ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಮಾತುಕಥೆಗಳು ನಡೆದವು, ಸ್ವಲ್ಪ ಹೊತ್ತಾದಮೇಲೆ ಬೀರಬಲನಿಗೆ ಮೂತ್ರ ಬಾಧೆಯಾದ್ದರಿಂದ ಅಲ್ಲಿಂದಯೆದ್ದು ಬೇರೆಕಡೆಗೆಹೋದನು ಆಗ ಬಾದಶಹನ ಮನಸ್ಸಿನಲ್ಲಿ.. " ಈ ಬೇನೆಯಿಂದ ಬೀರಬಲನ ಚಾತುರ್ಯದಲ್ಲಿ ಏನಾದರೂ ನ್ಯೂನಾಧಿಕವಾಗಿದೆಯೋ ಹ್ಯಾಗೆ ? ” ಎಂಬದನ್ನು ಪರೀಕ್ಷಿಸಿ ನೋಡಬೇಕೆಂದು ಯೋಚನೆಯು ಹುಟ್ಟಿತು. ಆ ಕೂಡಲೆ ಒಬ್ಬ ಸೇವಕನನ್ನು ಕರೆದು ನಾಲ್ಕು ಕಾಗದದ ಚೂರುಗಳನ್ನು ಅವನ ಕೈಯಲ್ಲಿ ಕೊಟ್ಟು ಇವುಗಳನ್ನು ಒಂದೊಂದು ಮಂಚದ ಕಾಲಿನಕೆಳಗೆ ಇಡು ಎಂದು ಹೇಳಿದನು. ಅದರಂತೇ ಆ ಸೇವಕನು ಬೀರಬಲನ ಮಂಚದ ಕಾಲಿನ ಕೆಳಗೆ ಒಂದೊಂದು ಚೂರನ್ನು ಇಟ್ಟನು, ಸ್ವಲ್ಪ ಹೊತ್ತಿನಮೇಲೆ ಬೀರಬಲನು ಬಂದು ಆ ಮಂಚದಮೇಲೆ ಮಲಗಿಕೊಂಡನು. ಆಗ ಬಾದಶಹನು ಏನೂ ಅರಿಯದವನಂತೆ ಆಕಡೆಯ ಈಕಡೆಯ ವರ್ತಮಾನಗಳನ್ನು ಹೇಳುತ್ತ ಕುಳಿತುಕೊಂಡನು. ಆಗ ಬೀರ ಬಲನು ಬಾದಶಹನ ಸಂಗಡ ಮಾತಾಡುತ್ತಿದ್ದರೂ ಅವನ ಕಣ್ಣುಗಳು ಸುತ್ತು ಮುತ್ತು ಮೇಲೆ ಕೆಳಗೆ ನೋಡುತ್ತಿದ್ದವು. ಆಗ ಬಾದಶಹನು ನಿನ್ನ ಮನಸ್ಸು ಸ್ವಸ್ಥವಾಗಿದ್ದಂತೆ ಕಾಣುವದಿಲ್ಲ ನೀನು ಒಂದೇ ಸವನೆ ಮೇಲೆಕೆಳಗೆ ಯಾಕೆ ನೋಡುತ್ತಿರುವಿ ” ಎಂದು ಪ್ರಶ್ನೆ ಮಾಡಿದನು; ಆಗ ಬೀರಬಲನು ಅನ್ನು ತಾನೆ:- ( ಖಾವಿಂದ ನಾನುಮಲಗಿರುವ ಮಂಚವು ಮೊದಲು ಇದ್ದ ಹಾಗೆ ಇಲ್ಲ, ಏನೋ ಹೆಚ್ಚು ಕಡಿಮೆಯಾದಂತೆ ಕಂಡುಬರುತ್ತದೆ."

ಬಾದಶಹ-ಏನು ಹೆಚ್ಚು ಕಡಿಮೆ ಯಾಗಿದೆ !
ಬೀರಬಲ-ಈ ಮಂಚವು ಕಾಗದದಚೂರಿನಷ್ಟು ಎತ್ತರವಾದಂತೆ ಕಾಣುತ್ತೆ.
ಬಾದಶಹ-ನಿನ್ನ ದೇಹದಲ್ಲಿಯ ನಿರ್ಬಲತೆಯಿಂದ ಹಾಗೆ ಕಾಣುತ್ತಿರಬಹುದು.
ಬೀರಬಲ-ಪೃಥ್ವಿನಾಥ ! ನನ್ನ ದೇಹವು ನಿರ್ಜಲವಾಗಿದ್ದರೂ ಬುದ್ದಿಯು ನಿರ್ಬಲವಾಗಿಲ್ಲ.
ಈಪ್ರಕಾರ ಬೀರಬಲನ ಚಾತುರ್ಯವನ್ನು ಪರೀಕ್ಷಿಸಿ ನೋಡಿದಮೇಲೆ ಬಾದಶಹನಿಗೆ ಅತ್ಯಾನಂದವುಂಟಾಯಿತು, ಆಗ ತಾನುಮಾಡಿದ ಯುಕ್ತಿಯನ್ನು ಬೀರಬಲನಿಗೆ ತಿಳಿಸಿದನು.

-(೩೩, ತೊಗರಿಯಲ್ಲಿ ನವಿಲು.)-

ಒಂದುದಿವಸ ಬಾದಶಹನೂ, ಮತ್ತು ಬೀರಬಲನೂ ಕೂಡಿಕೊಂಡು ವಾಯುಸೇವಾರ್ಥವಾಗಿ ಹೋಗಹತ್ತಿದ್ದರು; ಆಗ ತೊಗರೆಯ ಹೊಲದಲ್ಲಿ ಹೋಗುತ್ತಿರುವ ಒಂದು ನವಿಲನ್ನು ಕಂಡು “ಬೀರಬಲ್ಲ ! ತೋರಮೆ ಮೋರ