ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೪೧



ಡು, ಯೋಗ್ಯಾಸನದಲ್ಲಿ ನಿಶ್ರಮಿಸುವಂತೆ ಹೇಳಿ, ಬಂದ ಸಮಾಚಾರವೇನೆಂ ದು ಪ್ರಶ್ನೆ ಮಾಡಿದನು, ಆಗ ಬೀರಬಲನು ಅಕಬರ ಬಾದಶಹನ ಪತ್ರಿಕೆಯ ನ್ನು ಅವನ ಮುಂದೆ ಇಟ್ಟನು ರಾಜನು ಆ ಪತ್ರಾಭಿಪ್ರಾಯವನ್ನು ತಿಳಿದು ಕೊಂಡು, ಆ ವಸ್ತುಗಳು ಎಲ್ಲಿ ಅವೆ ? ಎಂದು ಕೇಳಿದನು ಆಗ ಬೀರಬಲನು ಕೊತವಾಲ ಸಾಹೇಬರಂತೂ ಇಲ್ಲಿಯೇ ಇರುವರು ಇನ್ನು ಒಬ್ಬ ಸ್ತ್ರೀಯ ನ್ನೂ , ಒಬ್ಬ ವೇಶೈಯನ್ನೂ ಕರೆತರಿಸಬೇಕು ಎಂದು ಹೇಳಿ, ಆ ಸ್ತ್ರೀಯಳ ಮತ್ತು ವೇಶ್ಯೆಯ ಹೆಸರನ್ನೂ ಹೇಳಿ, ಅವರು ವಾಸಿಸುವ ಗೃಹವು ಯಾವ ಬೀದಿಯಲ್ಲಿ ಇರುವವೆಂಬದನ್ನೂ ತಿಳಿಸಿದನು ಕರ್ಮಚಾರಿಗಳು ರಾಜಾಜ್ಞೆ ಯಪ್ರಕಾರ ಅವರೀರ್ವರನ್ನೂ ರಾಜಸಭೆಗೆ ಕರೆತಂದರು ಆಗ ಬೀರಬಲನು ಮಹಾರಾಜ ! ನಾನು ಈ ಪೂರ್ವದಲ್ಲಿ ಸಾವು ಕಾರನ ವೇಷದಿಂದ ಈ ಪಟ್ಟ ಣಕ್ಕೆ ಬಂದಿದ್ದೆನು. ಆಗ ನಾನು ( ತನ್ನ ಪತ್ನಿಯನ್ನು ತೋರಿಸಿ ) ಈ ಸ್ತ್ರೀ ಯಳನ್ನು ನಾನು ವಿವಾಹ ಮಾಡಿಕೊಂಡಿದ್ದೆನು ಪ್ರತಿದಿನ ನಾನು ಹೊರ ಬೀಳುವಾಗ ಇವಳಿಗೆ ವೇತ್ರಾಯುಧದಿಂದ ಒಂದು ಬಲವಾದ ಪೆಟ್ಟನ್ನು ಕೊಟ್ಟು ಹೋಗುವ ನಿಯಮವನ್ನಿಟ್ಟಿದ್ದೆನು ಒಂದುದಿವಸ ನನಗೆ ಪಕ್ವವಾದಒಂ ದು ಕರಬೂಜಿಯ ಹಣ್ಣು ದೃಷ್ಟಿಗೆ ಬೀಳಲು, ಅದನ್ನು ಕ್ರಯಕ್ಕೆ ತೆಗೆದು ಕೊಂಡು, ಎರಡು ಭಾಗಮಾಡಿ, ಒಂದು ಶುಭ್ರವಾದ ವಸ್ತ್ರವನ್ನು ಪರಿವೇಷ್ಟ ನ ಮಾಡಿ, ಒಂದು ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿ; ಇವಳನ್ನು ಕುರಿತು ನಾನು ರಾಜತನಯನ ಶಿರಸ್ಸನ್ನು ಕೊಯ್ದುಕೊಂಡು ಬಂದಿದ್ದೇನೆ ಈ ಸಂ ಗತಿಯನ್ನು ಯಾರಮುಂದೆ ಪ್ರಕಟಮಾಡಬೇಡ, ಎಂದು ಕಟ್ಟಪ್ಪಣೆ ಮಾಡಿ. ವೇತ್ರಾಯುಧದಿಂದ ಹೊಡೆದು ಹೊರಬಿದ್ದು ಹೋದೆನು ಆಮೇಲೆ ಇವಳು ಮನಸ್ವಿಯಾಗಿ ರೋದಿಸಿ, ನನ್ನ ಬಂಧನಕ್ಕೆ ಕಾರಣಳಾದಳು, ಮ ತ್ತು ವಧಸ್ಥಾನಕ್ಕೆ ಕರದೊಯ್ಯುವಾಗ ಈ ಸಂಗತಿಯನ್ನು ಇವಳಿಗೆ ಹೇಳಿ ಕಳುಹಿಸಲು, ನನ್ನನ್ನು ರಕ್ಷಿಸುವದಕ್ಕೆ ಕಿಂಚಿತ್ತಾದರೂ ಪ್ರಯತ್ನ ಪಡದೆ ಸ್ಪಷ್ಟವಾಗಿ ಕುಳಿತುಕೊಂಡು ಬಿಟ್ಟಳು ಇವಳ ಜಾತಿಯಲ್ಲಿ ಕುಲಿನಳಾಗಿದ್ದ ರೂ, ಇಂಥ ನಿಕೃಷ್ಟತೆಯನ್ನು ತೋರಿಸಿದಳು ಆದ್ದರಿಂದ ತಾವು ಬಯಸಿದ ಪ್ರಧಮವಸ್ತುವು, - ಅನಲಮ ಕಮ್ ಅಸಲ ” ವೆಂಬದು; ಇವಳೇ ಇನ್ನು ದ್ವಿ ತೀಯ ವಸ್ತುವಾದ : ಕಮ್ ಅಸಲಕಾ ಅಸಲ ” ಎಂಬ ವಸ್ತುವು ಈ ವೇ ಶ್ಯೆಯು, ಹ್ಯಾಗಂದರೆ ಇವಳು ಕನಿಷ್ಟ ಜಾ ತಿಯವಳಾದರೂ, ನನ್ನ ಪ್ರಾಣ ರಕ್ಷಣೆಯನ್ನು ಮಾಡುವದಕ್ಕೆ ಯಾವ ಯಾವ ಉಪಾಯಗಳನ್ನು ಮಾಡಿದ ಳೆಂಬ ಸಂಗತಿಯು ತಮಗೆ ವಿದಿತವದೆ. ಇನ್ನು ಮೂರನೇ ವಸ್ತುವಾದ