ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೧೨)
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೮೫



ಒಂದುನಾರೆ ಬೀರಬಲನ ಯಾವನೋ ಒಬ್ಬವೈರಿಯು ಬೀರಬಲ್ಲನ ಮಾನಹಾನಿಯನ್ನು ಮಾಡಬೇಕೆಂದು ಯೋಚಿಸಿ, ಎಷ್ಟೇ ನಿಂದಾಯುಕ್ತವಾದ ಮಾತುಗಳನ್ನು ಒಂದು ಕಾಗದದಮೇಲೆ ಬರೆದು ಒಂದುಗೋಡೆಗೆ ಹಚ್ಚಿ ಇಟ್ಟಿದ್ದನು. ಈ ಸುದ್ದಿಯು ಬೀರಬಲನಿಗೆ ತಿಳಿದಕೂಡಲೇ ತನ್ನ ಸಂಗಡ ಕೆಲವು ಜನರನ್ನು ಕರೆದುಕೊಂಡು ಆ ಸ್ಥಳಕ್ಕೆ ಬಂದನು ಅಲ್ಲಿ ಎಷ್ಟೋ ಜನರು ನೆರೆದಿದ್ದರು ಅವರಲ್ಲಿ ಬೀರಬಲನಿಗೆ ಸ್ನೇಹಿತರಾದವರೂ ಇದ್ದರು; ವೈರಿಗಳಾ ದವರೂ ಇದ್ದರು ಆ ಕಾಗದವು ಸ್ವಲ್ಪ ಎತ್ತರದ ಮೇಲೆ ಹಚ್ಚಿತ್ತು ಜನರಿಗೆ ನೆಟ್ಟಗೆ ಓದಲಿಕ್ಕೆ ಬರುತ್ತಿದ್ದಿಲ್ಲ ಅದರಿಂದ ಬೀರಬಲನು " ಆ ಕಾಗದವನ್ನು ತೆಗೆದು ಕೆಳಗೆ ಹಚ್ಚು” ಎಂದು ಒಬ್ಬ ಸೇವಕನಿಗೆ ಆಜ್ಞಾಸಿದನು ಆಗ ಅವನ ಅಪ್ಪಣೆಯ ಮೇರೆಗೆ ಆ ಕಾಗದವನ್ನು ಓದಲಿಕ್ಕೆ ಯಾವಾರಿಗೂ ಕಾಣಿಸು ವಂತೆ ಹಚ್ಚಿದನು. ಆಮೇಲೆ ಅದನ್ನು ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಓದಿತೋರಿಸಿದನು, ಬಳಿಕ ಅಲ್ಲಿ ನೆರೆದಿದ್ದ ಎಲ್ಲ ಜನರನ್ನುದ್ದೇಶಿಸಿ ಅಂದದ್ದೇ ನಂದರೆ- " ಈ ಸ್ಥಳದಲ್ಲಿ ಏಕತ್ರರಾಗಿದ್ದ ಜನರು ಹೀಗೆ ತಿಳಿದುಕೊಳ್ಳಬೇಕಲ್ಲಾ ! ಈ ಕಾಗದವು ನನ್ನ ಮತ್ತು ನಿಮ್ಮೆಲ್ಲರನಡುವೆ ಆದ ಒಪ್ಪಂದದ ಕಾಗದವು, ಇದು ಈ ಗೋಡೆಯಮೇಲೆ ಎತ್ತರವಾಗಿ ಹಚ್ಚಲ್ಪಟ್ಟಿತ್ತು ಅದರಿಂದ ಎಲ್ಲರಿಗೂ ಚನ್ನಾಗಿ ಓದಲಿಕ್ಕೆ ಬರುತ್ತಿಲ್ಲ, ಅದರಿಂದ ಅದನ್ನು ಈಗ ಕೆಳಗೆ ಹಚ್ಚಿಸಿದ್ದೇನೆ ಈಗಮಾತ್ರ ಎಲ್ಲರಿಗೂ ಓದಲಿಕ್ಕೆ ಬರುವಂತಾಯಿತು ಇನ್ನು ನನಗೆ ಕತೃಗಳಾಗಿದ್ದವರು ತಮ್ಮ ಇಚ್ಚಾಪ್ರಕಾರ ನನ್ನ ಸಂಗಡ ವರ್ತಿಸ ಬೇಕು, ನಾನು ನನ್ನ ಮನಸ್ಸಿಗೆ ಬಂದಹಾಗೆ ಅವರಸಂಗಡ ನಡೆದುಕೊಳ್ಳು ವೆನು. ” ಎಂದು ಹೇಳಿ ಬೀರಬಲನು ಅಲ್ಲಿಂದ ಹೊರಟನು. ಅವನು ಆಡಿದ ಭಾವಗಳನ್ನು ಕೇಳಿ ಜನರಿಗೆಲ್ಲ ಬಹಳ ಭಯವುಂಟಾಯಿತು. ಅದರಿಂದ ಎಲ್ಲರೂ ಕೂಡಿ ಆ ಕಾಗದವನ್ನು ಹರಿದು ಬಿಸುಟಬಿಟ್ಟರು. ಅಂದಿನಿಂದ ಶತ್ರು ಗಳಾಗಿದ್ದವರು ತಮ್ಮ ಶತೃತ್ವವನ್ನು ಬಿಟ್ಟು ಬಿಟ್ಟರು.

-(೩೨, ಚಾತುರ್ಯದ ಪರೀಕ್ಷೆ)-

ಒಂದು ಸಾರೆ ಬೀರಬಲನು ರೋಗಪೀಡಿತನಾಗಿದ್ದನು, ಆಗ ಅವನಿಗೆ ಮೂರುದಿವಸ ಅನ್ನ ನೀರು ಸಹ ಹೋಗಿದ್ದಿಲ್ಲ; ನಾಲ್ಕನೇ ದಿವಸ ಔಷಧವಿಂದ ಸ್ವಲ್ಪಗುಣವಾಯಿತು. ಆಗ ಬಾದಶಹನು ಅವನಯೋಗಕ್ಷೇಮವನ್ನು ತಿಳಿದು ಕೊಳ್ಳಬೇಕೆಂದು ಸ್ವತಃ ಬೀರಬಲನ ಮನೆಗೆ ಬಂದನು, ಕ್ಷೇಮಸಮಾಚಾರದ