆ."
ಕೆಲಸದವಳು ಊಟದ ಎಲೆಗಳನ್ನು ಮಾರುತ್ತಿದ್ದ ಮನೆಗೆ ಓಡಿದಳು.
...ಇಂದಿರೆ, ಆಕೆಯ ತಾಯಿ, ಜಯದೇವ_ಮೂವರು ಊಟಕ್ಕೆ ಕುಳಿತರು.
ಬಡಿಸತೊಡಗಿದಾಗ ಪುನಃ ಸುನಂದೆಗೆ ಅಳುಕಿತು:

61

482

ಸೇತುವೆ

"ಅಡುಗೆ ನಿಮಗೆ ರುಚಿಯಾಗುತ್ತೊ ಇಲ್ವೋ?"
"ಬಡಿಸಮ್ಮಾ. ತಿಂದುನೋಡಿ ಹೇಳ್ತೀವಿ," ಎಂದರು ಇಂದಿರೆಯ ತಾಯಿ.
"ನಮ್ಮನೇಲಿ ಟೀಕೆ ಮೆಚ್ಚುಗೆಯೆಲ್ಲ ಊಟ ಮುಗಿದ ಮೇಲೆ. ಇದೊಂದು ಹಳೆ
ಪದ್ದತಿ," ಎಂದ ಜಯದೇವ.
ಆ ಪದ್ದತಿಯನ್ನು ಇಂದಿರೆಯ ತಾಯಿ ಮುರಿದರು. ಸಿಹಿಯ ರುಚಿ ನೋಡಿ,
ಹುಳಿಯನ್ನವನ್ನು ಬಾಯಿಗಿಟ್ಟು, ಪಲ್ಯವನ್ನು ಮುಟ್ಟಿ, ಅವರೆಂದರು:
"ಸೊಗಸಾಗಿದೆಯಮ್ಮಾ!"
"ಸುಮ್ಸುಮ್ನೆ ಹೇಳ್ತೀರಾ," ಎಂದಳು ಸುನಂದಾ.
"ಚೆನ್ನಾಗಿದೆ ಕಣ್ರೀ ನಿಜವಾಗ್ಲೂ," ಎಂದು ಇಂದಿರಾ, ತಾಯಿಯ ಅಭಿಪ್ರಾಯ
ವನ್ನು ಸಮರ್ಥಿಸಿದಳು.
ಅದನ್ನು ನಂಬುವುದಕ್ಕೂ ಸುನಂದಾ ಸಿದ್ಧಳಿರಲಿಲ್ಲ. ಆಕೆ ಗಂಡನ ಮುಖವನ್ನು
ಸೂಕ್ಷ್ಮವಾಗಿ ದಿಟ್ಟಿಸಿದಳು. ಅಲ್ಲಿ ಯಾವ ರೀತಿಯ ಅಸಮಾಧಾನವೂ ಇರಲಿಲ್ಲ.
ಮೆಚ್ಚುಗೆಯ ಮಾತು ಕೇಳಿಬರದೆ ಇದ್ದರೂ ಆ ಕೆಲಸವನ್ನು ನೋಟ ಮಾಡಿತು.
ಪರೀಕ್ಷೆಯಲ್ಲಿ ಉತ್ತೀರ್ಣಳಾದೆನೆಂದು ಹಿಗ್ಗಿದಳು ಸುನಂದಾ. ಗಲ್ಲದ ಮೇಲಿದ್ದ
ಬೆವರನ್ನು ಆಕೆ ಸೆರಗಿನ ಅಂಚಿನಿಂದ ಮೆಲ್ಲನೆ ಒರೆಸಿದಳು.
ಊಟದ ನಡುವೆ ಮಾತನಾಡಲು ವಿಷಯವಿತ್ತು, ವಾರ್ಷಿಕೋತ್ಸವ, ನಾಟಕ
ಗಳು, ತಿಮ್ಮಯ್ಯನವರ ಪ್ರಶಂಸೆ, ಅಭಿನಯಿಸಿದ ಹುಡುಗಿಯರು.
ಇಂದಿರಾ ಸುಮ್ಮನಿರುತ್ತಿದ್ದಳೆಂದು ಜಯದೇವ ಆಗಾಗ್ಗೆ ಕೇಳುತ್ತಿದ್ದ, "ಅಲ್ವೇ
ನಮ್ಮ?” ಎಂದು.
"ಹೂಂ," ಎಂಬ ಉತ್ತರವೇ ಬರುತ್ತಿತ್ತು ಪ್ರತಿ ಸಾರಿಯೂ.
ತಾಯಿ ಮಗಳಿಗೆ ಅಂದರು:
"ಅಣ್ಣನ ಜತೆ ಮಾತಾಡೋಕೆ ಅದೇನು ಸಂಕೋಚವೆ ನಿನಗೆ?"
ಇಂದಿರಾ ಸುಮ್ಮನೆ ನಕ್ಕು, ಪಲ್ಯದೊಡನೆ ಆಟವಾಡಿದಳು. ಎಲೆಯಲ್ಲಿ ಅನ್ನ
ವಿರಲಿಲ್ಲ. ಅದನ್ನು ನೋಡಿದ ಜಯದೇವ ಸುನಂದೆಯ ಗಮನವನ್ನು ಆ ಕಡೆಗೆ ಎಳೆದ.
ಸುನಂದಾ ಇಂದಿರೆಗೆ ಅನ್ನ ಬಡಿಸಿದಳು.
ಅವರ ಊಟ ಮುಗಿದ ಮೇಲೆ ಸುನಂದೆಯ ಸರದಿ. ಆಗ ಇಂದಿರಾ ಆಕೆಗೆ
ನೆರವಾದಳು.
ಅವರಿಬ್ಬರೂ ಹೊರಬಂದಾಗ ಇಂದಿರೆಯ ತಾಯಿ ಸುನಂದೆಯನ್ನು ಸಮೀಪಕ್ಕೆ
ಕರೆದು ಕೇಳಿದರು:
"ಆಯಾಸವಾಯ್ತಾ?"
"ಇಲ್ಲ," ಎಂದಳು ಸುನಂದಾ.
ಅವರನ್ನು ನೋಡುತ್ತ ಸುನಂದೆಗೆ, ಹಿಂದೆಯೊಮ್ಮೆ ಆಗಿದ್ದಂತೆ ತಾಯಿಯ

ನವೋದಯ

483

ನೆನಪಾಯಿತು.... ಇಲ್ಲ_ಎಂದಿದ್ದು ಸುಳ್ಳೆ. ಎಷ್ಟೊಂದು ಆಯಾಸವಾಗಿತ್ತು ತನಗೆ!
ಈ ತಾಯಿಯ ಮಡಿಲಲ್ಲಿ ಮುಖವಿರಿಸಿ ನಿದ್ದೆ ಹೋಗುವುದು ಎಷ್ಟು ಚೆನ್ನು!
"ಹಾಡ್ತೀಯಾ ಸುನಂದಾ?" ಎಂದು ಜಯದೇವ ಹೆಂಡತಿಯನ್ನು ಕೇಳಿದ,
ತುಂಟತನದಿಂದ ಕಣ್ಣು ಮಿಟಿಕಿಸುತ್ತ.
"ನೋಡ್ರಿ, ಗೇಲಿಮಾಡ್ತಿದಾರೆ," ಎಂದು ಸುನಂದಾ 'ಅಮ್ಮ'ನಿಗೆ ದೂರು
ಕೊಟ್ಟಳು.
"ಒಂದೆರಡು ಹಾಡ್ಹೇಳಿ ಸುನಂದಕ್ಕಾ." ಎಂದು ಇಂದಿರೆಯೂ ರಾಗವೆಳೆದಳು....
"ಬರೋಲ್ರೀ ನನಗೆ," ಎಂದಳು ಸುನಂದಾ.
ಆ ಮಾತು ಅಲ್ಲಿಗೆ ನಿಂತಿತು.
ಇಂದಿರೆಯ ತಾಯಿ ಅಂದರು:
"ನಮ್ಮ ಮನೆ ಊರಿನ ಒಂದು ಕಡೇಲಾದರೆ, ನಿಮ್ಮ ಮನೆ ಇನ್ನೊಂದು ಕಡೆ.
ಇಷ್ಟು ದೂರ ಬರಬೇಕಾದರೆ ಸಾವಿರಾರು ಕಣ್ಣುಗಳನ್ನು ದಾಟಿ ಬರಬೇಕು. ಸಾಕಾಗಿ
ಹೋಗುತ್ತೆ."
ಕಣ್ಣುಗಳ ವಿಷಯದಲ್ಲಿ ಸುನಂದೆಗೆ ಇದ್ದ ಅಭಿಪ್ರಾಯವೂ ಅದೇ. ಆಕೆ
ಯೆಂದಳು:
"ನಿಜ ಕಣ್ರೀ. ಇಲ್ಲಿಯ ಜನ ಹ್ಯಾಗೆ ದುರದುರನೆ ನೋಡ್ತಾರೇಂತ."
ಜಯದೇವನೆಂದ:
"ಹಾಗೆ ನೋಡುವವರು ಎಲ್ಲಾ ಕಡೇನೂ ಇರ್ತಾರೆ. ಏನ್ಮಾಡೋಣ ಹೇಳಿ?"
ಇಂದಿರೆಯ ತಾಯಿ ಆ ಮಾತನ್ನು ಅಲ್ಲಗಳೆಯಲಿಲ್ಲ.
"ಅದು ಸರಿ ಅನ್ನಿ. ಆದರೂ ಒಂದೊಂದ್ಸಲ ತುಂಬಾ ಬೇಜಾರಾಗ್ಬಿಡುತ್ತೆ."
ಹಾಗೆ, ಸುಖದುಃಖದ ಮಾತು ಬಂತು.
ಅವರ ಹೊಲದ ಪ್ರಶ್ನೆ ಹೆಚ್ಚು ತೊಡಕಿನದೇನೂ ಆಗಿರಲಿಲ್ಲ.
"ಗೇಣಿಗೆ ತೊಗೊಂಡಿರೋ ಇಬ್ಬರೂ ಒಳ್ಳೆಯವರೇ. ಆದರೂ ಎಷ್ಟು ದಿವಸಾಂತ
ಹೀಗೆಯೇ ಇರೋಕಾಗುತ್ತೆ? ಅದೇನೋ ಹೊಸ ಕಾನೂನು ಬೇರೆ ಬರುತ್ತಂತಲ್ಲ. ಈ
ಹೊಲಮನೇನೆಲ್ಲ ಮಾರಿ ಬೆಂಗಳೂರಿನಂಥ ಊರಿಗೆ ಹೋಗಿ ಇದ್ಬಿಡೋಣ ಅನಿಸುತ್ತೆ
ಒಮ್ಮೊಮ್ಮೆ..."
ಅನುಭವದಿಂದ ಹೊರಟಿದ್ದ ಆ ಮಾತುಗಳಲ್ಲಿ ಸತ್ಯಾಂಶವಿತ್ತು.
ಜಯದೇವನೆಂದ:
"ಬೆಂಗಳೂರಿಗೆ ಹೋಗಿ ನೆಲೆಸೋದೇನೂ ದೊಡ್ಡ ವಿಷಯವಲ್ಲ. ಆದರೆ,
ಆದಷ್ಟು ಕಾಲ ಇಲ್ಲಿಯೇ ನೀವು ಇರಬಹುದಲ್ಲಾ? ಇನ್ನೊಂದು ವರ್ಷದೊಳಗಂತೂ
ನಂಜುಂಡಯ್ಯನವರ ಹೈಸ್ಕೂಲು ಶುರುವಾಗಿಯೇ ಆಗುತ್ತೆ."
ಇಂದಿರೆಯ ತಾಯಿ ಸಣ್ಣನೆ ನಕ್ಕರು.

484

ಸೇತುವೆ

"ಈಗ ಇಂದಿರೆಗೆ ಎಷ್ಟು ವರ್ಷ ಅಂತ ತಿಳಕೊಂಡಿದೀರಿ? ಹದಿನಾರು ಕಳೀತು.
ಹದಿನೇಳು ದಾಟಿದ್ಮೇಲೆ ಹೈಸ್ಕೂಲಿಗೆ ಹೋಗೋದು ಚೆನ್ನಾಗಿರುತ್ತೆ!"

"ಅದೇನೂ ದೊಡ್ಡದಲ್ಲ. ಆ ವಯಸ್ಸಿನವರು ಬೇರೆಯವರೂ ಇದ್ದೇ ಇರ್‍ತಾರೆ."
ಅದು ಸಮಾಧಾನದ ಮಾತಾಗಿತ್ತು.
"ಹಿಂದಿಯಾದರೂ ಕಲಿಸೋಣವೆಂದರೆ ಈ ಊರಲ್ಲಿ ಹಿಂದಿ ಗೊತ್ತಿರೋರು
ಯಾರೂ ಇಲ್ಲ. ಆ ಪತ್ರಿಕೆಯವನಿಗೆ ಹೇಳಿ ಕನ್ನಡ ಪುಸ್ತಕಗಳಿನ್ನೇನೊ ಒಂದಿಷ್ಟು
ತರಿಸ್ತಾ ಇದೀವಿ."
ಅವರ ಮನಸಿನಲ್ಲೊ೦ದು ವಿಷಯ ಬಹಳ ದಿನಗಳಿಂದ ಮನೆ ಮಾಡಿತ್ತು.
ಜಯದೇವನ ಕೈಲಿ ಸುನಂದೆಗಿಷ್ಟು ಇಂಗ್ಲಿಷನ್ನಾದರೂ ಹೇಳಿಸುವುದು ಸಾಧ್ಯವಾಗಿ
ದ್ದರೆ? ಯೋಗ್ಯವಾಗಿದ್ದುದು ಯೋಚನೆ ಮಾತ್ರ. ಅದನ್ನು ಕೃತಿಗಿಳಿಸಲು ಅವಕಾಶ
ವಿರಲೇ ಇಲ್ಲ. ಹಿಂದೆ ಪಾಠ ಹೇಳಲು ಬರಲೊಪ್ಪದೇ ಇದ್ದ ಜಯದೇವ ಮದುವೆ
ಯಾದ ಅನಂತರವಾದರೂ ಒಪ್ಪಬಹುದೆಂಬುದು ಬರಿಯ ಆಸೆ ಮಾತ್ರ. ಆತ
ಇಂದಿರೆಗೆ ಪಾಠ ಹೇಳುವುದು, ತುರಿಸುತ್ತಲೇ ಇರುವ ನಾಲಿಗೆಗೆ ಎಂತಹ ಆಹಾರ!
ಆ ವಿಷಯ ಜಯದೇವನಿಗೆ ಹೊಳೆದಿರಲಿಲ್ಲವೆಂದೆ?ಖಾಸಗಿಯಾಗಿಯೇ ಇಂದಿರೆ
ಅಧ್ಯಯನ ಮಾಡಿದರಾಗುತ್ತಿತ್ತೆಂದು ಆತ ಎಷ್ಟೋ ಸಾರೆ ಯೋಚಿಸಿದ್ದ. ಆದರೆ
ಆಕೆಯ ತಾಯಿಯೊಡನೆ ಬಾಯಿ ತೆರೆದು ಪ್ರಸ್ತಾಪ ಮಾಡಿರಲಿಲ್ಲ. ಹಾಗೆ ಮಾಡಲು
ಭಯ ಆತನಿಗೆ. 'ನೀವೇ ಪಾಠ ಹೇಳ್ಕೊಡಿ ಮೇಸ್ಟ್ರೇ' ಎಂದರೆ? ತನ್ನ ಮನೆಗೇ ಆಕೆ
ದಿನವೂ ಬಂದು ಹೋಗುವುದಂತೂ ಆಗ ಹೋಗದ ಮಾತು.
ಅವರಿಬ್ಬರಲ್ಲದೆ ಇನ್ನೊಂದು ಜೀವವೂ ಈಗ ಆ ಬಗೆಗೆ ಯೋಚಿಸುತಿತ್ತು.
ಸುನಂದಾ ಹೇಳಿದಳು:
"ನನಗೆ ಹಿಂದಿ ಬರೋಲ್ಲ. ಇಂಗ್ಲಿಷ್ ಬೇಕಾದರೆ ಹೇಳ್ಕೊಡ್ತೀನಿ."
ಆ ಮಾತುಕೇಳಿ ಜಯದೇವ ಬೆರಗಾದ.
"ಹೇಳ್ಕೊಡ್ರಿ," ಎಂದಳು ಇಂದಿರಾ.
ಅದು ಸಾಧ್ಯ_ಎನಿಸಿತು ಇಂದಿರೆಯ ತಾಯಿಗೂ. ಆದರೆ ಮರುಕ್ಷಣದಲ್ಲೇ
ಸುನಂದೆಯ 'ಆರೋಗ್ಯ'ದ ನೆನಪಾಗಿ ಆಕೆ ಮುಗುಳು ನಕ್ಕರು.
ಸುನಂದೆಯತ್ತ ನೋಡಿ ಅವರೆಂದರು:
"ಹೇಳ್ಕೊಡೋದಕ್ಕೆ ನೀನೆಲ್ಲಿರ್‍ತೀಯಮ್ಮಾ? ಬೆಂಗಳೂರಿಗೆ ಹೋಗೊಲ್ವೇನು?
ಅಥವಾ ನಮ್ಮನೆಯನ್ನೇ ತವರ್ಮನೆ ಮಾಡ್ಕೊಂಡ್ಬಿಡ್ತಿಯೊ? ನಾನೇನೊ ಜವಾಬ್ದಾರಿ
ಹೊತ್ಕೊಳ್ಳೋದಕ್ಕೆ ಸಿದ್ಧವಾಗಿದೀನಿ!"
ಸುನಂದಾ ನಾಚಿದಳು:
"ಹೌದು. ಈ ತಿಂಗಳ ಕೊನೇಲಿ ನಾವು ಬೆಂಗಳೂರಿಗೆ ಹೊರಟ್ಹೋಗ್ತೀವಿ,"
ಎಂದ ಜಯದೇವ.

ನವೋದಯ

485

"ವಾಪಸು ಬಂದ್ಮೇಲೆ ಪಾಠ ಶುರುಮಾಡೋಣ," ಎಂದಳು ಸುನಂದಾ.
ಆಕೆಯ ಕೈಯನ್ನು ತನ್ನ ಅ೦ಗೈಗಳಲ್ಲಿ ಇರಿಸಿಕೊಳ್ಳುತ್ತಾ ಇಂದಿರೆಯ ತಾಯಿ
ನಗುತ್ತ ಅಂದರು:
"ವಾಪಸು ಬಂದ್ಮೇಲೆ ನಿನಗೆ ಪುರಸೊತ್ತೆಲ್ಲಿರುತ್ತೋ?"
"ಹೋಗ್ರಿ. ನೀವೂ ತಮಾಷೆ ಮಾಡ್ತೀರಾ!" ಎಂದು ಸುನಂದಾ ಹುಸಿ ಮುನಿಸು
ತೋರಿದಳು.
ಜಯದೇವನಿಗೆ ಹೊಳೆದ ಉಪಾಯವೊಂದೇ:
"ನಾನು ಒಂದು ಹೇಳ್ಲೇನು? ನಂಜುಂಡಯ್ಯ ಇಂದಿರೆಗೆ ಪಾಠ ಹೇಳಿದರೆ
ಯಾವ ತೊಂದರೆಯೂ ಇರೋದಿಲ್ಲ. ಉಳಿದದ್ದೆಲ್ಲಾ ಏನೇ ಇರ್‍ಲಿ, ಅವರು ಕಟ್ಟು
ನಿಟ್ಟಿನ ಮನುಷ್ಯ. ಅಷ್ಟು ಭರವಸೆ ಕೊಡಬಲ್ಲೆ. ಅವರ ಹೆಂಡತೀನೂ ಒಳ್ಳೆಯ
ವರು. ವಾರಕ್ಕೆ ಮೂರು ಸಲ ಅವರ ಮನೆಗೇ ಹೋಗಿ ಪಾಠ ಹೇಳಿಸ್ಕೊಂಡರಾಯ್ತು."
ಅಷ್ಟಾದರೆ ಅಷ್ಟು ಎನ್ನುವ ಧ್ವನಿಯಲ್ಲಿ ಇಂದಿರೆಯ ತಾಯಿ ಅಂದರು:
"ಆಗಬಹುದು. ಅವರನ್ನು ಒಪ್ಪಿಸೋ ಜವಾಬ್ದಾರಿ ನಿಮ್ಮದು. ನೀವು
ಹೇಳಿದ ಫೀಸು ಕೊಡ್ತೀವಿ."
"ಫೀಸಿಗೇನು? ಹತ್ತು ರೂಪಾಯಿ ಕೊಟ್ಟರೆ ಸಾಕು."
"ಆಗಲಿ."
ತಾಯಿ_ಮಗಳು ಹೊರಟು ನಿಂತಾಗ ಜಯದೇವನತ್ತ ತಿರುಗಿ ಇಂದಿರಾ
ಹೇಳಿದಳು:
"ನೀವು ಬೆಂಗಳೂರಿಗೆ ಹೋಗುವಾಗ ಅಕ್ಕನ ವಿಳಾಸ ಕೊಡ್ತೀನೀಂತ ಚೂಡಾ
ಹೇಳಿದ್ಲಂತೆ. ಆದರೆ, ಪಬ್ಲಿಕ್ ಪರೀಕ್ಷೆ ಮುಗಿದ ತಕ್ಷಣ ಊರಿಗೆ ಬಂದ್ಬಿಡ್ತೀನೀಂತ
ಪ್ರಭಾ ಬರೆದಿದಾಳೆ."
"ಹಾಗೇನು? ಅವಳು ಈ ವರ್ಷ ಎಸ್.ಎಸ್.ಎಲ್.ಸಿ.ಗೆ ಕಟ್ಟಿದಾಳೆ, ಅಲ್ವೆ?"
"ಹೌದು."
"ಸರೀನಮ್ಮ. ನೊಡೋಣ. ನಾವು ಹೊರಡೋದು ನಾಲ್ಕುದಿನ ತಡವಾದರೆ
ಪ್ರಭಾಮಣಿ ಇಲ್ಲಿಯೇ ಸಿಗ್ತಾಳೆ."
"ಹೂಂ. ಸಿಗಬಹುದು."
ಇಂದಿರಾ ಕುಂಕುಮವಿಟ್ಟುಕೊಂಡಳು. ತಾಯಿಯೊಡನೆ ಕೆಳಕ್ಕಿಳಿಯುತ್ತ, ತನ್ನ
ಷ್ಟಕ್ಕೆ ನಗುತ್ತ, ಸುನಂದೆಯ ಕಡೆ ನೋಡಿ ಆಕೆ ಅಂದಳು:
"ಹೋಗ್ಬರ್‍ತೀನಿ. ನಮಸ್ಕಾರ ಟೀಚ!"
"ಕೆಟ್ಟ ಹುಡುಗಿ!" ಎಂದಳು ಸುನಂದಾ, ಸಂತಸದ ದುಂಡು ಮಲ್ಲಿಗೆಯನ್ನು
ಅರಳಿಸುತ್ತ.
...ಇಂದಿರೆಗೆ ಪಾಠ ಹೇಳಿಕೊಡಲು ನಂಜುಂಡಯ್ಯ ಒಪ್ಪಿದರು:

486

ಸೇತುವೆ

ಅವರೆಂದರು:
"ಇದು ಸಂಪಾದನೆಗೋಸ್ಕರ ಕೋಚಿಂಗ್ ಅಲ್ಲ ಜಯದೇವ್.

ನೀವು ಹೇಳಿ
ದಿರೀಂತ ಒಪ್ಕೊಂಡಿದೀನಿ. ಒಂದು ರೀತಿಯ ವಿದ್ಯಾದಾನ."
ನಂಜುಂಡಯ್ಯ ಪಾಠ ಹೇಳಲು ಒಪ್ಪಿದ ಸುದ್ದಿಯನ್ನು ಚೂಡಾಮಣಿ ಇಂದಿ
ರೆಯ ಮನೆಗೆ ಮುಟ್ಟಿಸಿದಳು.
ಆ ಸಂಜೆ, ತಿಮ್ಮಯ್ಯನವರೊಡನೆ ಜಯದೇವ ಮನೆ ಸೇರಿದ ಐದು ನಿಮಿಷ
ಗಳಲ್ಲೆ ಇಂದಿರೆಯ ತಾಯಿಯ ಆಗಮನವಾಯಿತು. ಪಾಠ ಹೇಳಿಸುವ ವಿಷಯ
ವಾಗಿಯೇ ಮಾತನಾಡಲು ಆಕೆ ಬಂದಿರಬಹುದೆಂದು ಜಯದೇವ ಭಾವಿಸಿದ.
"ಬನ್ನೀಮ್ಮಾ, ಒಳಗ್ಬನ್ನಿ," ಎಂದ.
ಅವರು ಮುಗುಳುನಗಲು ಯತ್ನಿಸಿದರಾದರೂ ಮುಖದಲ್ಲಿ ಗೆಲುವಿರಲಿಲ್ಲ.
ತಿಮ್ಮಯ್ಯನವರನ್ನು ನೋಡಿ ಅವರು ಕಕ್ಕಾವಿಕ್ಕಿಯಾದಂತೆ ತೋರಿತು.
"ನಾನು ಬರಲಾ ಹಾಗಾದರೆ?" ಎಂದರು ಸೂಕ್ಷ್ಮಗ್ರಾಹಿಯಾದ ತಿಮ್ಮಯ್ಯ.
ಆಗ ಆಕೆಯೇ ಅಂದರು:
"ಬೇಡಿ, ಬೇಡಿ. ನೀವೂ ಇರಿ. ನಿಮಗೂ ಗೊತ್ತಾಗಲಿ."
ಪರಿಚಿತ ಧ್ವನಿ ಕೇಳಿ ಸುನಂದೆಯೂ ಒಳ ಬಾಗಿಲಿಗೆ ಬಂದು ನಿಂತಳು. ಆದರೆ,
ಇಂದಿರೆಯ ತಾಯಿಯ ಮುಖದ ಮೇಲಿದ್ದ ದುಗುಡದ ಭಾವವನ್ನು ಕಂಡು ಆಕೆಗೆ
ಗಾಬರಿಯಾಯಿತು.
ಮಡಿಲಿನಿಂದೊಂದು ಲಕೋಟೆಯನ್ನು ಹೊರತೆಗೆದು ಅದನ್ನು ಜಯದೇವನ
ಕೈಗಿತ್ತಳು ಇಂದರೆಯ ತಾಯಿ.
ಒಡೆದಿದ್ದ ಲಕೋಟೆ ಮಡಚಿತ್ತು.
"ಏನಮ್ಮಾ ಇದು?"
"ಓದಿ ನೋಡಿ. ನಾನು ಕೆಲಸದವಳನ್ನ ಕರಕೊಂಡು ಅಂಗಡಿಗೆ ಹೋಗಿದ್ದಾಗ
ಯಾವನೋ ಬೀದಿ ಹುಡುಗ ಇಂದಿರೆಯ ಕೈಗೆ ಕೊಟ್ಟು ಹೋದನಂತೆ."
ಮುಂದಿನದನ್ನು ಊಹಿಸಿಕೊಂಡ ತಿಮ್ಮಯ್ಯ ಟೋಪಿಯನ್ನು ಹಿಂದಕ್ಕೂ
ಮುಂದಕ್ಕೂ ಸರಿಸಿದರು.
ಜಯದೇವ ಕಾಗದವನ್ನು ಹೊರತೆಗೆದು ಓದಿದ. ಅದು ಪ್ರೇಮ ಪತ್ರ:
'ನಾಟ್ಯ ವಿಲಾಸಿನಿ ಇಂದಿರೆಗೆ.'
'ನಿನ್ನನ್ನು ನೋಡಿದ ಕ್ಷಣದಿಂದ ನಾನು ಹುಚ್ಚನಾಗಿದ್ದೇನೆ. ನಾನು ಕೇಳು
ತ್ತಿರುವುದು ಪ್ರೇಮ ಭಿಕ್ಷೆ. ನನ್ನ ಜೀವಮಾನದಲ್ಲಿ ಹೀಗೆ ಪ್ರಾರ್ಥಿಸುತ್ತಿರು
ವುದು ಇದೇ ಮೊದಲನೆಯ ಸಲವೆಂಬುದನ್ನು ದಯವಿಟ್ಟು ನಂಬು. ಬರಿಯ
ಉಪಾಧ್ಯಾಯ ಎಂದು ಉಪೇಕ್ಷೆ ಮಾಡಬೇಡ. ನನ್ನ ಯೋಗ್ಯತೆಯ ಪರಿಚಯ
ಮಾಡಿಕೊಡಲು ಅವಕಾಶ ನೀಡು. ನಮ್ಮೊಳಗಿನ ಸಂಬಂಧ ಯಾವ ರೀತಿ ಇರ

ನವೋದಯ

487

ಬೇಕೆಂಬುದನ್ನು ನೀನೇ ನಿರ್ಧರಿಸಬಹುದು. ನಿನ್ನ ತಾಯಿಯವರ ಒಪ್ಪಿಗೆ
ಕೇಳುವುದೂ ಬಿಡುವುದೂ ನಿನಗೆ ಸೇರಿದ್ದು. ಹೃದಯ ಬಡಿದುಕೊಳ್ಳುತ್ತಾ
ಇದೆ. ಮಳೆಗಾಗಿ ಹಂಬಲಿಸುವ ಚಾತಕ ಪಕ್ಷಿಯ ಹಾಗೆ ಆತುರೆಗೊಂಡಿದ್ದೇನೆ.
ನನಗೆ ನೀನೇ ಆಸರೆ. ನನ್ನ ಭಾವೀ ಜೀವನವೆಲ್ಲ ನಿನ್ನನ್ನೇ ಅವಲಂಬಿಸಿದೆ.
ಹೆಚ್ಚೇನು ಹೇಳಲಿ? ಇದು ಮೊದಲಿನ ಕಾಗದ, ಕೊನೆಯದಲ್ಲ.
'ಉತ್ತರ ಕೊಡು. ಒಂದು ಸಿಹಿಯಾದ ಮುತ್ತು ಕೊಡು. ಆವರೆಗೂ
ನನಗೆ ನೆಮ್ಮದಿಯಿಲ್ಲ. ನಾಳೆ, ನಿನ್ನ ತಾಯಿಯಿಲ್ಲದ ಹೊತ್ತು ನೋಡಿ, ಹುಡುಗ
ಮನೆಯ ಮುಂದೆ ಸುಳಿಯುತ್ತಾನೆ. ಆಗ ನೀನು ಕೈಸನ್ನೆ ಮಾಡಿದರೆ ಒಳಗೆ
ಬಂದು ಉತ್ತರ ಪಡೆಯುತ್ತಾನೆ.

ಇತಿ ಪ್ರೇಮಭಿಕ್ಷು
ಚಾರ್.'
ಕಾಗದ ಮುಗಿದ ಬಳಿಕ ಮತ್ತೂ ಒಂದು ಸಾಲಿತ್ತು:
'ನೀನು ತುಂಬಿ: ನಾನು ಹೂ. ಹೂವಾಗುವಾ! ಜೇನಾಗುವಾ!'
ಜಯದೇವನ ಮುಖ ಕೆಂಪಡರಿ ಕೈಗಳು ಕಂಪಿಸಿದುವು. ಬಾಯಿ ತೆರೆದರೆ ಎಂಥ
ಮಾತು ಹೊರಬೀಳುವುದೋ ಎಂದು ಆತ ತುಟಿಗಳನ್ನು ಬಿಮ್ಮನೆ ಬಿಗಿದು ನಿಂತ.
ಕಾಗದ ಜಯದೇವನ ಕೈಲಿದ್ದಾಗಲೇ ಸಹಿಯ ಕಡೆಗೆ ತಿಮ್ಮಯ್ಯ ಕಣ್ಣೋಡಿ
ಸಿದ್ದರು. ಅವರ ಬಾಯಿಂದ ಬೈಗಳು ಹೊರಟುವು.
"ಹಲ್ಕಾ ನನ್ಮಗ! ನಾಚಿಕೆ ಕೆಟ್ಟೋನು!"
ಜಯದೇವ ಕಾಗದವನ್ನು ತಿಮ್ಮಯ್ಯನವರ ಕಡೆ ಚಾಚಿದ.
"ಏನು ಓದೋದು ಅದನ್ನ?" ಎಂದರಾದರೂ ತಿಮ್ಮಯ್ಯ, ಕಾಗದ ಪಡೆದು,
ತಾವೂ ಒಮ್ಮೆ ಅದರ ಮೇಲೆ ದೃಷ್ಟಿ ಹರಿಸಿದರು.
ಇಂದಿರೆಯ ತಾಯಿ ಹೇಳಿದರು:
"ಯಾವನೋ ಹೊಸಬ ಬಂದಿದಾನಂತಲ್ಲಾ. ಆತನೇ ಇರಬಹುದೂಂತ
ಇಂದಿರಾ ಅಂದ್ಲು."
"ರಾಮಾಚಾರೀನೇ, ಇನ್ಯಾರು?" ಎಂದರು ತಿಮ್ಮಯ್ಯ. ಅವರ ಮೂಗಿನ
ಹೊಳ್ಳೆಗಳು ಎಂದಿಗಿಂತ ದೊಡ್ಡವಾಗಿ ಕ೦ಡುವು.
"ಚಾರ್ ಅಂತೆ... ಇವನಿವನ...ಚಾರ್!" ಎಂದು ಅವರೇ ಮೂದಲಿಸಿದರು.
ಜಯದೇವನೆಂದ:
"ನೀವೇನೂ ಯೋಚಿಸ್ಬೇಡೀಮ್ಮ ಅವನಿಗೆ ಬುದ್ಥಿ ಕಲಿಸೋ ಜವಾಬ್ದಾರಿ
ನನಗಿರಲಿ. ನೀವಿದನ್ನ ಮನಸ್ಸಿಗೆ ಹಚ್ಕೋಬೇಡಿ."
ಆಕೆಯ ಕತ್ತಿನ ನರಗಳು ಬೀಗಿದುವು. ಎದೆಯ ಸಂಕಟವನ್ನು ಹತ್ತಿಕ್ಕಲಾರದೆ
ತೊಳಲಾಡುತ್ತ ಅವರೆಂದರು:

488

ಸೇತುವೆ

"ಹೆಣ್ಣು ಹೆಂಗಸರೇ ಇದ್ದು ಬದುಕೋದು ಎಷ್ಟು ಕಷ್ಟ!"
ವ್ಯಥೆಯ ಧ್ವನಿಯಲ್ಲಿ ಜಯದೇವ ಹೇಳಿದ:
"ನೀವು ದಯವಿಟ್ಟು ಬೇಜಾರುಪಟ್ಕೋಬಾರದು.
"ಇಷ್ಟಾದ್ಮೇಲೆ ಇನ್ನು ನಂಜುಂಡಯ್ಯ ಪಾಠ ಹೇಳ್ತಾರೋ ಇಲ್ಲವೋ."
"ಅದಕ್ಕೂ ಇದಕ್ಕೂ ಏನು ಸಂಬಂಧ? ಭಾನುವಾರದಿಂದ ಅವರ ಮನೆಗೆ ಇಂದಿ
ರೇನೆ ಕಳಿಸ್ಕೊಡಿ."
"ಆಗಲಿ, ಬರ್‍ತೀನಿ."
"ಕೂತ್ಕೊಳ್ಳಿ," ಎಂದಳು ಸುನಂದಾ.
ಆಕೆಯೆಂದರು:
"ಬೇಡವಮ್ಮಾ. ಕತ್ತಲಾಗ್ಬಿಡುತ್ತೆ."
ಅವರು ಹೊರಡುತ್ತಿದ್ದಂತೆ ತಿಮ್ಮಯ್ಯ ಹೇಳಿದರು:
"ನೋಡೀಮ್ಮಾ, ನಾಳೆ ಆ ಹುಡುಗ ಬ೦ದರೆ ಕೈಸನ್ನೆಮಾಡಿ ಕರೀರಿ. ಕುಲ
ಗೋತ್ರ ವಿಚಾರಿಸ್ಕೊಂಡು ಸರಿಯಾಗಿ ಆಶೀರ್ವಾದ ಮಾಡಿ ಬೀದಿಗೆಸೀರಿ."
ಆಗಲೆ ಹೃದಯವನ್ನು ಬಹಳ ಮಟ್ಟಿಗೆ ಹಗುರಗೊಳಿಸಿಕೊಂಡಿದ್ದ ಆ ತಾಯಿ
ನಸುನಕ್ಕು ನುಡಿದರು:
"ಆಗಲಿ!"
...ಮಾರನೆಯ ದಿನ ಜಯದೇವ ಸ್ವಲ್ಫ ಬೇಗನೆ ಊಟ ಮುಗಿಸಿ ಆನಂದ
ವಿಲಾಸಕ್ಕೆ ಹೋದ.
ಹೋಟೆಲಿನ ಯಜಮಾನ ಹಳೆಯ ಗಿರಾಕಿಯನ್ನು ಸಂಭ್ರಮದಿಂದ
ಸ್ವಾಗತಿಸಿದ.
"ದಯಮಾಡಿಸಿ ಮೇಸ್ಟ್ರೆ. ನಮ್ಮನ್ನು ಮರೆತೇ ಬಿಡೋದೆ? ತಿಂಗಳಿಗೊಮ್ಮೆ
ಯಾದರೂ ಭೇಟಿ ಕೊಡಬಾರ್‍ದೆ?"
"ಮರೆಯೋದುಂಟೆ ಮಂಜುನಾಥಯ್ಯ? ಅನ್ನದಾತರನ್ನು ಮರೆತು ಯಾವ
ನರಕಕ್ಕೆ ಹೋಗಲಿ ಹೇಳಿ."
"ಹೊಗಳೋಕೂ ಕಲಿತ್ಬಿಟ್ರಿ ನೀವು," ಎನ್ನುತ್ತ ಹೋಟೆಲಿನ ಯಜಮಾನ,
ಹುಡುಗನನ್ನು ಕರೆಯದೆ, ತಾನೇ ಕೇಳಿದ:
"ಹೇಳಿ, ಏನು ತಗೋತೀರಾ?"
"ಈಗ್ತಾನೇ ಊಟವಾಯ್ತಪ್ಪ. ತಿಂಡಿ ಕಾಫಿಗೆ ಆ ಮೇಲೆ ಬರ್ತೀನಿ. ಇಲ್ಲಿ
ರಾಮಾಚಾರೀಂತ ಮೇಸ್ಟ್ರಿಲ್ವೆ? ಅವರನ್ನ ಸ್ವಲ್ಪ ಈಗ್ಲೇ ನೋಡ್ಬೇಕಾಗಿತ್ತು."
ಒಬ್ಬ ಹುಡುಗನನ್ನು ಕರೆದು, "ರಾಯರಿಗೆ ಆ ಮೇಸ್ಟ್ರ ರೂಮು ತೋರ್‍ಸೋ,"
ಎಂದರು ಯಜಮಾನರು.
ಜಯದೇವ ಹೊಕ್ಕುದು ಹೊಲಸಾಗಿದ್ದ ಕೊಠಡಿಯನ್ನು. ಕನ್ನಡ ಸಚಿತ್ರ

ನವೋದಯ

489

ಸಾಪ್ತಾಹಿಕ ಮತ್ತು ಚಲಚ್ಚಿತ್ರ ಪತ್ರಿಕೆಗಳು ದಿಂಬಿನ ಆಚೆಗೆ ಬಿದ್ದಿದ್ದುವು. ಸಿಗರೇಟಿನ
ತುಣುಕುಗಳು ಇಷ್ಟ ಬಂದ ಕಡೆ ನೆಲವನ್ನು ಅಪ್ಪಿದ್ದುವು.
ಜಯದೇವ ಬಂದಾಗ ರಾಮಾಚಾರಿ ಕ್ರಾಪು ಬಾಚಿಕೊಳ್ಳುತ್ತಿದ್ದ.
"ಬನ್ನಿ ಸಾರ್. ಅಪರೂಪವಾಗಿ ದರ್ಶನ ಕೊಟ್ಟಿರಲ್ಲಾ," ಎಂದ ಆತ.
ತೆರೆದೇ ಇದ್ದ ಹಾಸಿಗೆಯನ್ನು ತೋರಿಸಿ, "ಕೂತ್ಕೊಳ್ಳಿ" ಎ೦ದ.
ಜಯದೇವನನ್ನು ನೋಡಿದೊಡನೆ ಮುಖ ಸ್ವಲ್ಪ ವಿವರ್ಣವಾದರೂ ರಾಮಾ
ಚಾರಿ ತಡಮಾಡದೆ ಚೇತರಿಸಿಕೊಂಡ.
"ಊಟವಾಯ್ತೆ ರಾಮಾಚಾರಿ?"
"ಓಹೋ. ನಿಮ್ಮದು?"
"ಆಯ್ತು, ಜತೇಲೆ ಶಾಲೆಗೆ ಹೋಗೋಣಾಂತ ಇಲ್ಲಿಗ್ಬಂದೆ."
ಜಯದೇವ ನಿಂತೇ ಇದ್ದುದನ್ನು ಕಂಡು ರಾಮಾಚಾರಿಯೆಂದ:
"ಹೊರಡೋಣ ಹಾಗಾದರೆ."
ಆತ ಕೋಟು ತೊಟ್ಟುಕೊಂಡು ಹಾಸಿಗೆಯ ಬಳಿ ಇದ್ದ ಸಿಗರೇಟಿನ ಪ್ಯಾಕೆ
ಟನ್ನೂ ಬೆಂಕಿ ಪೊಟ್ಟಣವನ್ನೂ ಜೇಬಿಗೆ ತುರುಕಿದ. ಡವಡವನೆ ತೀವ್ರಗತಿಯಿಂದ
ಆತನ ಎದೆ ಹೊಡೆದುಕೊಳ್ಳುತ್ತಲೇ ಇತ್ತು. ಆದುದಾಗಲೆಂದು ರಾಮಾಚಾರಿ ಧೈರ್ಯ
ತಳೆದ.
ಹಾದಿಯಲ್ಲಿ ಇಬ್ಬರೂ ಮೌನವಾಗಿದ್ದರು. ಶಾಲೆ ಸಮೀಪಿಸಿದಂತೆ ಜಯದೇವ
ಹೇಳಿದ:
"ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೇಕು.
[ರಾಮಾಚಾರಿಗೆ ಈಗ ಯಾವ ಸಂದೇಹವೂ ಉಳಿಯಲಿಲ್ಲ.]
"ಉಪಾಧ್ಯಾಯರ ಕೊಠಡಿ ಇದೆಯಲ್ಲ, ಕೂತ್ಕೊಳ್ಳೋಣ."
"ಹೊರಗೆ ವಾಸಿ ಅನಿಸುತ್ತೆ. ಬನ್ನಿ ಆ ಮರದ ಕೆಳಗೆ ನೆರಳಿದೆ."
ಆ ನೆರಳಿನಲ್ಲಿ ಅವರು ನಿಂತರು.
ಜಯದೇವ ತಡಮಾಡಲಿಲ್ಲ.
"ನೀವು ಉಪಾಧ್ಯಾಯನಾಗಿ ವೃತ್ತಿಗೂ ಶಾಲೆಗೂ ಗೌರವ ತರಬೇಕೂಂತ
ಮಾಡಿದೀರೋ ಅಥವಾ__"
ಗೊಗ್ಗರ ಧ್ವನಿಯಲ್ಲಿ ರಾಮಾಚಾರಿ ಹೇಳಿದ:
"ಹಿತೋಪದೇಶಕ್ಕೆ ಕಿವಿಗೊಟ್ಟು ನನಗೆ ಅಭ್ಯಾಸವಿಲ್ಲ."
"ಹಾಗಾದರೆ ಇವತ್ನಿಂದಲೆ ಅದು ಶುರುವಾಗಲಿ."
"ನನ್ನ ಹತ್ತಿರ ಹೀಗೆ ಮಾತನಾಡೋಕೆ ನಿಮಗೆ ಏನು ಹಕ್ಕಿದೆ?"
"ನಾನು ನಿಮ್ಮ ಹಿತೈಷಿಯಾಗಿರೋದರಿಂದಲೇ ಆ ಹಕ್ಕು."

62

490

ಸೇತುವೆ

"ಹಿತೈಷಿಗಳು ಈ ರೀತಿ ಮಾತಾಡೋದಿಲ್ಲ."
"ಆ ಇಂದಿರಾ ತಂಟೆಗೆ ನೀವು ಹೋಗ್ಬೇಡಿ. ಪರಿಣಾಮ ಚೆನ್ನಾಗಿರೋದಿಲ್ಲ."
ರಾಮಾಚಾರಿ, ಒಂದನ್ನೂ ತಿಳಿಯದಂತೆ ನೊಂದವನ ನಟನೆ ತೋರಿದ.
"ಯಾವ ಇಂದಿರಾ? ಏನು ಕಥೆ? ಮೊನ್ನೆ ದಿವಸ ಹಾಡಿದ ಹುಡಿಗೀನೇನ್ರಿ?
ನಾನು ಯಾಕ್ರಿ ಹೋಗ್ಲಿ ಅವಳ ತಂಟೆಗೆ?"
"ನೀವು ಬರೆದಿರೋ ಕಾಗದ ನಿಮ್ಮ ಮುಖದೆದುರು ಹಿಡೀಲೇನು?"
[ಕಾಗದವನ್ನೂ ಒಯ್ದು ಕೊಟ್ಟಿದ್ದಳು ಕುಲಟೆ!]
ನಿರಾಕರಣೆಯಿಂದ ಯಾವ ಪ್ರಯೋಜನವೂ ಇರಲಿಲ್ಲ.
"ಕಾಗದ ಬರೆದ ತಕ್ಷಣಕ್ಕೆ ಹೇಟೆ ಹುಂಜವಾಯ್ತೊ? ನಿಮಗ್ಯಾತಕ್ಕೆ ಈ
ಉಸಾಬರಿ?"
"ಹುಷಾರಿ! ಮಾನವಂತರ ಹುಡುಗೀನ ಬೀದಿಗೆಳೆಯೋಕೆ ಪ್ರಯತ್ನಪಟ್ಟರೆ
ನೀವು ಕಷ್ಟ ಅನುಭವಿಸ್ತೀರಾ!"
"ಮಾನವಂತರ ಹುಡುಗಿ! ಹೋಗಿ, ಹೋಗಿ. ನನಗೆಲ್ಲಾಗೊತ್ತು. ಹೋಟ್ಲಲ್ಲಿ
ಪ್ರತಿಯೊಬ್ಬರ ಬಾಯಲ್ಲೂ ಇದೆ ಆ ಮಾನವಂತರ ಹುಡುಗಿ ಹೆಸರು. ಬಲ್ಲಿರೋ?"
"ಬಾಯ್ಮುಚ್ಚಿ!"
"ಹೊಡೀತಿರೇನು? ಹೊಡಿರಿ. ನೋಡ್ಬಿಡೋಣ."
"ನಿಮಗೆ ಹೊಡೆದು ನಾನ್ಯಾಕೆ ಕೈಕೊಳೆ ಮಾಡ್ಕೊಳ್ಲಿ?"
"ಓಹೋ! ತಮ್ಮ ಕಥೆ ನನಗೇನೂ ತಿಳೀದೂಂತ ಭಾವಿಸಿದಿರೊ?"
ಕೊಡಲಿಯಿಂದ ಎಷ್ಟು ಕಡಿದರೂ ಮಿಸುಕದ ಕೊರಡಿನಂತಿದ್ದ ರಾಮಾಚಾರಿ.
"ಥೂ! ನಿಮ್ಮ ಹತ್ತಿರ ಮಾತನಾಡೋದೂ ನಾಚಿಕೆಗೇಡು!"
"ಹಾಗಾದರೆ ದೊಡ್ಡ ಮನಸ್ಸು ಮಾಡಿ ತಮ್ಮ ಹಾದಿ ಹಿಡೀರಿ."
"ಹಿಡೀತೀನಿ ರಾಮಾಚಾರಿ. ಆದರೆ ಒಂದು ವಿಷಯ ನೆನಪಿಟ್ಕೊ. ಇಷ್ಟಕ್ಕೆ
ಹುಷಾರಾದಿ ಅಂದ್ರೆ ಬದುಕೀಯಾ. ಇಲ್ದೆ ಹೋದ್ರೆ ಚಪ್ಪಲಿ ಏಟು ಬಿಗಿದು ಇಲ್ಲಿಂದ
ನಿನ್ನನ್ನು ಕಳಿಸ್ತಾರೆ."
"ಬಹಳ ಕಂಡಿದೀನಿ ಹೋಗಯ್ಯ."
"ಬಡಿವಾರ ಬಿಟ್ಬಿಡು. ನಾನಿಷ್ಟು ಹೇಳಿರೋದೆ ಎಚ್ಚರಿಕೇಂತ ತಿಳ್ಕೊ!"
ಅಷ್ಟರಲ್ಲೆ ಗಂಟೆ ಬಾರಿಸಿತು. ಅವರಿಬ್ಬರೂ ನಾಲ್ಕಾರು ಮಾರುಗಳ ಅಂತರದಲ್ಲಿ
ಬೇಗ ಬೇಗನೆ ಶಾಲೆಗೆ ನಡೆದರು.
ನಂಜುಂಡಯ್ಯ ಕೇಳಿದರು:
"ಮರದ ಕೆಳಗೆ ನಿಂತ್ಕೊಂಡು ಮಾತಾಡ್ತಾ ಇದ್ದೋರು ನೀವೇ ಏನು? ಏನು
ಸಮಾಚಾರ?"
"ಏನಿಲ್ಲ ಸಾರ್," ಎಂದ ಜಯದೇವ.

ನವೋದಯ

491

ಆತ ಅಷ್ಟೇ ಹೇಳಿದನಲ್ಲಾ ಎಂದು ರಾಮಾಚಾರಿ ಸರಾಗವಾಗಿ ಉಸಿರಾಡ
ತೊಡಗಿದ.
...ತಿಮ್ಮಯ್ಯ ಸಂಜೆ ಬಂದು ಏನಾಯಿತೆಂದು ವಿಚಾರಿಸಿದರು.
ವಿವರ ತಿಳಿದು ಅವರೆಂದರು:
"ಇಷ್ಟಕ್ಕೆಲ್ಲ ಅವನು ಸುಧಾರಿಸೋದಿಲ್ಲ ಜಯದೇವರೆ. ಇಂದಿರಾ ಅಲ್ದಿದ್ರೆ
ಇನ್ನೊಬ್ಬಳು. ನೋಡ್ತಿರಿ."
....ವರ್ಷಾವಧಿ ಪರೀಕ್ಷೆ ಹತ್ತಿರ ಬಂದು ಹುಡುಗರ ಓದು ಹೆಚ್ಚಿತು. ಉಪಾ
ಧ್ಯಾಯರಿಗೆ ಬಿಡುವು.
ವರ್ಷವಿಡೀ ಓದಿ ಸಾಧಿಸಿದ್ದ 'ಪ್ರಾವೀಣ್ಯ'ವನ್ನು ಕೆಲವೇ ಗಂಟೆಗಳ ಅವಧಿ
ಯಲ್ಲಿ ಪ್ರದರ್ಶಿಸುವ ಅದ್ಭುತ ಕಸರತ್ತಿಗೆ ವಿದ್ಯಾರ್ಥಿಗಳು ಸಿದ್ಧರಾದರು.
ಒಂದರ ಮೇವನ್ನು ಇನ್ನೊಂದು ಕುರಿ ತಿನ್ನದಂತೆ ಉಪಾಧ್ಯಾಯರು ಕಾವಲು
ನಿಂತರು.
ತಿಮ್ಮಯ್ಯನವರ ಶಾಲೆಯಲ್ಲಿ ಪರೀಕ್ಷೆ ಅಷ್ಟು ಕಷ್ಟವಾಗಿರಲಿಲ್ಲ. ಆದರೂ ಆ
ನೂರಾರು ಪುಟಾಣಿಗಳು, "ನಮಗೂ ಪರೀಕ್ಷೆ" ಎನ್ನುತ್ತ ಶಾಲೆಯವರೆಗೂ ಹೋಗಿ
ಬಂದುವು.
...ತಿಮ್ಮಯ್ಯನವರಿಗೆ ಸಂಬಂಧಿಸಿ ಮಾಡಬೇಕಾದೊಂದು ಕೆಲಸವನ್ನು ಜಯ
ದೇವ ಬಹಳ ದಿನಗಳಿಂದ ಹಾಗೆಯೇ ಉಳಿಯಗೊಟ್ಟಿದ್ದ. ಆ ವಿಷಯದಲ್ಲಿ ಸಮ
ಭಾಗಿನಿಯಾಗಿದ್ದ ಸುನಂದೆ ಮತ್ತೆ ಅದರ ನೆನಪು ಮಾಡಿಕೊಟ್ಟಳು:
"ಈ ಸಲ ನಾವು ಹೋಗೋಕ್ಮುಂಚೆನೇ ಆ ಕೆಲಸ ಮುಗಿಸಬಹುದಲ್ವೆ?"
"ಹೂ೦. ಒಪ್ಪಿಸ್ಬೇಕಲ್ಲಪ್ಪ ಆ ಮಹಾರಾಯನನ್ನ."
ಮಹಾರಾಯರು ಜಯದೇವನನ್ನು ಕಾಣಲೆಂದು ಬಂದರು.
"ಸಾಹೇಬರು ಹೊರಟೇಬಿಡ್ತೀರಿ ಇನ್ನು. ಭೇಟಿ ಸರ್ವೋದಯದ ದಿನವೋ?"
ಎಂದರು.
"ಹೂಂ. ತಿಮ್ಮಯ್ಯನವರೆ. ನೀವೂ ಬರ್ರ್ತೀರೇನು ಬೆಂಗಳೂರಿಗೆ?"
"ನಾನೇ! ಇನ್ನು ಆ ವೈಭವವೊಂದು ಬಾಕಿ."
"ಯಾಕೆ ಹಾಗಂತೀರಾ? ಕಾಶ್ಮೀರ ಕೆಟ್ಹೋಯ್ತೆ ಬೆಂಗಳೂರು?"
"ಸರಿ. ನಿವೃತ್ತಿಯಾಗೋಕ್ಮುಂಚೆ ಒಮ್ಮೆ ಬರ್ರ್ತೀನಪ್ಪ ನಿಮ್ಮೂರಿಗೆ. ಬೋರೇ
ಗೌಡ ಬಂದ ಬೆಂಗ್ಳೂ‌ರ್‍ಗೆ_ಅಂತ ಕೈಲಾಸಂ ಹಾಡ್ಲಿಲ್ವೆ? ಹಾಗೇ ಆಗುತ್ತೆ ನಾನು
ಬಂದ್ರೆ!"
"ಕೋಟಿ ರೂಪಾಯಿ ಖರ್ಚು ಮಾಡಿ ವಿಧಾನ ಸೌಧ ಕಟ್ತಾ ಇದಾರೆ. ಬೇಗನೆ
ಕರ್ನಾಟಕ ಪ್ರಾಂತ ರಚನೆಯಾಗುತ್ತೆ. ನಮ್ಮ ನಾಡಿನ ಮುಖ್ಯ ಪಟ್ಟಣಕ್ಕೆ ನಮ್ಮ ಜನ
ಬರೋದು ಬೇಡ್ವೆ?"


492

ಸೇತುವೆ

"ವಿಧಾನ ಸೌಧದ ಉದ್ಘಾಟನಾ ಸಮಾರಂಭಕ್ಕಂತೂ ಎಲ್ಲಾ ಪ್ರಾಥಮಿಕ
ಉಪಾಧ್ಯಾಯರಿಗೂ ಆಹ್ವಾನ ಕೊಡ್ತಾರೇಂತ ಕೇಳಿದೀನಿ. ನಾವು ಕಾರಿನಲ್ಲಿ ಬರಬೇಕೆ,
ಬಸ್ನಲ್ಲಿ ಬರ್‍ಬೇಕೆ, ಅನ್ನೋದು ಮಾತ್ರ ತೀರ್ಮಾನವಾಗಿಲ್ವಂತೆ!"
"ಏನು ಹೇಳಿದರೂ ನೀವು ಗಾಳಿಗೆ ಊದ್ತೀರಾ. ಮುಂದಿನ ವರ್ಷ ನೀವು
ನಮ್ಮ ಜತೇಲಿ ಬರೋದು ಖಂಡಿತ. ತಿಳೀತೆ?"
"ಚಿತ್ತ."
ಅದೇ ಸರಿಯಾದ ಅವಕಾಶವೆಂದು ಜಯದೇವನೆಂದ:
"ಹಾಗೇ ನನ್ನ ಇನ್ನೊಂದು ಮಾತು ನೀವು ನಡೆಸ್ಕೊಡ್ಬೇಕು."
"ಅಪ್ಪಣೆಯಾಗಲಿ."
"ನಿಮ್ಮ ಕಿಸೆ ಗಡಿಯಾರ ನೀವು ವಾಪಸು ತಗೋಬೇಕು."
ಉತ್ತರ ಬರಲಿಲ್ಲ. ತಿಮ್ಮಯ್ಯ ತಲೆಯೆತ್ತಿ ಜಯದೇವನನ್ನು ನೋಡಿದರು.
"ಜಯದೇವರೆ, ದಯವಿಟ್ಟು ಕ್ಷಮಿಸಿ. ಆ ವಿಷಯ ನೀವು ಪ್ರಸ್ತಾಪಿಸ್ಬಾರದು"
ತೊಡಕು ಮೊದಲಾಯಿತೆಂದು ಜಯದೇವ ಚಡಪಡಿಸಿದ.
"ನಮ್ಮ ಸ್ನೇಹಕ್ಕೆ ಹತ್ತು ರೂಪಾಯಿ ಬೆಲೆಯೂ ಇಲ್ಲವೆ ಹಾಗಾದರೆ?"
ತಿಮ್ಮಯ್ಯ, ಒತ್ತಾಯವನ್ನು ಪ್ರತಿಭಟಿಸುವ ಮಗುವಿನಂತೆ ತುಟಿಗಳೆರಡನ್ನೂ
ಮುಂದಕ್ಕೆ ಚಾಚಿ, ಎರಡು ಮೊಣಕಾಲುಗಳನ್ನೂ ಒಂದೇ ಸಮನೆ ಆಡಿಸಿದರು.
"ಬೇಡಿ! ನಮ್ಮ ಸ್ನೇಹಕ್ಕೆ ದಯವಿಟ್ಟು ರೂಪಾಯಿಯ ಬೆಲೆ ಕಟ್ಬೇಡಿ!"
"ಕಟ್ಟೋದಿಲ್ಲ. ಆದರೆ ನಮ್ಮ ಸ್ನೇಹ ನಿಜವಾದ್ದೂಂತ ನೀವು ತೋರಿಸ್ಕೊ
ಡ್ಬೇಕು."
ಹೇಗೆ?_ಎಂಬುದನ್ನು ಕೇಳಬೇಕಾದುದಿರಲಿಲ್ಲ. ಅದಕ್ಕೆ ದೊರೆಯುವ ಉತ್ತರ
ವನ್ನು ತಿಮ್ಮಯ್ಯ ಆಗಲೇ ಊಹಿಸಿದ್ದರು.
ಅವರು ಸುಮ್ಮನಿದ್ದುದನ್ನು ಕಂಡು ಜಯದೇವನೆ ಹೇಳಿದ:
"ನೋಡಿ. ಈ ಮಾತನ್ನ ನಡೆಸ್ಕೊಡೀಂತ ಕೇಳ್ತಿರೋದು ನಾನೊಬ್ಬನೇ ಅಲ್ಲ."
ಸುನಂದಾ ಧ್ವನಿ ಕೂಡಿಸಿದಳು:
"ಗಡಿಯಾರ ಇದ್ದರೆ ಎಷ್ಟೊಂದು ಅನುಕೂಲವಾಗುತ್ತೆ ನಿಮಗೆ. ನೀವು ಅದನ್ನ
ಇಟ್ಕೊಳ್ಳೋದು ಷೋಕಿಗೋಸ್ಕರ ಅಲ್ವಲ್ಲಾ. ದಿನಾ ಎಷ್ಟೊಂದು ದೂರದಿಂದ
ಬರಬೇಕು ನೀವು!"
ತಿಮ್ಮಯ್ಯ ನೆಲನೋಡುತ್ತ ಒಂದೇ ಸಮನೆ ಆಗದೆಂದು ತಲೆಯಲ್ಲಾಡಿಸಿದರು.
ಪುನಃ ನಿರಾಕರಣೆಯ ಉತ್ತರವೇ ಬರುವುದೆಂದು ನಿರೀಕ್ಷಿಸಿದರು ಸುನಂದೆ ಜಯ
ದೇವರು.
ಆಗ ಒಮ್ಮೆಲೆ ತಲೆಯೆತ್ತಿ ತಿಮ್ಮಯ್ಯನೆಂದರು:
"ಆಗಲಿ. ಬಿಡಿಸ್ಕೋತೀನಿ."

ನವೋದಯ

493

 ಅವರ ಕಣ್ಣುಗಳಿಂದ ಕಂಬನಿ ತುಳುಕುತ್ತಿತ್ತು.
"ನನ್ನ ಕೈಗೆ ಆ ಮಾರವಾಡಿ ಅದನ್ನು ಕೊಡುವ ಹಾಗಿದ್ದಿ ದ್ದರೆ ಯಾವತ್ತೋ
ತಂದ್ಬಿಡ್ತಾ ಇದ್ದೆ," ಎನ್ನುತ್ತ ಜಯದೇವ, ಹತ್ತು ರೂಪಾಯಿಯ ನೋಟನ್ನು ಒಳಗಿ
ನಿಂದ ತಂದು ತಿಮ್ಮಯ್ಯನವರ ಕೈಯಲ್ಲಿರಿಸಿದ:
ಗಂಭೀರವಾದ ಧ್ವನಿಯಲ್ಲಿ ತಿಮ್ಮಯ್ಯ ಅಂದರು:
"ಆತನಿಗೆ ಬಡ್ಡಿ ಕೊಡ್ಬೇಕಾಗುತ್ತೆ.”
ಆ ಅಂಶ ಜಯದೇವನಿಗೆ ಹೊಳೆದೇ ಇರಲಿಲ್ಲ.
"ಎಷ್ಟಾಗಬಹುದು?"
“ಎರಡೂವರೆಯಾದರೂ ಆದೀತು."
ಅಷ್ಟು ಹಣವನ್ನೂ ಜಯದೇವ ಒಳಗಿನಿಂದ ತಂದುಕೊಟ್ಟ.
ಆ ಬಳಿಕ ಆ ಸಂಜೆಯೆಲ್ಲ ತಿಮ್ಮಯ್ಯ ಹೆಚ್ಚು ಮಾತನಾಡಲೇ ಇಲ್ಲ. ಏನಾ
ದರೂ ಕೇಳಿದರೆ ಒಂದೆರಡು ಪದಗಳಲ್ಲೆ ಉತ್ತರಕೊಟ್ಟು ಮುಗಿಸುತ್ತಿದ್ದರು.
...ಮಾರನೆಯ ದಿನವೆ ತಿಮ್ಮಯ್ಯ ಮಾರವಾಡಿಯ ಅಂಗಡಿಗೆ ಹೋದರು.
"ಬನ್ನಿ ಮೇಸ್ಟ್ರೆ,ಏನು ತಂದಿದೀರಿ?" ಎಂದು ಕೇಳಿದ ಮಾರವಾಡಿ.
"ಹಣ ತಂದಿದೀನಿ," ಎನ್ನುತ್ತ ತಿಮ್ಮಯ್ಯ ನಶ್ಯದ ಡಬ್ಬವನ್ನೇ ಹೊರ
ತೆಗೆದರು.
ಬಡ ಉಪಾಧ್ಯಾಯ ಹಾಸ್ಯಕ್ಕೋಸ್ಕರ ಹೀಗೆ ಹೇಳುತ್ತಿರಬಹುದೇ ಎಂದು
ಮಾರವಾಡಿಗೆ ಸಂದೇಹ ಹುಟ್ಟಿತು.
ಅದನ್ನು ಗಮನಿಸಿದ ತಿಮ್ಮಯ್ಯ ಹೇಳಿದರು:
"ನಮ್ಮದು ಗಡಿಯಾರ ಬೇಕಾಗಿದೆ."
ಮಾರವಾಡಿಯ ಆಕ್ಷೇಪವಿರಲಿಲ್ಲ.
“ಸಂತೋಷ."
ಆತ ಕೈ ಮುಂದಕ್ಕೆ ಚಾಚಿದ.
ಮೊದಲು ಹತ್ತು ರೂಪಾಯಿ ಮತ್ತು ಚೀಟಿ, ಮಾರವಾಡಿ ಬಡ್ಡಿ ಎಣಿಸಿದ
ಬಳಿಕೆ ಎರಡೂವರೆ ರೂಪಾಯಿ.
[ತಿಮ್ಮಯ್ಯನವರ ಲೆಕ್ಕ ಸರಿಯಾಗಿಯೇ ಇತ್ತು. ಪ್ರತಿದಿನವೂ ಅವರು ಅದನ್ನು
ಸ್ಮರಿಸುತ್ತಿದ್ದುದರಿಂದ ಮರೆಯುವುದಾದರೂ ಹೇಗೆ ಸಾಧ್ಯ?]
ಮಾರವಾಡಿ ಒಳಗಿನಿಂದ ಆ ಗಡಿಯಾರವನ್ನು ತಂದ. ಮ್ಹಾಲು ತಲಪಿತೆಂದು
ಬರೆಸಿಕೊಂಡು, ಅದನ್ನು ತಿಮ್ಮಯ್ಯನವರ ಕೈಗಿತ್ತ.
'ಮ್ಯೂಸಿಯಂಗೆ ಹೋಗೋ ಯೋಗ್ಯತೆ ಇದಕ್ಕಿಲ್ದೆ ಹೋಯ್ತು' ಎಂದು ಮನ
ಸಿನಲ್ಲೆ ಗೊಣಗುತ್ತ ತಿಮ್ಮಯ್ಯ, ಗಡಿಯಾರವನ್ನು ಅಂಗೈಯಲ್ಲಿಟ್ಟು ಎತ್ತಿ
ನೋಡಿದರು:

494

ಸೇತುವೆ

ಅದು ನಿಂತು ಹೋಗಿತ್ತು.
ಅಲ್ಲಿಯೇ ಇತ್ತೊಂದು ಗೋಡೆ ಗಡಿಯಾರ. [ಯಾರ ಮನೆಯನ್ನು ಅಲಂಕರಿ
ಸಿತ್ತೊ ಅದು ಹಿಂದೆ? ಈಗಂತೂ ಮಾರವಾಡಿಯ ಸ್ವತ್ತು.] ಆ ಸಮಯಕ್ಕೆ ಸರಿ
ಹೊಂದಿಸಲೆಂದು ತಿಮ್ಮಯ್ಯ ತಮ್ಮ ಗಡಿಯಾರವನ್ನು ಎಡಗೈಯಲ್ಲಿ ಹಿಡಿದರು.
ಆದರೆ ಕಿವಿ ತಿರುವಲೆಂದು ಹೊರಟವರು ಬಲಗೈಯನ್ನು ಹಿಂದಕ್ಕೆ ಸರಿಸಿ, "ಛೇ!"
ಎಂದರು.
"ಆಗಾಗ್ಗೆ ಬರ್ತಾ ಇರಿ ಮೇಸ್ಟ್ರೇ," ಎಂದು ಮಾರವಾಡಿ ಹೇಳುತ್ತಿದ್ದುದನ್ನು
ಕಿವಿಯ ಮೇಲೆ ಹಾಕಿಕೊಳ್ಳದೆಯೇ ಬೀದಿಗಿಳಿದರು ತಿಮ್ಮಯ್ಯ.

****

ಆ ವಾರದಲ್ಲೆ ಶ್ರೀಪತಿರಾಯರು ಅಳಿಯನೂರಿಗೆ ಬಂದರು. ಎರಡು ದಿನ
ಅಲ್ಲಿದ್ದು, ಮಗಳನ್ನೂ ಅಳಿಯನನ್ನೂ ಕರೆದುಕೊಂಡು ಬೆಂಗಳೂರಿಗೆ ಹೊರಟರು.
ನಿಲ್ದಾಣದಲ್ಲಿದ್ದ ತಿಮ್ಮಯ್ಯನವರು, ಕಂಡಕ್ಟರ್ 'ರೈಟ್' ಕೊಡುತ್ತಿದ್ದಂತೆ
ತಮ್ಮ ಕಿಸೆ ಗಡಿಯಾರವನ್ನು ಹೊರಗೆ ತೆಗೆದು ನೋಡಿ, "ಟೈಮಿಗೆ ಸರಿಯಾಗಿ ಬಿಟ್ಟಿ
ದಾನೆ," ಎಂದರು.



೧೮

ಕಾನಕಾನಹಳ್ಳಿಯಿಂದ ಗೋವಿಂದಪ್ಪನವರು ಜಯದೇವನಿಗೆ ಹೇಳಿ ಕಳುಹಿದರು_
ಹೆಂಡತಿಯೊಡನೆ ಒಮ್ಮೆ ಬಂದು ಹೋಗೆಂದು.
ಆದಷ್ಟು ಬೇಗನೆ ಹೋಗಿ ಬರುವುದೇ ವಾಸಿಯೆಂದು ಜಯದೇವ ಸುನಂದೆ
ಯೊಡನೆ ತನ್ನ ಹುಟ್ಟೂರಿಗೆ ಪಯಣ ಬೆಳೆಸಿದ. ಆ ಪ್ರಯಾಣದುದ್ದಕ್ಕೂ ಆತನ
ಗಿದ್ದುದು ಸುನಂದೆಗೆ ಅನನುಕೂಲವಾಗಬಾರದೆಂಬ ಕಾತರವೇ. ಹೆಚ್ಚು ದಿನ ಆ
ಊರಲ್ಲಿರುವ ಯೋಚನೆಯನ್ನೂ ಆತ ಮಾಡಿರಲಿಲ್ಲ.
ಆಗ ಮಾಧೂಗೆ ಕಾಲೇಜಿತ್ತು. ಸತ್ಯವತಿ ಪುನಃ ಗಂಡನ ಮನೆಗೆ ಹೋಗಿದ್ದಳು.
ಹೀಗೆ, ಎಳೆಯರಿಲ್ಲದೆ ಮನೆ ಭಣಗುಡುತ್ತಿತ್ತು. ಮನೆಯೊಡತಿ, ತನ್ನ ದುಗುಡಗಳನ್ನು
ನೀಗಲೆಂದು, ಕೆಲಸದವಳ ಮೇಲೆ ವೃಥಾ ಹರಿ ಹಾಯುತ್ತಿದ್ದಳು.
ತನ್ನ ಪಾದಗಳನ್ನು ಮುಟ್ಟಿ ನಮಿಸಿದ ಸುನಂದೆಗೆ ಆಕೆ ಅಂದರು:
"ನಾನು ನಿನ್ನ ಅತ್ತೆ ಅನ್ನೋದು ಗೊತ್ತಿದೆಯೇನಮ್ಮ?"
ಆ ಪ್ರಶ್ನೆಯೇ ಆಕೆ ಮಾಡಿದ ಆಶೀರ್ವಾದ.
ಗೋವಿಂದಪ್ಪನವರು ತಮ್ಮ ಹಿರಿಯ ಮಗನನ್ನು ಕಣ್ಣು ತುಂಬ ನೋಡಿದರು.

ನವೋದಯ

495

"ನೀವು ಆರೋಗ್ಯವಾಗಿದೀರಾ ಅಪ್ಪಯ್ಯ?" ಎಂದು ಜಯದೇವ ತಂದೆಯನ್ನು
ಕೇಳಿದ.
"ಇದೀನಿ ಹೀಗೆ. ವಯಸ್ಸಾದ ಮೇಲೆ ಇನ್ನೇನು?" ಎಂದರು ಗೋವಿಂದಪ್ಪ.
ಸತ್ಯವತಿಯ ಕಾಹಿಲೆಯ ವಿಷಯ ಅವರು ಬರೆದು ತಿಳಿಸಲಿಲ್ಲವೆಂದು ಜಯ
ದೇವ ಆಕ್ಷೇಪಿಸಲಿಲ್ಲ.
"ನೀನು ತಿಂಗಳಿಗೊಮ್ಮೆಯಾದರೂ ಬರೀತಿದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತೆ
ಜಯಾ," ಎಂದು ಅವರೇ ಹೇಳಿದರು.
"ಬರೀತೀನಿ ಅಪ್ಪಯ್ಯ."
"ಅದೇ ಊರಲ್ಲೆ ಇರಬೇಕೂಂತ ಮಾಡಿದೀಯಾ?"
"ಮುಂದಿನ ವರ್ಷ ಹೈಸ್ಕೂಲು ಮಾಡ್ತಾರೆ. ನಾನು ಅಲ್ಲಿ ಸೇರ್‍ಕೋತೀನಿಂತ
ಅವರು ನಂಬಿದಾರೆ. ಸ್ವಲ್ಪ ದಿವಸ ತರಬೇತು ಆದ ಹಾಗೂ ಆಗುತ್ತೆ ನ೦ಗೆ."
ತಂದೆ ಅಪೇಕ್ಷಿಸಿದ್ದುದು ಬೇರೆಯೇ ಉತ್ತರ. ಜಯದೇವನಿಗೆ ಅದು ಗೊತ್ತಿತ್ತು.
ಅವರಿಗೆ ನಿರಾಸೆಯಾಗದಿರಲೆ೦ದು, ಸುಳ್ಳು ಹೇಳಬೇಕಾದ ಪ್ರಮೇಯ. ಹೇಳಿದರೆ
ತಪ್ಪೇನು?_ಎಂಬ ಆತ್ಮಸಮರ್ಥನೆ ಬೇರೆ.
ಜಯದೇವ ಮುಂದುವರಿಸಿದ:
"ಆ ಮೇಲೆ ಇಲ್ಲಿಗೆ ಬಂದರಾಯ್ತು."
ಆದರೆ ಆ ಸುಳ್ಳಿಗೂ ಹೆಚ್ಚಿನ ಅರ್ಥವಿಲ್ಲ ಎನ್ನುವಂತೆ ಆತನೇ ಹೇಳಿದ:
"ಸರಕಾರಿ ಕೆಲಸದಲ್ಲಿ ಒಂದು ತೊಂದರೆ ಅಪ್ಪಯ್ಯ. ಈ ಊರಲ್ಲೇ ಇಡ್ತಾರೆ
ಅನ್ನೋ ಭರವಸೆ ಏನು? ಎಲ್ಲಿಂದೆಲ್ಲಿಗೆ ಬೇಕಾದರೂ ವರ್ಗಾಯಿಸಬಹುದು."
"ಗೊತ್ತು," ಎಂದು ಹೇಳಿ ಗೋವಿಂದಪ್ಪ ನಿಟ್ಟುಸಿರು ಬಿಟ್ಟರು.
ಸೊಸೆ ಮನೆಗೆ ಬಂದ ಮೇಲೆ ಅತ್ತೆಗೆ ವಿಶ್ರಾಂತಿ. ಅದು 'ಲೋಕರೂಢಿ.'
ಆದರೆ ಕಾನಕಾನಹಳ್ಳಿಯ ಆ ಮನೆಯಲ್ಲಿ ಆ ಮಾತು ಸತ್ಯವಾಗುವುದು, ಸಾಧ್ಯವಿರಲಿಲ್ಲ.
ಕೆಲಸ ಕಲಿಯಲು ಬಂದ ಎಳೆಯ ಹುಡುಗಿಯೆ ಆ ಸೊಸೆ? ಆಕೆ ಬಸುರಿ. ಅಲ್ಲದೆ, ಆ
ಸಂಸಾರಕ್ಕೂ ಆಕೆಗೂ ಇದ್ದ ಬಾಂಧವ್ಯವೂ ಅಷ್ಟಕ್ಕಷ್ಟೆ.
ಜಯದೇವ ಒಬ್ಬನೇ ದೊರೆತಾಗ ಸುನಂದಾ ಕೇಳಿದಳು:
"ಯಾವತ್ತು ಹೊರಡೋದು?"
ಆಗಲೆ ಎರಡು ದಿನಗಳಾಗಿದ್ದುವು ಅವರು ಅಲ್ಲಿಗೆ ಬಂದು.
"ಇನ್ನೊಂದು ದಿನ ತಡೆ."
"ಇಲ್ಲಿ ತುಂಬಾ ಬೇಜಾರು."
"ಗೊತ್ತು. ಹೋಗೋಣ. ಅಪ್ಪಯ್ಯನಿಗೆ ನಾನು ಹೇಳ್ತೀನಿ."
ಆ ಅಪ್ಪಯ್ಯನೆಂದರು:
"ನಿನ್ನಿಷ್ಟ. ಇಷ್ಟು ಬೇಗ್ನೆ ಹೋಗಲೇಬೇಕಾದರೆ ಹೋಗು."

496

ಸೇತುವೆ

"ಮೊದಲ್ನೇ ಬಾಣಂತಿತನ ಅಂತ ಸುನಂದಾ ಮನೆಯವರಿಗೆ ಕಾತರ. ಅವಳನ್ನ
ಅಲ್ಲಿ ಬಿಟ್ಟು ಪುನಃ ಬರ್‍ತೀನಿ."
"ನೀನು, ರಜಾ ಮುಗಿಸಿ ಹೋಗೋದರೊಳಗೆ ಒಮ್ಮೆ ಬಂದು ಹೋಗು ಅಷ್ಟೆ."
ನಿಟ್ಟುಸಿರು ಬಿಟ್ಟು ಆ ತಂದೆ ಮತ್ತೂ ಹೇಳಿದರು:
"ಮಾಧೂಗೆ ಈ ಸಲವೇ ಮದುವೆ ಮಾಡಿಯೇ ತೀರ್‍ಬೇಕೂಂತ ನಿನ್ನಮ್ಮ ಹಟ
ತೊಟ್ಟಿದಾಳೆ. ಮನೆಯಲ್ಲಿ ಸೊಸೆ ಬೇಡವೆ? ಮಾಧುವೂ ಅಷ್ಟೆ. ಡಿಗ್ರಿ ತಗೊಂಡು
ಇಲ್ಲೇ ಇರ್‍ತಾನೆ."
"ಯಾವುದು ಸರಿತೋಚುತ್ತೊ ಹಾಗೆ ಮಾಡಿ ಅಪ್ಪಯ್ಯ. ನನ್ನಿಂದ ಆಗ
ಬೇಕಾದ್ದು ಏನಾದರೂ ಇದ್ದರೆ ಬರೆದು ತಿಳಿಸಿ."
"ಹೂಂ."
'ತಾಯಿ'ಯೊಡನೆ ಆತ ಇನ್ನಷ್ಟು ಪರಿಣಾಮಕಾರಿಯಾಗಿ ಮಾತನಾಡ
ಬೇಕಾಯಿತು.
"ಸುನಂದೇನ ಡಾಕ್ಟರಿಗೆ ತೋರಿಸಬೇಕಾಗಿದೆಯಮ್ಮ ಅದಕ್ಕೋಸ್ಕರ_"
ಪೂರ್ತಿ ವಿವರ ಕೇಳಲು ಆಕೆ ಸಿದ್ಧವಿರಲಿಲ್ಲ.
"ಸರಿ ಕಣೋ. ನಿನಗಿಷ್ಟ ಬಂದ ಹಾಗೆ ಮಾಡು. ಅಂತೂ ಮನೆಯ ಸುಖ
ದುಃಖದ ವಿಷಯದಲ್ಲಿ ನೀನು ಹೊರ ಹೊರಗಿನವನೆ ಆದೆ. ಹೂ೦. ನಾನು ಪಡೆದು
ಬಂದದ್ದು. ಏನು ಮಾಡೋಕಾಗುತ್ತೆ ಹೇಳು?"
ಬೆಂಗಳೂರಿಗೆಂದು ಹೊರಟು ನಿಲ್ದಾಣದಲ್ಲಿ ಬಸ್ಸಿಗೋಸ್ಕರ ಕಾಯುತಿದ್ದಾಗ
ಸುನಂದಾ ಜಯದೇವನೊಡನೆ ಅಂದಳು:
"ಇದೇ ನನ್ನ ಗಂಡನ ಮನೆಯಾಗಿ ಇವರೇ ನನ್ನ ಅತ್ತೆಯಾಗಿದ್ದಿದ್ದರೆ-"
"ಚೆನ್ನಾಗಿರ್‍ತಿತ್ತು ಅಲ್ವಾ?"
"ಅತ್ತೆಯ ಕಿರಕುಳ ಅನ್ನೋ ಮಾತಿನ ನಿಜರೂಪ ನನಗೆ ಗೊತ್ತಿರಲಿಲ್ಲ. ಅಷ್ಟು
ಕಠಿನವಾಗಿ ಅತ್ತೆಯರನ್ನ ವರ್ಣಿಸೋದು ಸರಿಯೆ? ಎಂಬ ಸಂದೇಹವೂ ಇತ್ತು. ಈಗ
ತಿಳ್ಕೊಂಡೆ."
"ನನಗೆ ತಿಳೀದ ಹಾಗೆ ನಿನಗೇನಾದರೂ ಅಂದರಾ?"
"ಅನ್ನಲಿಲ್ಲ. ಅವರು ಆಡದೇ ಇದ್ದ ಮಾತಿನಿಂದಲೇ ಅವರ ಸಾಮರ್ಥ್ಯವನ್ನ
ಊಹಿಸ್ಕೊಂಡೆ."
"ಮರೆತ್ಬಿಡು. ಸದ್ಯಃ ಅವರನ್ನು ಅತ್ತೆಯಾಗಿ ಪಡೆಯೋ ಭಾಗ್ಯ ನಿನಗಿಲ್ಲವಲ್ಲ,
ಅಷ್ಟು ಸಾಕು."
"ನಿಮ್ಮ ಮಾಧುವಿನ ಕೈಹಿಡಿಯೋ ಹುಡುಗಿ ವಿಷಯದಲ್ಲಿ ತು೦ಬ ಕನಿಕರ_
ಆಗ್ತಿದೆ ಅಂದ್ರೆ."
"ಆವತ್ತು ಸತ್ಯವತಿ ಮದುವೆಗೆ ಬಂದಾಗ ಆ ಗದ್ದಲದಲ್ಲಿ ನಿನಗೆ ಗೊತ್ತಾಗಿರ

ನವೋದಯ

497

ಲಿಲ್ಲ. ಆದರೆ ಈಗ ನೀನೇ ಕಣ್ಣಾರೆ ನೋಡಿದೆಯಲ್ಲ, ಎಂಥ ವಾತಾವರಣದಲ್ಲಿ ನಾನು
ಬೆಳೆದೋನು ಅನ್ನೋದನ್ನ?"
"ಹೂಂ. ನೋಡಿದೆ."
ಸುನಂದಾ ಒಲವು ತುಂಬಿದ ನೋಟದಿಂದ ಜಯದೇವನನ್ನು ದಿಟ್ಟಿಸಿದಳು. ಆತ
ಪ್ರೀತಿ ಪುರಸ್ಸರವಾದ ದೃಷ್ಟಿಯಿಂದ ಆಕೆಯನ್ನು ನೋಡಿದ.
...ಜಯದೇವನ ಬೆಂಗಳೂರು ವಿಳಾಸಕ್ಕೆ ನಂಜುಂಡಯ್ಯ ಕಾಗದ ಬರೆದಿದ್ದರು.
"ಶಂಕುಸ್ಥಾಪನೆಯ ಸಂಬಂಧದ ಏರ್ಪಾಟಿಗಾಗಿ ಶಂಕರಪ್ಪನವರು ಮತ್ತು
ನಾನು ಬೆಂಗಳೂರಿಗೆ ಬರುತ್ತೇವೆ. ಮುಖ್ಯ ಮಂತ್ರಿಯವರನ್ನು ಭೇಟಿಯಾಗಬೇಕಾಗಿದೆ.
ಒಂದು ವಾರ ಅಲ್ಲಿ ಇರಬೇಕೆಂದು ಮಾಡಿದ್ದೇವೆ. ಗುರುವಾರದೊಳಗಾಗಿ ನಿಮ್ಮನ್ನು
ಕಾಣುತ್ತೇವೆ."
"ಕಾಗದ ಬಂದು ಆಗಲೆ ಎರಡು ದಿವಸವಾಯ್ತು," ಎಂದರು ಶ್ರೀಪತಿರಾಯರು,
ಅದರಲ್ಲಿದ್ದುದು ಮುಖ್ಯ ವಿಷಯವೆಂಬುದನ್ನು ಅಳಿಯನ ಮುಖಭಾವದಿಂದಲೆ
ಊಹಿಸಿ.
ಜಯದೇವ ಕಾಗದದ ಒಕ್ಕಣೆಯನ್ನು ಮಾವನಿಗೆ ತಿಳಿಸಿದ.
ಅವರೆಂದರು:
"ಬೇಕಾದರೆ ಅವರು ಇಲ್ಲಿಯೇ ಉಳಕೋಬಹುದು. ಕೊಠಡಿ ಬಿಟ್ಟು
ಕೊಡೋಣ."
"ಅದರ ಅಗತ್ಯ ಇರಲಾರದು ಮಾವ. ವಸತಿ ವಿಷಯ ಅವರು ಏನೂ ಬರೆದಿಲ್ಲ.
ಅಲ್ದೆ, ನಂಜುಂಡಯ್ಯನವರಿಗೆ ಬೆಂಗಳೂರು ಹೊಸದಲ್ಲ."
"ಸರಿ ಹಾಗಾದರೆ. ಬಂದಾಗ, ಇಲ್ಲೇ ಇರೀಂತ ಮಾತಿಗೆ ಹೇಳಿದರಾಯ್ತು.
ಊಟಕ್ಕಂತೂ ಒಂದು ದಿನ ಕರೆದ್ಬಿಡು."
"ಊಟಕ್ಕೆ ಕರೀದೆ ಇ‍‍ರ್‍ತಾರಾ?" ಎಂದ ವೇಣು, ನಕ್ಕು. ನಂಜುಂಡಯ್ಯನವರ
ಮನೆಯಲ್ಲಿ ತನ್ನ ತಂಗಿಯೂ ಭಾವನೂ ಉಂಡಿದ್ದುದು ಆತನಿಗೆ ಗೊತ್ತಿತ್ತು. [ಅದನ್ನು
ರಹಸ್ಯವಾಗಿಯೇ ಆತ ಉಳಿಸಿಕೊಂಡು ಬಂದಿದ್ದ, ಅಷ್ಟೆ.]
ಗುರುವಾರ ಬರಲಿಲ್ಲ. ನಂಜುಂಡಯ್ಯನವರೊಬ್ಬರೇ ಶುಕ್ರವಾರ ಮಧಾಹ್ನ
ಜಯದೇವನ ಮಾವನ ಮನೆಗೆ ಬಂದರು.
"ಎಲ್ಲಿ ಶಂಕರಪ್ಪನವರು?" ಎಂದು ಕೇಳಿದ ಜಯದೇವ.
"ಬಂದಿದ್ದಾರೆ. ನಾವು ಬುಧವಾರವೇ ಬಂದ್ವಿ."
"ಉಳಕೊಂಡಿರೋದು?"
"ಕಲ್ಯಾಣ ಭವನದಲ್ಲಿದೀವಿ."
"ಇಲ್ಲಿಗೇ ಬರಬಹುದಾಗಿತ್ತು."
63

498

ಸೇತುವೆ

"ಪರವಾಗಿಲ್ಲ. ಅಲ್ಲಿ ಅನುಕೂಲವಾಗಿಯೇ ಇದೆ."
ಒಳಗಿನಿಂದ ಬಂದು ಮುಖ ತೋರಿಸದೆ ಸುನಂದೆಗೆ ನಂಜುಂಡಯ್ಯ ನಮಸ್ಕ
ರಿಸಿದರು.
"ಪಾರ್ವತಮ್ಮ ಬರಲಿಲ್ವೇನು?" ಎಂದು ಸುನಂದಾ ಕೇಳಿದಳು.
"ಇಲ್ಲವ್ವಾ. ಇಲ್ಲಿ ತುಂಬ ಕೆಲಸವಿದೇಂತ ಆಕೇನ ಕರಕೊಂಡು ಬರ್ಲಿಲ್ಲ."
ಬೆಂಗಳೂರಿಗೆ ಬಂದ ಕೆಲಸದ ವಿಷಯ ಪ್ರಸ್ತಾಪಿಸುತ್ತ ನಂಜುಂಡಯ್ಯನೆಂದರು:
"ಮುಖ್ಯ ಸಚಿವರನ್ನು ಶಂಕರಪ್ಪ ನಾಳೆ ನೋಡ್ತಾರೆ. ನಾನು ಸರಕಾರಿ ನೌಕರ
ನಾಗಿರೋದರಿಂದ ಈ ಸಂಬಂಧದಲ್ಲಿ ಸಚಿವರನ್ನು ಕಾಣೋದು ಚೆನ್ನಾಗಿರೋದಿಲ್ಲ.
ಆದರೆ ಪತ್ರಿಕಾ ಸಂಪಾದಕರನ್ನು ಮಾತ್ರ ನಾವಿಬ್ಬರೂ ಹೋಗಿ ಭೇಟಿಯಾಗೋಣ.
ಏನ್ಹೇಳ್ತೀರಾ?"
ಅಂತಹ ಭೇಟಿಯಿಂದ ಯಾವ ಪ್ರಯೋಜನವೂ ಇಲ್ಲವೆಂಬುದು ಖಚಿತ
ವಾಗಿದ್ದರೂ, ನಂಜುಂಡಯ್ಯನವರ ಉತ್ಸಾಹವನ್ನು ಭಂಗಗೊಳಿಸಲು ಜಯದೇವ
ಯತ್ನಿಸಲಿಲ್ಲ.
"ಆಗಲಿ ಸಾರ್, ಹೋಗಿ ಬರೋಣ."
"ಇವತ್ತು ನೀವು ಬಿಡುವಾಗಿದೀರಾ?" ಎಂದು ನಂಜುಂಡಯ್ಯ ಕೇಳಿದರು.
"ಬಿಡುವಲ್ದೆ ಇನ್ನೇನು? ಹೇಳಿ. ಎಲ್ಲಿಗಾದರೂ ಹೋಗೊಣ್ವೆ?"
ಹತ್ತಿರ ಯಾರೂ ಇಲ್ಲದಿದ್ದರೂ ನಂಜುಂಡಯ್ಯ ಸ್ವರ ತಗ್ಗಿಸಿ ಹೇಳಿದರು:
"ಬನ್ನಿ. ಒಂದು ಸಿನಿಮಾ ನೋಡೋಣ. ಶಂಕರಪ್ಪ ಯಾರೋ ಸ್ನೇಹಿತರ
ಮನೆಗೆ ಹೋಗಿದಾರೆ. ಬರೋದು ತಡವಾಗುತ್ತೆ."
"ಹೋಗೋಣ."
"ನನಗೆ ಇಂಗ್ಲಿಷ್ ಚಿತ್ರ ಅಂದರೆ ಇಷ್ಟ."
"ಪ್ಲಾಜಾದಲ್ಲಿ ಚೆನ್ನಾಗಿರೋದು ಯಾವುದೋ ಇದೇಂತ ನನ್ನ ಭಾವ
ಹೇಳ್ತಿದ್ದ."
"ಅವರೂ ಬರ್ತಾರೇನು?"
"ಇಲ್ಲ. ಆತ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿದಾರೆ. ಮನೆಗೆ ಬರೋದು ತಡ
ವಾಗುತ್ತೆ."
ಮತ್ತೆ ಹೊರಬರಲು ಇಷ್ಟಪಡದ ಸುನಂದಾ ಬಾಗಿಲ ಮರೆಯಲ್ಲೆ ನಿಂತು,
ಗಂಡನಿಗೆ ಎದ್ದು ಬರಲು ಸನ್ನೆ ಮಾಡಿದಳು. ಓವಲ್ಟಿನ್ ಸಿದ್ಧವಾಗಿತ್ತು. ಎರಡು
ಕಪ್ಪುಗಳನ್ನಿರಿಸಿದ್ದ ದೊಡ್ಡ ತಟ್ಟೆಯನ್ನೆತ್ತಿ ತಂದು ನಂಜುಂಡಯ್ಯನವರ ಮುಂದೆ
ಜಯದೇವ ಹಿಡಿದ.
ಓವಲ್ಟಿನ್ ಹೀರುತ್ತ ಅವರೆಂದರು:
"ಸಿನಿಮಾದ ವಿಷಯದಲ್ಲಿ ನನಗೆ ಇತಿಮಿತಿ ಇಲ್ಲ. ಈಗಿರೋ ನಮ್ಮ ಜವಾನ

ನವೋದಯ

499

ಬರೋಕ್ಮುಂಚೆ ಪ್ರತಿ ತಿಂಗಳೂ ನಾನೇ ಸಂಬಳ ತರೋಕೆ ಹೋಗ್ತಾ ಇದ್ದೆ. ಯಾಕೆ
ಗೊತ್ತೆ?"
ಜಯದೇವ ನಸುನಕ್ಕ. ವೆಂಕಟರಾಯರು ನಂಜುಂಡಯ್ಯನನ್ನು'ಷೋಕಿ
ಮನುಷ್ಯ' ಎಂದು ಕರೆದಿದ್ದುದು ಆತನಿಗೆ ನೆನಪಾಯಿತು.
"ಊಹಿಸ್ಕೊಳ್ಳೋದು ಸಾಧ್ಯ," ಎಂದ ಆತ.
"ಇಲ್ಲೂ ಇರುವಷ್ಟು ದಿವಸ ದಿನಕ್ಕೊಂದರ ಹಾಗೆ ಸಿನಿಮಾ ನೋಡ್ತೀನಿ."
"ನೀವು ಥಿಯೇಟರಿಲ್ಲದ ಊರಿಂದ ಬಂದೋರು. ಹಾಗೆ ನೋಡೋದರಲ್ಲಿ
ಆಶ್ಚರ್ಯವಿಲ್ಲ. ಆದರೆ ಇಲ್ಲೆ ಹುಟ್ಟಿ ಬೆಳೆದೋರು ಹಲವರಿದಾರೆ_ದಿನಾ ಸಿನಿಮಾ
ನೋಡೋರು. ಅವರಿಗೇನು ಹೇಳ್ತೀರಾ?"
"ಅವರನ್ನ 'ವಸ್ತಾದಿಗಳೇ' ಅಂತ ಅಂದ್ಬಿಡೋದು!"
ಗಾಂಭೀರ್ಯದ ಮುಖವಾಡವಿಲ್ಲದೆ ನಂಜುಂಡಯ್ಯ ಹಾಗೆ ನಗೆಮಾತನ್ನಾಡಿ
ದುದು ಇಷ್ಟವೆನಿಸಿ, ಜಯದೇವನೂ ನಕ್ಕ.
...ಪ್ಲಾಜಾದಲ್ಲಿದ್ದ ಚಿತ್ರ ಚೆನ್ನಾಗಿತ್ತು.
......ಶಂಕರಪ್ಪ 'ಕುಮಾರ ಕೃಪಾ'ದಿಂದ ಹಿಂತಿರುಗಿ ನಂಜುಂಡಯ್ಯನಿಗೆ
ಹೇಳಿದರು:
"ಒಪ್ಪಿದರಪ್ಪಾ. ಮೊದಲೇನೋ ವಿದ್ಯಾ ಸಚಿವರನ್ನ ಕರಕೊಂಡ್ಹೋಗಿ ಅಂದರು.
ತಾವೇ ಆಗ್ಬೇಕೂಂತ ಹಟ ಹಿಡ್ದೆ. ಅದೇ ದಿವಸ ಸಾಯಂಕಾಲ ಬೆಂಗಳೂರಲ್ಲಿ ಬೇರೆ
ಕಾರ್ಯಕ್ರಮ ಇದೆಯಂತೆ. ಆದ್ದರಿಂದ ಹಿಂದಿನ ರಾತ್ರೆ ಬಂದು, ಬೆಳಗ್ಗಿನ ಹೊತ್ತೇ
ನಮ್ಮ ಕೆಲಸ ಮಾಡ್ಕೊಟ್ಟು, ನೇರವಾಗಿ ಬೆಂಗಳೂರ್‍ಗೆ ಬಂದ್ಬಿಡ್ತಾರಂತೆ."
ಆ ಸುದ್ದಿ ಕೇಳಿ ನಂಜುಂಡಯ್ಯನಿಗೆ ತುಂಬಾ ಸಂತೋಷವಾಯ್ತು.
"ಬನ್ನಿ. ಇವತ್ತೊಂದು ಸಿನಿಮಾಕ್ಕೆ ಹೋಗಿ ಖುಷಿಯಾಗಿರೋಣ," ಎಂದು
ಶಂಕರಪ್ಪನವರನ್ನು ಅವರು ಕರೆದರು.
ಆದರೆ ಶಂಕರಪ್ಪ ಒಪ್ಪಲಿಲ್ಲ.
"ಸಿನಿಮಾದಲ್ಲೇನಿದೆ ಮಣ್ಣು? ನೀವು ಹೋಗಿ ನೋಡಿ ತೃಪ್ತಿಪಟ್ಕೊಳ್ಳಿ,"
ಎಂದರು.
...ಜಯದೇವನ ಜೊತೆಗೂಡಿ ನಂಜುಂಡಯ್ಯ ಪತ್ರಿಕಾ ಸಂಪಾದಕರನ್ನೆಲ್ಲ ಭೇಟಿ
ಮಾಡಿಬಂದರು.
ಒಬ್ಬ ಸಂಪಾದಕರು ಕೇಳಿದರು:
"ಉದ್ಘಾಟನೆ ಮಾಡೋರು ಮುಖ್ಯ ಸಚಿವರು ತಾನೆ?"
"ಉದ್ಘಾಟನೆಯಲ್ಲ ಸಾರ್, ಶಂಕುಸ್ಥಾಪನೆ. ಮುಖ್ಯ ಸಚಿವರೇ ಮಾಡ್ತಾರೆ,"
ಎಂದು ನಂಜುಂಡಯ್ಯ ತಿದ್ದಿದರು; ಪ್ರಶ್ನೆಗೆ ಉತ್ತರವಿತ್ತರು.
"ಸರಿ ಸರಿ. ಶಂಕುಸ್ಥಾಪನೆ. ನೀವು ಯೋಚಿಸ್ಬೆಕಾದ್ದೇ ಇಲ್ಲ. ಪತ್ರಿಕೋ

500

ಸೇತುವೆ

ದ್ಯೋಗಿಗಳ ವಾಹನ ಅವರ ಹಿಂದೆಯೇ ಬರುತ್ತೆ."
ಮತ್ತೊಬ್ಬ ಸಂಪಾದಕರಿಂದಲೂ ಅಂತಹದೇ ಭರವಸೆ ದೊರೆಯಿತು.
ಜಯದೇವ ನಂಜುಂಡಯ್ಯನಿಗೆ ಹೇಳಿದ:
"ಇಲ್ಲಿ ಪ್ರಬಲವಾಗಿರೋ ಪತ್ರಿಕೆಗಳು ಇವೆರಡೇ ಸಾರ್."
"ನಮ್ಮೂರಲ್ಲಿ ಒಳ್ಳೆಯ ಒಬ್ಬಿಬ್ಬರು ಸುದ್ದಿಗಾರರನ್ನೂ ನಾವು ತಯಾ‍‍‍‍‍‍ರ್‍ಮಾ
ಡ್ಬೇಕು. ಇದು ಬಹಳ ಅಗತ್ಯ," ಎಂದರು ನಂಜುಡಯ್ಯ.
....ಮತ್ತೊಂದು ಸಂಜೆ ಜಯದೇವ ಮತ್ತು ನಂಜುಂಡಯ್ಯ ಇಬ್ಬರೇ ಇದ್ದಾಗ,
ಹೈಸ್ಕೂಲಿಗೋಸ್ಕರ ಅಧ್ಯಾಪಕರನ್ನು ನೇಮಿಸಿಕೊಳ್ಳುವ ಮಾತು ಬಂತು.
"ಇನ್ನೂ ಇಬ್ಬರು ಮೂವರು ಬೇಕಾಗ್ತಾರೆ ಜಯದೇವ್."
"ಉಪಾಧ್ಯಾಯರು ಸಿಗೋದೇನೂ ಕಷ್ಟವಾಗದೂಂತ ತೋರುತ್ತೆ. ಒಂದೆರಡು
ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರಾಯ್ತು."
"ಛೆ! ಛೆ! ಮೊದಲು ಬೇಕಾದವರನ್ನು_ಯೋಗ್ಯರನ್ನು_ಆರಿಸಿಕೊಂಡ್ಮೇಲೆ
ಜಾಹೀರಾತು ಕೊಡ್ಬೇಕು. ಇಲ್ದೇ ಹೋದರೆ ಫಜೀತಿಯಾಗ್ಬಿಡುತ್ತೆ."
"ಅದು ಹ್ಯಾಗೆ ಸಾಧ್ಯ ಸಾರ್?"
ಆ ಪ್ರಶ್ನೆಯಿಂದ ನಂಜುಂಡಯ್ಯ ಆಶ್ಚರ್ಯಗೊಂಡರು.
"ನಿಮಗೇನೂ ತಿಳೀದು ಜಯದೇವ್. ಈಗ ಪತ್ರಿಕೆಗಳಲ್ಲಿ 'ಬೇಕಾಗಿದಾರೆ'
ಜಾಹೀರಾತು ನೋಡ್ತೀವಲ್ಲ. ಇವೆಲ್ಲಾ ಪ್ರಕಟವಾಗೋದು ನೇಮಕಗಳಾದ್ಮೇಲೆಯೇ.
ನಿಮಗೆ ಗೊತ್ತೆ ಈ ವಿಷಯ?"
"ಇಲ್ಲ."
"ಆಹಾ! ಇದೀಗ ಸಂಘಟನೆಯ ಗುಟ್ಟು."
ಸಂಘಟಕರಾದ ನಂಜುಂಡಯ್ಯನವರನ್ನು ಜಯದೇವ ಕೇಳಿದ:
"ಟ್ರೇನಿಂಗ್ ಆದವರೇ ಮುಖ್ಯೋಪಾಧ್ಯಾಯರಾಗ್ಬೇಕೂಂತ ನಿಯಮವೇನಾ
ದರೂ ಇದೆಯೇನು?"
"ಖಾಸಗಿ ಸಂಸ್ಥೇಲಿ ಮೊದಲೇನೂ ಆ ಪ್ರಶ್ನೆ ಬರೋದಿಲ್ಲ. ಆದರೂ ಮುಂದೆ
ಬೇಕಾಗುತ್ತೆ. ನಿಮ್ಮನ್ನಂತೂ ನಾವೇ ಆರಿಸಿ ತರಬೇತಿಗೆ ಕಳಿಸ್ತೀವಿ. ಮೈಸೂರಲ್ಲೋ
ಬೆಂಗಳೂರಲ್ಲೋ ಬಿ.ಇಡಿ. ಮಾಡ್ಕೊಂಡು ಬನ್ನಿ."
"ನನ್ನ ವಿಷಯ ಹೇಗೂ ಇರ್‍ಲಿ ಸಾರ್. ತಾವು?"
"ನಾನೇ? ಇಲ್ಲಪ್ಪ. ಇಷ್ಟು ವಯಸ್ಸಾದ್ಮೇಲೆ ಇನ್ನು ಕಲಿಯೋದು ಕಷ್ಟ.
ಅಲ್ಲದೆ, ನನಗ್ಯಾತಕ್ರಿ ಬೇಕು? ಸ್ವಲ್ಪ ದಿವಸ, ಎಲ್ಲಾ ಸರಿ ಹೋಗೋವರೆಗೆ, ನಾನೇ
ಎಚ್.ಎಮ್. ಆಗಿರ್‍ತೀನಿ. ಆ ಮೇಲೆ ಬೇರೆಯವರು ಬರ್‍ಲಿ."
"ತಾವು?"
"ನಾನು ಆಡಳಿತ ಸಮಿತಿಗೆ ಕಾರ್ಯದರ್ಶಿಯಾಗ್ತೀನಿ ಜಯದೇವ್. ಸಾಯುವ

ನವೋದಯ

501

ವರೆಗೂ ಪಾಠ ಹೇಳುತ್ಲೇ ಇರ್ಬೇಕು ಅನ್ನೋ ಇರಾಧೆಯೇನೂ ನನಗಿಲ್ಲ. ಮಹಾತ್ವಾ
ಕಾಂಕ್ಷೆಯ ಮನುಷ್ಯನಂತೂ ನಾನಲ್ಲವೇ ಅಲ್ಲ. ಕಾರ್ಯದರ್ಶಿಯಾಗಿದ್ದು ಶಾಲೆ
ಸಮರ್ಪಕವಾಗಿ ನಡಕೊಂಡು ಹೋಗುವಂತೆ ಮಾಡ್ತೀನಿ."
"ಕಾರ್ಯದರ್ಶಿಯ ಸ್ಥಾನವೂ ಮುಖ್ಯವಾದದ್ದೇ ಅಂತ. ಒಪ್ಕೋತೀನಿ," ಎಂದ
ಜಯದೇವ.
"ಇಷ್ಟರೊಳಗೇ ನಾನು ರಾಜಿನಾಮೆ ಕೊಟ್ಟಿದ್ದರೆ ಚೆನ್ನಾಗಿ‍ರ್‍ತಿತ್ತು. ನಾಡದ್ದು
ಶಂಕುಸ್ಥಾಪನೆಯ ದಿವಸ ಅಧಿಕೃತವಾಗಿ ನಾನು ಓಡಾಡೋ ಹಾಗೇ ಇಲ್ಲ. ಇಷ್ಟೆಲ್ಲಾ
ಕೆಲಸ ಮಾಡಿರೋನು ನಾನು. ಆದರೆ ಹೆಸರು ಬರೋದೆಲ್ಲಾ ಬೇರೆಯವರಿಗೆ.
ಹ್ಯಾಗಿದೆ?"
"ಹಾಗಾದರೆ ಯಾವತ್ತು ರಾಜಿನಾಮೆ ಕೋಡೋಣಾಂತ ಮಾಡಿದೀರಿ?" ಎಂದು
ಜಯದೇವ ಕೇಳಿದ.
"ಬೇಸಗೆಯೊಳಗೆ ಬಿಟ್ಕೊಡೀಂತ ತಿಳಿಸ್ತೀನಿ. ನೀವು ವರ್ಷದ ಕೊನೇಲಿ
ಬಂದರೆ ಸಾಕು ಅನಿಸುತ್ತೆ," ಎಂದು ನಂಜುಂಡಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತ
ಪಡಿಸಿದರು.
...ಅವರು ಹೊರಡುವ ಹಿಂದಿನ ದಿನ, ನಂಜುಂಡಯ್ಯ ಮತ್ತು ಶಂಕರಪ್ಪ
ಇಬ್ಬರನ್ನೂ ಜಯದೇವ ಊಟಕ್ಕೆ ಕರೆದ.
ಆದರೆ, ಮನೆಯಲ್ಲೆ ಇದ್ದ ಶ್ರೀಪತಿರಾಯರು ಇದಿರ್ಗೊಂಡುದು ನಂಜುಂಡಯ್ಯ
ಒಬ್ಬರನ್ನೇ.
"ಮೊನ್ನೆ ಜಯದೇವ ಹೊರಡುವ ಹೊತ್ತಿಗೆ ನಾನೂ ನಿಮ್ಮೂರಿಗೆ ಬಂದಿದ್ದೆ.
ವಾಪಸು ಬರುವ ಅವಸರದಲ್ಲಿ ತಮ್ಮನ್ನು ಭೇಟಿಯಾಗೋದು ಸಾಧ್ಯವಾಗ್ಲಿಲ್ಲ,"
ಎಂದರು ಶ್ರೀಪತಿರಾಯರು.
"ತಾವು ಬಂದಿದ್ದಿರೀಂತ ಆಗಲೆ ನನಗೆ ತಿಳೀತು. ಆದರೆ, ತಮ್ಮನ್ನು ಕಾಣ
ಬೇಕು ಅನ್ನುವಷ್ಟರಲ್ಲೆ ತಾವು ಹೊರಟಿದ್ದಿರಿ," ಎಂದು ನಂಜುಂಡಯ್ಯ ನುಡಿದರು.
ಶಂಕರಪ್ಪನವರು ಊಟಕ್ಕೆ ಬರಲಿಲ್ಲ.
"ಅಸೆಂಬ್ಲಿ ಸ್ಪೀಕರು ಅವರನ್ನ ಮನೆಗೆ ಕರೆದ್ಬಿಟ್ಟಿದಾರೆ. ಹಳೇ ಸ್ನೇಹಿತರಂತೆ,"
ಎಂದು ನಂಜುಂಡಯ್ಯ ನುಡಿದರು. "ನಿರಾಶೆಗೊಳಿಸಿದ್ದಕ್ಕೆ ಕ್ಷಮೆ ಕೇಳಿದಾರೆ" ಎಂದು,
ಶಂಕರಪ್ಪನವರ ಪರವಾಗಿ ಅವರೇ ಶಿಷ್ಟಾಚಾರದ ಒಂದು ಮಾತನ್ನೂ ಆಡಿದರು.
ಶಂಕರಪ್ಪನವರು ಬರಲಿಲ್ಲವೆಂದು ನಿರಾಶೆಯಂತೂ ಯಾರಿಗೂ ಆಗಲಿಲ್ಲ. ಅವ
ರಿಬ್ಬರನ್ನು ಊಟಕ್ಕೆ ಕರೆಯುವ ವಿಷಯದಲ್ಲಿ ಶ್ರೀಪತಿರಾಯರು ಉತ್ಸುಕತೆ ತೋರಿ
ದುದೂ ಉಪಾಧ್ಯಾಯನಾದ ಅಳಿಯನ ಭಾವೀ ಜೀವನದ ಹಿತದ ದೃಷ್ಟಿಯಿಂದಲೇ.
ಸುನಂದಾ ಬಡಿಸಲು ಹೊರಡುವುದು ಸಾಧ್ಯವಿಲ್ಲವೆಂದು ಆಕೆಯ ತಾಯಿಯೇ
ಸೆರಗು ಬಿಗಿದರು. ಆದರೆ ಸುನಂದೆಯ ಪಕ್ಕದ ಮನೆ ಸ್ನೇಹಿತೆ ಬಂದು, "ನಾನು

502

ಸೇತುವೆ

 ಮಾಡ್ತೀನಿ ಆ ಕೆಲಸವನ್ನ" ಎಂದಳು.
ಬಡಿಸುತಿದ್ದಾಕೆಯನ್ನು ನೋಡಿ ನಂಜುಂಡಯ್ಯ ಕೇಳಿದರು:
"ಇವರು ಸುನಂದಮ್ಮನ ತಂಗಿಯೇ?"
ಆ ಹುಡುಗಿಗೆ ನಗುಬಂತು. ಅದನ್ನು ತಡೆಯುವ ಯತ್ನದಲ್ಲಿ ಆಕೆ ತುಪ್ಪ
ಬಡಿಸುತ್ತಿದ್ದ ಚಮಚವನ್ನು ನಂಜುಂಡಯ್ಯನ ಎಲೆಗೆ ಇಳಿ ಬಿಟ್ಟಳು.
"ಈಕೆ ಸುನಂದೆಯ ಸ್ನೇಹಿತೆ," ಎಂದು ಜಯದೇವ ಪರಿಚಯ ಮಾಡಿಕೊಟ್ಟ.
"ಹಾಗೇನು?" ಎನ್ನುತ್ತ ನಂಜುಂಡಯ್ಯನೂ ನಕ್ಕು, ತುಪ್ಪದ ಚಮಚವನ್ನು
ಅನ್ನದಿಂದೆತ್ತಿ ಬದಿಗಿರಿಸಿದರು
ಹೋಟೆಲಲ್ಲೆ ಅಷ್ಟು ದಿನಗಳಿಂದ ಉಣ್ಣುತ್ತಿದ್ದ ಅವರಿಗೆ, ಜಯದೇವನ
ಮಾವನ ಮನೆಯ ಊಟ ತುಂಬಾ ಮೆಚ್ಚುಗೆಯಾಯಿತು.
* * * *
ನಂಜುಂಡಯ್ಯನೂ ಶಂಕರಪ್ಪನೂ ಊರಿಗೆ ಮರಳಿದ ಎರಡು ವಾರಗಳಲ್ಲೆ
ಜಯದೇವನೂ ಅವರನ್ನು ಹಿಂಬಾಲಿಸಿದ. ಸರ್ವೋದಯ ದಿನಕ್ಕಿಂತ ನಾಲ್ಕು ದಿವಸ
ಮುಂಚಿತವಾಗಿಯೆ ಬರಬೇಕೆಂದು ಶಂಕರಪ್ಪ ಆತನಿಗೆ ಹೇಳಿದ್ದರು:
ಈ ಸಲ ಜಯದೇವ ಪಯಣ ಬೆಳೆಸಿದುದು ಒಂಟಿಯಾಗಿಯೆ.
****
'ಧರ್ಮಪ್ರವರ್ತಕ ಚೆನ್ನಣ್ಣನವರ ಪ್ರೌಢಶಾಲಾ ಕಟ್ಟಡ'ದ ಶಂಕುಸ್ಥಾಪನೆ,
ಸರ್ವೋದಯ ದಿನ ಪೂರ್ವಾಹ್ನ, ಸಂಸ್ಥಾನದ ಮುಖ್ಯ ಸಚಿವರ 'ಅಮೃತಹಸ್ತ'
ದಿಂದ ನೆರವೇರಿತು.

೧೯


ಶಾಲೆಗಳು ಆರಂಭವಾದ ವಾತಾವರಣ ಕಲುಷಿತವಾಗಿತ್ತು. ಹಾಗಾಗಲು ಮುಖ್ಯ
ಕಾರಣ_ಒಂದು ತಿಂಗಳ ಅವಧಿಯಲ್ಲೆ ಜರಗಲಿದ್ದ ಪಂಚಾಯತ ಬೋರ್ಡು ಚುನಾವಣೆ.
ಈ ಸಂಬಂಧವಾಗಿ ಪಕ್ಷದಲ್ಲಿ ಒಮ್ಮತ ದೊರೆಯದೆ ಹೋದುದರಿಂದ ಎಲ್ಲರೂ
ಸ್ವತಂತ್ರರಾಗಿಯೆ ಸ್ಪರ್ಧಿಸಬಹುದೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರೌಢ
ಶಾಲೆಯ ಶಂಕುಸ್ಥಾಪನೆ, ಮುಖ್ಯ ಸಚಿವರ ಆಗಮನ, ಮತ್ತಿತರ ಕಾರಣಗಳಿಂದ ಜನ
ರೆಡೆಯಲ್ಲಿ ಬೆಳೆದು ಬಿಟ್ಟಿತ್ತು ಶಂಕರಪ್ಪನ ವರ್ಚಸ್ಸು. ಅವರನ್ನು ಏನಾದರೂ ಮಾಡಿ
ಈ ಸಲ ಉರುಳಿಸಬೇಕೆಂದು ನಾರಾಯಣಗೌಡರು ಟೊಂಕಕಟ್ಟಿದರು.
ಪರಿಣಾಮ_ಊರೇ ಹೊಲಸೆದ್ದು ಹೋದಂತಹ ಪರಿಸ್ಥಿತಿ.ಎಂತೆಂತಹ

ನವೋದಯ

503

ಮಾತುಗಳು! ಎಂತೆಂತಹ ಬೈಗಳು! ಪಡಖಾನೆಯಲ್ಲಿ ಹೆಂಡ ಹೆಚ್ಚು ಖರ್ಚಾಯಿತು.
ಹೋಟೆಲುಗಳಲ್ಲಿ ವ್ಯಾಪಾರ ಇಮ್ಮಡಿಸಿತು.
ಸಮಾಜದೊಳಗಿನ ಈ ನಡೆನುಡಿಗಳನ್ನು ಮಕ್ಕಳೂ ಪ್ರತಿಬಿಂಬಿಸಿದರು. ಅವರ
ಬಾಯಲ್ಲೂ ಬಿರುಸಾದ ವಾದವಿವಾದವೇ.
ಆ ಗೊಂದಲದಲ್ಲಿ, ಅಲ್ಲಿಂದಲ್ಲಿಗೇ ಮರೆಯಾದ ಪ್ರಕರಣ ರಾಮಾಚಾರಿಯದು.
ಜಯದೇವ ಊರಿನಿಂದ ಹಿಂತಿರುಗಿದೊಡನೆ ಆತನನ್ನು ಭೇಟಿಯಾಗಿ ತಿಮ್ಮಯ್ಯ
ವರದಿ ಕೊಟ್ಟರು:
"ನಾನು ಹೇಳಿದ ಹಾಗೇ ಆಯ್ತು ಆ ರಾಮಾಚಾರಿಯ ವಿಷಯ."
“ಏನಾಯಿತು?"
"ಚಪ್ಪಲಿ ಏಟು,ಇನ್ನೇನು?"
ಆ ರಜಾದಲ್ಲಿ ತನ್ನೂರಿಗೆ ಹೋಗದೆ ಅಲ್ಲಿಯೇ ನಿಂತಿದ್ದ ರಾಮಾಚಾರಿ,
ಮಗ್ಗುಲು ಬೀದಿಯಲ್ಲೆ ಇದ್ದ ಯುವತಿಯಾದ ವಿಧವೆಯೊಬ್ಬಳನ್ನು ಕೆಣಕಿದ್ದ. ಅದು,
ಕಾಯಿಯೋ ಹಣ್ಣೋ ಎಂದು ತಿಳಿಯಲು ಮಾಡಿದ್ದ ಯತ್ನ .ಯತ್ನಕ್ಕೆ ಅಪ
ಯಶಸ್ಸು ದೊರೆಯಿತು; ಆತನಿಗೆ ಚಪ್ಪಲಿ ಏಟು. ಲಕ್ಕಪ್ಪಗೌಡರ ಮನೆ ಅಲ್ಲೆ
ಸಮೀಪದಲ್ಲಿ ಇದ್ದುದರಿಂದ ರಾಮಾಚಾರಿ ಬದುಕಿದ.
ಮಾರನೆಯ ದಿನ ರಾಮಾಚಾರಿ ಆ ಊರಲ್ಲೆಲ್ಲೂ ಕಾಣಿಸಲಿಲ್ಲ. ಹೈಸ್ಕೂಲಿನ
ಶಂಕುಸ್ಥಾಪನೆಯಾದಾಗಲೂ ಯಾರೂ ಆತನನ್ನು ನೋಡಲಿಲ್ಲ.
ಶಾಲೆ ಆರಂಭವಾದಾಗ ನಂಜುಂಡಯ್ಯನ ಕೈಸೇರಿದುದು ರಜೆಯ ಅರ್ಜಿ.
ಈ ಆಸಾಮಿ ಇನ್ನು ಬರುವುದೇ ಇಲ್ಲವೇನೊ ಎಂಬ ಭಾವನೆ ಬಲಗೊಳ್ಳು
ತ್ತಿದ್ದಾಗಲೆ ಆತ ಆಗಮಿಸಿದ. ಅಡ್ಡಪಂಚೆ, ಶರಟು, ಕೋಟು, ಚಪ್ಪಲಿ. ಕೈಲಿ ಸಿಗ
ರೇಟು. ಪ್ರತಿಯೊಂದೂ ಹಿಂದಿನಂತೆಯೇ.
'ಹೋದ ತಿಂಗಳು ಹೀಗಾಯಿತಂತಲ್ಲಾ' ಎಂದು ಯಾರಾದರು ಕೇಳಿದ್ದರೆ,
'ಹೌದೆ? ಎಲ್ಲಿ? ಯಾರು?' ಎಂದು ಪ್ರಶ್ನಿಸುವ ಮುಖ ಭಾವವಿತ್ತು ಆ ಮನುಷ್ಯನಿಗೆ.
"ಯಾರಾದರೂ ಒ೦ದು ದೂರು ಬರಕೊಟ್ಟಿದ್ದರೆ ಸಾಕಿತ್ತು. ಮುಂದಿನ ಕೆಲಸ
ನಾನು ಮಾಡ್ತಿದ್ದೆ,"ಎಂದು ನಂಜುಂಡಯ್ಯ, ಒಳ್ಳೆಯದೊಂದು ಅವಕಾಶ ತಪ್ಪಿ
ತಲ್ಲಾ_ಎಂದು ವಿಷಾದಿಸಿದರು.
ಅದಕ್ಕೂ ಹಿಂದೆ ಒದಗಿದ್ದ ಒಂದು ಅವಕಾಶದ ವಿಷಯ ಜಯದೇವ ಪ್ರಸ್ತಾ
ಪಿಸಲಿಲ್ಲ.
...ಪರೀಕ್ಷೆ ಮುಗಿಸಿ ಬಂದಿದ್ದ ಪ್ರಭಾಮಣಿ ಊರಲ್ಲೇ ಇದ್ದಳು. ಒಂದು
ಸಂಜೆ ಅಕ್ಕ ತಂಗಿಯರು ಬೀದಿಯಲ್ಲಿ ಹೋಗುತ್ತಿದ್ದಾಗ ಜಯದೇವ ಅವರಿಗೆ ಕಾಣಲು
ದೊರೆತ.

"ಏನಮ್ಮ ಪ್ರಭಾ? ಎಷ್ಟೊಂದು ಬೆಳೆದ್ಬಿಟ್ಟಿದೀಯೆ_ಗುರುತೇ ಸಿಗೊಲ್ವಲ್ಲ,"


504

ಸೇತುವೆ

ಎಂದು ಜಯದೇವನೆಂದ.
ಪ್ರಭಾ ನಾಚುತ್ತ ಹಳೆಯ ಗುರುವಿಗೆ ವಂದಿಸಿದಳು.
ಗುರು ಜಯದೇವ ಕೇಳಿದ:
"ಪರೀಕ್ಷೇಲಿ ಚೆನ್ನಾಗಿ ಮಾಡಿದೀಯ?"
"ಹೂಂ."
“ಮನೇಲಿ ಏನಂತಾರೆ?”
"ಕಾಲೇಜಿಗೆ ಹೋಗೂಂತ."
"ನಿಮ್ಮ ಫಲಿತಾಂಶವೇನೋ ಈಗ್ಲೇ ಬಂದ್ಬಿಡುತ್ತೆ. ಆದರೆ ಕಾಲೇಜು ಶುರು
ವಾಗೋಕೆ ಇನ್ನೂ ಆರು ತಿಂಗಳಿದೆಯಲ್ಲ. ಏನ್ಮಾಡ್ತೀಯ ಅಷ್ಟು ಸಮಯ?"
"ಮನೇಲೆ ಇರ್‍ತೀನಿ."
"ಸರೀನಮ್ಮ . ಅದಲ್ದೆ, ನಂಜುಡಯ್ಯನವರ ಜತೆಗೆ ನಿನ್ನ ರಾಧೆಗೆ ನೀನೂ
ಸ್ವಲ್ಪ ಪಾಠ ಹೇಳ್ಕೊಡು."
ಪ್ರಭಾಮಣಿ ನಕ್ಕಳು. ರಾಧಾ ಯಾರೆಂಬುದು ಆ ಕೃಷ್ಣನಿಗೆ ಗೊತ್ತಿತ್ತು.
"ಆಗಲಿ ಸಾರ್, ಹೇಳ್ತೀನಿ."
“ಈಗೇನೂ ಸಂಶಯ ಇಲ್ವೊ?"
ಕೊನೆ ಇಲ್ಲದ ಸಂದೇಹಗಳು, ಪ್ರಶ್ನೆ-ಉಪಪ್ರಶ್ನೆಗಳ, ರಾಣಿ ಆಕೆ.
ಪ್ರಭಾಮಣಿ ನಕ್ಕು ಸುಮ್ಮನಾದಳು.
... ಅಷ್ಟು ತಿಂಗಳ ಕಾಲ ಸುನಂದೆಯ ಜತೆಯಲ್ಲಿದ್ದ ಬಳಿಕ ಜಯದೇವನಿಗೆ
ಒಂಟಿ ಜೀವನ ದುಸ್ಸುಹವಾಯಿತು. ಆನಂದ ವಿಲಾಸಕ್ಕೆ ಹೋಗುವುದಿಲ್ಲವೆಂದು,
ಮತ್ತೆ ಕಾಹಿಲೆ ಬೀಳುವುದಿಲ್ಲವೆಂದು, ಸುನಂದೆಗೆ ಆತ ಮಾತುಕೊಟ್ಟಿದ್ದ. ಆ
ಮಾತನ್ನು ನಡೆಸುವುದೆಂದರೆ ಸ್ವಯಂಪಾಕ ಆರಂಭಿಸುವುದು. ಕ್ರಮಬದ್ಧವಾದ
ಜೀವನ...
ಬಂದ ಮೊದಲ ದಿನದಿಂದಲೆ ಗಂಡು ಅಡುಗೆಯನ್ನು ಆರಂಭಿಸಿದ ಜಯದೇವ.
ಬಿಕೋ ಎನ್ನುತ್ತಿದ್ದ ಆ ಮನೆ ಹೆಜ್ಜೆ ಹೆಜ್ಜೆಗೂ ಸುನಂದೆಯ ನೆನಪು ಮಾಡಿಕೊಡು
ತ್ತಿತ್ತು .ಹೆಂಚುಗಳ ಎಡೆಯಿಂದ ಇಳಿದಿದ್ದ ಧೂಳು ನೆಲದ ಮೇಲೆ ಒಂದಂಗುಲ
ದಪ್ಪನೆ ಬಿದ್ದಿತ್ತು. ಅದೆಲ್ಲವನ್ನೂ ಆತ ಗುಡಿಸಿ ಸ್ವಚ್ಛಗೊಳಿಸಿದ.
ಕೆಲಸದವಳು ದಿನಕ್ಕೊಮ್ಮೆ ಬಂದು ಪಾತ್ರೆ ಬೆಳಗಿ ಕೊಡುತ್ತಿದ್ದಳು.
ತಿಮ್ಮಯ್ಯ , ಜಯದೇವನಿಗೆ ನಳರಾಯನೆಂದು ಮತ್ತೊಂದು ಹೆಸರಿಟ್ಟರು.
...... ಪಾಠದ ವೇಳಾಪಟ್ಟಿ ಸಿದ್ಧವಾದೊಡನೆ ಜಯದೇವ ತರಗತಿಗಳನ್ನು
ಆರಂಭಿಸಿದ.
ಮಾಧ್ಯಮಿಕ ಅಂತಿಮ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮೊದಲ

ಪಾಠವನ್ನು ಮಾಡುತ್ತ ಜಯದೇವ ಕೇಳಿದ:

ನವೋದಯ

505

"ನೀವೆಲ್ಲರೂ ಈ ವರ್ಷ ಪಾಸಾದರೆ ಏನಾಗುತ್ತೆ ಗೊತ್ತೆ?"
ಒಬ್ಬನೆಂದ:
"ಗೊತ್ತು ಸಾರ್. ನಮ್ಮೂರ ಹೈಸ್ಕೂಲಿನಲ್ಲಿ ಮೊದಲನೇ ವರ್ಷದ ವಿದ್ಯಾರ್ಥಿ
ಗಳಾಗ್ತೀವಿ."
"ಈ ಇಡೀ ಕ್ಲಾಸೇ ಮುಂದಿನ ವರ್ಷ ಹೈಸ್ಕೂಲಿಗೆ ಹೋದರೆ ಚೆನ್ನಾಗಿರುತ್ತೆ
ಅಲ್ವೆ?"
ಎಷ್ಟೋ ಕಂಠಗಳು ಒಟ್ಟಾಗಿ ಹೇಳಿದುವು:
"ಹೌದು ಸಾರ್."
"ಹಾಗಾದರೆ ಎಲ್ಲರೂ ಪಾಸಾಗೋ ಹಾಗೆ ಶ್ರಮಪಟ್ಟು ಓದ್ತೀರೇನು?"
ತರಗತಿಗೆ ತರಗತಿಯೇ ಉತ್ತರವಿತ್ತಿತು.
"ಓದ್ತೀವಿ ಸಾರ್."
ನಂಜುಂಡಯ್ಯ ಮಾತ್ರ ಗೊಣಗಿದರು:
"ಯಾಕೋ, ಹುಡುಗರಿಗೆ ಪಾಠ ಮಾಡೋಕೆ ಮನಸ್ಸಾಗ್ತಾ ఇల్ల. ಎದ್ದರೆ
ನಿಂತರೆ ಕಟ್ಟಡದ ನಕಾಶೆ ಕಣ್ಣ ಮುಂದೆ ಕಟ್ಟುತ್ತೆ. ಜೂನ್ ನೊಳಗೆ ರಿಲೀವ್
ಮಾಡೀಂತ ರಾಜಿನಾಮೆ ಪತ್ರ ಕಳಿಸ್ಬಿಡ್ತೀನಿ."
"ಕಟ್ಟಡದ ನಿಧಿ ಎಷ್ಟರ ವರೆಗೆ ಬಂತು?" ಎಂದು ಜಯದೇವ ಕೇಳಿದ.
"ಆರು ಸಾವಿರದಷ್ಟು ಕೂಡಿದೆ. ಕಟ್ಟಡ ಶುರುಮಾಡೋದಕ್ಕೆ ಇಷ್ಟು ಸಾಕು.
ಆ ಮೇಲೆ ಸರಕಾರದವರಿಂದ ಸಹಾಯ ಹಣ ಬರುತ್ತೆ. ಯುಗಾದಿಯ ಮಾರನೇ ದಿವಸ
ಕಟ್ಟಡದ ಕೆಲಸ ಶುರು."
...ಇಂದಿರೆಯ ಮನೆಯ ಕೆಲಸದಾಕೆ, ಉಪ್ಪಿನಕಾಯಿ, ಸಾಂಬಾರು ಪುಡಿ. ಚಟ್ಣಿ
ಪುಡಿ, ಹಪ್ಪಳ ಮತ್ತಿತರ ಸಾಮಗ್ರಿಗಳ ದೊಡ್ಡದೊಂದು ಮೂಟೆಯನ್ನು ತಂದು
ಜಯದೇವನ ಮನೆಯಲ್ಲಿರಿಸಿದಳು.
"ಸುನಂದವ್ವ ಕಾಜ್ಗ ಬರ್ದವ್ರಾ ಕೇಳ್ಕೊಂಡ್ಬಾ ಅಂದ್ರು," ಎಂದಳು ಆಕೆ.
"ಬರೆದಿದಾರೆ, ಆರೋಗ್ಯವಾಗಿದಾರೆ-ಅಂತ ಹೇಳು."
"ಬುದ್ಧಿಯೋರಿಗೆ ಏನಾರ ಬೇಕಾರೆ ಏಳ್ಕಳಿಸ್ಬೇಕಂತೆ."
"ಹೂನವ್ವಾ."
ನಂಜುಂಡಯ್ಯನೊಡನೆ ಕೇಳಿ ಉತ್ತರ ಪಡೆಯಬಹುದಾಗಿದ್ದ ಪ್ರಶ್ನೆಯೊಂದಿತ್ತು.
ಅದನ್ನು ಈಕೆಯೊಡನೆಯೂ ಕೇಳಬಹುದೆಂದು ಆತನೆಂದ:
"ಇಂದಿರಮ್ಮ ಪಾಠ ಹೇಳಿಸ್ಕೊಳ್ಳೋಕೆ ಹೋಗ್ತಿದಾರೆ-ಅಲ್ವ?"
"ಓಗ್ತವ್ರೆ ಬುದ್ಧಿ."
"ಸರಿ, ಹೋಗು."

64

...ಪಾಠಗಳು ಹೇಗೇ ಇರಲಿ ಏನೇ ಇರಲಿ-ಕಾಟಾಚಾರಕ್ಕೆ ಹೋಗಿ ಬರುವವ
ರಂತೆ ದಿನ ಕಳೆಯುತ್ತಿದ್ದ ರಾಮಾಚಾರಿ ಕ್ರಮೇಣ ಉಲ್ಲಸಿತನಾದ. ಅದಕ್ಕೆ ಕಾರಣ
ದೂರವಿರಲಿಲ್ಲ.
ಆತ ನಂಜುಂಡಯ್ಯನನ್ನು ಕೇಳಿದ:
"ಸಾರ್,ತಮ್ಮಿಂದ ನನಗೊಂದು ಸ್ಪಷ್ಟೀಕರಣ ಬೇಕಾಗಿದೆ."
"ಏನಪ್ಪಾ?"
"ಪಂಚಾಯತ ಬೋರ್ಡ್ ಚುನಾವಣೆಗೂ ನಮಗೂ ಇರುವ ಸ೦ಬ೦ಧವೇನು?"
ಆ ಸಲ ನಂಜುಂಡಯ್ಯನ ಪಾಲಿಗೂ ಅದು ಸೂಕ್ಷ್ಮವಾದ-ತೊಡಕಿನ-ಪ್ರಶ್ನೆ
ಯಾಗಿತ್ತು. ಪ್ರಚಾರದ ಕಣಕ್ಕೆ ನೇರವಾಗಿ ಧುಮುಕಿ ತಾವು ಶಂಕರಪ್ಪನವರ ಪಂಗಡದ
ಪರವಾಗಿ ದುಡಿಯಲು ಅವರು ಇಚ್ಛಿಸಿದ್ದರು.
ಆದರೆ, ಹಾಗೇನಾದರೂ ಮಾಡಿದರೆಂದರೆ, ನಾರಾಯಣ ಗೌಡರ ಗು೦ಪಿನಿಂದ
ನಂಜುಂಡಯ್ಯನವರ ಮೇಲೆ ದೂರು ಹೋಗುವುದು; ಮುಂದಿನ ಕೆಲಸಕ್ಕೆ ತೊಂದರೆ
ಯಾಗುವುದು.
ಹೀಗೆ ಎಲ್ಲವನ್ನೂ ಕೂಡಿಸಿ ಕಳೆದು, ಪ್ರತ್ಯಕ್ಷವಾಗಿ ಪಂಚಾಯತ ಚುನಾವಣೆ
ಯಲ್ಲಿ ಭಾಗವಹಿಸಬಾರದೆಂದೇ ಅವರು ನಿರ್ಧರಿಸಿದ್ದರು.
ಅವರು ಹೇಳಿದರು:
"ಉಪಾಧ್ಯಾಯರಿಗೂ ರಾಜಕೀಯಕ್ಕೂ ಯಾವ ಸಂಬಂಧವೂ ఇల్ల ಎನ್ನು
ವುದು ನಿಮಗೆ ತಿಳಿದೇ ಇದೆ. ಅಲ್ವಾ ರಾಮಾಚಾರಿ?"
"ಆದರೆ, ಪೌರನೀತಿ ಮತ್ತು ರಾಜಕೀಯ ಬೇರೆ ಬೇರೆ ಅಲ್ವೆ ಸಾರ್?"
[ಲಕ್ಕಪ್ಪಗೌಡರ ಮೂಲಕ ಈತ ಪ್ರಚಾರಕ್ಕೋಸ್ಕರ ಹಣ ಪಡೆದಿರಬೇಕೆಂದು
ನಂಜುಂಡಯ್ಯ ಊಹಿಸಿದರು.]
"ತಾತ್ತ್ವಿಕ ಪ್ರಶ್ನೆಯ ಚರ್ಚೆ ಈಗ ಅಗತ್ಯವಿಲ್ಲ. ಊರಿನ ವಾತಾವರಣ
ಈಗಾಗ್ಲೇ ಕೆಟ್ಟಿದೆ. ನಾವು ಉಪಾಧ್ಯಾಯರೂ ಸೇರ್ರ್ಕೊಂಡು ಇನ್ನಷ್ಟು ಕೆಡಿಸೋದು
ಬೇಕಾಗಿಲ್ಲ."
"ಇದು ಈ ಸಲದ ಚುನಾವಣೆಗೆ ಮಾತ್ರ ಅನ್ವಯಿಸುತ್ತೋ ಅಥವಾ-"
"ಪ್ರತಿಯೊಂದು ಸಲಕ್ಕೂ ಅನ್ವಯವಾಗುತ್ತೆ."
ರಾಮಾಚಾರಿ, ಸುಮ್ಮನೆ ಕುಳಿತ. ಆತನ ಕೈಲಿದ್ದ ಸಿಗರೇಟು ಹೊಗೆ
ಯಾಡುತ್ತಿತ್ತು.
"ತೃಪ್ತಿಯಾಯ್ತೇನು?" ಎಂದು ನಂಜುಂಡಯ್ಯ ಕೇಳಿದರು:
"ಏನೆಂದಿರಿ?"
"ನನ್ನ ಸ್ಪಷ್ಟೀಕರಣದಿಂದ ತೃಪ್ತಿಯಾಯ್ತೇನು-ಅಂತ ಕೇಳ್ದೆ."

"ಧಾರಾಳವಾಗಿ ಆಯ್ತು."

ನವೋದಯ

507



...ಲಕ್ಕಪ್ಪಗೌಡರು ಎದೆಯೆತ್ತಿ ಸೆಟೆದು ನಡೆಯುವ ಪರಿಸ್ಥಿತಿಯೇನೂ ಆ
ಊರಲ್ಲಿರಲಿಲ್ಲ, ನಾಡಿನಲ್ಲಿಯೂ ಇರಲಿಲ್ಲ, ದೇಶದಲ್ಲಿಯೂ ಇರಲಿಲ್ಲ.
ಬಹಳ ಜನಕ್ಕೆ ಬಹಳ ಮಟ್ಟಿಗೆ ಒಪ್ಪಿಗೆಯಾಗಿತ್ತು-ಒಂದು ನುಡಿ ಒಂದು ನಾಡು
ಎಂಬ ತತ್ತ್ವ. ಅಸಹನೆಯ ಆಕ್ರೋಶ ಒಂದೇ ಸಮನೆ ನಡೆದಿದ್ದರೂ ಕುದಿಯುತ್ತಿದ್ದ
ಮೆದುಳನ್ನು ತಣ್ಣಗೆ ಇರಿಸಿಕೊಂಡಿದ್ದವರಿಗೆ, ಬೇರೆ ಹಾದಿಯೇ ಇಲ್ಲ ಎಂಬುದು
ಮನದಟ್ಟಾಗಿತ್ತು.
ನಾಡಿನೊಳಗಂತೂ ಕೆಲವೇ ತಿಂಗಳಲ್ಲಿ ಎಷ್ಟೊಂದು ಬದಲಾಗಿರಲಿಲ್ಲ ವಿಚಾರ
ಸರಣಿ! ವಿಲೀನ ವಿರೋಧಿಗಳ ಮಂಡ್ಯ ಸಮ್ಮೇಳನ, ಸಂಘಟಿಸಿದವರ ದೃಷ್ಟಿ
ಯಿಂದೇನೊ ಯಶಸ್ವಿಯಾಯಿತು. ಆದರೆ ಜನಮನವನ್ನು ಕನ್ನಡರಾಜ್ಯಕ್ಕಿದಿರಾಗಿ
ಹರಿಸುವ ಯತ್ನದಲ್ಲಿ ಏನೇನೂ ಸಫಲವಾಗಲಿಲ್ಲ. ಮೊದಲು ಉಸಿರೆತ್ತಿದೊಡನೆಯೆ
ಹೂಂಕರಿಸಿದ್ದವರು ಈಗ ಮೌನ ತಳೆದರು. ಮೊದಲು ಮೌನವಾಗಿದ್ದವರು ಈಗ ಬೆಂಬಲ ನೀಡಿದರು.
ನಂಜುಂಡಯ್ಯ - ಲಕ್ಕಪ್ಪಗೌಡರೊಳಗಿನ ವೈಷಮ್ಯ ಬಗೆಹರಿಯದೆ ಇದ್ದುದರಿಂದ,
ಉಪಾಧ್ಯಾಯರ ಕೊಠಡಿಯಲ್ಲೀಗ ಹೆಚ್ಚಿನ ಚರ್ಚೆ ಈ ವಿಷಯವಾಗಿ ಆಗಲಿಲ್ಲ.
ಅದರೂ ಹೊರಗೋ, ಬೀದಿ ನಡೆಯುತ್ತಿದ್ದಾಗಲೋ, ಜಯದೇವ ಅವರನ್ನು
ಕೇಳುವುದಿತ್ತು:
"ಈಗಲೂ ಅದೇ ಅಭಿಪ್ರಾಯವನ್ನೇ ಇಟ್ಕೊಂಡಿದೀರಾ ಗೌಡರೆ?"
"ಹೌದಪ್ಪ. ಅದೇ ಅಭಿಪ್ರಾಯ."
"ಏನೇ ಇರಲಿ. ನೀವು ಧೈರ್ಯವಂತರು. ಇಷ್ಟು ಒಪ್ಕೊಳ್ಲೇಬೇಕು!"


೨೦

ಹಳ್ಳಿಗೆ ಹೊರಟಿದ್ದ ತಿಮ್ಮಯ್ಯನವರೊಡನೆ ಸ್ವಲ್ಪ ದೂರ ನಡೆದು ಹಿಂತಿರುಗಿದ
ಜಯದೇವ, ಮನೆ ಸೇರಿ ದೀಪ ಹಚ್ಚುತ್ತಿದ್ದಂತೆ, ಹೊರಗಿನಿಂದ ನಂಜುಂಡಯ್ಯನವರ
ಸ್ವರ ಕೇಳಿಸಿತು:
"ಜಯದೇವ್, ಮನೇಲಿದೀರಾ?"
"ಇದೀನಿ ಬನ್ನಿ," ಎನ್ನುತ್ತ ಜಯದೇವ ಬಾಗಿಲ ಬಳಿಗೆ ಬಂದು ನಂಜುಂಡಯ್ಯ
ನವರನ್ನು ಸ್ವಾಗತಿಸಿದ.

"ರೇಡಿಯೋದಲ್ಲಿ ಸಾಯಂಕಾಲ ಒಳ್ಳೇ ಸುದ್ದಿ ಕೇಳ್ದೆ. ನಿಮಗೆ ತಿಳಿಸೋಣಾಂತ
ಬಂದೆ."


508

ಸೇತುವೆ

"ಏನು ವಿಶೇಷ?"
"ಅಕ್ಟೋಬರ್ ಮೊದಲ್ನೆ ತಾರೀಕು ಕರ್ನಾಟಕ ರಾಜ್ಯ ಸ್ಥಾಪನೆಯಾಗುತ್ತೆ.
ಲೋಕಸಭೇಲಿ ಇವತ್ತು ಮಸೂದೆ ಮಂಡಿಸಿದಾರೆ."
"ಸಂತೋಷದ ವಿಷಯ. ಬನ್ನಿ. ಕೂತ್ಕೊಳ್ಳಿ."
ಸುರುಳಿ ಸುತ್ತಿದ್ದ ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತ ನಂಜುಂಡಯ್ಯ
ಹೇಳಿದರು:
"ಆದರೆ ಒಂದು ವಿಷಯದಲ್ಲಿ ಮಾತ್ರ ನಾವು ಸೋತಿದೀವಿ. ಹೊಸ ಪ್ರಾಂತಕ್ಕೆ
ಹೆಸರು ಮೈಸೂರು ರಾಜ್ಯ ಅಂತಲೇ ಇರುತ್ತೆ."
ದೊರೆತಿದ್ದುದು ಅಮೃತವೇ. ಆದರೆ ಆ ಹೆಸರಿನಿಂದ ಕರೆಯುವ ಹಾಗಿರಲಿಲ್ಲ
ಅದನ್ನು!
ಸರಕಾರ ಮಾಡಿದ ಅನ್ಯಾಯವನ್ನು ಖಂಡಿಸುತ್ತ,ಮುಖಂಡರನ್ನು ಟೀಕಿಸುತ್ತ,
ನಂಜುಂಡಯ್ಯ ಬಹಳ ಹೊತ್ತು ಮಾತನಾಡಿದರು.
ಅದನ್ನೆಲ್ಲ ಕೇಳಿ ಜಯದೇವನೆಂದ:
"ಸರಕಾರ ತಾನೆ ಹೆಸರು ಇಟ್ಟಿರೋದು? ಜನ ಕರ್ನಾಟಕ ಅನ್ನೋ ಪದವನ್ನೆ
ಬಳಸಿದರೆ, ಅದೇ ಹೆಸರು ತನ್ನಿಂತಾನಾಗಿಯೇ ಸ್ಥಿರವಾಗುತ್ತೆ."
"ನಿಜ ಅನ್ನಿ. ಅಂತೂ ಆ ಮಂಡ್ಯದವರಿಗೆ ಮಂಗಳಾರತಿಯಾಯ್ತು."
[ಇನ್ನು ಅಣಕಿಸಿ ಆಗುವುದಾದರೂ ಏನು? ಅದರ ಅಗತ್ಯವಾದರೂ ಏನು?"
ಅವರು ಅಂತಹ ಮಾತನ್ನಾಡಿದರೆಂದು ಸುಮ್ಮನಿರುವುದೂ ಸಾಧ್ಯವಿರಲ್ಲಿಲ್ಲ.
"ಮೈಸೂರು ಹೀಗೆಯೇ ಉಳೀಬೇಕೂಂತ ಸಾಕಷ್ಟು ಪ್ರಯತ್ನ ಮಾಡಿದ್ರು,"
ಎಂದ ಜಯದೇವ. ಹಿಂದೆಯೊಂದು, ಮುಂದೆಯೊಂದು ಸಲ್ಲದು; ನಂಜುಂಡಯ್ಯ
ನೆದುರು ಆಡಿದ ಮಾತನ್ನು ಲಕ್ಕಪ್ಪಗೌಡರೆದುರೂ ಹೇಳುವಂತಿರಬೇಕು; ಈಗ ಆಡಿರುವ
ಮಾತು ಅಂಥದೇ - ಎಂದು ಜಯದೇವ ತನ್ನನ್ನೆ ಸಮಾಧಾನಪಡಿಸಿಕೊಂಡ.
ಆದರೆ ನಂಜುಂಡಯ್ಯನಿಗೆ ಆ ಮಾತು ಒಪ್ಪಿಗೆಯಾಗಲಿಲ್ಲ.
"ಅವರು ಪ್ರಯತ್ನಪಟ್ಟದ್ದು ಮೈಸೂರು ಹೀಗೆಯೇ ಉಳೀಬೇಕೂಂತ ಅಲ್ಲ-
ತಮ್ಮ ಅಧಿಕಾರ ಉಳೀಬೇಕೊಂತ."
ಆ ಅಭಿಪ್ರಾಯವನ್ನೊಪ್ಪುವ ಅಥವಾ ಟೀಕಿಸುವ ಗೊಡವೆಗೆ ಹೋಗದೆ
ಜಯದೇವನೆಂದ:
"ಈ ರಾಜಕೀಯ ಅನ್ನೋದು ಬಹಳ ಕೆಟ್ಟದ್ದು. ಮನುಷ್ಯನ ಕೈಲಿ ಅದು
ಮಾಡಿಸದ ಕೆಲಸವಿಲ್ಲ."
ನಂಜುಂಡಯ್ಯನವರು ಸ್ವಲ್ಪ ಭಿನ್ನವಾದ ರೀತಿಯಲ್ಲಿ ಅದೇ ಅಭಿಪ್ರಾಯವನ್ನು
ವ್ಯಕ್ತಪಡಿಸಿದರು:

"ರಾಜಕೀಯ ಒಂದು ಅನಿವಾರ್ಯವಾದ ಅನಿಷ್ಟ ಜಯದೇವ್.ಕೆಟ್ಟದು;

ನವೋದಯ

509

ಆದರೆ ಬಿಟ್ಟಿರೋದು ಸಾಧ್ಯವಿಲ್ಲ."
ಒಳಗೆಲ್ಲಾ ದೀಪವಿಲ್ಲದೆ ಇದ್ದುದನ್ನು ಗಮನಿಸಿ ನಂಜುಂಡಯ್ಯ ಹೇಳಿದರು:
"ಇದೇನು? ಈಗ ತಾನೆ ಬಂದಿರಾ ನೀವು?"
"ಹೌದು," ಎಂದ ಜಯದೇವ.
"ಅಡುಗೆ?"
"ಏನು ಮಹಾ ಅಡುಗೆ? ಮಾಡಿದರಾಯ್ತು."
"ಬೇಡಿ. ನಮ್ಮ ಮನೆಗೆ ಬಂದ್ಬಿಡಿ ಇವತ್ತು. ಮಹಾರಾಯಿತಿ ಏನು ಮಾಡಿ
ದಾಳೊ ಗೊತ್ತಿಲ್ಲ. ಆದರೂ ಬನ್ನಿ."
"ಪರವಾಗಿಲ್ಲ ಸಾರ್. ಯಾಕೆ ತೊಂದರೆ? ಇಲ್ಲೆ ಮಾಡ್ಕೊತೀನಿ."
"ತೊಂದರೆ ಎಂಥಾದ್ರಿ? ಬನ್ನಿ. ಇಷ್ಟೊಳ್ಳೆ ಸುದ್ದಿ ಬಂದಿರೋ ದಿವಸ ಊಟ
ಜತೇಲಿ ಮಾಡೋಣ."
ನಿರುಪಾಯನಾಗಿ ಜಯದೇವ, ಮತ್ತೆ ಮನೆಗೆ ಬೀಗ ತಗಲಿಸಿ ನಂಜುಂಡಯ್ಯ
ನವರ ಜತೆ ಹೊರಟ.
...ಶಾಲೆಗೆ ಬಂದ ಲಕ್ಕಪ್ಪಗೌಡರ ಮುಖ ಸಪ್ಪಗಿತ್ತು. ಜಯದೇವನನ್ನು
ಕಾಣುತ್ತಲೆ ಅವರೇ ಹೇಳಿದರು:
"ನಿಮ್ಮ ಇಷ್ಟದಂತೆಯೇ ಆಯಿತಲ್ಲ ಜಯದೇವರೆ."
"ನಿಮ್ಮದೇನು? ನಮ್ಮದೇನು? ದೇಶ ಎಲ್ಲರದೂ ಅಲ್ಲವೆ?"
"ನಂಜುಂಡಯ್ಯ ಇನ್ನು ನಮ್ಮನ್ನು ಹ್ಯಾಗೆ ನಡೆಸ್ಕೋತಾರೋ ನೋಡ್ಬೇಕು.
ಗೆದ್ದವರು ಸೋತವರ ವಿಷಯದಲ್ಲಿ ದಯೆ ತೋರಿಸ್ತಾರೋ ಇಲ್ಲವೋ."
"ಯಾರೂ ಗೆದ್ದಿಲ್ಲ ಯಾರೂ ಸೋತಿಲ್ಲ ಲಕ್ಕಪ್ಪಗೌಡರೆ. ಎಲ್ಲಾ ಬರಿಯ
ಭ್ರಮೆ."
ಲಕ್ಕಪ್ಪಗೌಡರು ನಸುನಕ್ಕು ಅಂದರು:
"ಆದರೆ ನಮ್ಮ ಸ್ನೇಹಿತರ ಕರ್ನಾಟಕ ಪ್ರಾಂತ ಮಾತ್ರ ಆಗಲಿಲ್ಲ."
"ಅಂದರೆ?"
"ನಮ್ಮ ಮೈಸೂರು ವಿಶಾಲವಾಗುತ್ತೆ ಅಷ್ಟೆ."
[ಜಯದೇವನಿಗೊಂದು ಗಾದೆ ನೆನಪಾಯಿತು: ಅಡಿಗೆ ಬಿದ್ದರೂ-]
ಉತ್ತರದ ಅಗತ್ಯವಿಲ್ಲವೆಂದು ಜಯದೇವ ನಕ್ಕ.
[ಕಟ್ಟೆಗಳೊಡೆದು ಸಾಗರದ ನೀರು ನುಗ್ಗಿ ಬಂದಿದ್ದರೂ ಸರೋವರ ಹೇಳು
ತಿತ್ತು: 'ನಾನೇ ಹೊರಕ್ಕೆ ಹರಿದು ವಿಶಾಲವಾಗ್ತಿದೀನಿ.']
...ರಾಮಾಚಾರಿಗೆ ಆ ವಿಷಯದಲ್ಲಿ ತೀಕ್ಷ್ಣವಾದ ಅಭಿಪ್ರಾಯವೇನೂ ಈಗ
ಇರಲಿಲ್ಲ. ಬದಲಾಗುತ್ತಿದ್ದ ಕಾಲಕ್ಕೆ ಹೊಂದಿಕೊಳ್ಳಲು ಆತ ಸಿದ್ಧನಾಗುತ್ತಿದ್ದ.
ಆತನೆಂದ:

510

ಸೇತುವೆ

"ಸಂಸ್ಥಾನ ವಿಸ್ತಾರವಾದ್ಮೇಲೆ ನಮ್ಮನ್ನೂ ದೂರ ದೂರಕ್ಕೆ ಅವರು ವರ್ಗ
ಮಾಡಿದರೆ ವಾಸಿ."

****

ಪಂಚಾಯತ್ ಬೋರ್ಡು ಚುನಾವಣೆ ಮುಗಿಯಿತು. ಶಂಕರಪ್ಪನವರ ಪಂಗಡವೇ
ಬಹುಮತದಿಂದ ಆರಿಸಿ ಬಂತು.
ನಂಜುಂಡಯ್ಯ ಪರಮ ಸಂತುಷ್ಟರಾಗಿ ಹೇಳಿದರು:
"ಇನ್ನು ಶಾಲೆಯ ಕಟ್ಟಡದ ಕೆಲಸ ಸಸೂತ್ರವಾಗಿ ಸಾಗುತ್ತೆ."

****

ಯುಗಾದಿಗೆ ಹಿಂದಿನ ದಿನ ಸುನಂದೆಯ ಕಾಗದ ಬಂತು.
"ನೀವಿಲ್ಲದೇ ಹೊಸ ವರ್ಷ ಆರಂಭವಾಗ್ತಿದೆ. ಬೇಜಾರು. ಮನ್ಮಥ ಸಂವತ್ಸರ
ಚೆನ್ನಾಗಿತ್ತು. ಇನ್ನು ಬರುವುದು ದುರ್ಮುಖಿಯಂತೆ. ಯಾರು ಹೆಸರಿಟ್ಟರೊ?
ನಾವಂತೂ ಒಳ್ಳೆಯ ಹೆಸರನ್ನೆ ಆರಿಸಬೇಕು. ಹೆಸರು ಯಾಕೆ ಅಂತ ತಿಳೀತು ತಾನೆ?
ಹೇಳಿ; ಬರೆಯಿರಿ. ನಿಮಗೆ ಯಾವ ಹೆಸರು ಇಷ್ಟ?"

****

ಯುಗಾದಿಗೆ ಮಾರನೆಯ ದಿನ ಪ್ರೌಢಶಾಲೆಯ ಕಟ್ಟಡದ ಕೆಲಸ ಮೊದಲಾ
ಯಿತು. ಪಂಚಾಯತ್ ಬೋರ್ಡ್ ಅಧ್ಯಕ್ಷ ಶಂಕರಪ್ಪನವರೇ ನಿಂತು, ಆ ಸಮಾ
ರಂಭವನ್ನು ನಡೆಸಿಕೊಟ್ಟರು.

****

ಬಿಸಿಲು ಹೆಚ್ಚುತ್ತಿತ್ತು ಹೊರಗೆ. ಆಕಾಶದಲ್ಲಿ ಎಲ್ಲೆಲ್ಲೂ ಬಿಳಿಯ ಮೋಡ.
ಎಲ್ಲರೂ ಹೇಳುತ್ತಿದ್ದರು:
"ಅಸಾಧ್ಯ ಸೆಖೆ! ಭಾರೀ ಸೆಖೆ!"
ಹಸಿರು ಒಣಗಿ ದನಕರುಗಳು ಬಾಯಿ ಬಿಟ್ಟುವು. ಒಣಗಿ ಒಡೆದಿದ್ದ ನೆಲದಲ್ಲಿ
ಕಂಬನಿಯೊಸರುವಷ್ಟೂ ತೇವವಿರಲಿಲ್ಲ.
“ಶಾಲೆಗೆ ಈ ಸಮಯದಲ್ಲಿ ರಜಾ ಕೊಟ್ಟಿದ್ದರೆ ಚೆನ್ನಾಗಿತ್ತು," ಎಂದರು
ತಾಯ್ತಂದೆಯರು.
ಆದರೆ ಆಗ ಕೊಡಲು ರಜಾ ಇದ್ದರಲ್ಲವೆ?
ಹೊರಗೆ ಹಾಗೆ ದಹಿಸುತ್ತಿದ್ದರೂ ಜಯದೇವನ ಒಳಗು ಸದಾ ಹಸುರಾಗಿಯೇ
ಇತ್ತು. ಬಿಸಿಲಲ್ಲಿ ಬಾಡುತ್ತಿದ್ದರೂ ತುಂಟ ಆಟಗಳನ್ನಾಡುತ್ತಿದ್ದ ಎಳೆಯ ಮಕ್ಕಳು,
ಅವರ ನಗೆ, ಕಲರವ, ನಿಮಿಷದ ಸ್ನೇಹ, ನಿಮಿಷದ ಜಗಳ, ಎಲ್ಲವೂ ಆತನಿಗೆ ಪ್ರಿಯ
ವಾಗಿದ್ದುವು. ಅವರ ಆಟಪಾಠಗಳೊಡನೆ ಆತ ಸಮರಸನಾದ.

ನವೋದಯ

511

ಭವಿಷ್ಯತ್ತಿನ ಆದರ್ಶ ಜೀವನದ ಕನಸು ಕಾಣುತ್ತಿದ್ದ ವಿದ್ಯಾರ್ಥಿ ದೆಸೆಯಿಂದ
ಹಿಡಿದು ಈ ವರೆಗೆ, ಎಷ್ಟೊಂದು ದೂರ ನಡೆದು ಬಂದಿದ್ದ ಜಯದೇವ! ಈಗಲೂ
ಭವಿಷ್ಯತ್ತಿನ ಬಗೆಗೆ ಕನಸುಗಳು ಆತನಲ್ಲಿ ಹೇರಳವಾಗಿದ್ದುವು. ಮಣ್ಣು ಒಣಗಿತೆಂದು,
ಹೆಚ್ಚು ಹಸಿಯಾಯಿತೆಂದು, ಒರಟಾಯಿತೆಂದು, ಅತಿ ನಯವಾಯಿತೆಂದು, ದಕ್ಷನಾದ
ಶಿಲ್ಪಿ ಮೂರ್ತಿಯ ಸೃಷ್ಟಿಯನ್ನು ಅರ್ಧದಲ್ಲೆ ಕೈ ಬಿಡುವುದುಂಟೆ? ಹಾಗೆಯೇ
ಜಯದೇವನೂ.
ಹಿಂದೆ ಆತ ವಿದ್ಯಾಸರಸ್ವತಿಯ ಮಂದಿರಕ್ಕೆ ಬಂದಿದ್ದ, ಅನನ್ಯ ಭಕ್ತಿಯಿಂದ.
ಆದರೆ ಬಾಗಿಲು ಎಂದು ಭಾವಿಸಿ ಒಳನುಗ್ಗಿದಲ್ಲಿ ಬಂಡೆಕಲ್ಲು ಮೆಲ್ಲನೆ ಮೂಗಿಗೆ
ಸೋಂಕಿತ್ತು.
ಮೆಲ್ಲನೆ ಸೋಂಕಿತ್ತು, ಅಷ್ಟೆ. ಮೂಗನ್ನೊಡೆದಿರಲ್ಲಿಲ್ಲ.
ಈಗ, ಪ್ರಗತಿಗೆ ಕಂಟಕವಾದ ಬಂಡೆಕಲ್ಲನ್ನು ಒಡೆಯಬೇಕು ಎಂಬುದನು ಆತ
ತಿಳಿದಿದ್ದ.
ಆದರೆ ಸಾಧ್ಯವಾಗುತ್ತಿರಲಿಲ್ಲ: ಬಾರಿ ಬಾರಿಗೂ ಬಳಸಿ ಹೋಗಬೇಕಾಗುತ್ತಿತ್ತು.
ಹಾಗೆಂದು ಕೊನೆಯವರೆಗೂ ಪರಿಸ್ಥಿತಿ ಇರುವುದುಂಟೆ?
ಪ್ರಪಂಚದಲ್ಲಿ ಒಳ್ಳೆಯ ಜನರೂ ಇದ್ದರು; ಕೆಟ್ಟ ಜನರೂ ಇದ್ದರು. ಒಳ್ಳೆಯ
ಜನ ಒಂದಾಗಿ ಅವರ ಬಲ ಹೆಚ್ಚಿದಷ್ಟೂ ಕೆಟ್ಟ ಜನರ ಶಕ್ತಿ ಕುಂದುವುದು; ಅವರು
ಬದಲಾಗುವರು, ಇಲ್ಲವೆ ಮಣ್ಣಾಗುವರು...
ಹೊಸ ನಾಡಿನ ಉದಯ. ಒಬ್ಬ ವ್ಯಕ್ತಿಯದಲ್ಲ, ಸಹಸ್ರ ಸಹಸ್ರ ಜನರ ಕನಸು
ಗಳು ಏಕೀಭವಿಸಿ ಕಾರ್ಯವಾಗುತ್ತಿರುವ ಅಪೂರ್ವ ಸನ್ನಿವೇಶ.
ಅದು ಒಳ್ಳಿತಿಗೋಸ್ಕರವೆ ಆಗುವ ಬದಲಾವಣೆ. ಅದರಿಂದ ಕೆಡುಕಾಗಬಾರದು;
ಕೆಡುಕಾಗಲಾರದು. ಸುಪ್ತ ಶಕ್ತಿಗಳು ಎಚ್ಚರಗೊಂಡಾಗ, ಜಾಗೃತ ಜನಸ್ತೋಮದ
ಧಮನಿಯಲ್ಲಿ ಸ್ವಾಭಿಮಾನದ ಶೌರ್‍ಯದ ರಾಷ್ಟ್ರಪ್ರೇಮದ ಪವಿತ್ರ ರಕ್ತ ಸಂಚಾರ
ವಾದಾಗ, ಜನತೆಗೆ ಒಳಿತಾಗದೆಂದು ಹೇಳುವವರು ಯಾರು?
ಬದುಕನ್ನು ಹಸನುಗೊಳಿಸಲು, ಸಮಾಜವನ್ನು ಈಗಿನ ಸ್ಥಿತಿಯಿಂದ ಊರ್ಜಿತ
ಸ್ಥಿತಿಗೆ ಒಯ್ಯಲು, ವಿದ್ಯೆಯೇ ಅತ್ಯಂತ ಮುಖ್ಯ ಸಾಧನವೆ೦ದು ಜಯದೇವ ತಿಳಿದಿದ್ದ.
ಪ್ರಜ್ಞೆ_ಬೋಧೆ.
ವಿದ್ಯೆ_ಸಂಸ್ಕಾರ.
ಆತನಿಗೆ ಗೊತ್ತಿತ್ತು, ಅದು ಮಹಾಯಜ್ಞ ವೆಂಬುದು.
ಯಜ್ಞಪಶುವಾಗಿಯಲ್ಲ, ವಟುವಾಗಿ ಆತ ಅಲ್ಲಿಗೆ ಬಂದ್ದಿದ್ದ.
ಆ ಕಡು ಬೇಗೆಯ ಬಳಿಕ ಮಳೆ ಹನಿಯಲೇಬೇಕು. ಗಿಡಗುಂಟೆಗಳು ಚಿಗು
ರೊಡೆಯಲೇಬೇಕು. ನೆಲ ಹಸುರಾಗಲೇಬೇಕು.

512

ಸೇತುವೆ

ಕತ್ತಲು ಕಳೆದು ಬೆಳಕಾಗಲೇಬೇಕು.

****

ಮನೆಗೆ ಬಂದ ಜಯದೇವ ಕದ ತೆರೆದಾಗ, ಅಂಚೆಯವನು ಒಳಕ್ಕೆಸೆದು
ಹೋಗಿದ್ದ ಲಕೋಟೆ ಸಿಕ್ಕಿತು.
[ವೇಣುವಿನ ಹಸ್ತಾಕ್ಷರ. ಶಾಲೆಗೆ ತಾನು ಹೋಗುವುದಕ್ಕೆ ಮುಂಚೆಯೆ ತನ್ನ
ಕೈಸೇರಬೇಕೆಂದು ಮನೆಯ ವಿಳಾಸಕ್ಕೆ ಬರೆದಿದ್ದನೇನೊ. ಆದರೆ ತನಗೆ ಅದು ತಲಪಿದುದು
ಮಾತ್ರ ತಡವಾಗಿ, ಈಗ.]
ಕಾತರ. ಏನಾಗಿದೆಯೊ, ಏನಾಗಿದೆಯೊ ಸುನಂದೆಗೆ?
ದೀಪ ಹಚ್ಚಿಕೊಳ್ಳದೆಯೇ ಜಯದೇವ ಲಕೋಟೆ ಹರಿದ.
ಆ ಮಬ್ಬು ಬೆಳಕಿನಲ್ಲೂ ಅಕ್ಷರಗಳು ಸ್ಪಷ್ಟವಾಗಿ ಕಾಣಿಸಿದುವು:
"ಸುನಂದೆಗೆ ಹೆರಿಗೆಯಾಯಿತು. ಗಂಡು. ಸುಖಪ್ರಸವ. ತಾಯಿ ಮಗು
ಇಬ್ಬರೂ ಆರೋಗ್ಯವಾಗಿದಾರೆ. ರಜಾ ದೊರಕಿಸಿಕೊಂಡು ಬಂದು ಹೋಗು."


.

ಅನುಬಂಧ

೧. ರಂಗಮ್ಮನ ವಠಾರ

ಪ್ರಥಮ ಮುದ್ರಣ 1954
ದ್ವಿತೀಯ ಮುದ್ರಣ 1976
ತೃತೀಯ ಮುದ್ರಣ 1977
ಮಲಯಾಳಂನಲ್ಲಿ ರಂಗಮ್ಮೆಯುಡೆ ವಾಡಗಪದಂಬು 1980


ಅರ್ಪಣೆ


ಅಕಾಲ ಮೃತ್ಯುವಿಗೆ ತುತ್ತಾದ

ಖ್ಯಾತ ಪತ್ರಿಕೋದ್ಯೋಗಿ-ಬರೆಹಗಾರ

ಮಾರ್ಪಳ್ಳಿ ಹರಿದಾಸರಾವ

ಅವರ ನೆನಪಿಗೆ

514

ಸೇತುವೆ

ದ್ವಿತೀಯ ಮುದ್ರಣದ ಮುನ್ನುಡಿ

ಎರಡು ದಶಕ ದಾಟಿದ ಮೇಲೆ

ಓದುಗರು ಕಳೆದ ಕೆಲ ವರ್ಷಗಳಲ್ಲಿ ಆಗಾಗ್ಗೆ 'ರಂಗಮ್ಮನ ವಠಾರ'ದ ಮಾತೆ
ತ್ತಿದ್ದಾರೆ. ವಿಮರ್ಶಕರೂ ಅದರ ಪ್ರಸ್ತಾಪ ಮಾಡಿದ್ದಾರೆ. ಓದದೆ ಇರುವವರು
"ಪುಸ್ತಕ ಎಲ್ಲಿ ಸಿಗುತ್ತದೆ?" ಎಂದು ಕೇಳುತ್ತ ಬಂದಿದ್ದಾರೆ.
ಅದನ್ನು ಗಮನಿಸಿ, 'ರಂಗಮ್ಮನ ವಠಾರ'ದ ಹೊಸ ಆವೃತ್ತಿಯನ್ನು ಕಥಾ
ಸಾಹಿತ್ಯ ಹೊರತರುತ್ತಿದೆ.
ವಠಾರ, ಕೊಠಡಿ, ಹೊರಮನೆ, ಜೋಡಿಮನೆ_ಚಿಕ್ಕಂದಿನಿಂದಲೂ ನನಗೆ
ಪರಿಚಿತ. ನೀಲೇಶ್ವರ, ಮಂಗಳೂರು, ಬೆಂಗಳೂರು [ಮಲ್ಲೇಶ್ವರ, ಚಾಮರಾಜಪೇಟೆ,
ಬಸವನಗುಡಿ, ವಿಲ್ಸನ್ ಗಾರ್ಡನ್], ಹುಬ್ಬಳಿ, ಧಾರವಾಡ.... ಇಲ್ಲೆಲ್ಲ, ವಠಾರದಲ್ಲೋ
ಕೊಠಡಿಯಲ್ಲೋ ಹೊರಮನೆಯಲ್ಲೋ ಜೋಡಿ ಮನೆಯಲ್ಲೋ ನಾನು
ನೆಲೆಸಿದವನು. ಮಿತ್ರರು ವಾಸಿಸುತ್ತಿದ್ದ ಇಂಥ ಹಲವು ವಸತಿಗಳೂ ನನಗೆ ಪರಿಚಿತ.
ಜೀವನದ ಇರುವಿಕೆಗೆ ಸಂಬಂಧಿಸಿದ ಸಾಮಗ್ರಿ ಹೀಗೆ ನನಗೆ ಒದಗಿ ಬಂದಿದೆ. ಕಾಲ್ಪನಿಕ
'ರಂಗಮ್ಮನ ವಠಾರ' ವಾಸ್ತವಿಕವೆಂದು ಕಾಣುವುದು ಈ ಕಾರಣದಿಂದ.
ಒಂದು ವಠಾರದಲ್ಲಿ ರಂಗಮ್ಮ ಎಂಬ ವ್ಯಕ್ತಿಯೂ ಒಬ್ಬರಿದ್ದರು. ನಾನು
ಗೌರವಿಸಿದ ಜೀವ. ಕಾದಂಬರಿ ನನ್ನ ವಠಾರಕ್ಕೆ ಅವರ ಹೆಸರನ್ನಿಟ್ಟಿರುವುದು
ಸಾಂಕೇತಿಕವಾಗಿ. ಇಲ್ಲಿನ ರಂಗಮ್ಮ ಮಾತ್ರ ನನ್ನ ಕಲ್ಪನೆಯ ಸೃಷ್ಟಿ, _ ಇತರ ಎಲ್ಲ
ಪಾತ್ರಗಳ ಹಾಗೆ.
ಎರಡು ದಶಕ ದಾಟಿದ ಮೇಲಾದರೂ ಈ ಬಗೆಗೆ ವಿವರಣೆ ನೀಡಲು ಅವಕಾಶ
ದೊರೆತಿದೆಯೆಂದು ನನಗೆ ಸಮಾಧಾನವೆನಿಸಿದೆ.



28 ಫೆಬ್ರವರಿ 1976

ಜಯನಗರ-ದಕ್ಷಿಣ

ನಿರಂಜನ

ಬೆಂಗಳೂರು 560 041

ತಮ್ಮ ಕೈ ಹೊತ್ತಗೆ (ಪುಸ್ತಕದ ಬೆಲೆ ಒಂದೂವರೆರೂಪಾಯಿ) ಸರಣಿಯಲ್ಲಿ
'ರಂಗಮ್ಮನ ವಠಾರ'ವನ್ನು ಮೊದಲ ಬಾರಿ ಬೆಳಕಿಗೆ ತಂದ ಶ್ರೀ ಎಂ. ಎಸ್.
ಚಿಂತಾಮಣಿ ಅವರ ನೆನಪು ನನ್ನ ಪಾಲಿಗೆ ಸದಾ ಹಸುರು. ಅವರಿಗೆ ಋಣಿ.

ಸೇತುವೆ

515

೨. ದೂರದ ನಕ್ಷತ್ರ
ಪ್ರಥಮ ಮುದ್ರಣ 1954
ದ್ವೀತಿಯ ಮುದ್ರಣ 1956

ಆರ್ಪಣೆ

ನಾಡಿನ ನವಚೇತನದ ನಿರ್ಮಾತೃಗಳಾದ

ಬಡ ಶಾಲಾ ಉಪಾಧ್ಯಾಯರಿಗೆ

516

ಪ್ರಥಮ ఆವೃತ್ತಿಯ ಮುನ್ನುಡಿ
ಓದುಗರೊಡನೆ

ಸೇತುವೆ



ಈಗ ನನ್ನ ಇನ್ನೊಂದು ಕಾದಂಬರಿ ನಿಮ್ಮ ಮುಂದಿದೆ. 'ವಿಮೋಚನೆ',
'ಬನಶಂಕರಿ', 'ಅಭಯ' ಕಾದಂಬರಿಗಳಿಗೆ ಸಹೃದಯರಾದ ನೀವು ನೀಡಿದ ಸ್ವಾಗತವೇ
'ದೂರದ ನಕ್ಷತ್ರ'ಕ್ಕೂ ದೊರೆಯುವುದೆಂದು ನಾನು ನಂಬಿದ್ದೇನೆ.
ಉಪಾಧ್ಯಾಯರ [ಶಾಲಾ ಶಿಕ್ಷಕರು, ಅಧ್ಯಾಪಕರು, ಮಾಸ್ತರರು] ಜೀವನದ
ಮೇಲೆ ಕನ್ನಡದಲ್ಲಿ ಸಣ್ಣ ಕತೆ, ಕಾದಂಬರಿ, ಏಕಾಂಕ ನಾಟಕಗಳು ಈಗಾಗಲೇ ಪ್ರಕಟ
ವಾಗಿವೆ. ಅವುಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದಂಥವು: ಕಾರಂತರ 'ಮುಗಿದ
ಯುದ್ಧ' ಮತ್ತು ಮಿರ್ಜಿ ಅಣ್ಣಾರಾಯರ 'ರಾಮಣ್ಣ ಮಾಸ್ತರು.' ಕಾರಂತರ
ಕೃತಿಯ ತತ್ತ್ವಜ್ಞಾನವನ್ನು ಒಪ್ಪುವುದು ಸಾಧ್ಯವಾಗದೇ ಹೋದರೂ ಅದೊಂದು
ವಾಸ್ತವವಾದಿ ಪರಂಪರೆಯ ಒಳ್ಳೆಯ ಕಲಾಕೃತಿ ಎ೦ದು ಧಾರಾಳವಾಗಿ ಹೇಳಬಹುದು.
ಅಣ್ಣಾರಾಯರ ಕೃತಿಗೆ ಹಿನ್ನೆಲೆ, ೧೯೪೬ ರಲ್ಲಿ ಮುಂಬಯಿ ಪ್ರಾಂತದಲ್ಲಿ ನಡೆದ
೪೦,೦೦೦ ಪ್ರಾಥಮಿಕ ಶಿಕ್ಷಕರ ಮುಷ್ಕರ. ಅದರಲ್ಲಿ ಪ್ರಧಾನವಾಗಿರುವುದು ಉಪಾ
ಧ್ಯಾಯ ಜೀವನದ ಆರ್ಥಿಕ ಮುಖ, ರಚನೆಯಲ್ಲಿ ನೀಳ್ಗತೆಯ ಸ್ವರೂಪವನ್ನಷ್ಟೇ
ತೋರಿದರೂ ಆ ಕೃತಿ ವಾಸ್ತವವಾದಿ ಪರಂಪರೆಯದೇ ಆದ ಒಳ್ಳೆಯ ಕೃತಿ. ಇಲ್ಲಿ
ಇನ್ನೊಂದು ಕಾದಂಬರಿಯನ್ನು ಉಲ್ಲೇಖಿಸಬಹುದು. ಅದು ತ. ರಾ. ಸು. ಅವರ
'ಬೆಂಕಿಯ ಬಲೆ'. ಈ ಪುಸ್ತಕ, ಪೂರ್ಣವಾಗಿ ಅಲ್ಲವಾದರು ಹೆಚ್ಚಿನಂಶ, ಉಪಾಧ್ಯಾಯ
ಜೀವನವನ್ನು ವಾಸ್ತವಿಕವಾಗಿ ಚಿತ್ರಿಸಿದೆ.
ಇಷ್ಟಿದ್ದರೂ ವಿದ್ಯಾ ಕ್ಷೇತ್ರದಿಂದಲೇ ಈ ಕಾದಂಬರಿಗೆ ವಸ್ತುವನ್ನು ಆಯ್ದು
ಕೊಂಡಿದ್ದೇನೆ. ಇದಕ್ಕೆ ಕಾರಣ ಆ ಕ್ಷೇತ್ರದ ವೈಶಾಲ್ಯ, ಇದೊಂದೇ ಅಲ್ಲ, ಇನ್ನಷ್ಟು
ಕೃತಿಗಳಿಗೆ ಆ ಕ್ಷೇತ್ರ ವಸ್ತುವನ್ನೊದಗಿಸುವುದರಲ್ಲೂ ಸಂದೇಹವಿಲ್ಲ.
ಈ ಕಾದಂಬರಿ, ಹಲವು ಉಪಾಧ್ಯಾಯರೊಡನೆ ನನ್ನ ಒಡನಾಟದ ಹಾಗೂ
ದೀರ್ಘಕಾಲದ ಸೂಕ್ಷ್ಮ ನಿರೀಕ್ಷಣೆಯ ಫಲ. ನನ್ನ ಪಾತ್ರಗಳು ಜೀವಂತ ವ್ಯಕ್ತಿಗಳ
ವ್ಯಂಗ್ಯ ಚಿತ್ರಗಳಲ್ಲ, ಅಥವಾ ಪ್ರತಿರೂಪಗಳೂ ಅಲ್ಲ. ವಾಸ್ತವತೆಯ ಕುಂಚದಲ್ಲಿ
ಈ ಕಾಲ್ಪನಿಕ ಚಿತ್ರಗಳನ್ನು ಬರೆದಿದ್ದೇನೆ. ವಿದ್ಯಾ ಸಮಸ್ಯೆಯ ಹಿನ್ನಲೆಯಲ್ಲಿ ಮಾನವೀ
ಯವಾದ ಕಥೆಯನ್ನು ಬರೆಯಲು ಯತ್ನಿಸಿದ್ದೇನೆ.

ಇತ್ತೀಚೆಗೆ, 'ದೂರದ ನಕ್ಷತ್ರ'ವನ್ನು ನಾನು ಬರೆಯುತ್ತಿದ್ದಾಗಲೆ ಬೆಂಗಳೂರಲ್ಲಿ
ಮೈಸೂರು ಸಂಸ್ಥಾನದ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ಉಪಾಧ್ಯಯರೆಲ್ಲರ
ಸಮ್ಮೇಳನ ಜರಗಿತು. ಹಿರಿಯ ವಿದ್ಯಾತಜ್ಞರೊಬ್ಬರ ಆಹ್ವಾನದ ಮೇರೆಗೆ ಸಂದರ್ಶಕ
ನಾಗಿ ಹೋಗಿ ಉಪಾಧ್ಯಾಯರ ಜತೆಯಲ್ಲಿ ಕುಳಿತು ವಿಧವಿಧದ ಭಾಷಣಗಳಿಗೆ ಕಿವಿ
ಗೊಟ್ಟೆ. ಅಲ್ಲಿ ನನ್ನ ಕಾದಂಬರಿಯ ಪಾತ್ರಗಳ ಸಾಮೂಹಿಕ ಸ್ವರೂಪವನ್ನು ಕಂಡೆ.

ಸೇತುವೆ

517

ಈ ಅನುಭವ, ನನ್ನ ಪಾತ್ರಗಳು ಹೆಚ್ಚು ಸ್ಫುಟಗೊಳ್ಳಲು ಸಹಾಯಕವಾಯಿತು.
ಈ ಕಾದಂಬರಿಯಲ್ಲಿ ಒಂದೆಡೆ ಹೀಗಿದೆ:
ಜಯದೇವನೊ ಭ್ರಮೆ ಇಟ್ಟುಕೊಂಡೇ ಬಂದಿದ್ದ. ವಿದ್ಯಾ ಸರಸ್ವತಿಯ
ಮಂದಿರಕ್ಕೇ ಬಂದಿದ್ದ, ಅನನ್ಯ ಭಕ್ತಿಯಿಂದ. ಅದರೆ ಬಾಗಿಲು ಎಂದು ಭಾವಿಸಿ ಒಳ
ನುಗ್ಗಿದಲ್ಲೇ ಬಂಡೆ ಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು....
[ಪುಟ ೧೦೭]
ಅದು ಉಚ್ಚ ಆದರ್ಶಗಳನ್ನಿರಿಸಿಕೊಂಡು ಉಪಾಧ್ಯಾಯನಾಗಲು ಹೊರಟ
ವಿದ್ಯಾವಂತ ತರುಣನಿಗಾದ ಅನುಭವ.
ಆದರೆ ಆತ ನಿರಾಶಾವಾದಿಯಲ್ಲ. ಒಂದು ವರ್ಷದ ಉಪಾಧ್ಯಾಯ ಜೀವನದ
ಕೊನೆಯಲ್ಲಿ_
ವಾಸ್ತವತೆ ಅಣಕಿಸಿದ್ದರೂ ಜಯದೇವ ಸೋತಿರಲಿಲ್ಲ. ಜೀವನ, ಕಟು ಸತ್ಯ
ಗಳನ್ನು ತಿಳಿಸಿಕೊಟ್ಟು ಆತನ ದೃಷ್ಟಿಯನ್ನು ಸ್ವಚ್ಛಪಡಿಸಿತ್ತು.
ಹೃದಯದಲ್ಲಿ ಹುಮ್ಮಸ್ಸಿತ್ತು; ಬಲವಿತ್ತು ಬಾಹುಗಳಲ್ಲಿ.
ತನ್ನ ಬದುಕಿನ ಗುರಿ ದೂರವಿದ್ದಂತೆ_ ಬಲು ದೂರವಿದ್ದಂತೆ_ಆತನಿಗೆ ಕಂಡರೂ
"ಹಾದಿಯನ್ನು ನಾನು ಬಲ್ಲೆ; ಗುರಿ ಸೇರಬಲ್ಲೆ" ಎಂದು ಆತ್ಮ ವಿಶ್ವಾಸದಿಂದ ಒಳದನಿ
ಉಸುರುತಿತ್ತು.
[ಪುಟ ೧೬೩]

****

ಸಾಹಿತ್ಯ ಸೃಷ್ಟಿಯಲ್ಲಿ ಓದುಗರ ಪಾತ್ರ ಮಹತ್ತರವಾದುದೆಂದು ಸಾರುತ್ತ ಬಂದಿ
ರುವ ನಾನು, ಬರೆಹಗಾರನೊಡನೆ ನೇರವಾದ ಸಂಬಂಧವಿಡುತ್ತಿರುವ ಓದುಗರಿಗೆ ಇಲ್ಲಿ
ಅಭಿವಂದನೆ ಸಲ್ಲಿಸ ಬಯಸುವೆ. ಎಂದಿನಂತೆ ಈ ಕೃತಿಯ ವಿಷಯದಲ್ಲೂ ತಮ್ಮ ಸ್ಪಷ್ಟ
ಅಭಿಪ್ರಾಯಗಳನ್ನು ಓದುಗರು ನನಗೆ ಬರೆದು ತಿಳಿಸುವರೆಂಬ ನಂಬಿಕೆ ಇದೆ.
ಈ ಕಾದಂಬರಿಯ ರಚನೆಯ ಕಾರ್ಯದಲ್ಲಿ ನೆರವಾದ ಮೈಸೂರು ಸಂಸ್ಥಾನದ
ಪ್ರಸಿದ್ಧ ವಿದ್ಯಾ ಪರಿಣತರೊಬ್ಬರಿಗೂ ಪ್ರಕಟಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟು ಈ
ಕೃತಿಯನ್ನು ಪ್ರಕಟಿಸಿದ ಜನತಾ ಪಬ್ಲಿಕೇಷನ್ಸ್ ನ ಒಡೆಯರಾದ ಶ್ರೀ ಸಿ. ಗೋಪಾಲ
ರಾಯರಿಗೂ ಅಂದವಾದ ಮುಖಚಿತ್ರವನ್ನು ಬರೆದುಕೊಟ್ಟು ಕಲಾವಿದ ಶ್ರೀ ಎಂ.ಟಿ.ವಿ.
ಆಚಾರ್ಯರಿಗೂ ಮುದ್ರಣ ಕಾರ್ಯದಲ್ಲಿ ನೆರವಾದ ಶ್ರೀ ಎಸ್. ಕೆ. ನಾಡಿಗ್ ಅವರಿಗೂ
ಶೀಘ್ರ ಮುದ್ರಣದ ಭಾರ ಹೊತ್ತ ವಸಂತ ಪ್ರೆಸ್ ಒಡೆಯರಾದ ಶ್ರೀ ವೈ. ವಿ. ಲಕ್ಷ್ಮೀ
ನಾರಾಯಣರಾಯರಿಗೂ ನೆನಕೆಗಳು ಸಲ್ಲಬೇಕು.


ನಿರಂಜನ

10 ಮೇ, 1954

ವಿಲ್ಸನ್ ಗಾರ್ಡನ್

ಬೆಂಗಳೂರು-2

518

ಸೇತುವೆ

ದ್ವಿತೀಯ ಮುದ್ರಣದಲ್ಲಿ

ಮೊದಲ ಮಾತು

(ಮೊದಲ ಮುದ್ರಣದ ಮುನ್ನುಡಿಯಿಂದ ಪೂರ್ವಾರ್ಧವನ್ನು ಉದ್ಧರಿಸಿ,
ಮುಂದುವರಿಸಿದ್ದು)

****

ಇಂತಹ ಚಿತ್ರಣವನ್ನು ಓದುಗರ ಮುಂದಿರಿಸಿದಾಗ, ಒಳಗೊಂದು ಅಳುಕು
ನನ್ನನ್ನು ಬಾಧಿಸುತ್ತಿತ್ತು. ಆ ಅಳುಕಿಗೆ ಕಾರಣವಿಷ್ಟೆ. ವಿಚಾರದ ಅಂಶವೂ ಕಲೆಯ
ಅಂಶವೂ ಸೃಷ್ಟಿ ಸಾಹಿತ್ಯದಲ್ಲಿ ಸರಿಸಮಾನವಾಗಿರಬೇಕೆಂಬ-ಸಮರಸಗೊಂಡಿರಬೇಕೆಂಬ-
ಅಭಿಪ್ರಾಯ ಕನ್ನಡದಲ್ಲಿ ತೀರಾ ಇತ್ತೀಚಿನದು. ನಮ್ಮಲ್ಲಿ ವಿಪುಲವಾಗಿ ಸೃಷ್ಟಿಯಾಗು
ತ್ತಿರುವುದು, ಮನೋರಂಜನೆಯೊಂದೇ ಗುರಿಯಾಗುಳ್ಳ ಸಾಹಿತ್ಯ. ಓದುಗರ ಅಭಿ
ರುಚಿ ಹೆಚ್ಚಾಗಿ ರೂಪುಗೊಂಡಿರುವುದೂ ఆ ದಿಕ್ಕಿನಲ್ಲೇ. ಹೀಗಿರುತ್ತ, ಸಿಹಿ ಎಂದು
ನಾಲಗೆ ಚಪ್ಪರಿಸುವವರಿಗೆ ಶುಂಠಿಸಕ್ಕರೆಯನ್ನು ಕೊಡಲು ಹೊರಡುವುದು ಸುಲಭದ
ಕೆಲಸ ಹೇಗಾದೀತು?
ಆದರೆ ಕನ್ನಡ ಓದುಗರು ಆ ಭಯವನ್ನು ಬಹಳ ಮಟ್ಟಿಗೆ ನಿವಾರಣೆ ಮಾಡಿರು
ವರೆನ್ನುವುದು ವಿಚಾರಪರರೆಲ್ಲರಿಗೂ ಸಮಾಧಾನದ ವಿಷಯ; ಮನೋರಂಜನೆಯ
ಜತೆಗೆ ವಿಚಾರ ಪ್ರಚೋದನೆಯನ್ನೂ ಮಾಡಬಯಸುವ ಬರೆಹಗಾರರೆಲ್ಲರಿಗೂ
ಸಂತೋಷದ ವಿಷಯ. 'ದೂರದ ನಕ್ಷತ್ರ'ವನ್ನು ಕುರಿತು 'ಸಪ್ಪೆ' ಎಂದು ಹೇಳಿದವರಿ
ಗಿಂತಲೂ ಒಪ್ಪಿಗೆ ಸೂಚಿಸಿದವರ ಸಂಖ್ಯೆಯೇ ಹೆಚ್ಚಿನದು. ಅದನ್ನು ಓದಿರುವ
ಉಪಾಧ್ಯಾಯರು ಯಾರೂ "ಇದು ನಮ್ಮ ಕಥೆಯಲ್ಲ," ಎಂದು ಹೇಳಿಲ್ಲ. "ಬರೆ
ದಿರುವುದೊಂದು, ವಸ್ತು ಸ್ಥಿತಿ ಇನ್ನೊಂದು, ಎಂಬ ಅಭಿಪ್ರಾಯವನ್ನು ವ್ಯಕ್ತ
ಪಡಿಸಿಲ್ಲ.
ಓದುಗರು, ಸೃ ಷ್ಟನೆಯ ಸಾಹಿತ್ಯವನ್ನು ಬದುಕಿನಲ್ಲಿರುವ ಮೂಲದೊಡನೆ
ಹೋಲಿಸಿನೋಡುವ ಪ್ರವೃತ್ತಿಯೂ ಹೊಸದು. ಇಂಥವರ ಸಂಖ್ಯೆ ಸಣ್ಣದಾದರೂ
ತೃಪ್ತಿಕರವಾದುದು. ಬದುಕಿಗೂ ಸಾಹಿತ್ಯಕ್ಕೂ ನಿಕಟ ಸಂಬಂಧವಿದೆ ಎನ್ನುವ ವಿಚಾರ,
ದಿನದಿಂದ ದಿನಕ್ಕೆ ಬಡಕಲಾಗುತ್ತಿಲ್ಲ ಬೆಳೆಯುತ್ತ ಸಾಗಿದೆ...
'ದೂರದ ನಕ್ಷತ್ರ'ವನ್ನು ನಾನು ಬರೆದು ಮುಗಿಸಿದಾಗ, 'ಇದು ಅಪೂರ್ಣ'
ಎನ್ನುವ ಭಾವನೆ ನನ್ನಲ್ಲಿ ಮೂಡಿ ಬಲಗೊಂಡಿತು. ಹಲವಾರು ಓದುಗರೂ ಅದೇ
ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಲೆಂದು
ನಗರಕ್ಕೆ ಹಿಂತಿರುಗಿದ ಜಯದೇವ, ಪುನಃ ಆ ಹಳ್ಳಿಗೆ ಮರಳುವನೆ? ಅದೇ ವೃತ್ತಿ
ಯನ್ನು ಕೈಗೊಳ್ಳುವನೆ? ಎಂದು ಅವರು ನನ್ನನ್ನು ಕೇಳಿದರು.
ಆ ಪ್ರಶ್ನೆಗಳಿಗೆ ಉತ್ತರ, ನನ್ನ ಇತ್ತೀಚಿನ ಕಾದಂಬರಿಯಾದ 'ನವೋದಯ.'

ಸೇತುವೆ

519

ಜಯದೇವನ ವೈಯಕ್ತಿಕ ಜೀವನ, ನಾಡಿನ ಬದುಕಿನೊಡನೆ ಹಾಸುಹೊಕ್ಕಾಗಿ ಬೆರೆತು
ಮುಂದುವರಿಯುವ ಚಿತ್ರ ಅದರಲ್ಲಿದೆ. 'ದೂರದ ನಕ್ಷತ್ರ'ದ ಮುಂದಿನ ಭಾಗವೆಂದು,
ವಾಸ್ತವತೆಯ ಮೂಸೆಯಲ್ಲಿ ಆದರ್ಶವನ್ನು ಪುಟಕ್ಕಿಡುವ ಜಯದೇವನ ಕಥೆಯೆಂದು,
ಓದುಗರು 'ನವೋದಯ'ವನ್ನು ಬರಮಾಡಿಕೊಳ್ಳುವರೆಂಬ ನಂಬಿಕೆ ನನಗಿದೆ.
ಕವಿಕಾವ್ಯ ಪಕ್ಷಪಾತಿಯಾದ ಹೈದರಾಬಾದಿನ ಸನ್ಮಿತ್ರ ಜೆ. ಕೆ. ಪ್ರಾಣೇಶಾ
ಚಾರ್ಯರ ನೂತನ ಉದ್ಯಮವಾದ ಸಾಧನಾ ಪ್ರಕಾಶನದ ಮೂಲಕ 'ನವೋದಯ'
ಬೆಳಕು ಕಂಡಿದೆ. ಅದರ ಜೊತೆಯಲ್ಲೇ, ಮೊದಲ ಆವೃತ್ತಿ ಎಂದೋ ಮುಗಿದಿದ್ದ
'ದೂರದ ನಕ್ಷತ್ರ'ವನ್ನೂ ಓದುಗರ ಅನುಕೂಲಕ್ಕೆಂದು ಅವರು ಪುನಃ ಪ್ರಕಟಿಸು
ತ್ತಿದ್ದಾರೆ. ಹೀಗೆ, ಈ ಎರಡು ಕೃತಿಗಳೂ ಜತೆಯಲ್ಲೇ ಓದುಗರ ಕೈಸೇರುವಂತಾಗಿದೆ.
ನನ್ನ ಬರವಣಿಗೆಯ ವಿಷಯದಲ್ಲಿ ಆಸಕ್ತಿ ವ್ಯಕ್ತಪಡಿಸಿರುವ ಜೆ.ಕೆ. ಪ್ರಾಣೇಶಾ
ಚಾರ್ಯರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕಾದುದು ನನ್ನ ಕರ್ತವ್ಯ.


ನಿರಂಜನ

ಸೆಪ್ಟೆಂಬರ್ 1956
ಗೋಕುಲ ವಿಸ್ತರಣ
ವಾಣಿವಿಲಾಸ ಮೊಹಲ್ಲಾ
ಮೈಸೂರು

"https://kn.wikisource.org/w/index.php?title=ನವೋದಯ&oldid=234650" ಇಂದ ಪಡೆಯಲ್ಪಟ್ಟಿದೆ