ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು,
೩೩೧


ಬೀರಬಲ:-ನೀನೇ ನಿನ್ನ ಕೈಯಿಂದ ತೆಗೆದುಕೊಡು.
ಬಾದಶಹನು ಆ ಹೊರೆಯೊಳಗಿಂದ ಒಂದು ಉತ್ತಮವಾದ ಕಬ್ಬನ್ನು ಆರಿಸಿ ತೆಗೆದುಕೊಟ್ಟನು. " ಇದು ನೆಟ್ಟಗಿಲ್ಲ? ” ವೆಂದು ಒಗೆದು ಬಿಟ್ಟನು. ಹೀಗೆ ಎಷ್ಟೋಾರೆ ಆದಮೇಲೆ ಒಂದು ಕಬ್ಬು ಮನಸಿಗೆ ಬಂತು, ಅದನ್ನು ಕೈಯಲ್ಲಿ ಹಿಡಿದುಕೊಂಡು ಪುನಃ ಅಳಹತ್ತಿದನು.
ಬಾದಶಹ:-ಮಗು ? ಮಗೂ ? ಮತ್ತೆ ಯಾಕೆ ರೋದನವನ್ನು ಆರಂಭಿಸಿdi ಏನುಬೇಕು.
ಬೀರಬಲ :-(ಸ್ವಲ್ಪಹೊತ್ತು ಅತ್ತು) ಇದನ್ನು ಸುಲಿದುಕೊಡು, ಬಾದಶಹನು ಕಬ್ಬನ್ನು ಸುಲಿದುಕೊಟ್ಟನು, ಅದನ್ನು ಹಿಡಿದುಕೊಂಡು ಪುನಃ ಅಳಹತ್ತಿದನು.
ಬಾದಶಹ:— ಮತ್ತೆ ಯಾಕೆ ಅಳುತ್ತೀ ?
ಬೀರಬಲ:-ಇದರ ತುಂಡುಗಳನ್ನು ಮಾಡಿಕೊಡು.
ಬಾದಶಹನು ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಕೊಟ್ಟನು ಆಮೇಲೆ ಅವುಗಳನ್ನು “ ನನ್ನ ಟೊಪ್ಪಿಗೆಯಲ್ಲಿ ಹಾಕಿಕೊಡು, ” ಎಂದು ಅಳಲಾರಂಭಿಸಿದನು. ಬಾದಶಹನು ಅದರಂತೆಯೇ ಮಾಡಿದನು ಅದರಿಂದಲೂ ಅವನು ಶಾಂತನಾಗದೆ ಟೊಪ್ಪಿಗೆಯನ್ನು ಬಿಸಾಟಕೊಟ್ಟನು. ಬಾದಶಹನು ಅವನನ್ನು ಹತ್ತಿರ ಕರೆದುಕೊಂಡು " ಮಗೂ ! ನೀನು ಹೇಳಿದಹಾಗೆ ನಾನು ಮಾಡಿಕೊಡಲಿಲ್ಲವೇ, ಹೀಗಿದ್ದು ನೀನು ಯಾಕೆ ಸುಮ್ಮನಾಗಲೊಲ್ಲಿ” ಎಂದು ಕೇಳಿದನು. ಬೀರಬಲನು ಕಿಂಚಿತ್ಕಾಲ ರೋದಿಸಿ, ಆ ಮೇಲೆ " ಈ ಎಲ್ಲ ತುಂಡುಗಳನ್ನು ಜೋಡಿಸಿ ಮೊದಲು ಇದ್ದಂತೆ ಮಾಡಿಕೊಡು' ಎಂದು ಪುನಃ ರೋದಿಸಲಾರಂಭಿಸಿದನು. ಆಗ ಬಾದಶಹನು : ಮಗೂ ? ನಿನಗೆ ಬೇಕಾದಷ್ಟು ತುಂಡುಗಳನ್ನು ತೆಗೆದುಕೊ ! ಆದರೆ ಅವುಗಳನ್ನು ಜೋಡಿಸಿ ಮೊದಲಿನ ಹಾಗೆ ಹ್ಯಾಗಮಾಡಲಿಕ್ಕೆ ಬಂದೀತು” ಎಂದನು. ಆಕೂಡಲೆ ಬೀರಬಲನು “ ಹಾಗೆ ನಾನು ಅಳುವದನ್ನು ಹ್ಯಾಗೆ ಬಿಡಲಿ ? ” ಎಂದು ಕೇಳಿದನು. ಆಗ ಬಾದಶಹನು ಶಹಬಾಸ! ಶಹಬಾಸ ? ನೀನು ಹೇಳಿದ್ದು ಸತ್ಯವು, ಬಾಲಕರನ್ನು ಸಮಾಧಾನಗೊಳಿಸುವದು ಬಹುಶ್ರಮ ಸಾಧ್ಯವಾದದ್ದು ಎಂದು ಒಪ್ಪಿಕೊಂಡು ತನ್ನ ಕೋಪವನ್ನು ಅಡಗಿಸಿಕೊಂಡನು. ಆಮೇಲೆ ಬೀರಬಲನು ಬಾಲಕನವೇಷವನ್ನು ಚೆಲ್ಲಿಕೊಟ್ಟು, ತನ್ನ ಸ್ಥಾನದಲ್ಲಿ ಬಂದು ಕುಳಿತು ಕೊಂಡನು ...