ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೧೧


ಹೇಳಿ ಕೊಡುತ್ತೇನೆ.
ಬಾದಶಹ-ಆಮಾರ್ಗವು ಎಲ್ಲಿಯದೆ, ಎಂಬದನ್ನು ಹೇಳು
ಕ್ಷೌರಕ-ಯಾವ ಮನುಷ್ಯನನ್ನು ನೀವು ಕಳುಹಿಸಬೇಕೆಂದು ನಿಶ್ಚಯಿ ಸುವಿರೋ, ಅವನನ್ನು ಕರೆದುಕೊಂಡು ಹೋಗಿ "ಸ್ಮಶಾನದಲ್ಲಿ ಕೂ ಡಿಸಿ, ಅವನ ಸುತ್ತು ಮತ್ತು ಗೋಪುರಾಕಾರವಾಗಿ ಉರು ವಲಗಳ ನ್ನು ಒಟ್ಟಿ, ಅದಕ್ಕೆ ಬೆಂಕಿಯನ್ನು ತಗುಲಿಸಬೇಕು. ಅಂದರೆ ಅವನು ಧೂಮ ಮಾರ್ಗವಾಗಿ ಸ್ವರ್ಗವನ್ನು ನಿರಾಯಾಸವಾಗಿ ಸೇರುವನು.
ಬಾದಶಹ-ನೀನು ಹೇಳಿದ ಮಾರ್ಗವು ಒಳ್ಳೆಯದಾಗಿ ಕಾಣುತ್ತದೆ ಆದರೆ ಯಾರನ್ನು ಕಳುಹಿಸಬೇಕು ?
ಕ್ಷೌರಕ-ಖುದಾವಂದ! ನಿಮ್ಮ ಆಶ್ರಯದಲ್ಲಿ ಸಾವಿರಾರು ಜನಗಳು ಇರು ವರಲ್ಲಾ ! ಯಾವನೊಬ್ಬನನ್ನು ಕಳುಹಿಸಿಕೊಟ್ಟ ರಾಯಿತು. ಆದರೆ ಆ ಕೆಲಸವು ಸಾಮಾನ್ಯ ಮನುಷ್ಯ ನಿಂದ ಆಗ ತಕ್ಕಕ್ಕಿಲ್ಲ ಅವನು ಆ ಸಾಧಾರಣ ಚತುರನಾಗಿರಬೇಕು.
ಬಾದಶಹ - ನೀನೇಹೇಳು ; ಅಂಥ ಚತುರನಾದವನು ನನ್ನ ಅನು ಯಾಯಿ ಗಳಲ್ಲಿ ಯಾವನಿರುವನು ?
ಕ್ಷೌರಕ –(ತಡವರಿಸುತ್ತ) ಸರಕಾರ : ನನ್ನ ದೃಷ್ಟಿಯಿಂದ ನೋಡಿದರೆ, ಬೀ, ಬೀ, ಬೀ. ಬೀರಬಲನೇ ಯೋಗ್ಯನೆಂದು ಕಂಡು ಬರುತ್ತದೆ ಅವ ನ ಹೊರತು ಅನ್ಯರಾರೂ ಕಾಣುವದಿಲ್ಲ ಇದರ ಮೇಲೆ ತಮ್ಮ ಮ ನಸ್ಸು.
ಬಾದಶಹ- ಅಹುದು ; ಅವನು ಹೋದಮೇಲೆ ಈ ರಾಜ್ಯಕಾರಭಾರವನ್ನು ನಿರ್ವಹಿಸುವವರು ಯಾರು ?

ಕ್ಷೌರಕ- ಅವನ ಪದವಿಯಲ್ಲಿ ಬೇರೊಬ್ಬನನ್ನು ಸ್ವಲ್ಪ ದಿವಸಗಳ ಮಟ್ಟಿಗೆ ನಿಯಮಿಸಿಕೊಂಡ ರಾಯಿತು, ಬೇಕಾದರೆ ನಾನೇ ಆ ಕೆಲಸವನ್ನು ಮಾಡಲಿಕ್ಕೆ ಸಿದ್ಧನಿದ್ದೇನೆ.
ಬಾದಶಹ– ಛೀ ಹುಚ್ಚನೇ ; ನನ್ನ ಮಂತ್ರಿಯಾಗಬೇಕೆಂದು ಅಪೇಕ್ಷಿಸು ವಿಯಾ ? ಕ್ಷೌರಕ – ಮಹಾರಾಜ ; ಹಾಗಲ್ಲ ನಾನೇ ಹೋಗುತ್ತೇನೆಂದು ಹೇಳಿದೆ ಆದರೆ ನಾನು ಒಬ್ಬಕ್ಷುದ್ರ ಜೀವಿಯಾದ್ದರಿಂದ ತಮ್ಮ ಪಿತೃಗಳ ಬಳಿಗೆ ಹೋಗಲು, ಯೋಗ್ಯನಲ್ಲ ; ಅವರ ಪ್ರತಿಷ್ಠೆಗೆ ಸರಿಯಾಗಿರು ಮನು ಷ್ಯನು ಹೋಗಬೇಕಲ್ಲವೇ ! ನನ್ನನ್ನು ನೀವು ಕಳುಹಿಸಿಕೊಟ್ಟರೆ