ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು


--(೧೭೫, ಗಾಣಿಗ, ಮತ್ತು ಕಟುಕನು.)--

ಒಂದುದಿವಸ ಬಾದಶಹನು ಸಭಾಸ್ಥಾನದಲ್ಲಿ ವಿರಾಜಮಾನನಾಗಿದ್ದನು. ಆ ಸಮಯದಲ್ಲಿ ಒಬ್ಬ ಗಾಣಿಗ [ತೈಲವಿಕ್ರಯಿ]ನೂ, ಒಬ್ಬ ಕಟುಕ(ಮಾಂಸವಿಕ್ರಯಿ)ನೂ, ತಮ್ಮ ತಮ್ಮೊಳಗೆ ಬಡಿದಾಡುತ್ತ ಸಭಾಸ್ಥಾನವಂನು ಪ್ರವೇಶಿಸಿದರು. ಆಗ ಬೀರಬಲನು "ನಿಮ್ಮಿಬ್ಬರಲ್ಲಿ ವಾದಿಯು ಯಾರು" ಎಂದು ಕೇಳಿದನು.
ಗಾಣಿಗ--ನಾನು ವಾದಿಯು.
ಕಟುಕ--ನಾನು.
ಆಗ ಅವರಿಬ್ಬರಿಗೂ ನಿಜವಾದ ಸಮಾಚಾರವನ್ನು ಹೇಳಿರಿ, ಎಂದು ಆಜ್ಞಾಪಿಸಿದನು.
ಗಾಣಿಗ :- ಮಹಾರಾಜ, ನಾನು ನನ್ನ ಅಂಗಡಿಯಮೇಲೆ ಲೆಕ್ಕವನ್ನು ಬರಿಯುತ್ತ ಕುಳಿತುಕೊಂಡಿದ್ದೆನು. ಆಗ ಈ ಕಟುಕನು ಬಂದು ಎಂಣೆಯನ್ನು ಕೊಡು, ಎಂದು ಕೇಳಿದನು. ನಾನು ನನ್ನ ಕೆಲಸವನ್ನು ಬಿಟ್ಟು, ಇವನಿಗೆ ತೈಲವನ್ನು ಕೊಟ್ಟೆನು. ಪುನಃ ನನ್ನ ಕೆಲಸದಲ್ಲಿ ತೊಡಗಿದೆನು. ಮುಂದೆ ಕಿಂಚಿತ್ ಹೊತ್ತಾದಮೇಲೆ ನೋಡಲು ನನ್ನ ಹಣದ ಚೀಲವೇ ಇದ್ದಿಲ್ಲ. ಆ ಕೂಡಲೇ ಇವನ ವಿಷಯದಲ್ಲಿ ಸಂದೇಹವು ಉತ್ಪನ್ನವಾಗಿ ಓಡುತ್ತ ಇವನ ಅಂಗಡಿಗೆ ಹೋದೆನು. ನಾನು ಹೋದಾಗ ಚೀಲವು ಇವನ ಕೈಯಲ್ಲಿಯೇ ಇತ್ತು. ಅದು ನನ್ನ ಚೀಲವೆಂದು ಹೇಳಿ ಬೇಡಿದೆನು. ಇವನು ಕೊಡದೆ ತನ್ನ ಚೀಲವೆಂದು ವಾದಿಸಹತ್ತಿದನು. ನಾನು ಸತ್ಯಸಂಗತಿಯನ್ನು ವಿಜ್ಞಾಪಿಸಿಕೊಂಡಿದ್ದೇನೆ. ನನ್ನ ಹಣದ ಚೀಲವನ್ನು ನನಗೆ ಕೊಡಿಸಬೇಕು ಎಂದು ಬೇಡಿಕೊಂಡನು. ಆಮೇಲೆ ಕಟುಕನು ಮುಂದೆಬಂದು. ನಾನು ನನ್ನ ಅಂಗಡಿಯಮೇಲೆ ಕುಳಿತುಕೊಂಡು ವಿಕ್ರಯಿಸಿದ ಹಣವನ್ನು ಎಣಿಸುತ್ತಿದ್ದೆನು. ಆಗ ಇವನು ತೈಲವಿಕ್ರಯ ಮಾಡುವದಕ್ಕೆ ಪ್ರತಿದಿನದಲ್ಲಿ ಬರುವಂತೆ ಈ ದಿವಸವೂ ಬಂದನು. ಇವನ ಅಂಗಡಿಯು ನನ್ನ ಅಂಗಡಿಗೆ ಕಿಂಚಿತ್‌ ದೂರದಲ್ಲಿ ಅದೆ. ಇವನು ಬಂದಕಾಲಕ್ಕೆ ಹಣದ ಚೀಲವು ನನ್ನ ಹತ್ತಿರದಲ್ಲಿಯೇ ಇತ್ತು, ಇವನು ಹೊರಟುಹೋದ ಮೇಲೆ ನೋಡಲು ಚೀಲವು ಮಾಯವಾಗಿತ್ತು. ಆಗ ನಾನು ಗಾಬರಿಯಾಗಿ ಓಡುತ್ತ ಹೋಗಿ ಇವನನ್ನು ಮಾರ್ಗದಲ್ಲಿಯೇ ಹಿಡಿದೆನು ಮತ್ತು ಚೀಲವನ್ನು ಕಸಿದುಕೊಂಡೆನು. ನಾನು ಈ ಸಂಗತಿಯನ್ನು ಜಗನ್ನಿಯಂತನನ್ನು ಸ್ಮರಿಸಿ, ಸತ್ಯವಾಗಿ ಹೇಳುತ್ತೇನೆ, ಇದರಲ್ಲಿ ಎಳ್ಳಷ್ಟಾದರೂ