ವಿಷಯಕ್ಕೆ ಹೋಗು

ಪಂಚಾಮೃತದಲ್ಲಿ ಉಂಡರೇನು !

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಪಂಚಾಮೃತದಲ್ಲಿ ಉಂಡರೇನು ! ಮಲಮುತ್ರ ವಿಷಯ ಘನವಕ್ಕು. ಭ್ರಾಂತು ಬೇಡ ಮರುಳೆ ಬೇಡದು ಕಾಯಗುಣ. ಆಸೆಯಾಮಿಷ ತಾಮಸ ಹಸಿವು ತೃಷೆ ವ್ಯಸನ ವಿಷಯಾದಿಗಳಲ್ಲಿ ಹಿರಿಯರು
ಗರುವರುಂಟೆ ! ಭ್ರಾಂತು ಬೇಡ ಮರುಳೆ ! ಬೇಡದು ಕಾಯಗುಣ. ಈ ಭೇದವ ಭೇದಿಸಬಲ್ಲಡೆ ಕೂಡಲ ಸಂಗನ ಶರಣರ ಸಾಣಿಯಲ್ಲಿ ಸವೆದ ಶ್ರೀಗಂಧದಂತಿರಬೇಕು ಶರಣ.