ಳು ಮುಂದೆಬಂದು "ಸ್ವಾಮೀ ! ನಿರಪರಾಧಿಯವನ ಮೇಲೆ ಕೋಪಿಸಕೂ
ಡದು ನಾವೇ ಈ ಗಿಡಗಳಿಗೆ ನೀರು ಹಾಕಬೇಡಿರೆಂದು ಅಪ್ಪಣೆ ಮಾಡಿದ್ದೇವೆ?
ಎಂದಳು ಆಗ ಬಾದಶಹನು ಹೀಗೇಕೆ ಮಾಡಿದಿರಿ? ಎಂದು ಪ್ರಶ್ನೆ ಮಾಡಿದ
ನು ಆ ಕೂಡಲೆ ಬೇಗಮ್ಮಳು- ಅರಣ್ಯದೊಳಗೆ ಬೆಳೆದಿರುವ ವೃಕ್ಷಗಳಿಗೆ
ಯಾರು ನೀರನ್ನು ಹಾಕುತ್ತಾರೆ? ಹಾಕದಿದ್ದರೂ ಸಹ ಅವು ಹಚ್ಚಗೆ ಹಸ
ರು ಮುರಿಯುತ್ತಿರುವದಿಲ್ಲವೇ? ” ಎಂದು ಕೇಳಿದಳು ಆಗ ಬಾದಶಹನ ಮ
ನಸ್ಸಿನ ಸಂಶಯವು ನಿವೃತ್ತಿಯಾಯಿತು.
-( ೨೦೦ ಅಂತ್ಯಜನು ಮುಸಲ್ಮಾನ ನಾಗಲಿಲ್ಲ.) -
"ಒಂದು ದಿವಸ ಬಾದಶಹನು ಬೀರಬಲನನ್ನು ಕುರಿತು- ನೀನು ಮು
ಸಲ್ಮಾನ ಧರ್ಮವನ್ನು ಸ್ವೀಕರಿಸಿದರೆ, ನಿನಗೆ ಅರ್ಧ ರಾಜ್ಯವನ್ನು ಕೊಡು
ತ್ತೇನೆ ” ಎಂದನು ಅದಕ್ಕೆ ಬೀರಬಲನು- ನಾಳೆಯ ದಿನದಲ್ಲಿ ವಿಚಾರಮಾ
ಡಿಕೊಂಡು ಉತ್ತರವನ್ನು ಹೇಳುವೆನು. ” ಎಂದು ಹೇಳಿ, ಓಲಗದಿಂದ ಹೊ
ರಬಿದ್ದು, ಅಂತ್ಯಜರ ಕೇರಿಯನ್ನು ಹೊಕ್ಕು “ ಬಹಳೇ ಜಾಗ್ರತೆಯಿಂದ ಇರ್ರಿ
! ಯಾಕಂದರೆ ಬಾದಶಹನು ನಿಮ್ಮನ್ನು ಮುಸಲ್ಮಾನ ಧರ್ಮಕ್ಕೆ ಸೇರಿ :
ಸಿಕೊಳ್ಳಬೇಕೆಂದು ಯತ್ನಪಡಿಸಿದ್ದಾನೆ ” ಎಂದು ಹೇಳಿ ಹೊರಟುಬಂದನು
ಮರುದಿವಸ ಆ ಅಂತ್ಯಜರೆಲ್ಲ ಕೂಡಿಕೊಂಡು ಬಾದಶಹನ ಸಮ್ಮುಖದಲ್ಲಿ ಬಂ
ದು ನಿಂತುಕೊಂಡು. ಖಾವಂದ; ನಾವು ಮರಣವನ್ನಾದರೂ ಆನಂದದಿಂ
ದ ಸ್ವೀಕರಿಸುವವೇ ಹೊರತು, ಮುಸಲ್ಮಾನ ಧರ್ಮವನ್ನು ಸ್ವೀಕರಿಸಲಾರೆ
ವು” ಎಂದು ಪ್ರಾರ್ಥನೆ ಮಾಡಿಕೊಂಡರು ಆಗ ಅಲ್ಲಿ ಇದ್ದ ಬೀರಬಲನು
"ಪೃಥ್ವಿನಾಥ ! ಈ ಅಂತ್ಯಜರೇ, ತಮ್ಮ ಧರ್ಮವನ್ನು ಬಿಡ ಲೊಪ್ಪಿಕೊಳ್ಳ
ದಮೇಲೆ, ಇತರರು ಹ್ಯಾಗೆ ಧರ್ಮಚ್ಯುತ ರಾದರು! ” ಎಂದು ಕೇಳಿದನು
ಬಾದಶಹನು ಬಹಳೇ ನಕ್ಕನು.
- ( ೨೦೧, ವನಸ್ಪತಿಯ ಬೀಜ. )-
ಒಂದು ದಿವಸ ಬಾದಶಹನು ಓಲಗದಲ್ಲಿ ಕುಳಿತಿದ್ದನು ರಾಜಕರಣಗ ಳೆಲ್ಲ ಸಮಾಪ್ತಿಯಾಗುತ್ತ ಬಂದಿದ್ದವು ಆಗ ಯಾವತ್ತು ಸಭಾಸದರು ಬಾದ ಶಹನನ್ನು ಕುರಿತು ಖಾವಂದ ! ತಾವು ಬೀರಬಲನ ಹೊರತು ಅನ್ಯರಿಗೆಯಾ ವ ವಿಷಯದಲ್ಲಿಯೂ ಪ್ರಶ್ನೆ ಮಾಡುವದಿಲ್ಲ; ಇದರ ಕಾರಣವೇನು? ಎಂದು ಕೇಳಿದರು. ಆ ಮಾತಿಗೆ ಬಾದಶಹನು, ಅವನು ನಾನು ಕೇಳಿದ ಪ್ರತಿಯೊಂ ದು ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡುವ ಸಾಮರ್ಥ್ಯ ವುಳ್ಳ ವನಿದ್ದಾನೆ. ನಿಮ್ಮಲ್ಲಿ ಅಂಥ ಸಾಮರ್ಥ್ಯವು ಇಲ್ಲ; ಇದ್ದ ಪಕ್ಷದಲ್ಲಿ ವನಸ್ಪತಿ -