ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೪೪)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೪೫

ಶ್ಯವಾಗಿ ಬೀರಬಲನನ್ನು ತನ್ನೆಡೆಗೆ ಬರಮಾಡಿಕೊಂಡಿದ್ದನು. ತನ್ನ ಕಾರ್ಯವು ಪೂರ್ಣವಾದ ಮೇಲೆ ಇವನನ್ನು ಅವಮಾನಗೊಳಿಸಬೇಕೆಂದು ಅಕಬರ ಬಾದಶಹನ ಭಾವಪಟವನ್ನು ಕೌಚಕೂಪದ ಗೃಹದಗೋಡೆಗೆ ತೂಗಹಾಕಿದ್ದನು. ಬೀರಬಲನು ಬಹಿರ್ದಿಶೆಗೆ ಹೋದಾಗ ಆ ಭಾವಪಟವು ಕಣ್ಣಿಗೆ ಬಿತ್ತು. ಆಕೂಡಲೆ ಹಿಂದುರುಗಿ ಬಾದಕಹನ ಬಳಿಗೆ ಬಂದು, ಖಾವಂದ ತಮಗೆ ಮಲಬದ್ಧತೆಯ ರೋಗವು ಅಂಟಿಕೊಂಡಿರುವದೇನು ? ಎಂದು ಪ್ರಶ್ನೆ ಮಾಡಿದನು. ಆಗ ಆವನು ಅದ್ಯಾಕೆ ಎಂದು ಕೇಳಿದನು. ಅದಕ್ಕೆ ಬೀರಬಲನು, ಕೌಚಕೂಪದಲ್ಲಿ ತೂಗು ಹಾಕಿರುವ ನಮ್ಮ ಬಾದಕಹನ ಭಾವಪಟದ ಮೇಲೆ ತಮ್ಮ ದೃಷ್ಟಿಯು ಬಿದ್ದ ಕೂಡಲೆ ಭಯವು ಹುಟ್ಟಿ ತಾವು ಬೇಗನೆ ಮಲವಿಸರ್ಜನೆಯನ್ನು ಮಾಡಿಕೊಂಡು ಬರುತ್ತಿರಬಹುದೆಂಬಂತೆ ಕಾಣುತ್ತದೆ. ಇದರಲ್ಲಿ ಏನೂ ಸಂದೇಹವಿಲ್ಲ, ಎಂದನು.

ಈ ಮಾತು ಕಿವಿಗೆ ಬಿದ್ದ ಕೂಡಲೆ, ಮಶದದ ಬಾದಶಹನು ಲಜ್ಜಿತನಾಗಿ ಮುಖವನ್ನು ತಗ್ಗಿಸಿದನು.

೧೮೧. ಇಹದಲ್ಲಿ ಸುಖವುಂಟು, ಪರದಲ್ಲಿ ಇಲ್ಲ. ಪರದಲ್ಲಿ ಸುಖ
ವುಂಟು ಇಹದಲ್ಲಿ ಇಲ್ಲ ಇಹಪರಗಳೆರಡರಲ್ಲಿಯೂ ಸುಖ
ವಿಲ್ಲ. ಮತ್ತು ಇಹಪರಗಳೆರಡರಲ್ಲಿಯೂ ಸುಖ
ವುಂಟು. ಇಂಥ ಮನುಷ್ಯರು ಯಾರು ?

ಒಂದು ದಿವಸ ಅಕಬರ ಬಾದಶಹನು ಸಿಂಹಾಸನಾಧಿಷ್ಟಿತನಾಗಿ ಬೀರಬಲನನ್ನು ಕುರಿತು, ಮೇಲೆ ಬರೆದ ನಾಲ್ಕು ವಿಧದ ಮನುಷ್ಯರನ್ನು ತಂದು ತೋರಿಸು ಎಂದು ಅಪ್ಪಣೆಮಾಡಿದನು. ಆ ಕೂಡಲೆ ಬೀರಬಲನು ಅರಮನೆಯಿಂದ ಹೊರಬಿದ್ದು ಒಬ್ಬ ವೇಶ್ಯೆಯನ್ನೂ ಒಬ್ಬ ಸನ್ಯಾಸಿಯನ್ನೂ ಒಬ್ಬ ಭಿಕ್ಷುಕನನ್ನೂ ಒಬ್ಬ ಧರ್ಮಾತ್ಮನಾದ ಧನಾಡ್ಯಗೃಹಸ್ಥನನ್ನೂ ಕರೆದುಕೊಂಡು ರಾಜಸಭೆಯನ್ನು ಪ್ರವೇಶಿಸಿದನು, ಮತ್ತು ತಮ್ಮ ಆಜ್ಞಾನುಸಾರವಾಗಿ, ನಾಲ್ಕು ವಿಧದ ಮನುಷ್ಯರನ್ನು ಕರೆದುಕೊಂಡು ಬಂದಿದ್ದೇನೆ, ಎಂದು ವಿಜ್ಞಾಪನೆಯನ್ನು ಮಾಡಿಕೊಂಡನು. ಆಗ ಬಾದಶಹನು ಅದನ್ನು ವಿಸ್ತರಿಸಿ ಹೇಳು ? ಎಂದು ಅಪ್ಪಣೆಮಾಡಿದನು. ಆಗ ಬೀರಬಲನು ಭೂವರ ! ಈ ವೇಶೈಗೆ ಇಹದಲ್ಲಿ ಸುಖವಿರುವದೇ ಹೊರತು, ಪರಲೋಕದಲ್ಲಿ ಇವಳಿಗೆ ಸ್ವರ್ಗಾದಿ ಭೋಗಗಳು ದೊರೆಯಲಾರವು. ಇನ್ನು ಈ ಸನ್ಯಾಸಿಯು ಎರಡನೇ ಪ್ರಕಾರದವನು ಹ್ಯಾಗಂದರೆ, ಇವನು ಈ ಲೋಕದಲ್ಲಿ ಭಿಕ್ಷೆಯಿಂದ ಕಾಲಹರಣಮಾಡಿ ತನ್ನ ಉಪಜೀವನವನ್ನು ಸಾಗಿಸಿಕೊಂಡು ಜಗನ್ನಿಯಂತನ