ಪಲ್ಲವಿ ಅನುಪಲ್ಲವಿ - ಹೃದಯ ರಂಗೋಲಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ಪಲ್ಲವಿ ಅನುಪಲ್ಲವಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯನ: ಎಸ್. ಪಿ. ಶೈಲಜ


ಹೃದಯ ರಂಗೋಲಿ ಅಳಿಸುತಿದೆ ಇಂದು |೨|

ಮನದಲಿ ಅರಿಯದ ನೋವೊಂದು ತಂದು

ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು

ಹೃದಯ ರಂಗೋಲೀ ಅ ಅ ಅ ಅ ಅ ಅ ಆ

ಬರುವ ತನಕ ನೀನು

ಅರಳಲಿಲ್ಲ ಆಸೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ |೨|
ಸಿಡಿದ ಹಾಡಲಿ ಸ್ವರ ತಪ್ಪ ಶೃತಿ ತಪ್ಪ

ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು

ಹೃದಯ ರಂಗೋಲೀ ಅ ಅ ಅ ಅ ಆ

ಸೋತೆ ಪ್ರೀತಿ ಮಾಡಿ.. ಓಗಲಲ್ಲಿ ಮೋಡಿ
ನೆನಪುಗಳು ನೂರಿದೇ.. ಕೆದಕುತಿದೆ ನನ್ನೆದೇ |೨|

ಸುರಿಸಿ ಕಂಬನಿ ಎಲ್ಲಿದೆ ನೀರೆಲ್ಲಿ ಇ ಇ ಇ ಇ ಇ ಈ

ಹೃದಯ ರಂಗೋಲಿ ಅಳಿಸುತಿದೆ ಇಂದು |೨|

ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲೀ ಅ ಅ ಅ ಅ ಅ ಅ ಆ

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ