ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ಪಾದಾರವಿಂದವನ್ನು ನೆನೆಯುತ್ತಿರುವನು. ಇವನಿಗೆ ಒಂದು ದಿವಸ ಹೊಟ್ಟೆಗೆ ಸಾಕಾಗುವಷ್ಟು ಆಹಾರ ಸಾಮಗ್ರಿಯು ದೊರೆದರೆ ದೊರೆಯಿತು, ಇಲ್ಲವಾದರೆ ಇಲ್ಲ ಈ ಪ್ರಕಾರ ವಿರುವದರಿಂದ ಇಹಲೋಕದಲ್ಲಿ ಇವನಿಗೆ ಸೌಖ್ಯವು ದೊರಿಯುವದಿಲ್ಲ. ಪರಲೋಕದಲ್ಲಿ ಯಥೇಚ್ಛವಾದ ಸುಖವು ಲಭಿಸುವದು ಅದರಿಂದ ಇವನಿಗೆ ಇಹದಲ್ಲಿ ಸುಖವಿಲ್ಲ ಪರದಲ್ಲಿ ಸುಖವುಂಟು ಇನ್ನು ಈ ಭಿಕ್ಷುಕನು ಇವನು ತನ್ನ ಉದರ ಪೋಷಣೆಯ ಸಲುವಾಗಿ ದಿನಾಲು ಭಿಕ್ಷೆಬೇಡುವದಕ್ಕೆ ಹೋಗಿ ಅನೇಕ ಪ್ರಕಾರದ ಅಸತ್ಯ ಭಾಷಣಗಳನ್ನಾಡುತ್ತಾನೆ. ಇವನು ಅಹರ್ನಿಕ ಕಷ್ಟಪಡುವದರಿಂದ ಜಗನ್ನಿಯಂತನನ್ನು ಸ್ತುತಿಸಲಿಕ್ಕೆ ಒಂದರಕ್ಷಣವಾದರೂ ಕಾಲವು ದೊರೆಯುವದಿಲ್ಲ ಅದರಿಂದ ಇವನಿಗೆ ಇಹಪರಗಳೆರಡಲ್ಲಿಯೂ ಸುಖವು ದೊರೆಯಲಾರದು ಇನ್ನು ಈ ಧರ್ಮಾತ್ಮನಾದ ಧನಾಡ್ಯನು ನಾಲ್ಕನೇ ಪ್ರಕಾರದ ಮನುಷ್ಯನು ಹ್ಯಾಗಂದರೆ, ಇವನ ಹತ್ತಿರ ಅಸಂಖ್ಯಾಕವಾದ ಸಂಪತ್ತಿಯಿರುವದು ಆ ಸಂಪತ್ತಿನ ಬಲದಿಂದ ಅನೇಕ ಪ್ರಕಾರದ ಪುಣ್ಯಸಾಧನೆಗಳನ್ನು ಮಾಡಿಕೊಂಡು ತಾನು ಉಂಡುಟ್ಟು ಪರರಿಗೂ ಸುಖಕೊಡುತ್ತಾನೆ. ಇದರಿಂದ ಇವನಿಗೆ ಇಹಪರಗ ಳೆರಡರಲ್ಲಿಯೂ ಸುಖವುಂಟು. ಎಂದು ವಿಸ್ತರಿಸಿ ಹೇಳಿದನು.
ಬೀರಬಲನ ಈ ಪ್ರಕಾರದ ಚಾತುರ್ಯಯುಕ್ತವಾದ ಬಾಷಣಗಳನ್ನು ಕೇಳಿ ಬಾದಶಹನಿಗೂ ತದಿತರ ಸಭಾಸದರಿಗೂ ಹರುಷವೂ ಆಶ್ಚರ್ಯವೂ ಉಂಟಾಯಿತು. ಆಗ ಬಾದಶಹನು ಬೀರಬಲನು ಕರೆತಂದ ಆನಾಲ್ಕೂ ಜನರಿಗೆ ಅವರವರ ಯೋಗ್ಯತೆಯ ಪ್ರಕಾರ ಬಹುಮಾನವನ್ನಿತ್ತು ಕಳಿಸಿ ಕೊಟ್ಟನು ಮತ್ತು ಆ ಧನಾಡ್ಯನಿಗೆ ಪ್ರತಿದಿವಸ ರಾಜಸಭೆಯಲ್ಲಿ ಬಂದು ಕುಳಿತು ಕೊಳ್ಳುವ ಬಹುಮಾನವನ್ನಿತ್ತನು.

- ೧೮೨, ಚಂಚಲ ನೈನ ಛಿನೈನ ಛಿವಾಯೇ )-

ಒಂದು ದಿವಸ ಅಕಬರ ಬಾದಶಹನು ಸಾಯಂಕಾಲದಲ್ಲಿ ವಾಯು ಸೇವನಾರ್ಥವಾಗಿ ಹೊರಟನು ಆಗ ಅವನ ದೃಷ್ಟಿಯು ಒಬ್ಬ ತನ್ವಂಗಿಯ ಮೇಲೆಬಿತ್ತು ಬಾದಶಹನು ಬಂದದ್ದನ್ನು ಕಂಡು ಆ ಪ್ರಮದೆಯು ದ್ವಾರದ ಮರೆಗೆ ನಿಂತುಕೊಂಡಳು ಆ ಕೂಡಲೆ ಹಿಂದಿರುಗಿಬಂದು ಬೀರಬಲನನ್ನು ಕರೆಯಿಸಿ, ಚಂಚಲ ನೈನ ಛಿನೈನ ಛಿವಾಯೇ ಈ ಸಮಸ್ಯೆಯನ್ನು ಪೂರ್ತಿ ಗೋಳಿಸು ! ಎಂದು ಹೇಳಿದನು. ಆಗ ಬೀರಬಲನು.
ಸೂರ್ಯಛಿವೈ ಅದರೀ ಬದರೀ ಅರು ಚಂದ ಛಿವೈ ಹೈ ಅಮಾವಸ ಆಯೇ ವಾನೀಕೀ ಬೂನ ಪತಂಗ ಛಿವೈ ಅರು ಮೀನ ಛಿವೈ ಇ |