ರಾಜಾ- "ಒಳ್ಳೆದು”ಎಂದು ಹೇಳಿ, ಸೇವಕರನ್ನು ಕರೆದು " ಆ
ಸಾವುಕಾರನನ್ನು ಬಿಟ್ಟುಬಿಡುವಂತೆ " ರಾಜನ ಅಪ್ಪಣೆಯಾಗಿರುವದೆಂದು
ಕೊತವಾಲನಿಗೆ ತಿಳಿಸಿರಿ, ಶೀಘ್ರವಾಗಿ ಗಮನಮಾಡಿರಿ ಎಂದು ಹೇಳಿದನು.
ಕರ್ಮಚಾರಿಗಳು ಧಾವಿಸುತ್ತ ಹೋಗಿ ಕೊತವಾಲನಿಗೆ ರಾಜಾಜ್ಞೆಯನ್ನು
ತಿಳಿಸಿದರು, ಆ ಕೂಡಲೇ ಅವನು ಬೀರಬಲನನ್ನು ಬಿಟ್ಟುಬಿಟ್ಟನು. ಸಾವು
ಕಾರನು ಹಿಂದಿರುಗಿ ಬರುವಾಗ, ವೇಶೈಯು ಮಾರ್ಗದಲ್ಲಿ ಬೆಟ್ಟಿಯಾಗಿ ಅವ
ನನ್ನು ಕರೆದುಕೊಂಡು ಹೋಗಿ ಖೇದವನ್ನು ಪ್ರದರ್ಶನ ಮಾಡಿದಳು. ಆಗ
ಆ ಸಾವುಕಾರನು ಇವಳನ್ನು ಸಮಾಧಾನಪಡಿಸಿ, ಧೈರ್ಯ ಬಿಡಬೇಡ ? ನಾನು
ಈ ಕೆಲಸವನ್ನು ಮಹತ್ವವಾದ ಒಂದು ಕಾರ್ಯ ದುದ್ದಿಶ್ಯಗಿ ಮಾಡಿದ್ದೇನೆ,
ಅದು ಹಿಂದಿನಿಂದ ನಿನಗೆ ವಿದಿತವಾದೀತು ಈಗನಾನು ಸದ್ಯಕ್ಕೆ ನನ್ನ ಪಟ್ಟ
ಣವನ್ನು ಕುರಿತು ತೆರಳುತ್ತೇನೆ ಇನ್ನು ನಾಲ್ಕು ದಿವಸಗಳೊಳಗೇ ಇಲ್ಲಿಗೆಮ
ರಳಿ ಬರುತ್ತೇನೆ, ಆಗ ನಿನ್ನನ್ನು ಕರೆದುಕೊಂಡು ಹೋಗುವೆನು ” ಎಂದು
ಧೈರ್ಯ ಹೇಳಿದನು.
ಆಮೇಲೆ ಆ ಪಟ್ಟಣದಲ್ಲಿದ್ದ ತನ್ನ ಯಾವತ್ತು ವ್ಯವಹಾರವನ್ನು ನಿರ್ಭಂದ
ನೆ ಮಾಡಿಟ್ಟು ದಿಲ್ಲಿಗೆ ಬಂದು ಅಕಬರ ಬಾದಶಹನಿಗೆ ಬೆಟ್ಟಿಯಾಗಿ " ಮಲಿ
ಯಾಳದ ಅರಸನುಕೇಳಿದ ಯಾವತ್ತು ಪದಾರ್ಥಗಳನ್ನು ಸಂಪಾದಿಸಿಕೊಂ
ಡು ಬಂದಿದ್ದೇನೆ” ಎಂದು ಬಿನ್ನವಿಸಿದನು, ಅದನ್ನು ಕೇಳಿ ಬಾದಶಹನು
ಸಂತುಷ್ಟಾಂತರಂಗನಾಗಿ ಶಹಬಾಸ ! ಆ ವಸ್ತುಗಳು ಎಲ್ಲಿ ಅವ, ಅವುಗಳಂ
ನು ತೋರಿಸು ಎಂದು ಕೇಳಿದನು. ಅದಕ್ಕೆ ಬೀರಬಲನು ನರವರ ! ಆ ಪದಾ
ರ್ಥಗಳನ್ನು ಇಲ್ಲಿಗೆ ತರುವದು ಅಸಾಧ್ಯವಾಗಿ ತೋರಿದ್ದರಿಂದ ಅಲ್ಲಿಯೇ
ಬಿಟ್ಟು ಬಂದಿದ್ದೇನೆ ತಾವು ಒಂದು ಪತ್ರವನ್ನು ಬರೆದುಕೊಡಿರಿ, ನಾನು ಮಲಿ
ಯಾಳಕ್ಕೆ ಹೋಗಿ ಆ ವಸ್ತುಗಳನ್ನು ಆ ರಾಜನ ಸ್ವಾಧೀನಪಡಿಸಿ, ತಮಗೆ
ಪ್ರತ್ಯುತ್ತರವನ್ನು ತಂದುಕೊಡುತ್ತೇನೆ ಎಂದು ವಿಜ್ಞಾಪಿಸಲು, ಬಾದಶಹ
ನು ಬೀರಬಲನ ಅನುಮತಿಯಪ್ರಕಾರ ಲೇಖನವನ್ನಿತ್ತು ತನ್ನ ಮುದ್ರೆಯ
ಉಂಗುರವನ್ನೊತ್ತಿ ಕೊಟ್ಟನು.
ಬೀರಬಲನು ತನ್ನ ಯೋಗ್ಯತೆಗೆ ಸರಿಯಾಗಿ ಗಜ, ತುರಗ, ಸೇನಾ,
ಮೊದಲಾದ ಪರಿವಾರದೊಂದಿಗೆ ಮಲಿಯಾಳಕ್ಕೆ ಪ್ರಯಾಣ ಬೆಳೆಸಿದನು. ಪ
ಯಣ ಗತಿಯಿಂದ ಮಲಿಯಾಳದ ರಾಜಧಾನಿಯನ್ನು ಪ್ರವೇಶಿಸಿ, ತಾನು
ಬಂದ ವರ್ತಮಾನವನ್ನು ರಾಜನಿಗೆ ಹೇಳಿ ಕಳುಹಿಸಿ ಕೊಟ್ಟನು ಆಕೂಡ
ಲೆ ಆ ರಾಜನು ಸನ್ಮಾನದಿಂದ ಬೀರಬಲನನ್ನು ತನ್ನೆಡೆಗೆ ಬರಮಾಡಿಕೊಂ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೦
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.