ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧೦
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ತು ಆಗ ಬಾದಶಹನು ಆ ಸರದಾರನನ್ನು ಕುರಿತು. ಎಲೈ ! ಮೋಸಗಾರನಾದ ಸರದಾರಖಾನನೇ ! ನಾನು ನಿನ್ನ ಯೋಗ್ಯತೆಯನ್ನು ಮೀರಿದ ಪದವಿಯನ್ನಿತ್ತು ಸನ್ಮಾನಿಸಿದ್ದದ್ದಕ್ಕೆ, ಈಪರಿಯಾಗಿ ಪ್ರತಿಫಲವನ್ನಿತ್ತಿಯಾ? ಧಿಕ್ಕಾರವಿರಲಿ, ನಿನ್ನ ಜನ್ಮಕ್ಕೆ ನೀನು ಇನ್ನು ಮುಂದೆ ನನಗೆ ಮುಖವನ್ನು ತೋರಿಸಬೇಡ ಬೀರಬಲ್ಲ ! ಇವನನ್ನು ಬಲವಾದ ಸಂಕೋಲೆಗಳಿಂದ ಬಿಗಿದು. ಕಠಿಣವಾದ ಕಾರಾಗೃಹದಲ್ಲಿರಿಸು” ಎಂದು ಅಪ್ಪಣೆ ಮಾಡಿದನು. ಕೂಡಲೆ ಬೀರಬಲನು ಬಾದಶಹನ ಅಪ್ಪಣೆಯಮೇರೆಗೆ ಸರದಾರಖಾನನ್ನು ಕಾರಾಗೃಹಕ್ಕೆ ಕಳಿಸಿಕೊಟ್ಟನು.
ಈ ಪ್ರಕಾರವನ್ನು ನೋಡಿ ಮುಸಲ್ಮಾನ ಸರದಾರರೆಲ್ಲರಿಗೂ ಬೀರಬಲನ ಮೇಲೆ ಅತ್ಯಂತವಾದ ಕೋಪವುಂಟಾಯಿತು. ಆದರೆ ಅವರಲ್ಲಿ ಏನು ಸಾಮರ್ಥ್ಯವಿತ್ತು ಬಾದಶಹನ ಒಲುಮೆಯು ಬೀರಬಲನ ಮೇಲೆ ಸಂಪೂರ್ಣವಿತ್ತು ಬೀರಬಲನನ್ನು ಹ್ಯಾಗಾದರೂ ಮಾಡಿ, ಕಿತ್ತುಹಾಕಬೇಕೆಂಬ ಬಗ್ಗೆ ಒಳಸಂಚನ್ನು ಮಾಡಹತ್ತಿದರು ಅನೇಕರು ಅನೇಕ ಉಪಾಯಗಳನ್ನು ಹುಡುಕಿ ತೆಗೆದರು ಒಂದೂ ಸಾಧ್ಯವಾಗುವಂತೆ ಕಂಡುಬರಲಿಲ್ಲ. ಕಡೆಗೆ ಬಾದಶಹನ ಆಯುಷ್ಯಕ್ಷೌರವನ್ನು ಮಾಡುತ್ತಿರುವ ಒಬ್ಬ ಕ್ಷೌರಕನನ್ನು ತಮ್ಮ ಒಳಸಂಚಿನಲ್ಲಿ ತೆಗೆದುಕೊಂಡು, ಅವನನ್ನು ಹುರಿದುಂಬಿಸಿದರು.
ಆ ನಾವಲಿಗನು ಒಂದು ದಿವಸ ಬಾದಶಹನ ಆಯುಷ್ಕರ್ಮವನ್ನು ಮಾಡುತ್ತಿರುವಾಗ, “ ಹುಜೂರ್ ; ನಿಮ್ಮ ಮಾತಾಪಿತೃಗಳು ಸ್ವರ್ಗವಾಸಿಗಳಾಗಿ ಎಷ್ಟೋ ವರುಷಗಳು ಆಗಿ ಹೋದವು. ಅವರ ಸಮಾಚಾರವೇನೆಂ ಬದನ್ನು ಕಿಂಚಿತ್ತಾದರೂ ತಿಳಿದುಕೊಂಡಿದ್ದೀರಾ ? ಅವರ ಪುಣ್ಯಬಲದಿಂದಲೇ ನಿಮಗೆ ಈ ರಾಜ್ಯವೂ, ಈ ಲಕ್ಷ್ಮಿಯೂ ಕೈವಶವಾಗಿಲ್ಲವೇ ! ಹೀಗಿದ್ದು ಅವರನ್ನೇ ಮರೆತು ಬಿಡುವದೆಂದರೆ ಎಂಥ ಅನ್ಯಾಯವಿದು ; ಹೀಗೆ ನೀವು ಅನ್ಯಾಯ ಮಾಡಹತ್ತಿದರೆ ಅವರು ಕೋಪಗೊಳ್ಳದಿರರೇ ? ಎಂದನು.

ಬಾದಶಹ-ನೀನು ಹೇಳಿದ್ದು ನಿಜವು, ಅವರ ಸಮಾಚಾರವನ್ನು ನಾನು ಹೇಗೆ ತಿಳಿದುಕೊಳ್ಳಲಿ ? ಯಾರನ್ನು ಕಳುಹಿಕೊಡಲಿ ? ಕದಾಚಿತ್ ಯಾವನಾದರೂ ಈ ಕೆಲಸವನ್ನು ಸ್ವೀಕರಿಸಿದ್ದಾದರೆ ಅವನಿಗೆ ಸ್ವರ್ಗದ ಮಾರ್ಗವು ಸಿಗುವಬಗೆ ಹೇಗೆ ?

ಕ್ಷೌರಕ- ನರವರ ; ಯಾರನ್ನು ಕಳುಹಿಸಿ ಕೊಡಬೇಕೆಂಬದನ್ನು ನೀವೇ ವಿಚಾರಮಾಡಿಕೊಂಡು ನೋಡಿರಿ ! ನೀವು ಯಾವನನ್ನು ಕಳುಹಿಸಿ ಕೊಡುವಿರೋ, ಅವನಿಗೆ ನಾನು ಸ್ವರ್ಗದ ಮಾರ್ಗವನ್ನು