ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೪೭



ಚ್ಛಾಜಲವಾಯೇ ಭೋರಹುಯೇ ಪರಚೋರ ಛಿವೈ ಅರು ಮೋರ ಛಿವೈ ಋತು ಫಾಗುನ ಆಯೇ | ಓಟಕರೋಶತ ಘಾಂಘಟಕಿ ಪರ ಚಂಚಲ ನೈನ ಛಿವೈನ ಛಿವಾಯೇ ||
ಖಾವಂದ ಇದರ ಅಭಿಪ್ರಾಯವೆಂತೆಂದರೆ ಸೂರ್ಯನು ಪ್ರತಿ ದಿವಸ -ದಲ್ಲಿ ಪಶ್ಚಿಮಾಂಬುಧಿಯಲ್ಲಿ ಅದೃಶ್ಯನಾಗುತ್ತಾನೆ, ಚಂದ್ರನು ಅಮಾವಾಸ್ಯೆ ಯಲ್ಲಿ ಅದೃಶ್ಯನಾಗುತ್ತಾನ ಜಲವು ವಾಯುದೋಷಣೆಯಿಂದ ಅದೃಶ್ಯವಾಗುತ್ತದೆ ಮತ್ಸ್ಯವು ಜಲದಲ್ಲಿ ಅಡಗಿಕೊಳ್ಳುತ್ತದೆ ಗದ್ದಲವಾದ ಕೂಡಲೆ ಕಳ್ಳನು ಮರೆಯಾಗಿ ಹೋಗಿ ಕುಳಿತು ಕೊಳ್ಳುತ್ತಾನೆ ಫಾಲ್ಗುಣ ಮಾಸದಲ್ಲಿ ನವಿಲುಗಳು ಕಾಣದಾಗುತ್ತವೆ. ಆದರೆ ತರುಣಿಯರ ಚಲಚಲವಾದ ನಯನಗಳು, ದ್ವಾರವನ್ನು ಮರೆ ಮಾಡಿದರೂ ಸಹ, ಅದೃಶ್ಯವಾಗಲಿಲ್ಲ ಎಂದು ಹೇಳಿ ಸಮಸ್ಯೆಯನ್ನು ಪೂರ್ಣಮಾಡಿದನು.
ಈ ಕವಿತ್ವವನ್ನು ಕೇಳಿ ಬಾದಶಹನು ಹೃಮಾನಸನಾದನು.

- (೧೮೩. ಬಾದಶಹನ ನಖ)-

ಬಲಕ್ ಪಟ್ಟಣದ ಬಾದಶಹನ ಅಂಗುಲಿಯ ನಖಪು ಒಂದು ಕಾಳಗದಲ್ಲಿ ಘಾಯವಾಗಿ ಹೋಗಿತ್ತು, ಅವನ ಆಶ್ರಯದಲ್ಲಿದ್ದ ವೈದ್ಯರಿಂದಲೂ, ಧನ್ವಂತರಿಗಳಿಂದಲೂ ಅನೇಕ ಉಪಾಯಗಳನ್ನು ಮಾಡಿಸಿದನು. ಅದರಿಂದ ಏನೂ ಪ್ರಯೋಜನವಾಗಲಿಲ್ಲ ಅದರಿಂದ ಅವನು ಕುಪಿತನಾಗಿ ಯಾವತ್ತೂ ವೈದ್ಯರನ್ನು ಪ್ರತಿಬಂಧನದಲ್ಲಿ ಇಡೆಸಿಬಿಟ್ಟನು. ಮತ್ತು ಪರದೇಶದಿಂದ ಪ್ರಸಿದ್ಧರಾದ ಧನ್ವಂತರಿಗಳನ್ನು ಕರೆಯಿಸಿ ಔಷಧೋಪಚಾರ ನಡೆಯಿಸಿದನು ಅವರಿಂದಲೂ ಹೊಸ ಉಗುರು ಬರಲಿಲ್ಲ, ಆಗ ಅವರನ್ನು ಸಹ ಪ್ರತಿಬಂಧದಲ್ಲಿಟ್ಟು “ ನನ್ನ ಅಂಗುಲಿಯಲ್ಲಿ ನೂತನವಾದ ನಖವು ಪ್ರಾಪ್ತವಾದರೆ ನಿಮ್ಮನ್ನು ಈ ಬಂಧನದಿಂದ ತಪ್ಪಿಸುತ್ತೇನೆ, ಇಲ್ಲವಾದರೆ ಆಜನ್ಮ ಪರಿಯಂತರ ನಿಮ್ಮನ್ನು ಬಂಧನದಿಂದ ಬಿಡಲಾರೆನು ” ಎಂದು ಅಪ್ಪಣೆ ಮಾಡಿದನು. ಈ ಭಯದಿಂದ ಆ ದೇಶದಲ್ಲಿ ವೈದ್ಯರೆಂಬ ಹೆಸರೇ ಮುಳುಗಿ ಹೋಯಿತು.
ಈ ವರ್ತಮಾನವು ಕಿಂಚಿತ್ ಕಾಲವಾದಮೇಲೆ ಈ ಭರತವರ್ಷದಲ್ಲಿ ಪಸರಿಸಿತು, ಇಷ್ಟೇ ಅಲ್ಲ; ಅದು ಅಕಬರ ಬಾದಶಹನಿಗೂ ವಿದಿತವಾಯಿತು, ಆಗ ಅವನು ಬಲ್ಕ” ಪಟ್ಟಣದ ಬಾದಶಹನು ಬಹಳೇ ಅತ್ಯಾಚಾರಿಯಾಗಿದ್ದಾನೆ ಅವನ ರಾಜ್ಯದಲ್ಲಿಯ ಪ್ರಜೆಗಳೆಲ್ಲರೂ ತ್ರಸ್ತರಾಗಿದ್ದಾರೆ, ಆ ಜನರ ದುಃಖನಿವಾರಣೆಯ ಬಗ್ಗೆ ಯಾವ ಉಪಾಯವನ್ನು ಮಾಡಬೇಕು ! ಎಂದು ತನ್ನ ಸಭಾಸದರಲ್ಲಿ ಪ್ರಶ್ನೆಯನ್ನು ತೆಗೆದನು, ಆಗ ಬೀರಬಲನು ಭೂವರ