ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೫೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ನನ್ನ ಸೇವೆಯನ್ನು ಚನ್ನಾಗಿ ಮಾಡುತ್ತಾಳೆ ಎಂದನು. ಆಗ ಬಾದಶಹನು ಇವಳು ಕೇವಲ ಕೃಷ್ಣವರ್ಣವುಳ್ಳವಳು ಅಪ್ಸರೆಯರು ತ್ರಿಲೋಕಸುಂದರಿ ಇರುವರೆಂದು ಕೇಳಿದ್ದೇನೆ ಎಂದನು. ಆಗ ಬೀರಬಲನು ಧರ್ಮಾವತಾರ ಸುಂದರತ್ವವು ಗುಣಗಳಿಂದ ಉಂಟಾಗುತ್ತದೆಯೇ ಹೊರತು ರೂಪ,ವರ್ಣದಿಂದ ಬರತಕ್ಕದ್ದಲ್ಲ, ಇವಳಿಂದ ನನಗೆ ಸ್ವರ್ಗಸುಖವು ಲಭಿಸುತ್ತದೆ ಎಂದು ಪ್ರತಿಯಾಗಿ ನುಡಿದನು, ಆಮೇಲೆ ಬಾದಶಹನು ಒಳ್ಳೇದು; ಡಾಕಿನಿಯು ಎಲ್ಲಿರುವಳು ಎಂದು ಕೇಳಿದನು. ಆಗ ಬೀರಬಲನು ಆ ವೇಶ್ಯೆಯನ್ನು ಮುಂದಕ್ಕೆ ಕರೆದು- ಸರಕಾರ ? ಇವಳು ಡಾಕಿನಿಯು, ಇವಳು ಯಾರನ್ನು ಆಶ್ರಯಿಸುವಳೋ ಅವರ ಸರಸ್ವವನ್ನು ಹರಣಮಾಡಿ ಅವನನ್ನು ಮಣ್ಣು ಪಾಲು ಮಾಡಿ ಹೋಗುತ್ತಾಳೆ ಎಂದು ಹೇಳಿದನು. ಈ ಯುಕ್ತಿಯಿಂದ ಬಾದಶಹನು ಪ್ರಸ ನ್ನನಾದನು.

(೧೯೬ ಯಾವ ನದಿಯ ಜಲವು ಉತ್ತಮವಾದದ್ದು.) -

ಒಂದುದಿವಸ ಬಾದಕಹನು ತನ್ನ ಪ್ರಾಸಾದದ ಮುಂಭಾಗದಲ್ಲಿ ನಿಂ ತುಕೊಂಡು ಯಮುನಾ ಪ್ರವಾಹವನ್ನು ನೋಡಹತ್ತಿದ್ದನು, ಆಗ ಬೀರಬ ಲನು ಅಲ್ಲಿಗೆ ಬಂದನು ಅವನನ್ನು ನೋಡಿ- ಬೀರಬಲ್ಲ ! ಯಾವ ನದಿಯ ಜಲವು ಉತ್ತಮವಾದದ್ದು ಎಂದು ಕೇಳಿದನು. ಅದಕ್ಕೆ ಬೀರಬಲನು ಯಮುನಾ ನದಿಯ ಜಲವು ಶ್ರೇಷ್ಠವಾದದ್ದು; ಎಂದು ಉತ್ತರಕೊಟ್ಟನು. ಆಗ ಪುನಃ ಬಾದಶಹನು ನಿಮ್ಮ ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಗಂಗಾನದಿಯು ಮಹತ್ವವಾದದ್ದೆಂದು ಹೇಳಿರಲು, ನೀನು ಯಮುನಾಜಲವು ಶ್ರೇಷ್ಠವಾದದ್ದೆಂದು ಹೇಳುವಿಯಲ್ಲಾ ಹೀಗೇಕೆ ಎಂದು ಕೇಳಿದನು. ಅದಕ್ಕೆ ಬೀರಬಲನು ಪೃಥ್ವಿನಾಥ ! ಗಂಗೆಯಲ್ಲಿ ಇದ್ದದ್ದು ಜಲವಲ್ಲ ! ಅಮೃತವು; ಎಂದು ಹೇಳಿದನು. ಈ ಉತ್ತರದಿಂದ ಬಾದಕಹನು ಸುಮ್ಮನಾದನು.

-( ೧೯೭ ದಾದಃ ಹುಜೂರಸ್ತ. -

ಒಂದುದಿವಸ ಬೀರಬಲನೂ ಬಾದಶಹನೂ ಕೂಡಿಕೊಂಡು ತುರಗಾ ರೂಢರಾಗಿ ವಾಯು ಸೇವನಾರ್ಥವಾಗಿ ಹೊರಟಿದ್ದರು, ಆಗ ಬಾದಶಹನು ವಿನೋದಕ್ಕಾಗಿ- "ಬೀರಬಲ್ಲ ? ಈ ಅಶ್ವಪಿದರ ಶುಮಾನ್ತ ! ” ಎಂದನು [ ಈ ವಾಕ್ಯಕ್ಕೆ ಎರಡು ಅರ್ಥಗಳಾಗುತ್ತವೆ. ಮೊದಲನೇದು, ಈ ಕುದುರೆ ಯು ನಿಮ್ಮ ತಂದೆಯದೋ ! ಎಂದೂ ಎರಡನೇದು ಈಕುದುರೆಯೇ ನಿಮ್ಮ ತಂದೆಯೋ ! ] ಅದಕ್ಕೆ ಬೀರಬಲನು “ ದಾದಃ ಹುಜೂರಸ್ತ ” ಎಂದು ಉತ್ತರ ಕೊಟ್ಟನು [ ಈ ವಾಕ್ಯಕ್ಕೂ ಎರಡು ಅರ್ಥಗಳಾಗುತ್ತವೆ. ಮೊದಲ