ನೇದು ತಾವು ಕೂಟ್ಟದ್ದೂ ;ಎಂದೂ ಎರಡನೇದು ಈ ಕುದುರೆಯು ನಿಮ್ಮ
ಅಜ್ಜ ಎಂದು ಹೇಳಿದಂತೆ.ಆಯಿತು ] ಬಾದಶಹನು ನಿರುತ್ತರನಾದನು
೧೯೮. ಕೆಲಪು ( ಮೀಶಿಗೆ ಹಚ್ಚಿಕೂಳ್ಳುವ ಬಣ್ಣ ) ಹಚ್ಚಿ
ಕೊಳ್ಳುವದರಿಂದ ಸುಂದರತ್ವವು ಬರುವದಿಲ್ಲ.
ಅಕಬರ ಬಾದಶಹನು ವೃಧ್ಧನಾಗಲು, ಅವನ ಕೂದಲುಗಳೆಲ್ಲ ಬಿಳು
ಪಾಗಿಹೋದವು. ಅದರಿಂದ ಅವುಗಳಿಗೆ ಕೆಲವು ಹಚ್ಚಿ ಕೊಳ್ಳುತ್ತಿದ್ದನು ಆ ಸಮದಲ್ಲಿ ಬೀರಬಲನು ಅಲ್ಲಿಗೆ ಬಂದನು ಆಗ ಬಾದಶಹನು ಅವನನ್ನು ನೋಡಿ
ಬೀರಬಲ್ಲ ! ಕೆಲವನ್ನು ಹಚ್ಚಿ ಕೊಳ್ಳುವದರಿಂದ ಸುಂದರತ್ವವು ಉಂಟಾಗುವ
ದಿಲ್ಲ ! ಎಂದನು ಅದಕ್ಕೆ ಬೀರಬಲನು ಧೈರ್ಯದಿಂದ - "ಹೀಗೆ ತಿಳಿದಿದ್ದರು ಕೆಲವನ್ನು ಹಚ್ಚಿ ಕೊಳ್ಳುತ್ತಿರುವರೆಲ್ಲಾ ! ಅವರು ಕೆಲಪು ಹಚ್ಚಿ ಕೊಂಡರೆ
ವೃದ‍್ಧತ್ವವು ಹೋಗಿ, ತರುಣತ್ವವು ಪ್ರಾಪ್ತವಾಗುವದೆಂದು ತಿಳಿದು ಕೊಂಡಂತೆ ಕಾಣುತ್ತದೆ "ಎಂದನು.
ಆ ದಿವಸದಿಂದ ಬಾದಶಹನು ಕಲಪು ಹಚ್ಚಿ ಕೊಳ್ಳುವದನ್ನು ಬಿಟ್ಟು
ಬಿಟ್ಟನು.
ಒಂದು ದಿವಸ ಬಾದಶಹನು ಅರಣ್ಯದ ಮಾರ್ಗವನ್ನು ಹಿಡಿದು ಹೊರಟಿದ್ದನು ಆಗ ಒಂದು ಏಳೆಕೂನನ್ನು ಬುಟ್ಟಯೊಳಗೆ ಇಟ್ಟುಕೊಂಡು, ಹೋಗುತ್ತಿರುವ ಕಾಡಿನ ಸ್ತ್ರೀಯನ್ನು ನೋಡಿದನು ಅದನ್ನು ನೋಡಿ ಅವನಿಗೆ ಬಹಳ ಆಶ್ಚರ್ಯವಾಯಿತು ಆಗ ಅವನ ಮನಸ್ಸಿನಲ್ಲಿ " ಸ್ತ್ರೀಯರೆಂದರೆ ಎಲ್ಲರೂ ಒಂದೇತರ ಹೀಗಿದ್ದು ನಮ್ಮ ಅಂತಃಪುರದ ಸ್ತ್ರೀಯರು ಸುಮ್ಮ ಸುಮ್ಮನೆ ಒಣ ಜಂಭವನ್ನು ಮಾಡುತ್ತಿರುವರು . ಹೀಗ್ಯಾಕೆ ಇರಬಹುದು ; ಇದನ್ನು ಪರೀಕ್ಷಿಸಿ ನೋಡಬೇಕೆಂದು " ಕಲ್ಪನೆಯು ಹುಟ್ಟತು ಅವನು ಹಾಗೆಯೇ ತಿರುಗಿ ,ಅಂತಃಪುರಕ್ಕೆ ಬಂದನು. ಒಬ್ಬ ಬೇಗಮ್ಮಳನ್ನು ಸಹಾ ಮಾತಾಡಿಸಲಿಲ್ಲ.ಆಗ ಅವರು ಗಾಬರಿಯಾಗಿ ಬೀರಬಲನನ್ನು ಕರೆಯಿಸಿ ಕೊಂಡು, ಇದಕ್ಕೆ ಏನುಉಪಾಯ ಮಾಡಬೇಕೆಂದು ಪ್ರಶ್ನೆ ಮಾಡಿದರು. ಅದಕ್ಕೆ ಬೀರಬಲನು - " ನಾಳೆಯ ದಿವಸದಿಂದ ಉದ್ಯಾನದೊಳಗಿನ ಯಾವ ವೃಕ್ಷಗಳಿಗೂ ನೀರು ಹಾಕಬೇಡಿರೆಂದು, ತೋಟಗರಿಗೆ ಅಪ್ಪಣೆ ಮಾಡಿರಿ" ಎಂದು ಹೇಳಿ ಕಳುಹಿಸಿ ಕೊಟ್ಟನು ಅವರು ಅದರಂತೆಯೇ ಅಪ್ಪಣೆ ಮಾಡಿ ದರು. ನಾಲ್ಕಾರು ದಿವಸಗಳೊಳಗಾಗಿ ಲತೆ ; ವೃಕ್ಷಗಳೆಲ್ಲ ಶುಷ್ಕವಾಗಿ ಹೋದವು, ಅದನ್ನು ನೋಡಿ ಬಾದಶಹನು ಕುಪಿತನಾದನು ಆಗ ಒಬ್ಬ ಬೇಗಮ್ಮ